ಕಾಶ್ಮೀರವೆಂಬ ಖಾಲಿ ಕಣಿವೆ..
ಅದು ಸಾವಿರ ವರ್ಷಗಳ ಯುದ್ಧ.
(ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಯಿತಲ್ಲ ಆ ಲೀಪಾದಿಂದ 24 ಕಿ.ಮೀ. ದೂರದ ರೈಸಿನ್ ಎಂಬಲ್ಲಿಯೇ ವಾಹನಗಳು ನಿಂತುಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಜನರನ್ನು ಹೊತ್ತು ತರುತ್ತವೆ. ಇಲ್ಲಿ ನಿರ್ಮಿಸಿದ ರಸ್ತೆಯನ್ನು ಕುಸಿಯುವ ಪರ್ವತಗಳು ತಿಂಗಳೊಪ್ಪತ್ತಿಲ್ಲಿ ನುಂಗಿ ಮುಗಿಸುತ್ತವೆ. ಇದರ ಕೂಗಳತೆಯಲ್ಲಿದೆ ದುರ್ಗಮವಾದ ಬಂಗೂಸ್ ವ್ಯಾಲಿ. ಅತ್ಯಂತ ಸುಂದರ ಪ್ರದೇಶ ಲೀಪಾ ವಿಭಿನ್ನ ವಲಯ. ಮೇಲ್ಗಡೆಯ ಪೂರ್ವಭಾಗ ಡೈಖಾನ್ ವ್ಯಾಲಿ, ಪಕ್ಕದ ಇನ್ನೊಂದಿಷ್ಟು ವಲಯವನ್ನು ಚಾನ್ಸೇನ್ ಎನ್ನುತ್ತಾರೆ. ಉಗ್ರರಿಗೆ ಲೀಪಾ ಎಂದರೆ ಡೈಖಾನ್ ವ್ಯಾಲಿಯ ಬದೀಗೆ ಹೋಗುವಂತೆ ಪಾಕಿ ಅಧಿಕಾರ ಕೇಂದ್ರವೇ ಸೂಚನೆ ಕೊಡುತ್ತದೆ. )
ಅಲ್ಲಿ ಸೈನ್ಯಾಧಿಕಾರಿಗಳಿದ್ದಾರೆ. ನಿವೃತ್ತ ರೇಂಜರ್ ಗಳಿದ್ದಾರೆ. ಐ.ಎಸ್.ಐ.ಗಾಗಿ ನೌಕರಿ ಮುಗಿದ ನಂತರವೂ ಪ್ರಾಣ ಕೊಡಲು ಸಿದ್ಧರಿರುವ ಅನಾಹುತಕಾರಿ ಅಧಿಕಾರಿಗಳಿದ್ದಾರೆ. ಕೊನೆಗೆ ಸೈನ್ಯದ ಅಷ್ಟೂ ರೀತಿಯ ಹೆಚ್ಚಿನ ಅಧಿಕಾರಿಗಳು, ರಿಟೈರಾದವರು, ಸೈನ್ಯಕ್ಕೆ ಅಚ್ಚುಮೆಚ್ಚಾಗಲು ಯತ್ನಿಸುವವರೆಲ್ಲಾ ಇವತ್ತು ಕಾಯ್ದು ಕೂತಿದ್ದುದು ಅಕ್ಷರಶ: ಕಾಶ್ಮೀರ ಆ ಕಡೆಯ ಗಡಿಯಲ್ಲಿ ಎನ್ನುವುದು ಜಗತ್ತಿಗೆ ಗೊತ್ತಾಗುವ ಹೊತ್ತಿಗೆ ಪಾಕಿಸ್ತಾನ ಈ ಸರಹದ್ದಿನ ಮನೆಗಳನ್ನು ಬಳಸಿ ಅನಾಮತ್ತು ಆರ್ನೂರಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತದೊಳಕ್ಕೆ ನುಗ್ಗಿಸಿ ಆಗಿತ್ತು. ಇದು ಪಾಕಿಸ್ತಾನ ಹಿಂದೊಮ್ಮೆ ಹೇಳಿದಂತೆ ಸಾವಿರ ವರ್ಷದ ಯುದ್ಧ. ಹೌದು. 1948 ರಲ್ಲಿ ಭಾರತ ಮಾತುಕತೆಯ ಟೇಬಲ್ಲಿನ ಮೇಲೆ ಸೋತು ಹೋದರೂ ಪಾಕಿಸ್ತಾನ ಸೈನ್ಯಕ್ಕಾದ ಅವಮಾನ ಮಾತ್ರ ಅನಾಹುತಕಾರಿ ಹಂತದಲ್ಲಿತ್ತು. ಆವತ್ತೇ ಆಗಿನ ಪಾಕಿಸ್ತಾನದ ನಾಯಕರಲೊಬ್ಬ ಹೀಗೆ ನುಡಿದ್ದದ್ದು ಇವತ್ತು ಜಾಗತಿಕ ದಾಖಲೆ. "..ಭಾರತದೊಂದಿಗೆ ನಾವು ಒಂದು ಯುದ್ಧ ಸೋತಿರಬಹುದು. ಆದರೆ ಇನ್ನು ಮೇಲೆ ಎಲ್ಲಿಯವರೆಗೆ ಕಾಶ್ಮೀರ ಸ್ವತಂತ್ರಗೊಳಿಸಿ ನಮ್ಮ ತೆಕ್ಕೆಗೆ ಸೇರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ವಿರಮಿಸುವುದಿಲ್ಲ. ಇದು ಸಾವಿರ ವರ್ಷಗಳವರೆಗೆ ನಡೆಯಲಿರುವ ಯುದ್ಧ..."
ಅಲ್ಲಿಂದಿಚೆಗೆ ಪಾಕಿಸ್ತಾನ ವಿರಮಿಸಿದ್ದು ಸುಳ್ಳು ಮತ್ತು ಅದಕ್ಕೆ ನೆಮ್ಮದಿಯ ರಾತ್ರಿಗಳನ್ನು ಸ್ವತ: ಕಾಶ್ಮೀರ ಯಾವತ್ತೂ ಕೊಡಲೇ ಇಲ್ಲ. ಕಾರಣ ಕಾಶ್ಮೀರ ಎನ್ನುವುದು ಪಾಕಿಸ್ತಾನದ ಮಟ್ಟಿಗೆ ಅವಮಾನ ಮತ್ತು ಹತಾಶೆಯ ಹುಣ್ಣಾಗಿ ಹೆಗಲೇರಿ ಕೂತುಬಿಟ್ಟಿತ್ತು. ಬೇಕಿದ್ದೋ ಬೇಡದೆಯೋ ಅದು ತನ್ನ ರಾಜನೀತಿ, ಧಾರ್ಮಿಕ, ಸಾಮಾಜಿಕ ಮತ್ತು ಕೊನೆಕೊನೆಗೆ ವೈಯಕ್ತಿಕ ಇಷ್ಟಾನಿಷ್ಟಗಳಲ್ಲೂ ಅದನ್ನು ಪೆÇೀಷಿಸಿಕೊಂಡೆ ಬಂತು. ಇವತ್ತು ಪಾಕಿಸ್ತಾನದಲ್ಲಿ ಜನ ಸಾಮಾನ್ಯನಿಂದ, ತೀರ ಡಿಪೆÇ್ಲೀಮ್ಯಾಟ್‍ಗಳವರೆಗೆ ಹೇಗೇ ಲೆಕ್ಕ ಹಾಕಿದರೂ ಯಾವುದೇ ವಿಷಯದ ಚರ್ಚೆಯಾದರೂ ಅದು ಬಂದು ಕೊನೆಯಲ್ಲಿ ನಿಲ್ಲುವುದು ಭಾರತದೆಡೆಗಿನ ಅಸಹನೆ ಮತ್ತು ಭಾರತದ ಅಭಿವೃದ್ಧಿ ಬಗೆಗಿನ ಒಳಸಂಕಟ, ಹಿಂದೂಗಳನ್ನೂ ಹೇಗೆ ಕೊನೆಗಣಿಸಬೇಕೆನ್ನುವ ತಪನೆಯೇ ಹೊರತಾಗಿ ಬೇರೊಂದು ಜಗತ್ತಿದೆ ಎನ್ನುವ ಭೌದ್ಧಿಕ ಪಾರಮ್ಯ ಸಾಧಿಸಿದ್ದೇ ಇಲ್ಲ.
ಇಂಥಾ ವಿನಾ ಕಾರಣಗಳಿಗಾಗಿ ಮುಸ್ಲಿಂ ಹೊರತು ಪಡಿಸಿ ಇನೊಬ್ಬೆ ಒಬ್ಬ ಬೇರೆ ಧರ್ಮೀಯ ಪಾಕಿಸ್ತಾನಕ್ಕೆ ಕಾಲಿಡುತ್ತಿಲ್ಲ. ಪ್ರವಾಸಿ ಲೆಕ್ಕದಲ್ಲಿ ಅಲ್ಲಿನ ಪ್ರಗತಿ ಅಪೂಟು ಕಿತ್ತು ಹೋಗಿದೆ. ನಿಮಗೆ ಗೊತ್ತಿರಲಿ ಒಂದು ದೇಶಕ್ಕೆ ಎಷ್ಟು ವಿದೇಶಿಯರು ವ್ಯಾಪಾರ, ಪ್ರವಾಸ, ವೈದ್ಯಕೀಯ, ಸಾಮಾಜಿಕ ಹಾಗು ಕ್ರೀಡೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸಂದರ್ಶಿಸುತ್ತಾರೆ ಎನ್ನುವುದರ ಮೇಲೆ ಅಲ್ಲಿನ ಸಾಮಾಜಿಕ ಸಮತೋಲನದ ಸಂಖ್ಯೆ ಜಾಗತಿಕವಾಗಿ ದಾಖಲಾಗುತ್ತದೆ. ಆ ವಿಷಯದಲ್ಲಿ ಪಾಕಿಸ್ತಾನದ್ದು ಅತ್ಯಂತ ಹೀನಾಯ ಸ್ಥಿತಿಗತಿ. ಅದಕ್ಕೆ ಬೆಂಬಲವಾಗಿ ಈಗ ಹೊಸ ರೀತಿಯ ಯೋಜನೆಗೆ ಹಿಂದ್ಯಾವತ್ತೋ ಚಾಲನೆ ಕೊಟ್ಟಿದ್ದ ಪಾಕಿಸ್ತಾನದ ಇನ್ನೊಂದು ದೂರಗಾಮಿ ಆತಂಕಿ ಮುಖವನ್ನು ಭಾರತದ ಸೈನ್ಯ ವರೆಸಿಹಾಕುತ್ತಿದೆ. ಕಳೆದೆರಡ್ಮೂರು ದಶಕಗಳಿಂದ ಪಾಕಿಸ್ತಾನದ ದೂರಾಲೋಚನೆಯಿಂದ ಸೈನ್ಯದ ನಿವೃತ್ತ ಮತ್ತು ಇತರ ಅಧಿಕಾರಿ ಹಾಗು ತಂಡಗಳನ್ನು ನೆಲೆಗೊಳಿಸುತ್ತಿದ್ದುದು ಎಲ್ಲಿ ಗೊತ್ತೆ ಭಾರತದ ಗಡಿಗಳಲ್ಲಿ. ಸುಮಾರು ಕಳೆದ ಮೂವತ್ತು ವರ್ಷಗಳಲ್ಲಿ ಹೀಗೆ ಬಂದುಳಿದವರ ಮತ್ತು ನೆಲೆಗೊಳಿಸಿದ ಕುಟುಂಬಗಳ ಸಂಖ್ಯೆ ಸುಮಾರು ಎರಡು ಸಾವಿರಕ್ಕೂ ಮಿಗಿಲು. ಇವರೆಲ್ಲಾ ಸಾಲು ಸಾಲಾಗಿ ಅನಾಮತ್ತಾಗಿ ತೀರ ಕಡಿಮೆ ಬೆಲೆಯಲ್ಲಿ ಸರಕಾರ ಒದಗಿಸಿದ ತೋಟದ ಮನೆಗಳಲ್ಲಿ ಬೀಡು ಬಿಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತದಕ್ಕೆ ನುಸುಳುವ ಉಗ್ರರನ್ನು ಅಲ್ಲಿ ಸಾಕುತ್ತಾ ಇರುತ್ತಾರೆ. ಅವಕಾಶ ಸಿಕ್ಕಿದಾಗ ಅವರನ್ನು ಅಲ್ಲಿಂದ ಇತ್ತಲಿನ ಗಡಿಗಳಲ್ಲಿ ನುಗ್ಗಿಸಲಾಗುತ್ತದೆ. ಆ ಅವಕಾಶಕ್ಕಾಗಿ ಸರಹದ್ದಿನಲ್ಲಿ ತಲೆ ಮರೆಸಿಕೊಂಡಂತೆ ಇರಲು ಈ ನಿವೃತ್ತ ಸೈನಿಕರ ತೋಟದ ಮನೆಗಳನ್ನು ಬಳಸಿಕೊಳ್ಳಲಾಗುತ್ತದೆ.
ನಿಮಗೆ ಗೊತ್ತಿರಲಿ.. ಇವತ್ತು ಭಾರತದೊಳಕ್ಕೆ ಬರಲು ಕಳ್ಳ ದಾರಿಗಳನ್ನು ಸೃಷ್ಟಿಸಿಕೊಳ್ಳುವ ಉಗ್ರರಿಗೆ ಒಳಗೆ ಬಂದ ಮೇಲೆ ಶ್ರೀನಗರದ ವರೆಗೆ ತಲುಪಲು ನಿಸರ್ಗ ಬಹುದೊಡ್ಡ ಕೊಡುಗೆ ನೀಡಿದೆ. ಒಮ್ಮೆ ಗಾಂಧಾರ್‍ಬಾಲ್ ದಾಟಿಬಿಟ್ಟರೆ ಮತ್ತೇನಿದ್ದರೂ ಪರ್ವತದ ಸೆರಗು ಕೊರೆದು ರೂಪಿಸಿದ ಕಡಿದಾದ ಅಂಚಿನ ಅಪ್ಪಟ ಕಣಿವೆಯ ಏರಿಳಿತ. ಸಂಪೂರ್ಣ ಕಣಿವೆಯನ್ನು ಕೊರಕಲಾಗಿಸಿ ಗುಡ್ಡಗಳ ಏರಿಳಿತ, ನಿರಂತರ ಭೂ ಕುಸಿತದಂತಹ ವೈಪರಿತ್ಯಗಳಿಗೆ ಒಡ್ಡಿದ್ದೆ ಇಲ್ಲಿ ಎಲ್ಲೆಂದರಲ್ಲಿ ಹರಿಯುವ ನದಿ ಕವಲುಗಳು. ಅತೀ ಸೂಕ್ಷ್ಮ ಪ್ರದೇಶ ಎನ್ನಿಸಿರುವ ಉರಿಸೆಕ್ಟರಿನ ಆಸುಪಾಸೇ ಎಷ್ಟು ನಾಲಾಗಳು, ಕಾಲುವೆಗಳಿವೆ ಎಂದರೆ ಒಬ್ಬ ಸಲೀಸಾಗಿ ಅದರ ಕೊರಕಲಿನಲ್ಲಿ ತೆವಳಿಕೊಂಡೆ ಕಿ.ಮೀ.ಗಟ್ಟಲೆ ಭಾರತದೊಳಕ್ಕೆ ಕ್ರಮಿಸಿಬಿಡುತ್ತಾನೆ.
ಉರಿಯ ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವುದೇ ಸಲಮ್‍ನಾಲಾ ಎಂಬ ಹಳ್ಳ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ಹಳ್ಳಗಳು ಹರಿದು ಝೀಲಂ ನದಿಯನ್ನು ತಲುಪುತ್ತವೆ. ಇದಲ್ಲದೆ ರಾವಿ, ಚಿನಾಬ್ ಸೇರಿದಂತೆ ಸಿಂಧೂನದಿಯ ಇಕ್ಕೆಲಗಳ ಪಾತ್ರಗಳಿಗೆ ಬಂದು ಸೇರುವ ನಾಲಾಗಳ ಸಂಖ್ಯೆ ಸರಿಯಾಗಿ ಏಣಿಸಿದರೆ ಸುಮಾರು ಎರಡು ಸಾವಿರದ ಹತ್ತಿರದಲ್ಲಿದೆ. ಶಂಕರಾಚಾರ್ಯ ನೆತ್ತಿಯ ಮೇಲೆ ನಿಂತು ನೋಡಿದರೆ ಸಂಪೂರ್ಣ ಶ್ರೀನಗರ ಯಾವತ್ತೂ ನೀರಿನಲ್ಲಿ ಮುಳುಗಿದಂತೆಯೇ ಕಾಣಿಸುತ್ತಿರುತ್ತದೆ. ಈ ನದಿಯನ್ನು ಪಳಗಿಸುವುದು ಅತ್ಲಾಗಿರಲಿ, ದಂಡೆಯನ್ನು ಹಿಡಿತಕ್ಕಿಟ್ಟುಕೊಳ್ಳುವುದು ಕಷ್ಟ. ಇಂತಹ ತುಂಬ ದುರ್ಗಮ ಪ್ರದೇಶಗಳು ಸರಹದ್ದಿನುದ್ದಕ್ಕೂ ಸಾಲುಸಾಲಾಗಿವೆ. ಇಂಥಲ್ಲಿಂದಲೇ ಉಗ್ರರು ನುಸುಳುತ್ತಾರೆ. ಜೊತೆಗೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟಕೊನೆಯಲ್ಲಿ ತೀರ ಸರಹದ್ದಿನ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.
ಇತ್ತ ತಾವಗಿ, ಅಪೂಟು ಪಾಕಿಗಳ ಪಕ್ಕೆಗೆ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್‍ಭಾಗ್ಲಿ, ಪಾದದಲ್ಲೇ ನಟೋರಿಯಸ್ ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತ ಸರಹದ್ದಿನ ಸೆರಗಿಗೆ ಚುಂಗಿನಂತೆ ಆವರಿಸಿಕೊಂಡಿರುವ ಹತ್ತಾರು ಮನೆಗಳ ನೂರಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್‍ಪಂಜಾಲ್ ಪರ್ವತಶ್ರೇಣಿ ಎರಡೂ ಮಗ್ಗುಲಲ್ಲೂ ಯಥೇಚ್ಚವಾಗಿ ಕನಿಷ್ಠ ಸಾವಿರ ಅಡಿಯ ಎತ್ತರದ ಪರ್ವತಾಗ್ರಹಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಇವೆಲ್ಲದಕ್ಕೂ ಬೆಂಬಲವಾಗಿ ಪಾಕಿ ಗಡಿಯಿಂದ ಫೈರಿಂಗು ಅವರನ್ನು ರಕ್ಷಿಸಲು ಮೊಳಗುತ್ತಿರುತ್ತದೆ. ಅದರೆ ಇದೆಲ್ಲಾ ನಿರುಕಿಸುವ ಭಾರತೀಯ ಸೈನಿಕ ಬಂದೂಕಿನ ಕುದುರೆ ಎಳೆಯಲು ಕಾಯ್ದು ಕೂತೇ ಇರುತ್ತಾನೆ. ಹಾಗಾಗೇ ಇದೇ ವರ್ಷದಲ್ಲಿ ಅನಾಮತ್ತು 164 ಉಗ್ರರ ಹೆಸರಿನ ಹೇಡಿಗಳನ್ನು ಭಾರತದ ಸೈನಿಕರು ಹೊಡೆದುರುಳಿಸಿದ್ದಾರೆ. ಕಣಿವೆ ಖಾಲಿಯಾಗುತ್ತಿದೆ.

No comments:
Post a Comment