ಕಾಶ್ಮೀರವೆಂಬ ಖಾಲಿ ಕಣಿವೆ
ನೆಲೆ ಕಳೆದುಕೊಳ್ಳುತ್ತಿರುವ ಉಗ್ರರು
(ಆರ್ಥಿಕ ದುಸ್ಥಿತಿ ಮತ್ತು ಅಭಿವೃದ್ಧಿ ಇಲ್ಲದ ನೆಲದಲ್ಲಿ ಮನುಷ್ಯ ಎಂಥಾ ದ್ರೋಹ ಮಾಡುವುದಕ್ಕೂ ಈಡಾಗುತ್ತಾನೆನ್ನುವುದು. ಮತ್ತಿದಕ್ಕೆ ಜೀವಂತ ಉದಾಹರಣೆಗಳು ಅವರವರಲ್ಲೇ ಆಗುತ್ತಿರುವ ಮರಾಮೋಸದಲ್ಲಿ ಜಾಲವನ್ನು ಬಿಚ್ಚಿಡುತ್ತಿರುವ ಖಬರಿಗಳ ಕೆಲಸ ಆದರೆ ಇದು ಅವಿವೇಕಿ ಪಾತಕಿಗಳಿಗೂ ಅವರ ನಾಯಕರಿಗೂ ಒಂದು ಅರಿವಾಗದ ಸಂಗತಿ. ಕಾರಣ ಸೈನಿಕರ ಬೆಂಬಲದಿಂದ ಪೆÇ್ರೀತ್ಸಾಹಿತಗೊಳ್ಳುತ್ತಿರುವ ಒಂದು ವರ್ಗ ಗುಟ್ಟಾಗಿ ಸಮಾಜದಲ್ಲಿದ್ದೇ, ಉಗ್ರರ ಹಿಂದೆಮುಂದೆ ತಿರುಗಿಕೊಂಡಿದ್ದೇ ಸೈನಿಕರ ಅಧಿಕಾರಿಗಳ ಕಡೆ ಜಮೆಯಾಗಿ ನಿಂತಿದೆ. ಈವರೆಗೆ ಅವರುಗಳು ಕೊಡುವ ಟಿಪ್ಸುಗಳು ಕೈ ತಪ್ಪಿದ್ದಿಲ್ಲ. ಇದೆಲ್ಲದರ ಹಿಂದಿರುವ ಹಿಕಮತ್ತೆಂದರೆ ಹಾಗೆ ಟಿಪ್ಸು ಕೊಡುತ್ತಿರುವವರೂ ಅಪ್ಪಟ ಅವರದೇ ಧರ್ಮೀಯರು.)
ನಿಜಕ್ಕೂ ಕಾಶ್ಮೀರದಲ್ಲಿ ಉಗ್ರವಾದ ಮಾಡಿ, ಫೇಮಸ್ಸಾಗುತ್ತೇನೆಂದು ಹೊರಟು ನಿಂತಿರುವ ಪಾತಕಿಗಳಷ್ಟು ಪೆದ್ದರೂ, ಯಾವಾಗಲೂ ಜೆಹಾದ್ ತನ್ನ ರಕ್ಷಣೆ ಮಾಡುತ್ತದೆ ಅದಕ್ಕಾಗಿ ತಾನು ಮಾಡಿದ್ದೇ ಯುದ್ಧ ಎಂದು ನಂಬಿರುವ ಅವಿವೇಕಿಗಳು ಮತ್ತು ಅವರು ಮಾಡಿಕೊಳ್ಳುವ ಅನಾಹುತಗಳನ್ನು ನೋಡಿದರೆ ಈ ಜನ್ಮದಲ್ಲಿ ಇವರನ್ನು ಸುಧಾರಿಸುವುದು ಸಾಧ್ಯವಿಲ್ಲ ಮತ್ತಿದು ನಿಜ ಕೂಡಾ. ಇದೆಲ್ಲಕ್ಕಿಂತಲೂ ಮೊದಲು ಈವರೆಗೂ ತಮ್ಮ ಜನರೇ ತಮಗೆ ಆಗೀಗ ಫಿಟ್ಟಿಂಗ್ ಇಟ್ಟು ಸೈನಿಕರಿಂದ ಹೊಡೆಸಿ, ಬಲಿ ಹಾಕುತ್ತಿದ್ದಾರೆ ಎನ್ನುವ ಅರಿವು ಮತ್ತದಕ್ಕೆ ತಕ್ಕ ಬಂದೋ ಬಸ್ತು ಮಾಡಿಕೊಳ್ಳಲಾಗದ ಇವರ ಅಬ್ಬೇಪಾರಿತನಕ್ಕೆ ಅದಿನ್ಯಾವ ಲೆಕ್ಕದಲ್ಲಿ ಯುದ್ಧಗೆಲ್ಲುವ, ಜಗತ್ತಿನಲ್ಲೆಲ್ಲಾ ತಮ್ಮ ಧರ್ಮ ಸ್ಥಾಪಿಸುವ ಕನಸು ಕಾಣುತ್ತಿದ್ದಾರೋ ದೇವರಿಗೂ ಗೊತ್ತಿರಲಿಕ್ಕಿಲ್ಲ.
ಅದೇನಾಗುತ್ತಿದೆಯೆಂದರೆ ಕಾಶ್ಮೀರ ಕಣಿವೆಯಲ್ಲಿ ಈಗ ಉಗ್ರರಿಗೆ ಬೆಂಬಲ ಮೊದಲಿನಿಗಿಂತಲೂ ಹೆಚ್ಚಾಗಿ ಲಭ್ಯವಾಗುತ್ತಿದೆ, ಅತ್ತ ಸರಹದ್ದಿನ ಕಡೆಯಿಂದಲೂ ಇವರನ್ನು ಪೆÇೀಷಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಒಳಗೊಳಗೆ ಅವರನ್ನು ಅವರ ಕಡೆಯವರೆ ಹಿಡಿಸಿ ಹೊಡೆಸುತ್ತಿರುವ ವಿಚಾರ ಕೂಡಾ ಗುಟ್ಟೇನಲ್ಲ. ಕಾರಣ ಇವತ್ತು ಪ್ರತಿಯೊಬ್ಬ ಪಾತಕಿಯ ತಲೆ ಮೇಲೆ ಏನಿಲ್ಲವೆಂದರೂ ಐದರಿಂದ ಹತ್ತು ಲಕ್ಷದ ಇನಾಮುಗಳಿವೆ ಮತ್ತು ಅಂತಾ ಪ್ರೈಜ್‍ಕ್ಯಾಚ ಆದಾಗ ಇನಾಮಿನ ಬಟವಾಡೆಯೂ ತೀರ ವ್ಯವಸ್ಥಿತ ಮತ್ತು ತುರ್ತಾಗಿ, ಕರಾರುವಕ್ಕಾಗಿ ನಿಗದಿತ ಕಾಲ ಮಿತಿಯೊಳಗೆ ಮುಗಿದುಹೋಗುತ್ತಿದೆ.
ಅನಾಮತ್ತಾಗಿ ಎಳೆಂಟು ತಿಂಗಳೊಳಗೆ ಸರಿ ಸುಮಾರು 165 ಜನ ಉಗ್ರರನ್ನು ಹೊಡೆದು ಕೆಡುವಿದ್ದೂ, ಸ್ಥಳೀಯ ಜನರ ಜತೆಗೆ ಅವರ ಬಾಂಧವ್ಯ ಬೆಳೆಯುತ್ತಿರುವುದೂ ಸೂಕ್ಷ್ಮವಾಗಿ ನಡೆಯುತ್ತಿರುವ ಸಂಗತಿಗಳು. ಮೊನ್ನೆ ಮೊನ್ನೆ ಹತ್ತು ದಿನದ ಹಿಂದೆ ಪೆÇೀಲಿಸರು ಹತ್ತೇ ನಿಮಿಷದ ನಾಲ್ಕೇ ನಾಲ್ಕು ರೌಂಡಿನ ಬುಲೆಟ್ ವಾರ್ ಮಾಡಿ ಹತ್ತು ಲಕ್ಷ ತಲೆಬೆಲೆಯ ಪಾತಕಿಯೊಬ್ಬನನ್ನು ಕೆಡುವಿ ಹಾಕಿದರಲ್ಲ ಅದು ಯಾವ ಲೆಕ್ಕದಲ್ಲೂ ಸೈನಿಕರಿಗೆ ಗೊತ್ತಿಲ್ಲದೆ ನಡೆದುಹೋದ ಎನ್‍ಕೌಂಟರು. ಆ ಏರಿಯಾದಲ್ಲಿ ಕಾರ್ಯಾಚರಣೆಗೆಂದು ಪೆÇೀಲಿಸರು ಮತ್ತು ಸೈನಿಕರು ಯಾವ ತಯಾರಿಯಲ್ಲೂ ಹೋಗಿರಲಿಲ್ಲ. ಕಾರಣ ಆವತ್ತು ಕಿನ್ಲಾಭಾಗ್ ಏರಿಯಾದಲ್ಲಿ ಎಂದಿನಂತೆ ಬಂದೋ ಬಸ್ತು ಮಾಡುವ ಸೈನಿಕರ ಕೂಚು ಜಾರಿಯಲ್ಲಿತ್ತು. ಅದು ಪೂರ್ತಿ ಕಣಿವೆಯಲ್ಲೆಲ್ಲಾ ನಡೆಯುತ್ತಲೇ ಇರುತ್ತದೆ. ಹಾಗಂತ ಹಾದು ಹೋದ ದಾರಿಯಲ್ಲೆಲ್ಲಾ ಸೈನಿಕರು ಶರಂಪರ ಗುಂಡು ಹರಿಸಿಕೊಂಡು ಹೋಗುತ್ತಾರೆಂದಲ್ಲ. ಅದರೆ ಅವರದ್ದೇ ಆದ ಶೈಲಿಯಲ್ಲಿ ಪರಿಸ್ಥಿತಿ ಮೇಲೆ ನಿಗಾ ಇಡುವ ಪಹರೆ ಅದು. ಸರಿ ಸುಮಾರು ದಿನಕ್ಕಿಷ್ಠು ಕೀ.ಮೀ. ದೂರದವರೆಗೂ ಅವರವರ ಮಾಹಿತಿ ಆಧರಿಸಿ ರೌಂಡು ಹೊರಡುತ್ತಾರೆ.
ಹಾಗೆ ನಡೆಯುವ ಪಹರೆಯಲ್ಲಿ ಒಮ್ಮೆ ಅಲರ್ಟ ನೆಸ್ಸು ಬರುತ್ತದೆ. ಸಣ್ಣ ಕದಲಿಕೆಗಳೂ ನಡೆದೇ ನಡೆಯುತ್ತದೆ. ಪರಿಸ್ಥಿತಿ ಸ್ವಲ್ಪ ಯಾಮಾರಿದರೂ ಫೈಟು ಶುರುವಾಗುತ್ತದೆ. ಅದಕ್ಕಾಗಿ ಸೈನಿಕರು ಯಾರೆಂದರೆ ಯಾರ ಹತ್ತಿರವೂ ಮಾತಾಡುವ ಗೋಜಿಗೇ ಹೋಗುವುದಿಲ್ಲ. ಆ ದಿನ ಸಂಜೆ ಹಾಗೆ ಹಾಯುತ್ತಿರುವ ಪೆÇೀಲಿಸರ ಜತೆಗಿನ ಅರ್.ಆರ್. ಪಡೆಯ ಸೈನಿಕರ ಮೇಲೆ ಇದ್ದಕ್ಕಿದ್ದಂತೆ ಗುಂಡೀನ ಮಳೆಯಾಗಿದೆ. ಇಂಥದ್ದಕ್ಕೆಲ್ಲಾ ಆರ್ಡರು, ಮಾಹಿತಿ ಇತ್ಯಾದಿ ಏನೂ ಬೇಕಿಲ್ಲ ಸೈನಿಕರು ಕಾಯುವುದೂ ಇಲ್ಲ. ಅದಕ್ಕೆಲ್ಲಾ ಸರಕಾರದ ಮರ್ಜಿ ಕಾಯುವ ಬಂದೂಕಿನ ಗುಂಡು ಏಣಿಸುವ ಕಾರ್ಯಕ್ಕೆ ಕಳೆದ ಮೂರು ವರ್ಷದಿಂದ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಗುಂಡಿಗೆ ಗುಂಡು ಹಾರಿಸುವುದೊಂದೆ ಸೈನಿಕರಿಗಿರುವ ಆಜ್ಞೆ. ಕೂಡಲೆ ಗುಂಡು ಹಾರಿ ಬಂದ ಮನೆಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ಆರಂಭಿಸಿದ ಪಡೆಯ ಜವಾನರು ಮನೆಯನ್ನು ಸುತ್ತುವರೆದು ಒಳಗಿರುವ ಉಗ್ರನನ್ನು ಹಣಿಯಲು ಯತ್ನಿಸಿದ್ದರೆ. ತಲೆಕೆಟ್ಟ ಉಮರ್ ಖಾಲಿದ್ ಎಂಬ ಭಯೋತ್ಪಾದಕ ಪಟ್ಟ ಹೊತ್ತ ಕಾಕಿಪೆÇೀಕಿ ಪಾತಕಿ ಒಳಗೊಳಗೆ ಬೆವರುತ್ತ ಸುಖಾ ಸುಮ್ಮನೆ ಗುಂಡು ಹಾರಿಸಿದ್ದಾನೆ.
ಸೈನಿಕರಿಗೆ ಇಂಥವೆಲ್ಲಾ ಅಸಂಘಟಿತ ದಾಳಿ ಎದುರಿಸುವುದನ್ನು ಹೇಳಿಕೊಡಬೇಕೆ..? ಅವರಿಗೆ ಅಸಲಿಗೆ ಯಾವ ಸೂಚನೆಯೂ ಬೇಕೆ ಆಗಿಲ್ಲ. ಸರಿಯಾಗಿ ಮನೆಯನ್ನು ಕವರ್ ಮಾಡುವ ಹೊತ್ತಿಗಾಗಲೇ ಮನೆಯೊಳಗಿಂದ ಬರುವ ಗುಂಡಿನ ಮೊರೆತ ನಿಂತುಹೋಗಿದೆ. ಎದುರಾ ಎದುರೇ ಕಿಟಕಿಯತ್ತ ತೂರಿ ಹೋದ ಸೈನಿಕನೊಬ್ಬ ಎರಗಿದ ರಭಸಕ್ಕೆ ಸ್ವಯಂಘೋಷಿತ ಲಷ್ಕರ್ ಕಮಾಂಡರ್ ಎಂಬ ಹೇಢಿ ಕಿರುಚಲೂ ಆಗದೆ ನೆಗೆದು ಬಿದ್ದಿದಾನೆ. ಸರಿಯಾಗಿ ಕಾಳಗ ಆರಂಭವಾಗುವ ಮೊದಲೇ ಗುಂಡಿನ ಹಾರಾಟ ನಿಂತೂ ಹೋಗಿದೆ. ಒಳನುಗ್ಗಿದ ಸೈನಿಕರಿಗೆ ಆಶ್ಚರ್ಯ ಕಾದಿತ್ತು. ಬಿದ್ದಿದ್ದು ದೊಡ್ಡಕುಳ ಎಂದು ಹೆಸರು ಮಾಡಿದ ಡಬ್ಬಲ್‍ಪ್ಲಸ್ ಮಾರ್ಕ್ ಹೊಂದಿರುವ ಪಾತಕಿ ಆತ. ಆಶ್ಚರ್ಯ ಮತ್ತು ಅವನ ಅವಿವೇಕತನದ ಪರಮಾವಧಿ ಎಂದರೆ ಸುಖಾ ಸುಮ್ಮನೆ ಅವನು ಮನೆಯಲ್ಲಿ ಕೂತೆ ಇದ್ದರೂ ಸಾಕಾಗಿತ್ತು. ಬದುಕಿಕೊಳ್ಳುತ್ತಿದ್ದ. ಆದರೆ ಸೈನಿಕರನ್ನು ನೋಡುತ್ತಲೇ ಬೆದರಿ ಗುಂಡು ಹಾರಿಸಿ ಮೂರ್ಖತನದ ಪರಮಾವಧಿಯನ್ನು ಈ ಕಮಾಂಡರ್ ಜಗತ್ತಿಗೆ ಜಾಹೀರು ಮಾಡಿದ್ದ.
ಕಾರಣ ಗಸ್ತಿನ ಪಡೆಗಳ ಬರುವಿಕೆಯನ್ನು ಸಹಜವಾಗಿ ತೆಗೆದುಕೊಳ್ಳದ ಈ ಡಬ್ಬಾ ಕಮಾಂಡರು ತನ್ನನ್ನು ಎನ್ ಕೌಂಟರ್ ಮಾಡಲಿಕ್ಕೆಂದೇ ಸೈನಿಕರು ಬರುತ್ತಿದ್ದಾರೆ ಎಂದು ಇದ್ದಕ್ಕಿದ್ದಂತೆ ಬಾಗಿಲಿಕ್ಕಿಕೊಂಡು ಕಿಟಿಕಿಯಲ್ಲಿ ಎಗರಿ ನಿಂತು ಯದ್ವಾ ತದ್ವಾ ಗುಂಡು ಹಾರಿಸಿ, ತನ್ನಂತಹ ಪ್ರೈಜ್‍ಕ್ಯಾಚ್ ಇಲ್ಲಿದ್ದೇನೆ ಸುಳಿವನ್ನು ತಾನಾಗೇ ಬಿಟ್ಟುಕೊಟ್ಟಿದ್ದಾನೆ. ಮೊದಲೇ ಟ್ರಿಗ್ಗರ್ ಮೇಲೆ ಬೆರಳಿಟ್ಟುಕೊಂಡು ಓಡಾಡುವ ಸೈನಿಕರು ಲೆಕ್ಕವಿಡದೆ ಗುಂಡು ಹಾರಿಸಿ ಕೆಡುವಿ ಹಾಕಿದ್ದಾರೆ. ಬೇಕಾಗಿತ್ತಾ ಇಂಥಾ ಪೆದ್ದುತನದ ಕಾರ್ಯಶೈಲಿ. ಕಣಿವೆ ಖಾಲಿಯಾಗುವುದು ಎಂದರೆ ಇದೆ ಅಲ್ವಾ..?
ಕಾಶ್ಮೀರದಲ್ಲಿ ಉಗ್ರದಮನ ಮಾಡಿದಷ್ಟೂ ಸಾಲುಸಾಲಾಗಿ ಪಾತಕಿಗಳ ಪಡೆ ಎದ್ದು ನಿಲ್ಲುತ್ತಲೇ ಇದೆಯಲ್ಲ. ಎಲ್ಲಿಂದ ಬರುತ್ತಿದ್ದಾರೆ..? ಹೇಗೆ ಗಡಿ ದಾಟುತ್ತಿದ್ದಾರೆ..? ಹಾಗೆ ಆರೇ ತಿಂಗಳೊಪ್ಪತ್ತಿನಲ್ಲಿ ನೂರೂ ಚಿಲ್ರೆ ಜನರನ್ನು ಸೈನಿಕರು ಹೊಡೆದುರುಳಿಸಿದರೂ ಅಲ್ಲಲ್ಲಿ ವಾರಕ್ಕೆ ಮೂರು ನಾಲ್ಕು ಜನರ ಲೆಕ್ಕದಲ್ಲಿ ಎಲ್ಲಿಂದ ಬಲಿ ಬೀಳುತ್ತಿದ್ದಾರೆ..? ಅದರಲ್ಲೂ ಕಮಾಂಡರ್‍ಗಳೆಂದು ಹೆಸರಿಸಿಕೊಂಡು ಶೊಫಿಯಾನ್, ಪುಲ್ವಾಮ, ಗಾಂಧಾರ್‍ಬಾಲ್, ಕಾರ್ಗಿಲ್, ಬಾರಾಮುಲ್ಲ ಮತ್ತು ಉರಿ ಸೆಕ್ಟರ್‍ಗಳನ್ನು ಹಂಚಿಕೊಂಡು ಹರಿದು ತಿನ್ನುವ ಲೆಕ್ಕದಲ್ಲಿ ಉರಿಯುತ್ತಿದ್ದ ಈ ಸ್ವಘೋಷಿತ ಪಾತಕಿಗಳ ತಲೆಯ ಮೇಲೆ ಹತ್ತಾರು ಲಕ್ಷದಷ್ಟು ಇನಾಮು ಘೋಷಿಸುವಷ್ಟು ಇವರು ಹೇಗೆ ಬೆಳೆಯುತ್ತಿದ್ದಾರೆ..? ತೀರ ಕಾಶ್ಮೀರದಲ್ಲಿ ಭಯೋತ್ಪಾದಕರ ಸ್ವರ್ಗ ಮತ್ತು ಉಗ್ರರ ಅಪರ ಕರ್ಮಠ ಬೆಂಬಲಿಗರೂ ಇರುವ ದಕ್ಷಿಣ ಪುಲ್ವಾಮ ಯಾಕೆ ಇವತ್ತು ಅಷ್ಟೊಂದು ಮಟ್ಟದಲ್ಲಿ ಉಗ್ರರಿಗೆ ಆಶ್ರಯ ಕೊಡುವ ತಾಣವಾಗುತ್ತಿದೆ..? ಹಾಗೆ ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯ ಹಲವು ಒಳಸುಳಿ ಊರುಗಳು ಇವತ್ತಿಗೂ ಸೈನಿಕರಿಗೂ, ಪೆÇೀಲಿಸರಿಗೂ ಅಪರಿಚಿತವಾಗಿ ಉಳಿದಿದ್ದಾದರೂ ಹೇಗೆ..? ದಕ್ಷಿಣ ಪುಲ್ವಾಮಾದ ಇಂಟರೆಸ್ಟಿಂಗ್ ಕಥನ ಮುಂದಿನ ವಾರಕ್ಕಿರಲಿ.

No comments:
Post a Comment