Tuesday, July 25, 2017



ಈಗಿನ ವೃತ್ತಿ ಪ್ರವೃತ್ತಿ ಎರಡೂ ಉಗ್ರವಾದವೇ...

ಇವತ್ತು ಜಗತ್ತಿಗೇ ಗೊತ್ತಿದೆ ಕಾಶ್ಮೀರದಲ್ಲಿ ಅದರಲ್ಲೂ ಶ್ರೀನಗರದಲ್ಲಿ ಮತ್ತೊಮ್ಮೆ ಪ್ರವಾಸೋದ್ಯಮ ಮತ್ತು ಜನಜೀವನಮಟ್ಟ ಇನ್ನಿಲ್ಲದಂತೆ ಹಳ್ಳಹಿಡಿದು ಹೋಗಿದ್ದರೆ ಅದಕ್ಕೆ ಕಾರಣ ಒಂದೆಡೆಯಿಂದ ನುಗ್ಗುತ್ತಿರುವ ಭಯೋತ್ಪಾದಕರು ಮತ್ತು ಅವರನ್ನು ರಕ್ಷಿಸಲು ನಮ್ಮ ಸೈನಿಕರ ಮೇಲೆ ಕಲ್ಲೆಸೆಯುವ ದೇಶದ್ರೋಹಿ ಪುಂಡರುಗಳೇ ಹೊರತು ಇನ್ನೇನಲ್ಲ. ಸೈನಿಕರಂತೂ ಬಿಡಿ, ಯಾತ್ರಿಗಳೂ ಇವತ್ತು ಸೇಫಾಗಿಲ್ಲ. ಇಂತಹ ಮನಸ್ಥಿತಿಯ ಸಮಾಜವನ್ನು ನಂಬಿಕೊಂಡು ಅದಿನ್ಯಾವ ಪ್ರವಾಸಿಗ ಶ್ರೀನಗರಕ್ಕೆ ಕಾಲಿಟ್ಟಾನು..? ಹೀಗೆ ತೀರ ದುಸ್ಥಿತಿಗೆ ಇಳಿದಿದ್ದ ಕಾಶ್ಮೀರಕ್ಕೆ ಹೇಗಾದರೂ ಜನರನ್ನೂ ಪ್ರವಾಸಿಗರನ್ನೂ ಸೆಳೆಯಬೇಕು, ಅಲ್ಲೊಂದ್ನಾಲ್ಕು ಜನ ಭಾರತೀಯರು ಕಾಣಬೇಕು, ಅದನ್ನು ನೋಡಿಯಾದರೂ ಅಲ್ಲೊಬ್ಬ ಇಲ್ಲೊಬ್ಬ ವಿದೇಶಿ ಪ್ರವಾಸಿಗ ಕಾಲಿಡಲಿ ಎಂದು ಆಗಿನ ಕೇಂದ್ರಸರಕಾರ ತನ್ನ ನೌಕರರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ್ದು ತುಂಬ ಹಿಂದೇನಲ್ಲ 2002ರ ಆಸುಪಾಸಿಗೆ. ಅರ್ಹತೆಯಾಚೆಗೂ ವಿಸ್ತರಿಸಿ ರೈಲು, ವಿಮಾನ ಎಲ್ಲಾ ಕೊಟ್ಟಿತ್ತು. ಆದರೂ ಮೊದಲ ವರ್ಷಾವಧಿಯಲ್ಲಿ ಸಂದರ್ಶಿಸಿದ ಪ್ರವಾಸಿಗರ ಸಂಖ್ಯೆ ಸರಿಯಾಗಿ ಸಾವಿರವೂ ದಾಟಲಿಲ್ಲ ಅಂದರೆ ಪರಿಸ್ಥಿಯ ಗಂಭೀರತೆ ಅರಿವಾದೀತು. ಅದೀಗಲೂ ಚಾಲ್ತಿಯಲ್ಲಿದೆ. ಜನ ಮಾತ್ರ ಶ್ರೀನಗರ ಇಳಿದರೂ ದಾಲ್‍ಲೇಕ್ ಸುತ್ತಾಕಿ ಸೀದಾ ಲೇಹ್ ಲಢಾಕಿಗೆ ನಡೆದು ಬಿಡುತ್ತಾರೆ. ಕಾರಣ ಸಿಮ್‍ಕಾರ್ಡ್ ಕೆಲಸ ಮಾಡುವುದಿಲ್ಲ, ಪೆÇೀಸ್ಟ್‍ಪೇಡ್ ಮಾತ್ರ ನಡೆಯುತ್ತೆ ಅದರಲ್ಲೂ 2ಜಿ ಮಾತ್ರ, ನೋ ನೆಟ್‍ವರ್ಕ್, ಎಸ್ಟಿಡಿ ಇದ್ದರೂ ಗುರಾಯಿಸುವ ಮಾಲಿಕರು, ಲಭ್ಯವಾಗದ ಸಹಜ ಮಾರುಕಟ್ಟೆ ಶೈಲಿಯ ಜನಜೀವನ, ಇದೆಲ್ಲಕ್ಕೆ ಕಳಸ ಇಟ್ಟಂತೆ ಸಂಜೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಪೂರ್ತಿ ಕಾಶ್ಮೀರ ಸ್ಥಬ್ಧವಾಗಿಬಿಡುತ್ತದೆ. ಪಹರೆ ಎನ್ನುವ ಅನಿವಾರ್ಯದ ಬೇಲಿಯೊಳಗೆ ತಲೆ ಹುದುಗಿಸುತ್ತದೆ.

ಅವತ್ತು ನಿಗಿನಿಗಿ ಕೆಂಡದಂತಾಗಿದ್ದ ಶ್ರೀನಗರದೊಳಕ್ಕೆ ಕುಟುಂಬ ಸಮೇತ ನಾನು ಕಾಲಿಟ್ಟಾಗ, ಆಗಿನ ಕಾಲದಲ್ಲಿ ದಿನವೊಂದಕ್ಕೆ ನಾಲ್ಕು ಸಾವಿರ ರೂಪಾಯಿ ಬೆಲೆ ಬಾಳುತ್ತಿದ್ದ ಕೊಠಡಿಗೆ ಸಾವಿರದ ಕಿಮ್ಮತ್ತೂ ಉಳಿದಿರಲಿಲ್ಲ. ಅದಕ್ಕೂ ಅತಿಥಿಗಳು ಬಂದರೆ ಸಾಕೆಂದು ಬಂದವರೆದುರಿಗೆ ದೈನೇಸಿಯಾಗಿ ನಡುಬಾಗಿಸಿ ನಿಲ್ಲುವ ಮಧ್ಯವಯಸ್ಕರು ಕಣಿವೆಯ ಕೊನೆಯ ಭಾರತೀಯ ಪಳೆಯುಳಿಕೆಗಳಂತೆ ಕಾಣಿಸುತ್ತಿದ್ದರು. ನೆನಪಿರಲಿ ಅವನೂ ಶುದ್ಧಾನುಶುದ್ಧ ಮುಸ್ಲಿಂ. ಆದರೆ  ಕಲ್ಲು ಹೊಡೆಯುವ, "ನೀವು ಭಾರತೀಯರು" ಎನ್ನುವ ದರ್ದು ಅವನಲ್ಲಿ ನನಗ್ಯಾವತ್ತೂ ಕಂಡಿರಲಿಲ್ಲ. ಜಮ್ಮು ಕಾಶ್ಮೀರ ಟ್ಯಾಕ್ಸಿ ಅಸೊಸಿಯೇಶನ್ ಅಧ್ಯಕ್ಷ ತನ್ನ ಕಚೇರಿ ಬಿಟ್ಟು ಸುಮೊ ವಾಹನವನ್ನು ಪದೆಪದೇ ಒರೆಸುತ್ತಾ ಸ್ವತ: ಡ್ರೈವರಿಕೆಗೆ ಇಳಿದಿದ್ದ ಅಂದರೆ ಅಲ್ಲಿ ಆದಾಯ ಎನ್ನುವುದು ಯಾವ ಲೆವೆಲ್ಲಿಗೆ ಇಳಿದಿತ್ತು ಲೆಕ್ಕ ಹಾಕಿ. ಕಾರಣ ಸರಳವಿತ್ತು. 2002ರ ನವಂಬರ್ 13 ನಾನು ಸೋನ್‍ಮಾರ್ಗ್ ಹೋಗಿ ಸಂಜೆ ವಾಪಸ್ಸಾಗುವ ಹೊತ್ತಿಗೆ ಮುಖ್ಯಮಂತ್ರಿ ಮನೆಯೆದುರು ರಸ್ತೆಯಲ್ಲಿ ಅಂಬ್ಯೂಲೆನ್ಸು ಧಗಧಗನೆ ಉರಿಯುತ್ತಿತ್ತು. ಎಲ್ಲೆಲ್ಲೊ ಟೈಯರುಗಳನ್ನು ಇಟ್ಟು ಬೆಂಕಿ ಹಾಕಿದ್ದು ಅಡರುತ್ತಿದ್ದ ನವಂಬರ್‍ನ ಚಳಿಗೆ ಧುನಿ ಹಾಕಿದ್ದಾರಾ ಎನ್ನುವಂತಿದ್ದವು.

ಸಂಜೆಯ ಆರರ ಮೇಲೆ ರೂಮಿನಿಂದ ಹೊರಬಾರದಂತೆ ಪ್ರತಿ ಬ್ಯಾರಕ್ಕಿನ ಎದುರಿಗೆ ಸಿಗುವ ಸೈನಿಕ ಚೌಕಿಯ ಪೆÇೀಲಿಸರು ನನ್ನನ್ನು ಎಚ್ಚರಿಸಿ ಮುಂದಕ್ಕೆ ಬಿಡುತ್ತಿದ್ದರು. ಹೋಟೆಲಿನೊಳಗಿದ್ದ ರೆಸ್ಟೋರಾಂಟು ಬಾಗಿಲು ಹಾಕಿ ಯಾವುದೋ ಕಾಲವಾಗಿದ್ದರಿಂದ ಅವರದೇ ಮನೆಯಿಂದ ಪೂರ್ತಿ ಐದೂ ದಿನ ಅಡುಗೆ ಸರಬರಾಜು ಮಾಡಿದ್ದರು ನಮಗೆ. ಸರಿಯಾಗಿ ಕೂತು ಪರೋಟ ತಿಂದಿದ್ದೆಂದರೆ ಗುಲ್‍ಮಾರ್ಗನ ಒಳ ಊರೊಂದರಲ್ಲಿ. ಕಾರಣ ಅದು ತೀರ ಇಂಟಿರೀಯರು ಮತ್ತು ಅಲ್ಲಿಗೆ ಇಂತಹ ಯಾವುದೇ ಅಪಸವ್ಯಗಳು ತಲುಪುವುದೇ ಶಕ್ಯವಿರಲಿಲ್ಲ. ನಾವೆಲ್ಲಾ ಕೊಂಚ ನಿರಾಳವಾಗಿ ಉಸಿರಾಡಿದ್ದರೆ, ಆವತ್ತೇ ಕಾಶ್ಮೀರ ನನ್ನಲ್ಲಿ ಒಳಆಸಕ್ತಿಯೊಂದನ್ನು ಹುಟ್ಟಿಸಿತ್ತು. ಅಲ್ಲಿಂದಿಚೆಗೆ ಸುಮಾರು ಒಂದು ಡಜನ್ನಿಗೂ ಮಿಗಿಲು ಕಾಶ್ಮೀರಕ್ಕೆ ಭೇಟಿ ಇತ್ತಾಗಲೆಲ್ಲಾ ನಾನು ಹೊಸಹೊಸ ಆಯಾಮದ ಮತ್ತು ಹೊಸ ತಲೆಮಾರಿನಲ್ಲಾಗುತ್ತಿರುವ ಮಾನಸಿಕ ಬದಲಾವಣೆಗಳನ್ನು ಗುರುತಿಸಿದ್ದೇನೆ. ಅದರ ಪರಿಣಾಮ ಭೌಗೋಳಿಕವಾಗಿ ನಮ್ಮ ಕೈಲಿದ್ದರೂ ಜನ ಕೈತಪ್ಪುತ್ತಿದ್ದಾರೆ ಹಾಗಂತ ನಾವಂದಕೊಂಡಿದ್ದೇವೆ ಆದರೆ ಅವರನ್ನು ಅದರಲ್ಲೂ ಹೊಸ ಜನರೇಶನ್ ಹುಡುಗರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಗುತ್ತಿದೆ.

ಕಾರಣ ಪಾನ್ ಇಸ್ಲಾಮಿಸಂ ಅಥವಾ ಮುಸ್ಲಿಂ ಬ್ರದರ್‍ಹುಡ್

2002 ರಲ್ಲಿ ಉಗ್ರವಾದ ಮುಗಿಲು ಮಟ್ಟಿದ್ದಾಗಲೂ ಶ್ರೀನಗರದ ಲಲಿತ್‍ಮಹಲಿನಲ್ಲಿ ಉಳಿದುಕೊಂಡು ಗಂಟೆಗೊಮ್ಮೆ ಅಲ್ಲಿನ ಮುಖ್ಯ ರಸ್ತೆಯ ಸ್ಥಿತಿಗತಿ ಬದಲಾಗುತ್ತಿದ್ದುದಕ್ಕೆ ನಾನೇ ಸಾಕ್ಷಿ. ಆವತ್ತು ಮು.ಮ. ನಿವಾಸದಿಂದ ಕೂಗಳತೆಯ ದೂರದ ಹೋಟೆಲಿನ ಕಿಟಕಿಯಿಂದ ಕಾಣಿಸುತ್ತಿದ್ದ ಅಂಬ್ಯೂಲೆನ್ಸ್ ಹೊತ್ತಿ ಉರಿಯುತ್ತಿದ್ದುದು ನನ್ನ ಕಣ್ಣ ಮುಂದಿದೆ. ಕೊನೆಗೆ ಹೊರಡುವ ಮೊದಲು ನವಂಬರ್‍ನ ಮುಸ್ಲಿಂ ಹಬ್ಬದ ದಿನ ತಮ್ಮ ಮನೆಗೆ ಕರೆದೊಯ್ದಿದ್ದ ಆಗಿನ ಟ್ಯಾಕಿ ಮಾಲಿಕ ಸಂಘದ ಅಧ್ಯಕ್ಷ ಸ್ವತ: ಗಾಡಿ ಚಲಾಯಿಸುತ್ತಿದ್ದ. ಊರೆಲ್ಲಾ ಅವನಿಗೆ ಸಲಾಮು ಹೊಡೆಯುತ್ತಿದ್ದರೆ, ಅವನು ಮಾತ್ರ ನಾವು ಹೊರಡುವ ದಿನ ಮೈಯ್ಯೆಲ್ಲಾ ಹಿಡಿಯಾಗಿಸಿ ನಿಂತುಕೊಂಡು "ನಿಮಗೆ ನಿಜಕ್ಕೂ ನಮ್ಮ ಆತಿಥ್ಯ ಹಿಡಿಸಿದ್ದರೆ ನಿಮ್ ಸ್ನೇಹಿತರಿಗೆ ಹೇಳಿ, ಅತಿಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಇಲ್ಲಿರುವಷ್ಟೂ ದಿನವೂ ಜೀವ ಕೊಟ್ಟಾದರೂ ಕಾಯುತ್ತೇವೆ. ಅದರೆ ಪ್ರವಾಸಿಗರು ನಿಮ್ಮ ಕಡೆಯಿಂದ ಬಂದರೆ ನಾವೂ ಕೊಂಚ ಬದುಕುತ್ತೇವೆ. ಬರಲಿರುವ ನಮ್ಮ ಪೀಳಿಗೆಯ ಬದುಕಿನ ಪ್ರಶ್ನೆ ಇದು." ಎಂದವನ ಮಾತು, ಆತಿಥ್ಯ ಮತ್ತು ಕಾಳಜಿ ಜೊತೆಗೆ ಮನೆಯಲ್ಲಿ ಅವನ ಕುಟುಂಬದವರು ಮೈ ತುಂಬ ಸೆರಗು ಹೊದ್ದು ಭಯ್ಯಾ ಎಂದು ಮಾತಾಡಿಸಿ ಪ್ರೀತಿಯಿಂದ ಉಣ್ಣಲು ಬಡಿಸಿದ್ದು ಮರೆತರೆ ಕೃತಘ್ನನಾದೇನು. ಹೌದು. ನನಗೂ ಆಗ ಶ್ರೀನಗರ ಮೊದಲಿನಂತೆ ಮತ್ತೆ ನಳನಳಿಸಬೇಕು ಎನ್ನಿಸಿದ್ದು ಸುಳ್ಳಲ್ಲ. ಆವತ್ತು ಅವನ ಮಾತು, ನಡತೆ ಮೂಡಿಸಿದ್ದ ಭರವಸೆಯನ್ನು ಹೊಸ ತಲೆಮಾರು ಸಂಪೂರ್ಣವಾಗಿ ತಿಂದುಹಾಕಿತ್ತು. ಪಾನ್ ಇಸ್ಲಾಮಿಸಮ್ಮು ರೆಕ್ಕೆ ಪಢಪಢಿಸತೊಡಗಿತ್ತು.

ಆದರೆ ಕೇವಲ ಒಂದೂವರೆ ದಶಕದಲ್ಲಿ ಜನಜೀವನ ಸಂಪೂರ್ಣ ಬಕ್ಕ ಬಾರಲು ಬಿದ್ದಿದೆ. ಎಲ್ಲವನ್ನೂ, ಎಲ್ಲರನ್ನೂ ಬ್ರದರ್‍ಹುಡ್ ಚಲುವಳಿ ನುಂಗಿ ನೊಣೆದುಬಿಟ್ಟಿದೆ. ಆ ತಲೆಮಾರಿನ ಬದುಕಿನ ಬಗೆಗಿನ ಅವಗಾಹನೆಯನ್ನು ಈಗಿನ ಹುಡುಗರು ಕಲ್ಲೆಸೆಯುವುದೇ ಧರ್ಮವಾಗಿಸಿಕೊಂಡು ಬದಲಾಯಿಸಿಬಿಟ್ಟಿದ್ದಾರೆ. ಅಲ್ಲಿಗೆ ಒಂದು ವಿನಿತತೆ ಮತ್ತು ಬದುಕಿಗಾಗಿ ಜಗತ್ತಿನೊಂದಿಗೆ ಬೆರೆಯುವ ಮಾನಸಿಕ ತಯಾರಿಗೆ ಅವಕಾಶವೇ ಕೊಡದಂತೆ ಮತಾಂಧತೆ ಎಂಬ ಅಫೀಮು ಹೊಸ ಪೀಳಿಗೆಯನ್ನು ಮುಗಿಸಿಹಾಕಿದೆ. ಈಗೇನಿದ್ದರೂ ಕಲಾಶ್ನಿಕೋವ್ ಮತ್ತು ಮೊಬೈಲು. ನೆನಪಿರಲಿ ನೆಟ್‍ವರ್ಕ್ ಸಿಗ್ನಲ್‍ಗಾಗಿ ಕತ್ತು ಕುಯ್ಯುವ ಮಟ್ಟಕ್ಕೆ ಅಲ್ಲಿ ರೊಚ್ಚಿಗೇಳುತ್ತಾರೆ. ಇವತ್ತು ರೂಮರು ಹಬ್ಬುವುದನ್ನು ತಪ್ಪಿಸಲು ಸರಕಾರ ಸಿಗ್ನಲ್ ಬಂದು ಮಾಡುತ್ತದಲ್ಲ ಅದರ ಮೊದಲ ಏಟು ಬೀಳುವುದೇ ಸೈನಿಕರ ಮೇಲೆ. ಕಾರಣ ಸಿಗ್ನಲ್ ಬಂದಾಗುತ್ತಿದ್ದಂತೆ ಅವರೆಲ್ಲಾ ಚಟುವಟಿಕೆ ಮಾತ್ರವಲ್ಲ, ಪೂರ್ತಿ ಕಣಿವೆಯೇ ಸ್ಥಬ್ಧವಾಗಿ ಬಿಡುತ್ತದೆ. ಹತಾಶೆ ಜೊತೆಗೆ ಮೊದಲೇ ಪೂರ್ವಾಗ್ರಹ ಪೀಡಿತವಾಗಿರುವ ಯುವಮನಸ್ಸು ಅದಕ್ಕೆ ಕಾರಣವಾಗಿರುವ ನೌಕರಶಾಹಿಯ ಮೇಲೆರಗುತ್ತದೆ. ಅದರ ಪರಿಣಾಮ ಕಲ್ಲು ಸುರಿಮಳೆಯ ಮೂಲಕ ಸೈನಿಕರ ಮೇಲಾಗುತ್ತದೆ. ನಿಮಗಿದು ಗೊತ್ತಿರಲಿ ಕಳೆದ ವರ್ಷ ಕಲ್ಲೆಸದ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಹತ್ತಿರ ಹತ್ತಿರ. ಅಂದರೆ ಪ್ರತಿ ದಿನ ಒಂದಲ್ಲ ಒಂದು ಕಡೆ ಕಲ್ಲೇಟು ಪಕ್ಕಾ. ನಡೆದಿರುವ ಉಗ್ರದಾಳಿಯ ಸಂಖ್ಯೆ ಸುಮಾರು 900 ಚಿಲ್ರೆ.

ಅಷ್ಟಕ್ಕೂ ಹೀಗೆ ಹೊಸ ತಲೆಮಾರಿನ ಕಲ್ಲೆಸೆಯುವ ಹುಡುಗರು ಮತ್ತು ಅಂತಹ ಹುಡುಗರ ವಿದ್ರೋಹಿ ಕೃತ್ಯಕ್ಕೂ ಆಕರ್ಷಿತವಾಗುತ್ತಿರುವ ಹುಡುಗಿಯರ ಮನಸ್ಥಿತಿಯ ಹಿಂದಿರುವ ಪಾನ್ ಇಸ್ಲಾಮಿಸಮ್ಮು ಹೇಳುವುದಾದರೂ ಏನನ್ನು..? ಅದರ ಐತಿಹಾಸಿಕ ಮತ್ತು ಇವತ್ತು ಜಗತ್ತನ್ನೆ ಬೋರಲಾಗಿಸುತ್ತಿರುವ ಕತೆ ಇತ್ತಿಚಿನದ್ದಲ್ಲ. ಕಾರಣ ಪಾನ್ ಇಸ್ಲಾಮಿಸಮ್ಮು ಅಥವಾ ಬ್ರದರ್ ಹುಡ್ ಚಳುವಳಿ ಎನ್ನುವುದು ಒಂದು ಮುಷ್ಠಿ ಪುಟದ ಅಳತೆಗೆ ದಕ್ಕುವು ಕತೆಯೇ ಅಲ್ಲ. ಅದರ ಮೂಲ ಬೇರು ಇರುವುದೇ ಶತಮಾನಗಳ ಹಿಂದಿನ ಇತಿಹಾಸಕ್ಕೆ ಮತ್ತು ಹಾಗೆ ಜಾಗತಿಕವಾಗಿ ಬ್ರದರ್‍ಹುಡ್ ಮೂಲಕ ಶೇ.70ಕ್ಕಿಂತ ಹೆಚ್ಚಿರುವ ಜಗತ್ತಿನ ಸಜ್ಜನ ಮುಸ್ಲಿಂರ ಮನಸ್ಥಿತಿಯನ್ನು ಕ್ರಮೇಣ ಧಾರ್ಮಿಕವಾಗಿ ಹಾಳು ಮಾಡುತ್ತಿರುವುದಕ್ಕೆ. ಅದರ ಕತೆ ಮುಂದಿನ ವಾರಕ್ಕಿರಲಿ. ಅದರೆ ಹಾಗೆ ಬಂದ ಬ್ರದರ್‍ಹುಡ್ ಇವತ್ತು ಕಾಶ್ಮೀರಕ್ಕೆ ತನ್ನದೇ ಕೊಡುಗೆ ನೀಡಿದೆ ಎನ್ನುವುದಂತೂ ಸತ್ಯ. ಕಣಿವೆ ಖಾಲಿ ಆಗದೆ ಏನು ಮಾಡೀತು..?
ಕಾಶ್ಮೀರವೆಂಬ ಖಾಲಿ ಕಣಿವೆ
ಕಳೆದ ನೂರೇ ದಿನಗಳಲ್ಲಿ ಸುಮಾರು ಎಂಭತೈದಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಪ್ರತಿ ತಿರುವಿನಲ್ಲೂ ಇವತ್ತು ಬಂದೊಬಸ್ತು ಇರುವ ಚೆಕ್ ಪೆÇೀಸ್ಟುಗಳಿದ್ದು, ಸೈನಿಕರ ಶಸ್ತ್ರಾಸ್ತ್ರಗಳು ಎಂಥದಕ್ಕೂ ಸನ್ನದ್ಧವಾಗಿರುತ್ತವೆ. ಆದರೂ ಹೇಗೆ ಪ್ರತಿವಾರಕ್ಕಿಂತಿಷ್ಟು ಎಂಬಂತೆ ಉಗ್ರರು ಸೈನಿಕರಿಗೆದುರಾಗಿ ಬಲಿಯಾಗುತ್ತಿದ್ದಾರೆ..? ಬರುಬರುತ್ತಾ ಅಷ್ಟು ವರಚ್ಚಾಗಿ ಈ ಆಂತಕವಾದಿಗಳು ಹೇಗಾದರೂ ಒಳಕ್ಕೆ ನುಸುಳುತ್ತಿದ್ದಾರೆ..? ಒಂದೆಡೆ ನಿಸರ್ಗ ಕಲ್ಪಿಸಿರುವ ಸಂಕೀರ್ಣ ಭೌಗೋಳಿಕ ಪರಿಸ್ಥಿತಿ ಒಳಗೆ ಬರಲು ಅನುಕೂಲವಾದರೆ, ಹಾಗೆ ಒಮ್ಮೆ ಸರಹದ್ದಿನೊಳಗೆ ಬಂದವರೆಲ್ಲರಿಗೂ ನೀರು, ನೆರಳು, ಶಸ್ತ್ರಾಸ್ತ್ರ ಎತ್ತಿ ಕೊಟ್ಟು ನಮ್ಮ ಸೈನಿಕರ ಮೇಲೆ, ಹಿಂದೂಗಳ ಮೇಲೆ ಛೂ ಬಿಡುತ್ತಿರುವವರೂ ನಮ್ಮವರೇ ಎನ್ನುವುದೀಗ ರಹಸ್ಯವಾಗುಳಿದಿಲ್ಲ. ಆವತ್ತು ಉರಿ ಸೇನಾ ಕ್ಯಾಂಪ್ ಮೇಲೆ ದಾಳಿಯಾಯಿತಲ್ಲ. ಅದರ ನಂತರ ಸಾಲುಸಾಲಾಗಿ ಗಡಿಯಲ್ಲಿ ಉಗ್ರರ ಹೆಣ ಬೀಳತೊಡಗಿದವು. ಅಸಲಿಗೆ ನಮಗೆ ಲೆಕ್ಕಕ್ಕೆ ಸಿಗುವುದಕ್ಕಿಂತ ಕೈಗೆ ದೇಹ ಸಿಕ್ಕದಂತೆ ಹುರಿದು ಹೋಗುವುದನ್ನು ಅಲ್ಲಲ್ಲೆ ಎಳೆದು ಹಾಕಿ ಬಿಡುವ ಮಿಲಿಟರಿ ಲೆಕ್ಕಾಚಾರ ಬೇರೆಯದೇ ಇರುತ್ತದೆ. ಅದಾಚೆಗಿರಲಿ ಅದನ್ನಿಲ್ಲಿ ಚರ್ಚಿಸುವುದೂ ತರವಲ್ಲ. ಆದರೆ ಹಾಗೆ ಅಷ್ಟು ಸಲೀಸಾಗಿ ಈ ಪಾತಕಿಗಳು ಹೇಗೆ ಗಡಿಯನ್ನು ದಾಟಿ ಶ್ರೀನಗರ, ಪಹಲ್ಗಾಮ್ ಮತ್ತು ಇತರ ಪ್ರಮುಖ ಸ್ಥಳಗಳನ್ನು ಸುರಕ್ಷಿತವಾಗಿ ತಲುಪುತ್ತಾರೆ..?

ನಮ್ಮಲ್ಲಿ ಹೆಚ್ಚಿನವರಿಗೆ ಕಾಶ್ಮೀರ ಕಣಿವೆಯ ಅತೀವ ಏರಿಳಿತದ ಬಗ್ಗೆ ಅಂದಾಜಿಲ್ಲ. ಅದನ್ನು ಟೊಪೆÇಗ್ರಾಫಿ ಎನ್ನುತ್ತಾರೆ. ಅದರಲ್ಲೂ ಉತ್ತರ ಕಾಶ್ಮೀರದ ಭಾಗದಲ್ಲಿ ಸರಿಯಾಗಿ ಅರ್ಧ ಕಿ.ಮೀ. ಕೂಡಾ ನೇರಾನೇರಕ್ಕೆ ನೆಲ ದಕ್ಕುವುದಿಲ್ಲ. ನನ್ನ ಭೇಟಿಗಳಲ್ಲಿ ಒಂದು ಹಳ್ಳಿಗೆ ಇವತ್ತು ಹೋದರೆ, ನಾನು ಹಿಂದಿರುಗುತ್ತಿದ್ದುದು ಮರುದಿನವೇ. ಲೇಹ್ ಹೆದ್ದಾರಿ ಮೇಲೆ ಗಾಂಧಾರ್‍ಬಾಲ್ ದಾಟಿಬಿಟ್ಟರೆ ಮತ್ತೇನಿದ್ದರೂ ಪರ್ವತದ ಸೆರಗು ಕೊರೆದು ರೂಪಿಸಿದ ಕಡಿದಾದ ಅಂಚಿನ ಅಪ್ಪಟ ಕಣಿವೆಯ ಏರಿಳಿತ. ನಾಲ್ಕು ಹೆಜ್ಜೆ ಮೇಲಕ್ಕೆ ಹೋದರೆ ಇನ್ನಾಲ್ಕು ಕೆಳಕ್ಕೆ. ಅದಕ್ಕೂ ಮೊದಲೇ ನದಿಯ ಸಣ್ಣ ತೊರೆಯೊಂದು ಬಾಯ್ದೆರೆದು ಅಲ್ಲಲ್ಲಿ ಹಾಯ್ದು ಹೋಗುತ್ತಿರುತ್ತದೆ. ಸಂಪೂರ್ಣ ಕಣಿವೆಯನ್ನು ಹೀಗೆ ಕೊರಕಲಾಗಿಸಿ ಗುಡ್ಡಗಳ ಏರಿಳಿತ, ನಿರಂತರ ಭೂ ಕುಸಿತದಂತಹ ವೈಪರಿತ್ಯಗಳಿಗೆ ಒಡ್ಡಿದ್ದೆ ಇಂತಹ ನದಿ ಕವಲುಗಳು. ಆವತ್ತು ಗಡಿ ದಾಟಿ, ಉರಿ ಸೆಕ್ಟರಿನ ಅಡುಗೆ ಕೋಣೆಯ ಕಡೆಯಿಂದ ದಾಳಿಯಾಯಿತಲ್ಲ, ಅದರ ಆಸುಪಾಸೇ ಎಷ್ಟು ನಾಲಾಗಳು, ಕಾಲುವೆಗಳಿವೆ ಎಂದರೆ ಒಬ್ಬ ಸಲೀಸಾಗಿ ಅದರ ಕೊರಕಲಿನಲ್ಲಿ ತೆವಳಿಕೊಂಡೆ ಕಿ.ಮೀ.ಗಟ್ಟಲೆ ಭಾರತದೊಳಕ್ಕೆ ಕ್ರಮಿಸಿಬಿಡುತ್ತಾನೆ.

ಉರಿಯ ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವುದೇ ಸಲಮ್‍ನಾಲಾ ಎಂಬ ಹಳ್ಳ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ಹಳ್ಳಗಳು ಹರಿದು ಝೀಲಂ ನದಿಯನ್ನು ತಲುಪುತ್ತವೆ. ನಿಮಗೆ ಗೊತ್ತಿರಲಿ ಈ ಝೀಲಂ ನದಿ ಇವತ್ತು ಅನಾಮತ್ತಾಗಿ ಕಿ.ಮೀ.ಗಟ್ಟಲೇ ಅಗಲವೂ, ಆಳದ ಜೊತೆಗೆ ನಮ್ಮ ಪ್ರದೇಶ ನಮಗೇ ಅಪರಿಚಿತವನ್ನಾಗಿಸುವಷ್ಟು ದಂಡೆಗಳನ್ನು ಬಾಚಿ ತಬ್ಬಿಉಬ್ಬಿ ಹರಿಯುತ್ತಿರುವ ಉಮೇದಿನ ನದಿ ಇದು. ಇಂತಹದ್ದೊಂದು ನದಿಯನ್ನು ಪಳಗಿಸುವುದು ಅತ್ಲಾಗಿರಲಿ, ದಂಡೆಯನ್ನು ಹಿಡಿತಕ್ಕಿಟ್ಟುಕೊಳ್ಳುವುದು ಕಷ್ಟ. ಇಂತಹ ತುಂಬ ದುರ್ಗಮ ಪ್ರದೇಶಗಳು ಸರಹದ್ದಿನುದ್ದಕ್ಕೂ ಸಾಲುಸಾಲಾಗಿವೆ. ಇಂಥಲ್ಲಿಂದಲೇ ಉಗ್ರರು ನುಸುಳುತ್ತಾರೆ. ಜೊತೆಗೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟಕೊನೆಯಲ್ಲಿ ತೀರ ಸರಹದ್ದಿನ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.

ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಯಿತಲ್ಲ ಆ ಲೀಪಾದಿಂದ 24 ಕಿ.ಮೀ. ದೂರದ ರೈಸಿನ್ ಎಂಬಲ್ಲಿಯೇ ವಾಹನಗಳು ನಿಂತು ಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಜನರನ್ನು ಹೊತ್ತು ತರುತ್ತವೆ. ಇಲ್ಲಿ ನಿರ್ಮಿಸಿದ ರಸ್ತೆಯನ್ನು ಕುಸಿಯುವ ಪರ್ವತಗಳು ತಿಂಗಳೊಪ್ಪತ್ತಿಲ್ಲಿ ನುಂಗಿ ಮುಗಿಸುತ್ತವೆ. ಇದರ ಕೂಗಳತೆಯಲ್ಲಿದೆ ದುರ್ಗಮವಾದ ಬಂಗೂಸ್ ವ್ಯಾಲಿ. ಅತ್ಯಂತ ಸುಂದರ ಪ್ರದೇಶ ಲೀಪಾ ವಿಭಿನ್ನ ವಲಯ. ಮೇಲ್ಗಡೆಯ ಪೂರ್ವಭಾಗ ಡೈಖಾನ್ ವ್ಯಾಲಿ, ಪಕ್ಕದ ಇನ್ನೊಂದಿಷ್ಟು ವಲಯವನ್ನು ಚಾನ್ಸೇನ್ ಎನ್ನುತ್ತಾರೆ. ಉಗ್ರರಿಗೆ ಲೀಪಾ ಎಂದರೆ ಡೈಖಾನ್ ವ್ಯಾಲಿಯ ಬದೀಗೆ ಹೋಗುವಂತೆ ಪಾಕಿ ಅಧಿಕಾರ ಕೇಂದ್ರವೇ ಸೂಚನೆ ಕೊಡುತ್ತದೆ.

ಇತ್ತ ತಾವಗಿ, ಅಪೂಟು ಪಾಕಿಗಳ ಪಕ್ಕೆಗೆ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್‍ಭಾಗ್ಲಿ, ಪಾದದಲ್ಲೇ ನಟೋರಿಯಸ್ ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತ ಸರಹದ್ದಿನ ಸೆರಗಿಗೆ ಚುಂಗಿನಂತೆ ಆವರಿಸಿಕೊಂಡಿರುವ ಹತ್ತಾರು ಮನೆಗಳ ನೂರಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್‍ಪಂಜಾಲ್ ಪರ್ವತಶ್ರೇಣಿ ಎರಡೂ ಮಗ್ಗುಲಲ್ಲೂ ಯಥೇಚ್ಚವಾಗಿ ಕನಿಷ್ಠ ಸಾವಿರ ಅಡಿಯ ಎತ್ತರದ ಪರ್ವತಾಗ್ರಹಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಹೀಗೆ ಆವರಿಸಿಕೊಂಡಿರುವ ತುದಿಗಳ ಮೇಲೆನೆ ಎರಡೂ ಕಡೆಯ ಸೈನಿಕರು ಅರೆಗಳನ್ನು ಹುಡುಕಿ ಬಂಕರು ನಿರ್ಮಿಸಿಕೊಂಡು ಗಡಿ ಕಾಯುತ್ತಾರೆ. ಹಾಗೆ ಎರಡೂ ಬಂಕರ್‍ಗಳ ಮಧ್ಯದ ಪ್ರದೇಶವನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯುತ್ತಾರೆ. ಅಸಲಿಗೆ ಬರೀ ಕಣ್ಣಿಗೆ ಮತ್ತು ನೇರ ನೋಟಕ್ಕೆ ಅಲ್ಲಿ ಯಾರೂ ದಕ್ಕುವುದೇ ಇಲ್ಲ. ಏನಿದ್ದರೂ ಆ ಕೊರಕಲುಗಳಲ್ಲೇ ಕಾಲು ಹರಿಸುತ್ತಾರೆ.

ಹಾಗೆ ಅಂತಹ ಪ್ರದೇಶಗಳಿಂದ ಇತ್ತ ಚಲಿಸಲಾರಂಭಿಸುತ್ತಿದ್ದಂತೆ ನಮ್ಮ ಬಂಕರುಗಳಿಂದ ಕಣ್ಣು ನೆಟ್ಟ ಕೂತ ಸೈನಿಕರ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಪಾಕಿ ಸೈನಿಕರು ಗುಂಡು ಹಾರಿಸತೊಡಗುತ್ತಾರೆ. ನಮ್ಮವರೂ ಅದಕ್ಕೆ ಉತ್ತರಿಸುವಾಗ, ಅರೆಬರೆ ತರಬೇತಿಯ ಹುಂಬ ಹುಡುಗರು ನೆಲದ ಮೇಲೆ ಬಿದ್ದು ಹೊರಳುತ್ತಾ, ನಾಲಾಗಳ ಕೊರಕಲಿಗೆ ಇಳಿದು ಸರಿಯುತ್ತಾ ಗಡಿ ದಾಟುತ್ತಾರೆ. ನೆನಪಿರಲಿ ಹಾಗೆ ಬರುವ ಉಗ್ರರ ಬಳಿ ಸಣ್ಣಪುಟ್ಟ ಆಯುಧ ಬಿಟ್ಟರೆ ಬೇರೇನೂ ಇರುವುದಿಲ್ಲ. "ಲಗೇಜು" ಏನಿದ್ದರೂ ಇತ್ತ ಬಂದೊಡನೆ ಪೂರೈಸಲಾಗುತ್ತದೆ ಎಂದರೆ ಅದಿನ್ನೆಂಥಾ ಬೆಂಬಲ ನಮ್ಮವರಿಂದಲೇ ಸಿಕ್ಕುತ್ತಿರಬಹುದು ಊಹಿಸಿ.

ಪ್ರತಿ ಗಡಿಯಲ್ಲೂ ಇವತ್ತು ಅಪ್ಪಟ ಬುಡಕಟ್ಟು ಕಾಶ್ಮೀರಿ ಕುಟುಂಬಗಳು ಗ್ವಾಲೆಗಳಂತೆ ಬದುಕು ಕಟ್ಟಿಕೊಂಡಿದ್ದು ನುಸುಳುಕೋರರು ಮೊದಲು ಅಶ್ರಯ ಪಡೆಯುವುದೇ ಇಲ್ಲಿ. ಇದೊಂದು ಗೊತ್ತಿರಲಿ, ಅರ್ಧ ಕೆ.ಜಿ. ಅಕ್ಕಿ ಹೆಚ್ಚಿಗೆ ಕೊಂಡರೂ ಅಲ್ಲಿ ಹೊಸ ಅತಿಥಿಯ ಅಗಮನವಾಗಿದೆ ಎಂದು ಊಹಿಸಿಯೇ ಬಯೋನೆಟ್ ಎದುರಿಗಿಟ್ಟು ಸೈನಿಕರು ಕೂಂಬಿಂಗ್ ಮಾಡುತ್ತಿರುತ್ತಾರೆ. ಒಣಗಲು ಹಾಕುವ ಬಟ್ಟೆಗಳು, ಅಡುಗೆಯ ಪದಾರ್ಥದ ವ್ಯತ್ಯಾಸ, ಮನೆಯ ಬಳಿಯಲ್ಲಿ ಬದಲಾಗುವ ಚಟುವಟಿಕೆ, ಇದ್ದಕ್ಕಿದ್ದಂತೆ ಕೆಲ ಮನೆಗಳ ಹೆಂಗಸರು ಗುಳೆ ಹೋದಂತೆ ಗಡಿಯಿಂದ ಒಳಭಾಗದ ಸಂಬಂಧಿಕರ ಮನೆಗಳಿಗೆ ತೆರಳಿಬಿಡುವುದು, ಯಾವ ಹೊತ್ತಿಗೂ ಬಾಗಿಲು ಹಾಕಿಕೊಂಡೆ ಇರುವ ಮನೆಗಳು ಹೀಗೆ ಸೈನಿಕರು ಹುಡುಕುವ ರೀತಿಯೇ ಅಂದಾಜಿಗೆ ದಕ್ಕುವುದಿಲ್ಲ. ಅಲ್ಲೆಲ್ಲಾ ಪ್ರತಿ ತಿರುವಿನಲ್ಲೂ, ಪ್ರತಿ ಪರ್ವತದ ಬುಡಕ್ಕೂ ಆತುಕೊಂಡು ಅಕ್ಷರಶ: ಆಯುಧವೇ ವಸ್ತ್ರ ಎನ್ನುವಂತೆ ಮೈ ತುಂಬಾ ಬಂದೂಕು, ಬಾಂಬು, ಗ್ರೇನೆಡು ಹೊತ್ತ ಸೈನಿಕರು ಕಾಲೂರಿ ನಿಂತು ಕಾಯುತ್ತಿರುತ್ತಾರೆ. ಅದರೆ ಆ ಉದ್ದಾನುಉದ್ದದ ಕಣಿವೆ ಮತ್ತು ಫೀರ್‍ಪಂಜಾಲ್ ಶ್ರೇಣಿಯ ಸಾಲುಸಾಲು ಪರ್ವತದ ಪ್ರದೇಶದ ಕಾವಲಿಗೆ ಅದೆಷ್ಟೇ ಸೈನಿಕರನ್ನು ಹಾಕಿದರೂ ಎಲ್ಲಿ ಈಡಾಗಬೇಕು..? ಹಾಗೆ ದಾಟುವವರನ್ನು ಮೊದಲು ತಮ್ಮ ಮನೆಗಳಲ್ಲಿ ಒಂದೆರಡು ದಿನ ಮಟ್ಟಿಗೆ ಸಾಕುವ ದೇಶದ್ರೋಹಿಗಳು, ನಂತರ ಅವರನ್ನು ಒಳಭಾಗಕ್ಕೆ ಕಳಿಸುತ್ತಾರೆ. ಅಗತ್ಯಕ್ಕೆ ತಕ್ಕಷ್ಟು ಆಯುಧಗಳ ದಾಸ್ತಾನು ಮೊದಲೆ ತಲುಪಿರುತ್ತದೆ. ಅದು ಕೈಗೆ ಬರುತ್ತಿದ್ದಂತೆ ಪಾಕಿಗಳೊಂದಿಗೆ ಮಾತುಕತೆಗೆ ಶುರುವಿಟ್ಟುಕೊಂಡು ಮಾರಣಹೋಮಕ್ಕೆ ರೆಡಿಯಾಗುತ್ತಾರೆ. ಅದರೆ ರಸ್ತೆಗಿಳಿಯುವ ಮೊದಲೇ ಅವರ ಇರುವಿನ ಬಗ್ಗೆ ಟಿಪ್ಸು ಕೊಟ್ಟು ಸೈನಿಕರ ಕೈಯಲ್ಲಿ ಹೊಡೆಸಿ ಹಾಕುವ ಅವರದೇ ಮನುಷ್ಯ ಲಕ್ಷಾಂತರ ಬಹುಮಾನ ಎಣಿಸುತ್ತಾ ಹುಳ್ಳಗೆ ನಗುತ್ತಾನೆ. ಸತ್ತವನ ಹೆಸರಲ್ಲಿ ದೊಂಬಿಗಿಳಿಯುವ ಹುಂಬ ಹುಡುಗರನ್ನು ಮಿಲಿಟರಿ ಪಡೆ ನೋಡುತ್ತಿದ್ದಂತೆ ಗಲಾಟೆಗಿಬ್ಬಿಬ್ಬರಂತೆ ಕೊಂದು ಕೆಡುವುತ್ತದೆ. ಕಾಶ್ಮೀರ ಖಾಲಿಯಾದೇ ಏನು ಮಾಡೀತು...?

Monday, July 17, 2017




ಆತಂಕದಲ್ಲಿ ಅಮರನಾಥ ಯಾತ್ರೆ...


"..ಈ ಬಾರಿ ಯಾತ್ರೆ
ಮುಗಿಯುವುದರೊಳಗಾಗಿ ನಾವು
ಕನಿಷ್ಟ ನೂರೈವತ್ತು
ಜನರನ್ನಾದರೂ ಕತ್ತರಿಸಬೇಕು.
ಯಾತ್ರಿಗಳು ಮತ್ತು ಪೆÇೀಲಿಸರು
ಎನ್ನುವುದಕ್ಕೆ ಲೆಕ್ಕ
ಸಿಗಬಾರದು.." ಹೀಗೆಂದು ಮೊನ್ನೆ
ಮೊನ್ನೆ ಅಮರನಾಥ ಯಾತ್ರೆಯ
ಮೊದಲನೆಯ ದಿನ ಆರಂಭಕ್ಕೂ ಮೊದಲೇ
ಠರಾವು ಹೊರಡಿಸಿದವನು
ಭಯೋತ್ಪಾದಕರ ಸ್ವರ್ಗದಲ್ಲಿರುವ
ಪಾಕಿ ಬೆಂಬಲಿತ ಪಾತಕಿ
ಸಲ್ಲಾವುದ್ದಿನ್. ಈತ ಮಧ್ಯ
ಪಾಕಿಸ್ತಾನದಲ್ಲಿ ಐಶಾರಾಮಿ
ಜೀವನ ನಡೆಸುತ್ತಾ ಫೀಲ್ಡಿನಲ್ಲಿ
ಹುಡುಗರಿಗೆ ಸತ್ತುಹೋಗಲು ಅದೇಶ
ಹೊರಡಿಸುತ್ತಿದ್ದಾನೆ. ಇವನನ್ನು
ವಿಶ್ವ ಸಂಸ್ಥೆ ಸೇರಿದಂತೆ
ಅಮೇರಿಕೆ ಕೂಡಾ ಅಂತರಾಷ್ಟ್ರೀಯ
ಭಯೋತ್ಪಾದಕರ ಸಾಲಿಗೆ
ಸೇರಿಸಿದೆ. ಜೀವ
ಕಳೆದುಕೊಳ್ಳುತ್ತಿರುವ
ಕಾಶ್ಮೀರಿಗಳಿಗೆ ಮಾತ್ರ ಇದು
ಅರ್ಥವಾಗುತ್ತಿಲ್ಲ. ಆದರೀಗ
ಯಾತ್ರಿಗಳಲ್ಲೀಗ ಆರೆಂಟು ಜನ
ಮೃತರಾಗಿ ಮೂವತ್ತೆರಡು ಜನ
ಗಾಯಾಳುಗಳಾಗುವುದರಿಂದ ಅವನ
ಮಾತಿನ ಗಂಭೀರತೆ ಬೇರೆಯದೆ ಅರ್ಥ
ಪಡೆಯುತ್ತಿದೆ.

ಹಾಗೊಂದು ಫಾರ್ಮಾನು ಹೊರಡಿಸಲು
ಕಾರಣ, ಈ ಮೊದಲೇ ಸಿಕ್ಕಿಬಿದ್ದು
ಹೆಣವಾಗಿರುವ ಹುಡುಗರಾದ
ಬುರಾನ್‍ವಾನಿ ಮತ್ತು ಅಬ್ಜಾರ್
ಭಟ್‍ನಂತಹ ಶುದ್ಧಾನುದ್ಧ
ಅವಿವೇಕಿಗಳ ತಲೆಗೆ
ಕಟ್ಟಲಾಗಿದ್ದ ಬಹುಮಾನ ಮತ್ತು
ಅವರುಗಳು ಯೋಜಿಸಿದ್ದ ಆಗಸ್ಟ್
ಬರುವ ಹೊತ್ತಿಗೆ ಕೆಲವು ಸೈನಿಕರ
ತಲೆಯನ್ನಾದರೂ ಕಡಿಯುವ
ಯೋಜನೆಯನ್ನು "ಹಿಂದೂಸ್ಥಾನಿ
ಫೌಜ್" ವಿಫಲಗೊಳಿಸಿ
ಅವರನ್ನೆಲ್ಲಾ ಬೀದಿ
ಹೆಣವಾಗಿಸಿದ್ದಕ್ಕೆ. ಬುರ್ಹಾನ್
ವಾನಿಯನ್ನು ಸ್ವತ: ಪಾಕಿ
ಸೇನಾನಾಯಕನೇ ಹೊಗಳುವ ಮೂಲಕ
ಕಾಶ್ಮೀರದ ಬೀದಿಗಳಲ್ಲಿ ಕಲ್ಲು
ಹಿಡಿದು ನಿಲ್ಲುತ್ತಿರುವ
ಪುಂಡಹುಡುಗರನ್ನು ಗನ್ನು
ಹಿಡಿಯಲು
ಪ್ರೇರೇಪಿಸುತ್ತಿದ್ದಾನೆ. ಅವನ
ಬಗ್ಗೆ ಹುಟ್ಟುಹಾಕುತ್ತಿರುವ
ಕ್ರೇಜು ಶ್ರೀನಗರದ ಗಲ್ಲಿಗಳಿಗೆ
ಹೊಸ ಹುಮ್ಮಸು ನೀಡುತ್ತಿದೆ
ಮತ್ತು ಅತ್ತಲಿನ
ಕುತಂತ್ರಿಗಳಿಗೆ
ಬೇಕಾಗಿರುವುದೂ ಅದೆ. ಹಾಗೆ
ನೋಡಿದರೆ ಝಕೀರ್ ಮೂಸಾನ ಯೋಜನೆಯ
ಮುಂದಿನ ಹಂತ ಚಾಲನೆಗೆ
ತರಬೇಕಾಗಿದ್ದವನು ಅಭ್ಝಾರ್
ಭಟ್. ಮೂಸಾನ ಪ್ರಕಾರ ಕಾಶ್ಮೀರ
ಸಮಸ್ಯೆ ಮತ್ತು ಧರ್ಮ ಎರಡನ್ನೂ
ರಾಜಕೀಯ ಮಾಡಿದ್ದೀರಿ ಎನ್ನುವ
ಕಾಂಟ್ರಾವರ್ಸಿಯಿಂದಾಗಿ ಆತ
ಗುಂಪನ್ನೆ ತೊರೆದು ಹೋಗಿದ್ದ.
ಹೀಗೆ ಇದ್ದಕ್ಕಿದ್ದಂತೆ
ನಿರ್ವಾತವಾದ ಜಾಗವನ್ನು
ತುಂಬಿದವನು ಸರಿಯಾಗಿ ನೆತ್ತಿ
ಮಾಸು ಹಾರದ ಹುಡುಗ ಅಬ್ಜಾರ್ ಭಟ್.
ಈತ ವಾನಿಯ ಮಟ್ಟಿಗಿನ
ಭಯೋತ್ಪಾದನೆಯ ಆಳಕ್ಕಿನ್ನೂ
ಇಳಿದಿರಲಿಲ್ಲ. ಆದರೆ ಕಣಿವೆಯ
"ಲಗೇಜು" ಸಂರಕ್ಷಣೆ ಹಾಗು ಸ್ಥಳಿಯ
"ಶೆಲ್ಟರ್" ಕಾರ್ಯಗಳಿಗೆ
ವ್ಯವಸ್ಥಿತವಾಗಿ
ಕಾರ್ಯನಿರ್ವಹಿಸುತ್ತಿದ್ದುದರಿಂದ
ಎರಡೂ ಕಡೆಯಲ್ಲಿ ಪ್ರಸಿದ್ಧಿಗೆ
ಬಂದಿದ್ದ.

ಅಭ್ಜಾರ್ ಭಟ್‍ನಿಗಿದ್ದುದು
ಅಪಾಯಕಾರಿ ಆತುರವೆಂದರೆ
ಪ್ರಸಿದ್ಧಿಯ ತೆವಲು ಮತ್ತು
ಶೋಫಿಯಾನ್, ಕುಪ್ವಾರ,
ಬಾರಾಮುಲ್ಲಾ, ಅನಂತನಾಗ್ ಮತ್ತು
ಶ್ರೀನಗರದ ಮೇಲೆ ಭದ್ರ ಹಿಡಿತ
ಹೊಂದುವ, ಸಂಪೂರ್ಣ ದಕ್ಷಿಣ
ಕಾಶ್ಮೀರಕ್ಕೆ ಕಮಾಂಡರ್ ಎಂದು
ಕರೆಯಿಸಿಕೊಳ್ಳುವ
ಮಹಾತ್ವಾಕಾಂಕ್ಷೆ ಇತ್ತು. ಅದು
ಸಿದ್ಧಿಸಬೇಕೆಂದರೆ, ಶ್ರೀನಗರದ
ಕಮಾಂಡರ್ ಎಂದು ತನ್ನನ್ನು
ಒಪ್ಪಬೇಕಾದರೆ ತಾನು ಆ ಮಟ್ಟದ
ಕೃತ್ಯ ಎಸಗಬೇಕು. ಯಾರೂ ಮಾಡದ
ಕೃತ್ಯಕ್ಕೆ ಕೈ ಹಾಕಿದರೆ ದೂರದ
ಐಸಿಸ್‍ವರೆಗೂ ಪ್ರಸಿದ್ಧಿ.
ಹೀಗೆ ಅನಾಹುತಕಾರಿ ಯೋಜನೆಯ
ಅಂಶವೇ ಅಗಸ್ಟ್ ಹದಿನೈದರ
ಹೊತ್ತಿಗೆ, ಲಾಲ್‍ಚೌಕನಲ್ಲಿ
ಸೈನಿಕರ/ಪೆÇೀಲಿಸರ ತಲೆ ಕಡಿಯುವ
ಪ್ರಾಜೆಕ್ಟು. ಆದರೆ ಅದಕ್ಕೂ
ಮೊದಲೇ ಸೈನ್ಯದ ಬಹುಮಾನಕ್ಕೆ,
ತಮ್ಮವರೇ ಕೊಟ್ಟ ಟಿಪ್ಸ್‍ಗೆ
ಬಲಿಯಾಗಿ ಹೋದ. ಹೀಗೆಯೇ ಕಳೆದ
ಜುಲೈ8 ರಂದು ಬುರ್ಹಾನ್ ವಾನಿ
ಕೂಡಾ ಸೈನಿಕರ ಗುಂಡಿಗೆ
ಬಲಿಯಾಗಿದ್ದ.

ಅದರ ಮುಂದುವರೆದ ಭಾಗ ಈಗ
ಅಮರನಾಥ್ ಯಾತ್ರೆ ಎನ್ನುವ
ಸುಲಭದ ಟಾರ್ಗೆಟ್ ಯೋಜನೆಯಂತೆ
ಯಾತ್ರಿಗಳ ಮೇಲೆ ಮೊದಲ ದಾಳಿ
ನಡೆದು ಹೋಗಿದೆ. ಒಮ್ಮೆ
ನುಗ್ಗಿದರೆ ಸಾಕು ಸಾಲಸಾಲು
ನರಮೇಧ ಮಾಡಬಹುದು ಎನ್ನುವ
ಯೋಜನೆಗೆ ಚಾಲನೆ ನೀಡಲಾಗಿದೆ.
ತೀರ ಯಾತ್ರಿಗಳು ಎಲ್ಲಾ ಮುಗಿಸಿ
ಹಿಂದಿರುಗುವಾಗ, ಮೊದಲು ಸೈನಿಕ
ಶಿಬಿರಕ್ಕೆ ಗುಂಡು ಹಾರಿಸಿ
ತತಕ್ಷಣ ಅವರನ್ನು ಅತ್ತ
ಬಿಜಿಯಾಗಿಸಿ, ಇತ್ತ ಬಸ್ಸಿನ
ಮೇಲೆ ದಾಳಿ ಮಾಡಿದ್ದಾರೆ ಎಂದರೆ
ಸ್ಥಳೀಯರು ಇಂತಹ ಟಿಪ್ಸ್ ಕೊಡದೆ,
ಮುಖ್ಯ ರಸ್ತೆಯ ಪಕ್ಕದಲ್ಲಿ ಇದು
ಸಾಧ್ಯವೇ ಇಲ್ಲ. ವ್ಯವಸ್ಥಿತ
ಮಾಹಿತಿ ಜಾಲ ಕೆಲಸ ಮಾಡಿರುವುದು
ಸ್ಪಷ್ಟ. ಅನಂತನಾಗ್ ಜಿಲ್ಲೆಯ
ಖನ್ಪಾಲ್ ತುಂಬ ಕಣಿವೆಯ
ತಿರುವುಗಳ, ಹೆಸರಿಗೆ ಹೆದ್ದಾರಿ
ಆದರೂ ದುರ್ಗಮ ದಾರಿಯ ಪ್ರದೇಶ.
ಎಡಭಾಗದ ಪರ್ವತ ಪ್ರದೇಶಗಳಿಂದ
ನುಸುಳುವಿಕೆ ಸಾಧ್ಯವಿಲ್ಲ.
ಏನಿದ್ದರೂ ಮೊದಲೇ ಬೀಡು
ಬಿಟ್ಟಿರುವ ಉಗ್ರರು ತಂತ್ರ
ರೂಪಿಸಿಯೇ ಗುಂಡು
ಹಾರಿಸಿದ್ದಾರೆ ಅತ್ಯಂತ ನಿಖರ
ಮಾಹಿತಿಯ ಸುದ್ದಿ ಜಾಲವಿಲ್ಲದೆ
ಈ ದಾರಿಯಲ್ಲಿ ಕಾರ್ಯಚರಣೆ
ಸಾಧ್ಯವೇ ಇಲ್ಲ.

ಜೂನ್ 28 ಕ್ಕೇ ಆರಂಭವಾದ
ಯಾತ್ರೆಯಲ್ಲಿ ಈಗಾಗಲೇ ಒಂದು
ಲಕ್ಷ ಹದಿನೈದು ಸಾವಿರ
ಯಾತ್ರಿಗಳು ಸುರಕ್ಷಿತವಾಗಿ
ಹಿಂದಿರುಗಿದ್ದಾರೆ. ಇನ್ನು
ಶ್ರಾವಣ ಎಂದು ಕಾಯುತ್ತಿರುವವರ
ಸಂಖ್ಯೆ ಎರಡೂವರೆ ಲಕ್ಷ. ಇದನ್ನು
ಬರೆಯುವ ಹೊತ್ತಿಗೆ ಇತ್ತ
ಬಲ್ತಾಲ ಅತ್ತ ಪಿಸ್ಸುಟಾಪ್
ಎರಡೂ ಕಡೆಯಲ್ಲಿ ಯಾತ್ರಿಗಳನ್ನು
ತಡೆಹಿಡಿಯಲಾಗಿದೆ. ಕಾರಣ ದಾಳಿಯ
ತೀವ್ರತೆಗೆ ಯಾತ್ರಿಗಳನ್ನು
ರಕ್ಷಿಸಲು ಸೂಕ್ತ ಯೋಜನೆ
ರೂಪಿಸಲಾಗುತ್ತಿದೆ. ಸರಕಾರ
ಕೂಡಾ ಇನ್ನಿಲ್ಲದಂತೆ ಅಮರನಾಥ್
ಯಾತ್ರಿಕರಿಗೆ ರಕ್ಷಣೆಯನ್ನು
ಒದಗಿಸುತ್ತದಾದರೂ
ಎಲ್ಲೆಂದರಲ್ಲಿ ಸ್ಥಳೀಯ
ದೇಶದ್ರೋಹಿಗಳಿಗೆ
ಅನಾಹುತವೆಸಗಲು ನೂರಾರು
ದಾರಿಗಳಿವೆ. ಅದಕ್ಕಾಗೇ
ಯಾತ್ರಿಗಳನ್ನು ಕರೆದೊಯ್ಯುವ
ದುಡಿಯುವ ವರ್ಗದ ಅಮಾಯಕ ಶ್ರಮಿಕ
ಕಾಶ್ಮೀರಿ ಗಾಡಿ
ಹತ್ತುತ್ತಿದ್ದಂತೆ ಮೊದಲು
"ಟವಲ್ ಬಾಂದ ಲೀಜಿಯೇ"
ಎನ್ನುತ್ತಾನೆ. ಶ್ರೀನಗರದಿಂದ
ಬಲ್ತಾಲ ಅಥವಾ ಚಂದನವಾರಿ
ರಸ್ತೆಯ ಇಕ್ಕೆಲೆಗಳಿಂದ ಗಾಡಿಯ
ಮೇಲೆ ಯಾವಾಗ ಕಲ್ಲಿನ
ಸುರಿಮಳೆಯಾಗಿ ಏಟಾಗುತ್ತದೋ
ಗೊತ್ತಿರುವುದಿಲ್ಲ. ಅದಕ್ಕಾಗಿ
ಲಭ್ಯ ಇರುವ ಟವಲು, ಬೆಡ್ ಶೀಟು,
ಶಾಲು ಎಲ್ಲವನ್ನು ತಲೆ,ಮುಖ, ಮೈ
ಕೈಗೆಲ್ಲಾ ಸುತ್ತಿಕೊಂಡು
ಕೂರುವಂತೆ ಸೂಚಿಸುತ್ತಾನೆ.
ಉಳಿದಂತೆ ಗಾಜು ಒಡೆದುಕೊಂಡು
ಕಲ್ಲು ತಾಗಿದರೂ ಘಾಸಿಯಾಗದಿರಲಿ
ಎನ್ನುವ ಆಲೋಚನೆ ಅವನದ್ದು. ಆದರೆ
ಪಾಕಿಗಳು ಕದ್ದು ಪೂರೈಸುವ
ರೈಫಲ್ಲಿನೆದುರಿಗೆ ಅವೆಲ್ಲಾ
ಯಾವ ಲೆಕ್ಕ...?

ಚಂದನವಾರಿ ಶ್ರೀನಗರದಿಂದ 140
ಕಿ.ಮೀ. ದೂರವಿದ್ದು ಪಿಸ್ಸುಟಾಪ್,
ಝೊಜಿ ಬೈಲ್, ಶೇಷನಾಗ್, ವರ್ಬಾಲ್,
ಮಾಂಘುನ್ ಟಾಪ್, ಪಾಬಿಬೈಲ್,
ಪಿಸ್ಸುಟಾಪ್ ಮೂಲಕ ಸಂಗಮ
ತಲುಪಬಹುದಾಗಿದ್ದು ಉಗ್ರರ ಉಪಟಳ
ಈ ದಾರಿಯಲ್ಲೇ ಹೆಚ್ಚು ಆದರೆ
ಯಾತ್ರಿಗಳಿಗೆ ಧಾರ್ಮಿಕವಾಗಿ ಈ
ದಾರಿ ಬಗ್ಗೆ ಆಪ್ತತೆ ಜಾಸ್ತಿ.
ಬಲ್ತಾಲ ಶ್ರೀನಗರ-ಲೇಹ್
ಹೆದ್ದಾರಿಯಲ್ಲಿಇದ್ದು ವಾಹನ
ಸೌಲಭ್ಯವಿದೆ. ಈ ಬಲ್ತಾಲ್
ಬೇಸ್‍ಕ್ಯಾಂಪಿನ ಸರಿಯಾಗಿ
ಮೇಲ್ಗಡೆಯೇ ಜಿಜೋಲಿ ಪಾಸ್
ಹಾಯ್ದು ಹೋಗುತ್ತದೆ. ಇದೊಂದು
ಅಪ್ಪಟ ನೆಕ್ ಪ್ರದೇಶ. ಜಿಜೋಲಿ
ಪಾಸ್ ಭಯಾನಕವಾಗಿ ಪರ್ವತ
ಕುಸಿತಕ್ಕೊಳಗಾಗಿ ದಾರಿ
ಮುಚ್ಚಿಹೋಗುವ ಸಮಸ್ಯೆ
ನಿರಂತರವಾಗಿರುತ್ತಿದ್ದು,
ಅದನ್ನೂ ಕಾಯಬೇಕಾದ ಅನಿವಾರ್ಯತೆ
ನಮ್ಮ ಸೈನಿಕರದ್ದು.
ಮೇಲ್ಗಡೆಯಿಂದ ನಿಂತು ನೋಡಿದರೆ
ಬಲ್ತಾಲ ಕ್ಯಾಂಪು ಚಿಕ್ಕಚಿಕ್ಕ
ಆಟಿಕೆ ಗೂಡಿನಂತೆ
ಕಾಣಿಸುತ್ತದೆ. ಜಿಜೋಲಿಯಲ್ಲಿ
ಯಾವತ್ತೂ ಟಾರು ರಸ್ತೆ ಉಳಿದ
ದಾಖಲೆಯೇ ಇಲ್ಲ. ಕಳಚಿಬಿದ್ದ
ಪರ್ವತ ಜರುಗಿಸಿ ರಸ್ತೆ
ಸುಗಮಗೊಳಿಸಲು ಬುಲ್ಡೊಜರು,
ಜೆ.ಸಿ.ಬಿ.,ಗಳು ಸನ್ನದ್ಧವಾಗಿಯೇ
ಇರುತ್ತವೇ. ಅಷ್ಟು ಅತಂತ್ರತೆ
ಇರುವ 12800 ಅಡಿ ಎತ್ತರದ ಜಿಜೋಲಿ
ಪಾಸ್ ಅಮರನಾಥ್‍ಗೆ ಸಮಾನಾಂತರ
ಮತ್ತು ಎಡಭಾಗದಲ್ಲಿ ದುರ್ಗಮದ
ಆಳ ಕಣಿವೆ ಪಾಕಿಸ್ತಾನದ ಜೊತೆ
ಗಡಿ ಹಂಚಿಕೊಂಡಿದೆ. ಹಾಗಾಗಿ
ಇಲ್ಲಿ ಕಾವಲು ಮತ್ತು ರಕ್ಷಣೆ
ಎಷ್ಟು ಮುಖ್ಯವೋ ದುರ್ಗಮವಾದ
ಪರಿಸ್ಥಿತಿಯಲ್ಲೂ ಕಟ್ಟೆಚ್ಚರ
ಅನಿವಾರ್ಯ.

ಬಲ್ತಾಲ್‍ನಿಂದ ಸಂಗಮವರೆಗೆ ಹೆಲಿಕಾಪ್ಟರ್ ಸೇವೆ ಇಲ್ಲಿದ್ದು
ಅಕ್ಷರಶ: ಬಾಡಿಗೆಆಟೊರಿಕ್ಷಾದಂತೆ ಇವು
ಹಾರಾಡುತ್ತವೆ. ಹಾಗೆ ಏರುವ ಎತ್ತರವನ್ನು ಸಮಾನಾಂತರವಾಗಿ
ಬಾರ್ಡರ್ ಕಡೆಯಿಂದ ನಿರುಕಿಸಿ
ಗುರಿಗೆ ಎಟುಕಿಸಿಕೊಳ್ಳಬಹುದಾದ
ಸಾಧ್ಯತೆಯೂ ಸುಲಭ. ಹಾಗಾಗಿ ಈ
ಪ್ರದೇಶವನ್ನು ಸಿ.ಆರ್.ಪಿ.ಎ¥sóï.
ಕಟ್ಟೆಚ್ಚರದಿಂದ ಕಾಯುತ್ತದೆ
ಮತ್ತು ಸಧ್ಯಕ್ಕೆ ಸಲಾಹುದ್ದಿನ್
ಗುರಿ ಮಾಡಿಕೊಂಡಿರುವ ಪ್ರದೇಶವೂ
ಇದಾಗಿದ್ದು, ಅಂತಿಮವಾಗಿ ಇದ್ದ
ಬದ್ದ ಜನವೆಲ್ಲಾ ಉಗ್ರವಾದಕ್ಕೆ
ಎದ್ದು ನಿಲ್ಲುತ್ತೀವಿ ಎಂದು
ಕಲ್ಲೆಸೆಯಲು ನಿಲ್ಲತೊಡಗಿದರೆ
ಚೆಂದದ ಕಾಶ್ಮೀರ ಕಣಿವೆ
ಖಾಲಿಯಾಗದೆ ಏನು ಮಾಡೀತು.

Tuesday, July 11, 2017

ಕಾಶ್ಮೀರವೆಂಬ ಖಾಲಿ ಕಣಿವೆ..

ಅಲ್ಲಿ ಕೊಲೆಯಾದದ್ದು ಮಾನವನಲ್ಲ ಮನುಶ್ಯತ್ವ...

ಎರಡು ವಾರದ ಹಿಂದಿನ ಶುಕ್ರವಾರ ಬೆಳಗಾಗುವ ಮೊದಲು ಅಂದರೆ ಜೂನ್ 22 ರ ರಾತ್ರಿ ಹನ್ನೆರಡರ ಹೊತ್ತಿಗೆ ಅಲ್ಲಿ ಎಂದಿನಂತೆ ಈದ್ ಹಬ್ಬದ ಪ್ರಯುಕ್ತ ಶಬ್-ಈ-ಕದ್ರ ಎನ್ನುವ ಸಂಪೂರ್ಣ ರಾತ್ರಿ ನಡೆಸುವ ಪ್ರಾರ್ಥನೆ ನಡೆಸಲಾಗುತ್ತಿತ್ತು. ರಾತ್ರಿ ಹನ್ನೆರಡು ದಾಟಿ ಶುಕ್ರವಾರ ಕಾಲಿಡುತ್ತಿದ್ದರೆ ಕೆಲವರು ಮನೆಯತ್ತ ತೆರಳಲು ಆರಂಭಿಸುತ್ತಾರಾದರೂ ಹಬ್ಬದ ಸಂಭ್ರಮಕ್ಕೇನೂ ಕಮ್ಮಿ ಇರಲ್ಲ. ಆ ಸಮಯದಲ್ಲಿ ಮಸೀದಿಯಿಂದ ಹೊರಬೀಳುತ್ತಿದ್ದವರಿಗೆ, ಅಲ್ಲಿ ಚಲನವಲನದ ಮೇಲೆ ನಿಗಾ ಇರಿಸಿ, ರಾತ್ರಿ ತನ್ನ ಹಬ್ಬ ಬಿಟ್ಟು ಸಾರ್ವಜನಿಕ ಬಂದೋ ಬಸ್ತು ಮಾಡುತ್ತಾ ಮಸೀದಿಯ ಹೊರಗೆ ಕಾರ್ಯ ನಿರ್ವಹಿಸುತ್ತಿದ್ದ ಪೆÇೀಲಿಸು ಅಧಿಕಾರಿಯೊಬ್ಬ ಕಾಣಿಸಿದ್ದಾನೆ. ಹಾಗೆ ನೋಡಿದರೆ ಆ ಅಧಿಕಾರಿಯೇನೂ ಕದ್ದು ಚಿತ್ರಣವೇನೂ ಮಾಡುತ್ತಿರಲಿಲ್ಲ. ಮಾಹಿತಿಯ ಪ್ರಕಾರ ಅವನು ಮಸೀದಿಯವರ ಫೆÇೀಟೊಗ್ರಾಫಿ ಮಾಡಿದ ಎನ್ನುವುದು ಅಕ್ಷರಶ: ರೂಮರು ಹಬ್ಬಿದ್ದು, ಆತ ತನ್ನ ಪಾಡಿಗೆತಾನು ಬಹಿರಂಗವಾಗೇ ಮುಲಾಜಿಲ್ಲದೆ ಕಾಲೂರಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಲ್ಲಿನ ಕೆಲವು ಮತಾಂಧರಿಗೆ ತಪ್ಪಾಗಿ ಕಂಡಿದೆ. ಹೀಗೆ ಚಿತ್ರಿಸುವುದರ ಮೂಲಕ ಇವನು ಏನು ಮಾಡಲು ಹೊರಟಿದ್ದಾನೆ..? ಈತನೇನಾದರೂ ಹಿಂದುಸ್ತಾನಿ ಫೌಜಿನ ಮನುಶ್ಯನಾ ಎನ್ನುವ ಋಣಾತ್ಮಕಕಾರಿ ಸಂಶಯಕ್ಕೆ ಎಡೆ ಕೊಟ್ಟು ಅವನ ಮೇಲೆ ಹರಿಹಾಯ್ದು ಮೊಬೈಲು ಕಿತ್ತುಕೊಳ್ಳಲೆತ್ನಿಸಿದ್ದಾರೆ. 
ಅಷ್ಟಕ್ಕೂ ಇದೆಲ್ಲಾ ನಡೆದಿದ್ದು, ಇತಿಹಾಸ ಪ್ರಸಿದ್ಧ ಲಾಕ್‍ಚೌಕ್‍ನಿಂದ ಕೇವಲ ಐದೇ ಐದು ಕಿ.ಮೀ. ದೂರದಲ್ಲಿ. ಇದೇ ಲಾಲ್‍ಚೌಕದಲ್ಲಿ ಹಿಂದೊಮ್ಮೆ ಅಡ್ವಾನಿ ಭಾರತ ದ್ವಜ ಹಾರಿಸುವ ಅನಿವಾರ್ಯತೆ ಉಂಟಾಗಿತ್ತು. ಸುತ್ತಮುತ್ತ ತುಂಬಿದ ಮಾರುಕಟ್ಟೆ ರಾತ್ರಿಯಿಡಿ ವ್ಯವಹಾರದ ಜೊತೆಗೆ ಈ ತಿಂಗಳಲ್ಲಿ ಜಾತ್ರೆಯಂತಿರುತ್ತದೆ. ಶ್ರೀನಗರ-ಲೆಹ್ ಹೆದ್ದಾರಿಯಿಂದ ಒಂದೇ ಉಸುರಿಗೆ ಓಡಿ ತಲುಪುಬಹುದಾದ ಜಾಗ. ಅಲ್ಲಿಂದ ಎಡಕ್ಕೆ ನೋಡಿದರೆ ಶಂಕರಾಚಾರ್ಯ ಕೇಸರಿಧ್ವಜ ಪಟಿಸುತ್ತಿರುವುದು ಎಂಥಾ ಹೊತ್ತಿನಲ್ಲೂ ಸ್ಪಷ್ಟವಾಗೇ ಕಾಣಿಸುತ್ತದೆ. ಅದರ ಬುಡದಲ್ಲೇ ಕಾಶ್ಮೀರದ ಗವರ್ನರ್ ವಾಸಿಸುತ್ತಾರೆ. ತೀರ ಅದರ ಪಕ್ಕದಲ್ಲೇ ಕನ್ಯಾರ್ ಪೆÇೀಸ್ಟಿದೆ. ಬಲಕ್ಕೆ ಅಲೀಜಾನ್ ರಸ್ತೆಯ ಮಗ್ಗುಲಲ್ಲೆ ನಲ್‍ಮಾರ್ ರೋಡು. ಕೊಂಚ ಮೇಲಕ್ಕೆ ಪಾಲಿಪೆÇೀರಾ ಮತ್ತು ಸಂಪೂರ್ಣವಾಗಿ ಹಿಂದಕ್ಕೆ ಬಂದರೆ ಜಗತ್ಪ್ರಸಿದ್ಧ ದಾಲ್‍ಲೇಕ್ ಅದನ್ನು ಆವರಿಸಿಕೊಂಡ ಜನ ನಿಭಿಡ ಪ್ರದೇಶ ಇದೆಲ್ಲದರ ಮಧ್ಯೆ ಇರುವುದೇ ನೌಹಟ್ಟಾ ಜಾಮಿಯಾ ಮಸೀದಿ. ಅದರ ಕಾಂಪೌಂಡು ಹಾರಿದರೆ ಅದು ನೇರವಾಗಿ ಗಾಂಧಾರ್ ಬಾಲ್‍ಗೆ ಸಂಪರ್ಕ. ಈ ಎಲ್ಲಾ ಏರಿಯಾದಲ್ಲಿರುವುದು ಅಪ್ಪಟ ಮುಸ್ಲಿಂ ಸಮುದಾಯದ್ದೆ ಮೆಜಾರಿಟಿ.
ಇವತ್ತು ಯಾವುದೇ ಪೆÇೀಲಿಸು ಅಥವಾ ಭಾರತೀಯ ಸೈನಿಕರು ನಾಲ್ಕೈದು ಜನರ ಗುಂಪಿಲ್ಲದೆ ಯಾವ ಭಾಗದಲ್ಲೂ, ಅದರಲ್ಲೂ ಶ್ರೀನಗರದ ಉತ್ತರಕ್ಕೆ ಕಾಲಿಡುವುದೇ ಇಲ್ಲ. ಇರುವ ಎಲ್ಲರ ಬಳಿಯೂ ಕನಿಷ್ಟ ಸಾವಿರ ಜನರನ್ನು ಚದುರಿಸಬಲ್ಲಷ್ಟು ಆಯುಧ ಹೊತ್ತೆ ತಿರುಗುವ ಪರಿಸ್ಥಿತಿ ಇದೆ. ಮಾತೆತ್ತಿದ್ದರೆ ಕಲ್ಲೆಸೆಯುವ ನೀಚತನಕ್ಕಿಳಿದಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳ ಬೆಂಬಲಿತ ಪುಂಡರ ಪಡೆಯ ನೇರ ಗುರಿ ಭಾರತೀಯ ಸೈನಿಕರು ಮತ್ತು ಪೆÇೀಲಿಸರು. ವಿಚಿತ್ರವೆಂದರೆ ಇಲ್ಲಿ ಕಾರ್ಯ ನಿರ್ವಹಿಸುವ ಹೆಚ್ಚಿನ ಪೆÇೀಲಿಸರು ಅಧಿಕಾರಿಗಳೂ ಕೂಡ ಮುಸ್ಲಿಂರೇ. ಹೆಚ್ಚಾಗಿ ಶ್ರೀನಗರ ಮತ್ತು ಇತರ ಒಳಭಾಗದ ಎಲ್ಲಾ ಒಳಪಂಗಡಗಳ ಸ್ವಂತ ಧರ್ಮೀಯರೆ ಆದರೂ ಗಡಿಯಾಚೆಗಿನ ಭಯೋತ್ಪಾದಕರ ಮತ್ತು ಪಾಕಿಗಳ ಬೆಂಬಲ ಯಾವ ರೀತಿಯಲ್ಲಿದೆಯೆಂದರೆ ಅವನು ಮುಸ್ಲಿಂ ಆಗಿದ್ದರೂ ಭಾರತೀಯ ಪೆÇೀಲಿಸು ಅಥವಾ ಸರಕಾರಿ ಸೇವೆಯಲ್ಲಿದ್ದರೆ ಅವನನ್ನು ಕೂಡಾ ವಧಿಸುವುದಷ್ಟೆ ಗುರಿ ಎಂದೇ ನಿರ್ಧರಿಸಲಾಗುತ್ತಿದೆ. ಸ್ವತ: ಮುಸ್ಲಿಂ ಆಗಿದ್ದರೂ ಆವತ್ತು ಶುಕ್ರವಾರದ ಪವಿತ್ರ ದಿನವಾಗಿದ್ದರೂ, ಈದ್ ನಡೆಯುತ್ತಿದ್ದಾಗಲೇ ತೀರ ಅಮಾನುಷವಾಗಿ ಕಲ್ಲಿನಿಂದ ಹೊಡೆದು, ಬೆತ್ತಲೆಗೊಳಿಸಿ ಪೆÇೀಲಿಸು ಅಧಿಕಾರಿಯನ್ನು ಸಾಯಿಸುವ ಮನಸ್ಥಿತಿಯವರು ಯಾವ ದೇಶಕ್ಕಾದರೂ ನಿಷ್ಠರಾದಾರೆಯೇ..? 
ಆವತ್ತು ನಡೆದದ್ದೂ ಅದೇ. ಯಾವಾಗ ಎದುರಿಗೆ ಪೆÇೀಲಿಸು ಅಧಿಕಾರಿಯೊಬ್ಬ ಮಫ್ತಿಯಲ್ಲಿದ್ದಾನೆ ಮತ್ತು ಮಸೀದಿಯ ಫೆÇೀಟೊ ತೆಗೆಯುತ್ತಿದ್ದಾನೆ ಎನ್ನುವ ಸುದ್ದಿ ಹಬ್ಬಿತೋ ಕೇವಲ ಐದೇ ನಿಮಿಷದಲ್ಲಿ ಮಸೀದಿಯಿಂದ ಹೊರಬಂದ ಜನರ ಗುಂಪು ಮುಖ್ಯವಾಗಿ ತೀರ ಜನನಿಬಿಢ ಗೇಟಿನೆದುರಿಗೆ ಹಿಡಿದು ಬಡಿಯಲು ಮುಂದಾಗಿದೆ. ಸುತ್ತ ನೋಡಿದರೆ ಎಲ್ಲಾ ಕಡೆಯಲ್ಲೂ, ಸುತ್ತುವರೆಯುತ್ತಿರುವವರ ಮುಖದ ಮೇಲೆ ಪೈಶಾಚಿಕ ಕಳೆ ಗುರುತಿಸಿಬಿಟ್ಟಿದ್ದಾನೆ ಡಿ.ಎಸ್.ಪಿ. ಮಹಮದ್ ಅಯುಬ್ ಪಂಡಿತ್. ಅದರಲ್ಲೂ ಪೆÇೀಲಿಸು ಅಧಿಕಾರಿಗಳಿಗೆ ಮುಖ ನೋಡಿದರೆ ಅರಿಯುವ ಕಲೆ ಕರಗತವಾಗಿ ಹೋಗಿರುತ್ತದೆ. ಕೂಡಲೇ ಅಪಾಯದ ಅರಿವಾಗಿದೆ. ಸುತ್ತಲೂ ಈಗಲೋ ಆಗಲೋ ಒಂದು ಮಾರಣಹೋಮ ಮಾಡಿ, ಮನುಷ್ಯನೊಬ್ಬನ ಮರಣಾನಂದದ ಆನಂದ ಅನುಭವಿಸಲು ತಯಾರಾಗಿ ನಿಂತಿದ್ದ ಅಕ್ಷರಶ: ಜೀವವಿರೋಧಿಗಳ ಗುಂಪು ಸುತ್ತುವರೆದಿದ್ದು ನೋಡುತ್ತಿದ್ದಂತೆ ಒಂದು ಸಣ್ಣ ಗ್ಯಾಪ್ ಕ್ರಿಯೇಟ್ ಮಾಡಿಕೊಳ್ಳಲು ತಮ್ಮ ಸರ್ವೀಸ್ ಪಿಸ್ತೂಲ್ ತೆಗೆದು ಬೆದರಿಸಿದ್ದಾರೆ. ಹಾಗೆ ಅವಕಾಶ ಸಿಗುತ್ತಿದ್ದಂತೆ ತಪ್ಪಿಸಿಕೊಳ್ಳುವ ಯೋಚನೆಯಲ್ಲಿ ಮಹಮದ್ ಇದ್ದರೆ, ಎಲ್ಲದಕ್ಕೂ ತಯಾರಾಗೇ  ಇದ್ದ ಕಲ್ಲೆಸೆಯುವ ಪುಂಡರ ಪಡೆ ಅದಕ್ಕೆ ಬಗ್ಗದೆ ಗುಂಡು ಹಾರಿಸಲಿಕ್ಕಿಲ್ಲ ಎಂದು ಮುನ್ನುಗ್ಗುಲು ನೋಡಿದೆ. ಅನಿವಾರ್ಯವಾಗಿ ಅವರನ್ನು ಚದುರಿಸಲು ಮೂರ್ನಾಲ್ಕು ಗುಂಡು ಹಾರಿಸಿದ್ದಾರೆ ಅಯುಬ್. ಅದು ಕೆಲವರಿಗೆ ತಗುಲಿ ಗಾಯವೂ ಆಗಿದೆ. ಅಕಸ್ಮಾತ್ ಅಲ್ಲಿಂದ ತಪ್ಪಿಸಿಕೊಳ್ಳಲು ಯಾರನ್ನಾದರೂ ಕೊಲ್ಲಲೇ ಬೇಕಿದ್ದರೆ ಅಯುಬ್ ನೇರವಾಗಿ ಅದೂ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಎದುರಿಗೇ ಲಭ್ಯ ಇದ್ದವರ ಎದೆಗೆ ಗುಂಡಿಕ್ಕಬಹುದಿತ್ತು. ಹಾಗೆ ಮಾಡಿದ್ದರೆ ಸಾಲುಸಾಲಾಗಿ ನಾಲ್ಕೈದು ಹೆಣಗಳು ಉದುರುತ್ತಿದ್ದವು. ಅದರೆ ಹಾಗೆ ಮಾಡದೆ ಹೋದದ್ದೇ ತಪ್ಪಾಯಿತಾ...? ಸ್ವತ: ಬಲಿಯಾಗಿಬಿಟ್ಟಿದ್ದಾರೆ ಒಬ್ಬ ಅಧಿಕಾರಿ. 
ಎಲ್ಲೆಡೆಯಿರುವ ಅಕ್ರಮಿಸಿದ ತಂಡ ಹಿಂದಿನಿಂದ ದಬ್ಬಿಕೊಂಡು ಎಳೆದಾಡಿ, ಮೈಯೆಲ್ಲಾ ಬಟ್ಟೆ ಹರಿದು ಹಾಕಿ ಬೆತ್ತಲೆಗೊಳಿಸಿ ಸೇರಿದ್ದ ನೂರಾರು ಜನರು ನೋಡುತ್ತಿದ್ದಂತೆ ಎಂಟೂ ದಿಕ್ಕಿನಿಂದ ಕಲ್ಲು ಹೊಡೆದು ಚರಂಡಿಗೆ ದಬ್ಬಿ ಅಲ್ಲೂ ಕಲ್ಲುಗಳನ್ನು ಎತ್ತಿ ಹಾಕಿ ಅರ್ಧ ಗಂಟೆಯ ಜೀವ ಹಿಂಸೆಯಲ್ಲಿ, ಕರ್ತವ್ಯ ನಿರತ ಪೆÇೀಲಿಸು ಅಧಿಕಾರಿಯ ಜೀವವನ್ನು ಹೊಸೆದು ಹಾಕಿದ್ದಾರೆ. ಅಲ್ಲಿಗೆ ಮಹಮದ್ ಅಯುಬ್ ಹುತಾತ್ಮರಾಗಿದ್ದಾರೆ. ಬೆಳಿಗ್ಗೆ ಸುದ್ದಿ ಗೊತ್ತಾಗಿ ಪೆÇೀಲಿಸರು ಧಾವಿಸುವ ಹೊತ್ತಿಗೆ ಮುಖ ಯಾವುದು ದೇಹ ಯಾವ ಕಡೆಗಿದೆ ಎನ್ನುವುದೇ ಗೊತ್ತಾಗದಷ್ಟು ಬರ್ಬರವಾಗಿ ಅವರ ದೇಹ ಚರಂಡಿಯಲ್ಲಿ ಕಲ್ಲುಗಳ ಮಧ್ಯೆ ಹೂತು ಹೋಗಿದೆ. ಕೈ ಕಾಲುಗಳನ್ನು ಮುರಿದು ಹಾಕಲಾಗಿತ್ತು. ತೊಡೆಯ ಮೂಳೆ ಮುರಿದ ಹೊಡೆತಕ್ಕೆ ಅದ್ಯಾವ ಪರಿಯಲ್ಲಿ ಬಾತುಹೋಗಿತ್ತೆಂದರೆ ನೋಡಿದವರೆಲ್ಲಾ ಹೈರಣಾಗಿದ್ದಾರೆ. ಕಲ್ಲಿನೇಟಿಗೆ ಬುರುಡೆ ಒಂದು ಕಡೆ ಸೀಳಿಹೋಗಿದೆ. ಹಲ್ಲುಗಳನ್ನು ಮುರಿದು ಹಾಕಲಾಗಿತ್ತು. ಜಜ್ಜಿದ ಎಡಗಣ್ಣು ನೋಡುತ್ತಿದ್ದರೆ ಪಾಪ ಮಹಮದ್ ಅದಿನ್ಯಾವ ಪರಿಯಲ್ಲಿ ಹಿಂಸೆ ಅನುಭವಿಸಿದರೋ ದೇವರಿಗೆ ಗೊತ್ತು. ಪೆÇೀಲಿಸರು ಶ್ರಮಪಟ್ಟು ಎತ್ತಿ ತಂದಿದ್ದಾರೆ. ಪೂರ್ತಿ ರಾಜ್ಯಕ್ಕೆ ಈಗ ಮು.ಮ.ಗಳು ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣ ಪೆÇೀಲಿಸರು ಮತ್ತು ಸೈನಿಕರನ್ನು ಇನ್ನಿಲ್ಲದಂತೆ ರೊಚ್ಚಿಗೆಬ್ಬಿಸಿದ್ದು ಕಣಿವೆ ಇನ್ನಷ್ಟು ಖಾಲಿಯಾಗುವ ಸೂಚನೆ ಸ್ಪಷ್ಟವಾಗಿದೆ.
ಕೊನೆಯಲ್ಲೂ ಉಳಿದು ಹೋಗುವ ಪ್ರಶ್ನೆಯೆಂದರೆ ಮೊದಲೆಲ್ಲ ಮುಸ್ಲಿಂ ಅಂದರೆ ವಿನಾಯಿತಿ ದೊರೆಯುತ್ತಿದ್ದ ಕ್ರೂರ ಆತಂಕವಾದಕ್ಕೆ ಈಗ ಆ ವಿನಾಯಿತಿಯೂ ಇಲ್ಲವೆಂದರೆ ಅವರ ವಾದಗಳೀನೆ ಇರಲಿ ಅತ್ಯಂತ ಮಾನವೀಯ ಧರ್ಮ ಎನಿಸಿಕೊಂಡಿರುವ ಮುಸ್ಲಿಂ ಕೂಡಾ ತನ್ನ ಧಾರ್ಮಿಕ ಅಂಧತೆಗೆ ಮಾನವೀಯತೆ ಬಲಿಕೊಡುತ್ತಿದೆಯಾ..? ಹೌದೇ ಆಗಿದ್ದರೆ ಅದನ್ನು ಸರಿ ಪಡಿಸುವ ಜವಾಬ್ದಾರಿಯೂ ತುರ್ತಾಗಿ ತೆಗೆದುಕೊಳ್ಳಬೇಕಿರುವುದೂ ಕಾಶ್ಮೀರಿಗಳೆ. ಆದರೆ ಕೇವಲ ಹತ್ತೇ ವರ್ಷದಲ್ಲಿ ಜನಸಂಖ್ಯಾ ಅನುಪಾತದಲ್ಲಿ ಅನಾಹುತಕಾರಿ ವ್ಯತ್ಯಾಸ ತಂದಿಟ್ಟುಕೊಂಡಿರುವ ಕಾಶ್ಮೀರಿಗಳಿಗೆ ಆ ಬುದ್ಧಿಮತ್ತೆಯ ಮಾನವೀಯತೆ ಇದೆಯಾ..? ಅಸಲಿಗೆ ಜಗತ್ತಿನ ಯಾವ ಭಾಗದಲ್ಲೂ ಹೀಗೆ ಸ್ವಂತ ದೇಶದ ಅನ್ನ ತಿಂದೂ ದ್ರೋಹ ಬಗೆಯುತ್ತಿರುವ ಉದಾ.ಈ ಮಟ್ಟದಲ್ಲಿ ಇವತ್ತು ಕಾಣಸಿಗುತ್ತಿಲ್ಲ. ಕಾಶ್ಮೀರ ಖಾಲಿಯಾಗದೇ ಏನು ಮಾಡೀತು...

Tuesday, July 4, 2017


ಈ ಲೇಖನ ಓದುವ ಮೊದಲೊಮ್ಮೆ ನಾವು ಅಂತರಾಷ್ಟ್ರೀಯ ರಾಜಕಾರಣದ ಕೆಲವು ಮಜಲುಗಳನ್ನು ಅರಿತುಕೊಂಡಲ್ಲಿ ಇದ್ದಕ್ಕಿದ್ದಂತೆ ಯಾಕೆ ಚೀನಾ ನಮ್ಮ ಕೈಲಾಸ ಪರ್ವತ ಯಾತ್ರಿಗಳ ಕುತ್ತಿಗೆಯ ಮೇಲೆ ಕೂರುತ್ತಿದೆ ಎಂದು ಗೊತ್ತಾಗುತ್ತದೆ. ಇಂತಹದ್ದಕ್ಕೆಲ್ಲಾ ಚೀನಾದ ಕ್ಯಾತೆ ತೆಗೆಯುವ ಕೆಲಸಕ್ಕೆ ಇಂಬು ನೀಡಿದ್ದು ಒಳಗೊಳಗೆ ಹಿಕಮತ್ತು ನಡೆಸುವ ಪಾಪಿ ಪಾಕಿಸ್ತಾನ ಎಂಬುದೀಗ ರಹಸ್ಯವಾಗುಳಿದಿಲ್ಲ. ಕಾರಣ ಅನಾಮತ್ತಾಗಿ ತಿಂಗ ಳೊಪ್ಪತ್ತಿನಲ್ಲಿ 43 ಉಗ್ರಗಾಮಿಗಳನ್ನು ಹುಡುಹುಡುಕಿ ಕತ್ತರಿಸುತ್ತಿರುವ ಭಾರತೀಯ ಸೈನ್ಯದ ರುಬಾಬಿಗೆ ತೋಪೆದ್ದಿರುವ ಪಾಕಿಸ್ತಾನಕ್ಕೆ ಮತ್ತದೆ ಮುರಾಮೋಸದ ಕಾರಾಸ್ಥಾನಕ್ಕೆ ಸಿಕ್ಕ ನೆಪವೇ ಹಿಂದೂಗಳ ಮೇಲೆ ಆಕ್ರಮಣಕಾರಿ ನೀತಿಯನ್ನನುಸರಿಸುವುದು. ಹಾಗಾಗೇ ಅದು ಚೀನಾದ ಕೀವಿಯೂದಿದೆ. ಇತ್ತ ಅಮರನಾಥ್ ಆರಂಭವಾಗುವ ಹೊತ್ತಿಗೆ ಅತ್ತ ಚೀನಾ ಗಡಿಯನ್ನು ಮುಚ್ಚಿ ಬಿಡಿ. ನಾವು ಇಲ್ಲಿ ದಾಳಿ ಮಾಡಿ ಅಶಾಂತಿ ಹುಟ್ಟಿಸುತ್ತೇವೆ ಅತ್ತ ಕೈಲಾಸ ಪರ್ವತವೂ ಒಬ್ಬರಿಗೂ ದಕ್ಕಬಾರದು ಆಗ ಹಿಂದೂಗಳಲ್ಲೇ ಒಳಗೊಳಗೇ ಹೊಗೆಯಾಡುವ ಕ್ರೋಧ ಅಲ್ಟಿಮೇಟ್ಲಿ ಅದು ಕೇಂದ್ರ ರಾಜಕಾರಣದ ಮೇಲೆ ಪ್ರಭಾವ ಬೀರುತ್ತದೆ. ಹಾಗೆ ಬೀರುವ ಹೊತ್ತಿಗೆ ವಿರೋಧ ಪಕ್ಷ ಇಂತಹ ಭಾವನಾತ್ಮಕ ವಿಷಯವನ್ನು ಹಿಡಿದುಕೊಂಡು ರಸ್ತೆಗಿಳಿಯುತ್ತದೆ. ಸುಲಭಕ್ಕೆ ಆಗದ ಲೆಕ್ಕಾಚಾರ ಎನ್ನಿಸಿದರೂ ಸರಹದ್ದಿನ ರಾಜಕೀಯ ಮತ್ತು ಅಂತರಾಶ್ಟ್ರೀಯ ರಾಜಕೀಯದ ಬಗೆಗೆ ಅವಗಾಹನೆ ಇರುವವರಿಗೆ ಇದು ಸುಲಭಕ್ಕೆ ಅರ್ಥವಾಗುತ್ತದೆ. ಹಾಗೆಂದು ಚೀನಾಕ್ಕೂ ಇದೊಂದು ನೆಪ ಬೇಕೆ ಇತ್ತು. ಭಾರತ ಟಿಬೇಟ್ ಬೆಂಬಲಕ್ಕೆ ನಿಲ್ಲುವುದರೊಂದಿಗೆ, ದಲೈಲಾಮಾರನ್ನು ಸಾಕುತ್ತಿರುವುದು ಇನ್ನಿಲ್ಲದ ಗಾಯವಾಗಿ ಚೀನಾದ ತೆಕ್ಕೆಯೊಳಗೆ ಕಳಿತು ಕೂತಿದೆ. ಯಾವತ್ತಿದ್ದರೂ ದಲೈಲಾಮ ತನ್ನ ವಶಕ್ಕೆ ದಕ್ಕದಂತೆ ಕಯುತ್ತಿರುವುದೇ ಭಾರತ ಎನ್ನುವದರ ಜೊತೆಗೆ ತನ್ನ ವಿವಾದಾತ್ಮಕ ಅಂದರೆ ಟಿಬ್ಬೇಟಿಗೆ ಹತ್ತಿರವಿರುವ ಸ್ವಾಯತ್ತ ಪ್ರದೇಶಗಳಲ್ಲಿ ಲಾಮಾ ಪ್ರವೇಶವನ್ನೂ ಅದು ಸಹಿಸುತ್ತಿಲ್ಲ. 
ಇದಕ್ಕೆ ಬರೆ ಎಳೆದಂತೆ ಇತ್ತ ನೇಪಾಳದ ಗಡಿಗೂ ಕಾಯ್ದ ಹೆಂಚಿನಂತಹ ಅರುಣಾಚಲದ ಸರಹದ್ದಿಗೂ  ಲಾಮಾ ಕಾಲಿಟ್ಟುಬಿಟ್ಟರು ನೋಡಿ. ಗಾಯಕ್ಕೆ ಕಡ್ಡಿ ಇಟ್ಟು ತಿರುಪಿದಂತೆ ಚೀನಾ ಎದ್ದು ಕುಳಿತುಬಿಟ್ಟಿದೆ. ಇವತ್ತು ಲಾಮಾ ನಮ್ಮ ಭಾರತದಲ್ಲಿ ರಾಜಕೀಯ ಆಶ್ರಯದಲ್ಲಿದ್ದರೂ ತನ್ನ ಮಾಹಿತಿ ಅಥವಾ ಅನುಮತಿ ಇಲ್ಲದೆ, ತನ್ನ ಇಚ್ಚೆಯಂತೆ ಎಲ್ಲೆಂದರಲ್ಲಿ ತಿರುಗಬಾರದು ಎಂದೇ ಪ್ರತಿಪಾದಿಸುತ್ತಾ ಬಂದಿದೆ ಚೀನಾ. ಹಾಗಿದ್ದಾಗ ಅರುಣಾಚಲದ ಅದೂ ತೀರ ಸರಹದ್ದಿನ ಪ್ರದೇಶಕ್ಕೆ ಭೇಟಿಕೊಟ್ಟು ಸಹಸ್ರಾರು ಟಿಬೇಟಿಯನ್ನರ ಮನದಲ್ಲಿ ಮತ್ತೊಮ್ಮೆ ದೀಪ ಉರಿಸಿಬಿಟ್ಟರಲ್ಲ ಅಗ್ನಿಗೆ ತುಪ್ಪ ಸುರಿದಂತಾಗಿ ಹೋಗಿದೆ. ಹಾಗಾಗಿಯೇ ಅದು ಬೇರೆ ರೀತಿಯಲ್ಲಿ ಭಾರತವನ್ನು ಕೆಣಕಲು ಯತ್ನಿಸುತ್ತಿದೆ. ಈಗಾಗಲೇ ಅರುಣಾಚಲ ಮತ್ತು ತವಾಂಗ್ ಸೆಕ್ಟರ್ ಮೇಲೆ ಡ್ರೊನ್ ಸೇರಿದಂತೆ ಮಿಲಿಟರಿ ಕ್ರಾಫ್ಟರ್ ಹಾರಿಸಿದ್ದೂ ಅಲ್ಲದೆ ಬಹಿರಂಗವಾಗೇ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ಸರ್ವ ರೀತಿಯ ಕಾರ್ಯಗಳಿಗೂ ನಿರುಮ್ಮಳವಾಗಿ ಬೆಂಬಲ ನೀಡುತ್ತಿದೆ. ಭಾರತದ ಸೈನಿಕರು ಅಗ್ಡಿ ಆಕ್ರಮಿಸಿದ್ದಾರೆಂದು ಕ್ಯಾತೆ ತೆಗೆದು ನಾಥುಲಾ ಪಾಸ್ ಶಾಸ್ವತವಾಗಿ ಬಂದ್ ಮಾಡುವ ಬೆದರಿಕೆ ಒಡ್ಡುತ್ತಿದೆ. ಪ್ರಾಚೀನ ಸಿಲ್ಕ್ ರೂಟ್ ಇದೆಯಲ್ಲ ಅದೇ ಈ ನಾಥುಲಾ ಪಾಸ್ ಅಂದರೆ ಇದರ ಇಂಪಾರ್ಟೆನ್ಸು ಅರ್ಥವಾದೀತು. 
ಹೀಗೆ ಚೀನಾ ಟಿಬೆಟ್, ತನ್ನ ಭಾಗವೆಂದು ಭಾವಿಸಿರುವ ಅರುಣಾಚಲ ಮತ್ತು ದಲೈಲಾಮ ಎಂಬ ತ್ರಿಕೋನವನ್ನು ಎದುರಿಗಿಟ್ಟುಕೊಂಡು ವಿಶ್ಲೇಶಿಸಿದರೆ ಇತಿಹಾಸದುದ್ದಕ್ಕೂ ಚೀನಾ ಹೀನಾಯ ಹೆಜ್ಜೆಗಳನ್ನೆ ಅನುಸರಿಸಿದ್ದು ಸ್ಪಷ್ಟ. ನೆಹರುವಿನ ಅತೀ ನಂಬಿಕೆಯ ಪಂಚಶೀಲ ತತ್ವಗಳನ್ನು ಮುರಿದು 1962 ರಲ್ಲಿ ಭಾರತದೊಳಕ್ಕೆ ತೀರ ವ್ಯವಸ್ಥಿತವಾಗಿ ತವಾಂಗ್ ಕಡೆಯಿಂದ ನುಗ್ಗಿ ಬಂದ ಚೀನಿಯರು ಅನಾಮತ್ತಾಗಿ ಕೈಲಾಸ ಸೇರಿದಂತೆ ಸಾವಿರಾರು ಕಿ.ಮೀ. ಪ್ರದೇಶ ಅತಿಕ್ರಮಿಸಿದರಲ್ಲ ಅದಾವುದೂ ಇವತ್ತು ಇಲ್ಲಿದ್ದೇ ಬೆಂಬಲಿಸುವ ಕಮ್ಮಿನಿಷ್ಠೆಗಳಿಗೆ ಅರಿವಾಗುತ್ತಲೇ ಇಲ್ಲ. ಆಗಿನ ಸರಕಾರದಲ್ಲಿದ್ದವರು ಸರಿಯಾದ ನಿರ್ಣಯ ತೆಗೆದುಕೊಂಡಿದ್ದರೆ ಇವತ್ತು ಶಿಗಾಟ್ಸೆ ನಮ್ಮ ವಶದಲ್ಲಿರುತ್ತಿತ್ತು ಜೊತೆಗೆ ಮಾನಸ ಸರೋವರ ಮತ್ತು ಕೈಲಾಸ ಪರ್ವತ ಕೂಡಾ ನಮ್ಮದಾಗೇ ಇರುತ್ತಿದ್ದವು. 
ಇತ್ತ ಈಗಲೂ ಭಾರತ ತನ್ನ ಆಡಳಿತ ಭಾಗವಾದ ಅರುಣಾಚಲದಲ್ಲಿ ಅಭಿವೃದ್ಧಿಯ ಕಾರ್ಯ ಆರಂಭಿಸಿದಾಗೆಲ್ಲಾ ಕಾಲು ಕೆದರುತ್ತಲೇ ಇದೆ. ಕಾರಣ ಅದರ ದೃಷ್ಟಿಯಲ್ಲಿ ಚೀನಾದ ಭಾಗ ಅದು. ಅಸಲಿಗೆ ಚೀನಿಯರದ್ದು ಟಿಬೇಟಿನೊಂದಿಗೆ ಆರೇಳು ಶತಮಾನದ ವೈರತ್ವ. ಅದು ಮುಂದುವರೆದ ಭಾಗವಾಗಿ ಚೀನಿಯರನ್ನು ಎದುರಿಸಲಾಗದೆ ಟಿಬೆಟಿಯನ್ನರ ಗುರು "ತುಬ್ಟೆನ್ ಗಾಟ್ಸೊ" ಭಾರತಕ್ಕೆ ಓಡಿ ಬಂದಿದ್ದರು. ಆಗ ಬ್ರಿಟೀಷರ ಒಪ್ಪಂದದ ಪ್ರಕಾರ ತವಾಂಗ್ ಸೆಕ್ಟರ್ ಸೇರಿದಂತೆ ಹತ್ತು ಸಾವಿರ ಚ.ಕಿ.ಮೀ. ಭೂಮಿಯನ್ನು ಅರುಣಾಚಲದ ರಾಜ್ಯಕ್ಕೆ ಸೇರಿಸಿ ಅದನ್ನು ಗಡಿಯಾಗಿಸಲು ಟಿಬೇಟ್ ಬದ್ಧವಾಗುವುದರೊಂದಿಗೆ ಇತಿಹಾಸ ಪ್ರಸಿದ್ಧವಾದ ಮ್ಯಾಕ್‍ಮೋಹನ ಲೈನ್ ಐತಿಹಾಸಿಕ ದ್ವೇಷಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಚೀನಿ ನಾಯಕ 1950 ರ ಸುಮಾರಿಗೆ ಏಕ ಪಕ್ಷೀಯವಾಗಿ ಟಿಬೇಟ್ಟಿಗೆ ನುಗ್ಗಿ ಝೇಡಾಂಗ್‍ನ್ನು ವಶಪಡಿಸಿಕೊಂಡುಬಿಟ್ಟ. ಆಗ ನಡೆದ ದಾಳಿಯ ಭಿಕರತೆಯನ್ನು ಎದುರಿಸಲಾಗದ "ದೇವ ರಾಜ" ದಲೈಲಾಮ ಭಾರತಕ್ಕೆ ತನ್ನ ಬೆಂಬಲಿಗರೊಂದಿಗೆ ರಾಜಕೀಯ ಅಶ್ರಯ ಪಡೆದು ಇಲ್ಲಿಂದಲೇ ರಾಜಕೀಯ ನಿಯಂತ್ರಿಸತೊಡಗಿದ್ದು ಇವತ್ತಿಗೂ ಚೀನಿಯರ ಪಾಲಿಗೆ ಕೆದರುತ್ತಲೇ ಇರುವ ಹುಣ್ಣು. ಅಲ್ಲಿಂದ ಇಲ್ಲಿವರೆಗೆ ಹಲವು ಹೋರಾಟದ ಮಧ್ಯೆ ಪಾಕಿಸ್ತಾನದಲ್ಲಿ ನಿರಂತರವಾಗಿ ಭಾರತೀಯರನ್ನು ಹಣಿದು ದೇಶ ಖಾಲಿ ಮಾಡಿಸಿದಂತೆ, ಟಿಬೇಟಿನಲ್ಲಿ ಸುಮಾರು ಐನೂರು ಚಿಲ್ರೆ ಬೌದ್ಧ ಕೇಂದ್ರಗಳನ್ನು ನಾಶ ಮಾಡಿದ್ದಲ್ಲದೆ ಟಿಬೇಟಿಯನ್ನರನ್ನು ಪರಕೀಯರನ್ನಾಗಿಸಿತು. ವಿಶೇಷ ಪೆÇ್ರೀತ್ಸಾಹದ ಮೂಲಕ ಚೀನಿಯರನ್ನು ಟಿಬೇಟಿನಲ್ಲಿ ನೆಲೆಗೊಳಿಸಿ ಅಲ್ಲೆಲ್ಲಾ ಬಹುಸಂಖ್ಯಾತರನ್ನಾಗಿಸಿದೆ. ಇಷ್ಟೆಲ್ಲಾ ಮಾಡಿ ತನ್ನ ಅನುಕೂಲಕ್ಕೆ ಟಿಬೇಟ್ ಚೀನಿಯರ ಅವಿಭಾಜ್ಯ ಅಂಗ ಎನ್ನುವ ಅದು ಕಾಶ್ಮೀರ ವಿಷಯಕ್ಕೆ ಬಂದಾಗ ಪಾಕಿಗಳ ಪರ ಒಲವು ತೋರಿಸುತ್ತಾ ಇಬ್ಬಂದಿತನ ತೋರುತ್ತದೆ. ಈಗ ಎಲ್ಲಾ ಮುಗಿದು ಯಾವುದಕ್ಕೂ ಮೋದಿ ಸರಕಾರ ಕ್ಯಾರೇ ಅನ್ನದೇ ಅಂತರಾಷ್ಟ್ರೀಯಮಟ್ಟದಲ್ಲಿ ಭಾರತಕ್ಕೊಂದು ಇಮೇಜು ಸೃಷ್ಠಿಸುತ್ತಿದ್ದರೆ ಅದೀಗ ನುಂಗಲಾರದ ತುತ್ತಾಗಿ ನಾಥುಲಾ ಪಾಸ್ ಮುಚ್ಚುವ ಮೂಲಕ ಕಾಲು ಕೆದರಿದೆ. 
ಅಸಲಿಗೆ ನಾವು ಹೋಗಿ ಬರುವುದರಿಂದ ಚೀನಾಕ್ಕೇನೂ ಯಾವುದೇ ಲುಖ್ಸಾನಾಗಲಿ, ಅನಾವಶ್ಯಕ ರಾಜಕೀಯ ಸಮಸ್ಯೆಯಾಗಲಿ ಯಾವತ್ತೂ ಮಾನಸ ಸರೋವರ ಯಾತ್ರೆಯಿಂದ ಉಧ್ಬವವಾದುದ್ದೇ ಇಲ್ಲ. ಆದರ ಬದಲಾಗಿ ನೀವು ನಂಬುತ್ತೀರೋ ಇಲ್ಲವೋ ಪ್ರತಿ ಯಾತ್ರಿಯ ತಲೆಯ ಮೇಲೂ ಸುಮಾರು ಇಪ್ಪತ್ತು ಸಾವಿರ ಚಿಲ್ರೆ ಟ್ಯಾಕ್ಸ್‍ನ್ನು ವಸೂಲಿ ಮಾಡುವುದರ ಜೊತೆಗೆ ಅಲ್ಲಿನ ಎರಡೂವರೆ ಸಾವಿರಕ್ಕೂ ಮಿಗಿಲು ಕೂಲಿಗಳು ಮತ್ತು ರೆಸ್ಟೋರೆಂಟ್‍ನವರೂ ಸೇರಿದಂತೆ ಪ್ರತಿ ವಿಭಾಗದ ಕೆಲಸಗಾರರು ಒಂದು ಯಾತ್ರೆಯ ಅವಧಿಯಲ್ಲಿ ಅನಾಮತ್ತಾಗಿ ಒಂದು ಲಕ್ಷ ರೂ. ಯನ್ನು ಕೇವಲ ಎರಡು ತಿಂಗಳಲ್ಲಿ ದುಡಿದುಬಿಟ್ಟಿರುತ್ತಾರೆ ಮತ್ತು ಇಂತಹ ಬಂಪರ್ ಲಾಭ ಅವರ ಜೀವಮಾನದಲ್ಲಿ ಯಾವತ್ತೂ ಕೈಲಾಸ ಯಾತ್ರೆಯ ಹೊರತಾಗಿ ಬರುವುದೇ ಇಲ್ಲ. ಅದರೆ ಚೀನಿಯ ರಾಜಕೀಯದೆದುರಿಗೆ ಇದೆಲ್ಲಾ ಗೌಣ. ಗಂಡಾಂಘ್ ಮತ್ತು ಶಿಗಾಟ್ಸೆಯ ಹೋಟೆಲಿನ ಆಮದನಿ ಅದರ ವರ್ಶದ ಬಜೆಟ್ ದಾಟುತ್ತದೆ.( ಇಲ್ಲಿಯವರೆಗೆ ಚೀನ ರೈಲು ನಿಲ್ದಾಣ ದ ಲೈನು ಎಳೆದುಕೊಂಡು ಬಂದಿದೆ. ಈ ನಿಲ್ದಾಣದಲ್ಲಿ ದಿನಕ್ಕೆ ಎರಡು ಮತ್ತೊಂದು ಜನರೂ ಪ್ರಯಾಣಿಸುವುದಿಲ್ಲ ನೆನಪಿರಲಿ ಅದರೆ ತೀರ ಭಾರತದ ತುದಿಗೆ ಸೈನಿಕರು ಮತ್ತು ಸರಕನ್ನು ಸಾಗಿಸಲು ಲಾಸಾದಿಂದ ಇಲ್ಲಿಗೆ ನಾಲ್ಕೇ ಗಂಟೆಯ ದಾರಿ. ಈಗ ಅರ್ಥವಾಯಿತಲ್ಲ ಚೀನಾ ಇಂತಲ್ಲೆಲ್ಲಾ ರಸ್ತೆ, ರೈಲು ಮತ್ತು ಅಂತರಾಷ್ಟ್ರೀಯ ಕಾರಿಡಾರ್ ಹೆಸರಿನಲ್ಲಿ ಅಗಾಧ ಸೈಜಿನ ಹೆದ್ದಾರಿಗಳನ್ನು ನಿರ್ಮಿಸುತ್ತಿದೆ ಎಂದು.) 
ಮೊನ್ನೆ ಆರಂಭವಾದ ಮೊದಲ ತಂಡವನ್ನು ರಸ್ತೆಯ ಮೂಲಕ ಪಯಣಿಸುವ ದಾರಿಯಲ್ಲಿ ಚೀನಾ ಇದ್ದಕ್ಕಿದ್ದಂತೆ ಯಾವುದೇ ಮಾಹಿತಿಯೇ ಕೊಡದೆ ತಡೆದು ನಿಲ್ಲಿಸಿತ್ತು. ದಿನಾಂಕ: ಜೂನ್ 19 ರಂದು ನಿಗದಿಯಾದಂತೆ ನಾಥುಲಾಪಾಸ್ ಮೂಲಕ ದಾಟಬೇಕಿದ್ದ ಚೈನಾ ಬಾರ್ಡರ್‍ನಲ್ಲಿ ಇದ್ದಕ್ಕಿದ್ದಂತೆ ಅನುಮತಿಯನ್ನು ನಿರಾಕರಿಸಿ ಯಾತ್ರಿಗಳನ್ನು ಐ.ಟಿ.ಬಿ.ಪಿ. ಕ್ಯಾಂಪಿನಲ್ಲಿ ತಡೆಹಿಡಿಯಲಾಯಿತು. ಆದರೆ ಅದಕ್ಕೆ ಯಾಕೆ ಎನ್ನುವ ಕಾರಣವನ್ನು ತಿಳಿಸಲೇ ಚೀನಾ ಸುಮಾರು 48 ಗಂಟೆ ತಡ ಮಾಡಿದ್ದೂ ಅಲ್ಲದೆ ಭೂ ಕುಸಿತದ ಕಾರಣವನ್ನು ನೀಡಿ ಕೈ ತೊಳೆದುಕೊಂಡಿದೆ. ಅದೆಂಥಾ ಬಂಢತನವೆಂದರೆ ಈ ರಸ್ತೆಗಳು ಭಾರತದ ತವಾಂಗ್ ಸೆಕ್ಟರಿನ ರೀತಿಯಲ್ಲೆ ಇರುವ ಪರ್ವತ ಪ್ರದೇಶದ ಹಾದಿ. ಕಾರಣ ತವಾಂಗ್‍ನ ಪಕ್ಕದಲ್ಲೇ ಇರುವ " ಬಾಬಾ ಮಂದಿರ " ರಸ್ತೆ ಕೂಡಾ ಹೀಗೆ ಇದ್ದು ಎಂಥದ್ದೇ ಭೂಕುಸಿತವಿದ್ದರೂ ಒಂದು ದಿನದಲ್ಲಿ ಇವತ್ತು ರಸ್ತೆ ಸರಿಪಡಿಸುವ ಮಟ್ಟಿಗೆ ಸೇವೆಗೆ ಬಾರ್ಡರ್ ರೋಡ್ ಅರ್ಗನೈಜೆಷನ್ ಕೆಲಸ ಮಾಡುತ್ತಿದೆ ಎನ್ನುವುದನ್ನು ಪ್ರತ್ಯಕ್ಷವಾಗಿ ಕಂಡವನು ನಾನು.
ಆದರೆ ಅದೇ ರೇಂಜಿನಲ್ಲಿರುವ ನಾಥುಲಾ ಬಗ್ಗೆ ಕತೆಹೇಳುತ್ತಿರುವ ಚೀನಿಯರಿಗೆ ಅದರಿಂದ ಯಾವ ವ್ಯತ್ಯಾಸವೂ ಬೀಳುವುದಿಲ್ಲ ಎಂದೂ ಗೊತ್ತಿಲ್ಲದ್ದಿಲ್ಲ. ಕಾರಣ ಇವತ್ತು ಮಾನಸ ಸರೋವರ ನಾಥುಲಾ ಮಾತ್ರವಲ್ಲ ನೇಪಾಳ ಮತ್ತು ದಾರ್ಚುಲ ಕಡೆಯಿಂದ ಲಿಫುಲೇಕ್ ಪಾಸ್‍ನಲ್ಲೂ ಪಯಣಿಸಬಹುದಾಗಿದ್ದು ಇವೆಲ್ಲಾ ಶ್ರಮದಾಯಕವಾದ ದಾರಿಗಳು. ನಾಥುಲಾ ನೇರವಾದ ದಾರಿ ಹೊಂದಿದ ಕಾರಣ ಅದನ್ನು ಬಂದು ಮಾಡುವುದರ ಮೂಲಕ ತುಚ್ಛ ರಾಜಕೀಯ ಮಾಡುತ್ತಿದೆ ಚೀನಾ. 

ಅಸಲಿಗೆ ಕೈಲಾಸ ಮಾನಸ ಸರೋವರಕ್ಕೆ ಕುಮಾಂವ್ ಮಂಡಲ್ ವಿಕಾಸ ನಿಗಮ ಯಾತ್ರೆ ನಿರ್ವಹಿಸುವ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದು ಇದಕ್ಕೆ ಇಂಡೊ ಟಿಬೇಟಿಯನ್ ಬಾರ್ಡರ್ ಫೆÇೀರ್ಸ್ ಜೊತೆ ಕೊಡುತ್ತದೆ. ಪ್ರತಿ ಕ್ಯಾಂಪುಗಳು ಅವರ ನಿಗರಾಣಿಯಲ್ಲಿರುತ್ತವೆ. ಅವರದ್ದೇ ಸಂವಹನದ ಪದ್ಧತಿಯ ವ್ಯವಸ್ಥೆ ಜೊತೆಗಿರುತದೆ. ಭಾರತದ ದಾರ್ಚುಲಾ ಉತ್ತರಾಖಂಡ ರಾಜ್ಯದ ಕೊನೆಯ ಕ್ಯಾಂಪು. ಅಲ್ಲಿಂದ ತವಾಘಾಟ ಮೂಲಕ ಮೊದಲ ಕ್ಯಾಂಪು " ಶಿರ್ಖಾ " ತಲುಪುವ ದಾರಿಗೆ ಡ್ರಾಪ್ ಮಾಡಲಾಗುತ್ತದೆ. ಇಲ್ಲಿಂದ ನಿರಂತರ ನಡೆಯುವಿಕೆ ಎಂಥವರನ್ನೂ ಹಣ್ಣು ಮಾಡಿಬಿಡುತ್ತದೆ. ಹೆಚ್ಚಿನವರು ಕುದುರೆ ಸೇವೆಯನ್ನು ಪಡೆಯುತ್ತಾರೆ.
ಶಿರ್ಖಾದಿಂದ – ಗಾಲ - ಮಾಲ್ಪ(ಪ್ರತಿಮಾ ಬೇಡಿ ನೃತ್ಯ ಮಾಡುತ್ತಲೇ  ಪರ್ವತ ಕುಸಿತದಲ್ಲಿ ಬಲಿಯಾದ ಕ್ಯಾಂಪು)- ಬುಧಿ – ಗುಂಜಿ – ಕಾಲಾಪನಿ - ನಾಭಿಡಾಂಗ್ – ಓಂ ಪರ್ವತ- ಹೀಗೆ ಸರಾಸರಿ ಹದಿನೈದು ಕಿ.ಮೀ. ಅಂತರದಲ್ಲಿರುವ ಕ್ಯಾಂಪುಗಳು ದಿನಕ್ಕೆ ಎಳೆಂಟು ತಾಸು ನಡೆಯುವುದರ ಮೂಲಕ ಕ್ರಮಿಸಬೇಕಾಗುತ್ತದೆ. ಮುಂದಕ್ಕೆ ಹೋದಂತೆ ಹೆಚ್ಚುವ ಎತ್ತರ ಆಮ್ಲಜನಕದ ಕೊರತೆ ಕಾಡುವ ಖಿನ್ನತೆ ಎಂಥವರನ್ನು ಹಣಿದು ಹಾಕುತ್ತಿದ್ದರೆ, ಅನಿರೀಕ್ಷಿತ ಮಳೆ ಮತ್ತು ಹಿಮಪಾತ ಇನ್ನೊಂದು ಸಮಸ್ಯೆ. ಇಲ್ಲಿಂದ ಮುಂದೆ ಡೆತ್‍ವ್ಯಾಲಿ ಎಂದೇ ಕರೆಯುವ ಲಿಫುಲೇಕ್ ಪಾಸ್ ದಾಟ ಬೇಕಾಗುತ್ತದೆ. 14500 ಅಡಿ ಎತ್ತರ ದಾಟುವಾಗ ದೇಹ ಸ್ಥಿಮಿತತೆ ಕಳೆದುಕೊಳ್ಳುವ ಸಾಧ್ಯತೆ ಜಾಸ್ತಿ. ಅಗಾಗ ಒಂದೆರಡು ಜನ ಜೀವ ಬಿಟ್ಟಿರುವ ಉದಾ. ಬೇಕಾದಷ್ಟಿವೆ. ನಾನಿದ್ದ ತಂಡದಲ್ಲೂ ಓಂ ಪರ್ವತ ದಾಟುವ ಮೊದಲೇ ಐವತೈದು ವರ್ಷದ ವ್ಯಕ್ತಿಯೊಬ್ಬರು ಅಸುನೀಗಿದ್ದರು. ಹೀಗಾದಾಗಲಂತೂ ತಂಡ ಕುಸಿದು ಹೋಗುತ್ತವೆ.  ಅಲ್ಲಿಂದ ಮುಂದೆ ಬಾರ್ಡರ್ ಕ್ರಾಸ್ ಮಾಡಿದರೆ ಚೀನಿಯರ ವಶದಲ್ಲಿರುವ ಟಕಲಾಕೋಟ-ಹೊರೆ- ರಾಕ್ಷಸ ಸ್ಥಲ- ಜಡಿ - ಮಾನಸ ಸರೋವರ - ಪರಿಕ್ರಮಕ್ಕಾಗಿ ತಾಲ್ಚೇನ್ ಕ್ಯಾಂಪು – ಕೈಲಾಸ ದರ್ಶನ  ಹೀಗೆ ಮತ್ತೆ ಆರೆಂಟು ದಿನದವರೆಗೆ ನಡೆಯುವ ಯಾತ್ರೆ ಸರಿ ಸುಮಾರು ಇಪ್ಪತ್ತಾರರಿಂದ ಇಪ್ಪತ್ತೆಂಟು ದಿನ ನಡೆಯುತ್ತದೆ. ಕೊನೆಯಲ್ಲಿ ತೀರ ಅಶಕ್ತತೆ, ಖಿನ್ನತೆ ಮತ್ತು ಪರ ದೇಶದ ವಲಯ ನಮ್ಮ ಯಾತ್ರಿಗಳನ್ನು ಇನ್ನಿಲ್ಲದಂತೆ ಘಾಸಿಗೊಳಿಸುತ್ತಲೆ ಇರುತ್ತದೆ. 
ಇದರ ಹೊರತಾಗಿ ನೇರರಸ್ತೆಯ ಸೌಲಭ್ಯದ ನಾಥುಲಾಪಾಸ್ ಮೂಲಕ ಹೊರಾ ವರೆಗೂ ತಲುಪಿ ನಂತರ ನಡೆಯಬಹುದು ಅಥವಾ ನೇಪಾಳದ ಕಟ್ಮಂಡುವಿನ ಮೂಲಕವೂ ಉತ್ತಮ ಸಾರಿಗೆಯಲ್ಲಿ ಕಡೊರಿ ಮಾರ್ಗವಾಗಿ ಸಿಂಕೊಲಾ ಹಳ್ಳಿಗೆ ನೇರವಾಗಿ ತಲುಪಬಹುದಾಗಿದ್ದು, ಅಲ್ಲಿ ಬೋಟಿಕೋಸಿ ನದಿಗೆ ಕಟ್ಟಿರುವ ಫ್ರೆಂಡ್ ಶಿಪ್ ಬ್ರಿಡ್ಜ್ ಮೇಲೆ ಚೀನಿ ವಿದೇಶ ಕಚೇರಿ ತೆರೆದಿದೆ. ಇದು ಚೀನಿ ಅಕ್ರಮಿತ ಟಿಬೆಟ್. ಆರು ತಿಂಗಳು ಮೊದಲೇ ಮುಂಗಡ ಬುಕ್ಕಿಂಗ್ ಹಾಗು ಇತರ ಕಾರ್ಯ ಚಟುವಟಿಕೆ ನಡೆಯುತ್ತದೆ ಯಾವದೇ ದಾರಿಯಾದರೂ.
ಹಿಮಾಲಯ, ಕಾರಕೋರ್‍ಂ ಮತ್ತು ನಾಗಾಪರ್ವತ ಶ್ರೇಣಿಯ ಮಧ್ಯದಲ್ಲಿ ಅಷ್ಟ ದಳಾಕೃತಿಯಲ್ಲಿರುವ ಕೈಲಾಸ-ಮಾನಸ ಸರೋವರ ಭಾರತೀಯರಿಗೆ ಮಾನಸಿಕವಾಗಿ ಮತ್ತು ಜೀವನ ಶೈಲಿಯಲ್ಲೂ ಹಾಸು ಕೊಕ್ಕಾಗಿರುವ ಅತ್ಯಂತ ಪವಿತ್ರ ಕ್ಷೇತ್ರ. ಅಲ್ಲೆ ಕಿರಿಕ್ ಮಾಡುವ ಮೂಲಕ ಒಡಕು ಮೂಡಿಸುವ ಅಂತರಾಷ್ಟ್ರೀಯ ಹುನ್ನಾರ ಇದೀಗ ಬಹಿರಂಗವಾಗಿದೆ. 


Saturday, July 1, 2017

ಕಶ್ಮೀರವೆಂಬ ಖಾಲಿ ಕಣಿವೆ..
ಪ್ರತ್ಯೇಕತಾವಾದಿಗಳ ಕೈಯ್ಯಲ್ಲಿ ಬರಿದಾಗುತ್ತಿರುವ ಶ್ರೀನಗರ...


ಹೌದು... ಹುಟ್ಟುತ್ತಲೇ ಧರ್ಮದ ಅಫೀಮನ್ನು ಕುಡಿಸಿದ ಪರಿಣಾಮ, ಶ್ರೀನಗರ ಬರಿದಾದೀತು ಎನ್ನುವ ಸಾಮಾನ್ಯ ಇಕ್ವೇಶನ್ ಇವತ್ತು ಸ್ಥಳೀಯ ಯುವಕರಿಗೆ ಅರಿವಾಗದೇ ಹೋಗುತ್ತಿರುವುದು ದುರಂತ. ಅಸಲಿಗೆ ಇಂತಹ ಪ್ರದೇಶದಲ್ಲಿ ಕೋಟ್ಯಾಂತರ ವ್ಯಯಿಸಿ ರಾಜ್ಯಾವಾಳುವ ಆಸೆಯಾಗಲಿ, ಅಂತರಾಷ್ಟ್ರೀಯ ರಾಜಕೀಯ ದಾಹವಾಗಲಿ, ಗೆದ್ದು ಜಾಗತಿಕ ಮನ್ನಣೆ ಪಡೆಯುವ ಇರಾದೆಯಾಗಲಿ ಪಾಕಿಸ್ತಾನಕ್ಕೆ ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ. ಅದರದ್ದೇನಿದ್ದರೂ ಒಳಮುಸುಗಿನಲ್ಲಿರುವ ಸೇಡು ಮತ್ತು ಬರೀ ಸೇಡು ಜೊತೆಗೆ ಮುಸ್ಲಿಂ ಎಂಬ ಹೆಸರಿಗೆ ತಾನೊಬ್ಬನೆ ಜಾಗತಿಕ ರಕ್ಷಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ದುರಾಸೆ. ಇದೆಲ್ಲದಕ್ಕೆ ಕಳಸವಿಟ್ಟಂತೆ ಆ ವಂಚಕ ದೇಶದಲ್ಲಿ ರಾಜ್ಯವಾಳಲು ಇರುವುದು ಮಿಲಿಟರಿ ಕೈಗೊಂಬೆಯಾಗಿರುವ ಸರಕಾರವೇ ಹೊರತಾಗಿ ಪ್ರಜಾಪ್ರಭುತ್ವವಲ್ಲ. ತನ್ನ ನಾಯಕರನ್ನೇ ಸಾಲುಸಾಲಾಗಿ ಕೊಲ್ಲಿಸುವ ಇತಿಹಾಸ ಹೊಂದಿರುವ ಏಕೈಕ ನಾಡು ಪಾಕಿಸ್ತಾನ. ಅಲ್ಲಿನ ನಾಯಕರಿಗೆ ಜನರ ಗಮನವನ್ನು ನಿರಂತರವಾಗಿ ಧರ್ಮ ಮತ್ತು ಸರಹದ್ದಿನ ಕಡೆಗೆ ತಿರುಗಿಸಿಡದಿದ್ದರೆ ಅಂತಿಮ ಫಲಿತಾಂಶ ತಮ್ಮ ಬುಡಕ್ಕೆ ಬರುತ್ತದೆನ್ನುವ ಒಳಸತ್ಯ ಅತ್ಯಂತ ಸ್ಪಷ್ಟ.
ಕಾರಣ ಇವತ್ತು ಪಾಕಿಸ್ತಾನದಾದ್ಯಂತ ಇರುವ ರಾಜಕೀಯ ಪ್ರಭಾವಿಗಳು ಹೆಚ್ಚಿನಂಶ ವಿದೇಶದಲ್ಲಿರುವವರೇ. ಅದರಲ್ಲೂ ರಾಜಕೀಯ ಅಸ್ಥಿರತೆಯ ಪಾಕಿಸ್ತಾನವನ್ನು ನಂಬಿ ಅವರೆಂದೂ ಬದುಕು ಕಟ್ಟಿಕೊಂಡಿಲ್ಲ. ಕಾರಣ ಈಗೀನ ಪೀಳಿಗೆಯನ್ನು ಪೂರ್ತಿ ಧರ್ಮಾಂಧರನ್ನಾಗಿಸಿ ಬೆಳೆಸಿದವರೇ ತಾವು ಮತ್ತದು ಇವತ್ತಲ್ಲ ನಾಳೆ ತಿರುಗಿಬೀಳದಿರುವುದಿಲ್ಲ. ತಮ್ಮನ್ನು ಹೊರದಬ್ಬದ ದೇಶಗಳನ್ನೇ ನೋಡಿ ಆಸ್ತಿಪಾಸ್ತಿ ಮಾಡಿಟ್ಟುಕೊಂಡಿದ್ದಾರೆ ಇವರೆಲ್ಲಾ. ಬುರಾನ್‍ವಾನಿಯ ಹತ್ಯೆಗೆ ಪಾಕಿಸ್ತಾನದಲ್ಲಿ ಜುಲೈ 11ರಂದು ಕರಾಳ ದಿನವನ್ನು ಆಚರಿಸಲು ಕರೆಕೊಟ್ಟ ನವಾಝ್ ಶರೀಫ್, ನಿಜಕ್ಕೂ ತುರ್ತು ಪರಿಸ್ಥಿತಿ ಬಂದರೆ ತಾನೇ ಮೊದಲು ವಿದೇಶ ಸೇರಿಕೊಳ್ಳುತ್ತಾನೆ. ಅವನಿಗೆ ವೈಯಕ್ತಿಕವಾಗಿ ಪಾಕ್‍ನಲ್ಲಿ ಕಳೆದುಕೊಳ್ಳುವಂತಹದ್ದೇನೂ ಇಲ್ಲ. ಬೆರಳು ಮಡಚಿ ಎಣಿಸಲು ಕಷ್ಟವಾಗುವಷ್ಟು ಆಮದನಿ ಹೊಂದಿರುವ ನವಾಜ್‍ಶರೀಫ್ ಪಾಕಿನ ಅತಿದೊಡ್ಡ ಉಕ್ಕು ಉದ್ಯಮಿ. ಅವನೊಬ್ಬನ ಸಂಪತ್ತು ಪಾಕಿಸ್ಥಾನದ ಬಜೆಟ್ಟು. ಸಕ್ಕರೆ ಕಾರ್ಖಾನೆಗಳು, ಟೆಕ್ಸ್‍ಟೈಲ್ಸ್ ಫ್ಯಾಕ್ಟರಿಗಳು, ಸ್ಟೀಲ್ ಉದ್ಯಮ, ಫೌಂಡರೀಸ್, ಒಂದು ಲಕ್ಷಕ್ಕಿಂತಲೂ ಹೆಚ್ಚಿಗೆ ಉದ್ಯೋಗಿಗಳನ್ನು ಹೊಂದಿರುವ ಪಾಕಿಸ್ತಾನದ ಪ್ರಥಮ ಶ್ರೀಮಂತ ಪ್ರಜೆ ಆತ.
ಇವನಂತಹ ಎಲ್ಲರ ಹೂಡಿಕೆ ಇಂಗ್ಲೆಂಡು, ಅಸ್ಟ್ರೇಲಿಯಾ, ನ್ಯೂಜಿಲ್ಯಾಂಡು ಇತ್ಯಾದಿಗಳಲ್ಲಿದೆ ಹೊರತಾಗಿ ಅವರದ್ದೇ ಸಖ್ಯದ ಗಲ್ಫ್‍ರಾಷ್ಟ್ರಗಳಲ್ಲಿ ಅಲ್ಲ. ಕಾರಣ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ಇರುವುದು ಅವರ ಆಳುವಿಕೆಯಲ್ಲಲ್ಲ. ಮಿಲಿಟರಿಯ ತಂತ್ರಗಾರಿಕೆ ಮತ್ತು ಸರಹದ್ದಿನ ಚಟುವಟಿಕೆಗಳ ಮೇಲೆ. ಅದೇ ಶ್ರೀನಗರದಲ್ಲೂ ಆಗಿರುವುದು. ಈಗಿರುವ ಹುಡುಗರೆಲ್ಲಾ ಇತ್ತೀಚಿನ ಇಪ್ಪತ್ತು ಮೂವತ್ತು ವರ್ಷದ ಕಾಶ್ಮೀರ ನೋಡಿದರೇ ಹೊರತಾಗಿ ನಿಜವಾದ ಇತಿಹಾಸಕ್ಕೆ ತೆರೆದುಕೊಂಡವರೇ ಅಲ್ಲ. ಹಾಗಾಗಿ ಇವತ್ತು ಮಾತೆತ್ತಿದರೆ "ಹಿಂದುಸ್ತಾನಿ ಫೌಜ್" ಎನ್ನುತ್ತಾರೆ ಹೊರತಾಗಿ ಬದುಕಿನ ಬಗ್ಗೆ ಅವಗಾಹನೆಯೇ ಇಲ್ಲ. ಅಸಲಿಗೆ ಭವಿಷ್ಯ ಕಟ್ಟಿಕೊಳ್ಳಲು ಪ್ರವಾಸೋದ್ಯಮದ ವಿನ: ಬೇರೇನೂ ಇಲ್ಲ. ಹಿಂದಿನ ತಲೆಮಾರು ಕೊಂಚವಾದರೂ ಸೈರಿಸಿಕೊಂಡು ಬದುಕುತ್ತಿದ್ದರೆ ಈಗಿನವರು ಅಕ್ಷರಶ: ಸಾಮಾಜಿಕ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿ ಹಾಳುಮಾಡಿಕೊಂಡಿದ್ದಾರೆ ಕಾರಣ ಇವರನ್ನು ಅತ್ಯಂತ ವ್ಯವಸ್ಥಿತವಾಗಿ ಬ್ರೇನ್‍ವಾಶ್ ಮಾಡಿರುವ ಪ್ರತ್ಯೇಕತಾವಾದಿಗಳಿಗೆ ಅಜಾದ್ ಕಾಶ್ಮೀರ ಆದರೆಷ್ಟು..? ಬಿಟ್ಟರೆಸ್ಟು..? ಅವರಿಗೆ ಆಗಬೇಕಾದುದೇನೂ ಇಲ್ಲ.
ಹೆಚ್ಚಿನ ಪ್ರತ್ಯೇಕತಾವಾದಿಗಳಿಗೆ ಈಗಾಗಲೇ ವಯಸ್ಸಾಗಿದೆ. ಪ್ರತ್ಯೇಕತೆಯಲ್ಲಿ ಏನು ಸಿಕ್ಕಿದರೂ ತಮ್ಮ ಕೈಗೆ ಅಧಿಕಾರ ಮತ್ತೊಂದೊ ಏನೊಂದೂ ದಕ್ಕುವ ಚಾನ್ಸೇ ಇಲ್ಲ. ಏನಿದ್ದರೂ ದುರಾಸೆಯ ದೂರಾಲೋಚನೆ ಮಾತ್ರ. ತಮಗಂತೂ ಸಮಸ್ಯೆ ಏನಿಲ್ಲ. ಈಗಲೂ ಅವರ ಕುಟುಂಬ ಎಂದರೆ ಜೊತೆಗಿರುವ ಹೆಂಡತಿಯರು ಮಾತ್ರ. ಉಳಿದೆಲ್ಲಾ ಸಂತಾನ ಭಾಗ್ಯಗಳನ್ನು ದೇಶದ ಇತರ ಭಾಗದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನೆಲೆಗೊಳಿಸಿಬಿಟ್ಟಿದ್ದಾರೆ. ಹೆಚ್ಚಿನಂಶ ಈ ಪ್ರತ್ಯೇಕತಾವಾದಿಗಳ ಕುಟುಂಬದ ಬಗ್ಗೆ ಸ್ವತ: ಶ್ರೀನಗರದವರಿಗೇ ಮಾಹಿತಿ ಇಲ್ಲ. ಅವರಿಗೇನಿದ್ದರೂ ಕಲ್ಲು ತೂರಾಟಕ್ಕೆ ದಿನಕ್ಕೆ ಇಷ್ಟು ಎಂದು ಸಂಭಾವನೆ ನಿಗದಿಯಾಗಿರುತ್ತದೆ. ಅದಕ್ಕೆ ಪೂರಕ ಈ ಪ್ರತ್ಯೇಕತಾವಾದಿಗಳು ಕ್ಯಾಲೆಂಡರ್/ಟೈಂ ಟೇಬಲ್ಲು ಜಾರಿ ಮಾಡಿರುತ್ತಾರೆ. ಯಾವ ದಿನ ಯಾವ ಏರಿಯಾದಲ್ಲಿ ಕಲ್ಲು ತೂರಾಟ, ಅದಕ್ಕೆ ಸಮಸ್ತ ಜನತೆ ಹಾಗು ಯುವಕರು ಹ್ಯಾಗೆ ತಂತ್ರ ರೂಪಿಸಬೇಕು, ಭಯೋತ್ಪಾದಕರನ್ನು ಸೈನ್ಯ ಸುತ್ತುವರಿದಾಗ ಅವರು ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಕಲ್ಲು ಹೊಡೆಸುವದು ಇವರ  ಸ್ಟ್ರಾಟಜಿಯೇ. ಇದಕ್ಕೆಲ್ಲಾ ಬೆಂಬಲ ಎಂದರೆ ಸರಹದ್ದಿನಿಂದ ಸರಬರಾಜಾಗುವ ವಿದೇಶಿ ಫಂಡಿಂಗ್ ಎಂಬ ಹಡಬೆ ದುಡ್ಡು, ಪೆಂಡಿಗಟ್ಟಲೇ ಖೋಟಾ ನೋಟುಗಳು. 
ಇವತ್ತು ಹೆಚ್ಚಿನ ಕಾಶ್ಮೀರದ ರಸ್ತೆಗಳ ಕಾಲುವೆಗಳೆಲ್ಲಾ ಕಲ್ಲಿನಿಂದ ತುಂಬೇ ಇರುತ್ತವೆ. ಕಲ್ಲುಗಳನ್ನು ಆಯ್ದು ತುಂಬಿಸುವುದೇ ಹೆಚ್ಚಿನವರ ಕಾಯಕ. ಇದ್ದಕ್ಕಿದ್ದಂತೆ ಪೆÇೀಲಿಸರ ಮೇಲೆ ತೂರಲು ಅದೆಲ್ಲಿಂದ ಕಲ್ಲಿನ ಸಾವಿರಾರು ಸ್ಟಾಕ್ ಸಿಕ್ಕಿಬಿಡುತ್ತದೆ. ಒಂದು ಸ್ಥಳದಲ್ಲಿ ನೋಡುತ್ತಿದ್ದಂತೆ ನೂರಾರು ಕಲ್ಲುಗಳ ಬೀಳತೊಡಗಿದೆ ಎಂದರೆ ಅಲ್ಲೆಲ್ಲಾ ವ್ಯವಸ್ಥಿತವಾಗಿ ದಾಸ್ತಾನು ನಡೆಯುತ್ತಿತ್ತು ಎಂದೇ ಅರ್ಥ. ಪ್ರತಿ ಊರಿನ ಇಕ್ಕೆಲೆಯಲ್ಲೂ ತುಂಬಿ ಹರಿವ ನದಿಗಳು ಲಕ್ಷಾಂತರ ಕಲ್ಲುಗಳನ್ನು ಎತ್ತಿ ಹಾಕುತ್ತಿದ್ದರೆ ಅವನ್ನೆಲಾ ಒಟ್ಟು ಮಾಡಿ ಚೀಲಗಟ್ಟಲೇ ಹೊರುವುದೇ ಇವರ ಕಾಯಕ. ಇವರಾರೂ ಇವತ್ತು ಶಾಲೆ ಕಲಿತಿಲ್ಲ. ಏನಿದ್ದರೂ ತಿಂಗಳಲ್ಲಿ ಮೂರ್ನಾಲ್ಕು ದಿನ ಇಂತಹ ಗಲಭೆಗಳಲ್ಲಿ ಭಾಗವಹಿಸಿದರೆ ಸಾವಿರ ಲೆಕ್ಕದಲ್ಲಿ ದುಡ್ಡು ಹಂಚಲಾಗುತ್ತದೆ. ಕೆಲವೇ ಗಂಟೆಗಳ ಕಲ್ಲು ತೂರಾಟಕ್ಕೆ ತಿಂಗಳ ಕೂಲಿ, ಪುಗ್ಸಟ್ಟೆ ಎಣ್ಣೆಗೆ ದುಡ್ಡು ದೊರೆಯತೊಡಗಿದರೆ ತಲೆಯಲ್ಲಿ ಬರೀ ಲದ್ದಿ ತುಂಬಿರುವ ಹುಡುಗರು ಬೇರಿನ್ಯಾಕೆ ಕಲಿತಾರು..? 
ಕೇವಲ ಐದಾರು ಪರ್ಸೆಂಟಿನಷ್ಟು ಇಂಥ ಬೆಂಬಲಿಗರು ಶೇ. 90 ಕ್ಕೂ ಹೆಚ್ಚು ಜನರ ಜೀವನವನ್ನೇ ನರಕ ಮಾಡುತ್ತಿದ್ದಾರೆ ಅದರೂ ಸ್ಥಳೀಯರು ಬುದ್ಧಿ ಕಲಿಯುತ್ತಿಲ್ಲ ಎಂದಲ್ಲ. ಎಬುಜೀಗಳ ಪಡೆ ಇವರನ್ನು ಬೆಳೆಯಲು ಬಿಡುತ್ತಿಲ್ಲ ಅಷ್ಟೆ. ಯಾರೋ ಕೊಡುವ ದುಡ್ಡಿನಲ್ಲಿ ಬದುಕು, ಶೋಕಿ ಎರಡೂ ಮಾಡುತ್ತಾ, ಬಣ್ಣಬಣ್ಣದ ದಿರಿಸೂ, ಬಂದೂಕು ಧರಿಸಿ ಓಡಾಡುತ್ತಿದ್ದ ಎಳಸು ಯುವಕನೊಬ್ಬ ಕಾಶ್ಮೀರದ ಬೀದಿಯಲ್ಲಿ ನಾಯಿಯಂತೆ ಸೈನಿಕರ ಗುಂಡಿಗೆ ಬಲಿಯಾದರೆ, ತಡ ಮಾಡದೆ ಬೀದಿಗಿಳಿಯುವ ಪ್ರತ್ಯೇಕತಾವಾದಿ, ಭಯೋತ್ಪಾದಕರ ಬೆಂಬಲಿತ ನಾಯಕರು ಸೃಷ್ಟಿಸುವ ಹವಾ ಇದೆಯಲ್ಲ ಅದು ಹೊಸಬರನ್ನು ಇನ್ನಷ್ಟು ಹಾಳು ಮಾಡುತ್ತಿದೆ. ಶವ ಸಂಸ್ಕಾರದ ಭರಾಟೆ ಎನ್ನುವ ಕ್ರೇಜು ಯುವಕರ ಬಿಸಿ ಹೆಚ್ಚಿಸುತ್ತಿದೆ. ಅದರೆ ಅವರಿಗೆ ಅರ್ಥವಾಗದ್ದೆಂದರೆ ತಾವು ಬಲಿಯಾಗುತ್ತಿದ್ದೇವೆ ಹೊರತಾಗಿ ಇಲ್ಲಿವರೆಗೂ ಒಬ್ಬೆ ಒಬ್ಬ ನಾಯಕನೂ ಕಾಶ್ಮೀರಕ್ಕಾಗಿ ಬಲಿಯಾಗಿಲ್ಲ. ಜೊತೆಗೆ ನಮ್ಮಲ್ಲಿನ ದೂರದೃಷ್ಟಿ ಇಲ್ಲದ ಅಪ್ಪಟ ಬಡಪಾಯಿ ಭಾರತೀಯ ಮುಸ್ಲಿಂರಂತೆ ಆಡುತ್ತಿರುವ ಪಾಕಿ ಪಡೆಗೂ ಒಂದರ್ಥವಾಗಬೇಕಿದೆ. ಶರೀಫನಾಗಲಿ, ಮುಶರಫ್‍ನಾಗಲಿ, ಇವತ್ತು ಪಾಕಿಗಳನ್ನು ಉದ್ಧರಿಸಲು ಬರುವ ಮಾಂತ್ರಿಕರೂ ಅಲ್ಲ, ಯಾವುದೇ ದೇಶೋದ್ಧಾರದ ತೆವಲು ಇರುವ ನಾಯಕರೂ ಅಲ್ಲ. ಏನಿದ್ದರೂ ತೂಬು ಕಿತ್ತುಹೋಗುವವರೆಗೆ ನೀರು ಹರಿಸಿಕೊಂಡು ಬಿಡುವ ಹುನ್ನಾರದಲ್ಲಿರುವ, ಅಂದರೆ ಶುದ್ಧಮುಸ್ಲಿಂರ ಪಾಲಿಗೆ ಕಂಟಕವಾಗಿರುವ ಅವಿವೇಕಿ ಪಡೆ ಇದು. ಶೇ.90 ರಷ್ಟು ಚೆಂದವಾಗಿ ಬದುಕುತ್ತಿರುವ ಮುಸ್ಲಿಂ ಕುಟುಂಬಗಳ ಭವಿಷ್ಯವನ್ನು ಧರ್ಮದ ಹೆಸರಿನಲ್ಲಿ ಭಾರತದಲ್ಲೂ, ಪಾಕಿಸ್ತಾನದಲ್ಲೂ ಹಾಳು ಮಾಡುತ್ತಿರುವ ಅಪ್ಪಟ ದುರ್ಮಾರ್ಗಿಗಳಿವರು. ಅವರಿಗೆ ಬೆಂಬಲಿಸಿ ಶ್ರೀನಗರ ಇನ್ನಷ್ಟು ಹಾಳು ಮಾಡುತ್ತಿರುವ ಸ್ಥಳೀಯರು. ಹೊಸಬರ ಬದುಕು ಬಂಗಾರವಾಗಲಿ ಎಂದರೆ ಆದೀತಾದರೂ ಹೇಗೆ..? ಕಾಶ್ಮೀರ ಖಾಲಿಯಾಗದೆ ಏನಾದೀತು..?