ಕಾಶ್ಮೀರವೆಂಬ ಖಾಲಿ ಕಣಿವೆ..7
ಕತ್ತಲಲ್ಲೇ ಆವರಿಸಿಕೊಂಡ ಈಜಿಪ್ಸಿಯನ್ ಚಳುವಳಿ.
ಇವತ್ತು ಯಾವುದೇ ಭಾರತೀಯ ಮುಸ್ಲಿಂನೊಬ್ಬನನ್ನು ನಿಲ್ಲಿಸಿ ಪ್ರಶ್ನಿಸಿ ನೋಡಿ, ಅವನಿಗೆ ನಮ್ಮನಿಮ್ಮ ಇನ್ನಿತರ ಜಗತ್ತಿನ ಗೊಡವೆಗಿಂತ ಅವನ ಕೆಲಸ, ಕೈತುಂಬ ಸಂಬಳ ಮತ್ತು ಒಂದಿಷ್ಟು ದಿವೀನಾದ ಭವಿಷ್ಯದ ಬೇಕಿದೆ. ಅದು ಸಾಧ್ಯವಾಗದಿರೋದಿಕ್ಕೆ ಕಾರಣ ಬಡತನ. ಸರಿಯಾಗಿ 90 ವರ್ಷದ ಹಿಂದೆ ಮೊದಲ ಬಾರಿಗೆ ಬ್ರದರ್‍ಹುಡ್ ಎಂಬ ಅನಾಹುತಕಾರಿ ಯೋಜನೆಯನ್ನು ಹರಿಬಿಟ್ಟು ಜಗತ್ತಿನ ಮುಸ್ಲಿಂರೆಲ್ಲರನ್ನು ಅದರಡಿಗೆ ತಂದು, ಧರ್ಮಯುದ್ಧಕ್ಕೆ ಎಬ್ಬಿಸಿ ನಿಲ್ಲಿಸುತ್ತೇನೆಂದು ಹೊರಟನಲ್ಲ ಅವನ ಮನದಲ್ಲಿ ಇದ್ದುದೂ ಅದೇ ಬಡತನ.
ಜಗತ್ತಿನ ಅತಿ ಹೆಚ್ಚು ಮುಸ್ಲಿಮರು ಬಡವರೇ ಮತ್ತು ಬಡತನ ಏನನ್ನಾದರೂ ಮಾಡಿಸುತ್ತದೆ ಕೊನೆಗೆ ಯಾವ ಮುಲಾಜೂ ಇಲ್ಲದೆ ದೇಶದ್ರೋಹವನ್ನೂ ಕೂಡಾ. ಈ ದೂರದೃಷ್ಟಿ ಅವನನ್ನು ಇಂತಹದ್ದೊಂದು ಅನಾಹುತಕಾರಿ ಯೋಜನೆಗೆ ಚಾಲ್ತಿ ನೀಡಿಸಿತ್ತು ಅದಕ್ಕೆ 1928ರಲ್ಲಿ ನಾಂದಿ ಹಾಡಿದವನು ಈಜಿಪ್ತಿನ ಸಾತ್ವಿಕ ಮುಸಲ್ಮಾನ. ಅಸಲಿಗೆ ಅವನಿಗೆ ಅತೀವ ಶ್ರೀಮಂತಿಕೆಯಲ್ಲಿ ಬದುಕುತ್ತಿದ್ದ ಈಜಿಪ್ತನ ದೊರೆಗಳ ವಿರುದ್ಧ ಸೆಣಸಲು ಮಜೂಬೂತಾದ, ಕರಾರುವಕ್ಕಾದ ಪ್ರಬಲ ಆಯುಧ ಬೇಕಿತ್ತು. ಅದಕ್ಕೇ ಅವನಿಟ್ಟ ಹೆಸರೇ.
ಬ್ರದರ್ ಹುಡ್ ಚಳುವಳಿ.
ಅವನೇ ಮಹಮದ್ ಘಜಲಿ.
ಮೂಲತ: ದಕ್ಷಿಣ ಈಜಿಪ್ತನ ಸಣ್ಣ ಗಲ್ಲಿಯಲ್ಲಿ ಚೆಂದದ ಸಂಸಾರದ ಗೂಡು ಕಟ್ಟಿಕೊಳ್ಳುವ ತವಕದಲ್ಲಿದ್ದ ಶುದ್ಧಾನುಶುದ್ಧ ಮುಸ್ಲಿಂ ಆತ. ಆದರೆ ದೊರೆಗಳ ಪಾಶ್ಚಿಮಾತ್ಯತನ, ಸ್ಥಳೀಯರ ಮೇಲಿನ ದೌರ್ಜನ್ಯ ಅವನನ್ನು ಎದ್ದು ನಿಲ್ಲಿಸಿದಾಗ ಇಂತಹದ್ದೊಂದು ಶಬ್ದ ಸಂಪೂರ್ಣ ಜಗತ್ತಿನ್ನೇ ಅಡರಿಕೊಂಡೀತು ಎಂದವನಿಗೂ ಆವತ್ತು ಗೊತ್ತಿರಲಿಕ್ಕಿಲ್ಲ. ಆದರೆ ಘೋಷಿಸಿಬಿಟ್ಟಿದ್ದ. ಜಗತ್ತಿನ ಮುಸ್ಲಿಮರೆಲ್ಲರೂ ಸಹೋದರರೇ. ಎಲ್ಲೆಲ್ಲೂ ಇರುವ ಪ್ರತಿಯೊಬ್ಬ ಸಹೋದರನನ್ನು ರಕ್ಷಿಸಬೇಕಿದೆ. ಅದಕ್ಕಾಗಿ ಜಗತ್ತಿನ ಶ್ರೀಮಂತ ಸಹೋದರರು, ಎಲ್ಲೆಲ್ಲೊ ಇರುವ ಬಡಸಹೋದರನಿಗಾಗಿ ಹಣ, ಸವಲತ್ತು ಕೊಡಬೇಕು. ಅದನ್ನು ಬಳಸಿ ಧರ್ಮರಕ್ಷಣೆಗಾಗಿ ಹೋರಾಡಬೇಕು. ಅಗತ್ಯ ಬಿದ್ದರೆ ಧರ್ಮಯುದ್ಧಕ್ಕೂ ತಯಾರಾಗಬೇಕು. ಸುಮ್ಮನೆ ಹೋರಾಟ ಎಂದರೆ ಎಂಥಾ ಕರ್ಮಠನೂ ಎದ್ದು ಬಂದುಬಿಡಲಾರ. ಮೊದಲೇ ಬಡತನ ಬೇರೆ. ಅದಕ್ಕಾಗಿ ಹೊರದೇಶದ ಸಹೋದರರ ಹಣ ಬಳಸಿ ಮೊದಲು ಊಟ, ಬಟ್ಟೆ, ಶಿಕ್ಷಣ ಎಲ್ಲಾ ಕೊಟ್ಟು ಇದೆಲ್ಲವೂ ಕೇವಲ ಜೇಹಾದ್‍ನಿಂದ ಸಾಧ್ಯ ಎಂದು ಬಿಂಬಿಸಿದ. ಜೊತೆಗೆ ಒಂದು ವರ್ಷ ಕಳೆಯುವಷ್ಟಲ್ಲಿ ಜಗತಿನ ಅಷ್ಟೂ ಮುಸ್ಲಿಂ ನೆಲಗಳಿಗೆ ಬ್ರದರ್‍ಹುಡ್ಡಿನ ತಿರುಳನ್ನು ಮುಟ್ಟಿಸುವಲ್ಲಿ ಅವನು ಸಫಲನಾಗಿದ್ದ.
ಇಸ್ಲಾಂ ಎಂಬುವುದು ಕೇವಲ ಧರ್ಮವಲ್ಲ. ಜಗತ್ತಿನ ಯಾರೊಬ್ಬರಿಗೂ ಅಂತಿಮ ದಾರಿ ತೋರಿಸುವುದೇ ಇಸ್ಲಾಂ. ಅದಕ್ಕೆಲ್ಲಾ ಕುರಾನ್ ಗ್ರಂಥವೇ ದಿವ್ಯ ಶಬ್ದಕೋಶ. ಅದರ ನಂತರ ಪ್ರವಾದಿಗಳ ಮಾತೇ ಇನ್ನೂ ಅಂತಿಮ ಇದು ಕೇವಲ ಇಲ್ಲಿನ ಹೋರಾಟಕ್ಕಲ್ಲ ಮುಂದೊಂದು ದಿನ ಜಗತ್ತಿನ ಪೂರ್ತಿ ಭೂ ಮಂಡಲವನ್ನು ಕೇವಲ ಅಲ್ಲಾನ ಮೇಲೆ ನಂಬಿಕೆ ಇರುವವರಿಂದ ಮಾತ್ರ ತುಂಬಲಿದೆ. ಕಾಫೀರರಿಗೆ ಇಲ್ಲಿ ಜಾಗವಿರುವುದಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಷರಿಯಾ ಕಾನೂನು ಹೇಳುತ್ತಿದೆ ಅದೇ ಅಂತಿಮ ಕಾನೂನು. ಇನ್ನೇನಿದ್ದರೂ ಇವತ್ತಲ್ಲ ನಾಳೆ ಈ ಭೂಮಿಯ ಮೇಲೆ ಇರಬೇಕಾದವರು ಕೇವಲ ನಿಷ್ಠಾವಂತ ಮುಸ್ಲಿಮರು ಮಾತ್ರ. ನಾವು ನೀವೆಲ್ಲಾ ಅದಕ್ಕಾಗಿ ಹೊರಡಬೇಕಿದೆ..."ಎಂದು ಬಿಟ್ಟ.
ಅಬ್ಬಾ ಎಂದು ಬೆರಳಿಟ್ಟುಕೊಂಡು ನಿಬ್ಬೆರಗಾಗಿ ನೋಡಿತ್ತು ಮುಸ್ಲಿಂ ಜಗತ್ತು. ಎಲ್ಲಿದ್ದರೂ ಯಾರಿದ್ದರೂ ಯಾವ ಹಂತದಲ್ಲಿದ್ದರೂ ಮುಸ್ಲಿಮರೆಲ್ಲರೂ ಸಹೋದರರು ಎನ್ನುತ್ತಿದ್ದಾನಲ್ಲಾ...? ಎಂಥಾ ರೋಂಚಕಾರಿ ಮಾತು. ಮೈಕೊಡವಿ ಎದ್ದು ಬಿಂತಿತ್ತು ಬಡಪಾಯಿ ಮುಸಲ್ಮಾನರ ಸಮೂಹ. ಅಂತಹದ್ದೊಂದು ದೊಡ್ಡ ಸಮೂಹಕ್ಕೆ ನಂತರದಲ್ಲಿ ಇನ್ನೂ ಉಗ್ರರೂಪ ಕೊಟ್ಟವನು ಕುತ್ಬುದಿನ್ ಸಯ್ಯದ್. ಸುಮಾರು ಐವತ್ತರ ದಶಕದಲ್ಲಿ ಇದೇ ಬ್ರದರ್‍ಹುಡ್ ಚಳುವಳಿಯನ್ನು ಹೊಸರೂಪಕ್ಕೆ, ಆಕರ್ಷಕ ಹೆಸರಿಗೆ ತಿರುಗಿಸಿದ.
ಅದೇ ಪಾನ್ ಇಸ್ಲಾಮಿಸಮ್ಮು.
ಇವನ ಪ್ರಕಾರ ಮುಸ್ಲಿಂ ಅಂದರೆ ಮುಸ್ಲಿಂ ಅಷ್ಟೆ. ಜಗತ್ತಿನ ಎಲ್ಲಾ ಧರ್ಮೀಯರಲ್ಲಿ ಮುಸ್ಲಿಂ ಮಾತ್ರ ಶ್ರೇಷ್ಠ. ಅವನಿಗೆ ಜಗತ್ತಿನ ಅಯಾ ನೆಲದ ಕಾನೂನು ಕಟ್ಟಳೆಗಳಿಗಿಂತಲೂ ಅವನು ನಂಬುವ ಧರ್ಮ ಅಂದರೆ ಇಸ್ಲಾಂ ಮತ್ತು ಅದರ ತಿರುಳೇ ಮುಖ್ಯ. ಉಳಿದೆಲ್ಲವೂ ಗೌಣ. ಜಗತ್ತಿನ ಉಮ್ಮಾಗಳೆಲ್ಲ ಒಂದೇ ಧರ್ಮದಡಿಯಲ್ಲಿ, ಧರ್ಮಗ್ರಂಥದ ಅಡಿಯಲ್ಲಿ ಇರಬೇಕು. ಅವನು ಮುಸಲ್ಮಾನ್ ಎಂಬುದಷ್ಟೆ ಸಾಕು. ಅದೇ ಪಾನ್ ಇಸ್ಲಾಮಿಸಮ್ಮು ಎಂದು ಬಿಟ್ಟ,
ಅಲ್ಲಿಗೆ ಜಾಗತಿಕವಾಗಿ ಸಂಪ್ರದಾಯಸ್ಥ, ಅತೀ ಮಡಿವಂತಿಕೆ, ತೀವ್ರ ಕರ್ಮಠತನ, ಅಪಾರ ನೇಮ ನಿಷ್ಠೆ ಅಂತೆಲ್ಲಾ ಅವರವರಲ್ಲೇ ಮೇಲೂ ಕೀಳು ಎಂದೆಲ್ಲಾ ಮಾಡಿಕೊಂಡಿದ್ದ ಮುಸ್ಲಿಂ ಸಮಾಜ ಮತ್ತು ದೇಶಗಳೂ ಇದ್ದುವಲ್ಲ. ಅದೆಲ್ಲವನ್ನೂ ಒಂದೇ ಒಂದು ಶಬ್ದ ಹೊಡೆದು ಹಾಕಿತ್ತು ಮತ್ತು ಹೆಚ್ಚಿನ ಜನಕ್ಕೆ ಇದು ಹೌದೆನ್ನಿಸಿತ್ತು. ಕಾರಣ ಸಮಾನತೆ ಎನ್ನುವ ಅಂಶ ಅತಿಹೆಚ್ಚು ಬಡಮುಸಲ್ಮಾನನನ್ನು ಸೆಳೆದು ನಿಲ್ಲಿಸಿತ್ತು. ಹೈರಾಣಾಗಿದ್ದ ಅವನಿಗೆ ಇಂತಹ ಮಾತಿನಿಂದ ಜೀವನ ಸ್ವಲ್ಪವಾದರೂ ಸುಧಾರಿಸಬಹುದೆನ್ನುವ ಸಹಜ ಆಸೆ ಪಾನ್ ಇಸ್ಲಾಮಿಸಮ್ಮಿಗೆ ಬೀಳಿಸಿತ್ತು. ಹೊಸ ಥಿಯರಿ ನಿರೀಕ್ಷಿಸದ ವೇಗದಲ್ಲಿ ಕಾವು ಪಡೆದಿತ್ತು. ಕಾರಣ ಜಗತ್ತಿನಲ್ಲಿ ಶೇ. 75 ಕ್ಕೂ ಹೆಚ್ಚು ಮುಸಲ್ಮಾನರು ಬಡವರೇ ಆಗಿದ್ದರು.
ಅಲ್ಲಿಂದ ಸುಮಾರು 80ರ ದಶಕವರೆಗೆ ಬೆಳೆದ ಸಿದ್ಧಾಂತಕ್ಕೆ "ಮಂಜತ್ ಆಲ್ ಜಿಹಾದ್" ಎನ್ನುವ ಉಗ್ರ ಸಂಘಟನೆ ಅಧಿಕೃತವಾಗಿ ರಾಜಕೀಯ ರೂಪ ನೀಡಿತ್ತು. ಸ್ವತ: ಈಜಿಪ್ತನ ಅಧ್ಯಕ್ಷ ಸಾದತ್‍ಅನ್ವರ್‍ನನ್ನು ಬಹಿರಂಗವಾಗಿ ಈ ಗುಂಪು ತರಿದು ಹಾಕಿ ಇಸ್ಲಾಂ ಸಮಾನತೆಯ ಬಾವುಟ ಹಾರಿಸಿತ್ತು. ಒಂದು ಬಹಿರಂಗ ರಾಜಕೀಯ ಕೊಲೆಯ ಮೂಲಕ ಎಲ್ಲದಕ್ಕೂ ಇಸ್ಲಾಂ ಪರಿಹಾರ ತೋರಿಸಿತ್ತು. ಅಲ್ಲಿಂದ ಹೊರಟ ಪಾನ್‍ಇಸ್ಲಾಮಿಸಮ್ಮಿನ ಬಾವುಟ ಜಾಗತಿಕವಾಗಿ ಹಾರಾಡುತ್ತಾ ಅಪಘಾನಿಸ್ತಾನ ಮೂಲಕ ಪಾಕಿಸ್ತಾನದ ಗಡಿಯಿಂದ ಹಾಯ್ದು ಹೆಸರಿನ ಅಗತ್ಯವೇ ಇಲ್ಲದೇ ತಣ್ಣಗೆ ಕಾಶ್ಮೀರ ಹೃದಯದೊಳಗೆ ಕಾಲೂರಿ ನಿಂತುಬಿಟ್ಟಿತ್ತು. ಇಷ್ಟಾಗುವ ಹೊತ್ತಿಗೆ ಭಾರತದಲ್ಲಿ ತೊಂಭತ್ತರ ದಶಕ ಮುಗಿದು ಹೊಸ ಶತಮಾನದ ಆರಂಭವಾಗಿತ್ತು. ಶ್ರೀನಗರಕ್ಕೆ ಬೆಂಕಿ ಬಿದ್ದಿತ್ತು. ಅಕ್ಷರಶ: ಮೊದಲೆರಡು ವರ್ಷ ಲಾಲ್‍ಚೌಕನಿಂದ ಹಿಡಿದು ಕೊಟ್ಟ ಕೊನೆಯ ಹಳ್ಳಿಯಾದ ಮಹೌರ್ರವರೆಗೂ ಇನ್ನಿಲ್ಲದಂತೆ ಉಗ್ರರ ಉಪಟಳಕ್ಕೆ ಕಣಿವೆ ತತ್ತರಿಸುತ್ತಿದ್ದರೆ, ಸರಕಾರಕ್ಕೆ ಹೇಗೆ ಅದನ್ನು ತಹಬಂದಿಗೆ ತರುವುದೋ ಗೊತ್ತಾಗದೆ ಹೋಗಿತ್ತು. ಹಾಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಅಲ್ಲಿ ಘೋಷಿಸಿದ್ದು ಶಸ್ತ್ರಾಸ್ತ್ರ ಪಡೆಗಳ ವಿಶೇಷ ಪರಮಾಧಿಕಾರ ಕಾಯಿದೆ. ಸೈನ್ಯ ಸಾಲುಸಾಲಾಗಿ ಫೈರಿಂಗ್ ಮಾಡುತ್ತಿದ್ದರೆ ಸಾವಿರಾರು ಜನ ಹುಳುಗಳಂತೆ ಸತ್ತು ಹೋಗಿದ್ದರು. ಕಣಿವೆ ಮೊದಲ ಬಾರಿ ಹಿಡತಕ್ಕೆ ಬಂದಿತ್ತು.
ಇದಾದ ಮರುವರ್ಷವೇ ನಾನು ಶ್ರೀನಗರಕ್ಕೆ ಕಾಲಿಟ್ಟಿದ್ದೆ. ಅಷ್ಟೊತ್ತಿಗಾಗಲೇ ತಮ್ಮ ಈ ನೆಲ ಭಾರತ ಎನ್ನುವ ಕಾಫೀರರ ದೇಶ ಒತ್ತಾಯದಿಂದ ಹಿಡಿದಿಟ್ಟುಕೊಂಡು ಪಾಪ ಕಾರ್ಯಮಾಡುತ್ತಿದೆ. ಈ ಮೂರ್ತಿ ಪೂಜಕರ ಕೈಯಿಂದ ಬಿಡಿಸಬೇಕು. ನಮ್ಮ ಸಹೋದರರು ಜಗತ್ತಿನಾದ್ಯಂತ ಹೋರಾಡುತ್ತಿದ್ದಾರೆ ನಾವೂ ಕೂಡಾ ಜೇಹಾದ್ ಆರಂಭಿಸಬೇಕು. ಇಲ್ಲ ಕನಿಷ್ಠ ಆ ಧರ್ಮಯೋಧನಿಗೆ ಬೆಂಬಲ ನೀಡಬೇಕು ಎಂದು ಒಳಗೊಳಗೆ ಕಣಿವೆಯ ಮೂಲಭೂತವಾದಿ ಕಾಶ್ಮೀರಿ ಮುಸಲ್ಮಾನ ನಿರ್ಧರಿಸಿಬಿಡತೊಡಗಿದ್ದ. ಕಾರಣ ಕಣಿವೆಯನ್ನು ಕಿತ್ತು ತಿನ್ನುತ್ತಿದ್ದ ಬಡತನ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕಾಶ್ಮೀರ ಬೆಳೆಯಲು ಬಿಡದಂತೆ ಪಕ್ಕದ ಪರಮ ಪಾತಕಿ ಪಾಕಿಸ್ತಾನ ಕಣಿವೆಯಲ್ಲಿ ಉದ್ವಿಗ್ನತೆ ಮೂಡಿಸುವಲ್ಲಿ ಸಫಲವಾಗುತ್ತಿದ್ದುದು ದೊಡ್ಡ ಮಟ್ಟದಲ್ಲಿ ಪಾನ್‍ಇಸ್ಮಾಮಿಸಮ್ಮು ಬರೀ ಮೆದುಳಲ್ಲಿ ಅಲ್ಲ ರಕ್ತದಲ್ಲೂ ಇಳಿದುಹೋಯಿತು.
ಜಗತ್ತಿನ ಯಾವುದೇ ಭಾಗದಲ್ಲಿ ಬರೀ ಇತರೆ ಅಲ್ಲ ಸ್ವತ: ಮುಸ್ಲಿಂ ಕೂಡಾ ಧಾರ್ಮಿಕವಾಗಿ ಸರಿ ಇಲ್ಲದಿದ್ದರೆ ಅವನೂ ಕಾಫೀರನೆ ಎನ್ನುವ ವಾದ ತೀರ ಬೇರುಮಟ್ಟಕ್ಕೆ ಇಳಿದುಬಿಟ್ಟಿತ್ತು. ಅದಕ್ಕಾಗಿ ಆಯುಧ ಎತ್ತುವ ವಿನ: ಬೇರೆ ಮಾರ್ಗವೇ ಇಲ್ಲ ಎಂಬುದನ್ನು ಅತ್ಯಂತ ವ್ಯವಸ್ಥಿತವಾಗಿ ಪಾಕಿಗಳು ಮದರಸಾಗಳ ಮೂಲಕ ಮೊಳಕೆಯಲ್ಲೇ ಹನಿಸಿಬಿಟ್ಟಿದ್ದರು. ಆ ಒಂದು ಸಮೂಹ ಇವತ್ತು ಬೆಳೆದು ನಿಂತಿದ್ದು ಅಕ್ಷರಶ: ಕಾಶ್ಮೀರ ಕಣಿವೆಯಲ್ಲಿ ಭಾರತ ವಿರೋಧಿ ಮತ್ತು ಬ್ರದರ್‍ಹುಡ್ ಸಂಗತಿಯನ್ನು ಶಬ್ದದ ಅಗತ್ಯವಿಲ್ಲದೆ ಅಚರಿಸಲು ಯುವ ಸಮೂಹ ಕಲ್ಲು ಕೈಗೆತ್ತಿಕೊಳ್ಳುತ್ತಿದೆ. ಆದರೆ ಈಗ ಮೊದಲಿನ ಬಿರುಸಿಗೂ, ಅದಕ್ಕೆ ಪ್ರತ್ಯುತ್ತರ ಕೊಡುವ ಸೈನ್ಯದ ಯೋಜನೆಗಳಿಗೂ ಭಾರಿ ವ್ಯತ್ಯಾಸವಿದೆ. ಹಾಗಾಗಿ ದಿನಕ್ಕಿಷ್ಟು ಜನ ಗುಂಡಿಗೆ ಸಿಕ್ಕಿ ಹತರಾಗುವುದರ ವಿನ: ಇನ್ನಾವುದೇ ಉತ್ಪನ್ನವಾಗುತ್ತಿಲ್ಲ.
ಕಾಶ್ಮೀರ ಕಣಿವೆ ಕ್ರಮೇಣ ಖಾಲಿ ಆಗದೆ ಏನು ಮಾಡೀ

No comments:
Post a Comment