Monday, July 17, 2017




ಆತಂಕದಲ್ಲಿ ಅಮರನಾಥ ಯಾತ್ರೆ...


"..ಈ ಬಾರಿ ಯಾತ್ರೆ
ಮುಗಿಯುವುದರೊಳಗಾಗಿ ನಾವು
ಕನಿಷ್ಟ ನೂರೈವತ್ತು
ಜನರನ್ನಾದರೂ ಕತ್ತರಿಸಬೇಕು.
ಯಾತ್ರಿಗಳು ಮತ್ತು ಪೆÇೀಲಿಸರು
ಎನ್ನುವುದಕ್ಕೆ ಲೆಕ್ಕ
ಸಿಗಬಾರದು.." ಹೀಗೆಂದು ಮೊನ್ನೆ
ಮೊನ್ನೆ ಅಮರನಾಥ ಯಾತ್ರೆಯ
ಮೊದಲನೆಯ ದಿನ ಆರಂಭಕ್ಕೂ ಮೊದಲೇ
ಠರಾವು ಹೊರಡಿಸಿದವನು
ಭಯೋತ್ಪಾದಕರ ಸ್ವರ್ಗದಲ್ಲಿರುವ
ಪಾಕಿ ಬೆಂಬಲಿತ ಪಾತಕಿ
ಸಲ್ಲಾವುದ್ದಿನ್. ಈತ ಮಧ್ಯ
ಪಾಕಿಸ್ತಾನದಲ್ಲಿ ಐಶಾರಾಮಿ
ಜೀವನ ನಡೆಸುತ್ತಾ ಫೀಲ್ಡಿನಲ್ಲಿ
ಹುಡುಗರಿಗೆ ಸತ್ತುಹೋಗಲು ಅದೇಶ
ಹೊರಡಿಸುತ್ತಿದ್ದಾನೆ. ಇವನನ್ನು
ವಿಶ್ವ ಸಂಸ್ಥೆ ಸೇರಿದಂತೆ
ಅಮೇರಿಕೆ ಕೂಡಾ ಅಂತರಾಷ್ಟ್ರೀಯ
ಭಯೋತ್ಪಾದಕರ ಸಾಲಿಗೆ
ಸೇರಿಸಿದೆ. ಜೀವ
ಕಳೆದುಕೊಳ್ಳುತ್ತಿರುವ
ಕಾಶ್ಮೀರಿಗಳಿಗೆ ಮಾತ್ರ ಇದು
ಅರ್ಥವಾಗುತ್ತಿಲ್ಲ. ಆದರೀಗ
ಯಾತ್ರಿಗಳಲ್ಲೀಗ ಆರೆಂಟು ಜನ
ಮೃತರಾಗಿ ಮೂವತ್ತೆರಡು ಜನ
ಗಾಯಾಳುಗಳಾಗುವುದರಿಂದ ಅವನ
ಮಾತಿನ ಗಂಭೀರತೆ ಬೇರೆಯದೆ ಅರ್ಥ
ಪಡೆಯುತ್ತಿದೆ.

ಹಾಗೊಂದು ಫಾರ್ಮಾನು ಹೊರಡಿಸಲು
ಕಾರಣ, ಈ ಮೊದಲೇ ಸಿಕ್ಕಿಬಿದ್ದು
ಹೆಣವಾಗಿರುವ ಹುಡುಗರಾದ
ಬುರಾನ್‍ವಾನಿ ಮತ್ತು ಅಬ್ಜಾರ್
ಭಟ್‍ನಂತಹ ಶುದ್ಧಾನುದ್ಧ
ಅವಿವೇಕಿಗಳ ತಲೆಗೆ
ಕಟ್ಟಲಾಗಿದ್ದ ಬಹುಮಾನ ಮತ್ತು
ಅವರುಗಳು ಯೋಜಿಸಿದ್ದ ಆಗಸ್ಟ್
ಬರುವ ಹೊತ್ತಿಗೆ ಕೆಲವು ಸೈನಿಕರ
ತಲೆಯನ್ನಾದರೂ ಕಡಿಯುವ
ಯೋಜನೆಯನ್ನು "ಹಿಂದೂಸ್ಥಾನಿ
ಫೌಜ್" ವಿಫಲಗೊಳಿಸಿ
ಅವರನ್ನೆಲ್ಲಾ ಬೀದಿ
ಹೆಣವಾಗಿಸಿದ್ದಕ್ಕೆ. ಬುರ್ಹಾನ್
ವಾನಿಯನ್ನು ಸ್ವತ: ಪಾಕಿ
ಸೇನಾನಾಯಕನೇ ಹೊಗಳುವ ಮೂಲಕ
ಕಾಶ್ಮೀರದ ಬೀದಿಗಳಲ್ಲಿ ಕಲ್ಲು
ಹಿಡಿದು ನಿಲ್ಲುತ್ತಿರುವ
ಪುಂಡಹುಡುಗರನ್ನು ಗನ್ನು
ಹಿಡಿಯಲು
ಪ್ರೇರೇಪಿಸುತ್ತಿದ್ದಾನೆ. ಅವನ
ಬಗ್ಗೆ ಹುಟ್ಟುಹಾಕುತ್ತಿರುವ
ಕ್ರೇಜು ಶ್ರೀನಗರದ ಗಲ್ಲಿಗಳಿಗೆ
ಹೊಸ ಹುಮ್ಮಸು ನೀಡುತ್ತಿದೆ
ಮತ್ತು ಅತ್ತಲಿನ
ಕುತಂತ್ರಿಗಳಿಗೆ
ಬೇಕಾಗಿರುವುದೂ ಅದೆ. ಹಾಗೆ
ನೋಡಿದರೆ ಝಕೀರ್ ಮೂಸಾನ ಯೋಜನೆಯ
ಮುಂದಿನ ಹಂತ ಚಾಲನೆಗೆ
ತರಬೇಕಾಗಿದ್ದವನು ಅಭ್ಝಾರ್
ಭಟ್. ಮೂಸಾನ ಪ್ರಕಾರ ಕಾಶ್ಮೀರ
ಸಮಸ್ಯೆ ಮತ್ತು ಧರ್ಮ ಎರಡನ್ನೂ
ರಾಜಕೀಯ ಮಾಡಿದ್ದೀರಿ ಎನ್ನುವ
ಕಾಂಟ್ರಾವರ್ಸಿಯಿಂದಾಗಿ ಆತ
ಗುಂಪನ್ನೆ ತೊರೆದು ಹೋಗಿದ್ದ.
ಹೀಗೆ ಇದ್ದಕ್ಕಿದ್ದಂತೆ
ನಿರ್ವಾತವಾದ ಜಾಗವನ್ನು
ತುಂಬಿದವನು ಸರಿಯಾಗಿ ನೆತ್ತಿ
ಮಾಸು ಹಾರದ ಹುಡುಗ ಅಬ್ಜಾರ್ ಭಟ್.
ಈತ ವಾನಿಯ ಮಟ್ಟಿಗಿನ
ಭಯೋತ್ಪಾದನೆಯ ಆಳಕ್ಕಿನ್ನೂ
ಇಳಿದಿರಲಿಲ್ಲ. ಆದರೆ ಕಣಿವೆಯ
"ಲಗೇಜು" ಸಂರಕ್ಷಣೆ ಹಾಗು ಸ್ಥಳಿಯ
"ಶೆಲ್ಟರ್" ಕಾರ್ಯಗಳಿಗೆ
ವ್ಯವಸ್ಥಿತವಾಗಿ
ಕಾರ್ಯನಿರ್ವಹಿಸುತ್ತಿದ್ದುದರಿಂದ
ಎರಡೂ ಕಡೆಯಲ್ಲಿ ಪ್ರಸಿದ್ಧಿಗೆ
ಬಂದಿದ್ದ.

ಅಭ್ಜಾರ್ ಭಟ್‍ನಿಗಿದ್ದುದು
ಅಪಾಯಕಾರಿ ಆತುರವೆಂದರೆ
ಪ್ರಸಿದ್ಧಿಯ ತೆವಲು ಮತ್ತು
ಶೋಫಿಯಾನ್, ಕುಪ್ವಾರ,
ಬಾರಾಮುಲ್ಲಾ, ಅನಂತನಾಗ್ ಮತ್ತು
ಶ್ರೀನಗರದ ಮೇಲೆ ಭದ್ರ ಹಿಡಿತ
ಹೊಂದುವ, ಸಂಪೂರ್ಣ ದಕ್ಷಿಣ
ಕಾಶ್ಮೀರಕ್ಕೆ ಕಮಾಂಡರ್ ಎಂದು
ಕರೆಯಿಸಿಕೊಳ್ಳುವ
ಮಹಾತ್ವಾಕಾಂಕ್ಷೆ ಇತ್ತು. ಅದು
ಸಿದ್ಧಿಸಬೇಕೆಂದರೆ, ಶ್ರೀನಗರದ
ಕಮಾಂಡರ್ ಎಂದು ತನ್ನನ್ನು
ಒಪ್ಪಬೇಕಾದರೆ ತಾನು ಆ ಮಟ್ಟದ
ಕೃತ್ಯ ಎಸಗಬೇಕು. ಯಾರೂ ಮಾಡದ
ಕೃತ್ಯಕ್ಕೆ ಕೈ ಹಾಕಿದರೆ ದೂರದ
ಐಸಿಸ್‍ವರೆಗೂ ಪ್ರಸಿದ್ಧಿ.
ಹೀಗೆ ಅನಾಹುತಕಾರಿ ಯೋಜನೆಯ
ಅಂಶವೇ ಅಗಸ್ಟ್ ಹದಿನೈದರ
ಹೊತ್ತಿಗೆ, ಲಾಲ್‍ಚೌಕನಲ್ಲಿ
ಸೈನಿಕರ/ಪೆÇೀಲಿಸರ ತಲೆ ಕಡಿಯುವ
ಪ್ರಾಜೆಕ್ಟು. ಆದರೆ ಅದಕ್ಕೂ
ಮೊದಲೇ ಸೈನ್ಯದ ಬಹುಮಾನಕ್ಕೆ,
ತಮ್ಮವರೇ ಕೊಟ್ಟ ಟಿಪ್ಸ್‍ಗೆ
ಬಲಿಯಾಗಿ ಹೋದ. ಹೀಗೆಯೇ ಕಳೆದ
ಜುಲೈ8 ರಂದು ಬುರ್ಹಾನ್ ವಾನಿ
ಕೂಡಾ ಸೈನಿಕರ ಗುಂಡಿಗೆ
ಬಲಿಯಾಗಿದ್ದ.

ಅದರ ಮುಂದುವರೆದ ಭಾಗ ಈಗ
ಅಮರನಾಥ್ ಯಾತ್ರೆ ಎನ್ನುವ
ಸುಲಭದ ಟಾರ್ಗೆಟ್ ಯೋಜನೆಯಂತೆ
ಯಾತ್ರಿಗಳ ಮೇಲೆ ಮೊದಲ ದಾಳಿ
ನಡೆದು ಹೋಗಿದೆ. ಒಮ್ಮೆ
ನುಗ್ಗಿದರೆ ಸಾಕು ಸಾಲಸಾಲು
ನರಮೇಧ ಮಾಡಬಹುದು ಎನ್ನುವ
ಯೋಜನೆಗೆ ಚಾಲನೆ ನೀಡಲಾಗಿದೆ.
ತೀರ ಯಾತ್ರಿಗಳು ಎಲ್ಲಾ ಮುಗಿಸಿ
ಹಿಂದಿರುಗುವಾಗ, ಮೊದಲು ಸೈನಿಕ
ಶಿಬಿರಕ್ಕೆ ಗುಂಡು ಹಾರಿಸಿ
ತತಕ್ಷಣ ಅವರನ್ನು ಅತ್ತ
ಬಿಜಿಯಾಗಿಸಿ, ಇತ್ತ ಬಸ್ಸಿನ
ಮೇಲೆ ದಾಳಿ ಮಾಡಿದ್ದಾರೆ ಎಂದರೆ
ಸ್ಥಳೀಯರು ಇಂತಹ ಟಿಪ್ಸ್ ಕೊಡದೆ,
ಮುಖ್ಯ ರಸ್ತೆಯ ಪಕ್ಕದಲ್ಲಿ ಇದು
ಸಾಧ್ಯವೇ ಇಲ್ಲ. ವ್ಯವಸ್ಥಿತ
ಮಾಹಿತಿ ಜಾಲ ಕೆಲಸ ಮಾಡಿರುವುದು
ಸ್ಪಷ್ಟ. ಅನಂತನಾಗ್ ಜಿಲ್ಲೆಯ
ಖನ್ಪಾಲ್ ತುಂಬ ಕಣಿವೆಯ
ತಿರುವುಗಳ, ಹೆಸರಿಗೆ ಹೆದ್ದಾರಿ
ಆದರೂ ದುರ್ಗಮ ದಾರಿಯ ಪ್ರದೇಶ.
ಎಡಭಾಗದ ಪರ್ವತ ಪ್ರದೇಶಗಳಿಂದ
ನುಸುಳುವಿಕೆ ಸಾಧ್ಯವಿಲ್ಲ.
ಏನಿದ್ದರೂ ಮೊದಲೇ ಬೀಡು
ಬಿಟ್ಟಿರುವ ಉಗ್ರರು ತಂತ್ರ
ರೂಪಿಸಿಯೇ ಗುಂಡು
ಹಾರಿಸಿದ್ದಾರೆ ಅತ್ಯಂತ ನಿಖರ
ಮಾಹಿತಿಯ ಸುದ್ದಿ ಜಾಲವಿಲ್ಲದೆ
ಈ ದಾರಿಯಲ್ಲಿ ಕಾರ್ಯಚರಣೆ
ಸಾಧ್ಯವೇ ಇಲ್ಲ.

ಜೂನ್ 28 ಕ್ಕೇ ಆರಂಭವಾದ
ಯಾತ್ರೆಯಲ್ಲಿ ಈಗಾಗಲೇ ಒಂದು
ಲಕ್ಷ ಹದಿನೈದು ಸಾವಿರ
ಯಾತ್ರಿಗಳು ಸುರಕ್ಷಿತವಾಗಿ
ಹಿಂದಿರುಗಿದ್ದಾರೆ. ಇನ್ನು
ಶ್ರಾವಣ ಎಂದು ಕಾಯುತ್ತಿರುವವರ
ಸಂಖ್ಯೆ ಎರಡೂವರೆ ಲಕ್ಷ. ಇದನ್ನು
ಬರೆಯುವ ಹೊತ್ತಿಗೆ ಇತ್ತ
ಬಲ್ತಾಲ ಅತ್ತ ಪಿಸ್ಸುಟಾಪ್
ಎರಡೂ ಕಡೆಯಲ್ಲಿ ಯಾತ್ರಿಗಳನ್ನು
ತಡೆಹಿಡಿಯಲಾಗಿದೆ. ಕಾರಣ ದಾಳಿಯ
ತೀವ್ರತೆಗೆ ಯಾತ್ರಿಗಳನ್ನು
ರಕ್ಷಿಸಲು ಸೂಕ್ತ ಯೋಜನೆ
ರೂಪಿಸಲಾಗುತ್ತಿದೆ. ಸರಕಾರ
ಕೂಡಾ ಇನ್ನಿಲ್ಲದಂತೆ ಅಮರನಾಥ್
ಯಾತ್ರಿಕರಿಗೆ ರಕ್ಷಣೆಯನ್ನು
ಒದಗಿಸುತ್ತದಾದರೂ
ಎಲ್ಲೆಂದರಲ್ಲಿ ಸ್ಥಳೀಯ
ದೇಶದ್ರೋಹಿಗಳಿಗೆ
ಅನಾಹುತವೆಸಗಲು ನೂರಾರು
ದಾರಿಗಳಿವೆ. ಅದಕ್ಕಾಗೇ
ಯಾತ್ರಿಗಳನ್ನು ಕರೆದೊಯ್ಯುವ
ದುಡಿಯುವ ವರ್ಗದ ಅಮಾಯಕ ಶ್ರಮಿಕ
ಕಾಶ್ಮೀರಿ ಗಾಡಿ
ಹತ್ತುತ್ತಿದ್ದಂತೆ ಮೊದಲು
"ಟವಲ್ ಬಾಂದ ಲೀಜಿಯೇ"
ಎನ್ನುತ್ತಾನೆ. ಶ್ರೀನಗರದಿಂದ
ಬಲ್ತಾಲ ಅಥವಾ ಚಂದನವಾರಿ
ರಸ್ತೆಯ ಇಕ್ಕೆಲೆಗಳಿಂದ ಗಾಡಿಯ
ಮೇಲೆ ಯಾವಾಗ ಕಲ್ಲಿನ
ಸುರಿಮಳೆಯಾಗಿ ಏಟಾಗುತ್ತದೋ
ಗೊತ್ತಿರುವುದಿಲ್ಲ. ಅದಕ್ಕಾಗಿ
ಲಭ್ಯ ಇರುವ ಟವಲು, ಬೆಡ್ ಶೀಟು,
ಶಾಲು ಎಲ್ಲವನ್ನು ತಲೆ,ಮುಖ, ಮೈ
ಕೈಗೆಲ್ಲಾ ಸುತ್ತಿಕೊಂಡು
ಕೂರುವಂತೆ ಸೂಚಿಸುತ್ತಾನೆ.
ಉಳಿದಂತೆ ಗಾಜು ಒಡೆದುಕೊಂಡು
ಕಲ್ಲು ತಾಗಿದರೂ ಘಾಸಿಯಾಗದಿರಲಿ
ಎನ್ನುವ ಆಲೋಚನೆ ಅವನದ್ದು. ಆದರೆ
ಪಾಕಿಗಳು ಕದ್ದು ಪೂರೈಸುವ
ರೈಫಲ್ಲಿನೆದುರಿಗೆ ಅವೆಲ್ಲಾ
ಯಾವ ಲೆಕ್ಕ...?

ಚಂದನವಾರಿ ಶ್ರೀನಗರದಿಂದ 140
ಕಿ.ಮೀ. ದೂರವಿದ್ದು ಪಿಸ್ಸುಟಾಪ್,
ಝೊಜಿ ಬೈಲ್, ಶೇಷನಾಗ್, ವರ್ಬಾಲ್,
ಮಾಂಘುನ್ ಟಾಪ್, ಪಾಬಿಬೈಲ್,
ಪಿಸ್ಸುಟಾಪ್ ಮೂಲಕ ಸಂಗಮ
ತಲುಪಬಹುದಾಗಿದ್ದು ಉಗ್ರರ ಉಪಟಳ
ಈ ದಾರಿಯಲ್ಲೇ ಹೆಚ್ಚು ಆದರೆ
ಯಾತ್ರಿಗಳಿಗೆ ಧಾರ್ಮಿಕವಾಗಿ ಈ
ದಾರಿ ಬಗ್ಗೆ ಆಪ್ತತೆ ಜಾಸ್ತಿ.
ಬಲ್ತಾಲ ಶ್ರೀನಗರ-ಲೇಹ್
ಹೆದ್ದಾರಿಯಲ್ಲಿಇದ್ದು ವಾಹನ
ಸೌಲಭ್ಯವಿದೆ. ಈ ಬಲ್ತಾಲ್
ಬೇಸ್‍ಕ್ಯಾಂಪಿನ ಸರಿಯಾಗಿ
ಮೇಲ್ಗಡೆಯೇ ಜಿಜೋಲಿ ಪಾಸ್
ಹಾಯ್ದು ಹೋಗುತ್ತದೆ. ಇದೊಂದು
ಅಪ್ಪಟ ನೆಕ್ ಪ್ರದೇಶ. ಜಿಜೋಲಿ
ಪಾಸ್ ಭಯಾನಕವಾಗಿ ಪರ್ವತ
ಕುಸಿತಕ್ಕೊಳಗಾಗಿ ದಾರಿ
ಮುಚ್ಚಿಹೋಗುವ ಸಮಸ್ಯೆ
ನಿರಂತರವಾಗಿರುತ್ತಿದ್ದು,
ಅದನ್ನೂ ಕಾಯಬೇಕಾದ ಅನಿವಾರ್ಯತೆ
ನಮ್ಮ ಸೈನಿಕರದ್ದು.
ಮೇಲ್ಗಡೆಯಿಂದ ನಿಂತು ನೋಡಿದರೆ
ಬಲ್ತಾಲ ಕ್ಯಾಂಪು ಚಿಕ್ಕಚಿಕ್ಕ
ಆಟಿಕೆ ಗೂಡಿನಂತೆ
ಕಾಣಿಸುತ್ತದೆ. ಜಿಜೋಲಿಯಲ್ಲಿ
ಯಾವತ್ತೂ ಟಾರು ರಸ್ತೆ ಉಳಿದ
ದಾಖಲೆಯೇ ಇಲ್ಲ. ಕಳಚಿಬಿದ್ದ
ಪರ್ವತ ಜರುಗಿಸಿ ರಸ್ತೆ
ಸುಗಮಗೊಳಿಸಲು ಬುಲ್ಡೊಜರು,
ಜೆ.ಸಿ.ಬಿ.,ಗಳು ಸನ್ನದ್ಧವಾಗಿಯೇ
ಇರುತ್ತವೇ. ಅಷ್ಟು ಅತಂತ್ರತೆ
ಇರುವ 12800 ಅಡಿ ಎತ್ತರದ ಜಿಜೋಲಿ
ಪಾಸ್ ಅಮರನಾಥ್‍ಗೆ ಸಮಾನಾಂತರ
ಮತ್ತು ಎಡಭಾಗದಲ್ಲಿ ದುರ್ಗಮದ
ಆಳ ಕಣಿವೆ ಪಾಕಿಸ್ತಾನದ ಜೊತೆ
ಗಡಿ ಹಂಚಿಕೊಂಡಿದೆ. ಹಾಗಾಗಿ
ಇಲ್ಲಿ ಕಾವಲು ಮತ್ತು ರಕ್ಷಣೆ
ಎಷ್ಟು ಮುಖ್ಯವೋ ದುರ್ಗಮವಾದ
ಪರಿಸ್ಥಿತಿಯಲ್ಲೂ ಕಟ್ಟೆಚ್ಚರ
ಅನಿವಾರ್ಯ.

ಬಲ್ತಾಲ್‍ನಿಂದ ಸಂಗಮವರೆಗೆ ಹೆಲಿಕಾಪ್ಟರ್ ಸೇವೆ ಇಲ್ಲಿದ್ದು
ಅಕ್ಷರಶ: ಬಾಡಿಗೆಆಟೊರಿಕ್ಷಾದಂತೆ ಇವು
ಹಾರಾಡುತ್ತವೆ. ಹಾಗೆ ಏರುವ ಎತ್ತರವನ್ನು ಸಮಾನಾಂತರವಾಗಿ
ಬಾರ್ಡರ್ ಕಡೆಯಿಂದ ನಿರುಕಿಸಿ
ಗುರಿಗೆ ಎಟುಕಿಸಿಕೊಳ್ಳಬಹುದಾದ
ಸಾಧ್ಯತೆಯೂ ಸುಲಭ. ಹಾಗಾಗಿ ಈ
ಪ್ರದೇಶವನ್ನು ಸಿ.ಆರ್.ಪಿ.ಎ¥sóï.
ಕಟ್ಟೆಚ್ಚರದಿಂದ ಕಾಯುತ್ತದೆ
ಮತ್ತು ಸಧ್ಯಕ್ಕೆ ಸಲಾಹುದ್ದಿನ್
ಗುರಿ ಮಾಡಿಕೊಂಡಿರುವ ಪ್ರದೇಶವೂ
ಇದಾಗಿದ್ದು, ಅಂತಿಮವಾಗಿ ಇದ್ದ
ಬದ್ದ ಜನವೆಲ್ಲಾ ಉಗ್ರವಾದಕ್ಕೆ
ಎದ್ದು ನಿಲ್ಲುತ್ತೀವಿ ಎಂದು
ಕಲ್ಲೆಸೆಯಲು ನಿಲ್ಲತೊಡಗಿದರೆ
ಚೆಂದದ ಕಾಶ್ಮೀರ ಕಣಿವೆ
ಖಾಲಿಯಾಗದೆ ಏನು ಮಾಡೀತು.

No comments:

Post a Comment