ಕಾಶ್ಮೀರವೆಂಬ ಖಾಲಿ ಕಣಿವೆ..
ಅಲ್ಲಿ ಕೊಲೆಯಾದದ್ದು ಮಾನವನಲ್ಲ ಮನುಶ್ಯತ್ವ...
ಎರಡು ವಾರದ ಹಿಂದಿನ ಶುಕ್ರವಾರ ಬೆಳಗಾಗುವ ಮೊದಲು ಅಂದರೆ ಜೂನ್ 22 ರ ರಾತ್ರಿ ಹನ್ನೆರಡರ ಹೊತ್ತಿಗೆ ಅಲ್ಲಿ ಎಂದಿನಂತೆ ಈದ್ ಹಬ್ಬದ ಪ್ರಯುಕ್ತ ಶಬ್-ಈ-ಕದ್ರ ಎನ್ನುವ ಸಂಪೂರ್ಣ ರಾತ್ರಿ ನಡೆಸುವ ಪ್ರಾರ್ಥನೆ ನಡೆಸಲಾಗುತ್ತಿತ್ತು. ರಾತ್ರಿ ಹನ್ನೆರಡು ದಾಟಿ ಶುಕ್ರವಾರ ಕಾಲಿಡುತ್ತಿದ್ದರೆ ಕೆಲವರು ಮನೆಯತ್ತ ತೆರಳಲು ಆರಂಭಿಸುತ್ತಾರಾದರೂ ಹಬ್ಬದ ಸಂಭ್ರಮಕ್ಕೇನೂ ಕಮ್ಮಿ ಇರಲ್ಲ. ಆ ಸಮಯದಲ್ಲಿ ಮಸೀದಿಯಿಂದ ಹೊರಬೀಳುತ್ತಿದ್ದವರಿಗೆ, ಅಲ್ಲಿ ಚಲನವಲನದ ಮೇಲೆ ನಿಗಾ ಇರಿಸಿ, ರಾತ್ರಿ ತನ್ನ ಹಬ್ಬ ಬಿಟ್ಟು ಸಾರ್ವಜನಿಕ ಬಂದೋ ಬಸ್ತು ಮಾಡುತ್ತಾ ಮಸೀದಿಯ ಹೊರಗೆ ಕಾರ್ಯ ನಿರ್ವಹಿಸುತ್ತಿದ್ದ ಪೆÇೀಲಿಸು ಅಧಿಕಾರಿಯೊಬ್ಬ ಕಾಣಿಸಿದ್ದಾನೆ. ಹಾಗೆ ನೋಡಿದರೆ ಆ ಅಧಿಕಾರಿಯೇನೂ ಕದ್ದು ಚಿತ್ರಣವೇನೂ ಮಾಡುತ್ತಿರಲಿಲ್ಲ. ಮಾಹಿತಿಯ ಪ್ರಕಾರ ಅವನು ಮಸೀದಿಯವರ ಫೆÇೀಟೊಗ್ರಾಫಿ ಮಾಡಿದ ಎನ್ನುವುದು ಅಕ್ಷರಶ: ರೂಮರು ಹಬ್ಬಿದ್ದು, ಆತ ತನ್ನ ಪಾಡಿಗೆತಾನು ಬಹಿರಂಗವಾಗೇ ಮುಲಾಜಿಲ್ಲದೆ ಕಾಲೂರಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಲ್ಲಿನ ಕೆಲವು ಮತಾಂಧರಿಗೆ ತಪ್ಪಾಗಿ ಕಂಡಿದೆ. ಹೀಗೆ ಚಿತ್ರಿಸುವುದರ ಮೂಲಕ ಇವನು ಏನು ಮಾಡಲು ಹೊರಟಿದ್ದಾನೆ..? ಈತನೇನಾದರೂ ಹಿಂದುಸ್ತಾನಿ ಫೌಜಿನ ಮನುಶ್ಯನಾ ಎನ್ನುವ ಋಣಾತ್ಮಕಕಾರಿ ಸಂಶಯಕ್ಕೆ ಎಡೆ ಕೊಟ್ಟು ಅವನ ಮೇಲೆ ಹರಿಹಾಯ್ದು ಮೊಬೈಲು ಕಿತ್ತುಕೊಳ್ಳಲೆತ್ನಿಸಿದ್ದಾರೆ.
ಅಷ್ಟಕ್ಕೂ ಇದೆಲ್ಲಾ ನಡೆದಿದ್ದು, ಇತಿಹಾಸ ಪ್ರಸಿದ್ಧ ಲಾಕ್‍ಚೌಕ್‍ನಿಂದ ಕೇವಲ ಐದೇ ಐದು ಕಿ.ಮೀ. ದೂರದಲ್ಲಿ. ಇದೇ ಲಾಲ್‍ಚೌಕದಲ್ಲಿ ಹಿಂದೊಮ್ಮೆ ಅಡ್ವಾನಿ ಭಾರತ ದ್ವಜ ಹಾರಿಸುವ ಅನಿವಾರ್ಯತೆ ಉಂಟಾಗಿತ್ತು. ಸುತ್ತಮುತ್ತ ತುಂಬಿದ ಮಾರುಕಟ್ಟೆ ರಾತ್ರಿಯಿಡಿ ವ್ಯವಹಾರದ ಜೊತೆಗೆ ಈ ತಿಂಗಳಲ್ಲಿ ಜಾತ್ರೆಯಂತಿರುತ್ತದೆ. ಶ್ರೀನಗರ-ಲೆಹ್ ಹೆದ್ದಾರಿಯಿಂದ ಒಂದೇ ಉಸುರಿಗೆ ಓಡಿ ತಲುಪುಬಹುದಾದ ಜಾಗ. ಅಲ್ಲಿಂದ ಎಡಕ್ಕೆ ನೋಡಿದರೆ ಶಂಕರಾಚಾರ್ಯ ಕೇಸರಿಧ್ವಜ ಪಟಿಸುತ್ತಿರುವುದು ಎಂಥಾ ಹೊತ್ತಿನಲ್ಲೂ ಸ್ಪಷ್ಟವಾಗೇ ಕಾಣಿಸುತ್ತದೆ. ಅದರ ಬುಡದಲ್ಲೇ ಕಾಶ್ಮೀರದ ಗವರ್ನರ್ ವಾಸಿಸುತ್ತಾರೆ. ತೀರ ಅದರ ಪಕ್ಕದಲ್ಲೇ ಕನ್ಯಾರ್ ಪೆÇೀಸ್ಟಿದೆ. ಬಲಕ್ಕೆ ಅಲೀಜಾನ್ ರಸ್ತೆಯ ಮಗ್ಗುಲಲ್ಲೆ ನಲ್‍ಮಾರ್ ರೋಡು. ಕೊಂಚ ಮೇಲಕ್ಕೆ ಪಾಲಿಪೆÇೀರಾ ಮತ್ತು ಸಂಪೂರ್ಣವಾಗಿ ಹಿಂದಕ್ಕೆ ಬಂದರೆ ಜಗತ್ಪ್ರಸಿದ್ಧ ದಾಲ್‍ಲೇಕ್ ಅದನ್ನು ಆವರಿಸಿಕೊಂಡ ಜನ ನಿಭಿಡ ಪ್ರದೇಶ ಇದೆಲ್ಲದರ ಮಧ್ಯೆ ಇರುವುದೇ ನೌಹಟ್ಟಾ ಜಾಮಿಯಾ ಮಸೀದಿ. ಅದರ ಕಾಂಪೌಂಡು ಹಾರಿದರೆ ಅದು ನೇರವಾಗಿ ಗಾಂಧಾರ್ ಬಾಲ್‍ಗೆ ಸಂಪರ್ಕ. ಈ ಎಲ್ಲಾ ಏರಿಯಾದಲ್ಲಿರುವುದು ಅಪ್ಪಟ ಮುಸ್ಲಿಂ ಸಮುದಾಯದ್ದೆ ಮೆಜಾರಿಟಿ.
ಇವತ್ತು ಯಾವುದೇ ಪೆÇೀಲಿಸು ಅಥವಾ ಭಾರತೀಯ ಸೈನಿಕರು ನಾಲ್ಕೈದು ಜನರ ಗುಂಪಿಲ್ಲದೆ ಯಾವ ಭಾಗದಲ್ಲೂ, ಅದರಲ್ಲೂ ಶ್ರೀನಗರದ ಉತ್ತರಕ್ಕೆ ಕಾಲಿಡುವುದೇ ಇಲ್ಲ. ಇರುವ ಎಲ್ಲರ ಬಳಿಯೂ ಕನಿಷ್ಟ ಸಾವಿರ ಜನರನ್ನು ಚದುರಿಸಬಲ್ಲಷ್ಟು ಆಯುಧ ಹೊತ್ತೆ ತಿರುಗುವ ಪರಿಸ್ಥಿತಿ ಇದೆ. ಮಾತೆತ್ತಿದ್ದರೆ ಕಲ್ಲೆಸೆಯುವ ನೀಚತನಕ್ಕಿಳಿದಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳ ಬೆಂಬಲಿತ ಪುಂಡರ ಪಡೆಯ ನೇರ ಗುರಿ ಭಾರತೀಯ ಸೈನಿಕರು ಮತ್ತು ಪೆÇೀಲಿಸರು. ವಿಚಿತ್ರವೆಂದರೆ ಇಲ್ಲಿ ಕಾರ್ಯ ನಿರ್ವಹಿಸುವ ಹೆಚ್ಚಿನ ಪೆÇೀಲಿಸರು ಅಧಿಕಾರಿಗಳೂ ಕೂಡ ಮುಸ್ಲಿಂರೇ. ಹೆಚ್ಚಾಗಿ ಶ್ರೀನಗರ ಮತ್ತು ಇತರ ಒಳಭಾಗದ ಎಲ್ಲಾ ಒಳಪಂಗಡಗಳ ಸ್ವಂತ ಧರ್ಮೀಯರೆ ಆದರೂ ಗಡಿಯಾಚೆಗಿನ ಭಯೋತ್ಪಾದಕರ ಮತ್ತು ಪಾಕಿಗಳ ಬೆಂಬಲ ಯಾವ ರೀತಿಯಲ್ಲಿದೆಯೆಂದರೆ ಅವನು ಮುಸ್ಲಿಂ ಆಗಿದ್ದರೂ ಭಾರತೀಯ ಪೆÇೀಲಿಸು ಅಥವಾ ಸರಕಾರಿ ಸೇವೆಯಲ್ಲಿದ್ದರೆ ಅವನನ್ನು ಕೂಡಾ ವಧಿಸುವುದಷ್ಟೆ ಗುರಿ ಎಂದೇ ನಿರ್ಧರಿಸಲಾಗುತ್ತಿದೆ. ಸ್ವತ: ಮುಸ್ಲಿಂ ಆಗಿದ್ದರೂ ಆವತ್ತು ಶುಕ್ರವಾರದ ಪವಿತ್ರ ದಿನವಾಗಿದ್ದರೂ, ಈದ್ ನಡೆಯುತ್ತಿದ್ದಾಗಲೇ ತೀರ ಅಮಾನುಷವಾಗಿ ಕಲ್ಲಿನಿಂದ ಹೊಡೆದು, ಬೆತ್ತಲೆಗೊಳಿಸಿ ಪೆÇೀಲಿಸು ಅಧಿಕಾರಿಯನ್ನು ಸಾಯಿಸುವ ಮನಸ್ಥಿತಿಯವರು ಯಾವ ದೇಶಕ್ಕಾದರೂ ನಿಷ್ಠರಾದಾರೆಯೇ..?
ಆವತ್ತು ನಡೆದದ್ದೂ ಅದೇ. ಯಾವಾಗ ಎದುರಿಗೆ ಪೆÇೀಲಿಸು ಅಧಿಕಾರಿಯೊಬ್ಬ ಮಫ್ತಿಯಲ್ಲಿದ್ದಾನೆ ಮತ್ತು ಮಸೀದಿಯ ಫೆÇೀಟೊ ತೆಗೆಯುತ್ತಿದ್ದಾನೆ ಎನ್ನುವ ಸುದ್ದಿ ಹಬ್ಬಿತೋ ಕೇವಲ ಐದೇ ನಿಮಿಷದಲ್ಲಿ ಮಸೀದಿಯಿಂದ ಹೊರಬಂದ ಜನರ ಗುಂಪು ಮುಖ್ಯವಾಗಿ ತೀರ ಜನನಿಬಿಢ ಗೇಟಿನೆದುರಿಗೆ ಹಿಡಿದು ಬಡಿಯಲು ಮುಂದಾಗಿದೆ. ಸುತ್ತ ನೋಡಿದರೆ ಎಲ್ಲಾ ಕಡೆಯಲ್ಲೂ, ಸುತ್ತುವರೆಯುತ್ತಿರುವವರ ಮುಖದ ಮೇಲೆ ಪೈಶಾಚಿಕ ಕಳೆ ಗುರುತಿಸಿಬಿಟ್ಟಿದ್ದಾನೆ ಡಿ.ಎಸ್.ಪಿ. ಮಹಮದ್ ಅಯುಬ್ ಪಂಡಿತ್. ಅದರಲ್ಲೂ ಪೆÇೀಲಿಸು ಅಧಿಕಾರಿಗಳಿಗೆ ಮುಖ ನೋಡಿದರೆ ಅರಿಯುವ ಕಲೆ ಕರಗತವಾಗಿ ಹೋಗಿರುತ್ತದೆ. ಕೂಡಲೇ ಅಪಾಯದ ಅರಿವಾಗಿದೆ. ಸುತ್ತಲೂ ಈಗಲೋ ಆಗಲೋ ಒಂದು ಮಾರಣಹೋಮ ಮಾಡಿ, ಮನುಷ್ಯನೊಬ್ಬನ ಮರಣಾನಂದದ ಆನಂದ ಅನುಭವಿಸಲು ತಯಾರಾಗಿ ನಿಂತಿದ್ದ ಅಕ್ಷರಶ: ಜೀವವಿರೋಧಿಗಳ ಗುಂಪು ಸುತ್ತುವರೆದಿದ್ದು ನೋಡುತ್ತಿದ್ದಂತೆ ಒಂದು ಸಣ್ಣ ಗ್ಯಾಪ್ ಕ್ರಿಯೇಟ್ ಮಾಡಿಕೊಳ್ಳಲು ತಮ್ಮ ಸರ್ವೀಸ್ ಪಿಸ್ತೂಲ್ ತೆಗೆದು ಬೆದರಿಸಿದ್ದಾರೆ. ಹಾಗೆ ಅವಕಾಶ ಸಿಗುತ್ತಿದ್ದಂತೆ ತಪ್ಪಿಸಿಕೊಳ್ಳುವ ಯೋಚನೆಯಲ್ಲಿ ಮಹಮದ್ ಇದ್ದರೆ, ಎಲ್ಲದಕ್ಕೂ ತಯಾರಾಗೇ ಇದ್ದ ಕಲ್ಲೆಸೆಯುವ ಪುಂಡರ ಪಡೆ ಅದಕ್ಕೆ ಬಗ್ಗದೆ ಗುಂಡು ಹಾರಿಸಲಿಕ್ಕಿಲ್ಲ ಎಂದು ಮುನ್ನುಗ್ಗುಲು ನೋಡಿದೆ. ಅನಿವಾರ್ಯವಾಗಿ ಅವರನ್ನು ಚದುರಿಸಲು ಮೂರ್ನಾಲ್ಕು ಗುಂಡು ಹಾರಿಸಿದ್ದಾರೆ ಅಯುಬ್. ಅದು ಕೆಲವರಿಗೆ ತಗುಲಿ ಗಾಯವೂ ಆಗಿದೆ. ಅಕಸ್ಮಾತ್ ಅಲ್ಲಿಂದ ತಪ್ಪಿಸಿಕೊಳ್ಳಲು ಯಾರನ್ನಾದರೂ ಕೊಲ್ಲಲೇ ಬೇಕಿದ್ದರೆ ಅಯುಬ್ ನೇರವಾಗಿ ಅದೂ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಎದುರಿಗೇ ಲಭ್ಯ ಇದ್ದವರ ಎದೆಗೆ ಗುಂಡಿಕ್ಕಬಹುದಿತ್ತು. ಹಾಗೆ ಮಾಡಿದ್ದರೆ ಸಾಲುಸಾಲಾಗಿ ನಾಲ್ಕೈದು ಹೆಣಗಳು ಉದುರುತ್ತಿದ್ದವು. ಅದರೆ ಹಾಗೆ ಮಾಡದೆ ಹೋದದ್ದೇ ತಪ್ಪಾಯಿತಾ...? ಸ್ವತ: ಬಲಿಯಾಗಿಬಿಟ್ಟಿದ್ದಾರೆ ಒಬ್ಬ ಅಧಿಕಾರಿ.
ಎಲ್ಲೆಡೆಯಿರುವ ಅಕ್ರಮಿಸಿದ ತಂಡ ಹಿಂದಿನಿಂದ ದಬ್ಬಿಕೊಂಡು ಎಳೆದಾಡಿ, ಮೈಯೆಲ್ಲಾ ಬಟ್ಟೆ ಹರಿದು ಹಾಕಿ ಬೆತ್ತಲೆಗೊಳಿಸಿ ಸೇರಿದ್ದ ನೂರಾರು ಜನರು ನೋಡುತ್ತಿದ್ದಂತೆ ಎಂಟೂ ದಿಕ್ಕಿನಿಂದ ಕಲ್ಲು ಹೊಡೆದು ಚರಂಡಿಗೆ ದಬ್ಬಿ ಅಲ್ಲೂ ಕಲ್ಲುಗಳನ್ನು ಎತ್ತಿ ಹಾಕಿ ಅರ್ಧ ಗಂಟೆಯ ಜೀವ ಹಿಂಸೆಯಲ್ಲಿ, ಕರ್ತವ್ಯ ನಿರತ ಪೆÇೀಲಿಸು ಅಧಿಕಾರಿಯ ಜೀವವನ್ನು ಹೊಸೆದು ಹಾಕಿದ್ದಾರೆ. ಅಲ್ಲಿಗೆ ಮಹಮದ್ ಅಯುಬ್ ಹುತಾತ್ಮರಾಗಿದ್ದಾರೆ. ಬೆಳಿಗ್ಗೆ ಸುದ್ದಿ ಗೊತ್ತಾಗಿ ಪೆÇೀಲಿಸರು ಧಾವಿಸುವ ಹೊತ್ತಿಗೆ ಮುಖ ಯಾವುದು ದೇಹ ಯಾವ ಕಡೆಗಿದೆ ಎನ್ನುವುದೇ ಗೊತ್ತಾಗದಷ್ಟು ಬರ್ಬರವಾಗಿ ಅವರ ದೇಹ ಚರಂಡಿಯಲ್ಲಿ ಕಲ್ಲುಗಳ ಮಧ್ಯೆ ಹೂತು ಹೋಗಿದೆ. ಕೈ ಕಾಲುಗಳನ್ನು ಮುರಿದು ಹಾಕಲಾಗಿತ್ತು. ತೊಡೆಯ ಮೂಳೆ ಮುರಿದ ಹೊಡೆತಕ್ಕೆ ಅದ್ಯಾವ ಪರಿಯಲ್ಲಿ ಬಾತುಹೋಗಿತ್ತೆಂದರೆ ನೋಡಿದವರೆಲ್ಲಾ ಹೈರಣಾಗಿದ್ದಾರೆ. ಕಲ್ಲಿನೇಟಿಗೆ ಬುರುಡೆ ಒಂದು ಕಡೆ ಸೀಳಿಹೋಗಿದೆ. ಹಲ್ಲುಗಳನ್ನು ಮುರಿದು ಹಾಕಲಾಗಿತ್ತು. ಜಜ್ಜಿದ ಎಡಗಣ್ಣು ನೋಡುತ್ತಿದ್ದರೆ ಪಾಪ ಮಹಮದ್ ಅದಿನ್ಯಾವ ಪರಿಯಲ್ಲಿ ಹಿಂಸೆ ಅನುಭವಿಸಿದರೋ ದೇವರಿಗೆ ಗೊತ್ತು. ಪೆÇೀಲಿಸರು ಶ್ರಮಪಟ್ಟು ಎತ್ತಿ ತಂದಿದ್ದಾರೆ. ಪೂರ್ತಿ ರಾಜ್ಯಕ್ಕೆ ಈಗ ಮು.ಮ.ಗಳು ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣ ಪೆÇೀಲಿಸರು ಮತ್ತು ಸೈನಿಕರನ್ನು ಇನ್ನಿಲ್ಲದಂತೆ ರೊಚ್ಚಿಗೆಬ್ಬಿಸಿದ್ದು ಕಣಿವೆ ಇನ್ನಷ್ಟು ಖಾಲಿಯಾಗುವ ಸೂಚನೆ ಸ್ಪಷ್ಟವಾಗಿದೆ.
ಕೊನೆಯಲ್ಲೂ ಉಳಿದು ಹೋಗುವ ಪ್ರಶ್ನೆಯೆಂದರೆ ಮೊದಲೆಲ್ಲ ಮುಸ್ಲಿಂ ಅಂದರೆ ವಿನಾಯಿತಿ ದೊರೆಯುತ್ತಿದ್ದ ಕ್ರೂರ ಆತಂಕವಾದಕ್ಕೆ ಈಗ ಆ ವಿನಾಯಿತಿಯೂ ಇಲ್ಲವೆಂದರೆ ಅವರ ವಾದಗಳೀನೆ ಇರಲಿ ಅತ್ಯಂತ ಮಾನವೀಯ ಧರ್ಮ ಎನಿಸಿಕೊಂಡಿರುವ ಮುಸ್ಲಿಂ ಕೂಡಾ ತನ್ನ ಧಾರ್ಮಿಕ ಅಂಧತೆಗೆ ಮಾನವೀಯತೆ ಬಲಿಕೊಡುತ್ತಿದೆಯಾ..? ಹೌದೇ ಆಗಿದ್ದರೆ ಅದನ್ನು ಸರಿ ಪಡಿಸುವ ಜವಾಬ್ದಾರಿಯೂ ತುರ್ತಾಗಿ ತೆಗೆದುಕೊಳ್ಳಬೇಕಿರುವುದೂ ಕಾಶ್ಮೀರಿಗಳೆ. ಆದರೆ ಕೇವಲ ಹತ್ತೇ ವರ್ಷದಲ್ಲಿ ಜನಸಂಖ್ಯಾ ಅನುಪಾತದಲ್ಲಿ ಅನಾಹುತಕಾರಿ ವ್ಯತ್ಯಾಸ ತಂದಿಟ್ಟುಕೊಂಡಿರುವ ಕಾಶ್ಮೀರಿಗಳಿಗೆ ಆ ಬುದ್ಧಿಮತ್ತೆಯ ಮಾನವೀಯತೆ ಇದೆಯಾ..? ಅಸಲಿಗೆ ಜಗತ್ತಿನ ಯಾವ ಭಾಗದಲ್ಲೂ ಹೀಗೆ ಸ್ವಂತ ದೇಶದ ಅನ್ನ ತಿಂದೂ ದ್ರೋಹ ಬಗೆಯುತ್ತಿರುವ ಉದಾ.ಈ ಮಟ್ಟದಲ್ಲಿ ಇವತ್ತು ಕಾಣಸಿಗುತ್ತಿಲ್ಲ. ಕಾಶ್ಮೀರ ಖಾಲಿಯಾಗದೇ ಏನು ಮಾಡೀತು...

No comments:
Post a Comment