Thursday, August 24, 2017

ಮೋಡ ಬಿತ್ತನೆಯೆಂಬ ಮತ್ತೊಂದು ಪ್ರಹಸನ...

ನಿಜಕ್ಕೂ ಜಗತ್ತಿನಲ್ಲೆಲ್ಲೂ ಇಂತಲ್ಲೇ ಮೋಡ ಕರೆಸಿ, ಅದನ್ನು ಬಿಡಿಸಿ, ಅದರ ಒಡಲಲ್ಲಿನ ಭಾಷ್ಪೀಕರಣಗೊಂಡಿರುವ ಘನೀಕೃತ ನೀರಿನ ಅಂಶಕ್ಕೆ ರಸಾಯನಿಕದ ತಂಪು ತಾಗಿಸಿ ಅದನ್ನು ನಮಗೆ ಬೇಕಾದ ಕಡೆಯಲ್ಲಿ ಭೂವಿಯ ಮೇಲೆ ಎಳೆದು ಇಲ್ಲೇ ಬೀಳು.. ಇಂತಲ್ಲಿ ಮಳೆ ಕಮ್ಮಿ ಇದೆ ಮಳೆ ಆಗು, ಇಲ್ಲಿ ಸ್ವಲ್ಪ ಸುರಿಸಿ ಉಳಿದದ್ದು ಅಲ್ಲಿ ಸುರಿಸು... ಹೀಗೆಲ್ಲಾ ಮೋಡಗಳಿಗೆ ಆಜ್ಞೆ ಕೊಟ್ಟು ನಮಗಿಷ್ಟ ಬಂದಂತೆ ಮಳೆ ಬರಿಸಿಕೊಳ್ಳುವ ವ್ಯವಸ್ಥೆಯ ನಿಯಂತ್ರಣ ನಮ್ಮ ಕೈಯ್ಯಲ್ಲಿದೆ ಎಂದು ಅಂದುಕೊಂಡಿದ್ದೇ ಆದರೆ ಅದಕ್ಕಿಂತ ದೊಡ್ಡ ತಮಾಷಿ ಮತ್ತು ಮುಟ್ಟಾಳತನ ಈ ವಿಜ್ಞಾನ ಲೋಕದಲ್ಲಿ ಇನ್ನೊಂದಿಲ್ಲ. ಪ್ರಸ್ತುತ ಅಂತಹ ದಡ್ಡತನವನ್ನು ತಮ್ಮ ಬುದ್ಧಿವಂತಿಕೆ ಎಂದು ತೋರಿಸುತ್ತಾ, ಕೆಲವೊಮ್ಮೆ ಆಕಸ್ಮಿಕವಾಗಿ ಸಿಕ್ಕ ಫಲಿತಾಂಶವನ್ನೇ (ಅದೂ ಜಾಗತಿಕವಾಗಿ ಸರಾಸರಿ ಶೇ.18 ಮಾತ್ರ) ಯಶಸ್ಸು ಎಂದು ನಂಬಿ ಮೋಡ ಕೆರೆದು ಮಳೆ ಸುರಿಸಲು ಹೊರಟಿದ್ದಾರಲ್ಲ ಇದನ್ನು ಪ್ರಹಸನವಲ್ಲದೇ ಇನ್ನೇನು ಎನ್ನೋಣ...?
ಅಸಲಿಗೆ ಇವತ್ತು ಮೋಡ ಮತ್ತದರ ಒಡಲಲ್ಲಿ ಏನಿದೆ ಎಂಬುವುದೇ ಇವತ್ತಿಗೂ ವಿಜ್ಞಾನಿಗಳಿಗೆ ಬೇಧಿಸಲಾಗದ ಸತ್ಯ. ಸಮುದ್ರದ ನೀರು ಆವಿಯಾಗಿ ಮೋಡವಾಗುತ್ತದೆ ಎಂಬ ಪರಂಪರಾನುಗತ ಸತ್ಯವನ್ನೇ ನಮ್ಮ ಕಿವಿಗೆ "ಕಾಬಾಳೆ" ಹೂವಿನಂತೆ ಮಡಚಿ ಮಡಚಿ ಇಡುತ್ತಾ ಬಂದಿದ್ದಾರೆಯೇ ವಿನ: ಯಾರ ಕೈಯ್ಯಲ್ಲೂ ವೈಜ್ಞಾನಿಕವಾಗಿ ಮೋಡ ಎಂದರೆ ಇದು, ಮೋಡ ಎಂದರೆ ಹೀಗೆಯೇ ಇರುತ್ತದೆ, ಇದರ ಒಡಲಲ್ಲಿ ಇಂತಿಂಥಾ ಕೆಮಿಕಲ್ಸ್ ಪ್ರಾಪರ್ಟೀಸ್ ಅಥವಾ ಸ್ತಿತ್ಯಂತರಗಳು ಆಯಾ ಕಾಲಾನುಕಾಲಕ್ಕೆ ಜರಗುತ್ತಿರುತ್ತದೆ ಎಂದು ಸರ್ಟಿಫೈ ಮಾಡುವಂತಹ ರಿಪೆÇೀರ್ಟು ಇಲ್ಲವೇ ಇಲ್ಲ. ಅದಕ್ಕೂ ಮಿಗಿಲಾಗಿ ಮೋಡಗಳನ್ನು ಅಯಾನುಕರಣಗೊಳಿಸಿ, ಅದಕ್ಕೆ ಲವಣ ತಾಗಿಸುವ ಮುಖಾಂತರ ( ಸಿಲ್ವರ್ ಅಯೋಡೈಸಡ್ ಕಣಗಳು – ಬೇಕಿದ್ದರೆ ಉಪ್ಪಿನ ನೀರು ಎನ್ನಿ ) ಅದನ್ನು ದಿಕ್ಕು ತಪ್ಪಿಸಿ ನಮ್ಮಿಷ್ಟ ಬಂದಂತೆ ಚದುರಿಸಿ ಅದರ ಒಡಲಲ್ಲಿ ಘನೀಕೃತ ನೀರಿನ ಅಂಶವನ್ನು ಭಾರವಾದ ಹನಿಯಾಗಿ ಬದಲಾಯಿಸಿ ಬೇಕಾದಂತೆ ಸುರಿಸಬಹುದೆನ್ನುವ ಪ್ರಕ್ರಿಯೆ ವೈಜ್ಞಾನಿಕವಾಗಿ ಸಿದ್ಧವಾದ ಸೂತ್ರವಲ್ಲವೇ ಅಲ್ಲ. ಅದೊಂದು ಆಕಸ್ಮಿಕ. ಎರಡು ಎರಡು ಸೇರಿದರೆ ನಾಲ್ಕೇ ಎನ್ನುವ ಜಾಗದಲ್ಲಿ ಇಪ್ಪತ್ತೆರಡೂ ಆಗುತ್ತದೆಯೆನ್ನುವ ಅನುಕೂಲಸಿಂಧು ಸಿದ್ಧಾಂತದಂತಿದೆ ಇದು.
ಇಂತಹ ಸೂತ್ರದ ಮೇಲೆ ನಮ್ಮ ಸರಕಾರಗಳು ನಿರಂತರವಾಗಿ, ಬರಗಾಲದಲ್ಲಿ ಧನಾತ್ಮಕವಾಗಿ ಕಾರ್ಯನಿರ್ವಹಿಸದೆ, ಏನೂ ಮಾಡುತ್ತಿಲ್ಲ ಎನ್ನಿಸಿಕೊಳ್ಳುವುದಕ್ಕಿಂತ ಈ ಬಿತ್ತನೆ ವಾಸಿ ಎನ್ನುವಂತೆ ಕೋಟ್ಯಾಂತರ ರೂಪಾಯಿಯನ್ನು ಮಳೆಗಾಗಿ ಖರ್ಚು ಮಾಡುತ್ತಿದ್ದೇವೆ ಎನ್ನುವುದನ್ನು ತೋರಿಸಲು ಮೋಡ ಬಿತ್ತನೆಯ "ಬೆಳೆ" ತೆಗೆಯುತ್ತಿದ್ದಾರಾ ಎನ್ನಿಸುತ್ತಿದೆ. ಅಂದಹಾಗೆ ನನಗೆ ಗೊತ್ತಿದ್ದ ಮಟ್ಟಿಗೆ ಇಂತಹ ಕೆಲಸಕ್ಕೆ ಕೈ ಹಾಕುತ್ತಿರುವುದು ಮೊದಲ ಸಲವೇನಲ್ಲ ಮತ್ತು ಹಿಂದಿನ ಫಲಿತಾಂಶವನ್ನಾದರೂ ಗಮನಿಸಬೇಡವೆ..? ಒಂದು ಗೊತ್ತಿರಲಿ. ಸಮುದ್ರ ನೀರೇ ಏಕೆ ಮೋಡವಾಗುತ್ತದೆ...? ಬೇರೆ ನೀರುಗಳೂ ಆವಿಯಾಗುತ್ತವಲ್ಲ ಅವೆಲ್ಲಾ ಯಾಕೆ ಮೋಡವಾಗುವುದಿಲ್ಲ...? ಎಂಬ ಪ್ರಶ್ನೆ ಕೇಳಿ ನೋಡಿ ಎಂತಹ ಪೆÇ್ರೀಫೇಸರೂ ಹೆ.. ಹ್ಹೇ.. ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ಎಲ್ಲಾ ನೀರಿನ ಆವಿಯ ಪ್ರಮಾಣ ಮತ್ತು ಅದರ ಪ್ರಕ್ರಿಯೆಯ ಅಂತಿಮ ಫಲಿತಾಂಶವೇ ಮೋಡ ಕಟ್ಟುವಿಕೆ.
ಸಮುದ್ರ ಹೊಳೆ, ನಿಂತ ನೀರು, ಕಾಲುವೆ ಹೀಗೆ ಎಲ್ಲೆಡೆಯಲ್ಲಿನ ನೀರಿನ ಹರಿವು ಬಿಸಿಲಿನ ಪ್ರಖರ ಬಿಸಿಗೆ ಕಾಯ್ದು ನೀರಾವಿಯಾಗಿ ಗಾಳಿಯ ರಭಸದೊಂದಿಗೆ ಮೇಲೆರುತ್ತ ಸಾಗುತ್ತದಲ್ಲ ಆಗ ಗಾಳಿ ಹೆಚ್ಚು ಬಿಸಿಯಾಗಿದ್ದಷ್ಟೂ ತನ್ನ ಸಂಗಡ ಹೆಚ್ಚಿನ ನೀರಾವಿಯನ್ನು ಹೊತ್ತೊಯ್ಯಬಲ್ಲದು. ಹೀಗೆ ನೀರಾವಿ ಆಯಾ ಪರಿಸ್ಥಿತಿಯ ಸಾಂದರ್ಭಿಕವಾಗಿ ಬಿಸಿಗಾಳಿಯೊಡನೆ ತನ್ನ ಪ್ರಮಾಣವನ್ನು ನಿಗದಿಗೊಳಿಸಿಕೊಳ್ಳುತ್ತದೆ. ಇದೆಲ್ಲಾ ನಿಸರ್ಗ ಪ್ರಕ್ರಿಯೆ. ಆದರೆ ಈ ಪ್ರಕ್ರಿಯೆಯೊಂದಿಗೆ ಅದು ಮೇಲಕ್ಕೆ ಹೋದಂತೆಲ್ಲಾ ಅಲ್ಲಿ ಬಿಸಿತನ ಕಡಿಮೆಯಾಗುತ್ತಾ ಹೋಗುತ್ತದಲ್ಲ ಆಗ ಒಂದು ನಿಗದಿತ ಹಂತದಲ್ಲಿ ಬಿಸಿ ಪೂರ್ತಿಯಾಗಿ ಕಡಿಮೆಯಾಗುತ್ತಾ ತನ್ನಲ್ಲಿ ನಿಗದಿತ ಸಾಮಥ್ರ್ಯದ ನೀರಾವಿಯನ್ನು ಹಿಡಿದುಕೊಳ್ಳುವ ಸಾಮಥ್ರ್ಯ ಕಳೆದುಕೊಳ್ಳುತ್ತದೆ. ಇದನ್ನೇ ಸ್ಯಾಚುರೇಟೆಡ್ ಏರ್ ಅಥವಾ ತಂಪಾದ ಗಾಳಿ ಎನ್ನುತ್ತಾರೆ. ಹಾಗೆ ತಣ್ಣಗಾದ ಗಾಳಿ ತನ್ನೊಡಲಲ್ಲಿ ನೀರಾವಿಯನ್ನು ಹೊತ್ತು ಆಗಸದಲ್ಲಿ ತೇಲುತ್ತಾ ನಿಂತು ಬೀಡುತ್ತದೆ ಮತ್ತು ಇದೇ ನಮ್ಮ ಕಾಳಿದಾಸ ಮೇಘ ಸಂದೇಶ ಕಳುಹಿಸಿದ ಮೋಡ ಎಂದು ಕರೆಯಲ್ಪಡುತ್ತವೆ.
ಇಂತಹ ಪ್ರಸಕ್ತ ಮತ್ತು ಅಂದಾಜಿನ ಸ್ಥಿತಿಯನ್ನು ಉಪಯೋಗಿಸಿಕೊಂಡು, ಇಂತಹ ಮೋಡಗಳನ್ನು ತಮ್ಮದೇ ಲೆಕ್ಕಾಚಾರದಲ್ಲಿ ಪತ್ತೆ ಹಚ್ಚಿ (ಇಲ್ಲಿರಬಹುದು ಅಲ್ಲಿರಬಹುದು ಎಂಬ ಕಂತೆ ಲೆಕ್ಕದಲ್ಲಿ), ಹಾಗೆ ಸಾಂದ್ರಗೊಂಡು ನಿಂತ ಮೋಡದ ಒಡಲಲ್ಲಿ ಮೈನಸ್ 35 ರ ಆಸುಪಾಸಿನಷ್ಟು ತಂಪಾದ ಹನಿಗಳು ಬೀಡುಬಿಟ್ಟಿರುತ್ತವಲ್ಲ ಅದನ್ನು ಸೆಳೆಯಲು ಹೂಡುವ ತಂತ್ರಜ್ಞಾನವೇ ಮೋಡ ಬಿತ್ತನೆ.
ಇಲ್ಲಿ ಎಲ್ಲಾ ಹನಿಗಳೂ ನೀರಾಗಿ ಸುರಿಯುತ್ತವೆ ಎಂದೇನಿಲ್ಲ. ಕಾರಣ ಈ ಭಾಷ್ಫೀಕರಣದ ಪ್ರಕ್ರಿಯೆಯಲ್ಲಿ ಕ್ರಮೇಣ ಮೈನಸ್ ಟೆಂಪರೇಚರ್‍ನತ್ತ ಹೊರಳುವ ಹನಿಗಳು ಕೆಲವು ಮಾತ್ರ ಘನೀಕೃತಗೊಳುತ್ತವೆ. ಉಳಿದವು ಗಟ್ಟಿ ನೀರಿನ ಹನಿಗಳಾಗೇ ತೇಲುತ್ತಿರುತ್ತವೆ. ಅಷ್ಟು ಎತ್ತರದಲ್ಲಿ ನೀರಿನ ಹಿಮಗಟ್ಟುವಿಕೆಯ ಕ್ಷಮತೆಯಲ್ಲಿ ವ್ಯತ್ಯಾಸವಾಗುವುದರಿಂದ ನೀರು ಹನಿಯಾಗೇ ತೇಲುವ ಅವಕಾಶ ಇದ್ದೇ ಇರುತ್ತದೆ. ಹೀಗೆ ತೇಲುತ್ತಾ ಒಂದಕ್ಕೊಂದು ತಾಗುತ್ತಿದ್ದಂತೆ ಅಕ್ಕ ಪಕ್ಕದ ಹನಿಗಳೊಂದಿಗೆ ಸೇರುತ್ತಾ ಸಾಂದ್ರಗೊಳ್ಳುತ್ತಾ ಹೋಗುತ್ತದೆ. ಹೀಗೆ ಕ್ರಮೇಣ ಚಿಕ್ಕ ಚಿಕ್ಕ ಸಾಂದ್ರೀಕೃತ ಹನಿಗಳೂ ಕೂಡಾ ದೊಡ್ಡದಾಗಿ ತೂಕವನ್ನು  ಪಡೆಯಲಾರಂಭಿಸುತ್ತವೆ.
ಹೀಗೆ ಹೆಚ್ಚುವ ತೂಕದ ಪರಿಣಾಮ ಒಮ್ಮೆ ಈ ಘನೀಕೃತ ನೀರು ಭಾರ ಹೆಚ್ಚಾಗಿ ಕುಸಿಯಲಾರಂಭಿಸಿದರೆ ಅದೆ ಮೋಡದ ಮೂಲಕ ಹರಿದು ಮಳೆಯಾಗುತ್ತದೆ. ಇದು ಸಹಜ ಪ್ರಕ್ರಿಯೆ. ಮೋಡದಿಂದ ಮಳೆಯಾಗುವ ನೈಸರ್ಗಿಕ ಈ ವಿಧಾನವನ್ನು ಕೃತವಾಗಿ ಸೃಷ್ಠಿಸುವುದು ನಮ್ಮಿಂದ ಸಾಧ್ಯವೇ ಇಲ್ಲ. ಆದರೆ ಈ ಮೋಡಗಳಲ್ಲಿನ ಹನಿಗಳು ಪ್ರಮಾಣ ಹೆಚ್ಚಾಗುವವರೆಗೂ ಅದು ಮಳೆಯಾಗಿ ಸುರಿಯುವುದಿಲ್ಲ. ಇಲ್ಲ ಹಾಗೆ ಸೇರುವ ಹನಿಗಳ ತೂಕ ಹೆಚ್ಚಾಗಿ ಅದರ ಭಾರಕ್ಕೆ ಅದು ಕುಸಿಯಬೇಕು. ಇವೆರಡೂ ಆಗುವವರೆಗೂ ಮೋಡದ ಒಡಲು ಮಳೆಯಾಗಿ ಧರೆಗೆ ಇಳಿಯಲಾರದು.
ಈ ಸಾಂಧರ್ಬಿಕ ವ್ಯತ್ಯಾಸ ಮತ್ತು ಸಹಜ ಪ್ರಕ್ರಿಯೆಯ ಮಧ್ಯದಲ್ಲಿ ಮಾನವ ಕೈ ತೂರಿಸಲು ಪ್ರಯತ್ನಿಸುತ್ತಿರುವುದೇ ಮೋಡ ಬಿತ್ತನೆ ಅಥವಾ ಮಳೆ ತರಿಸುವ ಪ್ರಕ್ರಿಯೆಯಾಗಿ ಚಾಲ್ತಿಗೆ ಬರುತ್ತಿದೆ. ಅಂದರೆ ಮಳೆಯಾಗಿ ಸುರಿಯಲು ಹನಿಗಳು ಹೆಚ್ಚಾಗಬೇಕು. ಅದನ್ನಂತೂ ನಾವಾಗಿ ಕೃತಕವಾಗಿ ಸೃಷ್ಟಿಸಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಅದು ತೇಲುತ್ತಲೇ ಇರಬೇಕು. ಆದರೆ ದೊಡ್ಡದಾದ ಹನಿಗಳನ್ನು ಇನ್ನಷ್ಟು ದೊಡ್ಡದಾಗಿಸುವ ಮೂಲಕ ಭಾರ ಹೆಚ್ಚಿಸಿ ಕೆಳಕ್ಕೆ ಕೆಡುವ ಬಹುದಲ್ಲ. ಅದನ್ನೆ ಮಾಡ ಹೊರಟಿರುವುದು ನಾವೀಗ.
ಹೀಗೆ ಘನೀಕೃತ ಹನಿಗಳಿಗೆ ಕೃತಕವಾಗಿ ಭಾರ ಹೆಚ್ಚಿಸಲು ಸಿಲ್ವರ್(ಬೆಳ್ಳಿ)ಯ ಅಯೋಡೈಡ್‍ನ್ನು ಚಿಮುಕಿಸಿ ಅಥವಾ ಮೋಡಗಳ ಮೇಲೆ ಕಾರ್ಬನ್ ಚೂರುಗಳನ್ನು ಹರಿಸುವುದರ ಮೂಲಕ ಮೋಡದ ಓರಿಜಿನಾಲಿಟಿಯನ್ನು ಹಾಳು ಮಾಡಿ ಕೃತಕವಾಗಿ ಅದಕ್ಕೆ ತೂಕವೇರಿಸಿ, ಹಾಗೆ ಏರಿಸುವಾಗ ಅದು ಚದುರುತ್ತಿದ್ದರೆ ಅದಕ್ಕೆ ವೇಗ ಪೂರಕವನ್ನು ಪೂರೈಸುತ್ತಾ, ಕ್ರಮೇಣ ಭಾರ ತಾಳಲಾರದೆ ತೇಲಲಾಗದೆ ಕೊನೆಗೂ ಅದನ್ನು ನೆಲಕ್ಕುರುಳಿಸುವ ಪ್ರಕ್ರಿಯೆಯೇ ಮೋಡ ಬಿತ್ತನೆ. (ಪೆÇೀಟ್ಯಾಶಿಯಂ ಅಯೋಡೈಡ್, ಡ್ರೈ ಐಸ್‍ಗಳನ್ನೂ ಬಳಸುವ ಅವಕಾಶ ಇದಕ್ಕಿದೆ)
ನಮ್ಮಲ್ಲಿ ನೋಡಿ ಸಿದ್ಧವಾಗಿ ಕೆಗೆಟುಕದ ಸೂತ್ರಕ್ಕೆ ತನ್ನದಿಷ್ಟು ಎಂದು ತಂತ್ರಜ್ಞಾನ ಸೇರಿಸ ಹೊರಟಿದ್ದಾರೆ. ಡ್ರೊನ್ ಮೂಲಕ ಮೋಡದೊಳಕ್ಕೆ ತೂರಿಹೋಗುವ ಕ್ಷಿಪಣಿಗಳು ಅಲ್ಲಿ ಸಿಡಿಸು, ಉರಿದು ಹೋಗಿ ತನ್ನೊಡಲಲ್ಲಿರುವ ಸಿಲ್ವರ್ ಅಯೋಡೈಡ್‍ನ್ನು ಸಿಂಪಡಿಸುತ್ತವಂತೆ. ಇದರಿಂದ ಕೇವಲ ಇನ್ನೂರು ಮೀ. ಎತ್ತರದ ಮೋಡಗಳನ್ನೂ ನಾವು ಕೆಡುವಿ ಮಳೆ ಬರಿಸುತ್ತೇವೆ ಎಂದು ಹೇಳಿಕೆ ಹೊರಡಿಸುತ್ತಿದ್ದಾರಲ್ಲ, ರಾಮಾ ರಾಮ ನೆನಪಿರಲಿ. ತೀರ ಕೆಳಗೆ ಭೂಪದರದ ಸನಿಹವೆ ನೆಲೆ ನಿಲ್ಲುವ ಮೋಡಗಳಲ್ಲಿ ಬಲವೇ ಇರುವುದಿಲ್ಲ. ಅಸಲಿಗೆ ಹಾಗೆ ಹಾರಾಡುವ ಹೆಚ್ಚಿನ ಮೋಡಗಳು ಮಳೆ ತರಿಸಲು ಲಾಯಕ್ಕಾಗಿಯೂ ಇರುವುದಿಲ್ಲ.
ಇದಕ್ಕಾಗಿ ಹವಾಮಾನ ಇಲಾಖೆ ಮಳೆಯ ಮೋಡವನ್ನು ಗುರುತಿಸುತ್ತದೆಯಾದರೆ, ಅದಕ್ಕೆ ಡ್ರೊಣ್ ನುಗ್ಗಿಸಿ ಅಥವಾ ಇನ್ನಾವುದಾದರೂ ವ್ಯವಸ್ಥೆಯ ಮೂಲಕ ಹತ್ತು ಕೀ.ಮೀ. ವ್ಯಾಪ್ತಿಯಲ್ಲಿ ಮಳೆಯಾಗುತ್ತದೆ ಎನ್ನುತ್ತಿದ್ದಾರಲ್ಲ ಭಾರತದಲ್ಲಿ ಒಂದಿನವಾದರೂ ಹವಾಮಾನ ಇಲಾಖೆ ಕೊಟ್ಟ ಸಮಯಕ್ಕೆ ಮಳೆ ಸಾಯಲಿ, ಗಾಳಿನಾದರೂ ಬಿಸಿದ್ದಿದೆಯಾ..? ಇದಕ್ಕಿಂತ ದೊಡ್ಡ ಕುಚ್ಯೋದ್ಯವೆಂದರೆ ಇದರಿಂದ ವಾತಾವರಣ ಮತ್ತು ಪರಿಸರದ ಮೇಲೆ ಯಾವುದೇ ಅಡ್ಡ ಪರಿಣಾಮ ಇಲ್ಲ ಎನ್ನುವ ಹೇಳಿಕೆ ಮೊದಲೇ ಹೊರಡಿಸುತ್ತಿರುವುದು.
ಆದರೆ ನಿಜವಾಗಿಯೂ ಏನು ಪರಿಣಾಮವಾಗಲಿದೆ ಎನ್ನುವುದು ಪ್ರಾಯೋಗಿಕ ಉಪಯೋಗದ ನಂತರವೇ ಗೊತ್ತಾಗಬೇಕಿದೆ. ಜೊತೆಗೆ ಅಂತರಾಷ್ಟ್ರ್ರೀಯವಾಗಿ ಆಸ್ಟ್ರೇಲಿಯಾ ಸಿಲ್ವರ್ ಅಯೋಡೈಡ್‍ನ್ನು ನಿಷೇಧಿಸಿದ ಪಟ್ಟಿಗೆ ಸೇರಿಸಿ ಯಾವುದೋ ಕಾಲವಾಗಿದೆ. ಅವರ ಸಮೀಕ್ಷೆ ಪ್ರಕಾರ ಅದು ನೇರವಾಗಿ ಪರಿಣಾಮ ತತಕ್ಷಣಾಕ್ಕೆ ಬೆರದಿದ್ದರೂ ದಿನವಹಿ ವಾತಾವಣದಲ್ಲಿದ್ದು ಉಸಿರಾಟದ ಮೂಲಕ ದೇಹ ಪ್ರವೇಶಿಸಿ ಮಾಡುವ ಹಾನಿಯ ನಿಖರತೆ ಲೆಕ್ಕದ ಹೊರಗೆ ಎನ್ನುತ್ತಾರೆ.
ಆದರೆ ನಾವು ಮಾತ್ರ ಯಾವ ಲೆಕ್ಕಾಚಾರವನ್ನೂ ಇರಿಸಿಕೊಳ್ಳದೆ ವಿಮಾನ ಹಾರಿಸಿ ನೂರಾರು ಕೋಟಿ ರೂಪಾಯಿ ತೊಡಗಿಸಿ ಮೋಡ ಚರಿಸುವುದರಲ್ಲಿ ತೊಡಗಿಸುತ್ತಿದ್ದೇವೆ. ಅದೇ ಹಣವನ್ನು ಇಂಗುಗುಂಡಿ ಮತ್ತು ಕಾಡು ಬೆಳೆಸುವ, ನೀರಿನ ಒಳ ಹರಿವನ್ನು ಹೆಚ್ಚಿಸುವ ಸಾಂಪ್ರದಾಯಿಕ ವಿಧಾನಕ್ಕೆ ಪ್ರಾಮಾಣಿಕವಾಗಿ ಬಳಸಿದ್ದೇ ಆದರೆ ರಾಜ್ಯದಲ್ಲಿ ಐದೇ ವರ್ಷದಲ್ಲಿ ಎಂತಹ ಬರಗಾಲವನ್ನೂ ಎದುರಿಸುವ ಶಕ್ತಿ ಬಂದೀತು. ಆದರೆ ಆ ಪ್ರಯತ್ನ ನಮ್ಮಲ್ಲಿ ಮಾಡುವವರಾರು...? ಪಕ್ಕಾ ಮಾಹಿತಿಯೇ ಇಲ್ಲದೆ ಪಾತಾಳಕ್ಕೆ ಬೋರ್ ಹೊಡೆಯುತ್ತೇನೆ ಎಂದು ನಿಂತಿರುವಾಗ, ಮೋಡದ ಮೇಲೆ ಒಮ್ಮೆ ತಿರುಗಾಡಿಸಿ ವಿಮಾನ ಹಾರಿಸುವದು ಯಾವ ಲೆಕ್ಕ ಅಲ್ವಾ..? ಉತರಿಸುವ š

1 comment: