ಕಾಶ್ಮೀರವೆಂಬ ಖಾಲಿ ಕಣಿವೆ..ಕಣಿವೆ ಪಂಡಿತರ ಮಹಾದುರಂತ...
ಮೊದ ಮೊದಲಿಗೆ ಕಾಶ್ಮೀರದಲ್ಲಿ ಎಲ್ಲಾ ಜನರೂ ಸೇರಿಕೊಂಡು ತೀರ ಯಾವ ವ್ಯತ್ಯಾಸವೇ ಇಲ್ಲದಂತೆ, ಭೂಭಾಗ ಹೊರತು ಪಡಿಸಿದರೆ ಏಕತಾ ಮೇ ಅನೇಕತಾ ಎನ್ನುವುದಕ್ಕೆ ಉದಾಹರಣೆಯಂತಿದ್ದರು. ಈಗಲೂ ಗಮನಿಸಿ ನೋಡಿ ತೀರ ಜಮ್ಮುವಿನ ಭಾಗದಲ್ಲೂ, ಅತ್ತ ಬೌದ್ಧರೆ ಅಧಿಕವಾಗಿರುವ ಲಢಾಕಿನ ಭಾಗದಲ್ಲೂ ಯಾವತ್ತೂ ಹೀಗೆ ದಿನಕ್ಕೆ ಇಬ್ಬಿಬ್ಬರಂತೆ ಉಗ್ರರು ಸಾಲುಸಾಲಾಗಿ ಹತರಾಗುತ್ತಿರುವ ಘಟನೆ ನಡೆಯುತ್ತಲೇ ಇಲ್ಲ. ಇದೇನಿದ್ದರೂ ಶ್ರಿನಗರ, ಅನಂತನಾಗ, ಬಾರಾಮುಲ್ಲ, ಕಾರ್ಗಿಲ್, ಗಾಂಧಾರ್‍ಬಾಲ್, ಶೊಫಿಯಾನ್‍ಗಳಲ್ಲಿ ಯಾಕೆ ಲೆಕ್ಕದ ಹೊರಗೆ ಕಲ್ಲೆಸೆಯುವ ಮತ್ತು ಸೈನಿಕರ ಬಂದೂಕಿಗೆ ಎದುರಾಗುವ ಸಂಗತಿಗಳು ನಡೆಯುತ್ತಲೇ ಇವೆ. ಕಾರಣ ಇಲ್ಲೆಲ್ಲಾ ಇವತ್ತು ಸರಹದ್ದಿನಿಂದ ನಗರ ಹೃದಯ ಭಾಗದವರೆಗೂ ಸಂಪರ್ಕಿಸಲು ಬೇಕಾದ ನೆಟ್‍ವರ್ಕನ್ನು ಪ್ರತ್ಯೇಕತಾವಾದಿಗಳ ಜಾಲ ಪಸರಿಸಿಟ್ಟಿದೆ. ಜೊತೆಗೆ ಸತತ ಮೂವತ್ತೈದು ನಾಲ್ವತ್ತು ವರ್ಷಗಳಿಂದ ನಿರಂತರವಾಗಿ ಕಾಶ್ಮೀರ ಎಂದರೆ ಕಾಶ್ಮೀರ ಪಂಡಿತರು ಎಂದಿದ್ದ ಈ ನೆಲದಿಂದ ಅವರನ್ನು ಅತ್ಯಂತ ವ್ಯವಸ್ಥಿತವಾಗಿ ಹೊರದಬ್ಬಲಾಗಿದೆ. ಹಾಗೆ ದಬ್ಬಲು ಬಂದಾಗ ಹೊರಬೀಳದವರನ್ನು ಹಾಗೂ ಉಳಿದವರನ್ನು ಕುಟುಂಬ ಸಮೇತ ಕೊಲ್ಲಲಾಯಿತು.
ಎಲ್ಲಕ್ಕಿಂತಲೂ ಪರಮ ಹೇಯವೆಂದರೆ ಅತಿ ಹೆಚ್ಚು ಅತ್ಯಾಚಾರಗಳು ನಡೆದು ಜಗತ್ತೇ ಬೆಚ್ಚಿ ಬಿದ್ದರೂ ಅವರನ್ನು ರಕ್ಷಿಸಬೇಕಾದ ಸರಕಾರ ಕಬಾಬು ತಿನ್ನುತ್ತಾ ಕೂತು ಬಿಟ್ಟಿದ್ದು ಪಂಡಿತರ ದುರದೃಷ್ಟ. ತೀರ ನೂರಾರು ವರ್ಷಗಳ ಶತಶತಮಾನಗಳ ಇತಿಹಾಸದ ಪಂಡಿತರನ್ನು ನಿರ್ದಾಕ್ಷಿಣ್ಯವಾಗಿ ಕೇವಲ ಆರೆಂಟು ವರ್ಷದಲ್ಲಿ ಹೊರದಬ್ಬಿದರಲ್ಲ ಆವತ್ತೇ ಕಾಶ್ಮೀರದ ನಸೀಬು ಬದಲಾಗಿದ್ದು ಮತ್ತು ಇನ್ಯಾವತ್ತೂ ಅಭಿವೃದ್ಧಿಯತ್ತ ಅದು ಹೊರಳಲಾರದೆಂಬ ದಿಕ್ಕೂ ಬದಲಾಗಿತ್ತು. ಆವತ್ತು ಹಿಡಿದ ಗ್ರಹಣ ಇವತ್ತಿಗೂ ಇಟ್ಟಿಲ್ಲ ಕಾರಣ ಕಾಶ್ಮೀರ ಪಂಡಿತರ ಇತಿಹಾಸ ಹಲವು ಶತಮಾನಗಳ ಕಾಲದಿಂದಲೂ ಅವಿಭಾಜ್ಯವಾಗಿ ಅಲ್ಲಿ ನೆಲೆಕಂಡಿತ್ತು .
80 ರ ದಶಕದಲ್ಲಿ ಸರಿ ಸುಮಾರು ಎಂಟೂವರೆ ಲಕ್ಷದಷ್ಟಿದ್ದ ಕಾಶ್ಮೀರ ಪಂಡಿತರ ಸಂಖ್ಯೆ, 2016 ರಲ್ಲಿ ಕೇವಲ ಮೂರು ಸಾವಿರ ಚಿಲ್ರೆ ಆಗಿದೆ ಎಂದರೆ ಅದಿನ್ನೆಂಥಾ ಅನಾಹುತಗಳು ಅವರ ಮೇಲೆ ಎರಗಿರಬೇಕು. (1846 ರಿಂದ 1947 ರ ಕಾಲಾವಧಿಯಲ್ಲಿ ಕಾಶ್ಮೀರಿ ಪಂಡಿತರ ನಡೆ, ನುಡಿ, ಜೀವನ ಶೈಲಿ ಮತ್ತು ಅವರಿಗಿದ್ದ ರಾಜಾಶ್ರಯದ ಕಾರಣದಿಂದ ಜಗತ್ತಿನಲ್ಲೇ ಅತ್ಯಂತ ಗೌರವಾರ್ಹ ಜನಾಂಗವಾಗಿ ಬದುಕಿದ್ದು ಮತ್ತು ಕಣಿವೆಯಲ್ಲಿ ಸುಮಾರು ಶೇ.30ರಷ್ಟು ಪ್ರಾಬಲ್ಯ ಸಾಧಿಸಿದ್ದ ಕಾಶ್ಮೀರಿ ಪಂಡಿತರು ಡೊಗ್ರಾ ಆಡಳಿತಾವಧಿಯಲ್ಲಿ ನೆಮ್ಮದಿಯಿಂದ ಬದುಕಿದ್ದೆ ಕೊನೆ. ಎರಡೆ ದಶಕದಲ್ಲಿ ಪಂಡಿತರ ಸಂಖ್ಯೆ ಶೇ.2.1 ಕ್ಕೆ ಇಳಿದು ಹೋಗಿತ್ತು.) ಒಂದೇ ವರ್ಷದಲ್ಲಿ ಒಟ್ಟೂ ಮೂರೂವರೆ ಲಕ್ಷದಷ್ಟು ಜನರು ಕಾಶ್ಮೀರ ಕಣಿವೆಯಿಂದ ಇತರ ಭಾಗಗಳಿಗೆ ಪಲಾಯನಗೈದದ್ದು ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಸಾಮಾಜಿಕ ಪಲ್ಲಟ ಎನ್ನಿಸಿದೆ. ಅದೊಂದು ವ್ಯವಸ್ಥಿತ ಯೋಜನೆ. ಒಮ್ಮೆ ಸಂಪೂರ್ಣ ಕಾಶ್ಮೀರ ಕಣಿವೆ ಇತರರಿಂದ ಹೊರಗಾದರೆ ನಂತರ ನಮ್ಮದೇ ಸರಕಾರ, ವ್ಯವಸ್ಥೆ ರೂಪಗೊಳ್ಳುತ್ತದೆ ಎನ್ನುವುದವರ ಅವಗಾಹನೆಯಾಗಿತ್ತು. ಅದರೆ ಬದಲಾದ ಸನ್ನಿವೇಶದಲ್ಲಿ, ಕೈಮೀರಿದ ಕಾಶ್ಮೀರಿ ಮುಸ್ಲಿಮರ ಅಕ್ರಮಗಳಿಂದಾಗಿ ಕಣಿವೆ ಸೈನ್ಯದ ತೆಕ್ಕೆಗೆ ಹೊರಟುಹೋಯಿತು. ಶಾಶ್ವತವಾಗಿ ರಣರಂಗವಾಗಿ ಬದಲಾಯಿತು. ಹಾಗಾದ ಮೇಲೂ ಕಣಿವೆಗೆ ಸರಿಹೋಗಲು ಸಾಧ್ಯವಿತ್ತು. ಅದರೆ ಧರ್ಮವೇ ಬದುಕು ಎಂದುಕೊಂಡ ಅತಿರೇಕದ ಚಿಂತನೆಗಳು ದಾರಿ ತಪ್ಪಿಸಿದ್ದವು. ಪರಿಸ್ಥಿತಿ ಕೈಮೀರಿತ್ತು. ಅಲ್ಲಿಗೆ ಕಣಿವೆ ದೇಶದ ಹೆಗಲ ಮೇಲಿನ ಹುಣ್ಣಾಗಿ ಬದಲಾಗಿತ್ತು .
ತೀರ ಅನಾಹುತಕಾರಿ ಎಂದರೆ ರಹಸ್ಯಾತ್ಮಕವಾದ ಕಾರ್ಯಾಚರಣೆ ಮತ್ತು ತೀವ್ರವಾದ ಆತಂಕದೊಳಗಿದ್ದ ಹಿಕಮತ್ತೇ ಬೇರೆಯಾಗಿತ್ತು. ಈಗೀಗ ಕಾಶ್ಮೀರ ಮುಸ್ಲಿಂರಷ್ಟೆ ಕಾಶ್ಮೀರ ಕಣಿವೆ ಖಾಲಿಯಾಗುವುದಕ್ಕೆ ಕಾರಣವಾಗುತ್ತಿದ್ದರೆ, ಅದಕ್ಕೂ ಮೊದಲೇ 1990ರ ಆಸುಪಾಸಿನಲ್ಲಿ ಸಂಪೂರ್ಣ ಕಾಶ್ಮೀರದಿಂದ ಎಲ್ಲಾ ಹಿಂದೂಗಳನ್ನೂ, ಕಾಶ್ಮೀರ ಪಂಡಿತರನ್ನೂ ಖಾಲಿ ಮಾಡಿಸಲು ತೀರ ರಹಾಸ್ಯಾತ್ಮಕ ಕಾರ್ಯ ಸೂಚಿ ರಚಿಸಲಾಗಿತ್ತು. ಅದರಂತೆ ಪಂಡಿತರ ನಂತರ ಅಲ್ಲಿಂದ ಹೊರ ದಬ್ಬಬೇಕಾಗಿದ್ದವರೆಂದರೆ ಸಿಖ್‍ರನ್ನು. ಸುಮಾರು ಅರವತ್ತು ಸಾವಿರ ಸಿಖ್‍ರು ಇವತ್ತೂ ಅದೇ ಅಪಾಯದ ಅಂಚಿನಲ್ಲಿದ್ದಾರೆ. ಕಾರಣ ಇವರನ್ನೂ ಒಮ್ಮೆ ಹೊರದಬ್ಬಿದರೆ ಅಲ್ಲೂಂದು ದಾರೂಲ್-ಇಸ್ಲಾಂ ವ್ಯವಸ್ಥೆ ಸ್ಥಾಸಬೇಕೆನ್ನುವುದು ಮತೀಯರ ಕನಸು. ಅದಾಗಬೇಕೆಂದರೆ ಹಿಂದೂಗಳ ಮೇಲೆ ಆಕ್ರಮಣ ಮತ್ತು ನಿಯಂತ್ರಣ ಇಲ್ಲದೆ ಅದು ಸಾಧ್ಯವಿಲ್ಲ. ಕಾರಣ ಸಾವಿರ ವರ್ಷಗಳ ಆಕ್ರಮಣ ಮತ್ತು ವ್ಯವಸ್ಥಿತ ಪಿತೂರಿಯ ಧರ್ಮಪಲ್ಲಟದ ಕಾರ್ಯಗಳ ಮಧ್ಯೆಯೂ ಇವತ್ತು ಜಾಗತಿಕವಾಗಿ ಭಾರತದ ಆಸ್ತಿತ್ವ ಉಳಿವಿಕೆ ಕಾರಣ ಹಿಂದೂಗಳ ಚಿಂತನೆಯೇ.
ಹಾಗೆ ಕಾಶ್ಮೀರಿಗಳನ್ನು ಹೊರದಬ್ಬುವ ಪ್ರಕ್ರಿಯೆ ಆರಂಭವಾದಾಗ ಆಡಾಡುತ್ತಾ ಈ ನೀಚಕೃತ್ಯಗಳನ್ನು ನೋಡುತ್ತಾ ಬೆಳೆದವರೇ ಇವತ್ತೂ ಪ್ರತ್ಯೇಕ ಕಾಶ್ಮೀರಕ್ಕಾಗಿ ಯಾರಿಗೆ ಬೇಕಾದರೂ ಬೆಂಬಲಿಸಬಲ್ಲ ದೇಶದ್ರೋಹಿಗಳಾಗಿದ್ದಾರೆ. ಅದರ ಮುಂದಿನ ಭಾಗವಾಗಿಯೇ ಕಾಶ್ಮೀರ ವಿಷಯವನ್ನು ಅಂತರಾಷ್ಟ್ರೀಯಗೊಳಿಸಬೇಕೆಂದು ಅದನ್ನು ಗಾಜಪಟ್ಟಿಯ ಸಮಸ್ಯೆಗೆ ಹೋಲಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾದ 1990 ಜನವರಿ 19 ರಂದು ಕಾಶ್ಮೀರಿ ಮುಸ್ಲಿಂ ಮತಾಂಧರು ಹೊರಡಿಸಿದ್ದ ಅನಧೀಕೃತ ಕಾನೂನು. ಆ ದಿನ ಇದ್ದಕ್ಕಿದಂತೆ
ಕಾಶ್ಮೀರ ಕಣಿವೆಯಾದ್ಯಂತ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡ ಮತಾಂಧರು ಅಕ್ಷರಶ: ಪ್ರಾರ್ಥನೆಗೆ ಬಳಸಬೇಕಾಗಿದ ಸ್ಪೀಕರುಗಳಿಂದ ಎಚ್ಚರಿಕೆಯ ಘೋಷಣೆ ಮೊಳಗಿಸಿದ್ದರು. ಅದರ ಪ್ರಕಾರ ಮೊದಲ ಹಂತವಾಗಿ ಎಲ್ಲಾ ಹಿಂದೂ ಗಂಡಸರನ್ನು ಪರಿವರ್ತನೆ ಮಾಡುವುದು, ಹೆಂಗಸರು ಮಕ್ಕಳನ್ನು ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದೇ ಆಗಿತ್ತು. ಅದಕ್ಕಾಗಿ ವ್ಯವಸ್ಥಿತ ಪಿತೂರಿ ಭಾಗವಾಗಿ ಎಲೆಲ್ಲಿ ಕಾಶ್ಮೀರಿ ಪಂಡಿತರು ನೆಲೆಸಿದ್ದಾರೋ ಅಯಾ ಭಾಗದ ಕ್ಷೇತ್ರವಾರು ಮನೆ ಮತ್ತು ಆಸ್ತಿಗಳನ್ನು ಗುರುತಿಸುವ ಕೆಲಸ ಗುಪ್ತವಾಗಿ ಆರು ತಿಂಗಳಿಂದ ನಡೆಯುತ್ತಲೇ ಇತ್ತು. ಅತ್ಯಂತ ಸ್ಪಷ್ಟವಾಗಿ ಗುರುತಿಸಿ ಒಕ್ಕಲ್ಲೆಬ್ಬಿಸುವ ಹೊಡೆದು ಹಾಕುವ ಹುನ್ನಾರದ ಭಾಗವಾಗಿ ಮೊದಲು ಈ ಎಚ್ಚರಿಕೆಯನ್ನು ಹೊರಡಿಸಲಾಗಿತ್ತು. ನಂತರದಲ್ಲಿ ದೈಹಿಕವಾಗಿ ಹಲ್ಲೆ ಮತ್ತು ಹೊರದಬ್ಬುವ ಪ್ರಕ್ರಿಯೆಗೆ ಚಾಲನೆ ನೀಡುವುದಷ್ಟೆ ಬಾಕಿ ಇತ್ತು. ಆವತ್ತಿಗೆ ಅದೇ ಜನವರಿ 4 ರಂದು ಬಹಿರಂಗವಾಗೆ ಉರ್ದು ಪತ್ರಿಕೆ "ಅಪ್ತಾಬ್" ನಲ್ಲಿ ಹಿಜ್ಬುಲ್ ಮುಜಾಹಿದಿನ್ ಸಂಘಟನೆ " ಹಿಂದೂಗಳೇ ಕಾಶ್ಮೀರದಿಂದ ತೊಲಗಿ ಮತ್ತು ಸಂಪೂರ್ಣ ಕಣಿವೆ ಪಾಕಿಗಳ ರಾಜ್ಯಕ್ಕೆ ಸೇರ್ಪಡೆಯಾಗಬೆಂಕೆಂದು"ಪ್ರಕಟಿಸಲಾಗಿತ್ತು. ಅದರ ಹಿಂದೆಯೇ ಗಡಿಯಿಂದ ಎ.ಕೆ.47 ತಂದು ಬೇಟೆಯಾಡುತ್ತೇವೆ ಎಂಬ ಬೆದರಿಕೆಯ ಜೊತೆಗೆ "ಪಂಡಿತರೆ ಹೊರಡಿ ಆದರೆ ನಿಮ್ಮ ಹೆಂಗಸರು ಇಲ್ಲಿಯೆ ಬಿಟ್ಟು ಹೊರಡಿ" ಎನ್ನುವ ಅಮಾನವೀಯ ಘೋಷಣೆ ಮೊಳಗಿ ಯಾರೂ ಮನೆಯಿಂದ ಹೊರಕ್ಕೇ ಬಾರದ ಪರಿಸ್ಥಿತಿ ಉಂಟಾಗಿ ಹೋಗಿತ್ತು. ಅದೇ ದಿನ ರಾತ್ರಿ ಪ್ರತಿ ಹಿಂದೂಗಳ ಮನೆಯ ಬಾಗಿಲಿಗೂ ಪೆÇೀಸ್ಟರ್ ಅಂಟಿಸಲಾಗಿತ್ತು. "..ಅಲ್ಲಾನನ್ನು ಒಪ್ಪಿಕೊಳ್ಳಿ. ಇಲ್ಲಾ ಕಾಶ್ಮೀರ ಬಿಟ್ಟು ತೊಲಗಿ " ಎನ್ನುವ ಅಕ್ಷರಗಳು ರಾರಾಜಿಸುತ್ತಿದ್ದವು. ಅದಕ್ಕೆ ಮುನ್ನುಡಿಯಾಗಿ "ಟಿಕಾ ಲಾಲ್ ಟಪ್ಲೂ" ವಿನ ಹತ್ಯೆಯಾಗುವುದರೊಂದಿಗೆ ಕಣಿವೆ ಖಾಲಿಯಾಗಲು ಮೊದಲ ಹೆಣ ಬಿದ್ದಾಗಿತ್ತು ನಂತರದ್ದು ಅಕ್ಷರಶ: ಜಗತ್ತು ಕಂಡು ಕೇಳರಿಯದ ಮಾರಣ ಹೋಮ. ಬರುವ ವಾರಕ್ಕೆ...

ಚರಿತ್ರೆಗೆ ಕನ್ನಡಿ ಹಿಡಿದ ಲೇಖನ. ಹೀಗೆ ಅನಾಥರಾಗಿ ಡಬ್ಬಲ್ ಪಟ್ಟ ಪಂಡಿತರಿಂದು ಬೆಂಗಳೂರಿನಲ್ಲಿ ಇರುವವರ ಕೆಲ ಜನರ ಪರಿಚಯ ಇದೆ. ಹೇಗೆಂದರೆ ಕ್ರಾನಿಕ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಇವರು ನನ್ನಲ್ಲಿಗೆ ಸಲಹೆಡೆ ಬರುತ್ತಾರೆ. Displacement of culture and region and a sense of insecurity causing early degenerative disorders. Who is responsible for this. Have we any time thought them in this angle
ReplyDelete