Monday, October 23, 2017

ಕಾಶ್ಮೀರವೆಂಬ ಖಾಲಿ ಕಣಿವೆ
ನೆಲೆ ಕಳೆದುಕೊಳ್ಳುತ್ತಿರುವ ಉಗ್ರರು
(ಆರ್ಥಿಕ ದುಸ್ಥಿತಿ ಮತ್ತು ಅಭಿವೃದ್ಧಿ ಇಲ್ಲದ ನೆಲದಲ್ಲಿ ಮನುಷ್ಯ ಎಂಥಾ ದ್ರೋಹ ಮಾಡುವುದಕ್ಕೂ ಈಡಾಗುತ್ತಾನೆನ್ನುವುದು. ಮತ್ತಿದಕ್ಕೆ ಜೀವಂತ ಉದಾಹರಣೆಗಳು ಅವರವರಲ್ಲೇ ಆಗುತ್ತಿರುವ ಮರಾಮೋಸದಲ್ಲಿ ಜಾಲವನ್ನು ಬಿಚ್ಚಿಡುತ್ತಿರುವ ಖಬರಿಗಳ ಕೆಲಸ ಆದರೆ ಇದು ಅವಿವೇಕಿ ಪಾತಕಿಗಳಿಗೂ ಅವರ ನಾಯಕರಿಗೂ ಒಂದು ಅರಿವಾಗದ ಸಂಗತಿ. ಕಾರಣ ಸೈನಿಕರ ಬೆಂಬಲದಿಂದ ಪೆÇ್ರೀತ್ಸಾಹಿತಗೊಳ್ಳುತ್ತಿರುವ ಒಂದು ವರ್ಗ ಗುಟ್ಟಾಗಿ ಸಮಾಜದಲ್ಲಿದ್ದೇ, ಉಗ್ರರ ಹಿಂದೆಮುಂದೆ ತಿರುಗಿಕೊಂಡಿದ್ದೇ ಸೈನಿಕರ ಅಧಿಕಾರಿಗಳ ಕಡೆ ಜಮೆಯಾಗಿ ನಿಂತಿದೆ. ಈವರೆಗೆ ಅವರುಗಳು ಕೊಡುವ ಟಿಪ್ಸುಗಳು ಕೈ ತಪ್ಪಿದ್ದಿಲ್ಲ. ಇದೆಲ್ಲದರ ಹಿಂದಿರುವ ಹಿಕಮತ್ತೆಂದರೆ ಹಾಗೆ ಟಿಪ್ಸು ಕೊಡುತ್ತಿರುವವರೂ ಅಪ್ಪಟ ಅವರದೇ ಧರ್ಮೀಯರು.)
ನಿಜಕ್ಕೂ ಕಾಶ್ಮೀರದಲ್ಲಿ ಉಗ್ರವಾದ ಮಾಡಿ, ಫೇಮಸ್ಸಾಗುತ್ತೇನೆಂದು ಹೊರಟು ನಿಂತಿರುವ ಪಾತಕಿಗಳಷ್ಟು ಪೆದ್ದರೂ, ಯಾವಾಗಲೂ ಜೆಹಾದ್ ತನ್ನ ರಕ್ಷಣೆ ಮಾಡುತ್ತದೆ ಅದಕ್ಕಾಗಿ ತಾನು ಮಾಡಿದ್ದೇ ಯುದ್ಧ ಎಂದು ನಂಬಿರುವ ಅವಿವೇಕಿಗಳು ಮತ್ತು ಅವರು ಮಾಡಿಕೊಳ್ಳುವ ಅನಾಹುತಗಳನ್ನು ನೋಡಿದರೆ ಈ ಜನ್ಮದಲ್ಲಿ ಇವರನ್ನು ಸುಧಾರಿಸುವುದು ಸಾಧ್ಯವಿಲ್ಲ ಮತ್ತಿದು ನಿಜ ಕೂಡಾ. ಇದೆಲ್ಲಕ್ಕಿಂತಲೂ ಮೊದಲು ಈವರೆಗೂ ತಮ್ಮ ಜನರೇ ತಮಗೆ ಆಗೀಗ ಫಿಟ್ಟಿಂಗ್ ಇಟ್ಟು ಸೈನಿಕರಿಂದ ಹೊಡೆಸಿ, ಬಲಿ ಹಾಕುತ್ತಿದ್ದಾರೆ ಎನ್ನುವ ಅರಿವು ಮತ್ತದಕ್ಕೆ ತಕ್ಕ ಬಂದೋ ಬಸ್ತು ಮಾಡಿಕೊಳ್ಳಲಾಗದ ಇವರ ಅಬ್ಬೇಪಾರಿತನಕ್ಕೆ ಅದಿನ್ಯಾವ ಲೆಕ್ಕದಲ್ಲಿ ಯುದ್ಧಗೆಲ್ಲುವ, ಜಗತ್ತಿನಲ್ಲೆಲ್ಲಾ ತಮ್ಮ ಧರ್ಮ ಸ್ಥಾಪಿಸುವ ಕನಸು ಕಾಣುತ್ತಿದ್ದಾರೋ ದೇವರಿಗೂ ಗೊತ್ತಿರಲಿಕ್ಕಿಲ್ಲ.
ಅದೇನಾಗುತ್ತಿದೆಯೆಂದರೆ ಕಾಶ್ಮೀರ ಕಣಿವೆಯಲ್ಲಿ ಈಗ ಉಗ್ರರಿಗೆ ಬೆಂಬಲ ಮೊದಲಿನಿಗಿಂತಲೂ ಹೆಚ್ಚಾಗಿ ಲಭ್ಯವಾಗುತ್ತಿದೆ, ಅತ್ತ ಸರಹದ್ದಿನ ಕಡೆಯಿಂದಲೂ ಇವರನ್ನು ಪೆÇೀಷಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಒಳಗೊಳಗೆ ಅವರನ್ನು ಅವರ ಕಡೆಯವರೆ ಹಿಡಿಸಿ ಹೊಡೆಸುತ್ತಿರುವ ವಿಚಾರ ಕೂಡಾ ಗುಟ್ಟೇನಲ್ಲ. ಕಾರಣ ಇವತ್ತು ಪ್ರತಿಯೊಬ್ಬ ಪಾತಕಿಯ ತಲೆ ಮೇಲೆ ಏನಿಲ್ಲವೆಂದರೂ ಐದರಿಂದ ಹತ್ತು ಲಕ್ಷದ ಇನಾಮುಗಳಿವೆ ಮತ್ತು ಅಂತಾ ಪ್ರೈಜ್‍ಕ್ಯಾಚ ಆದಾಗ ಇನಾಮಿನ ಬಟವಾಡೆಯೂ ತೀರ ವ್ಯವಸ್ಥಿತ ಮತ್ತು ತುರ್ತಾಗಿ, ಕರಾರುವಕ್ಕಾಗಿ ನಿಗದಿತ ಕಾಲ ಮಿತಿಯೊಳಗೆ ಮುಗಿದುಹೋಗುತ್ತಿದೆ. 
ಅನಾಮತ್ತಾಗಿ ಎಳೆಂಟು ತಿಂಗಳೊಳಗೆ ಸರಿ ಸುಮಾರು 165 ಜನ ಉಗ್ರರನ್ನು ಹೊಡೆದು ಕೆಡುವಿದ್ದೂ, ಸ್ಥಳೀಯ ಜನರ ಜತೆಗೆ ಅವರ ಬಾಂಧವ್ಯ ಬೆಳೆಯುತ್ತಿರುವುದೂ ಸೂಕ್ಷ್ಮವಾಗಿ ನಡೆಯುತ್ತಿರುವ ಸಂಗತಿಗಳು. ಮೊನ್ನೆ ಮೊನ್ನೆ ಹತ್ತು ದಿನದ ಹಿಂದೆ ಪೆÇೀಲಿಸರು ಹತ್ತೇ ನಿಮಿಷದ ನಾಲ್ಕೇ ನಾಲ್ಕು ರೌಂಡಿನ ಬುಲೆಟ್ ವಾರ್ ಮಾಡಿ ಹತ್ತು ಲಕ್ಷ ತಲೆಬೆಲೆಯ ಪಾತಕಿಯೊಬ್ಬನನ್ನು ಕೆಡುವಿ ಹಾಕಿದರಲ್ಲ ಅದು ಯಾವ ಲೆಕ್ಕದಲ್ಲೂ ಸೈನಿಕರಿಗೆ ಗೊತ್ತಿಲ್ಲದೆ ನಡೆದುಹೋದ ಎನ್‍ಕೌಂಟರು. ಆ ಏರಿಯಾದಲ್ಲಿ ಕಾರ್ಯಾಚರಣೆಗೆಂದು ಪೆÇೀಲಿಸರು ಮತ್ತು ಸೈನಿಕರು ಯಾವ ತಯಾರಿಯಲ್ಲೂ ಹೋಗಿರಲಿಲ್ಲ. ಕಾರಣ ಆವತ್ತು ಕಿನ್ಲಾಭಾಗ್ ಏರಿಯಾದಲ್ಲಿ ಎಂದಿನಂತೆ ಬಂದೋ ಬಸ್ತು ಮಾಡುವ ಸೈನಿಕರ ಕೂಚು ಜಾರಿಯಲ್ಲಿತ್ತು. ಅದು ಪೂರ್ತಿ ಕಣಿವೆಯಲ್ಲೆಲ್ಲಾ ನಡೆಯುತ್ತಲೇ ಇರುತ್ತದೆ. ಹಾಗಂತ ಹಾದು ಹೋದ ದಾರಿಯಲ್ಲೆಲ್ಲಾ ಸೈನಿಕರು ಶರಂಪರ ಗುಂಡು ಹರಿಸಿಕೊಂಡು ಹೋಗುತ್ತಾರೆಂದಲ್ಲ. ಅದರೆ ಅವರದ್ದೇ ಆದ ಶೈಲಿಯಲ್ಲಿ ಪರಿಸ್ಥಿತಿ ಮೇಲೆ ನಿಗಾ ಇಡುವ ಪಹರೆ ಅದು. ಸರಿ ಸುಮಾರು ದಿನಕ್ಕಿಷ್ಠು ಕೀ.ಮೀ. ದೂರದವರೆಗೂ ಅವರವರ ಮಾಹಿತಿ ಆಧರಿಸಿ ರೌಂಡು ಹೊರಡುತ್ತಾರೆ.
ಹಾಗೆ ನಡೆಯುವ ಪಹರೆಯಲ್ಲಿ ಒಮ್ಮೆ ಅಲರ್ಟ ನೆಸ್ಸು ಬರುತ್ತದೆ. ಸಣ್ಣ ಕದಲಿಕೆಗಳೂ ನಡೆದೇ ನಡೆಯುತ್ತದೆ. ಪರಿಸ್ಥಿತಿ ಸ್ವಲ್ಪ ಯಾಮಾರಿದರೂ ಫೈಟು ಶುರುವಾಗುತ್ತದೆ. ಅದಕ್ಕಾಗಿ ಸೈನಿಕರು ಯಾರೆಂದರೆ ಯಾರ ಹತ್ತಿರವೂ ಮಾತಾಡುವ ಗೋಜಿಗೇ ಹೋಗುವುದಿಲ್ಲ. ಆ ದಿನ ಸಂಜೆ ಹಾಗೆ ಹಾಯುತ್ತಿರುವ ಪೆÇೀಲಿಸರ ಜತೆಗಿನ ಅರ್.ಆರ್. ಪಡೆಯ ಸೈನಿಕರ ಮೇಲೆ ಇದ್ದಕ್ಕಿದ್ದಂತೆ ಗುಂಡೀನ ಮಳೆಯಾಗಿದೆ. ಇಂಥದ್ದಕ್ಕೆಲ್ಲಾ ಆರ್ಡರು, ಮಾಹಿತಿ ಇತ್ಯಾದಿ ಏನೂ ಬೇಕಿಲ್ಲ ಸೈನಿಕರು ಕಾಯುವುದೂ ಇಲ್ಲ. ಅದಕ್ಕೆಲ್ಲಾ ಸರಕಾರದ ಮರ್ಜಿ ಕಾಯುವ ಬಂದೂಕಿನ ಗುಂಡು ಏಣಿಸುವ ಕಾರ್ಯಕ್ಕೆ ಕಳೆದ ಮೂರು ವರ್ಷದಿಂದ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಗುಂಡಿಗೆ ಗುಂಡು ಹಾರಿಸುವುದೊಂದೆ ಸೈನಿಕರಿಗಿರುವ ಆಜ್ಞೆ. ಕೂಡಲೆ ಗುಂಡು ಹಾರಿ ಬಂದ ಮನೆಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ಆರಂಭಿಸಿದ ಪಡೆಯ ಜವಾನರು ಮನೆಯನ್ನು ಸುತ್ತುವರೆದು ಒಳಗಿರುವ ಉಗ್ರನನ್ನು ಹಣಿಯಲು ಯತ್ನಿಸಿದ್ದರೆ. ತಲೆಕೆಟ್ಟ ಉಮರ್ ಖಾಲಿದ್ ಎಂಬ ಭಯೋತ್ಪಾದಕ ಪಟ್ಟ ಹೊತ್ತ ಕಾಕಿಪೆÇೀಕಿ ಪಾತಕಿ ಒಳಗೊಳಗೆ ಬೆವರುತ್ತ ಸುಖಾ ಸುಮ್ಮನೆ ಗುಂಡು ಹಾರಿಸಿದ್ದಾನೆ. 
ಸೈನಿಕರಿಗೆ ಇಂಥವೆಲ್ಲಾ ಅಸಂಘಟಿತ ದಾಳಿ ಎದುರಿಸುವುದನ್ನು ಹೇಳಿಕೊಡಬೇಕೆ..? ಅವರಿಗೆ ಅಸಲಿಗೆ ಯಾವ ಸೂಚನೆಯೂ ಬೇಕೆ ಆಗಿಲ್ಲ. ಸರಿಯಾಗಿ ಮನೆಯನ್ನು ಕವರ್ ಮಾಡುವ ಹೊತ್ತಿಗಾಗಲೇ ಮನೆಯೊಳಗಿಂದ ಬರುವ ಗುಂಡಿನ ಮೊರೆತ ನಿಂತುಹೋಗಿದೆ. ಎದುರಾ ಎದುರೇ ಕಿಟಕಿಯತ್ತ ತೂರಿ ಹೋದ ಸೈನಿಕನೊಬ್ಬ ಎರಗಿದ ರಭಸಕ್ಕೆ ಸ್ವಯಂಘೋಷಿತ ಲಷ್ಕರ್ ಕಮಾಂಡರ್ ಎಂಬ ಹೇಢಿ ಕಿರುಚಲೂ ಆಗದೆ ನೆಗೆದು ಬಿದ್ದಿದಾನೆ. ಸರಿಯಾಗಿ ಕಾಳಗ ಆರಂಭವಾಗುವ ಮೊದಲೇ ಗುಂಡಿನ ಹಾರಾಟ ನಿಂತೂ ಹೋಗಿದೆ. ಒಳನುಗ್ಗಿದ ಸೈನಿಕರಿಗೆ ಆಶ್ಚರ್ಯ ಕಾದಿತ್ತು. ಬಿದ್ದಿದ್ದು ದೊಡ್ಡಕುಳ ಎಂದು ಹೆಸರು ಮಾಡಿದ ಡಬ್ಬಲ್‍ಪ್ಲಸ್ ಮಾರ್ಕ್ ಹೊಂದಿರುವ ಪಾತಕಿ ಆತ. ಆಶ್ಚರ್ಯ ಮತ್ತು ಅವನ ಅವಿವೇಕತನದ ಪರಮಾವಧಿ ಎಂದರೆ ಸುಖಾ ಸುಮ್ಮನೆ ಅವನು ಮನೆಯಲ್ಲಿ ಕೂತೆ ಇದ್ದರೂ ಸಾಕಾಗಿತ್ತು. ಬದುಕಿಕೊಳ್ಳುತ್ತಿದ್ದ. ಆದರೆ ಸೈನಿಕರನ್ನು ನೋಡುತ್ತಲೇ ಬೆದರಿ ಗುಂಡು ಹಾರಿಸಿ ಮೂರ್ಖತನದ ಪರಮಾವಧಿಯನ್ನು ಈ ಕಮಾಂಡರ್ ಜಗತ್ತಿಗೆ ಜಾಹೀರು ಮಾಡಿದ್ದ. 
ಕಾರಣ ಗಸ್ತಿನ ಪಡೆಗಳ ಬರುವಿಕೆಯನ್ನು ಸಹಜವಾಗಿ ತೆಗೆದುಕೊಳ್ಳದ ಈ ಡಬ್ಬಾ ಕಮಾಂಡರು ತನ್ನನ್ನು ಎನ್ ಕೌಂಟರ್ ಮಾಡಲಿಕ್ಕೆಂದೇ ಸೈನಿಕರು ಬರುತ್ತಿದ್ದಾರೆ ಎಂದು ಇದ್ದಕ್ಕಿದ್ದಂತೆ ಬಾಗಿಲಿಕ್ಕಿಕೊಂಡು ಕಿಟಿಕಿಯಲ್ಲಿ ಎಗರಿ ನಿಂತು ಯದ್ವಾ ತದ್ವಾ ಗುಂಡು ಹಾರಿಸಿ, ತನ್ನಂತಹ ಪ್ರೈಜ್‍ಕ್ಯಾಚ್ ಇಲ್ಲಿದ್ದೇನೆ ಸುಳಿವನ್ನು ತಾನಾಗೇ ಬಿಟ್ಟುಕೊಟ್ಟಿದ್ದಾನೆ. ಮೊದಲೇ ಟ್ರಿಗ್ಗರ್ ಮೇಲೆ ಬೆರಳಿಟ್ಟುಕೊಂಡು ಓಡಾಡುವ ಸೈನಿಕರು ಲೆಕ್ಕವಿಡದೆ ಗುಂಡು ಹಾರಿಸಿ ಕೆಡುವಿ ಹಾಕಿದ್ದಾರೆ. ಬೇಕಾಗಿತ್ತಾ ಇಂಥಾ ಪೆದ್ದುತನದ ಕಾರ್ಯಶೈಲಿ. ಕಣಿವೆ ಖಾಲಿಯಾಗುವುದು ಎಂದರೆ ಇದೆ ಅಲ್ವಾ..? 
ಕಾಶ್ಮೀರದಲ್ಲಿ ಉಗ್ರದಮನ ಮಾಡಿದಷ್ಟೂ ಸಾಲುಸಾಲಾಗಿ ಪಾತಕಿಗಳ ಪಡೆ ಎದ್ದು ನಿಲ್ಲುತ್ತಲೇ ಇದೆಯಲ್ಲ. ಎಲ್ಲಿಂದ ಬರುತ್ತಿದ್ದಾರೆ..? ಹೇಗೆ ಗಡಿ ದಾಟುತ್ತಿದ್ದಾರೆ..? ಹಾಗೆ ಆರೇ ತಿಂಗಳೊಪ್ಪತ್ತಿನಲ್ಲಿ ನೂರೂ ಚಿಲ್ರೆ ಜನರನ್ನು ಸೈನಿಕರು ಹೊಡೆದುರುಳಿಸಿದರೂ ಅಲ್ಲಲ್ಲಿ ವಾರಕ್ಕೆ ಮೂರು ನಾಲ್ಕು ಜನರ ಲೆಕ್ಕದಲ್ಲಿ ಎಲ್ಲಿಂದ ಬಲಿ ಬೀಳುತ್ತಿದ್ದಾರೆ..? ಅದರಲ್ಲೂ ಕಮಾಂಡರ್‍ಗಳೆಂದು ಹೆಸರಿಸಿಕೊಂಡು ಶೊಫಿಯಾನ್, ಪುಲ್ವಾಮ, ಗಾಂಧಾರ್‍ಬಾಲ್, ಕಾರ್ಗಿಲ್, ಬಾರಾಮುಲ್ಲ ಮತ್ತು ಉರಿ ಸೆಕ್ಟರ್‍ಗಳನ್ನು ಹಂಚಿಕೊಂಡು ಹರಿದು ತಿನ್ನುವ ಲೆಕ್ಕದಲ್ಲಿ ಉರಿಯುತ್ತಿದ್ದ ಈ ಸ್ವಘೋಷಿತ ಪಾತಕಿಗಳ ತಲೆಯ ಮೇಲೆ ಹತ್ತಾರು ಲಕ್ಷದಷ್ಟು ಇನಾಮು ಘೋಷಿಸುವಷ್ಟು ಇವರು ಹೇಗೆ ಬೆಳೆಯುತ್ತಿದ್ದಾರೆ..? ತೀರ ಕಾಶ್ಮೀರದಲ್ಲಿ ಭಯೋತ್ಪಾದಕರ ಸ್ವರ್ಗ ಮತ್ತು ಉಗ್ರರ ಅಪರ ಕರ್ಮಠ ಬೆಂಬಲಿಗರೂ ಇರುವ ದಕ್ಷಿಣ ಪುಲ್ವಾಮ ಯಾಕೆ ಇವತ್ತು ಅಷ್ಟೊಂದು ಮಟ್ಟದಲ್ಲಿ ಉಗ್ರರಿಗೆ ಆಶ್ರಯ ಕೊಡುವ ತಾಣವಾಗುತ್ತಿದೆ..? ಹಾಗೆ ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯ ಹಲವು ಒಳಸುಳಿ ಊರುಗಳು ಇವತ್ತಿಗೂ ಸೈನಿಕರಿಗೂ, ಪೆÇೀಲಿಸರಿಗೂ ಅಪರಿಚಿತವಾಗಿ ಉಳಿದಿದ್ದಾದರೂ ಹೇಗೆ..? ದಕ್ಷಿಣ ಪುಲ್ವಾಮಾದ ಇಂಟರೆಸ್ಟಿಂಗ್ ಕಥನ ಮುಂದಿನ ವಾರಕ್ಕಿರಲಿ.

Sunday, October 15, 2017

ಕಾಶ್ಮೀರವೆಂಬ ಖಾಲಿ ಕಣಿವೆ
ಹೊಸ ತಲೆಮಾರು ಪೂರ್ತಿ ಖಾಲಿಯಾಗಲಿದೆ..
( ಶ್ರೀನಗರದ ಸ್ಥಳೀಯರಿಗೆ ಅರ್ಜೆಂಟು ಇತರ ಧರ್ಮೀಯ ಪ್ರವಾಸಿಗರು ಭಾರತದಾದ್ಯಂತದಿಂದ ಬರಬೇಕಿದೆ. ಅವರಿಂದ ಆಮದನಿ ಬೇಕಿದೆ. ಜೀವನಕ್ಕೆ ಸುಲಭಕ್ಕೆ ಪ್ರವಾಸೋದ್ಯಮದಿಂದ ದುಡ್ಡು ದೊರೆಯುತ್ತದಲ್ಲ ಅದೆಲ್ಲಾ ಬೇಕಿದೆ. ಅನಾಮತ್ತಾಗಿ ಮುನ್ನೂರೈವತ್ತು ರೂ.ಗೆ ಕೇಸರಿ ಮಾರಿ ದುಡ್ಡು ಮಾಡಲು ಬಕರಾಗಳು ಬೇಕಾಗಿದ್ದಾರೆ. ದುಪ್ಪಟ್ಟು ಬೆಲೆಯ  ಪಶ್ಮೀನಾ ಶಾಲುಗಳಿಗೆ ಪೆಕರು ಗಿರಾಕಿಗಳು ನಾವಾಗಲಿ ಎಂದು ಬಯಸುತ್ತಿದ್ದಾರೆ. ಆದರೆ ಸಾಮರಸ್ಯ ಉಹೂಂ..ಅದು ಮಾತ್ರ ಬೇಕಾಗಿಲ್ಲ ಅವರಿಗೆ. ಹಾಗಿದ್ದ ಮೇಲೆ ನಾವಾದರೂ ಯಾಕೆ ನಮ್ಮ ಸೈನಿಕರಿಗೆ ಕಲ್ಲೇಟು ಹೊಡೆಯುವ ಜನರ ಹೊಟ್ಟೆಪಾಡಿಗೆ ಸ್ಪಂದಿಸಬೇಕು..? ಕಾಶ್ಮೀರವನ್ನು ಅಪ್ಪಟ ದರ್ಮಾಂಧರ ನಾಡಗಿಸಹೊರಟವರ ಜೇಬಿಗೇಕೆ ದುಡ್ಡು ಸುರಿಯಬೇಕು..? )

ಬಹಳಷ್ಟು ಜನರಿಗೆ ಕಾಶ್ಮೀರವ್ಯಾಲಿ ಪ್ರವಾಸಿಸುವಾಗ ಈ ಅನುಭವಾಗಿರುತ್ತದೆ. ಶ್ರೀನಗರದಿಂದ ಹೊರಟು ಗಾಂಧಾರ್‍ಬಾಲ್, ಮುಲ್ಬೇಕ್ ದಾಟುವ ಹೊತ್ತಿಗೆ ಒಂದು ದಿನ ಕಳೆಯುತ್ತದೆ. ಅಲ್ಲಿ ಟ್ಯಾಕ್ಸಿಗಳವರು ಮುಲ್ಬೇಕ್‍ನ ಹೊರವಲಯದಲ್ಲಿ ಒಂದು ಬಾರ್ಡರ್ ಲೈನ್ ಗುರುತಿಸಿಕೊಂಡಿದ್ದಾರೆ. ಅದನ್ನು ದಾಟಿದೆ ಏನಿದ್ದರೂ ಆಚೆ ಕಡೆಯ ಲೆಹ್-ಲಢಾಕಿ ಟ್ಯಾಕ್ಸಿಗಳಿಗೆ ಇತ್ತ ನಿಂತು ಪ್ರಯಾಣಿಕರನ್ನು ಹತ್ತಿಸಿ ಬರುತ್ತಾರೆ. ಇದು ಆಯಾ ಪ್ರಾಂತ್ಯವಾರು ವೃತ್ತಿಪರ ನಡೆಯೂ ಹೌದು. ಆದರೆ ಇತ್ತಲಿನ ಕಾಶ್ಮೀರಿಗಳ ವೈಯಕ್ತಿಕ ಆಸೆ ಏನು ಗೊತ್ತೆ..? ಇತ್ತಾ ಜಮ್ಮ ಸರಹದ್ದಿಗೂ ಕಾಲಿಡುವಂತಿಲ್ಲ, ಅತ್ತ ಲಢಾಕಿ ಆವರಣವನ್ನೂ ಪ್ರವೇಶಿಸುವಂತಿಲ್ಲ. ಒಟ್ಟಾರೆ ಮೊದಲೇ ಭಾರತದ ಸರಹದ್ದಿನಲ್ಲಿ ನಲಗುತ್ತಿರುವ ನತದೃಷ್ಠ ಕಣಿವೆ ರಾಜ್ಯವನ್ನು ಇನ್ನಷ್ಟು ಏಕಾಂಗಿಯಾಗಿಸಿ ಹಾಳು ಮಾಡುತ್ತಿರುವವರು ಅಪ್ಪಟ ಶ್ರೀನಗರದ ಸ್ಥಳೀಯರು. ಪಾಕಿಗಳ ಗುಲಾಮಿತನಕ್ಕೆ ಮಾರಿಕೊಂಡವರು. ಅಕ್ಷರಶ: ಕ್ರಮೇಣ ಪೂರ್ತಿ ಕಣಿವೆಯನ್ನು ಸ್ಥಳೀಯರು ಮತ್ತು ಮಿಲಿಟರಿ ಹೊರತಾಗಿ ಇನ್ಯಾರೂ ಕಾಲಿಡದಂತೆ ನಿರ್ಬಂಧಿಸುವುದೇ ಆಗಿದೆ.
ತಮ್ಮೆಲ್ಲಾ ವ್ಯವಹಾರ ವ್ಯವಸ್ಥೆಗಳಿಗೆ ತಮ್ಮನ್ನು ತಾವು ಹೊರ ಜಗತ್ತಿಗೆ ತೆರೆದುಕೊಳ್ಳುವುದೇ ಬೇಕಾಗಿಲ್ಲ ಅವರಿಗೆ. ಇದ್ಯಾಕೆ ಹೀಗಾಡುತ್ತಿದ್ದಾರೆ ಎಂದರೆ ವ್ಯವಹಾರ,ಸಂಸಾರದ ಅತ್ಲಾಗಿರಲಿ. ತಮ್ಮ ಅತೀವ ಕರ್ಮಠತನದ ಮುಚ್ಚಟೆಯನ್ನು ಜಗತ್ತಿನಿಂದ ಮುಚ್ಚಿಡುವುದೇ ಇಲ್ಲಿನ ಜನರಿಗೆ, ನಂಬಿಕೊಂಡ ಸಿದ್ಧಾಂತಗಳ ಪ್ರಮುಖ ಕಾಯಕವಾಗಿ ಹೋಗಿದೆ. ನಿಮಗೊಂದು ಗೊತ್ತಿರಲಿ - ಇವತ್ತು ಭಾರತದ ಯಾವುದೇ ದೇವಸ್ಥಾನಗಳಲ್ಲಿ ಒಬ್ಬೇ ಒಬ್ಬ ಮುಸ್ಲಿಂನನ್ನು ಬರಬೇಡ ಎಂದ ಉದಾಹರಣೆ ಇಲ್ಲ. ಆದರೆ ಶ್ರೀನಗರದ ಪ್ರಸಿದ್ಧ ಮಸೀದಿಯನ್ನು ಪ್ರವೇಶಿಸಲು ಇವತ್ತಿನವರೆಗೆ ಬೇರೊಬ್ಬ ಧರ್ಮೀಯರಿಗೆ ಸಾಧ್ಯವಾಗಿದೆಯೇ..? ಬರೀಯ ಪ್ರಾರ್ಥನಾ ಮಂದಿರ ಎಂದಾದರೆ ಅಲ್ಲಿಗೆ ಹೋಗಲು ಅಥವಾ ಪ್ರವೇಶಕ್ಕೇ ಅಷ್ಟೊಂದು ಅಡೆತಡೆಗಳೇಕೆ..?ಉಹೂಂ.. ಅದರಲ್ಲೂ ಪ್ರವಾಸಿಯಾಗಿ ಹೋಗುವ ಯಾವೊಬ್ಬ ಭಾರತೀಯನೂ ಅದನ್ನು ಸಂದರ್ಶಿಸಲು ಅನುಮಾಡಿಕೊಟ್ಟ ಮತ್ತು ಪ್ರವೇಶಿಸಿದ ಉದಾ.ಗಳಿಲ್ಲವೇ ಇಲ್ಲ. ಇದೇ ನಮಗೂ ಇತರ ಧರ್ಮಕ್ಕೂ ಇರುವ ವ್ಯತ್ಯಾಸ. ಇದರಿಂದಾಗಿ ಇತ್ತಿಚಿನ ತಲೆಮಾರನ್ನು ದೇಶದ್ರೋಹಿ ವ್ಯಕ್ತಿತ್ವಕ್ಕೆ ಒಗ್ಗಿಸುವ ಗುರುತರವಾದ ಕಾರ್ಯ  ಸರಿಯಾಗಿ ಎರಡೂವರೆ ದಶಕಗಳಿಂದಲೇ ಆರಂಭವಾಗಿತ್ತು. 
ಇವತ್ತು ಶ್ರೀನಗರದ ಆಸುಪಾಸಿನ ಯಾವುದೇ ವ್ಯವಹಾರ,ಅಂಗಡಿ ಮುಂಗಟ್ಟು ಇತ್ಯಾದಿ ನೋಡಿ. ಎಲ್ಲಾ ಫಿಪ್ಟಿ ಪ್ಲಸ್ ಗಂಡಸರೆ. ಹೊಸ ಹುಡುಗರಿಗೆಲ್ಲಾ ಏನಾಗಿದೆ..? ಉಹೂಂ.. ಯಾರೆಂದರೆ ಯಾರೂ ಇಲ್ಲ. ತೀರ ಕರ್ಮಠ ಮುಸ್ಲಿಂರಿಗೆ ಮಾತ್ರವೇ ಪ್ರವೇಶ ದಕ್ಕುವ ಮದರಸಾಗಳೆಂಬ ಕತ್ತಲ ಕೂಪದಲ್ಲಿ ಕಳೆದುಹೋಗುತ್ತಿದೆ ಹೊಸ ತಲೆಮಾರು. ಒಮ್ಮೆ ಅದರ ವಾತಾವರಣಕ್ಕೆ ಒಗ್ಗಿಹೋಗುವ ತೀರ ಎಳೆಯ ಮನಸ್ಸು ಹೊರಬರುವ ಹೊತ್ತಿಗೆ ಅಪರ ಕರ್ಮಠ ಇಸ್ಲಾಂ ವ್ಯಾಮೋಹಿಯಾಗಿ ಬದಲಾಗಿರುತ್ತದೆ. ಅಕ್ಷರಶ: ಒಂದು ಆಯುಧವಾಗಿ ಬದಲಾಗಿರುತ್ತದೆ.(ಕಾರಣ ನೈಜ ಇಸ್ಲಾಂ ಇಲ್ಲಿ ಕಲಿಸುವುದೇ ಇಲ್ಲ. ಏನಿದ್ದರೂ ಧರ್ಮ ಗುರು ಆಧಾರಿತ) ಅದನ್ನಿನ್ನು ಬಳಸುವುದು ಬಲು ಸುಲಭ. ಹಾಗೆ ಬದುಕು, ಬಾಲ್ಯ ಜೊತೆಗೆ ಯೌವನಕ್ಕೆ ಮೊದಲೆ ಜೀವನ ಕಳೆದುಕೊಳ್ಳಲೆಂದೆ ಹೊಚ್ಚ ಹೊಸ ತಲೆಮಾರನ್ನು ತಯಾರು ಮಾಡಿ ಧರ್ಮವೆಂಬ ನಶೆಯಲ್ಲಿ ಮುಳುಗಿಸಿ ತೆಗೆದಿಚೆಗೆ ಇರಿಸುತ್ತಿದ್ದರೆ ಮುಂದೆ ತಲೆಮಾರು ಬೆಳೆಯುವುದಾದರೂ ಹೇಗೆ..? 
ಕಾರಣ ಮೊನ್ನೆ ಮೊನ್ನೆ ವಿಶ್ವಸಂಸ್ಥೆಯ ಆಂಟನಿಯೋ ಗುಟೆರಸ್ ಪ್ರಸ್ತುತ ಪಡಿಸಿರುವ ಕಳವಳಕಾರಿ ಸುದ್ದಿ ಎಂದರೆ ವರ್ಷಾವಧಿಯಲ್ಲಿ ನಾಪತ್ತೆ ಅಥವಾ ಬಲಿಯಾಗುವ, ಬಾಂಬು ಮತ್ತು ಆತ್ಮಾಹುತಿ ದಾಳಿಗೆ ಬಳಸುವ ಬಾಲಕರ ಸಂಖ್ಯೆ ಬರೊಬ್ಬರಿ ಎಂಟು ಸಾವಿರ ಚಿಲ್ಲರೆ. ವರ್ಷವೊಂದರಲ್ಲಿ ಹೀಗೆ ಬಲಿಯಾಗುವ ಅಥವಾ ನಾಪತ್ತೆಯಾಗುವ ಜನರೇಶನ್ನು ಇನ್ನೆಷ್ಠು ವರ್ಷ ಈ ನಿರಂತರತೆಯನ್ನು ತಡೆದೀತು..?
"..ಚಿಲ್ಡ್ರೆನ್ಸ್ ಇನ್ ಆರ್ಮ್‍ಡ್ ಕಾನ್‍ಪ್ಲಿಕ್ಟ್.." ವರದಿ ಪ್ರಕಾರ ಸರಕಾರ ನಡೆಸುವ ಸಾಮಾನ್ಯ ಶಾಲೆಗಳನ್ನು ಪ್ರತ್ಯೇಕತಾವಾದಿಗಳೆ ಸುಟ್ಟು ಹಾಕಿದ್ದು, ಸರಾಸರಿ ಪ್ರತಿ ವರ್ಷ ನಾಶವಾಗುವ ಸರಕಾರಿ ಮತ್ತು ಸಾಮಾನ್ಯ ಶಾಲೆಗಳ ಸಂಖ್ಯೆ 30 ಪ್ಲಸ್. ಅಲ್ಲಿಗೆ ಇನ್ನೆಷ್ಟು ವರ್ಷ ಶಾಲೆಗಳು ನಡೆದಾವು ರಾಜ್ಯದಲ್ಲಿ..? ಅಪಾಯಕಾರಿ ಸ್ಥಳಗಳಲ್ಲಿ ನಿರಾಯಾಸವಾಗಿ ಮಾಹಿತಿ, ಲಗೇಜ್ ಸರಬರಾಜು ಇಂತಹ ಕೆಲಸಗಳನ್ನು ಈ ನಿಯಂತ್ರಿತ ಮತ್ತು ತರಬೇತಾಗಿರುವ ಎಳೆಂಟು ವರ್ಷದ ಹುಡುಗರು ಸಲೀಸಾಗಿ ನಿರ್ವಹಿಸುತ್ತಿದ್ದರೆ, ಹತ್ತರಿಂದ ಹದಿಮೂರು ವರ್ಷದ ಮಕ್ಕಳು ಅನಾಮತ್ತಾಗಿ ಏ.ಕೆ.47 ಕೂಡಾ ಚಲಾಯಿಸಬಲ್ಲಷ್ಟು ಪರಿಣಿತರು. 
ಬಾತ್ಮಿದರರಾಗಿ ಮಕ್ಕಳನ್ನು ಬಳಸುವುದು ತುಂಬಾ ಸುಲಭ. ಯಾರೂ ಕೂಡ ಸಂಶಯಿಸದಷ್ಟು ಮುಗ್ಧ ಮುಖದ ಮಕ್ಕಳನ್ನು ಪ್ರತ್ಯೇಕತಾವಾದಿಗಳು ಬಂದೂಕಿನ ತುದಿಗೆ ಕಟ್ಟಿಕೊಂಡೆ ಓಡಾಡುತ್ತಿದ್ದಾರೆ. ಇವರಿಗಿಂತ ಕೊಂಚ ಮೇಲಿನವರು ತಾವೇ ಬಂದೂಕು ಹೊರುತ್ತಿದ್ದಾರೆ. ಸೆರೆ ಸಿಕ್ಕ ಮಕ್ಕಳನ್ನು ಕೌನ್ಸೆಲಿಂಗ್‍ಗೆ ಒಳಪಡಿಸಿ ಮಾರ್ಪಾಡು ಮಾಡಲೆತ್ನಿಸಿದರೂ ಬಿಟ್ಟ ಎರಡೇ ದಿನಕ್ಕೆ ಕ್ಯಾಂಪುಗಳಿಗೆ ಹುಡುಗರು ರವಾನೆಯಾಗುತ್ತಿದ್ದಾರೆ ಕಾರಣ ಬರೀ ಧರ್ಮವಲ್ಲ. ಈಗ ಧರ್ಮದ ನಶೆಯ ಜೊತೆಗೆ ಮೊಬೈಲ್ ಕೂಡಾ ಅನಾಹುತಕಾರಿ ಆಮೀಷವಾಗಿ ಯುವ ಜನರನ್ನು ಅಫೀಮಿನಂತೆ ಆವರಿಸಿಕೊಂಡಿದೆ. ಫೇಸ್ ಬುಕ್ಕು ಮತ್ತು ವಾಟ್ಸ್‍ಆಪ್‍ಗಾಗಿ, ಹತ್ತಾರು ಸಾವಿರದ ಮೊಬೈಲ್‍ಗಾಗಿ ದೇಶಕ್ಕೆ ಕಲ್ಲು ಹೊಡೆಯುವ ಮತ್ತು ಸೈನಿಕರ ಮೇಲೆ ಗುಂಡು ಹಾರಿಸಿ ಬರುವ ಕೆಲಸಕ್ಕೆ ಯಾವ ಹಿಂಜರಿಕೆಯಿಲ್ಲದೆ ಮಕ್ಕಳು ಕಾಲೂರಿ ನಿಲ್ಲುತ್ತಿದ್ದಾರೆ. ಆದರೆ ಅದಕ್ಕೆ ಬೇಕಾದ ನೆಟ್‍ವರ್ಕನ್ನು ಸರಕಾರ ನಿಯಂತ್ರಿಸುವುದರಿಂದ ವಾರಕ್ಕೆ ನಾಲ್ಕು ದಿನ ಅದರ ಮೇಲೆ ನಿಷೇಧ ಹೇರುವುದರಿಂದ ಆ ಹತಾಶೆ ಇನ್ನಷ್ಟು ಪರಿಣಾಮಕಾರಿಯಾಗಿ ದ್ವೇಷವಾಗಿ ಬದಲಾಗುತ್ತಿದೆ. 
ಈ ಸಂದರ್ಭವನ್ನು ಬಳಸಿಕೊಳ್ಳುವ ಪ್ರತ್ಯೇಕತಾವಾದಿಗಳು "...ನೋಡಿ ಭಾರತ ಸರಕಾರ ಹೇಗೆ ನಮ್ಮನ್ನೆಲ್ಲಾ ಶೋಷಣೆ ಮಾಡುತ್ತಿದೆ. ಕಾಫೀರರು..." ಎಂದು ಬೆಂಕಿ ಹಚ್ಚುತ್ತಾ ಇನ್ನಿಲ್ಲದ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಇದರಿಂದಾಗಿ ಏನೇ ಮಾಡಿದರೂ ಮೊಳಕೆಯಲ್ಲೇ ಬೆಳೆದು ನಿಲ್ಲುತ್ತಿರುವ ಈ ವಿಷಕಾರಿ ಜನರೇಶನ್ನು ವಯಸ್ಸಿಗೂ ಮೊದಲೇ ಪೆÇೀಲಿಸ್ ಕೋಣೆಗಳಲ್ಲಿ ಬದುಕು ಕಳೆಯುತ್ತಿದ್ದಾರೆ ಇಲ್ಲಾ ಗುಂಡಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಬರಲಿರುವ ತಲೆಮಾರು ಮತ್ತು ಶ್ರೀನಗರದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಕೆಲವೇ ಕೆಲವು ಪ್ರಜ್ಞಾವಂತರು ಎಚ್ಚರಿಸಿ ಕಣಿವೆಯ ಸುಸ್ಥಿತಿಗೆ ಪ್ರಯತ್ನಿಸುತ್ತಿದ್ದರೂ ಅದೆಲ್ಲಾ ಅರಣ್ಯ ರೋಧನವಾಗಿದೆ. ತೀವ್ರ ಆಸೆ ಹುಟ್ಟಿಸುತ್ತಿರುವ ಸಾಮಾಜಿಕ ಜಾಲತಾಣ ಮತ್ತು ಇಂತಹ ಹುಡುಗರನ್ನು ಆಸೆಯ ಕಂಗಲಿಂದ ಕಣ್ಣು ಹರಿಸುವ ಹುಡುಗಿಯರು ಅವರ ತೆವಲನ್ನು ಇನ್ನಷ್ಟು ರಂಗೇರಿಸುತ್ತಿದ್ದಾರೆ. ಮೊಬೈಲ್ ಇದ್ದರೆ ಆಕೆಯ ಸಂಪರ್ಕ ಸಿಗುತ್ತದೆ. ಆಕೆಯ ಸಂಪರ್ಕ ಮತ್ತು ಸಾಮಾಜಿಕ ಜಾಲತಾಣ ಬೇಕೆಂದರೆ ಮೊಬೈಲು ನೆಟ್ವರ್ಕು ಬೇಕು. ಅದೆಲ್ಲಾ ಬೇಕೆಂದರೆ ಸರಹದ್ದಿನಿಂದ ಈಚೆಗೆ ಬರುವ ಯೋಜನೆಗೆ ರೂಪ ಕೊಡುವುದೇ ಬೆಟರ್ ಆಪ್ಶನ್ನು. ಅಲ್ಲಿಗೆ ಇಂಥಾ ಸಣ್ಣ ಸಣ್ಣ ಆಮೀಷಕ್ಕೊಳಗಾಗಿ ಮನೆ ಬಿಡುತ್ತಿರುವ ಹುಡುಗರು ತಲೆ ಮಾಸುವ ಮೊದಲೇ ಸೈನಿಕರಿಗೆ ಬಲಿಯಾಗುತ್ತಾರೆ. ಅಲ್ಲಿಗೆ ಕಣಿವೆ ಖಾಲಿಯಾಗಲು ಎಷ್ಟು ಹೊತ್ತು...? 



Sunday, October 8, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ಅದು ಸಾವಿರ ವರ್ಷಗಳ ಯುದ್ಧ.
(ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಯಿತಲ್ಲ ಆ ಲೀಪಾದಿಂದ 24 ಕಿ.ಮೀ. ದೂರದ ರೈಸಿನ್ ಎಂಬಲ್ಲಿಯೇ ವಾಹನಗಳು ನಿಂತುಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಜನರನ್ನು ಹೊತ್ತು ತರುತ್ತವೆ. ಇಲ್ಲಿ ನಿರ್ಮಿಸಿದ ರಸ್ತೆಯನ್ನು ಕುಸಿಯುವ ಪರ್ವತಗಳು ತಿಂಗಳೊಪ್ಪತ್ತಿಲ್ಲಿ ನುಂಗಿ ಮುಗಿಸುತ್ತವೆ. ಇದರ ಕೂಗಳತೆಯಲ್ಲಿದೆ ದುರ್ಗಮವಾದ ಬಂಗೂಸ್ ವ್ಯಾಲಿ. ಅತ್ಯಂತ ಸುಂದರ ಪ್ರದೇಶ ಲೀಪಾ ವಿಭಿನ್ನ ವಲಯ. ಮೇಲ್ಗಡೆಯ ಪೂರ್ವಭಾಗ ಡೈಖಾನ್ ವ್ಯಾಲಿ, ಪಕ್ಕದ ಇನ್ನೊಂದಿಷ್ಟು ವಲಯವನ್ನು ಚಾನ್ಸೇನ್ ಎನ್ನುತ್ತಾರೆ. ಉಗ್ರರಿಗೆ ಲೀಪಾ ಎಂದರೆ ಡೈಖಾನ್ ವ್ಯಾಲಿಯ ಬದೀಗೆ ಹೋಗುವಂತೆ ಪಾಕಿ ಅಧಿಕಾರ ಕೇಂದ್ರವೇ ಸೂಚನೆ ಕೊಡುತ್ತದೆ. )

ಅಲ್ಲಿ ಸೈನ್ಯಾಧಿಕಾರಿಗಳಿದ್ದಾರೆ. ನಿವೃತ್ತ ರೇಂಜರ್ ಗಳಿದ್ದಾರೆ. ಐ.ಎಸ್.ಐ.ಗಾಗಿ ನೌಕರಿ ಮುಗಿದ ನಂತರವೂ ಪ್ರಾಣ ಕೊಡಲು ಸಿದ್ಧರಿರುವ ಅನಾಹುತಕಾರಿ ಅಧಿಕಾರಿಗಳಿದ್ದಾರೆ. ಕೊನೆಗೆ ಸೈನ್ಯದ ಅಷ್ಟೂ ರೀತಿಯ ಹೆಚ್ಚಿನ ಅಧಿಕಾರಿಗಳು, ರಿಟೈರಾದವರು, ಸೈನ್ಯಕ್ಕೆ ಅಚ್ಚುಮೆಚ್ಚಾಗಲು ಯತ್ನಿಸುವವರೆಲ್ಲಾ ಇವತ್ತು ಕಾಯ್ದು ಕೂತಿದ್ದುದು ಅಕ್ಷರಶ: ಕಾಶ್ಮೀರ ಆ ಕಡೆಯ ಗಡಿಯಲ್ಲಿ ಎನ್ನುವುದು ಜಗತ್ತಿಗೆ ಗೊತ್ತಾಗುವ ಹೊತ್ತಿಗೆ ಪಾಕಿಸ್ತಾನ ಈ ಸರಹದ್ದಿನ ಮನೆಗಳನ್ನು ಬಳಸಿ ಅನಾಮತ್ತು ಆರ್ನೂರಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತದೊಳಕ್ಕೆ ನುಗ್ಗಿಸಿ ಆಗಿತ್ತು. ಇದು ಪಾಕಿಸ್ತಾನ ಹಿಂದೊಮ್ಮೆ ಹೇಳಿದಂತೆ ಸಾವಿರ ವರ್ಷದ ಯುದ್ಧ. ಹೌದು. 1948 ರಲ್ಲಿ ಭಾರತ ಮಾತುಕತೆಯ ಟೇಬಲ್ಲಿನ ಮೇಲೆ ಸೋತು ಹೋದರೂ ಪಾಕಿಸ್ತಾನ ಸೈನ್ಯಕ್ಕಾದ ಅವಮಾನ ಮಾತ್ರ ಅನಾಹುತಕಾರಿ ಹಂತದಲ್ಲಿತ್ತು. ಆವತ್ತೇ ಆಗಿನ ಪಾಕಿಸ್ತಾನದ ನಾಯಕರಲೊಬ್ಬ ಹೀಗೆ ನುಡಿದ್ದದ್ದು ಇವತ್ತು ಜಾಗತಿಕ ದಾಖಲೆ. "..ಭಾರತದೊಂದಿಗೆ ನಾವು ಒಂದು ಯುದ್ಧ ಸೋತಿರಬಹುದು. ಆದರೆ ಇನ್ನು ಮೇಲೆ ಎಲ್ಲಿಯವರೆಗೆ ಕಾಶ್ಮೀರ ಸ್ವತಂತ್ರಗೊಳಿಸಿ ನಮ್ಮ ತೆಕ್ಕೆಗೆ ಸೇರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ವಿರಮಿಸುವುದಿಲ್ಲ. ಇದು ಸಾವಿರ ವರ್ಷಗಳವರೆಗೆ ನಡೆಯಲಿರುವ ಯುದ್ಧ..." 
ಅಲ್ಲಿಂದಿಚೆಗೆ ಪಾಕಿಸ್ತಾನ ವಿರಮಿಸಿದ್ದು ಸುಳ್ಳು ಮತ್ತು ಅದಕ್ಕೆ ನೆಮ್ಮದಿಯ ರಾತ್ರಿಗಳನ್ನು ಸ್ವತ: ಕಾಶ್ಮೀರ ಯಾವತ್ತೂ ಕೊಡಲೇ ಇಲ್ಲ. ಕಾರಣ ಕಾಶ್ಮೀರ ಎನ್ನುವುದು ಪಾಕಿಸ್ತಾನದ ಮಟ್ಟಿಗೆ ಅವಮಾನ ಮತ್ತು ಹತಾಶೆಯ ಹುಣ್ಣಾಗಿ ಹೆಗಲೇರಿ ಕೂತುಬಿಟ್ಟಿತ್ತು. ಬೇಕಿದ್ದೋ ಬೇಡದೆಯೋ ಅದು ತನ್ನ ರಾಜನೀತಿ, ಧಾರ್ಮಿಕ, ಸಾಮಾಜಿಕ ಮತ್ತು ಕೊನೆಕೊನೆಗೆ ವೈಯಕ್ತಿಕ ಇಷ್ಟಾನಿಷ್ಟಗಳಲ್ಲೂ ಅದನ್ನು ಪೆÇೀಷಿಸಿಕೊಂಡೆ ಬಂತು. ಇವತ್ತು ಪಾಕಿಸ್ತಾನದಲ್ಲಿ ಜನ ಸಾಮಾನ್ಯನಿಂದ, ತೀರ ಡಿಪೆÇ್ಲೀಮ್ಯಾಟ್‍ಗಳವರೆಗೆ ಹೇಗೇ ಲೆಕ್ಕ ಹಾಕಿದರೂ ಯಾವುದೇ ವಿಷಯದ ಚರ್ಚೆಯಾದರೂ ಅದು ಬಂದು ಕೊನೆಯಲ್ಲಿ ನಿಲ್ಲುವುದು ಭಾರತದೆಡೆಗಿನ ಅಸಹನೆ ಮತ್ತು ಭಾರತದ ಅಭಿವೃದ್ಧಿ ಬಗೆಗಿನ ಒಳಸಂಕಟ, ಹಿಂದೂಗಳನ್ನೂ ಹೇಗೆ ಕೊನೆಗಣಿಸಬೇಕೆನ್ನುವ ತಪನೆಯೇ ಹೊರತಾಗಿ ಬೇರೊಂದು ಜಗತ್ತಿದೆ ಎನ್ನುವ ಭೌದ್ಧಿಕ ಪಾರಮ್ಯ ಸಾಧಿಸಿದ್ದೇ ಇಲ್ಲ. 
ಇಂಥಾ ವಿನಾ ಕಾರಣಗಳಿಗಾಗಿ ಮುಸ್ಲಿಂ ಹೊರತು ಪಡಿಸಿ ಇನೊಬ್ಬೆ ಒಬ್ಬ ಬೇರೆ ಧರ್ಮೀಯ ಪಾಕಿಸ್ತಾನಕ್ಕೆ ಕಾಲಿಡುತ್ತಿಲ್ಲ. ಪ್ರವಾಸಿ ಲೆಕ್ಕದಲ್ಲಿ ಅಲ್ಲಿನ ಪ್ರಗತಿ ಅಪೂಟು ಕಿತ್ತು ಹೋಗಿದೆ. ನಿಮಗೆ ಗೊತ್ತಿರಲಿ ಒಂದು ದೇಶಕ್ಕೆ ಎಷ್ಟು ವಿದೇಶಿಯರು ವ್ಯಾಪಾರ, ಪ್ರವಾಸ, ವೈದ್ಯಕೀಯ, ಸಾಮಾಜಿಕ ಹಾಗು ಕ್ರೀಡೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸಂದರ್ಶಿಸುತ್ತಾರೆ ಎನ್ನುವುದರ ಮೇಲೆ ಅಲ್ಲಿನ ಸಾಮಾಜಿಕ ಸಮತೋಲನದ ಸಂಖ್ಯೆ ಜಾಗತಿಕವಾಗಿ ದಾಖಲಾಗುತ್ತದೆ. ಆ ವಿಷಯದಲ್ಲಿ ಪಾಕಿಸ್ತಾನದ್ದು ಅತ್ಯಂತ ಹೀನಾಯ ಸ್ಥಿತಿಗತಿ. ಅದಕ್ಕೆ ಬೆಂಬಲವಾಗಿ ಈಗ ಹೊಸ ರೀತಿಯ ಯೋಜನೆಗೆ ಹಿಂದ್ಯಾವತ್ತೋ ಚಾಲನೆ ಕೊಟ್ಟಿದ್ದ ಪಾಕಿಸ್ತಾನದ ಇನ್ನೊಂದು ದೂರಗಾಮಿ ಆತಂಕಿ ಮುಖವನ್ನು ಭಾರತದ ಸೈನ್ಯ ವರೆಸಿಹಾಕುತ್ತಿದೆ. ಕಳೆದೆರಡ್ಮೂರು ದಶಕಗಳಿಂದ ಪಾಕಿಸ್ತಾನದ ದೂರಾಲೋಚನೆಯಿಂದ ಸೈನ್ಯದ ನಿವೃತ್ತ ಮತ್ತು ಇತರ ಅಧಿಕಾರಿ ಹಾಗು ತಂಡಗಳನ್ನು ನೆಲೆಗೊಳಿಸುತ್ತಿದ್ದುದು ಎಲ್ಲಿ ಗೊತ್ತೆ ಭಾರತದ ಗಡಿಗಳಲ್ಲಿ. ಸುಮಾರು ಕಳೆದ ಮೂವತ್ತು ವರ್ಷಗಳಲ್ಲಿ ಹೀಗೆ ಬಂದುಳಿದವರ ಮತ್ತು ನೆಲೆಗೊಳಿಸಿದ ಕುಟುಂಬಗಳ ಸಂಖ್ಯೆ ಸುಮಾರು ಎರಡು ಸಾವಿರಕ್ಕೂ ಮಿಗಿಲು. ಇವರೆಲ್ಲಾ ಸಾಲು ಸಾಲಾಗಿ ಅನಾಮತ್ತಾಗಿ ತೀರ ಕಡಿಮೆ ಬೆಲೆಯಲ್ಲಿ ಸರಕಾರ ಒದಗಿಸಿದ ತೋಟದ ಮನೆಗಳಲ್ಲಿ ಬೀಡು ಬಿಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತದಕ್ಕೆ ನುಸುಳುವ ಉಗ್ರರನ್ನು ಅಲ್ಲಿ ಸಾಕುತ್ತಾ ಇರುತ್ತಾರೆ. ಅವಕಾಶ ಸಿಕ್ಕಿದಾಗ ಅವರನ್ನು ಅಲ್ಲಿಂದ ಇತ್ತಲಿನ ಗಡಿಗಳಲ್ಲಿ ನುಗ್ಗಿಸಲಾಗುತ್ತದೆ. ಆ ಅವಕಾಶಕ್ಕಾಗಿ ಸರಹದ್ದಿನಲ್ಲಿ ತಲೆ ಮರೆಸಿಕೊಂಡಂತೆ ಇರಲು ಈ ನಿವೃತ್ತ ಸೈನಿಕರ ತೋಟದ ಮನೆಗಳನ್ನು ಬಳಸಿಕೊಳ್ಳಲಾಗುತ್ತದೆ.
ನಿಮಗೆ ಗೊತ್ತಿರಲಿ.. ಇವತ್ತು ಭಾರತದೊಳಕ್ಕೆ ಬರಲು ಕಳ್ಳ ದಾರಿಗಳನ್ನು ಸೃಷ್ಟಿಸಿಕೊಳ್ಳುವ ಉಗ್ರರಿಗೆ ಒಳಗೆ ಬಂದ ಮೇಲೆ ಶ್ರೀನಗರದ ವರೆಗೆ ತಲುಪಲು ನಿಸರ್ಗ ಬಹುದೊಡ್ಡ ಕೊಡುಗೆ ನೀಡಿದೆ. ಒಮ್ಮೆ ಗಾಂಧಾರ್‍ಬಾಲ್ ದಾಟಿಬಿಟ್ಟರೆ ಮತ್ತೇನಿದ್ದರೂ ಪರ್ವತದ ಸೆರಗು ಕೊರೆದು ರೂಪಿಸಿದ ಕಡಿದಾದ ಅಂಚಿನ ಅಪ್ಪಟ ಕಣಿವೆಯ ಏರಿಳಿತ. ಸಂಪೂರ್ಣ ಕಣಿವೆಯನ್ನು ಕೊರಕಲಾಗಿಸಿ ಗುಡ್ಡಗಳ ಏರಿಳಿತ, ನಿರಂತರ ಭೂ ಕುಸಿತದಂತಹ ವೈಪರಿತ್ಯಗಳಿಗೆ ಒಡ್ಡಿದ್ದೆ ಇಲ್ಲಿ ಎಲ್ಲೆಂದರಲ್ಲಿ ಹರಿಯುವ ನದಿ ಕವಲುಗಳು. ಅತೀ ಸೂಕ್ಷ್ಮ ಪ್ರದೇಶ ಎನ್ನಿಸಿರುವ ಉರಿಸೆಕ್ಟರಿನ ಆಸುಪಾಸೇ ಎಷ್ಟು ನಾಲಾಗಳು, ಕಾಲುವೆಗಳಿವೆ ಎಂದರೆ ಒಬ್ಬ ಸಲೀಸಾಗಿ ಅದರ ಕೊರಕಲಿನಲ್ಲಿ ತೆವಳಿಕೊಂಡೆ ಕಿ.ಮೀ.ಗಟ್ಟಲೆ ಭಾರತದೊಳಕ್ಕೆ ಕ್ರಮಿಸಿಬಿಡುತ್ತಾನೆ.
ಉರಿಯ ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವುದೇ ಸಲಮ್‍ನಾಲಾ ಎಂಬ ಹಳ್ಳ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ಹಳ್ಳಗಳು ಹರಿದು ಝೀಲಂ ನದಿಯನ್ನು ತಲುಪುತ್ತವೆ. ಇದಲ್ಲದೆ ರಾವಿ, ಚಿನಾಬ್ ಸೇರಿದಂತೆ ಸಿಂಧೂನದಿಯ ಇಕ್ಕೆಲಗಳ ಪಾತ್ರಗಳಿಗೆ ಬಂದು ಸೇರುವ ನಾಲಾಗಳ ಸಂಖ್ಯೆ ಸರಿಯಾಗಿ ಏಣಿಸಿದರೆ ಸುಮಾರು ಎರಡು ಸಾವಿರದ ಹತ್ತಿರದಲ್ಲಿದೆ. ಶಂಕರಾಚಾರ್ಯ ನೆತ್ತಿಯ ಮೇಲೆ ನಿಂತು ನೋಡಿದರೆ ಸಂಪೂರ್ಣ ಶ್ರೀನಗರ ಯಾವತ್ತೂ ನೀರಿನಲ್ಲಿ ಮುಳುಗಿದಂತೆಯೇ ಕಾಣಿಸುತ್ತಿರುತ್ತದೆ. ಈ ನದಿಯನ್ನು ಪಳಗಿಸುವುದು ಅತ್ಲಾಗಿರಲಿ, ದಂಡೆಯನ್ನು ಹಿಡಿತಕ್ಕಿಟ್ಟುಕೊಳ್ಳುವುದು ಕಷ್ಟ. ಇಂತಹ ತುಂಬ ದುರ್ಗಮ ಪ್ರದೇಶಗಳು ಸರಹದ್ದಿನುದ್ದಕ್ಕೂ ಸಾಲುಸಾಲಾಗಿವೆ. ಇಂಥಲ್ಲಿಂದಲೇ ಉಗ್ರರು ನುಸುಳುತ್ತಾರೆ. ಜೊತೆಗೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟಕೊನೆಯಲ್ಲಿ ತೀರ ಸರಹದ್ದಿನ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.
ಇತ್ತ ತಾವಗಿ, ಅಪೂಟು ಪಾಕಿಗಳ ಪಕ್ಕೆಗೆ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್‍ಭಾಗ್ಲಿ, ಪಾದದಲ್ಲೇ ನಟೋರಿಯಸ್ ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತ ಸರಹದ್ದಿನ ಸೆರಗಿಗೆ ಚುಂಗಿನಂತೆ ಆವರಿಸಿಕೊಂಡಿರುವ ಹತ್ತಾರು ಮನೆಗಳ ನೂರಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್‍ಪಂಜಾಲ್ ಪರ್ವತಶ್ರೇಣಿ ಎರಡೂ ಮಗ್ಗುಲಲ್ಲೂ ಯಥೇಚ್ಚವಾಗಿ ಕನಿಷ್ಠ ಸಾವಿರ ಅಡಿಯ ಎತ್ತರದ ಪರ್ವತಾಗ್ರಹಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಇವೆಲ್ಲದಕ್ಕೂ ಬೆಂಬಲವಾಗಿ ಪಾಕಿ ಗಡಿಯಿಂದ ಫೈರಿಂಗು ಅವರನ್ನು ರಕ್ಷಿಸಲು ಮೊಳಗುತ್ತಿರುತ್ತದೆ. ಅದರೆ ಇದೆಲ್ಲಾ ನಿರುಕಿಸುವ ಭಾರತೀಯ ಸೈನಿಕ ಬಂದೂಕಿನ ಕುದುರೆ ಎಳೆಯಲು ಕಾಯ್ದು ಕೂತೇ ಇರುತ್ತಾನೆ. ಹಾಗಾಗೇ ಇದೇ ವರ್ಷದಲ್ಲಿ ಅನಾಮತ್ತು 164 ಉಗ್ರರ ಹೆಸರಿನ ಹೇಡಿಗಳನ್ನು ಭಾರತದ ಸೈನಿಕರು ಹೊಡೆದುರುಳಿಸಿದ್ದಾರೆ. ಕಣಿವೆ ಖಾಲಿಯಾಗುತ್ತಿದೆ.

Sunday, October 1, 2017

ಕಾಶ್ಮೀರವೆಂಬ ಖಾಲಿ ಕಣಿವೆ..
ಉಗ್ರರ ಬೆಂಬಲಕ್ಕೆ ನಮ್ಮದೇ ಹಣ..
 (ಮೊನ್ನೆ ಮೊನ್ನೆಯವರೆಗೂ ದೆಹಲಿ ಮೀಟಿಂಗ್ ಎಂಬ ನೆಪದಲ್ಲಿ ಅನಾಮತಾಗಿ 365 ಕೋಟಿ ರೂ. ಸರಕಾರಿ ದುಡ್ಡು ಖರ್ಚು ಮಾಡಿರುವ ಪ್ರತ್ಯೇಕತಾವಾದಿಗಳಿಗೆ ಅಷ್ಟು ಕೊವತ್ತಿದ್ದರೆ ಸ್ವಂತದ ಮಕ್ಕಳನ್ನು ಕಾಶ್ಮೀರದಲ್ಲಿ ಇಂತಹ ಪುಂಡಾಟಿಕೆ, ಕಲ್ಲೆಸೆಯುವಂತಹ ದೇಶದ್ರೋಹದ ಕೆಲಸಕ್ಕೆ ಬಳಸಲಿ. ಸಾಧ್ಯವೇ ಇಲ್ಲ. ಇವರೆಲ್ಲಾ ಯಾವಾಗಲೋ ದೇಶ ಬಿಟ್ಟು ವಿದೇಶಗಳಲ್ಲಿ ನೆಲೆಕಂಡಿದ್ದಾರೆ. ಅಂದಹಾಗೆ ಈ ಪ್ರತ್ಯೇಕತಾವಾದಿ ಉಗ್ರರ ಬೆಂಬಲಿಗರಿಗೆ ಸ್ವಂತದ್ದೂ ಅಂತಾ ಯಾವ ದುಡಿಮೆ, ಕ್ಯಾಮೆ ಮಾಡಿಯೇ ಗೊತ್ತಿಲ್ಲ. ಜೀವನ ಪೂರ್ತಿ ದ್ರೋಹದ ಕೆಲಸವೇ..? ಮತ್ತೆ ಇಂಥಾ ಐಶಾರಾಮಿ ಜೀವನ, ಬದುಕು ಹೇಗೆ ಸಾಗುತ್ತಿದೆ ಹಾಗಾದರೆ..? ಎಲ್ಲಿಂದ ಬರುತ್ತಿದೆ ಇವರಿಗೆ ಈ ಪಾಟಿ ದುಡ್ಡು..? ಅದೇ ಇಂಟರೆಸ್ಟಿಂಗ್..)

ಇವತ್ತು ಅಜಾದಿ ಗ್ಯಾಂಗು ಎಂಬ ಹೆಸರಲ್ಲಿ ಕಾಶ್ಮೀರದಲ್ಲಿ ಬೇಡದ ಕ್ಯಾತೆ ಮಾಡಿಕೊಂಡು ಪಾಕಿಸ್ತಾನದ ಬೂಟು ನೆಕ್ಕುತ್ತಿರುವ ಉಗ್ರವಾದಿ ಬೆಂಬಲಿಸುವ ಪ್ರತ್ಯೇಕತಾವಾದಿ ನಾಯಕರುಗಳು ಮತ್ತು ಸಂಪೂರ್ಣ ಕಾಶ್ಮೀರದ ವ್ಯವಹಾರ ಹಾಗು ಉಸಿರು ನಡೆಯುತ್ತಿರುವುದೇ ನಾವು ನೀವೆಲ್ಲ ಕೊಡುತ್ತಿರುವ ತೆರಿಗೆ ಹಣದ ಮೇಲೆ ಎಂಬುದು ನಿಮಗೆ ಗೊತ್ತಿದೆಯೇ..? ವೈರುದ್ಯ ಮತ್ತು ಅತ್ಯಂತ ಹೇಯವೆಂದರೆ ಇಂಥಾ ದೇಶ ಒಡೆಯುವ ದ್ರೋಹಿಗಳಿಗೆ ದೆಹಲಿಗೆ ಬರುವ ಖರ್ಚನ್ನು ನಮ್ಮ ಸರಕಾರಗಳು ವಹಿಸಿಕೊಂಡು ಬಂದಿವೆ ಕಳೆದ ಹಲವು ದಶಕಗಳಿಂದ. ತೀರ ಅನಾಹುತಕಾರಿ ಮತ್ತು ನೀಚ ಕೃತ್ಯವೆಂದರೆ ಕಲ್ಲು ಹೊಡೆಯುವ ಮತ್ತು ಉಗ್ರರಿಗೆ ಬೆಂಬಲ, ಮನೆ, ಅನ್ನ, ನೀರು, ಆಶ್ರಯ ಇವೆಲ್ಲವನ್ನೂ ಒದಗಿಸುವ ಕೆಲಸವನ್ನೇ ಇವರು ಮಾಡುತ್ತಿರುವುದು ಮತ್ತು ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ನೇರವಾಗಿ ಇವರಿಗೆ ಹಣ ತಲುಪುತ್ತದೆ. ಅದಕ್ಕಾಗಿ ಇವರು ಅತ್ತಲಿಂದ ನುಸುಳುವ ಪಾತಕಿಗಳು ಸೇರಿದಂತೆ ಸ್ಥಳೀಯ ಹುಡುಗರನ್ನು ಸಂಘಟಿಸುವುದು, ಕಲ್ಲು ಹೊಡೆಯುವ ಕೆಲಸಕ್ಕೆ ಹಣ ನೀಡುವುದು, ಎಲ್ಲಾದರೂ ಉಗ್ರರು ಸಿಕ್ಕಿಬಿದ್ದರೆ ಸೈನಿಕರು ನಡೆಸುವ ಕಾರ್ಯಾಚರಣೆಗೆ ತಡೆ ಒಡ್ಡುವುದು, ಮಿಲಿಟರಿ ಜನರಿಗೆ ಯಾವುದೇ ಸರ್ವೀಸು ಸಿಗದಂತೆ ನೋಡಿಕೊಳ್ಳುವುದು ಇಂತಹ ಹರಾಮಿ ಕೆಲಸವೇ ಇವರ ನೌಕರಿ. ಹೇಗಿದೆ ಜೀವನ...?
ಅಷ್ಟಕ್ಕೂ ಈಗಿನ ಜನರೇಶನ್ನಿನ ಹುಡುಗರಿಗೆ ಮತ್ತು ಇತ್ತೀಚಿನ ಒಂದು ದಶಕದಿಂದ ಹದಿಹರೆಯದ ಹುಡುಗಿಯರಿಗೂ, ಹುಟ್ಟುತ್ತಲೇ ಧರ್ಮದ ಅಫೀಮು ಮತ್ತು ಭಾರತ ವಿರೋಧಿ ಕತೆ ಹೇಳಿ ಬೆಳೆಸಿದ, ಬೆಳೆಸುತ್ತಿರುವ ಅಧ್ಬುತ ಯೋಜನೆಯ ಶ್ರೇಯ ಕೂಡಾ ಇವರದ್ದೆ. ಇವರೊಂದಿಗೆ ರಾಜಕೀಯ ತೆವಲೆನ್ನುವುದು ಅದೆಷ್ಟು ಮನುಶ್ಯನನ್ನು ದೇಶದ್ರೋಹಿಯನ್ನಾಗಿಸಬಲ್ಲದು ಎನ್ನುವುದಕ್ಕೆ ತಲೆ ಮಾಸಿದ ಅಬ್ದುಲ್ಲಾ ಅಪ್ಪಟ ಉದಾಹರಣೆ. ಅವನ ಸ್ಟೇಟ್‍ಮೆಂಟು ನೋಡಿ,
"..ಕಾಶ್ಮೀರದಲ್ಲಿ ಜನ ಶಸ್ತ್ರಾಶ್ತ್ರ ಹಿಡಿಯುತ್ತಿರುವುದು ಅವರ ಹಕ್ಕಿಗಾಗಿ ಮತ್ತು ಸ್ವಂತಂತ್ರ ರಾಷ್ಟ್ರಕ್ಕಾಗಿ. ಅವರನ್ನು ಬೆದರಿಸಿ ಗೆಲ್ಲುವುದು ಸಾಧ್ಯವಿಲ್ಲ. ಮನೆ ಮನೆಗಳಲ್ಲಿ ಕಾಶ್ಮೀರಕ್ಕಾಗಿ ಜೀವ ಕೋಡಲು ಜನ ಸಿದ್ಧವಿದ್ದಾರೆ. ಕಶ್ಮೀರ ಯುವಕರಿಗೆ ರಾಜಕೀಯದ ಬದಲಾಗಿ ಇರುವುದು ದೇಶಾಭಿಮಾನ.. " 
ಅಂದ ಹಾಗೆ ಇಂಥ ಹೇಳಿಕೆಯ ಹಿಂದೆ ಇರುವ ನಾಯಕರೆಂದರೆ ತೀರ ಕಾಶ್ಮೀರ ಪ್ರಗತಿಗೆ ಮತ್ತು ಅಲ್ಲಿನ ಜನಜೀವನಕ್ಕೆ, ಪಕ್ಕೆ ಮುಳ್ಳಾಗಿ ಕಾಡುತ್ತಿರುವ ಪ್ರಮುಖ ಉಗ್ರ ಬೆಂಬಲಿಗರಾದ ಸಯ್ಯದ ಗಿಲಾನಿ, ಮೀರ್‍ವೇಜ್, ಯಾಸಿನ್ ಮಲಿಕ್, ಇರ್ಫಾನ ಹಫೀಸ್, ಲೋಧಾ ಮತ್ತು ಅಸ್ಲಂಗಣಿ ಇತ್ಯಾದಿಗಳು. ಇವರೆಲ್ಲರ ನಿರಂತರ ಕಾಯಕವೆಂದರೆ ಜೆ.ಎನ್.ಯು. ನಂತಹ ವಿಶ್ವವಿದ್ಯಾಲಯದಲ್ಲಿ ಗಲಾಟೆಗೆ ಕುಮ್ಮಕ್ಕು ಮತ್ತು ಹಿಂಬಾಗಿಲಿನಿಂದ ಎಲ್ಲೆಡೆಗೆ ದೇಶ ವಿರೋಧಿ ಸಂಸ್ಕೃತಿಗೆ ಚಾಲನೆ ಕೊಡುತ್ತಾ, ಅತ್ತ ಪ್ರತಿ ಕೆಲಸಕ್ಕೂ ಪಾಕಿಗಳ ಕಡೆಯಿಂದ ಹಣ ಎತ್ತುತ್ತಾ ಬದುಕುತ್ತಿದ್ದಾರೆ. ಇಂಥಾ ವಿದ್ರೋಹಿಗಳಿಗೆ ನಮ್ಮ ತೆರಿಗೆ ಹಣದಲ್ಲಿ ಪ್ರತಿ ಸರಿ ದೆಹಲಿಗೆ ಮೀಟಿಂಗ್ ನೆಪದಲ್ಲಿ ಬರಲು ವಿಮಾನ, ವಿ.ಐ.ಪಿ. ಸೌಲಭ್ಯ ಗಳನ್ನು ಸರಕಾರ ಕಳೆದ ಹಲವು ದಶಕಗಳಿಂದ ಕೊಡಮಾಡುತ್ತಿತ್ತು ಎಂದರೆ ಅದೆಂಥಾ ಕರ್ಮ ನೋಡಿ. ಇವರ ರಾಜಕೀಯ ತೆವಲಿಗಾಗಿ ಭಾರತೀಯರು ಏನೆಲ್ಲಾ ಭಾರ ಹೊರಬೇಕಿದೆ. 
ಇವರ ಮುಂದಿನ ಸಂತಾನದಂತಿರುವ ಉಮರ್ ಖಾಲಿದ್ ಮತ್ತು ಕನ್ನಯ್ಯಾ ಕುಮಾರ್‍ನಂಥವರು ದೇಶದ ಇತರೆಡೆಗೆ ಒಳಗೊಳಗೇ ವಿದ್ರೋಹಿಗಳನ್ನು ತಯಾರು ಮಾಡುತ್ತಿದ್ದಾರೆ. ಇವತ್ತು ದೇಹಲಿ, ಹೈದರಾಬಾದ್ ವಿಶ್ವವಿದ್ಯಾಲಯಗಳು ಅಕ್ಷರಶ: ಇಂಥಾ ವಿದ್ರೋಹಿಗಳನ್ನು ಹುಟ್ಟಿಸುವ ಟಂಕಶಾಲೆಗಳು. ಅಂದಹಾಗೆ ಇವೆಲ್ಲಾ ಇತ್ತಿಚೆಗೆ ಸಾಲುಸಾಲಾಗಿ ಹುರಿಯತ್ ನಾಯಕರನ್ನು ಎನ್.ಐ.ಎ. ಬಂಧಿಸಿ ಬಾಯ್ಬಿಡಿಸುತ್ತಿರುವುದರಿಂದ ಇಲ್ಲಿವರೆಗೆ ಕೇವಲ ಪೇಪರ್ ಸುದ್ದಿಯಾಗಿದ್ದು ಈಗ ದಾಖಲೆಯಾಗುತ್ತಿದೆ. ಹೀಗೆ ಹುರಿಯತ್ ಮುಖಂಡರಿಗೆ ಹವಾಲಾ, ಬ್ಯಾಂಕು, ಕ್ಯಾಷ್ ಆಂಡ್ ಕ್ಯಾರಿ ಹಾಗು ದುಪ್ಪಟ್ಟು ನಿಗದಿಗಳ ಮೂಲಕ ಹಣ ಬರುತ್ತಿರುವುದು ಖಾತ್ರಿಯಾಗುತ್ತಿದ್ದಂತೆ ರಾತ್ರೋರಾತ್ರಿ ಈ ನಾಯಕರಗಳ ಮನೆ ಮೇಲೆ ದಾಳಿಯಾಯಿತು. ಒಂದೇ ದಿನದಲ್ಲಿ ಅನಧಿಕೃತ ದಾಖಲೆ ಇಲ್ಲದೆ 2.5 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು ಅದು ಬರಲಿರುವ ದಿನಗಳ ಕಲ್ಲಿನೇಟಿನ ಪುಢಾರಿ ಹುಡುಗರಿಗೆ ಹಂಚಲು ಬಳಸಲಾಗುತ್ತಿತ್ತು ಎಂದು ದಾಖಲೆ ಲಭ್ಯವಾಗುವುದರೊಂದಿಗೆ ಹುರಿಯತ್‍ನ ಬಂಡವಾಳ ಅಧಿಕೃತವಾಗಿ ಬೀದಿಗೆ ಬಂದಿದೆ. 
" ಕೂಲಿಗಾಗಿ ಕಲ್ಲು" ಎನ್ನುವ ಯೋಜನೆ ರೂಪಿಸಿದ್ದ ಈ ನಾಯಕರು ತಿಂಗಳ ಒಂದೆರಡು ದಿನಗಳ ಕಾಲ ಇದಕ್ಕಾಗಿ ಹುಡುಗರಿಗೆ, ಕಲ್ಲು ಹೊಡೆಯುವ ತಂಡಗಳನ್ನು ರೂಪಿಸಿ ಆಯಾ ಕ್ಷೇತ್ರವಾರು ಜವಾಬ್ದಾರಿ ವಹಿಸಿಡುತ್ತಿದ್ದರು. ಇಲ್ಲದಿದ್ದರೆ ಪೆÇೀಲಿಸರು ರಸ್ತೆಗೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಅದೆಲ್ಲಿಂದ ಜನ ಕಲ್ಲುಗಳನ್ನು ಹಿಡಿದು ಹೊರಬರುತ್ತಾರೆ..? ಒಂದೆರಡು ದಿನದ ಇಂತಹ ಕಲ್ಲು ಹೊಡೆಯುವ ಪರಮ ದ್ರೋಹಿಗಳು ಒಂದೆರಡು ಕೃತ್ಯಕ್ಕೆ ಪೂರ್ತಿ ತಿಂಗಳಿಗಾಗುವಷ್ಟು ಹಣ ಪಡೆಯುತ್ತಾರೆ. ಬಾಕಿ ದಿನ ಇಲ್ಲಿನ ಎಲ್ಲಾ ವಿವರಗಳನ್ನು ವಾಟ್ಸ್ ಆಪ್‍ನಲ್ಲೂ ಫೇಸ್ ಬುಕ್ಕಿನಲ್ಲೂ ಹಾಕುವುದು ವಿಡಿಯೋ ಅಪೆÇ್ಲೀಡ್ ಮಾಡುತ್ತಲೂ ಜಾಗತಿಕವಾಗಿ ಕಾಶ್ಮೀರದಲ್ಲಿ ಮಾನವ ಹಕ್ಕಿನ ದಮನ ಎಂದು ಪ್ರಚುರ ಪಡಿಸುತ್ತಾ ಕೂರುತ್ತಾರೆ. ಕಲ್ಲೇಟಿನ ದುಡಿತ ಕೆಲವೇ ಗಂಟೆಗಳಾಗಿದ್ದರಿಂದ ಮತ್ತು ಅದರಂತೆ ಇನ್ನಷ್ಠು ಹಣ ಮಾಡುವ ಅವಕಾಶ ಸಿಕ್ಕಿದರೆ ಸಿದ್ಧ ಎನ್ನುತ್ತಾ ದೇಶದ್ರೋಹದ ಇನ್ನಿಷ್ಟು ಹೊಸ ಯೋಜನೆಗಳಿಗೆ ತಯಾರಾಗುತ್ತಾರೆ. ಇವೆಲ್ಲದಕ್ಕೂ ಮೂಲ ನಮ್ಮದೇ ದುಡ್ಡಿನಲ್ಲಿ ಬದುಕುತ್ತಿರುವ ಕಾಶ್ಮೀರ ಸರಕಾರ ಮತ್ತು ಅವರನ್ನು ಸಾಕುತ್ತಾ, ದೇಶಾದ್ಯಂತದ ವೋಟಬ್ಯಾಂಕ್ ಭದ್ರ ಮಾಡಿಕೊಳ್ಳುವ ಸಲುವಾಗಿ ಕಳೆದ ಹಲವು ದಶಕಗಳಿಂದ ಕಾಶ್ಮೀರದ ದ್ರೋಹಿಗಳನ್ನು ಸಾಕುತ್ತಿದ್ದ ರಾಜಕೀಯ ಪಕ್ಷಗಳ ಕಾರಣ ಇವತ್ತು ಇಂಥಾ ಗಂಡಾಂತರ ಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ನಮ್ಮದೇ ಹಣದಲ್ಲಿ ದ್ರೋಹಿಗಳನ್ನು ಸಲಹುವ ಪರಿಸ್ಥಿತಿ.
ಇದೇ ಕಾರಣ ಇವತ್ತು ಕಾಶ್ಮೀರದ ಮನೆಯ ಗಲ್ಲಿಗಲ್ಲಿಗಳಲ್ಲಿ ಕಲ್ಲಿನ ಸಂಗ್ರಹ ಹೊಂದಿದ ದಾಸ್ತಾನುಗಳಿವೆ. ಸುದ್ದಿ ಬರುತ್ತಿದ್ದಂತೆ ಇಡೀ ಮನೆಯ ಸುತ್ತಲಿನ ತಂಡಗಳು ಮಿಲಿಟರಿ ವಿರುದ್ಧ ಕಲ್ಲೆಸೆಯಲು ಕಾರ್ಯಾಚರಣೆಗಿಳಿಯುತ್ತದೆ. ಅವರನ್ನು ಹೊಡೆದು ಹಾಕಿದರೆ ಅದನ್ನು ಮಾನವ ಹಕ್ಕು ದಮನ ಎಂದು ದೇಶಾದ್ಯಂತ ಇರುವ ಎಡಪಂಥೀಯ ಪ್ರಪರ ಬುಜೀಗಳು ಹುಂಯ್ಯೋ ಹುಂಯ್ಯೋ ಎಂದು ಕೀರಲಾಗಿ ಒರಲುತ್ತಾ ನಿಂತುಬೀಡುತ್ತಾರೆ. ಅದನ್ನೆ ಕೆಲವು ದ್ರೋಹಿ ಚಾನೆಲ್‍ಗಳು ಆ ಸುದ್ದಿಯನ್ನೇ ಅಂತರಾಷ್ತ್ರೀಯ ಮಟ್ಟದಲ್ಲಿ ಭಾರತದ ಹರಾಜು ಹಾಕಲು ನಿಲ್ಲುತ್ತವೆ. ಇವೆಲ್ಲದಕ್ಕೂ ಪಾಕಿ ಮೂಲದಿಂದ ಹಣ ಪೂರೈಕೆಯಾಗುತ್ತಿದೆ. ಪಾಕಿಸ್ತಾನಕ್ಕೆ ಗಲ್ಫ್ ಮತ್ತು ಅರಬ ಮೂಲದ ಉದ್ಯಮಿಗಳಿಂದ ಜೆಹಾದ್ ಹೆಸರಲ್ಲಿ ಹಣ ಎತ್ತಲಾಗುತ್ತದೆ. ಅದೆಲ್ಲವೂ ಅಲ್ಟಿಮೇಟ್ಲಿ ಬಂದು ಸೇರುವುದು ಉಗ್ರರನ್ನು ಬೆಳೆಸಲು ಮತ್ತು ಅವರ ಬೆಂಬಲಕ್ಕೆ ಬೇಕಾಗುವ ವ್ಯವಸ್ಥೆಗೆ.