Sunday, September 17, 2017

ಕಾಶ್ಮೀರವೆಂಬ ಖಾಲಿ ಕಣಿವೆ..ಕವಲುದಾರಿಗೆ ತಳ್ಳಿದ 370 ಕಲಂ.

(ಇಲ್ಲಿ ಸಿಬಿಐ ತನಿಖೆ ನಡೆಸುವಂತಿಲ್ಲ, ಜನ ಪ್ರತಿನಿಧಿ ಕಾಯ್ದೆ ಗೊತ್ತೆ ಇಲ್ಲ. ಅಕಸ್ಮಾತ ಕಾಶ್ಮೀರಿ ಹೆಣ್ಣು ಹೊರ ರಾಜ್ಯದ ಪುರುಷನನ್ನು ಮದುವೆಯಾದರೆ ಆಕೆ ಪೂರ್ತಿಯಾಗೇ ಕಾಶ್ಮೀರದ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಭಾರತೀಯ ದಂಡ ಸಂಹಿತೆ(ಇಂಡಿಯನ್ ಪಿನಲ್ ಕೋಡ್)ನ್ನು ಹೇಳಿಕೊಂಡು ಅವಹೇಳನ ಮಾಡಿ ನಗುವ ಕಾಶ್ಮೀರಿಗಳಿಗೆ ಕಾಯಿದೆಯ ಮಹತ್ವ ಮತ್ತು ಅದರ ವ್ಯಾಪ್ತಿ ಎರಡೂ ಗೊತ್ತಿಲ್ಲ. ಆದರೂ ನಾಚಿಕೆ ಬಿಟ್ಟು ನಾಯಿಬಾಳು ಮಾಡುತ್ತಿರುವ ಕಾಶ್ಮೀರಿ ಸರಕಾರ, ಇತರೆ ರಾಜ್ಯದ ಜನತೆ ಕಟ್ಟುವ ತೆರಿಗೆಯಲ್ಲಿ ತನ್ನ ಪಾಲು ಪಡೆದು ಅಧಿಕಾರ ನಡೆಸುತ್ತಿದೆ. ಸ್ವಂತಕ್ಕೆ ನಯ್ಯ ಪೈಸೆ ಉತ್ಪನ್ನ ಈ ರಾಜ್ಯದ ಬೊಕ್ಕಸಕ್ಕಿಲ್ಲ ಎಂದರೆ ನಿಮಗೆ ಅಚ್ಚರಿಯಾದೀತು. ಇದಕ್ಕಿಂತ ಹೇಯ ಬೇಕಾ. ಒಂದು ನೈಯಾ ಪೈಸೆ ತೆರಿಗೆ ಕಟ್ಟದೆ ದೇಶಾದ್ಯಂತದ ಜನರಿಂದ ಪಡೆದ ತೆರಿಗೆಯಲ್ಲಿ ಭಿಕ್ಷೆ ಪಡೆದು ಬದುಕುವ ಬದುಕೂ ಒಂದು ಬದುಕಾ..?)

ತೀರ ಕಾಶ್ಮೀರ ಪಂಡಿತರಿಗೆ ಮರುವಸತಿಗೆ ಸ್ಥಾನ ಇಲ್ಲದ ತಾಯ್ನಾಡಿನಲ್ಲಿ ಕಾಲೂರಬೇಕೆಂಬ ತಹತಹಕ್ಕೆ ಮಣ್ಣೆರಚಿದ್ದು ಯಾವ ದೇಶದಲ್ಲೂ ಇಲ್ಲದ ಕಾನೂನನ್ನು ಆಗಿನ ಓಲೈಕೆಯ ಭಾರತ ಸರಕಾರ ಅಂಗೀಕರಿಸಿದ್ದು. ಅದೂ ಆಗಿನ ತುಷ್ಠೀಕರಣದ ರಾಜಕಾರಣದ ಪ್ರಭಾವಕ್ಕೆ ಸಿಲುಕಿ. ಯಾವ ಹಿಂದೂಗಳನ್ನು ಓಲೈಸಿ ಅಥವಾ ಅವರ ಬೆಂಬಲದಿಂದ ಅಖಂಡ ಹಿಂದೂಸ್ಥಾನವನ್ನೇ ಆಳಬಹುದಿತ್ತೋ ಆ ಅವಕಾಶವನ್ನು ದೊಡ್ಡತನ ತೋರಿಸಿಕೊಳ್ಳುವ ಸಲುವಾಗಿ ಕೈಚೆಲ್ಲಿದ ಆಗಿನ ನಾಯಕರು ಕಾಶ್ಮೀರ ಕಣಿವೆಗೆ ವಿಶೇಷ ಕಾನೂನೊಂದನ್ನು ಅಂಗೀಕರಿಸಿಬಿಟ್ಟರು. ಸ್ವತ: ಸಂವಿಧಾನ ಕರ್ತೃಗಳೇ ಇಂತಹ ಕಾನೂನಿನ ವಿರುದ್ಧ ನಿಂತು ಅದನ್ನು ತಪ್ಪಿಸಲು ಯತ್ನಿಸಿದರಾದರೂ ಆಗದ ಕಾನೂನು ಪರಿಚ್ಛೇದ 370 ಎಂಬ ಹೆಸರಿನಲ್ಲಿ ಭಾರತದ ಭುಜವೇರಿ ಕೂತುಬಿಟ್ಟಿತ್ತು.
ಇತಿಹಾಸದಲ್ಲಿ 1947 ರ ರಾಜಸಂಸ್ಥಾನಗಳನ್ನು ವೀಲಿನಗೊಳಿಸುವ ಪ್ರಕ್ರಿಯೆಯಲ್ಲಿ ಪಟೇಲರು ಪೂರ್ತಿ ಹಿಂದುಸ್ಥಾನವನ್ನೇ ಒಂದು ಗೂಡಿಸುವ ಕಾರ್ಯದಲ್ಲಿದ್ದಾಗ ಕಾಶ್ಮೀರದ ವಿಷಯಕ್ಕೆ ಮಾತ್ರ ತಾವೆ ಬಗೆಹರಿಸುವುದಾಗಿ ಆಗಿನ ಪ್ರಧಾನಿ ಎದ್ದು ಕೂತುಬಿಟ್ಟರು. ಅಲ್ಲಿ ಮಹಾರಾಜ ಹರಿಸಿಂಗ್‍ರ ಆಳ್ವಿಕೆಯನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದ ಶೇಕ್ ಅಬ್ದುಲ್ಲಾ ಮೌಂಟ್‍ಬ್ಯಾಟನ್ ಮೂಲಕ ನೆಹರು ಮೇಲೆ ಒತ್ತಡ ತಂದಿಟ್ಟುಬಿಟ್ಟ. ಆಗ ರಾಜದ್ರೋಹದ ಅಪಾದನೆಯ ಮೇರೆಗೆ ಹರಿಸಿಂಘ್ ಈ ಅಬ್ಧುಲ್ಲಾನನ್ನು ಬಂಧಿಸಿ ಸೆರೆಯಲ್ಲಿಟ್ಟರು. ಮುಸ್ಲಿಂ ಓಲೈಕೆಗಿಳಿದಿದ್ದ ನಾಯಕರು ಇತ್ತ ಹರಿಸಿಂಘ್ ಮತ್ತು ಅತ್ತ ಅಬ್ದುಲ್ಲ ಇಬ್ಬರನ್ನೂ ಬಿಡಲಾಗದೆ ಬ್ಯಾಟನ್‍ನ ಒತ್ತಡಕ್ಕೊಳಗಾಗಿ ಸಮಸ್ಯೆಯನ್ನು ವಿಶ್ವಸಂಸ್ಥೆಯೆದುರಿಗೆ ಇಟ್ಟು ಕೈಮುಗಿದು ನಿಂತರು. ಒಳಗೊಳಗೆ ಅಬ್ದುಲ್ಲ ತನ್ನನ್ನು ಸ್ವತಂತ್ರ ಕಾಶ್ಮೀರದ ಪ್ರಧಾನಿಯನ್ನಾಗಿಸದಿದ್ದರೆ ಸಂಪೂರ್ಣ ಮುಸ್ಲಿಂ ಸಮುದಾಯ ಅವರ ವಿರುದ್ಧ ತಿರುಗಿ ಬೀಳಲಿದೆ ಎಂದೇ ನಂಬಿಸಿಬಿಟ್ಟ. ಅತ್ತ ಪಾಕಿಸ್ತಾನ ಕಾಶ್ಮೀರದ ಹಲವು ಭಾಗವನ್ನು ಆಕ್ರಮಿಸಿಕೊಂಡು ಬೇರೆ ಕೂತಿತಲ್ಲ. ಅದಕ್ಕಾಗಿ ತಾನು ಭಾರತದೊಳಗೇ ಇದ್ದರೂ ತನಗೆ ವಿಶೇಷ ಕಾನೂನಿನ ಸೌಲಭ್ಯ ಒದಗಿಸಕೊಡಲೇಬೇಕೆಂದು ಒತ್ತಾಯದ ಮೂಲಕ ಆಗಿನ ನಾಯಕರನ್ನು ನಯವಾಗಿ ನಂಬಿಸಿದ. 
ಅದೆಲ್ಲದರ ಪರಿಣಾಮ ಸಂವಿಧಾನದ 21 ನೇ ಪರಿಚ್ಛೆದದ ಪ್ರಕಾರ ಅದನ್ನೊಂದು ಕಾನೂನು ಎಂದೇ ಪರಿಗಣಿಸಬೇಕೆ ಹೊರತಾಗಿ ಶಾಶ್ವತವಾದ ಅಧಿಕಾರ ಅಲ್ಲ ಎಂದು ದಾಖಲಿಸಲಾಯಿತು. ಸ್ವತ: ತನ್ನನ್ನು ಪ್ರಧಾನಿ ಎಂದಲ್ಲದೆ ಅಲ್ಲಿನ ರಾಜ್ಯಪಾಲರನ್ನು ಸದರ್-ಇ-ರಿಯಾಸತ್ ಎಂದೇ ಕರೆಯುವ ಪರಿಪಾಠ 1965 ರವರೆಗೂ ಮುಂದುವರೆದಿತ್ತು. ಹೀಗಾಗಿ ಅದರ ಸಲುವಾಗಿ ಆರು ವಿಷೇಶ ಉಪಕ್ರಮಗಳನ್ನು ಸೇರಿಸಲಾಯಿತು. ಅದರ ಪ್ರಕಾರ
ಅದು ಗಣರಾಜ್ಯದ ಭಾಗವಾದರೂ ಪ್ರತ್ಯೇಕ ಸಂವಿಧಾನ ಹೊಂದಬಹುದು.
ರಕ್ಷಣೆ ಹಣಕಾಸು, ವಿದೇಶ ವ್ಯವಹಾರ ಮತ್ತು ಸಂಪರ್ಕ ಮಾತ್ರ ಕೇಂದ್ರದ ಕೈಯ್ಯಲ್ಲಿರುತ್ತದೆ.
ಭಾರತದ ಸಂವಿಧಾನದ ಕಾಯಿದೆ ಲಾಗೂ ಮಾಡಲು ಅಲ್ಲಿನ ವಿಧಾನಸಭೆಯ ಅನುಮತಿಬೇಕು.
ವೀಲಿನ ಪ್ರಕ್ರಿಯೆಗೆ ಅಲ್ಲಿನ ಸರಕಾರ ಮುಂದಾದರೆ ಅದಕ್ಕಾಗಿ ಅಲ್ಲಿನ ಸಂವಿಧಾನವನ್ನೆ ಪರಿಷ್ಕರಿಸಬೇಕು ಅದಕ್ಕೆ ವಿಧಾನಸಭೆ ಅನುಮತಿಸಬೇಕು.
ಅಷ್ಟಾದರೂ ಅದು ಮಧ್ಯಂತರ ಅಧಿಕಾರವಾಗುತ್ತದೆ.
ರಾಷ್ಟ್ರಪತಿಗಳೇ ಇದಕ್ಕೆ ಮುಂದಾದರೆ ಅದಕ್ಕೂ ವಿಧಾನಸಭೆಯ ಅನುಮತಿ ಅಗತ್ಯ. ಇತ್ಯಾದಿ ಕಠಿಣ ಕಾಯಿದೆಗಳ ಮಧ್ಯೆ 1956 ರಲ್ಲಿ ಅಲ್ಲಿನ ಶಾಸನ ಸಭೆ ಅದು ಭಾರತದ ಅವಿಭಾಜ್ಯ ಅಂಗವೆಂದು ಒಪ್ಪಿ ಅನುಮೋದನೆಯನ್ನು ಅಧಿಸೂಚನೆಗೊಳಿಸಿದಾಗಲೇ 370 ಬಿದ್ದು ಹೋಗಿತ್ತು. ಆದರೆ ಭಾರತದ ಲೋಕಸಭೆ ತುಷ್ಠೀಕರಣದ ರಾಜಕೀಯ ಮಾಡಿ ಅದನ್ನು ತಾನೇ ತಿರಸ್ಕರಿಸಿಬಿಟ್ಟಿತು. 
ಇನ್ನೂ ಮುದುವರೆದ ಅದರ ಕಾನೂನಿನ ಅಸಂಬಧ್ಧತೆಗಳು ನೋಡಿ. ಭಾರತದ ಸಂವಿಧಾನ 19(1)(ಇ) ಮತ್ತು (ಜಿ) ಮಾನ್ಯ ಮಾಡಿರುವ ಹಕ್ಕನ್ನೆ, ಕಾಯಿದೆ 370 ಗಾಳಿಗೆ ತೂರುತ್ತದೆ. ಇದರ ಪ್ರಕಾರ ಭಾರತದ ಯಾವುದೇ ಪ್ರಜೆ ಎಲ್ಲಿ ಬೇಕಾದರೂ ತನಗೆ ಸರಿ ಹೊಂದುವ ವೃತ್ತಿ, ಉದ್ಯೋಗ ನೆಲೆಸುವ ಇತ್ಯಾದಿ ಹಕ್ಕನ್ನು ಹೊಂದಿದ್ದರೆ ಇಲ್ಲಿಗೆ ಮಾತ್ರ ಅದು ಲಾಗೂ ಆಗುವುದೇ ಇಲ್ಲ. ನೀವು ಭಾರತದ ಪ್ರಜೆಯಾಗಿ ಕಾಶ್ಮೀರ ನಾಡಿನಲ್ಲಿ ಇದೆಲ್ಲಾ ಮಾಡುವಂತಿಲ್ಲ. ಸ್ವತ: ಕೇಂದ್ರ ಸರಕಾರ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಅಥ್ವಾ ಇನ್ನಾವುದೇ ರೀತಿಯ ದೇಶಕ್ಕೆ ಒಳಿತಾಗುವ ಕಾರಣ ಯಾವುದೇ ಆದೇಶ ಹೊರಡಿಸಿದರೂ ಅದನ್ನು ಮೊದಲು ಅಲ್ಲಿನ ಸಭೆಯ ಅನುಮತಿ ಪಡೆದು ಜಾರಿಗೊಳಿಸಬೇಕೆ ವಿನ: ಕಾಶ್ಮೀರದಲ್ಲಿ ನೇರ ಜಾರಿ ಸಾಧ್ಯವಿಲ್ಲ. 
ರಾಷ್ಟ್ರಪತಿಯಿಂದಲೇ ನೇಮಕವಾಗುವ ರಾಜ್ಯಪಾಲರು ನಂತರದಲ್ಲಿ ತಮ್ಮದೇ ಅಧಿಕಾರಕ್ಕೆ ಬಂದುಬಿಡುತ್ತಾರೆ. ಅಕಸ್ಮಾತ ಅಗತ್ಯಬಿತ್ತು ಎಂದು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಯತ್ನಿಸಿದರೂ ಅದಕ್ಕೆ ಜಮ್ಮು ಕಾಶ್ಮೀರ ರಾಜ್ಯಪಾಲರೇ ರಾಷ್ಟ್ರಪತಿಗಳಿಗೆ ಅನುಮತಿ ಕೊಡಬೇಕು. ಹೇಗಿದೆ ಉಲ್ಟಾ ಲೆಕ್ಕಾಚಾರ...?ಇಲ್ಲದಿದ್ದರೆ ಯಾವ ಕಾನೂನೂ ಅಲ್ಲಿ ಜಾರಿಗೊಳಿಸಲಾಗುವುದೇ ಇಲ್ಲ. ಕೇಂದ್ರ ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆಯಬಹುದಾಗಿದ್ದರೂ ಸರಕಾರಕ್ಕೆ ಯಾವುದೇ ತೆರಿಗೆಯನ್ನು ಜಮ್ಮು ಕಾಶ್ಮೀರ ಜನತೆ ಪಾವತಿಸಬೇಕಾಗಿಲ್ಲ. ಪಕ್ಷಾಂತರ ವಿರೋಧಿ ಕಾನೂನು, ಆರ್.ಟಿ.ಐ. ಯಾವುದೂ ಇಲ್ಲಿ ಲೆಕ್ಕಕ್ಕಿಲ್ಲ. ಕೇಳಿ ನೋಡಿ. ನಿಮ್ಮ ಏನೇ ಅಹವಾಲು ಪ್ರಶ್ನೆ ಅಥವಾ ಕೇಂದ್ರ ಸರಕಾರದ ಕಾಯಿದೆಯ ಪತ್ರಗಳನ್ನು ನೇರವಾಗಿ ಕಸದ ಬುಟ್ಟಿಗೆಸೆಯುತ್ತಾರೆ. ದೇಶಾದ್ಯಂತ ಬಡಿದಾಡುವ ಮೀಸಲಾತಿಯನ್ನು ಅಲ್ಲಿ ಹೋಗಿ ಕೇಳಿ ನೋಡಿ. ಉಸಿರಿಗೂ ಮೀಸಲಾತಿ ಇಲ್ಲ. ಅಷ್ಟೆ ಅಲ್ಲ ಪರಿಶಿಷ್ಟ ಜಾತಿ, ಪಂಗಡ, ಮಾನವ ಹಕ್ಕು, ಮಹಿಳಾ ಹಕ್ಕು, ಆಯೋಗಳು, ಶಿಕ್ಷಣ ಹಕ್ಕು, ಸಮಾನತೆಯ ಹಕ್ಕು ಉಹೂಂ ಏನೆಂದರೆ ಏನೂ ಇಲ್ಲಿ ನಡೆಯುವುದಿಲ್ಲ. ಎಲ್ಲೆಡೆಗೆ ವಿಧಾನ ಸಭೆ ಐದುವರ್ಷವಿದ್ದರೆ ಅಲ್ಲಿ ಆರು ವರ್ಷದ ವಿಧಾನಸಭೆ ನಡೆಯುತ್ತದೆ. ಸ್ವತ: ಪ್ರತಿಜ್ಞಾ ವಿಧಿ ಓದಿಕೊಳ್ಳುವ ಅಲ್ಲಿನ ನಾಯಕರಿಗೆ, ದುಡ್ಡು ಮಾತ್ರ ಕೇಂದ್ರ ಸರಕಾರದಿಂದ ಪಡೆಯುವದು ಕಾಶ್ಮೀರಿಗಳಿಗೆ ಅಭ್ಯಾಸವಾಗಿ ಹೋಗಿದೆ. ಹೆಂಗಿದೆ ಪುಕಸಟ್ಟೆ ಬದುಕು..? ಮೈತುಂಬ ಸೊಕ್ಕು ಯಾರಿಗೆ ಬರಲಿಕ್ಕಿಲ್ಲ. 
ಉಳಿದೆಲ್ಲಾ ಬಿಟ್ಟು ಕೊನೆಗೆ ಧರ್ಮದ ಅಫೀಮು ಸೇವಿಸುತ್ತಾ ಇರಲು ಇಷ್ಟೆಲ್ಲಾ ಸಾಕಲ್ಲವಾ..? ಪುಗಸಟ್ಟೆ ಬದುಕಿಗೆ ಬೇರೆನು ಮಾಡಲು ಸಾಧ್ಯ...? ಬರುಬರುತ್ತಾ ಪೆÇೀಲಿಸರ ಗುಂಡಿಗೆ ಸಿಕ್ಕಿ ಸಾಯುವುದರ ವಿನ: ಬೇರೆ ಬದುಕೆ ಕಾಣುತ್ತಿಲ್ಲ ಕಲ್ಲೆಸೆಯುವ ದೇಶದ್ರೋಹಿಗಳಾಗುವ ಹೊರತಾಗಿ. ಕಣಿವೆ ಖಾಲಿಯಾಗದೆ ಏನು ಮಾಡಿತು..? 

No comments:

Post a Comment