ಕಾಶ್ಮೀರವೆಂಬ ಖಾಲಿ ಕಣಿವೆ..
ಸಮುದಾಯಕ್ಕೆ ಉರುಳಾದ ಜನಾಂಗೀಯ ಹತ್ಯೆ...
(ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ ಎಂದರೆ ಯಾವುದೇ ಪತ್ರಿಕೆಯೂ, ಒಬ್ಬೇ ಒಬ್ಬ ಸಂಪಾದಕನೂ ಇದನ್ನು ಜನಾಂಗೀಯ ಮಾರಣಹೋಮ, ದಮನ, ಮಾನವಹಕ್ಕಿನ ಉಲ್ಲಂಘನೆ ಎಂಬ ಶಬ್ದವನ್ನು ಬಳಸದೆ ಎರಡು ಸಾಲಿನ ಸುದ್ದಿ ಮಾಡಿ ಕೈತೊಳೆದುಕೊಂಡು ಪಂಡಿತರ ಸಮುದಾಯಕ್ಕೆ ಕೊನೆ ಮೊಳೆದುಬಿಟ್ಟಿದ್ದರು. ಕಡೆಪಕ್ಷ ಅದು ನಿರಾಶ್ರಿತರ ಸಮಸ್ಯೆಯಾಗಿಯೂ ಕಾಡಲಿಲ್ಲ. ವಲಸೆಯ ದುರಂತವಾಗಿಯೂ ಕಾಡಲಿಲ್ಲ. ಬದಲಿಗೆ ಅವರನ್ನೆಲ್ಲಾ ಸಾಮೂಹಿಕವಾಗಿ "ಪ್ರಾದೇಶಿಕ ವಲಸಿಗರು" ಎಂಬ ಪಟ್ಟಿಗೆ ಸೇರಿಸಿ ಆಗಿನ ಸರಕಾರ ಕೈ ತೊಳೆದುಕೊಂಡರೆ ಅವರ ಕೈಗೊಂಬೆಯಂತೆ ಆಡಿದ ಮಾನವ ಹಕ್ಕು ಆಯೋಗ ನೆಪಕ್ಕೊಂದು ವರದಿ ಮತ್ತು ವಿಚಾರಣೆ ನಡೆಸಿ ಕಾಲಾನುಕ್ರಮದಲ್ಲಿ ವಿಷಯವನ್ನೆ ಮರೆ ಮಾಚಿ ತೆಪ್ಪಗಾಗಿಬಿಟ್ಟಿತು)
ಕಾಶ್ಮೀರ ವ್ಯಾಲಿಯಿಂದ 1990 ರ ದಶಕದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾಶ್ಮೀರ ಪಂಡಿತರು ಅಲ್ಲಿನ ಪರ್ವತದ ಸಂದುಗಳನ್ನಿಳಿದು ಭಾರತದ ಇತರ ಭಾಗಳಿಗೆ ತೆರಳಿದರಲ್ಲ ಆವತ್ತಿನಿಂದ ಅಜಮಾಸು ಎಂಟು ಲಕ್ಷ ಜನ ಹಾಗೆ ಎರಡೇ ವರ್ಷದಲ್ಲಿ ಗುಳೆಹೋದರು. ಅನಾಹುತಕಾರಿ ಬಲಾತ್ಕರಕ್ಕೆ ಸಿಕ್ಕಿದ ಹಿಂದೂ ಹೆಂಗಸರ ಲೆಕ್ಕ ಹಾಕುವ ಧೈರ್ಯವನ್ನು ಇವತ್ತಿಗೂ ಯಾವೊಬ್ಬ ಗಂಡಸೂ ಮಾಡಿಲ್ಲ. ಸತ್ತು ಹೋದ, ಕಳೆದು ಹೋದವರ, ನಾಪತ್ತೆಯಾದವರ ಸಂಖ್ಯೆಯ ನಿಖರತೆಯನ್ನು ಬಹಿರಂಗಪಡಿಸುವ ದಮ್ಮು ಆವತ್ತಿನಿಂದ ಇವತ್ತಿನವರೆಗೆ ಯಾವ ಸರಕಾರವೂ ತೋರಿದ್ದೇ ಇಲ್ಲ. ಇವತ್ತಿಗೂ ಆ ರಿಪೆÇೀರ್ಟನ್ನು ಹೊರಹಾಕುವ ಕಾರ್ಯವಾಗಿಲ್ಲ. ನಿಮಗೆ ಗೊತ್ತಿರಲಿ, ಬದುಕಿರುವ ಬಂಧುಗಳು ತಮ್ಮವರನ್ನು ಹುಡುಕಲು ಸುಮಾರು ನೂರಡಿ ಅಗಲದ ಪೆÇಸ್ಟರ್ ಮೇಲೆ ಸಾವಿರಾರು ಭಾವಚಿತ್ರಗಳನ್ನು ಅಂಟಿಸಿಡುತ್ತಿದ್ದರು ಯಾರಾದರೂ ಬದುಕಿದ್ದೀರಾ ಎಂದು..? ಹೀಗೆ ಇದ್ದಕ್ಕಿದ್ದಂತೆ ಖಾಲಿಯಾದ ಕಣಿವೆಯಲ್ಲಿ ಕಾಲೂರಿ ನಿಂತು ಇಸ್ಲಾಂಗಾಗಿ ಬಡಿದಾಡುತ್ತಿದ್ದ ಹಜಾರಾ ಮುಸ್ಲಿಂ ಜನಾಂಗ(ಈಗಿನ ಶಿಯಾ ಮುಸ್ಲಿಮರು), ಯಾವ ಮುಲಾಜೂ ಇಲ್ಲದೇ ಹಾಗೆ ಬಿಟ್ಟು ಹೋದವರ ಸಂಪೂರ್ಣ ಆಸ್ತಿಯನ್ನು ಆವರಿಸಿಕೊಂಡುಬಿಟ್ಟರು. ಹಾಗೆ ಆಕ್ರಮಿತ ಆಸ್ತಿಯನ್ನು ಆವತ್ತಿಗಿನ ಕಾಶ್ಮೀರಿ ಸರಕಾರ ಅವರ ಅಧಿಕೃತವಾದ ಅಸ್ತಿಯನ್ನಾಗಿ ದಾಖಲೆ ಮಾಡಲು ಏನು ಬೇಕೋ ಅದನ್ನೆಲ್ಲಾ ಮಾಡಿಕೊಟ್ಟು ಸಹಕರಿಸಿತು. ಅಲ್ಲಿಗೆ ಜಾಗತಿಕವಾಗಿ ಅದ್ಭುತವಾದ ಜನಾಂಗ ಎಂಬ ಹೆಸರು ಮಾಡಿದ್ದ ಕಾಶ್ಮೀರ ಪಂಡಿತರ ಸಮೂಹ ಸಾಮೂಹಿಕವಾಗಿ ಒಂದು ಭೂ ಪ್ರದೇಶದಿಂದಲೇ ಅವರ ಆಸ್ತಿತ್ವವನ್ನು ಒರೆಸಿಹಾಕಲಾಗಿತ್ತು. ಐದು ಸಾವಿರ ವರ್ಷಗಳ ಶ್ರೀಮಂತ ಇತಿಹಾಸವಿದ್ದ ಅಪೂರ್ವ ನಾಗರಿಕತೆಯೊಂದು ಒಂದೇ ವಾರದಲ್ಲಿ ತುಷ್ಟೀಕರಣದ ರಾಜಕೀಯಕ್ಕೆ ಬಲಿಯಾಗಿ ಹೋಗಿತ್ತು. ಆಗಿನ ಮುಖ್ಯ ಮಂತ್ರಿ ಅಬ್ದುಲ್ ಮಾತ್ರ ನಿವಾಸದಿಂದ ಹೊರಗೇ ಬರಲಿಲ್ಲ.
ಆವತ್ತು 1990 ರ ಜನವರಿಯ ನೇರ ಧಮಕಿಯೊಂದಿಗೆ ಅರಂಭವಾದ ಹಿಂಸಾಚಾರದಲ್ಲಿ ಮೊಟ್ಟ ಮೊದಲ ಬಲಿಯಾದದ್ದು "ಟೀಕಾಲಾಲ್ ಟಪ್ಲು" ವಿನದ್ದು. ಅವನ ಹತ್ಯೆಯನ್ನು ಸಮರ್ಥಿಸಿಕೊಂಡೆ ಸುಮರು 300 ಹಿಂದೂಗಳನ್ನು ಬರ್ಬರವಾಗಿ ಒಂದೇ ವಾರದಲ್ಲಿ ಕೊಂದುಹಾಕಲಾಗಿತ್ತು. ಎಲ್ಲಿ ನೋಡಿದರೂ ಹೊರಕ್ಕೆ, ಪರಊರಿಗೆ ತೆರಳಿದ್ದ ಹಿಂದೂಗಳು ಕಾಶ್ಮೀರ ಕಣಿವೆ ವಾಪಸ್ಸಾಗುವ ಸಾಧ್ಯತೆ ಸಂಪೂರ್ಣವಾಗಿ ಇಲ್ಲವೆ ಇಲ್ಲ ಎನ್ನುವಂತಾಗಿಹೋಗಿತ್ತು. ಇದನ್ನೆಲ್ಲಾ ಭರಿಸಿ ನ್ಯಾಯ ಕೊಡಿಸಬಹುದಾಗಿದ್ದ ಶ್ರೀನಗರ ಹೈಕೋರ್ಟು ಕೂಡಾ ತೀವ್ರವಾಗಿ ತತ್ತರಿಸಿದ್ದು ಅವರದ್ದೇ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಎನ್.ಗಂಜು ಅವರ ಹತ್ಯೆಯಿಂದಾಗಿ. ಯಾವಾಗ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರಿಗೇ ರಕ್ಷೆ ಇಲ್ಲ ಎನ್ನುವುದು ಸಾಬೀತಾಯಿತೋ ಪೂರ್ತಿ ಕಣಿವೆ ತಲ್ಲಣಿಸಿತ್ತು.
80ರ ವೃದ್ಧ ಸನ್ಯಾಸಿ ಸರ್ವಾನಂದ ಸ್ವಾಮಿಯನ್ನು ಆವತ್ತು ರಾತ್ರಿ ಎತ್ತಿಕೊಂಡು ಹೋಗಿ ಬರ್ಬರವಾಗಿ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಹಾಗೆ ಸಾಯಿಸುವ ಮೊದಲು ಅವರ ಮಗನ ಕಣ್ಣು ಗುಡ್ಡೆಗಳನ್ನು ಅವರೆದುರಿಗೇ ಕಿತ್ತು, ಯಮಯಾತನೆ ನೀಡಿ ಹಿಂಸಿಸಲಾಗಿತ್ತು. ಇದೆಲ್ಲಕ್ಕಿಂತಲೂ ಭೀಕರವಾಗಿ ಕಾಶ್ಮೀರ ಕಣಿವೆಯನ್ನು ತತ್ತರಿಸುವಂತೆ ಮಾಡಿದ್ದು ಸೌರಾ ಮೆಡಿಕಲ್ ಕಾಲೇಜಿನ ನರ್ಸ್ ಒಬ್ಬಳ ಮೇಲೆ ನಡೆದ ಸಾಮೂಹಿಕ ಮಾನಭಂಗ. ಲೆಕ್ಕವಿಲ್ಲದಷ್ಟು ಜನರು ಆಕೆಯ ಮೇಲೆ ನಿರಂತರವಾಗಿ, ನಿರಾತಂಕವಾಗಿ ಅತ್ಯಾಚಾರ ಮಾಡುತ್ತಿದ್ದರೆ ಸರಕಾರ ಕೈಕಟ್ಟಿಕೊಂಡು ಕೂತಿತ್ತು. ಒಬ್ಬೇ ಒಬ್ಬ ಪೆÇೀಲಿಸು ಅತ್ತ ಹಾಯುವ ಸ್ಥಿತಿಯಲ್ಲಿರಲಿಲ್ಲ. ಆವತ್ತು ಆಕೆಯೊಂದಿಗಿದ್ದ ಇನ್ನೊಬ್ಬ ಮಹಿಳೆಯನ್ನು ದಿನಗಟ್ಟಲೇ ಭೋಗಿಸಿದ್ದ ಮತಾಂಧರು ಜೀವಂತವಾಗಿದ್ದಾಗಲೇ ಆಕೆಯನ್ನು ಕಟ್ಟಿಗೆ ಕತ್ತರಿಸುವ ಸಾ ಮಿಲ್ಲಿನ ಬ್ಲೇಡುಗಳಿಗೆ ದೇಹವನ್ನು ಇಂಚಿಂಚಾಗಿ ಒಡ್ಡುತ್ತಾ ಹಿಂಸಿಸಿ ಸಾಯಿಸಿದ್ದರು.
ಅಲ್ಲಿಂದ ದೆಹಲಿ ಮತ್ತಿತರ ಭಾಗಕ್ಕೆ ಬರಿಗೈಯ್ಯಲ್ಲಿ ಬಂದಿದ್ದ ಪಂಡಿತರು ಅಕ್ಷರಶ: ಬೀದಿ ಗುಡಿಸಿ ಬದುಕು ಕಟ್ಟಿಕೊಳ್ಳಲೆತ್ನಿಸಿದ್ದು, ದೆಹಲಿಯ ನಿವಾಸಿಗಳು ಕೊಟ್ಟ ಹಳೆಯಬಟ್ಟೆಗಳಲ್ಲಿ ಮೊದಲೆರಡು ವರ್ಷ ಜೀವ ಹಿಡಿದುಕೊಂಡಿದ್ದರೆಂದರೆ ಅದಿನ್ನೆಂಥಾ ಭೀಕರತೆಗೆ ಅವರನ್ನು ತಳ್ಳಿರಬೇಕು..? ಇಷ್ಟಾದರೂ ಯಾವೊಬ್ಬ ಮುಖ್ಯಸ್ಥನೂ ಇಂಥಾ ಕ್ರೌರ್ಯವನ್ನು, ಇದನ್ನೊಂದು ಜಿನೋಸೈಡ್(ಬರ್ಬರ ಸಾಮೂಹಿಕ ಹತ್ಯಾಕಾಂಡ, ಜನಾಂಗವೊಂದರ ನಾಮಾವಶೇಷಕ್ಕಾಗಿ ನಡೆಸುವ ಕಗ್ಗೊಲೆ)ಎಂದು ಒಪ್ಪಿಕೊಳ್ಳಲೇಇಲ್ಲ. ಹಾಗೆ ಮಾಡಿದಲ್ಲಿ ತಾವಾಗಿಯೇ ಸಾಮೂಹಿಕ ಹತ್ಯಾಕಾಂಡ ಎಂದು ಜಾಗತಿಕವಾಗಿ ಒಪ್ಪಿಕೊಂಡಂತಾಗುತ್ತದೆ ಎಂದು ಸರಕಾರ ಅವರಿಗೆಲ್ಲಾ ತಾತ್ಪೂರ್ತಿಕ ತಗಡಿನ ಶೆಡ್ಡುಗಳನ್ನು ಒದಗಿಸಿ ಮುಗುಮ್ಮಾಗಿ ಬಿಟ್ಟಿತ್ತು.
ಅಲ್ಲಿಂದ ಚೇತರಿಸಿಕೊಂಡು ಪಂಡಿತರು ತಿರುಗಿ ತಮ್ಮ ಆಸ್ತಿತ್ವವನ್ನು ಕಾಯ್ದುಕೊಳ್ಳಲು ಎದ್ದು ನಿಲ್ಲುವ ಹೊತ್ತಿಗೆ ದಶಕಗಳೇ ಕಳೆದುಹೋಗಿದ್ದವು. 2008-09 ರ ಸುಮಾರಿಗೆ ಎಲ್ಲೆಲ್ಲೊ ಚದುರಿದ್ದ ಪಂಡಿತರು ಸೇರಿ ರಚಿಸಿದ "ಕಾಶ್ಮೀರ ಪಂಡಿತ್ ಸಂಘರ್ಷ ಸಮಿತಿ" ಮಾಹಿತಿ ಹೊರಗೆಡುವ ಹೊತ್ತಿಗೆ ಸುಮಾರು ಶೇ.80 ರಷ್ಟು ಪಂಡಿತರು ಶಾಶ್ವತವಾಗಿ ಕಣ್ಮರೆಯಾಗಿ ಹೋಗಿದ್ದರು. ನಂತರದ ದಿನಗಳಲ್ಲಿ ಸರಕಾರ ಪಂಡಿತರಿಗೆ ಎಲ್ಲಾ ಸವಲತ್ತು ಮತ್ತು ರಕ್ಷಣೆ ಕೊಡುವುದಾಗಿ ಹೇಳುತ್ತಾ ಪ್ಯಾಕೇಜ್ ಘೋಷಿಸಿದರೂ ಸ್ಥಳೀಯವಾಗಿ ಬದ್ಧತೆಯುಳ್ಳ ಸರಕಾರದ ಭರವಸೆಯೇ ಇಲ್ಲದ್ದರಿಂದ ಇಲ್ಲಿಯವರೆಗೆ ಕಣಿವೆಗೆ ಮರಳಿದ್ದು ಕೇವಲ ಒಂದು ಕುಟುಂಬ. ಒಬ್ಬೇ ಒಬ್ಬ ಪಂಡಿತ ಇವತ್ತು ಕಣಿವೆಗೆ ಮರಳಿ ಕಾಲೂರಿ ನಿಂತು ಬಡಿದಾಡುತ್ತಿದ್ದಾನೆ. ಹಿಂದಿರುಗಿ ತಮ್ಮ ಆಸ್ತಿ ಮಾರಾಟ ಮಾಡಿ, ಆಸ್ತಿ ಖರೀದಿಸಿ ನೆಲೆಸೊಣ ಎಂದರೆ ತೀರ ಐತಿಹಾಸಿಕ ಕಾನೂನೊಂದನ್ನು ರಚಿಸಿ ಕಾಶ್ಮೀರವನ್ನು ಅದ್ಯಾವ ಪರಿಯಲ್ಲಿ ಹಾಳುಗೆಡವಿದ್ದಾರೆಂದರೆ ಸೆಕ್ಷನ್ 370 ಎಂಬ ಕಾನೂನು ಸ್ವತ: ಕಾಶ್ಮೀರಿಗಳಿಗೆ ಮುಳುವಾಗಿ ಹೋಗಿತ್ತು. ಈಗ ತಮ್ಮದೆ ನೆಲದ ತಮ್ಮದೇ ಆಸ್ತಿಯನ್ನು ಖರೀದಿಸುವಂತಿಲ್ಲ ಮಾರುವಂತಿಲ್ಲ. ಯಾವುದೇ ವ್ಯಾಪಾರ,ವ್ಯವಹಾರಕ್ಕೂ ಕೈಹಾಕುವಂತಿಲ್ಲ. ಕಾರಣ ಇದೇ ಪಂಡಿತ ಈಗ ಹೊರಗಿನವ. ಹೊರಗಿನವರಾರು ಇದನ್ನೆಲ್ಲಾ ಮಾಡುವಂತಿಲ್ಲ. ಮುಗಿದು ಹೋಯಿತಲ್ಲ. ಅಂತಹ ಕಾನೂನಿನ ಬೆಂಬಲಕ್ಕೆ ಸ್ವತ: ಅಲ್ಲಿನ ಸರಕಾರ ನಿಂತುಬಿಟ್ಟಿತ್ತು.
ಇತಿಹಾಸದಲ್ಲಿ ಸೇರಿಸಲಾಗಿದ್ದ ಅನುಚ್ಛೇದ 370 ಎನ್ನುವ ಕಾನೂನು ಇಂತಹ ಎಲ್ಲಾ ರೀತಿಯ ಅನಾಹುತಕ್ಕೆ ಕಾರಣವಾಗಿತ್ತು. ಅಂತಹದ್ದೊಂದು ಕಾನೂನನ್ನು ಪುರಸ್ಕರಿಸುವ ಅಗತ್ಯವೇ ಇರಲಿಲ್ಲ. ಆದರೆ ಆಗಿನ ಕಾಲದಲ್ಲಿ ಅತಿಯಾದ ಮುಸ್ಲಿಂ ಓಲೈಕೆ ಮತ್ತು ತುಷ್ಟೀಕರಣದ ರಾಜಕೀಯವಾಡಿದ ಆಗಿನ ಅದಕ್ಷ ನಾಯಕರುಗಳ ಹೊಣೇಗೇಡಿತನದಿಂದ ಸಂಪೂರ್ಣ ಭಾರತ ಹೆಗಲಿಗೆ ಕೊಳೆಯುವ ಹುಣ್ಣಾಗಿಸಿ ಕಾಶ್ಮೀರವನ್ನು ನೇತು ಹಾಕಿಬಿಟ್ಟಿತ್ತು.
ಅಷ್ಟಕ್ಕೂ ಪರಿಚ್ಛೇದ 370 ಏನು ಹೇಳುತ್ತೆ..? ಯಾಕೆ ಈ ವಿಶೇಷ ಕಾನೂನು ಕಾಶ್ಮೀರಕ್ಕೆ ಮಾತ್ರ ಲಾಗು ಆಗ್ತಿದೆ ಇತ್ಯಾದಿ ಕತೆಗಳೆಲ್ಲ ಮುಂದಿನ ವಾರಕ್ಕಿರಲಿ. ಅದಕ್ಕೂ ಮೊದಲು ಇದನ್ನು ಬರೆಯುವ ಹೊತ್ತಿಗೆ ಒಂದೇ ವಾರದಲ್ಲಿ ಹತ್ತಕ್ಕೂ ಹೆಚ್ಚು ಉಗ್ರರನ್ನು ನಮ್ಮ ಸೈನಿಕರು ಹೊಡೆದು ಕೆಡುವಿದ್ದಾರೆ. ಕಣಿವೆ ಕ್ರಮೇಣ ಖಾಲಿಯಾಗುತ್ತಿದೆ.

No comments:
Post a Comment