Friday, February 9, 2018

ಯಾವತ್ತು ಆಜನ್ಮ ಪ್ರತಿಜ್ಞೆ ಕೈಗೊಂಡನೋ ಅಂದಿನಿಂದಲೇ ಹಸ್ತಿನಾವತಿಯ ಸಿಂಹಾಸನ ಮತ್ತು ಮಹಾರಾಜರ ರಕ್ಷಣೆಗೆ ಬದ್ಧ  ಭೀಷ್ಮನೇ ಪಾಂಡುವನ್ನು ಹಿಂದಕ್ಕೆ ಕರೆಸಬೇಕೆಂಬ ಮಾತಿಗೆ ಜೋರು ನೀಡತೊಡಗಿದ್ದಸಿಂಹಾಸನದ ಮೇಲೆ ಕುರುಡರಾಜನೊಬ್ಬನನ್ನು ಕೂರಿಸಿ ಆಡಳಿತ ನಡೆಸುವುದು ನಿಧಾನಕ್ಕೆ ಅಪಸ್ವರಕ್ಕೆ ನಾಂದಿಯಾಗತೊಡಗಿತ್ತುಸಾಮಂತರೂಪುರ-ಪ್ರಮುಖರಿಗೆಲ್ಲ ಕುರುವಂಶಜನೆಂದರೆ ಪಾಂಡುವೇ ಎಂದಾಗಿ ಬಿಟ್ಟಿದ್ದರಿಂದ ಅವರೆಲ್ಲಾ ಆಗಾಗ ಬಹಿರಂಗವಾಗೇ ಭೀಷ್ಮನ ಬಳಿಗೆತಕರಾರು ಸಲ್ಲಿಸತೊಡಗಿದ್ದರುಭೀಷ್ಮ ಇರುವವರೆಗೂ ಹಸ್ತಿನಾವತಿಯ ಸಿಂಹಾಸನಕ್ಕೆ ಯಾವುದೇ ಆಪತ್ತು ಇರುವುದಿಲ್ಲವೆನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿದ್ದರೂಆದಷ್ಟು ಬೇಗ ಪಾಂಡುವನ್ನು ಮರುಸ್ಥಾಪಿಸಿ ಬಿಡುವುದು ಒಳ್ಳೆಯದೆಂದುಭೀಷ್ಮ ಕೂಡಾ ಯೋಚಿಸತೊಡಗಿದ್ದಅದರಂತೆ ಅರಮನೆಯ ಪ್ರಮುಖರನ್ನು ಕರೆಯಿಸಿ ಮಾತಾಡಿ ಪಾಂಡುವನ್ನು ಹಿಂದಿರುಗಲು ರಾಜದೂತರನ್ನು ಸಂದೇಶ ಪಾಲಕರನ್ನು ಸಕಲ ಮರ್ಯಾದೆಗಳೊಂದಿಗೆ ಕರೆತರಲು ಕಳುಹಿಸಲು ಸಮಯಾವಕಾಶನಿಗದಿಪಡಿಸಿದಧೃತರಾಷ್ಟ್ರ ಕೂತಲ್ಲಿಯೇ ಕೈ ಕೈ ಹಿಸುಕಿಕೊಳ್ಳತೊಡಗಿದ್ದಆದರೇನೂ ಮಾಡುವಂತಿರಲಿಲ್ಲ.
ಕಾರಣ ದೊಡ್ಡಪ್ಪನ ಕೃಪೆಯಿಂದ ತನಗೆ ಇಷ್ಟು ಮಾತ್ರದ ಸುಖವಾದರೂ ದೊರಕಿದೆಅಲ್ಲದೇ ಕುರುವಂಶದ ಇತಿಹಾಸದಲ್ಲಿ ತನ್ನ ಹೆಸರು ಕೂಡಾ ಮಹಾರಾಜನೆಂದು ಬರೆಯಲ್ಪಡುತ್ತದೆಅದಕ್ಕಿಂತಲೂ ಹೆಚ್ಚಿಗೆ ದೊಡ್ಡಪ್ಪನ ಮಾತು ಮೀರಿ ತಾನು ಸ್ವತಮಾಡುವಂತಹದ್ದೇನೂ ಇಲ್ಲ ಮಾಡಲು ತನ್ನ ಕೈಲಿ ಆಗುವುದೂ ಇಲ್ಲಹಾಗೆ ಒಳಗೊಳಗೇ ತುಡಿಯುತ್ತಿರುವಾಗಲೇ ಅವನಿಗೆ ಪ್ರಿಯವಾದ ಸುದ್ದಿ ಬಂದಿತ್ತು.
ಪಾಂಡುರಾಜ ಮರಣಕ್ಕೀಡಾಗಿದ್ದ.
ಪಾಂಡುವಿಗಾಗಲೇ ಕಿಂದಮ ಮಹರ್ಷಿಯ ಶಾಪವಿತ್ತಷ್ಟೆಅದರಿಂದಾಗೇ ಅರ್ಧ ಅವನು ಮಾನಸಿಕವಾಗಿ ಕುಸಿದಿದ್ದಅದೇ ಒಳಗೊಳಗೇ ದಹಿಸುತ್ತಿತ್ತುಯಾವಾಗಲೂ ಪತ್ನಿಯರಿಬ್ಬರಿಂದಲೂ ದೂರವೇ ಇರುತ್ತಿದ್ದನಾದರೂ ಅದೊಂದು ದಿನ ಅಂಕೆ ತಪ್ಪಿಮಾದ್ರಿಯ ಸನಿಹ ಬಯಸಿ ಅವಳನ್ನು ಆಲಂಗಿಸಿದಇನ್ನೇನು ಮಿಲನ ಮಹೋತ್ಸವ ಆಚರಿಸಿಕೊಳ್ಳಬೇಕು ಎನ್ನುವ ಉದ್ರಿಕ್ತ ಸ್ಥಿತಿಯಲ್ಲಿಎದೆ ಬಡಿತ ತಾರಕಕ್ಕೇರಿದ ಸಮಯದಲ್ಲೇ ಅವನಿಗೆ ಕಿಂದಮನ ಶಾಪ ನೆನಪಾಗಿ ಸ್ತಂಭನವಾಗಿ ಹೋಗಿದೆಅದುಶಾಪವನ್ನು ನೆನೆಸಿಕೊಂಡಾದ ಆಘಾತವೋ ಅಥವಾ ಸಂಗಮದ ಹೆಚ್ಚುವರಿ ಭಾರವೋ ಅಂತೂ ಅಲ್ಲಿಗೆ ಪಾಂಡುವಿನ ಉಸಿರು ಶಾಶ್ವತವಾಗಿ ನಿಂತುಹೋಗಿತ್ತುಅದಕ್ಕೆ ತಾನೇ ಕಾರಣಳಾದೆನೆಂದು ಆಘಾತಗೊಂದು ಮಾದ್ರಿ ಅವನ ಚಿತೆಯೊಂದಿಗೆಸಹಗಮನ ಮಾಡಿಕೊಂಡಳುಅದಾದ ಮೂರನೆಯ ದಿನ ಆಶ್ರಮದ ಜನವೆಲ್ಲಾ ಸೇರಿ ಕುಂತಿಯನ್ನೂಪಾಂಡವರನ್ನೂ ಕರೆದುಕೊಂಡು ಪಾಂಡುವಿನ ಅಸ್ತಿಯೊಂದಿಗೆ ಹಸ್ತಿನಾವತಿಯನ್ನು ತಲುಪಿದರು.
ಸ್ವತಧೃತರಾಷ್ಟ್ರಸೋಮದತ್ತಬಾಹ್ಲಿಕವಿದುರಕೃಪಾಚಾರ್ಯ ಮೊದಲಾದ ರಾಜ ಪ್ರಮುಖರೊಂದಿಗೆಸತ್ಯವತಿಅಂಬಾಲಿಕೆಅಂಬಿಕೆಗಾಂಧಾರಿ ಸೇರಿದಂತೆ ರಾಜ ಪರಿವಾರ ನೂರು ಮ೦ದಿ ಮಕ್ಕಳೊಂದಿಗೆ ನಡೆದು ಹೋಗಿ ಅವರನ್ನು ಅರಮನೆಗೆಕರೆತಂದಿತ್ತುಯಥಾವಿಧಿಯುಕ್ತವಾಗಿ ಪಾಂಡುವಿನ ಅಸ್ತಿಗಳನ್ನು ಸಕಲ ಸಂಸ್ಕಾರಗಳೊಡನೆ ವಿಸರ್ಜಿಸಲಾಯಿತುಕುಂತಿ ಮತ್ತವರ ಮಕ್ಕಳು ಅರಮನೆಯಲ್ಲಿ ಉಳಿದವರೊಂದಿಗೆ ಬೆರೆತುಹೋದರುಅಲ್ಲಿಗೆ ಧೃತರಾಷ್ಟ್ರನಿಗಿದ್ದ ಏಕೈಕ ಬೆದರಿಕೆಯೂಕಳೆದುಹೋಗಿತ್ತುಕಾರಣ ಪಾಂಡು ಹಿಂದಿರುಗಿದ್ದರೆ ಸಿಂಹಾಸನ ಸಹಜವಾಗೇ ದೊಡ್ಡಪ್ಪನ ಆದೇಶದಂತೆ ಅವನಿಗೆ ದಕ್ಕುತ್ತಿತ್ತುಅದರ ನಂತರದಲ್ಲಿ ವಯಸ್ಸಿನಲ್ಲೂರಾಜ್ಯಾಧಿಕಾರದಲ್ಲೂ ಹಿರಿಯನಾದ ಯುಧಿಷ್ಠಿರನಿಗೆ ಯುವರಾಜಪಟ್ಟಾಭಿಷೇಕವಾಗುತ್ತಿತ್ತುಅಲ್ಲಿಗೆ ಶಾಶ್ವತವಾಗಿ ತನ್ನ ಕುಟುಂಬಕ್ಕೆ ರಾಜ್ಯಾಧಿಕಾರ ತಪ್ಪಿ ಹೋಗುತ್ತಿತ್ತಲ್ಲಈಗ  ಚಿಂತೆಯೇ ಇಲ್ಲ.
ಧೃತರಾಷ್ಟ್ರ ನಿಶ್ಚಿಂತನಾಗಿ ಸಕಲ ಸೌಲಭ್ಯವನ್ನು ಪಾಂಡುಪುತ್ರರಿಗೂ ಅವನ ಕುಟುಂಬಕ್ಕೂ ದೊರೆಯುವಂತೆ ನೋಡಿಕೊಳ್ಳಲು ಆದೇಶಿಸಿದನಲ್ಲದೇಎಂದಿನಂತೆ ತನ್ನ ಪಾಡಿಗೆ ಸಕಲ ಭೋಗಗಳಲ್ಲಿ ತೊಡಗಿಕೊಂಡಉಳಿದಂತೆ ಅವನಿಗೆ ರಾಜಕೀಯದಲ್ಲಿಎಲ್ಲಾ ವಿಷಯವನ್ನೂ ಚಾಚು ತಪ್ಪದೇ ನಿವೇದಿಸಿಕೊಳ್ಳಲು ಶಕುನಿಯಂತೂ ಇದ್ದೇ ಇದ್ದನಲ್ಲಮಂತ್ರಿಯಾಗಿ ವಿದುರ ರಾಜ್ಯಾಭಿವೃದ್ಧಿಯ ಸಕಲವನ್ನೂ ಸಂಭಾಳಿಸುತ್ತಿದ್ದಆದರೆ ಆಗೀಗ ತೊಂದರೆ ಬರುತ್ತಿದ್ದುದು ಮಕ್ಕಳಿಂದಲೇಕಾರಣ ಪಾಂಡುವಿನಮಕ್ಕಳಿಗೆಲ್ಲಾ ತಂದೆ ಇಲ್ಲದ ಮಕ್ಕಳೆಂದು ಅರಮನೆಯಲ್ಲಿ ವಿಶೇಷ ಸಲುಗೆಯೂಆದರವೂಅನುಕಂಪವೂ ದೊರೆಯುತ್ತಿದ್ದುದರಿಂದಾಗಿ ತನ್ನ ಮಕ್ಕಳು ದೂರು ತರುವುದು ಸರ್ವೇ ಸಾಮಾನ್ಯವಾಗತೊಡಗಿತುಅದರಲ್ಲೂ ಹಿರಿಯ ಮಗದುರ್ಯೋಧನನದ್ದು ಒಂದೇ ಹಠ.
".. ಪಾಂಡವರು ಬಂದಾಗಿನಿಂದ ನಮ್ಮೆಲ್ಲರ ನೆಮ್ಮದಿಯೇ ಹಾಳಾಗಿದೆಅಪ್ಪಾ ಅವರನ್ನು ಹೀಗೆಯೇ ಬಿಟ್ಟರೆ ನಾನು ನಾಳೆ ನನ್ನ ನೂರು ಜನ ತಮ್ಮಂದಿರನ್ನು ಕರೆದುಕೊಂಡು ಬೇರೆಲ್ಲಿಗಾದರು ಹೋಗಬೇಕಾಗುತ್ತದೆ.."
"..ಹಾಗಾಗುವುದಿಲ್ಲ ಮಗನೆಅವರಾದರೂ ತಂದೆ ಇಲ್ಲದವರುಒಳ್ಳೆಯದಾವುದು ಕೆಟ್ಟದಾವುದು ತಿಳಿಯುವುದಿಲ್ಲಆದ್ದರಿಂದ ಅಪಾರ್ಥ ಕಲ್ಪಿಸುವುದು ಬೇಡಹೇಗಿದ್ದರೂ ನೀನೇ ತಾನೆ ಕುರು ರಾಜಕುಮಾರ.." ಎಂದು ಧೃತರಾಷ್ಟ್ರ ಸಮಾಧಾನಿಸುತ್ತಿದ್ದಮೊದಲೆಲ್ಲ ದುರ್ಯೋಧನ ಎಲ್ಲದರಲ್ಲಿ ತಾನೇ ಮುಂದಾಳತ್ವ ವಹಿಸುತ್ತಾ ಆಟದಿಂದ ಜಗಳದವರೆಗೂ ನಾಯಕತ್ವ ವಹಿಸಿ ಬಗೆಹರಿಸುತ್ತಿದ್ದಅಲ್ಲಿಗೆ ಅವನ ಬಳಿಯಲ್ಲಿ ಎರಡನೆಯ ಕಾಯಿದೆಗೆ ಅವಕಾಶವೇ ಇರಲಿಲ್ಲಈಗ ಹಾಗಾಗುತ್ತಿಲ್ಲನೂರು ಜನತಮ್ಮಂದಿರೆಲ್ಲಾ ಒಂದೆಡೆಯಾದರೆ  ಐವರೇ ಒಂದೆಡೆ ನಿಲ್ಲುತ್ತಾರೆಅದರಲ್ಲೂ  ಎರಡನೆಯ ಹುಡುಗನಂತೂ ಭಾರಿ ತೊಂದರೆದಾಯಕ ಎನ್ನಿಸತೊಡಗಿದ್ಡಅವರೆಲ್ಲರೂ ಒಟ್ಟಾಗಿಯೇ ಆಡುತ್ತಾರೆ ಒಟ್ಟಾಗಿಯೇ ಇರುತ್ತಾರೆಉಳಿದ ನಾಲ್ವರೂ ತಮ್ಮಹಿರಿಯನ ಮಾತನ್ನೇ ಕೇಳುತ್ತಾರೆಇತ್ತ ತೊಂಬತ್ತೊಂಭತ್ತು ಜನರು ದುರ್ಯೋಧನ ಹಿಂದೆ ಎದ್ದು ನಿಲ್ಲುತ್ತಾರೆಅಲ್ಲಿಗೆ ಎರಡು ನಾಯಕತ್ವದ ಬಣಗಳು ಬೆಳೆಯತೊಡಗಿವೆಅದಕ್ಕೆ ಸರಿಯಾಗಿ ಸೋದರ ಮಾವ ಶಕುನಿ ಸಮಯಾವಕಾಶ ನೋಡಿಕೊಂಡುರಾಜಕಾರಣ ಬೋಧಿಸುತ್ತಿದ್ದಅವನ ಪ್ರಕಾರ,
ಅಳಿಯ... ಮುಂದೆ ನೀನು  ದೇಶದ ಸಿಂಹಾಸನ ಏರಬೇಕಾದವನುಸಹೋದರರೆಲ್ಲಾ ಹೇಗೆ ನಿನ್ನ ಮಾತನ್ನೇ ಅನುಮೋದಿಸುತ್ತಾರೋ ಹಾಗೆಯೇ ಉಳಿದವರೂ ನಿನ್ನ ಮಾತನ್ನು ಕೇಳುವಂತಾಗಬೇಕುಕಾರಣ ರಾಜನಾಗುವವನಿಗೆ ಮನೆಯಲ್ಲೇಎದುರಾಳಿಗಳಿರಬಾರದುಯಾವುದೇ ಕಾರಣಕ್ಕೂ ಯಾವುದೇ ಆಟ ಇರಲಿವಿಹಾರ ವಿರಲಿಪರ್ಯಟನವೇ ಇರಲಿ ನಿನ್ನ ಮಾತೇ ನಡೆಯಬೇಕುನೀನು ಯೋಜಿಸಿದಂತೆ ನಡೆಯಬೇಕೆ ವಿನಉಳಿದವರು ನಿನ್ನ ಯೋಜನೆಗೊಂದು ಪ್ರತಿ ಯೋಜನೆಅಥವಾ ಇನ್ನೊಂದು ದಾರಿ ಹುಡುಕುವಂತಾಗಬಾರದು..." ದುರ್ಯೋಧನನಿಗೂ ಅದು ಸರಿ ಎನ್ನಿಸುತ್ತಿತ್ತುಅದಕ್ಕೆ ಅವನು ಪ್ರಯತ್ನಿಸುತ್ತಿದ್ದನಾದರೂ ಅದಾಗುತ್ತಿರಲಿಲ್ಲ.
ಕಾರಣ ಪಾಂಡವರು ಯುಧಿಷ್ಠಿರನ ಮಾತನ್ನೇ ಕೇಳುತ್ತಿದ್ದರುಯಾವುದೇ ರೀತಿಯಲ್ಲೂ ಐವರೂ ಬೇರೊಬ್ಬರ ಮಾತಿಗೆ ಪುಷ್ಟಿ ನೀಡುತ್ತಿರಲಿಲ್ಲಅದರಲ್ಲೂ ಎರಡನೆಯ ಪಾಂಡವ ಭೀಮ ಮಾತ್ರ ಇನ್ನಷ್ಟು ಕಿರುಕುಳಕ್ಕೆ ಕಾರಣವಾಗತೊಡಗಿದ್ದಮೊದಲೇವಾಯುಪುತ್ರಅದೆಲ್ಲಿರುತ್ತಿದ್ದನೋ ಅಡಿಗೆ ಆಗುವ ಮುನ್ನವೇ ಅಡಿಗೆ ಮನೆಗೆ ನುಗ್ಗಿ ಅಲ್ಲಿದ ಖಾದ್ಯಗಳನ್ನು ವಿಶೇಷ ಭಕ್ಷ್ಯಗಳನ್ನು ಸೂರೆ ಹೊಡೆಯುತ್ತಿದ್ದನಂತರ ಬರುವ ನೂರು ಹುಡುಗರು ಅರ್ಧಮರ್ಧ ಅಡಿಗೆಯಲ್ಲಿ ಊಟ ಮಾಡಿ ಮತ್ತೆ ಮಾಡುವವರೆಗೂಕಾಯಬೇಕಾಗಿತ್ತುಜೊತೆಗೆ ಯಾವುದೇ ಆಟವಿರಲಿಓಟವಿರಲಿ ಎಲ್ಲದರಲ್ಲೂ ಒಂದು ಮೇಲಾಟ ನಡೆಸುತ್ತಿದ್ದಅವನಿಗಿದ್ದಷ್ಟೆ ಸಾಮರ್ಥ್ಯ ದೇಹದಾರ್ಢ್ಯಗಳು ದುರ್ಯೋಧನಿಗೂ ಇದ್ದವಾದರೂ ಉಳಿದವರನ್ನು ಭೀಮನಿಂದ ರಕ್ಷಿಸಿಕೊಳ್ಳುವ ಭರದಲ್ಲಿ ಅವನಮೇಲೆ ಆಕ್ರಮಿಸಲು ಆಗುತ್ತಲೇ ಇರಲಿಲ್ಲಅಷ್ಟರಲ್ಲಾಗಲೇ ಭೀಮ ದಾಂಗುಡಿ ಇಟ್ಟು ನಡೆದುಬಿಟ್ಟಿರುತ್ತಿದ್ದ.
ಮರದ ಮೇಲೆ ಆಟವಾಡುತ್ತಿದ್ದರೆಅವರನ್ನೆಲ್ಲಾ ತನ್ನ ಬಲವಾದ ಮೈಯಿಂದ ಉಜ್ಜಿ ಮರಕ್ಕೆ ಅದುಮಿ ಘಾಸಿಗೊಳಿಸುತ್ತಿದ್ದಕೆಳಕ್ಕೆ ಬೀಳಿಸುತ್ತಿದ್ದತಿರುಗಿ ಬಿದ್ದರೆ ಕೂದಲನ್ನೇ ಹಿಡಿದೆಳೆದು ರಾಚುತ್ತಿದ್ದಕ್ಷಣಾರ್ಧದಲ್ಲಿ ದಾಳಿ ನಡೆಸಿ ಮಾಯವಾಗುತ್ತಿದ್ದಭೀಮನೆಂದರೆ ಉಳಿದವರಿಗೆ ಎಲ್ಲಿಲ್ಲದ ಕಿರಿಕಿಯಾಗುತ್ತಿದ್ದಂತೆಸಹಜವಾಗೇ ದುರ್ಯೋಧನನಲ್ಲಿಗೆ ಸಹೋದರರು ಅಳುತ್ತಾಬಿದ್ದೇಳುತ್ತಾ ಬಂದು ದೂರು ಕೊಡುತ್ತಿದ್ದರು.
ಅಣ್ಣಾ ಹೇಗಾದರೂ ಮಾಡಿ  ವ್ರಕೋದರನಿಂದ ನಮ್ಮನ್ನು ಉಳಿಸುನೀನಾದರೋ ಅವನೊಂದಿಗೆ ಸಮಸಮಕ್ಕೆ ಬಡಿದಾಡುತ್ತಿ ಎಂದು ನಿನ್ನ ತಂಟೆಗೇ ಬರುತ್ತಿಲ್ಲಆದರೆ ನಾವೇನು ಮಾಡೋಣನೀನು ಈಗ ಏನಾದರೂ ಉಪಾಯ ಮಾಡಿ ಅವನನ್ನುಹಣಿಯದಿದ್ದರೆ ಸದ್ಯದಲ್ಲೇ ನಿನ್ನ ಸಹೋದರರ ಸಂಖ್ಯೆ ಕಡಿಮೆಯಾದರೂ ಅಚ್ಚರಿಯಿಲ್ಲ.." ಎನ್ನತೊಡಗಿದರುತಮ್ಮಂದಿರ ಸಂಕಟಇನ್ನೊಂದೆಡೆ ತನ್ನ ಪ್ರಭುತ್ವ ಒಪ್ಪಿಕೊಳ್ಳದ ಐವರ ಮೇಲಿನ ಕೋಪಅಷ್ಟೆಲ್ಲಾ ಆದರೂ ಅವರ ಪರವಾಗೇ ಧ್ವನಿಯೆತ್ತುವಅರಮನೆಯ ಜನ ಮತ್ತು ಹಿರಿಯರುಪಾಂಡವರನ್ನೇ ಓಲೈಸುವ ತಾತಮೇಲಾಗಿ ತನ್ನ ನಿರ್ಧಾರ ಮತ್ತು ನಾಯಕತ್ವದಡಿಯಲ್ಲಿ ಏನಾದರೂ ನಿರ್ಧಾರ ತೊಗೊ ಎಂದು ನಿಂತಿರುವ ಸಹೋದರರುಇದನ್ನೆಲ್ಲಾ ಸರಿ ಎಂದೇ ಬೆಂಬಲಿಸುತ್ತಿರುವ ಸೋದರಮಾವಒಹ್.. ಸರಿ ಸರಿ ಇದಕ್ಕೇನಾದರೂ ಮಾಡದಿದ್ದರೆ ತನ್ನನ್ನೂ ನಾಳೆ ಗಣಿಸಲಿಕ್ಕಿಲ್ಲ ಕೂತಲ್ಲಿಯೇ ಯೋಚಿಸುತ್ತಿದ್ದ ದುರ್ಯೋಧನಭೀಮನೊಬ್ಬನನ್ನು ನಿವಾರಿಸಿಕೊಳ್ಳುವ ಯೋಜನೆ ರೂಪಿಸತೊಡಗಿದ್ದಆಟ ಮತ್ತು ಊಟ ಎರಡರಲ್ಲೂ ಭೀಮಅಸಮಾನಆಟದಲ್ಲಿ ಅಥವಾ ನೇರ ಯುದ್ಧದಲ್ಲಿ ಅವನನ್ನು ಜಯಿಸುವುದು ಸುಲಭದಲ್ಲಿ ಸಾಧ್ಯವಿಲ್ಲ ತನ್ನನ್ನು ಹೊರತು ಪಡಿಸಿಅದಕ್ಕಾಗಿಯೇ ಆತ ತನ್ನ ಸುದ್ದಿಗೇ ಬರುವುದಿಲ್ಲಹಾಗಿದ್ದರೆ ಏನು ಮಾಡುವುದು..?
"..ಯೋಚಿಸಬೇಡನಾನು ಹೇಳಿದಂತೆ ಮಾಡು.." ಶಕುನಿ ಬೆನ್ನು ಸವರುತ್ತಾ ನುಡಿದಿದ್ದಹುಬ್ಬೇರಿಸಿದ್ದ ದುರ್ಯೋಧನ.
"..ಹೌದು ರಾಜಕುಮಾರನೇರ ಹೊಡೆದಾಟ ಅಥವಾ ಮಾತುಕತೆಯಲ್ಲಿ ಈಗ ಒಂದಷ್ಟು ಮೋಸವೋಸುಳ್ಳೊ ಅಂತೂ ಅವನನ್ನು ಬಗ್ಗು ಬಡಿಯಬೇಕುಒಂದು ಕೆಲಸ ಮಾಡುಅವನಿಗೆ ಹೇಗಿದ್ದರೂ ಊಟ ಮತ್ತು ಜಲಕ್ರೀಡೆ ಎಂದರೆ ಪ್ರಾಣಅವನನ್ನುನಾಳೆ ನದಿ ತೀರಕ್ಕೆ ಆಹ್ವಾನಿಸಿ ಊಟಕ್ಕೂ ಕರಿಉಳಿದಿದ್ದನ್ನು ನಾನು ನೋಡಿಕೊಳ್ಳುತ್ತೇನೆ.."
"..ಏನು ಮಾಡಲಿದ್ದಿ ಮಾವಾ..ಇದು ತಾತನಿಗೇನಾದರೂ ಗೊತ್ತಾದರೆ ಅಥವಾ ಅಪ್ಪನಿಗೆ ತಿಳಿದರೂ ಕೂಡಾ ಪರಿಸ್ಥಿತಿ ಗಂಭೀರವಾಗಲಿದೆಅದೇನು ಯೋಜನೆ ಮೊದಲು ಹೇಳು.. ? "
"..ಇನ್ನೇನಿಲ್ಲಜಲ ಕ್ರೀಡೆಯಾಡಿದ ಮೇಲೆ ಊಟ ನಡೆಯುತ್ತದಲ್ಲ ಅದರಲ್ಲಿ ಮತ್ತು ಬರುವ ಮದ್ದು ಸೇರಿಸಿ ಭೀಮನನ್ನು ಕೆಡವೋಣನಂತರ ನಿನ್ನ ತಮ್ಮಂದಿರು ಅವನ ಮೇಲೆ ಬಿದ್ದು ಹೊಡೆದು ಸೇಡು ತೀರಿಸಿಕೊಳ್ಳಲಿಇದರಿಂದ ಅವರಿಗೂ ನೆಮ್ಮದಿಪಾಂಡವರೂ ಕೂಡಾ ಹೀಗಾಗುತ್ತದೆ ಇನ್ನು ಮುಂದೆ ತಾವು ಹುಶಾರಾಗಿರಬೇಕು ಎಂದು ಮುಟ್ಟಿ ನೋಡಿಕೊಳ್ಳುವಂತಾಗುತ್ತದೆನಿನ್ನ ಮತ್ತು ನಿನ್ನ ತಮ್ಮಂದಿರ ತಂಟೆಗೆ ಬರುವುದಿಲ್ಲ."
ಅಷ್ಟೇನಾ ಬೇರೇನೂ ಆಗುವುದಿಲ್ಲವೇ..?" ದುರ್ಯೋಧನ ಪ್ರಶ್ನಿಸಿದ್ದ.
ಬೇರೇನೂ ಆಗುವುದಿಲ್ಲ ಅಳಿಯಾಒಂದಷ್ಟು ಕೈ ಕಾಲು ಮುರಿಯುವಂತೆ ಬಡಿದು ಬಿಸಾಡಿದರೆ ಅದು ನೆಟ್ಟಗಾಗುವ ಹೊತ್ತಿಗೆ ಅವನಿಗೂ ಬುದ್ಧಿ ಬಂದಿರುತ್ತದೆ..." ಶಕುನಿ ಯೋಜನೆ ವಿವರಿಸುತ್ತಿದ್ದರೆ ದುರ್ಯೋಧನನಿಗೆ ಪ್ರತಿ ನುಡಿಯಲು ಏನೂಉಳಿದಿರಲಿಲ್ಲಹಾಗಾದರೂ ಸರಿತನ್ನ ತಮ್ಮಂದಿರು ಕಷ್ಟಗಳಿಂದ ಪಾರಾಗುತ್ತಾರಲ್ಲಅಷ್ಟಕ್ಕೂ ಮಾಡುತ್ತಿರುವವನು ಸೋದರ ಮಾವ ಶಕುನಿಉಳಿದದ್ದು ಅವನೇ ನೋಡಿಕೊಳ್ಳುತ್ತಾನೆತನಗೂ ಅದೊಮ್ಮೆಯಾದರೂ ಆಗಬೇಕಾದದ್ದೇ ಎಂದಿದ್ದೇಇದೆಯಲ್ಲಬೇರೇನೂ ದೊಡ್ಡ ಅನಾಹುತವೇನೂ ಅಲ್ಲಸರಿ ಎಂದು ಬಿಟ್ಟ.
ಆದರೆ ನಂತರ ನಡೆದದ್ದೇ ಬೇರೆ.
ಆಟವಾಡಲು ಆಹ್ವಾನಿಸಿದ್ದು ದುರ್ಯೋಧನನೇ ಆಗಿದ್ದರಿಂದಾಗಿಭೀಮನಿಗೆ ಊಟದಲ್ಲಿ ವಿಷ ಹಾಕಿಅವನನ್ನು ನದಿಗೆ ತಳ್ಳಿಅವನನ್ನು ದುರ್ಯೋಧನನೇ ಮುಗಿಸಲು ಯತ್ನಿಸಿದ ಎಂದು ಅರಮನೆಯ ಪರಿವಾರ ಒಳಗೊಳಗೆ ಮಾತಾಡಿಕೊಂಡಿತುಅವನಕರೆಯಂತೆ ಜಲಕ್ರೀಡೆಯಲ್ಲಿ ಪಾಲ್ಗೊಂಡ ಭೀಮನಿಗೆ ಮತ್ತು ಬರುವ ಆಹಾರದ ಬದಲಾಗಿ ವಿಷಾಹಾರವನ್ನು ನೀಡಲಾಗಿತ್ತು ಕ್ಷಣಕ್ಕೆ ಅದು ದುರ್ಯೋಧನನಿಗೂ ಗೊತ್ತಿರಲಿಲ್ಲಎಂದಿನಂತೆ ಅವನೂ ಅವರೊಂದಿಗೆ ಊಟ ಮಾಡಿ ಹೊರಟುಬಂದಿದ್ದಮತ್ತುಬರಿಸಿ ಅವನನ್ನು ಬಡಿಯುತ್ತಾರೆ ಎ೦ದು ಗೊತ್ತಿದ್ದರೂತನ್ನ ತಮ್ಮಂದಿರು ಒಂದಷ್ಟು ನೆಮ್ಮದಿ ಕಂಡುಕೊಳ್ಳಲಿ ಎಂದು ಸುಮ್ಮನಿದ್ದ.
ತೀರ ಅವನನ್ನು ನದಿಗೆ ತಳ್ಳಿ ಸಾಯಿಸಿಯೇ ಬಿಡಲು ಪ್ರಯತ್ನಿಸುತ್ತಾರೆ ಎಂದು ಅವನು ಯೋಚಿಸಿರಲೂ ಇಲ್ಲಕಾರಣ ಅತಿ ಹೆಚ್ಚು ತೊಡಕಾಗಬೇಕಾಗಿದ್ದ ಭೀಮ ತನ್ನೊಂದಿಗೆ ಯಾವತ್ತೂ ಅಷ್ಟಾಗಿ ಗುದ್ದಾಡಿಲ್ಲಏನಿದ್ದರೂ ತಮ್ಮಂದಿರನ್ನೆ ಚಚ್ಚುತ್ತಿದ್ದಎಲ್ಲಾಸೇರಿದರೂ ಭೀಮನನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದದ್ದೆಹಾಗಾಗಿ ಒಮ್ಮೆಲೆ ತಮ್ಮಂದಿರೆಲ್ಲಾ ಮೇಲೆ ಬಿದ್ದುಅವನ ಮೂರ್ಛಾವಸ್ಥೆಯಲ್ಲೇ ಒಂದಿಷ್ಟು ತದುಕಿಯಾರೆ ಹೊರತಾಗಿಭೀಮನನ್ನು ಕೊಂದುಬಿಡುವ ಯೋಜನೆರೂಪಿಸುತ್ತಾರೆ ಎಂದವನಿಗೆ ಅಂದಾಜೂ ಇರಲಿಲ್ಲಜೊತೆಗೆ ಶಕುನಿ ಬೇರೆ ಇದ್ದಾನಲ್ಲದೊಡ್ಡ ಅವಘಡಕ್ಕೆ ಅವನು ಆಸ್ಪದ ಕೊಡಲಾರ ಎಂದೇ ತಿಳಿದು ಭೀಮ ಮೂರ್ಛೆ ಹೋಗುತ್ತಿದ್ದಂತೆ ಅಲ್ಲಿಂದೆದ್ದು ಅರಮನೆಗೆ ಬಂದು ಬಿಟ್ಟಿದ್ದಆದರೆ ಸಂಜೆಯಾದರೂಭೀಮ ಬರಲಿಲ್ಲ.
ನದಿ ದಂಡೆಯಿಂದ ಹಿಂದಿರುಗಿಲ್ಲ ಎಂದು ಬೊಬ್ಬೆ ಆರಂಭವಾದಾಗಲೇ ಅವನಿಗೆ ತನ್ನ ತಪ್ಪು ಅರಿವಾದದ್ದುಈಗ ಬೇರೆಯವರು ಯಾರೇನು ಹೇಳಿದರೂ ಕೇಳುವುದಿಲ್ಲ ಎಲ್ಲದಕ್ಕೂ ತಾನೇ ಹೊಣೆಗಾರನಾಗುತ್ತೇನೆಆದ್ದರಿಂದ ಸಮಜಾಯಿಸಿ ಕೊಡುವುದರಲ್ಲಿಅರ್ಥವೇ ಇಲ್ಲಅಷ್ಟಕ್ಕೂ ತನಗಿದು ತಿಳಿದಿಲ್ಲ ಎಂದು ವಿವರಿಸ ಹೊರಟರೆ ತಪ್ಪಿತಸ್ಥರ ಸ್ಥಾನದಲ್ಲಿ ತಮ್ಮಂದಿರನ್ನು ನಿಲ್ಲಿಸಲಾಗುತ್ತದೆಅವರಿಗೋ ಇದನ್ನೆಲ್ಲ ವಿವರಿಸೋದು ಸಾಯಲಿಸರಿಯಾಗಿ ಅರ್ಥ ಮಾಡಿಕೊಂಡು ವಾದ ಮಾಡಲೂ ಬರುವುದಿಲ್ಲಮೇಲಾಗಿ ತಮಗೇನಾದರೂ ಸರಿಅಣ್ಣ ತಮ್ಮನ್ನು ರಕ್ಷಿಸುತ್ತಾನೆತಮ್ಮನ್ನು ನೋಡಿಕೊಳ್ಳುತ್ತಾನೆ ಎನ್ನುವ ಅಗಾಧ ನಂಬಿಕೆ ಬೇರೆ ತನ್ನ ಮೇಲಿದೆಇಂತಹ ಸಂದರ್ಭದಲ್ಲಿ ತಾನೇ ತನ್ನ ತಮ್ಮಂದಿರ ಕೈಬಿಟ್ಟರೆ ಇರುವ ನೂರು ಜನರಲ್ಲಿಎಷ್ಟು ಜನರಲ್ಲಿಮೊದಲಿನ ಬದ್ಧತೆ ಮತ್ತು ತನ್ನೆಡೆಗಿನ ನಿಷ್ಠೆ ಉಳಿದೀತು ಹೇಳುವುದು ಕಷ್ಟ.
ಅಕಸ್ಮಾತಾಗಿ ಅರಮನೆಯಲ್ಲಿ ವಿಚಾರಣೆಗೆ ಬಂದರೆ ತಾತನೂ ಸೇರಿದಂತೆ ಯಾರೆಂದರೆ ಯಾರೂ ತನ್ನನ್ನು ಕೂಲಂಕುಶವಾಗಿ ವಿಚಾರಿಸಲಾರರುತನ್ನ ಕಣ್ಣು ಎದುರಿಸಲೇಏರಿದ ದನಿಯನ್ನು ಎದುರಿಸಲೇ ಹಿಂದೆ ಮುಂದೆ ನೋಡುತ್ತಾರೆಅದೇತಮ್ಮಂದಿರೇ ಇದನ್ನೆಲ್ಲಾ ಮಾಡಿದ್ದಾರೆ ಎಂದು ತಾನು ತಪ್ಪಿಸಿಕೊಂಡರೆಒಂದಿಷ್ಟು ತಲೆ ದಂಡವಾದರೂ ಸಂಶಯವಿಲ್ಲಹಲವರ ತಲೆಗೆ ಶಿಕ್ಷೆಯ ಜೊತೆಗೆ ತಮ್ಮನ್ನು ಕಾಯುವವನು ಎಂದು ನಂಬಿಕೊಂಡ ನಾಯಕತ್ವದ ಮೇಲೆಯೇ ಸಂಶಯಅಪನಂಬಿಕೆಅಧೈರ್ಯ ಎಲ್ಲಾ ಆರಂಭವಾಗಿಬಿಡುತ್ತದೆಅದರಿಂದ ತಮ್ಮಲ್ಲೇ ಒಡಕಿನ ಜೊತೆಗೆ ತನ್ನ ನಾಯಕನ ಸ್ಥಾನದ ಮೇಲಿನ ಭರವಸೆ ಮತ್ತು ನಂಬಿಕೆ ಎರಡೂ ಕುಂಠಿತವಾಗುತ್ತದೆಅವರನ್ನು ಮುಂದೆ ತಳ್ಳಿ ತಾನು ಸುರಕ್ಷಿತವಾದರೆ ಮೊದಲುಬಿರುಕುಂಟಾಗೋದು ನಮ್ಮನಮ್ಮಲ್ಲೆ.
ನೂರು ಸಹೋದರರ ಗುಂಪು ಒಡೆದರೆ ಉಳಿದವರಿಗೆ ನಮ್ಮನ್ನು ಮುರಿಯಲು ಸುಲಭದ ದಾರಿಯಾಗುತ್ತದೆತನ್ನನ್ನಾದರೆ ಅರಮನೆಯಲ್ಲಿ ಅಷ್ಟಾಗಿ ಯಾರೂ ಏನೂ ಅನ್ನುವುದೂ ಇಲ್ಲ ಸರಿಯಾಗಿ ವಿಚಾರಿಸುವುದೂ ಇಲ್ಲತಾತ ಭೀಷ್ಮ ಪಿತಾಮಹನನ್ನುಹೊರತುಪಡಿಸಿದರೆ ಯಾರೆಂದರೆ ಯಾರೂ ಇವತ್ತಿನವರೆಗೆ ತನ್ನೆದುರು ದೊಡ್ಡ ಧ್ವನಿಯಲ್ಲಿ ಮಾತಾಡಲೂ ಹೆದರುತ್ತಾರೆಅದೇ  ತಮ್ಮಂದಿರನ್ನಾದರೆ ವಿಚಾರಿಸಿಬೆದರಿಸಿ ಎಲ್ಲ ನಡೆದುಹೋಗುತ್ತದೆಇಲ್ಲದಿದ್ದರೂ ಪರೋಕ್ಷವಾಗಿ ತನ್ನ ಹೆಸರೇಮುಂದಿರುತ್ತದೆಬದಲಿಗೆ ಉಳಿದವರನ್ನು ರಕ್ಷಿಸಲಾದರೂ ತಾನು ಉಪಸ್ಥಿತನಾದರೆ ಉಳಿದ ಅನಾಹುತ ತಡೆಯಬಹುದುಜೊತೆಗೆ ದುರ್ಯೋಧನ ಎಂತಹ ಕಾರ್ಯಕ್ಕೂ ಕೈ ಹಾಕಬಲ್ಲ ಎನ್ನುವ ಎಚ್ಚರಿಕೆಯೂ ರವಾನೆಯಾಗುತ್ತದೆಅದೆಲ್ಲಾಅಬಾಧಿತವಾಗಿರಬೇಕೆಂದರೆ  ಪ್ರಕರಣದಲ್ಲಿ ತಾನು ಮಧ್ಯ ಪ್ರವೇಶಿಸಲೇಬೇಕು.
ಆದ್ದರಿಂದ ತನ್ನ ಹೆಸರು ಕೆಟ್ಟರೂಬಂದರೂ ಅದು ತಾನಾಗೇ ಸರಿ ಹೋಗುತ್ತದೆ ಎಂದು ಸುಮ್ಮನಾಗಿ ಬಿಟ್ಟಅಲ್ಲಿಂದ ಒಂದೆರಡು ಜಾವದ ನಂತರ ಭೀಮ ಮರಳಿದ್ದಅವನ ಮೈಮೇಲೆ ಗಾಯಗಳಿದ್ದವುಅಲ್ಲಲ್ಲಿ ಹಸಿರುಗಟ್ಟಿತ್ತುಆಗಿದ್ದಿಷ್ಟುಮೂರ್ಛೆಹೋದ ಭೀಮನನ್ನು ಹಗ್ಗದಲ್ಲಿ ಬಿಗಿದು ಒಂದಷ್ಟು ತದುಕಿ ನೀರಿಗೆ ತಳ್ಳಿಬಿಟ್ಟಿದ್ದಾರೆನೀರಿಗೆ ಬಿದ್ದವನು ಉಸಿರು ಗಟ್ಟಿ ಸಾಯಬೇಕಿತ್ತುಆದರೆ ಹಾಗಾಗಲಿಲ್ಲನೀರಿಗೆ ಬಿದ್ದ ಕೂಡಲೇ ಪ್ರಜ್ಞೆ ಮತ್ತು ನೀರು ಕುಡಿದು ಕಾರಿಕೊಂಡಿದ್ದರಿಂದ ಏರಿದ್ದ ಅಲ್ಪಸ್ವಲ್ಪವಿಷವೂ ಇಳಿದುಹೋಗಿದೆಜಟ್ಟಿತರಹದ ದೇಹಕ್ಕೆ ಸಣ್ಣ ಪುಟ್ಟ ನೀರು ಹಾವುಗಳು ಅಲ್ಲಲ್ಲಿ ಒಂದೆರಡು ಕಡೆ ಹಲ್ಲು ಮೂಡಿಸಿದ್ದರೂ ಅದರಿಂದೇನೂ ಅನಾಹುತವಾಗಿಲ್ಲದೈಹಿಕವಾಗೂ ಸಾಕಷ್ಟು ಕಸುವಿನವನು ಆದ್ದರಿಂದಾಗಿ ದೇಹ ತಡೆದುಕೊಂಡಿದೆ ಕೂಡಾಸಾಕಷ್ಟು ಸಮಯದ ನಂತರ ಈಚೆಗೆ ಬಂದಿದ್ದಾನೆಫಲಿತಾಂಶವಾಗಿ ಅವನ  ಮೇಲೆ ಇತರರಿಗೆ ಇನ್ನಷ್ಟು ವಾತ್ಸಲ್ಯ ಬೆಳೆಯಿತೇ ವಿನತಮಗ್ಯಾವ ಉಪಯೋಗವೂ ಆಗಲಿಲ್ಲ.
ಇನ್ನು ಅದರ ಚರ್ಚೆಗೆ ಹೋಗಿ ಮೈ ಮೇಲೆ ಎಳೆದುಕೊಳ್ಳುವುದಕ್ಕಿಂತಲೂ ಸುಮ್ಮನಿರುವಂತೆ ಸಹೋದರರಿಗೂಶಕುನಿ ಮಾವನಿಗೂ ತಿಳಿಸಿ ಸುಮ್ಮನಾಗಿ ಬಿಟ್ಟಆದರೆ ಹೀಗೆ ನಡೆದ ಸಣ್ಣಸಣ್ಣ ಘಟನೆಗಳು ಕ್ರಮೇಣ ದಾಯಾದಿತನವನ್ನು ಬೆಳೆಸಿದವೇವಿನಎರಡೂ ಗುಂಪುಗಳ ಮಧ್ಯೆ ಸಂಧಾನ ಎನ್ನುವುದಕ್ಕೆ ಆಸ್ಪದವೇ ಸಿಗಲಿಲ್ಲಅದಕ್ಕೆ ಸರಿಯಾಗಿ ಶಕುನಿಯ ಕುತಂತ್ರಗಳೂದುಶ್ಯಾಸನನ ಬೆಂಬಲವೂಏನು ಮಾಡೋಣ ಅಣ್ಣಾ.. ಎಂದು ನಿಂತು ಬಿಡುವ ನೂರು ಜನ ಸಹೋದರರ ಗುಂಪು ಎಲ್ಲಾದಿಕ್ಕುಗಳಿಂದಲೂ ದುರ್ಯೋಧನನನ್ನು ಆವರಿಸಿಕೊಂಡು ಬಿಟ್ಟಿದ್ದರಿಂದಾಗಿ ಅವನಿಗೆ ಅದಕ್ಕಿಂತ ಉಜ್ವಲ ಅವಕಾಶಗಳಾವುವೂ ಸಿಗದೆಯೂ ಹೋಯಿತುಅಲ್ಲಿಗೆ ಪಾಂಡವರು ಮತ್ತು ಕೌರವರು ಎಂದು ಎರಡು ಗುಂಪುಗಳು ಪ್ರತ್ಯೇಕವಾಗೇ ಅರಮನೆಯಲ್ಲಿಗುರುತಿಸಿಕೊಳ್ಳತೊಡಗಿದವು.
ಅದರಲ್ಲೂ ಪಾಂಡವರಾದರೋ ಯುಧಿಷ್ಠಿರಭೀಮಅರ್ಜುನ ಎಂದೆಲ್ಲಾ ಹತ್ತು ಹಲವು ಬಾರಿ ಗಮನಕ್ಕೆ ಬರುತ್ತಿದ್ದರೆ ಕೌರವರ ಕಡೆಯಲ್ಲಿ ಕೇಳಿ ಬರುತ್ತಿದ್ದ ಹೆಸರು ಒಂದೇ ಒಂದುಅದೆಂದರೆ ದುರ್ಯೋದನದುಎಲ್ಲದಕ್ಕೂ ಅವನದೆ ಹೊಣೆಗಾರಿಕೆಅದುಬಿಟ್ಟರೆ ದುಶ್ಯಾಸನನದುಹಾಗಾಗಿ  ಎಲ್ಲಾ ರಗಳೆಗಳಿಗೂ ಕ್ರಮೇಣ ದುರ್ಯೋಧನನ ಹೆಸರೇ ಮುಂದಾಗುತ್ತಿದ್ದುದರಿಂದ ಅವನೂ ಸುಮ್ಮನಾಗತೊಡಗಿದತಪ್ಪಿದರೆ ಉಳಿದ ತಮ್ಮಂದಿರ ಮೇಲೆ ಅಥವಾ ಶಕುನಿಯ ರಂಗ ಪ್ರವೇಶವಾಗುವುದರೊಂದಿಗೆಅದು ಇನ್ನಷ್ಟು ಜಟಿಲವಾಗುತ್ತದೆಅದಕ್ಕಿಂತ ತಾನೇ ಸಂಭಾಳಿಸುವುದು ಒಳ್ಳೆಯದು ಎಂದುಕೊಂಡುಬಿಟ್ಟ ದುರ್ಯೋಧನಅಲ್ಲಿಗೆ ಸಂಪೂರ್ಣ ಕೌರವರಲ್ಲಿ ಏಕೈಕ ನಾಯಕತ್ವ ಮತ್ತು ಏನೇ ಫಲಾಫಲಗಳು ಇದ್ದರೂ ಅದು ದುರ್ಯೋಧನನ ಹೆಸರಿನಲ್ಲಿಯೇನಡೆಯತೊಡಗಿದವು.
ಹಾಗಿದ್ದುದರಿಂದಲೇ ಯಾವುದೇ ವಿಷಯ ಇದ್ದರೂ ಅವನ ತಮ್ಮಂದಿರು ಏನೇ ಮಾಡಿದರೂ ಅರಮನೆಯ ಒಳಗೂ ಹೊರಗೂ ಇದೆಲ್ಲಾ ದುರ್ಯೋಧನನ ಸಮ್ಮತಿಯ ಮೇರೆಗೆ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಚಲಾವಣೆಗೆ ಬಂದುಬಿಟ್ಟಿತ್ತುಕೊನೆಗೆ ಯಾವುದೇ ಘಟನೆಗೆ ಪ್ರತಿಯಾಗಿ ಉತ್ತರವಿರಲಿಉತ್ತರದಾಯಿತ್ವವಿರಲಿ ಅದು ತನ್ನ ಸುತ್ತಲೇ ಸುತ್ತುತ್ತದೆ ಎಂದರಿವಾಗುವ ಹೊತ್ತಿಗೆ ದುರ್ಯೋಧನ ಯಾರಿಗೆ ಇಷ್ಟವಿರಲಿ ಇಲ್ಲದಿರಲಿ ಕುರುಕುಲದಲ್ಲಿ ಪಾಂಡವರ ಹೊರತು ಉಳಿದೆಲ್ಲರಿಗೆನಾಯಕನಾಗಿ ಗೋಚರಿಸುತ್ತಿರುವ ವಸ್ತು ಸ್ಥಿತಿಗೆ ಒಪ್ಪಿಸಿಕೊಂಡುಬಿಟ್ಟಿದ್ದಭವಿಷ್ಯತ್ತಿನಲ್ಲಿ ತನ್ನನ್ನು ಇತಿಹಾಸಕಾರರು ಋಣಾತ್ಮಕವಾಗಿ ಚಿತ್ರಿಸಿಯಾರು ಎಂದು ಆಗಲೇ ಅರಿವಾಗಿದ್ದರೆ ಅವನು ಎಚ್ಚೆತ್ತುಕೊಳ್ಳುತ್ತಿದ್ದನೇನೋಆದರೆ ಅಂತಹಬದಲಾವಣೆಯನ್ನು ಬಯಸುವ ಮತ್ತು ಬದಲಿಸಿಕೊಳ್ಳಲು ಅನುವಾಗುವ ಎಲ್ಲ ದಾರಿಗಳೂ ಅವನ ಪಾಲಿಗೆ ಆವತ್ತೆ ಮುಚ್ಚಿ ಹೋಗಿದ್ದವು...ಕಾರಣ ನಾಯಕತ್ವದ ಬದಲಾವಣೆಗೆ ಕಾಲ ಅವರಿಗರಿವಿಲ್ಲದೆ ಸನ್ನಿಹಿತವಾಗತೊಡಗಿತ್ತು ಹಸ್ತಿನಾವತಿಯರಾಜಕಾರಣದಲ್ಲಿಅದರಲ್ಲೂ ಅಲ್ಲಿಯವರೆಗೂ ಯಾರ ಅಂಕುಶವೂ ಇಲ್ಲದೇ ಬೆಳೆಯುತ್ತಿದ್ದ ರಾಜಕುಮಾರರಿಗೆ ಸಧ್ಯದಲ್ಲೇ ಪ್ರಶಿಕ್ಷಣದ ಹೆಸರಿನಲ್ಲಿ ಗುರುವಿನ ಆಗಮನವಾಗಲಿತ್ತು ಸಂದರ್ಭವೂ ಸಧ್ಯದಲ್ಲೆ ವಿಚಿತ್ರ ರೀತಿಯಲ್ಲಿ ಎದುರಾಗಲಿದೆಎಂಬುವುದು ಮಾತ್ರ ಯಾರೊಬ್ಬರಿಗೂ ಅರಿವಿರಲಿಲ್ಲಅದನ್ನೂ ದುರ್ಯೋಧನ ಒಬ್ಬ ಯುವರಾಜನ ಘನತೆಗೆ ತಕ್ಕ ರೀತಿಯಲ್ಲಿ ನಿಭಾಯಿಸುವ ಯೋಜನೆಯಲ್ಲಿದ್ದಆದರೆ ಆದದ್ದೇ ಬೇರೆ.

No comments:

Post a Comment