Saturday, September 23, 2017

ಕಾಶ್ಮೀರವೆಂಬ ಖಾಲಿ ಕಣಿವೆ..ಪಾತಕಿಗಳ ಸರಣಿ ಹತ್ಯೆ...

(ತೀರ ಶ್ರೀನಗರ ಮತ್ತು ಅದರಾಚೆಗೆ ಆಲ್ಚಿಯ ಸರಹದ್ದಿನವರೆಗೂ ಇರುವ ಕಾಶ್ಮೀರಿ ಮುಸ್ಲಿಂ ಕುಟುಂಬಗಳು ಒಲೆ ಉರಿಸುವುದೇ ಉಗ್ರರು ಕೊಡುವ ಹಣದಲ್ಲಿ ಎನ್ನುವುದು ಗಮನೀಯ. ಇದಕ್ಕೆ ಕೆಲಸ ಮಾಡಬೇಕಿಲ್ಲ. ವರ್ಷದ ಯಾವತ್ತೊ ಒಂದೆರಡು ದಿನ ಗಡಿ ನುಸುಳಿ ಬರುವವರಿಗೆ ನೀರು ಅಹಾರ ಬೆಚ್ಚನೆಯ ಮಲಗುವ ವ್ಯವಸ್ಥೆ ಮಾಡುವ ದೇಶದ್ರೋಹದ ಕೆಲಸ ಮಾಡಿದರೆ ಸಾಕು. ಯಾರಿಗಿದೆ ವರ್ಷಾನುಗಟ್ಟಲೇ ದುಡಿಯುವ ಜರೂರತ್ತು)

ಸುಮಾರು ಒಂದೂವರೆ ವರ್ಷದ ಹಿಂದೆ ಇದು ನಿಗದಿಯಾಗಿತ್ತು. ಯಾವಾಗ ಭಾರತದ ಸರಹದ್ದನ್ನು ಈ ಪಾತಕಿಗಳು ಪ್ರವೇಶಿಸುತ್ತಾರೋ ಆವತ್ತೇ ಇಲ್ಲಿ ಅವರ ಹೆಣವಾಗುವ ಹಣೆಬರಹವೂ ಬರೆದಾಗಿರುತ್ತದೆ. ಅದರಲ್ಲೂ ಪಾಕಿಸ್ತಾನಿ ನೆಲದ ಉಗ್ರರಿಗೆ ಯಾವುದೇ ರಿಯಾಯಿತಿ ಇಲವೇ ಇಲ್ಲ. ಸೈನ್ಯದ ಲೆಕ್ಕಾಚಾರದಲ್ಲಿ ಇದು ಈ ಬಾರಿಯ ವರ್ಷದ ಕೊನೆಯವರೆಗೂ ಎಳೆಯಬಹುದಾಗಿದ್ದ ಕೇಸು. ಆದರೆ ಸತತವಾಗಿ ಕಳೆದ ಮೂರು ತಿಂಗಳಿಂದ ಸ್ವಘೋಷಿತ ಹಿಜ್ಬುಲ್ ಮತ್ತು ಲಷ್ಕರ್ ಕಮಾಂಡರ್‍ಗಳನ್ನು ಸೈನ್ಯ ಹೊಡೆದುರುಳಿಸಿದೆ. 
ಹತ್ಯೆ ಹೇಗಾಯಿತು ಎನ್ನುವುದಕ್ಕಿಂತಲೂ ಹೇಗೆ ಈ ದುರುಳರು ಸಿಕ್ಕಿಬೀಳದಂತೆ ವರ್ಷಾನುಗಟ್ಟಲೇ ಕಾಶ್ಮೀರದಲ್ಲಿ ತಲೆ ಮರೆಸಿಕೊಂಡಿರುತ್ತಾರೆ ಎನ್ನುವುದೇ ಮುಖ್ಯ. ಹಾಗೆ ನೋಡಿದರೆ ಅಲ್ಲಿನ ಹೆಣ್ಣುಮಕ್ಕಳಿಗೆ ಮತ್ತು ಈಗಾಗಲೇ ವಯಸ್ಕರಾಗಿ ಜೀವನದ ಉದ್ದೇಶ ಬದುಕುವುದಷ್ಟೆ ಎಂದುಕೊಂಡವರಿಗೆ ಸೈನ್ಯ ಮತ್ತು ದೇಶವನ್ನು ಎದುರು ಹಾಕಿಕೊಳ್ಳುವಂತಹ ದೇಶ ದ್ರೋಹದ ಉಪದ್ಯಾಪಿತನ ಬೇಕಾಗೇ ಇಲ್ಲ. ಹೀಗೆಂದು ಸ್ಪಷ್ಟ ನಿಲುವಿನ ಮುಸ್ಲಿಂರ ಸಣ್ಣ ಗುಂಪುಈಗಲೂ ತಮ್ಮ ಪಾಡಿಗೆ ಬದುಕು ಕಟ್ಟಿಕೊಳ್ಳಲೆತ್ನಿಸುತ್ತಲೇ ಇದೆ.
ಹಾಗಾಗಿಯೇ ಮೊನ್ನೆ ಹತನಾದ ಅಬು ಇಸ್ಮಾಯಿಲ್ ಎಂಬ ಅಮರನಾಥ್ ಯಾತ್ರಿಗಳ ಮೇಲೆ ದಾಳಿಕೋರ ಹದಿನೆಂಟು ತಿಂಗಳಿನಿಂದ ತಲೆಮರೆಸಿಕೊಳ್ಳಲು ಸಾದ್ಯವಾಗಿದ್ದು. ಹಾಗೆ ನೋಡಿದರೆ ಈ ಕೆಲಸಕ್ಕೆ ಮೂಲ ಕೈ ಹಾಕಿದ್ದವನು ದುಜಾನೆ ಮತ್ತು ಅದಕ್ಕೂ ಮೊದಲು ಅಬ್ಜರ್‍ಭಟ್. ಎಲ್ಲರ ಉದ್ದೇಶ ಒಂದೇ ಆಗಿತ್ತು ಜಗತ್ತು ಬೆಚ್ಚಿ ಬೀಳುವಂತಹ ದಾಳಿಯನ್ನು ನಡೆಸಬೇಕೆನ್ನುವುದು. ಆದರೆ ಅದಾಗುವ ಮೊದಲೇ ಭಟ್‍ನನ್ನು ಹತ್ಯೆ ಮಾಡಿದ ಸೈನಿಕರಿಗೆ ಇಂತಹ  ಬಕರಾಗಳನ್ನು ಬಲೆಗೆ ಬೀಳಿಸುವ ಕಲೆ ಕರಗತವಾಗಿ ಹೋಗಿತ್ತು ಹಾಗಾಗಿ ಅಬು ದುಜಾನ್ ಎಂಬ ಪಾತಕಿ ಕಳ್ಳನಂತೆ ತಲೆ ಮರೆಸಿಕೊಳ್ಳುತ್ತಿದ್ದವನು ಸಿಗೇ ಬಿದ್ದು ಹೆಣವಾಗಿ ಹೋದ. 
ಅದಕೂ ಮೊದಲು ಸಿಕ್ಕಿಬಿದ್ದ ಅಬ್ಜಾರ್ ಭಟ್ ಕೂಡಾ ಹೀಗೆ ಹೇಯ ದಾಳಿ ಮಾಡುವ ಸಂಚು ರೂಪಿಸಿದ್ದವನೆ. ಆದರೆ ಕೈಗೆ ಸಿಗದೆ ತಪ್ಪಿಸಿಕೊಳುತ್ತಿದ್ದುದು ಕಣಿವೆಯಲ್ಲಿ ದೇಶದ್ರೋಹಿಗಳಾಗಿ ಇಲ್ಲಿನ ನೆಲ ಜಲದ ಉಪಕಾರಕ್ಕೆ ಬಿದ್ದೂ ಅವರಿಗೆ ಅನ್ನ,ನೀರು,ನೆರಳು ನೀಡುತ್ತಿದ್ದುರಿಂದ. ಒಂದು ಗೊತ್ತಿರಲಿ ಕಾಶ್ಮೀರ ಕಣಿವೆಯಲ್ಲಿ ಯಾವೊಬ್ಬನೂ ಹೀಗೆ ನಮ್ಮ ಕಡೆಗಳಲ್ಲಿ ತೋಟದ ನೆರಳಲ್ಲೋ, ದೇವಸ್ಥನಾದ ಜಗುಲಿಯ ಮೇಲೋ ಮಲಗಿ ದಿನಗಳನ್ನು ತೆಗೆದಂತೆ ತಲೆ ತಪ್ಪಿಸಿಕೊಂಡು ದಿನ ದೂಡಲು ಸಾಧ್ಯವೇ ಇಲ್ಲ. ಅವನಿಗಾಗಿ ಯಾವನಾದರೂ ದೇಶದ್ರೋಹಿ ಕಾಶ್ಮೀರಿ ಬಾಗಿಲು ತೆರೆದಿಟ್ಟು ಕಾವಲುಕಾಯ್ದು ಅನ್ನ ರೊಟ್ಟಿ ಕೊಟ್ಟು ಸಾಕಲೇಬೇಕು. ಅಂದಾಗ ಮಾತ್ರವೇ ಆತ ವರ್ಷಾನುಗಟ್ಟಲೇ ಬದುಕಲು ಸಾಧ್ಯ. ಇಲ್ಲವಾದರೆ ವಾತಾವರಣ ವೈಪರಿತ್ಯ ಮತ್ತು ಸೈನ್ಯ, ಸಿ.ಆರ್.ಪಿ.ಎಫ್. ಪಡೆಗಳು ಇಂಚಿಂಚನ್ನು ಆವರಿಸಿಕೊಂಡಿರುವ ಪರಿಗೆ ಒಂದೇ ವಾರದಲ್ಲೇ ಹೆಣವಾಗುವುದು ನಿಶ್ಚಿತ. ಹಾಗಾಗೇ ಪೆÇೀಲಿಸು ಮತ್ತು ಸ್ಥಳೀಯ ಖಬರಿಗಳು ಇತ್ತಿಚೆಗೆ ಸರಿಯಾದ ಸಂಪರ್ಕವನ್ನು ಹೊಂದಿದ್ದು ನಿರಂತರ ಹೆಣಗಳು ಬೀಳುತ್ತಿವೆ. 
ಮೊನ್ನೆ ನೌಗಾಂ ಪ್ರದೇಶದಲ್ಲಿ ಕೇವಲ ಹತ್ತೇ ನಿಮಿಷದಲ್ಲಿ ನೆಲಕ್ಕುರುಳಿದ ಪಾತಕಿ ಇಸ್ಮಾಯಿಲ್ ಯಾವ ಲೆಕ್ಕದಲ್ಲೂ ದೊಡ್ಡ ಕ್ರಿಮಿಯೇನಲ್ಲ. ಆದರೆ ಯಾವಾಗ ಅಭ್ಜಾರ್ ಭಟ್ ಮತ್ತು ದುಜಾನೆ ಹತರಾಗಿ ಹೋದರೋ ಇವನ ಮಹತ್ವಾಕಾಂಕ್ಷೆ ಎದ್ದು ಕೂತಿತ್ತು. ಸಧ್ಯಕ್ಕೆ ಗಡಿದಾಟಿ ಬಂದಿರುವ ದೊಡ್ಡ ಮಟ್ಟದ ಪಾತಕ ಎಸಗಬಲ್ಲ ಕಮಾಂಡರ್‍ಗಳು ಯಾರೂ ಇಲ್ಲ. ಮಾಡಬೇಕಾದ ಇಬ್ಬರೂ ಯಾವ ದಾಳಿಯನ್ನೂ ಸರಿಯಾಗಿ ಮಾಡಿಲ್ಲ ತಾನು ಏನಾದರೂ ಮಾಡಿ ಒಂದು ದಾಳಿ ಅಂತಾ ಮಾಡಿದರೆ ತತಕ್ಷಣಕ್ಕೆ ಕಮಾಂಡರ್ ಪದವಿ ದಕ್ಕುತ್ತದೆ. ಅಲ್ಲದೆ ಹಾಗೇನಾದರೂ ಮಾಡಿದರೇನೆ, ಕಣಿವೆಯಲ್ಲಿ ಇನ್ನಷ್ಟು ದಿನ ಊಟ,ವಸತಿಯ ಜೊತೆಗೆ ದೇಶದ್ರೋಹಿ ಕಾಶ್ಮೀರಿಗಳು ರಾಜಾಶ್ರಯವನ್ನೇ ಕೊಡುತ್ತಾರೆ. ಹೀಗೆ ಅನಿವಾರ್ಯ ಮತ್ತು ಅರ್ಜೆಂಟಿಗೆ ಬಿದ್ದ ಕ್ರಿಮಿ ಅಬುಇಸ್ಮಾಯಿಲ್ ಅಮರನಾಥ್ ಯಾತ್ರಿಗಳ ಮೇಲೆ ದಾಳಿ ಮಾಡಿದ. ಅದು ದೊಡ್ಡ ವಿಷಯವೂ ಆಗಿರಲಿಲ್ಲ. ನೂರಾರು ಕಿ.ಮೀ. ಉದ್ದಾನು ದಾರಿಯಲ್ಲಿ ತೀರ ಯಾವದಾದರೂ ಗುಡ್ಡದ ಮರೆಯಿಂದ ಕಿ.ಮೀ.ದೂರದಿಂದಲೇ ಗುಂಡಿನ ದಾಳಿ ನಡೆಸಿ ಕೆಡುವಬಹುದಿತ್ತು. ಆದರೆ ಹಾಗಾದಲ್ಲಿ ಆ ಕೂಡಲೇ ತಮ್ಮನ್ನು ಸುತ್ತುವರೆಯುವ ಸೈನಿಕರು ಅಲ್ಲೆ ಹೊಡೆದು ಕೆಡುವುತ್ತಾರೆ ಎಂದು ಗೊತ್ತಿದ್ದುದರಿಂದ ಇಸ್ಮಾಯಿಲ್ ಊರ ಮಧ್ಯದಲ್ಲಿ ದಾಳಿಗೆಂದು ಅಮಾಯಕವಾಗಿ ಸಿಕ್ಕ ಬಸ್ ಮೇಲೆ ಎರಗಿದ್ದ. ಅದೂ ಕೂಡಾ ತುಂಬಾ ಪ್ರಿಪ್ಲಾನ್ ಏನಲ್ಲ. ಆ ಹೊತ್ತಿಗಾಗಲೇ ಅಬು ಪಾಂಪೆÇರ್ ಏರಿಯಾದಲ್ಲೇ ತಲೆಮರಸಿಕೊಂಡಿದ್ದ. 
ಆಕಸ್ಮಿಕವಾಗಿ ಬಸ್ ನಿಧಾನಕ್ಕೆ ಏಕಾಂಗಿಯಾಗಿ ಚಲಿಸುತ್ತಾ ಹೊರಟಿದ ಎನ್ನುವ ಸುದ್ದಿ ಸಿಕ್ಕು ತತಕ್ಷಣಕ್ಕೆ ಅದರ ಮೇಲೆ ಎರಗಿ ರುಬಾಬು ತೋರಿಸಲು ಪ್ರಯತ್ನಿಸಿದ್ದ. ಆದರೆ ಹಾಗೆ ಮಾಡುವ ಮೂಲಕ ಆ ಏರಿಯಾದಿಂದ ಹೊರಬೀಳುವ ತನ್ನ ಬಾಗಿಲು ತಾನೆ ಹಾಕಿಕೊಂಡಿದ್ದ. ಸೈನಿಕರಿಗೆ ಇಂಥದ್ದನ್ನೆಲ್ಲ ಬೆಂಬತ್ತುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಸ್ಥಳೀಯ ಬಾತ್ಮಿದಾರರ ಮೂಲಕ ಅತನನ್ನು ಹಿಂಬಾಲಿಸುತ್ತಲೆ ಮೊನ್ನೆ ಪಕ್ಕಾ ಟಿಪ್ಸು ಸಿಗುತ್ತಿದ್ದಂತೆ ಎರಗಿದ್ದಾರೆ. ಅಷ್ಟೆ ಹತ್ತೇ ನಿಮಿಷದಲ್ಲಿ ಹೆಣವಾಗಿದ್ದಾನೆ ಸಂಗಡಿಗನೊಂದಿಗೆ. ಇದಕ್ಕೆ ಸರಿಯಾಗಿ ಇಂಥಾ ದೇಶದ್ರೋಹಿಗಳೂ ಮತ್ತು ಪಾತಕಿಗಳನ್ನು ಒಮ್ಮೆ ಗಡಿದಾಟಿಸಿ ಕೈ ತೊಳೆದುಕೊಳ್ಳುವ ಪಾಕಿಸ್ತಾನ ನಂತರ ಯಾವ ಕಾರಣಕ್ಕೂ ಅವರನ್ನು, ಆಚೆಗೆ ಅಂದರೆ ವಾಪಸ್ಸು ತನ್ನ ನೆಲಕ್ಕೆ ಬಿಟ್ಟು ಕೊಳ್ಳುವುದೇ ಇಲ್ಲ. ಇದೆಲ್ಲಾ ಗೊತ್ತಿದ್ದೂ ಧರ್ಮದ ಅತಿರೇಕಕ್ಕೆ ಬೀಳುವ ಕ್ರಿಮಿಗಳು ಬರುತ್ತಿದಂತೆ ದೊಡ್ಡ ಸುದ್ದಿಯಾಗುವ ಹೊಡೆತಕ್ಕೆ ಕೈ ಹಾಕಿ ಸತ್ತು ಸುದ್ದಿಯಾಗುವುದೇ ಆಗುತ್ತಿದೆ. ಅತ್ತ ಕಡೆಯಿಮ್ದ ಇವನಾರು ನಮಗೇ ಗೊತ್ತೇ ಇಲ್ಲ ಎನ್ನುವ ಪಾಪಿಸ್ತಾನ ಎಂದಿನಂತೆ ಹೀಗೆ ಸರಹದ್ದು ದಾಟಿ ಬರುವ ಪಾತಕಿಗಳ ಹತ್ಯೆಯಾಗುತ್ತಿದ್ದಂತೆ ಅತ್ತಲಿಂದ ಹೊಸ ತಂಡವನ್ನು ಕಳಿಸುವ ವ್ಯವಸ್ಥೆ ಮಾಡುತ್ತದೆ. 
ಇದೆಲ್ಲ ಒತ್ತಟ್ಟಿಗಿರಲಿ. ಆದರೆ ಇಲ್ಲೇ ನಮ್ಮದೇ ದೇಶದ ನಮ್ಮದೇ ಬೇರೆ ರಾಜ್ಯದ ಜನ ಸಾಮಾನ್ಯರ ತೆರಿಗೆ ಹಣದ ಮೇಲೆ ಜೀವನ ಮಾಡುತ್ತಿರುವ ಹರಾಮಿ ಕಾಶ್ಮೀರಿ ದೇಶದ್ರೋಹಿಗಳು ಅದ್ಯಾವುದೋ ನಂಬಿಕೆ ಮತ್ತು ನಿಟ್ಟಿನಲ್ಲಿ ದಾರಿಹೋಕ ದನಗಳಂತೆ ಬರುವ ಉಗ್ರರಿಗೆ ತಂತಮ್ಮ ಮನೆ ಮಠಗಳಲ್ಲಿ ನೀರು ನೆರಳೂ ಕೊಟ್ಟು ಸಾಕುತ್ತಿದ್ದಾರಲ್ಲ ಅಷ್ಟೆಲ್ಲಾ ಮಾಡಿಯೂ ಇವರಿಗೆ ಪಾಕಿಸ್ತಾನ ಯಾವತ್ತಾದರೂ ಬಾಗಿಲು ತೆರೆದು ಸ್ವಾಗತಿಸುತ್ತದೆ ಎನ್ನುವ ಯಾವ ಭರವಸೆ ಮೇಲೆ ಇಂಥಾ ದೇಶದ್ರೋಹಕ್ಕಿಳಿದಿದ್ದಾರೆ. ಅತ್ತ ನೋಡಿದರೆ ಅವರ್ಯಾವತ್ತೂ ಇಂಥಾ ದ್ರೋಹಿಗಳನ್ನು ಅಸಲಿಗೆ ಮುಸ್ಲಿಂರು ಎಂದೇ ಒಪ್ಪಲು ತಯಾರಿಲ್ಲ. ಇದೆಲ್ಲಾ ಗೊತ್ತಿದ್ದೂ ಇಲ್ಲದ ಧರ್ಮದ ತೆವಲಿಗಿಳಿದಿರುವ ಕ್ರಿಮಿಗಳು ಫಾಲಿಡಾಲ್ ಹೊಡೆಸಿಕೊಂಡ ಹುಳುಗಳಂತೆ ಬಿದ್ದು ಸಾಯುತ್ತಿದ್ದಾರೆ. ಕಣಿವೆ ಕ್ರಮೇಣ ಶುದ್ಧವಾಗುತ್ತಿದೆ. ಅಷ್ಟಕ್ಕೂ ಸರಹದ್ದು ನುಸುಳುವುದು ಯಾವತ್ತೋ ಕಡಿಮೆಯಾಗಿದೆ. ಕಾರಣ ಒಬ್ಬೇಒಬ್ಬ ನುಸುಳುಕೋರನೂ ಇವತ್ತಿಗೂ ಕತೆ ಹೇಳಲೂ ಜೀವಂತವಾಗಿಲ್ಲ. ಆ ಮಟ್ಟಿಗೆ ನಮ್ಮ ಸೈನಿಕರು ಸ್ವಚ್ಛತಾ ಕಾರ್ಯ ಕೈಗೊಳುತ್ತಿದ್ದರೆ ನಮ್ಮಲ್ಲಿ ಮಾತ್ರ ಕಾಶ್ಮೀರ ಗಲಾಟೆಯನ್ನು ವಿಭಿನ್ನ ನಿಲುವಿನಲ್ಲಿ ನೋಡಬೇಕಾದ ಅಗತ್ಯವಿದೆ ಎನ್ನುವ ಪ್ರಗತಿಪರರು ಯಾರ ಋಣಕ್ಕೆ ಬಿದ್ದಿದಾರೆ..? 


No comments:

Post a Comment