Tuesday, August 22, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ದೈವಸೈನಿಕರ ಧರ್ಮ ಯಾವುದು...?

ಇವತ್ತು ಪ್ರತಿ ನ್ಯೂಸ್‍ಚಾನೆಲ್ಲಿನ ಕೆಳಗೊಂದು ಸ್ಕ್ರೋಲಿಂಗು ಬರುತ್ತಿರುತ್ತದೆ. ವಾರದಲ್ಲಿ ಕನಿಷ್ಠ ಎರಡ್ಮೂರು ಇಂತಹ ಸುದ್ದಿ ಪ್ರತಿ ಚಾನೆಲ್‍ನಲ್ಲಿ ಬಿತ್ತರಗೊಳ್ಳುತ್ತಲೇ ಇರುತ್ತದೆ. ಬಂಡಿಪೆÇೀರಾದಲ್ಲಿ ಮೂವರು ಉಗ್ರರ ಎನ್ ಕೌಂಟರ್, ಪಂಪೆÇೀರಾದಲ್ಲಿ ಇಬ್ಬರ ಹತ್ಯೆ, ಪಾಲ್ಗಿಯಲ್ಲಿ ಮೂವರು ನುಸುಳುಕೋರರ ಹತ್ಯೆ,  ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶ, ಸರಹದ್ದಿನ ಎನ್‍ಕೌಂಟರ್‍ನಲ್ಲಿ ಇಬ್ಬರನ್ನು ಹೊಡೆದುರುಳಿಸಿದ ಸೇನೆ ಹೀಗೆ ಸಾಲು ಸಾಲಾಗಿ ಉಗ್ರರನ್ನು ಬೇಟೆಯಾಡುತ್ತಲೇ ಇದ್ದು ಹೆಚ್ಚು ಕಮ್ಮಿ ನಿರಂತರವಾಗಿದೆ ಮತ್ತು ಅದನ್ನು ನೋಡುತ್ತಿದ್ದರೆ ನಮಗೂ ಇವತ್ತು ಕೇವಲ ಲೆಕ್ಕ ಏಣಿಸುವುದೇ ಕೆಲಸವಾಗಿದೆಯೇ ವಿನ: ಉಗ್ರರು ಹತ್ಯೆಯಾದುದನ್ನು ನಾವು ಆ ಮೊದಲಿನ ಎಕ್ಸೈಟ್‍ಮೆಂಟಿನಿಂದ ಅನುಭವಿಸುತ್ತಿಲ್ಲ. ಹೊಡೆದು ಕೆಡುಹುವ ಈ ಕೃತ್ಯ ನಮಗೆ ಸಹಜ ಎನ್ನಿಸುವಷ್ಟು ಸರದಿಯ ಮೇಲೆ ಭಯೋತ್ಪಾದಕರನ್ನು ನಮ್ಮ ಸೈನಿಕರು ಕೊಂದುಕೆಡುವುತ್ತಿದ್ದಾರೆ. ತೀರ ಸೈನ್ಯದಲ್ಲೀಗ ಇಂತಹ ಬೇವಾರಸುದಾರರ ಹೆಣಹೂಳುವುದನ್ನು ಮಾಡಲೇ ನಿರಂತರ ಲೇಬರ್ ಕೆಲಸಕ್ಕೆ ಹತ್ತಾರು ಕೂಲಿಯಾಳುಗಳು ಖಾಯಂ ಆಗಿಹೋಗಿದಾರೆ.
ಇದು ನಿರಂತರವಾಗುತ್ತಿದ್ದಂತೆ, ಗಡಿಯಾಚೆಗೆ ಕಾಯ್ದು ಕೂತ ಉಗ್ರರಿಗೆ ಒಳಗೊಳಗೇ ನಡುಕ ಆರಂಭವಾಗತೊಡಗುತ್ತದೆ. ಕ್ರಮೇಣ ಅಲ್ಲಿ ಭಯ ಅಡರತೊಡಗುತ್ತಿದ್ದರೆ, ಆಚೆಯಿಂದ ಕದನ ವಿರಾಮ ಉಲ್ಲಂಘಿಸಿ ಪಾಕಿಗಳು ಗುರಿನೋಡಿ ನಮ್ಮ ಒಬ್ಬಿಬ್ಬರು ಸೈನಿಕರನ್ನು ಗುಂಡಿಟ್ಟು ಕೊಂದು ಒಳನುಸುಳುವ ಉಗ್ರರಿಗೆ ಧೈರ್ಯ ತುಂಬುತ್ತಾರೆ. ನಾವೂ ಜತೆಗಿದ್ದೇವೆ ಅವರನ್ನೂ ಹೋಡೆಯುತ್ತಿದ್ದೇವೆ ಎಂಬ ಭಾವ ಮೂಡಿಸಲು. ಒಮ್ಮೆ ಈ ಚಕ್ರ ಗಮನಿಸಿದರೆ ನಿರಂತರ ಹೀಗೆ ಕಳೆದ ವರ್ಷಾವಧಿಯುದ್ಧಕ್ಕೂ ನಡೆದದ್ದು ನಮ್ಮ ಗಮನಕ್ಕೆ ಬರುತ್ತದೆ. ಹತ್ತಿಪ್ಪತ್ತು ಉಗ್ರರಿಗೆ ಒಂದಿಬ್ಬರು ನಮ್ಮ ಸೈನಿಕರೂ ಬಲಿ. ಕಾರಣ ಆ ಕಡೆಯ ಪಾಕಿ ಸೈನಿಕರ ಬೆಂಬಲದೊಂದಿಗೆ ಇತ್ತ ಬರುವ ಉಗ್ರರಿಗೆ ನಿರಂತರವಾಗಿ ನಡೆಯುವ ತಮ್ಮವರ ಬಲಿಯ ಬದಲಿಗೆ ಹಿಂದೂಸ್ತಾನಿಗಳನ್ನು ಹಣಿಯುವ ಜರೂರತ್ತು ಅರ್ಜೆಂಟಾಗಿರುತ್ತದೆ.
ಇದನ್ನು ಬರೆಯುವ ಹೊತ್ತಿಗೆ ದೂರದ ಪೇಶಾವರದಲ್ಲಿ ಮಸೀದಿಯ ಮೇಲೆ ದಾಳಿ ಮಾಡಿ ಒಂದಷ್ಟು ಮುಸ್ಲಿಮರ ಹೆಣ ಕೆಡುವಲಾಗಿದೆ, ಅದರ ಅಕ್ಕದಲ್ಲೇ ಪಾಕಿಸ್ತಾನದಲ್ಲೂ ದಾಳಿಗಳಾಗುತ್ತಿವೆ. ಅದರ ಹಿಂದೆ ಕಾಬೂಲ್‍ನಲ್ಲಿ ಒಂದೇ ಏಟಿಗೆ ಇಪ್ಪತ್ತೊಂಬತ್ತು ಜನ ನೆಗೆದು ಬಿದ್ದರು ಆತ್ಮಹತ್ಯಾ ದಾಳಿಗೆ. ಅದಕ್ಕೂ ಮೊದಲು ಕೆಲವೇ ತಿಂಗಳುಗಳ ಹಿಂದೆ ಮಕ್ಕಾ ಮದೀನಾದಲ್ಲೇ ಸೂಯಿಸೈಡ್ ಬಾಂಬರ್‍ನ್ನು ಅರೆಸ್ಟು ಮಾಡು ಘೋರ ಅನಾಹುತ ತಪ್ಪಿಸಿಕೊಂಡಿದೆ ಅರಬ್ ಜಗತ್ತು. ನಿನ್ನೆಯಷ್ಟೆ ಅಲ್‍ಖೈದಾ ಜೀಪು ನುಗ್ಗಿಸಿ ಕೇನ್ಯಾದಲ್ಲಿ ಐವರನ್ನು ರಸ್ತೆ ಮಧ್ಯೆ ಸ್ಪೋಟಿಸಿದೆ. ಒಟ್ಟಾರೆ ಇಲ್ಲೆಲ್ಲಾ ನಡೆದದ್ದು ಬರೀ ಇತರೆ ಧರ್ಮೀಯರ ಮೇಲಿನ ದಾಳಿಯಲ್ಲ. ಸ್ವಂತ: ಮುಸಲ್ಮಾನರ ಮೇಲೂ ಧರ್ಮಯುದ್ಧ ಆರಂಭವಾಗಿಬಿಟ್ಟಿದೆ. ತೀರ ಸೌದಿಯಂತಹ ನಾಡಿನ ಹೊರತಾಗಿ ಅದರಲ್ಲೂ ಅದರ ಒಡೆಯರು ಅಪರ ಕರ್ಮಠ ಕಾನೂನಿನ ಪಾಲಕರಾಗಿರುವುದರಿಂದ ಅಲ್ಲೆಲ್ಲ ಹಾವಳಿ ಇಲ್ಲವಾಗಿದೆ ಅಷ್ಟೆ. (ಅಷ್ಟಕ್ಕೂ ಅದೂ ಅರಬ್ ಜಗತ್ತೇ ಅದರೂ ಅದಕ್ಕೆ ಮಾತ್ರ ಯಾಕೆ ಸೌದಿ ಎಂಬ ಪ್ರಿಫಿಕ್ಸು, ಆ ಕತೆ ಮತ್ತೊಮ್ಮೆಗಿರಲಿ)
ಆದರೆ ಕಾಶ್ಮೀರದಲ್ಲಿ ಮಾನವ ಬಾಂಬು ಅಥವಾ ಆತ್ಮಹತ್ಯಾ ದಾಳಿ ಎಸಗುವುದು ಅಮೇರಿಕೆಯಲ್ಲಿ ವಿಮಾನ ನುಗ್ಗಿಸುವುದು, ಪ್ರಾನ್ಸ್ ಬೇಕರಿಯ ಮೇಲೆ ಗುಂಡಿನ ಸುರಿಮಳೆ, ಲಂಡನ್‍ನಲ್ಲಿ ದಾಳಿ ಇಂಥವೆಲ್ಲಾ ಉಗ್ರರ ಕೃತ್ಯಕ್ಕೆ ಅವರದ್ದೇ ಜಗತ್ತು ಒಪ್ಪದ ಸಮರ್ಥನೆ ಇದೆ. ಅವರಲ್ಲಿ ನಾವು ಕಾಫೀರರನ್ನು ಕೊಲ್ಲುತ್ತಿದ್ದೇವೆ ಎನ್ನುವುದೇ ಅವರ ಘೋಷ ವಾಖ್ಯೆ ಮತ್ತು ಮೇಲ್ಕಾಣಿಸಿದ ದೇಶಗಳಾವುವೂ ಮುಸ್ಲಿಮರದ್ದಲ್ಲ. ಇದೇನಿದು ತೀರ ಮುಸ್ಲಿಮರನ್ನೆ ಹೊಡೆದು ಉರುಳಿಸುತ್ತಿದ್ದಾರಲ್ಲ. ಪಾಕಿಸ್ತಾನದಲ್ಲಿ ಬಸ್ಸು ದಾಳಿಗೀಡಾದಾಗ ಹುಳುಗಳಂತೆ ಸತ್ತು ಹೋದವರೂ ಪಾಕಿ ಮುಸ್ಲಿಮರೇ. ಮೊನ್ನೆ ಅಪಘಾನಿಸ್ತಾನದಲ್ಲಾದಾಗಲೂ ನೆಗೆದು ಬಿದ್ದದ್ದು ಸಾಲುಸಾಲು ಮಸ್ಲಿಮರ ಹೆಣಗಳೇ. ಇದೇನಾಗಿದೆ. ಎಲ್ಲಾ ಬಿಟ್ಟು ತಮ್ಮವರನ್ನೇ ಇದ್ಯಾಕೆ ಕೊಲ್ಲುತ್ತಿದ್ದಾರೆ..?
ಅಚ್ಚರಿ ಮತ್ತು ಅಪಸವ್ಯವೆಂದರೆ ಅವರವರಲ್ಲೇ ಧರ್ಮಯೋಧನಾಗುವುದಕ್ಕೂ, ಜೆಹಾದ್‍ನ ಅವಗಾಹನೆ ಅರ್ಥ ಮಾಡಿಕೊಳ್ಳುವುದಕ್ಕೂ ಮತ್ತು ಇತರರನ್ನು ಕೊಲ್ಲುವ ಮೊದಲು ಯಾರು ಏನು ಎಂದೆಲ್ಲಾ ಅರ್ಥ ಮಾಡಿಕೊಳ್ಳಲೇ ಹಲವು ವೈರುಧ್ಯಗಳಿವೆ ಮತ್ತು ಅವನು ಮುಸ್ಲಿಮನಾದರೂ ತನ್ನ ಪಂಗಡ ಮತ್ತು ವೈಚಾರಿಕವಾಗಿ ಬೇರೆಯವನಾದಲ್ಲಿ ಅವನನ್ನೂ ಕೊಂದುಬಿಡು ಎನ್ನುತ್ತಿದೆ ಪವಿತ್ರಗ್ರಂಥ ಎಂದು ಅದನ್ನು ತನಗೆ ತಿಳಿದಂತೆ ಅರ್ಥೈಸುವವನೊಬ್ಬ ಹೇಳಿಕೆ ಹೊರಡಿಸುತ್ತಾನೆ. ಅದೇ ಫತ್ವಾ... ಆದೇ ಜೆಹಾದ್.
ಅದಕ್ಕೆ ನಮ್ಮ ಅಕ್ಕಪಕ್ಕದವರನ್ನೂ ಕೊಲ್ಲುತ್ತಿದ್ದೇವೆ. ಧರ್ಮಬದ್ಧನಾಗದ ಯಾರೊಬ್ಬನನ್ನೂ ಕೊಂದುಬಿಡು ಎನ್ನುವುದೆ ಇಸ್ಲಾಂ ಅದೇ ಧರ್ಮ ಯುದ್ಧ ಎನ್ನುತ್ತದೆ ಅವನ ಜಗತ್ತು. (ಸ್ವತ: ಪಾಕಿಸ್ತಾನದ ಮುಷರಫ್‍ನ ಮೇಲೂ ಫತ್ವಾ ಹೊರಡಿಸಿದ ಕೀರ್ತಿ ಧರ್ಮಗುರುವೊಬ್ಬನಿಗೆ ಸಲ್ಲುತ್ತದೆ ಜೊತೆಗೆ ಅದೇ ಪಾಕಿಸ್ತಾನದ ಲಾಹೋರಿನ ಪಕ್ಕದ ರಾಜಿ ಪಂಚಾಯ್ತಿಯಲ್ಲಿ ರೇಪ್ ಮಾಡಿದವನ ತಂಗಿಯನ್ನು ರೇಪ್ ಆದಾಕೆಯ ಸಹೋದರ ರೇಪ್ ಮಾಡಲಿ ಎಂದು ತೀರ್ಪು ನೀಡಿದ್ದು ಪಾಕಿಸ್ತಾನ ಎಂಬ ದೇಶ.)ಹಾಗೆ ಕೊಲ್ಲಲು ಕಾಫೀರರು ಕೈಗೆ ಸಿಕ್ಕದಿದ್ದಾಗ ನಮ್ಮ ಪಕ್ಕದವನಾದರೂ ಸರಿ, ಇನ್ನೊಂದು ದೇಶದವನಾದರೂ ಸರಿ ಒಟ್ಟಾರೆ ಕೊಂದುಬಿಡು ಎನ್ನುತ್ತಿದೆಯಲ್ಲ, ಅಷ್ಟೆ. ಹೀಗೆ ಅರ್ಥೈಸುವಿಕೆ ಮತ್ತು ಅರಿತುಕೊಳ್ಳುವಿಕೆಯಲ್ಲಿನ ಗೊಂದಲ ಹಾಗು ಕೊಲ್ಲಲೆಂದೇ ಸಾಕಿಕೊಂಡವರನ್ನೀಗ ಕೊಲ್ಲುವ ಧಂದೆ ಬಿಡಿ ಎಂದರೆ ಬಿಡಲೊಲ್ಲದಾದಾಗ ಇನ್ಯಾರನ್ನಾದರೂ ತೋರಿಸಿ, ಹೋಗು ಅಲ್ಲಿ ಹೊಡಿಬಡಿ ಮಾಡು ಎನ್ನುವುದಕ್ಕೆ ಪಾತಕಿ ಪಾಕಿಸ್ತಾನಕ್ಕೆ ಒಂದು ಜಾಗ ಮತ್ತು ಕಾರಣ ಬೇಕಿತ್ತು.
ಹಾಗಾಗಿ ಅದು ತಾನು ಸಾಕಿಕೊಂಡಿದ್ದ ಇಂತಹ ಉಗ್ರರನ್ನು ಕಾಶ್ಮೀರದ ಕಡೆಗೆ ಕೈ ತೋರಿಸಿ ಮುಗುಮ್ಮಾಗಿ ಬಿಟ್ಟಿತು. ಯಾವ ದೇಶಾಂತರಗಳಿಂದ ಹೊರಟು ಇಲ್ಲಿ ಗುಂಡು ತಿಂದು ಸಾಯಲು ಬರುತ್ತಿದ್ದಾರೋ ಅವರೆಲ್ಲಾ ಇವತ್ತು ಮಾತ್ರವಲ್ಲ ಯಾವತ್ತೂ ಭಾರತ ಎನ್ನುವ ದೇಶ ಯಾವ ದಿಕ್ಕಿಗಿದೆ, ಕಾಶ್ಮೀರದಲ್ಲಿ ನಾವ್ಯಾಕೆ ಹೋಡೆದಾಡಿ ಸಾಯಬೇಕು, ಹಾಗೆ ಸತ್ತರೆ ನನಗೂ ನನ್ನ ದೇಶಕ್ಕೇನಾದರೂ ಉಪಯೋಗ ಇದೆಯಾ ಇಂಥಾ ಯಾವುದೇ ಮೂಲಭೂತ ಪ್ರಶ್ನೆಗಳಿಲ್ಲದೆ, ಬರಿ ಈಡು ಹೊಡೆಯಲು ಇಲ್ಲ ಹೊಡೆಸಿಕೊಂಡು ಸಾಯಲು ತಂತಮ್ಮ ಬಿಲಗಳಿಂದ ಎದ್ದು ಬಂದವರೆಂದರೆ ಹೀಗೆ ಬದುಕಿನ ಬಗ್ಗೆ ಯಾವ ಅವಗಾಹನೆಯೂ ಇಲ್ಲದೆ ಸಾಯಲೊಪ್ಪುವ ಅವರನ್ನು ಅದಿನ್ಯಾವ ರೀತಿ ಧರ್ಮದ ಅಫೀಮು ನಶೆಯಾಗಿಸಿದ್ದೀತು..?
ಕಾರಣ ಕಳೆದ ನಾಲ್ಕೈದು ದಶಕದಲ್ಲಿ ತನ್ನ ಇನ್ನೊಂದು ಗಡಿಯಲ್ಲಿ ಸಾಲುಸಾಲಾಗಿ ಸಂತ್ರಸ್ತರ ಶಿಬಿರ ತೆಗೆದು, ಅಲ್ಲಿ ಯಾವ ಭಾಗದ ಮುಸಲ್ಮಾನರು ಬಂದರೂ ಅವರಿಗೆ ಅನ್ನ, ನಿದ್ರೆ, ಜಾಗ ಕೊಟ್ಟು ಕೈಗೊಂದು ಬಂದೂಕು ಕೊಟ್ಟು ಹೋಗಿ ಅಲ್ಲಿ ಧರ್ಮಯುದ್ಧ ಮಾಡು ಎಂದು ಭಾವನಾತ್ಮಕವಾಗಿ ಬೆಳೆಸುತ್ತಿತ್ತಲ್ಲ ಅದೆಲ್ಲಾ ಒಂದಲ್ಲ ಒಂದು ದಿನ ಮುಗಿಯಲೇ ಬೇಕಿತ್ತು. ಲಕ್ಷಾಂತರ ಸ್ವಂತದ ದುಡ್ಡನ್ನೇ ಹಾಕಿ ಇಂತಹ ಶಿಬಿರಕ್ಕೆ ಫಂಡು ಒದಗಿಸುತ್ತಿದ್ದ ಒಸಾಮ ಬಿನ್ ಲಾಡೆನ್ ಎನ್ನುವ ಪರಮ ಕರ್ಮಠ ಮುಸ್ಲಿಂ ಭಯೋತ್ಪಾದಕನ್ನು ತನ್ನ ಮಿಲಿಟರಿ ನೆಲೆಯ ಪಕ್ಕದಲ್ಲೇ ಇಟ್ಟುಕೊಂಡು ಸಾಕುತ್ತಿದ್ದರೂ, ಅಮೇರಿಕೆಯ ಕಮಾಂಡೋ ಪಡೆಯಿಂದ ಉಳಿಸಿಕೊಳ್ಳಲಾಗದ ನಿರ್ಲಜ್ಜ ದೇಶ ಮರ್ಯಾದೆ ಕಳೆದುಕೊಂಡಿತಲ್ಲ ಅದೇ ದೇಶ ಈಗ ಶಿಬಿರದಲ್ಲಿದ್ದ ಸಾವಿರಾರು ಸಂತ್ರರ ರೂಪದ ಭಯೋತ್ಪಾದಕರಿಗೆ ಬರೀ ಅನ್ನ ನೀರು ಮಾತ್ರವಲ್ಲ ಬಡಿದಾಡಲು ಜಾಗವನ್ನೂ ಕೊಡಬೇಕಿತ್ತು. ಇಲ್ಲದಿದ್ದರೆ ಇದ್ದಲ್ಲೇ ಕಂಡುದ್ದಕ್ಕೆ ಕಾಣದ್ದಕ್ಕೆಲ್ಲಾ ಧರ್ಮಯುದ್ಧ ಮಾಡುತ್ತೇನೆನ್ನುವ ಅನಾಹುತಕಾರಿ ದೈವಸೈನಿಕರನ್ನು ಸುಧಾರಿವುದಾದರೂ ಹೇಗೆ...?ಅದು ಸೀದಾ ತನ್ನ ಬಲಕ್ಕೆ ಕೈ ತೋರಿಸಿ ಕೈತೊಳೆದುಕೊಂಡು ಬಿಟ್ಟಿತು. ಹಾಗೆ ಜಾಗತಿಕವಾಗಿ ಪರಿಚಯವೇ ಇಲ್ಲದ ನೆಲದ ಮೇಲೂ ಬಂದೂಕು ಊರಿ ಬಡಿದಾಡಲು ನಮ್ಮ ಸರಹದ್ದಿನಲ್ಲಿ ಉಗ್ರರು ಬಂದು ಬೀಡುಬಿಟ್ಟುಬಿಟ್ಟರು.
ಅಷ್ಟಕ್ಕೂ ಈ ಉಗ್ರರು ಹಾಗೆ ಎಲ್ಲೆಲ್ಲಿಂದಲೋ ಬಂದು ಪಾಕಿಗಳ ಆ ಭಾಗದಲ್ಲಿ ಆಶ್ರಯ ಮತ್ತು ತರಬೇತಿ ಪಡೆದಿದ್ದಾದರೂ ಯಾಕೆ ಅದರ ಹುಬ್ಬೇರಿಸುವ ಕತೆ ಮುಂದಿನ ವಾರಕ್ಕಿರಲಿ. ಆದರೆ ಹೀಗೆ ಯಾರದೋ ಕೈಗೆ ಸಿಕ್ಕಿ ಇಲ್ಲಿನ ನೆಲಕ್ಕೆ ದ್ರೋಹ ಬಗೆಯಲು ನಿಂತುಬಿಡುವ ದೇಶವಾಸಿಗಳಿಗೆ ಕನಿಕರ ತೋರುವುದಾದರೂ ಹೇಗೆ.? ಕಣಿವೆ ಖಾಲಿಯಾಗದೆ ಏನು ಮಾಡೀತು..?

No comments:

Post a Comment