Monday, October 23, 2017

ಕಾಶ್ಮೀರವೆಂಬ ಖಾಲಿ ಕಣಿವೆ
ನೆಲೆ ಕಳೆದುಕೊಳ್ಳುತ್ತಿರುವ ಉಗ್ರರು
(ಆರ್ಥಿಕ ದುಸ್ಥಿತಿ ಮತ್ತು ಅಭಿವೃದ್ಧಿ ಇಲ್ಲದ ನೆಲದಲ್ಲಿ ಮನುಷ್ಯ ಎಂಥಾ ದ್ರೋಹ ಮಾಡುವುದಕ್ಕೂ ಈಡಾಗುತ್ತಾನೆನ್ನುವುದು. ಮತ್ತಿದಕ್ಕೆ ಜೀವಂತ ಉದಾಹರಣೆಗಳು ಅವರವರಲ್ಲೇ ಆಗುತ್ತಿರುವ ಮರಾಮೋಸದಲ್ಲಿ ಜಾಲವನ್ನು ಬಿಚ್ಚಿಡುತ್ತಿರುವ ಖಬರಿಗಳ ಕೆಲಸ ಆದರೆ ಇದು ಅವಿವೇಕಿ ಪಾತಕಿಗಳಿಗೂ ಅವರ ನಾಯಕರಿಗೂ ಒಂದು ಅರಿವಾಗದ ಸಂಗತಿ. ಕಾರಣ ಸೈನಿಕರ ಬೆಂಬಲದಿಂದ ಪೆÇ್ರೀತ್ಸಾಹಿತಗೊಳ್ಳುತ್ತಿರುವ ಒಂದು ವರ್ಗ ಗುಟ್ಟಾಗಿ ಸಮಾಜದಲ್ಲಿದ್ದೇ, ಉಗ್ರರ ಹಿಂದೆಮುಂದೆ ತಿರುಗಿಕೊಂಡಿದ್ದೇ ಸೈನಿಕರ ಅಧಿಕಾರಿಗಳ ಕಡೆ ಜಮೆಯಾಗಿ ನಿಂತಿದೆ. ಈವರೆಗೆ ಅವರುಗಳು ಕೊಡುವ ಟಿಪ್ಸುಗಳು ಕೈ ತಪ್ಪಿದ್ದಿಲ್ಲ. ಇದೆಲ್ಲದರ ಹಿಂದಿರುವ ಹಿಕಮತ್ತೆಂದರೆ ಹಾಗೆ ಟಿಪ್ಸು ಕೊಡುತ್ತಿರುವವರೂ ಅಪ್ಪಟ ಅವರದೇ ಧರ್ಮೀಯರು.)
ನಿಜಕ್ಕೂ ಕಾಶ್ಮೀರದಲ್ಲಿ ಉಗ್ರವಾದ ಮಾಡಿ, ಫೇಮಸ್ಸಾಗುತ್ತೇನೆಂದು ಹೊರಟು ನಿಂತಿರುವ ಪಾತಕಿಗಳಷ್ಟು ಪೆದ್ದರೂ, ಯಾವಾಗಲೂ ಜೆಹಾದ್ ತನ್ನ ರಕ್ಷಣೆ ಮಾಡುತ್ತದೆ ಅದಕ್ಕಾಗಿ ತಾನು ಮಾಡಿದ್ದೇ ಯುದ್ಧ ಎಂದು ನಂಬಿರುವ ಅವಿವೇಕಿಗಳು ಮತ್ತು ಅವರು ಮಾಡಿಕೊಳ್ಳುವ ಅನಾಹುತಗಳನ್ನು ನೋಡಿದರೆ ಈ ಜನ್ಮದಲ್ಲಿ ಇವರನ್ನು ಸುಧಾರಿಸುವುದು ಸಾಧ್ಯವಿಲ್ಲ ಮತ್ತಿದು ನಿಜ ಕೂಡಾ. ಇದೆಲ್ಲಕ್ಕಿಂತಲೂ ಮೊದಲು ಈವರೆಗೂ ತಮ್ಮ ಜನರೇ ತಮಗೆ ಆಗೀಗ ಫಿಟ್ಟಿಂಗ್ ಇಟ್ಟು ಸೈನಿಕರಿಂದ ಹೊಡೆಸಿ, ಬಲಿ ಹಾಕುತ್ತಿದ್ದಾರೆ ಎನ್ನುವ ಅರಿವು ಮತ್ತದಕ್ಕೆ ತಕ್ಕ ಬಂದೋ ಬಸ್ತು ಮಾಡಿಕೊಳ್ಳಲಾಗದ ಇವರ ಅಬ್ಬೇಪಾರಿತನಕ್ಕೆ ಅದಿನ್ಯಾವ ಲೆಕ್ಕದಲ್ಲಿ ಯುದ್ಧಗೆಲ್ಲುವ, ಜಗತ್ತಿನಲ್ಲೆಲ್ಲಾ ತಮ್ಮ ಧರ್ಮ ಸ್ಥಾಪಿಸುವ ಕನಸು ಕಾಣುತ್ತಿದ್ದಾರೋ ದೇವರಿಗೂ ಗೊತ್ತಿರಲಿಕ್ಕಿಲ್ಲ.
ಅದೇನಾಗುತ್ತಿದೆಯೆಂದರೆ ಕಾಶ್ಮೀರ ಕಣಿವೆಯಲ್ಲಿ ಈಗ ಉಗ್ರರಿಗೆ ಬೆಂಬಲ ಮೊದಲಿನಿಗಿಂತಲೂ ಹೆಚ್ಚಾಗಿ ಲಭ್ಯವಾಗುತ್ತಿದೆ, ಅತ್ತ ಸರಹದ್ದಿನ ಕಡೆಯಿಂದಲೂ ಇವರನ್ನು ಪೆÇೀಷಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಒಳಗೊಳಗೆ ಅವರನ್ನು ಅವರ ಕಡೆಯವರೆ ಹಿಡಿಸಿ ಹೊಡೆಸುತ್ತಿರುವ ವಿಚಾರ ಕೂಡಾ ಗುಟ್ಟೇನಲ್ಲ. ಕಾರಣ ಇವತ್ತು ಪ್ರತಿಯೊಬ್ಬ ಪಾತಕಿಯ ತಲೆ ಮೇಲೆ ಏನಿಲ್ಲವೆಂದರೂ ಐದರಿಂದ ಹತ್ತು ಲಕ್ಷದ ಇನಾಮುಗಳಿವೆ ಮತ್ತು ಅಂತಾ ಪ್ರೈಜ್‍ಕ್ಯಾಚ ಆದಾಗ ಇನಾಮಿನ ಬಟವಾಡೆಯೂ ತೀರ ವ್ಯವಸ್ಥಿತ ಮತ್ತು ತುರ್ತಾಗಿ, ಕರಾರುವಕ್ಕಾಗಿ ನಿಗದಿತ ಕಾಲ ಮಿತಿಯೊಳಗೆ ಮುಗಿದುಹೋಗುತ್ತಿದೆ. 
ಅನಾಮತ್ತಾಗಿ ಎಳೆಂಟು ತಿಂಗಳೊಳಗೆ ಸರಿ ಸುಮಾರು 165 ಜನ ಉಗ್ರರನ್ನು ಹೊಡೆದು ಕೆಡುವಿದ್ದೂ, ಸ್ಥಳೀಯ ಜನರ ಜತೆಗೆ ಅವರ ಬಾಂಧವ್ಯ ಬೆಳೆಯುತ್ತಿರುವುದೂ ಸೂಕ್ಷ್ಮವಾಗಿ ನಡೆಯುತ್ತಿರುವ ಸಂಗತಿಗಳು. ಮೊನ್ನೆ ಮೊನ್ನೆ ಹತ್ತು ದಿನದ ಹಿಂದೆ ಪೆÇೀಲಿಸರು ಹತ್ತೇ ನಿಮಿಷದ ನಾಲ್ಕೇ ನಾಲ್ಕು ರೌಂಡಿನ ಬುಲೆಟ್ ವಾರ್ ಮಾಡಿ ಹತ್ತು ಲಕ್ಷ ತಲೆಬೆಲೆಯ ಪಾತಕಿಯೊಬ್ಬನನ್ನು ಕೆಡುವಿ ಹಾಕಿದರಲ್ಲ ಅದು ಯಾವ ಲೆಕ್ಕದಲ್ಲೂ ಸೈನಿಕರಿಗೆ ಗೊತ್ತಿಲ್ಲದೆ ನಡೆದುಹೋದ ಎನ್‍ಕೌಂಟರು. ಆ ಏರಿಯಾದಲ್ಲಿ ಕಾರ್ಯಾಚರಣೆಗೆಂದು ಪೆÇೀಲಿಸರು ಮತ್ತು ಸೈನಿಕರು ಯಾವ ತಯಾರಿಯಲ್ಲೂ ಹೋಗಿರಲಿಲ್ಲ. ಕಾರಣ ಆವತ್ತು ಕಿನ್ಲಾಭಾಗ್ ಏರಿಯಾದಲ್ಲಿ ಎಂದಿನಂತೆ ಬಂದೋ ಬಸ್ತು ಮಾಡುವ ಸೈನಿಕರ ಕೂಚು ಜಾರಿಯಲ್ಲಿತ್ತು. ಅದು ಪೂರ್ತಿ ಕಣಿವೆಯಲ್ಲೆಲ್ಲಾ ನಡೆಯುತ್ತಲೇ ಇರುತ್ತದೆ. ಹಾಗಂತ ಹಾದು ಹೋದ ದಾರಿಯಲ್ಲೆಲ್ಲಾ ಸೈನಿಕರು ಶರಂಪರ ಗುಂಡು ಹರಿಸಿಕೊಂಡು ಹೋಗುತ್ತಾರೆಂದಲ್ಲ. ಅದರೆ ಅವರದ್ದೇ ಆದ ಶೈಲಿಯಲ್ಲಿ ಪರಿಸ್ಥಿತಿ ಮೇಲೆ ನಿಗಾ ಇಡುವ ಪಹರೆ ಅದು. ಸರಿ ಸುಮಾರು ದಿನಕ್ಕಿಷ್ಠು ಕೀ.ಮೀ. ದೂರದವರೆಗೂ ಅವರವರ ಮಾಹಿತಿ ಆಧರಿಸಿ ರೌಂಡು ಹೊರಡುತ್ತಾರೆ.
ಹಾಗೆ ನಡೆಯುವ ಪಹರೆಯಲ್ಲಿ ಒಮ್ಮೆ ಅಲರ್ಟ ನೆಸ್ಸು ಬರುತ್ತದೆ. ಸಣ್ಣ ಕದಲಿಕೆಗಳೂ ನಡೆದೇ ನಡೆಯುತ್ತದೆ. ಪರಿಸ್ಥಿತಿ ಸ್ವಲ್ಪ ಯಾಮಾರಿದರೂ ಫೈಟು ಶುರುವಾಗುತ್ತದೆ. ಅದಕ್ಕಾಗಿ ಸೈನಿಕರು ಯಾರೆಂದರೆ ಯಾರ ಹತ್ತಿರವೂ ಮಾತಾಡುವ ಗೋಜಿಗೇ ಹೋಗುವುದಿಲ್ಲ. ಆ ದಿನ ಸಂಜೆ ಹಾಗೆ ಹಾಯುತ್ತಿರುವ ಪೆÇೀಲಿಸರ ಜತೆಗಿನ ಅರ್.ಆರ್. ಪಡೆಯ ಸೈನಿಕರ ಮೇಲೆ ಇದ್ದಕ್ಕಿದ್ದಂತೆ ಗುಂಡೀನ ಮಳೆಯಾಗಿದೆ. ಇಂಥದ್ದಕ್ಕೆಲ್ಲಾ ಆರ್ಡರು, ಮಾಹಿತಿ ಇತ್ಯಾದಿ ಏನೂ ಬೇಕಿಲ್ಲ ಸೈನಿಕರು ಕಾಯುವುದೂ ಇಲ್ಲ. ಅದಕ್ಕೆಲ್ಲಾ ಸರಕಾರದ ಮರ್ಜಿ ಕಾಯುವ ಬಂದೂಕಿನ ಗುಂಡು ಏಣಿಸುವ ಕಾರ್ಯಕ್ಕೆ ಕಳೆದ ಮೂರು ವರ್ಷದಿಂದ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಗುಂಡಿಗೆ ಗುಂಡು ಹಾರಿಸುವುದೊಂದೆ ಸೈನಿಕರಿಗಿರುವ ಆಜ್ಞೆ. ಕೂಡಲೆ ಗುಂಡು ಹಾರಿ ಬಂದ ಮನೆಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ಆರಂಭಿಸಿದ ಪಡೆಯ ಜವಾನರು ಮನೆಯನ್ನು ಸುತ್ತುವರೆದು ಒಳಗಿರುವ ಉಗ್ರನನ್ನು ಹಣಿಯಲು ಯತ್ನಿಸಿದ್ದರೆ. ತಲೆಕೆಟ್ಟ ಉಮರ್ ಖಾಲಿದ್ ಎಂಬ ಭಯೋತ್ಪಾದಕ ಪಟ್ಟ ಹೊತ್ತ ಕಾಕಿಪೆÇೀಕಿ ಪಾತಕಿ ಒಳಗೊಳಗೆ ಬೆವರುತ್ತ ಸುಖಾ ಸುಮ್ಮನೆ ಗುಂಡು ಹಾರಿಸಿದ್ದಾನೆ. 
ಸೈನಿಕರಿಗೆ ಇಂಥವೆಲ್ಲಾ ಅಸಂಘಟಿತ ದಾಳಿ ಎದುರಿಸುವುದನ್ನು ಹೇಳಿಕೊಡಬೇಕೆ..? ಅವರಿಗೆ ಅಸಲಿಗೆ ಯಾವ ಸೂಚನೆಯೂ ಬೇಕೆ ಆಗಿಲ್ಲ. ಸರಿಯಾಗಿ ಮನೆಯನ್ನು ಕವರ್ ಮಾಡುವ ಹೊತ್ತಿಗಾಗಲೇ ಮನೆಯೊಳಗಿಂದ ಬರುವ ಗುಂಡಿನ ಮೊರೆತ ನಿಂತುಹೋಗಿದೆ. ಎದುರಾ ಎದುರೇ ಕಿಟಕಿಯತ್ತ ತೂರಿ ಹೋದ ಸೈನಿಕನೊಬ್ಬ ಎರಗಿದ ರಭಸಕ್ಕೆ ಸ್ವಯಂಘೋಷಿತ ಲಷ್ಕರ್ ಕಮಾಂಡರ್ ಎಂಬ ಹೇಢಿ ಕಿರುಚಲೂ ಆಗದೆ ನೆಗೆದು ಬಿದ್ದಿದಾನೆ. ಸರಿಯಾಗಿ ಕಾಳಗ ಆರಂಭವಾಗುವ ಮೊದಲೇ ಗುಂಡಿನ ಹಾರಾಟ ನಿಂತೂ ಹೋಗಿದೆ. ಒಳನುಗ್ಗಿದ ಸೈನಿಕರಿಗೆ ಆಶ್ಚರ್ಯ ಕಾದಿತ್ತು. ಬಿದ್ದಿದ್ದು ದೊಡ್ಡಕುಳ ಎಂದು ಹೆಸರು ಮಾಡಿದ ಡಬ್ಬಲ್‍ಪ್ಲಸ್ ಮಾರ್ಕ್ ಹೊಂದಿರುವ ಪಾತಕಿ ಆತ. ಆಶ್ಚರ್ಯ ಮತ್ತು ಅವನ ಅವಿವೇಕತನದ ಪರಮಾವಧಿ ಎಂದರೆ ಸುಖಾ ಸುಮ್ಮನೆ ಅವನು ಮನೆಯಲ್ಲಿ ಕೂತೆ ಇದ್ದರೂ ಸಾಕಾಗಿತ್ತು. ಬದುಕಿಕೊಳ್ಳುತ್ತಿದ್ದ. ಆದರೆ ಸೈನಿಕರನ್ನು ನೋಡುತ್ತಲೇ ಬೆದರಿ ಗುಂಡು ಹಾರಿಸಿ ಮೂರ್ಖತನದ ಪರಮಾವಧಿಯನ್ನು ಈ ಕಮಾಂಡರ್ ಜಗತ್ತಿಗೆ ಜಾಹೀರು ಮಾಡಿದ್ದ. 
ಕಾರಣ ಗಸ್ತಿನ ಪಡೆಗಳ ಬರುವಿಕೆಯನ್ನು ಸಹಜವಾಗಿ ತೆಗೆದುಕೊಳ್ಳದ ಈ ಡಬ್ಬಾ ಕಮಾಂಡರು ತನ್ನನ್ನು ಎನ್ ಕೌಂಟರ್ ಮಾಡಲಿಕ್ಕೆಂದೇ ಸೈನಿಕರು ಬರುತ್ತಿದ್ದಾರೆ ಎಂದು ಇದ್ದಕ್ಕಿದ್ದಂತೆ ಬಾಗಿಲಿಕ್ಕಿಕೊಂಡು ಕಿಟಿಕಿಯಲ್ಲಿ ಎಗರಿ ನಿಂತು ಯದ್ವಾ ತದ್ವಾ ಗುಂಡು ಹಾರಿಸಿ, ತನ್ನಂತಹ ಪ್ರೈಜ್‍ಕ್ಯಾಚ್ ಇಲ್ಲಿದ್ದೇನೆ ಸುಳಿವನ್ನು ತಾನಾಗೇ ಬಿಟ್ಟುಕೊಟ್ಟಿದ್ದಾನೆ. ಮೊದಲೇ ಟ್ರಿಗ್ಗರ್ ಮೇಲೆ ಬೆರಳಿಟ್ಟುಕೊಂಡು ಓಡಾಡುವ ಸೈನಿಕರು ಲೆಕ್ಕವಿಡದೆ ಗುಂಡು ಹಾರಿಸಿ ಕೆಡುವಿ ಹಾಕಿದ್ದಾರೆ. ಬೇಕಾಗಿತ್ತಾ ಇಂಥಾ ಪೆದ್ದುತನದ ಕಾರ್ಯಶೈಲಿ. ಕಣಿವೆ ಖಾಲಿಯಾಗುವುದು ಎಂದರೆ ಇದೆ ಅಲ್ವಾ..? 
ಕಾಶ್ಮೀರದಲ್ಲಿ ಉಗ್ರದಮನ ಮಾಡಿದಷ್ಟೂ ಸಾಲುಸಾಲಾಗಿ ಪಾತಕಿಗಳ ಪಡೆ ಎದ್ದು ನಿಲ್ಲುತ್ತಲೇ ಇದೆಯಲ್ಲ. ಎಲ್ಲಿಂದ ಬರುತ್ತಿದ್ದಾರೆ..? ಹೇಗೆ ಗಡಿ ದಾಟುತ್ತಿದ್ದಾರೆ..? ಹಾಗೆ ಆರೇ ತಿಂಗಳೊಪ್ಪತ್ತಿನಲ್ಲಿ ನೂರೂ ಚಿಲ್ರೆ ಜನರನ್ನು ಸೈನಿಕರು ಹೊಡೆದುರುಳಿಸಿದರೂ ಅಲ್ಲಲ್ಲಿ ವಾರಕ್ಕೆ ಮೂರು ನಾಲ್ಕು ಜನರ ಲೆಕ್ಕದಲ್ಲಿ ಎಲ್ಲಿಂದ ಬಲಿ ಬೀಳುತ್ತಿದ್ದಾರೆ..? ಅದರಲ್ಲೂ ಕಮಾಂಡರ್‍ಗಳೆಂದು ಹೆಸರಿಸಿಕೊಂಡು ಶೊಫಿಯಾನ್, ಪುಲ್ವಾಮ, ಗಾಂಧಾರ್‍ಬಾಲ್, ಕಾರ್ಗಿಲ್, ಬಾರಾಮುಲ್ಲ ಮತ್ತು ಉರಿ ಸೆಕ್ಟರ್‍ಗಳನ್ನು ಹಂಚಿಕೊಂಡು ಹರಿದು ತಿನ್ನುವ ಲೆಕ್ಕದಲ್ಲಿ ಉರಿಯುತ್ತಿದ್ದ ಈ ಸ್ವಘೋಷಿತ ಪಾತಕಿಗಳ ತಲೆಯ ಮೇಲೆ ಹತ್ತಾರು ಲಕ್ಷದಷ್ಟು ಇನಾಮು ಘೋಷಿಸುವಷ್ಟು ಇವರು ಹೇಗೆ ಬೆಳೆಯುತ್ತಿದ್ದಾರೆ..? ತೀರ ಕಾಶ್ಮೀರದಲ್ಲಿ ಭಯೋತ್ಪಾದಕರ ಸ್ವರ್ಗ ಮತ್ತು ಉಗ್ರರ ಅಪರ ಕರ್ಮಠ ಬೆಂಬಲಿಗರೂ ಇರುವ ದಕ್ಷಿಣ ಪುಲ್ವಾಮ ಯಾಕೆ ಇವತ್ತು ಅಷ್ಟೊಂದು ಮಟ್ಟದಲ್ಲಿ ಉಗ್ರರಿಗೆ ಆಶ್ರಯ ಕೊಡುವ ತಾಣವಾಗುತ್ತಿದೆ..? ಹಾಗೆ ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯ ಹಲವು ಒಳಸುಳಿ ಊರುಗಳು ಇವತ್ತಿಗೂ ಸೈನಿಕರಿಗೂ, ಪೆÇೀಲಿಸರಿಗೂ ಅಪರಿಚಿತವಾಗಿ ಉಳಿದಿದ್ದಾದರೂ ಹೇಗೆ..? ದಕ್ಷಿಣ ಪುಲ್ವಾಮಾದ ಇಂಟರೆಸ್ಟಿಂಗ್ ಕಥನ ಮುಂದಿನ ವಾರಕ್ಕಿರಲಿ.

Sunday, October 15, 2017

ಕಾಶ್ಮೀರವೆಂಬ ಖಾಲಿ ಕಣಿವೆ
ಹೊಸ ತಲೆಮಾರು ಪೂರ್ತಿ ಖಾಲಿಯಾಗಲಿದೆ..
( ಶ್ರೀನಗರದ ಸ್ಥಳೀಯರಿಗೆ ಅರ್ಜೆಂಟು ಇತರ ಧರ್ಮೀಯ ಪ್ರವಾಸಿಗರು ಭಾರತದಾದ್ಯಂತದಿಂದ ಬರಬೇಕಿದೆ. ಅವರಿಂದ ಆಮದನಿ ಬೇಕಿದೆ. ಜೀವನಕ್ಕೆ ಸುಲಭಕ್ಕೆ ಪ್ರವಾಸೋದ್ಯಮದಿಂದ ದುಡ್ಡು ದೊರೆಯುತ್ತದಲ್ಲ ಅದೆಲ್ಲಾ ಬೇಕಿದೆ. ಅನಾಮತ್ತಾಗಿ ಮುನ್ನೂರೈವತ್ತು ರೂ.ಗೆ ಕೇಸರಿ ಮಾರಿ ದುಡ್ಡು ಮಾಡಲು ಬಕರಾಗಳು ಬೇಕಾಗಿದ್ದಾರೆ. ದುಪ್ಪಟ್ಟು ಬೆಲೆಯ  ಪಶ್ಮೀನಾ ಶಾಲುಗಳಿಗೆ ಪೆಕರು ಗಿರಾಕಿಗಳು ನಾವಾಗಲಿ ಎಂದು ಬಯಸುತ್ತಿದ್ದಾರೆ. ಆದರೆ ಸಾಮರಸ್ಯ ಉಹೂಂ..ಅದು ಮಾತ್ರ ಬೇಕಾಗಿಲ್ಲ ಅವರಿಗೆ. ಹಾಗಿದ್ದ ಮೇಲೆ ನಾವಾದರೂ ಯಾಕೆ ನಮ್ಮ ಸೈನಿಕರಿಗೆ ಕಲ್ಲೇಟು ಹೊಡೆಯುವ ಜನರ ಹೊಟ್ಟೆಪಾಡಿಗೆ ಸ್ಪಂದಿಸಬೇಕು..? ಕಾಶ್ಮೀರವನ್ನು ಅಪ್ಪಟ ದರ್ಮಾಂಧರ ನಾಡಗಿಸಹೊರಟವರ ಜೇಬಿಗೇಕೆ ದುಡ್ಡು ಸುರಿಯಬೇಕು..? )

ಬಹಳಷ್ಟು ಜನರಿಗೆ ಕಾಶ್ಮೀರವ್ಯಾಲಿ ಪ್ರವಾಸಿಸುವಾಗ ಈ ಅನುಭವಾಗಿರುತ್ತದೆ. ಶ್ರೀನಗರದಿಂದ ಹೊರಟು ಗಾಂಧಾರ್‍ಬಾಲ್, ಮುಲ್ಬೇಕ್ ದಾಟುವ ಹೊತ್ತಿಗೆ ಒಂದು ದಿನ ಕಳೆಯುತ್ತದೆ. ಅಲ್ಲಿ ಟ್ಯಾಕ್ಸಿಗಳವರು ಮುಲ್ಬೇಕ್‍ನ ಹೊರವಲಯದಲ್ಲಿ ಒಂದು ಬಾರ್ಡರ್ ಲೈನ್ ಗುರುತಿಸಿಕೊಂಡಿದ್ದಾರೆ. ಅದನ್ನು ದಾಟಿದೆ ಏನಿದ್ದರೂ ಆಚೆ ಕಡೆಯ ಲೆಹ್-ಲಢಾಕಿ ಟ್ಯಾಕ್ಸಿಗಳಿಗೆ ಇತ್ತ ನಿಂತು ಪ್ರಯಾಣಿಕರನ್ನು ಹತ್ತಿಸಿ ಬರುತ್ತಾರೆ. ಇದು ಆಯಾ ಪ್ರಾಂತ್ಯವಾರು ವೃತ್ತಿಪರ ನಡೆಯೂ ಹೌದು. ಆದರೆ ಇತ್ತಲಿನ ಕಾಶ್ಮೀರಿಗಳ ವೈಯಕ್ತಿಕ ಆಸೆ ಏನು ಗೊತ್ತೆ..? ಇತ್ತಾ ಜಮ್ಮ ಸರಹದ್ದಿಗೂ ಕಾಲಿಡುವಂತಿಲ್ಲ, ಅತ್ತ ಲಢಾಕಿ ಆವರಣವನ್ನೂ ಪ್ರವೇಶಿಸುವಂತಿಲ್ಲ. ಒಟ್ಟಾರೆ ಮೊದಲೇ ಭಾರತದ ಸರಹದ್ದಿನಲ್ಲಿ ನಲಗುತ್ತಿರುವ ನತದೃಷ್ಠ ಕಣಿವೆ ರಾಜ್ಯವನ್ನು ಇನ್ನಷ್ಟು ಏಕಾಂಗಿಯಾಗಿಸಿ ಹಾಳು ಮಾಡುತ್ತಿರುವವರು ಅಪ್ಪಟ ಶ್ರೀನಗರದ ಸ್ಥಳೀಯರು. ಪಾಕಿಗಳ ಗುಲಾಮಿತನಕ್ಕೆ ಮಾರಿಕೊಂಡವರು. ಅಕ್ಷರಶ: ಕ್ರಮೇಣ ಪೂರ್ತಿ ಕಣಿವೆಯನ್ನು ಸ್ಥಳೀಯರು ಮತ್ತು ಮಿಲಿಟರಿ ಹೊರತಾಗಿ ಇನ್ಯಾರೂ ಕಾಲಿಡದಂತೆ ನಿರ್ಬಂಧಿಸುವುದೇ ಆಗಿದೆ.
ತಮ್ಮೆಲ್ಲಾ ವ್ಯವಹಾರ ವ್ಯವಸ್ಥೆಗಳಿಗೆ ತಮ್ಮನ್ನು ತಾವು ಹೊರ ಜಗತ್ತಿಗೆ ತೆರೆದುಕೊಳ್ಳುವುದೇ ಬೇಕಾಗಿಲ್ಲ ಅವರಿಗೆ. ಇದ್ಯಾಕೆ ಹೀಗಾಡುತ್ತಿದ್ದಾರೆ ಎಂದರೆ ವ್ಯವಹಾರ,ಸಂಸಾರದ ಅತ್ಲಾಗಿರಲಿ. ತಮ್ಮ ಅತೀವ ಕರ್ಮಠತನದ ಮುಚ್ಚಟೆಯನ್ನು ಜಗತ್ತಿನಿಂದ ಮುಚ್ಚಿಡುವುದೇ ಇಲ್ಲಿನ ಜನರಿಗೆ, ನಂಬಿಕೊಂಡ ಸಿದ್ಧಾಂತಗಳ ಪ್ರಮುಖ ಕಾಯಕವಾಗಿ ಹೋಗಿದೆ. ನಿಮಗೊಂದು ಗೊತ್ತಿರಲಿ - ಇವತ್ತು ಭಾರತದ ಯಾವುದೇ ದೇವಸ್ಥಾನಗಳಲ್ಲಿ ಒಬ್ಬೇ ಒಬ್ಬ ಮುಸ್ಲಿಂನನ್ನು ಬರಬೇಡ ಎಂದ ಉದಾಹರಣೆ ಇಲ್ಲ. ಆದರೆ ಶ್ರೀನಗರದ ಪ್ರಸಿದ್ಧ ಮಸೀದಿಯನ್ನು ಪ್ರವೇಶಿಸಲು ಇವತ್ತಿನವರೆಗೆ ಬೇರೊಬ್ಬ ಧರ್ಮೀಯರಿಗೆ ಸಾಧ್ಯವಾಗಿದೆಯೇ..? ಬರೀಯ ಪ್ರಾರ್ಥನಾ ಮಂದಿರ ಎಂದಾದರೆ ಅಲ್ಲಿಗೆ ಹೋಗಲು ಅಥವಾ ಪ್ರವೇಶಕ್ಕೇ ಅಷ್ಟೊಂದು ಅಡೆತಡೆಗಳೇಕೆ..?ಉಹೂಂ.. ಅದರಲ್ಲೂ ಪ್ರವಾಸಿಯಾಗಿ ಹೋಗುವ ಯಾವೊಬ್ಬ ಭಾರತೀಯನೂ ಅದನ್ನು ಸಂದರ್ಶಿಸಲು ಅನುಮಾಡಿಕೊಟ್ಟ ಮತ್ತು ಪ್ರವೇಶಿಸಿದ ಉದಾ.ಗಳಿಲ್ಲವೇ ಇಲ್ಲ. ಇದೇ ನಮಗೂ ಇತರ ಧರ್ಮಕ್ಕೂ ಇರುವ ವ್ಯತ್ಯಾಸ. ಇದರಿಂದಾಗಿ ಇತ್ತಿಚಿನ ತಲೆಮಾರನ್ನು ದೇಶದ್ರೋಹಿ ವ್ಯಕ್ತಿತ್ವಕ್ಕೆ ಒಗ್ಗಿಸುವ ಗುರುತರವಾದ ಕಾರ್ಯ  ಸರಿಯಾಗಿ ಎರಡೂವರೆ ದಶಕಗಳಿಂದಲೇ ಆರಂಭವಾಗಿತ್ತು. 
ಇವತ್ತು ಶ್ರೀನಗರದ ಆಸುಪಾಸಿನ ಯಾವುದೇ ವ್ಯವಹಾರ,ಅಂಗಡಿ ಮುಂಗಟ್ಟು ಇತ್ಯಾದಿ ನೋಡಿ. ಎಲ್ಲಾ ಫಿಪ್ಟಿ ಪ್ಲಸ್ ಗಂಡಸರೆ. ಹೊಸ ಹುಡುಗರಿಗೆಲ್ಲಾ ಏನಾಗಿದೆ..? ಉಹೂಂ.. ಯಾರೆಂದರೆ ಯಾರೂ ಇಲ್ಲ. ತೀರ ಕರ್ಮಠ ಮುಸ್ಲಿಂರಿಗೆ ಮಾತ್ರವೇ ಪ್ರವೇಶ ದಕ್ಕುವ ಮದರಸಾಗಳೆಂಬ ಕತ್ತಲ ಕೂಪದಲ್ಲಿ ಕಳೆದುಹೋಗುತ್ತಿದೆ ಹೊಸ ತಲೆಮಾರು. ಒಮ್ಮೆ ಅದರ ವಾತಾವರಣಕ್ಕೆ ಒಗ್ಗಿಹೋಗುವ ತೀರ ಎಳೆಯ ಮನಸ್ಸು ಹೊರಬರುವ ಹೊತ್ತಿಗೆ ಅಪರ ಕರ್ಮಠ ಇಸ್ಲಾಂ ವ್ಯಾಮೋಹಿಯಾಗಿ ಬದಲಾಗಿರುತ್ತದೆ. ಅಕ್ಷರಶ: ಒಂದು ಆಯುಧವಾಗಿ ಬದಲಾಗಿರುತ್ತದೆ.(ಕಾರಣ ನೈಜ ಇಸ್ಲಾಂ ಇಲ್ಲಿ ಕಲಿಸುವುದೇ ಇಲ್ಲ. ಏನಿದ್ದರೂ ಧರ್ಮ ಗುರು ಆಧಾರಿತ) ಅದನ್ನಿನ್ನು ಬಳಸುವುದು ಬಲು ಸುಲಭ. ಹಾಗೆ ಬದುಕು, ಬಾಲ್ಯ ಜೊತೆಗೆ ಯೌವನಕ್ಕೆ ಮೊದಲೆ ಜೀವನ ಕಳೆದುಕೊಳ್ಳಲೆಂದೆ ಹೊಚ್ಚ ಹೊಸ ತಲೆಮಾರನ್ನು ತಯಾರು ಮಾಡಿ ಧರ್ಮವೆಂಬ ನಶೆಯಲ್ಲಿ ಮುಳುಗಿಸಿ ತೆಗೆದಿಚೆಗೆ ಇರಿಸುತ್ತಿದ್ದರೆ ಮುಂದೆ ತಲೆಮಾರು ಬೆಳೆಯುವುದಾದರೂ ಹೇಗೆ..? 
ಕಾರಣ ಮೊನ್ನೆ ಮೊನ್ನೆ ವಿಶ್ವಸಂಸ್ಥೆಯ ಆಂಟನಿಯೋ ಗುಟೆರಸ್ ಪ್ರಸ್ತುತ ಪಡಿಸಿರುವ ಕಳವಳಕಾರಿ ಸುದ್ದಿ ಎಂದರೆ ವರ್ಷಾವಧಿಯಲ್ಲಿ ನಾಪತ್ತೆ ಅಥವಾ ಬಲಿಯಾಗುವ, ಬಾಂಬು ಮತ್ತು ಆತ್ಮಾಹುತಿ ದಾಳಿಗೆ ಬಳಸುವ ಬಾಲಕರ ಸಂಖ್ಯೆ ಬರೊಬ್ಬರಿ ಎಂಟು ಸಾವಿರ ಚಿಲ್ಲರೆ. ವರ್ಷವೊಂದರಲ್ಲಿ ಹೀಗೆ ಬಲಿಯಾಗುವ ಅಥವಾ ನಾಪತ್ತೆಯಾಗುವ ಜನರೇಶನ್ನು ಇನ್ನೆಷ್ಠು ವರ್ಷ ಈ ನಿರಂತರತೆಯನ್ನು ತಡೆದೀತು..?
"..ಚಿಲ್ಡ್ರೆನ್ಸ್ ಇನ್ ಆರ್ಮ್‍ಡ್ ಕಾನ್‍ಪ್ಲಿಕ್ಟ್.." ವರದಿ ಪ್ರಕಾರ ಸರಕಾರ ನಡೆಸುವ ಸಾಮಾನ್ಯ ಶಾಲೆಗಳನ್ನು ಪ್ರತ್ಯೇಕತಾವಾದಿಗಳೆ ಸುಟ್ಟು ಹಾಕಿದ್ದು, ಸರಾಸರಿ ಪ್ರತಿ ವರ್ಷ ನಾಶವಾಗುವ ಸರಕಾರಿ ಮತ್ತು ಸಾಮಾನ್ಯ ಶಾಲೆಗಳ ಸಂಖ್ಯೆ 30 ಪ್ಲಸ್. ಅಲ್ಲಿಗೆ ಇನ್ನೆಷ್ಟು ವರ್ಷ ಶಾಲೆಗಳು ನಡೆದಾವು ರಾಜ್ಯದಲ್ಲಿ..? ಅಪಾಯಕಾರಿ ಸ್ಥಳಗಳಲ್ಲಿ ನಿರಾಯಾಸವಾಗಿ ಮಾಹಿತಿ, ಲಗೇಜ್ ಸರಬರಾಜು ಇಂತಹ ಕೆಲಸಗಳನ್ನು ಈ ನಿಯಂತ್ರಿತ ಮತ್ತು ತರಬೇತಾಗಿರುವ ಎಳೆಂಟು ವರ್ಷದ ಹುಡುಗರು ಸಲೀಸಾಗಿ ನಿರ್ವಹಿಸುತ್ತಿದ್ದರೆ, ಹತ್ತರಿಂದ ಹದಿಮೂರು ವರ್ಷದ ಮಕ್ಕಳು ಅನಾಮತ್ತಾಗಿ ಏ.ಕೆ.47 ಕೂಡಾ ಚಲಾಯಿಸಬಲ್ಲಷ್ಟು ಪರಿಣಿತರು. 
ಬಾತ್ಮಿದರರಾಗಿ ಮಕ್ಕಳನ್ನು ಬಳಸುವುದು ತುಂಬಾ ಸುಲಭ. ಯಾರೂ ಕೂಡ ಸಂಶಯಿಸದಷ್ಟು ಮುಗ್ಧ ಮುಖದ ಮಕ್ಕಳನ್ನು ಪ್ರತ್ಯೇಕತಾವಾದಿಗಳು ಬಂದೂಕಿನ ತುದಿಗೆ ಕಟ್ಟಿಕೊಂಡೆ ಓಡಾಡುತ್ತಿದ್ದಾರೆ. ಇವರಿಗಿಂತ ಕೊಂಚ ಮೇಲಿನವರು ತಾವೇ ಬಂದೂಕು ಹೊರುತ್ತಿದ್ದಾರೆ. ಸೆರೆ ಸಿಕ್ಕ ಮಕ್ಕಳನ್ನು ಕೌನ್ಸೆಲಿಂಗ್‍ಗೆ ಒಳಪಡಿಸಿ ಮಾರ್ಪಾಡು ಮಾಡಲೆತ್ನಿಸಿದರೂ ಬಿಟ್ಟ ಎರಡೇ ದಿನಕ್ಕೆ ಕ್ಯಾಂಪುಗಳಿಗೆ ಹುಡುಗರು ರವಾನೆಯಾಗುತ್ತಿದ್ದಾರೆ ಕಾರಣ ಬರೀ ಧರ್ಮವಲ್ಲ. ಈಗ ಧರ್ಮದ ನಶೆಯ ಜೊತೆಗೆ ಮೊಬೈಲ್ ಕೂಡಾ ಅನಾಹುತಕಾರಿ ಆಮೀಷವಾಗಿ ಯುವ ಜನರನ್ನು ಅಫೀಮಿನಂತೆ ಆವರಿಸಿಕೊಂಡಿದೆ. ಫೇಸ್ ಬುಕ್ಕು ಮತ್ತು ವಾಟ್ಸ್‍ಆಪ್‍ಗಾಗಿ, ಹತ್ತಾರು ಸಾವಿರದ ಮೊಬೈಲ್‍ಗಾಗಿ ದೇಶಕ್ಕೆ ಕಲ್ಲು ಹೊಡೆಯುವ ಮತ್ತು ಸೈನಿಕರ ಮೇಲೆ ಗುಂಡು ಹಾರಿಸಿ ಬರುವ ಕೆಲಸಕ್ಕೆ ಯಾವ ಹಿಂಜರಿಕೆಯಿಲ್ಲದೆ ಮಕ್ಕಳು ಕಾಲೂರಿ ನಿಲ್ಲುತ್ತಿದ್ದಾರೆ. ಆದರೆ ಅದಕ್ಕೆ ಬೇಕಾದ ನೆಟ್‍ವರ್ಕನ್ನು ಸರಕಾರ ನಿಯಂತ್ರಿಸುವುದರಿಂದ ವಾರಕ್ಕೆ ನಾಲ್ಕು ದಿನ ಅದರ ಮೇಲೆ ನಿಷೇಧ ಹೇರುವುದರಿಂದ ಆ ಹತಾಶೆ ಇನ್ನಷ್ಟು ಪರಿಣಾಮಕಾರಿಯಾಗಿ ದ್ವೇಷವಾಗಿ ಬದಲಾಗುತ್ತಿದೆ. 
ಈ ಸಂದರ್ಭವನ್ನು ಬಳಸಿಕೊಳ್ಳುವ ಪ್ರತ್ಯೇಕತಾವಾದಿಗಳು "...ನೋಡಿ ಭಾರತ ಸರಕಾರ ಹೇಗೆ ನಮ್ಮನ್ನೆಲ್ಲಾ ಶೋಷಣೆ ಮಾಡುತ್ತಿದೆ. ಕಾಫೀರರು..." ಎಂದು ಬೆಂಕಿ ಹಚ್ಚುತ್ತಾ ಇನ್ನಿಲ್ಲದ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಇದರಿಂದಾಗಿ ಏನೇ ಮಾಡಿದರೂ ಮೊಳಕೆಯಲ್ಲೇ ಬೆಳೆದು ನಿಲ್ಲುತ್ತಿರುವ ಈ ವಿಷಕಾರಿ ಜನರೇಶನ್ನು ವಯಸ್ಸಿಗೂ ಮೊದಲೇ ಪೆÇೀಲಿಸ್ ಕೋಣೆಗಳಲ್ಲಿ ಬದುಕು ಕಳೆಯುತ್ತಿದ್ದಾರೆ ಇಲ್ಲಾ ಗುಂಡಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಬರಲಿರುವ ತಲೆಮಾರು ಮತ್ತು ಶ್ರೀನಗರದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಕೆಲವೇ ಕೆಲವು ಪ್ರಜ್ಞಾವಂತರು ಎಚ್ಚರಿಸಿ ಕಣಿವೆಯ ಸುಸ್ಥಿತಿಗೆ ಪ್ರಯತ್ನಿಸುತ್ತಿದ್ದರೂ ಅದೆಲ್ಲಾ ಅರಣ್ಯ ರೋಧನವಾಗಿದೆ. ತೀವ್ರ ಆಸೆ ಹುಟ್ಟಿಸುತ್ತಿರುವ ಸಾಮಾಜಿಕ ಜಾಲತಾಣ ಮತ್ತು ಇಂತಹ ಹುಡುಗರನ್ನು ಆಸೆಯ ಕಂಗಲಿಂದ ಕಣ್ಣು ಹರಿಸುವ ಹುಡುಗಿಯರು ಅವರ ತೆವಲನ್ನು ಇನ್ನಷ್ಟು ರಂಗೇರಿಸುತ್ತಿದ್ದಾರೆ. ಮೊಬೈಲ್ ಇದ್ದರೆ ಆಕೆಯ ಸಂಪರ್ಕ ಸಿಗುತ್ತದೆ. ಆಕೆಯ ಸಂಪರ್ಕ ಮತ್ತು ಸಾಮಾಜಿಕ ಜಾಲತಾಣ ಬೇಕೆಂದರೆ ಮೊಬೈಲು ನೆಟ್ವರ್ಕು ಬೇಕು. ಅದೆಲ್ಲಾ ಬೇಕೆಂದರೆ ಸರಹದ್ದಿನಿಂದ ಈಚೆಗೆ ಬರುವ ಯೋಜನೆಗೆ ರೂಪ ಕೊಡುವುದೇ ಬೆಟರ್ ಆಪ್ಶನ್ನು. ಅಲ್ಲಿಗೆ ಇಂಥಾ ಸಣ್ಣ ಸಣ್ಣ ಆಮೀಷಕ್ಕೊಳಗಾಗಿ ಮನೆ ಬಿಡುತ್ತಿರುವ ಹುಡುಗರು ತಲೆ ಮಾಸುವ ಮೊದಲೇ ಸೈನಿಕರಿಗೆ ಬಲಿಯಾಗುತ್ತಾರೆ. ಅಲ್ಲಿಗೆ ಕಣಿವೆ ಖಾಲಿಯಾಗಲು ಎಷ್ಟು ಹೊತ್ತು...? 



Sunday, October 8, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ಅದು ಸಾವಿರ ವರ್ಷಗಳ ಯುದ್ಧ.
(ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಯಿತಲ್ಲ ಆ ಲೀಪಾದಿಂದ 24 ಕಿ.ಮೀ. ದೂರದ ರೈಸಿನ್ ಎಂಬಲ್ಲಿಯೇ ವಾಹನಗಳು ನಿಂತುಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಜನರನ್ನು ಹೊತ್ತು ತರುತ್ತವೆ. ಇಲ್ಲಿ ನಿರ್ಮಿಸಿದ ರಸ್ತೆಯನ್ನು ಕುಸಿಯುವ ಪರ್ವತಗಳು ತಿಂಗಳೊಪ್ಪತ್ತಿಲ್ಲಿ ನುಂಗಿ ಮುಗಿಸುತ್ತವೆ. ಇದರ ಕೂಗಳತೆಯಲ್ಲಿದೆ ದುರ್ಗಮವಾದ ಬಂಗೂಸ್ ವ್ಯಾಲಿ. ಅತ್ಯಂತ ಸುಂದರ ಪ್ರದೇಶ ಲೀಪಾ ವಿಭಿನ್ನ ವಲಯ. ಮೇಲ್ಗಡೆಯ ಪೂರ್ವಭಾಗ ಡೈಖಾನ್ ವ್ಯಾಲಿ, ಪಕ್ಕದ ಇನ್ನೊಂದಿಷ್ಟು ವಲಯವನ್ನು ಚಾನ್ಸೇನ್ ಎನ್ನುತ್ತಾರೆ. ಉಗ್ರರಿಗೆ ಲೀಪಾ ಎಂದರೆ ಡೈಖಾನ್ ವ್ಯಾಲಿಯ ಬದೀಗೆ ಹೋಗುವಂತೆ ಪಾಕಿ ಅಧಿಕಾರ ಕೇಂದ್ರವೇ ಸೂಚನೆ ಕೊಡುತ್ತದೆ. )

ಅಲ್ಲಿ ಸೈನ್ಯಾಧಿಕಾರಿಗಳಿದ್ದಾರೆ. ನಿವೃತ್ತ ರೇಂಜರ್ ಗಳಿದ್ದಾರೆ. ಐ.ಎಸ್.ಐ.ಗಾಗಿ ನೌಕರಿ ಮುಗಿದ ನಂತರವೂ ಪ್ರಾಣ ಕೊಡಲು ಸಿದ್ಧರಿರುವ ಅನಾಹುತಕಾರಿ ಅಧಿಕಾರಿಗಳಿದ್ದಾರೆ. ಕೊನೆಗೆ ಸೈನ್ಯದ ಅಷ್ಟೂ ರೀತಿಯ ಹೆಚ್ಚಿನ ಅಧಿಕಾರಿಗಳು, ರಿಟೈರಾದವರು, ಸೈನ್ಯಕ್ಕೆ ಅಚ್ಚುಮೆಚ್ಚಾಗಲು ಯತ್ನಿಸುವವರೆಲ್ಲಾ ಇವತ್ತು ಕಾಯ್ದು ಕೂತಿದ್ದುದು ಅಕ್ಷರಶ: ಕಾಶ್ಮೀರ ಆ ಕಡೆಯ ಗಡಿಯಲ್ಲಿ ಎನ್ನುವುದು ಜಗತ್ತಿಗೆ ಗೊತ್ತಾಗುವ ಹೊತ್ತಿಗೆ ಪಾಕಿಸ್ತಾನ ಈ ಸರಹದ್ದಿನ ಮನೆಗಳನ್ನು ಬಳಸಿ ಅನಾಮತ್ತು ಆರ್ನೂರಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತದೊಳಕ್ಕೆ ನುಗ್ಗಿಸಿ ಆಗಿತ್ತು. ಇದು ಪಾಕಿಸ್ತಾನ ಹಿಂದೊಮ್ಮೆ ಹೇಳಿದಂತೆ ಸಾವಿರ ವರ್ಷದ ಯುದ್ಧ. ಹೌದು. 1948 ರಲ್ಲಿ ಭಾರತ ಮಾತುಕತೆಯ ಟೇಬಲ್ಲಿನ ಮೇಲೆ ಸೋತು ಹೋದರೂ ಪಾಕಿಸ್ತಾನ ಸೈನ್ಯಕ್ಕಾದ ಅವಮಾನ ಮಾತ್ರ ಅನಾಹುತಕಾರಿ ಹಂತದಲ್ಲಿತ್ತು. ಆವತ್ತೇ ಆಗಿನ ಪಾಕಿಸ್ತಾನದ ನಾಯಕರಲೊಬ್ಬ ಹೀಗೆ ನುಡಿದ್ದದ್ದು ಇವತ್ತು ಜಾಗತಿಕ ದಾಖಲೆ. "..ಭಾರತದೊಂದಿಗೆ ನಾವು ಒಂದು ಯುದ್ಧ ಸೋತಿರಬಹುದು. ಆದರೆ ಇನ್ನು ಮೇಲೆ ಎಲ್ಲಿಯವರೆಗೆ ಕಾಶ್ಮೀರ ಸ್ವತಂತ್ರಗೊಳಿಸಿ ನಮ್ಮ ತೆಕ್ಕೆಗೆ ಸೇರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ವಿರಮಿಸುವುದಿಲ್ಲ. ಇದು ಸಾವಿರ ವರ್ಷಗಳವರೆಗೆ ನಡೆಯಲಿರುವ ಯುದ್ಧ..." 
ಅಲ್ಲಿಂದಿಚೆಗೆ ಪಾಕಿಸ್ತಾನ ವಿರಮಿಸಿದ್ದು ಸುಳ್ಳು ಮತ್ತು ಅದಕ್ಕೆ ನೆಮ್ಮದಿಯ ರಾತ್ರಿಗಳನ್ನು ಸ್ವತ: ಕಾಶ್ಮೀರ ಯಾವತ್ತೂ ಕೊಡಲೇ ಇಲ್ಲ. ಕಾರಣ ಕಾಶ್ಮೀರ ಎನ್ನುವುದು ಪಾಕಿಸ್ತಾನದ ಮಟ್ಟಿಗೆ ಅವಮಾನ ಮತ್ತು ಹತಾಶೆಯ ಹುಣ್ಣಾಗಿ ಹೆಗಲೇರಿ ಕೂತುಬಿಟ್ಟಿತ್ತು. ಬೇಕಿದ್ದೋ ಬೇಡದೆಯೋ ಅದು ತನ್ನ ರಾಜನೀತಿ, ಧಾರ್ಮಿಕ, ಸಾಮಾಜಿಕ ಮತ್ತು ಕೊನೆಕೊನೆಗೆ ವೈಯಕ್ತಿಕ ಇಷ್ಟಾನಿಷ್ಟಗಳಲ್ಲೂ ಅದನ್ನು ಪೆÇೀಷಿಸಿಕೊಂಡೆ ಬಂತು. ಇವತ್ತು ಪಾಕಿಸ್ತಾನದಲ್ಲಿ ಜನ ಸಾಮಾನ್ಯನಿಂದ, ತೀರ ಡಿಪೆÇ್ಲೀಮ್ಯಾಟ್‍ಗಳವರೆಗೆ ಹೇಗೇ ಲೆಕ್ಕ ಹಾಕಿದರೂ ಯಾವುದೇ ವಿಷಯದ ಚರ್ಚೆಯಾದರೂ ಅದು ಬಂದು ಕೊನೆಯಲ್ಲಿ ನಿಲ್ಲುವುದು ಭಾರತದೆಡೆಗಿನ ಅಸಹನೆ ಮತ್ತು ಭಾರತದ ಅಭಿವೃದ್ಧಿ ಬಗೆಗಿನ ಒಳಸಂಕಟ, ಹಿಂದೂಗಳನ್ನೂ ಹೇಗೆ ಕೊನೆಗಣಿಸಬೇಕೆನ್ನುವ ತಪನೆಯೇ ಹೊರತಾಗಿ ಬೇರೊಂದು ಜಗತ್ತಿದೆ ಎನ್ನುವ ಭೌದ್ಧಿಕ ಪಾರಮ್ಯ ಸಾಧಿಸಿದ್ದೇ ಇಲ್ಲ. 
ಇಂಥಾ ವಿನಾ ಕಾರಣಗಳಿಗಾಗಿ ಮುಸ್ಲಿಂ ಹೊರತು ಪಡಿಸಿ ಇನೊಬ್ಬೆ ಒಬ್ಬ ಬೇರೆ ಧರ್ಮೀಯ ಪಾಕಿಸ್ತಾನಕ್ಕೆ ಕಾಲಿಡುತ್ತಿಲ್ಲ. ಪ್ರವಾಸಿ ಲೆಕ್ಕದಲ್ಲಿ ಅಲ್ಲಿನ ಪ್ರಗತಿ ಅಪೂಟು ಕಿತ್ತು ಹೋಗಿದೆ. ನಿಮಗೆ ಗೊತ್ತಿರಲಿ ಒಂದು ದೇಶಕ್ಕೆ ಎಷ್ಟು ವಿದೇಶಿಯರು ವ್ಯಾಪಾರ, ಪ್ರವಾಸ, ವೈದ್ಯಕೀಯ, ಸಾಮಾಜಿಕ ಹಾಗು ಕ್ರೀಡೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸಂದರ್ಶಿಸುತ್ತಾರೆ ಎನ್ನುವುದರ ಮೇಲೆ ಅಲ್ಲಿನ ಸಾಮಾಜಿಕ ಸಮತೋಲನದ ಸಂಖ್ಯೆ ಜಾಗತಿಕವಾಗಿ ದಾಖಲಾಗುತ್ತದೆ. ಆ ವಿಷಯದಲ್ಲಿ ಪಾಕಿಸ್ತಾನದ್ದು ಅತ್ಯಂತ ಹೀನಾಯ ಸ್ಥಿತಿಗತಿ. ಅದಕ್ಕೆ ಬೆಂಬಲವಾಗಿ ಈಗ ಹೊಸ ರೀತಿಯ ಯೋಜನೆಗೆ ಹಿಂದ್ಯಾವತ್ತೋ ಚಾಲನೆ ಕೊಟ್ಟಿದ್ದ ಪಾಕಿಸ್ತಾನದ ಇನ್ನೊಂದು ದೂರಗಾಮಿ ಆತಂಕಿ ಮುಖವನ್ನು ಭಾರತದ ಸೈನ್ಯ ವರೆಸಿಹಾಕುತ್ತಿದೆ. ಕಳೆದೆರಡ್ಮೂರು ದಶಕಗಳಿಂದ ಪಾಕಿಸ್ತಾನದ ದೂರಾಲೋಚನೆಯಿಂದ ಸೈನ್ಯದ ನಿವೃತ್ತ ಮತ್ತು ಇತರ ಅಧಿಕಾರಿ ಹಾಗು ತಂಡಗಳನ್ನು ನೆಲೆಗೊಳಿಸುತ್ತಿದ್ದುದು ಎಲ್ಲಿ ಗೊತ್ತೆ ಭಾರತದ ಗಡಿಗಳಲ್ಲಿ. ಸುಮಾರು ಕಳೆದ ಮೂವತ್ತು ವರ್ಷಗಳಲ್ಲಿ ಹೀಗೆ ಬಂದುಳಿದವರ ಮತ್ತು ನೆಲೆಗೊಳಿಸಿದ ಕುಟುಂಬಗಳ ಸಂಖ್ಯೆ ಸುಮಾರು ಎರಡು ಸಾವಿರಕ್ಕೂ ಮಿಗಿಲು. ಇವರೆಲ್ಲಾ ಸಾಲು ಸಾಲಾಗಿ ಅನಾಮತ್ತಾಗಿ ತೀರ ಕಡಿಮೆ ಬೆಲೆಯಲ್ಲಿ ಸರಕಾರ ಒದಗಿಸಿದ ತೋಟದ ಮನೆಗಳಲ್ಲಿ ಬೀಡು ಬಿಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತದಕ್ಕೆ ನುಸುಳುವ ಉಗ್ರರನ್ನು ಅಲ್ಲಿ ಸಾಕುತ್ತಾ ಇರುತ್ತಾರೆ. ಅವಕಾಶ ಸಿಕ್ಕಿದಾಗ ಅವರನ್ನು ಅಲ್ಲಿಂದ ಇತ್ತಲಿನ ಗಡಿಗಳಲ್ಲಿ ನುಗ್ಗಿಸಲಾಗುತ್ತದೆ. ಆ ಅವಕಾಶಕ್ಕಾಗಿ ಸರಹದ್ದಿನಲ್ಲಿ ತಲೆ ಮರೆಸಿಕೊಂಡಂತೆ ಇರಲು ಈ ನಿವೃತ್ತ ಸೈನಿಕರ ತೋಟದ ಮನೆಗಳನ್ನು ಬಳಸಿಕೊಳ್ಳಲಾಗುತ್ತದೆ.
ನಿಮಗೆ ಗೊತ್ತಿರಲಿ.. ಇವತ್ತು ಭಾರತದೊಳಕ್ಕೆ ಬರಲು ಕಳ್ಳ ದಾರಿಗಳನ್ನು ಸೃಷ್ಟಿಸಿಕೊಳ್ಳುವ ಉಗ್ರರಿಗೆ ಒಳಗೆ ಬಂದ ಮೇಲೆ ಶ್ರೀನಗರದ ವರೆಗೆ ತಲುಪಲು ನಿಸರ್ಗ ಬಹುದೊಡ್ಡ ಕೊಡುಗೆ ನೀಡಿದೆ. ಒಮ್ಮೆ ಗಾಂಧಾರ್‍ಬಾಲ್ ದಾಟಿಬಿಟ್ಟರೆ ಮತ್ತೇನಿದ್ದರೂ ಪರ್ವತದ ಸೆರಗು ಕೊರೆದು ರೂಪಿಸಿದ ಕಡಿದಾದ ಅಂಚಿನ ಅಪ್ಪಟ ಕಣಿವೆಯ ಏರಿಳಿತ. ಸಂಪೂರ್ಣ ಕಣಿವೆಯನ್ನು ಕೊರಕಲಾಗಿಸಿ ಗುಡ್ಡಗಳ ಏರಿಳಿತ, ನಿರಂತರ ಭೂ ಕುಸಿತದಂತಹ ವೈಪರಿತ್ಯಗಳಿಗೆ ಒಡ್ಡಿದ್ದೆ ಇಲ್ಲಿ ಎಲ್ಲೆಂದರಲ್ಲಿ ಹರಿಯುವ ನದಿ ಕವಲುಗಳು. ಅತೀ ಸೂಕ್ಷ್ಮ ಪ್ರದೇಶ ಎನ್ನಿಸಿರುವ ಉರಿಸೆಕ್ಟರಿನ ಆಸುಪಾಸೇ ಎಷ್ಟು ನಾಲಾಗಳು, ಕಾಲುವೆಗಳಿವೆ ಎಂದರೆ ಒಬ್ಬ ಸಲೀಸಾಗಿ ಅದರ ಕೊರಕಲಿನಲ್ಲಿ ತೆವಳಿಕೊಂಡೆ ಕಿ.ಮೀ.ಗಟ್ಟಲೆ ಭಾರತದೊಳಕ್ಕೆ ಕ್ರಮಿಸಿಬಿಡುತ್ತಾನೆ.
ಉರಿಯ ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವುದೇ ಸಲಮ್‍ನಾಲಾ ಎಂಬ ಹಳ್ಳ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ಹಳ್ಳಗಳು ಹರಿದು ಝೀಲಂ ನದಿಯನ್ನು ತಲುಪುತ್ತವೆ. ಇದಲ್ಲದೆ ರಾವಿ, ಚಿನಾಬ್ ಸೇರಿದಂತೆ ಸಿಂಧೂನದಿಯ ಇಕ್ಕೆಲಗಳ ಪಾತ್ರಗಳಿಗೆ ಬಂದು ಸೇರುವ ನಾಲಾಗಳ ಸಂಖ್ಯೆ ಸರಿಯಾಗಿ ಏಣಿಸಿದರೆ ಸುಮಾರು ಎರಡು ಸಾವಿರದ ಹತ್ತಿರದಲ್ಲಿದೆ. ಶಂಕರಾಚಾರ್ಯ ನೆತ್ತಿಯ ಮೇಲೆ ನಿಂತು ನೋಡಿದರೆ ಸಂಪೂರ್ಣ ಶ್ರೀನಗರ ಯಾವತ್ತೂ ನೀರಿನಲ್ಲಿ ಮುಳುಗಿದಂತೆಯೇ ಕಾಣಿಸುತ್ತಿರುತ್ತದೆ. ಈ ನದಿಯನ್ನು ಪಳಗಿಸುವುದು ಅತ್ಲಾಗಿರಲಿ, ದಂಡೆಯನ್ನು ಹಿಡಿತಕ್ಕಿಟ್ಟುಕೊಳ್ಳುವುದು ಕಷ್ಟ. ಇಂತಹ ತುಂಬ ದುರ್ಗಮ ಪ್ರದೇಶಗಳು ಸರಹದ್ದಿನುದ್ದಕ್ಕೂ ಸಾಲುಸಾಲಾಗಿವೆ. ಇಂಥಲ್ಲಿಂದಲೇ ಉಗ್ರರು ನುಸುಳುತ್ತಾರೆ. ಜೊತೆಗೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟಕೊನೆಯಲ್ಲಿ ತೀರ ಸರಹದ್ದಿನ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.
ಇತ್ತ ತಾವಗಿ, ಅಪೂಟು ಪಾಕಿಗಳ ಪಕ್ಕೆಗೆ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್‍ಭಾಗ್ಲಿ, ಪಾದದಲ್ಲೇ ನಟೋರಿಯಸ್ ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತ ಸರಹದ್ದಿನ ಸೆರಗಿಗೆ ಚುಂಗಿನಂತೆ ಆವರಿಸಿಕೊಂಡಿರುವ ಹತ್ತಾರು ಮನೆಗಳ ನೂರಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್‍ಪಂಜಾಲ್ ಪರ್ವತಶ್ರೇಣಿ ಎರಡೂ ಮಗ್ಗುಲಲ್ಲೂ ಯಥೇಚ್ಚವಾಗಿ ಕನಿಷ್ಠ ಸಾವಿರ ಅಡಿಯ ಎತ್ತರದ ಪರ್ವತಾಗ್ರಹಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಇವೆಲ್ಲದಕ್ಕೂ ಬೆಂಬಲವಾಗಿ ಪಾಕಿ ಗಡಿಯಿಂದ ಫೈರಿಂಗು ಅವರನ್ನು ರಕ್ಷಿಸಲು ಮೊಳಗುತ್ತಿರುತ್ತದೆ. ಅದರೆ ಇದೆಲ್ಲಾ ನಿರುಕಿಸುವ ಭಾರತೀಯ ಸೈನಿಕ ಬಂದೂಕಿನ ಕುದುರೆ ಎಳೆಯಲು ಕಾಯ್ದು ಕೂತೇ ಇರುತ್ತಾನೆ. ಹಾಗಾಗೇ ಇದೇ ವರ್ಷದಲ್ಲಿ ಅನಾಮತ್ತು 164 ಉಗ್ರರ ಹೆಸರಿನ ಹೇಡಿಗಳನ್ನು ಭಾರತದ ಸೈನಿಕರು ಹೊಡೆದುರುಳಿಸಿದ್ದಾರೆ. ಕಣಿವೆ ಖಾಲಿಯಾಗುತ್ತಿದೆ.

Sunday, October 1, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ಉಗ್ರರ ಬೆಂಬಲಕ್ಕೆ ನಮ್ಮದೇ ಹಣ..
 (ಮೊನ್ನೆ ಮೊನ್ನೆಯವರೆಗೂ ದೆಹಲಿ ಮೀಟಿಂಗ್ ಎಂಬ ನೆಪದಲ್ಲಿ ಅನಾಮತಾಗಿ 365 ಕೋಟಿ ರೂ. ಸರಕಾರಿ ದುಡ್ಡು ಖರ್ಚು ಮಾಡಿರುವ ಪ್ರತ್ಯೇಕತಾವಾದಿಗಳಿಗೆ ಅಷ್ಟು ಕೊವತ್ತಿದ್ದರೆ ಸ್ವಂತದ ಮಕ್ಕಳನ್ನು ಕಾಶ್ಮೀರದಲ್ಲಿ ಇಂತಹ ಪುಂಡಾಟಿಕೆ, ಕಲ್ಲೆಸೆಯುವಂತಹ ದೇಶದ್ರೋಹದ ಕೆಲಸಕ್ಕೆ ಬಳಸಲಿ. ಸಾಧ್ಯವೇ ಇಲ್ಲ. ಇವರೆಲ್ಲಾ ಯಾವಾಗಲೋ ದೇಶ ಬಿಟ್ಟು ವಿದೇಶಗಳಲ್ಲಿ ನೆಲೆಕಂಡಿದ್ದಾರೆ. ಅಂದಹಾಗೆ ಈ ಪ್ರತ್ಯೇಕತಾವಾದಿ ಉಗ್ರರ ಬೆಂಬಲಿಗರಿಗೆ ಸ್ವಂತದ್ದೂ ಅಂತಾ ಯಾವ ದುಡಿಮೆ, ಕ್ಯಾಮೆ ಮಾಡಿಯೇ ಗೊತ್ತಿಲ್ಲ. ಜೀವನ ಪೂರ್ತಿ ದ್ರೋಹದ ಕೆಲಸವೇ..? ಮತ್ತೆ ಇಂಥಾ ಐಶಾರಾಮಿ ಜೀವನ, ಬದುಕು ಹೇಗೆ ಸಾಗುತ್ತಿದೆ ಹಾಗಾದರೆ..? ಎಲ್ಲಿಂದ ಬರುತ್ತಿದೆ ಇವರಿಗೆ ಈ ಪಾಟಿ ದುಡ್ಡು..? ಅದೇ ಇಂಟರೆಸ್ಟಿಂಗ್..)

ಇವತ್ತು ಅಜಾದಿ ಗ್ಯಾಂಗು ಎಂಬ ಹೆಸರಲ್ಲಿ ಕಾಶ್ಮೀರದಲ್ಲಿ ಬೇಡದ ಕ್ಯಾತೆ ಮಾಡಿಕೊಂಡು ಪಾಕಿಸ್ತಾನದ ಬೂಟು ನೆಕ್ಕುತ್ತಿರುವ ಉಗ್ರವಾದಿ ಬೆಂಬಲಿಸುವ ಪ್ರತ್ಯೇಕತಾವಾದಿ ನಾಯಕರುಗಳು ಮತ್ತು ಸಂಪೂರ್ಣ ಕಾಶ್ಮೀರದ ವ್ಯವಹಾರ ಹಾಗು ಉಸಿರು ನಡೆಯುತ್ತಿರುವುದೇ ನಾವು ನೀವೆಲ್ಲ ಕೊಡುತ್ತಿರುವ ತೆರಿಗೆ ಹಣದ ಮೇಲೆ ಎಂಬುದು ನಿಮಗೆ ಗೊತ್ತಿದೆಯೇ..? ವೈರುದ್ಯ ಮತ್ತು ಅತ್ಯಂತ ಹೇಯವೆಂದರೆ ಇಂಥಾ ದೇಶ ಒಡೆಯುವ ದ್ರೋಹಿಗಳಿಗೆ ದೆಹಲಿಗೆ ಬರುವ ಖರ್ಚನ್ನು ನಮ್ಮ ಸರಕಾರಗಳು ವಹಿಸಿಕೊಂಡು ಬಂದಿವೆ ಕಳೆದ ಹಲವು ದಶಕಗಳಿಂದ. ತೀರ ಅನಾಹುತಕಾರಿ ಮತ್ತು ನೀಚ ಕೃತ್ಯವೆಂದರೆ ಕಲ್ಲು ಹೊಡೆಯುವ ಮತ್ತು ಉಗ್ರರಿಗೆ ಬೆಂಬಲ, ಮನೆ, ಅನ್ನ, ನೀರು, ಆಶ್ರಯ ಇವೆಲ್ಲವನ್ನೂ ಒದಗಿಸುವ ಕೆಲಸವನ್ನೇ ಇವರು ಮಾಡುತ್ತಿರುವುದು ಮತ್ತು ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ನೇರವಾಗಿ ಇವರಿಗೆ ಹಣ ತಲುಪುತ್ತದೆ. ಅದಕ್ಕಾಗಿ ಇವರು ಅತ್ತಲಿಂದ ನುಸುಳುವ ಪಾತಕಿಗಳು ಸೇರಿದಂತೆ ಸ್ಥಳೀಯ ಹುಡುಗರನ್ನು ಸಂಘಟಿಸುವುದು, ಕಲ್ಲು ಹೊಡೆಯುವ ಕೆಲಸಕ್ಕೆ ಹಣ ನೀಡುವುದು, ಎಲ್ಲಾದರೂ ಉಗ್ರರು ಸಿಕ್ಕಿಬಿದ್ದರೆ ಸೈನಿಕರು ನಡೆಸುವ ಕಾರ್ಯಾಚರಣೆಗೆ ತಡೆ ಒಡ್ಡುವುದು, ಮಿಲಿಟರಿ ಜನರಿಗೆ ಯಾವುದೇ ಸರ್ವೀಸು ಸಿಗದಂತೆ ನೋಡಿಕೊಳ್ಳುವುದು ಇಂತಹ ಹರಾಮಿ ಕೆಲಸವೇ ಇವರ ನೌಕರಿ. ಹೇಗಿದೆ ಜೀವನ...?
ಅಷ್ಟಕ್ಕೂ ಈಗಿನ ಜನರೇಶನ್ನಿನ ಹುಡುಗರಿಗೆ ಮತ್ತು ಇತ್ತೀಚಿನ ಒಂದು ದಶಕದಿಂದ ಹದಿಹರೆಯದ ಹುಡುಗಿಯರಿಗೂ, ಹುಟ್ಟುತ್ತಲೇ ಧರ್ಮದ ಅಫೀಮು ಮತ್ತು ಭಾರತ ವಿರೋಧಿ ಕತೆ ಹೇಳಿ ಬೆಳೆಸಿದ, ಬೆಳೆಸುತ್ತಿರುವ ಅಧ್ಬುತ ಯೋಜನೆಯ ಶ್ರೇಯ ಕೂಡಾ ಇವರದ್ದೆ. ಇವರೊಂದಿಗೆ ರಾಜಕೀಯ ತೆವಲೆನ್ನುವುದು ಅದೆಷ್ಟು ಮನುಶ್ಯನನ್ನು ದೇಶದ್ರೋಹಿಯನ್ನಾಗಿಸಬಲ್ಲದು ಎನ್ನುವುದಕ್ಕೆ ತಲೆ ಮಾಸಿದ ಅಬ್ದುಲ್ಲಾ ಅಪ್ಪಟ ಉದಾಹರಣೆ. ಅವನ ಸ್ಟೇಟ್‍ಮೆಂಟು ನೋಡಿ,
"..ಕಾಶ್ಮೀರದಲ್ಲಿ ಜನ ಶಸ್ತ್ರಾಶ್ತ್ರ ಹಿಡಿಯುತ್ತಿರುವುದು ಅವರ ಹಕ್ಕಿಗಾಗಿ ಮತ್ತು ಸ್ವಂತಂತ್ರ ರಾಷ್ಟ್ರಕ್ಕಾಗಿ. ಅವರನ್ನು ಬೆದರಿಸಿ ಗೆಲ್ಲುವುದು ಸಾಧ್ಯವಿಲ್ಲ. ಮನೆ ಮನೆಗಳಲ್ಲಿ ಕಾಶ್ಮೀರಕ್ಕಾಗಿ ಜೀವ ಕೋಡಲು ಜನ ಸಿದ್ಧವಿದ್ದಾರೆ. ಕಶ್ಮೀರ ಯುವಕರಿಗೆ ರಾಜಕೀಯದ ಬದಲಾಗಿ ಇರುವುದು ದೇಶಾಭಿಮಾನ.. " 
ಅಂದ ಹಾಗೆ ಇಂಥ ಹೇಳಿಕೆಯ ಹಿಂದೆ ಇರುವ ನಾಯಕರೆಂದರೆ ತೀರ ಕಾಶ್ಮೀರ ಪ್ರಗತಿಗೆ ಮತ್ತು ಅಲ್ಲಿನ ಜನಜೀವನಕ್ಕೆ, ಪಕ್ಕೆ ಮುಳ್ಳಾಗಿ ಕಾಡುತ್ತಿರುವ ಪ್ರಮುಖ ಉಗ್ರ ಬೆಂಬಲಿಗರಾದ ಸಯ್ಯದ ಗಿಲಾನಿ, ಮೀರ್‍ವೇಜ್, ಯಾಸಿನ್ ಮಲಿಕ್, ಇರ್ಫಾನ ಹಫೀಸ್, ಲೋಧಾ ಮತ್ತು ಅಸ್ಲಂಗಣಿ ಇತ್ಯಾದಿಗಳು. ಇವರೆಲ್ಲರ ನಿರಂತರ ಕಾಯಕವೆಂದರೆ ಜೆ.ಎನ್.ಯು. ನಂತಹ ವಿಶ್ವವಿದ್ಯಾಲಯದಲ್ಲಿ ಗಲಾಟೆಗೆ ಕುಮ್ಮಕ್ಕು ಮತ್ತು ಹಿಂಬಾಗಿಲಿನಿಂದ ಎಲ್ಲೆಡೆಗೆ ದೇಶ ವಿರೋಧಿ ಸಂಸ್ಕೃತಿಗೆ ಚಾಲನೆ ಕೊಡುತ್ತಾ, ಅತ್ತ ಪ್ರತಿ ಕೆಲಸಕ್ಕೂ ಪಾಕಿಗಳ ಕಡೆಯಿಂದ ಹಣ ಎತ್ತುತ್ತಾ ಬದುಕುತ್ತಿದ್ದಾರೆ. ಇಂಥಾ ವಿದ್ರೋಹಿಗಳಿಗೆ ನಮ್ಮ ತೆರಿಗೆ ಹಣದಲ್ಲಿ ಪ್ರತಿ ಸರಿ ದೆಹಲಿಗೆ ಮೀಟಿಂಗ್ ನೆಪದಲ್ಲಿ ಬರಲು ವಿಮಾನ, ವಿ.ಐ.ಪಿ. ಸೌಲಭ್ಯ ಗಳನ್ನು ಸರಕಾರ ಕಳೆದ ಹಲವು ದಶಕಗಳಿಂದ ಕೊಡಮಾಡುತ್ತಿತ್ತು ಎಂದರೆ ಅದೆಂಥಾ ಕರ್ಮ ನೋಡಿ. ಇವರ ರಾಜಕೀಯ ತೆವಲಿಗಾಗಿ ಭಾರತೀಯರು ಏನೆಲ್ಲಾ ಭಾರ ಹೊರಬೇಕಿದೆ. 
ಇವರ ಮುಂದಿನ ಸಂತಾನದಂತಿರುವ ಉಮರ್ ಖಾಲಿದ್ ಮತ್ತು ಕನ್ನಯ್ಯಾ ಕುಮಾರ್‍ನಂಥವರು ದೇಶದ ಇತರೆಡೆಗೆ ಒಳಗೊಳಗೇ ವಿದ್ರೋಹಿಗಳನ್ನು ತಯಾರು ಮಾಡುತ್ತಿದ್ದಾರೆ. ಇವತ್ತು ದೇಹಲಿ, ಹೈದರಾಬಾದ್ ವಿಶ್ವವಿದ್ಯಾಲಯಗಳು ಅಕ್ಷರಶ: ಇಂಥಾ ವಿದ್ರೋಹಿಗಳನ್ನು ಹುಟ್ಟಿಸುವ ಟಂಕಶಾಲೆಗಳು. ಅಂದಹಾಗೆ ಇವೆಲ್ಲಾ ಇತ್ತಿಚೆಗೆ ಸಾಲುಸಾಲಾಗಿ ಹುರಿಯತ್ ನಾಯಕರನ್ನು ಎನ್.ಐ.ಎ. ಬಂಧಿಸಿ ಬಾಯ್ಬಿಡಿಸುತ್ತಿರುವುದರಿಂದ ಇಲ್ಲಿವರೆಗೆ ಕೇವಲ ಪೇಪರ್ ಸುದ್ದಿಯಾಗಿದ್ದು ಈಗ ದಾಖಲೆಯಾಗುತ್ತಿದೆ. ಹೀಗೆ ಹುರಿಯತ್ ಮುಖಂಡರಿಗೆ ಹವಾಲಾ, ಬ್ಯಾಂಕು, ಕ್ಯಾಷ್ ಆಂಡ್ ಕ್ಯಾರಿ ಹಾಗು ದುಪ್ಪಟ್ಟು ನಿಗದಿಗಳ ಮೂಲಕ ಹಣ ಬರುತ್ತಿರುವುದು ಖಾತ್ರಿಯಾಗುತ್ತಿದ್ದಂತೆ ರಾತ್ರೋರಾತ್ರಿ ಈ ನಾಯಕರಗಳ ಮನೆ ಮೇಲೆ ದಾಳಿಯಾಯಿತು. ಒಂದೇ ದಿನದಲ್ಲಿ ಅನಧಿಕೃತ ದಾಖಲೆ ಇಲ್ಲದೆ 2.5 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು ಅದು ಬರಲಿರುವ ದಿನಗಳ ಕಲ್ಲಿನೇಟಿನ ಪುಢಾರಿ ಹುಡುಗರಿಗೆ ಹಂಚಲು ಬಳಸಲಾಗುತ್ತಿತ್ತು ಎಂದು ದಾಖಲೆ ಲಭ್ಯವಾಗುವುದರೊಂದಿಗೆ ಹುರಿಯತ್‍ನ ಬಂಡವಾಳ ಅಧಿಕೃತವಾಗಿ ಬೀದಿಗೆ ಬಂದಿದೆ. 
" ಕೂಲಿಗಾಗಿ ಕಲ್ಲು" ಎನ್ನುವ ಯೋಜನೆ ರೂಪಿಸಿದ್ದ ಈ ನಾಯಕರು ತಿಂಗಳ ಒಂದೆರಡು ದಿನಗಳ ಕಾಲ ಇದಕ್ಕಾಗಿ ಹುಡುಗರಿಗೆ, ಕಲ್ಲು ಹೊಡೆಯುವ ತಂಡಗಳನ್ನು ರೂಪಿಸಿ ಆಯಾ ಕ್ಷೇತ್ರವಾರು ಜವಾಬ್ದಾರಿ ವಹಿಸಿಡುತ್ತಿದ್ದರು. ಇಲ್ಲದಿದ್ದರೆ ಪೆÇೀಲಿಸರು ರಸ್ತೆಗೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಅದೆಲ್ಲಿಂದ ಜನ ಕಲ್ಲುಗಳನ್ನು ಹಿಡಿದು ಹೊರಬರುತ್ತಾರೆ..? ಒಂದೆರಡು ದಿನದ ಇಂತಹ ಕಲ್ಲು ಹೊಡೆಯುವ ಪರಮ ದ್ರೋಹಿಗಳು ಒಂದೆರಡು ಕೃತ್ಯಕ್ಕೆ ಪೂರ್ತಿ ತಿಂಗಳಿಗಾಗುವಷ್ಟು ಹಣ ಪಡೆಯುತ್ತಾರೆ. ಬಾಕಿ ದಿನ ಇಲ್ಲಿನ ಎಲ್ಲಾ ವಿವರಗಳನ್ನು ವಾಟ್ಸ್ ಆಪ್‍ನಲ್ಲೂ ಫೇಸ್ ಬುಕ್ಕಿನಲ್ಲೂ ಹಾಕುವುದು ವಿಡಿಯೋ ಅಪೆÇ್ಲೀಡ್ ಮಾಡುತ್ತಲೂ ಜಾಗತಿಕವಾಗಿ ಕಾಶ್ಮೀರದಲ್ಲಿ ಮಾನವ ಹಕ್ಕಿನ ದಮನ ಎಂದು ಪ್ರಚುರ ಪಡಿಸುತ್ತಾ ಕೂರುತ್ತಾರೆ. ಕಲ್ಲೇಟಿನ ದುಡಿತ ಕೆಲವೇ ಗಂಟೆಗಳಾಗಿದ್ದರಿಂದ ಮತ್ತು ಅದರಂತೆ ಇನ್ನಷ್ಠು ಹಣ ಮಾಡುವ ಅವಕಾಶ ಸಿಕ್ಕಿದರೆ ಸಿದ್ಧ ಎನ್ನುತ್ತಾ ದೇಶದ್ರೋಹದ ಇನ್ನಿಷ್ಟು ಹೊಸ ಯೋಜನೆಗಳಿಗೆ ತಯಾರಾಗುತ್ತಾರೆ. ಇವೆಲ್ಲದಕ್ಕೂ ಮೂಲ ನಮ್ಮದೇ ದುಡ್ಡಿನಲ್ಲಿ ಬದುಕುತ್ತಿರುವ ಕಾಶ್ಮೀರ ಸರಕಾರ ಮತ್ತು ಅವರನ್ನು ಸಾಕುತ್ತಾ, ದೇಶಾದ್ಯಂತದ ವೋಟಬ್ಯಾಂಕ್ ಭದ್ರ ಮಾಡಿಕೊಳ್ಳುವ ಸಲುವಾಗಿ ಕಳೆದ ಹಲವು ದಶಕಗಳಿಂದ ಕಾಶ್ಮೀರದ ದ್ರೋಹಿಗಳನ್ನು ಸಾಕುತ್ತಿದ್ದ ರಾಜಕೀಯ ಪಕ್ಷಗಳ ಕಾರಣ ಇವತ್ತು ಇಂಥಾ ಗಂಡಾಂತರ ಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ನಮ್ಮದೇ ಹಣದಲ್ಲಿ ದ್ರೋಹಿಗಳನ್ನು ಸಲಹುವ ಪರಿಸ್ಥಿತಿ.
ಇದೇ ಕಾರಣ ಇವತ್ತು ಕಾಶ್ಮೀರದ ಮನೆಯ ಗಲ್ಲಿಗಲ್ಲಿಗಳಲ್ಲಿ ಕಲ್ಲಿನ ಸಂಗ್ರಹ ಹೊಂದಿದ ದಾಸ್ತಾನುಗಳಿವೆ. ಸುದ್ದಿ ಬರುತ್ತಿದ್ದಂತೆ ಇಡೀ ಮನೆಯ ಸುತ್ತಲಿನ ತಂಡಗಳು ಮಿಲಿಟರಿ ವಿರುದ್ಧ ಕಲ್ಲೆಸೆಯಲು ಕಾರ್ಯಾಚರಣೆಗಿಳಿಯುತ್ತದೆ. ಅವರನ್ನು ಹೊಡೆದು ಹಾಕಿದರೆ ಅದನ್ನು ಮಾನವ ಹಕ್ಕು ದಮನ ಎಂದು ದೇಶಾದ್ಯಂತ ಇರುವ ಎಡಪಂಥೀಯ ಪ್ರಪರ ಬುಜೀಗಳು ಹುಂಯ್ಯೋ ಹುಂಯ್ಯೋ ಎಂದು ಕೀರಲಾಗಿ ಒರಲುತ್ತಾ ನಿಂತುಬೀಡುತ್ತಾರೆ. ಅದನ್ನೆ ಕೆಲವು ದ್ರೋಹಿ ಚಾನೆಲ್‍ಗಳು ಆ ಸುದ್ದಿಯನ್ನೇ ಅಂತರಾಷ್ತ್ರೀಯ ಮಟ್ಟದಲ್ಲಿ ಭಾರತದ ಹರಾಜು ಹಾಕಲು ನಿಲ್ಲುತ್ತವೆ. ಇವೆಲ್ಲದಕ್ಕೂ ಪಾಕಿ ಮೂಲದಿಂದ ಹಣ ಪೂರೈಕೆಯಾಗುತ್ತಿದೆ. ಪಾಕಿಸ್ತಾನಕ್ಕೆ ಗಲ್ಫ್ ಮತ್ತು ಅರಬ ಮೂಲದ ಉದ್ಯಮಿಗಳಿಂದ ಜೆಹಾದ್ ಹೆಸರಲ್ಲಿ ಹಣ ಎತ್ತಲಾಗುತ್ತದೆ. ಅದೆಲ್ಲವೂ ಅಲ್ಟಿಮೇಟ್ಲಿ ಬಂದು ಸೇರುವುದು ಉಗ್ರರನ್ನು ಬೆಳೆಸಲು ಮತ್ತು ಅವರ ಬೆಂಬಲಕ್ಕೆ ಬೇಕಾಗುವ ವ್ಯವಸ್ಥೆಗೆ. 

Saturday, September 23, 2017

ಕಾಶ್ಮೀರವೆಂಬ ಖಾಲಿ ಕಣಿವೆ..ಪಾತಕಿಗಳ ಸರಣಿ ಹತ್ಯೆ...

(ತೀರ ಶ್ರೀನಗರ ಮತ್ತು ಅದರಾಚೆಗೆ ಆಲ್ಚಿಯ ಸರಹದ್ದಿನವರೆಗೂ ಇರುವ ಕಾಶ್ಮೀರಿ ಮುಸ್ಲಿಂ ಕುಟುಂಬಗಳು ಒಲೆ ಉರಿಸುವುದೇ ಉಗ್ರರು ಕೊಡುವ ಹಣದಲ್ಲಿ ಎನ್ನುವುದು ಗಮನೀಯ. ಇದಕ್ಕೆ ಕೆಲಸ ಮಾಡಬೇಕಿಲ್ಲ. ವರ್ಷದ ಯಾವತ್ತೊ ಒಂದೆರಡು ದಿನ ಗಡಿ ನುಸುಳಿ ಬರುವವರಿಗೆ ನೀರು ಅಹಾರ ಬೆಚ್ಚನೆಯ ಮಲಗುವ ವ್ಯವಸ್ಥೆ ಮಾಡುವ ದೇಶದ್ರೋಹದ ಕೆಲಸ ಮಾಡಿದರೆ ಸಾಕು. ಯಾರಿಗಿದೆ ವರ್ಷಾನುಗಟ್ಟಲೇ ದುಡಿಯುವ ಜರೂರತ್ತು)

ಸುಮಾರು ಒಂದೂವರೆ ವರ್ಷದ ಹಿಂದೆ ಇದು ನಿಗದಿಯಾಗಿತ್ತು. ಯಾವಾಗ ಭಾರತದ ಸರಹದ್ದನ್ನು ಈ ಪಾತಕಿಗಳು ಪ್ರವೇಶಿಸುತ್ತಾರೋ ಆವತ್ತೇ ಇಲ್ಲಿ ಅವರ ಹೆಣವಾಗುವ ಹಣೆಬರಹವೂ ಬರೆದಾಗಿರುತ್ತದೆ. ಅದರಲ್ಲೂ ಪಾಕಿಸ್ತಾನಿ ನೆಲದ ಉಗ್ರರಿಗೆ ಯಾವುದೇ ರಿಯಾಯಿತಿ ಇಲವೇ ಇಲ್ಲ. ಸೈನ್ಯದ ಲೆಕ್ಕಾಚಾರದಲ್ಲಿ ಇದು ಈ ಬಾರಿಯ ವರ್ಷದ ಕೊನೆಯವರೆಗೂ ಎಳೆಯಬಹುದಾಗಿದ್ದ ಕೇಸು. ಆದರೆ ಸತತವಾಗಿ ಕಳೆದ ಮೂರು ತಿಂಗಳಿಂದ ಸ್ವಘೋಷಿತ ಹಿಜ್ಬುಲ್ ಮತ್ತು ಲಷ್ಕರ್ ಕಮಾಂಡರ್‍ಗಳನ್ನು ಸೈನ್ಯ ಹೊಡೆದುರುಳಿಸಿದೆ. 
ಹತ್ಯೆ ಹೇಗಾಯಿತು ಎನ್ನುವುದಕ್ಕಿಂತಲೂ ಹೇಗೆ ಈ ದುರುಳರು ಸಿಕ್ಕಿಬೀಳದಂತೆ ವರ್ಷಾನುಗಟ್ಟಲೇ ಕಾಶ್ಮೀರದಲ್ಲಿ ತಲೆ ಮರೆಸಿಕೊಂಡಿರುತ್ತಾರೆ ಎನ್ನುವುದೇ ಮುಖ್ಯ. ಹಾಗೆ ನೋಡಿದರೆ ಅಲ್ಲಿನ ಹೆಣ್ಣುಮಕ್ಕಳಿಗೆ ಮತ್ತು ಈಗಾಗಲೇ ವಯಸ್ಕರಾಗಿ ಜೀವನದ ಉದ್ದೇಶ ಬದುಕುವುದಷ್ಟೆ ಎಂದುಕೊಂಡವರಿಗೆ ಸೈನ್ಯ ಮತ್ತು ದೇಶವನ್ನು ಎದುರು ಹಾಕಿಕೊಳ್ಳುವಂತಹ ದೇಶ ದ್ರೋಹದ ಉಪದ್ಯಾಪಿತನ ಬೇಕಾಗೇ ಇಲ್ಲ. ಹೀಗೆಂದು ಸ್ಪಷ್ಟ ನಿಲುವಿನ ಮುಸ್ಲಿಂರ ಸಣ್ಣ ಗುಂಪುಈಗಲೂ ತಮ್ಮ ಪಾಡಿಗೆ ಬದುಕು ಕಟ್ಟಿಕೊಳ್ಳಲೆತ್ನಿಸುತ್ತಲೇ ಇದೆ.
ಹಾಗಾಗಿಯೇ ಮೊನ್ನೆ ಹತನಾದ ಅಬು ಇಸ್ಮಾಯಿಲ್ ಎಂಬ ಅಮರನಾಥ್ ಯಾತ್ರಿಗಳ ಮೇಲೆ ದಾಳಿಕೋರ ಹದಿನೆಂಟು ತಿಂಗಳಿನಿಂದ ತಲೆಮರೆಸಿಕೊಳ್ಳಲು ಸಾದ್ಯವಾಗಿದ್ದು. ಹಾಗೆ ನೋಡಿದರೆ ಈ ಕೆಲಸಕ್ಕೆ ಮೂಲ ಕೈ ಹಾಕಿದ್ದವನು ದುಜಾನೆ ಮತ್ತು ಅದಕ್ಕೂ ಮೊದಲು ಅಬ್ಜರ್‍ಭಟ್. ಎಲ್ಲರ ಉದ್ದೇಶ ಒಂದೇ ಆಗಿತ್ತು ಜಗತ್ತು ಬೆಚ್ಚಿ ಬೀಳುವಂತಹ ದಾಳಿಯನ್ನು ನಡೆಸಬೇಕೆನ್ನುವುದು. ಆದರೆ ಅದಾಗುವ ಮೊದಲೇ ಭಟ್‍ನನ್ನು ಹತ್ಯೆ ಮಾಡಿದ ಸೈನಿಕರಿಗೆ ಇಂತಹ  ಬಕರಾಗಳನ್ನು ಬಲೆಗೆ ಬೀಳಿಸುವ ಕಲೆ ಕರಗತವಾಗಿ ಹೋಗಿತ್ತು ಹಾಗಾಗಿ ಅಬು ದುಜಾನ್ ಎಂಬ ಪಾತಕಿ ಕಳ್ಳನಂತೆ ತಲೆ ಮರೆಸಿಕೊಳ್ಳುತ್ತಿದ್ದವನು ಸಿಗೇ ಬಿದ್ದು ಹೆಣವಾಗಿ ಹೋದ. 
ಅದಕೂ ಮೊದಲು ಸಿಕ್ಕಿಬಿದ್ದ ಅಬ್ಜಾರ್ ಭಟ್ ಕೂಡಾ ಹೀಗೆ ಹೇಯ ದಾಳಿ ಮಾಡುವ ಸಂಚು ರೂಪಿಸಿದ್ದವನೆ. ಆದರೆ ಕೈಗೆ ಸಿಗದೆ ತಪ್ಪಿಸಿಕೊಳುತ್ತಿದ್ದುದು ಕಣಿವೆಯಲ್ಲಿ ದೇಶದ್ರೋಹಿಗಳಾಗಿ ಇಲ್ಲಿನ ನೆಲ ಜಲದ ಉಪಕಾರಕ್ಕೆ ಬಿದ್ದೂ ಅವರಿಗೆ ಅನ್ನ,ನೀರು,ನೆರಳು ನೀಡುತ್ತಿದ್ದುರಿಂದ. ಒಂದು ಗೊತ್ತಿರಲಿ ಕಾಶ್ಮೀರ ಕಣಿವೆಯಲ್ಲಿ ಯಾವೊಬ್ಬನೂ ಹೀಗೆ ನಮ್ಮ ಕಡೆಗಳಲ್ಲಿ ತೋಟದ ನೆರಳಲ್ಲೋ, ದೇವಸ್ಥನಾದ ಜಗುಲಿಯ ಮೇಲೋ ಮಲಗಿ ದಿನಗಳನ್ನು ತೆಗೆದಂತೆ ತಲೆ ತಪ್ಪಿಸಿಕೊಂಡು ದಿನ ದೂಡಲು ಸಾಧ್ಯವೇ ಇಲ್ಲ. ಅವನಿಗಾಗಿ ಯಾವನಾದರೂ ದೇಶದ್ರೋಹಿ ಕಾಶ್ಮೀರಿ ಬಾಗಿಲು ತೆರೆದಿಟ್ಟು ಕಾವಲುಕಾಯ್ದು ಅನ್ನ ರೊಟ್ಟಿ ಕೊಟ್ಟು ಸಾಕಲೇಬೇಕು. ಅಂದಾಗ ಮಾತ್ರವೇ ಆತ ವರ್ಷಾನುಗಟ್ಟಲೇ ಬದುಕಲು ಸಾಧ್ಯ. ಇಲ್ಲವಾದರೆ ವಾತಾವರಣ ವೈಪರಿತ್ಯ ಮತ್ತು ಸೈನ್ಯ, ಸಿ.ಆರ್.ಪಿ.ಎಫ್. ಪಡೆಗಳು ಇಂಚಿಂಚನ್ನು ಆವರಿಸಿಕೊಂಡಿರುವ ಪರಿಗೆ ಒಂದೇ ವಾರದಲ್ಲೇ ಹೆಣವಾಗುವುದು ನಿಶ್ಚಿತ. ಹಾಗಾಗೇ ಪೆÇೀಲಿಸು ಮತ್ತು ಸ್ಥಳೀಯ ಖಬರಿಗಳು ಇತ್ತಿಚೆಗೆ ಸರಿಯಾದ ಸಂಪರ್ಕವನ್ನು ಹೊಂದಿದ್ದು ನಿರಂತರ ಹೆಣಗಳು ಬೀಳುತ್ತಿವೆ. 
ಮೊನ್ನೆ ನೌಗಾಂ ಪ್ರದೇಶದಲ್ಲಿ ಕೇವಲ ಹತ್ತೇ ನಿಮಿಷದಲ್ಲಿ ನೆಲಕ್ಕುರುಳಿದ ಪಾತಕಿ ಇಸ್ಮಾಯಿಲ್ ಯಾವ ಲೆಕ್ಕದಲ್ಲೂ ದೊಡ್ಡ ಕ್ರಿಮಿಯೇನಲ್ಲ. ಆದರೆ ಯಾವಾಗ ಅಭ್ಜಾರ್ ಭಟ್ ಮತ್ತು ದುಜಾನೆ ಹತರಾಗಿ ಹೋದರೋ ಇವನ ಮಹತ್ವಾಕಾಂಕ್ಷೆ ಎದ್ದು ಕೂತಿತ್ತು. ಸಧ್ಯಕ್ಕೆ ಗಡಿದಾಟಿ ಬಂದಿರುವ ದೊಡ್ಡ ಮಟ್ಟದ ಪಾತಕ ಎಸಗಬಲ್ಲ ಕಮಾಂಡರ್‍ಗಳು ಯಾರೂ ಇಲ್ಲ. ಮಾಡಬೇಕಾದ ಇಬ್ಬರೂ ಯಾವ ದಾಳಿಯನ್ನೂ ಸರಿಯಾಗಿ ಮಾಡಿಲ್ಲ ತಾನು ಏನಾದರೂ ಮಾಡಿ ಒಂದು ದಾಳಿ ಅಂತಾ ಮಾಡಿದರೆ ತತಕ್ಷಣಕ್ಕೆ ಕಮಾಂಡರ್ ಪದವಿ ದಕ್ಕುತ್ತದೆ. ಅಲ್ಲದೆ ಹಾಗೇನಾದರೂ ಮಾಡಿದರೇನೆ, ಕಣಿವೆಯಲ್ಲಿ ಇನ್ನಷ್ಟು ದಿನ ಊಟ,ವಸತಿಯ ಜೊತೆಗೆ ದೇಶದ್ರೋಹಿ ಕಾಶ್ಮೀರಿಗಳು ರಾಜಾಶ್ರಯವನ್ನೇ ಕೊಡುತ್ತಾರೆ. ಹೀಗೆ ಅನಿವಾರ್ಯ ಮತ್ತು ಅರ್ಜೆಂಟಿಗೆ ಬಿದ್ದ ಕ್ರಿಮಿ ಅಬುಇಸ್ಮಾಯಿಲ್ ಅಮರನಾಥ್ ಯಾತ್ರಿಗಳ ಮೇಲೆ ದಾಳಿ ಮಾಡಿದ. ಅದು ದೊಡ್ಡ ವಿಷಯವೂ ಆಗಿರಲಿಲ್ಲ. ನೂರಾರು ಕಿ.ಮೀ. ಉದ್ದಾನು ದಾರಿಯಲ್ಲಿ ತೀರ ಯಾವದಾದರೂ ಗುಡ್ಡದ ಮರೆಯಿಂದ ಕಿ.ಮೀ.ದೂರದಿಂದಲೇ ಗುಂಡಿನ ದಾಳಿ ನಡೆಸಿ ಕೆಡುವಬಹುದಿತ್ತು. ಆದರೆ ಹಾಗಾದಲ್ಲಿ ಆ ಕೂಡಲೇ ತಮ್ಮನ್ನು ಸುತ್ತುವರೆಯುವ ಸೈನಿಕರು ಅಲ್ಲೆ ಹೊಡೆದು ಕೆಡುವುತ್ತಾರೆ ಎಂದು ಗೊತ್ತಿದ್ದುದರಿಂದ ಇಸ್ಮಾಯಿಲ್ ಊರ ಮಧ್ಯದಲ್ಲಿ ದಾಳಿಗೆಂದು ಅಮಾಯಕವಾಗಿ ಸಿಕ್ಕ ಬಸ್ ಮೇಲೆ ಎರಗಿದ್ದ. ಅದೂ ಕೂಡಾ ತುಂಬಾ ಪ್ರಿಪ್ಲಾನ್ ಏನಲ್ಲ. ಆ ಹೊತ್ತಿಗಾಗಲೇ ಅಬು ಪಾಂಪೆÇರ್ ಏರಿಯಾದಲ್ಲೇ ತಲೆಮರಸಿಕೊಂಡಿದ್ದ. 
ಆಕಸ್ಮಿಕವಾಗಿ ಬಸ್ ನಿಧಾನಕ್ಕೆ ಏಕಾಂಗಿಯಾಗಿ ಚಲಿಸುತ್ತಾ ಹೊರಟಿದ ಎನ್ನುವ ಸುದ್ದಿ ಸಿಕ್ಕು ತತಕ್ಷಣಕ್ಕೆ ಅದರ ಮೇಲೆ ಎರಗಿ ರುಬಾಬು ತೋರಿಸಲು ಪ್ರಯತ್ನಿಸಿದ್ದ. ಆದರೆ ಹಾಗೆ ಮಾಡುವ ಮೂಲಕ ಆ ಏರಿಯಾದಿಂದ ಹೊರಬೀಳುವ ತನ್ನ ಬಾಗಿಲು ತಾನೆ ಹಾಕಿಕೊಂಡಿದ್ದ. ಸೈನಿಕರಿಗೆ ಇಂಥದ್ದನ್ನೆಲ್ಲ ಬೆಂಬತ್ತುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಸ್ಥಳೀಯ ಬಾತ್ಮಿದಾರರ ಮೂಲಕ ಅತನನ್ನು ಹಿಂಬಾಲಿಸುತ್ತಲೆ ಮೊನ್ನೆ ಪಕ್ಕಾ ಟಿಪ್ಸು ಸಿಗುತ್ತಿದ್ದಂತೆ ಎರಗಿದ್ದಾರೆ. ಅಷ್ಟೆ ಹತ್ತೇ ನಿಮಿಷದಲ್ಲಿ ಹೆಣವಾಗಿದ್ದಾನೆ ಸಂಗಡಿಗನೊಂದಿಗೆ. ಇದಕ್ಕೆ ಸರಿಯಾಗಿ ಇಂಥಾ ದೇಶದ್ರೋಹಿಗಳೂ ಮತ್ತು ಪಾತಕಿಗಳನ್ನು ಒಮ್ಮೆ ಗಡಿದಾಟಿಸಿ ಕೈ ತೊಳೆದುಕೊಳ್ಳುವ ಪಾಕಿಸ್ತಾನ ನಂತರ ಯಾವ ಕಾರಣಕ್ಕೂ ಅವರನ್ನು, ಆಚೆಗೆ ಅಂದರೆ ವಾಪಸ್ಸು ತನ್ನ ನೆಲಕ್ಕೆ ಬಿಟ್ಟು ಕೊಳ್ಳುವುದೇ ಇಲ್ಲ. ಇದೆಲ್ಲಾ ಗೊತ್ತಿದ್ದೂ ಧರ್ಮದ ಅತಿರೇಕಕ್ಕೆ ಬೀಳುವ ಕ್ರಿಮಿಗಳು ಬರುತ್ತಿದಂತೆ ದೊಡ್ಡ ಸುದ್ದಿಯಾಗುವ ಹೊಡೆತಕ್ಕೆ ಕೈ ಹಾಕಿ ಸತ್ತು ಸುದ್ದಿಯಾಗುವುದೇ ಆಗುತ್ತಿದೆ. ಅತ್ತ ಕಡೆಯಿಮ್ದ ಇವನಾರು ನಮಗೇ ಗೊತ್ತೇ ಇಲ್ಲ ಎನ್ನುವ ಪಾಪಿಸ್ತಾನ ಎಂದಿನಂತೆ ಹೀಗೆ ಸರಹದ್ದು ದಾಟಿ ಬರುವ ಪಾತಕಿಗಳ ಹತ್ಯೆಯಾಗುತ್ತಿದ್ದಂತೆ ಅತ್ತಲಿಂದ ಹೊಸ ತಂಡವನ್ನು ಕಳಿಸುವ ವ್ಯವಸ್ಥೆ ಮಾಡುತ್ತದೆ. 
ಇದೆಲ್ಲ ಒತ್ತಟ್ಟಿಗಿರಲಿ. ಆದರೆ ಇಲ್ಲೇ ನಮ್ಮದೇ ದೇಶದ ನಮ್ಮದೇ ಬೇರೆ ರಾಜ್ಯದ ಜನ ಸಾಮಾನ್ಯರ ತೆರಿಗೆ ಹಣದ ಮೇಲೆ ಜೀವನ ಮಾಡುತ್ತಿರುವ ಹರಾಮಿ ಕಾಶ್ಮೀರಿ ದೇಶದ್ರೋಹಿಗಳು ಅದ್ಯಾವುದೋ ನಂಬಿಕೆ ಮತ್ತು ನಿಟ್ಟಿನಲ್ಲಿ ದಾರಿಹೋಕ ದನಗಳಂತೆ ಬರುವ ಉಗ್ರರಿಗೆ ತಂತಮ್ಮ ಮನೆ ಮಠಗಳಲ್ಲಿ ನೀರು ನೆರಳೂ ಕೊಟ್ಟು ಸಾಕುತ್ತಿದ್ದಾರಲ್ಲ ಅಷ್ಟೆಲ್ಲಾ ಮಾಡಿಯೂ ಇವರಿಗೆ ಪಾಕಿಸ್ತಾನ ಯಾವತ್ತಾದರೂ ಬಾಗಿಲು ತೆರೆದು ಸ್ವಾಗತಿಸುತ್ತದೆ ಎನ್ನುವ ಯಾವ ಭರವಸೆ ಮೇಲೆ ಇಂಥಾ ದೇಶದ್ರೋಹಕ್ಕಿಳಿದಿದ್ದಾರೆ. ಅತ್ತ ನೋಡಿದರೆ ಅವರ್ಯಾವತ್ತೂ ಇಂಥಾ ದ್ರೋಹಿಗಳನ್ನು ಅಸಲಿಗೆ ಮುಸ್ಲಿಂರು ಎಂದೇ ಒಪ್ಪಲು ತಯಾರಿಲ್ಲ. ಇದೆಲ್ಲಾ ಗೊತ್ತಿದ್ದೂ ಇಲ್ಲದ ಧರ್ಮದ ತೆವಲಿಗಿಳಿದಿರುವ ಕ್ರಿಮಿಗಳು ಫಾಲಿಡಾಲ್ ಹೊಡೆಸಿಕೊಂಡ ಹುಳುಗಳಂತೆ ಬಿದ್ದು ಸಾಯುತ್ತಿದ್ದಾರೆ. ಕಣಿವೆ ಕ್ರಮೇಣ ಶುದ್ಧವಾಗುತ್ತಿದೆ. ಅಷ್ಟಕ್ಕೂ ಸರಹದ್ದು ನುಸುಳುವುದು ಯಾವತ್ತೋ ಕಡಿಮೆಯಾಗಿದೆ. ಕಾರಣ ಒಬ್ಬೇಒಬ್ಬ ನುಸುಳುಕೋರನೂ ಇವತ್ತಿಗೂ ಕತೆ ಹೇಳಲೂ ಜೀವಂತವಾಗಿಲ್ಲ. ಆ ಮಟ್ಟಿಗೆ ನಮ್ಮ ಸೈನಿಕರು ಸ್ವಚ್ಛತಾ ಕಾರ್ಯ ಕೈಗೊಳುತ್ತಿದ್ದರೆ ನಮ್ಮಲ್ಲಿ ಮಾತ್ರ ಕಾಶ್ಮೀರ ಗಲಾಟೆಯನ್ನು ವಿಭಿನ್ನ ನಿಲುವಿನಲ್ಲಿ ನೋಡಬೇಕಾದ ಅಗತ್ಯವಿದೆ ಎನ್ನುವ ಪ್ರಗತಿಪರರು ಯಾರ ಋಣಕ್ಕೆ ಬಿದ್ದಿದಾರೆ..? 


Sunday, September 17, 2017

ಕಾಶ್ಮೀರವೆಂಬ ಖಾಲಿ ಕಣಿವೆ..ಕವಲುದಾರಿಗೆ ತಳ್ಳಿದ 370 ಕಲಂ.

(ಇಲ್ಲಿ ಸಿಬಿಐ ತನಿಖೆ ನಡೆಸುವಂತಿಲ್ಲ, ಜನ ಪ್ರತಿನಿಧಿ ಕಾಯ್ದೆ ಗೊತ್ತೆ ಇಲ್ಲ. ಅಕಸ್ಮಾತ ಕಾಶ್ಮೀರಿ ಹೆಣ್ಣು ಹೊರ ರಾಜ್ಯದ ಪುರುಷನನ್ನು ಮದುವೆಯಾದರೆ ಆಕೆ ಪೂರ್ತಿಯಾಗೇ ಕಾಶ್ಮೀರದ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಭಾರತೀಯ ದಂಡ ಸಂಹಿತೆ(ಇಂಡಿಯನ್ ಪಿನಲ್ ಕೋಡ್)ನ್ನು ಹೇಳಿಕೊಂಡು ಅವಹೇಳನ ಮಾಡಿ ನಗುವ ಕಾಶ್ಮೀರಿಗಳಿಗೆ ಕಾಯಿದೆಯ ಮಹತ್ವ ಮತ್ತು ಅದರ ವ್ಯಾಪ್ತಿ ಎರಡೂ ಗೊತ್ತಿಲ್ಲ. ಆದರೂ ನಾಚಿಕೆ ಬಿಟ್ಟು ನಾಯಿಬಾಳು ಮಾಡುತ್ತಿರುವ ಕಾಶ್ಮೀರಿ ಸರಕಾರ, ಇತರೆ ರಾಜ್ಯದ ಜನತೆ ಕಟ್ಟುವ ತೆರಿಗೆಯಲ್ಲಿ ತನ್ನ ಪಾಲು ಪಡೆದು ಅಧಿಕಾರ ನಡೆಸುತ್ತಿದೆ. ಸ್ವಂತಕ್ಕೆ ನಯ್ಯ ಪೈಸೆ ಉತ್ಪನ್ನ ಈ ರಾಜ್ಯದ ಬೊಕ್ಕಸಕ್ಕಿಲ್ಲ ಎಂದರೆ ನಿಮಗೆ ಅಚ್ಚರಿಯಾದೀತು. ಇದಕ್ಕಿಂತ ಹೇಯ ಬೇಕಾ. ಒಂದು ನೈಯಾ ಪೈಸೆ ತೆರಿಗೆ ಕಟ್ಟದೆ ದೇಶಾದ್ಯಂತದ ಜನರಿಂದ ಪಡೆದ ತೆರಿಗೆಯಲ್ಲಿ ಭಿಕ್ಷೆ ಪಡೆದು ಬದುಕುವ ಬದುಕೂ ಒಂದು ಬದುಕಾ..?)

ತೀರ ಕಾಶ್ಮೀರ ಪಂಡಿತರಿಗೆ ಮರುವಸತಿಗೆ ಸ್ಥಾನ ಇಲ್ಲದ ತಾಯ್ನಾಡಿನಲ್ಲಿ ಕಾಲೂರಬೇಕೆಂಬ ತಹತಹಕ್ಕೆ ಮಣ್ಣೆರಚಿದ್ದು ಯಾವ ದೇಶದಲ್ಲೂ ಇಲ್ಲದ ಕಾನೂನನ್ನು ಆಗಿನ ಓಲೈಕೆಯ ಭಾರತ ಸರಕಾರ ಅಂಗೀಕರಿಸಿದ್ದು. ಅದೂ ಆಗಿನ ತುಷ್ಠೀಕರಣದ ರಾಜಕಾರಣದ ಪ್ರಭಾವಕ್ಕೆ ಸಿಲುಕಿ. ಯಾವ ಹಿಂದೂಗಳನ್ನು ಓಲೈಸಿ ಅಥವಾ ಅವರ ಬೆಂಬಲದಿಂದ ಅಖಂಡ ಹಿಂದೂಸ್ಥಾನವನ್ನೇ ಆಳಬಹುದಿತ್ತೋ ಆ ಅವಕಾಶವನ್ನು ದೊಡ್ಡತನ ತೋರಿಸಿಕೊಳ್ಳುವ ಸಲುವಾಗಿ ಕೈಚೆಲ್ಲಿದ ಆಗಿನ ನಾಯಕರು ಕಾಶ್ಮೀರ ಕಣಿವೆಗೆ ವಿಶೇಷ ಕಾನೂನೊಂದನ್ನು ಅಂಗೀಕರಿಸಿಬಿಟ್ಟರು. ಸ್ವತ: ಸಂವಿಧಾನ ಕರ್ತೃಗಳೇ ಇಂತಹ ಕಾನೂನಿನ ವಿರುದ್ಧ ನಿಂತು ಅದನ್ನು ತಪ್ಪಿಸಲು ಯತ್ನಿಸಿದರಾದರೂ ಆಗದ ಕಾನೂನು ಪರಿಚ್ಛೇದ 370 ಎಂಬ ಹೆಸರಿನಲ್ಲಿ ಭಾರತದ ಭುಜವೇರಿ ಕೂತುಬಿಟ್ಟಿತ್ತು.
ಇತಿಹಾಸದಲ್ಲಿ 1947 ರ ರಾಜಸಂಸ್ಥಾನಗಳನ್ನು ವೀಲಿನಗೊಳಿಸುವ ಪ್ರಕ್ರಿಯೆಯಲ್ಲಿ ಪಟೇಲರು ಪೂರ್ತಿ ಹಿಂದುಸ್ಥಾನವನ್ನೇ ಒಂದು ಗೂಡಿಸುವ ಕಾರ್ಯದಲ್ಲಿದ್ದಾಗ ಕಾಶ್ಮೀರದ ವಿಷಯಕ್ಕೆ ಮಾತ್ರ ತಾವೆ ಬಗೆಹರಿಸುವುದಾಗಿ ಆಗಿನ ಪ್ರಧಾನಿ ಎದ್ದು ಕೂತುಬಿಟ್ಟರು. ಅಲ್ಲಿ ಮಹಾರಾಜ ಹರಿಸಿಂಗ್‍ರ ಆಳ್ವಿಕೆಯನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದ ಶೇಕ್ ಅಬ್ದುಲ್ಲಾ ಮೌಂಟ್‍ಬ್ಯಾಟನ್ ಮೂಲಕ ನೆಹರು ಮೇಲೆ ಒತ್ತಡ ತಂದಿಟ್ಟುಬಿಟ್ಟ. ಆಗ ರಾಜದ್ರೋಹದ ಅಪಾದನೆಯ ಮೇರೆಗೆ ಹರಿಸಿಂಘ್ ಈ ಅಬ್ಧುಲ್ಲಾನನ್ನು ಬಂಧಿಸಿ ಸೆರೆಯಲ್ಲಿಟ್ಟರು. ಮುಸ್ಲಿಂ ಓಲೈಕೆಗಿಳಿದಿದ್ದ ನಾಯಕರು ಇತ್ತ ಹರಿಸಿಂಘ್ ಮತ್ತು ಅತ್ತ ಅಬ್ದುಲ್ಲ ಇಬ್ಬರನ್ನೂ ಬಿಡಲಾಗದೆ ಬ್ಯಾಟನ್‍ನ ಒತ್ತಡಕ್ಕೊಳಗಾಗಿ ಸಮಸ್ಯೆಯನ್ನು ವಿಶ್ವಸಂಸ್ಥೆಯೆದುರಿಗೆ ಇಟ್ಟು ಕೈಮುಗಿದು ನಿಂತರು. ಒಳಗೊಳಗೆ ಅಬ್ದುಲ್ಲ ತನ್ನನ್ನು ಸ್ವತಂತ್ರ ಕಾಶ್ಮೀರದ ಪ್ರಧಾನಿಯನ್ನಾಗಿಸದಿದ್ದರೆ ಸಂಪೂರ್ಣ ಮುಸ್ಲಿಂ ಸಮುದಾಯ ಅವರ ವಿರುದ್ಧ ತಿರುಗಿ ಬೀಳಲಿದೆ ಎಂದೇ ನಂಬಿಸಿಬಿಟ್ಟ. ಅತ್ತ ಪಾಕಿಸ್ತಾನ ಕಾಶ್ಮೀರದ ಹಲವು ಭಾಗವನ್ನು ಆಕ್ರಮಿಸಿಕೊಂಡು ಬೇರೆ ಕೂತಿತಲ್ಲ. ಅದಕ್ಕಾಗಿ ತಾನು ಭಾರತದೊಳಗೇ ಇದ್ದರೂ ತನಗೆ ವಿಶೇಷ ಕಾನೂನಿನ ಸೌಲಭ್ಯ ಒದಗಿಸಕೊಡಲೇಬೇಕೆಂದು ಒತ್ತಾಯದ ಮೂಲಕ ಆಗಿನ ನಾಯಕರನ್ನು ನಯವಾಗಿ ನಂಬಿಸಿದ. 
ಅದೆಲ್ಲದರ ಪರಿಣಾಮ ಸಂವಿಧಾನದ 21 ನೇ ಪರಿಚ್ಛೆದದ ಪ್ರಕಾರ ಅದನ್ನೊಂದು ಕಾನೂನು ಎಂದೇ ಪರಿಗಣಿಸಬೇಕೆ ಹೊರತಾಗಿ ಶಾಶ್ವತವಾದ ಅಧಿಕಾರ ಅಲ್ಲ ಎಂದು ದಾಖಲಿಸಲಾಯಿತು. ಸ್ವತ: ತನ್ನನ್ನು ಪ್ರಧಾನಿ ಎಂದಲ್ಲದೆ ಅಲ್ಲಿನ ರಾಜ್ಯಪಾಲರನ್ನು ಸದರ್-ಇ-ರಿಯಾಸತ್ ಎಂದೇ ಕರೆಯುವ ಪರಿಪಾಠ 1965 ರವರೆಗೂ ಮುಂದುವರೆದಿತ್ತು. ಹೀಗಾಗಿ ಅದರ ಸಲುವಾಗಿ ಆರು ವಿಷೇಶ ಉಪಕ್ರಮಗಳನ್ನು ಸೇರಿಸಲಾಯಿತು. ಅದರ ಪ್ರಕಾರ
ಅದು ಗಣರಾಜ್ಯದ ಭಾಗವಾದರೂ ಪ್ರತ್ಯೇಕ ಸಂವಿಧಾನ ಹೊಂದಬಹುದು.
ರಕ್ಷಣೆ ಹಣಕಾಸು, ವಿದೇಶ ವ್ಯವಹಾರ ಮತ್ತು ಸಂಪರ್ಕ ಮಾತ್ರ ಕೇಂದ್ರದ ಕೈಯ್ಯಲ್ಲಿರುತ್ತದೆ.
ಭಾರತದ ಸಂವಿಧಾನದ ಕಾಯಿದೆ ಲಾಗೂ ಮಾಡಲು ಅಲ್ಲಿನ ವಿಧಾನಸಭೆಯ ಅನುಮತಿಬೇಕು.
ವೀಲಿನ ಪ್ರಕ್ರಿಯೆಗೆ ಅಲ್ಲಿನ ಸರಕಾರ ಮುಂದಾದರೆ ಅದಕ್ಕಾಗಿ ಅಲ್ಲಿನ ಸಂವಿಧಾನವನ್ನೆ ಪರಿಷ್ಕರಿಸಬೇಕು ಅದಕ್ಕೆ ವಿಧಾನಸಭೆ ಅನುಮತಿಸಬೇಕು.
ಅಷ್ಟಾದರೂ ಅದು ಮಧ್ಯಂತರ ಅಧಿಕಾರವಾಗುತ್ತದೆ.
ರಾಷ್ಟ್ರಪತಿಗಳೇ ಇದಕ್ಕೆ ಮುಂದಾದರೆ ಅದಕ್ಕೂ ವಿಧಾನಸಭೆಯ ಅನುಮತಿ ಅಗತ್ಯ. ಇತ್ಯಾದಿ ಕಠಿಣ ಕಾಯಿದೆಗಳ ಮಧ್ಯೆ 1956 ರಲ್ಲಿ ಅಲ್ಲಿನ ಶಾಸನ ಸಭೆ ಅದು ಭಾರತದ ಅವಿಭಾಜ್ಯ ಅಂಗವೆಂದು ಒಪ್ಪಿ ಅನುಮೋದನೆಯನ್ನು ಅಧಿಸೂಚನೆಗೊಳಿಸಿದಾಗಲೇ 370 ಬಿದ್ದು ಹೋಗಿತ್ತು. ಆದರೆ ಭಾರತದ ಲೋಕಸಭೆ ತುಷ್ಠೀಕರಣದ ರಾಜಕೀಯ ಮಾಡಿ ಅದನ್ನು ತಾನೇ ತಿರಸ್ಕರಿಸಿಬಿಟ್ಟಿತು. 
ಇನ್ನೂ ಮುದುವರೆದ ಅದರ ಕಾನೂನಿನ ಅಸಂಬಧ್ಧತೆಗಳು ನೋಡಿ. ಭಾರತದ ಸಂವಿಧಾನ 19(1)(ಇ) ಮತ್ತು (ಜಿ) ಮಾನ್ಯ ಮಾಡಿರುವ ಹಕ್ಕನ್ನೆ, ಕಾಯಿದೆ 370 ಗಾಳಿಗೆ ತೂರುತ್ತದೆ. ಇದರ ಪ್ರಕಾರ ಭಾರತದ ಯಾವುದೇ ಪ್ರಜೆ ಎಲ್ಲಿ ಬೇಕಾದರೂ ತನಗೆ ಸರಿ ಹೊಂದುವ ವೃತ್ತಿ, ಉದ್ಯೋಗ ನೆಲೆಸುವ ಇತ್ಯಾದಿ ಹಕ್ಕನ್ನು ಹೊಂದಿದ್ದರೆ ಇಲ್ಲಿಗೆ ಮಾತ್ರ ಅದು ಲಾಗೂ ಆಗುವುದೇ ಇಲ್ಲ. ನೀವು ಭಾರತದ ಪ್ರಜೆಯಾಗಿ ಕಾಶ್ಮೀರ ನಾಡಿನಲ್ಲಿ ಇದೆಲ್ಲಾ ಮಾಡುವಂತಿಲ್ಲ. ಸ್ವತ: ಕೇಂದ್ರ ಸರಕಾರ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಅಥ್ವಾ ಇನ್ನಾವುದೇ ರೀತಿಯ ದೇಶಕ್ಕೆ ಒಳಿತಾಗುವ ಕಾರಣ ಯಾವುದೇ ಆದೇಶ ಹೊರಡಿಸಿದರೂ ಅದನ್ನು ಮೊದಲು ಅಲ್ಲಿನ ಸಭೆಯ ಅನುಮತಿ ಪಡೆದು ಜಾರಿಗೊಳಿಸಬೇಕೆ ವಿನ: ಕಾಶ್ಮೀರದಲ್ಲಿ ನೇರ ಜಾರಿ ಸಾಧ್ಯವಿಲ್ಲ. 
ರಾಷ್ಟ್ರಪತಿಯಿಂದಲೇ ನೇಮಕವಾಗುವ ರಾಜ್ಯಪಾಲರು ನಂತರದಲ್ಲಿ ತಮ್ಮದೇ ಅಧಿಕಾರಕ್ಕೆ ಬಂದುಬಿಡುತ್ತಾರೆ. ಅಕಸ್ಮಾತ ಅಗತ್ಯಬಿತ್ತು ಎಂದು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಯತ್ನಿಸಿದರೂ ಅದಕ್ಕೆ ಜಮ್ಮು ಕಾಶ್ಮೀರ ರಾಜ್ಯಪಾಲರೇ ರಾಷ್ಟ್ರಪತಿಗಳಿಗೆ ಅನುಮತಿ ಕೊಡಬೇಕು. ಹೇಗಿದೆ ಉಲ್ಟಾ ಲೆಕ್ಕಾಚಾರ...?ಇಲ್ಲದಿದ್ದರೆ ಯಾವ ಕಾನೂನೂ ಅಲ್ಲಿ ಜಾರಿಗೊಳಿಸಲಾಗುವುದೇ ಇಲ್ಲ. ಕೇಂದ್ರ ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆಯಬಹುದಾಗಿದ್ದರೂ ಸರಕಾರಕ್ಕೆ ಯಾವುದೇ ತೆರಿಗೆಯನ್ನು ಜಮ್ಮು ಕಾಶ್ಮೀರ ಜನತೆ ಪಾವತಿಸಬೇಕಾಗಿಲ್ಲ. ಪಕ್ಷಾಂತರ ವಿರೋಧಿ ಕಾನೂನು, ಆರ್.ಟಿ.ಐ. ಯಾವುದೂ ಇಲ್ಲಿ ಲೆಕ್ಕಕ್ಕಿಲ್ಲ. ಕೇಳಿ ನೋಡಿ. ನಿಮ್ಮ ಏನೇ ಅಹವಾಲು ಪ್ರಶ್ನೆ ಅಥವಾ ಕೇಂದ್ರ ಸರಕಾರದ ಕಾಯಿದೆಯ ಪತ್ರಗಳನ್ನು ನೇರವಾಗಿ ಕಸದ ಬುಟ್ಟಿಗೆಸೆಯುತ್ತಾರೆ. ದೇಶಾದ್ಯಂತ ಬಡಿದಾಡುವ ಮೀಸಲಾತಿಯನ್ನು ಅಲ್ಲಿ ಹೋಗಿ ಕೇಳಿ ನೋಡಿ. ಉಸಿರಿಗೂ ಮೀಸಲಾತಿ ಇಲ್ಲ. ಅಷ್ಟೆ ಅಲ್ಲ ಪರಿಶಿಷ್ಟ ಜಾತಿ, ಪಂಗಡ, ಮಾನವ ಹಕ್ಕು, ಮಹಿಳಾ ಹಕ್ಕು, ಆಯೋಗಳು, ಶಿಕ್ಷಣ ಹಕ್ಕು, ಸಮಾನತೆಯ ಹಕ್ಕು ಉಹೂಂ ಏನೆಂದರೆ ಏನೂ ಇಲ್ಲಿ ನಡೆಯುವುದಿಲ್ಲ. ಎಲ್ಲೆಡೆಗೆ ವಿಧಾನ ಸಭೆ ಐದುವರ್ಷವಿದ್ದರೆ ಅಲ್ಲಿ ಆರು ವರ್ಷದ ವಿಧಾನಸಭೆ ನಡೆಯುತ್ತದೆ. ಸ್ವತ: ಪ್ರತಿಜ್ಞಾ ವಿಧಿ ಓದಿಕೊಳ್ಳುವ ಅಲ್ಲಿನ ನಾಯಕರಿಗೆ, ದುಡ್ಡು ಮಾತ್ರ ಕೇಂದ್ರ ಸರಕಾರದಿಂದ ಪಡೆಯುವದು ಕಾಶ್ಮೀರಿಗಳಿಗೆ ಅಭ್ಯಾಸವಾಗಿ ಹೋಗಿದೆ. ಹೆಂಗಿದೆ ಪುಕಸಟ್ಟೆ ಬದುಕು..? ಮೈತುಂಬ ಸೊಕ್ಕು ಯಾರಿಗೆ ಬರಲಿಕ್ಕಿಲ್ಲ. 
ಉಳಿದೆಲ್ಲಾ ಬಿಟ್ಟು ಕೊನೆಗೆ ಧರ್ಮದ ಅಫೀಮು ಸೇವಿಸುತ್ತಾ ಇರಲು ಇಷ್ಟೆಲ್ಲಾ ಸಾಕಲ್ಲವಾ..? ಪುಗಸಟ್ಟೆ ಬದುಕಿಗೆ ಬೇರೆನು ಮಾಡಲು ಸಾಧ್ಯ...? ಬರುಬರುತ್ತಾ ಪೆÇೀಲಿಸರ ಗುಂಡಿಗೆ ಸಿಕ್ಕಿ ಸಾಯುವುದರ ವಿನ: ಬೇರೆ ಬದುಕೆ ಕಾಣುತ್ತಿಲ್ಲ ಕಲ್ಲೆಸೆಯುವ ದೇಶದ್ರೋಹಿಗಳಾಗುವ ಹೊರತಾಗಿ. ಕಣಿವೆ ಖಾಲಿಯಾಗದೆ ಏನು ಮಾಡಿತು..? 

Sunday, September 10, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ಸಮುದಾಯಕ್ಕೆ ಉರುಳಾದ ಜನಾಂಗೀಯ ಹತ್ಯೆ...


(ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ ಎಂದರೆ ಯಾವುದೇ ಪತ್ರಿಕೆಯೂ, ಒಬ್ಬೇ ಒಬ್ಬ ಸಂಪಾದಕನೂ ಇದನ್ನು ಜನಾಂಗೀಯ ಮಾರಣಹೋಮ, ದಮನ, ಮಾನವಹಕ್ಕಿನ ಉಲ್ಲಂಘನೆ ಎಂಬ ಶಬ್ದವನ್ನು ಬಳಸದೆ ಎರಡು ಸಾಲಿನ ಸುದ್ದಿ ಮಾಡಿ ಕೈತೊಳೆದುಕೊಂಡು ಪಂಡಿತರ ಸಮುದಾಯಕ್ಕೆ ಕೊನೆ ಮೊಳೆದುಬಿಟ್ಟಿದ್ದರು. ಕಡೆಪಕ್ಷ ಅದು ನಿರಾಶ್ರಿತರ ಸಮಸ್ಯೆಯಾಗಿಯೂ ಕಾಡಲಿಲ್ಲ. ವಲಸೆಯ ದುರಂತವಾಗಿಯೂ ಕಾಡಲಿಲ್ಲ. ಬದಲಿಗೆ ಅವರನ್ನೆಲ್ಲಾ ಸಾಮೂಹಿಕವಾಗಿ "ಪ್ರಾದೇಶಿಕ ವಲಸಿಗರು" ಎಂಬ ಪಟ್ಟಿಗೆ ಸೇರಿಸಿ ಆಗಿನ ಸರಕಾರ ಕೈ ತೊಳೆದುಕೊಂಡರೆ ಅವರ ಕೈಗೊಂಬೆಯಂತೆ ಆಡಿದ ಮಾನವ ಹಕ್ಕು ಆಯೋಗ ನೆಪಕ್ಕೊಂದು ವರದಿ ಮತ್ತು ವಿಚಾರಣೆ ನಡೆಸಿ ಕಾಲಾನುಕ್ರಮದಲ್ಲಿ ವಿಷಯವನ್ನೆ ಮರೆ ಮಾಚಿ ತೆಪ್ಪಗಾಗಿಬಿಟ್ಟಿತು)

ಕಾಶ್ಮೀರ ವ್ಯಾಲಿಯಿಂದ 1990 ರ ದಶಕದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾಶ್ಮೀರ ಪಂಡಿತರು ಅಲ್ಲಿನ ಪರ್ವತದ ಸಂದುಗಳನ್ನಿಳಿದು ಭಾರತದ ಇತರ ಭಾಗಳಿಗೆ ತೆರಳಿದರಲ್ಲ ಆವತ್ತಿನಿಂದ ಅಜಮಾಸು ಎಂಟು ಲಕ್ಷ ಜನ ಹಾಗೆ ಎರಡೇ ವರ್ಷದಲ್ಲಿ ಗುಳೆಹೋದರು. ಅನಾಹುತಕಾರಿ ಬಲಾತ್ಕರಕ್ಕೆ ಸಿಕ್ಕಿದ ಹಿಂದೂ ಹೆಂಗಸರ ಲೆಕ್ಕ ಹಾಕುವ ಧೈರ್ಯವನ್ನು ಇವತ್ತಿಗೂ ಯಾವೊಬ್ಬ ಗಂಡಸೂ ಮಾಡಿಲ್ಲ. ಸತ್ತು ಹೋದ, ಕಳೆದು ಹೋದವರ, ನಾಪತ್ತೆಯಾದವರ ಸಂಖ್ಯೆಯ ನಿಖರತೆಯನ್ನು ಬಹಿರಂಗಪಡಿಸುವ ದಮ್ಮು ಆವತ್ತಿನಿಂದ ಇವತ್ತಿನವರೆಗೆ ಯಾವ ಸರಕಾರವೂ ತೋರಿದ್ದೇ ಇಲ್ಲ. ಇವತ್ತಿಗೂ ಆ ರಿಪೆÇೀರ್ಟನ್ನು ಹೊರಹಾಕುವ ಕಾರ್ಯವಾಗಿಲ್ಲ. ನಿಮಗೆ ಗೊತ್ತಿರಲಿ, ಬದುಕಿರುವ ಬಂಧುಗಳು  ತಮ್ಮವರನ್ನು ಹುಡುಕಲು ಸುಮಾರು ನೂರಡಿ ಅಗಲದ ಪೆÇಸ್ಟರ್ ಮೇಲೆ ಸಾವಿರಾರು ಭಾವಚಿತ್ರಗಳನ್ನು ಅಂಟಿಸಿಡುತ್ತಿದ್ದರು ಯಾರಾದರೂ ಬದುಕಿದ್ದೀರಾ ಎಂದು..? ಹೀಗೆ ಇದ್ದಕ್ಕಿದ್ದಂತೆ ಖಾಲಿಯಾದ ಕಣಿವೆಯಲ್ಲಿ ಕಾಲೂರಿ ನಿಂತು ಇಸ್ಲಾಂಗಾಗಿ ಬಡಿದಾಡುತ್ತಿದ್ದ ಹಜಾರಾ ಮುಸ್ಲಿಂ ಜನಾಂಗ(ಈಗಿನ ಶಿಯಾ ಮುಸ್ಲಿಮರು), ಯಾವ ಮುಲಾಜೂ ಇಲ್ಲದೇ ಹಾಗೆ ಬಿಟ್ಟು ಹೋದವರ ಸಂಪೂರ್ಣ ಆಸ್ತಿಯನ್ನು ಆವರಿಸಿಕೊಂಡುಬಿಟ್ಟರು. ಹಾಗೆ ಆಕ್ರಮಿತ ಆಸ್ತಿಯನ್ನು ಆವತ್ತಿಗಿನ ಕಾಶ್ಮೀರಿ ಸರಕಾರ ಅವರ ಅಧಿಕೃತವಾದ ಅಸ್ತಿಯನ್ನಾಗಿ ದಾಖಲೆ ಮಾಡಲು ಏನು ಬೇಕೋ ಅದನ್ನೆಲ್ಲಾ ಮಾಡಿಕೊಟ್ಟು ಸಹಕರಿಸಿತು. ಅಲ್ಲಿಗೆ ಜಾಗತಿಕವಾಗಿ ಅದ್ಭುತವಾದ ಜನಾಂಗ ಎಂಬ ಹೆಸರು ಮಾಡಿದ್ದ ಕಾಶ್ಮೀರ ಪಂಡಿತರ ಸಮೂಹ ಸಾಮೂಹಿಕವಾಗಿ ಒಂದು ಭೂ ಪ್ರದೇಶದಿಂದಲೇ ಅವರ ಆಸ್ತಿತ್ವವನ್ನು ಒರೆಸಿಹಾಕಲಾಗಿತ್ತು.  ಐದು ಸಾವಿರ ವರ್ಷಗಳ ಶ್ರೀಮಂತ ಇತಿಹಾಸವಿದ್ದ ಅಪೂರ್ವ ನಾಗರಿಕತೆಯೊಂದು ಒಂದೇ ವಾರದಲ್ಲಿ ತುಷ್ಟೀಕರಣದ ರಾಜಕೀಯಕ್ಕೆ ಬಲಿಯಾಗಿ ಹೋಗಿತ್ತು. ಆಗಿನ ಮುಖ್ಯ ಮಂತ್ರಿ ಅಬ್ದುಲ್ ಮಾತ್ರ ನಿವಾಸದಿಂದ ಹೊರಗೇ ಬರಲಿಲ್ಲ.
ಆವತ್ತು 1990 ರ ಜನವರಿಯ ನೇರ ಧಮಕಿಯೊಂದಿಗೆ ಅರಂಭವಾದ ಹಿಂಸಾಚಾರದಲ್ಲಿ ಮೊಟ್ಟ ಮೊದಲ ಬಲಿಯಾದದ್ದು "ಟೀಕಾಲಾಲ್ ಟಪ್ಲು" ವಿನದ್ದು. ಅವನ ಹತ್ಯೆಯನ್ನು ಸಮರ್ಥಿಸಿಕೊಂಡೆ ಸುಮರು 300 ಹಿಂದೂಗಳನ್ನು ಬರ್ಬರವಾಗಿ ಒಂದೇ ವಾರದಲ್ಲಿ ಕೊಂದುಹಾಕಲಾಗಿತ್ತು. ಎಲ್ಲಿ ನೋಡಿದರೂ ಹೊರಕ್ಕೆ, ಪರಊರಿಗೆ ತೆರಳಿದ್ದ ಹಿಂದೂಗಳು ಕಾಶ್ಮೀರ ಕಣಿವೆ ವಾಪಸ್ಸಾಗುವ ಸಾಧ್ಯತೆ ಸಂಪೂರ್ಣವಾಗಿ ಇಲ್ಲವೆ ಇಲ್ಲ ಎನ್ನುವಂತಾಗಿಹೋಗಿತ್ತು. ಇದನ್ನೆಲ್ಲಾ ಭರಿಸಿ ನ್ಯಾಯ ಕೊಡಿಸಬಹುದಾಗಿದ್ದ ಶ್ರೀನಗರ ಹೈಕೋರ್ಟು ಕೂಡಾ ತೀವ್ರವಾಗಿ ತತ್ತರಿಸಿದ್ದು ಅವರದ್ದೇ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಎನ್.ಗಂಜು ಅವರ ಹತ್ಯೆಯಿಂದಾಗಿ. ಯಾವಾಗ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರಿಗೇ ರಕ್ಷೆ ಇಲ್ಲ ಎನ್ನುವುದು ಸಾಬೀತಾಯಿತೋ ಪೂರ್ತಿ ಕಣಿವೆ ತಲ್ಲಣಿಸಿತ್ತು. 
 80ರ ವೃದ್ಧ ಸನ್ಯಾಸಿ ಸರ್ವಾನಂದ ಸ್ವಾಮಿಯನ್ನು ಆವತ್ತು ರಾತ್ರಿ ಎತ್ತಿಕೊಂಡು ಹೋಗಿ ಬರ್ಬರವಾಗಿ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಹಾಗೆ ಸಾಯಿಸುವ ಮೊದಲು ಅವರ ಮಗನ ಕಣ್ಣು ಗುಡ್ಡೆಗಳನ್ನು ಅವರೆದುರಿಗೇ ಕಿತ್ತು, ಯಮಯಾತನೆ ನೀಡಿ ಹಿಂಸಿಸಲಾಗಿತ್ತು. ಇದೆಲ್ಲಕ್ಕಿಂತಲೂ ಭೀಕರವಾಗಿ ಕಾಶ್ಮೀರ ಕಣಿವೆಯನ್ನು ತತ್ತರಿಸುವಂತೆ ಮಾಡಿದ್ದು ಸೌರಾ ಮೆಡಿಕಲ್ ಕಾಲೇಜಿನ ನರ್ಸ್ ಒಬ್ಬಳ ಮೇಲೆ ನಡೆದ ಸಾಮೂಹಿಕ ಮಾನಭಂಗ. ಲೆಕ್ಕವಿಲ್ಲದಷ್ಟು ಜನರು ಆಕೆಯ ಮೇಲೆ ನಿರಂತರವಾಗಿ, ನಿರಾತಂಕವಾಗಿ ಅತ್ಯಾಚಾರ ಮಾಡುತ್ತಿದ್ದರೆ ಸರಕಾರ ಕೈಕಟ್ಟಿಕೊಂಡು ಕೂತಿತ್ತು. ಒಬ್ಬೇ ಒಬ್ಬ ಪೆÇೀಲಿಸು ಅತ್ತ ಹಾಯುವ ಸ್ಥಿತಿಯಲ್ಲಿರಲಿಲ್ಲ. ಆವತ್ತು ಆಕೆಯೊಂದಿಗಿದ್ದ ಇನ್ನೊಬ್ಬ ಮಹಿಳೆಯನ್ನು ದಿನಗಟ್ಟಲೇ ಭೋಗಿಸಿದ್ದ ಮತಾಂಧರು ಜೀವಂತವಾಗಿದ್ದಾಗಲೇ ಆಕೆಯನ್ನು ಕಟ್ಟಿಗೆ ಕತ್ತರಿಸುವ ಸಾ ಮಿಲ್ಲಿನ ಬ್ಲೇಡುಗಳಿಗೆ ದೇಹವನ್ನು ಇಂಚಿಂಚಾಗಿ ಒಡ್ಡುತ್ತಾ ಹಿಂಸಿಸಿ ಸಾಯಿಸಿದ್ದರು.
ಅಲ್ಲಿಂದ ದೆಹಲಿ ಮತ್ತಿತರ ಭಾಗಕ್ಕೆ ಬರಿಗೈಯ್ಯಲ್ಲಿ ಬಂದಿದ್ದ ಪಂಡಿತರು ಅಕ್ಷರಶ: ಬೀದಿ ಗುಡಿಸಿ ಬದುಕು ಕಟ್ಟಿಕೊಳ್ಳಲೆತ್ನಿಸಿದ್ದು, ದೆಹಲಿಯ ನಿವಾಸಿಗಳು ಕೊಟ್ಟ ಹಳೆಯಬಟ್ಟೆಗಳಲ್ಲಿ ಮೊದಲೆರಡು ವರ್ಷ ಜೀವ ಹಿಡಿದುಕೊಂಡಿದ್ದರೆಂದರೆ ಅದಿನ್ನೆಂಥಾ ಭೀಕರತೆಗೆ ಅವರನ್ನು ತಳ್ಳಿರಬೇಕು..? ಇಷ್ಟಾದರೂ ಯಾವೊಬ್ಬ ಮುಖ್ಯಸ್ಥನೂ ಇಂಥಾ ಕ್ರೌರ್ಯವನ್ನು, ಇದನ್ನೊಂದು ಜಿನೋಸೈಡ್(ಬರ್ಬರ ಸಾಮೂಹಿಕ ಹತ್ಯಾಕಾಂಡ, ಜನಾಂಗವೊಂದರ ನಾಮಾವಶೇಷಕ್ಕಾಗಿ ನಡೆಸುವ ಕಗ್ಗೊಲೆ)ಎಂದು ಒಪ್ಪಿಕೊಳ್ಳಲೇಇಲ್ಲ. ಹಾಗೆ ಮಾಡಿದಲ್ಲಿ ತಾವಾಗಿಯೇ ಸಾಮೂಹಿಕ ಹತ್ಯಾಕಾಂಡ ಎಂದು ಜಾಗತಿಕವಾಗಿ ಒಪ್ಪಿಕೊಂಡಂತಾಗುತ್ತದೆ ಎಂದು ಸರಕಾರ ಅವರಿಗೆಲ್ಲಾ ತಾತ್ಪೂರ್ತಿಕ ತಗಡಿನ ಶೆಡ್ಡುಗಳನ್ನು ಒದಗಿಸಿ ಮುಗುಮ್ಮಾಗಿ ಬಿಟ್ಟಿತ್ತು. 
ಅಲ್ಲಿಂದ ಚೇತರಿಸಿಕೊಂಡು ಪಂಡಿತರು ತಿರುಗಿ ತಮ್ಮ ಆಸ್ತಿತ್ವವನ್ನು ಕಾಯ್ದುಕೊಳ್ಳಲು ಎದ್ದು ನಿಲ್ಲುವ ಹೊತ್ತಿಗೆ ದಶಕಗಳೇ ಕಳೆದುಹೋಗಿದ್ದವು. 2008-09 ರ ಸುಮಾರಿಗೆ ಎಲ್ಲೆಲ್ಲೊ ಚದುರಿದ್ದ ಪಂಡಿತರು ಸೇರಿ ರಚಿಸಿದ "ಕಾಶ್ಮೀರ ಪಂಡಿತ್ ಸಂಘರ್ಷ ಸಮಿತಿ" ಮಾಹಿತಿ ಹೊರಗೆಡುವ ಹೊತ್ತಿಗೆ ಸುಮಾರು ಶೇ.80 ರಷ್ಟು ಪಂಡಿತರು ಶಾಶ್ವತವಾಗಿ ಕಣ್ಮರೆಯಾಗಿ ಹೋಗಿದ್ದರು. ನಂತರದ ದಿನಗಳಲ್ಲಿ ಸರಕಾರ ಪಂಡಿತರಿಗೆ ಎಲ್ಲಾ ಸವಲತ್ತು ಮತ್ತು ರಕ್ಷಣೆ ಕೊಡುವುದಾಗಿ ಹೇಳುತ್ತಾ ಪ್ಯಾಕೇಜ್ ಘೋಷಿಸಿದರೂ ಸ್ಥಳೀಯವಾಗಿ ಬದ್ಧತೆಯುಳ್ಳ ಸರಕಾರದ ಭರವಸೆಯೇ ಇಲ್ಲದ್ದರಿಂದ ಇಲ್ಲಿಯವರೆಗೆ ಕಣಿವೆಗೆ ಮರಳಿದ್ದು ಕೇವಲ ಒಂದು ಕುಟುಂಬ. ಒಬ್ಬೇ ಒಬ್ಬ ಪಂಡಿತ ಇವತ್ತು ಕಣಿವೆಗೆ ಮರಳಿ ಕಾಲೂರಿ ನಿಂತು ಬಡಿದಾಡುತ್ತಿದ್ದಾನೆ. ಹಿಂದಿರುಗಿ ತಮ್ಮ ಆಸ್ತಿ ಮಾರಾಟ ಮಾಡಿ, ಆಸ್ತಿ ಖರೀದಿಸಿ ನೆಲೆಸೊಣ ಎಂದರೆ ತೀರ ಐತಿಹಾಸಿಕ ಕಾನೂನೊಂದನ್ನು ರಚಿಸಿ ಕಾಶ್ಮೀರವನ್ನು ಅದ್ಯಾವ ಪರಿಯಲ್ಲಿ ಹಾಳುಗೆಡವಿದ್ದಾರೆಂದರೆ ಸೆಕ್ಷನ್ 370 ಎಂಬ  ಕಾನೂನು ಸ್ವತ: ಕಾಶ್ಮೀರಿಗಳಿಗೆ ಮುಳುವಾಗಿ ಹೋಗಿತ್ತು. ಈಗ ತಮ್ಮದೆ ನೆಲದ ತಮ್ಮದೇ ಆಸ್ತಿಯನ್ನು ಖರೀದಿಸುವಂತಿಲ್ಲ ಮಾರುವಂತಿಲ್ಲ. ಯಾವುದೇ ವ್ಯಾಪಾರ,ವ್ಯವಹಾರಕ್ಕೂ ಕೈಹಾಕುವಂತಿಲ್ಲ. ಕಾರಣ ಇದೇ ಪಂಡಿತ ಈಗ ಹೊರಗಿನವ. ಹೊರಗಿನವರಾರು ಇದನ್ನೆಲ್ಲಾ ಮಾಡುವಂತಿಲ್ಲ. ಮುಗಿದು ಹೋಯಿತಲ್ಲ. ಅಂತಹ ಕಾನೂನಿನ ಬೆಂಬಲಕ್ಕೆ ಸ್ವತ: ಅಲ್ಲಿನ ಸರಕಾರ ನಿಂತುಬಿಟ್ಟಿತ್ತು. 
ಇತಿಹಾಸದಲ್ಲಿ ಸೇರಿಸಲಾಗಿದ್ದ ಅನುಚ್ಛೇದ 370 ಎನ್ನುವ ಕಾನೂನು ಇಂತಹ ಎಲ್ಲಾ ರೀತಿಯ ಅನಾಹುತಕ್ಕೆ ಕಾರಣವಾಗಿತ್ತು. ಅಂತಹದ್ದೊಂದು ಕಾನೂನನ್ನು ಪುರಸ್ಕರಿಸುವ ಅಗತ್ಯವೇ ಇರಲಿಲ್ಲ. ಆದರೆ ಆಗಿನ ಕಾಲದಲ್ಲಿ ಅತಿಯಾದ ಮುಸ್ಲಿಂ ಓಲೈಕೆ ಮತ್ತು ತುಷ್ಟೀಕರಣದ ರಾಜಕೀಯವಾಡಿದ ಆಗಿನ ಅದಕ್ಷ ನಾಯಕರುಗಳ ಹೊಣೇಗೇಡಿತನದಿಂದ  ಸಂಪೂರ್ಣ ಭಾರತ ಹೆಗಲಿಗೆ ಕೊಳೆಯುವ ಹುಣ್ಣಾಗಿಸಿ ಕಾಶ್ಮೀರವನ್ನು ನೇತು ಹಾಕಿಬಿಟ್ಟಿತ್ತು. 
ಅಷ್ಟಕ್ಕೂ ಪರಿಚ್ಛೇದ 370 ಏನು ಹೇಳುತ್ತೆ..? ಯಾಕೆ ಈ ವಿಶೇಷ ಕಾನೂನು ಕಾಶ್ಮೀರಕ್ಕೆ ಮಾತ್ರ ಲಾಗು ಆಗ್ತಿದೆ ಇತ್ಯಾದಿ ಕತೆಗಳೆಲ್ಲ ಮುಂದಿನ ವಾರಕ್ಕಿರಲಿ. ಅದಕ್ಕೂ ಮೊದಲು ಇದನ್ನು ಬರೆಯುವ ಹೊತ್ತಿಗೆ ಒಂದೇ ವಾರದಲ್ಲಿ ಹತ್ತಕ್ಕೂ ಹೆಚ್ಚು ಉಗ್ರರನ್ನು ನಮ್ಮ ಸೈನಿಕರು ಹೊಡೆದು ಕೆಡುವಿದ್ದಾರೆ. ಕಣಿವೆ ಕ್ರಮೇಣ ಖಾಲಿಯಾಗುತ್ತಿದೆ.

Sunday, September 3, 2017

ಕಾಶ್ಮೀರವೆಂಬ ಖಾಲಿ ಕಣಿವೆ..ಕಣಿವೆ ಪಂಡಿತರ ಮಹಾದುರಂತ...


ಮೊದ ಮೊದಲಿಗೆ ಕಾಶ್ಮೀರದಲ್ಲಿ ಎಲ್ಲಾ ಜನರೂ ಸೇರಿಕೊಂಡು ತೀರ ಯಾವ ವ್ಯತ್ಯಾಸವೇ ಇಲ್ಲದಂತೆ, ಭೂಭಾಗ ಹೊರತು ಪಡಿಸಿದರೆ ಏಕತಾ ಮೇ ಅನೇಕತಾ ಎನ್ನುವುದಕ್ಕೆ ಉದಾಹರಣೆಯಂತಿದ್ದರು. ಈಗಲೂ ಗಮನಿಸಿ ನೋಡಿ ತೀರ ಜಮ್ಮುವಿನ ಭಾಗದಲ್ಲೂ, ಅತ್ತ ಬೌದ್ಧರೆ ಅಧಿಕವಾಗಿರುವ ಲಢಾಕಿನ ಭಾಗದಲ್ಲೂ ಯಾವತ್ತೂ ಹೀಗೆ ದಿನಕ್ಕೆ ಇಬ್ಬಿಬ್ಬರಂತೆ ಉಗ್ರರು ಸಾಲುಸಾಲಾಗಿ ಹತರಾಗುತ್ತಿರುವ ಘಟನೆ ನಡೆಯುತ್ತಲೇ ಇಲ್ಲ. ಇದೇನಿದ್ದರೂ ಶ್ರಿನಗರ, ಅನಂತನಾಗ, ಬಾರಾಮುಲ್ಲ, ಕಾರ್ಗಿಲ್, ಗಾಂಧಾರ್‍ಬಾಲ್, ಶೊಫಿಯಾನ್‍ಗಳಲ್ಲಿ ಯಾಕೆ ಲೆಕ್ಕದ ಹೊರಗೆ ಕಲ್ಲೆಸೆಯುವ ಮತ್ತು ಸೈನಿಕರ ಬಂದೂಕಿಗೆ ಎದುರಾಗುವ ಸಂಗತಿಗಳು ನಡೆಯುತ್ತಲೇ ಇವೆ. ಕಾರಣ ಇಲ್ಲೆಲ್ಲಾ ಇವತ್ತು ಸರಹದ್ದಿನಿಂದ ನಗರ ಹೃದಯ ಭಾಗದವರೆಗೂ ಸಂಪರ್ಕಿಸಲು ಬೇಕಾದ ನೆಟ್‍ವರ್ಕನ್ನು ಪ್ರತ್ಯೇಕತಾವಾದಿಗಳ ಜಾಲ ಪಸರಿಸಿಟ್ಟಿದೆ. ಜೊತೆಗೆ ಸತತ ಮೂವತ್ತೈದು ನಾಲ್ವತ್ತು ವರ್ಷಗಳಿಂದ ನಿರಂತರವಾಗಿ ಕಾಶ್ಮೀರ ಎಂದರೆ ಕಾಶ್ಮೀರ ಪಂಡಿತರು ಎಂದಿದ್ದ ಈ ನೆಲದಿಂದ ಅವರನ್ನು ಅತ್ಯಂತ ವ್ಯವಸ್ಥಿತವಾಗಿ ಹೊರದಬ್ಬಲಾಗಿದೆ. ಹಾಗೆ ದಬ್ಬಲು ಬಂದಾಗ ಹೊರಬೀಳದವರನ್ನು ಹಾಗೂ ಉಳಿದವರನ್ನು ಕುಟುಂಬ ಸಮೇತ ಕೊಲ್ಲಲಾಯಿತು. 
ಎಲ್ಲಕ್ಕಿಂತಲೂ ಪರಮ ಹೇಯವೆಂದರೆ ಅತಿ ಹೆಚ್ಚು ಅತ್ಯಾಚಾರಗಳು ನಡೆದು ಜಗತ್ತೇ ಬೆಚ್ಚಿ ಬಿದ್ದರೂ ಅವರನ್ನು ರಕ್ಷಿಸಬೇಕಾದ ಸರಕಾರ ಕಬಾಬು ತಿನ್ನುತ್ತಾ ಕೂತು ಬಿಟ್ಟಿದ್ದು ಪಂಡಿತರ ದುರದೃಷ್ಟ. ತೀರ ನೂರಾರು ವರ್ಷಗಳ ಶತಶತಮಾನಗಳ ಇತಿಹಾಸದ ಪಂಡಿತರನ್ನು ನಿರ್ದಾಕ್ಷಿಣ್ಯವಾಗಿ ಕೇವಲ ಆರೆಂಟು ವರ್ಷದಲ್ಲಿ ಹೊರದಬ್ಬಿದರಲ್ಲ ಆವತ್ತೇ ಕಾಶ್ಮೀರದ ನಸೀಬು ಬದಲಾಗಿದ್ದು ಮತ್ತು ಇನ್ಯಾವತ್ತೂ ಅಭಿವೃದ್ಧಿಯತ್ತ ಅದು ಹೊರಳಲಾರದೆಂಬ ದಿಕ್ಕೂ ಬದಲಾಗಿತ್ತು. ಆವತ್ತು ಹಿಡಿದ ಗ್ರಹಣ ಇವತ್ತಿಗೂ ಇಟ್ಟಿಲ್ಲ ಕಾರಣ ಕಾಶ್ಮೀರ ಪಂಡಿತರ ಇತಿಹಾಸ ಹಲವು ಶತಮಾನಗಳ ಕಾಲದಿಂದಲೂ ಅವಿಭಾಜ್ಯವಾಗಿ ಅಲ್ಲಿ ನೆಲೆಕಂಡಿತ್ತು .
80 ರ ದಶಕದಲ್ಲಿ ಸರಿ ಸುಮಾರು ಎಂಟೂವರೆ ಲಕ್ಷದಷ್ಟಿದ್ದ ಕಾಶ್ಮೀರ ಪಂಡಿತರ ಸಂಖ್ಯೆ, 2016 ರಲ್ಲಿ ಕೇವಲ ಮೂರು ಸಾವಿರ ಚಿಲ್ರೆ ಆಗಿದೆ ಎಂದರೆ ಅದಿನ್ನೆಂಥಾ ಅನಾಹುತಗಳು ಅವರ ಮೇಲೆ ಎರಗಿರಬೇಕು. (1846 ರಿಂದ 1947 ರ ಕಾಲಾವಧಿಯಲ್ಲಿ ಕಾಶ್ಮೀರಿ ಪಂಡಿತರ ನಡೆ, ನುಡಿ, ಜೀವನ ಶೈಲಿ ಮತ್ತು ಅವರಿಗಿದ್ದ ರಾಜಾಶ್ರಯದ ಕಾರಣದಿಂದ ಜಗತ್ತಿನಲ್ಲೇ ಅತ್ಯಂತ ಗೌರವಾರ್ಹ ಜನಾಂಗವಾಗಿ ಬದುಕಿದ್ದು ಮತ್ತು ಕಣಿವೆಯಲ್ಲಿ ಸುಮಾರು ಶೇ.30ರಷ್ಟು ಪ್ರಾಬಲ್ಯ ಸಾಧಿಸಿದ್ದ ಕಾಶ್ಮೀರಿ ಪಂಡಿತರು ಡೊಗ್ರಾ ಆಡಳಿತಾವಧಿಯಲ್ಲಿ ನೆಮ್ಮದಿಯಿಂದ ಬದುಕಿದ್ದೆ ಕೊನೆ. ಎರಡೆ ದಶಕದಲ್ಲಿ ಪಂಡಿತರ ಸಂಖ್ಯೆ ಶೇ.2.1 ಕ್ಕೆ ಇಳಿದು ಹೋಗಿತ್ತು.) ಒಂದೇ ವರ್ಷದಲ್ಲಿ ಒಟ್ಟೂ ಮೂರೂವರೆ ಲಕ್ಷದಷ್ಟು ಜನರು ಕಾಶ್ಮೀರ ಕಣಿವೆಯಿಂದ ಇತರ ಭಾಗಗಳಿಗೆ ಪಲಾಯನಗೈದದ್ದು ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಸಾಮಾಜಿಕ ಪಲ್ಲಟ ಎನ್ನಿಸಿದೆ. ಅದೊಂದು ವ್ಯವಸ್ಥಿತ ಯೋಜನೆ. ಒಮ್ಮೆ ಸಂಪೂರ್ಣ ಕಾಶ್ಮೀರ ಕಣಿವೆ ಇತರರಿಂದ ಹೊರಗಾದರೆ ನಂತರ ನಮ್ಮದೇ ಸರಕಾರ, ವ್ಯವಸ್ಥೆ ರೂಪಗೊಳ್ಳುತ್ತದೆ ಎನ್ನುವುದವರ ಅವಗಾಹನೆಯಾಗಿತ್ತು. ಅದರೆ ಬದಲಾದ ಸನ್ನಿವೇಶದಲ್ಲಿ, ಕೈಮೀರಿದ ಕಾಶ್ಮೀರಿ ಮುಸ್ಲಿಮರ ಅಕ್ರಮಗಳಿಂದಾಗಿ ಕಣಿವೆ ಸೈನ್ಯದ ತೆಕ್ಕೆಗೆ ಹೊರಟುಹೋಯಿತು. ಶಾಶ್ವತವಾಗಿ ರಣರಂಗವಾಗಿ ಬದಲಾಯಿತು. ಹಾಗಾದ ಮೇಲೂ ಕಣಿವೆಗೆ ಸರಿಹೋಗಲು ಸಾಧ್ಯವಿತ್ತು. ಅದರೆ ಧರ್ಮವೇ ಬದುಕು ಎಂದುಕೊಂಡ ಅತಿರೇಕದ ಚಿಂತನೆಗಳು ದಾರಿ ತಪ್ಪಿಸಿದ್ದವು. ಪರಿಸ್ಥಿತಿ ಕೈಮೀರಿತ್ತು. ಅಲ್ಲಿಗೆ ಕಣಿವೆ ದೇಶದ ಹೆಗಲ ಮೇಲಿನ ಹುಣ್ಣಾಗಿ ಬದಲಾಗಿತ್ತು .
ತೀರ ಅನಾಹುತಕಾರಿ ಎಂದರೆ ರಹಸ್ಯಾತ್ಮಕವಾದ ಕಾರ್ಯಾಚರಣೆ ಮತ್ತು ತೀವ್ರವಾದ ಆತಂಕದೊಳಗಿದ್ದ ಹಿಕಮತ್ತೇ ಬೇರೆಯಾಗಿತ್ತು. ಈಗೀಗ ಕಾಶ್ಮೀರ ಮುಸ್ಲಿಂರಷ್ಟೆ ಕಾಶ್ಮೀರ ಕಣಿವೆ ಖಾಲಿಯಾಗುವುದಕ್ಕೆ ಕಾರಣವಾಗುತ್ತಿದ್ದರೆ, ಅದಕ್ಕೂ ಮೊದಲೇ 1990ರ ಆಸುಪಾಸಿನಲ್ಲಿ ಸಂಪೂರ್ಣ ಕಾಶ್ಮೀರದಿಂದ ಎಲ್ಲಾ ಹಿಂದೂಗಳನ್ನೂ, ಕಾಶ್ಮೀರ ಪಂಡಿತರನ್ನೂ ಖಾಲಿ ಮಾಡಿಸಲು ತೀರ ರಹಾಸ್ಯಾತ್ಮಕ ಕಾರ್ಯ ಸೂಚಿ ರಚಿಸಲಾಗಿತ್ತು. ಅದರಂತೆ ಪಂಡಿತರ ನಂತರ ಅಲ್ಲಿಂದ ಹೊರ ದಬ್ಬಬೇಕಾಗಿದ್ದವರೆಂದರೆ ಸಿಖ್‍ರನ್ನು. ಸುಮಾರು ಅರವತ್ತು ಸಾವಿರ ಸಿಖ್‍ರು ಇವತ್ತೂ ಅದೇ ಅಪಾಯದ ಅಂಚಿನಲ್ಲಿದ್ದಾರೆ. ಕಾರಣ ಇವರನ್ನೂ ಒಮ್ಮೆ ಹೊರದಬ್ಬಿದರೆ ಅಲ್ಲೂಂದು ದಾರೂಲ್-ಇಸ್ಲಾಂ ವ್ಯವಸ್ಥೆ ಸ್ಥಾಸಬೇಕೆನ್ನುವುದು ಮತೀಯರ ಕನಸು. ಅದಾಗಬೇಕೆಂದರೆ ಹಿಂದೂಗಳ ಮೇಲೆ ಆಕ್ರಮಣ ಮತ್ತು ನಿಯಂತ್ರಣ ಇಲ್ಲದೆ ಅದು ಸಾಧ್ಯವಿಲ್ಲ. ಕಾರಣ ಸಾವಿರ ವರ್ಷಗಳ ಆಕ್ರಮಣ ಮತ್ತು ವ್ಯವಸ್ಥಿತ ಪಿತೂರಿಯ ಧರ್ಮಪಲ್ಲಟದ ಕಾರ್ಯಗಳ ಮಧ್ಯೆಯೂ ಇವತ್ತು ಜಾಗತಿಕವಾಗಿ ಭಾರತದ ಆಸ್ತಿತ್ವ ಉಳಿವಿಕೆ ಕಾರಣ ಹಿಂದೂಗಳ ಚಿಂತನೆಯೇ. 
ಹಾಗೆ ಕಾಶ್ಮೀರಿಗಳನ್ನು ಹೊರದಬ್ಬುವ ಪ್ರಕ್ರಿಯೆ ಆರಂಭವಾದಾಗ ಆಡಾಡುತ್ತಾ ಈ ನೀಚಕೃತ್ಯಗಳನ್ನು ನೋಡುತ್ತಾ ಬೆಳೆದವರೇ ಇವತ್ತೂ ಪ್ರತ್ಯೇಕ ಕಾಶ್ಮೀರಕ್ಕಾಗಿ ಯಾರಿಗೆ ಬೇಕಾದರೂ ಬೆಂಬಲಿಸಬಲ್ಲ ದೇಶದ್ರೋಹಿಗಳಾಗಿದ್ದಾರೆ. ಅದರ ಮುಂದಿನ ಭಾಗವಾಗಿಯೇ ಕಾಶ್ಮೀರ ವಿಷಯವನ್ನು ಅಂತರಾಷ್ಟ್ರೀಯಗೊಳಿಸಬೇಕೆಂದು ಅದನ್ನು ಗಾಜಪಟ್ಟಿಯ ಸಮಸ್ಯೆಗೆ ಹೋಲಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾದ 1990 ಜನವರಿ 19 ರಂದು ಕಾಶ್ಮೀರಿ ಮುಸ್ಲಿಂ ಮತಾಂಧರು ಹೊರಡಿಸಿದ್ದ ಅನಧೀಕೃತ ಕಾನೂನು. ಆ ದಿನ ಇದ್ದಕ್ಕಿದಂತೆ
ಕಾಶ್ಮೀರ ಕಣಿವೆಯಾದ್ಯಂತ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡ ಮತಾಂಧರು ಅಕ್ಷರಶ: ಪ್ರಾರ್ಥನೆಗೆ ಬಳಸಬೇಕಾಗಿದ ಸ್ಪೀಕರುಗಳಿಂದ ಎಚ್ಚರಿಕೆಯ ಘೋಷಣೆ ಮೊಳಗಿಸಿದ್ದರು. ಅದರ ಪ್ರಕಾರ ಮೊದಲ ಹಂತವಾಗಿ ಎಲ್ಲಾ ಹಿಂದೂ ಗಂಡಸರನ್ನು ಪರಿವರ್ತನೆ ಮಾಡುವುದು, ಹೆಂಗಸರು ಮಕ್ಕಳನ್ನು ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದೇ ಆಗಿತ್ತು. ಅದಕ್ಕಾಗಿ ವ್ಯವಸ್ಥಿತ ಪಿತೂರಿ ಭಾಗವಾಗಿ ಎಲೆಲ್ಲಿ ಕಾಶ್ಮೀರಿ ಪಂಡಿತರು  ನೆಲೆಸಿದ್ದಾರೋ ಅಯಾ ಭಾಗದ ಕ್ಷೇತ್ರವಾರು ಮನೆ ಮತ್ತು ಆಸ್ತಿಗಳನ್ನು ಗುರುತಿಸುವ ಕೆಲಸ ಗುಪ್ತವಾಗಿ ಆರು ತಿಂಗಳಿಂದ ನಡೆಯುತ್ತಲೇ ಇತ್ತು. ಅತ್ಯಂತ ಸ್ಪಷ್ಟವಾಗಿ ಗುರುತಿಸಿ ಒಕ್ಕಲ್ಲೆಬ್ಬಿಸುವ ಹೊಡೆದು ಹಾಕುವ ಹುನ್ನಾರದ ಭಾಗವಾಗಿ ಮೊದಲು ಈ ಎಚ್ಚರಿಕೆಯನ್ನು ಹೊರಡಿಸಲಾಗಿತ್ತು. ನಂತರದಲ್ಲಿ ದೈಹಿಕವಾಗಿ ಹಲ್ಲೆ ಮತ್ತು ಹೊರದಬ್ಬುವ ಪ್ರಕ್ರಿಯೆಗೆ ಚಾಲನೆ ನೀಡುವುದಷ್ಟೆ ಬಾಕಿ ಇತ್ತು. ಆವತ್ತಿಗೆ ಅದೇ ಜನವರಿ 4 ರಂದು ಬಹಿರಂಗವಾಗೆ ಉರ್ದು ಪತ್ರಿಕೆ "ಅಪ್ತಾಬ್" ನಲ್ಲಿ ಹಿಜ್ಬುಲ್ ಮುಜಾಹಿದಿನ್ ಸಂಘಟನೆ " ಹಿಂದೂಗಳೇ ಕಾಶ್ಮೀರದಿಂದ ತೊಲಗಿ ಮತ್ತು ಸಂಪೂರ್ಣ ಕಣಿವೆ ಪಾಕಿಗಳ ರಾಜ್ಯಕ್ಕೆ ಸೇರ್ಪಡೆಯಾಗಬೆಂಕೆಂದು"ಪ್ರಕಟಿಸಲಾಗಿತ್ತು. ಅದರ ಹಿಂದೆಯೇ ಗಡಿಯಿಂದ ಎ.ಕೆ.47 ತಂದು ಬೇಟೆಯಾಡುತ್ತೇವೆ ಎಂಬ ಬೆದರಿಕೆಯ ಜೊತೆಗೆ "ಪಂಡಿತರೆ ಹೊರಡಿ ಆದರೆ ನಿಮ್ಮ ಹೆಂಗಸರು ಇಲ್ಲಿಯೆ ಬಿಟ್ಟು ಹೊರಡಿ" ಎನ್ನುವ ಅಮಾನವೀಯ ಘೋಷಣೆ ಮೊಳಗಿ ಯಾರೂ ಮನೆಯಿಂದ ಹೊರಕ್ಕೇ ಬಾರದ ಪರಿಸ್ಥಿತಿ ಉಂಟಾಗಿ ಹೋಗಿತ್ತು. ಅದೇ ದಿನ ರಾತ್ರಿ ಪ್ರತಿ ಹಿಂದೂಗಳ ಮನೆಯ ಬಾಗಿಲಿಗೂ ಪೆÇೀಸ್ಟರ್ ಅಂಟಿಸಲಾಗಿತ್ತು. "..ಅಲ್ಲಾನನ್ನು ಒಪ್ಪಿಕೊಳ್ಳಿ. ಇಲ್ಲಾ ಕಾಶ್ಮೀರ ಬಿಟ್ಟು ತೊಲಗಿ " ಎನ್ನುವ ಅಕ್ಷರಗಳು ರಾರಾಜಿಸುತ್ತಿದ್ದವು. ಅದಕ್ಕೆ ಮುನ್ನುಡಿಯಾಗಿ "ಟಿಕಾ ಲಾಲ್ ಟಪ್ಲೂ" ವಿನ ಹತ್ಯೆಯಾಗುವುದರೊಂದಿಗೆ ಕಣಿವೆ ಖಾಲಿಯಾಗಲು ಮೊದಲ ಹೆಣ ಬಿದ್ದಾಗಿತ್ತು ನಂತರದ್ದು ಅಕ್ಷರಶ: ಜಗತ್ತು ಕಂಡು ಕೇಳರಿಯದ ಮಾರಣ ಹೋಮ. ಬರುವ ವಾರಕ್ಕೆ...

Saturday, August 26, 2017

ಕಾಶ್ಮೀರವೆಂಬ ಖಾಲಿ ಕಣಿವೆ..

ಅದು ಜಗತ್ತಿನ ಉಗ್ರರ ಫ್ಯಾಕ್ಟರಿ...

ಶಿಬಿರಗಳಿಗೆ ಎಲ್ಲೆಲ್ಲಿಂದಲೋ ಬಂದ ಮುಸಲ್ಮಾನರಿಗೆ ನೀರು ನೆರಳು ಎರಡನ್ನೂ ಕೊಡುತ್ತಾ, ಪಾಕಿಸ್ತಾನ ಜಾಗತಿಕವಾಗಿ ಕರ್ಮಠ ಮುಸ್ಲಿಂನಾಡು ಎಂದು ಒಮ್ಮೆಲೆ ಮಂಚೂಣಿಗೆ ಬಂದು ನಿಂತುಬಿಡ್ತಲ್ಲ ಆ ಪಟ್ಟ, ತೀರ ಹೆಂಡತಿಯರ ಹಿಂದೆ ಬಚ್ಚಿಕೊಂಡಿದ್ದ ಲಾಡೆನ್‍ನನ್ನು ಬಡಿದು ಕೆಡುವವರೆಗೂ ಹಾಗೆಯೇ ಉಳಿದಿತ್ತು. ಕಾರಣ ಇದೇ ಪಾಕಿಸ್ತಾನದ ಸರಹದ್ದಿನಲ್ಲೇ ಇದ್ದದ್ದು ಸಂತ್ರಸ್ತರ ಶಿಬಿರದ ಹೆಸರಿನ ಉಗ್ರರ ಫ್ಯಾಕ್ಟರಿಗಳು. ಹಾಗೆ ಲಕ್ಷಾಂತರ ಸಂಖ್ಯೆಯಲ್ಲಿ ಅವರನ್ನು ಕೂಡಿ ಹಾಕಿಕೊಂಡಿದ್ದಾರೂ ಹೇಗೆ...? ಅವರನ್ನು ಯಾಕಾದರೂ ಅಪಘಾನಿಸ್ತಾನ "ತಾಲಿಬಾನಿ" ಎಂದು ಒಪ್ಪಿಕೊಂಡಿತು..? ಎನ್ನುವುದಕ್ಕೆಲ್ಲ ಇತಿಹಾಸವಿದೆ.
ಎರಡು ದೇಶಗಳಾಗಿ ಹಿಂದೂಸ್ತಾನ ಒಡೆಯಿತಲ್ಲ. ಆಗ ಪಶ್ತೂನಿಗಳು/ಬಲೂಚರು ಪಾಕಿಸ್ತಾನದ ಬದಲಿಗೆ ಇನ್ನೂ ಆಚೆಯ ಅಪಘಾನಿಸ್ತಾನವನ್ನು ಸೇರಿಕೊಳ್ಳುತ್ತೇವೆ ಎಂದು ನಿರ್ಧರಿಸಿದರು. ಹಾಗಾದಲ್ಲಿ ತನ್ನ ಕ್ಷೇತ್ರ ಮತ್ತು ಹಿಡಿತ ಎರಡೂ ಕಡಿಮೆಯಾಗುತ್ತದೆಂದು ಅವರನ್ನು ಬಲವಂತದಿಂದ ತನ್ನ ಗಡಿಯೊಳಗೇ ಪಾಕಿಗಳು ಬಂಧಿಸಿಡಲು ನೋಡಿದಾಗ ಗಡಿಯಲ್ಲಿ ಅಪಘಾನ್ನರೊಂದಿಗೆ ಬಡಿದಾಟವೇ ಆಗಿ ಹೋಯಿತು. ಅಪ್ಘನ್‍ರ ದೊರೆ ಜಾಹೀರಿ ಇದರಿಂದಾಗಿ ಕುಪಿತಗೊಂಡು ಪಾಕಿಗಳೊಂದಿಗೆ ಅಕ್ಷರಶ: ಸರಹದ್ದನ್ನೇ ಮುರಿದುಕೊಂಡುಬಿಟ್ಟ. ಹಾಗೆ ಮುರಿದುಕೊಂಡಿದ್ದೇ ಅಲ್ಲದೆ ಬಾರ್ಡರಿನ ಎಲ್ಲ ಬಾಗಿಲನ್ನೂ ಮುಚ್ಚಿಸಿಬಿಟ್ಟ. ಇತ್ತ ಗ್ರೇಟ್ ಗ್ರಾಂಡ್‍ಟ್ರಂಕ್ ರೋಡ್‍ನ್ನು ಬಂದು ಮಾಡಿ ಅಪಘಾನಿಗಳನ್ನು ಇನ್ನಿಷ್ಟು ಸಂಕಷ್ಟಕ್ಕೀಡು ಮಾಡಿ ಅನಾಹುತಕಾರಿ ವಿದ್ಯಮಾನಕ್ಕೆ ಮುನ್ನುಡಿ ಬರೆದುಬಿಟ್ಟಿತು ಪಾಕಿಸ್ತಾನ.
ಯಾವಾಗ ಪಾಕಿ ಗಡಿ ಬಂದಾಗಿ ಸರಂಜಾಮು ಬರುವುದು ನಿಂತು ಹೋಯಿತೋ ದೊರೆ ಜಾಹಿರಿ ಇನ್ನೊಂದು ಗಡಿಯಲ್ಲಿದ್ದ ರಷಿಯಾದತ್ತ ಕೈ ಚಾಚಿ ದೋಸ್ತಿಗಿಳಿದ. ರಷಿಯಾ ತುಂಬಾ ಉದಾರವಾಗಿ ನಡೆದುಕೊಂಡು ಆಗ ತೀರ ಅವಶ್ಯವಿದ್ದ ದಿನಸಿ ಅಹಾರದ ಜೊತೆಗೆ ತೆಕ್ಕೆಗಟ್ಟಲೆ ಅನಾಹುತಕಾರಿ ಬಂದೂಕುಗಳನ್ನೂ ಕೊಟ್ಟುಬಿಟ್ಟಿತು. ಎಗ್ಗಿಲ್ಲದೆ ಶಸ್ತ್ರಾಸ್ತ್ರಗಳು ಆಟದ ಸಾಮಾನಿನಂತೆ ಸಮರಖಂಡದೊಳಕ್ಕೆ ಬಂದು ಜಮೆಯಾಗಿಬಿಟ್ಟವು. ಜಾಹಿರಿ ಬೇಕು ಎನ್ನುತ್ತಿದ್ದಂತೆ ಮುಖ್ಯಪಟ್ಟಣದಲ್ಲಿ ವಾಯು ನೆಲೆಯ ನಿಲ್ದಾಣಗಳನ್ನೂ ರಷಿಯಾ ನಿರ್ಮಿಸಿಕೊಟ್ಟಿತು. ಯಾವ ಅಮೇರಿಕೆಯ ಕಾಲು ಹಿಡಿದರೂ ದಕ್ಕದ ವಸ್ತುಗಳನ್ನೆಲ್ಲಾ ಒಂದೇ ಕೇಳಿಕೆಗೆ ರಷಿಯಾ ಪೂರೈಸಿತೋ ಅಪಘಾನಿಗಳು ಅಪೂಟು ರಷಿಯಾ ಮುಲಾಜಿಗೆ ಬಿದ್ದು ಹೋದರು. ಜೊತೆಗೆ ರಷಿಯಾದ ಸೊಷಿಯಲಿಸ್ಟ್ ಮಿಶ್ರಿತ ಕಮ್ಯೂನಿಸ್ಟ್ ಕೂಡಾ ಕಣಿವೆಗೆ ಕಾಲಿಟ್ಟು ಯಾವ ಮುಸ್ಲಿಂ ರಾಷ್ಟ್ರದಲ್ಲೂ ಇರದ ಸ್ವಾತಂತ್ರ್ಯ, ಸೌಲಭ್ಯಗಳು ಅಪಘಾನಿಗಳಿಗೆ ದೊರಕಿ ಹೋಯಿತು. ಆಗ ಆರಂಭವಾದ ಅಪಘನ್ನರ ಬದುಕಿನ ಸ್ವಾತ್ರಂತ್ರ್ಯದ ಸುವರ್ಣಯುಗ ತುಂಬ ದಿನ ನಡೆಯಲಿಲ್ಲ. ಜಹೀರಿಗೆ ವಿರೋಧವಾಗಿ ಪಾಕಿ ಬೆಂಬಲಿತ ಕರ್ಮಠ ಮುಸ್ಲಿಮ್‍ರನ್ನೊಳಗೊಂಡ "ಪೀಪಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಅಪಘಾನಿಸ್ತಾನ್" ರಚನೆಯಾಗಿ ಶಿಯಾ ವಿರೋಧಿಗಳು, ಮುಲ್ಲಾಗಳು, ಉಲೇಮಾಗಳು ಒಗ್ಗಟ್ಟಾಗಿ ನಾಯಕತ್ವವನ್ನು ಜಾಹೀರನ ವಿರೋಧಿ ದಾವುದ್‍ಖಾನ್‍ಗೆ ವಹಿಸಲಾಯಿತು. ಬದಲಾದ ರಾಜಕೀಯದಲ್ಲಿ ದಾವುದ್ ದೊರೆಯಾದ. ಆದರೆ ಆತ ರಷಿಯಾವನ್ನು ಹೊರಗಿಟ್ಟು ಪಕ್ಕದ ಶಾ ಆಫ್ ಇರಾನ್‍ನೊಂದಿಗೆ ಕೈ ಜೋಡಿಸಿಬಿಟ್ಟ. ಇತ್ತ ಮುಸ್ಲಿಂ ರಾಷ್ಟ್ರವೂ ಆಗದ ಅತ್ತ ಸರಿಯಾದ ವ್ಯವಸ್ಥೆಯೂ ಇಲ್ಲದೆ ಅವನ ಯೋಜನೆಗಳೇ ಅರ್ಥವಾಗದೆ ಸುಖಾಸುಮ್ಮನೆ ದಾವುದ್‍ಖಾನ್ ಅದೇ ಮುಸ್ಲಿಂರ ವಿರೋಧಿಯಾಗಿಬಿಟ್ಟ.
ಸಂಸ್ಕೃತಿ ಸಮೇತ ಎಲ್ಲ ಬದಲಾಗಬೇಕೆಂಬ ಅರ್ಜೆಂಟಿಗೆ ಬಿದ್ದು ಮಸೀದಿಯ ಮೂಲಕ ದಂಗೆ ಏಳುವವರೆಲ್ಲರನ್ನೂ ಗುಳೆಎಬ್ಬಿಸಿ ಹೊರದಬ್ಬಿದ. ವಿರೋಧಿಗಳ ಗಡಿಪಾರಾಯಿತು. ಹೀಗೆ ವಿರೋಧಿಗಳ ಹುಟ್ಟಡಗಿಸಿದನಾದರೂ ರಷಿಯಾದೊಂದಿಗೆ ಗೆಳೆತನ ಮುರಿದುಕೊಂಡು ಅತಿದೊಡ್ಡ ತಪ್ಪು ಮಾಡಿಬಿಟ್ಟಿದ್ದ ಜೊತೆಗೆ ವಿರೋಧಿಗಳು ಎಲ್ಲೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ನಿಗಾ ಇಲ್ಲದೆ ಎರಡನೆ ದೊಡ್ಡ ತಪ್ಪು ಮಾಡಿದ್ದ. ಐದೇ ವರ್ಷದಲ್ಲಿ ರಷಿಯಾ ಅವನನ್ನು ಬರ್ಬರವಾಗಿ ಕೊಲ್ಲಿಸಿತ್ತು. ಅದೇ ಹೊತ್ತಿಗೆ ಇಲ್ಲಿಂದ ಹೊರಬಿದ್ದಿದ್ದ, ರಶಿಯಾ ಬೆಂಬಲವನ್ನೂ ವಿರೋಧಿಸುತ್ತಿದ್ದ ಕರ್ಮಠರು ಒಮ್ಮೆಲೆ ಅಪಘಾನ ವಿರುದ್ಧ ಜೆಹಾದ್ ಘೋಷಿಸಿದ್ದರು. ವೈಪರಿತ್ಯವೆಂದರೆ ಅಪಘಾನಿ ಸೈನ್ಯದೊಳಗೂ ಇದ್ದ ಬೆಂಬಲಿಗರೂ ಸೈನ್ಯಬಿಟ್ಟು ಆಯುಧಗಳ ಸಮೇತ ಇತ್ತ ಬಂದು ಸೇರಿಬಿಟ್ಟರು.
ಅವರೆಲ್ಲಾ ಸೇರಿದಾಗ ಹುಟ್ಟಿದ್ದೇ ಮುಜಾಹಿದೀನ್. ಅಂದರೆ ಧರ್ಮಯೋಧ.
ಹೀಗೆ ಅಪಘಾನಿಸ್ತಾನ ಸರಹದ್ದಿನಿಂದ ಓಡಿಬಂದು ಕಾಲೂರಿ ನಿಂತಿದ್ದ ಧರ್ಮಯೋಧರ ಸಂಖ್ಯೆ ಅನಾಮತ್ತು ಇಪ್ಪತೈದು ಲಕ್ಷ. ಇವರನ್ನೆಲ್ಲಾ ಶಿಬಿರದಲ್ಲಿ ಸಾಕಿ ಅನ್ನ ನೀರು ಕೊಟ್ಟು ವರ್ಚಸ್ಸು ಬೆಳೆಸಿಕೊಂಡದ್ದು ಪಾಕಿಸ್ತಾನ. ಅದರ ಪರಮನೀಚ ಬುದ್ಧಿ ಏನೆಂದರೆ ಇವರನ್ನೆಲ್ಲಾ ಮುಂದೆ ಬಿಟ್ಟು ತನ್ನ ಪಕ್ಕದಲ್ಲೊಂದು ಅಪ್ಪಟ ಮುಸ್ಲಿಂ ಕೈಗೊಂಬೆ ಸರಕಾರ ಸ್ಥಾಪಿಸುವುದು. ಜಗತ್ತಿನೆದುರಿಗೆ ನೋಡಿ ನಾವು ಹೇಗೆ ಅಪ್ಪಟ ಷರಿಯಾ ಸರಕಾರ ನಿರ್ಮಿಸಿದ್ದೇವೆ ಎಂದು ಅದನ್ನು ತೋರಿಸುವುದು. ಸ್ವಂತದ ನಾಡಲ್ಲಿ ಇಂತಹದ್ದನ್ನು ಇಂಪ್ಲಿಮೆಂಟು ಮಾಡುವ ದಮ್ಮು ಪಾಕಿಗಳಿಗೆ ಆಗಲೂ ಇರಲಿಲ್ಲ ಈಗಲೂ ಇಲ್ಲ. ಹಾಗಾಗಿ ಅದು ಇವರಿಗೆಲ್ಲಾ ಆಶ್ರಯದ ನಾಟಕದ ಮೂಲಕ ಇಂತಹ ದೊಡ್ಡ ಸ್ಕೆಚ್ಚು ಹಾಕಿತ್ತು. ಹೀಗೆ ನಿರಾಶ್ರಿತ ಮುಸ್ಲಿಂರಿಗೆ ಅಶ್ರಯ ಕೊಟ್ಟಿದ್ದಕ್ಕಾಗಿ ಜಗತ್ತಿನ ಮುಸ್ಲಿಂದೇಶಗಳು ಪಾಕಿಸ್ತಾನವನ್ನು ಅರಬ್ಬರ ದೊಡ್ಡಣ್ಣನಾಗಿಸಿದವು. ಅವರೆಲ್ಲರ ಉದ್ದೇಶ ರಷಿಯನ್ನರ ಮೇಲೆ ದಾಳಿ ಮತ್ತು ಕರ್ಮಠ ಇಸ್ಲಾಂ ಕಾನೂನು. ಅದರೆ ಅದಾಗಲೇ ಇಲ್ಲ. ರಷ್ಯಾ ಬೆಂಬಲಿತ ಅಪಘಾನಿ ಸರಕಾರ ಇಂತಹ ಕುತಂತ್ರಿಗಳನ್ನು ಒರೆಸಿಹಾಕಿಬಿಟ್ಟಿತ್ತು. ದೈತ್ಯ ರಷಿಯನ್ನರನ್ನು ಎದುರಿಸುವ ತಕತ್ತು ಆಗ ಅರಬ್ಬರಿಗೆ ಇರಲಿಲ್ಲ.
ಈ ಸಂದರ್ಭ ನೋಡಿಕೊಂಡು ಜಗತ್ತಿನ ಮಹಾ ವ್ಯಾಪಾರಿ ದೇಶ ಅಮೇರಿಕ ಇದರಲ್ಲಿ ಕೈಯಿಟ್ಟು ಅನಾಮತ್ತಾಗಿ ಎರಡೂವರೆ ಕೋಟಿ ಆಯುಧಗಳನ್ನು ಕೊಟ್ಟುಬಿಟ್ಟಿತು. ಪಾಕಿ ಪಡೆಗಳು ಹಿಂದೆ ನಿಂತು ಶರಂಪರ ಯುದ್ಧಕ್ಕೆ ಮುಜಾಹಿದ್ದಿನ್‍ರನ್ನು ಮುಂದೆ ಬಿಟ್ಟಿತು. 1988 ರ ಹೊತ್ತಿಗೆ ರಷಿಯಾ ಎಂಬ ಹಿಮಕರಡಿ ಜಿನೇವಾದಲ್ಲಿ ಒಪ್ಪಿಗೆ ಸೂಚಿಸಿ 1989 ರ ಮಾರ್ಚ್‍ನಲ್ಲಿ ಅಪಘಾನಿ ನೆಲ ಬಿಟ್ಟು ಹೊರಬಿತ್ತು. ಆದರೆ ಮುಂದೇನು ಎಂಬ ಸರಿಯಾದ ಯೋಜನೆಯಿಲ್ಲದ ಅಪ್ಘಾನಿಸ್ತಾನ ಅಪ್ಪಟ ಅರಾಜಕರ ಸಂತೆಯಾಗಿ ಹೋಯಿತು. ಅದೆಲ್ಲಾ ತನ್ನ ಉಸಾಬರಿ ಅಲ್ಲ ಎನ್ನುತ್ತಾ ತನ್ನ ಬಂದೂಕು ಮಾರುವ ಕೆಲಸ ಮುಗಿಸಿ ಅಮೇರಿಕೆ ಅಂಗಡಿ ಮುಚ್ಚಿಕೊಂಡು ಹೊರಟುಬಿಟ್ಟಿತ್ತು. ಅತ್ತ ಅಪಘಾನಿಸ್ತಾನೊಳಗೂ ಪ್ರವೇಶ ದೊರಕದ, ತಾಲಿಬಾನ್ ಸರಕಾರದ ವಿರುದ್ಧ ಬಂದೂಕೆತ್ತದ ಸಂತ್ರಸ್ತರ ರೂಪದ ಲಕ್ಷಾಂತರ ಧರ್ಮಯೋಧರು ಪಾಕಿ ಸರಹದ್ದಿನಲ್ಲೇ ಉಳಿದಿದ್ದರಲ್ಲ. ಈಗ ಅವರ ಕೈಯ್ಯಲ್ಲಿ ಅಮೇರಿಕೆ ಬಂದೂಕು ಇತ್ತು. ಅದನ್ನು ಹೆಗಲಿಟ್ಟುಕೊಂಡು ತಿರುಗಿ ನಿಂತು ಪಾಕಿಸ್ತಾನಕ್ಕೇ ಪ್ರಶ್ನೆ ಇಟ್ಟುಬಿಟ್ಟರು.
"ನೀವ್ಯಾಕೆ ಷರಿಯಾ ಜಾರಿಗೆ ತರುತ್ತಿಲ್ಲ..?"
ಪಾಕಿಗಳ ಬುಡದಲ್ಲಿ ಡೈನಮೈಟು ಯಾವಾಗ ಬೇಕಾದರೂ ಡಮ್ಮೆನ್ನುವ ಪರಿಸ್ಥಿತಿ. ಸೈನ್ಯದ ಮೂಲಕ ಬಡಿಯಬಲ್ಲ ಕೆಲಸವಿದಲ್ಲ ಎಂದು ಪಾಕಿಗಳಿಗೆ ಮೊದಲ ದಿನವೇ ಗೊತ್ತಾಗಿತ್ತು. ಪೂರ್ತಿ ಮುಸ್ಲಿಂ ಜಗತ್ತು ತಿರುಗಿಬೀಳುತ್ತದೆ.
" ಇಲ್ಲ ಇಲ್ಲ ಇಲ್ಲೆಲ್ಲಾ ಇಸ್ಲಾಮ್ ಸ್ಥಾಪನೆ ನಡೆಯುತ್ತಿದೆ ಅದರೆ ಜಾಗತಿಕವಾಗಿ ನಮ್ಮ ಸಹೋದರರು ಕಾಫೀರರ ಕೈಯ್ಯಲ್ಲಿ ನರಳುತ್ತಿದ್ದಾರೆ ಮೊದಲು ಅವರನ್ನೆಲ್ಲಾ ಬಿಡಿಸಬೇಕು.." ಎಂದುಬಿಟ್ಟರು. ಅಲ್ಲಿಗೆ ಧರ್ಮಯೋಧರ ಗುರಿ ಈಗ ಚೆಚನ್ಯಾ, ಕೆನ್ಯಾ, ಕಾಶ್ಮೀರ ಹೀಗೆ ಎಲ್ಲೆಡೆಗೆ ಚದುರುತ್ತಿದೆ. ಸಾಯಲೇ ಸಿದ್ಧವಾಗಿರುವ ಈ ಪಡೆ ಪಾಕಿಸ್ತಾನದ ಉಗ್ರರ ಫ್ಯಾಕ್ಟರಿಯಿಂದ ಹೊರಬರುತ್ತಲೇ ಇರುತ್ತದೆ. ಈಗ ಅದಕ್ಕೆ ಮೂಸುಲ್‍ನಂತಹ ಕಿತ್ತುಹೋದ ನಗರದ ಜನರೂ ಭರ್ತಿಯಾಗುತ್ತಿದಾರೆ. ಆದರೆ ಕಣಿವೆಗೆ ಕಾಲಿಡುತ್ತಿದ್ದಂತೆ ಸ್ವಂತ ಜನರ ಜತೆಗೆ ಇವರೂ ಸೈನ್ಯಕ್ಕೆ ಈಡಾಗುತ್ತಿದ್ದಾರೆ. ಕಣಿವೆ ಖಾಲಿಯಾಗದೆ ಏನಾದೀತು.

Thursday, August 24, 2017

ಮೋಡ ಬಿತ್ತನೆಯೆಂಬ ಮತ್ತೊಂದು ಪ್ರಹಸನ...

ನಿಜಕ್ಕೂ ಜಗತ್ತಿನಲ್ಲೆಲ್ಲೂ ಇಂತಲ್ಲೇ ಮೋಡ ಕರೆಸಿ, ಅದನ್ನು ಬಿಡಿಸಿ, ಅದರ ಒಡಲಲ್ಲಿನ ಭಾಷ್ಪೀಕರಣಗೊಂಡಿರುವ ಘನೀಕೃತ ನೀರಿನ ಅಂಶಕ್ಕೆ ರಸಾಯನಿಕದ ತಂಪು ತಾಗಿಸಿ ಅದನ್ನು ನಮಗೆ ಬೇಕಾದ ಕಡೆಯಲ್ಲಿ ಭೂವಿಯ ಮೇಲೆ ಎಳೆದು ಇಲ್ಲೇ ಬೀಳು.. ಇಂತಲ್ಲಿ ಮಳೆ ಕಮ್ಮಿ ಇದೆ ಮಳೆ ಆಗು, ಇಲ್ಲಿ ಸ್ವಲ್ಪ ಸುರಿಸಿ ಉಳಿದದ್ದು ಅಲ್ಲಿ ಸುರಿಸು... ಹೀಗೆಲ್ಲಾ ಮೋಡಗಳಿಗೆ ಆಜ್ಞೆ ಕೊಟ್ಟು ನಮಗಿಷ್ಟ ಬಂದಂತೆ ಮಳೆ ಬರಿಸಿಕೊಳ್ಳುವ ವ್ಯವಸ್ಥೆಯ ನಿಯಂತ್ರಣ ನಮ್ಮ ಕೈಯ್ಯಲ್ಲಿದೆ ಎಂದು ಅಂದುಕೊಂಡಿದ್ದೇ ಆದರೆ ಅದಕ್ಕಿಂತ ದೊಡ್ಡ ತಮಾಷಿ ಮತ್ತು ಮುಟ್ಟಾಳತನ ಈ ವಿಜ್ಞಾನ ಲೋಕದಲ್ಲಿ ಇನ್ನೊಂದಿಲ್ಲ. ಪ್ರಸ್ತುತ ಅಂತಹ ದಡ್ಡತನವನ್ನು ತಮ್ಮ ಬುದ್ಧಿವಂತಿಕೆ ಎಂದು ತೋರಿಸುತ್ತಾ, ಕೆಲವೊಮ್ಮೆ ಆಕಸ್ಮಿಕವಾಗಿ ಸಿಕ್ಕ ಫಲಿತಾಂಶವನ್ನೇ (ಅದೂ ಜಾಗತಿಕವಾಗಿ ಸರಾಸರಿ ಶೇ.18 ಮಾತ್ರ) ಯಶಸ್ಸು ಎಂದು ನಂಬಿ ಮೋಡ ಕೆರೆದು ಮಳೆ ಸುರಿಸಲು ಹೊರಟಿದ್ದಾರಲ್ಲ ಇದನ್ನು ಪ್ರಹಸನವಲ್ಲದೇ ಇನ್ನೇನು ಎನ್ನೋಣ...?
ಅಸಲಿಗೆ ಇವತ್ತು ಮೋಡ ಮತ್ತದರ ಒಡಲಲ್ಲಿ ಏನಿದೆ ಎಂಬುವುದೇ ಇವತ್ತಿಗೂ ವಿಜ್ಞಾನಿಗಳಿಗೆ ಬೇಧಿಸಲಾಗದ ಸತ್ಯ. ಸಮುದ್ರದ ನೀರು ಆವಿಯಾಗಿ ಮೋಡವಾಗುತ್ತದೆ ಎಂಬ ಪರಂಪರಾನುಗತ ಸತ್ಯವನ್ನೇ ನಮ್ಮ ಕಿವಿಗೆ "ಕಾಬಾಳೆ" ಹೂವಿನಂತೆ ಮಡಚಿ ಮಡಚಿ ಇಡುತ್ತಾ ಬಂದಿದ್ದಾರೆಯೇ ವಿನ: ಯಾರ ಕೈಯ್ಯಲ್ಲೂ ವೈಜ್ಞಾನಿಕವಾಗಿ ಮೋಡ ಎಂದರೆ ಇದು, ಮೋಡ ಎಂದರೆ ಹೀಗೆಯೇ ಇರುತ್ತದೆ, ಇದರ ಒಡಲಲ್ಲಿ ಇಂತಿಂಥಾ ಕೆಮಿಕಲ್ಸ್ ಪ್ರಾಪರ್ಟೀಸ್ ಅಥವಾ ಸ್ತಿತ್ಯಂತರಗಳು ಆಯಾ ಕಾಲಾನುಕಾಲಕ್ಕೆ ಜರಗುತ್ತಿರುತ್ತದೆ ಎಂದು ಸರ್ಟಿಫೈ ಮಾಡುವಂತಹ ರಿಪೆÇೀರ್ಟು ಇಲ್ಲವೇ ಇಲ್ಲ. ಅದಕ್ಕೂ ಮಿಗಿಲಾಗಿ ಮೋಡಗಳನ್ನು ಅಯಾನುಕರಣಗೊಳಿಸಿ, ಅದಕ್ಕೆ ಲವಣ ತಾಗಿಸುವ ಮುಖಾಂತರ ( ಸಿಲ್ವರ್ ಅಯೋಡೈಸಡ್ ಕಣಗಳು – ಬೇಕಿದ್ದರೆ ಉಪ್ಪಿನ ನೀರು ಎನ್ನಿ ) ಅದನ್ನು ದಿಕ್ಕು ತಪ್ಪಿಸಿ ನಮ್ಮಿಷ್ಟ ಬಂದಂತೆ ಚದುರಿಸಿ ಅದರ ಒಡಲಲ್ಲಿ ಘನೀಕೃತ ನೀರಿನ ಅಂಶವನ್ನು ಭಾರವಾದ ಹನಿಯಾಗಿ ಬದಲಾಯಿಸಿ ಬೇಕಾದಂತೆ ಸುರಿಸಬಹುದೆನ್ನುವ ಪ್ರಕ್ರಿಯೆ ವೈಜ್ಞಾನಿಕವಾಗಿ ಸಿದ್ಧವಾದ ಸೂತ್ರವಲ್ಲವೇ ಅಲ್ಲ. ಅದೊಂದು ಆಕಸ್ಮಿಕ. ಎರಡು ಎರಡು ಸೇರಿದರೆ ನಾಲ್ಕೇ ಎನ್ನುವ ಜಾಗದಲ್ಲಿ ಇಪ್ಪತ್ತೆರಡೂ ಆಗುತ್ತದೆಯೆನ್ನುವ ಅನುಕೂಲಸಿಂಧು ಸಿದ್ಧಾಂತದಂತಿದೆ ಇದು.
ಇಂತಹ ಸೂತ್ರದ ಮೇಲೆ ನಮ್ಮ ಸರಕಾರಗಳು ನಿರಂತರವಾಗಿ, ಬರಗಾಲದಲ್ಲಿ ಧನಾತ್ಮಕವಾಗಿ ಕಾರ್ಯನಿರ್ವಹಿಸದೆ, ಏನೂ ಮಾಡುತ್ತಿಲ್ಲ ಎನ್ನಿಸಿಕೊಳ್ಳುವುದಕ್ಕಿಂತ ಈ ಬಿತ್ತನೆ ವಾಸಿ ಎನ್ನುವಂತೆ ಕೋಟ್ಯಾಂತರ ರೂಪಾಯಿಯನ್ನು ಮಳೆಗಾಗಿ ಖರ್ಚು ಮಾಡುತ್ತಿದ್ದೇವೆ ಎನ್ನುವುದನ್ನು ತೋರಿಸಲು ಮೋಡ ಬಿತ್ತನೆಯ "ಬೆಳೆ" ತೆಗೆಯುತ್ತಿದ್ದಾರಾ ಎನ್ನಿಸುತ್ತಿದೆ. ಅಂದಹಾಗೆ ನನಗೆ ಗೊತ್ತಿದ್ದ ಮಟ್ಟಿಗೆ ಇಂತಹ ಕೆಲಸಕ್ಕೆ ಕೈ ಹಾಕುತ್ತಿರುವುದು ಮೊದಲ ಸಲವೇನಲ್ಲ ಮತ್ತು ಹಿಂದಿನ ಫಲಿತಾಂಶವನ್ನಾದರೂ ಗಮನಿಸಬೇಡವೆ..? ಒಂದು ಗೊತ್ತಿರಲಿ. ಸಮುದ್ರ ನೀರೇ ಏಕೆ ಮೋಡವಾಗುತ್ತದೆ...? ಬೇರೆ ನೀರುಗಳೂ ಆವಿಯಾಗುತ್ತವಲ್ಲ ಅವೆಲ್ಲಾ ಯಾಕೆ ಮೋಡವಾಗುವುದಿಲ್ಲ...? ಎಂಬ ಪ್ರಶ್ನೆ ಕೇಳಿ ನೋಡಿ ಎಂತಹ ಪೆÇ್ರೀಫೇಸರೂ ಹೆ.. ಹ್ಹೇ.. ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ಎಲ್ಲಾ ನೀರಿನ ಆವಿಯ ಪ್ರಮಾಣ ಮತ್ತು ಅದರ ಪ್ರಕ್ರಿಯೆಯ ಅಂತಿಮ ಫಲಿತಾಂಶವೇ ಮೋಡ ಕಟ್ಟುವಿಕೆ.
ಸಮುದ್ರ ಹೊಳೆ, ನಿಂತ ನೀರು, ಕಾಲುವೆ ಹೀಗೆ ಎಲ್ಲೆಡೆಯಲ್ಲಿನ ನೀರಿನ ಹರಿವು ಬಿಸಿಲಿನ ಪ್ರಖರ ಬಿಸಿಗೆ ಕಾಯ್ದು ನೀರಾವಿಯಾಗಿ ಗಾಳಿಯ ರಭಸದೊಂದಿಗೆ ಮೇಲೆರುತ್ತ ಸಾಗುತ್ತದಲ್ಲ ಆಗ ಗಾಳಿ ಹೆಚ್ಚು ಬಿಸಿಯಾಗಿದ್ದಷ್ಟೂ ತನ್ನ ಸಂಗಡ ಹೆಚ್ಚಿನ ನೀರಾವಿಯನ್ನು ಹೊತ್ತೊಯ್ಯಬಲ್ಲದು. ಹೀಗೆ ನೀರಾವಿ ಆಯಾ ಪರಿಸ್ಥಿತಿಯ ಸಾಂದರ್ಭಿಕವಾಗಿ ಬಿಸಿಗಾಳಿಯೊಡನೆ ತನ್ನ ಪ್ರಮಾಣವನ್ನು ನಿಗದಿಗೊಳಿಸಿಕೊಳ್ಳುತ್ತದೆ. ಇದೆಲ್ಲಾ ನಿಸರ್ಗ ಪ್ರಕ್ರಿಯೆ. ಆದರೆ ಈ ಪ್ರಕ್ರಿಯೆಯೊಂದಿಗೆ ಅದು ಮೇಲಕ್ಕೆ ಹೋದಂತೆಲ್ಲಾ ಅಲ್ಲಿ ಬಿಸಿತನ ಕಡಿಮೆಯಾಗುತ್ತಾ ಹೋಗುತ್ತದಲ್ಲ ಆಗ ಒಂದು ನಿಗದಿತ ಹಂತದಲ್ಲಿ ಬಿಸಿ ಪೂರ್ತಿಯಾಗಿ ಕಡಿಮೆಯಾಗುತ್ತಾ ತನ್ನಲ್ಲಿ ನಿಗದಿತ ಸಾಮಥ್ರ್ಯದ ನೀರಾವಿಯನ್ನು ಹಿಡಿದುಕೊಳ್ಳುವ ಸಾಮಥ್ರ್ಯ ಕಳೆದುಕೊಳ್ಳುತ್ತದೆ. ಇದನ್ನೇ ಸ್ಯಾಚುರೇಟೆಡ್ ಏರ್ ಅಥವಾ ತಂಪಾದ ಗಾಳಿ ಎನ್ನುತ್ತಾರೆ. ಹಾಗೆ ತಣ್ಣಗಾದ ಗಾಳಿ ತನ್ನೊಡಲಲ್ಲಿ ನೀರಾವಿಯನ್ನು ಹೊತ್ತು ಆಗಸದಲ್ಲಿ ತೇಲುತ್ತಾ ನಿಂತು ಬೀಡುತ್ತದೆ ಮತ್ತು ಇದೇ ನಮ್ಮ ಕಾಳಿದಾಸ ಮೇಘ ಸಂದೇಶ ಕಳುಹಿಸಿದ ಮೋಡ ಎಂದು ಕರೆಯಲ್ಪಡುತ್ತವೆ.
ಇಂತಹ ಪ್ರಸಕ್ತ ಮತ್ತು ಅಂದಾಜಿನ ಸ್ಥಿತಿಯನ್ನು ಉಪಯೋಗಿಸಿಕೊಂಡು, ಇಂತಹ ಮೋಡಗಳನ್ನು ತಮ್ಮದೇ ಲೆಕ್ಕಾಚಾರದಲ್ಲಿ ಪತ್ತೆ ಹಚ್ಚಿ (ಇಲ್ಲಿರಬಹುದು ಅಲ್ಲಿರಬಹುದು ಎಂಬ ಕಂತೆ ಲೆಕ್ಕದಲ್ಲಿ), ಹಾಗೆ ಸಾಂದ್ರಗೊಂಡು ನಿಂತ ಮೋಡದ ಒಡಲಲ್ಲಿ ಮೈನಸ್ 35 ರ ಆಸುಪಾಸಿನಷ್ಟು ತಂಪಾದ ಹನಿಗಳು ಬೀಡುಬಿಟ್ಟಿರುತ್ತವಲ್ಲ ಅದನ್ನು ಸೆಳೆಯಲು ಹೂಡುವ ತಂತ್ರಜ್ಞಾನವೇ ಮೋಡ ಬಿತ್ತನೆ.
ಇಲ್ಲಿ ಎಲ್ಲಾ ಹನಿಗಳೂ ನೀರಾಗಿ ಸುರಿಯುತ್ತವೆ ಎಂದೇನಿಲ್ಲ. ಕಾರಣ ಈ ಭಾಷ್ಫೀಕರಣದ ಪ್ರಕ್ರಿಯೆಯಲ್ಲಿ ಕ್ರಮೇಣ ಮೈನಸ್ ಟೆಂಪರೇಚರ್‍ನತ್ತ ಹೊರಳುವ ಹನಿಗಳು ಕೆಲವು ಮಾತ್ರ ಘನೀಕೃತಗೊಳುತ್ತವೆ. ಉಳಿದವು ಗಟ್ಟಿ ನೀರಿನ ಹನಿಗಳಾಗೇ ತೇಲುತ್ತಿರುತ್ತವೆ. ಅಷ್ಟು ಎತ್ತರದಲ್ಲಿ ನೀರಿನ ಹಿಮಗಟ್ಟುವಿಕೆಯ ಕ್ಷಮತೆಯಲ್ಲಿ ವ್ಯತ್ಯಾಸವಾಗುವುದರಿಂದ ನೀರು ಹನಿಯಾಗೇ ತೇಲುವ ಅವಕಾಶ ಇದ್ದೇ ಇರುತ್ತದೆ. ಹೀಗೆ ತೇಲುತ್ತಾ ಒಂದಕ್ಕೊಂದು ತಾಗುತ್ತಿದ್ದಂತೆ ಅಕ್ಕ ಪಕ್ಕದ ಹನಿಗಳೊಂದಿಗೆ ಸೇರುತ್ತಾ ಸಾಂದ್ರಗೊಳ್ಳುತ್ತಾ ಹೋಗುತ್ತದೆ. ಹೀಗೆ ಕ್ರಮೇಣ ಚಿಕ್ಕ ಚಿಕ್ಕ ಸಾಂದ್ರೀಕೃತ ಹನಿಗಳೂ ಕೂಡಾ ದೊಡ್ಡದಾಗಿ ತೂಕವನ್ನು  ಪಡೆಯಲಾರಂಭಿಸುತ್ತವೆ.
ಹೀಗೆ ಹೆಚ್ಚುವ ತೂಕದ ಪರಿಣಾಮ ಒಮ್ಮೆ ಈ ಘನೀಕೃತ ನೀರು ಭಾರ ಹೆಚ್ಚಾಗಿ ಕುಸಿಯಲಾರಂಭಿಸಿದರೆ ಅದೆ ಮೋಡದ ಮೂಲಕ ಹರಿದು ಮಳೆಯಾಗುತ್ತದೆ. ಇದು ಸಹಜ ಪ್ರಕ್ರಿಯೆ. ಮೋಡದಿಂದ ಮಳೆಯಾಗುವ ನೈಸರ್ಗಿಕ ಈ ವಿಧಾನವನ್ನು ಕೃತವಾಗಿ ಸೃಷ್ಠಿಸುವುದು ನಮ್ಮಿಂದ ಸಾಧ್ಯವೇ ಇಲ್ಲ. ಆದರೆ ಈ ಮೋಡಗಳಲ್ಲಿನ ಹನಿಗಳು ಪ್ರಮಾಣ ಹೆಚ್ಚಾಗುವವರೆಗೂ ಅದು ಮಳೆಯಾಗಿ ಸುರಿಯುವುದಿಲ್ಲ. ಇಲ್ಲ ಹಾಗೆ ಸೇರುವ ಹನಿಗಳ ತೂಕ ಹೆಚ್ಚಾಗಿ ಅದರ ಭಾರಕ್ಕೆ ಅದು ಕುಸಿಯಬೇಕು. ಇವೆರಡೂ ಆಗುವವರೆಗೂ ಮೋಡದ ಒಡಲು ಮಳೆಯಾಗಿ ಧರೆಗೆ ಇಳಿಯಲಾರದು.
ಈ ಸಾಂಧರ್ಬಿಕ ವ್ಯತ್ಯಾಸ ಮತ್ತು ಸಹಜ ಪ್ರಕ್ರಿಯೆಯ ಮಧ್ಯದಲ್ಲಿ ಮಾನವ ಕೈ ತೂರಿಸಲು ಪ್ರಯತ್ನಿಸುತ್ತಿರುವುದೇ ಮೋಡ ಬಿತ್ತನೆ ಅಥವಾ ಮಳೆ ತರಿಸುವ ಪ್ರಕ್ರಿಯೆಯಾಗಿ ಚಾಲ್ತಿಗೆ ಬರುತ್ತಿದೆ. ಅಂದರೆ ಮಳೆಯಾಗಿ ಸುರಿಯಲು ಹನಿಗಳು ಹೆಚ್ಚಾಗಬೇಕು. ಅದನ್ನಂತೂ ನಾವಾಗಿ ಕೃತಕವಾಗಿ ಸೃಷ್ಟಿಸಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಅದು ತೇಲುತ್ತಲೇ ಇರಬೇಕು. ಆದರೆ ದೊಡ್ಡದಾದ ಹನಿಗಳನ್ನು ಇನ್ನಷ್ಟು ದೊಡ್ಡದಾಗಿಸುವ ಮೂಲಕ ಭಾರ ಹೆಚ್ಚಿಸಿ ಕೆಳಕ್ಕೆ ಕೆಡುವ ಬಹುದಲ್ಲ. ಅದನ್ನೆ ಮಾಡ ಹೊರಟಿರುವುದು ನಾವೀಗ.
ಹೀಗೆ ಘನೀಕೃತ ಹನಿಗಳಿಗೆ ಕೃತಕವಾಗಿ ಭಾರ ಹೆಚ್ಚಿಸಲು ಸಿಲ್ವರ್(ಬೆಳ್ಳಿ)ಯ ಅಯೋಡೈಡ್‍ನ್ನು ಚಿಮುಕಿಸಿ ಅಥವಾ ಮೋಡಗಳ ಮೇಲೆ ಕಾರ್ಬನ್ ಚೂರುಗಳನ್ನು ಹರಿಸುವುದರ ಮೂಲಕ ಮೋಡದ ಓರಿಜಿನಾಲಿಟಿಯನ್ನು ಹಾಳು ಮಾಡಿ ಕೃತಕವಾಗಿ ಅದಕ್ಕೆ ತೂಕವೇರಿಸಿ, ಹಾಗೆ ಏರಿಸುವಾಗ ಅದು ಚದುರುತ್ತಿದ್ದರೆ ಅದಕ್ಕೆ ವೇಗ ಪೂರಕವನ್ನು ಪೂರೈಸುತ್ತಾ, ಕ್ರಮೇಣ ಭಾರ ತಾಳಲಾರದೆ ತೇಲಲಾಗದೆ ಕೊನೆಗೂ ಅದನ್ನು ನೆಲಕ್ಕುರುಳಿಸುವ ಪ್ರಕ್ರಿಯೆಯೇ ಮೋಡ ಬಿತ್ತನೆ. (ಪೆÇೀಟ್ಯಾಶಿಯಂ ಅಯೋಡೈಡ್, ಡ್ರೈ ಐಸ್‍ಗಳನ್ನೂ ಬಳಸುವ ಅವಕಾಶ ಇದಕ್ಕಿದೆ)
ನಮ್ಮಲ್ಲಿ ನೋಡಿ ಸಿದ್ಧವಾಗಿ ಕೆಗೆಟುಕದ ಸೂತ್ರಕ್ಕೆ ತನ್ನದಿಷ್ಟು ಎಂದು ತಂತ್ರಜ್ಞಾನ ಸೇರಿಸ ಹೊರಟಿದ್ದಾರೆ. ಡ್ರೊನ್ ಮೂಲಕ ಮೋಡದೊಳಕ್ಕೆ ತೂರಿಹೋಗುವ ಕ್ಷಿಪಣಿಗಳು ಅಲ್ಲಿ ಸಿಡಿಸು, ಉರಿದು ಹೋಗಿ ತನ್ನೊಡಲಲ್ಲಿರುವ ಸಿಲ್ವರ್ ಅಯೋಡೈಡ್‍ನ್ನು ಸಿಂಪಡಿಸುತ್ತವಂತೆ. ಇದರಿಂದ ಕೇವಲ ಇನ್ನೂರು ಮೀ. ಎತ್ತರದ ಮೋಡಗಳನ್ನೂ ನಾವು ಕೆಡುವಿ ಮಳೆ ಬರಿಸುತ್ತೇವೆ ಎಂದು ಹೇಳಿಕೆ ಹೊರಡಿಸುತ್ತಿದ್ದಾರಲ್ಲ, ರಾಮಾ ರಾಮ ನೆನಪಿರಲಿ. ತೀರ ಕೆಳಗೆ ಭೂಪದರದ ಸನಿಹವೆ ನೆಲೆ ನಿಲ್ಲುವ ಮೋಡಗಳಲ್ಲಿ ಬಲವೇ ಇರುವುದಿಲ್ಲ. ಅಸಲಿಗೆ ಹಾಗೆ ಹಾರಾಡುವ ಹೆಚ್ಚಿನ ಮೋಡಗಳು ಮಳೆ ತರಿಸಲು ಲಾಯಕ್ಕಾಗಿಯೂ ಇರುವುದಿಲ್ಲ.
ಇದಕ್ಕಾಗಿ ಹವಾಮಾನ ಇಲಾಖೆ ಮಳೆಯ ಮೋಡವನ್ನು ಗುರುತಿಸುತ್ತದೆಯಾದರೆ, ಅದಕ್ಕೆ ಡ್ರೊಣ್ ನುಗ್ಗಿಸಿ ಅಥವಾ ಇನ್ನಾವುದಾದರೂ ವ್ಯವಸ್ಥೆಯ ಮೂಲಕ ಹತ್ತು ಕೀ.ಮೀ. ವ್ಯಾಪ್ತಿಯಲ್ಲಿ ಮಳೆಯಾಗುತ್ತದೆ ಎನ್ನುತ್ತಿದ್ದಾರಲ್ಲ ಭಾರತದಲ್ಲಿ ಒಂದಿನವಾದರೂ ಹವಾಮಾನ ಇಲಾಖೆ ಕೊಟ್ಟ ಸಮಯಕ್ಕೆ ಮಳೆ ಸಾಯಲಿ, ಗಾಳಿನಾದರೂ ಬಿಸಿದ್ದಿದೆಯಾ..? ಇದಕ್ಕಿಂತ ದೊಡ್ಡ ಕುಚ್ಯೋದ್ಯವೆಂದರೆ ಇದರಿಂದ ವಾತಾವರಣ ಮತ್ತು ಪರಿಸರದ ಮೇಲೆ ಯಾವುದೇ ಅಡ್ಡ ಪರಿಣಾಮ ಇಲ್ಲ ಎನ್ನುವ ಹೇಳಿಕೆ ಮೊದಲೇ ಹೊರಡಿಸುತ್ತಿರುವುದು.
ಆದರೆ ನಿಜವಾಗಿಯೂ ಏನು ಪರಿಣಾಮವಾಗಲಿದೆ ಎನ್ನುವುದು ಪ್ರಾಯೋಗಿಕ ಉಪಯೋಗದ ನಂತರವೇ ಗೊತ್ತಾಗಬೇಕಿದೆ. ಜೊತೆಗೆ ಅಂತರಾಷ್ಟ್ರ್ರೀಯವಾಗಿ ಆಸ್ಟ್ರೇಲಿಯಾ ಸಿಲ್ವರ್ ಅಯೋಡೈಡ್‍ನ್ನು ನಿಷೇಧಿಸಿದ ಪಟ್ಟಿಗೆ ಸೇರಿಸಿ ಯಾವುದೋ ಕಾಲವಾಗಿದೆ. ಅವರ ಸಮೀಕ್ಷೆ ಪ್ರಕಾರ ಅದು ನೇರವಾಗಿ ಪರಿಣಾಮ ತತಕ್ಷಣಾಕ್ಕೆ ಬೆರದಿದ್ದರೂ ದಿನವಹಿ ವಾತಾವಣದಲ್ಲಿದ್ದು ಉಸಿರಾಟದ ಮೂಲಕ ದೇಹ ಪ್ರವೇಶಿಸಿ ಮಾಡುವ ಹಾನಿಯ ನಿಖರತೆ ಲೆಕ್ಕದ ಹೊರಗೆ ಎನ್ನುತ್ತಾರೆ.
ಆದರೆ ನಾವು ಮಾತ್ರ ಯಾವ ಲೆಕ್ಕಾಚಾರವನ್ನೂ ಇರಿಸಿಕೊಳ್ಳದೆ ವಿಮಾನ ಹಾರಿಸಿ ನೂರಾರು ಕೋಟಿ ರೂಪಾಯಿ ತೊಡಗಿಸಿ ಮೋಡ ಚರಿಸುವುದರಲ್ಲಿ ತೊಡಗಿಸುತ್ತಿದ್ದೇವೆ. ಅದೇ ಹಣವನ್ನು ಇಂಗುಗುಂಡಿ ಮತ್ತು ಕಾಡು ಬೆಳೆಸುವ, ನೀರಿನ ಒಳ ಹರಿವನ್ನು ಹೆಚ್ಚಿಸುವ ಸಾಂಪ್ರದಾಯಿಕ ವಿಧಾನಕ್ಕೆ ಪ್ರಾಮಾಣಿಕವಾಗಿ ಬಳಸಿದ್ದೇ ಆದರೆ ರಾಜ್ಯದಲ್ಲಿ ಐದೇ ವರ್ಷದಲ್ಲಿ ಎಂತಹ ಬರಗಾಲವನ್ನೂ ಎದುರಿಸುವ ಶಕ್ತಿ ಬಂದೀತು. ಆದರೆ ಆ ಪ್ರಯತ್ನ ನಮ್ಮಲ್ಲಿ ಮಾಡುವವರಾರು...? ಪಕ್ಕಾ ಮಾಹಿತಿಯೇ ಇಲ್ಲದೆ ಪಾತಾಳಕ್ಕೆ ಬೋರ್ ಹೊಡೆಯುತ್ತೇನೆ ಎಂದು ನಿಂತಿರುವಾಗ, ಮೋಡದ ಮೇಲೆ ಒಮ್ಮೆ ತಿರುಗಾಡಿಸಿ ವಿಮಾನ ಹಾರಿಸುವದು ಯಾವ ಲೆಕ್ಕ ಅಲ್ವಾ..? ಉತರಿಸುವ š

Tuesday, August 22, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ದೈವಸೈನಿಕರ ಧರ್ಮ ಯಾವುದು...?

ಇವತ್ತು ಪ್ರತಿ ನ್ಯೂಸ್‍ಚಾನೆಲ್ಲಿನ ಕೆಳಗೊಂದು ಸ್ಕ್ರೋಲಿಂಗು ಬರುತ್ತಿರುತ್ತದೆ. ವಾರದಲ್ಲಿ ಕನಿಷ್ಠ ಎರಡ್ಮೂರು ಇಂತಹ ಸುದ್ದಿ ಪ್ರತಿ ಚಾನೆಲ್‍ನಲ್ಲಿ ಬಿತ್ತರಗೊಳ್ಳುತ್ತಲೇ ಇರುತ್ತದೆ. ಬಂಡಿಪೆÇೀರಾದಲ್ಲಿ ಮೂವರು ಉಗ್ರರ ಎನ್ ಕೌಂಟರ್, ಪಂಪೆÇೀರಾದಲ್ಲಿ ಇಬ್ಬರ ಹತ್ಯೆ, ಪಾಲ್ಗಿಯಲ್ಲಿ ಮೂವರು ನುಸುಳುಕೋರರ ಹತ್ಯೆ,  ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶ, ಸರಹದ್ದಿನ ಎನ್‍ಕೌಂಟರ್‍ನಲ್ಲಿ ಇಬ್ಬರನ್ನು ಹೊಡೆದುರುಳಿಸಿದ ಸೇನೆ ಹೀಗೆ ಸಾಲು ಸಾಲಾಗಿ ಉಗ್ರರನ್ನು ಬೇಟೆಯಾಡುತ್ತಲೇ ಇದ್ದು ಹೆಚ್ಚು ಕಮ್ಮಿ ನಿರಂತರವಾಗಿದೆ ಮತ್ತು ಅದನ್ನು ನೋಡುತ್ತಿದ್ದರೆ ನಮಗೂ ಇವತ್ತು ಕೇವಲ ಲೆಕ್ಕ ಏಣಿಸುವುದೇ ಕೆಲಸವಾಗಿದೆಯೇ ವಿನ: ಉಗ್ರರು ಹತ್ಯೆಯಾದುದನ್ನು ನಾವು ಆ ಮೊದಲಿನ ಎಕ್ಸೈಟ್‍ಮೆಂಟಿನಿಂದ ಅನುಭವಿಸುತ್ತಿಲ್ಲ. ಹೊಡೆದು ಕೆಡುಹುವ ಈ ಕೃತ್ಯ ನಮಗೆ ಸಹಜ ಎನ್ನಿಸುವಷ್ಟು ಸರದಿಯ ಮೇಲೆ ಭಯೋತ್ಪಾದಕರನ್ನು ನಮ್ಮ ಸೈನಿಕರು ಕೊಂದುಕೆಡುವುತ್ತಿದ್ದಾರೆ. ತೀರ ಸೈನ್ಯದಲ್ಲೀಗ ಇಂತಹ ಬೇವಾರಸುದಾರರ ಹೆಣಹೂಳುವುದನ್ನು ಮಾಡಲೇ ನಿರಂತರ ಲೇಬರ್ ಕೆಲಸಕ್ಕೆ ಹತ್ತಾರು ಕೂಲಿಯಾಳುಗಳು ಖಾಯಂ ಆಗಿಹೋಗಿದಾರೆ.
ಇದು ನಿರಂತರವಾಗುತ್ತಿದ್ದಂತೆ, ಗಡಿಯಾಚೆಗೆ ಕಾಯ್ದು ಕೂತ ಉಗ್ರರಿಗೆ ಒಳಗೊಳಗೇ ನಡುಕ ಆರಂಭವಾಗತೊಡಗುತ್ತದೆ. ಕ್ರಮೇಣ ಅಲ್ಲಿ ಭಯ ಅಡರತೊಡಗುತ್ತಿದ್ದರೆ, ಆಚೆಯಿಂದ ಕದನ ವಿರಾಮ ಉಲ್ಲಂಘಿಸಿ ಪಾಕಿಗಳು ಗುರಿನೋಡಿ ನಮ್ಮ ಒಬ್ಬಿಬ್ಬರು ಸೈನಿಕರನ್ನು ಗುಂಡಿಟ್ಟು ಕೊಂದು ಒಳನುಸುಳುವ ಉಗ್ರರಿಗೆ ಧೈರ್ಯ ತುಂಬುತ್ತಾರೆ. ನಾವೂ ಜತೆಗಿದ್ದೇವೆ ಅವರನ್ನೂ ಹೋಡೆಯುತ್ತಿದ್ದೇವೆ ಎಂಬ ಭಾವ ಮೂಡಿಸಲು. ಒಮ್ಮೆ ಈ ಚಕ್ರ ಗಮನಿಸಿದರೆ ನಿರಂತರ ಹೀಗೆ ಕಳೆದ ವರ್ಷಾವಧಿಯುದ್ಧಕ್ಕೂ ನಡೆದದ್ದು ನಮ್ಮ ಗಮನಕ್ಕೆ ಬರುತ್ತದೆ. ಹತ್ತಿಪ್ಪತ್ತು ಉಗ್ರರಿಗೆ ಒಂದಿಬ್ಬರು ನಮ್ಮ ಸೈನಿಕರೂ ಬಲಿ. ಕಾರಣ ಆ ಕಡೆಯ ಪಾಕಿ ಸೈನಿಕರ ಬೆಂಬಲದೊಂದಿಗೆ ಇತ್ತ ಬರುವ ಉಗ್ರರಿಗೆ ನಿರಂತರವಾಗಿ ನಡೆಯುವ ತಮ್ಮವರ ಬಲಿಯ ಬದಲಿಗೆ ಹಿಂದೂಸ್ತಾನಿಗಳನ್ನು ಹಣಿಯುವ ಜರೂರತ್ತು ಅರ್ಜೆಂಟಾಗಿರುತ್ತದೆ.
ಇದನ್ನು ಬರೆಯುವ ಹೊತ್ತಿಗೆ ದೂರದ ಪೇಶಾವರದಲ್ಲಿ ಮಸೀದಿಯ ಮೇಲೆ ದಾಳಿ ಮಾಡಿ ಒಂದಷ್ಟು ಮುಸ್ಲಿಮರ ಹೆಣ ಕೆಡುವಲಾಗಿದೆ, ಅದರ ಅಕ್ಕದಲ್ಲೇ ಪಾಕಿಸ್ತಾನದಲ್ಲೂ ದಾಳಿಗಳಾಗುತ್ತಿವೆ. ಅದರ ಹಿಂದೆ ಕಾಬೂಲ್‍ನಲ್ಲಿ ಒಂದೇ ಏಟಿಗೆ ಇಪ್ಪತ್ತೊಂಬತ್ತು ಜನ ನೆಗೆದು ಬಿದ್ದರು ಆತ್ಮಹತ್ಯಾ ದಾಳಿಗೆ. ಅದಕ್ಕೂ ಮೊದಲು ಕೆಲವೇ ತಿಂಗಳುಗಳ ಹಿಂದೆ ಮಕ್ಕಾ ಮದೀನಾದಲ್ಲೇ ಸೂಯಿಸೈಡ್ ಬಾಂಬರ್‍ನ್ನು ಅರೆಸ್ಟು ಮಾಡು ಘೋರ ಅನಾಹುತ ತಪ್ಪಿಸಿಕೊಂಡಿದೆ ಅರಬ್ ಜಗತ್ತು. ನಿನ್ನೆಯಷ್ಟೆ ಅಲ್‍ಖೈದಾ ಜೀಪು ನುಗ್ಗಿಸಿ ಕೇನ್ಯಾದಲ್ಲಿ ಐವರನ್ನು ರಸ್ತೆ ಮಧ್ಯೆ ಸ್ಪೋಟಿಸಿದೆ. ಒಟ್ಟಾರೆ ಇಲ್ಲೆಲ್ಲಾ ನಡೆದದ್ದು ಬರೀ ಇತರೆ ಧರ್ಮೀಯರ ಮೇಲಿನ ದಾಳಿಯಲ್ಲ. ಸ್ವಂತ: ಮುಸಲ್ಮಾನರ ಮೇಲೂ ಧರ್ಮಯುದ್ಧ ಆರಂಭವಾಗಿಬಿಟ್ಟಿದೆ. ತೀರ ಸೌದಿಯಂತಹ ನಾಡಿನ ಹೊರತಾಗಿ ಅದರಲ್ಲೂ ಅದರ ಒಡೆಯರು ಅಪರ ಕರ್ಮಠ ಕಾನೂನಿನ ಪಾಲಕರಾಗಿರುವುದರಿಂದ ಅಲ್ಲೆಲ್ಲ ಹಾವಳಿ ಇಲ್ಲವಾಗಿದೆ ಅಷ್ಟೆ. (ಅಷ್ಟಕ್ಕೂ ಅದೂ ಅರಬ್ ಜಗತ್ತೇ ಅದರೂ ಅದಕ್ಕೆ ಮಾತ್ರ ಯಾಕೆ ಸೌದಿ ಎಂಬ ಪ್ರಿಫಿಕ್ಸು, ಆ ಕತೆ ಮತ್ತೊಮ್ಮೆಗಿರಲಿ)
ಆದರೆ ಕಾಶ್ಮೀರದಲ್ಲಿ ಮಾನವ ಬಾಂಬು ಅಥವಾ ಆತ್ಮಹತ್ಯಾ ದಾಳಿ ಎಸಗುವುದು ಅಮೇರಿಕೆಯಲ್ಲಿ ವಿಮಾನ ನುಗ್ಗಿಸುವುದು, ಪ್ರಾನ್ಸ್ ಬೇಕರಿಯ ಮೇಲೆ ಗುಂಡಿನ ಸುರಿಮಳೆ, ಲಂಡನ್‍ನಲ್ಲಿ ದಾಳಿ ಇಂಥವೆಲ್ಲಾ ಉಗ್ರರ ಕೃತ್ಯಕ್ಕೆ ಅವರದ್ದೇ ಜಗತ್ತು ಒಪ್ಪದ ಸಮರ್ಥನೆ ಇದೆ. ಅವರಲ್ಲಿ ನಾವು ಕಾಫೀರರನ್ನು ಕೊಲ್ಲುತ್ತಿದ್ದೇವೆ ಎನ್ನುವುದೇ ಅವರ ಘೋಷ ವಾಖ್ಯೆ ಮತ್ತು ಮೇಲ್ಕಾಣಿಸಿದ ದೇಶಗಳಾವುವೂ ಮುಸ್ಲಿಮರದ್ದಲ್ಲ. ಇದೇನಿದು ತೀರ ಮುಸ್ಲಿಮರನ್ನೆ ಹೊಡೆದು ಉರುಳಿಸುತ್ತಿದ್ದಾರಲ್ಲ. ಪಾಕಿಸ್ತಾನದಲ್ಲಿ ಬಸ್ಸು ದಾಳಿಗೀಡಾದಾಗ ಹುಳುಗಳಂತೆ ಸತ್ತು ಹೋದವರೂ ಪಾಕಿ ಮುಸ್ಲಿಮರೇ. ಮೊನ್ನೆ ಅಪಘಾನಿಸ್ತಾನದಲ್ಲಾದಾಗಲೂ ನೆಗೆದು ಬಿದ್ದದ್ದು ಸಾಲುಸಾಲು ಮಸ್ಲಿಮರ ಹೆಣಗಳೇ. ಇದೇನಾಗಿದೆ. ಎಲ್ಲಾ ಬಿಟ್ಟು ತಮ್ಮವರನ್ನೇ ಇದ್ಯಾಕೆ ಕೊಲ್ಲುತ್ತಿದ್ದಾರೆ..?
ಅಚ್ಚರಿ ಮತ್ತು ಅಪಸವ್ಯವೆಂದರೆ ಅವರವರಲ್ಲೇ ಧರ್ಮಯೋಧನಾಗುವುದಕ್ಕೂ, ಜೆಹಾದ್‍ನ ಅವಗಾಹನೆ ಅರ್ಥ ಮಾಡಿಕೊಳ್ಳುವುದಕ್ಕೂ ಮತ್ತು ಇತರರನ್ನು ಕೊಲ್ಲುವ ಮೊದಲು ಯಾರು ಏನು ಎಂದೆಲ್ಲಾ ಅರ್ಥ ಮಾಡಿಕೊಳ್ಳಲೇ ಹಲವು ವೈರುಧ್ಯಗಳಿವೆ ಮತ್ತು ಅವನು ಮುಸ್ಲಿಮನಾದರೂ ತನ್ನ ಪಂಗಡ ಮತ್ತು ವೈಚಾರಿಕವಾಗಿ ಬೇರೆಯವನಾದಲ್ಲಿ ಅವನನ್ನೂ ಕೊಂದುಬಿಡು ಎನ್ನುತ್ತಿದೆ ಪವಿತ್ರಗ್ರಂಥ ಎಂದು ಅದನ್ನು ತನಗೆ ತಿಳಿದಂತೆ ಅರ್ಥೈಸುವವನೊಬ್ಬ ಹೇಳಿಕೆ ಹೊರಡಿಸುತ್ತಾನೆ. ಅದೇ ಫತ್ವಾ... ಆದೇ ಜೆಹಾದ್.
ಅದಕ್ಕೆ ನಮ್ಮ ಅಕ್ಕಪಕ್ಕದವರನ್ನೂ ಕೊಲ್ಲುತ್ತಿದ್ದೇವೆ. ಧರ್ಮಬದ್ಧನಾಗದ ಯಾರೊಬ್ಬನನ್ನೂ ಕೊಂದುಬಿಡು ಎನ್ನುವುದೆ ಇಸ್ಲಾಂ ಅದೇ ಧರ್ಮ ಯುದ್ಧ ಎನ್ನುತ್ತದೆ ಅವನ ಜಗತ್ತು. (ಸ್ವತ: ಪಾಕಿಸ್ತಾನದ ಮುಷರಫ್‍ನ ಮೇಲೂ ಫತ್ವಾ ಹೊರಡಿಸಿದ ಕೀರ್ತಿ ಧರ್ಮಗುರುವೊಬ್ಬನಿಗೆ ಸಲ್ಲುತ್ತದೆ ಜೊತೆಗೆ ಅದೇ ಪಾಕಿಸ್ತಾನದ ಲಾಹೋರಿನ ಪಕ್ಕದ ರಾಜಿ ಪಂಚಾಯ್ತಿಯಲ್ಲಿ ರೇಪ್ ಮಾಡಿದವನ ತಂಗಿಯನ್ನು ರೇಪ್ ಆದಾಕೆಯ ಸಹೋದರ ರೇಪ್ ಮಾಡಲಿ ಎಂದು ತೀರ್ಪು ನೀಡಿದ್ದು ಪಾಕಿಸ್ತಾನ ಎಂಬ ದೇಶ.)ಹಾಗೆ ಕೊಲ್ಲಲು ಕಾಫೀರರು ಕೈಗೆ ಸಿಕ್ಕದಿದ್ದಾಗ ನಮ್ಮ ಪಕ್ಕದವನಾದರೂ ಸರಿ, ಇನ್ನೊಂದು ದೇಶದವನಾದರೂ ಸರಿ ಒಟ್ಟಾರೆ ಕೊಂದುಬಿಡು ಎನ್ನುತ್ತಿದೆಯಲ್ಲ, ಅಷ್ಟೆ. ಹೀಗೆ ಅರ್ಥೈಸುವಿಕೆ ಮತ್ತು ಅರಿತುಕೊಳ್ಳುವಿಕೆಯಲ್ಲಿನ ಗೊಂದಲ ಹಾಗು ಕೊಲ್ಲಲೆಂದೇ ಸಾಕಿಕೊಂಡವರನ್ನೀಗ ಕೊಲ್ಲುವ ಧಂದೆ ಬಿಡಿ ಎಂದರೆ ಬಿಡಲೊಲ್ಲದಾದಾಗ ಇನ್ಯಾರನ್ನಾದರೂ ತೋರಿಸಿ, ಹೋಗು ಅಲ್ಲಿ ಹೊಡಿಬಡಿ ಮಾಡು ಎನ್ನುವುದಕ್ಕೆ ಪಾತಕಿ ಪಾಕಿಸ್ತಾನಕ್ಕೆ ಒಂದು ಜಾಗ ಮತ್ತು ಕಾರಣ ಬೇಕಿತ್ತು.
ಹಾಗಾಗಿ ಅದು ತಾನು ಸಾಕಿಕೊಂಡಿದ್ದ ಇಂತಹ ಉಗ್ರರನ್ನು ಕಾಶ್ಮೀರದ ಕಡೆಗೆ ಕೈ ತೋರಿಸಿ ಮುಗುಮ್ಮಾಗಿ ಬಿಟ್ಟಿತು. ಯಾವ ದೇಶಾಂತರಗಳಿಂದ ಹೊರಟು ಇಲ್ಲಿ ಗುಂಡು ತಿಂದು ಸಾಯಲು ಬರುತ್ತಿದ್ದಾರೋ ಅವರೆಲ್ಲಾ ಇವತ್ತು ಮಾತ್ರವಲ್ಲ ಯಾವತ್ತೂ ಭಾರತ ಎನ್ನುವ ದೇಶ ಯಾವ ದಿಕ್ಕಿಗಿದೆ, ಕಾಶ್ಮೀರದಲ್ಲಿ ನಾವ್ಯಾಕೆ ಹೋಡೆದಾಡಿ ಸಾಯಬೇಕು, ಹಾಗೆ ಸತ್ತರೆ ನನಗೂ ನನ್ನ ದೇಶಕ್ಕೇನಾದರೂ ಉಪಯೋಗ ಇದೆಯಾ ಇಂಥಾ ಯಾವುದೇ ಮೂಲಭೂತ ಪ್ರಶ್ನೆಗಳಿಲ್ಲದೆ, ಬರಿ ಈಡು ಹೊಡೆಯಲು ಇಲ್ಲ ಹೊಡೆಸಿಕೊಂಡು ಸಾಯಲು ತಂತಮ್ಮ ಬಿಲಗಳಿಂದ ಎದ್ದು ಬಂದವರೆಂದರೆ ಹೀಗೆ ಬದುಕಿನ ಬಗ್ಗೆ ಯಾವ ಅವಗಾಹನೆಯೂ ಇಲ್ಲದೆ ಸಾಯಲೊಪ್ಪುವ ಅವರನ್ನು ಅದಿನ್ಯಾವ ರೀತಿ ಧರ್ಮದ ಅಫೀಮು ನಶೆಯಾಗಿಸಿದ್ದೀತು..?
ಕಾರಣ ಕಳೆದ ನಾಲ್ಕೈದು ದಶಕದಲ್ಲಿ ತನ್ನ ಇನ್ನೊಂದು ಗಡಿಯಲ್ಲಿ ಸಾಲುಸಾಲಾಗಿ ಸಂತ್ರಸ್ತರ ಶಿಬಿರ ತೆಗೆದು, ಅಲ್ಲಿ ಯಾವ ಭಾಗದ ಮುಸಲ್ಮಾನರು ಬಂದರೂ ಅವರಿಗೆ ಅನ್ನ, ನಿದ್ರೆ, ಜಾಗ ಕೊಟ್ಟು ಕೈಗೊಂದು ಬಂದೂಕು ಕೊಟ್ಟು ಹೋಗಿ ಅಲ್ಲಿ ಧರ್ಮಯುದ್ಧ ಮಾಡು ಎಂದು ಭಾವನಾತ್ಮಕವಾಗಿ ಬೆಳೆಸುತ್ತಿತ್ತಲ್ಲ ಅದೆಲ್ಲಾ ಒಂದಲ್ಲ ಒಂದು ದಿನ ಮುಗಿಯಲೇ ಬೇಕಿತ್ತು. ಲಕ್ಷಾಂತರ ಸ್ವಂತದ ದುಡ್ಡನ್ನೇ ಹಾಕಿ ಇಂತಹ ಶಿಬಿರಕ್ಕೆ ಫಂಡು ಒದಗಿಸುತ್ತಿದ್ದ ಒಸಾಮ ಬಿನ್ ಲಾಡೆನ್ ಎನ್ನುವ ಪರಮ ಕರ್ಮಠ ಮುಸ್ಲಿಂ ಭಯೋತ್ಪಾದಕನ್ನು ತನ್ನ ಮಿಲಿಟರಿ ನೆಲೆಯ ಪಕ್ಕದಲ್ಲೇ ಇಟ್ಟುಕೊಂಡು ಸಾಕುತ್ತಿದ್ದರೂ, ಅಮೇರಿಕೆಯ ಕಮಾಂಡೋ ಪಡೆಯಿಂದ ಉಳಿಸಿಕೊಳ್ಳಲಾಗದ ನಿರ್ಲಜ್ಜ ದೇಶ ಮರ್ಯಾದೆ ಕಳೆದುಕೊಂಡಿತಲ್ಲ ಅದೇ ದೇಶ ಈಗ ಶಿಬಿರದಲ್ಲಿದ್ದ ಸಾವಿರಾರು ಸಂತ್ರರ ರೂಪದ ಭಯೋತ್ಪಾದಕರಿಗೆ ಬರೀ ಅನ್ನ ನೀರು ಮಾತ್ರವಲ್ಲ ಬಡಿದಾಡಲು ಜಾಗವನ್ನೂ ಕೊಡಬೇಕಿತ್ತು. ಇಲ್ಲದಿದ್ದರೆ ಇದ್ದಲ್ಲೇ ಕಂಡುದ್ದಕ್ಕೆ ಕಾಣದ್ದಕ್ಕೆಲ್ಲಾ ಧರ್ಮಯುದ್ಧ ಮಾಡುತ್ತೇನೆನ್ನುವ ಅನಾಹುತಕಾರಿ ದೈವಸೈನಿಕರನ್ನು ಸುಧಾರಿವುದಾದರೂ ಹೇಗೆ...?ಅದು ಸೀದಾ ತನ್ನ ಬಲಕ್ಕೆ ಕೈ ತೋರಿಸಿ ಕೈತೊಳೆದುಕೊಂಡು ಬಿಟ್ಟಿತು. ಹಾಗೆ ಜಾಗತಿಕವಾಗಿ ಪರಿಚಯವೇ ಇಲ್ಲದ ನೆಲದ ಮೇಲೂ ಬಂದೂಕು ಊರಿ ಬಡಿದಾಡಲು ನಮ್ಮ ಸರಹದ್ದಿನಲ್ಲಿ ಉಗ್ರರು ಬಂದು ಬೀಡುಬಿಟ್ಟುಬಿಟ್ಟರು.
ಅಷ್ಟಕ್ಕೂ ಈ ಉಗ್ರರು ಹಾಗೆ ಎಲ್ಲೆಲ್ಲಿಂದಲೋ ಬಂದು ಪಾಕಿಗಳ ಆ ಭಾಗದಲ್ಲಿ ಆಶ್ರಯ ಮತ್ತು ತರಬೇತಿ ಪಡೆದಿದ್ದಾದರೂ ಯಾಕೆ ಅದರ ಹುಬ್ಬೇರಿಸುವ ಕತೆ ಮುಂದಿನ ವಾರಕ್ಕಿರಲಿ. ಆದರೆ ಹೀಗೆ ಯಾರದೋ ಕೈಗೆ ಸಿಕ್ಕಿ ಇಲ್ಲಿನ ನೆಲಕ್ಕೆ ದ್ರೋಹ ಬಗೆಯಲು ನಿಂತುಬಿಡುವ ದೇಶವಾಸಿಗಳಿಗೆ ಕನಿಕರ ತೋರುವುದಾದರೂ ಹೇಗೆ.? ಕಣಿವೆ ಖಾಲಿಯಾಗದೆ ಏನು ಮಾಡೀತು..?

Sunday, August 6, 2017

ಕಾಶ್ಮೀರವೆಂಬ ಖಾಲಿ ಕಣಿವೆ..7
ಕತ್ತಲಲ್ಲೇ ಆವರಿಸಿಕೊಂಡ ಈಜಿಪ್ಸಿಯನ್ ಚಳುವಳಿ.

ಇವತ್ತು ಯಾವುದೇ ಭಾರತೀಯ ಮುಸ್ಲಿಂನೊಬ್ಬನನ್ನು ನಿಲ್ಲಿಸಿ ಪ್ರಶ್ನಿಸಿ ನೋಡಿ, ಅವನಿಗೆ ನಮ್ಮನಿಮ್ಮ ಇನ್ನಿತರ ಜಗತ್ತಿನ ಗೊಡವೆಗಿಂತ ಅವನ ಕೆಲಸ, ಕೈತುಂಬ ಸಂಬಳ ಮತ್ತು ಒಂದಿಷ್ಟು ದಿವೀನಾದ ಭವಿಷ್ಯದ ಬೇಕಿದೆ. ಅದು ಸಾಧ್ಯವಾಗದಿರೋದಿಕ್ಕೆ ಕಾರಣ ಬಡತನ. ಸರಿಯಾಗಿ 90 ವರ್ಷದ ಹಿಂದೆ ಮೊದಲ ಬಾರಿಗೆ ಬ್ರದರ್‍ಹುಡ್ ಎಂಬ ಅನಾಹುತಕಾರಿ ಯೋಜನೆಯನ್ನು ಹರಿಬಿಟ್ಟು ಜಗತ್ತಿನ ಮುಸ್ಲಿಂರೆಲ್ಲರನ್ನು ಅದರಡಿಗೆ ತಂದು, ಧರ್ಮಯುದ್ಧಕ್ಕೆ ಎಬ್ಬಿಸಿ ನಿಲ್ಲಿಸುತ್ತೇನೆಂದು ಹೊರಟನಲ್ಲ ಅವನ ಮನದಲ್ಲಿ ಇದ್ದುದೂ ಅದೇ ಬಡತನ.
ಜಗತ್ತಿನ ಅತಿ ಹೆಚ್ಚು ಮುಸ್ಲಿಮರು ಬಡವರೇ ಮತ್ತು ಬಡತನ ಏನನ್ನಾದರೂ ಮಾಡಿಸುತ್ತದೆ ಕೊನೆಗೆ ಯಾವ ಮುಲಾಜೂ ಇಲ್ಲದೆ ದೇಶದ್ರೋಹವನ್ನೂ ಕೂಡಾ. ಈ ದೂರದೃಷ್ಟಿ ಅವನನ್ನು ಇಂತಹದ್ದೊಂದು ಅನಾಹುತಕಾರಿ ಯೋಜನೆಗೆ ಚಾಲ್ತಿ ನೀಡಿಸಿತ್ತು ಅದಕ್ಕೆ 1928ರಲ್ಲಿ ನಾಂದಿ ಹಾಡಿದವನು ಈಜಿಪ್ತಿನ ಸಾತ್ವಿಕ ಮುಸಲ್ಮಾನ. ಅಸಲಿಗೆ ಅವನಿಗೆ ಅತೀವ ಶ್ರೀಮಂತಿಕೆಯಲ್ಲಿ ಬದುಕುತ್ತಿದ್ದ ಈಜಿಪ್ತನ ದೊರೆಗಳ ವಿರುದ್ಧ ಸೆಣಸಲು ಮಜೂಬೂತಾದ, ಕರಾರುವಕ್ಕಾದ ಪ್ರಬಲ ಆಯುಧ ಬೇಕಿತ್ತು. ಅದಕ್ಕೇ ಅವನಿಟ್ಟ ಹೆಸರೇ.
ಬ್ರದರ್ ಹುಡ್ ಚಳುವಳಿ.
ಅವನೇ ಮಹಮದ್ ಘಜಲಿ.
ಮೂಲತ: ದಕ್ಷಿಣ ಈಜಿಪ್ತನ ಸಣ್ಣ ಗಲ್ಲಿಯಲ್ಲಿ ಚೆಂದದ ಸಂಸಾರದ ಗೂಡು ಕಟ್ಟಿಕೊಳ್ಳುವ ತವಕದಲ್ಲಿದ್ದ ಶುದ್ಧಾನುಶುದ್ಧ ಮುಸ್ಲಿಂ ಆತ. ಆದರೆ ದೊರೆಗಳ ಪಾಶ್ಚಿಮಾತ್ಯತನ, ಸ್ಥಳೀಯರ ಮೇಲಿನ ದೌರ್ಜನ್ಯ ಅವನನ್ನು ಎದ್ದು ನಿಲ್ಲಿಸಿದಾಗ ಇಂತಹದ್ದೊಂದು ಶಬ್ದ ಸಂಪೂರ್ಣ ಜಗತ್ತಿನ್ನೇ ಅಡರಿಕೊಂಡೀತು ಎಂದವನಿಗೂ ಆವತ್ತು ಗೊತ್ತಿರಲಿಕ್ಕಿಲ್ಲ. ಆದರೆ ಘೋಷಿಸಿಬಿಟ್ಟಿದ್ದ. ಜಗತ್ತಿನ ಮುಸ್ಲಿಮರೆಲ್ಲರೂ ಸಹೋದರರೇ. ಎಲ್ಲೆಲ್ಲೂ ಇರುವ ಪ್ರತಿಯೊಬ್ಬ ಸಹೋದರನನ್ನು ರಕ್ಷಿಸಬೇಕಿದೆ. ಅದಕ್ಕಾಗಿ ಜಗತ್ತಿನ ಶ್ರೀಮಂತ ಸಹೋದರರು, ಎಲ್ಲೆಲ್ಲೊ ಇರುವ ಬಡಸಹೋದರನಿಗಾಗಿ ಹಣ, ಸವಲತ್ತು ಕೊಡಬೇಕು. ಅದನ್ನು ಬಳಸಿ ಧರ್ಮರಕ್ಷಣೆಗಾಗಿ ಹೋರಾಡಬೇಕು. ಅಗತ್ಯ ಬಿದ್ದರೆ ಧರ್ಮಯುದ್ಧಕ್ಕೂ ತಯಾರಾಗಬೇಕು. ಸುಮ್ಮನೆ ಹೋರಾಟ ಎಂದರೆ ಎಂಥಾ ಕರ್ಮಠನೂ ಎದ್ದು ಬಂದುಬಿಡಲಾರ. ಮೊದಲೇ ಬಡತನ ಬೇರೆ. ಅದಕ್ಕಾಗಿ ಹೊರದೇಶದ ಸಹೋದರರ ಹಣ ಬಳಸಿ ಮೊದಲು ಊಟ, ಬಟ್ಟೆ, ಶಿಕ್ಷಣ ಎಲ್ಲಾ ಕೊಟ್ಟು ಇದೆಲ್ಲವೂ ಕೇವಲ ಜೇಹಾದ್‍ನಿಂದ ಸಾಧ್ಯ ಎಂದು ಬಿಂಬಿಸಿದ. ಜೊತೆಗೆ ಒಂದು ವರ್ಷ ಕಳೆಯುವಷ್ಟಲ್ಲಿ ಜಗತಿನ ಅಷ್ಟೂ ಮುಸ್ಲಿಂ ನೆಲಗಳಿಗೆ ಬ್ರದರ್‍ಹುಡ್ಡಿನ ತಿರುಳನ್ನು ಮುಟ್ಟಿಸುವಲ್ಲಿ ಅವನು ಸಫಲನಾಗಿದ್ದ.
ಇಸ್ಲಾಂ ಎಂಬುವುದು ಕೇವಲ ಧರ್ಮವಲ್ಲ. ಜಗತ್ತಿನ ಯಾರೊಬ್ಬರಿಗೂ ಅಂತಿಮ ದಾರಿ ತೋರಿಸುವುದೇ  ಇಸ್ಲಾಂ. ಅದಕ್ಕೆಲ್ಲಾ ಕುರಾನ್ ಗ್ರಂಥವೇ ದಿವ್ಯ ಶಬ್ದಕೋಶ. ಅದರ ನಂತರ ಪ್ರವಾದಿಗಳ ಮಾತೇ ಇನ್ನೂ ಅಂತಿಮ ಇದು ಕೇವಲ ಇಲ್ಲಿನ ಹೋರಾಟಕ್ಕಲ್ಲ ಮುಂದೊಂದು ದಿನ ಜಗತ್ತಿನ ಪೂರ್ತಿ ಭೂ ಮಂಡಲವನ್ನು ಕೇವಲ ಅಲ್ಲಾನ ಮೇಲೆ ನಂಬಿಕೆ ಇರುವವರಿಂದ ಮಾತ್ರ ತುಂಬಲಿದೆ. ಕಾಫೀರರಿಗೆ ಇಲ್ಲಿ ಜಾಗವಿರುವುದಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಷರಿಯಾ ಕಾನೂನು ಹೇಳುತ್ತಿದೆ ಅದೇ ಅಂತಿಮ ಕಾನೂನು. ಇನ್ನೇನಿದ್ದರೂ ಇವತ್ತಲ್ಲ ನಾಳೆ ಈ ಭೂಮಿಯ ಮೇಲೆ ಇರಬೇಕಾದವರು ಕೇವಲ ನಿಷ್ಠಾವಂತ ಮುಸ್ಲಿಮರು ಮಾತ್ರ. ನಾವು ನೀವೆಲ್ಲಾ ಅದಕ್ಕಾಗಿ ಹೊರಡಬೇಕಿದೆ..."ಎಂದು ಬಿಟ್ಟ.
ಅಬ್ಬಾ ಎಂದು ಬೆರಳಿಟ್ಟುಕೊಂಡು ನಿಬ್ಬೆರಗಾಗಿ ನೋಡಿತ್ತು ಮುಸ್ಲಿಂ ಜಗತ್ತು. ಎಲ್ಲಿದ್ದರೂ ಯಾರಿದ್ದರೂ ಯಾವ ಹಂತದಲ್ಲಿದ್ದರೂ ಮುಸ್ಲಿಮರೆಲ್ಲರೂ ಸಹೋದರರು ಎನ್ನುತ್ತಿದ್ದಾನಲ್ಲಾ...? ಎಂಥಾ ರೋಂಚಕಾರಿ ಮಾತು. ಮೈಕೊಡವಿ ಎದ್ದು ಬಿಂತಿತ್ತು ಬಡಪಾಯಿ ಮುಸಲ್ಮಾನರ ಸಮೂಹ. ಅಂತಹದ್ದೊಂದು ದೊಡ್ಡ ಸಮೂಹಕ್ಕೆ ನಂತರದಲ್ಲಿ ಇನ್ನೂ ಉಗ್ರರೂಪ ಕೊಟ್ಟವನು ಕುತ್ಬುದಿನ್ ಸಯ್ಯದ್. ಸುಮಾರು ಐವತ್ತರ ದಶಕದಲ್ಲಿ ಇದೇ ಬ್ರದರ್‍ಹುಡ್ ಚಳುವಳಿಯನ್ನು ಹೊಸರೂಪಕ್ಕೆ, ಆಕರ್ಷಕ ಹೆಸರಿಗೆ ತಿರುಗಿಸಿದ.
ಅದೇ ಪಾನ್ ಇಸ್ಲಾಮಿಸಮ್ಮು.
ಇವನ ಪ್ರಕಾರ ಮುಸ್ಲಿಂ ಅಂದರೆ ಮುಸ್ಲಿಂ ಅಷ್ಟೆ. ಜಗತ್ತಿನ ಎಲ್ಲಾ ಧರ್ಮೀಯರಲ್ಲಿ ಮುಸ್ಲಿಂ ಮಾತ್ರ ಶ್ರೇಷ್ಠ. ಅವನಿಗೆ ಜಗತ್ತಿನ ಅಯಾ ನೆಲದ ಕಾನೂನು ಕಟ್ಟಳೆಗಳಿಗಿಂತಲೂ ಅವನು ನಂಬುವ ಧರ್ಮ ಅಂದರೆ ಇಸ್ಲಾಂ ಮತ್ತು ಅದರ ತಿರುಳೇ ಮುಖ್ಯ. ಉಳಿದೆಲ್ಲವೂ ಗೌಣ. ಜಗತ್ತಿನ ಉಮ್ಮಾಗಳೆಲ್ಲ ಒಂದೇ ಧರ್ಮದಡಿಯಲ್ಲಿ, ಧರ್ಮಗ್ರಂಥದ ಅಡಿಯಲ್ಲಿ ಇರಬೇಕು. ಅವನು ಮುಸಲ್ಮಾನ್ ಎಂಬುದಷ್ಟೆ ಸಾಕು. ಅದೇ ಪಾನ್ ಇಸ್ಲಾಮಿಸಮ್ಮು ಎಂದು ಬಿಟ್ಟ,
ಅಲ್ಲಿಗೆ ಜಾಗತಿಕವಾಗಿ ಸಂಪ್ರದಾಯಸ್ಥ, ಅತೀ ಮಡಿವಂತಿಕೆ, ತೀವ್ರ ಕರ್ಮಠತನ, ಅಪಾರ ನೇಮ ನಿಷ್ಠೆ ಅಂತೆಲ್ಲಾ ಅವರವರಲ್ಲೇ ಮೇಲೂ ಕೀಳು ಎಂದೆಲ್ಲಾ ಮಾಡಿಕೊಂಡಿದ್ದ ಮುಸ್ಲಿಂ ಸಮಾಜ ಮತ್ತು ದೇಶಗಳೂ ಇದ್ದುವಲ್ಲ.  ಅದೆಲ್ಲವನ್ನೂ ಒಂದೇ ಒಂದು ಶಬ್ದ ಹೊಡೆದು ಹಾಕಿತ್ತು ಮತ್ತು ಹೆಚ್ಚಿನ ಜನಕ್ಕೆ ಇದು ಹೌದೆನ್ನಿಸಿತ್ತು. ಕಾರಣ ಸಮಾನತೆ ಎನ್ನುವ ಅಂಶ ಅತಿಹೆಚ್ಚು ಬಡಮುಸಲ್ಮಾನನನ್ನು ಸೆಳೆದು ನಿಲ್ಲಿಸಿತ್ತು. ಹೈರಾಣಾಗಿದ್ದ ಅವನಿಗೆ ಇಂತಹ ಮಾತಿನಿಂದ ಜೀವನ ಸ್ವಲ್ಪವಾದರೂ ಸುಧಾರಿಸಬಹುದೆನ್ನುವ ಸಹಜ ಆಸೆ ಪಾನ್ ಇಸ್ಲಾಮಿಸಮ್ಮಿಗೆ ಬೀಳಿಸಿತ್ತು. ಹೊಸ ಥಿಯರಿ ನಿರೀಕ್ಷಿಸದ ವೇಗದಲ್ಲಿ ಕಾವು ಪಡೆದಿತ್ತು. ಕಾರಣ ಜಗತ್ತಿನಲ್ಲಿ ಶೇ. 75 ಕ್ಕೂ ಹೆಚ್ಚು ಮುಸಲ್ಮಾನರು ಬಡವರೇ ಆಗಿದ್ದರು.
ಅಲ್ಲಿಂದ ಸುಮಾರು 80ರ ದಶಕವರೆಗೆ ಬೆಳೆದ ಸಿದ್ಧಾಂತಕ್ಕೆ "ಮಂಜತ್ ಆಲ್ ಜಿಹಾದ್" ಎನ್ನುವ ಉಗ್ರ ಸಂಘಟನೆ ಅಧಿಕೃತವಾಗಿ ರಾಜಕೀಯ ರೂಪ ನೀಡಿತ್ತು. ಸ್ವತ: ಈಜಿಪ್ತನ ಅಧ್ಯಕ್ಷ ಸಾದತ್‍ಅನ್ವರ್‍ನನ್ನು ಬಹಿರಂಗವಾಗಿ ಈ ಗುಂಪು ತರಿದು ಹಾಕಿ ಇಸ್ಲಾಂ ಸಮಾನತೆಯ ಬಾವುಟ ಹಾರಿಸಿತ್ತು. ಒಂದು ಬಹಿರಂಗ ರಾಜಕೀಯ ಕೊಲೆಯ ಮೂಲಕ ಎಲ್ಲದಕ್ಕೂ ಇಸ್ಲಾಂ ಪರಿಹಾರ ತೋರಿಸಿತ್ತು. ಅಲ್ಲಿಂದ ಹೊರಟ ಪಾನ್‍ಇಸ್ಲಾಮಿಸಮ್ಮಿನ ಬಾವುಟ ಜಾಗತಿಕವಾಗಿ ಹಾರಾಡುತ್ತಾ ಅಪಘಾನಿಸ್ತಾನ ಮೂಲಕ ಪಾಕಿಸ್ತಾನದ ಗಡಿಯಿಂದ ಹಾಯ್ದು ಹೆಸರಿನ ಅಗತ್ಯವೇ ಇಲ್ಲದೇ ತಣ್ಣಗೆ ಕಾಶ್ಮೀರ ಹೃದಯದೊಳಗೆ ಕಾಲೂರಿ ನಿಂತುಬಿಟ್ಟಿತ್ತು. ಇಷ್ಟಾಗುವ ಹೊತ್ತಿಗೆ ಭಾರತದಲ್ಲಿ ತೊಂಭತ್ತರ ದಶಕ ಮುಗಿದು ಹೊಸ ಶತಮಾನದ ಆರಂಭವಾಗಿತ್ತು. ಶ್ರೀನಗರಕ್ಕೆ ಬೆಂಕಿ ಬಿದ್ದಿತ್ತು. ಅಕ್ಷರಶ: ಮೊದಲೆರಡು ವರ್ಷ ಲಾಲ್‍ಚೌಕನಿಂದ ಹಿಡಿದು ಕೊಟ್ಟ ಕೊನೆಯ ಹಳ್ಳಿಯಾದ ಮಹೌರ್ರವರೆಗೂ ಇನ್ನಿಲ್ಲದಂತೆ ಉಗ್ರರ ಉಪಟಳಕ್ಕೆ ಕಣಿವೆ ತತ್ತರಿಸುತ್ತಿದ್ದರೆ, ಸರಕಾರಕ್ಕೆ ಹೇಗೆ ಅದನ್ನು ತಹಬಂದಿಗೆ ತರುವುದೋ ಗೊತ್ತಾಗದೆ ಹೋಗಿತ್ತು. ಹಾಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಅಲ್ಲಿ ಘೋಷಿಸಿದ್ದು ಶಸ್ತ್ರಾಸ್ತ್ರ ಪಡೆಗಳ ವಿಶೇಷ ಪರಮಾಧಿಕಾರ ಕಾಯಿದೆ. ಸೈನ್ಯ ಸಾಲುಸಾಲಾಗಿ ಫೈರಿಂಗ್ ಮಾಡುತ್ತಿದ್ದರೆ ಸಾವಿರಾರು ಜನ ಹುಳುಗಳಂತೆ ಸತ್ತು ಹೋಗಿದ್ದರು. ಕಣಿವೆ ಮೊದಲ ಬಾರಿ ಹಿಡತಕ್ಕೆ ಬಂದಿತ್ತು.
ಇದಾದ ಮರುವರ್ಷವೇ ನಾನು ಶ್ರೀನಗರಕ್ಕೆ ಕಾಲಿಟ್ಟಿದ್ದೆ. ಅಷ್ಟೊತ್ತಿಗಾಗಲೇ ತಮ್ಮ ಈ ನೆಲ ಭಾರತ ಎನ್ನುವ ಕಾಫೀರರ ದೇಶ ಒತ್ತಾಯದಿಂದ ಹಿಡಿದಿಟ್ಟುಕೊಂಡು ಪಾಪ ಕಾರ್ಯಮಾಡುತ್ತಿದೆ. ಈ ಮೂರ್ತಿ ಪೂಜಕರ ಕೈಯಿಂದ ಬಿಡಿಸಬೇಕು. ನಮ್ಮ ಸಹೋದರರು ಜಗತ್ತಿನಾದ್ಯಂತ ಹೋರಾಡುತ್ತಿದ್ದಾರೆ ನಾವೂ ಕೂಡಾ ಜೇಹಾದ್ ಆರಂಭಿಸಬೇಕು. ಇಲ್ಲ ಕನಿಷ್ಠ ಆ ಧರ್ಮಯೋಧನಿಗೆ ಬೆಂಬಲ ನೀಡಬೇಕು ಎಂದು ಒಳಗೊಳಗೆ ಕಣಿವೆಯ ಮೂಲಭೂತವಾದಿ ಕಾಶ್ಮೀರಿ ಮುಸಲ್ಮಾನ ನಿರ್ಧರಿಸಿಬಿಡತೊಡಗಿದ್ದ. ಕಾರಣ ಕಣಿವೆಯನ್ನು ಕಿತ್ತು ತಿನ್ನುತ್ತಿದ್ದ ಬಡತನ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕಾಶ್ಮೀರ ಬೆಳೆಯಲು ಬಿಡದಂತೆ ಪಕ್ಕದ ಪರಮ ಪಾತಕಿ ಪಾಕಿಸ್ತಾನ ಕಣಿವೆಯಲ್ಲಿ ಉದ್ವಿಗ್ನತೆ ಮೂಡಿಸುವಲ್ಲಿ ಸಫಲವಾಗುತ್ತಿದ್ದುದು ದೊಡ್ಡ ಮಟ್ಟದಲ್ಲಿ ಪಾನ್‍ಇಸ್ಮಾಮಿಸಮ್ಮು ಬರೀ ಮೆದುಳಲ್ಲಿ ಅಲ್ಲ ರಕ್ತದಲ್ಲೂ ಇಳಿದುಹೋಯಿತು.
ಜಗತ್ತಿನ ಯಾವುದೇ ಭಾಗದಲ್ಲಿ ಬರೀ ಇತರೆ ಅಲ್ಲ ಸ್ವತ: ಮುಸ್ಲಿಂ ಕೂಡಾ ಧಾರ್ಮಿಕವಾಗಿ ಸರಿ ಇಲ್ಲದಿದ್ದರೆ ಅವನೂ ಕಾಫೀರನೆ ಎನ್ನುವ ವಾದ ತೀರ ಬೇರುಮಟ್ಟಕ್ಕೆ ಇಳಿದುಬಿಟ್ಟಿತ್ತು. ಅದಕ್ಕಾಗಿ ಆಯುಧ ಎತ್ತುವ ವಿನ: ಬೇರೆ ಮಾರ್ಗವೇ ಇಲ್ಲ ಎಂಬುದನ್ನು ಅತ್ಯಂತ ವ್ಯವಸ್ಥಿತವಾಗಿ ಪಾಕಿಗಳು ಮದರಸಾಗಳ ಮೂಲಕ ಮೊಳಕೆಯಲ್ಲೇ ಹನಿಸಿಬಿಟ್ಟಿದ್ದರು. ಆ ಒಂದು ಸಮೂಹ ಇವತ್ತು ಬೆಳೆದು ನಿಂತಿದ್ದು ಅಕ್ಷರಶ: ಕಾಶ್ಮೀರ ಕಣಿವೆಯಲ್ಲಿ ಭಾರತ ವಿರೋಧಿ ಮತ್ತು ಬ್ರದರ್‍ಹುಡ್ ಸಂಗತಿಯನ್ನು ಶಬ್ದದ ಅಗತ್ಯವಿಲ್ಲದೆ ಅಚರಿಸಲು ಯುವ ಸಮೂಹ ಕಲ್ಲು ಕೈಗೆತ್ತಿಕೊಳ್ಳುತ್ತಿದೆ. ಆದರೆ ಈಗ ಮೊದಲಿನ ಬಿರುಸಿಗೂ, ಅದಕ್ಕೆ ಪ್ರತ್ಯುತ್ತರ ಕೊಡುವ ಸೈನ್ಯದ ಯೋಜನೆಗಳಿಗೂ ಭಾರಿ ವ್ಯತ್ಯಾಸವಿದೆ. ಹಾಗಾಗಿ ದಿನಕ್ಕಿಷ್ಟು ಜನ ಗುಂಡಿಗೆ ಸಿಕ್ಕಿ ಹತರಾಗುವುದರ ವಿನ: ಇನ್ನಾವುದೇ ಉತ್ಪನ್ನವಾಗುತ್ತಿಲ್ಲ.
ಕಾಶ್ಮೀರ ಕಣಿವೆ ಕ್ರಮೇಣ ಖಾಲಿ ಆಗದೆ ಏನು ಮಾಡೀ

Saturday, August 5, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ಪಾತಕಿಯೊಬ್ಬ ಕೊನೆಯಾಗುವುದೇ ಹೀಗೆ...

ಅವನು ಲಷ್ಕರ ಸಂಘಟನೆ ಸೇರಿದಾಗ 17 ವರ್ಷ. ತೀರಿಹೋದಾಗ 27 ವರ್ಷ ಅಲ್ಲಿಗೆ ಬದುಕಿದ್ದೆ ಬರೋಬ್ಬರಿ ತೀರ ಅರೆವಯಸ್ಸು. ಅದರಲ್ಲೂ ಇದ್ದಷ್ಟು ದಿನವೂ ಕದ್ದು ಬದುಕುವ ಜೀವನವೇ ನಡೆಸುತ್ತಿದ್ದ ಪಾತಕಿಯೊಬ್ಬನ ಅಂತ್ಯ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇರಲಿಲ್ಲ. ಅದರಲ್ಲೂ ಮೂವತ್ತು ಲಕ್ಷದಷ್ಟು ದೊಡ್ಡ ಮೊತ್ತದ ಬಹುಮಾನ ಎಂಥದ್ದೇ ಮನುಷ್ಯನ ನಿಯತ್ತನ್ನು ಹಾಳು ಮಾಡುತ್ತದೆ. ಮುಸ್ಲಿಂನಾದರೇನು ಮನುಶ್ಯನೇ ಅಲ್ಲವೇ. ಇದು ಗೊತ್ತಿದ್ದೂ ಪುಲ್ವಾಮ ಪಕ್ಕದ ಹಳ್ಳಿ ಹರ್ಕಿಪೆÇರಾಗೆ ಆ ಪಾತಕಿ ಕಾಲಿಕ್ಕಿ ತಪ್ಪು ಮಾಡಿಬಿಟ್ಟಿದ್ದ. ಅಷ್ಟಕ್ಕೂ ಆ ಹಳ್ಳಿ ಅವನ ಪ್ರೇಯಸಿಯ ಊರಾಗಿದ್ದು ಭೇಟಿಯಾಗಲು ಬಂದಿದ್ದ. ಹೆಂಡತಿಯಾಗಿದ್ದ ರುಕ್ಸಾನ್ ದಾರ್ ಸಿಕ್ಕಿದಳೋ ಇಲ್ಲವೋ ಗೊತ್ತಿಲ್ಲ ಅದರೆ ಕಾಶ್ಮೀರ ಪೆÇೀಲಿಸರ ಪಾಲಿಗೆ ಮಾತ್ರ ಅವನು ಪ್ರೈಜ್ ಕ್ಯಾಚ್ ಆಗಿದ್ದ.
ಅವನನ್ನು ಅಬು ದುಜಾನ್ ಎಂದು ಗುರುತಿಸಲಾಗಿತ್ತು.
ಆವತ್ತು ಜುಲೈ ಮೂವತ್ತು ಸಂಜೆ ಹೊತ್ತಿಗೆ ಸತತವಾಗಿ ಕಳೆದ ಐದು ವರ್ಷದಿಂದ ಕಾಯುತ್ತಿದ್ದ ಮಾಹಿತಿ ಪೆÇೀಲಿಸರಿಗೆ ಸಿಕ್ಕಿದೆ. ಇತ್ತಿಚಿನ ದಿನಗಳಲ್ಲಿ ಪೆÇೀಲಿಸರಿಗೆ ಸಿಗುವ ಟಿಪ್ಸುಗಳು ಮಿಸ್ಸಾಗುವ ಚಾನ್ಸೆ ಇಲ್ಲ ಅನ್ನಿಸುತ್ತಿದೆ. ಅದಕ್ಕೆ ಆರೆಂಟು ತಿಂಗಳಲ್ಲಿ ಹೊಡೆದುರುಳಿಸಿರುವ ನೂರಿಪ್ಪತ್ತೂ ಚಿಲ್ರೆ ಉಗ್ರರ ಹೆಣಗಳೆ ಸಾಕ್ಷಿ. ಬಹುಮಾನದ ಹಣ ಏಣಿಸುತ್ತಿರುವ ಅದೇ ಕಾಶ್ಮೀರಿಗಳು ಒಳಗೊಳಗೆ ಹುಳ್ಳಗೇ ನಗುತ್ತಿದ್ದಾರೆ. ಅಲ್ಲೆ ಡ್ರಾ ಅಲ್ಲೆ ಬಹುಮಾನ ಸೂಕ್ತವಾಗಿ ಕೆಲಸ ಮಾಡುತ್ತಿದೆ.  ಹಾಗಾಗಿ ಕಣಿವೆ ಸೇರಿ ಮನೆಗಳಲ್ಲಿ ಅಡಗುವ, ಆಶ್ರಯ ಪಡೆಯುವ ಒಬ್ಬೊಬ್ಬ ಉಗ್ರನ ಹೆಣ ಬಿದ್ದಾಗಲೂ ಖಬರಿಗಳ ಜೇಬು ಭರ್ತಿಯಾಗುತ್ತಿದೆ. ಸೈನಿಕರು ಗೆಲುವಿನ ನಗೆ ಬೀರುತ್ತಿದ್ದಾರೆ. ಇತ್ತ ಕಾಶ್ಮೀರದಲ್ಲಿ ಕುಳಿತೇ ದೇಶಾದ್ಯಂತದ ದ್ರೋಹಿಗಳ ಬೆಂಬಲ ಪಡೆಯುತ್ತಿರುವ ಪ್ರತ್ಯೇಕತಾವಾದಿಗಳ ಬುಡ ಅಲ್ಲಾಡತೊಡಗಿದೆ. 
ಆವತ್ತು ತನ್ನ ಸಹವರ್ತಿ ಅರಿಫ್ ದಾರ್‍ನೊಂದಿಗೆ ಹಾರ್ಕಿಪೆÇೀರಾದ ಮನೆಯಲ್ಲಿ ಆಶ್ರಯ ಪಡೆದಿರುವ ಮಾಹಿತಿ ಪಕ್ಕಾ ಆಗುತ್ತಿದ್ದಂತೆ ಸಿ.ಆರ್.ಪಿ,ಎ¥sóï 182 ಮತ್ತು 183 ಬೆಟಾಲಿಯನ್ ಜತೆ 55 ರಾಜಸ್ತಾನ್ ರೈಫಲ್ಸ್‍ನ ಸೈನಿಕರು ಮತ್ತು ಜೆ.ಕೆ. ಸ್ಪೆಷಲ್ ಫೆÇೀರ್ಸ್ ತುಕಡಿಗಳು ಪೂರ್ತಿ ಹಳ್ಳಿಯನ್ನು ಸುತ್ತುವರೆದು ಸುತ್ತಮುತ್ತಲಿನ ಜನರನ್ನು ಖಾಲಿ ಮಾಡಿಸಿ ಮನೆಯನ್ನು ಹೈಜಾಕ್ ಮಾಡಿಕೊಂಡಿದ್ದಾರೆ. ಅಲ್ಲಿವರೆಗೂ ಅದರ ವಾಸನೆಯೂ ತಗಲದಂತೆ ಸುತ್ತಮುತ್ತಲೆಲ್ಲ ಸೈಲಂಟಾಗಿ ಕೆಲಸ ಮಾಡಿದ ಸೈನಿಕರು ಊರಿನ ಒಳಗೂ ಯಾರೂ ಪ್ರವೇಶಿಸದಂತೆ ಬಂದೋಬಸ್ತು ಮಾಡಿಕೊಂಡಿದ್ದಾರೆ. ಎಂದಿನಂತೆ ಕಲ್ಲೆಸೆಯುವ ದೇಶ ದ್ರೋಹಿಗಳ ಪುಂಡರ ಪಡೆ ಕಲ್ಲಿಗೆ ಕೈ ಹಾಕುವ ಮೊದಲೇ ಅವರನ್ನೆಲ್ಲಾ ಎಬ್ಬಿಕೊಂಡು ಗಡಿಯಾಚೆಗೆ ನೂಕಿದ್ದಾರೆ ಸ್ಥಳೀಯ ಪೆÇೀಲಿಸರು. ಹಾಗಾಗಿ ಉಗ್ರನ ಅಡುಗುತಾಣದ ಸುತ್ತ ಕೋಟೆ ನಿರ್ಮಿಸಿದ್ದ ಫೆÇೀರ್ಸಿಗೆ ಯಾವ ಎರಾನೆ ಯೋಚನೆ ಇರಲಿಲ್ಲ. ಎಲ್ಲಾ ತಯಾರಿ ಮಾಡಿಕೊಂಡು ಅಬುದುಜಾನೆಯನ್ನು ಶರಣಾಗುವಂತೆ ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದಲ್ಲದೆ ಗಾಳಿಯಲ್ಲಿ ಕೆಲವು ಸುತ್ತು ಗುಂಡನ್ನೂ ಹಾರಿಸಿದ್ದಾರೆ. ಅಂತಿಮವಾಗಿ ಭಾರತದ ಅಧಿಕಾರಿ ಮನ್ಸೂರ್ ಅಲಿಖಾನ್, ಅವನ ಕೊನೆಯ ಕ್ಷಣದಲ್ಲಿ ಅವನಿಗೊಂದು ಫೆÇೀನೊಂದನ್ನು ಕೊಟ್ಟು
"...ಇಲ್ಲಿವರೆಗೆ ಆಗಿದ್ದಾಯಿತು ಇನ್ನು ಮುಂದಾದರೂ ನೆಮ್ಮದಿಯಿಂದ ಬದುಕಲು ಶರಣಾಗು. ನೀನು ಮತ್ತು ನಾನು ಇಷ್ಟಪಡುವ ಮತ್ತು ಆರಾಧಿಸುವ ಅಲ್ಲಾನೇ ಇಂತಹದನ್ನು ಮೆಚ್ಚುವುದಿಲ್ಲ. ಪ್ರವಾದಿಗಳ ಉದ್ದೇಶ ಮತ್ತು ಆಶಯವೇ ಬೇರೆಯಾಗಿದ್ದು ನೀನು ಮಾಡುತ್ತಿರುವುದು ಅಪ್ಪಟ ಧರ್ಮದ ವಿರುದ್ಧವೇ ಆದ್ದರಿಂದ ಬಂದು ಬಿಡು. ತೆರ ವಯಸ್ಸಿನಲಿರುವ ಹೆಂಡತಿ ಇಳಿ ವಯಸ್ಸಿನ ತಂದೆ ತಾಯಿಯರಿದ್ದಾರೆ ಅವರನ್ನೆಲ್ಲಾ ರಸ್ತೆಗಿಳಿಸ ಬೇಡ. ನಿನ್ನ ಬದುಕಿಗೆ ನಾನು ಸಹಾಯ ಮಾಡುತ್ತೇನೆ.." ಎಂಬಿತ್ಯಾದಿಯಾಗಿ ಅವನನ್ನು ಹಾದಿಗೆ ತರಲು ಪ್ರಯತ್ನಿಸಿದರಾದರೂ ಪಾತಕಿ ಅಬು ದುಜಾನೆ ಅವರನ್ನೇ,
"..ನೀನೆ ಒಳಕ್ಕೆ ಬಾ. ಇಲ್ಲೇ ಕೂತು ಮಾತಾಡೊಣ. ನಾನು ಜೇಹಾದ್ ಭಾಗವಾಗಿ ಸಾಯಲೆಂದು ಗಿಲ್ಗಿಟ್ ಬಿಟ್ಟಾಗಲೇ ಎಲ್ಲಾ ನಿರ್ಧರಿಸಿದ್ದೇನೆ. ಇವತ್ತು ನಾನು ಹೋಗುತ್ತೇನೆ...ಸ್ವಲ್ಪ ತಡವಾಗಿ ನೀವು ಎಲ್ಲಾ ಹೋಗಬೇಕಾದವರೇ.." ಎಂದೆಲ್ಲಾ ಮಾತಾಡಿದ್ದಾನೆ.
ಬೇರೆ ದಾರಿ ಇಲ್ಲದೆ ಮನೆಯ ನಿರೀಕ್ಷೆಯ ಪಾಯಿಂಟ್ ಮೇಲೆ ಮುಗಿಬಿದ್ದ ಸೈನಿಕರು ಶರಂಪರ ಕಾದಾಟ ಮಾಡಿದ್ದಾರೆ. ಅವನ ಬಲಗೈ ಬಂಟ ಅರಿಫ್ ದಾರ್ ಕೂಡಾ ಮೊದಲು ಕೂಗಾಡುತ್ತಾ ಬಿದ್ದ ಸದ್ದು ಕೆಳಿಸಿದೆ. ಆದರೆ ಕೆಲವೇ ಸಮಯದಲ್ಲಿ ಅವನ ಸದ್ದು ನಿಂತುಹೋಗಿ ಒಂದೇ ಬಂದೂಕು ಗುಂಡು ಹಾರಿಸುವುದು ಗೊತಾಗುತ್ತಿದ್ದಂತೆ ಉಳಿದದ್ದು ಅಬು ದುಜಾನೆ ಮಾತ್ರ ಎಂದು ಖಾತರಿಯಾಗಿದೆ. ಅದರೆ ಶರಣಾಗಲೊಲ್ಲದ ಅಬು ಎಲ್ಲಾ ಕಿಟಕಿಗಳಿಂದ ಸಂದುಗಳಿಂದ ನಿರಂತರ ಕಾದಾಟ ಜಾರಿ ಇಡಲು ಪ್ರಯತ್ನಿಸಿದ್ದಾನೆ. ಆದರೆ ಎಲ್ಲಾ ದಿಕ್ಕಿನಲ್ಲೊ ಯಮದೂತರಂತೆ ಕಾಲೂರಿ ನಿಂತು ಬಡಿದಾಡುವ ರೈಫಲ್ಸ್ ಪಡೆಯ ಸೈನಿಕರು ಪಕ್ಕದ ಕಟ್ಟಡದ ಮೇಲೇರಿ ಸಣ್ಣ ಸಂದಿನಿಂದ ಗುಂಡು ನುಗ್ಗಿಸಿ ಕೆಡುವಿಹಾಕಿದ್ದಾರೆ. ಪಾತಕಿಯೊಬ್ಬ ಉಸಿರೆಳೆದುಕೊಳ್ಳಲೂ ಆಗದೆ ಬಿದ್ದು ಸತ್ತುಹೋಗಿದ್ದಾನೆ. ಹಗ್ಗ ಕಟ್ಟಿ ದರದರನೆ ರಸ್ತೆಗೆ ಹೆಣ ಎಳೆತಂದಿದ್ದಾರೆ. ಕೊನೆಗೆ ಅವನ ಹೆಣ ದಫನು ಮಾಡುವವರೂ ಗತಿ ಇಲ್ಲದೆ ಆರ್ಮಿಯ ಜವಾನರೇ ಹೊತ್ತೊಯ್ದು ಬರಾಮುಲ್ಲಾ ಜಿಲೆಯ ಗಂಟಾಮುಲ್ಲಾ ಸ್ಮಶಾನದಲ್ಲಿ ಹೂತಾಕಿ ಬಂದಿದ್ದಾರೆ. ಯಾವ ದೇಶದ ಮಾತುಕೇಳಿ, ಯಾವ ಕಾಶ್ಮೀರದ ನೆಲದಲ್ಲಿ ಹಿಂಸೆಯನ್ನು ಪ್ರಚೋದಿಸಿ ಕಮಾಂಡರ್ ಎಂದು ಘೋಷಿಸಿಕೊಂಡು ಮೆರೆಯಲು ಯತ್ನಿಸಿದ್ದನೋ, ಅವನ ಕೊನೆಯ ಕಾಲದಲ್ಲಿ ಸರಿಯಾಗಿ ಕಟ್ಟಿಕೊಂಡ ಪ್ರೇಯಸಿಯ ಜತೆಗೆ ಒಂದು ವರ್ಷ ಕೂಡಾ ಸಂಸಾರ ಮಾಡಲಾಗದೆ ನೆಗೆದು ಬಿದ್ದಿದ್ದಾನೆ. ಪಾತಕಿಯೊಬ್ಬನ ಬದುಕು ಇದಕ್ಕಿಂತ ಭಿನ್ನವಾಗಿ ಕೊನೆಯಾಗಲು ಸಾಧ್ಯವೇ ಇರಲಿಲ್ಲ. ಇವನೊಬ್ಬನೆ ಅಲ್ಲ ಇದೇ ವರ್ಷದಲ್ಲೇ ಹತ್ಯೆ ಮಾಡಲ್ಪಟ್ಟ ಸಾಲು ಸಾಲು ನಾಯಕರೆನಿಸಿಕೊಂಡ ಉಗ್ರರ ಹೆಣಗಳಿಗೆ ಇದಕ್ಕಿಂತ ವಿಭಿನ್ನ ದಾರಿ ಯಾವುದೂ ಇರಲೇ ಇಲ್ಲ. ಆದರೂ ಪಾಕಿ ಪಾತಕಿಗಳಿಗೆ ಬುದ್ಧಿ ಬರುತ್ತಿಲ್ಲ.
ಅಬುದುಜಾನೆ ಎನ್ನುವ ಮೋಸ್ಟ್ ವಾಂಟೆಡ್ ಪಾತಕಿ ಕಣಿವೆಯ ಪೆÇೀಲಿಸರಿಗೆ ಕಳೆದ ಹಲವು ಎನ್‍ಕೌಂಟರ್ ಗಳಲ್ಲಿ ಮಿಸ್ಸಾಗಿದ್ದ ಬೇಟೆ. ಅದರಲ್ಲೂ ಪಾಕಿ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಪ್ರಾಂತ್ಯದ ಉಗ್ರ ದಕ್ಷಿಣ ಕಾಶ್ಮೀರದ ಕಮಾಂಡರ್ ಆಗಿ ಝಕೀರ್ ಮೂಸಾನ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದವನು. ಕಾಶ್ಮೀರದ ರ್ಯಾಲಿಗಳಿಗೆ ದೂರದಲ್ಲಿದ್ದೇ ಜನರನ್ನೂ ಗಲಾಟೆಗೆ ಹುಡುಗರನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವನು ಇದೇ ದುಜಾನ್. ಅಕ್ಟೋಬರ್ 29, 2015 ಸೇರಿದಂತೆ, ಪಾಂಪೆÇರ್ ಮತ್ತು ಉಧಮ್‍ಪುರ ಸೇನಾ ಗುಂಪಿನ ಮೇಲೆ ನಡೆದ ದಾಳಿಯಲ್ಲಿ ಸೈನಿಕರನ್ನು ಹತ್ಯೆ ಮಾಡಿದ ನೇರ ಆರೋಪ ಅವನ ಮೇಲಿತ್ತು. ಮಹಮ್ಮದ್ ನಾವೆದ್ ಎಂಬ ಉಗ್ರನೊಬ್ಬ ಸೈನಿಕರ ಕೈಗೆ ಜೀವಂತವಾಗಿ ಸಿಕ್ಕಿದಾಗ ಇದೆಲ್ಲಾ ಕತೆಗಳ ಹಿಂದಿನ ಮಾಸ್ಟರ್ ಮೈಂಡ್ ಎಂಬ ಮಾಹಿತಿಯನ್ನು ಅತ್ಯಂತ ಸ್ಪಷ್ಟವಾಗೇ ಕೊಟ್ಟಿದ್ದ. ಕಳೆದ ವರ್ಷ ಬುರಾನ್ ವಾನಿಯನ್ನು ಹತ್ಯೆ ಮಾಡಿದಾಗ ಅವನ ಶವ ಸಂಸ್ಕಾರಕ್ಕೆ ಆಗಮಿಸಿದ್ದು ನೂರಾರು ಯುವ ಕಾಶ್ಮೀರಿಗಳ ಆಕರ್ಷಣೆಯ ಕೇಂದ್ರವಾಗಿದ್ದ. ಅವನ ಒಂದು ಪ್ರಸ್ತುತತೆಯೇ ಮತ್ತೆ ಉಗ್ರರ ಕ್ಯಾಂಪನ್ನು ಸೇರುವ ಹುಡುಗರ ಸಂಖ್ಯೆಯನ್ನು ಹೆಚ್ಚು ಮಾಡಿತ್ತು.
ಕೊನೆಯ ಬಾರಿ ಸರಹದ್ದಿನಲ್ಲಿ ನಡೆದ ಚಕಮಕಿಯಲ್ಲಿ ಅವನನ್ನು ರಕ್ಷಿಸಿ ಉಳಿದವರು ಬಲಿಯಾಗಿದ್ದಾಗ ಎಡಗಾಲಿನ ಮಂಡಿಚಿಪ್ಪು ಹಾರಿ ಹೋಗಿತ್ತು. ಹಾಗಾಗಿ ಅವನಲ್ಲಿ ಇತ್ತಿಚೆಗೆ ಮೊದಲಿನ ಸಂಚಲನೆ ಉಳಿದಿರಲಿಲ್ಲವಾದರೂ ಸುಧಾರಿಸಿಕೊಂಡಿದ್ದ ದುಜಾನೆ, ಎಲ್ಲಾ ದುರುಳರು ಮಾಡುವ ತಪ್ಪಿನಂತೆ ತನ್ನ ಪ್ರೇಯಸಿ ಹೆಂಡತಿಯ ಭೇಟಿಗಾಗಿ ಭಾರತದ ಗಡಿಯೊಳಗೆ ಕಾಲಿಟ್ಟು ಸೀದಾ ಹರ್ಕಿಪೆÇೀರಾದ ಮಾವನ ಮನೆಯಲ್ಲಿ ಆಶ್ರಯ ಪಡೆದಿದ್ದ.
ಹಾರ್ಕಿಪೆÇೀರಾ, ಪುಲ್ವಾಮದ ಚಿಕ್ಕಹಳ್ಳಿ ಅದು. ಪುಲ್ವಾಮಾ ಮುಖ್ಯ ಕೇಂದ್ರದ ಸುತ್ತ ಮುತ್ತಲೆಲ್ಲಾ ಇರುವ ಊರೂಗಳೂ ಬರೀ ಪೆÇರಾಗಳೇ, ತೀರ ಕೇಂದ್ರದಲ್ಲಿ ಚಾಂಗ್‍ಧಾಮನ ಪಕ್ಕದಲ್ಲಿ ದರಿಪೆÇೀರಾ, ಮೇಲ್ಗಡೆ ಬಾರಾಪೆÇೀರಾ ಅದರೆ ಎಡಕ್ಕೆ ಖಾಪೆರ್Çೀರಾ, ಅದಕ್ಕೂ ಕೊಂಚ ಕೆಳಗೆ ಜರುಗಿದರೆ ಹರ್ದಾಪೆÇೀರಾ ಮತ್ತು ಶಾಂಘ್‍ಪೆÇೀರಾ, ತೀರ ಕೆಳಗೆ ಚಿತ್ರಿಪೆÇೀರಾ ಮತ್ತು ಎಡಭಾಗದ ದಂಡೆಯಲ್ಲಿ ಅಪ್ಪರ್ ಫಾರ್ಸಿಪೆÇೀರಾ ಮತ್ತು ಕೆಳಗಿನ ಬಡಾವಣೆ ಲೋವರ್‍ಫಾರ್ಸಿ ಪೆÇೀರಾ ಹೀಗೆ ಇದರ ಸುತ್ತಮುತಲ್ಲೆಲ್ಲಾ ಇರುವ ಊರುಗಳೆಂದರೆ ಪೆÇೀರಾಗಳ ಸಂತೇಯೆ. ಇಲ್ಲಿನ ಗದ್ದೆಗಳ ಮಧ್ಯೆ ಕಿಷ್ಕಿಂದೆಯಂತಹ ಹಳ್ಳಿ ಹಾರ್ಕಿಪೆÇೀರಾ ಊರಿನಲ್ಲೀಗ ಸ್ಮಶಾನ ಜತೆಗೆ ಗನ್ ಪೌಡರ್‍ಗಳ ಘಾಟು. ಕಣಿವೆ ಖಾಲಿಯಾಗದೆ ಏನು ಮಾಡೀತು.

Tuesday, July 25, 2017



ಈಗಿನ ವೃತ್ತಿ ಪ್ರವೃತ್ತಿ ಎರಡೂ ಉಗ್ರವಾದವೇ...

ಇವತ್ತು ಜಗತ್ತಿಗೇ ಗೊತ್ತಿದೆ ಕಾಶ್ಮೀರದಲ್ಲಿ ಅದರಲ್ಲೂ ಶ್ರೀನಗರದಲ್ಲಿ ಮತ್ತೊಮ್ಮೆ ಪ್ರವಾಸೋದ್ಯಮ ಮತ್ತು ಜನಜೀವನಮಟ್ಟ ಇನ್ನಿಲ್ಲದಂತೆ ಹಳ್ಳಹಿಡಿದು ಹೋಗಿದ್ದರೆ ಅದಕ್ಕೆ ಕಾರಣ ಒಂದೆಡೆಯಿಂದ ನುಗ್ಗುತ್ತಿರುವ ಭಯೋತ್ಪಾದಕರು ಮತ್ತು ಅವರನ್ನು ರಕ್ಷಿಸಲು ನಮ್ಮ ಸೈನಿಕರ ಮೇಲೆ ಕಲ್ಲೆಸೆಯುವ ದೇಶದ್ರೋಹಿ ಪುಂಡರುಗಳೇ ಹೊರತು ಇನ್ನೇನಲ್ಲ. ಸೈನಿಕರಂತೂ ಬಿಡಿ, ಯಾತ್ರಿಗಳೂ ಇವತ್ತು ಸೇಫಾಗಿಲ್ಲ. ಇಂತಹ ಮನಸ್ಥಿತಿಯ ಸಮಾಜವನ್ನು ನಂಬಿಕೊಂಡು ಅದಿನ್ಯಾವ ಪ್ರವಾಸಿಗ ಶ್ರೀನಗರಕ್ಕೆ ಕಾಲಿಟ್ಟಾನು..? ಹೀಗೆ ತೀರ ದುಸ್ಥಿತಿಗೆ ಇಳಿದಿದ್ದ ಕಾಶ್ಮೀರಕ್ಕೆ ಹೇಗಾದರೂ ಜನರನ್ನೂ ಪ್ರವಾಸಿಗರನ್ನೂ ಸೆಳೆಯಬೇಕು, ಅಲ್ಲೊಂದ್ನಾಲ್ಕು ಜನ ಭಾರತೀಯರು ಕಾಣಬೇಕು, ಅದನ್ನು ನೋಡಿಯಾದರೂ ಅಲ್ಲೊಬ್ಬ ಇಲ್ಲೊಬ್ಬ ವಿದೇಶಿ ಪ್ರವಾಸಿಗ ಕಾಲಿಡಲಿ ಎಂದು ಆಗಿನ ಕೇಂದ್ರಸರಕಾರ ತನ್ನ ನೌಕರರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ್ದು ತುಂಬ ಹಿಂದೇನಲ್ಲ 2002ರ ಆಸುಪಾಸಿಗೆ. ಅರ್ಹತೆಯಾಚೆಗೂ ವಿಸ್ತರಿಸಿ ರೈಲು, ವಿಮಾನ ಎಲ್ಲಾ ಕೊಟ್ಟಿತ್ತು. ಆದರೂ ಮೊದಲ ವರ್ಷಾವಧಿಯಲ್ಲಿ ಸಂದರ್ಶಿಸಿದ ಪ್ರವಾಸಿಗರ ಸಂಖ್ಯೆ ಸರಿಯಾಗಿ ಸಾವಿರವೂ ದಾಟಲಿಲ್ಲ ಅಂದರೆ ಪರಿಸ್ಥಿಯ ಗಂಭೀರತೆ ಅರಿವಾದೀತು. ಅದೀಗಲೂ ಚಾಲ್ತಿಯಲ್ಲಿದೆ. ಜನ ಮಾತ್ರ ಶ್ರೀನಗರ ಇಳಿದರೂ ದಾಲ್‍ಲೇಕ್ ಸುತ್ತಾಕಿ ಸೀದಾ ಲೇಹ್ ಲಢಾಕಿಗೆ ನಡೆದು ಬಿಡುತ್ತಾರೆ. ಕಾರಣ ಸಿಮ್‍ಕಾರ್ಡ್ ಕೆಲಸ ಮಾಡುವುದಿಲ್ಲ, ಪೆÇೀಸ್ಟ್‍ಪೇಡ್ ಮಾತ್ರ ನಡೆಯುತ್ತೆ ಅದರಲ್ಲೂ 2ಜಿ ಮಾತ್ರ, ನೋ ನೆಟ್‍ವರ್ಕ್, ಎಸ್ಟಿಡಿ ಇದ್ದರೂ ಗುರಾಯಿಸುವ ಮಾಲಿಕರು, ಲಭ್ಯವಾಗದ ಸಹಜ ಮಾರುಕಟ್ಟೆ ಶೈಲಿಯ ಜನಜೀವನ, ಇದೆಲ್ಲಕ್ಕೆ ಕಳಸ ಇಟ್ಟಂತೆ ಸಂಜೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಪೂರ್ತಿ ಕಾಶ್ಮೀರ ಸ್ಥಬ್ಧವಾಗಿಬಿಡುತ್ತದೆ. ಪಹರೆ ಎನ್ನುವ ಅನಿವಾರ್ಯದ ಬೇಲಿಯೊಳಗೆ ತಲೆ ಹುದುಗಿಸುತ್ತದೆ.

ಅವತ್ತು ನಿಗಿನಿಗಿ ಕೆಂಡದಂತಾಗಿದ್ದ ಶ್ರೀನಗರದೊಳಕ್ಕೆ ಕುಟುಂಬ ಸಮೇತ ನಾನು ಕಾಲಿಟ್ಟಾಗ, ಆಗಿನ ಕಾಲದಲ್ಲಿ ದಿನವೊಂದಕ್ಕೆ ನಾಲ್ಕು ಸಾವಿರ ರೂಪಾಯಿ ಬೆಲೆ ಬಾಳುತ್ತಿದ್ದ ಕೊಠಡಿಗೆ ಸಾವಿರದ ಕಿಮ್ಮತ್ತೂ ಉಳಿದಿರಲಿಲ್ಲ. ಅದಕ್ಕೂ ಅತಿಥಿಗಳು ಬಂದರೆ ಸಾಕೆಂದು ಬಂದವರೆದುರಿಗೆ ದೈನೇಸಿಯಾಗಿ ನಡುಬಾಗಿಸಿ ನಿಲ್ಲುವ ಮಧ್ಯವಯಸ್ಕರು ಕಣಿವೆಯ ಕೊನೆಯ ಭಾರತೀಯ ಪಳೆಯುಳಿಕೆಗಳಂತೆ ಕಾಣಿಸುತ್ತಿದ್ದರು. ನೆನಪಿರಲಿ ಅವನೂ ಶುದ್ಧಾನುಶುದ್ಧ ಮುಸ್ಲಿಂ. ಆದರೆ  ಕಲ್ಲು ಹೊಡೆಯುವ, "ನೀವು ಭಾರತೀಯರು" ಎನ್ನುವ ದರ್ದು ಅವನಲ್ಲಿ ನನಗ್ಯಾವತ್ತೂ ಕಂಡಿರಲಿಲ್ಲ. ಜಮ್ಮು ಕಾಶ್ಮೀರ ಟ್ಯಾಕ್ಸಿ ಅಸೊಸಿಯೇಶನ್ ಅಧ್ಯಕ್ಷ ತನ್ನ ಕಚೇರಿ ಬಿಟ್ಟು ಸುಮೊ ವಾಹನವನ್ನು ಪದೆಪದೇ ಒರೆಸುತ್ತಾ ಸ್ವತ: ಡ್ರೈವರಿಕೆಗೆ ಇಳಿದಿದ್ದ ಅಂದರೆ ಅಲ್ಲಿ ಆದಾಯ ಎನ್ನುವುದು ಯಾವ ಲೆವೆಲ್ಲಿಗೆ ಇಳಿದಿತ್ತು ಲೆಕ್ಕ ಹಾಕಿ. ಕಾರಣ ಸರಳವಿತ್ತು. 2002ರ ನವಂಬರ್ 13 ನಾನು ಸೋನ್‍ಮಾರ್ಗ್ ಹೋಗಿ ಸಂಜೆ ವಾಪಸ್ಸಾಗುವ ಹೊತ್ತಿಗೆ ಮುಖ್ಯಮಂತ್ರಿ ಮನೆಯೆದುರು ರಸ್ತೆಯಲ್ಲಿ ಅಂಬ್ಯೂಲೆನ್ಸು ಧಗಧಗನೆ ಉರಿಯುತ್ತಿತ್ತು. ಎಲ್ಲೆಲ್ಲೊ ಟೈಯರುಗಳನ್ನು ಇಟ್ಟು ಬೆಂಕಿ ಹಾಕಿದ್ದು ಅಡರುತ್ತಿದ್ದ ನವಂಬರ್‍ನ ಚಳಿಗೆ ಧುನಿ ಹಾಕಿದ್ದಾರಾ ಎನ್ನುವಂತಿದ್ದವು.

ಸಂಜೆಯ ಆರರ ಮೇಲೆ ರೂಮಿನಿಂದ ಹೊರಬಾರದಂತೆ ಪ್ರತಿ ಬ್ಯಾರಕ್ಕಿನ ಎದುರಿಗೆ ಸಿಗುವ ಸೈನಿಕ ಚೌಕಿಯ ಪೆÇೀಲಿಸರು ನನ್ನನ್ನು ಎಚ್ಚರಿಸಿ ಮುಂದಕ್ಕೆ ಬಿಡುತ್ತಿದ್ದರು. ಹೋಟೆಲಿನೊಳಗಿದ್ದ ರೆಸ್ಟೋರಾಂಟು ಬಾಗಿಲು ಹಾಕಿ ಯಾವುದೋ ಕಾಲವಾಗಿದ್ದರಿಂದ ಅವರದೇ ಮನೆಯಿಂದ ಪೂರ್ತಿ ಐದೂ ದಿನ ಅಡುಗೆ ಸರಬರಾಜು ಮಾಡಿದ್ದರು ನಮಗೆ. ಸರಿಯಾಗಿ ಕೂತು ಪರೋಟ ತಿಂದಿದ್ದೆಂದರೆ ಗುಲ್‍ಮಾರ್ಗನ ಒಳ ಊರೊಂದರಲ್ಲಿ. ಕಾರಣ ಅದು ತೀರ ಇಂಟಿರೀಯರು ಮತ್ತು ಅಲ್ಲಿಗೆ ಇಂತಹ ಯಾವುದೇ ಅಪಸವ್ಯಗಳು ತಲುಪುವುದೇ ಶಕ್ಯವಿರಲಿಲ್ಲ. ನಾವೆಲ್ಲಾ ಕೊಂಚ ನಿರಾಳವಾಗಿ ಉಸಿರಾಡಿದ್ದರೆ, ಆವತ್ತೇ ಕಾಶ್ಮೀರ ನನ್ನಲ್ಲಿ ಒಳಆಸಕ್ತಿಯೊಂದನ್ನು ಹುಟ್ಟಿಸಿತ್ತು. ಅಲ್ಲಿಂದಿಚೆಗೆ ಸುಮಾರು ಒಂದು ಡಜನ್ನಿಗೂ ಮಿಗಿಲು ಕಾಶ್ಮೀರಕ್ಕೆ ಭೇಟಿ ಇತ್ತಾಗಲೆಲ್ಲಾ ನಾನು ಹೊಸಹೊಸ ಆಯಾಮದ ಮತ್ತು ಹೊಸ ತಲೆಮಾರಿನಲ್ಲಾಗುತ್ತಿರುವ ಮಾನಸಿಕ ಬದಲಾವಣೆಗಳನ್ನು ಗುರುತಿಸಿದ್ದೇನೆ. ಅದರ ಪರಿಣಾಮ ಭೌಗೋಳಿಕವಾಗಿ ನಮ್ಮ ಕೈಲಿದ್ದರೂ ಜನ ಕೈತಪ್ಪುತ್ತಿದ್ದಾರೆ ಹಾಗಂತ ನಾವಂದಕೊಂಡಿದ್ದೇವೆ ಆದರೆ ಅವರನ್ನು ಅದರಲ್ಲೂ ಹೊಸ ಜನರೇಶನ್ ಹುಡುಗರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಗುತ್ತಿದೆ.

ಕಾರಣ ಪಾನ್ ಇಸ್ಲಾಮಿಸಂ ಅಥವಾ ಮುಸ್ಲಿಂ ಬ್ರದರ್‍ಹುಡ್

2002 ರಲ್ಲಿ ಉಗ್ರವಾದ ಮುಗಿಲು ಮಟ್ಟಿದ್ದಾಗಲೂ ಶ್ರೀನಗರದ ಲಲಿತ್‍ಮಹಲಿನಲ್ಲಿ ಉಳಿದುಕೊಂಡು ಗಂಟೆಗೊಮ್ಮೆ ಅಲ್ಲಿನ ಮುಖ್ಯ ರಸ್ತೆಯ ಸ್ಥಿತಿಗತಿ ಬದಲಾಗುತ್ತಿದ್ದುದಕ್ಕೆ ನಾನೇ ಸಾಕ್ಷಿ. ಆವತ್ತು ಮು.ಮ. ನಿವಾಸದಿಂದ ಕೂಗಳತೆಯ ದೂರದ ಹೋಟೆಲಿನ ಕಿಟಕಿಯಿಂದ ಕಾಣಿಸುತ್ತಿದ್ದ ಅಂಬ್ಯೂಲೆನ್ಸ್ ಹೊತ್ತಿ ಉರಿಯುತ್ತಿದ್ದುದು ನನ್ನ ಕಣ್ಣ ಮುಂದಿದೆ. ಕೊನೆಗೆ ಹೊರಡುವ ಮೊದಲು ನವಂಬರ್‍ನ ಮುಸ್ಲಿಂ ಹಬ್ಬದ ದಿನ ತಮ್ಮ ಮನೆಗೆ ಕರೆದೊಯ್ದಿದ್ದ ಆಗಿನ ಟ್ಯಾಕಿ ಮಾಲಿಕ ಸಂಘದ ಅಧ್ಯಕ್ಷ ಸ್ವತ: ಗಾಡಿ ಚಲಾಯಿಸುತ್ತಿದ್ದ. ಊರೆಲ್ಲಾ ಅವನಿಗೆ ಸಲಾಮು ಹೊಡೆಯುತ್ತಿದ್ದರೆ, ಅವನು ಮಾತ್ರ ನಾವು ಹೊರಡುವ ದಿನ ಮೈಯ್ಯೆಲ್ಲಾ ಹಿಡಿಯಾಗಿಸಿ ನಿಂತುಕೊಂಡು "ನಿಮಗೆ ನಿಜಕ್ಕೂ ನಮ್ಮ ಆತಿಥ್ಯ ಹಿಡಿಸಿದ್ದರೆ ನಿಮ್ ಸ್ನೇಹಿತರಿಗೆ ಹೇಳಿ, ಅತಿಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಇಲ್ಲಿರುವಷ್ಟೂ ದಿನವೂ ಜೀವ ಕೊಟ್ಟಾದರೂ ಕಾಯುತ್ತೇವೆ. ಅದರೆ ಪ್ರವಾಸಿಗರು ನಿಮ್ಮ ಕಡೆಯಿಂದ ಬಂದರೆ ನಾವೂ ಕೊಂಚ ಬದುಕುತ್ತೇವೆ. ಬರಲಿರುವ ನಮ್ಮ ಪೀಳಿಗೆಯ ಬದುಕಿನ ಪ್ರಶ್ನೆ ಇದು." ಎಂದವನ ಮಾತು, ಆತಿಥ್ಯ ಮತ್ತು ಕಾಳಜಿ ಜೊತೆಗೆ ಮನೆಯಲ್ಲಿ ಅವನ ಕುಟುಂಬದವರು ಮೈ ತುಂಬ ಸೆರಗು ಹೊದ್ದು ಭಯ್ಯಾ ಎಂದು ಮಾತಾಡಿಸಿ ಪ್ರೀತಿಯಿಂದ ಉಣ್ಣಲು ಬಡಿಸಿದ್ದು ಮರೆತರೆ ಕೃತಘ್ನನಾದೇನು. ಹೌದು. ನನಗೂ ಆಗ ಶ್ರೀನಗರ ಮೊದಲಿನಂತೆ ಮತ್ತೆ ನಳನಳಿಸಬೇಕು ಎನ್ನಿಸಿದ್ದು ಸುಳ್ಳಲ್ಲ. ಆವತ್ತು ಅವನ ಮಾತು, ನಡತೆ ಮೂಡಿಸಿದ್ದ ಭರವಸೆಯನ್ನು ಹೊಸ ತಲೆಮಾರು ಸಂಪೂರ್ಣವಾಗಿ ತಿಂದುಹಾಕಿತ್ತು. ಪಾನ್ ಇಸ್ಲಾಮಿಸಮ್ಮು ರೆಕ್ಕೆ ಪಢಪಢಿಸತೊಡಗಿತ್ತು.

ಆದರೆ ಕೇವಲ ಒಂದೂವರೆ ದಶಕದಲ್ಲಿ ಜನಜೀವನ ಸಂಪೂರ್ಣ ಬಕ್ಕ ಬಾರಲು ಬಿದ್ದಿದೆ. ಎಲ್ಲವನ್ನೂ, ಎಲ್ಲರನ್ನೂ ಬ್ರದರ್‍ಹುಡ್ ಚಲುವಳಿ ನುಂಗಿ ನೊಣೆದುಬಿಟ್ಟಿದೆ. ಆ ತಲೆಮಾರಿನ ಬದುಕಿನ ಬಗೆಗಿನ ಅವಗಾಹನೆಯನ್ನು ಈಗಿನ ಹುಡುಗರು ಕಲ್ಲೆಸೆಯುವುದೇ ಧರ್ಮವಾಗಿಸಿಕೊಂಡು ಬದಲಾಯಿಸಿಬಿಟ್ಟಿದ್ದಾರೆ. ಅಲ್ಲಿಗೆ ಒಂದು ವಿನಿತತೆ ಮತ್ತು ಬದುಕಿಗಾಗಿ ಜಗತ್ತಿನೊಂದಿಗೆ ಬೆರೆಯುವ ಮಾನಸಿಕ ತಯಾರಿಗೆ ಅವಕಾಶವೇ ಕೊಡದಂತೆ ಮತಾಂಧತೆ ಎಂಬ ಅಫೀಮು ಹೊಸ ಪೀಳಿಗೆಯನ್ನು ಮುಗಿಸಿಹಾಕಿದೆ. ಈಗೇನಿದ್ದರೂ ಕಲಾಶ್ನಿಕೋವ್ ಮತ್ತು ಮೊಬೈಲು. ನೆನಪಿರಲಿ ನೆಟ್‍ವರ್ಕ್ ಸಿಗ್ನಲ್‍ಗಾಗಿ ಕತ್ತು ಕುಯ್ಯುವ ಮಟ್ಟಕ್ಕೆ ಅಲ್ಲಿ ರೊಚ್ಚಿಗೇಳುತ್ತಾರೆ. ಇವತ್ತು ರೂಮರು ಹಬ್ಬುವುದನ್ನು ತಪ್ಪಿಸಲು ಸರಕಾರ ಸಿಗ್ನಲ್ ಬಂದು ಮಾಡುತ್ತದಲ್ಲ ಅದರ ಮೊದಲ ಏಟು ಬೀಳುವುದೇ ಸೈನಿಕರ ಮೇಲೆ. ಕಾರಣ ಸಿಗ್ನಲ್ ಬಂದಾಗುತ್ತಿದ್ದಂತೆ ಅವರೆಲ್ಲಾ ಚಟುವಟಿಕೆ ಮಾತ್ರವಲ್ಲ, ಪೂರ್ತಿ ಕಣಿವೆಯೇ ಸ್ಥಬ್ಧವಾಗಿ ಬಿಡುತ್ತದೆ. ಹತಾಶೆ ಜೊತೆಗೆ ಮೊದಲೇ ಪೂರ್ವಾಗ್ರಹ ಪೀಡಿತವಾಗಿರುವ ಯುವಮನಸ್ಸು ಅದಕ್ಕೆ ಕಾರಣವಾಗಿರುವ ನೌಕರಶಾಹಿಯ ಮೇಲೆರಗುತ್ತದೆ. ಅದರ ಪರಿಣಾಮ ಕಲ್ಲು ಸುರಿಮಳೆಯ ಮೂಲಕ ಸೈನಿಕರ ಮೇಲಾಗುತ್ತದೆ. ನಿಮಗಿದು ಗೊತ್ತಿರಲಿ ಕಳೆದ ವರ್ಷ ಕಲ್ಲೆಸದ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಹತ್ತಿರ ಹತ್ತಿರ. ಅಂದರೆ ಪ್ರತಿ ದಿನ ಒಂದಲ್ಲ ಒಂದು ಕಡೆ ಕಲ್ಲೇಟು ಪಕ್ಕಾ. ನಡೆದಿರುವ ಉಗ್ರದಾಳಿಯ ಸಂಖ್ಯೆ ಸುಮಾರು 900 ಚಿಲ್ರೆ.

ಅಷ್ಟಕ್ಕೂ ಹೀಗೆ ಹೊಸ ತಲೆಮಾರಿನ ಕಲ್ಲೆಸೆಯುವ ಹುಡುಗರು ಮತ್ತು ಅಂತಹ ಹುಡುಗರ ವಿದ್ರೋಹಿ ಕೃತ್ಯಕ್ಕೂ ಆಕರ್ಷಿತವಾಗುತ್ತಿರುವ ಹುಡುಗಿಯರ ಮನಸ್ಥಿತಿಯ ಹಿಂದಿರುವ ಪಾನ್ ಇಸ್ಲಾಮಿಸಮ್ಮು ಹೇಳುವುದಾದರೂ ಏನನ್ನು..? ಅದರ ಐತಿಹಾಸಿಕ ಮತ್ತು ಇವತ್ತು ಜಗತ್ತನ್ನೆ ಬೋರಲಾಗಿಸುತ್ತಿರುವ ಕತೆ ಇತ್ತಿಚಿನದ್ದಲ್ಲ. ಕಾರಣ ಪಾನ್ ಇಸ್ಲಾಮಿಸಮ್ಮು ಅಥವಾ ಬ್ರದರ್ ಹುಡ್ ಚಳುವಳಿ ಎನ್ನುವುದು ಒಂದು ಮುಷ್ಠಿ ಪುಟದ ಅಳತೆಗೆ ದಕ್ಕುವು ಕತೆಯೇ ಅಲ್ಲ. ಅದರ ಮೂಲ ಬೇರು ಇರುವುದೇ ಶತಮಾನಗಳ ಹಿಂದಿನ ಇತಿಹಾಸಕ್ಕೆ ಮತ್ತು ಹಾಗೆ ಜಾಗತಿಕವಾಗಿ ಬ್ರದರ್‍ಹುಡ್ ಮೂಲಕ ಶೇ.70ಕ್ಕಿಂತ ಹೆಚ್ಚಿರುವ ಜಗತ್ತಿನ ಸಜ್ಜನ ಮುಸ್ಲಿಂರ ಮನಸ್ಥಿತಿಯನ್ನು ಕ್ರಮೇಣ ಧಾರ್ಮಿಕವಾಗಿ ಹಾಳು ಮಾಡುತ್ತಿರುವುದಕ್ಕೆ. ಅದರ ಕತೆ ಮುಂದಿನ ವಾರಕ್ಕಿರಲಿ. ಅದರೆ ಹಾಗೆ ಬಂದ ಬ್ರದರ್‍ಹುಡ್ ಇವತ್ತು ಕಾಶ್ಮೀರಕ್ಕೆ ತನ್ನದೇ ಕೊಡುಗೆ ನೀಡಿದೆ ಎನ್ನುವುದಂತೂ ಸತ್ಯ. ಕಣಿವೆ ಖಾಲಿ ಆಗದೆ ಏನು ಮಾಡೀತು..?
ಕಾಶ್ಮೀರವೆಂಬ ಖಾಲಿ ಕಣಿವೆ
ಕಳೆದ ನೂರೇ ದಿನಗಳಲ್ಲಿ ಸುಮಾರು ಎಂಭತೈದಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಪ್ರತಿ ತಿರುವಿನಲ್ಲೂ ಇವತ್ತು ಬಂದೊಬಸ್ತು ಇರುವ ಚೆಕ್ ಪೆÇೀಸ್ಟುಗಳಿದ್ದು, ಸೈನಿಕರ ಶಸ್ತ್ರಾಸ್ತ್ರಗಳು ಎಂಥದಕ್ಕೂ ಸನ್ನದ್ಧವಾಗಿರುತ್ತವೆ. ಆದರೂ ಹೇಗೆ ಪ್ರತಿವಾರಕ್ಕಿಂತಿಷ್ಟು ಎಂಬಂತೆ ಉಗ್ರರು ಸೈನಿಕರಿಗೆದುರಾಗಿ ಬಲಿಯಾಗುತ್ತಿದ್ದಾರೆ..? ಬರುಬರುತ್ತಾ ಅಷ್ಟು ವರಚ್ಚಾಗಿ ಈ ಆಂತಕವಾದಿಗಳು ಹೇಗಾದರೂ ಒಳಕ್ಕೆ ನುಸುಳುತ್ತಿದ್ದಾರೆ..? ಒಂದೆಡೆ ನಿಸರ್ಗ ಕಲ್ಪಿಸಿರುವ ಸಂಕೀರ್ಣ ಭೌಗೋಳಿಕ ಪರಿಸ್ಥಿತಿ ಒಳಗೆ ಬರಲು ಅನುಕೂಲವಾದರೆ, ಹಾಗೆ ಒಮ್ಮೆ ಸರಹದ್ದಿನೊಳಗೆ ಬಂದವರೆಲ್ಲರಿಗೂ ನೀರು, ನೆರಳು, ಶಸ್ತ್ರಾಸ್ತ್ರ ಎತ್ತಿ ಕೊಟ್ಟು ನಮ್ಮ ಸೈನಿಕರ ಮೇಲೆ, ಹಿಂದೂಗಳ ಮೇಲೆ ಛೂ ಬಿಡುತ್ತಿರುವವರೂ ನಮ್ಮವರೇ ಎನ್ನುವುದೀಗ ರಹಸ್ಯವಾಗುಳಿದಿಲ್ಲ. ಆವತ್ತು ಉರಿ ಸೇನಾ ಕ್ಯಾಂಪ್ ಮೇಲೆ ದಾಳಿಯಾಯಿತಲ್ಲ. ಅದರ ನಂತರ ಸಾಲುಸಾಲಾಗಿ ಗಡಿಯಲ್ಲಿ ಉಗ್ರರ ಹೆಣ ಬೀಳತೊಡಗಿದವು. ಅಸಲಿಗೆ ನಮಗೆ ಲೆಕ್ಕಕ್ಕೆ ಸಿಗುವುದಕ್ಕಿಂತ ಕೈಗೆ ದೇಹ ಸಿಕ್ಕದಂತೆ ಹುರಿದು ಹೋಗುವುದನ್ನು ಅಲ್ಲಲ್ಲೆ ಎಳೆದು ಹಾಕಿ ಬಿಡುವ ಮಿಲಿಟರಿ ಲೆಕ್ಕಾಚಾರ ಬೇರೆಯದೇ ಇರುತ್ತದೆ. ಅದಾಚೆಗಿರಲಿ ಅದನ್ನಿಲ್ಲಿ ಚರ್ಚಿಸುವುದೂ ತರವಲ್ಲ. ಆದರೆ ಹಾಗೆ ಅಷ್ಟು ಸಲೀಸಾಗಿ ಈ ಪಾತಕಿಗಳು ಹೇಗೆ ಗಡಿಯನ್ನು ದಾಟಿ ಶ್ರೀನಗರ, ಪಹಲ್ಗಾಮ್ ಮತ್ತು ಇತರ ಪ್ರಮುಖ ಸ್ಥಳಗಳನ್ನು ಸುರಕ್ಷಿತವಾಗಿ ತಲುಪುತ್ತಾರೆ..?

ನಮ್ಮಲ್ಲಿ ಹೆಚ್ಚಿನವರಿಗೆ ಕಾಶ್ಮೀರ ಕಣಿವೆಯ ಅತೀವ ಏರಿಳಿತದ ಬಗ್ಗೆ ಅಂದಾಜಿಲ್ಲ. ಅದನ್ನು ಟೊಪೆÇಗ್ರಾಫಿ ಎನ್ನುತ್ತಾರೆ. ಅದರಲ್ಲೂ ಉತ್ತರ ಕಾಶ್ಮೀರದ ಭಾಗದಲ್ಲಿ ಸರಿಯಾಗಿ ಅರ್ಧ ಕಿ.ಮೀ. ಕೂಡಾ ನೇರಾನೇರಕ್ಕೆ ನೆಲ ದಕ್ಕುವುದಿಲ್ಲ. ನನ್ನ ಭೇಟಿಗಳಲ್ಲಿ ಒಂದು ಹಳ್ಳಿಗೆ ಇವತ್ತು ಹೋದರೆ, ನಾನು ಹಿಂದಿರುಗುತ್ತಿದ್ದುದು ಮರುದಿನವೇ. ಲೇಹ್ ಹೆದ್ದಾರಿ ಮೇಲೆ ಗಾಂಧಾರ್‍ಬಾಲ್ ದಾಟಿಬಿಟ್ಟರೆ ಮತ್ತೇನಿದ್ದರೂ ಪರ್ವತದ ಸೆರಗು ಕೊರೆದು ರೂಪಿಸಿದ ಕಡಿದಾದ ಅಂಚಿನ ಅಪ್ಪಟ ಕಣಿವೆಯ ಏರಿಳಿತ. ನಾಲ್ಕು ಹೆಜ್ಜೆ ಮೇಲಕ್ಕೆ ಹೋದರೆ ಇನ್ನಾಲ್ಕು ಕೆಳಕ್ಕೆ. ಅದಕ್ಕೂ ಮೊದಲೇ ನದಿಯ ಸಣ್ಣ ತೊರೆಯೊಂದು ಬಾಯ್ದೆರೆದು ಅಲ್ಲಲ್ಲಿ ಹಾಯ್ದು ಹೋಗುತ್ತಿರುತ್ತದೆ. ಸಂಪೂರ್ಣ ಕಣಿವೆಯನ್ನು ಹೀಗೆ ಕೊರಕಲಾಗಿಸಿ ಗುಡ್ಡಗಳ ಏರಿಳಿತ, ನಿರಂತರ ಭೂ ಕುಸಿತದಂತಹ ವೈಪರಿತ್ಯಗಳಿಗೆ ಒಡ್ಡಿದ್ದೆ ಇಂತಹ ನದಿ ಕವಲುಗಳು. ಆವತ್ತು ಗಡಿ ದಾಟಿ, ಉರಿ ಸೆಕ್ಟರಿನ ಅಡುಗೆ ಕೋಣೆಯ ಕಡೆಯಿಂದ ದಾಳಿಯಾಯಿತಲ್ಲ, ಅದರ ಆಸುಪಾಸೇ ಎಷ್ಟು ನಾಲಾಗಳು, ಕಾಲುವೆಗಳಿವೆ ಎಂದರೆ ಒಬ್ಬ ಸಲೀಸಾಗಿ ಅದರ ಕೊರಕಲಿನಲ್ಲಿ ತೆವಳಿಕೊಂಡೆ ಕಿ.ಮೀ.ಗಟ್ಟಲೆ ಭಾರತದೊಳಕ್ಕೆ ಕ್ರಮಿಸಿಬಿಡುತ್ತಾನೆ.

ಉರಿಯ ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವುದೇ ಸಲಮ್‍ನಾಲಾ ಎಂಬ ಹಳ್ಳ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ಹಳ್ಳಗಳು ಹರಿದು ಝೀಲಂ ನದಿಯನ್ನು ತಲುಪುತ್ತವೆ. ನಿಮಗೆ ಗೊತ್ತಿರಲಿ ಈ ಝೀಲಂ ನದಿ ಇವತ್ತು ಅನಾಮತ್ತಾಗಿ ಕಿ.ಮೀ.ಗಟ್ಟಲೇ ಅಗಲವೂ, ಆಳದ ಜೊತೆಗೆ ನಮ್ಮ ಪ್ರದೇಶ ನಮಗೇ ಅಪರಿಚಿತವನ್ನಾಗಿಸುವಷ್ಟು ದಂಡೆಗಳನ್ನು ಬಾಚಿ ತಬ್ಬಿಉಬ್ಬಿ ಹರಿಯುತ್ತಿರುವ ಉಮೇದಿನ ನದಿ ಇದು. ಇಂತಹದ್ದೊಂದು ನದಿಯನ್ನು ಪಳಗಿಸುವುದು ಅತ್ಲಾಗಿರಲಿ, ದಂಡೆಯನ್ನು ಹಿಡಿತಕ್ಕಿಟ್ಟುಕೊಳ್ಳುವುದು ಕಷ್ಟ. ಇಂತಹ ತುಂಬ ದುರ್ಗಮ ಪ್ರದೇಶಗಳು ಸರಹದ್ದಿನುದ್ದಕ್ಕೂ ಸಾಲುಸಾಲಾಗಿವೆ. ಇಂಥಲ್ಲಿಂದಲೇ ಉಗ್ರರು ನುಸುಳುತ್ತಾರೆ. ಜೊತೆಗೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟಕೊನೆಯಲ್ಲಿ ತೀರ ಸರಹದ್ದಿನ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.

ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಯಿತಲ್ಲ ಆ ಲೀಪಾದಿಂದ 24 ಕಿ.ಮೀ. ದೂರದ ರೈಸಿನ್ ಎಂಬಲ್ಲಿಯೇ ವಾಹನಗಳು ನಿಂತು ಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಜನರನ್ನು ಹೊತ್ತು ತರುತ್ತವೆ. ಇಲ್ಲಿ ನಿರ್ಮಿಸಿದ ರಸ್ತೆಯನ್ನು ಕುಸಿಯುವ ಪರ್ವತಗಳು ತಿಂಗಳೊಪ್ಪತ್ತಿಲ್ಲಿ ನುಂಗಿ ಮುಗಿಸುತ್ತವೆ. ಇದರ ಕೂಗಳತೆಯಲ್ಲಿದೆ ದುರ್ಗಮವಾದ ಬಂಗೂಸ್ ವ್ಯಾಲಿ. ಅತ್ಯಂತ ಸುಂದರ ಪ್ರದೇಶ ಲೀಪಾ ವಿಭಿನ್ನ ವಲಯ. ಮೇಲ್ಗಡೆಯ ಪೂರ್ವಭಾಗ ಡೈಖಾನ್ ವ್ಯಾಲಿ, ಪಕ್ಕದ ಇನ್ನೊಂದಿಷ್ಟು ವಲಯವನ್ನು ಚಾನ್ಸೇನ್ ಎನ್ನುತ್ತಾರೆ. ಉಗ್ರರಿಗೆ ಲೀಪಾ ಎಂದರೆ ಡೈಖಾನ್ ವ್ಯಾಲಿಯ ಬದೀಗೆ ಹೋಗುವಂತೆ ಪಾಕಿ ಅಧಿಕಾರ ಕೇಂದ್ರವೇ ಸೂಚನೆ ಕೊಡುತ್ತದೆ.

ಇತ್ತ ತಾವಗಿ, ಅಪೂಟು ಪಾಕಿಗಳ ಪಕ್ಕೆಗೆ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್‍ಭಾಗ್ಲಿ, ಪಾದದಲ್ಲೇ ನಟೋರಿಯಸ್ ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತ ಸರಹದ್ದಿನ ಸೆರಗಿಗೆ ಚುಂಗಿನಂತೆ ಆವರಿಸಿಕೊಂಡಿರುವ ಹತ್ತಾರು ಮನೆಗಳ ನೂರಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್‍ಪಂಜಾಲ್ ಪರ್ವತಶ್ರೇಣಿ ಎರಡೂ ಮಗ್ಗುಲಲ್ಲೂ ಯಥೇಚ್ಚವಾಗಿ ಕನಿಷ್ಠ ಸಾವಿರ ಅಡಿಯ ಎತ್ತರದ ಪರ್ವತಾಗ್ರಹಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಹೀಗೆ ಆವರಿಸಿಕೊಂಡಿರುವ ತುದಿಗಳ ಮೇಲೆನೆ ಎರಡೂ ಕಡೆಯ ಸೈನಿಕರು ಅರೆಗಳನ್ನು ಹುಡುಕಿ ಬಂಕರು ನಿರ್ಮಿಸಿಕೊಂಡು ಗಡಿ ಕಾಯುತ್ತಾರೆ. ಹಾಗೆ ಎರಡೂ ಬಂಕರ್‍ಗಳ ಮಧ್ಯದ ಪ್ರದೇಶವನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯುತ್ತಾರೆ. ಅಸಲಿಗೆ ಬರೀ ಕಣ್ಣಿಗೆ ಮತ್ತು ನೇರ ನೋಟಕ್ಕೆ ಅಲ್ಲಿ ಯಾರೂ ದಕ್ಕುವುದೇ ಇಲ್ಲ. ಏನಿದ್ದರೂ ಆ ಕೊರಕಲುಗಳಲ್ಲೇ ಕಾಲು ಹರಿಸುತ್ತಾರೆ.

ಹಾಗೆ ಅಂತಹ ಪ್ರದೇಶಗಳಿಂದ ಇತ್ತ ಚಲಿಸಲಾರಂಭಿಸುತ್ತಿದ್ದಂತೆ ನಮ್ಮ ಬಂಕರುಗಳಿಂದ ಕಣ್ಣು ನೆಟ್ಟ ಕೂತ ಸೈನಿಕರ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಪಾಕಿ ಸೈನಿಕರು ಗುಂಡು ಹಾರಿಸತೊಡಗುತ್ತಾರೆ. ನಮ್ಮವರೂ ಅದಕ್ಕೆ ಉತ್ತರಿಸುವಾಗ, ಅರೆಬರೆ ತರಬೇತಿಯ ಹುಂಬ ಹುಡುಗರು ನೆಲದ ಮೇಲೆ ಬಿದ್ದು ಹೊರಳುತ್ತಾ, ನಾಲಾಗಳ ಕೊರಕಲಿಗೆ ಇಳಿದು ಸರಿಯುತ್ತಾ ಗಡಿ ದಾಟುತ್ತಾರೆ. ನೆನಪಿರಲಿ ಹಾಗೆ ಬರುವ ಉಗ್ರರ ಬಳಿ ಸಣ್ಣಪುಟ್ಟ ಆಯುಧ ಬಿಟ್ಟರೆ ಬೇರೇನೂ ಇರುವುದಿಲ್ಲ. "ಲಗೇಜು" ಏನಿದ್ದರೂ ಇತ್ತ ಬಂದೊಡನೆ ಪೂರೈಸಲಾಗುತ್ತದೆ ಎಂದರೆ ಅದಿನ್ನೆಂಥಾ ಬೆಂಬಲ ನಮ್ಮವರಿಂದಲೇ ಸಿಕ್ಕುತ್ತಿರಬಹುದು ಊಹಿಸಿ.

ಪ್ರತಿ ಗಡಿಯಲ್ಲೂ ಇವತ್ತು ಅಪ್ಪಟ ಬುಡಕಟ್ಟು ಕಾಶ್ಮೀರಿ ಕುಟುಂಬಗಳು ಗ್ವಾಲೆಗಳಂತೆ ಬದುಕು ಕಟ್ಟಿಕೊಂಡಿದ್ದು ನುಸುಳುಕೋರರು ಮೊದಲು ಅಶ್ರಯ ಪಡೆಯುವುದೇ ಇಲ್ಲಿ. ಇದೊಂದು ಗೊತ್ತಿರಲಿ, ಅರ್ಧ ಕೆ.ಜಿ. ಅಕ್ಕಿ ಹೆಚ್ಚಿಗೆ ಕೊಂಡರೂ ಅಲ್ಲಿ ಹೊಸ ಅತಿಥಿಯ ಅಗಮನವಾಗಿದೆ ಎಂದು ಊಹಿಸಿಯೇ ಬಯೋನೆಟ್ ಎದುರಿಗಿಟ್ಟು ಸೈನಿಕರು ಕೂಂಬಿಂಗ್ ಮಾಡುತ್ತಿರುತ್ತಾರೆ. ಒಣಗಲು ಹಾಕುವ ಬಟ್ಟೆಗಳು, ಅಡುಗೆಯ ಪದಾರ್ಥದ ವ್ಯತ್ಯಾಸ, ಮನೆಯ ಬಳಿಯಲ್ಲಿ ಬದಲಾಗುವ ಚಟುವಟಿಕೆ, ಇದ್ದಕ್ಕಿದ್ದಂತೆ ಕೆಲ ಮನೆಗಳ ಹೆಂಗಸರು ಗುಳೆ ಹೋದಂತೆ ಗಡಿಯಿಂದ ಒಳಭಾಗದ ಸಂಬಂಧಿಕರ ಮನೆಗಳಿಗೆ ತೆರಳಿಬಿಡುವುದು, ಯಾವ ಹೊತ್ತಿಗೂ ಬಾಗಿಲು ಹಾಕಿಕೊಂಡೆ ಇರುವ ಮನೆಗಳು ಹೀಗೆ ಸೈನಿಕರು ಹುಡುಕುವ ರೀತಿಯೇ ಅಂದಾಜಿಗೆ ದಕ್ಕುವುದಿಲ್ಲ. ಅಲ್ಲೆಲ್ಲಾ ಪ್ರತಿ ತಿರುವಿನಲ್ಲೂ, ಪ್ರತಿ ಪರ್ವತದ ಬುಡಕ್ಕೂ ಆತುಕೊಂಡು ಅಕ್ಷರಶ: ಆಯುಧವೇ ವಸ್ತ್ರ ಎನ್ನುವಂತೆ ಮೈ ತುಂಬಾ ಬಂದೂಕು, ಬಾಂಬು, ಗ್ರೇನೆಡು ಹೊತ್ತ ಸೈನಿಕರು ಕಾಲೂರಿ ನಿಂತು ಕಾಯುತ್ತಿರುತ್ತಾರೆ. ಅದರೆ ಆ ಉದ್ದಾನುಉದ್ದದ ಕಣಿವೆ ಮತ್ತು ಫೀರ್‍ಪಂಜಾಲ್ ಶ್ರೇಣಿಯ ಸಾಲುಸಾಲು ಪರ್ವತದ ಪ್ರದೇಶದ ಕಾವಲಿಗೆ ಅದೆಷ್ಟೇ ಸೈನಿಕರನ್ನು ಹಾಕಿದರೂ ಎಲ್ಲಿ ಈಡಾಗಬೇಕು..? ಹಾಗೆ ದಾಟುವವರನ್ನು ಮೊದಲು ತಮ್ಮ ಮನೆಗಳಲ್ಲಿ ಒಂದೆರಡು ದಿನ ಮಟ್ಟಿಗೆ ಸಾಕುವ ದೇಶದ್ರೋಹಿಗಳು, ನಂತರ ಅವರನ್ನು ಒಳಭಾಗಕ್ಕೆ ಕಳಿಸುತ್ತಾರೆ. ಅಗತ್ಯಕ್ಕೆ ತಕ್ಕಷ್ಟು ಆಯುಧಗಳ ದಾಸ್ತಾನು ಮೊದಲೆ ತಲುಪಿರುತ್ತದೆ. ಅದು ಕೈಗೆ ಬರುತ್ತಿದ್ದಂತೆ ಪಾಕಿಗಳೊಂದಿಗೆ ಮಾತುಕತೆಗೆ ಶುರುವಿಟ್ಟುಕೊಂಡು ಮಾರಣಹೋಮಕ್ಕೆ ರೆಡಿಯಾಗುತ್ತಾರೆ. ಅದರೆ ರಸ್ತೆಗಿಳಿಯುವ ಮೊದಲೇ ಅವರ ಇರುವಿನ ಬಗ್ಗೆ ಟಿಪ್ಸು ಕೊಟ್ಟು ಸೈನಿಕರ ಕೈಯಲ್ಲಿ ಹೊಡೆಸಿ ಹಾಕುವ ಅವರದೇ ಮನುಷ್ಯ ಲಕ್ಷಾಂತರ ಬಹುಮಾನ ಎಣಿಸುತ್ತಾ ಹುಳ್ಳಗೆ ನಗುತ್ತಾನೆ. ಸತ್ತವನ ಹೆಸರಲ್ಲಿ ದೊಂಬಿಗಿಳಿಯುವ ಹುಂಬ ಹುಡುಗರನ್ನು ಮಿಲಿಟರಿ ಪಡೆ ನೋಡುತ್ತಿದ್ದಂತೆ ಗಲಾಟೆಗಿಬ್ಬಿಬ್ಬರಂತೆ ಕೊಂದು ಕೆಡುವುತ್ತದೆ. ಕಾಶ್ಮೀರ ಖಾಲಿಯಾದೇ ಏನು ಮಾಡೀತು...?

Monday, July 17, 2017




ಆತಂಕದಲ್ಲಿ ಅಮರನಾಥ ಯಾತ್ರೆ...


"..ಈ ಬಾರಿ ಯಾತ್ರೆ
ಮುಗಿಯುವುದರೊಳಗಾಗಿ ನಾವು
ಕನಿಷ್ಟ ನೂರೈವತ್ತು
ಜನರನ್ನಾದರೂ ಕತ್ತರಿಸಬೇಕು.
ಯಾತ್ರಿಗಳು ಮತ್ತು ಪೆÇೀಲಿಸರು
ಎನ್ನುವುದಕ್ಕೆ ಲೆಕ್ಕ
ಸಿಗಬಾರದು.." ಹೀಗೆಂದು ಮೊನ್ನೆ
ಮೊನ್ನೆ ಅಮರನಾಥ ಯಾತ್ರೆಯ
ಮೊದಲನೆಯ ದಿನ ಆರಂಭಕ್ಕೂ ಮೊದಲೇ
ಠರಾವು ಹೊರಡಿಸಿದವನು
ಭಯೋತ್ಪಾದಕರ ಸ್ವರ್ಗದಲ್ಲಿರುವ
ಪಾಕಿ ಬೆಂಬಲಿತ ಪಾತಕಿ
ಸಲ್ಲಾವುದ್ದಿನ್. ಈತ ಮಧ್ಯ
ಪಾಕಿಸ್ತಾನದಲ್ಲಿ ಐಶಾರಾಮಿ
ಜೀವನ ನಡೆಸುತ್ತಾ ಫೀಲ್ಡಿನಲ್ಲಿ
ಹುಡುಗರಿಗೆ ಸತ್ತುಹೋಗಲು ಅದೇಶ
ಹೊರಡಿಸುತ್ತಿದ್ದಾನೆ. ಇವನನ್ನು
ವಿಶ್ವ ಸಂಸ್ಥೆ ಸೇರಿದಂತೆ
ಅಮೇರಿಕೆ ಕೂಡಾ ಅಂತರಾಷ್ಟ್ರೀಯ
ಭಯೋತ್ಪಾದಕರ ಸಾಲಿಗೆ
ಸೇರಿಸಿದೆ. ಜೀವ
ಕಳೆದುಕೊಳ್ಳುತ್ತಿರುವ
ಕಾಶ್ಮೀರಿಗಳಿಗೆ ಮಾತ್ರ ಇದು
ಅರ್ಥವಾಗುತ್ತಿಲ್ಲ. ಆದರೀಗ
ಯಾತ್ರಿಗಳಲ್ಲೀಗ ಆರೆಂಟು ಜನ
ಮೃತರಾಗಿ ಮೂವತ್ತೆರಡು ಜನ
ಗಾಯಾಳುಗಳಾಗುವುದರಿಂದ ಅವನ
ಮಾತಿನ ಗಂಭೀರತೆ ಬೇರೆಯದೆ ಅರ್ಥ
ಪಡೆಯುತ್ತಿದೆ.

ಹಾಗೊಂದು ಫಾರ್ಮಾನು ಹೊರಡಿಸಲು
ಕಾರಣ, ಈ ಮೊದಲೇ ಸಿಕ್ಕಿಬಿದ್ದು
ಹೆಣವಾಗಿರುವ ಹುಡುಗರಾದ
ಬುರಾನ್‍ವಾನಿ ಮತ್ತು ಅಬ್ಜಾರ್
ಭಟ್‍ನಂತಹ ಶುದ್ಧಾನುದ್ಧ
ಅವಿವೇಕಿಗಳ ತಲೆಗೆ
ಕಟ್ಟಲಾಗಿದ್ದ ಬಹುಮಾನ ಮತ್ತು
ಅವರುಗಳು ಯೋಜಿಸಿದ್ದ ಆಗಸ್ಟ್
ಬರುವ ಹೊತ್ತಿಗೆ ಕೆಲವು ಸೈನಿಕರ
ತಲೆಯನ್ನಾದರೂ ಕಡಿಯುವ
ಯೋಜನೆಯನ್ನು "ಹಿಂದೂಸ್ಥಾನಿ
ಫೌಜ್" ವಿಫಲಗೊಳಿಸಿ
ಅವರನ್ನೆಲ್ಲಾ ಬೀದಿ
ಹೆಣವಾಗಿಸಿದ್ದಕ್ಕೆ. ಬುರ್ಹಾನ್
ವಾನಿಯನ್ನು ಸ್ವತ: ಪಾಕಿ
ಸೇನಾನಾಯಕನೇ ಹೊಗಳುವ ಮೂಲಕ
ಕಾಶ್ಮೀರದ ಬೀದಿಗಳಲ್ಲಿ ಕಲ್ಲು
ಹಿಡಿದು ನಿಲ್ಲುತ್ತಿರುವ
ಪುಂಡಹುಡುಗರನ್ನು ಗನ್ನು
ಹಿಡಿಯಲು
ಪ್ರೇರೇಪಿಸುತ್ತಿದ್ದಾನೆ. ಅವನ
ಬಗ್ಗೆ ಹುಟ್ಟುಹಾಕುತ್ತಿರುವ
ಕ್ರೇಜು ಶ್ರೀನಗರದ ಗಲ್ಲಿಗಳಿಗೆ
ಹೊಸ ಹುಮ್ಮಸು ನೀಡುತ್ತಿದೆ
ಮತ್ತು ಅತ್ತಲಿನ
ಕುತಂತ್ರಿಗಳಿಗೆ
ಬೇಕಾಗಿರುವುದೂ ಅದೆ. ಹಾಗೆ
ನೋಡಿದರೆ ಝಕೀರ್ ಮೂಸಾನ ಯೋಜನೆಯ
ಮುಂದಿನ ಹಂತ ಚಾಲನೆಗೆ
ತರಬೇಕಾಗಿದ್ದವನು ಅಭ್ಝಾರ್
ಭಟ್. ಮೂಸಾನ ಪ್ರಕಾರ ಕಾಶ್ಮೀರ
ಸಮಸ್ಯೆ ಮತ್ತು ಧರ್ಮ ಎರಡನ್ನೂ
ರಾಜಕೀಯ ಮಾಡಿದ್ದೀರಿ ಎನ್ನುವ
ಕಾಂಟ್ರಾವರ್ಸಿಯಿಂದಾಗಿ ಆತ
ಗುಂಪನ್ನೆ ತೊರೆದು ಹೋಗಿದ್ದ.
ಹೀಗೆ ಇದ್ದಕ್ಕಿದ್ದಂತೆ
ನಿರ್ವಾತವಾದ ಜಾಗವನ್ನು
ತುಂಬಿದವನು ಸರಿಯಾಗಿ ನೆತ್ತಿ
ಮಾಸು ಹಾರದ ಹುಡುಗ ಅಬ್ಜಾರ್ ಭಟ್.
ಈತ ವಾನಿಯ ಮಟ್ಟಿಗಿನ
ಭಯೋತ್ಪಾದನೆಯ ಆಳಕ್ಕಿನ್ನೂ
ಇಳಿದಿರಲಿಲ್ಲ. ಆದರೆ ಕಣಿವೆಯ
"ಲಗೇಜು" ಸಂರಕ್ಷಣೆ ಹಾಗು ಸ್ಥಳಿಯ
"ಶೆಲ್ಟರ್" ಕಾರ್ಯಗಳಿಗೆ
ವ್ಯವಸ್ಥಿತವಾಗಿ
ಕಾರ್ಯನಿರ್ವಹಿಸುತ್ತಿದ್ದುದರಿಂದ
ಎರಡೂ ಕಡೆಯಲ್ಲಿ ಪ್ರಸಿದ್ಧಿಗೆ
ಬಂದಿದ್ದ.

ಅಭ್ಜಾರ್ ಭಟ್‍ನಿಗಿದ್ದುದು
ಅಪಾಯಕಾರಿ ಆತುರವೆಂದರೆ
ಪ್ರಸಿದ್ಧಿಯ ತೆವಲು ಮತ್ತು
ಶೋಫಿಯಾನ್, ಕುಪ್ವಾರ,
ಬಾರಾಮುಲ್ಲಾ, ಅನಂತನಾಗ್ ಮತ್ತು
ಶ್ರೀನಗರದ ಮೇಲೆ ಭದ್ರ ಹಿಡಿತ
ಹೊಂದುವ, ಸಂಪೂರ್ಣ ದಕ್ಷಿಣ
ಕಾಶ್ಮೀರಕ್ಕೆ ಕಮಾಂಡರ್ ಎಂದು
ಕರೆಯಿಸಿಕೊಳ್ಳುವ
ಮಹಾತ್ವಾಕಾಂಕ್ಷೆ ಇತ್ತು. ಅದು
ಸಿದ್ಧಿಸಬೇಕೆಂದರೆ, ಶ್ರೀನಗರದ
ಕಮಾಂಡರ್ ಎಂದು ತನ್ನನ್ನು
ಒಪ್ಪಬೇಕಾದರೆ ತಾನು ಆ ಮಟ್ಟದ
ಕೃತ್ಯ ಎಸಗಬೇಕು. ಯಾರೂ ಮಾಡದ
ಕೃತ್ಯಕ್ಕೆ ಕೈ ಹಾಕಿದರೆ ದೂರದ
ಐಸಿಸ್‍ವರೆಗೂ ಪ್ರಸಿದ್ಧಿ.
ಹೀಗೆ ಅನಾಹುತಕಾರಿ ಯೋಜನೆಯ
ಅಂಶವೇ ಅಗಸ್ಟ್ ಹದಿನೈದರ
ಹೊತ್ತಿಗೆ, ಲಾಲ್‍ಚೌಕನಲ್ಲಿ
ಸೈನಿಕರ/ಪೆÇೀಲಿಸರ ತಲೆ ಕಡಿಯುವ
ಪ್ರಾಜೆಕ್ಟು. ಆದರೆ ಅದಕ್ಕೂ
ಮೊದಲೇ ಸೈನ್ಯದ ಬಹುಮಾನಕ್ಕೆ,
ತಮ್ಮವರೇ ಕೊಟ್ಟ ಟಿಪ್ಸ್‍ಗೆ
ಬಲಿಯಾಗಿ ಹೋದ. ಹೀಗೆಯೇ ಕಳೆದ
ಜುಲೈ8 ರಂದು ಬುರ್ಹಾನ್ ವಾನಿ
ಕೂಡಾ ಸೈನಿಕರ ಗುಂಡಿಗೆ
ಬಲಿಯಾಗಿದ್ದ.

ಅದರ ಮುಂದುವರೆದ ಭಾಗ ಈಗ
ಅಮರನಾಥ್ ಯಾತ್ರೆ ಎನ್ನುವ
ಸುಲಭದ ಟಾರ್ಗೆಟ್ ಯೋಜನೆಯಂತೆ
ಯಾತ್ರಿಗಳ ಮೇಲೆ ಮೊದಲ ದಾಳಿ
ನಡೆದು ಹೋಗಿದೆ. ಒಮ್ಮೆ
ನುಗ್ಗಿದರೆ ಸಾಕು ಸಾಲಸಾಲು
ನರಮೇಧ ಮಾಡಬಹುದು ಎನ್ನುವ
ಯೋಜನೆಗೆ ಚಾಲನೆ ನೀಡಲಾಗಿದೆ.
ತೀರ ಯಾತ್ರಿಗಳು ಎಲ್ಲಾ ಮುಗಿಸಿ
ಹಿಂದಿರುಗುವಾಗ, ಮೊದಲು ಸೈನಿಕ
ಶಿಬಿರಕ್ಕೆ ಗುಂಡು ಹಾರಿಸಿ
ತತಕ್ಷಣ ಅವರನ್ನು ಅತ್ತ
ಬಿಜಿಯಾಗಿಸಿ, ಇತ್ತ ಬಸ್ಸಿನ
ಮೇಲೆ ದಾಳಿ ಮಾಡಿದ್ದಾರೆ ಎಂದರೆ
ಸ್ಥಳೀಯರು ಇಂತಹ ಟಿಪ್ಸ್ ಕೊಡದೆ,
ಮುಖ್ಯ ರಸ್ತೆಯ ಪಕ್ಕದಲ್ಲಿ ಇದು
ಸಾಧ್ಯವೇ ಇಲ್ಲ. ವ್ಯವಸ್ಥಿತ
ಮಾಹಿತಿ ಜಾಲ ಕೆಲಸ ಮಾಡಿರುವುದು
ಸ್ಪಷ್ಟ. ಅನಂತನಾಗ್ ಜಿಲ್ಲೆಯ
ಖನ್ಪಾಲ್ ತುಂಬ ಕಣಿವೆಯ
ತಿರುವುಗಳ, ಹೆಸರಿಗೆ ಹೆದ್ದಾರಿ
ಆದರೂ ದುರ್ಗಮ ದಾರಿಯ ಪ್ರದೇಶ.
ಎಡಭಾಗದ ಪರ್ವತ ಪ್ರದೇಶಗಳಿಂದ
ನುಸುಳುವಿಕೆ ಸಾಧ್ಯವಿಲ್ಲ.
ಏನಿದ್ದರೂ ಮೊದಲೇ ಬೀಡು
ಬಿಟ್ಟಿರುವ ಉಗ್ರರು ತಂತ್ರ
ರೂಪಿಸಿಯೇ ಗುಂಡು
ಹಾರಿಸಿದ್ದಾರೆ ಅತ್ಯಂತ ನಿಖರ
ಮಾಹಿತಿಯ ಸುದ್ದಿ ಜಾಲವಿಲ್ಲದೆ
ಈ ದಾರಿಯಲ್ಲಿ ಕಾರ್ಯಚರಣೆ
ಸಾಧ್ಯವೇ ಇಲ್ಲ.

ಜೂನ್ 28 ಕ್ಕೇ ಆರಂಭವಾದ
ಯಾತ್ರೆಯಲ್ಲಿ ಈಗಾಗಲೇ ಒಂದು
ಲಕ್ಷ ಹದಿನೈದು ಸಾವಿರ
ಯಾತ್ರಿಗಳು ಸುರಕ್ಷಿತವಾಗಿ
ಹಿಂದಿರುಗಿದ್ದಾರೆ. ಇನ್ನು
ಶ್ರಾವಣ ಎಂದು ಕಾಯುತ್ತಿರುವವರ
ಸಂಖ್ಯೆ ಎರಡೂವರೆ ಲಕ್ಷ. ಇದನ್ನು
ಬರೆಯುವ ಹೊತ್ತಿಗೆ ಇತ್ತ
ಬಲ್ತಾಲ ಅತ್ತ ಪಿಸ್ಸುಟಾಪ್
ಎರಡೂ ಕಡೆಯಲ್ಲಿ ಯಾತ್ರಿಗಳನ್ನು
ತಡೆಹಿಡಿಯಲಾಗಿದೆ. ಕಾರಣ ದಾಳಿಯ
ತೀವ್ರತೆಗೆ ಯಾತ್ರಿಗಳನ್ನು
ರಕ್ಷಿಸಲು ಸೂಕ್ತ ಯೋಜನೆ
ರೂಪಿಸಲಾಗುತ್ತಿದೆ. ಸರಕಾರ
ಕೂಡಾ ಇನ್ನಿಲ್ಲದಂತೆ ಅಮರನಾಥ್
ಯಾತ್ರಿಕರಿಗೆ ರಕ್ಷಣೆಯನ್ನು
ಒದಗಿಸುತ್ತದಾದರೂ
ಎಲ್ಲೆಂದರಲ್ಲಿ ಸ್ಥಳೀಯ
ದೇಶದ್ರೋಹಿಗಳಿಗೆ
ಅನಾಹುತವೆಸಗಲು ನೂರಾರು
ದಾರಿಗಳಿವೆ. ಅದಕ್ಕಾಗೇ
ಯಾತ್ರಿಗಳನ್ನು ಕರೆದೊಯ್ಯುವ
ದುಡಿಯುವ ವರ್ಗದ ಅಮಾಯಕ ಶ್ರಮಿಕ
ಕಾಶ್ಮೀರಿ ಗಾಡಿ
ಹತ್ತುತ್ತಿದ್ದಂತೆ ಮೊದಲು
"ಟವಲ್ ಬಾಂದ ಲೀಜಿಯೇ"
ಎನ್ನುತ್ತಾನೆ. ಶ್ರೀನಗರದಿಂದ
ಬಲ್ತಾಲ ಅಥವಾ ಚಂದನವಾರಿ
ರಸ್ತೆಯ ಇಕ್ಕೆಲೆಗಳಿಂದ ಗಾಡಿಯ
ಮೇಲೆ ಯಾವಾಗ ಕಲ್ಲಿನ
ಸುರಿಮಳೆಯಾಗಿ ಏಟಾಗುತ್ತದೋ
ಗೊತ್ತಿರುವುದಿಲ್ಲ. ಅದಕ್ಕಾಗಿ
ಲಭ್ಯ ಇರುವ ಟವಲು, ಬೆಡ್ ಶೀಟು,
ಶಾಲು ಎಲ್ಲವನ್ನು ತಲೆ,ಮುಖ, ಮೈ
ಕೈಗೆಲ್ಲಾ ಸುತ್ತಿಕೊಂಡು
ಕೂರುವಂತೆ ಸೂಚಿಸುತ್ತಾನೆ.
ಉಳಿದಂತೆ ಗಾಜು ಒಡೆದುಕೊಂಡು
ಕಲ್ಲು ತಾಗಿದರೂ ಘಾಸಿಯಾಗದಿರಲಿ
ಎನ್ನುವ ಆಲೋಚನೆ ಅವನದ್ದು. ಆದರೆ
ಪಾಕಿಗಳು ಕದ್ದು ಪೂರೈಸುವ
ರೈಫಲ್ಲಿನೆದುರಿಗೆ ಅವೆಲ್ಲಾ
ಯಾವ ಲೆಕ್ಕ...?

ಚಂದನವಾರಿ ಶ್ರೀನಗರದಿಂದ 140
ಕಿ.ಮೀ. ದೂರವಿದ್ದು ಪಿಸ್ಸುಟಾಪ್,
ಝೊಜಿ ಬೈಲ್, ಶೇಷನಾಗ್, ವರ್ಬಾಲ್,
ಮಾಂಘುನ್ ಟಾಪ್, ಪಾಬಿಬೈಲ್,
ಪಿಸ್ಸುಟಾಪ್ ಮೂಲಕ ಸಂಗಮ
ತಲುಪಬಹುದಾಗಿದ್ದು ಉಗ್ರರ ಉಪಟಳ
ಈ ದಾರಿಯಲ್ಲೇ ಹೆಚ್ಚು ಆದರೆ
ಯಾತ್ರಿಗಳಿಗೆ ಧಾರ್ಮಿಕವಾಗಿ ಈ
ದಾರಿ ಬಗ್ಗೆ ಆಪ್ತತೆ ಜಾಸ್ತಿ.
ಬಲ್ತಾಲ ಶ್ರೀನಗರ-ಲೇಹ್
ಹೆದ್ದಾರಿಯಲ್ಲಿಇದ್ದು ವಾಹನ
ಸೌಲಭ್ಯವಿದೆ. ಈ ಬಲ್ತಾಲ್
ಬೇಸ್‍ಕ್ಯಾಂಪಿನ ಸರಿಯಾಗಿ
ಮೇಲ್ಗಡೆಯೇ ಜಿಜೋಲಿ ಪಾಸ್
ಹಾಯ್ದು ಹೋಗುತ್ತದೆ. ಇದೊಂದು
ಅಪ್ಪಟ ನೆಕ್ ಪ್ರದೇಶ. ಜಿಜೋಲಿ
ಪಾಸ್ ಭಯಾನಕವಾಗಿ ಪರ್ವತ
ಕುಸಿತಕ್ಕೊಳಗಾಗಿ ದಾರಿ
ಮುಚ್ಚಿಹೋಗುವ ಸಮಸ್ಯೆ
ನಿರಂತರವಾಗಿರುತ್ತಿದ್ದು,
ಅದನ್ನೂ ಕಾಯಬೇಕಾದ ಅನಿವಾರ್ಯತೆ
ನಮ್ಮ ಸೈನಿಕರದ್ದು.
ಮೇಲ್ಗಡೆಯಿಂದ ನಿಂತು ನೋಡಿದರೆ
ಬಲ್ತಾಲ ಕ್ಯಾಂಪು ಚಿಕ್ಕಚಿಕ್ಕ
ಆಟಿಕೆ ಗೂಡಿನಂತೆ
ಕಾಣಿಸುತ್ತದೆ. ಜಿಜೋಲಿಯಲ್ಲಿ
ಯಾವತ್ತೂ ಟಾರು ರಸ್ತೆ ಉಳಿದ
ದಾಖಲೆಯೇ ಇಲ್ಲ. ಕಳಚಿಬಿದ್ದ
ಪರ್ವತ ಜರುಗಿಸಿ ರಸ್ತೆ
ಸುಗಮಗೊಳಿಸಲು ಬುಲ್ಡೊಜರು,
ಜೆ.ಸಿ.ಬಿ.,ಗಳು ಸನ್ನದ್ಧವಾಗಿಯೇ
ಇರುತ್ತವೇ. ಅಷ್ಟು ಅತಂತ್ರತೆ
ಇರುವ 12800 ಅಡಿ ಎತ್ತರದ ಜಿಜೋಲಿ
ಪಾಸ್ ಅಮರನಾಥ್‍ಗೆ ಸಮಾನಾಂತರ
ಮತ್ತು ಎಡಭಾಗದಲ್ಲಿ ದುರ್ಗಮದ
ಆಳ ಕಣಿವೆ ಪಾಕಿಸ್ತಾನದ ಜೊತೆ
ಗಡಿ ಹಂಚಿಕೊಂಡಿದೆ. ಹಾಗಾಗಿ
ಇಲ್ಲಿ ಕಾವಲು ಮತ್ತು ರಕ್ಷಣೆ
ಎಷ್ಟು ಮುಖ್ಯವೋ ದುರ್ಗಮವಾದ
ಪರಿಸ್ಥಿತಿಯಲ್ಲೂ ಕಟ್ಟೆಚ್ಚರ
ಅನಿವಾರ್ಯ.

ಬಲ್ತಾಲ್‍ನಿಂದ ಸಂಗಮವರೆಗೆ ಹೆಲಿಕಾಪ್ಟರ್ ಸೇವೆ ಇಲ್ಲಿದ್ದು
ಅಕ್ಷರಶ: ಬಾಡಿಗೆಆಟೊರಿಕ್ಷಾದಂತೆ ಇವು
ಹಾರಾಡುತ್ತವೆ. ಹಾಗೆ ಏರುವ ಎತ್ತರವನ್ನು ಸಮಾನಾಂತರವಾಗಿ
ಬಾರ್ಡರ್ ಕಡೆಯಿಂದ ನಿರುಕಿಸಿ
ಗುರಿಗೆ ಎಟುಕಿಸಿಕೊಳ್ಳಬಹುದಾದ
ಸಾಧ್ಯತೆಯೂ ಸುಲಭ. ಹಾಗಾಗಿ ಈ
ಪ್ರದೇಶವನ್ನು ಸಿ.ಆರ್.ಪಿ.ಎ¥sóï.
ಕಟ್ಟೆಚ್ಚರದಿಂದ ಕಾಯುತ್ತದೆ
ಮತ್ತು ಸಧ್ಯಕ್ಕೆ ಸಲಾಹುದ್ದಿನ್
ಗುರಿ ಮಾಡಿಕೊಂಡಿರುವ ಪ್ರದೇಶವೂ
ಇದಾಗಿದ್ದು, ಅಂತಿಮವಾಗಿ ಇದ್ದ
ಬದ್ದ ಜನವೆಲ್ಲಾ ಉಗ್ರವಾದಕ್ಕೆ
ಎದ್ದು ನಿಲ್ಲುತ್ತೀವಿ ಎಂದು
ಕಲ್ಲೆಸೆಯಲು ನಿಲ್ಲತೊಡಗಿದರೆ
ಚೆಂದದ ಕಾಶ್ಮೀರ ಕಣಿವೆ
ಖಾಲಿಯಾಗದೆ ಏನು ಮಾಡೀತು.