Sunday, October 1, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ಉಗ್ರರ ಬೆಂಬಲಕ್ಕೆ ನಮ್ಮದೇ ಹಣ..
 (ಮೊನ್ನೆ ಮೊನ್ನೆಯವರೆಗೂ ದೆಹಲಿ ಮೀಟಿಂಗ್ ಎಂಬ ನೆಪದಲ್ಲಿ ಅನಾಮತಾಗಿ 365 ಕೋಟಿ ರೂ. ಸರಕಾರಿ ದುಡ್ಡು ಖರ್ಚು ಮಾಡಿರುವ ಪ್ರತ್ಯೇಕತಾವಾದಿಗಳಿಗೆ ಅಷ್ಟು ಕೊವತ್ತಿದ್ದರೆ ಸ್ವಂತದ ಮಕ್ಕಳನ್ನು ಕಾಶ್ಮೀರದಲ್ಲಿ ಇಂತಹ ಪುಂಡಾಟಿಕೆ, ಕಲ್ಲೆಸೆಯುವಂತಹ ದೇಶದ್ರೋಹದ ಕೆಲಸಕ್ಕೆ ಬಳಸಲಿ. ಸಾಧ್ಯವೇ ಇಲ್ಲ. ಇವರೆಲ್ಲಾ ಯಾವಾಗಲೋ ದೇಶ ಬಿಟ್ಟು ವಿದೇಶಗಳಲ್ಲಿ ನೆಲೆಕಂಡಿದ್ದಾರೆ. ಅಂದಹಾಗೆ ಈ ಪ್ರತ್ಯೇಕತಾವಾದಿ ಉಗ್ರರ ಬೆಂಬಲಿಗರಿಗೆ ಸ್ವಂತದ್ದೂ ಅಂತಾ ಯಾವ ದುಡಿಮೆ, ಕ್ಯಾಮೆ ಮಾಡಿಯೇ ಗೊತ್ತಿಲ್ಲ. ಜೀವನ ಪೂರ್ತಿ ದ್ರೋಹದ ಕೆಲಸವೇ..? ಮತ್ತೆ ಇಂಥಾ ಐಶಾರಾಮಿ ಜೀವನ, ಬದುಕು ಹೇಗೆ ಸಾಗುತ್ತಿದೆ ಹಾಗಾದರೆ..? ಎಲ್ಲಿಂದ ಬರುತ್ತಿದೆ ಇವರಿಗೆ ಈ ಪಾಟಿ ದುಡ್ಡು..? ಅದೇ ಇಂಟರೆಸ್ಟಿಂಗ್..)

ಇವತ್ತು ಅಜಾದಿ ಗ್ಯಾಂಗು ಎಂಬ ಹೆಸರಲ್ಲಿ ಕಾಶ್ಮೀರದಲ್ಲಿ ಬೇಡದ ಕ್ಯಾತೆ ಮಾಡಿಕೊಂಡು ಪಾಕಿಸ್ತಾನದ ಬೂಟು ನೆಕ್ಕುತ್ತಿರುವ ಉಗ್ರವಾದಿ ಬೆಂಬಲಿಸುವ ಪ್ರತ್ಯೇಕತಾವಾದಿ ನಾಯಕರುಗಳು ಮತ್ತು ಸಂಪೂರ್ಣ ಕಾಶ್ಮೀರದ ವ್ಯವಹಾರ ಹಾಗು ಉಸಿರು ನಡೆಯುತ್ತಿರುವುದೇ ನಾವು ನೀವೆಲ್ಲ ಕೊಡುತ್ತಿರುವ ತೆರಿಗೆ ಹಣದ ಮೇಲೆ ಎಂಬುದು ನಿಮಗೆ ಗೊತ್ತಿದೆಯೇ..? ವೈರುದ್ಯ ಮತ್ತು ಅತ್ಯಂತ ಹೇಯವೆಂದರೆ ಇಂಥಾ ದೇಶ ಒಡೆಯುವ ದ್ರೋಹಿಗಳಿಗೆ ದೆಹಲಿಗೆ ಬರುವ ಖರ್ಚನ್ನು ನಮ್ಮ ಸರಕಾರಗಳು ವಹಿಸಿಕೊಂಡು ಬಂದಿವೆ ಕಳೆದ ಹಲವು ದಶಕಗಳಿಂದ. ತೀರ ಅನಾಹುತಕಾರಿ ಮತ್ತು ನೀಚ ಕೃತ್ಯವೆಂದರೆ ಕಲ್ಲು ಹೊಡೆಯುವ ಮತ್ತು ಉಗ್ರರಿಗೆ ಬೆಂಬಲ, ಮನೆ, ಅನ್ನ, ನೀರು, ಆಶ್ರಯ ಇವೆಲ್ಲವನ್ನೂ ಒದಗಿಸುವ ಕೆಲಸವನ್ನೇ ಇವರು ಮಾಡುತ್ತಿರುವುದು ಮತ್ತು ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ನೇರವಾಗಿ ಇವರಿಗೆ ಹಣ ತಲುಪುತ್ತದೆ. ಅದಕ್ಕಾಗಿ ಇವರು ಅತ್ತಲಿಂದ ನುಸುಳುವ ಪಾತಕಿಗಳು ಸೇರಿದಂತೆ ಸ್ಥಳೀಯ ಹುಡುಗರನ್ನು ಸಂಘಟಿಸುವುದು, ಕಲ್ಲು ಹೊಡೆಯುವ ಕೆಲಸಕ್ಕೆ ಹಣ ನೀಡುವುದು, ಎಲ್ಲಾದರೂ ಉಗ್ರರು ಸಿಕ್ಕಿಬಿದ್ದರೆ ಸೈನಿಕರು ನಡೆಸುವ ಕಾರ್ಯಾಚರಣೆಗೆ ತಡೆ ಒಡ್ಡುವುದು, ಮಿಲಿಟರಿ ಜನರಿಗೆ ಯಾವುದೇ ಸರ್ವೀಸು ಸಿಗದಂತೆ ನೋಡಿಕೊಳ್ಳುವುದು ಇಂತಹ ಹರಾಮಿ ಕೆಲಸವೇ ಇವರ ನೌಕರಿ. ಹೇಗಿದೆ ಜೀವನ...?
ಅಷ್ಟಕ್ಕೂ ಈಗಿನ ಜನರೇಶನ್ನಿನ ಹುಡುಗರಿಗೆ ಮತ್ತು ಇತ್ತೀಚಿನ ಒಂದು ದಶಕದಿಂದ ಹದಿಹರೆಯದ ಹುಡುಗಿಯರಿಗೂ, ಹುಟ್ಟುತ್ತಲೇ ಧರ್ಮದ ಅಫೀಮು ಮತ್ತು ಭಾರತ ವಿರೋಧಿ ಕತೆ ಹೇಳಿ ಬೆಳೆಸಿದ, ಬೆಳೆಸುತ್ತಿರುವ ಅಧ್ಬುತ ಯೋಜನೆಯ ಶ್ರೇಯ ಕೂಡಾ ಇವರದ್ದೆ. ಇವರೊಂದಿಗೆ ರಾಜಕೀಯ ತೆವಲೆನ್ನುವುದು ಅದೆಷ್ಟು ಮನುಶ್ಯನನ್ನು ದೇಶದ್ರೋಹಿಯನ್ನಾಗಿಸಬಲ್ಲದು ಎನ್ನುವುದಕ್ಕೆ ತಲೆ ಮಾಸಿದ ಅಬ್ದುಲ್ಲಾ ಅಪ್ಪಟ ಉದಾಹರಣೆ. ಅವನ ಸ್ಟೇಟ್‍ಮೆಂಟು ನೋಡಿ,
"..ಕಾಶ್ಮೀರದಲ್ಲಿ ಜನ ಶಸ್ತ್ರಾಶ್ತ್ರ ಹಿಡಿಯುತ್ತಿರುವುದು ಅವರ ಹಕ್ಕಿಗಾಗಿ ಮತ್ತು ಸ್ವಂತಂತ್ರ ರಾಷ್ಟ್ರಕ್ಕಾಗಿ. ಅವರನ್ನು ಬೆದರಿಸಿ ಗೆಲ್ಲುವುದು ಸಾಧ್ಯವಿಲ್ಲ. ಮನೆ ಮನೆಗಳಲ್ಲಿ ಕಾಶ್ಮೀರಕ್ಕಾಗಿ ಜೀವ ಕೋಡಲು ಜನ ಸಿದ್ಧವಿದ್ದಾರೆ. ಕಶ್ಮೀರ ಯುವಕರಿಗೆ ರಾಜಕೀಯದ ಬದಲಾಗಿ ಇರುವುದು ದೇಶಾಭಿಮಾನ.. " 
ಅಂದ ಹಾಗೆ ಇಂಥ ಹೇಳಿಕೆಯ ಹಿಂದೆ ಇರುವ ನಾಯಕರೆಂದರೆ ತೀರ ಕಾಶ್ಮೀರ ಪ್ರಗತಿಗೆ ಮತ್ತು ಅಲ್ಲಿನ ಜನಜೀವನಕ್ಕೆ, ಪಕ್ಕೆ ಮುಳ್ಳಾಗಿ ಕಾಡುತ್ತಿರುವ ಪ್ರಮುಖ ಉಗ್ರ ಬೆಂಬಲಿಗರಾದ ಸಯ್ಯದ ಗಿಲಾನಿ, ಮೀರ್‍ವೇಜ್, ಯಾಸಿನ್ ಮಲಿಕ್, ಇರ್ಫಾನ ಹಫೀಸ್, ಲೋಧಾ ಮತ್ತು ಅಸ್ಲಂಗಣಿ ಇತ್ಯಾದಿಗಳು. ಇವರೆಲ್ಲರ ನಿರಂತರ ಕಾಯಕವೆಂದರೆ ಜೆ.ಎನ್.ಯು. ನಂತಹ ವಿಶ್ವವಿದ್ಯಾಲಯದಲ್ಲಿ ಗಲಾಟೆಗೆ ಕುಮ್ಮಕ್ಕು ಮತ್ತು ಹಿಂಬಾಗಿಲಿನಿಂದ ಎಲ್ಲೆಡೆಗೆ ದೇಶ ವಿರೋಧಿ ಸಂಸ್ಕೃತಿಗೆ ಚಾಲನೆ ಕೊಡುತ್ತಾ, ಅತ್ತ ಪ್ರತಿ ಕೆಲಸಕ್ಕೂ ಪಾಕಿಗಳ ಕಡೆಯಿಂದ ಹಣ ಎತ್ತುತ್ತಾ ಬದುಕುತ್ತಿದ್ದಾರೆ. ಇಂಥಾ ವಿದ್ರೋಹಿಗಳಿಗೆ ನಮ್ಮ ತೆರಿಗೆ ಹಣದಲ್ಲಿ ಪ್ರತಿ ಸರಿ ದೆಹಲಿಗೆ ಮೀಟಿಂಗ್ ನೆಪದಲ್ಲಿ ಬರಲು ವಿಮಾನ, ವಿ.ಐ.ಪಿ. ಸೌಲಭ್ಯ ಗಳನ್ನು ಸರಕಾರ ಕಳೆದ ಹಲವು ದಶಕಗಳಿಂದ ಕೊಡಮಾಡುತ್ತಿತ್ತು ಎಂದರೆ ಅದೆಂಥಾ ಕರ್ಮ ನೋಡಿ. ಇವರ ರಾಜಕೀಯ ತೆವಲಿಗಾಗಿ ಭಾರತೀಯರು ಏನೆಲ್ಲಾ ಭಾರ ಹೊರಬೇಕಿದೆ. 
ಇವರ ಮುಂದಿನ ಸಂತಾನದಂತಿರುವ ಉಮರ್ ಖಾಲಿದ್ ಮತ್ತು ಕನ್ನಯ್ಯಾ ಕುಮಾರ್‍ನಂಥವರು ದೇಶದ ಇತರೆಡೆಗೆ ಒಳಗೊಳಗೇ ವಿದ್ರೋಹಿಗಳನ್ನು ತಯಾರು ಮಾಡುತ್ತಿದ್ದಾರೆ. ಇವತ್ತು ದೇಹಲಿ, ಹೈದರಾಬಾದ್ ವಿಶ್ವವಿದ್ಯಾಲಯಗಳು ಅಕ್ಷರಶ: ಇಂಥಾ ವಿದ್ರೋಹಿಗಳನ್ನು ಹುಟ್ಟಿಸುವ ಟಂಕಶಾಲೆಗಳು. ಅಂದಹಾಗೆ ಇವೆಲ್ಲಾ ಇತ್ತಿಚೆಗೆ ಸಾಲುಸಾಲಾಗಿ ಹುರಿಯತ್ ನಾಯಕರನ್ನು ಎನ್.ಐ.ಎ. ಬಂಧಿಸಿ ಬಾಯ್ಬಿಡಿಸುತ್ತಿರುವುದರಿಂದ ಇಲ್ಲಿವರೆಗೆ ಕೇವಲ ಪೇಪರ್ ಸುದ್ದಿಯಾಗಿದ್ದು ಈಗ ದಾಖಲೆಯಾಗುತ್ತಿದೆ. ಹೀಗೆ ಹುರಿಯತ್ ಮುಖಂಡರಿಗೆ ಹವಾಲಾ, ಬ್ಯಾಂಕು, ಕ್ಯಾಷ್ ಆಂಡ್ ಕ್ಯಾರಿ ಹಾಗು ದುಪ್ಪಟ್ಟು ನಿಗದಿಗಳ ಮೂಲಕ ಹಣ ಬರುತ್ತಿರುವುದು ಖಾತ್ರಿಯಾಗುತ್ತಿದ್ದಂತೆ ರಾತ್ರೋರಾತ್ರಿ ಈ ನಾಯಕರಗಳ ಮನೆ ಮೇಲೆ ದಾಳಿಯಾಯಿತು. ಒಂದೇ ದಿನದಲ್ಲಿ ಅನಧಿಕೃತ ದಾಖಲೆ ಇಲ್ಲದೆ 2.5 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು ಅದು ಬರಲಿರುವ ದಿನಗಳ ಕಲ್ಲಿನೇಟಿನ ಪುಢಾರಿ ಹುಡುಗರಿಗೆ ಹಂಚಲು ಬಳಸಲಾಗುತ್ತಿತ್ತು ಎಂದು ದಾಖಲೆ ಲಭ್ಯವಾಗುವುದರೊಂದಿಗೆ ಹುರಿಯತ್‍ನ ಬಂಡವಾಳ ಅಧಿಕೃತವಾಗಿ ಬೀದಿಗೆ ಬಂದಿದೆ. 
" ಕೂಲಿಗಾಗಿ ಕಲ್ಲು" ಎನ್ನುವ ಯೋಜನೆ ರೂಪಿಸಿದ್ದ ಈ ನಾಯಕರು ತಿಂಗಳ ಒಂದೆರಡು ದಿನಗಳ ಕಾಲ ಇದಕ್ಕಾಗಿ ಹುಡುಗರಿಗೆ, ಕಲ್ಲು ಹೊಡೆಯುವ ತಂಡಗಳನ್ನು ರೂಪಿಸಿ ಆಯಾ ಕ್ಷೇತ್ರವಾರು ಜವಾಬ್ದಾರಿ ವಹಿಸಿಡುತ್ತಿದ್ದರು. ಇಲ್ಲದಿದ್ದರೆ ಪೆÇೀಲಿಸರು ರಸ್ತೆಗೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಅದೆಲ್ಲಿಂದ ಜನ ಕಲ್ಲುಗಳನ್ನು ಹಿಡಿದು ಹೊರಬರುತ್ತಾರೆ..? ಒಂದೆರಡು ದಿನದ ಇಂತಹ ಕಲ್ಲು ಹೊಡೆಯುವ ಪರಮ ದ್ರೋಹಿಗಳು ಒಂದೆರಡು ಕೃತ್ಯಕ್ಕೆ ಪೂರ್ತಿ ತಿಂಗಳಿಗಾಗುವಷ್ಟು ಹಣ ಪಡೆಯುತ್ತಾರೆ. ಬಾಕಿ ದಿನ ಇಲ್ಲಿನ ಎಲ್ಲಾ ವಿವರಗಳನ್ನು ವಾಟ್ಸ್ ಆಪ್‍ನಲ್ಲೂ ಫೇಸ್ ಬುಕ್ಕಿನಲ್ಲೂ ಹಾಕುವುದು ವಿಡಿಯೋ ಅಪೆÇ್ಲೀಡ್ ಮಾಡುತ್ತಲೂ ಜಾಗತಿಕವಾಗಿ ಕಾಶ್ಮೀರದಲ್ಲಿ ಮಾನವ ಹಕ್ಕಿನ ದಮನ ಎಂದು ಪ್ರಚುರ ಪಡಿಸುತ್ತಾ ಕೂರುತ್ತಾರೆ. ಕಲ್ಲೇಟಿನ ದುಡಿತ ಕೆಲವೇ ಗಂಟೆಗಳಾಗಿದ್ದರಿಂದ ಮತ್ತು ಅದರಂತೆ ಇನ್ನಷ್ಠು ಹಣ ಮಾಡುವ ಅವಕಾಶ ಸಿಕ್ಕಿದರೆ ಸಿದ್ಧ ಎನ್ನುತ್ತಾ ದೇಶದ್ರೋಹದ ಇನ್ನಿಷ್ಟು ಹೊಸ ಯೋಜನೆಗಳಿಗೆ ತಯಾರಾಗುತ್ತಾರೆ. ಇವೆಲ್ಲದಕ್ಕೂ ಮೂಲ ನಮ್ಮದೇ ದುಡ್ಡಿನಲ್ಲಿ ಬದುಕುತ್ತಿರುವ ಕಾಶ್ಮೀರ ಸರಕಾರ ಮತ್ತು ಅವರನ್ನು ಸಾಕುತ್ತಾ, ದೇಶಾದ್ಯಂತದ ವೋಟಬ್ಯಾಂಕ್ ಭದ್ರ ಮಾಡಿಕೊಳ್ಳುವ ಸಲುವಾಗಿ ಕಳೆದ ಹಲವು ದಶಕಗಳಿಂದ ಕಾಶ್ಮೀರದ ದ್ರೋಹಿಗಳನ್ನು ಸಾಕುತ್ತಿದ್ದ ರಾಜಕೀಯ ಪಕ್ಷಗಳ ಕಾರಣ ಇವತ್ತು ಇಂಥಾ ಗಂಡಾಂತರ ಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ನಮ್ಮದೇ ಹಣದಲ್ಲಿ ದ್ರೋಹಿಗಳನ್ನು ಸಲಹುವ ಪರಿಸ್ಥಿತಿ.
ಇದೇ ಕಾರಣ ಇವತ್ತು ಕಾಶ್ಮೀರದ ಮನೆಯ ಗಲ್ಲಿಗಲ್ಲಿಗಳಲ್ಲಿ ಕಲ್ಲಿನ ಸಂಗ್ರಹ ಹೊಂದಿದ ದಾಸ್ತಾನುಗಳಿವೆ. ಸುದ್ದಿ ಬರುತ್ತಿದ್ದಂತೆ ಇಡೀ ಮನೆಯ ಸುತ್ತಲಿನ ತಂಡಗಳು ಮಿಲಿಟರಿ ವಿರುದ್ಧ ಕಲ್ಲೆಸೆಯಲು ಕಾರ್ಯಾಚರಣೆಗಿಳಿಯುತ್ತದೆ. ಅವರನ್ನು ಹೊಡೆದು ಹಾಕಿದರೆ ಅದನ್ನು ಮಾನವ ಹಕ್ಕು ದಮನ ಎಂದು ದೇಶಾದ್ಯಂತ ಇರುವ ಎಡಪಂಥೀಯ ಪ್ರಪರ ಬುಜೀಗಳು ಹುಂಯ್ಯೋ ಹುಂಯ್ಯೋ ಎಂದು ಕೀರಲಾಗಿ ಒರಲುತ್ತಾ ನಿಂತುಬೀಡುತ್ತಾರೆ. ಅದನ್ನೆ ಕೆಲವು ದ್ರೋಹಿ ಚಾನೆಲ್‍ಗಳು ಆ ಸುದ್ದಿಯನ್ನೇ ಅಂತರಾಷ್ತ್ರೀಯ ಮಟ್ಟದಲ್ಲಿ ಭಾರತದ ಹರಾಜು ಹಾಕಲು ನಿಲ್ಲುತ್ತವೆ. ಇವೆಲ್ಲದಕ್ಕೂ ಪಾಕಿ ಮೂಲದಿಂದ ಹಣ ಪೂರೈಕೆಯಾಗುತ್ತಿದೆ. ಪಾಕಿಸ್ತಾನಕ್ಕೆ ಗಲ್ಫ್ ಮತ್ತು ಅರಬ ಮೂಲದ ಉದ್ಯಮಿಗಳಿಂದ ಜೆಹಾದ್ ಹೆಸರಲ್ಲಿ ಹಣ ಎತ್ತಲಾಗುತ್ತದೆ. ಅದೆಲ್ಲವೂ ಅಲ್ಟಿಮೇಟ್ಲಿ ಬಂದು ಸೇರುವುದು ಉಗ್ರರನ್ನು ಬೆಳೆಸಲು ಮತ್ತು ಅವರ ಬೆಂಬಲಕ್ಕೆ ಬೇಕಾಗುವ ವ್ಯವಸ್ಥೆಗೆ. 

No comments:

Post a Comment