ಕಾಶ್ಮೀರವೆಂಬ ಖಾಲಿ ಕಣಿವೆ..ಪಾತಕಿಗಳ ಸರಣಿ ಹತ್ಯೆ...
(ತೀರ ಶ್ರೀನಗರ ಮತ್ತು ಅದರಾಚೆಗೆ ಆಲ್ಚಿಯ ಸರಹದ್ದಿನವರೆಗೂ ಇರುವ ಕಾಶ್ಮೀರಿ ಮುಸ್ಲಿಂ ಕುಟುಂಬಗಳು ಒಲೆ ಉರಿಸುವುದೇ ಉಗ್ರರು ಕೊಡುವ ಹಣದಲ್ಲಿ ಎನ್ನುವುದು ಗಮನೀಯ. ಇದಕ್ಕೆ ಕೆಲಸ ಮಾಡಬೇಕಿಲ್ಲ. ವರ್ಷದ ಯಾವತ್ತೊ ಒಂದೆರಡು ದಿನ ಗಡಿ ನುಸುಳಿ ಬರುವವರಿಗೆ ನೀರು ಅಹಾರ ಬೆಚ್ಚನೆಯ ಮಲಗುವ ವ್ಯವಸ್ಥೆ ಮಾಡುವ ದೇಶದ್ರೋಹದ ಕೆಲಸ ಮಾಡಿದರೆ ಸಾಕು. ಯಾರಿಗಿದೆ ವರ್ಷಾನುಗಟ್ಟಲೇ ದುಡಿಯುವ ಜರೂರತ್ತು)
ಸುಮಾರು ಒಂದೂವರೆ ವರ್ಷದ ಹಿಂದೆ ಇದು ನಿಗದಿಯಾಗಿತ್ತು. ಯಾವಾಗ ಭಾರತದ ಸರಹದ್ದನ್ನು ಈ ಪಾತಕಿಗಳು ಪ್ರವೇಶಿಸುತ್ತಾರೋ ಆವತ್ತೇ ಇಲ್ಲಿ ಅವರ ಹೆಣವಾಗುವ ಹಣೆಬರಹವೂ ಬರೆದಾಗಿರುತ್ತದೆ. ಅದರಲ್ಲೂ ಪಾಕಿಸ್ತಾನಿ ನೆಲದ ಉಗ್ರರಿಗೆ ಯಾವುದೇ ರಿಯಾಯಿತಿ ಇಲವೇ ಇಲ್ಲ. ಸೈನ್ಯದ ಲೆಕ್ಕಾಚಾರದಲ್ಲಿ ಇದು ಈ ಬಾರಿಯ ವರ್ಷದ ಕೊನೆಯವರೆಗೂ ಎಳೆಯಬಹುದಾಗಿದ್ದ ಕೇಸು. ಆದರೆ ಸತತವಾಗಿ ಕಳೆದ ಮೂರು ತಿಂಗಳಿಂದ ಸ್ವಘೋಷಿತ ಹಿಜ್ಬುಲ್ ಮತ್ತು ಲಷ್ಕರ್ ಕಮಾಂಡರ್‍ಗಳನ್ನು ಸೈನ್ಯ ಹೊಡೆದುರುಳಿಸಿದೆ.
ಹತ್ಯೆ ಹೇಗಾಯಿತು ಎನ್ನುವುದಕ್ಕಿಂತಲೂ ಹೇಗೆ ಈ ದುರುಳರು ಸಿಕ್ಕಿಬೀಳದಂತೆ ವರ್ಷಾನುಗಟ್ಟಲೇ ಕಾಶ್ಮೀರದಲ್ಲಿ ತಲೆ ಮರೆಸಿಕೊಂಡಿರುತ್ತಾರೆ ಎನ್ನುವುದೇ ಮುಖ್ಯ. ಹಾಗೆ ನೋಡಿದರೆ ಅಲ್ಲಿನ ಹೆಣ್ಣುಮಕ್ಕಳಿಗೆ ಮತ್ತು ಈಗಾಗಲೇ ವಯಸ್ಕರಾಗಿ ಜೀವನದ ಉದ್ದೇಶ ಬದುಕುವುದಷ್ಟೆ ಎಂದುಕೊಂಡವರಿಗೆ ಸೈನ್ಯ ಮತ್ತು ದೇಶವನ್ನು ಎದುರು ಹಾಕಿಕೊಳ್ಳುವಂತಹ ದೇಶ ದ್ರೋಹದ ಉಪದ್ಯಾಪಿತನ ಬೇಕಾಗೇ ಇಲ್ಲ. ಹೀಗೆಂದು ಸ್ಪಷ್ಟ ನಿಲುವಿನ ಮುಸ್ಲಿಂರ ಸಣ್ಣ ಗುಂಪುಈಗಲೂ ತಮ್ಮ ಪಾಡಿಗೆ ಬದುಕು ಕಟ್ಟಿಕೊಳ್ಳಲೆತ್ನಿಸುತ್ತಲೇ ಇದೆ.
ಹಾಗಾಗಿಯೇ ಮೊನ್ನೆ ಹತನಾದ ಅಬು ಇಸ್ಮಾಯಿಲ್ ಎಂಬ ಅಮರನಾಥ್ ಯಾತ್ರಿಗಳ ಮೇಲೆ ದಾಳಿಕೋರ ಹದಿನೆಂಟು ತಿಂಗಳಿನಿಂದ ತಲೆಮರೆಸಿಕೊಳ್ಳಲು ಸಾದ್ಯವಾಗಿದ್ದು. ಹಾಗೆ ನೋಡಿದರೆ ಈ ಕೆಲಸಕ್ಕೆ ಮೂಲ ಕೈ ಹಾಕಿದ್ದವನು ದುಜಾನೆ ಮತ್ತು ಅದಕ್ಕೂ ಮೊದಲು ಅಬ್ಜರ್‍ಭಟ್. ಎಲ್ಲರ ಉದ್ದೇಶ ಒಂದೇ ಆಗಿತ್ತು ಜಗತ್ತು ಬೆಚ್ಚಿ ಬೀಳುವಂತಹ ದಾಳಿಯನ್ನು ನಡೆಸಬೇಕೆನ್ನುವುದು. ಆದರೆ ಅದಾಗುವ ಮೊದಲೇ ಭಟ್‍ನನ್ನು ಹತ್ಯೆ ಮಾಡಿದ ಸೈನಿಕರಿಗೆ ಇಂತಹ ಬಕರಾಗಳನ್ನು ಬಲೆಗೆ ಬೀಳಿಸುವ ಕಲೆ ಕರಗತವಾಗಿ ಹೋಗಿತ್ತು ಹಾಗಾಗಿ ಅಬು ದುಜಾನ್ ಎಂಬ ಪಾತಕಿ ಕಳ್ಳನಂತೆ ತಲೆ ಮರೆಸಿಕೊಳ್ಳುತ್ತಿದ್ದವನು ಸಿಗೇ ಬಿದ್ದು ಹೆಣವಾಗಿ ಹೋದ.
ಅದಕೂ ಮೊದಲು ಸಿಕ್ಕಿಬಿದ್ದ ಅಬ್ಜಾರ್ ಭಟ್ ಕೂಡಾ ಹೀಗೆ ಹೇಯ ದಾಳಿ ಮಾಡುವ ಸಂಚು ರೂಪಿಸಿದ್ದವನೆ. ಆದರೆ ಕೈಗೆ ಸಿಗದೆ ತಪ್ಪಿಸಿಕೊಳುತ್ತಿದ್ದುದು ಕಣಿವೆಯಲ್ಲಿ ದೇಶದ್ರೋಹಿಗಳಾಗಿ ಇಲ್ಲಿನ ನೆಲ ಜಲದ ಉಪಕಾರಕ್ಕೆ ಬಿದ್ದೂ ಅವರಿಗೆ ಅನ್ನ,ನೀರು,ನೆರಳು ನೀಡುತ್ತಿದ್ದುರಿಂದ. ಒಂದು ಗೊತ್ತಿರಲಿ ಕಾಶ್ಮೀರ ಕಣಿವೆಯಲ್ಲಿ ಯಾವೊಬ್ಬನೂ ಹೀಗೆ ನಮ್ಮ ಕಡೆಗಳಲ್ಲಿ ತೋಟದ ನೆರಳಲ್ಲೋ, ದೇವಸ್ಥನಾದ ಜಗುಲಿಯ ಮೇಲೋ ಮಲಗಿ ದಿನಗಳನ್ನು ತೆಗೆದಂತೆ ತಲೆ ತಪ್ಪಿಸಿಕೊಂಡು ದಿನ ದೂಡಲು ಸಾಧ್ಯವೇ ಇಲ್ಲ. ಅವನಿಗಾಗಿ ಯಾವನಾದರೂ ದೇಶದ್ರೋಹಿ ಕಾಶ್ಮೀರಿ ಬಾಗಿಲು ತೆರೆದಿಟ್ಟು ಕಾವಲುಕಾಯ್ದು ಅನ್ನ ರೊಟ್ಟಿ ಕೊಟ್ಟು ಸಾಕಲೇಬೇಕು. ಅಂದಾಗ ಮಾತ್ರವೇ ಆತ ವರ್ಷಾನುಗಟ್ಟಲೇ ಬದುಕಲು ಸಾಧ್ಯ. ಇಲ್ಲವಾದರೆ ವಾತಾವರಣ ವೈಪರಿತ್ಯ ಮತ್ತು ಸೈನ್ಯ, ಸಿ.ಆರ್.ಪಿ.ಎಫ್. ಪಡೆಗಳು ಇಂಚಿಂಚನ್ನು ಆವರಿಸಿಕೊಂಡಿರುವ ಪರಿಗೆ ಒಂದೇ ವಾರದಲ್ಲೇ ಹೆಣವಾಗುವುದು ನಿಶ್ಚಿತ. ಹಾಗಾಗೇ ಪೆÇೀಲಿಸು ಮತ್ತು ಸ್ಥಳೀಯ ಖಬರಿಗಳು ಇತ್ತಿಚೆಗೆ ಸರಿಯಾದ ಸಂಪರ್ಕವನ್ನು ಹೊಂದಿದ್ದು ನಿರಂತರ ಹೆಣಗಳು ಬೀಳುತ್ತಿವೆ.
ಮೊನ್ನೆ ನೌಗಾಂ ಪ್ರದೇಶದಲ್ಲಿ ಕೇವಲ ಹತ್ತೇ ನಿಮಿಷದಲ್ಲಿ ನೆಲಕ್ಕುರುಳಿದ ಪಾತಕಿ ಇಸ್ಮಾಯಿಲ್ ಯಾವ ಲೆಕ್ಕದಲ್ಲೂ ದೊಡ್ಡ ಕ್ರಿಮಿಯೇನಲ್ಲ. ಆದರೆ ಯಾವಾಗ ಅಭ್ಜಾರ್ ಭಟ್ ಮತ್ತು ದುಜಾನೆ ಹತರಾಗಿ ಹೋದರೋ ಇವನ ಮಹತ್ವಾಕಾಂಕ್ಷೆ ಎದ್ದು ಕೂತಿತ್ತು. ಸಧ್ಯಕ್ಕೆ ಗಡಿದಾಟಿ ಬಂದಿರುವ ದೊಡ್ಡ ಮಟ್ಟದ ಪಾತಕ ಎಸಗಬಲ್ಲ ಕಮಾಂಡರ್‍ಗಳು ಯಾರೂ ಇಲ್ಲ. ಮಾಡಬೇಕಾದ ಇಬ್ಬರೂ ಯಾವ ದಾಳಿಯನ್ನೂ ಸರಿಯಾಗಿ ಮಾಡಿಲ್ಲ ತಾನು ಏನಾದರೂ ಮಾಡಿ ಒಂದು ದಾಳಿ ಅಂತಾ ಮಾಡಿದರೆ ತತಕ್ಷಣಕ್ಕೆ ಕಮಾಂಡರ್ ಪದವಿ ದಕ್ಕುತ್ತದೆ. ಅಲ್ಲದೆ ಹಾಗೇನಾದರೂ ಮಾಡಿದರೇನೆ, ಕಣಿವೆಯಲ್ಲಿ ಇನ್ನಷ್ಟು ದಿನ ಊಟ,ವಸತಿಯ ಜೊತೆಗೆ ದೇಶದ್ರೋಹಿ ಕಾಶ್ಮೀರಿಗಳು ರಾಜಾಶ್ರಯವನ್ನೇ ಕೊಡುತ್ತಾರೆ. ಹೀಗೆ ಅನಿವಾರ್ಯ ಮತ್ತು ಅರ್ಜೆಂಟಿಗೆ ಬಿದ್ದ ಕ್ರಿಮಿ ಅಬುಇಸ್ಮಾಯಿಲ್ ಅಮರನಾಥ್ ಯಾತ್ರಿಗಳ ಮೇಲೆ ದಾಳಿ ಮಾಡಿದ. ಅದು ದೊಡ್ಡ ವಿಷಯವೂ ಆಗಿರಲಿಲ್ಲ. ನೂರಾರು ಕಿ.ಮೀ. ಉದ್ದಾನು ದಾರಿಯಲ್ಲಿ ತೀರ ಯಾವದಾದರೂ ಗುಡ್ಡದ ಮರೆಯಿಂದ ಕಿ.ಮೀ.ದೂರದಿಂದಲೇ ಗುಂಡಿನ ದಾಳಿ ನಡೆಸಿ ಕೆಡುವಬಹುದಿತ್ತು. ಆದರೆ ಹಾಗಾದಲ್ಲಿ ಆ ಕೂಡಲೇ ತಮ್ಮನ್ನು ಸುತ್ತುವರೆಯುವ ಸೈನಿಕರು ಅಲ್ಲೆ ಹೊಡೆದು ಕೆಡುವುತ್ತಾರೆ ಎಂದು ಗೊತ್ತಿದ್ದುದರಿಂದ ಇಸ್ಮಾಯಿಲ್ ಊರ ಮಧ್ಯದಲ್ಲಿ ದಾಳಿಗೆಂದು ಅಮಾಯಕವಾಗಿ ಸಿಕ್ಕ ಬಸ್ ಮೇಲೆ ಎರಗಿದ್ದ. ಅದೂ ಕೂಡಾ ತುಂಬಾ ಪ್ರಿಪ್ಲಾನ್ ಏನಲ್ಲ. ಆ ಹೊತ್ತಿಗಾಗಲೇ ಅಬು ಪಾಂಪೆÇರ್ ಏರಿಯಾದಲ್ಲೇ ತಲೆಮರಸಿಕೊಂಡಿದ್ದ.
ಆಕಸ್ಮಿಕವಾಗಿ ಬಸ್ ನಿಧಾನಕ್ಕೆ ಏಕಾಂಗಿಯಾಗಿ ಚಲಿಸುತ್ತಾ ಹೊರಟಿದ ಎನ್ನುವ ಸುದ್ದಿ ಸಿಕ್ಕು ತತಕ್ಷಣಕ್ಕೆ ಅದರ ಮೇಲೆ ಎರಗಿ ರುಬಾಬು ತೋರಿಸಲು ಪ್ರಯತ್ನಿಸಿದ್ದ. ಆದರೆ ಹಾಗೆ ಮಾಡುವ ಮೂಲಕ ಆ ಏರಿಯಾದಿಂದ ಹೊರಬೀಳುವ ತನ್ನ ಬಾಗಿಲು ತಾನೆ ಹಾಕಿಕೊಂಡಿದ್ದ. ಸೈನಿಕರಿಗೆ ಇಂಥದ್ದನ್ನೆಲ್ಲ ಬೆಂಬತ್ತುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಸ್ಥಳೀಯ ಬಾತ್ಮಿದಾರರ ಮೂಲಕ ಅತನನ್ನು ಹಿಂಬಾಲಿಸುತ್ತಲೆ ಮೊನ್ನೆ ಪಕ್ಕಾ ಟಿಪ್ಸು ಸಿಗುತ್ತಿದ್ದಂತೆ ಎರಗಿದ್ದಾರೆ. ಅಷ್ಟೆ ಹತ್ತೇ ನಿಮಿಷದಲ್ಲಿ ಹೆಣವಾಗಿದ್ದಾನೆ ಸಂಗಡಿಗನೊಂದಿಗೆ. ಇದಕ್ಕೆ ಸರಿಯಾಗಿ ಇಂಥಾ ದೇಶದ್ರೋಹಿಗಳೂ ಮತ್ತು ಪಾತಕಿಗಳನ್ನು ಒಮ್ಮೆ ಗಡಿದಾಟಿಸಿ ಕೈ ತೊಳೆದುಕೊಳ್ಳುವ ಪಾಕಿಸ್ತಾನ ನಂತರ ಯಾವ ಕಾರಣಕ್ಕೂ ಅವರನ್ನು, ಆಚೆಗೆ ಅಂದರೆ ವಾಪಸ್ಸು ತನ್ನ ನೆಲಕ್ಕೆ ಬಿಟ್ಟು ಕೊಳ್ಳುವುದೇ ಇಲ್ಲ. ಇದೆಲ್ಲಾ ಗೊತ್ತಿದ್ದೂ ಧರ್ಮದ ಅತಿರೇಕಕ್ಕೆ ಬೀಳುವ ಕ್ರಿಮಿಗಳು ಬರುತ್ತಿದಂತೆ ದೊಡ್ಡ ಸುದ್ದಿಯಾಗುವ ಹೊಡೆತಕ್ಕೆ ಕೈ ಹಾಕಿ ಸತ್ತು ಸುದ್ದಿಯಾಗುವುದೇ ಆಗುತ್ತಿದೆ. ಅತ್ತ ಕಡೆಯಿಮ್ದ ಇವನಾರು ನಮಗೇ ಗೊತ್ತೇ ಇಲ್ಲ ಎನ್ನುವ ಪಾಪಿಸ್ತಾನ ಎಂದಿನಂತೆ ಹೀಗೆ ಸರಹದ್ದು ದಾಟಿ ಬರುವ ಪಾತಕಿಗಳ ಹತ್ಯೆಯಾಗುತ್ತಿದ್ದಂತೆ ಅತ್ತಲಿಂದ ಹೊಸ ತಂಡವನ್ನು ಕಳಿಸುವ ವ್ಯವಸ್ಥೆ ಮಾಡುತ್ತದೆ.
ಇದೆಲ್ಲ ಒತ್ತಟ್ಟಿಗಿರಲಿ. ಆದರೆ ಇಲ್ಲೇ ನಮ್ಮದೇ ದೇಶದ ನಮ್ಮದೇ ಬೇರೆ ರಾಜ್ಯದ ಜನ ಸಾಮಾನ್ಯರ ತೆರಿಗೆ ಹಣದ ಮೇಲೆ ಜೀವನ ಮಾಡುತ್ತಿರುವ ಹರಾಮಿ ಕಾಶ್ಮೀರಿ ದೇಶದ್ರೋಹಿಗಳು ಅದ್ಯಾವುದೋ ನಂಬಿಕೆ ಮತ್ತು ನಿಟ್ಟಿನಲ್ಲಿ ದಾರಿಹೋಕ ದನಗಳಂತೆ ಬರುವ ಉಗ್ರರಿಗೆ ತಂತಮ್ಮ ಮನೆ ಮಠಗಳಲ್ಲಿ ನೀರು ನೆರಳೂ ಕೊಟ್ಟು ಸಾಕುತ್ತಿದ್ದಾರಲ್ಲ ಅಷ್ಟೆಲ್ಲಾ ಮಾಡಿಯೂ ಇವರಿಗೆ ಪಾಕಿಸ್ತಾನ ಯಾವತ್ತಾದರೂ ಬಾಗಿಲು ತೆರೆದು ಸ್ವಾಗತಿಸುತ್ತದೆ ಎನ್ನುವ ಯಾವ ಭರವಸೆ ಮೇಲೆ ಇಂಥಾ ದೇಶದ್ರೋಹಕ್ಕಿಳಿದಿದ್ದಾರೆ. ಅತ್ತ ನೋಡಿದರೆ ಅವರ್ಯಾವತ್ತೂ ಇಂಥಾ ದ್ರೋಹಿಗಳನ್ನು ಅಸಲಿಗೆ ಮುಸ್ಲಿಂರು ಎಂದೇ ಒಪ್ಪಲು ತಯಾರಿಲ್ಲ. ಇದೆಲ್ಲಾ ಗೊತ್ತಿದ್ದೂ ಇಲ್ಲದ ಧರ್ಮದ ತೆವಲಿಗಿಳಿದಿರುವ ಕ್ರಿಮಿಗಳು ಫಾಲಿಡಾಲ್ ಹೊಡೆಸಿಕೊಂಡ ಹುಳುಗಳಂತೆ ಬಿದ್ದು ಸಾಯುತ್ತಿದ್ದಾರೆ. ಕಣಿವೆ ಕ್ರಮೇಣ ಶುದ್ಧವಾಗುತ್ತಿದೆ. ಅಷ್ಟಕ್ಕೂ ಸರಹದ್ದು ನುಸುಳುವುದು ಯಾವತ್ತೋ ಕಡಿಮೆಯಾಗಿದೆ. ಕಾರಣ ಒಬ್ಬೇಒಬ್ಬ ನುಸುಳುಕೋರನೂ ಇವತ್ತಿಗೂ ಕತೆ ಹೇಳಲೂ ಜೀವಂತವಾಗಿಲ್ಲ. ಆ ಮಟ್ಟಿಗೆ ನಮ್ಮ ಸೈನಿಕರು ಸ್ವಚ್ಛತಾ ಕಾರ್ಯ ಕೈಗೊಳುತ್ತಿದ್ದರೆ ನಮ್ಮಲ್ಲಿ ಮಾತ್ರ ಕಾಶ್ಮೀರ ಗಲಾಟೆಯನ್ನು ವಿಭಿನ್ನ ನಿಲುವಿನಲ್ಲಿ ನೋಡಬೇಕಾದ ಅಗತ್ಯವಿದೆ ಎನ್ನುವ ಪ್ರಗತಿಪರರು ಯಾರ ಋಣಕ್ಕೆ ಬಿದ್ದಿದಾರೆ..?
ಕಾಶ್ಮೀರವೆಂಬ ಖಾಲಿ ಕಣಿವೆ..ಕವಲುದಾರಿಗೆ ತಳ್ಳಿದ 370 ಕಲಂ.
(ಇಲ್ಲಿ ಸಿಬಿಐ ತನಿಖೆ ನಡೆಸುವಂತಿಲ್ಲ, ಜನ ಪ್ರತಿನಿಧಿ ಕಾಯ್ದೆ ಗೊತ್ತೆ ಇಲ್ಲ. ಅಕಸ್ಮಾತ ಕಾಶ್ಮೀರಿ ಹೆಣ್ಣು ಹೊರ ರಾಜ್ಯದ ಪುರುಷನನ್ನು ಮದುವೆಯಾದರೆ ಆಕೆ ಪೂರ್ತಿಯಾಗೇ ಕಾಶ್ಮೀರದ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಭಾರತೀಯ ದಂಡ ಸಂಹಿತೆ(ಇಂಡಿಯನ್ ಪಿನಲ್ ಕೋಡ್)ನ್ನು ಹೇಳಿಕೊಂಡು ಅವಹೇಳನ ಮಾಡಿ ನಗುವ ಕಾಶ್ಮೀರಿಗಳಿಗೆ ಕಾಯಿದೆಯ ಮಹತ್ವ ಮತ್ತು ಅದರ ವ್ಯಾಪ್ತಿ ಎರಡೂ ಗೊತ್ತಿಲ್ಲ. ಆದರೂ ನಾಚಿಕೆ ಬಿಟ್ಟು ನಾಯಿಬಾಳು ಮಾಡುತ್ತಿರುವ ಕಾಶ್ಮೀರಿ ಸರಕಾರ, ಇತರೆ ರಾಜ್ಯದ ಜನತೆ ಕಟ್ಟುವ ತೆರಿಗೆಯಲ್ಲಿ ತನ್ನ ಪಾಲು ಪಡೆದು ಅಧಿಕಾರ ನಡೆಸುತ್ತಿದೆ. ಸ್ವಂತಕ್ಕೆ ನಯ್ಯ ಪೈಸೆ ಉತ್ಪನ್ನ ಈ ರಾಜ್ಯದ ಬೊಕ್ಕಸಕ್ಕಿಲ್ಲ ಎಂದರೆ ನಿಮಗೆ ಅಚ್ಚರಿಯಾದೀತು. ಇದಕ್ಕಿಂತ ಹೇಯ ಬೇಕಾ. ಒಂದು ನೈಯಾ ಪೈಸೆ ತೆರಿಗೆ ಕಟ್ಟದೆ ದೇಶಾದ್ಯಂತದ ಜನರಿಂದ ಪಡೆದ ತೆರಿಗೆಯಲ್ಲಿ ಭಿಕ್ಷೆ ಪಡೆದು ಬದುಕುವ ಬದುಕೂ ಒಂದು ಬದುಕಾ..?)
ತೀರ ಕಾಶ್ಮೀರ ಪಂಡಿತರಿಗೆ ಮರುವಸತಿಗೆ ಸ್ಥಾನ ಇಲ್ಲದ ತಾಯ್ನಾಡಿನಲ್ಲಿ ಕಾಲೂರಬೇಕೆಂಬ ತಹತಹಕ್ಕೆ ಮಣ್ಣೆರಚಿದ್ದು ಯಾವ ದೇಶದಲ್ಲೂ ಇಲ್ಲದ ಕಾನೂನನ್ನು ಆಗಿನ ಓಲೈಕೆಯ ಭಾರತ ಸರಕಾರ ಅಂಗೀಕರಿಸಿದ್ದು. ಅದೂ ಆಗಿನ ತುಷ್ಠೀಕರಣದ ರಾಜಕಾರಣದ ಪ್ರಭಾವಕ್ಕೆ ಸಿಲುಕಿ. ಯಾವ ಹಿಂದೂಗಳನ್ನು ಓಲೈಸಿ ಅಥವಾ ಅವರ ಬೆಂಬಲದಿಂದ ಅಖಂಡ ಹಿಂದೂಸ್ಥಾನವನ್ನೇ ಆಳಬಹುದಿತ್ತೋ ಆ ಅವಕಾಶವನ್ನು ದೊಡ್ಡತನ ತೋರಿಸಿಕೊಳ್ಳುವ ಸಲುವಾಗಿ ಕೈಚೆಲ್ಲಿದ ಆಗಿನ ನಾಯಕರು ಕಾಶ್ಮೀರ ಕಣಿವೆಗೆ ವಿಶೇಷ ಕಾನೂನೊಂದನ್ನು ಅಂಗೀಕರಿಸಿಬಿಟ್ಟರು. ಸ್ವತ: ಸಂವಿಧಾನ ಕರ್ತೃಗಳೇ ಇಂತಹ ಕಾನೂನಿನ ವಿರುದ್ಧ ನಿಂತು ಅದನ್ನು ತಪ್ಪಿಸಲು ಯತ್ನಿಸಿದರಾದರೂ ಆಗದ ಕಾನೂನು ಪರಿಚ್ಛೇದ 370 ಎಂಬ ಹೆಸರಿನಲ್ಲಿ ಭಾರತದ ಭುಜವೇರಿ ಕೂತುಬಿಟ್ಟಿತ್ತು.
ಇತಿಹಾಸದಲ್ಲಿ 1947 ರ ರಾಜಸಂಸ್ಥಾನಗಳನ್ನು ವೀಲಿನಗೊಳಿಸುವ ಪ್ರಕ್ರಿಯೆಯಲ್ಲಿ ಪಟೇಲರು ಪೂರ್ತಿ ಹಿಂದುಸ್ಥಾನವನ್ನೇ ಒಂದು ಗೂಡಿಸುವ ಕಾರ್ಯದಲ್ಲಿದ್ದಾಗ ಕಾಶ್ಮೀರದ ವಿಷಯಕ್ಕೆ ಮಾತ್ರ ತಾವೆ ಬಗೆಹರಿಸುವುದಾಗಿ ಆಗಿನ ಪ್ರಧಾನಿ ಎದ್ದು ಕೂತುಬಿಟ್ಟರು. ಅಲ್ಲಿ ಮಹಾರಾಜ ಹರಿಸಿಂಗ್‍ರ ಆಳ್ವಿಕೆಯನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದ ಶೇಕ್ ಅಬ್ದುಲ್ಲಾ ಮೌಂಟ್‍ಬ್ಯಾಟನ್ ಮೂಲಕ ನೆಹರು ಮೇಲೆ ಒತ್ತಡ ತಂದಿಟ್ಟುಬಿಟ್ಟ. ಆಗ ರಾಜದ್ರೋಹದ ಅಪಾದನೆಯ ಮೇರೆಗೆ ಹರಿಸಿಂಘ್ ಈ ಅಬ್ಧುಲ್ಲಾನನ್ನು ಬಂಧಿಸಿ ಸೆರೆಯಲ್ಲಿಟ್ಟರು. ಮುಸ್ಲಿಂ ಓಲೈಕೆಗಿಳಿದಿದ್ದ ನಾಯಕರು ಇತ್ತ ಹರಿಸಿಂಘ್ ಮತ್ತು ಅತ್ತ ಅಬ್ದುಲ್ಲ ಇಬ್ಬರನ್ನೂ ಬಿಡಲಾಗದೆ ಬ್ಯಾಟನ್‍ನ ಒತ್ತಡಕ್ಕೊಳಗಾಗಿ ಸಮಸ್ಯೆಯನ್ನು ವಿಶ್ವಸಂಸ್ಥೆಯೆದುರಿಗೆ ಇಟ್ಟು ಕೈಮುಗಿದು ನಿಂತರು. ಒಳಗೊಳಗೆ ಅಬ್ದುಲ್ಲ ತನ್ನನ್ನು ಸ್ವತಂತ್ರ ಕಾಶ್ಮೀರದ ಪ್ರಧಾನಿಯನ್ನಾಗಿಸದಿದ್ದರೆ ಸಂಪೂರ್ಣ ಮುಸ್ಲಿಂ ಸಮುದಾಯ ಅವರ ವಿರುದ್ಧ ತಿರುಗಿ ಬೀಳಲಿದೆ ಎಂದೇ ನಂಬಿಸಿಬಿಟ್ಟ. ಅತ್ತ ಪಾಕಿಸ್ತಾನ ಕಾಶ್ಮೀರದ ಹಲವು ಭಾಗವನ್ನು ಆಕ್ರಮಿಸಿಕೊಂಡು ಬೇರೆ ಕೂತಿತಲ್ಲ. ಅದಕ್ಕಾಗಿ ತಾನು ಭಾರತದೊಳಗೇ ಇದ್ದರೂ ತನಗೆ ವಿಶೇಷ ಕಾನೂನಿನ ಸೌಲಭ್ಯ ಒದಗಿಸಕೊಡಲೇಬೇಕೆಂದು ಒತ್ತಾಯದ ಮೂಲಕ ಆಗಿನ ನಾಯಕರನ್ನು ನಯವಾಗಿ ನಂಬಿಸಿದ.
ಅದೆಲ್ಲದರ ಪರಿಣಾಮ ಸಂವಿಧಾನದ 21 ನೇ ಪರಿಚ್ಛೆದದ ಪ್ರಕಾರ ಅದನ್ನೊಂದು ಕಾನೂನು ಎಂದೇ ಪರಿಗಣಿಸಬೇಕೆ ಹೊರತಾಗಿ ಶಾಶ್ವತವಾದ ಅಧಿಕಾರ ಅಲ್ಲ ಎಂದು ದಾಖಲಿಸಲಾಯಿತು. ಸ್ವತ: ತನ್ನನ್ನು ಪ್ರಧಾನಿ ಎಂದಲ್ಲದೆ ಅಲ್ಲಿನ ರಾಜ್ಯಪಾಲರನ್ನು ಸದರ್-ಇ-ರಿಯಾಸತ್ ಎಂದೇ ಕರೆಯುವ ಪರಿಪಾಠ 1965 ರವರೆಗೂ ಮುಂದುವರೆದಿತ್ತು. ಹೀಗಾಗಿ ಅದರ ಸಲುವಾಗಿ ಆರು ವಿಷೇಶ ಉಪಕ್ರಮಗಳನ್ನು ಸೇರಿಸಲಾಯಿತು. ಅದರ ಪ್ರಕಾರ
• ಅದು ಗಣರಾಜ್ಯದ ಭಾಗವಾದರೂ ಪ್ರತ್ಯೇಕ ಸಂವಿಧಾನ ಹೊಂದಬಹುದು.
• ರಕ್ಷಣೆ ಹಣಕಾಸು, ವಿದೇಶ ವ್ಯವಹಾರ ಮತ್ತು ಸಂಪರ್ಕ ಮಾತ್ರ ಕೇಂದ್ರದ ಕೈಯ್ಯಲ್ಲಿರುತ್ತದೆ.
• ಭಾರತದ ಸಂವಿಧಾನದ ಕಾಯಿದೆ ಲಾಗೂ ಮಾಡಲು ಅಲ್ಲಿನ ವಿಧಾನಸಭೆಯ ಅನುಮತಿಬೇಕು.
• ವೀಲಿನ ಪ್ರಕ್ರಿಯೆಗೆ ಅಲ್ಲಿನ ಸರಕಾರ ಮುಂದಾದರೆ ಅದಕ್ಕಾಗಿ ಅಲ್ಲಿನ ಸಂವಿಧಾನವನ್ನೆ ಪರಿಷ್ಕರಿಸಬೇಕು ಅದಕ್ಕೆ ವಿಧಾನಸಭೆ ಅನುಮತಿಸಬೇಕು.
• ಅಷ್ಟಾದರೂ ಅದು ಮಧ್ಯಂತರ ಅಧಿಕಾರವಾಗುತ್ತದೆ.
• ರಾಷ್ಟ್ರಪತಿಗಳೇ ಇದಕ್ಕೆ ಮುಂದಾದರೆ ಅದಕ್ಕೂ ವಿಧಾನಸಭೆಯ ಅನುಮತಿ ಅಗತ್ಯ. ಇತ್ಯಾದಿ ಕಠಿಣ ಕಾಯಿದೆಗಳ ಮಧ್ಯೆ 1956 ರಲ್ಲಿ ಅಲ್ಲಿನ ಶಾಸನ ಸಭೆ ಅದು ಭಾರತದ ಅವಿಭಾಜ್ಯ ಅಂಗವೆಂದು ಒಪ್ಪಿ ಅನುಮೋದನೆಯನ್ನು ಅಧಿಸೂಚನೆಗೊಳಿಸಿದಾಗಲೇ 370 ಬಿದ್ದು ಹೋಗಿತ್ತು. ಆದರೆ ಭಾರತದ ಲೋಕಸಭೆ ತುಷ್ಠೀಕರಣದ ರಾಜಕೀಯ ಮಾಡಿ ಅದನ್ನು ತಾನೇ ತಿರಸ್ಕರಿಸಿಬಿಟ್ಟಿತು.
ಇನ್ನೂ ಮುದುವರೆದ ಅದರ ಕಾನೂನಿನ ಅಸಂಬಧ್ಧತೆಗಳು ನೋಡಿ. ಭಾರತದ ಸಂವಿಧಾನ 19(1)(ಇ) ಮತ್ತು (ಜಿ) ಮಾನ್ಯ ಮಾಡಿರುವ ಹಕ್ಕನ್ನೆ, ಕಾಯಿದೆ 370 ಗಾಳಿಗೆ ತೂರುತ್ತದೆ. ಇದರ ಪ್ರಕಾರ ಭಾರತದ ಯಾವುದೇ ಪ್ರಜೆ ಎಲ್ಲಿ ಬೇಕಾದರೂ ತನಗೆ ಸರಿ ಹೊಂದುವ ವೃತ್ತಿ, ಉದ್ಯೋಗ ನೆಲೆಸುವ ಇತ್ಯಾದಿ ಹಕ್ಕನ್ನು ಹೊಂದಿದ್ದರೆ ಇಲ್ಲಿಗೆ ಮಾತ್ರ ಅದು ಲಾಗೂ ಆಗುವುದೇ ಇಲ್ಲ. ನೀವು ಭಾರತದ ಪ್ರಜೆಯಾಗಿ ಕಾಶ್ಮೀರ ನಾಡಿನಲ್ಲಿ ಇದೆಲ್ಲಾ ಮಾಡುವಂತಿಲ್ಲ. ಸ್ವತ: ಕೇಂದ್ರ ಸರಕಾರ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಅಥ್ವಾ ಇನ್ನಾವುದೇ ರೀತಿಯ ದೇಶಕ್ಕೆ ಒಳಿತಾಗುವ ಕಾರಣ ಯಾವುದೇ ಆದೇಶ ಹೊರಡಿಸಿದರೂ ಅದನ್ನು ಮೊದಲು ಅಲ್ಲಿನ ಸಭೆಯ ಅನುಮತಿ ಪಡೆದು ಜಾರಿಗೊಳಿಸಬೇಕೆ ವಿನ: ಕಾಶ್ಮೀರದಲ್ಲಿ ನೇರ ಜಾರಿ ಸಾಧ್ಯವಿಲ್ಲ.
ರಾಷ್ಟ್ರಪತಿಯಿಂದಲೇ ನೇಮಕವಾಗುವ ರಾಜ್ಯಪಾಲರು ನಂತರದಲ್ಲಿ ತಮ್ಮದೇ ಅಧಿಕಾರಕ್ಕೆ ಬಂದುಬಿಡುತ್ತಾರೆ. ಅಕಸ್ಮಾತ ಅಗತ್ಯಬಿತ್ತು ಎಂದು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಯತ್ನಿಸಿದರೂ ಅದಕ್ಕೆ ಜಮ್ಮು ಕಾಶ್ಮೀರ ರಾಜ್ಯಪಾಲರೇ ರಾಷ್ಟ್ರಪತಿಗಳಿಗೆ ಅನುಮತಿ ಕೊಡಬೇಕು. ಹೇಗಿದೆ ಉಲ್ಟಾ ಲೆಕ್ಕಾಚಾರ...?ಇಲ್ಲದಿದ್ದರೆ ಯಾವ ಕಾನೂನೂ ಅಲ್ಲಿ ಜಾರಿಗೊಳಿಸಲಾಗುವುದೇ ಇಲ್ಲ. ಕೇಂದ್ರ ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆಯಬಹುದಾಗಿದ್ದರೂ ಸರಕಾರಕ್ಕೆ ಯಾವುದೇ ತೆರಿಗೆಯನ್ನು ಜಮ್ಮು ಕಾಶ್ಮೀರ ಜನತೆ ಪಾವತಿಸಬೇಕಾಗಿಲ್ಲ. ಪಕ್ಷಾಂತರ ವಿರೋಧಿ ಕಾನೂನು, ಆರ್.ಟಿ.ಐ. ಯಾವುದೂ ಇಲ್ಲಿ ಲೆಕ್ಕಕ್ಕಿಲ್ಲ. ಕೇಳಿ ನೋಡಿ. ನಿಮ್ಮ ಏನೇ ಅಹವಾಲು ಪ್ರಶ್ನೆ ಅಥವಾ ಕೇಂದ್ರ ಸರಕಾರದ ಕಾಯಿದೆಯ ಪತ್ರಗಳನ್ನು ನೇರವಾಗಿ ಕಸದ ಬುಟ್ಟಿಗೆಸೆಯುತ್ತಾರೆ. ದೇಶಾದ್ಯಂತ ಬಡಿದಾಡುವ ಮೀಸಲಾತಿಯನ್ನು ಅಲ್ಲಿ ಹೋಗಿ ಕೇಳಿ ನೋಡಿ. ಉಸಿರಿಗೂ ಮೀಸಲಾತಿ ಇಲ್ಲ. ಅಷ್ಟೆ ಅಲ್ಲ ಪರಿಶಿಷ್ಟ ಜಾತಿ, ಪಂಗಡ, ಮಾನವ ಹಕ್ಕು, ಮಹಿಳಾ ಹಕ್ಕು, ಆಯೋಗಳು, ಶಿಕ್ಷಣ ಹಕ್ಕು, ಸಮಾನತೆಯ ಹಕ್ಕು ಉಹೂಂ ಏನೆಂದರೆ ಏನೂ ಇಲ್ಲಿ ನಡೆಯುವುದಿಲ್ಲ. ಎಲ್ಲೆಡೆಗೆ ವಿಧಾನ ಸಭೆ ಐದುವರ್ಷವಿದ್ದರೆ ಅಲ್ಲಿ ಆರು ವರ್ಷದ ವಿಧಾನಸಭೆ ನಡೆಯುತ್ತದೆ. ಸ್ವತ: ಪ್ರತಿಜ್ಞಾ ವಿಧಿ ಓದಿಕೊಳ್ಳುವ ಅಲ್ಲಿನ ನಾಯಕರಿಗೆ, ದುಡ್ಡು ಮಾತ್ರ ಕೇಂದ್ರ ಸರಕಾರದಿಂದ ಪಡೆಯುವದು ಕಾಶ್ಮೀರಿಗಳಿಗೆ ಅಭ್ಯಾಸವಾಗಿ ಹೋಗಿದೆ. ಹೆಂಗಿದೆ ಪುಕಸಟ್ಟೆ ಬದುಕು..? ಮೈತುಂಬ ಸೊಕ್ಕು ಯಾರಿಗೆ ಬರಲಿಕ್ಕಿಲ್ಲ.
ಉಳಿದೆಲ್ಲಾ ಬಿಟ್ಟು ಕೊನೆಗೆ ಧರ್ಮದ ಅಫೀಮು ಸೇವಿಸುತ್ತಾ ಇರಲು ಇಷ್ಟೆಲ್ಲಾ ಸಾಕಲ್ಲವಾ..? ಪುಗಸಟ್ಟೆ ಬದುಕಿಗೆ ಬೇರೆನು ಮಾಡಲು ಸಾಧ್ಯ...? ಬರುಬರುತ್ತಾ ಪೆÇೀಲಿಸರ ಗುಂಡಿಗೆ ಸಿಕ್ಕಿ ಸಾಯುವುದರ ವಿನ: ಬೇರೆ ಬದುಕೆ ಕಾಣುತ್ತಿಲ್ಲ ಕಲ್ಲೆಸೆಯುವ ದೇಶದ್ರೋಹಿಗಳಾಗುವ ಹೊರತಾಗಿ. ಕಣಿವೆ ಖಾಲಿಯಾಗದೆ ಏನು ಮಾಡಿತು..?
ಕಾಶ್ಮೀರವೆಂಬ ಖಾಲಿ ಕಣಿವೆ..
ಸಮುದಾಯಕ್ಕೆ ಉರುಳಾದ ಜನಾಂಗೀಯ ಹತ್ಯೆ...
(ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ ಎಂದರೆ ಯಾವುದೇ ಪತ್ರಿಕೆಯೂ, ಒಬ್ಬೇ ಒಬ್ಬ ಸಂಪಾದಕನೂ ಇದನ್ನು ಜನಾಂಗೀಯ ಮಾರಣಹೋಮ, ದಮನ, ಮಾನವಹಕ್ಕಿನ ಉಲ್ಲಂಘನೆ ಎಂಬ ಶಬ್ದವನ್ನು ಬಳಸದೆ ಎರಡು ಸಾಲಿನ ಸುದ್ದಿ ಮಾಡಿ ಕೈತೊಳೆದುಕೊಂಡು ಪಂಡಿತರ ಸಮುದಾಯಕ್ಕೆ ಕೊನೆ ಮೊಳೆದುಬಿಟ್ಟಿದ್ದರು. ಕಡೆಪಕ್ಷ ಅದು ನಿರಾಶ್ರಿತರ ಸಮಸ್ಯೆಯಾಗಿಯೂ ಕಾಡಲಿಲ್ಲ. ವಲಸೆಯ ದುರಂತವಾಗಿಯೂ ಕಾಡಲಿಲ್ಲ. ಬದಲಿಗೆ ಅವರನ್ನೆಲ್ಲಾ ಸಾಮೂಹಿಕವಾಗಿ "ಪ್ರಾದೇಶಿಕ ವಲಸಿಗರು" ಎಂಬ ಪಟ್ಟಿಗೆ ಸೇರಿಸಿ ಆಗಿನ ಸರಕಾರ ಕೈ ತೊಳೆದುಕೊಂಡರೆ ಅವರ ಕೈಗೊಂಬೆಯಂತೆ ಆಡಿದ ಮಾನವ ಹಕ್ಕು ಆಯೋಗ ನೆಪಕ್ಕೊಂದು ವರದಿ ಮತ್ತು ವಿಚಾರಣೆ ನಡೆಸಿ ಕಾಲಾನುಕ್ರಮದಲ್ಲಿ ವಿಷಯವನ್ನೆ ಮರೆ ಮಾಚಿ ತೆಪ್ಪಗಾಗಿಬಿಟ್ಟಿತು)
ಕಾಶ್ಮೀರ ವ್ಯಾಲಿಯಿಂದ 1990 ರ ದಶಕದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾಶ್ಮೀರ ಪಂಡಿತರು ಅಲ್ಲಿನ ಪರ್ವತದ ಸಂದುಗಳನ್ನಿಳಿದು ಭಾರತದ ಇತರ ಭಾಗಳಿಗೆ ತೆರಳಿದರಲ್ಲ ಆವತ್ತಿನಿಂದ ಅಜಮಾಸು ಎಂಟು ಲಕ್ಷ ಜನ ಹಾಗೆ ಎರಡೇ ವರ್ಷದಲ್ಲಿ ಗುಳೆಹೋದರು. ಅನಾಹುತಕಾರಿ ಬಲಾತ್ಕರಕ್ಕೆ ಸಿಕ್ಕಿದ ಹಿಂದೂ ಹೆಂಗಸರ ಲೆಕ್ಕ ಹಾಕುವ ಧೈರ್ಯವನ್ನು ಇವತ್ತಿಗೂ ಯಾವೊಬ್ಬ ಗಂಡಸೂ ಮಾಡಿಲ್ಲ. ಸತ್ತು ಹೋದ, ಕಳೆದು ಹೋದವರ, ನಾಪತ್ತೆಯಾದವರ ಸಂಖ್ಯೆಯ ನಿಖರತೆಯನ್ನು ಬಹಿರಂಗಪಡಿಸುವ ದಮ್ಮು ಆವತ್ತಿನಿಂದ ಇವತ್ತಿನವರೆಗೆ ಯಾವ ಸರಕಾರವೂ ತೋರಿದ್ದೇ ಇಲ್ಲ. ಇವತ್ತಿಗೂ ಆ ರಿಪೆÇೀರ್ಟನ್ನು ಹೊರಹಾಕುವ ಕಾರ್ಯವಾಗಿಲ್ಲ. ನಿಮಗೆ ಗೊತ್ತಿರಲಿ, ಬದುಕಿರುವ ಬಂಧುಗಳು ತಮ್ಮವರನ್ನು ಹುಡುಕಲು ಸುಮಾರು ನೂರಡಿ ಅಗಲದ ಪೆÇಸ್ಟರ್ ಮೇಲೆ ಸಾವಿರಾರು ಭಾವಚಿತ್ರಗಳನ್ನು ಅಂಟಿಸಿಡುತ್ತಿದ್ದರು ಯಾರಾದರೂ ಬದುಕಿದ್ದೀರಾ ಎಂದು..? ಹೀಗೆ ಇದ್ದಕ್ಕಿದ್ದಂತೆ ಖಾಲಿಯಾದ ಕಣಿವೆಯಲ್ಲಿ ಕಾಲೂರಿ ನಿಂತು ಇಸ್ಲಾಂಗಾಗಿ ಬಡಿದಾಡುತ್ತಿದ್ದ ಹಜಾರಾ ಮುಸ್ಲಿಂ ಜನಾಂಗ(ಈಗಿನ ಶಿಯಾ ಮುಸ್ಲಿಮರು), ಯಾವ ಮುಲಾಜೂ ಇಲ್ಲದೇ ಹಾಗೆ ಬಿಟ್ಟು ಹೋದವರ ಸಂಪೂರ್ಣ ಆಸ್ತಿಯನ್ನು ಆವರಿಸಿಕೊಂಡುಬಿಟ್ಟರು. ಹಾಗೆ ಆಕ್ರಮಿತ ಆಸ್ತಿಯನ್ನು ಆವತ್ತಿಗಿನ ಕಾಶ್ಮೀರಿ ಸರಕಾರ ಅವರ ಅಧಿಕೃತವಾದ ಅಸ್ತಿಯನ್ನಾಗಿ ದಾಖಲೆ ಮಾಡಲು ಏನು ಬೇಕೋ ಅದನ್ನೆಲ್ಲಾ ಮಾಡಿಕೊಟ್ಟು ಸಹಕರಿಸಿತು. ಅಲ್ಲಿಗೆ ಜಾಗತಿಕವಾಗಿ ಅದ್ಭುತವಾದ ಜನಾಂಗ ಎಂಬ ಹೆಸರು ಮಾಡಿದ್ದ ಕಾಶ್ಮೀರ ಪಂಡಿತರ ಸಮೂಹ ಸಾಮೂಹಿಕವಾಗಿ ಒಂದು ಭೂ ಪ್ರದೇಶದಿಂದಲೇ ಅವರ ಆಸ್ತಿತ್ವವನ್ನು ಒರೆಸಿಹಾಕಲಾಗಿತ್ತು. ಐದು ಸಾವಿರ ವರ್ಷಗಳ ಶ್ರೀಮಂತ ಇತಿಹಾಸವಿದ್ದ ಅಪೂರ್ವ ನಾಗರಿಕತೆಯೊಂದು ಒಂದೇ ವಾರದಲ್ಲಿ ತುಷ್ಟೀಕರಣದ ರಾಜಕೀಯಕ್ಕೆ ಬಲಿಯಾಗಿ ಹೋಗಿತ್ತು. ಆಗಿನ ಮುಖ್ಯ ಮಂತ್ರಿ ಅಬ್ದುಲ್ ಮಾತ್ರ ನಿವಾಸದಿಂದ ಹೊರಗೇ ಬರಲಿಲ್ಲ.
ಆವತ್ತು 1990 ರ ಜನವರಿಯ ನೇರ ಧಮಕಿಯೊಂದಿಗೆ ಅರಂಭವಾದ ಹಿಂಸಾಚಾರದಲ್ಲಿ ಮೊಟ್ಟ ಮೊದಲ ಬಲಿಯಾದದ್ದು "ಟೀಕಾಲಾಲ್ ಟಪ್ಲು" ವಿನದ್ದು. ಅವನ ಹತ್ಯೆಯನ್ನು ಸಮರ್ಥಿಸಿಕೊಂಡೆ ಸುಮರು 300 ಹಿಂದೂಗಳನ್ನು ಬರ್ಬರವಾಗಿ ಒಂದೇ ವಾರದಲ್ಲಿ ಕೊಂದುಹಾಕಲಾಗಿತ್ತು. ಎಲ್ಲಿ ನೋಡಿದರೂ ಹೊರಕ್ಕೆ, ಪರಊರಿಗೆ ತೆರಳಿದ್ದ ಹಿಂದೂಗಳು ಕಾಶ್ಮೀರ ಕಣಿವೆ ವಾಪಸ್ಸಾಗುವ ಸಾಧ್ಯತೆ ಸಂಪೂರ್ಣವಾಗಿ ಇಲ್ಲವೆ ಇಲ್ಲ ಎನ್ನುವಂತಾಗಿಹೋಗಿತ್ತು. ಇದನ್ನೆಲ್ಲಾ ಭರಿಸಿ ನ್ಯಾಯ ಕೊಡಿಸಬಹುದಾಗಿದ್ದ ಶ್ರೀನಗರ ಹೈಕೋರ್ಟು ಕೂಡಾ ತೀವ್ರವಾಗಿ ತತ್ತರಿಸಿದ್ದು ಅವರದ್ದೇ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಎನ್.ಗಂಜು ಅವರ ಹತ್ಯೆಯಿಂದಾಗಿ. ಯಾವಾಗ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರಿಗೇ ರಕ್ಷೆ ಇಲ್ಲ ಎನ್ನುವುದು ಸಾಬೀತಾಯಿತೋ ಪೂರ್ತಿ ಕಣಿವೆ ತಲ್ಲಣಿಸಿತ್ತು.
80ರ ವೃದ್ಧ ಸನ್ಯಾಸಿ ಸರ್ವಾನಂದ ಸ್ವಾಮಿಯನ್ನು ಆವತ್ತು ರಾತ್ರಿ ಎತ್ತಿಕೊಂಡು ಹೋಗಿ ಬರ್ಬರವಾಗಿ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಹಾಗೆ ಸಾಯಿಸುವ ಮೊದಲು ಅವರ ಮಗನ ಕಣ್ಣು ಗುಡ್ಡೆಗಳನ್ನು ಅವರೆದುರಿಗೇ ಕಿತ್ತು, ಯಮಯಾತನೆ ನೀಡಿ ಹಿಂಸಿಸಲಾಗಿತ್ತು. ಇದೆಲ್ಲಕ್ಕಿಂತಲೂ ಭೀಕರವಾಗಿ ಕಾಶ್ಮೀರ ಕಣಿವೆಯನ್ನು ತತ್ತರಿಸುವಂತೆ ಮಾಡಿದ್ದು ಸೌರಾ ಮೆಡಿಕಲ್ ಕಾಲೇಜಿನ ನರ್ಸ್ ಒಬ್ಬಳ ಮೇಲೆ ನಡೆದ ಸಾಮೂಹಿಕ ಮಾನಭಂಗ. ಲೆಕ್ಕವಿಲ್ಲದಷ್ಟು ಜನರು ಆಕೆಯ ಮೇಲೆ ನಿರಂತರವಾಗಿ, ನಿರಾತಂಕವಾಗಿ ಅತ್ಯಾಚಾರ ಮಾಡುತ್ತಿದ್ದರೆ ಸರಕಾರ ಕೈಕಟ್ಟಿಕೊಂಡು ಕೂತಿತ್ತು. ಒಬ್ಬೇ ಒಬ್ಬ ಪೆÇೀಲಿಸು ಅತ್ತ ಹಾಯುವ ಸ್ಥಿತಿಯಲ್ಲಿರಲಿಲ್ಲ. ಆವತ್ತು ಆಕೆಯೊಂದಿಗಿದ್ದ ಇನ್ನೊಬ್ಬ ಮಹಿಳೆಯನ್ನು ದಿನಗಟ್ಟಲೇ ಭೋಗಿಸಿದ್ದ ಮತಾಂಧರು ಜೀವಂತವಾಗಿದ್ದಾಗಲೇ ಆಕೆಯನ್ನು ಕಟ್ಟಿಗೆ ಕತ್ತರಿಸುವ ಸಾ ಮಿಲ್ಲಿನ ಬ್ಲೇಡುಗಳಿಗೆ ದೇಹವನ್ನು ಇಂಚಿಂಚಾಗಿ ಒಡ್ಡುತ್ತಾ ಹಿಂಸಿಸಿ ಸಾಯಿಸಿದ್ದರು.
ಅಲ್ಲಿಂದ ದೆಹಲಿ ಮತ್ತಿತರ ಭಾಗಕ್ಕೆ ಬರಿಗೈಯ್ಯಲ್ಲಿ ಬಂದಿದ್ದ ಪಂಡಿತರು ಅಕ್ಷರಶ: ಬೀದಿ ಗುಡಿಸಿ ಬದುಕು ಕಟ್ಟಿಕೊಳ್ಳಲೆತ್ನಿಸಿದ್ದು, ದೆಹಲಿಯ ನಿವಾಸಿಗಳು ಕೊಟ್ಟ ಹಳೆಯಬಟ್ಟೆಗಳಲ್ಲಿ ಮೊದಲೆರಡು ವರ್ಷ ಜೀವ ಹಿಡಿದುಕೊಂಡಿದ್ದರೆಂದರೆ ಅದಿನ್ನೆಂಥಾ ಭೀಕರತೆಗೆ ಅವರನ್ನು ತಳ್ಳಿರಬೇಕು..? ಇಷ್ಟಾದರೂ ಯಾವೊಬ್ಬ ಮುಖ್ಯಸ್ಥನೂ ಇಂಥಾ ಕ್ರೌರ್ಯವನ್ನು, ಇದನ್ನೊಂದು ಜಿನೋಸೈಡ್(ಬರ್ಬರ ಸಾಮೂಹಿಕ ಹತ್ಯಾಕಾಂಡ, ಜನಾಂಗವೊಂದರ ನಾಮಾವಶೇಷಕ್ಕಾಗಿ ನಡೆಸುವ ಕಗ್ಗೊಲೆ)ಎಂದು ಒಪ್ಪಿಕೊಳ್ಳಲೇಇಲ್ಲ. ಹಾಗೆ ಮಾಡಿದಲ್ಲಿ ತಾವಾಗಿಯೇ ಸಾಮೂಹಿಕ ಹತ್ಯಾಕಾಂಡ ಎಂದು ಜಾಗತಿಕವಾಗಿ ಒಪ್ಪಿಕೊಂಡಂತಾಗುತ್ತದೆ ಎಂದು ಸರಕಾರ ಅವರಿಗೆಲ್ಲಾ ತಾತ್ಪೂರ್ತಿಕ ತಗಡಿನ ಶೆಡ್ಡುಗಳನ್ನು ಒದಗಿಸಿ ಮುಗುಮ್ಮಾಗಿ ಬಿಟ್ಟಿತ್ತು.
ಅಲ್ಲಿಂದ ಚೇತರಿಸಿಕೊಂಡು ಪಂಡಿತರು ತಿರುಗಿ ತಮ್ಮ ಆಸ್ತಿತ್ವವನ್ನು ಕಾಯ್ದುಕೊಳ್ಳಲು ಎದ್ದು ನಿಲ್ಲುವ ಹೊತ್ತಿಗೆ ದಶಕಗಳೇ ಕಳೆದುಹೋಗಿದ್ದವು. 2008-09 ರ ಸುಮಾರಿಗೆ ಎಲ್ಲೆಲ್ಲೊ ಚದುರಿದ್ದ ಪಂಡಿತರು ಸೇರಿ ರಚಿಸಿದ "ಕಾಶ್ಮೀರ ಪಂಡಿತ್ ಸಂಘರ್ಷ ಸಮಿತಿ" ಮಾಹಿತಿ ಹೊರಗೆಡುವ ಹೊತ್ತಿಗೆ ಸುಮಾರು ಶೇ.80 ರಷ್ಟು ಪಂಡಿತರು ಶಾಶ್ವತವಾಗಿ ಕಣ್ಮರೆಯಾಗಿ ಹೋಗಿದ್ದರು. ನಂತರದ ದಿನಗಳಲ್ಲಿ ಸರಕಾರ ಪಂಡಿತರಿಗೆ ಎಲ್ಲಾ ಸವಲತ್ತು ಮತ್ತು ರಕ್ಷಣೆ ಕೊಡುವುದಾಗಿ ಹೇಳುತ್ತಾ ಪ್ಯಾಕೇಜ್ ಘೋಷಿಸಿದರೂ ಸ್ಥಳೀಯವಾಗಿ ಬದ್ಧತೆಯುಳ್ಳ ಸರಕಾರದ ಭರವಸೆಯೇ ಇಲ್ಲದ್ದರಿಂದ ಇಲ್ಲಿಯವರೆಗೆ ಕಣಿವೆಗೆ ಮರಳಿದ್ದು ಕೇವಲ ಒಂದು ಕುಟುಂಬ. ಒಬ್ಬೇ ಒಬ್ಬ ಪಂಡಿತ ಇವತ್ತು ಕಣಿವೆಗೆ ಮರಳಿ ಕಾಲೂರಿ ನಿಂತು ಬಡಿದಾಡುತ್ತಿದ್ದಾನೆ. ಹಿಂದಿರುಗಿ ತಮ್ಮ ಆಸ್ತಿ ಮಾರಾಟ ಮಾಡಿ, ಆಸ್ತಿ ಖರೀದಿಸಿ ನೆಲೆಸೊಣ ಎಂದರೆ ತೀರ ಐತಿಹಾಸಿಕ ಕಾನೂನೊಂದನ್ನು ರಚಿಸಿ ಕಾಶ್ಮೀರವನ್ನು ಅದ್ಯಾವ ಪರಿಯಲ್ಲಿ ಹಾಳುಗೆಡವಿದ್ದಾರೆಂದರೆ ಸೆಕ್ಷನ್ 370 ಎಂಬ ಕಾನೂನು ಸ್ವತ: ಕಾಶ್ಮೀರಿಗಳಿಗೆ ಮುಳುವಾಗಿ ಹೋಗಿತ್ತು. ಈಗ ತಮ್ಮದೆ ನೆಲದ ತಮ್ಮದೇ ಆಸ್ತಿಯನ್ನು ಖರೀದಿಸುವಂತಿಲ್ಲ ಮಾರುವಂತಿಲ್ಲ. ಯಾವುದೇ ವ್ಯಾಪಾರ,ವ್ಯವಹಾರಕ್ಕೂ ಕೈಹಾಕುವಂತಿಲ್ಲ. ಕಾರಣ ಇದೇ ಪಂಡಿತ ಈಗ ಹೊರಗಿನವ. ಹೊರಗಿನವರಾರು ಇದನ್ನೆಲ್ಲಾ ಮಾಡುವಂತಿಲ್ಲ. ಮುಗಿದು ಹೋಯಿತಲ್ಲ. ಅಂತಹ ಕಾನೂನಿನ ಬೆಂಬಲಕ್ಕೆ ಸ್ವತ: ಅಲ್ಲಿನ ಸರಕಾರ ನಿಂತುಬಿಟ್ಟಿತ್ತು.
ಇತಿಹಾಸದಲ್ಲಿ ಸೇರಿಸಲಾಗಿದ್ದ ಅನುಚ್ಛೇದ 370 ಎನ್ನುವ ಕಾನೂನು ಇಂತಹ ಎಲ್ಲಾ ರೀತಿಯ ಅನಾಹುತಕ್ಕೆ ಕಾರಣವಾಗಿತ್ತು. ಅಂತಹದ್ದೊಂದು ಕಾನೂನನ್ನು ಪುರಸ್ಕರಿಸುವ ಅಗತ್ಯವೇ ಇರಲಿಲ್ಲ. ಆದರೆ ಆಗಿನ ಕಾಲದಲ್ಲಿ ಅತಿಯಾದ ಮುಸ್ಲಿಂ ಓಲೈಕೆ ಮತ್ತು ತುಷ್ಟೀಕರಣದ ರಾಜಕೀಯವಾಡಿದ ಆಗಿನ ಅದಕ್ಷ ನಾಯಕರುಗಳ ಹೊಣೇಗೇಡಿತನದಿಂದ ಸಂಪೂರ್ಣ ಭಾರತ ಹೆಗಲಿಗೆ ಕೊಳೆಯುವ ಹುಣ್ಣಾಗಿಸಿ ಕಾಶ್ಮೀರವನ್ನು ನೇತು ಹಾಕಿಬಿಟ್ಟಿತ್ತು.
ಅಷ್ಟಕ್ಕೂ ಪರಿಚ್ಛೇದ 370 ಏನು ಹೇಳುತ್ತೆ..? ಯಾಕೆ ಈ ವಿಶೇಷ ಕಾನೂನು ಕಾಶ್ಮೀರಕ್ಕೆ ಮಾತ್ರ ಲಾಗು ಆಗ್ತಿದೆ ಇತ್ಯಾದಿ ಕತೆಗಳೆಲ್ಲ ಮುಂದಿನ ವಾರಕ್ಕಿರಲಿ. ಅದಕ್ಕೂ ಮೊದಲು ಇದನ್ನು ಬರೆಯುವ ಹೊತ್ತಿಗೆ ಒಂದೇ ವಾರದಲ್ಲಿ ಹತ್ತಕ್ಕೂ ಹೆಚ್ಚು ಉಗ್ರರನ್ನು ನಮ್ಮ ಸೈನಿಕರು ಹೊಡೆದು ಕೆಡುವಿದ್ದಾರೆ. ಕಣಿವೆ ಕ್ರಮೇಣ ಖಾಲಿಯಾಗುತ್ತಿದೆ.
ಕಾಶ್ಮೀರವೆಂಬ ಖಾಲಿ ಕಣಿವೆ..ಕಣಿವೆ ಪಂಡಿತರ ಮಹಾದುರಂತ...
ಮೊದ ಮೊದಲಿಗೆ ಕಾಶ್ಮೀರದಲ್ಲಿ ಎಲ್ಲಾ ಜನರೂ ಸೇರಿಕೊಂಡು ತೀರ ಯಾವ ವ್ಯತ್ಯಾಸವೇ ಇಲ್ಲದಂತೆ, ಭೂಭಾಗ ಹೊರತು ಪಡಿಸಿದರೆ ಏಕತಾ ಮೇ ಅನೇಕತಾ ಎನ್ನುವುದಕ್ಕೆ ಉದಾಹರಣೆಯಂತಿದ್ದರು. ಈಗಲೂ ಗಮನಿಸಿ ನೋಡಿ ತೀರ ಜಮ್ಮುವಿನ ಭಾಗದಲ್ಲೂ, ಅತ್ತ ಬೌದ್ಧರೆ ಅಧಿಕವಾಗಿರುವ ಲಢಾಕಿನ ಭಾಗದಲ್ಲೂ ಯಾವತ್ತೂ ಹೀಗೆ ದಿನಕ್ಕೆ ಇಬ್ಬಿಬ್ಬರಂತೆ ಉಗ್ರರು ಸಾಲುಸಾಲಾಗಿ ಹತರಾಗುತ್ತಿರುವ ಘಟನೆ ನಡೆಯುತ್ತಲೇ ಇಲ್ಲ. ಇದೇನಿದ್ದರೂ ಶ್ರಿನಗರ, ಅನಂತನಾಗ, ಬಾರಾಮುಲ್ಲ, ಕಾರ್ಗಿಲ್, ಗಾಂಧಾರ್‍ಬಾಲ್, ಶೊಫಿಯಾನ್‍ಗಳಲ್ಲಿ ಯಾಕೆ ಲೆಕ್ಕದ ಹೊರಗೆ ಕಲ್ಲೆಸೆಯುವ ಮತ್ತು ಸೈನಿಕರ ಬಂದೂಕಿಗೆ ಎದುರಾಗುವ ಸಂಗತಿಗಳು ನಡೆಯುತ್ತಲೇ ಇವೆ. ಕಾರಣ ಇಲ್ಲೆಲ್ಲಾ ಇವತ್ತು ಸರಹದ್ದಿನಿಂದ ನಗರ ಹೃದಯ ಭಾಗದವರೆಗೂ ಸಂಪರ್ಕಿಸಲು ಬೇಕಾದ ನೆಟ್‍ವರ್ಕನ್ನು ಪ್ರತ್ಯೇಕತಾವಾದಿಗಳ ಜಾಲ ಪಸರಿಸಿಟ್ಟಿದೆ. ಜೊತೆಗೆ ಸತತ ಮೂವತ್ತೈದು ನಾಲ್ವತ್ತು ವರ್ಷಗಳಿಂದ ನಿರಂತರವಾಗಿ ಕಾಶ್ಮೀರ ಎಂದರೆ ಕಾಶ್ಮೀರ ಪಂಡಿತರು ಎಂದಿದ್ದ ಈ ನೆಲದಿಂದ ಅವರನ್ನು ಅತ್ಯಂತ ವ್ಯವಸ್ಥಿತವಾಗಿ ಹೊರದಬ್ಬಲಾಗಿದೆ. ಹಾಗೆ ದಬ್ಬಲು ಬಂದಾಗ ಹೊರಬೀಳದವರನ್ನು ಹಾಗೂ ಉಳಿದವರನ್ನು ಕುಟುಂಬ ಸಮೇತ ಕೊಲ್ಲಲಾಯಿತು.
ಎಲ್ಲಕ್ಕಿಂತಲೂ ಪರಮ ಹೇಯವೆಂದರೆ ಅತಿ ಹೆಚ್ಚು ಅತ್ಯಾಚಾರಗಳು ನಡೆದು ಜಗತ್ತೇ ಬೆಚ್ಚಿ ಬಿದ್ದರೂ ಅವರನ್ನು ರಕ್ಷಿಸಬೇಕಾದ ಸರಕಾರ ಕಬಾಬು ತಿನ್ನುತ್ತಾ ಕೂತು ಬಿಟ್ಟಿದ್ದು ಪಂಡಿತರ ದುರದೃಷ್ಟ. ತೀರ ನೂರಾರು ವರ್ಷಗಳ ಶತಶತಮಾನಗಳ ಇತಿಹಾಸದ ಪಂಡಿತರನ್ನು ನಿರ್ದಾಕ್ಷಿಣ್ಯವಾಗಿ ಕೇವಲ ಆರೆಂಟು ವರ್ಷದಲ್ಲಿ ಹೊರದಬ್ಬಿದರಲ್ಲ ಆವತ್ತೇ ಕಾಶ್ಮೀರದ ನಸೀಬು ಬದಲಾಗಿದ್ದು ಮತ್ತು ಇನ್ಯಾವತ್ತೂ ಅಭಿವೃದ್ಧಿಯತ್ತ ಅದು ಹೊರಳಲಾರದೆಂಬ ದಿಕ್ಕೂ ಬದಲಾಗಿತ್ತು. ಆವತ್ತು ಹಿಡಿದ ಗ್ರಹಣ ಇವತ್ತಿಗೂ ಇಟ್ಟಿಲ್ಲ ಕಾರಣ ಕಾಶ್ಮೀರ ಪಂಡಿತರ ಇತಿಹಾಸ ಹಲವು ಶತಮಾನಗಳ ಕಾಲದಿಂದಲೂ ಅವಿಭಾಜ್ಯವಾಗಿ ಅಲ್ಲಿ ನೆಲೆಕಂಡಿತ್ತು .
80 ರ ದಶಕದಲ್ಲಿ ಸರಿ ಸುಮಾರು ಎಂಟೂವರೆ ಲಕ್ಷದಷ್ಟಿದ್ದ ಕಾಶ್ಮೀರ ಪಂಡಿತರ ಸಂಖ್ಯೆ, 2016 ರಲ್ಲಿ ಕೇವಲ ಮೂರು ಸಾವಿರ ಚಿಲ್ರೆ ಆಗಿದೆ ಎಂದರೆ ಅದಿನ್ನೆಂಥಾ ಅನಾಹುತಗಳು ಅವರ ಮೇಲೆ ಎರಗಿರಬೇಕು. (1846 ರಿಂದ 1947 ರ ಕಾಲಾವಧಿಯಲ್ಲಿ ಕಾಶ್ಮೀರಿ ಪಂಡಿತರ ನಡೆ, ನುಡಿ, ಜೀವನ ಶೈಲಿ ಮತ್ತು ಅವರಿಗಿದ್ದ ರಾಜಾಶ್ರಯದ ಕಾರಣದಿಂದ ಜಗತ್ತಿನಲ್ಲೇ ಅತ್ಯಂತ ಗೌರವಾರ್ಹ ಜನಾಂಗವಾಗಿ ಬದುಕಿದ್ದು ಮತ್ತು ಕಣಿವೆಯಲ್ಲಿ ಸುಮಾರು ಶೇ.30ರಷ್ಟು ಪ್ರಾಬಲ್ಯ ಸಾಧಿಸಿದ್ದ ಕಾಶ್ಮೀರಿ ಪಂಡಿತರು ಡೊಗ್ರಾ ಆಡಳಿತಾವಧಿಯಲ್ಲಿ ನೆಮ್ಮದಿಯಿಂದ ಬದುಕಿದ್ದೆ ಕೊನೆ. ಎರಡೆ ದಶಕದಲ್ಲಿ ಪಂಡಿತರ ಸಂಖ್ಯೆ ಶೇ.2.1 ಕ್ಕೆ ಇಳಿದು ಹೋಗಿತ್ತು.) ಒಂದೇ ವರ್ಷದಲ್ಲಿ ಒಟ್ಟೂ ಮೂರೂವರೆ ಲಕ್ಷದಷ್ಟು ಜನರು ಕಾಶ್ಮೀರ ಕಣಿವೆಯಿಂದ ಇತರ ಭಾಗಗಳಿಗೆ ಪಲಾಯನಗೈದದ್ದು ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಸಾಮಾಜಿಕ ಪಲ್ಲಟ ಎನ್ನಿಸಿದೆ. ಅದೊಂದು ವ್ಯವಸ್ಥಿತ ಯೋಜನೆ. ಒಮ್ಮೆ ಸಂಪೂರ್ಣ ಕಾಶ್ಮೀರ ಕಣಿವೆ ಇತರರಿಂದ ಹೊರಗಾದರೆ ನಂತರ ನಮ್ಮದೇ ಸರಕಾರ, ವ್ಯವಸ್ಥೆ ರೂಪಗೊಳ್ಳುತ್ತದೆ ಎನ್ನುವುದವರ ಅವಗಾಹನೆಯಾಗಿತ್ತು. ಅದರೆ ಬದಲಾದ ಸನ್ನಿವೇಶದಲ್ಲಿ, ಕೈಮೀರಿದ ಕಾಶ್ಮೀರಿ ಮುಸ್ಲಿಮರ ಅಕ್ರಮಗಳಿಂದಾಗಿ ಕಣಿವೆ ಸೈನ್ಯದ ತೆಕ್ಕೆಗೆ ಹೊರಟುಹೋಯಿತು. ಶಾಶ್ವತವಾಗಿ ರಣರಂಗವಾಗಿ ಬದಲಾಯಿತು. ಹಾಗಾದ ಮೇಲೂ ಕಣಿವೆಗೆ ಸರಿಹೋಗಲು ಸಾಧ್ಯವಿತ್ತು. ಅದರೆ ಧರ್ಮವೇ ಬದುಕು ಎಂದುಕೊಂಡ ಅತಿರೇಕದ ಚಿಂತನೆಗಳು ದಾರಿ ತಪ್ಪಿಸಿದ್ದವು. ಪರಿಸ್ಥಿತಿ ಕೈಮೀರಿತ್ತು. ಅಲ್ಲಿಗೆ ಕಣಿವೆ ದೇಶದ ಹೆಗಲ ಮೇಲಿನ ಹುಣ್ಣಾಗಿ ಬದಲಾಗಿತ್ತು .
ತೀರ ಅನಾಹುತಕಾರಿ ಎಂದರೆ ರಹಸ್ಯಾತ್ಮಕವಾದ ಕಾರ್ಯಾಚರಣೆ ಮತ್ತು ತೀವ್ರವಾದ ಆತಂಕದೊಳಗಿದ್ದ ಹಿಕಮತ್ತೇ ಬೇರೆಯಾಗಿತ್ತು. ಈಗೀಗ ಕಾಶ್ಮೀರ ಮುಸ್ಲಿಂರಷ್ಟೆ ಕಾಶ್ಮೀರ ಕಣಿವೆ ಖಾಲಿಯಾಗುವುದಕ್ಕೆ ಕಾರಣವಾಗುತ್ತಿದ್ದರೆ, ಅದಕ್ಕೂ ಮೊದಲೇ 1990ರ ಆಸುಪಾಸಿನಲ್ಲಿ ಸಂಪೂರ್ಣ ಕಾಶ್ಮೀರದಿಂದ ಎಲ್ಲಾ ಹಿಂದೂಗಳನ್ನೂ, ಕಾಶ್ಮೀರ ಪಂಡಿತರನ್ನೂ ಖಾಲಿ ಮಾಡಿಸಲು ತೀರ ರಹಾಸ್ಯಾತ್ಮಕ ಕಾರ್ಯ ಸೂಚಿ ರಚಿಸಲಾಗಿತ್ತು. ಅದರಂತೆ ಪಂಡಿತರ ನಂತರ ಅಲ್ಲಿಂದ ಹೊರ ದಬ್ಬಬೇಕಾಗಿದ್ದವರೆಂದರೆ ಸಿಖ್‍ರನ್ನು. ಸುಮಾರು ಅರವತ್ತು ಸಾವಿರ ಸಿಖ್‍ರು ಇವತ್ತೂ ಅದೇ ಅಪಾಯದ ಅಂಚಿನಲ್ಲಿದ್ದಾರೆ. ಕಾರಣ ಇವರನ್ನೂ ಒಮ್ಮೆ ಹೊರದಬ್ಬಿದರೆ ಅಲ್ಲೂಂದು ದಾರೂಲ್-ಇಸ್ಲಾಂ ವ್ಯವಸ್ಥೆ ಸ್ಥಾಸಬೇಕೆನ್ನುವುದು ಮತೀಯರ ಕನಸು. ಅದಾಗಬೇಕೆಂದರೆ ಹಿಂದೂಗಳ ಮೇಲೆ ಆಕ್ರಮಣ ಮತ್ತು ನಿಯಂತ್ರಣ ಇಲ್ಲದೆ ಅದು ಸಾಧ್ಯವಿಲ್ಲ. ಕಾರಣ ಸಾವಿರ ವರ್ಷಗಳ ಆಕ್ರಮಣ ಮತ್ತು ವ್ಯವಸ್ಥಿತ ಪಿತೂರಿಯ ಧರ್ಮಪಲ್ಲಟದ ಕಾರ್ಯಗಳ ಮಧ್ಯೆಯೂ ಇವತ್ತು ಜಾಗತಿಕವಾಗಿ ಭಾರತದ ಆಸ್ತಿತ್ವ ಉಳಿವಿಕೆ ಕಾರಣ ಹಿಂದೂಗಳ ಚಿಂತನೆಯೇ.
ಹಾಗೆ ಕಾಶ್ಮೀರಿಗಳನ್ನು ಹೊರದಬ್ಬುವ ಪ್ರಕ್ರಿಯೆ ಆರಂಭವಾದಾಗ ಆಡಾಡುತ್ತಾ ಈ ನೀಚಕೃತ್ಯಗಳನ್ನು ನೋಡುತ್ತಾ ಬೆಳೆದವರೇ ಇವತ್ತೂ ಪ್ರತ್ಯೇಕ ಕಾಶ್ಮೀರಕ್ಕಾಗಿ ಯಾರಿಗೆ ಬೇಕಾದರೂ ಬೆಂಬಲಿಸಬಲ್ಲ ದೇಶದ್ರೋಹಿಗಳಾಗಿದ್ದಾರೆ. ಅದರ ಮುಂದಿನ ಭಾಗವಾಗಿಯೇ ಕಾಶ್ಮೀರ ವಿಷಯವನ್ನು ಅಂತರಾಷ್ಟ್ರೀಯಗೊಳಿಸಬೇಕೆಂದು ಅದನ್ನು ಗಾಜಪಟ್ಟಿಯ ಸಮಸ್ಯೆಗೆ ಹೋಲಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾದ 1990 ಜನವರಿ 19 ರಂದು ಕಾಶ್ಮೀರಿ ಮುಸ್ಲಿಂ ಮತಾಂಧರು ಹೊರಡಿಸಿದ್ದ ಅನಧೀಕೃತ ಕಾನೂನು. ಆ ದಿನ ಇದ್ದಕ್ಕಿದಂತೆ

ಕಾಶ್ಮೀರ ಕಣಿವೆಯಾದ್ಯಂತ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡ ಮತಾಂಧರು ಅಕ್ಷರಶ: ಪ್ರಾರ್ಥನೆಗೆ ಬಳಸಬೇಕಾಗಿದ ಸ್ಪೀಕರುಗಳಿಂದ ಎಚ್ಚರಿಕೆಯ ಘೋಷಣೆ ಮೊಳಗಿಸಿದ್ದರು. ಅದರ ಪ್ರಕಾರ ಮೊದಲ ಹಂತವಾಗಿ ಎಲ್ಲಾ ಹಿಂದೂ ಗಂಡಸರನ್ನು ಪರಿವರ್ತನೆ ಮಾಡುವುದು, ಹೆಂಗಸರು ಮಕ್ಕಳನ್ನು ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದೇ ಆಗಿತ್ತು. ಅದಕ್ಕಾಗಿ ವ್ಯವಸ್ಥಿತ ಪಿತೂರಿ ಭಾಗವಾಗಿ ಎಲೆಲ್ಲಿ ಕಾಶ್ಮೀರಿ ಪಂಡಿತರು ನೆಲೆಸಿದ್ದಾರೋ ಅಯಾ ಭಾಗದ ಕ್ಷೇತ್ರವಾರು ಮನೆ ಮತ್ತು ಆಸ್ತಿಗಳನ್ನು ಗುರುತಿಸುವ ಕೆಲಸ ಗುಪ್ತವಾಗಿ ಆರು ತಿಂಗಳಿಂದ ನಡೆಯುತ್ತಲೇ ಇತ್ತು. ಅತ್ಯಂತ ಸ್ಪಷ್ಟವಾಗಿ ಗುರುತಿಸಿ ಒಕ್ಕಲ್ಲೆಬ್ಬಿಸುವ ಹೊಡೆದು ಹಾಕುವ ಹುನ್ನಾರದ ಭಾಗವಾಗಿ ಮೊದಲು ಈ ಎಚ್ಚರಿಕೆಯನ್ನು ಹೊರಡಿಸಲಾಗಿತ್ತು. ನಂತರದಲ್ಲಿ ದೈಹಿಕವಾಗಿ ಹಲ್ಲೆ ಮತ್ತು ಹೊರದಬ್ಬುವ ಪ್ರಕ್ರಿಯೆಗೆ ಚಾಲನೆ ನೀಡುವುದಷ್ಟೆ ಬಾಕಿ ಇತ್ತು. ಆವತ್ತಿಗೆ ಅದೇ ಜನವರಿ 4 ರಂದು ಬಹಿರಂಗವಾಗೆ ಉರ್ದು ಪತ್ರಿಕೆ "ಅಪ್ತಾಬ್" ನಲ್ಲಿ ಹಿಜ್ಬುಲ್ ಮುಜಾಹಿದಿನ್ ಸಂಘಟನೆ " ಹಿಂದೂಗಳೇ ಕಾಶ್ಮೀರದಿಂದ ತೊಲಗಿ ಮತ್ತು ಸಂಪೂರ್ಣ ಕಣಿವೆ ಪಾಕಿಗಳ ರಾಜ್ಯಕ್ಕೆ ಸೇರ್ಪಡೆಯಾಗಬೆಂಕೆಂದು"ಪ್ರಕಟಿಸಲಾಗಿತ್ತು. ಅದರ ಹಿಂದೆಯೇ ಗಡಿಯಿಂದ ಎ.ಕೆ.47 ತಂದು ಬೇಟೆಯಾಡುತ್ತೇವೆ ಎಂಬ ಬೆದರಿಕೆಯ ಜೊತೆಗೆ "ಪಂಡಿತರೆ ಹೊರಡಿ ಆದರೆ ನಿಮ್ಮ ಹೆಂಗಸರು ಇಲ್ಲಿಯೆ ಬಿಟ್ಟು ಹೊರಡಿ" ಎನ್ನುವ ಅಮಾನವೀಯ ಘೋಷಣೆ ಮೊಳಗಿ ಯಾರೂ ಮನೆಯಿಂದ ಹೊರಕ್ಕೇ ಬಾರದ ಪರಿಸ್ಥಿತಿ ಉಂಟಾಗಿ ಹೋಗಿತ್ತು. ಅದೇ ದಿನ ರಾತ್ರಿ ಪ್ರತಿ ಹಿಂದೂಗಳ ಮನೆಯ ಬಾಗಿಲಿಗೂ ಪೆÇೀಸ್ಟರ್ ಅಂಟಿಸಲಾಗಿತ್ತು. "..ಅಲ್ಲಾನನ್ನು ಒಪ್ಪಿಕೊಳ್ಳಿ. ಇಲ್ಲಾ ಕಾಶ್ಮೀರ ಬಿಟ್ಟು ತೊಲಗಿ " ಎನ್ನುವ ಅಕ್ಷರಗಳು ರಾರಾಜಿಸುತ್ತಿದ್ದವು. ಅದಕ್ಕೆ ಮುನ್ನುಡಿಯಾಗಿ "ಟಿಕಾ ಲಾಲ್ ಟಪ್ಲೂ" ವಿನ ಹತ್ಯೆಯಾಗುವುದರೊಂದಿಗೆ ಕಣಿವೆ ಖಾಲಿಯಾಗಲು ಮೊದಲ ಹೆಣ ಬಿದ್ದಾಗಿತ್ತು ನಂತರದ್ದು ಅಕ್ಷರಶ: ಜಗತ್ತು ಕಂಡು ಕೇಳರಿಯದ ಮಾರಣ ಹೋಮ. ಬರುವ ವಾರಕ್ಕೆ...