ಪಾತಕಿಯೊಬ್ಬನ ಹತ್ಯೆ - ಸೈನ್ಯಕ್ಕೆ ದೊರಕಿದ ದೊಡ್ಡ ಗೆಲುವು...
(ಟ್ರಾಲ್ ಏರಿಯಾಕ್ಕೆ ಸಬ್ಝರ್ ಭಟ್ ಕಾಲಿಟ್ಟಿದ್ದು ಮೇ 19-20 ರ ಮಧ್ಯ ರಾತ್ರಿಗೆ. ಸಮಯಕ್ಕೆ ಸರಿಯಾಗಿ ಬೇಹುಪಡೆಗೆ ಸುದ್ದಿ ಮುಟ್ಟಿಸಿದವರಿಗೆ ದಕ್ಕುವ ದೊಡ್ಡ ಮೊತ್ತದ ಇನಾಮು ಕೆಲಸ ಮಾಡುತ್ತದೆ ಎನ್ನುವುದರ ಅರಿವು ಅವನಿಗಿರಲಿಲ್ಲವಾ..? ಹತ್ತುಲಕ್ಷ ರೂಪಾಯಿಯೆನ್ನುವುದು, ಬರಗೆಟ್ಟ ಕಾಶ್ಮೀರದ ಪರಿಸ್ಥಿತಿಯಲ್ಲಿ ಅತಿ ದೊಡ್ಡ ಮೊತ್ತ ಎನ್ನುವುದು ಸಬ್ಝರ್ ಭಟ್‍ಗೆ ಗೊತ್ತಿರಬೇಕಿತ್ತು.ಅಸಲಿಗೆ ಅವನ್ಯಾವತ್ತೂ ಸರಹದ್ದಿನ ಆಚೆಗೆ ಕೂತು ಭಯೋತ್ಪಾದನೆ ನಡೆಸಿದ್ದೇ ಇಲ್ಲ. ಅವನದೇನಿದ್ದರೂ ಆಚೆಯಿಂದ ಬರುವ ಆದೇಶ ಪಾಲನೆ ಮತ್ತು ಗಡಿದಾಟುವ ಉಗ್ರರಿಗೆ ನೆಲೆ,ಸಾಮಾನು, ಸರಂಜಾಮುಗಳನ್ನು ಒದಗಿಸುವುದೇ ಅಲ್ಲದೆ ಟಾರ್ಗೆಟ್ ಮುಟ್ಟಲು ಅನುಕೂಲ ಮಾಡಿಕೊಡುವುದು. ಬಾಕಿ ಹೊತ್ತಿನಲ್ಲಿ ಟ್ರಾಲ್‍ನ ಹುಡುಗರನ್ನು ಹಿಜ್ಬುಲ್ ಸೇರಲು ಪ್ರಚೋದಿಸುವುದೇ ಆಗಿತ್ತು. ಅಂಥವನೊಬ್ಬ ಪ್ರತ್ಯೇಕತಾವಾದಿಗಳೊಂದಿಗೆ ಕೈ ಸೇರಿಸುವ ಮಾತಾಡಿ ತಪ್ಪು ಮಾಡಿಬಿಟ್ಟಿದ್ದ. )
ಅವನನ್ನು ಯಾವ ಕಾರಣಕ್ಕೂ ಕಂಮಾಂಡರ್ ಎಂದು ಕರೆಯಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಅವನ ಜತೆಗಿದ್ದವರೆ ಮೂರು ಮತ್ತಿಬ್ಬರು ಚಿಲ್ರೆ ಜೊತೆಗಾರರು. ಇವರೆಲ್ಲಾ ಯಾವ ಕಾರಣಕ್ಕೂ ಪೆÇೀಲಿಸರೊಂದಿಗೂ ಸೈನ್ಯದೊಂದಿಗೂ ನೇರ ಹಣಾಹಣಿಗಿಳಿಯುವ ಮೀಟರ್ ಇದ್ದವರೇ ಅಲ್ಲ. ಆದ್ರೆ ಕೈಯ್ಯಲ್ಲಿ ಪಾತಕಿ ಪಾಕಿಸ್ತಾನ ಕೊಡುವ ಬಂದೂಕು ಸಿಕ್ಕಕೂಡಲೇ ಫೇಸ್ ಬುಕ್ಕು, ವಾಟ್ಸ್‍ಆಪ್‍ನಲ್ಲಿ ಫೆÇೀಟೊ ಹರಿಬಿಡತೊಡಗುತ್ತಾರೆ. ಹಾಗೆ ಬಿಟ್ಟುಬಿಟ್ಟೆ ನಾಯಕನ ಪೆÇೀಸು ಕೊಟ್ಟು ತಮ್ಮನ್ನು ವೈಭವಿಕರಿಸಿಕೊಳ್ಳುತ್ತಾರೇಯೆ ವಿನ: ಇಂತಹ ಯಾರೊಬ್ಬ ಭಯೋತ್ಪಾದಕನಲ್ಲೂ ನಿಜವಾಗಿಯೂ ಬಡಿದಾಡುವ ತಾಕತ್ತಾಗಲಿ ಬುದ್ಧಿವಂತಿಕೆಯಾಗಲಿ ಇರುವುದೇ ಇಲ್ಲ. ಬುರಾನ್ ವಾನಿ ಸಿಕ್ಕಿ ಬಿದ್ದಿದ್ದು ಹಾಗೇ. ಆದರೆ ಸಾಮಾಜಿಕ ಸುದ್ದಿ ಮಾಧ್ಯಮದಿಂದ ದೂರವೇ ಉಳಿದ ಸಬ್ಝರ್ ಭಟ್ ಯಾನೆ ಸೋಯಾಬ್ ಡಾನ್ ಮಾತ್ರ ತನ್ನ ಯೋಜನೆಯ ತೀವ್ರ ಕಾರ್ಯಚರಣೆ ಕೈಗೊಳ್ಳುವ ಪೂರ್ವದಲ್ಲೇ ಹತನಾಗಿ ಹೋಗಿದ್ದಾನೆ. ಆ ಮಟ್ಟಿಗೆ ಇದು ಭದ್ರತಾ ಪಡೆಗಳಿಗೆ ದೊಡ್ಡ ಬ್ರೇಕ್.
ಮೊನ್ನೆ ಶುಕ್ರವಾರ ಸಂಜೆ ಆರು ಗಂಟೆಯ ಹೊತ್ತಿಗೆ ಕೊನೆಯ ಬಾರಿಗೆ ಸೈನಿಕ ಪಡೆಗಳ ಶರಣಾಗತಿ ಸೂಚನೆಗೆ ಗೇಲಿ ಮಾಡಿ, ಗುಂಡುಗಳೆಲ್ಲಾ ಖಾಲಿಯಾಗುವವರೆಗೆ ಯರ್ರಾ ಬಿರ್ರಿ ಸೈನಿಕರೆಡೆಗೆ ಗುಂಡು ಹಾರಿಸಿ ಸತ್ತು ಹೋದ ಸಬ್ಝರ್ ಅಹಮದ್ ಭಟ್ ಮೂಲತ: ಭಯೋತ್ಪಾದಕ ಸಂಘಟನೆಗಳ ಜತೆಗೆ ಸೇರಿಕೊಂಡು ಅಲ್ಲಲ್ಲಿ ಒಂದಿಷ್ಟು ಗುಂಡಾಗಿರಿ ತೋರಿಸಿದ್ದನೇ ಹೊರತಾಗಿ ಕಾಶ್ಮೀರಕ್ಕಾಗಿ, ಕಾಶ್ಮೀರಿ ಮುಸ್ಲಿಂರ ಬೇಡಿಕೆಗಳಿಗೂ ಅವರ ಪ್ರತ್ಯೇಕತಾವಾದ ಕೂಗಿಗೂ ಬಡಿದಾಡಿದ್ದು ಅಷ್ಟರಲ್ಲೇ ಇದೆ. ಆದರೆ ಅವನು ಸೃಷ್ಟಿಸಿದ್ದ ಹವಾ ಮತ್ತು ಟ್ರಾಲ್ ಸೆಕ್ಟರ್‍ನಲ್ಲಿ ಅವನಿಗಿದ್ದ ಯುವ ಜನರ ಬೆಂಬಲದಿಂದಾಗಿ ಕಮಾಂಡರ್ ಆಗಿದ್ದ.
ಮೊನ್ನೆ ನಡೆದಿದ್ದೂ ಅದೇ. ಸರಿಯಾಗಿ ಹೇಳಬೇಕೆಂದರೆ ಸಬ್ಝರ್ ಅಹಮದ್ ಭಟ್ ಗಡಿ ದಾಟಿ ಹೋಗಿ ಪದೇ ಪದೇ ಪಾಕಿಗಳ ಜತೆಯಲ್ಲಿದ್ದು ಬಿರಿಯಾನಿ ಉಂಡು ಬರುವ ಅತಿಥಿಯೂ ಅಲ್ಲ, ಸೈನಿಕರೊಂದಿಗೆ ಸಮಸಮ ಬಡಿದಾಡಬಲ್ಲ ಗುಂಡಿಗೆ ಇರುವ ಪಾತಕಿಯೂ ಅಲ್ಲ. ರತ್ಸುಮ್ ಹಳ್ಳಿಯ ಕಾರ್ಪೆಂಟರ್ ಒಬ್ಬನ ಮಗನಾದ ಸಬ್ಝಾರ್ 1990ರ ತಳಿ. ಸುಲಭಕ್ಕೆ ಬುರಾನ್ ವಾನಿ ಎಂಬ ಅವಿವೇಕಿ ಹುಡುಗನೊಬ್ಬ ತನ್ನನ್ನು ತಾನೆ ಕಮಾಂಡರ್ ಎಂದು ಪರಾಕು ಹೇಳಿಕೊಂಡೇ ಕಮಾಂಡೊಗಳ ಕೈಲಿ ಸತ್ತು ಹೋದನಲ್ಲ ಅವನಿಗೆ ಜೀವನದುದ್ದಕ್ಕೂ ಬಕೀಟು ಹಿಡಿದುಕೊಂಡು ಬೆಳೆದವನು ಈ ಸಬ್ಜಾರ್ ಭಟ್. ಹಾಗೆ ಬೆಳೆಯುವ ಮೊದಲು ಬುರಾನ್ ವಾನಿ ಅಣ್ಣ ಖಾಲಿದ್‍ನನ್ನು ಪೆÇೀಲಿಸರು "ಕಮ್ಳಾ" ಕಾಡಿನಲ್ಲಿ 2015 ಜೂನ್ ಎನ್‍ಕೌಂಟರ್‍ನಲ್ಲಿ ಕೊಂದು ಹಾಕಿದ್ದರ ಸಹಾನುಭೂತಿಯಿಂದಲೇ ಹದಿನೈದನೇ ವಯಸ್ಸಿಗೆ ಬುರಾನ ವಾನಿ ಜೊತೆಗೆ ಉಗ್ರವಾದದ ಕಡೆಗೆ ವಾಲಿದವನು. ಈಗ ಅವನ ಪ್ರೇಮ ವೈಫಲ್ಯದ ಕತೆಯನ್ನು ನಮ್ಮಲ್ಲಿ ಎಡಬಿಡಂಗಿಗಳು ಬಾಹುಬಲಿ-3 ಎಂಬಂತೆ ಪುಟ ತುಂಬಿಸತೊಡಗಿದ್ದಾರೆ. ಅಷ್ಟಕ್ಕೂ ಹದಿನೈದನೆ ವಯಸ್ಸಿಗೆ ಆಗುವ ಪ್ರೇಮ ವೈಫಲ್ಯವನ್ನು ಜಯಿಸಲಾರದ ವ್ಯಕ್ತಿ ಯಾವತ್ತಾದರೂ ಬದುಕು ಜಯಿಸಿಯಾನೇ..? ಅದರಲ್ಲೂ ಬದುಕು ಕಟ್ಟಿಕೊಳ್ಳುತ್ತೇನೆನ್ನುವ ಹುಡುಗಿ ಅದ್ಯಾಕಾದರೂ ಇಂಥವನನ್ನು ಪ್ರೀತಿಸೀಯಾಳು..? ಕಾರ್ಪೆಂಟರ್ ಕೆಲಸ ಮಾಡಿಕೊಂಡಿರು ಎಂದು ಹೇಳಿದ್ದು ರುಚಿಸದ ಸಬ್ಝರ್‍ಗೆ, ಸರಿಯಾಗಿ ಹತ್ತನೆಯ ತರಗತಿಯನ್ನೂ ಪಾಸು ಮಾಡುವುದಾಗಿರಲಿಲ್ಲ.
ಜುಲೈ 8. 2016 ರಲ್ಲಿ ಬುರಾನ್ ವಾನಿಯನ್ನು ಸೈನಿಕರು ಹೊಡೆದುರುಳಿಸಿದರಲ್ಲ. ಆಗ ಕೆಲವೇ ದಿನಗಳ ಮೊದಲು "ಹಿಜ್ಬುಲ್ ಮುಜಾಹಿದೀನ್" ದಕ್ಷಿಣ ಶ್ರೀನಗರ ಟ್ರಾಲ್ ಟೌನ್‍ಶಿಪ್ಪಿನ ಹೊಣೆಗಾರಿಕೆಯನ್ನು ವಾನಿ ಇವನಿಗೆ ವಹಿಸಿದ್ದ. ಹಾಗಂತ ಇವನ ಕೆಳಗೇನೂ ನೂರಾರು ಜನರ ತಂಡವಿರಲಿಲ್ಲ. ಶ್ರೀನಗರದ ಆಸುಪಾಸಿನಲ್ಲಿಯೇ ಓಡಾಡಿಕೊಂಡಿದ್ದು, ನುಸುಳುಕೋರರಿಗೆ ಸಹಾಯ ಸಲ್ಲಿಸಲು ಧರ್ಮಾಂಧನೊಬ್ಬ, ಪಾಕಿಗಳ ಪಾತಕಿಗಳಿಗೂ ಬೇಕಿತ್ತು. ಅವರೂ ಇವನನ್ನು ಹೂಂ ಎಂದು ಒಪ್ಪಿ ಕೆಲಸ ಮಾಡಿಸಿಕೊಳ್ಳತೊಡಗಿದ್ದರು. ಆದರೆ ಇವನ ಜತೆಗಿದ್ದು ಮೂರು ಗುಂಡು ತಿಂದು ನೆಗೆದು ಬಿದ್ದಿರುವ ತೀರ ಹದಿವಯಸ್ಸಿನ ಫೈಜನ್ ಮುಜಪ್ಪರ್ ಭಟ್ ಇತ್ತಿಚಿನ ಮಾರ್ಚನಲ್ಲಷ್ಟೆ ಅಧಿಕೃತವಾಗಿ ಹಿಜ್ಬುಲ್ ಸಂಘಟನೆ ಸೇರಿದ್ದವನು. ಅದು ಆ ಮಟ್ಟಿಗಿನ ದುರಂತವೇ. ಕಾರಣ ಮಾಹಿತಿಯ ಪ್ರಕಾರ ಹನ್ನೆರಡು ಹದಿಮೂರು ವಯಸ್ಸಿನವರೆಲ್ಲಾ ಸದಸ್ಯರಾಗಲು ಕಾಯ್ದಿದ್ದಾರೆನ್ನುವುದು.
ಆವತ್ತು ಅವನು ಅಲ್ಲಿಗೇ ಬರಲಿದ್ದಾನೆ ಅದೇ ಮನೆಯಲ್ಲಿ ಅಡುಗುತ್ತಾನೆ ಅಥವಾ ಠಿಕಾಣಿ ಹೂಡುತ್ತಾನೆನ್ನುವ ಮಾಹಿತಿ ಪೆÇೀಲಿಸರಿಗೆ ಸಿಕ್ಕಿದ್ದಾದರೂ ಹೇಗೆ..? ಸರಿಯಾಗಿ ಅವನು ಬಂದು ಕೂರುತ್ತಿದ್ದಂತೆ ಎಲ್ಲೆಡೆಯಿಂದ ಅವನನ್ನು ಟ್ರಾಪ್ ಮಾಡಿ ಸೈನಿಕರು ರೇಡು ಬಿದ್ದಿದ್ದಾದರೂ ಹೇಗೆ..? ಅಷ್ಟಕ್ಕೂ ಸಬ್ಜಾರ್ ಭಟ್ ಶ್ರೀನಗರದ ಅಷ್ಟು ಸಮೀಪ ಸಿಟ್ ಲಿಮಿಟ್ಟಿನಲ್ಲಿ ಸಂಚರಿಸುವ ಅಗತ್ಯವಾದರೂ ಏನಿತ್ತು..? ಇದೆಲ್ಲಾ ಗೊತ್ತಿದ್ದೂ ಅಷ್ಟು ಸುಲಭಕ್ಕೆ ಅವನನ್ನು ಶ್ರೀನಗರದಿಂದ ಒಂದೇ ಗಂಟೆ ದಾರಿಯ ಹತ್ತಿರ ಟ್ರಾಲ್ ಮುಖ್ಯ ಪ್ರದೇಶದ ರತ್ಸುಮ್ ಪಾರಿಯ ಏರಿಯಾದಲ್ಲಿನ ಕಿಷ್ಕಿಂದೆಯಂತಹ ಗಲ್ಲಿಗಳ ಮನೆಯೊಳಕ್ಕೆ ದಾಖಲಾಗಲು ಅವಕಾಶ ಕೊಟ್ಟಿದ್ದಾರೂ ಯಾಕೆ..? ಎಂದೆಲ್ಲಾ ಇವತ್ತು ಎಡಚರ ಸಂತೆಯಲ್ಲಿ ಚರ್ಚೆಯಾಗುತ್ತಿದೆಯಾದರೂ, ಇದೆಲ್ಲಾ ಬೇಹು ಪಡೆಗಳ ಗಮನಕ್ಕೆ ವಾರದ ಮೊದಲಿನಿಂದಲೂ ಬರುತ್ತಲೇ ಇತ್ತು. ಬೋನಿಗೆ ಕುರಿ ಬರಲಿ ಎಂದು ಪಡೆ ಕಾಯುತ್ತಲೇ ಇತ್ತು. ಕಾರಣ ಟ್ರಾಲ್ ಏರಿಯಾಕ್ಕೆ ಸಬ್ಝರ್ ಕಾಲಿಟ್ಟಿದ್ದು ಮೇ 19-20 ರ ಮಧ್ಯ ರಾತ್ರಿಗೆ. ಸಮಯಕ್ಕೆ ಸರಿಯಾಗಿ ಬೇಹು ಪಡೆಗೆ ಸುದ್ದಿ ಮುಟ್ಟಿಸಿದವರಿಗೆ ಹತ್ತು ಲಕ್ಷದ ಇನಾಮನ್ನು ಶುಕ್ರವಾರ ರಾತ್ರಿಯೇ ಸೈನ್ಯಾಧಿಕಾರಿಗಳು ಖಚಿತಪಡಿಸಿದ್ದು ಗುಪ್ತವಾಗಿರಿಸಿದ್ದಾರೆ. ಹತ್ತು ಲಕ್ಷ ರೂಪಾಯಿಯೆನ್ನುವುದು, ಬರಗೆಟ್ಟ ಕಾಶ್ಮೀರದ ಪರಿಸ್ಥಿತಿಯಲ್ಲಿ ಅತಿ ದೊಡ್ಡ ಮೊತ್ತ ಎನ್ನುವುದು ಸಬ್ಝರ್ ಭಟ್‍ಗೆ ಗೊತ್ತಿರಬೇಕಿತ್ತು.
ಅಸಲಿಗೆ ಅವನ್ಯಾವತ್ತೂ ಸರಹದ್ದಿನ ಆಚೆಗೆ ಕೂತು ಭಯೋತ್ಪಾದನೆ ನಡೆಸಿದ್ದೇ ಇಲ್ಲ. ಅವನದೇನಿದ್ದರೂ ಆಚೆಯಿಂದ ಬರುವ ಆದೇಶ ಪಾಲನೆ ಮತ್ತು ಗಡಿದಾಟುವ ಉಗ್ರರಿಗೆ ನೆಲೆ ಸಾಮಾನು ಸರಂಜಾಮುಗಳನ್ನು ಒದಗಿಸುವುದೇ ಅಲ್ಲದೆ ಟಾರ್ಗೆಟ್ ಮುಟ್ಟಲು ಅನುಕೂಲ ಮಾಡಿಕೊಡುವುದು ಬಾಕಿ ಹೊತ್ತಿನಲ್ಲಿ ಟ್ರಾಲ್‍ನ ಹುಡುಗರನ್ನು ಹಿಜ್ಬುಲ್ ಸೇರಲು ಪ್ರಚೋದಿಸುವುದೇ ಆಗಿತ್ತು.
ರಾಷ್ತ್ರೀಯ ಹೆದ್ದಾರಿ 1ಏ ಯಿಂದ ಕೇವಲ ಹನ್ನೊಂದು ಕಿ.ಮೀ ದೂರ ಇರುವ, ಒಂದು ಕಡೆಯಲ್ಲಿ ಜಾಮಾ ಮಸೀದಿ, ಪಕ್ಕದಲ್ಲೇ ಸಬರ್ ಮೊಹಲ್ಲಾ, ಎದುರಿಗಿನ ಮುಖ್ಯ ರಸ್ತೆ ದಾಟಿದರೆ ಪುಲ್ವಾಂ ಸೆಕ್ಟರಿನ ಮುಖ್ಯ ರಸ್ತೆ, ಶ್ರೀನಗರದಿಂದ ಕೇವಲ 36 ಕಿ.ಮೀ ದೂರ ಇರುವ, ಪಕ್ಕದಲ್ಲೇ ಚದ್ದರ್ ಹೊದಿಸಿದ ಸಣ್ಣ ದರ್ಗಾದ ನಿರಂತರ ಚಟುವಟಿಕೆಯ ಪ್ರದೇಶ ಹೀಗೆ ಸುತ್ತ ಮುತ್ತೆಲ್ಲಾ ಜನವಿರುವ " ಸೈಹಿಮೋ " ಹಳ್ಳಿಯ ಸಂದಿನಲ್ಲಿರುವ ಮನೆಯನ್ನು ಉಗ್ರ ಭಟ್ ಸೇರಿಕೊಂಡಾಗಲೇ ಒಂದು ದಿನ ಕಳೆದಿತ್ತು. ಅವನು ಸ್ವಲ್ಪ ಮೈಮರೆಯಲಿ ಎನ್ನುವ ಉದ್ದೇಶಕ್ಕೂ ಪ್ರದೇಶವನ್ನು ತಮ್ಮ ಹಿಡಿತಕ್ಕೆ ಪಡೆಯಲೂ ಸೈನಿಕರು ಆ ಸಮಯ ಉಪಯೋಗಿಸಿಕೊಂಡರು.
ಮೇ 19-20 ರ ಮಧ್ಯದಲ್ಲೇ ಅವನು ಟ್ರಾಲ್ ಪ್ರವೇಶ ಮಾಡಿರುವ ಮಾಹಿತಿ ಅತ್ಯಂತ ಖಚಿತವಾಗಿ ಗೊತ್ತಿತ್ತು ಬೇಹುಪಡೆಗಳಿಗೆ. ಜೊತೆಗೆ ಒಂದೇ ವಾರದಲ್ಲಿ ಅವನು ಪ್ರತ್ಯೇಕತಾವಾದಿ ಹುರಿಯತ್ ನಾಯಕರೊಂದಿಗೆ ಪ್ರಮುಖ ಮೀಟಿಂಗ್ ನಡೆಸುವ ಸಲುವಾಗಿ, ಅದಕ್ಕಾಗಿ ಸಾಕಷ್ಟು ಮಾತುಕತೆಗಳನ್ನೂ ನಡೆಸಿದ್ದ. ಕಾರಣ ಝಕೀರ್ ಮೂಸಾ ಮತ್ತು ಸಬ್ಝರ್ ಮಧ್ಯೆ ಕಾಶ್ಮೀರ ಹೋರಾಟ ಧಾರ್ಮಿಕವಾದುದು ಇದನ್ನು ರಾಜಕೀಯ ಹೋರಾಟವಾಗಿ ನೋಡಬಾರದು ಎನ್ನುವ ಹೇಳಿಕೆ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ಎದ್ದಿತ್ತು. ಇದನ್ನು ವಿರೋಧಿಸಿ ಮೂಸಾ ಹುರಿಯತ್ ನಾಯಕರೊಂದಿಗಿನ ಸಂಪರ್ಕವನ್ನು ಮೊನ್ನೆ ಮೊನ್ನೆ ಮೇ 13 ರಂದು ಕಡಿದುಕೊಂಡು, ಹೊರಟು ಹೋಗಿದ್ದೆ ಸಬ್ಝರ್ ಭಟ್‍ನ ಮಹತ್ವಾಕಾಂಕ್ಷೆ ಮೇಲೆದ್ದಿತ್ತು ಎನ್ನುತ್ತಾರೆ ಸೈನ್ಯಾಧಿಕಾರಿಗಳು.
ಅದಕ್ಕಾಗಿ ಸಬ್ಝರ್ ಹುರಿಯತ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರೀನಗರ ಲಾಲ ಚೌಕನಲ್ಲಿ ಕೆಲವರು ಸೈನಿಕರು ಅಥವಾ ಹಿಂದೂಗಳ ಕತ್ತು ಕತ್ತರಿಸಿ ತನ್ನ ಪರಾಕ್ರಮ ಮೆರೆಯುವ ಯೋಜನೆ ರೂಪಿಸತೊಡಗಿದ್ದ. ಅವನ ಬಳಿ ಸಮಯವಿರಲಿಲ್ಲ. ಬರುವ ಅಗಸ್ಟ್ ಹೊತ್ತಿಗೆ ಇಂತಹದ್ದನ್ನು ನಡೆಸಿದರೆ ಪುಲ್ವಾಮ್, ಅನಂತನಾಗ್, ಟ್ರಾಲ್, ಶೊಫಿಯಾನ್ ನಲ್ಲಿ ಈಗಾಗಲೇ ತನ್ನ ಬಗ್ಗೆ ಇರುವ ಬೆಂಬಲ ದ್ವಿಗುಣಗೊಳ್ಳುತ್ತದೆ ಮುಂದೆ ಅದು ಸಂಪೂರ್ಣ ಕಣಿವೆಯನ್ನು ಹಿಡಿತಕ್ಕೆ ಪಡೆಯಲು ಸಹಾಯವಾಗಲಿದೆ ಎಂದೇ ದೂರದ ಲೆಕ್ಕಾಚಾರ ಹಾಕಿದ್ದ. ಅದಕ್ಕಾಗೇ ಅವನು ಬಹುಶ: ಇದು ತನ್ನ ಕೊನೆಯ ಭೇಟಿ ಎಂದೇ ತಂದೆಯನ್ನು ಕರೆಸಿಕೊಂಡು ಭೇಟಿಯಾಗಿಯೂ ಇದ್ದ.
ಆದರೆ ಸೈಹಿಮೋ ಹಳ್ಳಿಯನ್ನು ಪಡೆಗಳು ಸುತ್ತುವರೆಯುವ ಹೊತ್ತಿಗಾಗಲೇ ಶುಕ್ರವಾರ ರಾತ್ರಿಯ ಭರ್ತಿ ಒಂಭತ್ತೂವರೆಯಾಗಿ ಹೋಗಿತ್ತು. ಈ ಮಧ್ಯೆ ಹೊರಗಿನ ಚಲನವಲನ ನೋಡಿಯೇ ಪಕ್ಕದ ರತ್ಸುಮ್ ಹಳ್ಳಿಯ ಜನ ಸೈನಿಕರ ಮೇಲೆ ಕಲ್ಲು ತೂರಾಟ ಶುರು ಮಾಡಿದ್ದರು. ವಾಟ್ಸ್ ಆಪ್ ನಲ್ಲಿ ವಾಯ್ಸ್ ಮೆಸೆಝು ಹರಿಯತೊಡಗಿತ್ತು. ಕೂಡಲೇ ಮೊಬೈಲ್ ಮತ್ತು ರೇಡಿಯೋ ಬಂದ್ ಮಾಡಲಾಯಿತು. ಸೈನಿಕರು ಒಂದೆಡೆ ಗುಂಪನ್ನು ಚದುರಿಸಿ ಮನೆಯನ್ನು ಸುತ್ತುವರೆದಿದ್ದ ಪಡೆಗೆ ರ್ಕಾರ್ಯಚರಣೆ ನಡೆಸಲು ಅವಕಾಶ ಮಾಡಿಕೊಡುತ್ತಿದ್ದರೆ, ಕೊನೆಯ ಹಂತವಾಗಿ ಮಸೀದಿಯ ಲೌಡ್‍ಸ್ಪೀಕರನ್ನೇ ಉಪಯೋಗಿಸಿ ಜನರೆಲ್ಲಾ ಬಂದು ಉಗ್ರರನ್ನು ರಕ್ಷಿಸಿ ಎನ್ನುವ ಕರೆ ಕೊಡತೊಡಗಿದ್ದರು ಸೈಹಿಮೋ ಮತ್ತು ರತ್ಸುಮ್‍ನ ಜನರು. ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿ ಜನರನ್ನು ರೊಚ್ಚಿಗೆಬ್ಬಿಸತೊಡಗಿದ್ದರು. ಆಗ ಅವರ ಮೇಲೆ ಶೆಲ್ ದಾಳಿ ನಡೆಸಿ, ರಬ್ಬರ್ ಗನ್ ಬಳಸುವ ಹೊತ್ತಿಗಾಗಲೇ, ಒಳಗಿದ್ದ ಉಗ್ರರು ಧ್ವನಿವರ್ಧಕದ ಎಚ್ಚರಿಕೆಯ ಶಬ್ದಕ್ಕೆ ಎಚ್ಚೆತ್ತು ತಪ್ಪಿಸಿಕೊಳ್ಳುವ ಯೋಜನೆ ಮಾಡತೊಡಗಿದರಾದರೂ ಪಡೆಗಳು ಸುತ್ತುವರೆದುದ್ದರಿಂದ ಇದ್ದಷ್ಟು ಗುಂಡು ಹಾರಿಸುವ ಯೋಜನೆ ರೂಪಿಸಿದ್ದಾರೆ.
ಅಷ್ಟಕ್ಕೂ ಈ ಸಬ್ಜರ್ ಮೂಲತ: ಪಕ್ಕದ ರುತ್ಸುಮ್ ಹಳ್ಳಿಯವನು. ಆದರೆ ತೀರ ತನ್ನದೇ ಊರಿಗೆ ಹೋದರೆ ಕಾವಲಿಗಿರುವ ಗಸ್ತು ಪಡೆಗಳಿಗೆ ಗೊತ್ತಾಗಬಹುದೆಂದು ಪಕ್ಕದ ಸೈಮೋ ಹಳ್ಳಿಯ ಒಳಭಾಗದ ಎರಡಂತಸ್ತಿನ ಮನೆಯನ್ನು ಸೇರಿಕೊಂಡಿದ್ದ. ಅವನ ವಾರದಿಂದ ಹುರಿಯತ್ ನಾಯಕರೊಂದಿಗಿನ ಚಲನವಲನ ಮತ್ತು ಕೊನೆಯ ಕ್ಷಣದವರೆಗೂ ಬೇಹು ಪಡೆಗಳು ನಿರಂತರ ನಿಗಾ ಇಟ್ಟು ಬೆಂಬತ್ತಿದ್ದು ಸಾರ್ಥಕ ಎನ್ನುವಂತೆ ಅವನನ್ನು ಹೊಡೆದುರುಳಿಸಿ ಕಣಿವೆಯಲ್ಲಿಗ ಉಗ್ರರ ತಂಡವನ್ನೆ ದಿಕ್ಕೆಡಿಸಿದ್ದಾರೆ.
ಇಷ್ಟೆಲ್ಲಾ ಆದರೂ ನಮ್ಮ ಸೈನ್ಯವನ್ನು ಬೆಂಬಲಿಸಿ, ಪಡೆಗಳ ಸಾಹಸವನ್ನು ಮನದುಂಬಿ ಬೆನ್ತಟ್ಟಬೇಕಿದ್ದ ಈ ದೇಶದ ಪ್ರಜೆಯಾಗಿದ್ದೂ ಕೈಗೊಳ್ಳಬೇಕಿರುವ ಕರ್ತವ್ಯ ಮರೆತು ಪಾತಕಿ ಭಟ್‍ನ ಪ್ರೇಮ ಕಥಾನಕದ ಕಾರಣವಾದವನಿಗೆ ಬದುಕಲು ಅವಕಾಶ ಕೊಡಬೇಕಿತ್ತು ಎಂದೆಲ್ಲಾ ಮಾತಾಡುತ್ತಿರುವ ಎಡಬಿಡಂಗಿಗಳಿಗೆ ಯಾರ ಕಡೆಯಿಂದ ಪಾಠ ಹೇಳಿಸಬೇಕೋ ಗೊತಾಗುತ್ತಿಲ್ಲ.
ಆಪರೇಶನ್ ಹೇಗೆ ನಡೆಯುತ್ತದೆ..?
ಇಲ್ಲಿ ಒಂದು ವಿಷಯ ಗೊತ್ತಿರಬೇಕು. ಪ್ರತಿ ಗಲ್ಲಿಯೂ ಮುಸ್ಲಿಂ ಬಾಹುಳ್ಯವಿರುವ ಶ್ರೀನಗರದ ಯಾವ ದಿಕ್ಕಿನಲ್ಲಾದರು ಉಗ್ರರು ಅಡಗಿದರೆ ಪೆÇೀಲಿಸರಿಗೆ ಗೊತ್ತಾಗುವುದು ತುಂಬ ಕಷ್ಟ. ತೀವ್ರವಾದ ಸ್ಥಳೀಯ ಬೆಂಬಲವಿದೆ ಇಲ್ಲಿ. ಆದರೆ ಉಗ್ರರು ಕಣಿವೆಯಲ್ಲಿ ಕಾಲಿಟ್ಟೊಡನೆ, ಬಂದು ಮನೆಯನ್ನು ಸೇರಿಕೊಂಡ ಕೆಲವೆ ಗಂಟೆಗಳಲ್ಲಿ ಪೆÇೀಲಿಸರಿಗೆ ಸುಳುಹು ಹತ್ತಿಯೇ ಬಿಡುತ್ತದೆ. ಅದು ಹೇಗೆ..? ಪ್ಯಾದೇ ಉಗ್ರರಿಗೆ ಇವತ್ತಿಗೂ ಅರ್ಥವಾಗದ್ದೇನೆಂದರೆ ಶ್ರೀನಗರದ ಎಲ್ಲಾ ಮುಸ್ಲಿಮರೂ ತಮ್ಮನ್ನು ನಂಬಿ ಬೆಂಬಲ ಸೂಚಿಸುತ್ತಲೇ ಇದ್ದಾರೆಂದೇ ಹಾರಾಡುತ್ತಿರುವುದು. ಅದರೆ ಹಾಗಾಗುವುದೇ ಇಲ್ಲ. ಪೆÇೀಲಿಸರೊಂದಿಗೆ ಶಾಮೀಲಾಗಿ ಜೀವನ ನಡೆಸುತ್ತಿರುವ ಮುಸ್ಲಿಂ ಕುಟುಂಬಗಳು ಪ್ರತಿ ಗಲ್ಲಿಯಲ್ಲೂ ಇವೆ. ಅಸಲಿಗೆ ಎಲ್ಲರಿಗಿಂತ ಹೆಚ್ಚಿಗೆ ಪಾಕಿಗಳ ಪರ ಘೋಷಣೆ ಕೂಗುವವರೂ ಇವರೇ. ಸರಿಯಾದ ಸಮಯಕ್ಕೆ ಕೆಲಸ ಆಯಿತೆಂದು ಟಿಪ್ಸು ಕೊಡುವವರೂ ಇವರೇ. ಬುರಾನ್ ವಾನಿ ಹತ್ಯೆಯ ಸಮಯದಲ್ಲೂ ಇದೇ ಆಗಿತ್ತು.
ಇಲ್ಲವಾದರೆ ಅಂಥಾ ಇಕ್ಕಟ್ಟಾದ ಗಲ್ಲಿಯ ಸೈಹಿಮೋ ಹಳ್ಳಿಯ ಮೂಲೆಯೊಂದರಲ್ಲಿ ಇರುವ ಮನೆಯಲ್ಲಿ ರಾತ್ರೋ ರಾತ್ರಿ ಬಂದು ದಾಖಲಾಗುವ ಕಪಟ ಉಗ್ರರ ಸುಳಿವು ಸಿಕ್ಕುವುದಾದರೂ ಹೇಗೆ..? ಹಾಗೆ ಟಿಪ್ಸು ದೊರೆಯುತ್ತಿದ್ದಂತೆ ಮೊದಲು ಅಲ್ಲಿನ ರೇಡಿಯೋ ಸಿಗ್ನಲ್ ಮೂಲಕ ನಡೆಯುತ್ತಿರುವ ಸಂವಾದವನ್ನು ಅದರ ಅಂತರವನ್ನು ಅಂದಾಜಿಸಿ ಪಕ್ಕಾ ಮಾಡಿಕೊಳ್ಳುವ ಪೆÇೀಲಿಸರು ಅದು ದಾಖಲಾಗುವ ಸ್ಥಳದ ಮಾಹಿತಿಯ ಆಧಾರದ ಮೇಲೆ ಆತ ಮಾತಾಡುತ್ತಿರುವ ಸ್ಥಳವನ್ನೂ ಗುರುತಿಸಿಕೊಳ್ಳುತ್ತಾರೆ. ಎರಡೂ ಹೊಂದಾಣಿಕೆ ಆಗುತ್ತಿದ್ದಂತೆ ಪೆಟ್ರೊಲಿಂಗ್ ನೆಪದಲ್ಲಿ ಮೊದಲು ಆ ಕ್ಷೇತ್ರವನ್ನೇ ಸುತ್ತುವರೆದು ಇತರರು ಒಳ ಪ್ರವೇಶಿಸದಂತೆ ತೆಕ್ಕೆಗೆ ತೆಗೆದುಕೊಂಡು ಬಿಡುತ್ತಾರೆ. ಹಾಗೆ ಒಮ್ಮೆ ಲೋಕಲ್ ಪೆÇೀಲಿಸರು ಸುತ್ತುವರೆಯುತ್ತಿದ್ದಂತೆ ಮುಗಿಬೀಳುವ ಸೈನಿಕರು ಪ್ರದೇಶವನ್ನು ತಮ್ಮ ಹತೋಟಿಗೂ, ಸುತ್ತಲಿನ ಮಾರ್ಗಗಳನ್ನೂ ಮುಚ್ಚುವಂತೆಯೂ ನೋಡಿಕೊಳ್ಳುತ್ತಾರೆ. ಕಾರಣ ಉಗ್ರರೊಂದಿಗೆ ಗುಂಡಿನ ಹಾರಾಟ ನಡೆಸುವ ಸೈನಿಕರಿಗೆ ಯಾವತ್ತೂ ಹೊರಗಿನ ಜಗತ್ತಿನ ಕಡೆಗೆ ಗಮನ ಹರಿಸಿ ಹೋರಾಡುವುದು ಸಾಧ್ಯವೇ ಇರುವುದಿಲ್ಲ. ಏನಿದ್ದರೂ ಟಾರ್ಗೆಟ್ ಮಾತ್ರ. ಹಾಗಾಗಿ ಅವರ ಕಾರ್ಯಾಚರಣೆಗೆ ಧಕ್ಕೆ ಬಾರದಂತೆ ಹೊರಗಿನ ವರ್ತುಲದ ಪಡೆ ಅವರನ್ನು ಕಾಯುತ್ತಿರುತ್ತದೆ.
ಇದೆಲ್ಲಾ ಒಂದೊಂದು ಸುತ್ತಿನ ಕೆಲಸವಾಗುವ ಹೊತ್ತಿಗೆ ಶಾರ್ಪ್ ಶೂಟರ್ ಪಡೆ ಪ್ರತಿ ಹೆಜ್ಜೆಯ ಲೆಕ್ಕದಲ್ಲಿ ಮನೆಯನ್ನು ಸುತ್ತುವರೆದು ರೇಡು ಹಾಕಿ ಕೂತುಕೊಳ್ಳುತ್ತದೆ. ಯಾವಾಗ ಸುತ್ತಲಿನ ಎಲ್ಲಾ ಪ್ರದೇಶ ಹಿಡಿತಕ್ಕೆ ಬರುತ್ತದೋ ಕೂಡಲೇ ಸೈನಿಕರ ನಾಯಕ ಉಗ್ರರಿಗೆ ಒಮ್ಮೆ ಒಂದು ವಾರ್ನಿಂಗ್ ಕೊಡುತ್ತಾನೆ. ಅವರಾಗಿ ಶರಣಾಗುವಂತೆ ಮೂರು ಬಾರಿ ಎಚ್ಚರಿಸುವುದು ವಾಡಿಕೆ. ಆದರೆ ಮೊದಲ ವಾರ್ನಿಂಗ್ ಮೊಳಗಿ ಮುಗಿಯುವ ಮೊದಲೇ ಉಗ್ರರು ಗುಂಡು ಹಾರಿಸುವ ಹುಂಬತನಕ್ಕಿಳಿದು ರಣವೀಳ್ಯ ಕೊಟ್ಟುಬಿಡುತ್ತಾರೆ. ಎಂಟೂ ದಿಕ್ಕಿನಿಂದ ಆವರಿಸಿರುವ ಸೈನಿಕರು ಪಟಾಕಿಯಂತೆ ಗುಂಡು ಸಿಡಿಸತೊಡಗುತ್ತಾರೆ. ಒಳಗೆ ಗುಂಡು ಖಾಲಿಯಾಗುವವರೆಗೂ ಆರ್ಭಟಿಸುವ ಉಗ್ರರು ಕೊನೆ ಕೊನೆಗೆ ಕೂತಲ್ಲೆ ಉಚ್ಚೆ ಹೊಯ್ದುಕೊಂಡ ಉದಾ. ಕೂಡಾ ಹೇರಳ. ಯಾವಾಗ ತಮ್ಮ ಕೊನೆ ನಿಶ್ಚಯವಾಗುತ್ತದೆಯೋ ಆಗ ಜೊತೆಗಿದ್ದ(ಇದ್ದರೆ) ಫೆÇೀನ್ ಅಥವಾ ಲಭ್ಯ ಸಂಪರ್ಕದ ಮೂಲಕ ಕುಟುಂಬ, ಹೆಂಡತಿ, ಗೆಳೆಯ, ಮಾತು ಎಂದೆಲ್ಲಾ ಅಪ್ಪಟ ದರವೇಶಿಗಳಂತೆ ಹಲುಬತೊಡಗುತ್ತಾರೆ. ಆದರೆ ಆಗಲೇ ತಡವಾಗಿರುತ್ತದೆ. ಸೈನಿಕರು ತಮ್ಮ ಕೆಲಸ ಮುಗಿಸಿ ದೇಹ ಎಳೆಯುವ ಹೊತ್ತಿಗೆ ಯಾವ ಉಗ್ರರೂ ಬದುಕುಳಿದ ಉದಾ. ಗಳಿಲ್ಲ.

