Saturday, December 31, 2016

ಮೋದಿ ಭಕ್ತರೇನು ಮುಠ್ಠಾಳರೇ...?

(ತನ್ನ ನಂಬಿ ಹಿಂದೆ ಕರೆದೊಯ್ಯುವವನು ನಾಯಕನಾಗುವುದು ಸಹಜ. ಆದರೆ ಕ್ರಮೇಣ ಸಿದ್ಧಾಂತದಲ್ಲಿ ವೈಪರಿತ್ಯಗಳುಂಟಾಗಿ ಆ ನಾಯಕತ್ವ ಸಹಜವಾಗೇ ಕುಸಿಯುತ್ತದೆ. ಆದರೆ ತನ್ನ ನಂಬಿಕೆಗಳನ್ನು ಸಂಪೂರ್ಣ ಸಮೂಹದ ನಂಬಿಕೆಯನ್ನಾಗಿ ಪರಿವರ್ತಿಸೋದಿದೆಯಲ್ಲ ಅಂಥವನು ಶಾಶ್ವತವಾಗಿ ನಾಯಕನಾಗುತ್ತಾನೆ ಮತ್ತು ಆ ಸ್ಥಾನ ಅಬಾಧಿತ. ಹಾಗೆ ಜನರ ನಂಬುಗೆ ಮತ್ತು ವಿಶ್ವಾಸ ಎರಡನ್ನೂ ಗಳಿಸುವವನು ಮಿತ್ರರಷ್ಟೆ ಶತ್ರುಗಳನ್ನೂ ಗಳಿಸುತ್ತಾನೆ. ಕಾರಣ ಯಶಸ್ಸು ಎನ್ನುವುದು ಎಂಥವನ ನಿಯತ್ತನ್ನೂ ಹಾಳು ಮಾಡಿಬಿಡುತ್ತದೆ)
ಇವತ್ತು ರಾಜಕೀಯ ನೇತಾರರ ಬೆಂಬಲಿಗರು ಅವರವರ ನಾಯಕರನ್ನು ಬೆಂಬಲಿಸುವುದು ಮತ್ತು ಅವರ ಪ್ರತಿಯೊಂದು ನಡೆಗೂ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಹಜ ಮತ್ತು ಅಭಿಮಾನದ ದ್ಯೋತಕ ಕೂಡಾ. ಆದರೆ ಅವರವರ ಅಭಿಮಾನವನ್ನೇ ತಪ್ಪು ಅಥವಾ ಅವರ ಬೆಂಬಲಿಗರ ಪಡೆಯ ನಡೆಯೇ ಹಾಸ್ಯಾಸ್ಪದ ಎನ್ನುವಂತೆ ಎಲೆಲ್ಲೂ ಹುಯಿಲೆಬ್ಬಿಸುತ್ತಿರುವ ಸಂತತಿಯೇ ಎದ್ದು ನಿಂತಿದೆ. ಅದರಲ್ಲಿ ಪ್ರಮುಖವಾಗಿರುವುದೆಂದರೆ ಪ್ರಸ್ತುತ ಈ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಜೀಯವರ ಬೆಂಬಲಿಗರನ್ನು ಹಣಿಯುವುದಕ್ಕೆ ಕಾದಿರುವ ಪಡೆ. 
ಇವತ್ತು ನಿಜವಾಗಿಯೂ ಈ ದೇಶದ ಪ್ರಧಾನಿಯ ಯಾವುದಾದರೊಂದು ನಡೆಯನ್ನು ಮೆಚ್ಚಿಕೊಂಡು ಇವೆರಡೂ ಪಂಗಡ ಆಚೆಗಿನವರೂ ಮೆಚ್ಚುಗೆ ಸೂಚಿಸುವಂತೆಯೇ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಹಾಗಾದಲ್ಲಿ ಆತನೂ ಭಕ್ತನಾಗಿ ಬ್ರಾಂಡ್ ಆಗುತ್ತನಲ್ಲ. ಕಾರಣ ಹೆಚ್ಚಿನವರಿಗೆ ಭಕ್ತರು, ಮೋದಿ ಸರದಾರರು ಅಥವಾ ಅಚ್ಛೇ ದಿನ್ ಕಾರ್ಯಕರ್ತರು ಇತ್ಯಾದಿಯಾಗಿ ನೋಡಲಾಗುತ್ತಿದೆ ಮತ್ತು ಗುರುತಿಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಇಲ್ಲಿಯವರೆಗೂ ಇದ್ದ ಹಳೆಯ ಅಧಿಕಾರ ಕೇಂದ್ರವನ್ನು ಬೆಂಬಲಿಸುತ್ತಿರುವವರಿಗೆ ಮತ್ತು ಈಗಲೂ ಶತಾಯಗತಾಯ ಮೋದಿಯವರನ್ನು ವಿರೋಧಿಸುತ್ತಿರುವವರಿಗೆ ಅವ್ರವರದ್ದೇ ಭಾ ಷೆಯಲ್ಲಿ ಉತ್ತರಿಸಲಾಗುತ್ತಿದೆ ಸದ್ಯಕ್ಕಿದು ನಿಲ್ಲುವ ಲಕ್ಷಣಗಳಿಲ್ಲ. ಇರಲಿ ಒಂದು ವಿಷಯಕ್ಕೆ ಪರ – ವಿರೋಧ ಮತ್ತು ಸೈದ್ಧಾಂತಿಕ ಸಂಘರ್ಷಗಳು ಅಥವಾ ಅವರವರ ಅಭಿಮಾನದ ಪರಾಕಾಷ್ಠೆಗಳು ಇದ್ದದ್ದೇ ಆದರೆ ಅದೇ ಚಟವಾಗಬಾರದು ಮತ್ತು ಎಲ್ಲಾ ಉದ್ದೇಶಕ್ಕೂ ಅದನ್ನೆ ಬಳಸಿಕೊಳ್ಳಬಾರದು ಕೂಡಾ ಅಲ್ಲವೇ..?
ಆದರೆ ಇದೇನಿದು ಓಲೈಕೆಯ ಪರಿ ಹೀಗೆಲ್ಲಾ ಬದಲಾಗುತ್ತದಾ..? ಗಮನಿಸಿ ನೋಡಿ. ನವಂಬರ್ 8 ರಂದು ನೋಟು ಬ್ಯಾನ ಆದದ್ದೇ ಆದದ್ದು. ಹೆಚ್ಚಿನ ಅಂಕಣಕಾರರು ಆವತ್ತಿನಿಂದ ಇವತ್ತಿನವರೆಗೆ ಅದರ ಬಗ್ಗೆ ಎಲ್ಲೆಲ್ಲಿ ಜನ ಸಾಲಾಗಿ ನಿಂತು ಸತ್ತರು, ಯಾರ ಮನೆಯಲ್ಲಿ ಮದುವೆ ನಿಂತು ಹೋಯಿತು (ಅಸಲಿಗೆ ಯಾವ ಮದುವೆಯೂ ನಿಂತ ದಾಖಲೆಗಳೇ ಇಲ್ಲ) ಯಾವ ಟ್ರಿಪ್ಪು ಕ್ಯಾನ್ಸ್‍ಲ್ ಆಯಿತು..? ಯಾವ ಮನೆ ವಾಸ್ತು ಬದಲಿಸಬೇಕಾಯಿತು.. ಯಾರ ಮನೆ ಗೃಹ ಪ್ರವೇಶ ಮಾಡಲಾಗಲಿಲ್ಲ... ಯಾವ ಮನೆಗಳಲ್ಲಿ ಊಟಕ್ಕೆ ದುಡ್ಡೆ ಉಳಿದಿಲ್ಲ.. ಯಾರ್ಯಾರ ಮನೆಗಳಲ್ಲಿ ದವಸ ಧಾನ್ಯ ತರಲಾಗುತ್ತಿಲ್ಲ ಹೀಗೆ ತಮಗೆ ಅನ್ನಿಸಿದ್ದೆಲ್ಲಾ ಬರೆಯುವುದನ್ನೆ ಗುತ್ತಿಗೆ ಪಡೆದವರಂತೆ ಚೆಂದ ಚೆಂದ ಕತೆಗಳನ್ನು ಪೆÇೀಣಿಸುತ್ತಲೇ ಇದ್ದಾರೆ ತಪ್ಪೇನಿಲ್ಲ. ಅದೂ ಒಂದು ರೀತಿಯ ಅವರವರ ನಾಯಕನ ಅಭಿಮಾನದ ಪರಾಕಾಷ್ಠೆ.
ತಮಾಷೆಯೆಂದರೆ ಇಲ್ಲಿನ ವೈರುಧ್ಯ ನೋಡಿ. ಹೀಗೆ ಬರೆಯುತ್ತಿರುವವರಿಗೂ, ಅಪೂಟು ಸಮಾಜ ಸುಧಾರಿಸುತ್ತೇನೆಂದು ಹೊರಟು ನಿಂತವರಿಗೂ ವಾರದ ಕೊನೆಯ ಮೋಜು ಮಸ್ತಿಗೆ ಮಾತ್ರ ದುಡ್ಡು ಕಡಿಮೆಯಾಗಲಿಲ್ಲ. ಒಂದು ಚಲನಚಿತ್ರ ಗೆಲ್ಲಿಸಲು ನೂರು ಕೋಟಿ ಆದಾಯ ಮಾಡಿಕೊಡಲು ದುಡ್ಡು ಕಡಿಮೆಯಾಗಲಿಲ್ಲ. ಯಾವೆಲ್ಲಾ ಜಾತ್ರೆ ಮೆರವಣಿಗೆಗಳಲ್ಲಿ ನಾವು ಮಿಂಚಲು, ಅಲ್ಲಿ ತಿಂದು ತಿರುಗಿ ಕುಣಿದು ಕುಪ್ಪಳಿಸಲು ಎಲ್ಲೂ ನಮಗೆ ಚಿಲ್ಲರೆ ಅಭಾವವೇ ಆಗಲಿಲ್ಲ. ಆದರೆ ಬೇರೆಯವರ ಅಭಾವದ ಕತೆ ಮಾತ್ರ ಎದ್ದು ಕಾಣತೊಡಗಿದ್ದು ವಿಪರ್ಯಾಸ. ಇದಕ್ಕೆ ಪೈಪೆÇೀಟಿಯಾಗಿ ಗಟ್ಟಿ ದನಿಯಲ್ಲಿ ಕತ್ತಿನ ನರ ಉಬ್ಬಿಸಿಕೊಂಡು ನಿರೂಪಕಿಯರು, 
"..ಸಾಲು ಕರಗದ ಏ.ಟಿಎಂ. ದುಡ್ಡು ಮಾತ್ರ ಸಿಗಲೇ ಇಲ್ಲ.." 
"...ಸಾಲು ಸಾಲು ಜನ ನಗದಿಗೆ ಮಾತ್ರ ಆಯ್ತು ಕೊರತೆ.. "
"..ಇವತ್ತಿಗೆ ಒಂದು ತಿಂಗಳು, ಹಣ ಮಾತ್ರ ಸಿಗುತ್ತಲೇ ಇಲ್ಲ.." 
ಎನ್ನುತ್ತಾ ಪ್ರತೀ ಚಾನೆಲ್ ಎರಡೂ ತುದಿಗೆ ಆತು ನಿಂತು ಕಿರುಚಿದ್ದೇ ಕಿರುಚಿದ್ದು. ಜೊತೆಗೆ ಪ್ರತಿ ಮಾತಿಗೊಮ್ಮೆ ಹಲ್ಲಿಯಂತೆ ಲೊಚಗುಟ್ಟುವ ಕೆಲವು ಕಲಾವಿದೆಯರು, "...ಇದೆಂಥಾ ಪರಿಸ್ಥಿತಿ ರೀ ಮೋದಿ ಹಿಂಗೆಲ್ಲಾ ಮಾಡಬಾರದಿತ್ತು. ಪಾಪ ಅವ್ರಿಗೆ ದುಡ್ಡಿಲ್ವಂತೆ.." ಎನ್ನುತ್ತಾ ಪೆÇೀಸು ಕೊಟ್ಟಿದ್ದೇ ಕೊಟ್ಟಿದ್ದು. 
ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ "..ಮೋದಿ ಪಾಕಿಸ್ತಾನದಿಂದ ಬಂದ ರಹಸ್ಯ.." ಎಜೆಂಟ್ ಎಂಬ ಕತೆಗೂ, ಅವರ ದಾಡಿ ಬಿಟ್ಟ ಸ್ಟೈಲಿಗೂ, ಕೊನೆಗೆ ಅವರ ಬಾಲ್ಯಕಾಲದ ಇತಿಹಾಸ ಇಲ್ಲವೇ ಇಲ್ಲ ನೋಡಿ ಅದಕ್ಕೆ ಮೋದಿ ಹೊಸದಾಗಿ ಭಾರತದೊಳಕ್ಕೆ ಎಂಟ್ರಿ ಹೊಡೆದಿರುವ ಎಜೆಂಟ್ ಎಂಬಲ್ಲಿಗೂ ಬಂದು ನಿಂತಿತು ಚರ್ಚೆ. ಅದಕ್ಕೂ ಮುಂದಕ್ಕೆ ಹೋದ ಕೆಲವರಂತೂ ತಮಗೆ ಅಂಕಣವನ್ನು ಸಂಪಾದಕ ಯಾವ ವಿಷಯಕ್ಕಾಗಿ ಬರೆಯಲು ನಿಗದಿಪಡಿಸಿದ್ದಾರೆ ಎನ್ನುವುದನ್ನು ಮರೆತು ಬರೆಯಲು ಕೂತುಕೊಂಡು ಬಿಟ್ಟಿದ್ದಾರೆ. 
ರಾಜ್ಯದ ಪ್ರಮುಖ ಪತ್ರಿಕೆಯ ಕೆಲವು ಅಂಕಣದಲ್ಲಿ ಅಸಲಿನ ತಮ್ಮ ವಿಷಯವನ್ನೇ ಮರೆತು, ಮೋದಿ ಪ್ರತಿ ಮನೆಗಳ ಉರಿಯುವ ಒಲೆಯನ್ನೇ ನಂದಿಸಿದ್ದಾರೆ ಎನ್ನುವಂತಹ ಕರುಣಾಜನಕ ಕತೆ ಕಟ್ಟಲು ಆರಂಭಿಸಿದ್ದರು. ಅತ್ತ ಅಂಕಣಗಾರ್ತಿಯೊಬ್ಬರು ಯಾವ ಲೇಖನದ ಕನೆಕ್ಷನ್ನು ಎಲ್ಲಿಗೆ ಹೋಗುತ್ತದೋ ಗೊತ್ತಾಗದಂತೆ ಉದ್ದುದ್ದವಾಗಿ ಬರೆದು ಬೀಸಾಕಿದ್ದರು. ಅವರ ಬರಹದುದ್ದಕ್ಕೂ ಬರೆಯಬೇಕಾದ ಅಂಕಣದ ವಿಷಯಕ್ಕೂ ಕನೆಕ್ಷನ್ನೇ ಇರಲಿಲ್ಲ. ಎಲ್ಲಾ ಅಂಕಣಗಾರರು ಮೋದಿಯನ್ನು ಜರಿಯುತ್ತಿದ್ದಾರೆ ನಾನೂ ಜರೆಯಬೇಕು ಅಥವಾ ವಿಶ್ಲೇಷಿಸಬೇಕು..ಅಷ್ಟೆ..? ಎಲ್ಲರೂ ತಮ್ಮನ್ನು ತಾವು ಪ್ರಗತಿಪರರು ಎಂದು ಬಿಂಬಿಸಿಕೊಳ್ಳುತ್ತಾ ಥಾನುಗಟ್ಟಲೇ ನೋಟು ನಿಷೇಧ ವಿರೋಧಿಸುವ ಬರಹ ಬರೆಯುವಾಗ ಇದೆಲ್ಲಿದು..ತಗಿ, ಅಂತಾ ಅಂಕಣದ ಸಬ್ಜಕ್ಟೇ ಬಿಟ್ಟಾಕಿ ಎಲ್ಲಿಂದೆಲ್ಲಿಗೋ ಕನೆಕ್ಷನ್ ತೆಗೆದುಕೊಂಡು ನೋಟ್ ಬ್ಯಾನ್ - ಬ್ಯಾನ್ ಎಂದು ಬರೆದು ಅಯ್ಯಪ್ಪ ಎಂದು ಉಸಿರ್ಗೆರೆದುಕೊಂಡಿದ್ದೂ ಆಯಿತು.
ಇನ್ನೊಬ್ಬ ಬರೆಯುವ ಭರದಲ್ಲಿ ನೋಟು ಹಿಂಪಡೆತದ ನಂತರ, ಎಲ್ಲಿವರೆಗೆ ಸಾರ್ವಜನಿಕರು ವಾಪಸ್ಸು ಜಮೆ ಮಾಡಬಹುದು ಎನ್ನುವ ಮಾಹಿತಿ ಇಲ್ಲದೆ ಕಾಲಚಕ್ರವನ್ನೇ ಒಂದು ತಿಂಗಳ ಹಿಂದಕ್ಕೆ ಒಯ್ದು ನಿಲ್ಲಿಸಿದ್ದರು. ಅಂತೂ ಸಂಪಾದಕರು ಮರುದಿನ ಮಧ್ಯ ಪ್ರವೇಶಿಸಿ ದಿನಾಂಕ ಸರಿಪಡಿಸಿ ತಿಳಿಯಾಗಿಸಿದರು. ಮೊದಲೇ ಹಗ್ಗ ಹಾವಾಗಿದೆ ಎಂಬಂತೆ ಸಾರ್ವಜನಿಕರನ್ನು ತಪ್ಪು ದಾರಿಗೆಳಸುವಾಗ ನೋಟು ಸರೆಂಡರ್ ತಾರೀಕನ್ನೇ ಬದಲಿಸಿ ಇಟ್ಟುಬಿಟ್ಟರೆ ಪತ್ರಿಕೆ ಮತ್ತು ಅಂಕಣವನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನ ಸಾಮಾನ್ಯ ಏನು ಮಾಡಬೇಕು. (ಇಲ್ಲಿ ಬೈ ಚಾನ್ಸ್ ದಿನಾಂಕ ತಪ್ಪಾಗಿದ್ದರೆ ಏನಾಯ್ತೀಗ ಎಂದು ವಕಾಲತ್ತಿಗೆ ಬರುವವರು ಇಲ್ಲದಿಲ್ಲ. ಆದರೆ ನೆನಪಿಟ್ಟುಕೊಳ್ಳಿ. ಒಂದು ಗಂಭೀರ ವಿಷಯದ ಬಗ್ಗೆ ನಿಖರ ಮಾಹಿತಿ ಇಲ್ಲದೆ ಬರೆಯಲು ಕೂರುವವರು ಅಂಕಣಗಾರನಂತೂ ದೂರ ಇರಲಿ, ಲೇಖನ ಬರೆಯೋದಕ್ಕೂ ಕೂರಬಾರದು ಎನ್ನುತ್ತೇನೆ ನಾನು) ಹೋಗಲಿ ಈ ಎಲ್ಲಾ ಕೇಸುಗಳಲ್ಲಿ ಆ ಸಂಪಾದಕರಾದರೂ ಏನು ಮಾಡುತ್ತಿದ್ದಾರೆ..? ಯಾವ ವಿಷಯ ಪ್ರಕಟಪಡಿಸಬೇಕು ಬೇಡ ಎನ್ನುವುದನ್ನು ನಿರ್ಧರಿಸಲೇ ಅವರನ್ನು ಅಲ್ಲಿ ಕೂರಿಸಿದ ಮೇಲೆ, ಒಂದು ಲೇಖನ ಅದಕ್ಕೆ ಸಂಬಂಧಿಸಿದ್ದಾ ಇಲ್ಲವಾ ಎನ್ನುವುದನ್ನೂ ನೋಡುವುದಿಲ್ಲ ಎಂದಾದ ಮೇಲೆ ಅದ್ಯಾಕಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕು..?
ಮೊನ್ನೆ ಮೊನ್ನೆ ನೋಟು ನಿಷೇಧ ಎನ್ನುವುದನ್ನು ಶತಯ ಗತಾಯ ಮೂರ್ಖ ನಿರ್ಧಾರ ಎನ್ನುವಂತೆ ಒಬ್ಬರು ಬರೆದದ್ದೂ ಅಲ್ಲದೆ ಅವರಿಂದ ಧಮಕಿಯನ್ನೂ ಎದುರಿಸಬೇಕಾಯಿತು. ಆಯಿತು ಸ್ವಾಮಿ ನಿಮ್ಮ ಅನಿಸಿಕೆ ಸರಿ. ಭಕ್ತರು ಕಾಲು ಕೆದರಿಕೊಂಡು ಬಂದು ನಿಮ್ಮನ್ನು ಅವಹೇಳನ ಮಾಡುತ್ತಾರೆ ಅದಾಗಬಾರದು ನೇರ ಧನಾತ್ಮಾಕ  ಚರ್ಚೆ ಮಾತ್ರ ನಿಮ್ಮ ಆಯ್ಕೆಯಾಗಿದ್ದರಿಂದ ನೀವು ಬಾಕಿದ್ದಕ್ಕೆ ಅವಕಾಶ ಇಲ್ಲ ಎಂದಿರಿ ಕರೆಕ್ಟೇ. ಆದರೆ ಪ್ರಧಾನಿಯ ನಿರ್ಧಾರವನ್ನು ತಪ್ಪು ಎಂದು ನೀವು ನಿರೂಪಿಸಲು ಕಾಲೂರಿ ನಿಂತು ಬಡಿದಾಡುವಾಗ, ಅದನ್ನು ಹೌದೆಂದು ನಿರೂಪಿಸುವ ಅವಕಾಶ ಬೇರೆಯವರಿಗೂ ಇದ್ದೇ ಇದೆ ಅಲ್ಲವಾ..? 
ಅದಕ್ಕಾಗಿ ಎಲ್ಲರನ್ನೂ ಸಾರಾ ಸಗಾಟಾಗಿ ನೀವಾಳಿಸಿ ಎಸೆಯಲು ಮೋದಿಯನ್ನು ಬೆಂಬಲಿಸುತ್ತಿರುವ  ಎಲ್ಲಾ ಅಭಿಮಾನಿಗಳು/ಭಕ್ತರು ಏನು ಮುಠ್ಠಾಳರಾ ಅಥವಾ ಭಕ್ತರಿಗೆಲ್ಲರಿಗೂ ಬುದ್ಧಿ ಇಲ್ಲವೆಂದಾ..? ಅಕಸ್ಮಾತ ನಿಮ್ಮ ಅನಿಸಿಕೆ ಮತ್ತು ಅವರೆಲ್ಲಾ ಭಕ್ತರು ಹೌದೇ ಅಂತಾದರೆ ಇಲ್ಲಿವರೆಗೆ ಇತಿಹಾಸದಲ್ಲಿನ ಪ್ರಧಾನಿಗಳನ್ನು ಅವರವರ ಶಕ್ತಾನುಸಾರ ಬೆಂಬಲಿಸಿ ಅಂಬಲಿಗೂ, ಗಂಜಿಗೂ ದಾರಿ ಮಾಡಿಕೊಂಡು ಕೂತಿದ್ದವರೆಲ್ಲಾ ಏನು ಪೂಜಾರಿಗಳಾ..? ಅರ್ಚಕರಾ..? ಇದೇನಿದು ತಾನು ಕುಡಿದರೆ ನೀರು, ಬೇರೆಯವರು ಕುಡಿದರೆ ನೀರಾ..? 
ಇವತ್ತು ಸರಾಸರಿ 29 ವರ್ಷವಾದರೂ ಇನ್ನೂ ಸರಿಯಾಗಿ ಓದಿ ಮುಗಿಸದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯ(?) ಬೆಂಬಲಿಗೆ ನಿಲ್ಲುವ ಭಕ್ತರಿಗೂ ಇತರ ನಾಯಕನ ಭಕ್ತರಿಗೂ ವ್ಯತ್ಯಾಸವೇ ಇಲ್ಲವಾ..? ಇಂತಹ ಸಂದರ್ಭದಲ್ಲಿ ಇವತ್ತು ಅಂತಹದ್ದೇ ಒಂದು ಯುನಿವರ್ಸಿಟಿಯಿಂದ ಓದಿ ಹೊರಬಿದ್ದು, ಅವನಿಗಿಂತಲೂ ಕಿರಿಯನಾಗಿದ್ದರೂ ಜಗತ್ತಿನ ಅತ್ಯುತ್ತಮ ಕಂಪನಿಯೊಂದರ ಸಿ.ಈ.ಓ ಆಗಿರುವ ಪಿಚ್ಛಾಯಿಯ ನೆನಪು ಬರುವುದೇ ಇಲ್ಲ. ಬದಲಿಗೆ ದಶಕಗಳಿಂದ ಪಟ್ಟಬಧ್ರರನ್ನು ಹಿಂಬಾಲಿಸಿ, ಬೊಗಸೆಯೊಡ್ಡಿ ನಿಂತು, ಕಳೆದ ಹಲವು ದಶಕಗಳಿಂದ ಶಕ್ತಾನುಸಾರ ದುಡಿಯುತ್ತಿರುವ ನಿಮಗೆ ಈಗ ಅದಕ್ಕೆ ಕುತ್ತು ಬಂದಿದ್ದೇ ಅದರ ರೋಷವೆಲ್ಲಾ ಭಕ್ತರ ಮೇಲೆ ತಿರುಗುತ್ತಿದೆ ಅಲ್ಲವಾ..? 
ಆಯಿತು ಇವರೆಲ್ಲಾ ಭಕ್ತರು ಎಂತಾದರೆ, ನಿಮಗೆ ಬೇಕಾದ ನಾಯಕರ ಬೆಂಬಲಕ್ಕೆ ಧಾವಿಸುವ ನೀವು ಏನಾಗುತ್ತೀರಿ..? ಇದೆಲ್ಲಾ ಯಾಕೆ ಪ್ರಸ್ತಾಪಿಸಬೇಕಾಯಿತೆಂದರೆ ಒಂದು ದೇಶದ ಪ್ರಧಾನಿಯಾಗಬೇಕಾದರೆ ಸುಖಾ ಸುಮ್ಮನೆ ಆ ಮನುಶ್ಯ ಟೌನ್‍ಹಾಲ್ ಎದುರಿಗೆ ಟವಲು ಹಾಕಿ ಕೂತೆದ್ದು ಹೋಗಿ ದೆಹಲಿ ಗದ್ದುಗೆಯನ್ನು ಏರಿಲ್ಲ ಮತ್ತು ಈ ದೇಶದ ಯಾವ ಪ್ರಧಾನಿಯೂ ಸುಮ್ಮನೆ ಗದ್ದುಗೆ ಹತ್ತಿ ಕೂತಿಲ್ಲ ಹಾಗೆ ಕೂರಲು ಈ ದೇಶದ ಸೋಕಾಲ್ಡ್ ಗಿರಾಕಿಗಳೂ, ಇನ್ನಿತರರು ಸುಮ್ಮನೇ ಬಿಡುವುದೂ ಇಲ್ಲ ಎನ್ನುವುದು ನಿಮಗೂ ಗೊತ್ತಿಲ್ಲದ್ದೇನಲ್ಲ. 
ಒಬ್ಬಾತ ಇವತ್ತು ಎಷ್ಟೆ ಶ್ರೀಮಂತನಿರಲಿ, ಬಡವನಿರಲಿ ಸುಮ್ಮನೆ ಗದ್ದುಗೆ ಹತ್ತುವ ಚಾನ್ಸೇ ಇಲ್ಲ. ಹಾಗಾವುದೇ ಆದರೆ ಕೋಟ್ಯಾಂತರ ದುಡ್ಡಿರುವವರೆಲ್ಲರೂ ಈ ದೇಶದಲ್ಲಿ ಇನ್ನೇನಿಲ್ಲದಿದ್ದರೂ ನಂ ಒನ್. ಸಿನೇಮಾ ನಟರಾದರೂ ಆಗಬೇಕಿತ್ತು. ಅದೂ ಆಗಲಿಲ್ಲ. ನೆನಪಿರಲಿ ದುಡ್ಡು ಎಲ್ಲದಕ್ಕೂ ಬೇಕು ಆದರೆ ಎಲ್ಲವೂ ಅದೇ ಅಲ್ಲ. ಅದನ್ನು ತೂಗಿಸಿಕೊಂಡು ಅದರೊಂದಿಗಿರುವ ಜನಗಳನ್ನೂ ತನ್ನೊಂದಿಗೆ ಕರೆದೊಯ್ಯುವವ ಮಾತ್ರ ಗದ್ದುಗೆ ಹತ್ತುತ್ತಾನೆ. ಹೊರತಾಗಿ ಒಮ್ಮೆಲೆ ನೆಗೆದು ಕೂತಿರುವುದಿಲ್ಲ. ಹಾಗೆ ನೆಗೆದು ಕೂತಿರುವವರ್ಯಾರೂ ಪ್ರಧಾನಿಯ ಪಟ್ಟದಲ್ಲಿ ದೀರ್ಘ ಕಾಲ ಬಾಳಲೂ ಇಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ.
ಇವತ್ತು ಪ್ರಧಾನಿಯ ಹಲವು ಕಸರತ್ತುಗಳ ಹಿಂದೆ ತಿಂಗಳಿಗೆ ಲಕ್ಷ ರೂ. ಸಂಬಳ ಬಿಟ್ಟು ಬಂದ ಯುವಕರಿದ್ದಾರೆ. ವಿದೇಶದಿಂದ ಬಂದು ಕೂತೆದ್ದು ಕೆಲಸ ಮಾಡುತ್ತಿರುವ ನೌಕರರಿದ್ದಾರೆ. ಸಾಲು ಸಾಲು ಅತಿ ಬುದ್ಧಿವಂತ ಅಧಿಕಾರಿಗಳು ನಿಸ್ಪೃಹರಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮಠದ ಕಾಳಜಿ ಇಲ್ಲದೆ ಕಾಪ್‍ಗಳು ಅಲ್ಲಲ್ಲಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ದೇಶ ಕಾಯುತ್ತಿದ್ದಾರೆ. ಹಾಗೆಯೇ ನೋಟಿನ ರಾಮಾಯಣ ಕೂಡಾ ತಡೆಯುತ್ತಿದ್ದಾರೆ. ಇದರ ಜತೆಗೆ ದಿನಕ್ಕೆ ಕನಿಷ್ಟ ಇಪ್ಪತ್ತರಷ್ಟು ಜನ ದೂ. ವಾ. ಕರೆಮಾಡಿ ಈ ದೇಶದಲ್ಲಾಗುತ್ತಿರುವ ಹರಾಮಿತನಗಳ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ಕೊಡುತ್ತಿರುವ ನಿಷ್ಟಾವಂತ ನಾಗರಿಕರಿದ್ದಾರೆ. ಒಂದೇ ದಿನಕ್ಕೆ ಇನ್ನೂರು ಚಿಲ್ರೆ ಕಾಗದ ಬರೆಯುತ್ತಿರುವ ಅಸಹಾಯಕ ಭಾರತೀಯರಿದ್ದಾರೆ (ಹಿಂದಿನ ಯಾವ ಪ್ರಧಾನಿಯ ಕಾಲದಲ್ಲಿ ಹೀಗೆ ಕಾರ್ಯಾಲಯ, ಕನ್ನಡ ಶಾಲೆಯ ಮಕ್ಕಳ ಬರಹಕ್ಕೂ ಸ್ಪಂದಿಸಿದೆ ಒಮ್ಮೆ ನೆನಪಿಸಿಕೊಳ್ಳಿ) ನಿರಂತರವಾಗಿ ಛೇಂಜ್.ಆರ್ಗ್ ನಲ್ಲಿ ತಮ್ಮ ಅಭಿಪ್ರಾಯ ಮತ್ತು ಸಾರ್ವಜನಿಕ ಅಭಿಪ್ರಾಯ ದಾಖಲಿಸಿ ಈ ದೇಶದ ಹಲವು ದಶಕಗಳಲ್ಲಿ ಬದಲಾಗದ ವ್ಯವಸ್ಥೆಯ ವಿರುದ್ಧ ತಮ್ಮ ಅಭಿಪ್ರಾಯ ಮತ್ತು ಪಾಲಿಸಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ. 
ಇದೆಲ್ಲದಕ್ಕೂ ಮಿಗಿಲಾಗಿ ಏನೂ ಈ ದೇಶದಲ್ಲಿ ಬದಲಾವಣೆನೇ ಬರಲ್ಲ ಎಂದು ನಂಬಿಕೂತಿದ್ದು, ಬಂದಿದ್ದು ಬರಲಿ ಎಂದು ನಿರಾಶರಾಗಿ ಕೈ ಹೊತ್ತಿದ್ದವರೂ, ಇವತ್ತು ಏನಾದರೊಂದು ಆದೀತು ಎಂದು ಮೈ ಕೊಡವಿ ಎದ್ದು ನಿಂತಿದ್ದಾರೆ. ತೀರ ಭಾವುಕ ಮನಸ್ಸುಗಳು ಇಂತವನೊಬ್ಬ ನಮ್ಮ ದೇಶ ಉಳಿಸಕ್ಕೆ ಬಂದಿದಾನೆ ಎನ್ನುವಂತೆ ನಂಬಿ ತಮ್ಮ ಬದುಕು ಮರು ದೃಢೀಕರಣಗೊಳಿಸಿಕೊಳ್ಳುತ್ತಿದ್ದಾರೆ. ಇವರೆಲ್ಲ ಹಾಗೆ ನಂಬಿಕೊಂಡು ಮೋದಿಯ ಮಾತಿಗೆ ಕೈ ಎತ್ತಲು, ಮನತುಂಬಿ ಚಪ್ಪಾಳೆ ತಟ್ಟಲು ಏನು ಅವರ ಬಂಧುಗಳಾ..? ಊರ ಕಡೆಗಳಲ್ಲಿ ಎಷ್ಟೊ ಜನಕ್ಕೆ ಪ್ರಧಾನಿಯ ಮಾತು ತಲುಪಿಲ್ಲವಾದರೂ ಅವರ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಇದಲ್ಲವಾ ಬದಲಾವಣೆ ಹಾಗಿದ್ದರೆ..? ಇವರೆಲ್ಲಾ ಭಕ್ತರಾ.. ಅಥವಾ ಭಕ್ತರೂ ಮುಠ್ಠಾಳರಾ..? ಅವರಿಗೇನೂ ಬುದ್ಧಿ ಇಲ್ಲದೆ ಮೋದಿಯನ್ನು ಬೆಂಬಲಿಸುತ್ತಿದ್ದಾರಾ..? 
ಒಪ್ಪುತ್ತೆನೆ ಭಕ್ತ ಗಣಗಳ ಆವೇಶ ಒಂದಿಷ್ಠು ಹೆಚ್ಚಾಗಿ ಖುಶಿಯಿಂದ ಹುಯಿಲೆಬ್ಬಿಸಿರಬಹುದು. ಅದರೇನಾಯಿತು..? ಹಿಂದೊಮ್ಮೆ ದೊಡ್ಡ ಮರವೊಂದು ಉರುಳಿದಾಗ ಭೂಮಿ ಕಂಪಿಸುವುದು ಸಹಜ ಎಂದು ಹೇಳಿದವರಾರು ಸ್ವಾಮಿ..?  ಆದರೆ ಈಗ ನನಗೆ ಯಾವ ಭೂಕಂಪವಾಗಿದ್ದೂ ಕಂಪಿಸಿದ್ದೂ ಗೊತ್ತಿಲ್ಲ ಅಕಸ್ಮಾತ ಆದರೂ, ಮತ್ತೆ ಕಂಪಿಸಿದರೆ ನೀವೂ ಕೂಡಾ ಈಗ ತಡೆದುಕೊಳ್ಳಬೇಕಲ್ಲವಾ..? ಅದು ಬಿಟ್ಟು ಅವರೆಲ್ಲಾ ಭಕ್ತರು ಎಂದಾದ್ರೆ ನೀವೇನು...? ಸಧ್ಯ ಇವರೆಲ್ಲಾ ಇತ್ತಿಚಿನ ದಶಕದಲ್ಲಿ ಹುಟ್ಟಿಕೊಂಡವರು. ಆದರೆ ಹಾಗೆ ಭಕ್ತರಾಗಬಹುದು, ಫ್ಯಾನ್ ಫಾಲೋವಿಂಗ್ ಟ್ರೆಂಡ್ ಏನು ಎನ್ನುವುದನ್ನು ಕಳೆದ ಆರು ದಶಕಗಳಲ್ಲಿ ಇತರರು ಮಾಡಿ ಕಲಿಸಿದ್ದನ್ನೆ, ಮಾಡಿದ್ದನ್ನೆ ಈಗ ಅವರ ಬೆಂಬಲಿಗರು ಮಾಡುತ್ತಿದ್ದಾರೆ ಈಗ ಯಾರನ್ನು ಭಕ್ತರು ಎನ್ನೋಣ..? ಹಾಗಾದರೆ.. ? ಗ್ಲೋಬಲೈಜೆಶನ್ ಜಮಾನದಲ್ಲಿ ಯಾವನೂ ಕಣ್ಣು ಮುಚ್ಚಿ ಹಿಂಬಾಲಿಸುವುದಿಲ್ಲ. ನಾಯಕನಾಗಬೇಕಾದವನು ಕೋಟ್ಯಾಂತರ ಕಣ್ಣಿನ ನಿಗರಾಣಿಯಲ್ಲಿರುತ್ತಾನೆ ಹೊರತು ಭಕ್ತರೇನೂ ಅವನನ್ನು ರಕ್ಷಿಸುತ್ತಿರುವುದಿಲ್ಲ. ಅವನ ನಿಲುವನ್ನು ನಂಬಿ ಭಕ್ತರು ಹಿಂಬಾಲಿಸುತ್ತಾರೆ ಹೊರತಾಗಿ ಕಣ್ಮುಚ್ಚಿ ಜೈಕಾರ ಹಾಕಲು ಯಾವ ಭಕ್ತನೂ ಮುಠ್ಠಾಳನಲ್ಲ. ಆ ಕಾಲ ಯಾವತ್ತೋ ಮುಗಿದಿದೆ.

Sunday, December 18, 2016

ಚೀನಿಯರ ಹೊಸ ಅವಿಷ್ಕಾರ.. ಬ್ರಹ್ಮಪುತ್ರ ಎಂಬ ವರುಣಾಸ್ತ್ರ..!


image5

(ನಮ್ಮಲ್ಲಿ ಯಾವೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಅಭ್ಯಾಸವೇ ಇದ್ದಂತಿಲ್ಲ. ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಹಿಮಾಚಲ, ಅರುಣಾಚಲ, ಬಾಂಗ್ಲಾದೇಶ ಮತ್ತು ಅಸ್ಸಾಂ ವಲಯದಲ್ಲಿ ನಡೆದ ಆಕಸ್ಮಿಕ ಪ್ರವಾಹದ ಹಿನ್ನೆಲೆಯನ್ನು ಇಲ್ಲಿವರೆಗೂ ಕೆಲವೇ ಕೆಲವು ತಜ್ಞರು ಅದೊಂದು ವ್ಯವಸ್ಥಿತ ಸ್ಯಾಂಪಲ್ ದಾಳಿ ಎಂದು ಕಂಡುಕೊಂಡಿದ್ದಾರೆ. ಚುಕ್ಕೆಗೆ ಚುಕ್ಕೆ ಸರಿಯಾಗಿ ಸೇರಿಸಿದ್ದರೆ ಆಗಲೇ ವೃತ್ತ ಸಿದ್ಧವಾಗುತ್ತಿತ್ತು. ಅದಾಗಲೇ ಇಲ್ಲ. ಇಂತಹದ್ದೊಂದು ಕೃತಕ ಪ್ರಾಕೃತಿಕ ವಿಕೋಪ ಸೃಷ್ಠಿಸಿ ಅದಕ್ಕೆ ಪ್ರತಿಕ್ರಿಯೆ ತಿಳಿಯುವುದಷ್ಟೆ ಆಗ ಚೀನಾದ ಉದ್ದೇಶವಾಗಿತ್ತು. ಈಗ ಅದರ ನಿಜವಾದ `ವಾಟರ್‍ವಾರ್ ಸ್ಟ್ರಾಟಜಿ’ ಮುನ್ನೆಲೆಗೆ ಬರುತ್ತಿದೆ. ಅತಿ ಬುದ್ಧಿವಂತಿಕೆಯ ಈ ಯೋಜನೆ ಭವಿಷ್ಯದಲ್ಲಿ ಅನಾಹುತಕಾರಿಯಾದ ಆಯುಧವಾಗಿ ಬಳಕೆಯಾಗಲಿದೆ. ಅದೇ `ವಾಟರ್ ವಾರ್’ ಅರ್ಥಾತ್ ವರುಣಾಸ್ತ್ರ. ಇದನ್ನು ತಡೆಯಲು ನಮ್ಮ ಪ್ರಧಾನಿ ಮೋದಿ ಉಸಿರುಕಟ್ಟಿ ಕಾದುತ್ತಿದ್ದರೆ, ಇದಾವುದರ ಅರಿವೂ ಇಲ್ಲದ ಎಬುಜೀಗಳು ಸಾಕ್ಷಿಗಾಗಿ ತೂಬು ಕಿತ್ತುಕೊಳ್ಳುತ್ತಿದ್ದಾರೆ.)
ವಿಶ್ವದ ಅತಿ ದೊಡ್ಡ ಕೊಳ್ಳ ಯಾರ್ಲುಂಗ್ ಟ್ಯಾಂಗ್ಬೊವನ್ನು ಈ ನದಿ ಸೃಷ್ಟಿಸಿದೆ. ವಿಶ್ವದ ಅತಿದೊಡ್ಡ ನದಿ ಮುಖಜ ಭೂಮಿಯೂ (ಡೆಲ್ಟಾ ಗಂಗಾ) ಇದೇ ನದಿಯ ಉತ್ಪನ್ನ. ವಿಶ್ವದಲ್ಲೇ ಅತ್ಯಂತ ಎತ್ತರ( ನಾಲ್ಕೂವರೆ ಸಾವಿರ ಅಡಿ)ದಲ್ಲಿ ಹರಿಯುವ ನದಿ ಭವಿಷ್ಯತ್ತಿನಲ್ಲಿ ಚೀನಾದ ಪಾಲಿಗೆ ಅತಿ ದೊಡ್ಡ ನೈಸರ್ಗಿಕ ಅಸ್ತ್ರವಾಗಲಿದೆ. ಅದಕ್ಕಾಗಿ ಈಗ ಅಖಾಡ ಶುರುವಾಗುತ್ತಿದೆ. ಪರೀಕ್ಷಾರ್ಥ ಪ್ರಯೋಗಗಳೂ ಯಶಸ್ವಿಯಾಗೇ ಜರುಗಿವೆ. ಇದೆಲ್ಲದಕ್ಕೂ ಮೂಲ ಹಿಂದೊಮ್ಮೆ ನಾವು ಟಿಬೆಟ್ ಉಳಿಸಿಕೊಳ್ಳದೆ ಹೋದದ್ದು ಮತ್ತು ನದಿ, ನೀರು ಸಾಗರಗಳನ್ನು ಹೇಗೆ ಜತನ ಮಾಡಿಕೊಳ್ಳಬೇಕೆಂಬುವುದನ್ನು ಕಳೆದ ಆರೂವರೆ ದಶಕದಿಂದಲೂ ನಿರ್ಲಕ್ಷಿಸಿದ ಕಾರಣ ಅದಕ್ಕೆ ಬೆಲೆ ತೆರುತ್ತಿದೆ ಭಾರತ. ಬ್ರಹ್ಮಾಂಡ ನದಿಯಾದ ಚೀನಾದ ಪಾಲಿಗೆ ಯಾರ್ಲುಂಗ್ ಟಾಂಗ್ಬೊ, ಟಿಬೇಟಿಯನ್ನರಿಗೆ ಡಿಹಾಂಗ್, ಅರುಣಾಚಲದಲ್ಲಿ ಸಿಯಾಂಗ್, ಬಾಂಗ್ಲಾದೇಶಿಯರಿಗೆ ಜಮುನಾ ಮತ್ತು ನಮಗೆ ಬ್ರಹ್ಮಪುತ್ರ. ಬರಲಿರುವ ವರ್ಷಗಳಲ್ಲಿ ಈ ಬರಹ ಸತ್ಯವಾಗಲಿದ್ದು ಸಾಕ್ಷಿಯಾಗಲು ನಾವಾರೂ ಇರುವುದಿಲ್ಲ ಎನ್ನುವುದಷ್ಟೆ ಸದ್ಯದ ಕಟುವಾಸ್ತವ.
ಹೀಗೆ ಸಾಲುಸಾಲು ವಿಶೇಷಗಳೊಂದಿಗೆ ಬೆಳೆದಿರುವ ನದಿಯ ಹರಿವು ಎಷ್ಟು ದೊಡ್ಡದೋ, ಎರಡು ದೇಶಗಳ ಮಧ್ಯೆ ಅತಿ ದೊಡ್ಡ ತಲೆ ನೋವಾಗಿ ನಿಲ್ಲಲಿದೆಯಾ ಎನ್ನುವುದೂ ಅಷ್ಟೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಲಿದೆ. ಕಾರಣ ಬ್ರಹ್ಮಪುತ್ರ ನದಿಗೆ ಅಂತರಾಷ್ಟ್ರೀಯವಾಗಿ ಯಾವುದೇ ಕಾನೂನಾತ್ಮಕ ಒಪ್ಪಂದಗಳಿಲ್ಲದಿರುವುದೂ ಸೇರಿದಂತೆ ಅದನ್ನು ತನ್ನ ಸುಪರ್ದಿಗಿಟ್ಟುಕೊಳ್ಳಲು ಹೊರಟಿರುವ ಚೀನಾ ಯಾವ ಒತ್ತಡ ಮತ್ತು ಕಾನೂನುಗಳನ್ನು ಕೇರ್ ಮಾಡದೆ ಮುನ್ನುಗ್ಗುವ ಛಾತಿಯ ದೇಶ ಎನ್ನುವುದೂ ಒಂದು. ನಮ್ಮ ದುರದೃಷ್ಟಕ್ಕೆ ಕಂಡಕಂಡಲ್ಲೆಲ್ಲಾ ಉದಾರವಾಗಿ ಈ ದೇಶ ಮತ್ತು ಇದರ ಪ್ರಾಕೃತಿಕ ಸಂಪತ್ತನ್ನು ಹಿಂದಿನವರು ಹಂಚಿಟ್ಟಿದ್ದು ಮತ್ತದನ್ನು ವಿದೇಶಿಗರು ವ್ಯವಸ್ಥಿತವಾಗಿ ದಾಖಲೆಯ ಮೂಲಕ ಸುಭದ್ರಪಡಿಸಿಕೊಂಡಿದ್ದೂ ನಮ್ಮ ಕರ್ಮ. ಕೈಯ್ಯಲ್ಲಿರುವುದೀಗ ಬರೀ ಚಿಪ್ಪು. ಇಂತಹ ಪರಿಸ್ಥಿತಿಯಿಂದ ಭವಿಷ್ಯವನ್ನು ಸುಭಧ್ರಗೊಳಿಸುವತ್ತ ನಮ್ಮ ಮೋದಿಯಂತಹ ಜಗಮಾನ್ಯ ಪ್ರಧಾನಿ ಹೋರಾಡುತ್ತಿದ್ದರೆ, ಇತ್ತ ಅತಿರೇಕಿ ಬುದ್ಧಿಜೀವಿಗಳು ಸಾಕ್ಷಿ ಕೊಡು, ದಾಖಲೆ ತೋರಿಸು ಎಂದು ಲಬೋಲಬೋ ಬಡಿದುಕೊಳ್ಳುತ್ತಿದ್ದಾರೆ. ದೇಶದ್ರೋಹವಂತೂ ಇವರ ಕರ್ಮವೇ ಆಗಿಹೋಗಿದೆ. ಆತ್ಮಘಾತಕತನಕ್ಕೂ ಒಂದು ಮಿತಿ ಬೇಡವೆ. ಇರಲಿ ವಿಷಯಕ್ಕೆ ಬರೋಣ.
ಇವತ್ತು ಪ್ರತಿ ವರ್ಷ ಎರಡು ಲಕ್ಷ ಜನರನ್ನು ನಿರಾಶ್ರಿತರನ್ನಾಗಿಸುತ್ತಿರುವ ಬ್ರಹ್ಮಪುತ್ರ ಬಗ್ಗೆ ಅರಿತುಕೊಳ್ಳಹೋದರೆ ಸುಲಭದಲ್ಲಿ ಒಂದು ತೆಕ್ಕೆಗೆ ನಿಲುಕುವ ಸಬ್ಜೆಕ್ಟೇ ಅಲ್ಲ. ಏನಿದ್ದರೂ ಒಂದು ಕಡೆಯಿಂದ ಅದರ ದಂಡೆಗುಂಟ ಎಕ್ಕ ಎಬ್ಬಿದಂತೆ ಕಾಲಾಡಿಸಿಕೊಂಡು ಹೋದಲ್ಲಿ ಮಾತ್ರ ಒಂಚೂರು ಅರಿವಾದೀತು. ಅದಕ್ಕಾಗೆ ಇವತ್ತು ಬ್ರಹ್ಮಪುತ್ರ ಸರಿ ಸುಮಾರು ನಾಲ್ಕು ದೇಶಗಳ ಜೀವನದಿಯಾಗಿ ಹರಿಯುತ್ತಿದ್ದರೂ ತನ್ನ ಗುಟ್ಟುಬಿಟ್ಟು ಕೊಡದೆ ಗುಟುರು ಹಾಕುತ್ತಿದೆ. ಹೀಗೆ ಒಂದು ತುದಿಯಿಂದ ಇನ್ನೊಂದು ಕಡೆಯಲ್ಲಿ ಹರಿಯಲು ಆರಂಭಿಸಿ ಅರ್ಧ ದಾರಿಯಾದ ಮೇಲೆ ಅದೇ ರಸ್ತೆಯಲ್ಲಿ ತಿರುವು ತೆಗೆದುಕೊಂಡು ಉಲ್ಟಾ ಪ್ರಯಾಣ ಬೆಳೆಸಿದ ನದಿಯ ಇನ್ನೊಂದು ಉದಾಹರಣೆ ಭೂಮಿಯ ಮೇಲೆ ಇಲ್ಲ. ತನ್ನದೆ ದಿಕ್ಕಿನ ಕಡೆಗೆ ತೆಗೆದುಕೊಳ್ಳುವ ತಿರುವನ್ನು ಇವತ್ತು ಜಾಗತಿಕವಾಗಿ `ಗ್ರೇಟ್ ಬೆಂಡ್’ ಎಂದು ಗುರುತಿಸುತ್ತಾರೆ.
ಇಂತಹ ನೈಸರ್ಗಿಕ ವೈಚಿತ್ರ್ಯವನ್ನೇ ಚೀನಾ ತನ್ನ ಆಯುಧವನ್ನಾಗಿ ಮಾಡಿಕೊಳ್ಳತೊಡಗಿದೆ. ಭಾರತ ಬಹ್ವಂಶ ಜನರಿಗೆ ತಿಳಿಯದಿರುವ ಒಂದು ವೈಜ್ಞಾನಿಕ ಸತ್ಯವೇನೆಂದರೆ ಕಳೆದ ಒಂದು ದಶಕದ ಅವಧಿಯಲ್ಲಿ ಆದ ಮೇಘ ಸ್ಫೋಟಗಳು, ಪ್ರವಾಹಗಳು, ಇದ್ದಕ್ಕಿದ್ದಂತೆ ನೆರೆಯುಕ್ಕಿ ಹರಿದಿರುವುದು ಇವೆಲ್ಲಾ ಮಳೆಯಿಂದಾಗಿ ಆಗಿವೆ ಎನ್ನುವುದು ಅಪ್ಪಟ ಸುಳ್ಳು. 2000 ದಿಂದ 2016 ರವರೆಗಿನ ಅಸ್ಸಾಂ, ಅರುಣಾಚಲ, ಪಶ್ಚಿಮ ಬಂಗಾಳ ಮತ್ತು ಇತರ ಈಶಾನ್ಯ ರಾಜ್ಯದಲ್ಲಿ ಎದ್ದ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಅಂದಾಜು 20 ಸಾವಿರಕ್ಕೂ ಅಧಿಕ. ದಿಕ್ಕೆಟ್ಟವರ ಸಂಖ್ಯೆ ಅನಾಮತ್ತು ಎಂಟು ಲಕ್ಷ. ನೀರುಪಾಲಾದ ಕಾಡು ಪ್ರಾಣಿಗಳ ಸಂಖ್ಯೆ ಲೆಕ್ಕಕ್ಕೆ ಸಿಕ್ಕಿಲ್ಲ. ವಿಚಿತ್ರವೆಂದರೆ ಇಲ್ಲೆಲ್ಲೂ ತೀರ ಎನ್ನುವಂತಹ ಇಷ್ಟು ನೀರು ಒಟ್ಟಾರೆಯಾಗಿ ಮುಗಿಲು ಹರಿದುಕೊಂಡು ಬಿದ್ದಿರಬಹುದಾದಂತಹ ಮಳೆಯೇ ಆಗಿಲ್ಲ. ಆದರೆ ನೂರಿನ್ನೂರು ಮಿ.ಮಿ. ಮಳೆಯಾದಾಗಲೂ ನೆರೆ ಉಕ್ಕಿ ಬಿದ್ದಿದೆ. ವಾಸ್ತವವಾಗಿ ಇಂತಹ ಪುಟಗೋಸಿ ಮಳೆಗೆ ಹಿಮಾಲಯದ ಕೊಳ್ಳಗಳಲ್ಲಿ ಆ ಪರಿಯ ಬೃಹದಾಕಾರದ ಅಲೆಗಳುಕ್ಕಿ ಮನೆ ಮಠ ಮುಳುಗಿಸಲಾರವು ಏನಿದ್ದರೂ ಗುಡ್ಡ ಕುಸಿತಕ್ಕೆ ಕಾರಣವಾಗಬಹುದೇ ವಿನಃ ತೀರಾ ಒಮ್ಮೆಲೆ ನೂರು ಅಡಿಗಳಷ್ಟು ನೀರು ಏರಲು ಅಲ್ಲಿ ಬಿದ್ದಿರಬಹುದಾದ ಮಳೆಯ ಪ್ರಮಾಣದ ಕಾರಣಕ್ಕೆ ಸಾಧ್ಯವೇ ಇಲ್ಲ. ಹಾಗಿದ್ದರೂ ಈ ಅಚಾನಕ್ ಪ್ರವಾಹ ಹೇಗೆ ಬರುತ್ತಲೇ ಇದೆ ?
ಅಸಲಿಗೆ ಮಳೆ ಬೀಳುವ ಕೊಳ್ಳಗಳ ಪಾತ್ರದಿಂದ ಕೆಳಭಾಗಕ್ಕೆ ನೀರು ಸಂಗ್ರಹವಾಗುತ್ತಾ ಸಾಗಿ ಅಲ್ಲಿ ನೆರೆ ಉಕ್ಕಬೇಕು. ಹಾಗಾದರೆ ಮಳೆ ಶುರುವಾದ ಅರ್ಧದಿನದಲ್ಲೇ ಅದೆಲ್ಲಿಂದ ಆಪಾಟಿ ನೀರು ಗಡಿರಾಜ್ಯಗಳ ನದಿ ಪಾತ್ರ ಭೂಮಿಯಲ್ಲಿ ಉಕ್ಕೇರುತ್ತಿದೆ. ಇದೇನಿದು ಈ ಪ್ರದೇಶದಲ್ಲೆಲ್ಲಾ ಇದ್ದಕ್ಕಿದಂತೆ ನೆರೆಯೇರುತ್ತದೆ. ಜನರೂ ಚೆಕ್ಕುಚೆದುರಾಗಿ ಹೋಗುತ್ತಾರೆ. ಆದರೆ ಆತ್ತಲಿಂದ ಚೀನಾ ಮಾಡಿದ ಆಣೆಕಟ್ಟೆಯ ಪ್ರಮಾದ ಇಂತಹದ್ದೊಂದು ಪ್ರಮಾದಕ್ಕೆ ಕಾರಣವಾಗಿದೆ ಎನ್ನುವುದನ್ನು ಜಾಗತಿಕ ಎಲ್ಲಾ ವೈಜ್ಞಾನಿಕ ರಿಪೋರ್ಟುಗಳೂ ಸಾಬೀತು ಮಾಡಿವೆ. ಅಷ್ಟೇ ಏಕೆ ..? ಆಗೀನ ಉಪಗ್ರಹದ ಚಿತ್ರಗಳು ಮತ್ತು ಇತರೆ ಮೂಲದ ಪ್ರಕಾರ ಯಾವ್ಯಾವ ಆಣೆಕಟ್ಟೆಗಳನ್ನು ಚೀನಾ ಬಾಯ್ಬಿಡಿಸಿ ನೀರು ಹರಿಸಿ ಕೂತಿದೆ ಎನ್ನುವುದಕ್ಕೂ ಪುರಾವೆಗಳಿವೆ. ಆದರೆ ಅದೆಲ್ಲಾ ಗೊತ್ತಾಗುವ ಹೊತ್ತಿಗಾಗಲೇ ಭಾರತದಲ್ಲಿ ಲಕ್ಷಾಂತರ ಜನರ ಮನೆ ಮಠ ನಾಶವಾಗಿ ಚೆಕ್ಕು ಚೆದುರಾಗಿ ಹೋಗಿತ್ತು.
ಇನ್ನು ಅತೀ ಮಳೆಯ ಕಾರಣ ಹಾಗು ಸರಿಯಾಗಿ ಅದೇ ಹೊತ್ತಿಗೆ ಎಲ್ಲಿ ಮಳೆಯಾದೀತು ಎನ್ನುವುದನ್ನು ಚೀನಿಯರು ಯಾವಾಗಲೂ ನಿಖರವಾಗಿ ಗುರುತಿಸುತ್ತಾರೆ. ಹಾಗಾಗಿ ತುಂಬ ನಿಖರವಾದ ಮಾಹಿತಿಯ ಆಧಾರದ ಮೇಲೆ ಸರಿಯಾಗಿ ಪ್ರವಾಹವನ್ನು ಸೃಷ್ಟಿಸಿ ಇಂಥಾ ರಾಷ್ಟ್ರೀಯ ವಿಕೋಪ ಎದುರಾದಾಗ ಭಾರತ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಅದು ಕುತೂಹಲದಿಂದ ಕಾಯುತ್ತಿತ್ತು. ಕಳೆದ ಹದಿನಾರು ವರ್ಷದ ರಿಪೋರ್ಟ್ ನೋಡಿ. ಅಲ್ಲಿ ಪ್ರವಾಹ ಉಂಟಾಗಿ ಹರಿದ ಸುಮಾರು ಒಂದೂ ಚಿಲ್ರೆ ಲಕ್ಷ ಟಿ.ಎಮ್.ಸಿ ನೀರಿಗೂ ನೂರು ಚಿಲ್ರೆ ಸೆ.ಮೀ. ಬೀಳುವ ಮಳೆಗೂ ತಾಳಮೇಳವೇ ಇಲ್ಲ. ಒಂದರ್ಥದಲ್ಲಿ ಇದು ಚೀನಿಯರ ಟ್ರೈಯಲ್ ಆಂಡ್ ಎರರ್. ಯುದ್ಧಕ್ಕೆ ಮೊದಲಿನ ಮಾಕಪ್.
ಅಲ್ಲಿಗೆ ಚೀನಿಯರಿಗೆ ಬಂದೂಕು, ಮದ್ದು ಗುಂಡುಗಳಿಗಿಂತ ಬಲಿಷ್ಟವಾದ ನೈಸರ್ಗಿಕ ಆಯುಧ ಕೈಗೆ ಸಿಕ್ಕಿ ಹೋಗಿದೆ. ಅಲ್ಲಿಂದ ಶುರುವಾಗಿದ್ದೇ ಸರಣಿ ಅಣೆಕಟ್ಟೆಯ ಕಾಮಗಾರಿ. ನೆನಪಿರಲಿ ಜಗತ್ತಿನ ಶೇ.50 ಕ್ಕಿಂತ ಹೆಚ್ಚು ಕಾಮಗಾರಿ ಇವತ್ತು ನಡೆಯುತ್ತಿರುವುದು ಚೀನಾದಲ್ಲೇ. ಎಂಬತ್ತು ಸಾವಿರಕ್ಕೂ ಮಿಕ್ಕಿ ಆಣೆಕಟ್ಟೆ, ಸ್ಯಾಡಲ್‍ಡ್ಯಾಂಗಳು, ಬಾಂದಾರಗಳು ಮತ್ತು ಸಪೋರ್ಟಿಂಗ್ ವಾಟರ್‍ವಾಲ್‍ಗಳ ಸರಣಿ ಹೊಂದಿರುವ ಏಕೈಕ ರಾಷ್ಟ್ರವೆಂದರೆ ಚೀನಾ. ಹಾಗಾಗಿ ಸುತ್ತ ಮುತ್ತಲಿನ ದೇಶಗಳೇನಾದರೂ ಬಾಲ ಬಿಚ್ಚಿದರೆ ಬರೀ ತನ್ನ ಸರಣಿ ಗೇಟುಗಳನ್ನು ತೆರೆದಿಟ್ಟೆ ಇವತ್ತು ಯುದ್ಧ ಗೆದ್ದು ಬಿಡುವ ರಣೋತ್ಸಾಹದಲ್ಲಿದೆ ಚೀನಾ.
ಇಷ್ಟೆಲ್ಲಾ ಆ ರಾಷ್ಟ್ರದಿಂದ ನಿರಂತರ ಪರೋಕ್ಷ ಮತ್ತು ಸಾಮೂಹಿಕ ಪ್ರಹಾರ ನಡೆಯುತ್ತಿದ್ದರೂ ನಮ್ಮ ದೇಶದಲ್ಲಿ ಇವತ್ತು ಅವರ ನಿಲುವಿನ ಬಗ್ಗೆ ಕುಲುಕುಲು ಎನ್ನುವ, ಮರ್ಜಿ ಕಾಯುವ ಈ ನೆಲಕ್ಕೆ ದ್ರೋಹ ಬಗೆಯುತ್ತಿರುವ ಕಮ್ಮಿನಿಷ್ಠೆಯ ಬುದ್ಧಿ ಜೀವಿಗಳಿಗೇನೂ ಬರವಿಲ್ಲ. ಮಾತೆತ್ತಿದರೆ ಚೇಗೋವೆರ.. ಲೆನಿನ್ನು.. ಕಾರ್ಲು ಎನ್ನುವವರು ನಿಶ್ಚಿತವಾಗಿಯೂ ಇದೇ ನೆಲದಿಂದ ಎದ್ದು ಹೋಗಿ ಜಾಗತಿಕವಾಗಿ ಈ ದೇಶದ ಸನಾತನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ವಿವೇಕಾನಂದರ ಬಗ್ಗೆ ಓದಿಯೇ ಇರುವುದಿಲ್ಲ. ಅಹಿಂಸೆ ಮತ್ತು ಸಮಾನತೆ ಬೋಧಿಸಿದ ಗಾಂಧೀಜಿಯವರ ಸಮಾನತೆ ಎಂದರೆ ಅದೇನು ಎನ್ನುವರೇ ಜಾಸ್ತಿ.
ನೆನಪಿರಲಿ ಚೀನಾ ಬ್ರಹ್ಮಾಂಡ ಗಾತ್ರದ ನಾಲ್ಕು ಸುರಂಗ ನಿರ್ಮಿಸುತ್ತಿದೆಯಲ್ಲ ಅದನ್ನು ಸಹಜ ಮಾನವ ಶಕ್ತಿಯಿಂದ ಅಸಾಧ್ಯವಾದ ಕಾರ್ಯ. ಆದರೂ ನಾಲ್ಕು ಸಾವಿರ ಅಡಿ ಎತ್ತರದಲ್ಲಿ ಅದು ಕೊರೆಯುತ್ತಿರುವ ಸುರಂಗಕ್ಕಾಗಿ ಅನಾಹುತಕಾರಿ ವಿಸ್ಫೋಟನೆಯನ್ನು ಬಳಸಲಿದೆ. ಇದರಿಂದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಆಗುವ ಭೂಮಿಯ ವೈಪರಿತ್ಯ ಮತ್ತು ದಖನ್ ಶ್ರೇಣಿಯ ಪ್ಲೇಟುಗಳ ಅಲುಗಾಡುವಿಕೆಯಿಂದ ಶಾಶ್ವತ ಅಸ್ಥಿರತೆ ಉಂಟಾಗುತ್ತದೆ. ಇಷ್ಟಾಗಿಯೂ ನಾವು ಊಹಿಸಿಕೊಳ್ಳಲೇ ಆಗದ ಮೊತ್ತದ ಪ್ರಾಜೆಕ್ಟು ಕೈಗೂಡಿದ ನಂತರ ಚೀನಾ ಬಯಸಲಿ ಬೀಡಲಿ ನೈಸರ್ಗಿಕ ಅಪಘಾತ ತಪ್ಪಿದ್ದಲ್ಲ.
ಕಾರಣ ಯಾವ ಭಾಗದಲ್ಲಿ ಇಂತಹ ಕಾಮಗಾರಿ ಕೈಗೊಳ್ಳಲೇಬಾರದು ಎಂದಿದೆಯೋ ಅದೇ ಜಾಗದಲ್ಲಿ ಸುರಂಗ ತೋಡುತ್ತಿದೆ ಚೀನಾ. ಅಲ್ಲಿ ಗುರುತ್ವ ಬಲದಿಂದ ನೀರು ಹರಿಯುವ ರಭಸ ಮತ್ತು ಮೊದಲೇ ಸಡಿಲಗೊಂಡಿರುವ ಬುಡದ ಪರಿಣಾಮ ಒಂದು ಭಾಗದಲ್ಲಿ ಒಳಾವರಣ ಕುಸಿತದೊಂದಿಗೆ ಬ್ಲಾಕ್ ಆಗಿದ್ದೇ ಆದರೆ, ತನ್ನ ಅಣೆಕಟ್ಟೆ ಮತ್ತು ದಕ್ಷಿಣ ಚೀನಾ ಪ್ರಾಂತ್ಯದ ಭಾಗಗಳನ್ನು ಉಳಿಸಿಕೊಳ್ಳಲು ಗೇಟುಗಳನ್ನು ತೆರೆಯುವುದಂತೂ ಇದ್ದೇ ಇದೆ. ಅದಕ್ಕೂ ಮೊದಲೇ ಲೆಕ್ಕಕ್ಕೆ ನಿಲುಕದ ಪ್ರಮಾಣದ ನೀರು `ಗ್ರೇಟ್‍ಬೆಂಡ್’ ನ ಬಲಭಾಗಕ್ಕೆ ನುಗ್ಗಿ ಬರುತ್ತದೆ. ಆ ರಭಸ ಮತ್ತು ವೇಗವನ್ನು ತಡೆಯುವ ಶಕ್ತಿ ಮತ್ತು ಯುಕ್ತಿ ಯಾವ ತಂತ್ರಜ್ಞಾನಕ್ಕೂ ಸಾಧ್ಯವಿಲ್ಲ. ಇಂತಹ ನೈಸರ್ಗಿಕ ವಿಧಾನವನ್ನೇ ಚೀನಾ ಆಯುಧವನ್ನಾಗಿ ಬಳಸುವಲ್ಲಿಯೂ ಭಯಾನಕ ಯೋಜನೆ ರೂಪಿಸಿಟ್ಟುಕೊಂಡಿದೆ. ಸುರಂಗ ನಿಲುಗಡೆ ಅಥವಾ ನೀರು ಬಿಡುಗಡೆಯ ಹಿಂದೆ ಕೃತಕ ಸೃಷ್ಟಿ ಉಂಟಾಗಿಸಿದ್ದೇ ಆದರೆ ಈಶಾನ್ಯ ಭಾರತವನ್ನು ಹಾಳುಗೆಡವಲು ಚೀನಾಕ್ಕೆ ಅರ್ಧ ದಿನವೂ ಬೇಡ. ಯಾವ ದೈತ್ಯ ಮಿಲಿಟರಿಯಿಂದಲೂ ಮಾಡಲಾಗದಷ್ಟು ಹಾನಿಯನ್ನು ಬರೀ ಪುಗಸಟ್ಟೆ ನೀರು ಮಾಡಿಬಿಡುತ್ತದೆ. ಇದು ನಿಜವಾದ ಅಪಾಯಕಾರಿಯಾದ ತಿರುವು ಹೊರತಾಗಿ ಭಾರತಕ್ಕೆ ನೀರು ಕಡಿಮೆಯಾಗುತ್ತದೆ ಎನ್ನುವುದೆಲ್ಲ ತೀರ ಅವೈಜ್ಞಾನಿಕವಾದ. ಅದೆಷ್ಟೇ ಬಾಂದುಗಳನ್ನು ಚೀನಾ ಬಿಗಿದಿಟ್ಟುಕೊಂಡರೂ ಯಾವ ಲೆಕ್ಕದಲ್ಲೂ ನೀರಿಗೆ ತೀರ ಕೊರತೆ ಕಾಡುವುದೇ ಇಲ್ಲ.
ಕಾರಣ ಭಾರತದೊಳಕ್ಕೆ ಧಾವಿಸುವ ಬ್ರಹ್ಮಪುತ್ರಕ್ಕೆ ಅನಾಮತ್ತಾಗಿ ಇವತ್ತಿಗೂ ಲೆಕ್ಕಕ್ಕೆ ಸಿಗದಷ್ಟು ನೀರನ್ನು ಅದರ ಎಡಬಲದಲ್ಲಿರುವ ನದಿಗಳು ಸೇರಿಸುತ್ತಿವೆ. ಇವೆಲ್ಲ ಭಾರತದಲ್ಲಿಯೇ ಹುಟ್ಟಿ 300-400 ಕಿ.ಮೀ. ದೂರ ಕ್ರಮಿಸುವಂತಹ ಅಗಾಧತೆಯನ್ನೂ ಹೊಂದಿವೆ. ಏನೂ ಇಲ್ಲದಿದ್ದಾಗಲೂ ಭೀಕರ ಬರದ ಪರಿಸ್ಥಿತಿಯಲ್ಲೂ ಕನಿಷ್ಠ 22000 ಟಿ.ಎಮ್.ಸಿ. ನೀರನ್ನು ಸಮುದ್ರಕ್ಕೆ ಸುಖಾ ಸುಮನೆ ಹರಿಸುವ ತಾಕತ್ತು ಬ್ರಹ್ಮಪುತ್ರಕ್ಕಿದೆ. ಅದೆಲ್ಲಾ ಚೀನಾದಿಂದ ಬಂದ ಲೆಕ್ಕಾಚಾರವಲ್ಲ. ಕೇವಲ ಭಾರತದ ಮುಖಜ ಭೂಮಿಯಲ್ಲಿ ಜನರೇಟ್ ಆಗುವ ಜಲ ಬಂಗಾರ.
ಚೀನಾ ಬ್ರಹ್ಮ ಪುತ್ರನಿಂದ ನೀರನ್ನು ಎತ್ತಿ ತನ್ನ ಇನ್ನೊಂದು ತುದಿಗೆ ರವಾನಿಸುವ ಮಾನವ ಮಾತ್ರರಿಂದ ಅಸಾಧ್ಯ ಎನ್ನಿಸುವ ಕೆಲಸಕ್ಕೆ ಕೈ ಹಾಕಿದೆಯಲ್ಲ ಅದರ ಮೂಲ ಇರುವುದೇ ಈ ಗ್ರೇಟ್‍ಬೆಂಡ್ ಭಾಗದಲ್ಲಿ. ಇಲ್ಲಿ ಆಣೆಕಟ್ಟೆ ಕಟ್ಟಿ ನಿಲ್ಲಿಸಿ ತಿರುಗಿಸಲು ಯೋಜಿಸುತ್ತಿರುವ ನೀರೇ ಚೀನಾದ ಜೀವ ನದಿಯಾದ `ಯೆಲ್ಲೊ ರೀವರ್’ ಗೆ ತಲುಪುತ್ತದೆ. ಇಲ್ಲೇ ಚೀನಾ ಯಾರ ಕಣ್ಣಿಗೊ ಬೀಳದ ನಾಲ್ಕು ಸುರಂಗಗಳನ್ನು ನಿರ್ಮಿಸಿ ಅದರೊಳಗಿಂದ ನೀರು ಹರಿಸಿಕೊಳ್ಳಲು ಯೋಜಿಸಿದೆ. ಅದರಲ್ಲಾಗಲೇ ಒಂದು ಸುರಂಗ ಕೈಗೂಡಿದ್ದು ಸುಮಾರು ನಾಲ್ಕು ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪನ್ನ ನಡೆದಿದೆ. ಅಂದರೆ ನಮ್ಮ ಪೂರ್ತಿ ಕರ್ನಾಟಕಕ್ಕೆ ಪೂರೈಸಬಹುದಾದಷ್ಟು. ಅಷ್ಟಕ್ಕೂ ಇದನ್ನು ನದಿ ಎಂದು ಒಪ್ಪದೆ ಅದನ್ನೂ ಒಂದು ಮಿನಿ ಸಾಗರವೇ ಎಂದು ನಂಬಿರುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಉಳಿದದ್ದು ಏನೇ ಇರಲಿ ನದಿಯ ಮೂಲ ಮಾಹಿತಿಗೆ ಬೇರೆ ಪುಟಗಳಿವೆ. ಅದಕ್ಕೂ ಮೊದಲು ನಮಗೆ ಈಗ ಆಗುತ್ತಿರುವ ತಳಮಳವನ್ನು ವಾಸ್ತವದ ಆಧಾರದ ಮೇಲೆ ಪರಿಶೀಲಿಸಿದರೆ ಪ್ರಸ್ತುತ ಮೊದಲ ಒಂದು ದಶಕಗಳ ಕಾಲಾವಧಿಯಲ್ಲಂತೂ ಬ್ರಹ್ಮಪುತ್ರ ಯಾವ ಟೆನ್ಶನ್ನೂ ಕೊಡುವ ಲಕ್ಷಣಗಳಿಲ್ಲ. ಆದರೆ ಚೀನಾದ ಬಗ್ಗೆ ಒಂದು ಮಾತಿದೆ. ಚೀನಾ ಯೋಜನೆ ರೂಪಿಸುವುದೇ ಕಷ್ಟ. ಒಮ್ಮೆ ಯೋಜನೆ ಸಿದ್ಧವಾದರೆ ಅದನ್ನು ಯೋಜನೆಯನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ.
ಇದನ್ನು ಗಮನದಲ್ಲಿರಿಸಿಕೊಂಡು ಚಿಂತಿಸುವಾಗ ಇವತ್ತಲ್ಲ ನಾಳೆ ಚೀನಾ ತನ್ನ ಹಳದಿ ನದಿಗೆ ( ಯೆಲ್ಲೋ ರೀವರ್) ಬ್ರಹ್ಮ ಪುತ್ರದ ಒಂದಷ್ಟು ಹರಿವಿನ ಕಾಲುವೆ ಸೇರಿಸದೇ ಉಳಿಯಲಿಕ್ಕಿಲ್ಲ. ಹಾಗಾದಾಗಲೂ ಭಾರತಕ್ಕೆ ಅಂತಹ ಲುಕ್ಷಾನು ಆಗದಿದ್ದರೂ ಅಕಸ್ಮಾತ ನೀರಿನ ಹರಿವು ಮತ್ತು ಭೂಮುಖದ ವ್ಯತ್ಯಾಸಾತ್ಮಕ ತಲ್ಲಣಗಳ ಕಾರಣ ನದಿಯ ಹರಿವಿನಲ್ಲೇ ಇಳಿಮುಖವಾದಲ್ಲಿ ಆಗ ಭಾರತದೊಳಕ್ಕೆ ಹರಿದು ಬರುವ ಮುನ್ನವೇ ಬ್ರಹ್ಮಪುತ್ರ ಸೊರಗಬಹುದು. ಆದರೆ ಇಲ್ಲಿ ಇನ್ನೊಂದು ಲಾಜಿಕ್ಕಿದೆ. ಕಾರಣ ಭಾರತದೊಳಕ್ಕೆ ಬ್ರಹ್ಮ ಪುತ್ರ ಮೈದುಂಬಿಕೊಳ್ಳುವುದೇ ಭಾರತದಲ್ಲಿಯೇ ಹುಟ್ಟುವ ಇತರ ನದಿಗಳಿಂದ.
ಕಾರಣ ಉತ್ತರ ಚೀನಾ ಸಾಕಷ್ಟು ಅಂತರ್ಜಲ ಕುಸಿತದಿಂದ ತತರಿಸುತ್ತಿದೆ. ಅದಕ್ಕಾಗಿ ಅದು ಹಾಕಿಕೊಂಡಿರುವ ಯೋಜನೆಯೇ ಯೆಲ್ಲೋ ರಿವರ್ ಪ್ರಾಜೆಕ್ಟು. ಇಲ್ಲಿಗೆ ಬ್ರಹ್ಮ ಪುತ್ರದಿಂದ ನೇರವಾಗಿ ಅಸಾಧ್ಯ ಎನ್ನಿಸುವ ಪರ್ವತ ಪ್ರದೇಶದ ಮಗ್ಗುಲನ್ನು ಸೀಳಿ ನೀರನ್ನು ಹಳದಿ ನದಿಯ ಬಾಯಿಗೆ ಕೊಟ್ಟರೆ ಜಗತ್ತಿನಲಿ ನೀರಿನ ವಿಷಯವಾಗಿ ಚೀನಾವನ್ನು ಹಿಡಿಯುವವರಿಲ್ಲವಾಗಿ ಬಿಡುತ್ತಾರೆ. ಸಮಸ್ಯೆ ಇದಷ್ಟೆ ಆದರೆ ಪರವಾಗಿಲ್ಲ. ಹರಿಸಿಕೊಳ್ಳಲಿ ಎನ್ನಬಹುದಿತ್ತು. ಆದರೆ ಅದು ನೀರಿನ ಹರಿವನ್ನು ನಿಯಂತ್ರಿಸುವುದರ ಜತೆಗೆ ಯಾವಾಗೆಂದರೆ ಆವಾಗ ಹಿಡಿದಿಡುವ ನೀರನ್ನು ಗೇಟು ತೆರೆಯುವುದರ ಮೂಲಕ ಇತ್ತ ತಿರುಗಿಸಿದರೆ ಅಸ್ಸಾಂ, ಅರುಣಾಚಲ ಮತ್ತು ಭಾಗಶಃ ಬಂಗ್ಲಾದೇಶ ಹೇಳ ಹೇಸರಿಲ್ಲದಂತೆ ಕಾಣೆಯಾಗುತ್ತವೆ. ನೀರಿನ ಅಗಾಧತೆಯ ಅರಿವಿಲ್ಲದವರಿಗೆ ಇದರ ಚಿತ್ರಣ ಇಂಥ ಬರಹದಲ್ಲಿ ಕೊಡುವುದು ಅಸಾಧ್ಯ. ಆದರೆ ಕೇದಾರನಾಥ ಮತ್ತು ಅಸ್ಸಾಂನಲ್ಲಾದ ಪ್ರವಾಹವನ್ನು ನೆನೆಪಿಸಿಕೊಳ್ಳುವುರಾದರೆ, ಅಂತಹದ್ದೊಂದು ತೀರ ಮರಣ ಸದೃಶ್ಯ ಪ್ರವಾಹವನ್ನು ಸೃಷ್ಟಿಸುವ ತಾಕತ್ತು ಚೀನಾಕ್ಕೆ ಹೀಗೆ ಗ್ರೇಟ್‍ಬೆಂಡ್‍ನಲ್ಲಿ ನೀರು ನಿಲ್ಲಿಸುವ ಮೂಲಕ ಬಂದುಬಿಡುತ್ತದೆ ಮತ್ತು ಆ ನೈಸರ್ಗಿಕ ಆಯುಧದ ಎದುರಿಗೆ ಜಗತ್ತಿನ ಯಾವ ಶಕ್ತಿಯೂ ನಿಲ್ಲಲಾರದು ಎನ್ನುವುದೇ ಭವಿಷ್ಯತ್ತಿನ ಅಘಾತಕಾರಿ ಅಂಶ.

Thursday, December 15, 2016


( ಇವತ್ತು ನಾನೂ ಗಂಡಸಿನಂತೆ ಸಮಾನಳು ಎಂದು ಬೀಗಿದರೂ, ಕನಿಷ್ಟ ಸುಖವಾಗಿ ಒಬ್ಬಳೇ ಕೂತು ಕಾಫಿ ಕುಡಿಯುವಲ್ಲಿಯೂ ಸಾಕಷ್ಟು ಕಿರಿಕ್ಕು ಕಾಣುವ ಹೆಣ್ಣಿಗೆ, ಸ್ವಾತಂತ್ಯ ಎನ್ನುವ ನಿಜ ಸುಖದ ಮರೀಚಿಕೆಯ ಪರದೆ ಯಾವತ್ತು ಸರಿಯುತ್ತದೆ..? ) 
  ಐ.ಟಿ. ರಂಗದ ಸುನೀತಾ.. ಕೈ ತುಂಬ ಸಂಬಳ, ಜವಾಬ್ದಾರಿಯುತ ಹುದ್ದೆ ಅದಕ್ಕೂ ಮಿಗಿಲಾಗಿ ಚೆಂದದ ಸಂಸಾರ ಎಲ್ಲ ಇದ್ದೂ ಎನೋ ಕೊರಗಿನಲ್ಲಿರುತ್ತಾಳೆ. ನನಗೆ ನನ್ನಂತೆ ಇರಲು ಆಗುತ್ತಿಲ್ಲ. ನನಗೆ ಹೆಂಗೆ ಬೇಕೋ ಹಂಗಿರುವಂತಿಲ್ಲ, ನಿಮಗೆ ಗಂಡಸರಿಗಾದರೆ ಏನೂ ಪ್ರಾಬ್ಲಂ ಇರಲ್ಲ. ಬೇಕಾದಲ್ಲಿಗೆ ಹೋಗುತ್ತೀರಿ, ಬೇಕೆಂದಾಗ ಸುತ್ತುತ್ತೀರಿ, ಪಾರ್ಟಿ, ಕ್ಲಬ್ಬು ಇನ್ಯಾವುದೋ ಔಟಿಂಗೂ, ಇದ್ದಕ್ಕಿದ್ದಂತೆ ಎದ್ದು ನಡೆಯಲು ಸ್ನೇಹಿತರ ವಲಯ, ಕೈಗೆ ದಕ್ಕುವ ಗಾಡಿ, ಇದಾವುದೂ ಇಲ್ಲದಿದ್ದರೂ ಇದ್ದ ಸ್ನೇಹಿತರ ಒತ್ತಾಸೆಯ ಬೆಂಬಲ ಗುಂಪಿನಲ್ಲಿ ಗೋವಿಂದ ಎಲ್ಲವೂ. ಆದರೆ ನಮಗೇನಿದೆ..? ಒಂದು ಆಟೊ ಹಿಡಿಯುವಾಗಲು ಅಳುಕು, ಓಲಾ ಕ್ಯಾಬ್ ಕೂಡ ಸೇಫ್ ಹೌದಾ ಅಲ್ವಾ ಎನ್ನುವ ತುಮಲ, ಒಬ್ಬಳೆ ಇದ್ದರಂತೂ ಹತ್ತಲೋ ಬೇಡವೋ ಎನ್ನುವ ದ್ವಂದ್ವ ಹೀಗೆ ಪರಿಸ್ಥಿತಿ ಪ್ರತಿ ಹಂತದಲ್ಲೂ ಎಚ್ಚರಿಕೆ ತೆಗೆದುಕೊಳ್ಳುವ ಹಂತಕ್ಕೆ ಬಂದು ನಿಂತಾಗ " ಹಾಗಾದರೆ ನಾವು ಹೆಣ್ಣು ಮಕ್ಕಳು ಕೊಂಚ ನಮ್ಮದೇ ಸ್ಪೇಸ್ ನಲ್ಲಿ, ನಮ್ಮದೇ ಸ್ವಾತಂತ್ರ್ಯದಲ್ಲಿ ಬದುಕುವುದೇ ಬೇಡವಾ..? " ಎನ್ನುವ ಪ್ರಶ್ನೆಗೆ ನಿಖರ ಉತ್ತರ ಕೊಡುವ ಮನಸ್ಥಿತಿ ಯಾರಲ್ಲೂ ಉಳಿದಿಲ್ಲ. ಹೀಗಿದ್ದಾಗ ಆಕೆಯ ಸ್ವಾತಂತ್ರ ಎಲ್ಲಿದೆ ಎನ್ನುವ ಪ್ರಶ್ನೆ ಎದ್ದು ನಿಲ್ಲುತ್ತಿದೆ. 
ಇವತ್ತು ಪುರುಷ ಉದ್ಯೋಗಿಯೊಬ್ಬನ ದಿನಚರಿ ನೋಡಿ, ಬೇಕೆಂದಾಗ ಹೋಗಿ ಟೀ ಕುಡಿದು, ಸಿಗರೇಟು ಸೇದಿ, ಅಲ್ಲೆಲ್ಲೋ ನಿಂತು ಮೊಬೈಲ್‍ನಲ್ಲಿ ಹರಟಿ,  ಹಾಗೆ ಬರುವಾಗ ಇನ್ಯಾವುದೋ ಕಚೇರಿ ಸ್ನೇಹಿತ ಸಿಕ್ಕಿದರೆ ಅಲ್ಲೆ ಮಾತಾಡಿ. ಐದೇ ನಿಮಿಷದಲ್ಲಿ ವೀಕೆಂಡ್ ಪಾರ್ಟಿಗೆ ಒಪ್ಪಿಗೆ ಕೊಟ್ಟು (ಇದಕ್ಕೆ ಯಾವ ಕಾರಣಕ್ಕೂ ಹೆಂಡತಿಗೆ ಕೇಳಿ, ವಿಚಾರಿಸಿ ಒಪ್ಪಲಾ ಎನ್ನುವ ಮಾತೇ ಇರುವುದಿಲ್ಲ ಸಾಮಾನ್ಯವಾಗಿ) ಅದೇ ಹುರುಪಿನೊಂದಿಗೆ ಸಜ್ಜಾಗಿ ಮತ್ತೆ ಕುರ್ಚಿಗೆ ಹಿಂದಿರುಗುತ್ತಾನೆ. ಅರೇ.. ಅದೇನು ಬದಲಾವಣೆ ಒಂದು ಔಟಿಂಗ್ ಮತ್ತು ಒಂದು ಪಾರ್ಟಿ ಅಥವಾ ವೀಕೆಂಡ್ ಮಸ್ತಿ ಅಥವಾ ಕೊನೆಯಲ್ಲ್ಯಾವುದೋ ಹೊರಗಡೆ ಹೋಗುವ ಟ್ರಿಪ್ಪು, ವಿಲಾಸವಾಗಿ ಕಳೆಯುವ ಒಂದು ಸಂಜೆ ಇಷ್ಟೊಂದು ಎನರ್ಜಿ ಕೊಡುತ್ತದಾ..? ಹಾಗಿದ್ದರೆ ಇರಲಿ ಬಿಡಿ ಅನ್ನೋಣ.
ಹೌದು.. ಬದಲಾವಣೆ ಬೇಕು ರೂಟಿನ್ ಬದುಕಿನಲ್ಲಿ ಮತ್ತದು ಮನೆಯ, ಮನಸ್ಸಿನ ಮತ್ತು ಹೊಣೆಗಾರಿಕೆಯಿಲ್ಲದ ಜೀವನದಿಂದ ಮುಕ್ತವಾಗಿರಬೇಕೆನ್ನಿಸುತ್ತದೆ.. ಕರೆಕ್ಟ್ ಅದಕ್ಕಾಗೇ ಪುರುಷನೊಬ್ಬ ಬೇಕೆಂದಾಗ ಹೀಗೆಲ್ಲಾ ಜೀವನವನ್ನು ಬೇಕಾದಂತೆ ಅನುಭವಿಸಿಬಿಡಬಲ್ಲ. ಎಲ್ಲರೂ ಎಂದು ಹೇಳಲು ಆಗುವುದಿಲ್ಲ. ಕೆಲವರು ಹುಟ್ಟಿದ್ದಕ್ಕೆ ಬದುಕುತ್ತಿರುತ್ತಾರೆ ಆ ಮಾತು ಬೇರೆ. ಹಾಗೆ ಬದುಕಲೂ ಅನುಭವಿಸುವ ಗುಂಡಿಗೆ ಜತೆಗೆ, ಶುದ್ಧ ಮನಸ್ಸು, ಒಂದಿಷ್ಟು ಜೀವನ ಪ್ರೀತಿ ಎಲ್ಲ ಇರಬೇಕು. ಆದರೆ ಹಾಗೆ ಬದುಕಿಬಿಡಲು ಸಂಪೂರ್ಣ ಅವಕಾಶವಂತೂ ಇರುತ್ತದಲ್ಲ. ಇಲ್ಲದಿದ್ದರೆ ಬೇರೆಯವರು ಸೃಷ್ಟಿಸುತ್ತಾರೆ. ಇಲ್ಲಾ ಅವನೇ ಇನ್ನಾವುದೇ ಕಾರಣದಿಂದ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾನೆ. ಒಟ್ಟಾರೆ ಬದುಕು ನಿಂತ ನೀರಲ್ಲ. ಅವನಿಗೆ ಮನೆಯಲ್ಲಿ ಮಕ್ಕಳ ಕಿರಿಕಿರಿ ಇರುವುದಿಲ್ಲ. ಫೀಸ್ ಕಟ್ಟುವ ಹಣ ಬೀಸಾಕಿದರಾಯಿತು. ಬೆಳಿಗ್ಗೆದ್ದು ಪೂರ್ತಿ ದಿನದ ಒಟ್ಟೂ ತಯಾರಿ ಬಗ್ಗೆ ಗಮನ ಹರಿಸಬೇಕಿಲ್ಲ. ಹೇಗಿದ್ದರೂ ಬದುಕು ಸುನೀತವೇ.
ಆದರೆ ಸುನೀತಳಿಗೆ..? ಆಕೆಗೂ ಎಲ್ಲ ಇದೆ. ಕಾಫಿಗೆ ಹೋಗಬಹುದು. ಆದರೆ ಒಬ್ಬಳೇ ಹೋಗಿ ಟೀ ಸ್ಟಾಲ್‍ನ ತುದಿಗೆ ನಿಂತು ಸಿಗರೇಟು ಅಂಟಿಸುವ ಗಂಡಸಿನಂತೆ ಟೀ ಗ್ಲಾಸಿಗೆ ಕೈ ಹೂಡಲಾರಳು. ಅವನಿಗಿರುವ ಆ ಸ್ವಾತಂತ್ರ್ಯ ಅದ್ಯಾವತ್ತು ಆಕೆಗೆ ದಕ್ಕುತ್ತದೋ ಗೊತ್ತಿಲ್ಲ. ಸುಖಾ ಸುಮ್ಮನೆ ನೋಡುವ ಕಣ್ಣುಗಳಿಗೆ ಆಹಾರವಾಗುತ್ತಾಳೆ. ಕಾಫಿ ಕಹಿಯಾಗದೇ ಏನು ಮಾಡೀತು..? 
ಇದ್ದಕ್ಕಿದ್ದಂತೆ ವೀಕೆಂಡ್‍ಗೆ ಡೆ ಔಟಿಂಗ್ ಕೂಡಾ ಮಾಡಲಾರಳು. ಹಣ ಗಾಡಿ ಎಲ್ಲ ಇದೆ. ಆದರೆ ಮನೆಯಲ್ಲಿ ನೂರು ಪ್ರಶ್ನೆಗಳಿಗೆ ಸಮಜಾಯಿಸಿ ನೀಡಿ, ಅದೆಲ್ಲವೂ ಓ.ಕೆ. ಅನ್ನಿಸಿದ ಮೇಲೂ ಒಲ್ಲದ ಮನಸ್ಸಿನ ಸಮ್ಮತಿ ದೊರಕಿದ ಮೇಲೆ ಯೋಜನೆ ರೂಪಿಸಬೇಕು. ಆಗ ಹುಟ್ಟುವ ಹತ್ತಾರು ಹೊಸ ಮತ್ತು ರೆಗ್ಯೂಲರ್ ರೂಟಿನ್ ಕೆಲಸಗಳಿಗೆ ಪರ್ಯಾಯ ಸೂಚಿಸಿ ಅವನಿಗೆ ಇದಾವುದೂ ತನ್ನ ವೀಕೆಂಡ್ ಕೆಲಸಕ್ಕೆ ಕಿರಿಕ್ಕು ಮಾಡುವುದಿಲ್ಲ ಎನ್ನಿಸಿದಾಗ ಆಯ್ತು ಆದರೂ ಹುಶಾರು ಎನ್ನುತ್ತಾನೆ. ಅದಾದ ಮೇಲೆ ಆಕೆ ಸ್ನೇಹಿತೆಯರಿಗಾಗಿ ಹುಡುಕಬೇಕು. ಬೆಂಗಳೂರು ಕೇಂದ್ರೀಕೃತ ಬದುಕು ಹೊರತು ಪಡಿಸಿ ಈ ವಿಷಯ ನೋಡೊಣ. ರಾಜಧಾನಿಯಲ್ಲಿ ಇದಕ್ಕೆಲ್ಲ ಕೊಂಚ ಅವಕಾಶ ಇದ್ದರೂ, ಎಲ್ಲೂ ಪುರುಷಗಿರುವ ಬಹಿರಂಗ ಸ್ವಾತಂತ್ರ್ಯ ಇಲ್ಲವೇನ್ನಲೇಬೇಕು. ಆ ಎಲ್ಲಾ ಸ್ನೇಹಿತೆಯರೂ ಈ ಪರಿಸ್ಥಿತಿಯಿಂದ ಹೊರ ಬಂದು ಒಂದು ದಿನವನ್ನು ಫಿû್ರೀ ಬದುಕಿಗಾಗಿ ಹೊಂದಿಸಿಕೊಳ್ಳಬೇಕು..? ಅದರಲ್ಲೂ ಸ್ನೇಹಿತನನ್ನೇ ಕೇಳೋಣ ಎಂದರೆ ಹೆಣ್ಣೊಬ್ಬಳು ಸುಮ್ಮನೆ ಒಂದು ಸಹಜ ಸ್ನೇಹಿತನಾಗಿ ಅವನನ್ನು ವಿಚಾರಿಸಿಕೊಂಡರೂ, ಅವನದನ್ನು ಪುರಸೊತ್ತಿಲ್ಲದೆ ಅಪಾರ್ಥವಾಗಿಸಿ ಬಿಡುತ್ತಾನೆ. ಎಂಥಾ ಸಭ್ಯ ಗಂಡಸೂ ಕೂಡಾ ಒಂದಿನದ ಔಟಿಂಗಾ ಅಥವಾ ಊಟಕ್ಕಾ, ಪಿಕ್ಚರ ಗಾ.. ಇಬ್ಬರೇ ಹೋಗೋಣ್ವಾ ಎಂದು ವರಾತ ಶುರುವಿಟ್ಟುಕೊಳ್ಳುತ್ತಾನೆ. ಅಷ್ಟಾಗಿಯೂ ಒಬ್ಬಾಕೆ ಒಂದು ದಂಡು ಕಟ್ಟಿಕೊಂಡು ಚೆಂದಗೆ ನಾಲ್ಕು ದಿನ ಕಳೆದು, ಮನಸ್ಸು ಹಗುರ ಮಾಡಿಕೊಂಡು ಹಿಂದಿರುಗುವ ಹೊತ್ತಿಗೆ ಅದೇ ಕೊನೆಯ ಅವಕಾಶವಾಗಿರುವ ಸಂದರ್ಭಗಳೇ ನೂರಕ್ಕೆ ಶೇ.95 ರ ಷ್ಠಿರುತ್ತವೆ. 
ಮಹಿಳಾ ಸ್ವತಂತ್ರ, ಸಮಾನತೆ ಎಲ್ಲ ಇದ್ದೂ ಸ್ವಾತಂತ್ರ್ಯದ ಯಾವ ಸುಖವನ್ನೂ ಅನುಭವಿಸದಂತೆ ಮಾಡಿಟ್ಟಿರುವ ಪುರುಷರ ಮನಸ್ಥಿತಿಗೆ ಯಾವ ರೀತಿಯಲ್ಲೂ ಪಕ್ಕಾಗುವುದಕ್ಕೆ ಆಗುತ್ತಿಲ್ಲ. ನೋಡಿ.. ಆಕೆ ನಾಲ್ಕಾರು ದಿನ ಲೇಟಾಗಿ ಬರುತ್ತಾಳೆ ಒಂದು ಬೀದಿಯಲ್ಲಿ ಒಬ್ಬಾಕೆ ಹಾಯ್ದು ಹೋಗುತ್ತಾಳೆ ಎಂದರೆ ಆಕೆಯ ಮೇಲೊಂದು ಲಕ್ಷ್ಯವಿಡುವ ಗಂಡಸರಿಗೆ ಕೊರತೆ ಇಲ್ಲ. ಅಕೆ ಸುಲಭವಾಗಿ ಮಾತಾಡುತ್ತಾಳೆ ಎನ್ನುವ ಕಾರಣ ಆಕೆ ಚಾಲೂ ಎನ್ನುವ ಅನುಮಾನದ ಮಾತನ್ನು ಹರಿಬೀಡುತ್ತಾರೆ. ಸುಖಾ ಸುಮ್ಮನೆ ಕಾಫಿ ಶಾಪಿನಲ್ಲಿ ಹರಟಿದರೂ, ಆಕೆ " ಫ್ರೀ " ಅಂತೆ ಎನ್ನುವ ಮಾತು ವಿಲಾಸವಾಗಿ ಹರಿಬಿಡುತ್ತಾರೆ. ಆಕೆ ಒಬ್ಬಳೆ ನಾಲ್ಕೂರು ನೋಡಿ ಬರುತ್ತೇನೆಂದು ಹೊರಟು ನಿಂತರೆ ಮನೆಯಲ್ಲಿಯೇ ಮೊದಲ ಶತ್ರು ಎನ್ನುವಂತೆ, ಆಕೆಗೆ ಯಾವ ರೀತಿಯಲ್ಲೂ ಉಸಿರಾಡಲು ಆಗದಂತೆ ಪ್ರಶ್ನೆಗಳು ಏಳುತ್ತವೆ. ಒಬ್ಳೆನಾ ಮೇಡಮ್.? " ಎನ್ನುವ ಪಶ್ನೆ ಆರಂಭವಾಗುವುದರೊಂದಿಗೆ, ಎಲ್ಲಾ ಕಡೆಯಲ್ಲೂ ಒಬ್ಬಳೆ ಅಂತೆ ಎನ್ನುವ ಒಬ್ಬಂಟಿಯ ಹಿಂದಿನ ಆಕೆಯ ಆನಂದಕ್ಕೆ ಅನುಮಾನದ ಹೊಗೆ ಹಾಕಿ ಕಾಯತೊಡಗುತ್ತಾರೆ. ಇವತ್ತು ಈ ಕಾರಣದಿಂದಲೇ ತುಂಬ ಹೆಂಗಸರಿಗೆ ತಾವು ಒಂಟಿಯಾಗಿ ಇರಬಲ್ಲೆವು ಇರಬೇಕು ಎನ್ನುವ, ಅದೇ ಜೀವನದಾಸೆ ಮಾಡಿಕೊಂಡಿದ್ದರೂ ಮದುವೆ ಎನ್ನುವ ಅನಿವಾರ್ಯದ ವ್ಯವಸ್ಥೆಗೆ ಹೊಂದ್ಕೊಳ್ಳುತ್ತಿದ್ದಾರೆ. ಆದರೆ ಕೊನೆಯವರೆಗೂ ಅದು ಒಂದು ಗುಪ್ತ ಅಸಮಧಾನವಾಗಿಯೇ ಉಳಿದಿರುತ್ತದೆ ಮನದಲ್ಲಿ. ಅಷ್ಟಾಗಿಯೂ ಒಬ್ಬಲೆ ಬದುಕು ಮಾಡುತ್ತೇನೆ ಅರಾಮಾಗಿ ನನ್ನ ಪಾಡಿಗೆ ಇರುತ್ತೇನೆಂದರೂ ಮೊದಲು ಅಕ್ಕ ಪಕ್ಕದವರು ವಿಚಿತ್ರವಾಗಿ ನೋಡುತ್ತಾರೆ. ಕಾಯಿಪಲ್ಯೆ ಮಾರುವವನಿಂದ ಹಿಡಿದು ಹಾಲು ಹಾಕುವವನವರೆಗೂ  "..ಒಬ್ರೆನಾ ಮೇಡಮ್.." ಎನ್ನುವ ವಿಚಿತ್ರ ದನಿಯ, ಮುಖದಲ್ಲಿ ಕಂಡೂ ಕಾಣದ ನಿರೀಕ್ಷೆಯ ಅಂಗಿಕ ಅಭಿನಯಕ್ಕೆ ಆಕೆ ಉತ್ತರವಾಗುತ್ತ ಇರಬೇಕಾಗುತ್ತದೆ. 
ಕೊನೆಗೆರಡು ವರ್ಷವಾಗುವ ಹೊತ್ತಿಗೆ ಆಕೆ ಒಂದೋ ಮನೆ ಬದಲಾಯಿಸುತ್ತಾಳೆ ಇಲ್ಲ ಮದುವೆಯ ಅನಿವಾರ್ಯತೆಗೆ ಒಪ್ಪಿಕೊಳ್ಳುತ್ತಾಳೆ. ಅರೇ.. ಆಕೆ ಒಬ್ಬಾಕೆಯೇ ಅಲೆಯದಂತೆ ನಿರ್ಭಂದಿಸಿದ್ದೂ, ಅಕಸ್ಮಾತ ಒಬ್ಬಂಟಿಯಾಗಿ ಸಿಕ್ಕಿದರೆ ಹೊತ್ತೊಯ್ಯೊವ ಅಥವಾ ಇನ್ನಾವುದೇ ರೀತಿಯ ಅವಕಾಶಕ್ಕಾಗಿ ಕಾಯುವಂತಹದ್ದು ಯಾವ ಮಟ್ಟದಲ್ಲಿದೆ ಎಂದರೆ ಆ ಒಂದು ಅಸುರಕ್ಷತೆಯ ಕಾರಣದಿಂದಲೇ ಯಾವ ಹೆಣ್ಣೂ ಎಕಾಂಗಿಯಾಗಿ ತನ್ನಿಷ್ಟದ ಬದುಕು ಬದುಕಲಾರದಂತಾಗಿದ್ದಾಳೆ. ಅಸಲಿಗೆ ಎಲ್ಲದಕ್ಕೂ ಎಲ್ಲಾ ಕಡೆಯಲ್ಲೂ ಸ್ವಾತಂತ್ರ್ಯವಿರದಿದ್ದರೂ ಪ್ರತಿ ಹಂತದಲ್ಲೂ ಪುರುಷರ ತೊಡರುಗಾಲು ಇದ್ದೇ ಇದೆ. ಅದಕ್ಕೂ ಮಿಗಿಲು ಕೆಲವೇ ಕೆಲವು ಶೇಕಡಾವಾರು ಸಮಾಜ ವಿರೋಧಿ ಚಟುವಟಿಕೆಯ ಭಯ  ಆಕೆಯ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿಸುತ್ತಿದೆ. ಆಕೆ ಎಲ್ಲೆಲ್ಲೂ ಬದುಕು ಬದುಕುವ ಮೊದಲು ಸುರಕ್ಷತೆ ಕೇಳುವ ಹಂತಕ್ಕೆ ತಲುಪಿದರೆ, ವಿಶ್ವಾಸ ಇಡಬಹುದಾದ ಪುರುಷನೊಬ್ಬ ಯಾವ ಹಂತದಲ್ಲೂ ದೈಹಿಕ ಸಾಂಗತ್ಯಕ್ಕೆ ಹಾತೊರೆಯುವ ಅದೇ ವರಸೆ ತೋರಿಬಿಟ್ಟರೆ, ಬೇಕಿದೆಯೋ ಇಲ್ಲವೋ ಹೆಣ್ಣಿಗೆ ಗಂಡನೆನ್ನುವ ಅನಿವಾರ್ಯದ ಪಾಲುದಾರನ ಹೊರತು ಬದುಕು ಬದುಕಾಗುವುದೇ ಇಲ್ಲ. ಆದರೆ ಹೀಗೆ ಅಸುರಕ್ಷತೆಯ ಕಾರಣಕ್ಕೆ ಪಡೆಯುವ ಖುಶಿಯೂ ಖುಶಿನಾ..? 
ಇವತ್ತು ಮಂಚೂಣಿಯಲ್ಲಿರುವ ಮಹಿಳಾಪರ ಮತ್ತು ಹಕ್ಕಿಗಾಗಿ ಹೋರಾಡುತ್ತಿರುವವರು ತೀವ್ರವಾಗಿ ಸ್ಪಂದಿಸಬೇಕಿರುವುದು ಆಕೆಯ ಇಂತಹ ಸಣ್ಣ ಸಣ್ಣ ನಿರ್ಭೀತಿಯ ಸ್ವಾತಂತ್ರ್ಯಕ್ಕೆ ಹೊರತಾಗಿ ಆಸ್ತಿ ಪಾಲು, ರಸ್ತೆ ಪಾಲು, ಬಸ್ಸಿನಲ್ಲಿ ಪಾಲು, ಕ್ಯೂ ನಿಲ್ಲಲು ಪಾಲು. ಹೀಗೆ ಒಲ್ಲದ ಜಾಗದಲ್ಲಿ ಕಾಲೂರಿ ನಿಲ್ಲುವ ಪ್ರಕ್ರಿಯೆಯಲ್ಲೂ ಆಕೆಗೆ ಯಾವತ್ತೂ ಸ್ವತಂತ್ರ ಹರಣವಾದದ್ದೇ ಇಲ್ಲ.  ನಿರ್ಭಿತಿಯ ಮತ್ತು ಒಂದು ಚೆಂದದ ಘಳಿಗೆಗಳ ಸ್ವತಂತ್ರ ಇಲ್ಲದ ಬದುಕು ಬದುಕಾ..? ಸುನೀತ ಕೇಳುತ್ತಿದ್ದಾಳೆ. ಬರೀ ಬದುಕಲ್ಲ, ಸಮಾಜವಲ್ಲ, ಪುರುಷನ ದೃಷ್ಟಿ ಕೋನ ಇನ್ನಾದರೂ ಬದಲಾಗಬೇಕಿದೆ.. ಇಬ್ಬರೂ ಬದುಕೋಣ ಕೆಲವು ವಿಷಯದಲ್ಲಾದರೂ ಅವರವರ ಇಷ್ಟದಂತೆ ಎನ್ನುವ ಅವರ ವಾದಕ್ಕೆ ಮೊದ್ಲ ಬಲವನ್ನು ಅವನೇ ತುಂಬಬೇಕಿದೆ. ಅದ್ಯಾವತ್ತಿಗೆ ಆಗುತ್ತದೆಯೋ ಗೊತ್ತಿಲ್ಲ. ಅದರೆ ಸಧ್ಯಕ್ಕಂತೂ ಆಕೆಯ ಸ್ವಾತಂತ್ರ್ಯ ಎನ್ನುವುದು ನೂರು ಪ್ರಶ್ನೆಯ ಆಚೆಯಲ್ಲಿದೆ ಎನ್ನುವುದು ಮಾತ್ರ ಸತ್ಯ.





Saturday, December 10, 2016

ಸಮ್ಮೇಳನದ ಮಾನದಂಡಗಳು ಯಾವುವು..?

(ಯಾವ ರೀತಿಯಲ್ಲೂ ಬಡ ರೈತನಿಗೂ, ಮಹಿಳೆಯರ ಅಗತ್ಯತೆಗೂ, ಸಬಲೀಕರಣದಂತಹ ಅವಶ್ಯಕತೆಗೂ ಆಗದ ಕನ್ನಡದ ಕಂಕಣ ಬದ್ಧ ವೇದಿಕೆ, ಭಾಷಣಕ್ಕೆ ಸೀಮಿತವಾಗುವುದಾದರೆ ಅದರ ಅವಶ್ಯಕತೆಯಾದರೂ ಇದೆಯಾ..? ಕನ್ನಡ ಭಾಷೆ, ನುಡಿಗಾಗಿ ಸಮ್ಮೇಳನಗಳು ಬೇಕು ಎನ್ನುವವರಿದ್ದಾರೆ. ಹಾಗೆ ವಾದಿಸುವವರಿಗೊಂದು ನೆನಪಿರಲಿ ನೀವೆಲ್ಲಾ ನಿರಂತರವಾಗಿ ಕನ್ನಡವನ್ನೇ ಮಾತಾಡುವ ಅಭ್ಯಾಸ ಜಾರಿ ಇಟ್ಟರೆ ಬೇರೇನೂ ಬೇಕೆ ಆಗಿಲ್ಲ. ಸುಲಭವಾಗಿ ಒಂದು ಭಾಷೆ ತನ್ನ ಸುತ್ತಲೂ ತನ್ನದೇ ಸಂಬಂಧಿತ ಸಂಸ್ಕೃತಿಯನ್ನು ಬೆಳೆಸುತ್ತದಯೇ ವಿನ: ಭಾಷಣಕ್ಕೆ ಸೀಮಿತವಾಗುವ ದುಂದುವೆಚ್ಚದ, ಆಡಂಬರದ ಆಚರಣೆಯ ಸಮ್ಮೇಳನಗಳಲ್ಲ.)
ಇನ್ನೊಂದು ಸುತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಜಾತ್ರೆ ಮುಗಿದಿದೆ. ಸಾಲು ಸಾಲು ಊಟದ ಸರದಿ ಮತ್ತು ಪುಸ್ತಕ ಪ್ರಕಾಶಕರ ಅಂಗಡಿಗಳು ತಂತಮ್ಮ ಟೆಂಟೆತ್ತಿಕೊಂಡು ಹೊರಡುವ ಈ ಅವಧಿಯಲ್ಲಿ ಇಷ್ಟೆಲ್ಲಾ ಮಾಡಿ ಕನ್ನಡ ಭಾಷೆ ಅಥವಾ ದುಂದು ವೆಚ್ಚದ ಈ ನುಡಿ ಹಬ್ಬದಿಂದ ಆಗಿರುವ ಅಥವಾ ಆಗುತ್ತಿರುವ ಲಾಭ ಎನ್ನುವ ತೀರ ವ್ಯವಹಾರಿಕ ಮಾತು ಒತ್ತಟ್ಟಿಗಿರಲಿ, ಒತ್ತಾಸೆ ಅಥವಾ ಪ್ರಯೋಜನ ಎಂಬಿತ್ಯಾದಿಯಾಗಿ ಹುಡುಕಿದರೂ ಯಾವ ಉತ್ಪನ್ನವೂ ಕಾಣಿಸುತ್ತಿಲ್ಲ. ಅಷ್ಟಕ್ಕೂ ಇಂತಹ ನುಡಿ ಹಬ್ಬ ಅಥವಾ ಜಾತ್ರೆ ಎನ್ನುವ ಸಾಹಿತ್ಯ ಸಮ್ಮೇಳನ ಆಡುಂಬೋಲಗಳು ಕೇವಲ ಭಾಷಾ ಸಾಹಿತ್ಯದ ಮತ್ತು ಸಾಹಿತ್ಯಿಕ ಅಭಿಲಾಷೆಯ ಹೊರತಾಗಿ ಒಂದು ನಾಡು ನುಡಿಯನ್ನು ಕಟ್ಟುವ ಧನಾತ್ಮಕ, ಕ್ರಿಯಾತ್ಕಕ ನೆಲೆಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಆಗಿದ್ದೇನು ನೋಡಿ..?
ಒಬ್ಬೇ ಒಬ್ಬೆ ನೇರವಾಗಿ ನಿಂತು ಇಲ್ಲಿವರೆಗಿನ ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಇಂಥಿತಹ ಐತಿಹಾಸಿಕ ಪ್ರಯೋಜನಗಳು ನಮ್ಮ ಕನ್ನಡಕ್ಕೆ ಅಥವಾ ರಾಜ್ಯಕ್ಕೆ ಆಗಿದೆ ಎಂದು ಬೆರಳು ಮಾಡಿ ತೊರಿಸಲಿ ನೋಡೋಣ. ಉಹೂಂ.. ಯಾರೊಬ್ಬ ಕನ್ನಡ ಕಟ್ಟಾಳು ಕೂಡಾ ಅತ್ತ ಹೆಬ್ಬೆರಳು ಎತ್ತಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಕಾರಣ ಉಳಿದದ್ದೇನೆ ಇರಲಿ. ಸಾಹಿತ್ಯ ಸಮ್ಮೇಳನ ಎನ್ನುವುದು ಅವರವರ ಹಿಂಬಾಲಕರಿಗೆ ಮತ್ತು ಹೌದಪ್ಪಗಳಿಗೆ ವೇದಿಕೆ ಒದಗಿಸುವ, ತನ್ಮೂಲಕ ಸಾಹಿತ್ಯದ ವಲಯದಲ್ಲಿ ಒಂದು ಹೆಗ್ಗುರುತು ಮಾಡಿಕೊಂಡು ಏಣಿಯಾಗಿಸಿಕೊಳ್ಳುವ ಜಾತ್ರೆಯಾಗುತ್ತಿದೆಯೇ ವಿನ: ಖಂಡಿತಕ್ಕೂ ಇವತ್ತು ಬರಹ ಅಥವಾ ಸಾಹಿತ್ಯಿಕವಾಗಿ ಜೀವಂತವಾಗಿರುವ ಯಾವೊಬ್ಬನನ್ನೂ ಅದು ತಾನಾಗೇ ಹತ್ತಿರ ಬಿಟ್ಟುಕೊಂಡಿದ್ದು ಕಡಿಮೆಯೇ. 
ಇವತ್ತಿಗೂ ವೇದಿಕೆಯ ಮೇಲೆ ರಾರಾಜಿಸಿದವರಲ್ಲಿ ಹೆಚ್ಚಿನವರು ಹಿಂಬಾಗಿಲಲ್ಲಿ ನುಸುಳಿದವರೇ ಎನ್ನುವುದು ಖೇದ ಮತ್ತು ಕನ್ನಡದ ಮಟ್ಟಿಗೆ ದುರಂತ. ಸಮ್ಮೇಳನಗಳಲ್ಲಿ ಪ್ರತಿ ಜಿಲ್ಲಾವಾರು ಪ್ರಾತಿನಿಧ್ಯ ಇಂತಿಷ್ಠೆ ಅಭ್ಯರ್ಥಿಗಳಿಗೆ ಅವಕಾಶ ಎಂದಿದ್ದಾಗಲೂ ಪ್ರತಿ ಜಿಲ್ಲೆಯಿಂದಲೂ ವೇದಿಕೆ ಏರಲು ಕೇಂದ್ರ ಕಚೇರಿಯ ಸಂಪರ್ಕವನ್ನು ಖಾಸಗಿ ಶಿಫಾರಸ್ಸುಗಳನ್ನು ಬಳಸಿಕೊಂಡಿದ್ದು ಗುಟ್ಟಾಗಿಯೇನೂ ಉಳಿದಿಲ್ಲ. ಹಾಗೆ ಕವಿತೆ ಓದಿದ, ಭಾಷಣ ಬಿಗಿದ ಮಹನೀಯರಲ್ಲಿ ಲಿಂಗಾತೀತವಾಗಿ ಹಿಂಬಾಗಿಲ ಪ್ರವೇಶಕ್ಕೆ ಗುದಮುರಿಗೆ ಹಾಕಿದ್ದು ಅಸಹನೀಯ ಮತ್ತು ಅಸಹ್ಯಕರ.
ಅಸಲಿಗೆ ನಿಮಗೆ ಆಯಾ ಜಿಲ್ಲಾವಾರು ಅಥವಾ ತಾಲೂಕಾವಾರು ಪ್ರಾತಿನಿಧ್ಯ ಬೇಕೆಂದರೂ ಕೂಡಾ ಅಲ್ಲಿನ ಜಿಲ್ಲಾ ಅಥವಾ ತಾಲೂಕಾ ಸಾಹಿತ್ಯ ಪರಿಷತ್ತುಗಳ ಪದಾಧಿಕಾರಿಗಳ ಜತೆ ಹಲ್ಕಿರಿಯುವ, ಹೌದಪ್ಪ ಎನ್ನುವ ಸಂಪರ್ಕ ಉಳಿಸಿಕೊಳ್ಳುವ ಅನಿವಾರ್ಯತೆಯ ರೋಗವನ್ನು ಅತ್ಯಂತ ವ್ಯವಸ್ಥಿತವಾಗಿ ಸೃಷ್ಟಿಸಿದ್ದೇ ಇಂತಹ ಜಾತ್ರೆಗಳು. (ಎಷ್ಟೊ ಜಿಲ್ಲೆಗಳ ಅಧ್ಯಕ್ಷರುಗಳು ಈ ಮುಲಾಜನ್ನು ತೆಗೆದು ಹಾಕಿ ವಯಸ್ಸು ಮತ್ತು ಪ್ರತಿಭೆಯಧಾರಿತ ನಾಮಾಕಿಂತ ಮಾಡಿದ್ದೂ ಇದ್ದು ಅಷ್ಟರ ಮಟ್ಟಿಗೆ ಅವರೆಲ್ಲಾ ಅಭಿನಂದನಾರ್ಹರೆ) ಕಾರಣ ಆ ಹಂತದಲ್ಲೇ ಕ.ಸಾ.ಪ. ಜತೆ ನಿಮ್ಮ ಬಾಂಧವ್ಯ ಇರದಿದ್ದರೆ, ರಾಜ್ಯ ಸಾಹಿತ್ಯ ಸಮ್ಮೇಳನಕ್ಕೆ ನಿಮ್ಮನ್ನು ಕಳುಹಿಸುವವರಾದರೂ ಯಾರು..? ಹಾಗಂತ ನಾನು ಎಲ್ಲರೂ ಪ್ರತಿಭೆ ಇಲ್ಲದೆ ವೇದಿಕೆ ಅಲಂಕರಿಸುತ್ತಿದ್ದಾರೆ ಎನ್ನುತ್ತಿಲ್ಲ. ಆ ಬೆಟಾಲಿಯನ್ನೇ ಬೇರೆ. ಅವರ ಹೆಸರು ಸಹಜವಾಗಿ ತೇಲಿ ಬೀಡುತ್ತಾರೆ. ಅದನ್ನು ಉಳಿದವರೂ ಓಕೆ ಎಂದು ಬಿಡುತ್ತಾರೆ. ಕಾರಣ ಇಲ್ಲಿ ಓ.ಕೆ. ಅಂದರೆ ಮುಂದೆ ತನ್ನ ಪ್ರಪೆÇೀಸಲ್ಲು ಓ.ಕೆ. ಆಗುತ್ತದೆ ಎನ್ನುವ ದೂರದೃಷ್ಟಿ ಕೆಲಸ ಮಾಡುತ್ತದೆ.  
ಅಲ್ಲಿಗೆ ಮೊದಲ ಸುತ್ತಿನ ವೇದಿಕೆ ಆಕ್ರಮಿಸುವವರ ಆಯ್ಕೆ ನಡೆದುಬಿಡುತ್ತದೆ. ನಂತರದಲ್ಲಿ ತಮಗೆ ಬೇಕಾದವರ, ಶಿಫಾರಸ್ಸುಗಳ ಎಲ್ಲ ಹೆಸರನ್ನೂ ಸೇರಿಸಿ ಅಂತಿಮವಾಗಿ ಹಲವು ವೇದಿಕೆಗಳಿಗೆ ತಂಡಗಳು ಆಯ್ಕೆಯಾಗುತ್ತವೆ. ಅದರಲ್ಲೂ ಎಲ್ಲರಿಗೂ ಅವಕಾಶ ಕಲ್ಪಿಸಲೆಂದೇ ಹಲವು ವೇದಿಕೆಗಳ ರಚನೆಯಾಗುತ್ತದೆ. ದುರದೃಷ್ಟ ಎಂದರೆ ವೇದಿಕೆಯ ಮೇಲಿದ್ದಷ್ಟೇ ಜನ ಕೆಲವೊಮ್ಮೆ ಕೆಳಗೂ ಇರುತ್ತಾರೆ. ಅದರಲ್ಲೂ ಎಲ್ಲರಿಗೂ ಪ್ರಧಾನ ವೇದಿಕೆಯೇ ಬೇಕೆನ್ನುವ ಹುಕಿಗಳ ಮಧ್ಯೆ ಆಯ್ಕೆಯ ಸಂಖ್ಯೆ ಅರ್ಧ ಶತಕ ದಾಟುವುದೂ ಇದೆ. ಅಲ್ಲಿಗೆ ವೇದಿಕೆ ಎನ್ನುವುದು ದೊಡ್ಡ ಸಭೆಯ ಆಕಾರಕ್ಕೆ ಬಂದು ನಿಲ್ಲುತ್ತದೆ. ಈ ತುದಿಗೆ ಆ ತುದಿಯಲ್ಲೇನು ನಡೆಯುತ್ತಿದೆ ಎನ್ನುವುದೂ ಗೊತ್ತಾಗುತ್ತಿರುವುದಿಲ್ಲ. ಪ್ರತಿಯೊಬ್ಬರು ತಮ್ಮ ಹೆಸರು ಮತ್ತು ಸರದಿಗಾಗಿ ಕಾಯುವ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಅಲ್ಲಿಗೆ ಆ ವೇದಿಕೆಯಿಂದ ಅದಿನ್ನೆಂಥಾ ದಿವ್ಯ ಪರಿಹಾರ ಅಥವಾ ನಾಡು ನುಡಿಗೆ ಅನುಕೂಲವಾಗುವಂತಹ ಸಂದೇಶ ಅಥವಾ ಘೋಷಣೆ ಈಚೆಗೆ ಬಂದೀತು. ಕೊನೆಯಲ್ಲಿ ಇದೆಲ್ಲಾ ನಡೆಯುವುದೂ, ಜಾತ್ರೆ ಮುಗಿಯುವುದು ಎಲ್ಲಾ ಆದ ಮೇಲೆ ಅದರಲ್ಲಿದ್ದ ಯಾರೊಬ್ಬರನ್ನಾದರೂ ಮಾತಾಡಿಸಿ ನೋಡಿ. ಸ್ವಂತದ ವಿಷಯ ಬಿಟ್ಟು ಪಕ್ಕದವರು ಯಾರು ಏನು ಮಾತಾಡಿದರೂ ಎನ್ನುವುದೂ ಅವರಿಗರಿವಿರುವುದಿಲ್ಲ. ಅಲ್ಲಿಗೆ ವಿಷಯ, ವೇದಿಕೆ, ಪ್ರಸ್ತುತತೆ ಇವೆಲ್ಲದಕ್ಕೆ ಆಯ್ಕೆ ಮಾನದಂಡ ಇಲ್ಲದ್ದು ಜಾಹೀರಾಗುವಾಗ ನಾವು ಏನನ್ನಾದರೂ ಹೇಗೆ ನೀರಿಕ್ಷಿಸಲು ಸಾಧ್ಯ..? 
  ಒಮ್ಮೆ ಸ್ಥೂಲವಾಗಿ ನಿರುಕಿಸಿ ನೋಡಿ. ಹೆಚ್ಚಿನ ಚರ್ಚೆ ಅಥವಾ ವಿಷಯ ಮಂಡನೆಯಾಗುವ ಗೋಷ್ಠಿಗಳಾದರೂ ಹೇಗಿರುತ್ತವೆ ಎಂದು. " ರಾಜ್ಯ ಭಾಷೆಯಲ್ಲಿ ಸಮಕಾಲೀನ ತಲ್ಲಣಗಳು.." ಇದರಲ್ಲಿ ಅದ್ಯಾವ ಚರ್ಚೆ ನಾಡು ನುಡಿಗೆ ಉಪಯೋಗವಾಗುತ್ತದೆಯೋ ನನಗಂತೂ ಅರ್ಥವಾಗಿಲ್ಲ. "ಸಮಾಜಭಿವೃದ್ಧಿಯಲ್ಲಿ ಪ್ರಸ್ತುತ ಕನ್ನಡದ ಪಾತ್ರ" ಇಂತಹದನ್ನು ಅದ್ಯಾವ ಮಹಾಶಯ ಆಯ್ಕೆ ಮಾಡುತ್ತಾನೋ ಮತ್ತು ಹಾಗೆ ಇಂತಿಥ ಚರ್ಚೆಯಾಗಬೇಕು, ಇಂತಿಂಥ  ಸಂಪನ್ಮೂಲ(?)ವ್ಯಕ್ತಿಗಳು ಪಾಲ್ಗೊಳ್ಳಬೇಕು ಎಂದು ಆಯ್ಕೆ ಮಾಡಲು ಕೂರುವವರ ಯೋಗ್ಯತೆಯ ಮಾನದಂಡಗಳೇನು..? ಹಾಗೆ ಆಯ್ಕೆದಾರರು ಇವರನ್ನೆಲ್ಲಾ ಅರಿತಿದ್ದು ಆಯ್ಕೆ ಮಾಡುವುದಾದರೆ, ಮಂಡನೆ ಮಾಡುವವರಿಗಿಂತ ಅವರು ಮೇಲ್ಮಟ್ಟದ ಪ್ರಭೃತಿಗಳಾಗಿರಬೇಕು. ಹಾಗಾದಲ್ಲಿ ಇವರಿಗ್ಯಾಕೆ ಮಂಡನೆಯ ಅವಕಾಶ ಕೊಡುತ್ತೀರಿ..? ಹೋಗಲಿ ಹೊಸಬರು ಮತ್ತು ಪ್ರತಿಯೊಬ್ಬರಿಗೂ ಅವಕಾಶ ಎನ್ನುವುದೇ ಆದರೆ ಆರೂ ಚಿಲ್ರೆ ಕೋಟಿ ಜನರಲ್ಲಿ ಇವತ್ತು ಮೊಬೈಲ್ ಹೊಂದಿದ ಪ್ರತಿಯೊಬ್ಬನೂ ಗೀಚಬಲ್ಲ ಸಾಮಥ್ರ್ಯ ಹೊಂದಿದ್ದರಿಂದ ಎಲ್ಲರನ್ನೂ ಹೇಗೆ ತಲುಪಲಾಗುತ್ತದೆ..? ಇದರ ಬದಲಾಗಿ ಸರಿ ಸುಮಾರು ಹತ್ತಾರು ಕೋಟಿ ಖರ್ಚಿನ ಒಂದು ಸಮ್ಮೇಳನದ ಬದಲಿಗೆ ಆಯಾ ಜಿಲ್ಲಾವಾರು ಪ್ರಾತಿನಿಧ್ಯ ಜತೆಗೆ ಅಲ್ಲಲ್ಲೇ ಸಮ್ಮೇಳನ ಮಾಡಿಕೊಳ್ಳುವುದರಿಂದ, ಸ್ಥಳೀಯ ಪ್ರತಿಭೆ ಮತ್ತು ಜನತೆ ಇಬ್ಬರೂ ಹೆಚ್ಚಿನ ಮಟ್ಟದಲ್ಲಿ ಪಾಲ್ಗೊಳ್ಳಲಾದರೂ ಅನುಕೂಲವಾಗುತ್ತದೆ. ಪ್ರತಿ ಮೂಲೆಯಿಂದ ಯಾರೂ ಯಾವತ್ತೂ ಹೀಗೆ ಸಮ್ಮೇಳನಗಳಿಗೆ ತಲುಪಲಾರರಲ್ಲ.
ಇಲ್ಲೇನಿದೆ...? ಊಟ ವಸತಿಯ ಬಗ್ಗೆಯೇ ಸದಕಾಲ ಚಿಂತಿಸುತ್ತಾ, ನಮ್ಮ ನಮ್ಮ ಕಾರ್ಯಕ್ರಮ ಆಗುತ್ತಿದ್ದಂತೆ ನೂರಾರು ಅಂಗಡಿ ಸಾಲಿನ ಮಧ್ಯೆ ಕಳೆದುಹೋಗುವುದಾದರೆ ಅದಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ಯಾಕೆ ಬೇಕು..? ನಮ್ಮೂರುಗಳಲ್ಲೇ ಜಾತ್ರೆಗಳಿಲ್ಲವಾ..? ಒಂದಿಷ್ಟು ಕೂಲಿಕಾರರಿಗೆ, ಅಡಿಗೆಯವರಿಗೆ ಸೇರಿದಂತೆ ಇತರೆ ವರ್ಗದವರಿಗೆ ಒಂದು ವಾರ ಕಾಲ ಕಾಸು, ಕೆಲಸ ದಕ್ಕಬಹುದೇನೋ ಆದರೆ ಅದಕ್ಕಿಂತಲೂ ಹೆಚ್ಚಿಗೆ ಎಲ್ಲೆಲ್ಲಿ ಹೇಗೆ ಸೋರಿರುತ್ತದೋ ಕನ್ನಡ ತಾಯಿಯೇ ಹೇಳಬೇಕು. ಇಷ್ಟೆಲ್ಲಾ ಮಾಡಿ ಯಾವ ರೀತಿಯಲ್ಲೂ ಬಡ ರೈತನಿಗೂ, ಮಹಿಳೆಯರ ಅಗತ್ಯತೆಗೂ, ಅವರ ಸಬಲೀಕರಣದಂತಹ ಅವಶ್ಯತೆಗೂ ಆಗದ ಕಂಕಣ ಬದ್ಧತೆ ವೇದಿಕೆ ಮತ್ತು ಭಾಷಣಕ್ಕೆ ಸೀಮಿತವಾಗುವುದಾದರೆ ಅದರ ಅವಶ್ಯಕತೆಯಾದರೂ ಇದೆಯಾ..? ಕನ್ನಡ ಭಾಷೆ, ನುಡಿಗಾಗಿ ಸಮ್ಮೇಳನಗಳು ಬೇಕು ಎನ್ನುವವರಿದ್ದಾರೆ. ಹಾಗೆ ವಾದಿಸುವವರು ನೆನಪಿರಲಿ ನೀವೆಲ್ಲಾ ನಿರಂತರವಾಗಿ ಕನ್ನಡವನ್ನೇ ಮಾತಾಡುವ ಅಭ್ಯಾಸ ಜಾರಿ ಇಟ್ಟರೆ ಬೇರೇನೂ ಬೇಕೆ ಆಗಿಲ್ಲ. ಸುಲಭವಾಗಿ ಒಂದು ಭಾಷೆ ತನ್ನ ಸುತ್ತಲೂ ತನ್ನದೇ ಸಂಬಂಧಿತ ಸಂಸ್ಕೃತಿಯನ್ನು ಬೆಳೆಸುತ್ತದಯೇ ವಿನ: ಸಮ್ಮೇಳನಗಳಲ್ಲ. ಹಾಗಿದ್ದರೆ ನಾವಾಗಿ ಭಾಷೆಯ ಬದುಕಿಗೆ, ಅದರ ಜೀವಂತಿಕೆಗೆ, ಭಾಷೆಯ ಬೆರಗಿಗೆ ನಮ್ಮನ್ನು ಒಡ್ಡಿಕೊಳ್ಳಬೇಕಿದೆಯೇ ವಿನ: ವೇದಿಕೆಯ ಒಣ ಚರ್ಚೆ, ಅರ್ಥವಾಗದ ಭಾಷಣ, ಕತ್ತಿಗೆ ಪೆನ್ನಿಟ್ಟು ಕೊಯ್ಯುವ ಕವಿತೆಯ ಮೂಲಕವಲ್ಲ. ಈ ರೀತಿಯಲ್ಲಿ ಚಿಂತಿಸಬಾರದೇಕೆ..? 
ಯಾವ ಪ್ರಶ್ನೆಗೂ ಯಾರ ಬಳಿಯಲ್ಲೂ ಉತ್ತರವಿಲ್ಲ. ಅಕಸ್ಮಾತ ಇದೆಲ್ಲಾ ಅಗದೇ ಇದ್ದಿದ್ದರೆ, ಒಬ್ಬರಾದರೂ ನ್ಯಾಯೋಚಿತವಾಗಿ ನಿಂತು ಉತ್ತರಿಸುವ ನಿಜಾಯಿತಿ ಉಳಿಸಿಕೊಂಡಿದ್ದರೆ ಇವತ್ಯಾಕೆ ನಮಗೆ " ಆಶ್ರಯಕ್ಕೆ ಮನೆ ಇರಲು, ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸರ್ವಜ್ಞ " ಎನ್ನುವ ಯಾರದೋ ಲೇವಡಿಯ, ಕುಚೋದ್ಯದ ಅನುಕರಣೆಯ ರಚಿತ ವಚನ ಸರ್ವಜ್ಞನ ಹೆಸರಲ್ಲಿ ನೋಡುವ ಕರ್ಮ ಬರುತ್ತಿತ್ತು. 
ಅಲ್ಲಿಗೆ ಇದ್ದ ಬದ್ದವರೆಲ್ಲಾ ಅಪ್ರಯೋಜಕರೇ ಎಂದು ನಾನು ಹೇಳುತ್ತಿಲ್ಲವಾದರೂ ಹೆಚ್ಚಿನವರಿಗೆ ಕನಿಷ್ಟ ಯಾವ ಪದ ಬಳಕೆ ಬೇಕು, ಯಾವುದು ಸಲ್ಲದು ಎಂಬಿತ್ಯಾದಿಗಳ ಕನಿಷ್ಟ ಮಾಹಿತಿ ಕನ್ನಡ ಭಾಷಾ ಜ್ಞಾನವೂ ಇಲ್ಲವೆಂದಾಯಿತಲ್ಲ. ಕನ್ನಡ ಹಬ್ಬ ಮಾಡುತ್ತೇನೆಂದು ಹೊರಟು ನಿಂತ ಜವಾಬ್ದಾರಿಯುತ ಜನರಿಗೆ ಶಬ್ದ ಬಳಕೆಯ ಅದರ ಅರ್ಥದ ಮಿನಿಮಂ ಮಾಹಿತ್ಯೂ ಇರಲಿಲ್ಲವೆಂದರೆ ಅದಿನ್ನೆಂಥಾ ಸಮ್ಮೇಳನವಿದ್ದೀತು. ಕೊನೆಯಲ್ಲಿ ಯಾರೋ ಕಿಡಿಗೇಡಿಗಳು ಎಂದುಬಿಟ್ಟರೆ ಆದೀತಾ..? ಭಾಷೆಗೊಂದು ಮರ್ಯಾದೆ ಬೇಡವೆ..?  ಅಂಥವರೆಲ್ಲಾ ಸೇರಿಕೊಂಡು ನಿರ್ವಹಿಸುವ ಕನ್ನಡ ನುಡಿ ಹಬ್ಬದ ತೇರು ಎನ್ನುವ ನಮ್ಮ ಅಕ್ಷರ ಜಾತ್ರೆ ಅದಿನ್ಯಾವ ಮಟ್ಟದಲ್ಲಿ ಸಕ್ಸೆಸ್ ಎಂದು ಕಿರುಚಿಕೊಳ್ಳೊಣ. ತೀರ ಕನ್ನಡಕ್ಕೊಬ್ಬನೇ ಇರುವ ಸರ್ವಜ್ಞನ ವಚನಗಳನ್ನೇ ಈ ಮಟ್ಟಕ್ಕೆ ಹೀನಾಯವಾಗಿ ತಿರುಚಲು ಬಳಸಿಕೊಳ್ಳುವ ಮೂಲಕ ಅಪ್ರಭುದ್ಧತೆಯನ್ನು ಪ್ರದರ್ಶಿಸುವವರ ಕೈಯ್ಯಲ್ಲಿ ಸಾಹಿತ್ಯ ಸಮ್ಮೇಳನ ದೊರಕಿದಲ್ಲಿ ಏನಾಗಬೇಡ..? ಇಂಥದ್ದೆಲ್ಲಾ ಬೇಜವಾಬ್ದಾರಿಯ ವರ್ತನೆ ಮೂಲಕ ಯಾವ ಕನ್ನಡ ಉದ್ಧಾರವಾದೀತು..? ಅಷ್ಟಕ್ಕೂ ನಾನು ಕವಿ ನಾನು ಲೇಖಕ ಎಂದು ಸ್ವತ: ಪರಿಚಯಿಸಿಕೊಳ್ಳುವ ದರ್ದಿಗೆ ಬೀಳಬೇಕಾದ ಅನಿವಾರ್ಯತೆ ಅಲ್ಲೆಲ್ಲ ಸೃಷ್ಠಿಯಾಗಿದ್ದು ಗೊತ್ತಿಲ್ಲದ್ದೇನಲ್ಲ. ಹಿಂದೊಮ್ಮೆ ಸಮ್ಮೇಳನಾಧ್ಯಕ್ಷರನ್ನೇ ಯಾರೂ ಗಮನಿಸದೆ ಬಿಟ್ಟು ಹೋದದ್ದು, ಅವರಾಗಿ ಕರೆ ಮಾಡಿ ನಾನಿಲ್ಲಿದ್ದೀನಪ್ಪಾ ಎಂದಿದ್ದನ್ನು ಮೊನ್ನೆ ಮೊನ್ನೆ ಮಾಜಿ ಅಧ್ಯಕ್ಷರೊಬ್ಬರು ಪತ್ರಿಕೆಗಳ ಮೂಲಕ ಜಾಹೀರು ಮಾಡಿದ್ದು ಇದಕ್ಕೆಲ್ಲಾ ಸಾಕ್ಷಿ.
ಇಂಥಾ ವೇದಿಕೆಯಲ್ಲಿ ಪ್ರದರ್ಶಿಸುವ ವಾಗ್ಝರಿಯ ಒಂದು ತುಣುಕು ಇಲ್ಲಿದೆ.
"...ಇವತ್ತಿನ ಸಾಮಾಜಿಕ ತಲ್ಲಣ ಮತ್ತು ಸಮೂಹ ವೇದನೆಯ ದ್ಯೋತಕವಾಗಿ, ಪ್ರತಿ ಹಂತದಲ್ಲೂ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಕನ್ನಡದ ಸ್ಥಿತಿಗತಿಗಳನ್ನು ಅವಲೋಕಿಸುವಾಗ ತೀವ್ರ ಅಸಮಾಧಾನದ ನಡುವೆಯೂ ಗೋಚರಿಸುವ ಕೆಂಪು ಬಣ್ಣದ ಹೆಜ್ಜೆಗಳು ದಮನಿತ ಮತ್ತು ಶೋಷಿತರ ಪರವಾಗಿ ಅಷ್ಟೆ ಅಲ್ಲದೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಬದ್ಧತೆಯನ್ನು ಅನುಸಂಧಾನವಾಗಿಸಿಕೊಂಡು ಹೋಗುವಾಗ, ತಳಸ್ಪರ್ಶಿ ಸಂವೇದನೆಗಳೂ, ಮಧ್ಯಮ ಮಾರ್ಗಗಳೂ ಆಪ್ತ ಸಂವೇದನೆಯಲ್ಲಿ ತೊಡಗಿ ಅಭೂತಪೂರ್ವ ಯಶಸ್ಸಿನತ್ತ ಹೆಜ್ಜೆಹಾಕುವ ಸಮಕಾಲೀನ ತವಕ ಹಾಗು ಐತಿಹಾಸಿಕ ಪ್ರಜ್ಞೆಯನ್ನು ಮರೆಯದೆ ಸಮಾಜದಲ್ಲಿ ತಳವರ್ಗದ ಅಭಿವೃದ್ಧಿಗಾಗಿ ದನಿಯನ್ನು ಮೊಳಗಿಸುತ್ತಲೇ, ಸೂಕ್ತ ರೀತಿಯಲ್ಲಿ ಕನ್ನಡದ ಸಾಮಾಜಿಕ ಮತ್ತು ಜನಪರ ಕಾಳಜಿಯ ಹಿನ್ನೆಲೆಯಲ್ಲಿ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳವು, ಭಾಷಾ ಸಮೃದ್ಧತೆಯ ಜತೆಗೆ ಬದುಕಿನ ಸಮಾನತೆಗಳ ಮಧ್ಯದ ಅವಿನಾಭಾವ ಸಂಬಂಧಕ್ಕೆ ನಾವು ಸಾಕ್ಷಿ ಪ್ರಜ್ಞೆಗಳಾಗುವ ಮೂಲಕ ನಮ್ಮ ತಾಯಿ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಾ, ಕನ್ನಡದ ಹಿರಿಮೆಯನ್ನೂ ಸಮಾಜ ಮುಖಿಯಾಗಿ ಬೆಳೆಸುವತ್ತಾ ನಮ್ಮ ಗಮನವನ್ನು ಸೂಕ್ತ ರೀತಿಯಲ್ಲಿ ಕೇಂದ್ರೀಕರಿಸಬೇಕಿದೆ. .."
ಇಂತಹ ಭಾಷಣ ಅಥವಾ ಶಬ್ದಾಡಂಬರದಿಂದ ಅದ್ಯಾರಿಗೆ ಯಾವ ಉಪಯೋಗಗಳಾಗುತ್ತವೇ ನನಗೆ ಗೊತ್ತಿಲ್ಲ. ನನಗಂತೂ ನಯ್ಯಾ ಪೈಸೆ ಅರ್ಥವಾಗುವುದಿಲ್ಲ. ಆದರೆ ಇದೆಲ್ಲಾ ಸಮ್ಮೇಳನಕ್ಕೆ ಬೇಕು. ಕಾರಣ ಅದು ಬುದ್ಧಿ ಜೀವಿಗಳ ವಲಯ ಅಲ್ಲೆಲ್ಲಾ ಸುಲಭಕ್ಕೆ ಅರ್ಥವಾಗುವ ಮಾತನಾಡಿದರೆ ನಮಗೂ ನಿಮಗೂ ಫರಕ್ಕು ಏನಿದೆ..? ಎನ್ನುತ್ತದೆ ಆ ವಲಯ ಅದಕ್ಕೆ ಈ ಭಾಷಣ ಬೇಕು. ಏನು ಮಾಡೊಣ ಅರ್ಥೈಸುವಿಕೆಗಾಗಿ ಯಾವ ಅವಧಾನಿಗಳನ್ನು ಹುಡುಕಿಕೊಂಡು ಹೋಗೋಣ..?
ಇನ್ನು ಮೊನ್ನೆ ಅರ್ಧ ಶತಕ ದಾಟಿದ್ದ ವಾಚಕರ ಗುಂಪಿನ ಕವಿ ಗೋಷ್ಟಿಯ ಉತ್ಪನ್ನ ಏನು.. ? ಹೋಗಲಿ ವೇದಿಕೆಯಿಂದ ಇಳಿದ ಮೇಲೆ ಪಕ್ಕದವರು ಓದಿದ ಕವನ ಯಾವುದಮ್ಮಾ..? ಉಹೂ.. ಒಂದಾದರೂ ಉತ್ತರ ಸಿಕ್ಕಿದರೆ ಕೇಳಿ. ಇದಕ್ಕೆ ಅಯ್ಕೆ ಪ್ರಕ್ರಿಯೆ ಕೂಡಾ ಒಂದು ಪ್ರಹಸನವೇ. ಇನ್ನು ತಮ್ಮ ಹೆಸರು ತಿರಸ್ಕೃತವಾಗದಿರಲಿ ಎಂಬ ಕಾರಣಕ್ಕೆ ನಿರಂತರ ಫೆÇೀನು ಸಂಪರ್ಕ ಮತ್ತು ಆಯಾ ವಿಭಾಗದವರೊಡನೆ ನಿಕಟವಾಗಿರುವವರು ಗುಟ್ಟಾಗಿ ಹೇಳಿಕೊಳ್ಳುವದಾದರೂ ಏನು..? "..ಅಯ್ಯೋ ಯಾರಿಗಾದರೂ ನಿಷ್ಠುರವಾಗಿ ಇದ್ದರೆ ನನಗೆ ನಾಳೆ ವೇದಿಕೆ ಯಾರು ಕೊಡುತ್ತಾರೆ..? ಅದಕ್ಕೆ ನಾನು ಎರಡೂ ಕಡೆ. ನಿರ್ದಿಷ್ಟ ಅಭಿಪ್ರಾಯ ನಾನು ಕೊಡಲ್ಲ. ನನಗೆ ಎಲ್ಲರೂ ಬೇಕು.." ಆಯಿತಲ್ಲ ಇನ್ನೇನು ಬೇಕು. ಮೂರು ಕೊಟ್ಟರೆ ಅತ್ತ, ಆರು ಕೊಟ್ಟರೆ ಇತ್ತ, ಇವರಿಂದ ಅದಿನ್ನೆಂಥಾ ಸಾಹಿತ್ಯ ಸೇವೆ ಅಪೇಕ್ಷಿಸುತ್ತಿರಿ ನೀವು..? ಜತೆಗೆ ಹಾಗೆ ಕವನ ವಾಚಿಸಲು ಹತ್ತಿ ಕೂರುವವರಲ್ಲಿ, ಎಷ್ಟು ಜನ ಸಾಹಿತ್ಯಿಕವಾಗಿ ಜೀವಂತ ಇದ್ದವರು.? ಎಷ್ಟು ಜನರ ಇವರ ಕವಿತೆ, ಬರಹಗಳು ನಿರಂತರ ಪ್ರಕಟಣಾ ಮಾಧ್ಯಮದಲ್ಲಿವೆ..? ಫಲಿತಾಂಶ ಶೋಚನೀಯ. ಅದರಲ್ಲೂ ಫೇಸ್‍ಬುಕ್ ಎನ್ನುವ ಸ್ವತಂತ್ರ ಮಾಧ್ಯಮ ಬಂದ ಮೇಲೆ ಪ್ರತಿ ಗೋಡೆಯ ಮೇಲೂ ಕವಿಗಳೇ ಮೈದಳೆಯುತ್ತಿದ್ದಾರೆ. ಒಂದು ಸಾಲು ಬರಿ, ಮೂರು ತುಂಡು ಮಾಡು, ಒಂದರ ಕೆಳಗೊಂದು ಜೋಡಿಸು – ಇದು ಈಗಿನ ಕವಿತೆ ಬರೆಯುವ ಶೈಲಿ ಅಥವಾ ಪದ್ಧತಿಯ ಇಕ್ವೇಶನ್ನು. ಇದೇ ಸಾಲನ್ನು ಬರೆದರೂ ಅದೂ ಒಂದು ಕವನವೇ ಎಂದ ನಿಪುಣರೂ ಇವತ್ತು ನನ್ನ ಎದುರಿಗಿದ್ದಾರೆ. 
ಇದರಿಂದ ಅದಿನ್ಯಾವ ಸಮಾಜೋದ್ಧಾರ, ಸಾಮಾಜಿಕ ಸಂವೇದನೆ ಇತ್ಯಾದಿ ದೊಡ್ಡ ಶಬ್ದಗಳ ಸಂಕಲನಕ್ಕೆ ಉಪಯೋಗವಾಗುತ್ತದೆ ಆದೀತು ನನಗೆ ಗೊತ್ತಿಲ್ಲ. ಆದರೆ ನಾನು ಇಂತಿಂಥಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿತೆ ವಾಚಿಸಿದ್ದೆ ಎಂದು ಬಯೋಡಾಟ್‍ದಲ್ಲಿ ಬರೆದುಕೊಳ್ಳಲು ಮತ್ತು ಅದ್ರಿಂದ ಇನ್ನೊಂದು ಸಮ್ಮೇಳನಕ್ಕೆ ಹಾರಲು ಮೆಟ್ಟಿಲು ಭಾಗ್ಯ ಲಭ್ಯವಾಗೋದಂತೂ ಹೌದು. ಇದೆಲ್ಲಾ ಆಗದಿದ್ದರೆ ಅದ್ಯಾವ ಕನ್ನಡ ನಾಡು ಹಸಿದು ಕೂರುತ್ತಿತ್ತೋ ನನಗೆ ಗೊತ್ತಿಲ್ಲ. ಆದರೆ ಇಂತಾ ಗೋಷ್ಠಿ ಮತ್ತು ಅದರ ಉತ್ಪನ್ನ ಯಾವ ರೀತಿಯಲ್ಲಿ ಯಾರಿಗೆ ಪ್ರಯೋಜನವಾಗುತ್ತಿದೆ ಅದೂ ನನಗೆ ಗೊತ್ತಿಲ್ಲ. ಆದರೆ ಸಾರಾಸಗಾಟಾಗಿ ನನ್ನ ನಿಮ್ಮೆಲ್ಲ ತೆರಿಗೆ ದುಡ್ಡು ಇಂತಾ ಅಪ್ರಯೋಜಕ ಕಾರ್ಯಕ್ಕೆ ಖರ್ಚಾಗುತ್ತಿರುವುದಂತೂ ಹೌದು.
ಮೊನ್ನೆ ವಾಚಿಸಿದ ಕವನ ನೋಡಿ. ಯಾವ ಕೋನದಿಂದ ಏನಾದರೂ ಅರಪಾವು ಉಪಯೋಗವಾಗುವಂತಹ ಅಥವಾ ವಿದ್ವತ್ ಪೂರ್ಣ ಕವಿಗಳಿದ್ದುವಾ..? ಹಾಗೆ ಹೌದಾದರೆ ಅದರಿಂದ ಆಗಿರುವುದಾದರೂ ಏನು..? ಯಾರಿಗೆ ಯಾವ ಉಪಯೋಗವಾಯಿತು..?  ಹೀಗೆ ಪ್ರಶ್ನೆಗಳು ಗೋಷ್ಠಿಗಳಿಗೂ ಚರ್ಚಾ ವೇದಿಕೆಗೂ ಅನ್ವಯವಾಗುತ್ತದೆ. ಆದರೆ ಉತ್ತರಿಸಬೇಕಾದ ಮಹಾನುಭಾವರು ಆಗಲೇ ಸಮ್ಮೇಳನದ ನಾಸ್ಜಾಲಿಯಾಗಳಲ್ಲಿ ಮುಳುಗಿದ್ದಾರೆ. 





Monday, November 21, 2016

ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!

– ಸಂತೋಷಕುಮಾರ ಮೆಹೆಂದಳೆ.
maxresdefault

(ಇವತ್ತು ಮನೆಯಲ್ಲೊಂದು ಮದುವೆ ನಡೆಯುತ್ತಿದೆ ಎಂದಾದರೆ ಅನಾಮತ್ತು ತಿಂಗಳಗಟ್ಟಲೆಯಿಂದ ತಯಾರಿ ಮಾಡಿಕೊಳ್ಳುವ ಯಜಮಾನ ಮತ್ತವನ ಕುಟುಂಬ ಕೊನೆಯ ಕ್ಷಣದಲ್ಲಿ ಎನೋ ಮರೆತು ಬಿಟ್ಟಿರುತ್ತದೆ. ಮಂಟಪದಲ್ಯಾರೊ ಅದಕ್ಕಾಗಿ ಓಡಾಡುತ್ತಾರೆ. ಕೊನೆಗೆಲ್ಲಾ ಸಾಂಗವಾಗುತ್ತದೆ. ಒಂದು ಟೂರ್ ಅಂತಾ ಹೊರಟವರು ಅಯ್ಯೋ ಅದನ್ನು ಮರೆತು ಬಂದೆನೆನ್ನುವುದೇ ಸಾಮಾನ್ಯ ಆಗಿರುವಾಗ ನೂರೂ ಚಿಲ್ರೆ ಕೋಟಿ ಜನರನ್ನು ಸಂಭಾಳಿಸುವ ನಾಯಕ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಧೃಢ ನಿರ್ಧಾರ ಕೈಗೊಂಡು ಅಲ್ಲಲ್ಲಿ ಕೊಂಚ ಕ್ಯೂ ನಿಲ್ಲಿಸಿದಾಗಲೂ ಅದು ಕಾಮನ್ ಮ್ಯಾನ್‍ಗೆ ಹಬ್ಬದಂತೆ ಅನ್ನಿಸುತ್ತಿದ್ದಾಗಲೂ, ಏನು ಪ್ರಕಟಿಸಬೇಕು ಪ್ರಕಟಿಸಬಾರದು ಎನ್ನುವ ಪರಿಜ್ಞಾನ ಮಾಧ್ಯಮಗಳಿಗಿರಲೇ ಬೇಕಿತ್ತು.. )
ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಶಾಕ್ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಎಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ ಒಂದಿನ ಬೇಕಾಯಿತು. ಜತೆಗೆ ಜನಸಾಮಾನ್ಯ ಮನುಷ್ಯ ಕೊಂಚ ಗಲಿಬಿಲಿಯಾಗಿ ಕೂತನಾದರೂ ಮರುದಿನದ ಹೊತ್ತಿಗೆ ಮೈ ಕೊಡವಿ ಎದ್ದು ನಿಂತಿದ್ದ ಕ್ಯೂನಲ್ಲಿ. ಕಾರಣ ಈ ದೇಶಕ್ಕೆ ಆರ್ಬುದದಂತೆ ಅಡರಿಕೊಂಡ ರಾಜಕಾರಣಿಗಳ ಕಡೆಗೊಂದು ಸ್ಪಷ್ಟ ಮತ್ತು ಪರಮ ನಿರ್ಲಜ್ಯಕಾರಕ ಅಸಹ್ಯತೆ ಅವನ ಮನದಲ್ಲಿತ್ತು. ಅದಕ್ಕಾಗೇ ಇಂತಹದ್ದೊಂದು ಕ್ಯೂ ಮತ್ತು ಇದ್ದಕ್ಕಿದ್ದಂತೆ ಕೈ ಮುರಿದ ಹಣಕಾಸಿನ ಸ್ಥಿತಿಯನ್ನೂ ಸಹಿಸಿಕೊಳ್ಳಲು ತಯರಾಗಿ ಬಿಟ್ಟಿದ್ದ ಈ ದೇಶದ ಜನಸಾಮಾನ್ಯ.
ವಾರದ ನಂತರವೂ ಅಂಥಾ ದೊಡ್ಡ ಮಟ್ಟದ ಯಾವ ತೊಂದರೆಯೂ ದೇಶದ ಯಾವ ಭಾಗದಲ್ಲೂ ಆಗಿಯೇ ಇಲ್ಲ. ಇವತ್ತಿಗೂ ಬೆಂಗಳೂರು, ಮೈಸೂರು, ಬೆಳಗಾಂವಿ, ಹುಬ್ಬಳ್ಳಿ ಹೀಗೆ ಜನ ಬಾಹುಳ್ಯ ಇರುವ ಪ್ರದೇಶದಲ್ಲಿ, ನಿಗದಿತ ಮಿತಿಗಿಂತ ಹೆಚ್ಚು ಹಣ ಜೋಬಲ್ಲಿ ಇಟ್ಟುಕೊಂಡು ಓಡಾಡುವ ಕಲ್ಚರ್ ಪ್ರದೇಶದಲ್ಲೇ ಸ್ವಲ್ಪ ಹುಂಯ್ಯೋ ಹುಂಯ್ಯೋ ಎನಿಸಿದ್ದು ಹೌದು. ಅದರೆ ಅದು ಅನಗತ್ಯದ ವೆಚ್ಚಕ್ಕಾಗಿ ಬೇಕಿರುವ ಹಣವಾಗಿತ್ತು. ಅವರೂ ಎರಡ್ಮೂರು ದಿನದಲ್ಲಿ ದಾರಿಗೆ ಬಂದರು. ಅವರಿಗೆ ತಮ್ಮ ಮಿತಿ ಮತ್ತು ಅಗತ್ಯತೆಯ ಅರಿವು ನಿಖರವಾಗಿ ಬಂದುಬಿಟ್ಟಿತ್ತು. ನನ್ನ ಸ್ನೇಹಿತೆಯೊಬ್ಬಳು “..ಎರಡು ಸಾವಿರ ಇಲ್ಲದೆ ಓಡಾಡುತ್ತಿರಲಿಲ್ಲ ಆದರೆ ಇವತ್ತಿನವರೆಗೂ ಮುನ್ನೂರೇ ರೂಪಾಯಿಯಲ್ಲಿ ಬದುಕಿದ್ದೇನೆ.. ಥ್ಯಾಂಕ್ಸ್ ಮೋದಿ ಜೀ…” ಎಂದು ಫೇಸ್‍ಬುಕ್, ವಾಟ್ಸ್ ಆಪ್ ಸ್ಟೇಟಸ್ಸು ಮಾಡಿಕೊಂಡು ಬೀಗಿದಳು. ಅರಿವಿದ್ದೋ ಇಲ್ಲದೆಯೋ ಮೋದಿ ಎಲ್ಲರಿಗೂ ಬದುಕಿನ ಮತ್ತು ಸಾಮಾನ್ಯ ಜನತೆಗಿರಬೇಕಾದ ಪಾಠ ಹೇಳಿಬಿಟ್ಟಿದ್ದರು. ಇದೆಲ್ಲಾ ಆಗುವ ಹೊತ್ತಿಗೆ ಮೂರ್ನಾಲ್ಕು ದಿನ ಅಂದರೆ ಮೊದಲ ಧಡಾಪಢಿಯ (ಫಸ್ಟ್ ಕ್ರ್ಯೂಷಿಯಲ್ ) ಸಮಯ ಕಳೆದೇ ಹೋಗಿತ್ತು.
ಸೈಕಲ್ ತುಳಿಯುವವ, ಆಟೊ ಡ್ರೈವರು, ಪೆಟ್ರೋಲ್ ಬಂಕ್‍ಹುಡುಗ, ಪೇಪರ್ ಬಾಯ್, ಹಾಲಿನ ನಾರಾಯ್ಣ, ಸರಕು ಸಾಗಾಟದ ಮಾದೇವ, ಮೋಟರ್ ಸೈಕಲ್ ಅಂಗಡಿ ಬಷೀರ್, ಹೂವಿನ ಸುಶೀಲಾ, ಟೀ ಸ್ಟಾಲ್ ಮಲೆಯಾಳಿ ನಾಯರ್ರು, ಬಸ್ ಸ್ಟ್ಯಾಂಡ್ ಅಂಗಡಿ ಪೀಟರು, ಟೈಲರ್ ಅಂಬಿಕಾ, ದಕ್ಷಿಣೆಯಿಂದಲೇ ಬದುಕು ತೆಗೆಯುವ ಭಟ್ಟರು, ಚಿಕನ್ ಅಂಗಡಿ ಲಿಂಗರಾಜು, ಜ್ಯೋತಿಷಿ ಹೆಗಡೆರು, ಬುಕ್‍ಶಾಪ್ ಸುಬ್ರಮಣ್ಯ, ನಾಟಕದ ನಂದಿನಿ ಕೊನೆಗೆ ತೀರ ರಸ್ತೆ ಬದೀಯ ಮದುವಣಗಿತ್ತಿಯರವರೆಗೂ, “…ಇದು ಕೊಂಚ ಕಷ್ಟವಾಗುತ್ತಿದೆ ಆದರೆ ಮೋದಿ ಸಖತ್ ಕೆಲಸ ಮಾಡಿದಾರೆ, ಹಿಂಗೆ ನಡೀಲಿ ಎಳೆಂಟು ದಿನದಲ್ಲಿ ಸರಿ ಹೋಯ್ತದೆ…” ಎಂದೇ ಹೊಂದಿಕೊಂಡುಬಿಟ್ಟರು. ಯಾರಲ್ಲೂ ಯಾಕಾದರೂ ಈ ಎಕಾನಾಮಿಕಲ್ ಸ್ಟ್ರೈಕ್ ಮಾಡಿದರಪ್ಪಾ, ನಮ್ಮಂತಹವರ ಬದುಕು ಇನ್ನೆಂಗೆ ಎನ್ನುವ ಇನ್ನಾವುದೇ ಬಾಧೆಗಳೇ ಇರಲಿಲ್ಲ. ಇದರ ಹೊರತಾಗಿ ಒಂದು ಹಂತದ ಮೇಲ್ಮಟ್ಟದ ಬದುಕಿನ ನಾಗರಿಕರಲ್ಲೂ ಒಂದಿಷ್ಟು ಕ್ಯೂ ನಿಲ್ಬೇಕಾಗ್ತಿದೆ ಎನ್ನುವ ಗೊಣಗಾಟ ಬಿಟ್ಟರೆ ಅಪೂಟು ತಾಸುಗಟ್ಟಲೆ ನಿಲ್ಲುವ ಪ್ರಮೇಯಕ್ಕೆ ತಮ್ಮನ್ನು ಸಲೀಸಾಗೇ ಒಡ್ಡಿಕೊಂಡು ಈ ಐತಿಹಾಸಿಕ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು.
ತೀರ ಎಲ್ಲಿ ತಾಗಬೇಕೋ ಅಲ್ಲಿಗೇ ತಾಗಿತ್ತು ಮೋದಿ ಬೀಸಿದ್ದ ಚಾಟಿ. ಯಾರ ಹತ್ತಿರವೂ ಹೇಳಿಕೊಳ್ಳಲಾಗದ, ಇದ್ದರೂ ಅದನ್ನು ಬಿಳಿಯಾಗಿಸದ ಸಂಕಟಕ್ಕೆ ಬಿದ್ದವರು ಮಾತ್ರ ತೀರ ದೊಡ್ಡ ಮಂದಿಯೇ ಎನ್ನುವುದರಲ್ಲಿ ಯಾರಲ್ಲೂ ಸಂಶಯವೇ ಉಳಿದಿರಲಿಲ್ಲ. ಅದಕ್ಕಾಗೆ ಜನ ಸಾಮಾನ್ಯ ಕಷ್ಟ ಪಡಲು ತಯಾರಾಗಿದ್ದ. ಕಾರಣ ತನ್ನ ರಕ್ತ ಬಸಿದ ಹಣ ಕಪ್ಪಾಗಿ ಎಂಥೆಂಥವರದ್ದೋ ತಿಜೋರಿ ಸೇರುತ್ತಿದ್ದುದು ಈ ದೇಶದ ಪ್ರತಿಯೊಬ್ಬನಿಗೂ ತೀರಿಸಿಕೊಳ್ಳಲಾಗದ ಸಂಕಟವಾಗಿ ಕಾಡಿದ್ದು ಸುಳ್ಳಲ್ಲ. ಆದರೆ ಅದರ ಕಡೆಗೆ ಬೆರಳು ಮಾಡುವ ಧೈರ್ಯವಾಗಲಿ, ಜೀರ್ಣಿಸಿಕೊಳ್ಳುವ ಶಕ್ತಿಯಾಗಲಿ ಇಲ್ಲದ ಮೀಡಿಯಂ ವರ್ಗ ತೆಪ್ಪಗಿತ್ತು. ಆದರೆ ಈ ಹಂತದಲ್ಲಿ ಮಾಧ್ಯಮಗಳಿಗೆ ಅಸಲು ಜೀವ ತುಂಬುವ ಮಧ್ಯಮ ವರ್ಗದ ಬೆನ್ನಿಗೆ ಮತ್ತು ಮೋದಿಯವರ ನಿರ್ಧಾರಕ್ಕೆ ಜೊತೆ ನಿಲ್ಲಬೇಕಿದ್ದ ಮಾಧ್ಯಮಗಳು ಯಾಕೆ ವಿರೋಧ ಪಕ್ಷದ ಕೆಲಸ ಮಾಡ್ತೀವೆ…?
ಸಾಮಾಜಿಕ ಕಾಳಜಿ ಮತ್ತು ದೇಶದ ಬಗೆಗಿನ ಕಿಂಚಿತ್ತಾದರೂ ಸಂವೇದನೆ ಎನ್ನುವುದನ್ನೇ ಮಾಧ್ಯಮಗಳಲ್ಲಿ ಕಳೆದು ಹೋಗಿದೆ ಎನ್ನಿಸುತ್ತಿಲ್ಲವೇ..? ಜನ ಸಾಮಾನ್ಯರು ಹೇಗೆಲ್ಲಾ ಸಮಸ್ಯೆಯನ್ನು ನಿಭಾಯಿಸಬಹುದು, ಎಲ್ಲೆಲ್ಲಿ ಹೇಗೆ ಬ್ಯಾಂಕ್‍ನವರು ಕೆಲಸ ನಿರ್ವಹಿಸಿ ಹಣ ವಹಿವಾಟು ನೇರ್ಪುಗೊಳಿಸುತ್ತಿದ್ದಾರೆ, ಹೇಗೆ ಮಾಡಿದರೆ ಜನ ಸಾಮಾನ್ಯರ ಮತ್ತು ಅಕೌಂಟು ಇಲ್ಲದವರ ಸಮಸ್ಯೆ ಸರಿಹೋಗುತ್ತದೆ, ಯಾವ್ಯಾವ ಜಾಗದಲ್ಲಿ ಏನು ನಡೆಯುತ್ತಿದೆ ಯಾಕೆ ಗೊಂದಲವಾಗುತ್ತಿದೆ ಅದಕ್ಕೆ ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿ, ವಿವರ ಹಾಗು ಅದಕ್ಕಾಗೆ ಸಿದ್ಧವಿದ್ದ ವಾಲಂಟೀಯರ್‍ಗಳ ಸೈನ್ಯವನ್ನೆ ಸಜ್ಜು ಮಾಡಿ ತಾವೂ ಈ ಅಭಿಯಾನದಲ್ಲಿ ಭಾಗವಹಿಸಿ ನಿರಂತರ ಮಾಹಿತಿ ಪ್ರಸರಣ ಮಾಡುತ್ತಾ ಅಧ್ಬುತ ಫಲಿತಾಂಶಕ್ಕೆ ಕಾರಣವಾಗಬಹುದಿತ್ತು ಮಾಧ್ಯಮಗಳು. ಹಾಗೆಯೇ ದೇಶವನ್ನು ಬದಲಿಸಲು ಸಂಕಲ್ಪ ತೊಟ್ಟ ಪ್ರಧಾನಿಯ ಬೆನ್ನಿಗೆ ನಿಲ್ಲಬೇಕಿತ್ತು. ಸೈದ್ಧಾಂತಿಕ ಸಂಘರ್ಷಗಳೇ ಇದ್ದರೂ ಯುದ್ಧ ಕಾಲದಲ್ಲಿ ಪ್ರತಿಯೊಬ್ಬನೂ ಕೈ ಸೇರಿಸಲೇಬೇಕೆನ್ನುವುದನ್ನು ಅರಿತುಕೊಳ್ಳಬೇಕಿತ್ತು.
ಆದರೆ ಅತಿ ರಂಜನೀಯ ಸುದ್ದಿಗಾಗಿ ಮೀಡಿಯಾಗಳು ಮಾಡುವ ಕರಾಳ ಮುಖ ದಿನವೂ ಜಾಹೀರಾಗತೊಡಗಿದೆ ನೋಡಿ. ಇವರೆಲ್ಲ ಬರೆಯುತ್ತಿರುವುದು ಮತ್ತು ಅತಿ ಹೆಚ್ಚು ಬಾರಿ ತೋರಿಸಿದ್ದು, ಈಗಲೂ ತೋರಿಸುತ್ತಿರುವುದು, ಜನ ಸರತಿ ಸಾಲಿನಲ್ಲಿ ಕಷ್ಟಪಡುತ್ತಿದ್ದಾರೆ, ದುಡ್ಡು ಸಿಗುತ್ತಿಲ್ಲ, ಜನರ ಪರಿಸ್ಥಿತಿ ಗಂಭೀರವಾಗಿದೆ, ಸರಕಾರ ಸರಿಯಾದ ತಯಾರಿ ಮಾಡಿಕೊಂಡಿಲ್ಲ, ರಾಜಕೀಯ ನಾಯಕನೊಬ್ಬ ಸರದಿ ಸಾಲಿನಲ್ಲಿ ನಿಂತು ಬೆವರೊರೆಸಿಕೊಳ್ಳುವ ಗಿಮಿಕ್ ಶೋ ದ ರಿಪೀಟ್ ಟೆಲಿಕಾಸ್ಟು, ಅಲ್ಲೆಲ್ಲೊ ವಯಸ್ಸಿನ ಮತ್ತು ಸಹಜ ಅಘಾತಕ್ಕೊಳಗಾಗಿ ಮತ್ತು ಕಾಕತಾಳೀಯ ಎಂಬಂತೆ ಸರದಿ ಸಾಲಿನಲ್ಲಿ ಕುಸಿದು ಬಿದ್ದು ಸತ್ತರೆ, ಅದಕ್ಕೂ ಈ ಸ್ಟ್ರೋಕೆ ಕಾರಣವಾಯಿತು ಎನ್ನುವುದನ್ನು ಮರು ಜೋಡಿಸುತ್ತಾ, (ಇವತ್ತು ಸಾವಿರಕ್ಕೂ ಮಿಗಿಲು ರೈತರು ಸತ್ತಿದ್ದಾರಲ್ಲ ಅದನ್ನೊಮ್ಮೆಯಾದರೂ ಸ್ಪೇಶಲ್ ಬುಲೆಟಿನ್ ಮಾಡಿದ್ದೀರಾ..?) ಎಲ್ಲೆಲ್ಲಿ ಜನರಿಗೆ ತೊಂದರೆ ಎನ್ನುವುದಕ್ಕೆ ಏನೇಲ್ಲಾ ಕಾರಣಗಳಿವೆ ಎನ್ನುವುದನ್ನು ಬಿಡದೆ ಪಟ್ಟಿ ಮಾಡಿ ಇದಕ್ಕಾಗೆ ಕ್ಯಾಮೆರಾದಲ್ಲಿ ಮುಖ ತೋರಿಸಲು ಕಾಯ್ದಿರುವ ಆಸೆಬುರಕ ಜನರ ಕೈಯ್ಯಲ್ಲಿ ಹಲುಬಿಸುತ್ತಾ, ಸರಾಸರಿ ಸಮಯವನ್ನೆಲ್ಲಾ ಇದೊಂದು ಸಾಮಾಜಿಕ ಪೀಡುಗಾಗುತ್ತಿದೆಯಾ ಎನ್ನುವಂತೆ ವರ್ತಿಸುತ್ತಿವೆಯಲ್ಲಾ, ಈ ಚಾನೆಲ್‍ಗಳವರೆಲ್ಲಾ ಈ ದೇಶದ ನಾಗರಿಕರಾ ಇಲ್ಲ ಪ್ರೋಗ್ರಾಂ ಮಾಡಲು ಕರೆಸಿದ ಪರದೇಶದ ಪ್ರಜೆಗಳಾ..?
ತೀರ ತಾವೇ ಪ್ರಪಂಚದ ಸರ್ವ ಮಾಹಿತಿಯ ಭಂಡಾರದ ಅಂತಿಮ ವಿಶ್ಲೇಷಕರು ಎಂದು ಚರ್ಚೆಯ ಮಧ್ಯೆ ಮಧ್ಯೆ ಊಳಿಡುತ್ತಾ ಕೂಡುವ ಚಾನೆಲ್ ಸುದ್ದಿ ಸಂಪಾದಕರುಗಳೇ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿಕೊಂಡಿರುವ ನನಗೇ, ಈ ಪರಿಸ್ಥಿತಿಯ ಕಾರಣ ಭವಿಷ್ಯತ್ತಿನಲ್ಲಿ ಗಣನೀಯವಾಗಿ ಬೆಲೆ ಇಳಿಕೆ ಸೇರಿದಂತೆ ದೇಶಾದ್ಯಂತದ ಆರ್ಥಿಕ ಪ್ರಗತಿ ದುಪ್ಪಟ್ಟಾಗುತ್ತದೆ ಎನ್ನುವ ಸಣ್ಣ ಅಂದಾಜು ದಕ್ಕುವಾಗ ಮೇಧಾವಿಗಳಿಗೆಲ್ಲಾ ಇದರ ಭವಿಷ್ಯದ ಅರಿವು ಖಂಡಿತಕ್ಕೂ ಸಿಕ್ಕಲೇಬೇಕಲ್ಲ. ಜತೆಗೆ ಸುಪ್ರಿಂಕೋರ್ಟು ಇಂತಹ ಬ್ಯಾನ್‍ಗಳಿಗೆಲ್ಲಾ ತಡೆಯಾಜ್ಞೆ ಸಾಧ್ಯವೇ ಇಲ್ಲ ಎನ್ನುವುದನ್ನೂ ಸುದ್ದಿ ಮಾಡದ ನೀವೆಲ್ಲಾ ಯಾವ ರೀತಿಯ ಸಮಾಜದ ಜನತೆಗೆ ಸುದ್ದಿ ಕೊಡಬಲ್ಲಿರಿ..? ಕನಿಷ್ಟ ಸುಪ್ರಿಂಕೋರ್ಟಿನ ಆದೇಶ ಮತ್ತು ಆಶಯವನ್ನಾದರೂ ರಿಪೀಟೆಡ್ಲಿ ತೋರಿಸಿ ಕಾನೂನಿನ ದೃಷ್ಟಿಯಲ್ಲೂ ಇದು ಸರಿಯಾದ ನಿರ್ಧರವೇ ಎನ್ನುವ ಧನಾತ್ಮಕ ಧೋರಣೆ ಬಿತ್ತರಿಸಿ ಸಾಲಿನಲ್ಲಿ ನಿಲ್ಲುತ್ತಿರುವವರ ಮತ್ತು ಕ್ರಮೇಣ ಸಹನೆ ಕಳೆದುಕೊಳ್ಳುವ ಸಿಡುಕರ ಮನಸ್ಸಿಗೆ ಮುದ ಒದಗಿಸಬಹುದಿತ್ತು. ಆದರೇನು ಅಂಥಾ ಯಾವ ಪ್ರಯತ್ನಗಳೂ ಮೀಡಿಯಾಗಳಿಂದ ಆಗುತ್ತಲೇ ಇಲ್ಲ. ನಟಿಯೊಬ್ಬಳ ರಂಕುಗಳಿಗೆ ದಿನವಿಡೀ ಸಮಯ ಕೊಡುವ ಚಾನೆಲ್ಲುಗಳು, ದೇಶದ ಏಳ್ಗೆಗಾಗಿ ದಿನದಲ್ಲಿ ನಾಲ್ಕಾರು ಗಂಟೆ ಧನಾತ್ಮಕ ಕಾರ್ಯಕ್ರಮ ಮಾಡಲು ಸಮಯ ಇರಲಿಲ್ಲವಾ..?
ಇತ್ತ ಪತ್ರಿಕೆಗಳೂ ನಂ.1 ಎನ್ನುವ ಪೈಪೋಟಿಗೆ ಬೀಳುತ್ತಿರುವುದನ್ನು ಹೊರತಾಗಿಸಿದರೆ ಯಾವ ರೀತಿಯಲ್ಲೂ ಧನಾತ್ಮಕ ವರದಿಯ ಮುಖಗಳು ಎದ್ದು ಕಾಣುತ್ತಲೇ ಇಲ್ಲ. ಅದರಲ್ಲೂ ಇವತ್ತು ಐದಾರು ಲಕ್ಷದ ಆಸುಪಾಸಿನಲ್ಲಿರುವ ಪ್ರಸಾರಕ್ಕೆ ಕನಿಷ್ಟ ಇಬ್ಬರಂತೆ ಹಿಡಿದರೂ ಹತ್ತು ಲಕ್ಷ ಓದುಗರಿರುತ್ತಾರೆ. ಹಾಗಿದ್ದಾಗ ದಿನವೂ “… ಬ್ಯಾಂಕಿನ ಮುಂದೆ ತಪ್ಪದ ಸಾಲು, ಖಾಲಿಯಾದ ಏ.ಟಿ.ಎಮ್., ಎಲ್ಲೊ ದೊರೆಯುತ್ತಿಲ್ಲ ಹಣ, ಜನ ಸಾಮಾನ್ಯರಿಗೆ ಬರೆ-ಧನಿಕರಿಗೆ ಹೊರೆ, ಸುಧಾರಣೆಯೊಲ್ಲದ ಆರ್ಥಿಕ ತುರ್ತು ಪರಿಸ್ಥಿತಿ, ಎನ್ನುವಂತಹ ಟ್ಯಾಗ್‍ಲೈನಿನ ಬರಹವನ್ನೇ ಪ್ರಕಟಿಸುತ್ತಿದ್ದರೆ, ಇದಕ್ಕೆ ಕಾಯ್ದು ಕೂತ ಪೇಸ್‍ಬುಕ್ಕಿನ ಪೇಡ್ ಗಿರಾಕಿಗಳು ಲಬಕ್ಕನೆ ಅದನ್ನು ಶೇರ್ ಮಾಡಿ ಅಯ್ಯಯ್ಯೊ ಹೀಗೆಗೆ ಪತ್ರಿಕೆಗಳೆಲ್ಲಾ ಬರ್ದಿದಾವೆ, ಜನ ಸಿಕ್ಕಾಪಟ್ಟೆ ಸಮಸ್ಯೆಯಲ್ಲಿದ್ದಾರೆ ನಿಮಗೂ ಹೌದೆನ್ನಿಸುವುದಾದರೆ ಶೇರ್, ಲೈಕ್ ಮಾಡಿ ಎನ್ನುತ್ತಾ ಹುಯಿಲಿಗೆ ಬೀಳುತ್ತಿದ್ದಾರೆ. ಅತ್ತ ಅವನ್ಯಾರೋ ಕೃತಕ ಸರದಿ ಸೃಷ್ಟಿಸಲು ಸೂಚನೆ ಕೊಡುತ್ತಿದ್ದುದನ್ನು ಫೇಸ್‍ಬುಕ್ಕಿನಲ್ಲಿ ನೇರವಾಗಿ ಬಯಲು ಮಾಡುತ್ತಿದ್ದರೂ ಅದನ್ನೆಲ್ಲಾ ಸುದ್ದಿಯಾಗಿಸಬೇಕೆನ್ನುವ ಯಾವ ತಪನೆಯೂ ಸುದ್ದಿ ಮನೆಯಲ್ಲಿ ಕಂಡು ಬರುತ್ತಲೇ ಇಲ್ಲ.
ಕೇವಲ ಡಿಪಾಸಿಟ್ ಮಾಡಿ, ಇರುವ ಹಣವನ್ನಷ್ಟೆ ಬಳಸಿಕೊಳ್ಳಿ, ಎರಡೂ ರೀತಿಯ ವ್ಯವಹಾರಕ್ಕೆ ಬ್ಯಾಂಕುಗಳೂ ಬೇರೆಬೇರೆ ಸರದಿ ಸಾಲು ನಿಲ್ಲಿಸಿ ವ್ಯವಹರಿಸಲಿ, ಹೇಗೆಲ್ಲಾ ಸುಲಭಕ್ಕೆ ಕಡಿಮೆ ಸಮಯದಲ್ಲಿ ಹಣ ಪಡೆಯಬಹುದು, ಬ್ಯಾಂಕೂ ಕೂಡಾ ಹೇಗೆ ಇದಕ್ಕೆ ಸುಲಭವಾಗಿ ಸಹಕರಿಸಬೇಕು, ಹೆಚ್ಚಿನ ಕೌಂಟರ್ ತೆಗೆಯಲು ಹೇಗೆ ನಾಗರಿಕರೂ ಸಹಕರಿಸಬೇಕು, ಹೀಗೆ ಹಲವು ರೀತಿಯಲ್ಲಿ ಜನರನ್ನೂ ಬ್ಯಾಂಕ್ ಸಿಬ್ಬಂದಿಯನ್ನೂ ಪುಸಲಾಯಿಸಬಹುದಿತ್ತು. ಸುಲಭವಾಗಿ ದಿನಗಳನ್ನು ದಾಟಿಸಬಹುದಿತ್ತು. ಆದರೆ ಇವತ್ತಿಗೂ ಎಲ್ಲಾ ಪತ್ರಿಕೆ ನ್ಯೂಸ್ ಚಾನೆಲ್‍ನ ಪ್ರಮುಖ ಸುದ್ದಿಗಳೇನಿವೆ ನೋಡಿ..? ಬರೀ ಸರತಿ ಸಾಲಿನ ಚಿತ್ರಗಳು ಬಿಟ್ಟರೆ ಚಿಲ್ಲರೆ ಅಭಾವ. ಏನು ಬರೀ ಸ್ಮಶಾನ ಭಾವಗಳೇ ನಿಮ್ಮ ಸುದ್ದಿಯಾಗಬೇಕೇ..?
ತೀರ ಬೆರಳೆಣಿಕೆಯ ನಗರ ಹೊರತು ಪಡಿಸಿದರೆ ಎಲ್ಲೂ ಅನಾಮತ್ತು ಎರಡ್ಮೂರು ಗಂಟೆ ಕ್ಯೂ ನಿಂತಿದ್ದ ಉದಾ ಇಲ್ಲವೇ ಇಲ್ಲ. ಅದರಲ್ಲೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಮಾತ್ರವೇನಾ ಕರ್ನಾಟಕ ಎನ್ನುವುದನ್ನು ವಾಹಿನಿಗಳು ಮೊದಲು ಪ್ರಶ್ನಿಸಿಕೊಳ್ಳಬೇಕು. ನೆನಪಿರಲಿ ಅದು ಮುದ್ರಣ ಮಾಧ್ಯಮವೋ, ಚಾನೆಲ್‍ನ ಪ್ರಸಾರವೋ ಎರಡೂ ಕಡೆಯಲ್ಲಿ ಸಂಪಾದಕನ ತೀರ್ಮಾನ ಅಂತಿಮವಾಗುತ್ತದಾದರೂ, ಸ್ವಂತದ ಅಭಿಪ್ರಾಯಕ್ಕೀಗ ಸಮಾಜಿಕ ಜಾಲಾತಾಣಗಳಿರುವಾಗ ಯಾವ ದೊಣೆನಾಯಕನ ಅಪ್ಪಣೆ ಜರೂರತ್ತು ಬೇಕಿಲ್ಲ. ಉತ್ತಮ ಬರಹವಾಗಿದ್ದರೆ ನೋಡುನೋಡುತ್ತಿದ್ದಂತೆ ನೂರಾರು ಜನ ಶೇರ್ ಮಾಡುತ್ತಾರೆ. ಯಾವನಿಗಿದೆ ಇವತ್ತು ಸಂಪಾದಕನ ಮುಲಾಜು..?
ಹಾಗೇಯೆ ಪ್ರತಿಯೊಬ್ಬ ಪರ – ವಿರೋಧ ಅಬ್ಬರದ ಚರ್ಚೆ ಜತೆಗೆ ಪೇಡ್ ಪುಟನಿರ್ವಾಹಕರ ಅಕ್ಷರ ಹಾದರತನವೂ ಇಂತಹ ಸಂದರ್ಭದಲ್ಲಿ ಬೇತ್ತಲಾಗುತ್ತಲೇ ಇರುತ್ತದೆ. ಇವತ್ತು ಪ್ರಧಾನಿ ಕಾರ್ಯಾಲಯ ಕೆಲಸ ಮಾಡುತ್ತಿದೆ ಮತ್ತದು ಈ ದೇಶದ ಪ್ರಗತಿಗೆ ಕಟಿಬದ್ಧವಾಗಿದೆ ಎನ್ನುವುದನ್ನು ಪಬ್ಲಿಕಾಗಿ ಮಾಡುತ್ತಿದ್ದರೂ ಅದು ಗಂಜಿ ಗಿರಾಕಿಗಳಿಗೆ ಪಥ್ಯವಾಗುವುದಿಲ್ಲ, ಅವರೆಂದಿಗೂ ಗಂಜಲದಲ್ಲಿ ಬಿದ್ದ ನೊಣಗಳಂತೆ ಪತರುಗುಟ್ಟುತ್ತಲೇ ಇರುತ್ತಾರೆ. ಅದರೆ ಇದನ್ನೆಲ್ಲಾ ತಹಬಂದಿಗೆ ತರಬಹುದಾಗಿದ್ದ ಮಾಧ್ಯಮಗಳಿಗೇನಾಗಿದೆ ಧಾಡಿ…? ಬರೀ ಟಿ.ಆರ್.ಪಿ. ಮಾತ್ರ ನಿಮ್ಮ ಉಸಿರಾ..? ನೆನಪಿರಲಿ. ಪುಟಗೋಸಿ ನೂರೈವತ್ತು ಕ್ಯಾಮೆರಾ ಪಾಯಿಂಟುಗಳು ಜನಾಭಿಪ್ರಾಯವನ್ನು ನಿರ್ಧರಿಸಲಾರವು. ಹಾಗಾಗೇ ಅಧ್ಬುತ ಪ್ರೋಗ್ರಾಂ ಆಗಬಹುದೆಂದು ಏಣಿಸಿದ ಕಾನ್ಸೆಪ್ಟುಗಳು ಅಷ್ಟೆ ಬೇಗ ಮಕಾಡೆ ಮಲಗಿದ ಉದಾ. ಗಳು ಎದುರಿಗಿವೆ.
ಏನೇ ಇರಲಿ. ಜನರು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಬರುವುದನ್ನು ಸುಲಭಕ್ಕೆ ನಂಬುವ ಪರಿಸ್ಥಿತಿ ಇರುವಾಗ ಕನಿಷ್ಟ ಜರೂರತ್ತಿನ ಸಮಯದಲ್ಲಾದರೂ ಅತಿಮಾನುಷ, ಅತಿ ರಂಜನೀಯ ಸುದ್ದಿಗಳ ಹಸಿವು ಕಡಿಮೆ ಮಾಡಿಕೊಳ್ಳಿ. ಆಫ್ಟರ್‍ ಆಲ್ ನೀವೆಲ್ಲರೂ ಈ ದೇಶಕಾಯುವ ಅಥವಾ ನಿರ್ಧಾರ ರೂಪಿಸುವಂತಹ ಎರಡೂ ಆಯಕಟ್ಟಿನ ಜಾಗದಲ್ಲೂ ಇಲ್ಲ. ನೀವೇನಿದ್ದರೂ ಬರೀ ಚಿತ್ರಣ ಕೊಡುವ ಮಂದಿ. ಈಗಾಗಲೇ ಸಾರ್ವಜನಿಕರಿಗೆ ನಿಮ್ಮ ಹಣೆಬರಹ ಗೊತ್ತಾಗಿರುವಾಗ ಅದಕ್ಕೆಲ್ಲಾ ಅತ ತಲೆ ಕೆಡಿಸಿಕೊಳ್ಳಲಾರ. ಆದರೆ ಇದ್ದರೂ ಇರಬಹುದೇನೋ ನಮ್ಮ ಹುಡುಗ ಟಿ.ವಿ.ಲಿ ಹೇಳ್ತಿದಾನೆ ಎಂದು ನಂಬಿಕೂಡುವ ಇನ್ನೊಂದು ವರ್ಗವಿದೆಯಲ್ಲ ಅಂತವರ ನಂಬುಗೆಯ ಬುನಾದಿಯನ್ನೇ ಹಳ್ಳ ಹಿಡಿಸಿಬಿಡುತ್ತೀರಲ್ಲಾ ನಿಮಗೆಲ್ಲಾ ನಿಜಾಯಿತಿ ಮತ್ತು ಆತ್ಮಸಾಕ್ಷಿ ಎನ್ನುವ ಪದಗಳ ಅರ್ಥವನ್ನು ಇನ್ನೊಮ್ಮೆ ವಿವರಿಸಬೇಕಿದೆಯಾ..?
ಇದಕ್ಕೆಲ್ಲಾ ವಿವರಣೆ ಇದೆಯಾ..?
  • ಜನರು ಹಿಂದೆಯೂ ಆಧಾರ ಕಾರ್ಡಿಗೆ, ರೇಶನ್ನಿಗೆ, ಪಂಚಾಯತ್ ಸೌಲಭ್ಯಕ್ಕೆ, ಪಹಣಿ ಪತ್ರಕ್ಕೆ, ರೇಲ್ವೆ ಟಿಕೇಟ್ಟಿಗೆ (ತತ್ಕಾಲಗಾಗಿ ಬೆಳಿಗ್ಗೆ ಐದಕ್ಕೆ ಸರದಿ ಹಿಡಿಯುವವರೂ ಇವತ್ತಿಗೂ ಇದ್ದಾರೆ) ಹೀಗೆ ಸತತವಾಗಿ ಬದುಕಿನಲ್ಲಿ ಆಗಾಗ ಸರದಿ ಕಾಯುತ್ತಲೇ ಇದ್ದಾರೆ. ನೆನಪಿರಲಿ ವೈದ್ಯರೊಬ್ಬರ ಭೇಟಿಗೆ ದಿನವೂ ಕನಿಷ್ಟ ನಾಲ್ಕೈದು ಗಂಟೆಯೂ ಕಾಯಬೇಕಾಗುತ್ತದೆ. ಮುಂದೂ ಕಾಯುತ್ತಾರೆ ಇದರಲ್ಲಿ ಡೌಟೇ ಇಲ್ಲ. ಆದರೆ ಇದಕ್ಕೆ ಮಾತ್ರ ಯಾಕೆ ಈ ಹುಯಿಲು..? ಅದೂ ಯಾವ ವರ್ಗದಲ್ಲೂ ಅಸಮಾಧಾನ ಎನ್ನುವುದು ಕಂಡುಬಾರದಿದ್ದಾಗಲೂ.?
  • ಪ್ರಧಾನಿ ನೋಟ್ ಬ್ಯಾನ್ ಎನ್ನುತ್ತಿದ್ದಂತೆ ಪತ್ರಕರ್ತನೊಬ್ಬ ನಿಮ್ಮ ನೋಟೆಲ್ಲ ಬರೀ ಪೇಪರು ಎನ್ನುತ್ತಾನೆ. ಅದರರ್ಥ ಅದರ ಬೆಲೆ ಕಳೆದು ಹೋಯಿತು ಎಂದೇ..? 50 ದಿನ ಕಾಲಾವಕಾಶ ಇದ್ದರೂ ನಾಳೆನೆ ಬದಲಾವಣೆ ಬೇಕೆನ್ನುವಂತೆ ಪಬ್ಲಿಕ್ಕನ್ನು ರೊಚ್ಚಿಗೆಬ್ಬಿಸಿದ್ದೇ ಇಂತಹ ಸುದ್ದಿಗಳು.
  • ಸರತಿ ಸಾಲಿನಲ್ಲಿ ನಿಂತು ಸತ್ತದ್ದೇ ದೊಡ್ಡ ಸುದ್ದಿ ಮಾಡಿದ ಮಾಧ್ಯಮಗಳು, ನಂತರದಲ್ಲಿ ಅದಾಗಿದ್ದು ಸಹಜ ಸಾವು ಎನ್ನುವ ಫ್ಯಾಕ್ಟ್ ನ್ನು ಬಿತ್ತರಿಸುವುದೇ ಇಲ್ಲವಲ್ಲ. ಏನಾಗಿದೆ ನಿಮಗೆ ಧಾಡಿ..? ಪಿಂಕ್ ನೋಟಿನ ಕಲರ್ರು ತುಟಿಗೆ ಸಖತ್ತಾಗಿದೆ ಎನ್ನುವುದೇ ಪ್ರಮುಖ ಸುದ್ದಿಯಾ ಅಥವಾ ನೋಟು ಒರಿಜಿನಲ್, ಅದರಲ್ಲಿ ಮೋದಿ ಆಪ್ ಮೂಲಕ ಒರಿಜಿನಾಲಿಟಿ ನೋಡಬಹುದು ಎನ್ನುವುದನ್ನು ಪ್ರಮುಖ ಸರಕಾಗಿಸಬೇಕಾ..?
ಈ ಬ್ಯಾನ್ ಮೂಲಕ ದೊಡ್ಡ ಮಟ್ಟದ ಭ್ರಷ್ಟಚಾರ ತಡೆಯಲಾಗುತ್ತಿದೆ ಇದಕ್ಕಾಗಿ ನಾವು ಏನು ಮಾಡಬೇಕು..? ದೇಶದ ಕೊನೆಯ ವ್ಯಕ್ತಿಯವರೆಗೂ ಇದರ ಪ್ರಕ್ರಿಯೆ ಹೇಗೆ ತಲುಪಬೇಕು ಮತ್ತು ಇದನ್ನು ಸರಿದೂಗಿಸಲು ಬ್ಯಾಂಕು ಹೇಗೆ ತಕ್ಷಣಕ್ಕೆ ಚುರುಕಾಗಿ ಕೆಲಸ ನಿರ್ವಹಿಸದರೆ ಇನ್ನೂ ಅನುಕೂಲವಾದೀತು ಎನ್ನುವುದನ್ನು ಚಿಂತಿಸಿ ತರ್ಕಿಸಿ ಜನರ ಬಳಿಗೆ ಮಾಹಿತಿ ಕೊಡಬೇಕಿದ್ದವರೆಲ್ಲರೂ, ಇಲ್ಲ ಇದನ್ನು ಮೊದಲೇ ಹೇಳಿ ಮಾಡಬೇಕಿತ್ತು, ಈ ನಿರ್ಧಾರ ಹಿಂಪಡೆಯಬೇಕಿತ್ತು, ನೋಟು ಬ್ಯಾನ್ ಮಾಡುವುದನ್ನು ಕೂಡಲೇ ಹಿಂದಕ್ಕೆ ಪಡೆಯದಿದ್ದರೆ ನಾವು ಹೋರಾಟ ಮಾಡುತ್ತೇವೆ…. ಇವುಗಳೂ ಸುದ್ದಿಗಳೇನ್ರಿ..? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಇಷ್ಟು ಋಣಾತ್ಮಕ ಧೋರಣೆ ಅನುಸರಿಸಿದರೆ ಪ್ರಜಾ ಪ್ರಭುತ್ವಕ್ಕೆ ಧಕ್ಕೆಯಾಗುವುದು ಅತ್ಲಾಗೆ ಇರಲಿ, ನಾಲ್ಕನೆಯ ಅಂಗದ ಸ್ಥಾನವನ್ನೂ ಕಳೆದುಕೊಳ್ಳಬೇಕಾದೀತು ಎಚ್ಚರ.


Thursday, November 17, 2016


ಸ್ಟ್ರೋಕ್‍ಗಳನ್ನು 
ಬೇಡವೆನ್ನುವುದೂ ಭಯೋತ್ಪಾದನೆಯೇ...!

 (ಇದ್ದಕ್ಕಿದ್ದಂತೆ ಆರ್ಥಿಕ ಸ್ಟ್ರೋಕ್‍ನ ಸಿಕ್ಸರ್ ಭಾರಿಸಿದ ಪ್ರಧಾನಿಯ ಹೊಡೆತಕ್ಕೆ ಅಕ್ಷರಶ: ಕಪ್ಪುಹಣದ ಧಣಿಗಳು ಅಲ್ಲಾಡಿಹೋಗಿದ್ದಾರೆ. ಪ್ರಧಾನಿ ಅದ್ಯಾವ ಮಟ್ಟದಲ್ಲಿ ಆಪತ್ತು ಎದಿರು ಹಾಕಿಕೊಂಡಿದ್ದಾರೆಂದರೆ ಅವರ ಶತ್ರುಗಳ ಸಂಖ್ಯೆ ಒಂದೇ ನಿಮಿಷದಲ್ಲಿ ಸಾವಿರ ಪಟ್ಟು ಹೆಚ್ಚಿದ್ದು ಸುಳ್ಳಲ್ಲ. ಆದರೆ ಈ ದೇಶ ಒಮ್ಮೆ ತೀರ ನಿಶ್ಚಿಂತೆಯಿಂದ ನಿದ್ರಿಸುವಂತಹ, ನಮಗೊಬ್ಬ ನಾಯಕನಿದ್ದಾನೆ ಎನ್ನಿಸುವಂತಹ ಕೋಟ್ಯಾಂತರ ಭಾರತೀಯರ ಬೆಂಬಲವನ್ನೂ ಒಂದೇ ಒಂದು ಕವರ್‍ಡ್ರೈವ್‍ನಿಂದ ಗಿಟ್ಟಿಸಿಬಿಟ್ಟಿದ್ದಾರೆ ಮತ್ತು ಈ ವಿಷಯವೇ ಇವತ್ತು ಕಳೆದುಕೊಂಡ ಕಪ್ಪುಹಣಕ್ಕಿಂತಲೂ ಮಿಗಿಲಾಗಿ ಮರ್ಮಾಘಾತವನ್ನುಂಟು ಮಾಡಿದ್ದು ಎದುರಾಳಿಗಳಿಗೆ. ಒಂದು ಸರ್ಜಿಕಲ್ ಸ್ಟ್ರೈಕೇ ಇನ್ನೂ ಜೀರ್ಣವಾಗಿರಲಿಲ್ಲ. ಅಡ್ಡೇಟಿನ ಮೇಲೆ ಗುದ್ದೇಟು ಎನ್ನುವಂತೆ ಮೋದಿ ಇದನ್ನೂ ಬಾರಿಸಿ ಬಿಟ್ಟಿದ್ದಾರೆ, ಎಂದಿನಂತೆ ಎಬುಜೀಗಳು ಪಿಸಣಾರಿತನದಿಂದ ಮುಲಮುಲ ಎನ್ನತೊಡಗಿದ್ದಾರೆ ಕ್ಷೀಣವಾಗಿ..)  
ಒಂದು ಸಣ್ಣ ಕ್ಯಾಲ್ಕುಲೇಶನ್ನು. ಅನಾಮತ್ತು ಎಪ್ಪತ್ತು ವರ್ಷ ಆಗೊಗಿದೆ. ಯಾಕೆ ಇನ್ನು ಭಾರತಕ್ಕಾಗಲಿ ಪಾಕಿಸ್ತಾನಕ್ಕಾಗಲಿ ಕಾಶ್ಮೀರ ವಿಷಯವನ್ನು ಬಗೆಹರಿಸಲೇ ಆಗುತ್ತಿಲ್ಲ. ಎಷ್ಟೆ ಬಡಿದಾಡಿದರೂ ಭಾರತವಂತೂ ಅದನ್ನು ಬಿಟ್ಟುಕೊಡಲಾರದು. ಎಷ್ಟೇ ಮೇಲೆ ಬಿದ್ದು ಯುದ್ಧ ಮಾಡಿದರೂ ಪಾಕಿಸ್ತಾನಕ್ಕೆ ಕಾಶ್ಮೀರ ವಿಷಯದಲ್ಲಿ ಒದೆ ತಿನ್ನುವುದೂ ತಪ್ಪುತ್ತಿಲ್ಲ. ಹೋಗಲಿ ಸಾವಿರ ವರ್ಷದ ಯುದ್ಧ ಮಾಡಿ ಗೆಲ್ಲುತ್ತೇನೆಂದು ಹೂಂಕರಿಸಿದ ಯಾವ ನಾಯಕನಿಗೂ ಕನಿಷ್ಟ ತನ್ನದೇ ಸೈನ್ಯವನ್ನೂ ಸಂಭಾಳಿಸುವ ಖದರ್ರೂ ಬಂದಿದ್ದೇ ಕಾಣುತ್ತಿಲ್ಲ. (ಜನರಲ್ ಯಾಹ್ಯಾ ಖಾನ್‍ನಿಂದ ಬೆನಜೀರ್ ಭುಟ್ಟೊವರೆಗೂ ಒಬ್ಬರೂ ಸರಿಯಾಗಿ ಅವರ ಅಧಿಕಾರಾವಧಿಯನ್ನೇ ಮುಗಿಸಲಾಗಲಿಲ್ಲ. ಇದ್ದ ನೆಲದಲ್ಲೇ ನೇಣು, ರಾಜಕೀಯ ಕೊಲೆಗಳಿಗೆ ಬಲಿಯಾಗಿ ಹೋದರಲ್ಲ. ಇನ್ನು ಸಾವಿರ ವರ್ಷದ ಯುದ್ಧವೆಲ್ಲಿಂದ ಬರ್ಬೇಕು..?) ನೇರ ಯುದ್ಧದಲ್ಲಿ ಗೆಲ್ಲಲಾಗುವುದೇ ಇಲ್ಲ ಪರೋಕ್ಷ ಯುದ್ಧದಲ್ಲಂತೂ ಮೋದಿಯಂತಹ ದೈತ್ಯ ಕೆಲಸಗಾರ ಪ್ರಧಾನಿಯಾದ ಮೇಲೆ ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣ ನಿರ್ಮಿಸಿಬಿಟ್ಟಿದ್ದಾರೆ. ಇಂತಹ ಕಾರಣಗಳಿಗಾಗೇ ಇವತ್ತು ಕಾಶ್ಮೀರ ಬಗೆಹರಿಯುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೆ, ಅಲ್ಲಿನ ಆರ್ಥಿಕತೆಯನ್ನು ಪಾಕಿಸ್ತಾನ ಬುಡಮೇಲು ಮಾಡಿದ ರೀತಿಯಿದೆಯಲ್ಲ ಅದ್ಯಾವ ಪರಿಯಲ್ಲಿ ಕಣಿವೆ ರಾಜ್ಯವನ್ನು ಜೀರ್ಣಗೊಳಿಸಿತ್ತೆಂದರೆ ಮೋದಿ ಹೀಗೊಂದು ಆರ್ಥಿಕ ಸ್ಟ್ರೈಕ್ ಘೋಷಿಸದೆ ಕಾಶ್ಮೀರದ ಅನಧೀಕೃತ ಆರ್ಥಿಕತೆಯ ಬೆನ್ನೆಲುಬು ಮುರಿಯುವುದು ಸಾಧ್ಯವೇ ಇರಲಿಲ್ಲ.
(ಅಂದ ಹಾಗೆ ಜಾಗತಿಕವಾಗಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವುದು ಯಾವ ವಿದೇಶಿ ನಾಯಕನಿಗೂ ಬೇಕಿಲ್ಲ ಮತ್ತು ಅಂತರಾಷ್ಟ್ರೀಯ ರಾಜಕೀಯ ಚದುರಂಗದ ದಾಳವಾಗಿ ಇದು ಬಳಕೆಯಾಗುತ್ತಿದೆ. ಅದಕ್ಕಾಗೇ ಒಂದು ನಿರ್ಣಾಯಕ ಹಂತವನ್ನು ಸೃಷ್ಟಿಸಲು ಸಾಧ್ಯವಾಗುತ್ತಲೇ ಇಲ್ಲ ಹೊರತಾಗಿ ಭಾರತೀಯ ಮುಸ್ಲಿಂರಿಗಾಗಲಿ, ಪಾಕಿಗಳಿಗಾಗಲಿ ತೀರ ಎದೆಯೊಡೆದುಕೊಂಡು ಯುದ್ಧ, ಮತ್ತೊಂದು ಎಂದು ನಿಲ್ಲುವ ಹರಕತ್ತೇ ಇಲ್ಲ. ಆದರೆ ನಿಯಂತ್ರಣದ ದಂಡ ಇರುವುದೇ ಬೇರೆ ದೇಶಗಳ ಕೈಯ್ಯಲ್ಲಿ. ಅವರು ಪಾಕಿಸ್ತಾನವನ್ನು ತಮ್ಮಿಚ್ಛೆಯಂತೆ ಛೂ ಬಿಡುತ್ತಿದ್ದರೆ ಅದನ್ನು ಕೊಟ್ಟುಕೂತಿದ್ದು ಯಾರೆಂದು ಮತ್ತೆ ಹೇಳಬೇಕಿಲ್ಲ. ಈ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. )
ಅದರಲ್ಲೂ ಮೊದಲೇ ಪ್ರಕ್ಷಬ್ಧ ಪರಿಸ್ಥಿಯ ಲಾಭ ಎತ್ತುವುದರಲ್ಲಿ ನಿಸ್ಸಿಮವಾಗಿರುವವರನ್ನು ಹೀಗೆ ಅಧೀಕೃತವಾಗೇ ಹೊಡೆಯುವ ನಿಖರ ಔಚಿತ್ಯ ಕೈಗೊಳ್ಳಲೇಬೇಕಿತ್ತು. ಕಾರಣ ಕಾಶ್ಮೀರದಾದ್ಯಂತ ಲಭ್ಯವಿರುವ ಖೋಟಾ ನೋಟು ಮತ್ತು ಕಪ್ಪು ಹಣದ ಚಲಾವಣೆಯ ಸಂಖ್ಯೆ ನೂರಕ್ಕೆ, ನೂರಾ ಒಂಭತ್ತು ದಾಟಿತ್ತು ಎನ್ನುತ್ತದೆ ಸಮೀಕ್ಷೆ. ಅದರೊಂದಿಗೆ ಎದುರಿಗೇ ಇರುವ ಉ.ಪ್ರ. ಚುನಾವಣೆಯಲ್ಲಿ ಹರಿದು ಬರಲಿದ್ದ ಕಪ್ಪುಹಣದ ಮೊತ್ತವೇ ಮೂವತ್ತು ಸಾವಿರ ಕೋಟಿ ಮೀರಲಿತ್ತು. ಏನಾಗಬೇಡ ಒಂದು ದೇಶದ ಆರ್ಥಿಕತೆ. ಮೋದಿಯವರನ್ನು ಹೊರತು ಪಡಿಸಿದರೆ ಇನ್ನೊಬ್ಬೆ ಒಬ್ಬ ಮೀಟರು ಇರುವ ಪ್ರಧಾನಿ ಭವಿಷ್ಯತ್ತಿನಲ್ಲಿ ಬರುವ ಬಗ್ಗೆನೆ ನನಗೆ ಸಂಶಯವಿದೆ. 
ಅದಕ್ಕೆ ಸರಿಯಾಗಿ ಇದ್ದಕ್ಕಿದ್ದಂತೆ ಆರ್ಥಿಕ ವ್ಯವಸ್ಥೆಯ ಮೇಲೂ ಸುಪರ್‍ಸ್ಟ್ರೋಕ್ ಹೊಡೆದು ಒಂದೇ ಆರ್ಡರ್‍ನಲ್ಲಿ ಸಂಪೂರ್ಣ ಭೂಗತ ಲೋಕ ಮತ್ತು ಶತ್ರುರಾಷ್ಟ್ರಗಳು ಸುಲಭವಾಗಿ ಭಾರತವನ್ನು ಅಸ್ಥೀರಗೊಳಿಸುವ ಯೋಜನೆ ರೂಪಿಸಿದ್ದುವಲ್ಲ ಅದನ್ನು ಯಾವ ಹಂತದಲ್ಲೂ ಮರುಬಳಕೆಗೂ, ಇನ್ಯಾವ ರೀತಿಯಲ್ಲೂ ಉಪಯೋಗಕ್ಕೆ ಬಾರದಂತೆ ಬರಬಾದು ಮಾಡಿಬಿಟ್ಟಿದ್ದಾರೆ. ಇನ್ನೆಲ್ಲಿಂದ ಎದ್ದು ಕೂರಬೇಕು ಖೋಟಾ ನೋಟಿನ ಜಾಲ. ಒಂದು ಗೊತ್ತಿರಲಿ. ಭಾರತದೊಳಕ್ಕೆ ಬರುತ್ತಿದ್ದ ಖೋಟಾ ನೋಟಿನ ಜಾಲದ ವ್ಯವಸ್ಥೆ ಇಲ್ಲೊಂದು ಪ್ರಬಲ ಸಮಾನಾಂತರ ಆರ್ಥಿಕತೆಯನ್ನೇ (ಬ್ಲಾಕ್ ಎಕಾನಮಿ) ಹುಟ್ಟು ಹಾಕಿತ್ತು. ಅದ್ಯಾವ ರೀತಿಯಲ್ಲಿ ಬೆಳೆದು ನಿಂತಿತ್ತೆಂದರೆ ಯಾವ ಮುಲಾಜೂ ಇಲ್ಲದೆ ದಾಳಿ ಮಾಡಿದರೂ ನಿಯಂತ್ರಣ ಅಸಾಧ್ಯವೇ ಎನ್ನುವ ಹಂತವನ್ನು ತಲುಪಿಬಿಟ್ಟಿತ್ತು. ಹಾಗಾಗೇ ದೇಶಿಯವಾಗೂ ಮತ್ತು ಅಂತರಾಷ್ಟ್ರೀಯವಾಗೂ ಭಾರತವನ್ನು ಪ್ರಬಲಗೊಳಿಸುವ ಉದ್ದೇಶದಿಂದ ಮೋದಿ ಮೂರೂವರೆ ತಿಂಗಳಿಂದ ರಹಸ್ಯವಾಗಿ ಕಾರ್ಯಾಚರಣೆಗಿಳಿದಿದ್ದ ಯೋಜನೆಯನ್ನು ಅನಾಮತ್ತಾಗಿ ಜಾರಿಗೆ ತಂದರು. 
ಇದರಿಂದಾಗಿ ಸರಾಸರಿ ತಿಂಗಳಿಗೆ ಭಾರತದಲ್ಲಿದ್ದ ಎಜೆಂಟರಿಗೆ ಸಲ್ಲಿಕೆಯಾದ ನಂತರವೂ ಉಳಿಯುತ್ತಿದ್ದ ಐನೂರು ಕೋಟಿಯಷ್ಟು ಪಾಕಿಸ್ತಾನದ ಮಂತ್ಲಿ ಆಮದನಿಗೆ ಬ್ರೆಕ್ ಬಿದ್ದಿದೆ. ಅಲ್ಲಿಂದ ಬರುತ್ತಿದ್ದ ಖೋಟಾ ನೋಟು ಹಾವಳಿ ಯಾವ ರೀತಿಯಲ್ಲೂ ನಿಲ್ಲಿಸಲಾಗುತ್ತಲೇ ಇಲ್ಲ. ಆವತ್ತು ಸಿಕ್ಕಿಬಿದ್ದ ಹ್ಯಾಡ್ಲಿ ಮತ್ತು ಬಾಂಗ್ಲಾದಿಂದ ಆಮುದಾದ ವಸ್ತುವಿನಲ್ಲಿದ್ದ ಕಪ್ಪು ಹಣ ಮತ್ತು ಪ್ರತಿಬಾರಿ ಭಯೋತ್ಪಾದಕರ ಜೋಬಿನಲ್ಲಿರುತ್ತಿದ್ದ ಕಂತೆಗಟ್ಟಲೇ ಹಣಗಳೂ, ತೀರ ಅಸಲಿಯನ್ನೇ ಹೋಲುವ ಖೋಟಾನೋಟು ಪಾಕಿಸ್ತಾನದ ಉತ್ಪನ್ನವೇ ಆಗಿರುತ್ತಿತ್ತು ಎನ್ನುವುದನ್ನು ಬೇರೆ ಹೇಳಬೇಕಿಲ್ಲ. 
ಪ್ರತಿ ರಾಜ್ಯದಲ್ಲೂ ಬೇರೆಬೇರೆ ರೀತಿಯ ಕಮೀಶನ್ ಮೂಲಕ ಒಳನುಸುಳುತ್ತಿದ್ದ ಕಪ್ಪು ಹಣದ ಖೋಟಾನೋಟು ಉತ್ತರ ಭಾರತದಲ್ಲಿ ಅದರಲ್ಲೂ ಶಿಕ್ಷಣ ವ್ಯವಸ್ಥೆ ಇವತ್ತಿಗೂ ಮೇಲಕ್ಕೆತ್ತಲಾಗದ ಸ್ಥಿತಿಯಲಿದ್ದ ಏರಿಯಾಗಳಲ್ಲಿ ಸುಲಭವಾಗಿ ಸಂಚಲನಕ್ಕೆ ಕಾರಣವಾಗುತ್ತಿತ್ತು. ಅಲ್ಲೆಲ್ಲಾ ದಶಕಗಳಿಂದಲೂ ಖೋಟಾನೋಟು ತೀರ ಸಾಮಾನ್ಯ ಎನ್ನುವ ರೀತಿಯಲ್ಲೂ ಬಳಕೆಯಾಗುತ್ತಲೇ ಇತ್ತು. ಇದರಿಂದಾಗಿ ಹೆಚ್ಚಾಗಿ ಉತ್ತರಪ್ರದೇಶ, ಬಿಹಾರ್, ಒಡಿಸ್ಸ ಮತ್ತು ಪಶ್ಚಿಮ ಬಂಗಾಲದಲ್ಲಿ(ಇದಂತೂ ಕಮ್ಮಿನಿಷ್ಟೆಯವರ ಕೈಯ್ಯಲ್ಲಿ ಅದ್ಯಾವ ಮಟಕ್ಕೆ ಹಡಾಲೆದ್ದು ಹೋಗಿದೆಯೆಂದರೆ ವೈಭವೋಪೇತ ದಿನಗಳನ್ನು ಕಾಣಲು ಮೂರು ದಶಕಗಳೇ ಬೇಕೇನೊ) ತೀವ್ರ ಎನ್ನುವ ಪರಿಣಾಮಕ್ಕೆ ಭಾರತೀಯ ಆರ್ಥಿಕತೆಗೆ ತುತ್ತಾಗುತ್ತಲೇ ಇತ್ತು. ಕೊನೆಕೊನೆಗೆ ಎಷ್ಟೆಂದರೆ ಪ್ರತಿ ನೂರರ ಒಂದು ಕಟ್ಟಿನಲ್ಲಿ ಸಲೀಸಾಗಿ ಹತ್ತು ಖೋಟಾ ನೋಟುಗಳು ನುಸುಳುವಷ್ಟು ಪ್ರಬಲವಾಗಿ ಇಂತಹ ವ್ಯವಹಾರದ ಮೇಲೆ ಪಾಕಿಸ್ತಾನದ ಆರ್ಥಿಕ ಭಯೋತ್ಪಾದನೆ ತನ್ನ ಹಿಡಿತ ಸಾಧಿಸಿತ್ತು. ಅದರಲ್ಲೂ ಪ್ರತಿರಾಜ್ಯಗಳಿಗೂ ಒಂದೊಂದು ಬೆಲೆಯನ್ನು ನಿಗದಿಪಡಿಸಲಾಗಿತ್ತು. 
ಬಿಹಾರದಲ್ಲಿ ಒಂದು ಲಕ್ಷಕ್ಕೆ ಎಪ್ಪತ್ತು ಸಾವಿರ ಮತ್ತು ಉತ್ತರಪ್ರದೇಶದ ಕೆಲಭಾಗದಲ್ಲಿ ಅರವತ್ತು ಸಾವಿರ ಹಾಗು ಓಡಿಸ್ಸಾದಲ್ಲಿ ಎಂಭತ್ತು ಮತ್ತು ದಿಲ್ಲಿ ಆಸುಪಾಸಿನಲ್ಲಿ ತೊಂಭತ್ತಕ್ಕೆ ಒಂದು ಲಕ್ಷ ಖೋಟಾನೋಟು ಬಿಕರಿಯಾಗುತ್ತಿತ್ತು. ಅಂದರೆ ಒಂದು ಲಕ್ಷ ಪಾಕಿಸ್ತಾನದ ಭಾರತೀಯ ಕರೆನ್ಸಿ ಬದಲಿಗೆ, ಮೇಲ್ಕಾಣಿಸಿದ ಮೊತ್ತದ ಅಸಲಿ ನೋಟುಗಳು ಬದಲಾಗುತ್ತಿದ್ದವು. ಇದರಲ್ಲೂ ಎರಡು ರೀತಿಯ ಫಾಯಿದೆ ಇತ್ತು. ಒಂದು ಇಲ್ಲಿನ ಕಪ್ಪು ಹಣದ ಚಲಾವಣೆ  ಸುಲಭ ಸಾಧ್ಯವಾಗುತ್ತಿತ್ತು ಮತ್ತು ಅಸಲಿಗೆ ಖೋಟಾನೋಟನ್ನು ನೀಡುವ ಮೂಲಕ ಅಸಲಿನ ಹಣವನ್ನೇ ಕಪ್ಪು ಹಣವನ್ನಾಗಿ ಪರಿವರ್ತಿಸಿ ಸಂಗ್ರಹಿಸುವ ಮೂಲಕ ಅಗಾಧ ವೈಪರಿತ್ಯವನ್ನು ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಹೇರಲಾಗುತ್ತಿತ್ತು. 
ಇದಕ್ಕೆಲ್ಲಾ ಬೆಂಬಲವಾಗಿ ನಿಲ್ಲುತ್ತಿದ್ದುದು ಪಾಕಿಸ್ತಾನದ ಪರಮ ನಿರ್ಲಜ್ಯ ಪಾತಕಿ ದಾವುದ್ ಮತ್ತವನ ಸಹಚರರು. ಅವನ ಎಜೆಂಟರ ಮೂಲಕ ಮತ್ತು ಇತರ ದೇಶಗಳ ಹವಲಾ ನೆಟ್‍ವರ್ಕ ಮೂಲಕ ಭಾರತದೊಳಕ್ಕೆ ಬರುತ್ತಿದ್ದ ಕಪ್ಪು ಹಣ ಮತ್ತು ಖೋಟಾನೋಟುಗಳು ಎಗ್ಗಿಲ್ಲದೆ ಸರಿದಾಡುತ್ತಿದ್ದುದರಿಂದಲೇ ಆರ್ಥ ವ್ಯವಸ್ಥೆಯಲ್ಲಿ ನಮ್ಮ ಸೂಚ್ಯಂಕ ಯಾವತ್ತೂ ಮೇಲಕ್ಕೆ ಹೋಗುತ್ತಲೇ ಇರಲಿಲ್ಲ ಮತ್ತು ಈ ಸಮಸ್ಯೆ ಮೋದಿಯಂತಹ ಪ್ರಧಾನಿಯೊಬ್ಬರು ಕೈಗೆತ್ತಿಕೊಳ್ಳದಿದ್ದರೆ ಎಷ್ಟೇ ದಶಕಗಳು ಕಳೆದರೂ ಬದಲಾಗುತ್ತಿರಲಿಲ್ಲ. 
ಆದಾಗ್ಯೂ ಸಹಜ ಮತ್ತು ಕೆಳಹಂತದ ಜನರಿಗೆ ಇದರ ಬಿಸಿ ತಟ್ಟಿರಲಿಲ್ಲವಾದರೂ, ಇದ್ದಕ್ಕಿಂತ ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿದ್ದ ಬೆಲೆ ಏರಿಕೆಯ ಅಂದಾಜೇ ನಮ್ಮಲ್ಲಿ ಜನ ಸಾಮಾನ್ಯನಿಗೆ ಸಿಕ್ಕುತ್ತಿರಲಿಲ್ಲ. ಎಲ್ಲೆಲ್ಲೂ ಭತ್ತವಿದೆ ಆದರೆ ಅಕ್ಕಿ ಮಾತ್ರ ಅನಾಮತ್ತಾಗಿ ಐವತ್ತರ ಆಸುಪಾಸಿಗಿದೆ. ಲೆಕ್ಕದ ಹೊರಗೆ ಗೋಧಿ ಬೆಳೆಯುತ್ತಿದ್ದೇವೆ ಆದರೆ ರೇಟು ಮಾತ್ರ ಕೆಳಗಿಳಿಯುತ್ತಿಲ್ಲ, ಯಾವಾಗ ಯಾವ ರೀತಿಯಲ್ಲಿ ಲೆಕ್ಕಿಸಿದರೂ ಮಾರುಕಟ್ಟೆ ಯಾಕೆ ಪಲ್ಲಟಗೊಳ್ಳುತ್ತಿದೆ ಎನ್ನುವ ಲಾಜಿಕ್ಕೆ ಬುಡಮೇಲಾಗುತ್ತಿತ್ತು. ಇದಕ್ಕೂ ಹುಯಿಲು ಎಬ್ಬಿಸುವ ಬುದ್ಧಿಜೀವಿಗಳ ಬಗ್ಗೆ ಬರೆಯ ಹೊರಟರೆ ಅವರಿಗೂ ಇದೆಲ್ಲಾ ಗೊತ್ತಿಲ್ಲದ್ದೇನೂ ಅಲ್ಲ. ಆದರೂ ಗಂಜಿ ಕುಡಿದು ಆಶ್ರಯ ಪಡೆದಿದ್ದಾರಾದ್ದರಿಂದ ಅವರು ಇದನ್ನು ವಿರೋಧಿಸಲೇಬೇಕು. ಹಾಗೆ ವಿರೋಧಿಸಿ ಇದ್ದಬದ್ದ ಮಾನ್ಯ ಮರ್ಯಾದೆಯನ್ನೂ ಸಾಂಸ್ಕೃತಿಕ ವಲಯದಾಚೆಗೂ ಹರಾಜು ಹಾಕಿಕೊಂಡುಬಿಟ್ಟಿದ್ದಾರೆ. ಅದಕ್ಕೆ ಸರಿಯಾಗಿ
" ಅಯ್ಯೋ.. ಬಡವರ ಗತಿಯೇನು..? " 
" ಹೀಗೆ ಇದ್ದಕ್ಕಿದ್ದಂತೆ ನೋಟುಗಳನ್ನು ಕಿತ್ತುಕೊಂಡರೆ ಬಡ ಭಾರತೀಯ ಬದುಕುವುದು ಹೇಗೆ..? "
" ಮೊದಲು ಎರಡು ಸಾವಿರ ನೋಟಿನಲ್ಲಿ ಚಿಪ್ ಇರುತ್ತದೆಂದರು ಈಗ ನೋಡಿದರೆ ಇರುವುದಿಲ್ಲವಂತೆ ಅಂದರೆ ಭ್ರಷ್ಟಾಚಾರ ಸಾವಿರದ ಬದಲಿಗೆ ಎರಡು ಸಾವಿರದ ನೋಟಿನಲ್ಲಿ ಚಲಾವಣೆಗೆ ಬರಲಿದೆ. ಇದರಿಂದ ಬಿ.ಜೆ.ಪಿ. ಯವರಿಗೇ ಡಬ್ಬಲ್ ಧಮಾಕ" 
ಎಂಬಿತ್ಯಾದಿ ಬಾಯಿ ತುರಿಕೆ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರು ಒಂದು ಕಡೆಯಾದರೆ, ಮೋದಿ ಮತ್ತು ಕೇಂದ್ರ ಸರಕಾರವನ್ನು ಹಣಿಯಲೆಂದೇ ಸಮಾಜಿಕ ಜಾಲ ತಾಣ ನಿರ್ವಹಿಸಲು ಕೂತಿರುವ ಕೆಲವು ಬರಗೆಟ್ಟ ಹೆಂಗಸರು, " ಇದರಿಂದ ಭಾರತೀಯ ಬಡವರಿಗೆ ಯಾವ ಉಪಯೋಗವೂ ಇಲ್ಲ.. " ಎಂದು ಹುಯಿಲಿಡತೊಡಗಿದ್ದರು. ಕಾರಣವಿಷ್ಟೆ ಇವರಿಗೆಲ್ಲಾ ಸಲ್ಲುತ್ತಿದ್ದುದೇ ಇಂಥಾ ಕಪ್ಪುಹಣದ ರೂಪದಲ್ಲಿದ್ದ ಸಾವಿರ ಮುಖ ಬೆಲೆಯ ನೋಟುಗಳು ಮತ್ತು ಅಂತಹ ಹರಾಮಿ ದುಡ್ಡಿನಿಂದಲೇ ಬದುಕು, ಬರಹ ಕಟ್ಟಿಕೊಂಡು ಸರಸ್ವತಿಗೂ ದ್ರೋಹ ಬಗೆಯುತ್ತಾ, ಸಾಮಾಜಿಕ ಜಾಲತಾಣದಲ್ಲಿ ಕಂಡವರ ಮನೆಗಳ ಮಧ್ಯೆ ಮನಸ್ತಾಪಕ್ಕೂ ಕಾರಣವಾಗುತ್ತಿದ್ದರು.
 ಈಗ ಇಷ್ಟು ಸಲೀಸಾಗಿ ಅದಿನ್ಯಾವನು ಇವರನ್ನೆಲ್ಲಾ ಪುಗಸಟ್ಟೆ ಸಾಕುತ್ತಾನೆ. ಅದರಲ್ಲೂ ಬೆಂಗಳೂರಿನ ಬದುಕಿಗೆ ಗಾಡಿ, ಮಕ್ಕಳ ಫೀಸು, ಬಾಡಿಗೆ ಮನೆ ಮತ್ತು ಇನ್ನಿತರ ಶೃಂಗಾರ ಸಾಧನಗಳ ಖರ್ಚಿಗೆ ಕನಿಷ್ಟ ಮೂವತ್ತು ಸಾವಿರಗಳಾದರೂ ಬೇಕು. ಅಂದಹದ್ದನ್ನೆಲ್ಲಾ ಇವತ್ತು ನೌಕರಿ, ಚಾಕರಿ ಮತ್ತೊಂದು ಮದಲೊಂದು ಏನೂ ಇಲ್ಲದೆ ಮನೆಯಲ್ಲಿ ಇದ್ದೇ, ಬರೀ ಸಾಮಾಜಿಕ ಜಾಲತಾಣದಲ್ಲಿ ಸಮಾಜ ದ್ರೋಹಿ, ದೇಶದ್ರೋಹಿ ಚಿಂತನೆ ಬಿತ್ತುತ್ತಾ ಬದುಕುತ್ತಿರುವವರಿಗೆ ಸುಲಭವಾಗಿ ಸಂಪಾದನೆ ಹೇಗೆ ಸಾಧ್ಯ ಎನ್ನುವ ಅಧ್ಬುತ ಲಾಜಿಕ್ಕನ್ನೆಲ್ಲಾ ನಾನಿಲ್ಲಿ ವಿವರಿಸಬೇಕಿಲ್ಲ. ಏನಿದ್ದರೂ ಪಾಶ್ಚಾತ್ಯ ದೇಶದಗಳ ದುಡ್ಡು ದುಗ್ಗಾಣಿ ಮೇಲೆ ಬದುಕುತ್ತಿದೆ ಇಂಥವರ ಮನೆ ಮನಸ್ಸು ಎರಡೂ. ಹಾಗಾದರೆ ಇಲ್ಲಿರುವ ಬಡಭಾರತೀಯನ ಪರಿಸ್ಥಿತಿ..? ಅದಕ್ಕಾಗೇ ಇಂತಹದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳಬೇಕಾಯಿತು ಪ್ರಧಾನಿ. ಆದರೆ ಇಲ್ಲಿ ನೋಡಿ. ಇಂತಹದ್ದೊಂದು ಬೆಳವಣಿಗೆಯ ಮೂಲಕ ಎಲ್ಲಾ ಕಪ್ಪು ಹಣದ ಬಾಗಿಲನ್ನು ಶಟರ್ ಸಮೇತ ಎಳೆದು ಕಟ್ಟಿಹಾಕಿದ್ದರೆ, ವಿಲವಿಲ ಎನ್ನುತ್ತಿರುವ ದ್ರೋಹಿಗಳ ಪಡೆ ಇದನ್ನೂ ಮೊದಲೇ ಹೇಳಿ ಮಾಡಬೇಕಿತ್ತು ಎನ್ನುತ್ತಿದೆ. ಅಲ್ಲಿಗೆ ಇಂಥವರದ್ದೆಲ್ಲಾ ಮರ್ಮ ಏನು ಎನ್ನುವುದು ಗೊತ್ತಾಯಿತಲ್ಲ. 
ಒಂದು ನೆನಪಿರಲಿ, ಪಾಕಿಸ್ತಾನ ನೇರ ಯುದ್ಧಕೆ ಸಿಕ್ಕದೆ ಬರೀದೆ ಕಳ್ಳಾಟ ಆಡುತ್ತಿದ್ದುದರಿಂದ ಅದನ್ನು ಅವರದೇ ಸರಹದ್ದಿಗೆ ನುಗ್ಗಿ ಬಡಿದು ಬಂದದ್ದಾಯಿತು. ಇತ್ತ ಒಳಗೊಳಗೇ ದೇಶದ ಸುರಕ್ಷತೆಗೆ ಆತಂಕ ಮತ್ತು ಭದ್ರತೆಗೆ ಸಮಸ್ಯೆ ಎರಡನ್ನೂ ಒಡ್ಡುತ್ತಿದ್ದ ಸಿಮಿ ಉಗ್ರರನ್ನು ಹೊಡೆದು ಮಲಗಿಸಲಾಯಿತು (ಇನ್ನೇನು ಅವರೆಲ್ಲಾ ಉಗ್ರರೇ ಎಂದು ಗೊತ್ತಾದ ಮೇಲೂ ಅವರನ್ನು ಬಿಸಿನೀರು, ಮುದ್ದೆ, ಚಾಕಣ ಕೊಟ್ಟು ಸಾಕಬೇಕಿತ್ತೇ..?) ಇದೀಗ ಅದೆಲ್ಲದರೆ ತಾಯಿ ಬೇರಿನಂತಿದ್ದ ಕಪ್ಪುಹಣದ ಶಕ್ತಿಯನ್ನು, ಆರ್ಥಿಕ ತುರ್ತುಪರಿಸ್ಥಿತಿಯ ಮೂಲಕ ಸದೆ ಬಡೆಯಲಾಗುತ್ತಿದೆ. ಆದರೆ ಇದರ ಇನ್ನೊಂದು ಮಗ್ಗುಲಿಗೆ ನಿಂತು ನೋಡಿದರೆ ಇದನ್ನು ವಿರೋಧಿಸುತ್ತಾ ವಿತಂಡವಾದ ಮಾಡುತ್ತಿರುವವರು, ಪರೋಕ್ಷವಾಗಿ ಭಯೋತ್ಪಾದನೆಯ ಬೆಂಬಲಿಗರೇ ಆಗುತ್ತಾರಲ್ಲವೇ..? 
ಕಾರಣ ಇವತ್ತು ಇಂಥಾ ಆರ್ಥಿಕ ನೀತಿಯನ್ನು ವಿರೋಧಿಸುವವರು, ಮೆತ್ತಗೆ ಸಿಮಿ ಉಗ್ರರನ್ನು ಎನ್‍ಕೌಂಟರ್ ಮಾಡಬಾರದಿತ್ತು ಎನ್ನುವವರಿಗೂ, ಅತ್ತ ಬುರ್ಹಾನ ವಾನಿಯನ್ನು ಹಿರೋ ಮಾಡುವವರಿಗೂ ಕೊನೆಗೆ ಅಫ್ಜಲ್ ಗುರುವನ್ನು ಹುತಾತ್ಮರನಾಗಿಸುವವರಿಗೂ ಏನಾದರೂ ವ್ಯತ್ಯಾಸ ಇದೆಯಾ ಎಂದರೆ ನೈಯಾ ಪೈಸೆಯಷ್ಟೂ ಫರಕ್ಕು ಕಾಣಿಸುತ್ತಿಲ್ಲ. ಕಾರಣ ನೇರವಾಗಿ ಅತ್ತ ಸೈನಿಕರು ಮತ್ತು ಪ್ರಧಾನಿಯ ಬಳಗ ಇದೆಲ್ಲದರ ವಿರುದ್ಧ ಹೊಡೆದಾಡುತ್ತಾ ಜೀವ ಪಣಕ್ಕಿಡುತ್ತಿದ್ದರೆ, ಒಳಾಗೊಳಗೆ ಅವರನ್ಯಾಕೆ ಬಡಿದ್ರಿ, ದುಡ್ಯಾಕೆ ಕ್ಯಾನ್ಸಲ್ ಮಾಡಿದ್ರಿ ಎನ್ನುವ ಪಿಸಣಾರಿ ಹೆಂಗಸರ/ಎಬುಜೀಗಳ ಮಾತುಗಳು ಬದುಕಿನ ಆಸಕ್ತಿ ಕಳೆದುಕೊಂಡ ರಸಹೀನ ಪ್ರಲಾಪದಂತೆ ಅನ್ನಿಸುತ್ತದೆ ನನಗೆ. ಕಾರಣ ಬದುಕಲು, ಖುಷಿಪಡಲು ಎರಡಕ್ಕೂ ಇಂಥವರ ಬಳಿ ಕಾರಣಗಳಿರುವುದಿಲ್ಲ. ಏನಿದ್ದರೂ ಬರೀ ಬೇರೆಯವರ ಯಶಸ್ಸಿನ ಮೇಲೆ ನಂಜುಕಾರಿ ಬದುಕುವುದೇ ಧ್ಯೇಯವಾಗಿರುವಾಗ ಅಭಿವೃದ್ಧಿಯ ನಡೆ ಇವರ ಕಣ್ಣಿಗೆ ಧನಾತ್ಮಕವಾಗಿ ಕಾಣಿಸುವುದಾದರೂ ಹೇಗೆ...? 
ಪ್ಲೀಸ್...ಪ್ಲೀಸ್... ಬದುಕಲು ಕಲಿಯಿರಿ ಇನ್ನಾದರೂ ನಿಯತ್ತಾಗಿ, ನೈತಿಕವಾಗಿ. 





Monday, November 7, 2016

ಯಾರಿಗೂ ಬೇಡವಾದ ಪಾತಕಿ..ದಾವೂದ್

( ಮೈಗಿಷ್ಟು ಪುಕ್ಕಟ್ಟೆ ಅನ್ನ, ತಂತಮ್ಮ ಮೋಜು ಮಸ್ತಿಯ ಚಟಕ್ಕಿಷ್ಟು ಯಾರದ್ದೋ ತಲೆ ಒಡೆದ ದುಡ್ಡು ಅದಕ್ಕೆ ಸರಿಯಾಗಿ ಮೆರೆಯೋದಕ್ಕೆ, ಪಾಪಿಲೋಕದ ಕಡುಗತ್ತಲೆಯ ಸಾಮ್ರಾಜ್ಯ. ಕೊನೆಗೆ ಇದೆಲ್ಲದರಿಂದ ತಲೆ ತಪ್ಪಿಸಿಕೊಂಡು ಬದುಕಿಕೊಳ್ಳಲು ತೀರ ಪರಮ ನಿರ್ಲಜ್ಯ ಪಾಕಿಸ್ತಾನ. ಇಷ್ಟನ್ನಿಟ್ಟುಕೊಂಡು ಕತ್ತಲ ಲೋಕವನ್ನು ಆಳುತ್ತೇನೆಂದು ಹೊರಟು ಬಿಡುವವರು ತಮ್ಮ ಕೊನೆಯ ಕಾಲಾವಧಿಯುದ್ದಕ್ಕೂ ಇದೆಲ್ಲಾ ಶಾಶ್ವತ ಎಂದೇ ತಿಳಿದಿರುತ್ತಾರೆ. ದುರದೃಷ್ಟ ಮತ್ತು ನೂರಾರು ಹೆಣ್ಣುಮಕ್ಕಳ ಶಾಪ ಅವರನ್ನು ಜೀವಂತ ನರಕಕ್ಕೆ ನೂಕುತ್ತದೆ ಎನ್ನುವುದಕ್ಕೆ ಅಷ್ಟೆ ಉದಾ.ಗಳು ನಮ್ಮ ಮುಂದಿವೆ. ಆದರೂ ಪಾತಕ ಲೋಕದ ಪಾತಕಿಗಳು ಬುದ್ಧಿ ಕಲಿತದ್ದೇ ಇಲ್ಲ. ಅದರಲ್ಲೂ ಪಾಕಿಸ್ತಾನದ ಕೊಚ್ಚೆಯಲ್ಲಿ ಹೊರಳುವ ಕ್ರಿಮಿಗಳಿಗೆ ಬುದ್ಧಿ ಮತ್ತು ವಿವೇಚನಾ ಶಕ್ತಿ ಬಿಟ್ಟು ಬೇರೆಲ್ಲ ಬೆಳೆಯುತ್ತದೆ. ಅದೇ ವಿನಾಶಕ್ಕೂ ಕಾರಣವಾಗುತ್ತದೆ. ಇಂಥ ಕೊಚ್ಚೆಯಂತಿರುವ ಕಥಾನಕದ ಕೊನೆಯ ತುಂಡು, ಅರೆಜೀವವಾಗಿರುವ ಪಾತಕಿ ತನಗೇ ತಾನೇ ಡಾನ್ ಎಂದು ಕರೆದುಕೊಂಡ ದಾವೂದ್ ಇಬ್ರಾಹಿಂ ಯಾವ ನೆಲಕ್ಕೆ ದ್ರೋಹ ಬಗೆದಿದ್ದನೋ ಅಲ್ಲಿವತ್ತು ಕಾಲೂರುವ ಬಗ್ಗೆ ಚಡಪಡಿಸುತ್ತಿದ್ದಾನೆ. ಆದರೆ ಊರಲು ಒಂದು ಕಾಲೇ ಉಳಿದಿಲ್ಲ. ಬದುಕಿನ ವಿಪರ್ಯಾಸ ಅಂದರೆ ಇದೇ ಅಲ್ಲವೇ..?)

ನಂ : 13. ಬ್ಲಾಕ್-4 ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ. 
ಇದು ಅವನ ಮನೆಯ ಅಡ್ರೆಸ್ಸು. ಹಾಗಂತ ಅವನ ಭೂಗತ್ತ ಜಗತ್ತಿನ ಬೆಂಬಲಿತ ಪಡೆ ಮತ್ತು ಪಾಕಿಸ್ತಾನ ಸರಕಾರ ಜಗತ್ತಿನ ಎಲ್ಲರ ಕಿವಿಗೂ ಹೂವಿಡುತ್ತಾ ಬಂದಿದೆ. ಕೊನೆಗೆ ಕತ್ತೆ ಕಾಲೆತ್ತಿದರೂ ಅದನ್ನು ಬ್ರೇಕಿಂಗ್‍ನ್ಯೂಸ್ ಮಾಡುವ ನಾನ್ಸೆನ್ಸ್ ಚಾನೆಲ್‍ಗಳವರೂ ಅದನ್ನೇ ನಂಬಿ ಬರೆಯುತ್ತಾ ಬಂದಿದ್ದಾರೆ. ಯಾವನಾದರೂ ಅಂತರಾಷ್ಟ್ರೀಯ ಮಟ್ಟದ ಕುಖ್ಯಾತಿ ಮತ್ತದಕ್ಕಿಂತಲೂ ಹೆಚ್ಚು, ಸತ್ತು ಹೋಗುವ ಪ್ರಾಣಭಯ ಇರುವ ಪಾತಕಿ, ಪಕ್ಕದಲ್ಲಿ ಮೈ ಕಾಯುವ ಬಂಟರಿದ್ದರೆ ಮಾತ್ರ ಬದುಕು ಎಂಬ ವ್ಯವಸ್ಥೆ ಸೃಷ್ಟಿಸಿಕೊಂಡಿರುವವರು ತಮ್ಮ ಅಡ್ರೆಸು, ಫೆÇೀನ್ ನಂ, ಕೊರಿಯರ್ ಆಫೀಸಿಗೆ ಕೊಟ್ಟಂತೆ ಕೊಟ್ಟು ಕೂತಿರುವ ಮೂರ್ಖ ಉದಾ. ಯಾವ ಕಾಲದಲ್ಲೂ, ಯಾವ ದೇಶದಲ್ಲೂ ನಡೆದಿಲ್ಲ. ಪಾತಕ ಜಗತ್ತಿಗೇ ನಂ.ಒನ್ ಡಾನ್ ಎಂದು ಕರೆದುಕೊಂಡು ಅಕ್ಷರಶ: ಕೆಲವೊಮ್ಮೆ ಅಂತಹ ಛಾಪನ್ನೂ ಮೂಡಿಸಿರುವ ಪಾತಕಿ, ಕೊನೆಗಾಲದಲ್ಲಿ ತನ್ನನ್ನು ಯಾವ ಮುಸ್ಲಿಂ ದೇಶ ತನ್ನನ್ನು ರಕ್ಷಿಸುತ್ತದೆ ಎಂದು ನಂಬಿದ್ದನೋ, ಅಂತಹ ಪರಮ ನಿರ್ಲಜ್ಯ ಭಯೋತ್ಪಾದಕನಿಗೆ ಹಿಂದೂಸ್ತಾನದ ನೆಲದ ಅಸರೆ ಬೇಕಿದೆ. ನಂಬಿಸಿ ಕೈಬಿಡುವ ಪಾಕಿಸ್ತಾನದ ಹಣೆಬರಹ ಬಯಲಾಗಿದೆ.
ಬದುಕು ಕೊನೆಯ ಕ್ಷಣದಲ್ಲಿದೆ ಎಂದು ಪ್ರಾಣವನ್ನು ಅಂಗೈಯ್ಯಲ್ಲಿ ಹಿಡಿದು ಆತ ನಿಂತುಕೊಂಡಿದ್ದಾನೆ. ಆದರೆ ಯಾವ ಅಸ್ತ್ರಕ್ಕೂ ಬಗ್ಗದ ರೋಗಬಾಧಿತ ಜೀವಭಯ ಅವನನ್ನು ಇನ್ನಿಲ್ಲದಂತೆ ಹಣಿಯುತ್ತಿದೆ. ಇದು ಜಗತ್ತನ್ನೆ ಹೆದರಿಸಿ ಬದುಕುತ್ತೇನೆಂದು ಹೊರಟವನ ದಾರುಣ ಕಥೆ. ಅವನ ಇಂತಹ ಪಾತಕ ಬದುಕಿಗೆ ಹೆದರಿ ಬದುಕಿದವರೂ ತುಂಬ ಪ್ರಾಮಾಣಿಕರೇನಲ್ಲ. ಅಂಥವರನ್ನೇ ಹೆದರಿಸಿ ತನ್ನ ಹೆಸರನ್ನು ಭದ್ರಪಡಿಸಿಕೊಂಡಿದ್ದ ದಾವೂದ್‍ನಿಗಿಂತಲೂ ಮೊದಲೇ ಅವನ ಸಮಕಾಲೀನರು ಜಾಗ ಖಾಲಿ ಮಾಡಿದ್ದು, ಭ್ರಮೆಯಲ್ಲಿ ಬದುಕಿದ್ದ ದಾವೂದ್ ಇಬ್ರಾಹಿಂ ಎಂಬ ಪರಮ ಪಾತಕಿ ಮಾತ್ರ ಎಲ್ಲೂ ನೆಲೆ ಇಲ್ಲದಂತಾಗಿ ಭೂಮಿಗೆ ಭಾರವಾಗಿ ಬದುಕುತ್ತಿದ್ದಾನೆ. 
ಇದು ಅವನ ಕಂಪ್ಲೀಟ್ ಸ್ಟೋರಿ. 
1955. ಡಿಸೆಂಬರ್ 26 ರಲ್ಲಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡದ ಕೊಂಕಣಿ ಮುಸ್ಲಿಂ ಮನೆತನದಲ್ಲಿ ಹುಟ್ಟಿದ ದಾವೂದ್, ಪೆÇೀಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ರಾಹಿಂ ಕಸ್ಕರ್ ಮಗ. ಅಲ್ಲಿಂದ ಮುಂಬೈನ ಡೊಂಗ್ರಿಯಲ್ಲಿ ತನ್ನ ನೆಲೆ ಕಂಡುಕೊಂಡ ಅದೂ ಹಾಜೀ ಮಸ್ತಾನ ಎಂಬ ಮಾಜಿ ಡಾನ್ ಒಬ್ಬನ ಕೆಳಗೆ ಅಕ್ಷರಶ: ಮಾಲು ಡೆಲಿವರಿಯ ಹುಡುಗನಾಗಿ. ಮೊದಮೊದಲು ರಾಬರಿ ಮತ್ತು ಕೆಲವು ಕೇಸುಗಳಲ್ಲಿ ಖಬರಿಯಾಗಿಯೂ ಕ್ರಿಮಿನಲ್ ಧಂದೆಯ ನೀರಿಗಿಳಿದವ ಆಗೀಗ ಜೈಲುಪಾಲಾಗುತ್ತಿದ್ದ. 
ದಾವೂದ್‍ನ ಕ್ರಿಮಿನಲ್ ಫೈಲು ಬೆಳೆಯತೊಡಗುತ್ತಿದ್ದಾಗಲೇ ಅವನ ನಡುವನ್ನು ಮುರಿದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಆದರೆ ಅವನ ತಲೆಯ ಮೇಲೆ ಹಾಜಿ ಮಸ್ತಾನನ ಕೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಪ್ರಬಲ ರಾಜಕಾರಣಿಗಳ ಬೆಂಬಲ ಅವನನ್ನು ಮುಟ್ಟದಂತೆ ಮಾಡಿತ್ತು. 
ಅದರಲ್ಲೂ ಹಾಜಿ ಮಸ್ತಾನನ ಪ್ರಬಲ ವಿರೋಧಿಯಾಗಿದ್ದ ಪಠಾನ್ ಗ್ಯಾಂಗಿನೊಂದಿಗೆ ಯಾವಾಗ ಮುಖಾಮುಖಿ ಕದನಕ್ಕಿಳಿದನೋ ದಾವೂದ್ ಒಂದು ರೇಂಜಿಗೆ ಗುರುತಿಸಿಕೊಂಡುಬಿಟ್ಟ. ಅದಕ್ಕೆ ಕಾರಣ ದಾವೂದನ ಸಹೋದರ ಸಬೀರ್‍ನನ್ನು ಪಠಾಣ ಗ್ಯಾಂಗಿನ ಮಾನ್ಯಸುರ್ವೇ ಎಂಬ ಇನ್ನೊಬ್ಬ ಪಾತಕಿ ಕೊಂದು ಹಾಕಿದ್ದ. (ಇವನ ಕಥೆಯ ಮೇಲೆ ಜಾನ್ ಅಬ್ರಾಹಂ ಚಿತ್ರ ಮಾಡಿದ) ಈ ಒಂದು ಪ್ರಬಲ ಕಾರಣವನ್ನಿಟ್ಟುಕೊಂಡು ಮುಂಬೈ ಕಂಡು ಕೇಳರಿಯದ ರೀತಿಯ ಬೀದಿಕಾಳಗ ಸಂಘಟಿಸಿದ ದಾವೂದ್ ಅನಾಮತ್ತಾಗಿ ಪಠಾಣನ ಟೀಮನ್ನೆ ಕತ್ತರಿಸಿದ. ಕ್ರಮೇಣ ಹಾಜಿ ರಾಜಕೀಯಕ್ಕಿಳಿದರೆ ದಾವೂದ್ ತೀರ ಅಲ್ಪ ಕಾಲಾವಧಿಯಲ್ಲಿ ಅಪಹರಣ, ಹಪ್ತಾ ಇತ್ಯಾದಿ ಕಾರ್ಯಗಳಿಂದ ಹಣಗಳಿಸತೊಡಗಿದನಲ್ಲದೆ ದುಬೈಗೆ ಶಿಪ್ಟಾಗಿಬಿಟ್ಟು, ಅಲ್ಲಿಂದಲೇ ಮುಂಬೈ ಮೇಲೆ ಹಿಡಿತ ಸಾಧಿಸಿದ.
ಸ್ಮಗ್ಲಿಂಗ್ ಪ್ರಮುಖ ದಂಧೆಯಾಯಿತಲ್ಲದೆ ಸುಲಭವಾಗಿ ಅವನ ಕೆಲಸವನ್ನು ಒಂದು ಫೆÇೀನಿನ ಇಶಾರೆಯ ಮೇರೆಗೆ ಮಾಡಿಕೊಡಬಲ್ಲ ಸಮರ್ಥ ಹುಡುಗರ ತಂಡವನ್ನೇ ದಾವೂದ ಮುಂಬೈ ಸುತ್ತಮುತ್ತಲಲ್ಲಿ ಕಟ್ಟಿ ಬೆಳೆಸಿದ್ದ. ಬರೀ ಮಹಾರಾಷ್ಟ್ರವಲ್ಲದೆ ಇತರ ರಾಜ್ಯಗಳ ಭೂಗತದ ಲೋಕದ ಮೇಲೂ ಕೈಯಿಟ್ಟು, ಯಾವ ಭಾಗದಲ್ಲಿ ಬೇಕಾದರೂ ಸಂಘಟಿತ ಅಪರಾಧ (ಆರ್ಗನೈಸ್ಡ್ ಕ್ರೈಂ) ಎಸಗುವ ವರ್ತುಳ ನಿರ್ಮಿಸಿಕೊಂಡಿದ್ದ. ಅದಕ್ಕಾಗಿ ಡ್ರಗ್ಸ್ ಪೆಡ್ಲಿಂಗ್ ಮತ್ತು ನಿಷೇಧಿತ ಹತ್ಯಾರುಗಳ ಸ್ಮಗ್ಲಿಂಗ್ ಅವನ ಪ್ರಮುಖ ದಂಧೆಯಾಗಿತ್ತು. ಮಿಲಿಟರಿ, ಪೆÇೀಲಿಸ್ ಇಲಾಖೆಯಲ್ಲಿಲ್ಲದ, ವಿದೇಶಿ ರಿವಾಲ್ವರುಗಳು ಅವನ ಹುಡುಗರ ಬಳಿ ಲಭ್ಯವಾಗುತ್ತಿದ್ದವು. ಕ್ರಿಕೆಟ್ ಬೆಟ್ಟಿಂಗ್ ಮತ್ತು ಹವಾಲ ದಂಧೆಯ ಮೇಲೆ ಕ್ರಮೇಣ ಹಿಡಿತ ಮತ್ತದಕ್ಕೊಂದು ಅನಧೀಕೃತ ಕಾಪೆರ್Çೀರೇಟ್ ಬಿಸಿನೆಸ್ಸಿನ ಟಚ್ ಕೊಟ್ಟ ಖ್ಯಾತಿ ದಾವೂದ್‍ನದ್ದು. ಅಲ್ಲಿಗೆ ಹಿಂದಿ ಚಿತ್ರ ರಂಗದ ನಟನಟಿಯರನ್ನು ಮ್ಯಾನೇಜ್ ಮಾಡತೊಡಗಿದ ದಾವೂದ್ ನಂಬರ್ ಒನ್ ನಟನಟಿಯರ ಆಯ್ಕೆಯವರೆಗೂ ತನ್ನ ಹಿಡಿತ ಸಾಧಿಸಿದ.(ದಾವೂದನೊಂದಿಗೆ ಸಂಬಂಧ ಬೆಳೆಸಿದ್ದಕ್ಕಾಗಿ ಕ್ರಿಕೆಟ್ಟಿಗ ಜಾವೆದ್ ಮಿಯಾಂದಾದ್‍ಗೆ ಅಜೀವ ಪರ್ಯಂತ ಭಾರತಕ್ಕೆ ಕಾಲಿಡದಂತೆ ನಿಷೇಧ ಹೇರಿಸಿಕೊಂಡ.)
ಎಲ್ಲದಕ್ಕೂ ಇದ್ದ ಒಂದೇ ಒಂದು ಕಾರಣ ಪ್ರಾಣ ಭಯ. ಜೀವಕ್ಕೆ ಹೆದರಿದ ಪ್ರತಿಯೊಬ್ಬನೂ ಅವನ ಕೈಯ್ಯಲ್ಲಿ ಶೋಷಿಸಲ್ಪಟ್ಟರು, ತಿರುಗಿಬಿದ್ದವರಲ್ಲಿ ಹೆಚ್ಚಿನವರೆಲ್ಲಾ ಅವನ ಬಾಡಿಗೆ ಬಂಟರ ಕೈಯ್ಯಲ್ಲಿ ಕೊಲೆಯಾಗಿ ಹೋದರು. ಇದೆಲ್ಲದಕ್ಕೂ ಕೊನೆಯಲ್ಲಿ ಆತ ನೀಡಿದ ಹೆಸರು " ಡಿ-ಕಂಪೆನಿ ".
ಅಂದ ಹಾಗೆ ಮೊದಲಬಾರಿಗೆ ಅವನ ನಡುವನ್ನು ಮುರಿದ ಖ್ಯಾತಿ ಸಲ್ಲುತ್ತದೆ ದಯಾನಾಯಕ್‍ಗೆ. ಸಾಲುಸಾಲಾಗಿ ಅವನ ಬಾಡಿಗೆ ಬಂಟರ ಹೆಣ ಕೆಡುವುತ್ತಿದ್ದರೆ ಅತ್ತ ದಾವೂದ್ ಸಾಮ್ರಾಜ್ಯ ಮೊದಲ ಬಾರಿಗೆ ಅಲುಗಾಡಿತ್ತು. ವಿಪರ್ಯಾಸವೆಂದರೆ ಅದಕ್ಕಾಗೇ ದಯಾನಾಯಕ್ ವರ್ಷಾನುಗಟ್ಟಲೇ ಇಲಾಖೆಯಿಂದಲೇ ಎನ್‍ಕ್ವಯಿರಿ ಎದುರಿಸಬೇಕಾಗಿ ಬಂತು. ಬೇರೆಯವರಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದರು. ಅವನು ದಯಾ ಆಗಿದ್ದಕ್ಕೆ ಬದುಕಿಕೊಂಡ. ದಾವೂದ್ ಇಷ್ಟೆ ಮಾಡಿಕೊಂಡಿದ್ದರೆ ಬದುಕಿಕೊಂಡೂ ಈಗಲೂ ಚೆನ್ನಾಗಿರುತ್ತಿದ್ದನೇನೊ.? ಆದರೆ ಯಾವಾಗ ಇದರಿಂದ ಸಂಪಾದಿಸಿದ ಹಣವನ್ನು ಅಲ್-ಖೈದಾ ಮೂಲಕ ಭಯೋತ್ಪಾದನೆಗೆ ನೀಡತೊಡಗಿದನೋ ಜಾಗತಿಕವಾಗಿ ಮೊಸ್ಟ್‍ವಾಂಟೆಡ್ ಲಿಸ್ಟ್‍ನಲ್ಲಿ ಸೇರಿಹೋದ. ಅದರಲ್ಲೂ 1993 ರ ಮುಂಬೈ ಸ್ಪೋಟಕದಲ್ಲಿ ಅವನ ಹಸ್ತಕಾಣಿಸಿತ್ತು. 2003 ರಲ್ಲಿ ಅಮೇರಿಕೆ ಅವನನ್ನು "ಗ್ಲೋಬಲ್ ಟೆರರಿಸ್ಟ್" ಎಂದು ಘೋಷಿಸಿತು. 
ಅಲ್ಲಿಯವರೆಗೂ ಬ್ಯಾಂಕಾಕ್, ದುಬೈ ಮತ್ತು ಆಗೀಗ ಇಂಡೊನೇಶಿಯಾದಲ್ಲೂ ಇರುತ್ತಿದ್ದ ದಾವೂದ್‍ನ ನೆರಳು ಯಾವಾಗ ಅಮೇರಿಕೆಯ 9/11 ರ ದಾಳಿಯಲ್ಲಿ ಕಾಣಿಸಿತೋ, ಶಾಶ್ವತವಾಗಿ ಪಾಪಿಗಳ ಲೋಕವಾದ ಪಾಕಿಸ್ತಾನ ಸೇರಿಕೊಂಡ. ಇಲ್ಲಿಯವರೆಗೂ ಪಾಪಿಸ್ತಾನ ಅವನನ್ನು ಜಗತ್ತಿನ ದಾಳಿಯ ಕಣ್ಗಳಿಂದ ರಕ್ಷಿಸುತ್ತಲೇ ಇದೆ. ಮೋದಿ ಮತ್ತು ಓಬಾಮ್ ಜಂಟಿಯಾಗಿ ಇವನ ಬೇಟೆಗೆ ಫೀಲ್ಡಿಗಿಳಿಯುತ್ತಿದ್ದಂತೆ 2014 ರ ಮಧ್ಯಭಾಗದಿಂದ ಅವನನ್ನು ಕರಾಚಿಯ ಬಂಗಲೆಯಿಂದ ನೇರ ಅಪಘಾನಿಸ್ತಾನ ಬಾರ್ಡರ್‍ಗೆ ಎತ್ತಂಗಡಿ ಮಾಡಲಾಯಿತು. ಅಲ್ಲಿ ಐ.ಎಸ್.ಐ. ಮತ್ತು ಪಾಕ್ ಮಿಲಿಟರಿಗಳ ಬಲವಾದ ನೆಲೆಯಿದ್ದು, ಯಾವ ಕಾರಣಕ್ಕೂ ದಾವೂದ್‍ನ ಮೇಲೆ ದಾಳಿ ಸಾಧ್ಯವಿಲ್ಲ ಎಂದು ನಂಬಲಾಗಿದೆ. ಇದಕ್ಕೆ ಪೂರಕವಾಗಿ ಅರಬ್ ಸರಕಾರ ಅವನ ಹದಿನೈದು ಸಾವಿರ ಕೋಟು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಂಡು ಬೀದಿಪಾಲಾಗಿಸಿದ್ದು ಅವನ ಅರ್ಧ ಶಕ್ತಿ ಅಲ್ಲೇ ಕುಸಿದು ಹೋಗಿದೆ. ಮೊದಲಿದ್ದ ನಂಬಿಗಸ್ಥ ತಂಡದ ಇಬ್ಬರು ಸದಸ್ಯರೂ ಈಗ ಅವನ ಬಳಿ ಇಲ್ಲ. 
ದಾವೂದ್‍ನಿಗೆ ಸುರಕ್ಷತೆಯ ವಿಷಯವಾಗಿ ಅಂಜಿಕೆ ಇಲ್ಲವೇ ಇಲ್ಲ. ಆದರೆ ಪಾಕಿಸ್ತಾನ ಉಪಾಯ ಪೂರ್ವಕವಾಗಿ ಅವನನ್ನು ಸಂಪೂರ್ಣವಾಗಿ ಮಾಫಿಯಾ ಮತ್ತು ಇನ್ನಿತರ ದಂಧೆಗಳಿಂದ ಹೊರಗಿಡುವುದರ ಮೂಲಕ ಕೊನೆಯ ಕಾಲದಲ್ಲಿ ಅನೀಸ್ ಇಬ್ರಾಹಿಂನ ಕೈಗೆ ಸರ್ವಾಧಿಕರ ಹಸ್ತಾಂತರಿಸುವ ತಂತ್ರ ಹೂಡಿದೆ. ಇದರಿಂದ ಅತನ ಕೈಯ್ಯಲ್ಲಿರುವ ನಿಯಂತ್ರಣ ತಪ್ಪಿಸುವುದರೊಂದಿಗೆ ಇವತ್ತಲ್ಲ ನಾಳೆ, ದಾವೂದ್ ಹೊರಜಗತ್ತಿನಲ್ಲಿ ಸಿಕ್ಕಿಬಿದ್ದರೂ ಅವನೊಬ್ಬ ರಿಯಲ್ ಎಸ್ಟೇಟ್ ದಂಧೆಗಾರ ಎಂದು ಬಿಂಬಿಸುವುದಕ್ಕೀಗ ಪಾಕಿಸ್ತಾನ ತಯಾರಾಗಿದೆ. ಹಾಗಾಗಿ ಅವನಿಗೆ ಮನೆಯಿಂದ ಹೊರಬರುವ ಅನುಮತಿಯನ್ನೂ ನಿರಾಕರಿಸಲಾಗಿದ್ದು, ಹೆಚ್ಚಿನಂಶ ಬದುಕಿನ ಭವ್ಯದಿನಗಳ ಕಾಲಾವಧಿ ಮುಗಿದು ಹೋಗಿದೆ. 
ಇದೆಲ್ಲದರೊಂದಿಗೆ ದಾವೂದ್ ಜೀವಂತವಾಗಿ ಭಾರತದ ಕೈಗೆ ಸಿಕ್ಕಿದ್ದೇ ಆದರೆ, ಭಾರತದ ಜೈಲುಗಳಲ್ಲಿ ಬೆಚ್ಚಗಿರುವ ಮಾಜಿ ಡಾನ್‍ಗಳಂತೆ ಇರಿಸುವ ಭರವಸೆಗೆ, ಪ್ರತ್ಯುಪಕಾರವಾಗಿ ಪಾಕಿಸ್ತಾನದ ಸಂಪೂರ್ಣ ಜಾತಕ ಬಿಚ್ಚಿಡುತ್ತಾನೆ. ಹಾಗಾದಲ್ಲಿ ಭಾರತಕ್ಕೆ ಅದಕ್ಕಿಂತ ದೊಡ್ಡ ಆಯುಧ ಬೇಕಾಗಲಿಕ್ಕಿಲ್ಲ. ಇದೇ ಅಮೇರಿಕೆಗೂ ಬೇಕಿದ್ದು ಅದಕ್ಕಾಗಿ ಅದು ಭಾರತವನ್ನು ಆಶ್ರಯಿಸದೆ ಬೇರೆ ದಾರಿ ಇಲ್ಲವಾಗಿದೆ. ತೀರ ತಲೆ ಮರೆಸಿಕೊಂಡು ಬದುಕುತ್ತಿರುವ ದಾವೂದ್ ಈಗ ಮೂಲ ಹೆಸರಿನಲ್ಲೂ ಇಲ್ಲದೆ ಇಸ್ಮಾಯಿಲ್ ಶೇಖ್ ಎನ್ನುವ ಮಾರುವೇಷದಲ್ಲಿದ್ದಾನೆ. ಸರ್ವ ರೀತಿಯ ದಾಖಲೆಗಳೂ ಈಗ ಅದೇ  ಹೆಸರಿನಲ್ಲಿ ನಮೂದಿಸಲಾಗುತ್ತಿದೆ.
ಆದರೆ ಲಿಯಾಖತ್ ಆಸ್ಪತ್ರೆ ಸೇರಿಸಿರುವ ಅವನಿಗೆ ಅಲ್ಲೀಗ ಗ್ಯಾಂಗ್ರಿನ್‍ಗೆ ಒಳಗಾಗಿ ಕತ್ತರಿಸಿರುವ ಕಾಲನ್ನು ಕಳೆದುಕೊಂಡು ಕೂತಿದ್ದಾನೆ ಎನ್ನಲಾಗುತ್ತಿದೆ. ಆದರೆ ಅದೇನೂ ಪರಿಹರಿಸಲಾಗದ ಸಮಸ್ಯೆಯೇನೂ ಅಲ್ಲ ಎಂದರೂ ಕಳೆದುಕೊಂಡ ಕಾಲಿನ ಜತೆಗೆ ಅಪೂಟ ಹೈ ಶುಗರ್ ಮತ್ತು ಕಳೆದುಹೋಗಿರುವ ದೇಹಶಕ್ತಿ ಮೊದಲಿನ ಹುಮ್ಮಸಿಲ್ಲದಿರುವುದು ಅವನ ಹಾರಾಟದ ಬದುಕನ್ನು ಹಣ್ಣಾಗಿಸಿವೆ. ಅದಕ್ಕಾಗೇ ಕೊನೆಯಲ್ಲಿ ಎಲ್ಲಿ ತನ್ನನ್ನು ತೀರ ಬೀದಿಪಾಲಾದಂತೆ ಯಾವ ಬೆಂಬಲವಿಲ್ಲದೆ ಬದುಕಬೇಕಾಗುತ್ತದೋ ಎಂದು ಭಾರತಕ್ಕೆ ಶರಣಾಗಿ, ಟ್ರೀಟ್‍ಮೆಂಟು ಮತ್ತು ನೆಮ್ಮದಿಯ ಕೊನೆಯ ದಿನಗಳಿಗಾಗಿ ಪ್ರಯತ್ನಿಸುತ್ತಿದ್ದಾನೆ. ಆದರೆ ಪಾಕಿಸ್ತಾನವನ್ನು ಯಾಮಾರಿಸಿ ತಲುಪುವ ಸಾಧ್ಯತೆ ತೀರ ಕಡಿಮೆ ಇದೆ. ಅವನನ್ನು ತೀವ್ರ ನಿಗಾವಹಿಸಿ ನೋಡಿಕೊಳ್ಳಲಾಗುತ್ತಿದ್ದ ದಾವೂದ್ ನಂತರ ಅವನ ಜಾಗಕ್ಕೆ ಅಗ್ರೇಸಿವ್ ಡಾನ್ ಎಂದೇ ಗುರುತಿಸಿಕೊಂಡಿರುವ "ಚೋಟಾಶಕೀಲ್" ಬರುವ ಸಾಧ್ಯತೆ ದಟ್ಟವಾಗಿದೆ.
ಮೊರೆಕ್ಕೊ, ಸ್ಪೇನ್, ಯುನೈಟೆಡ್ ಅರಬ್ ಎಮಿರೇಟಸ್, ಸಿಂಗಾಪುರ್, ಥೈಲಂಡ್, ಟರ್ಕಿ, ಭಾರತ, ಪಾಕಿಸ್ತಾನ ಮತ್ತು ಇಂಗ್ಲೆಂಡು ಸೇರಿದರೆ, ದಾವೂದ್‍ನ  ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಬೇನಾಮಿ ಹೆಸರಿನಲ್ಲಿ ಅವನು ಸಲಹುತ್ತಿದ್ದು ಸುಮಾರು ಮೂವತ್ತಕ್ಕೂ ಹೆಚ್ಚು ಬೇನಾಮಿ ಅಕೌಂಟುಗಳು ಮತ್ತು ಅಷ್ಟೆ ಸಂಖ್ಯೆಯ ಬ್ಯಾಂಕುಗಳಲ್ಲಿ ಅವನ ಹೂಡಿಕೆ ಪತ್ತೆಯಾಗಿದೆ. 
ಜಾಗತಿಕವಾಗಿ ಅವನ ಹಣಕಾಸಿನ ಮೂಲಗಳನ್ನು ಕತ್ತರಿಸಿರುವ ಮೋದಿ ಮತ್ತವರ ತಂಡ ಈಗ ಕೊನೆಯದಾಗಿ ಅವನನ್ನೇ ಬೇಟೆಯಾಡಲು ಐವತ್ತು ಜನರ ತಂಡವನ್ನೇ ಸಜ್ಜುಗೊಳಿಸಿದ್ದಾರೆ. ಅವನ ಜತೆಗೆ ಇಕ್ಬಾಲ ಮತ್ತು ರಿಯಾಜ್ ಭಟ್ಕಳ್ ಎನ್ನುವ ಕ್ರಿಮಿಗಳೂ ಕೂಡಾ ಅಲ್ಲೇ ಇದ್ದಾರೆ ಎನ್ನುತ್ತದೆ ಗುಪ್ತ ವರದಿ. ಇವರೆಲ್ಲರನ್ನೂ ಒಮ್ಮೆಗೆ ಹೆಡೆಮುರಿ ಕಟ್ಟಿಯಾರು ಎನ್ನುವ ಭಯ ದಟ್ಟವಾಗಿ ಹರಡಿದೆ.
ಅವನನ್ನು ರಕ್ಷಿಸುವ ತಂತ್ರದ ಅಂಗವಾಗಿ 8ನೇ ಮಹಡಿ, ಮೆಹ್ರಾನ್ ಸ್ಕೇಯರ್. ಪ್ಯಾರಾಡೈಸ್ ಹೌಸ್-3 ಮತ್ತು 6/ಏ ಕೌಬಾಯ್ ತಂಗ್ಝೀಮ್. ಫೇಸ್ -5 ಎಂಬೆಲ್ಲಾ ಖಚಿತ ಎನ್ನಿಸುವ ವಿಳಾಸಗಳನ್ನು ತೇಲಿ ಬೀಡಲಾಗಿದೆ. ಆದರೆ ಅವನು ಮಾತ್ರ ಅಪಘನ್ ಬಾರ್ಡರಿನಲ್ಲಿ ತೀರ ಐ.ಎಸ್.ಐ ಮತ್ತು ಮಿಲಿಟರಿ ಕಣ್ಗಾವಲಿನಲ್ಲಿ ಇದ್ದಾನೆ. ಅವನನ್ನು ಆರೈಕೆ ಮಾಡುತ್ತಿರುವ ವೈದ್ಯರೂ ಕೂಡಾ ಡಿಫೆನ್ಸ್ ಪಾಕಿಸ್ತಾನಕ್ಕೆ ಸೇರಿದವರಾಗಿದ್ದು ಬೇರೆ ಯಾವುದೇ ವೈದ್ಯಕೀಯ ಸೌಲಭ್ಯ ಖಾಸಗಿಯಾಗೂ ಪಡೆಯುವಂತಿಲ್ಲ. ಜಗತ್ತಿನ ಶ್ರೇಷ್ಠ ವೈದ್ಯರು ಕಾಲನ್ನು ಮರು ಸ್ಥಾಪಿಸುವ ಭರವಸೆ ನೀಡಿದ್ದರೂ ಅವನನ್ನು ದೈಹಿಕವಾಗೇ ಕುಂದಿಸಿಬಿಡುವ ಹುನ್ನಾರದಲ್ಲಿ ಪೂರ್ತಿ ಕಾಲನ್ನು ತೆಗೆದು ಹಾಕಲಾಗಿದೆ ಎನ್ನುತ್ತದೆ ಗುಪ್ತಚರ ವರದಿ. ಒಟ್ಟಾರೆ ಸತತವಾಗಿ ಅಂತರಾಷ್ಟ್ರೀಯ ಮಟ್ಟದ ಇಬ್ಬರೂ ಡಾನ್‍ಗಳು ಈಗಾಗಲೇ ಭಾರತದ ಜೈಲು ಸೇರಿರುವ ಕಾರಣ ಸ್ವತ: ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಡಾವೂದ್. 
ಆದರೆ ಹಾಗೊಂದು ಅವಕಾಶ ಮಾಡಿಕೊಟ್ಟಿದ್ದೇ ಆದಲ್ಲಿ ಇನ್ನೊಬ್ಬ ಹುತಾತ್ಮನನ್ನು ನಾವೇ ಸೃಷ್ಟಿದಂತಾಗುತ್ತದಾ..? ಎನ್ನುವ ವರದಿ ಅಕ್ಷರಶ: ಚರ್ಚೆಯಲ್ಲಿದೆ. ಕಾರಣ ಅವನ ಹೆಸರಲ್ಲೇ ಪ್ರಾಣ ಬಿಡುವ, ನಂಬುಗೆಗೆ ಒಳಗಾಗಲು ಸಿದ್ಧವಿರುವ ಅತಿ ದೊಡ್ಡ ಪಡೆ ಈಗಲೂ ಕರಾವಳಿ ಸರಹದ್ದಿನಲ್ಲಿದ್ದೇ ಇದೆ. ಅದಕ್ಕಿಂತಲೂ ಘೋರ ಎಂದರೆ ಈ ದೇಶದಲ್ಲಿ, ಯಾವ ರೀತಿಯ ದೇಶದ್ರೋಹಕ್ಕೂ ಸಿದ್ಧವಾಗಿ ಬಿಡುವವರ ಮಧ್ಯೆ ಅವನನ್ನು ಮರುಸ್ಥಾಪಿಸುವ ಕೆಲಸಕ್ಕೆ ಮುಂದಾಗದಿದ್ದರೇನೆ ಒಳ್ಳೆಯದು. ಕಾರಣ ಮಾನವ ಹಕ್ಕು, ಅವನೂ ಮನುಶ್ಯ, ಬದುಕಲು ಒಂದು ಹಕ್ಕು ಎಂಬೆಲ್ಲ ವಿತಂಡವಾದಗಳನ್ನು ಹಿಡಿದುಕೊಂಡು ಲಗ್ಗೆ ಇಡುವ ಬುಜೀಗಳಿಗೆ ಯಾವ ಜನ, ಧರ್ಮ ಅಥವಾ ಸಿದ್ಧಂತವನ್ನು ಬೆಂಬಲಿಸಬೇಕು, ಬೆಂಬಲಿಸಬಾರದೆನ್ನುವ ಕನಿಷ್ಠ ಕಾಳಜಿಯೂ ಇಲ್ಲ. ದೇಶದ್ರೋಹಕ್ಕೆ ಬೆಂಬಲಿಸುವ ಎಲ್ಲಾ ಕರ್ಮಗಳು ಅವರ ಗುತ್ತಿಗೆಯಲ್ಲವೇ..? ಅವರಿಗೆ ದಾವೂದ್ ಆದರೇನು..? ಯಾವುದೇ ಧರ್ಮದ ಲಂಪಟ ಧರ್ಮಾಧಿಕಾರಿಯಾದರೇನು..? ಇದೆಲ್ಲವನ್ನೂ ತೂಗಿಸಿಕೊಂಡು ದೇಶ ಕಟ್ಟುವ ಸ್ವಯಂ ಸೇವಕರು ಇವತ್ತು ಇಂತಹದ್ದೇ ನೀಚರ ಕೈಯ್ಯಲ್ಲಿ ಸಾಲುಸಾಲಾಗಿ ಬೀದಿ ಬೀದಿಗಳಲ್ಲಿ ಕೊಲೆಯಾಗುತ್ತಿದ್ದರೆ, ಅದನ್ನು ಖಂಡಿಸುವ ಮಾತೂ ಇಲ್ಲದೇ ತೌಡು ತಿನ್ನುತ್ತಿದ್ದಾರೆ. ಅಂತಹದರಲ್ಲಿ ಆ ಪರಮ ಲಂಪಟ ದಾವೂದ್‍ನನ್ನು ಒಳಗೆ ಬಿಟ್ಟು ಕೊಳ್ಳಬೇಕೆ..? 

Wednesday, November 2, 2016

ಭವಿಷ್ಯತ್ತಿನಲ್ಲಿ ಯಾವ ಹಬ್ಬ ಕೈಬಿಡಲಿದೆಯೋ...?

( ನಾನು ನನ್ನ ಸಮಾಜ ಮತ್ತು ಧರ್ಮಾಧಾರಿತ ವೃತ್ತದಲ್ಲಿ ನನ್ನ ಹಿರಿಮೆಯನ್ನು ಸ್ಥಾಪಿಸಿಕೊಳ್ಳುವುದು ಹೇಗೆ..? ಇನ್ನೊಂದು ಧರ್ಮವನ್ನು ಮುಗಿಸಿ ಹಾಕುವುದರ ಮೂಲಕ. ಇದು ಸುಲಭದ ದಾರಿ ಮತ್ತು ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಟಿಪ್ಪು ಮಾಡಿದ್ದೂ ಅದೇ. ಅನಾಮತ್ತಾಗಿ ಲಕ್ಷಗಟ್ಟಲೇ ಹಿಂದೂಗಳನ್ನು ವರ್ಷವಧಿಯೊಳಗೆ ಮುಗಿಸಿ ಹಾಕಿ, ಕೊಡವರ ಒಂದು ತಲೆಮಾರನ್ನೇ ನಿರ್ನಾಮ ಮಾಡಿ, ಅದನ್ನು ಸಾಧನೆ ಎಂಬಂತೆ ಪತ್ರಗಳ ಮೂಲಕ ಪ್ರಚುರಪಡಿಸಿದ ಕೂಡಾ. ಆದರೆ ಇವತ್ತಿಗೂ ಅವನ ಭಜನೆ ಮಾಡುತ್ತಿರುವ ಭಟ್ಟಂಗಿಗಳಿಗೆ ತಾವೂ ಮುಂದೊಮ್ಮೆ ಇಂತಹದ್ದೇ ಪರಿಸ್ಥಿತಿಗೆ ಈಡಾಗಲಿದ್ದೇವೆ ಎನ್ನುವ ಅರಿವಾದರೂ ಬೇಡವಾ...? )  

ತೀರ ನಮ್ಮದೇ ನೆನಪಿನಲ್ಲುಳಿಯುವ ಕಾರ್ಯವನ್ನು ಕೈಗೊಳ್ಳುವ ಮಹನೀಯರಿಗಾಗಿ ಹತ್ತು ಹಲವು ರೀತಿಯಲ್ಲಿ ಅವರ ಸೇವೆಯನ್ನು ಸ್ಮರಿಸುವುದು ಸಹಜವೇ ಆಗಿರುವಾಗ ಟಿಪ್ಪುನಂತಹ ವ್ಯಕ್ತಿತ್ವವನ್ನು ಯಾವ ಕಾರಣಕ್ಕಾಗಿ ನಾವು ಹುತಾತ್ಮವಾಗಿಸಬೇಕು, ಜಯಂತಿ ಮಾಡಿ ಮೆರೆಸಬೇಕು ಎಂದು ಕೇಳಿ ನೋಡಿ. ಪ್ರಜ್ಞಾವಂತನಾದ ಒಬ್ಬೇ ಒಬ್ಬನೂ ಇದಕ್ಕೆ ಪ್ರತಿ ನುಡಿಯಲಾರ. ಅಕಸ್ಮಾತ್ ಎನಾದರೂ ಹೇಳಲೇಬೇಕು ಎಂದಿದ್ದರೆ ಆ ಚರ್ಚೆ ಬಿಟ್ಟುಬಿಡೊಣ ಎಂದಾನೆಯೇ ಹೊರತಾಗಿ ಟಿಪ್ಪುಗೊಂದು ಹಬ್ಬ ಮಾಡೊಣ ಎಂದು ಹೇಳಲಿಕ್ಕಿಲ್ಲ. ಅಕಸ್ಮಾತ ಹಾಗೆ ಹೇಳಿದ್ದೇ ಆದಲ್ಲಿ ಅವನಿಗೆ ನಮ್ಮ ಇತಿಹಾಸದ ಯುಕ್ತಾಯುಕ್ತ ಜ್ಞಾನವೇ ಇಲ್ಲ ಎನ್ನಬೇಕಾಗುತ್ತದೆ. ಕಾರಣ ಟಿಪ್ಪುವಿನ ಕುಕೃತ್ಯಗಳನ್ನು, ಅವನ ಇತಿಹಾಸವನ್ನು ಬರೀ ಸಂತ್ರಸ್ತ ಹಿಂದೂಗಳು ಬರೆಯಲಿಲ್ಲ. ಹಿಂದೂಗಳ ಹೊರತಾದ ಹೊರ ದೇಶದಲ್ಲದವರೂ ಬರೆದು ದಾಖಲಿಸಿಬಿಟ್ಟಿದ್ದಾರಲ್ಲಾ.., ಅಲ್ಲೆಲ್ಲೂ ಟಿಪ್ಪು ಒಬ್ಬ ಮಹಾರಾಜ ಅಥವಾ ನಿಜವಾದ ಸಮ್ರಾಜ್ಯದ ರಕ್ಷಕನಂತೆ ಕಾಣಿಸದೆ ಕೇವಲ ಮುಸ್ಲಿಂ ಧಾರ್ಮಿಕತೆಯ ಮೇಲೆ ನಂಬುಗೆ ಇರಿಸಿದ್ದ ಅತೃಪ್ತ ವ್ಯಕ್ತಿಯಾಗಿ ಗೋಚರಿಸುತ್ತಾನೆ.
 ಇತಿಹಾಸದ ಪುಟಗಳನ್ನು ನೋಡಿದಾಗ ಟಿಪ್ಪು ಯಾವ ರೀತಿಯಲ್ಲೂ ಹಿಂದೂಸ್ತಾನದ ನೆಲದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಸ್ಕೃತಿ ಅಥವಾ ಪ್ರಜೆಗಳಿಗಾಗಿ ದಾಖಲಿಸುವಂತಹ ಕೆಲಸವನ್ನೇ ಮಾಡಲಿಲ್ಲ ಎಂದರೆ ಅನಾಮತ್ತಾಗಿ ಎರಡು ದಶಕದ ಅವನ ಕಾಲಾವಧಿಯಲ್ಲಿ ಈ ನೆಲದ ಅಮಾಯಕ ಪ್ರಜೆಗಳು ಅದಿನ್ನೆಂಥಾ ಕಷ್ಟವನ್ನು ಅನುಭವಿಸಿದ್ದಾರೋ ಯೋಚಿಸಿ. ಕಾರಣ ಒಂದು ಆಳ್ವಿಕೆ ಅಥವಾ ಇಪ್ಪತ್ತು ವರ್ಷದ ಕಾಲಾವಧಿ ಎಂದರೆ ಅಜಮಾಸು ಒಂದು ತಲೆಮಾರು ಬದಲಾಗುವ ಅಮೂಲ್ಯ ಸಮಯವದು.
ಮೂಲತ: ಹೈದರಾಲಿಗೆ ಟಿಪ್ಪು ಹುಟ್ಟಿದ್ದೇ ದುರ್ಗದ ತಿಪ್ಪೇಸ್ವಾಮಿ ಎನ್ನುವ ಸ್ವಾಮಿಗಳ ಆಶಿರ್ವಾದದಿಂದ ಎಂದೇ ಅವನ ಇತಿಹಾಸ ಆರಂಭವಾಗುವಾಗ ಮುಂದೆ ಅಪಭ್ರಂಶವಾಗಿ ತಿಪ್ಪೇಸುಲ್ತಾನ ಎಂಬ ಹೆಸರು ಟಿಪ್ಪುಸುಲ್ತಾನ ಆಗಿದ್ದಿರಬಹುದು ಎನ್ನುವ ವಾದವನ್ನು ಅಂತರ್ಜಾಲದ ಪುಟವೊಂದು ಮುಂದಿಡುತ್ತದೆ. ಅದೆಲ್ಲಾ ಏನೇ ಇರಲಿ ರಾಜ್ಯಾಡಳಿತಕ್ಕೆ ಕೈ ಹಾಕಿದ ದಿನದಿಂದಲೂ ಟಿಪ್ಪು ಪರಮ ಹಿಂದೂ ದ್ವೇಷಿಯಾಗಿದ್ದ, ಕನ್ನಡ ಮತ್ತು ಕರ್ನಾಟಕದ ನೆಲಕ್ಕಾಗಿ ಏನನ್ನೂ ಮಾಡಲಿಲ್ಲ ಎನ್ನುವುದನ್ನು ಗಂಭೀರ ಇತಿಹಾಸಕಾರರು ದಾಖಲಿಸಿದ್ದಾರೆ. ಅದರಿಂದಾಗೇ ಕನ್ನಡದ ಬದಲಾಗಿ ಉರ್ದು ಮತ್ತು ಪಾರ್ಸಿ ಭಾಷೆಯ ಬಳಕೆಗೆ ಆತ ಆಜ್ಞೆ ಹೊರಡಿಸಿದರೆ, ಕನ್ನಡ ಅಸಂಖ್ಯಾತ ಸ್ಥಳಗಳ ಹೆಸರನ್ನು ಬದಲಿಸಿದ ಎನ್ನುತ್ತದೆ ಇತಿಹಾಸ. ಅದರಲ್ಲಿ ಪ್ರಮುಖವಾಗಿ ಕಣ್ಣಾನೂರು-ಕಸನೂರು, ಗುಟ್ಟಿ-ಫೈಜಾಬಾದ್, ಧಾರವಾಡ ಖುಷಿರ್ವಾಡ, ದಿಂಡಿಗಲ್ – ಖಲಿಕಾಬಾದ್, ರತ್ನಾಗಿರಿ-ಮುಸ್ಥಾಫಾಬಾದ್, ಮಂಗಳೂರು-ಜಲಾಲಾಬದ್, ಕಲ್ಲಿಕೋಟೆ ಇಸ್ಲಾಮಾ ಬಾದ್ ಆಗುತ್ತಾ ಕೊನೆಯಲ್ಲಿ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಿಸಿಕೊಳ್ಳುತ್ತಿರುವ ಮೈಸೂರು ನಝ್ಹಾರಾಬಾದ್. (ಈ ಹೆಸರಿನ ಏರಿಯಾ ಈಗಲೂ ಮೈಸೂರಿನಲ್ಲಿದೆ) ಆಗುವ ಮೂಲಕ ಕನ್ನಡದ ಹೆಸರು ಮತ್ತು ಇತಿಹಾಸವನ್ನು ಮೊದಲ ಹಂತದಲ್ಲೇ ಆತ ನಿರ್ಮಾಗೊಳಿಸಿದ್ದ. 
ವಿಚಿತ್ರವೆಂದರೆ ತುಂಬ ಚೆಂದದ ಹುಲಿಯ ಬಣ್ಣ ಮತ್ತು ಅದರ ಪಟ್ಟೆಗಳನ್ನು ಇಷ್ಟಪಡುತ್ತಿದ್ದ ಕಾರಣ ಟಿಪ್ಪು ತನ್ನ ಸೈನಿಕರಿಗೂ ಇತರ ಸಮವಸ್ತ್ರಗಳಿಗೂ ಹುಲಿಯ ಪಟ್ಟಿಗಳ ರೂಪವನ್ನು ಕೊಡಲು ಸೂಚಿಸಿದ್ದ. ಹಾಗಾಗಿ ಅವನ ಹುಲಿಯ ಪ್ರೇಮದಿಂದಾಗಿ ಅವನಿಗೆ ಶೇರ್–ಈ–ಮೈಸೂರು ಹೆಸರು ಮುಂದೆ ಮೈಸೂರು ಹುಲಿಯಾಯಿತೇ ವಿನ: ಬೇರಾವ ಕಾರಣಗಳೂ ಇತಿಹಾಸದಲ್ಲಿ ಕಂಡುಬರುವುದಿಲ್ಲ. ಸ್ವಂತ ಹುಲಿ ಕೊಂದದ್ದಂತೂ ಎಲ್ಲೂ ದಾಖಲಾಗಿಲ್ಲ.
ಮೇಲುಕೋಟೆಯಲ್ಲಿ ಅನಾಮತ್ತು 700 ಜನ ಅಯ್ಯಂಗಾರ್ ಬ್ರಾಹ್ಮಣ ಕುಟುಂಬವನ್ನು ನಿರ್ವಂಶ ಮಾಡಲು ಕಾರಣ ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು. ಕಾರಣ ಮೈಸೂರು ಸಂಸ್ಥಾನಕ್ಕೆ ತೀರ ನಿಷ್ಠರಾಗಿದ್ದ ಇಲ್ಲಿನ ಅಯ್ಯಂಗಾರರು ನರಕ ಚತುರ್ದಶಿಯ ದಿನ ಹಬ್ಬದ ಸಡಗರದಲ್ಲಿದ್ದಾಗ ತನ್ನ ಕಿರಾತಕ ಪಡೆಯೊಂದಿಗೆ ಎರಗಿದ ಟಿಪ್ಪು ಒಂದೇ ರಾತ್ರಿಯಲ್ಲಿ ಅವರ ಮಾರಣಹೋಮ ನಡೆಸಿದರೆ ಕೈಗೆ ಸಿಕ್ಕ ಹೆಂಗಸರ ಮಾನಭಂಗ ಅದ್ಯಾವ ಮಟ್ಟಕ್ಕಾಗಿರಬೇಕು ಎಂದು ಬೇರೆ ವಿವರಿಸಬೇಕಿಲ್ಲ. ಆ ದಿನ ಊರಲಿದ್ದ ಎಲ್ಲಾ ಕಲ್ಯಾಣಿಗಳಲ್ಲೂ ಸಾಲುಸಾಲಾಗಿ ಹೆಂಗಸರ ಹೆಣಗಳು ತೇಲುತ್ತಿದ್ದವು ಎನ್ನುತದೆ ಇತಿಹಾಸ. ಆದರೆ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಮಾತಾಡಬಲ್ಲ ಪ್ರಾಮಾಣಿಕ ಇತಿಹಾಸ ತಜ್ಞರು ಮಾತ್ರ ಟಿಪ್ಪುವಿನ ಇತಿಹಾಸ ಕಾವಲು ಕಾಯುತ್ತಾ ಅಮೇಧ್ಯದ ಟಿಪ್ಸು ಪಡೆಯುತ್ತಾ, ಕಾಲಕಾಲಕ್ಕೆ ಸಮ್ಮೇಳನಗಳ ಅಧ್ಯಕ್ಷತೆ, ಅಕಾಡೆಮಿ ಮೆಂಬರ್‍ಶಿಪ್ಪುಗಳಿಗೆ ಟವಲ್ ಹಾಕಿಟ್ಟು ಕಾಯುತ್ತಿದ್ದಾರೆ.
ವಿಚಿತ್ರವೆಂದರೆ ಶತ್ರುವಾಗಿದ್ದ ಬ್ರಿಟಿಷರನ್ನು ತನ್ನ ವೈರಿ ಎಂದೆಣಿಸುವ ಟಿಪ್ಪು, ಅವರನ್ನು ತಡೆಯಲಾಗದೆ ಜಗತ್ತಿನ ಯುದ್ಧ ಪಿಪಾಸು ನೆಪೆÇೀಲಿಯನ್ ಬೋನಾಪಾರ್ಟೆಯ ಬೆಂಬಲಕ್ಕಾಗಿ ಕಾಗದ ಬರೆಯುತ್ತಾನೆ. (1997 ಏಪ್ರಿಲ್ 21) ಪ್ರೆಂಚ್‍ರೊಡನೆ ಸೇರಿ ಬ್ರೀಟಿಷರನ್ನು ಓಡಿಸಿದರೆ ಸಂಪೂರ್ಣ ದೇಶವನ್ನು ಕೊಳ್ಳೆಹೊಡೆಯಬಹುದೆನ್ನುವ ದೂರಗಾಮಿ ಕುತಂತ್ರವನ್ನು ಎದುರಿಗಿಡುತ್ತಾನೆ. ಇದೆಲ್ಲಕ್ಕಿಂತಲೂ ಮಿಗಿಲು ಅವನನ್ನು ಸ್ವಾತಂತ್ರಯೋಧ ಎಂದು ಕೈಯ್ಯಲ್ಲಿ ಶಾಲು, ಮಾಲೆ ಹಿಡಿದು ಅವನ ಚಿತ್ರದೆದುರಿಗೆ ಗೌರವ ಸಲ್ಲಿಸಲು ಸಾಲು ಸಾಲಾಗಿ ಗುಲಾಮರ ತರಹ ನಿಲ್ಲುತ್ತಿದ್ದಾರಲ್ಲ. ಟಿಪ್ಪುವಿನ ಈ ಹೇಯ ಅವತಾರದ ಹೊತ್ತಿನಲ್ಲಿ ಭಾರತದಲ್ಲಿನ್ನೂ ಸ್ವಾತಂತ್ರ ಹೋರಾಟವೆಂಬ ಪರಿಕಲ್ಪನೆಯೇ ಇರಲಿಲ್ಲ. ಇವರಿಗೆಂಗೆ ಗೊತ್ತಾಯಿತೋ ಆತ `ಓರಾಟಗಾರ' ಎಂದು.
ಗೋಪಾಲ ರಾವ್ – ಖ್ಯಾತ ಅಧ್ಯಯನ ಮತ್ತು ಇತಿಹಾಸದ ನಿಖರ ಮಾಹಿತಿಯನ್ನು ನಮೂದಿಸಿರುವವರ  ಪ್ರಕಾರ 1792 ರಲ್ಲಿ ಟಿಪ್ಪು ಸೋತು ನೆಗೆದು ಬಿದ್ದನಲ್ಲ ಆಗ ಬ್ರೀಟಿಷರು ಅವನ ಸಂಪತ್ತು ಸೇರಿದಂತೆ ಸರ್ವಸ್ವವನ್ನು ಮುಟ್ಟುಗೋಲುಹಾಕಿ ಬಂಧಿಸಿದವರನ್ನು ಲೆಕ್ಕಿಸಿದರೆ ಇದ್ದ 65 ಜನ ಆಡಳಿತ ಮಂಡಳಿಯಲ್ಲಿ ಕೇವಲ 6 ಜನ ಮಾತ್ರ ಇತರೆ ಮತದವರಿದ್ದರೆ ಉಳಿದೆಲ್ಲರೂ ಮುಸ್ಲಿಂರಾಗಿದ್ದರು. (ಆದರೆ ಇದಕ್ಕೂ ಮೊದಲೇ ಹೈದರಾಬಾದಿನ ನಿಜಾಮ ಸಂಪೂರ್ಣವಾಗಿ ಆಡಳಿತದಲ್ಲಿ ಮುಸ್ಲಿಂರೇ ಇರಬೇಕೆಂದು ಫಾರ್ಮಾನು ಹೊರಡಿಸಿದ್ದರೆ,ýಟಿಪ್ಪು ಅದನ್ನು ಅಕ್ಷರಶ: ಜಾರಿಗೆ ತರಲು ಯತ್ನಿಸುತ್ತಿದ್ದ)ಟಿಪ್ಪು ಬರುತ್ತಿದ್ದಂತೆ ಮಾಡಿದ ಮೊದಲ ಕೆಲಸವೆಂದರೆ ಹಿಂದೂಗಳು ಮಾತ್ರವೇ ತಲೆಗಂದಾಯ ಕಟ್ಟಬೇಕು, ಉಳಿದಂತೆ ಮುಸ್ಲಿಂ ಹಾಗು ಮತಾಂತರಗೊಂಡ ಮುಸ್ಲಿಂರಿಗೂ ಇದರಿಂದ ವಿನಾಯಿತಿ ನೀಡಿದ್ದು. ತೀರ ಈಗಿನ ಮತ ರಾಜಕೀಯವನ್ನು ಆಗಿನ ಟಿಪ್ಪು ಅನಾಮತ್ತಾಗಿ ಅನುಸರಿಸಿದ್ದ ಮತ್ತು ತೀವ್ರವಾಗಿ ತನ್ನ ಅರಬ್ಬಿ ಮೂಲದ ಭಾಷೆಯನ್ನೇ ಹೇರಲು ಯತ್ನಿಸಿದ್ದು ಅದು ಸಾಮೂಹಿಕವಾಗಿ ಸಾಧ್ಯವಿಲ್ಲ ಎಂದು ಮನಗಾಣುತ್ತಿದ್ದಂತೆ ಹೆಚ್ಚಿನ ಭಾಗಗಳಲ್ಲಿ ಪದಗಳನ್ನು ತುರುಕುವ ಮೂಲಕ ಅದನ್ನು ಚಾಲನೆಯಲ್ಲಿಟ್ಟಿದ್ದ. ಅದರ ಪಳೆಯುಳಿಕೆಯಾಗಿ ಈಗಲೂ ಸರಕಾರಿ ಭಾಷೆಯಲ್ಲಿ ಪದಬಳಕೆಗಳು ಜಾರಿಯಲ್ಲಿವೆ.
ಟಿಪ್ಪು ತನ್ನ ಕಾಲಾವಧಿಯಲ್ಲಿ ರಾಜ್ಯಾಡಳಿತಕ್ಕಿಂತ ಮತಾಂತರ ಮತ್ತು ಹಿಂದೂ ಬ್ರಾಹ್ಮಣರ, ಮಲೆಯಾಳಿ ನಾಯರ್ ಮತ್ತು ನಂಬೂದಿರಿಗಳ ಹತ್ಯೆಗೆ ಅತಿ ಹೆಚ್ಚಿನ ಮಹತ್ವ ಹಾಗು ಗಮನ ನೀಡಿದ್ದ ಎನ್ನುವುದಕ್ಕೆ ಜಾಗತಿಕ ಉಲ್ಲೇಖಗಳು ಲಭ್ಯವಿದ್ದು ತೀವ್ರ ವಿಷಾದನೀಯವೆಂದರೆ ಅಂತಹ ಯಾವುದೇ ಇತಿಹಾಸವನ್ನು ಭಾರತೀಯರು ಉಲ್ಲೇಖಿಸುವಲ್ಲಿ ಹಿಂದೆ ಬಿದ್ದರು ಎನ್ನುವುದು. ಹೆಚ್ಚಾಗಿ ಇವತ್ತಿನ ಇಂತಹ ಟಿಪ್ಪುವಿನ ಮತಾಂಧಕಾರಿ ವರ್ತನೆಯನ್ನು ವಿವರಿಸಿದ್ದು ಮತ್ತು ಅತ್ಯಂತ ನಿಖರವಾಗಿ ದಾಖಲಿಸಿದ್ದು ವಿದೇಶಿ ಬರಹಗಾರರೇ, ತೀರ ಪಾಕಿಸ್ತಾನದಂತಹ ರಾಷ್ಟ್ರದಲ್ಲೂ ಇಂತಹ ಅನಾಹುತಕಾರಿ ಕಾರ್ಯಗಳ ಉಲ್ಲೇಖವಿದ್ದು ಟಿಪ್ಪು ತನ್ನ ಕಾಲಾವಧಿಯಲ್ಲಿ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರನ್ನು ಮತಾತರಿಸಿದ್ದ ಎನ್ನುತ್ತವೆ ದಾಖಲೆಗಳು. 
ಅದರಲ್ಲೂ ಕೇರಳ ಮತ್ತು ಕರ್ನಾಟಕ ಅವನ ದಾಳಿಗೆ ನಲುಗಿದ ಪ್ರಮುಖ ರಾಜ್ಯಗಳು. ಇಲ್ಲೆಲ್ಲ ನಡೆಸಿದ ಮಾರಣ ಹೋಮದ ಬಗ್ಗೆ ಲಿಖಿತ್ ದಾಖಲೆ ಸಲ್ಲಿಸುತ್ತಿದ್ದ ಟಿಪ್ಪು ಅದನ್ನೊಂದು ಮಹತ್ಕಾರ್ಯ ಎಂದೇ ಭಾವಿಸಿದ್ದ. ಮಂಗಳೂರಿನಲ್ಲಿ ಅತ್ಯಂತ ಹೀನಾಯವಾಗಿ ಕ್ರಿಶ್ಚಿಯನ್ನರನ್ನು ನಡೆಸಿಕೊಂಡ ಟಿಪ್ಪು 60000 ಕ್ರಿಶ್ಚಿಯನ್ನರನ್ನು ಕಾಲಿಗೆ ಕೊಳ, ಕೈಗೆ ಬಳೆ ತೊಡಿಸಿ ಅವರನ್ನು ಮೈಸೂರಿನವರೆಗೂ ನಡೆಸಿಕೊಂಡು ಬಂದ. ಅವನ ದಾರಿಯ ಮೇಲಿನ ದೌರ್ಜನ್ಯಕ್ಕೆ ಶೇ.10 ರಷ್ಟು ಕ್ರಿಶ್ಚಿಯನ್ನರು ರಸ್ತೆಯ ಮೇಲೆ ಹುಳುಗಳಂತೆ ಬಿದ್ದು ಸತ್ತು ಹೋದರು. ಅಲ್ಲಲ್ಲೆ ಹೆಣಗಳನ್ನು ಸರಿಸಿ ನಡೆದು ಬಂದ ಟಿಪ್ಪು ಮಾಡಿದ ಮೊದಲ ಕೆಲಸ ಅವರನ್ನೆಲ್ಲಾ ಸುನ್ನತಿ ಮಾಡಿ ಮತಾಂತರಿಸಿದ್ದು ಮತ್ತು ಸೆರೆಗೆ ತಳ್ಳಿದ್ದು. ಈ ಅನಾಹುತಕ್ಕೆ ಸಾಕ್ಷಿ ಈಗಿನ ನೆತ್ತರಕೆರೆ ವಿಟ್ಲದ ಬಳಿಯಲ್ಲಿದೆ. 
ಅವನ ಕ್ರೌರ್ಯದ ಮಾಹಿತಿ ಮತ್ತು ವಿವರ " ಯೋಯೇಜ್ ಟು ಈಸ್ಟ್ ಇಂಡಿಯಾ " ಕೃತಿ ರಚಿಸಿದ ಲೇಖಕ, ಇತಿಹಾಸ ತಜ್ಞ ಬಾತರ್ ಲೋಮಿಯಾ ಎನ್ನುವವನಿಂದ ತಿಳಿಯುತ್ತದೆ. ಅವನ ಪ್ರಕಾರ ಕಲ್ಲಿಕೋಟೆಯ ಮಾರಣ ಹೋಮ ಜಗತ್ತು ಕಂಡು ಕೇಳರಿಯದ ಹಿಂಸೆಗಳ ಕೃತ್ಯ ಎನ್ನುತ್ತಾನೆ. ಸಾಲುಸಾಲಾಗಿ ಆನೆಯ ಸಾಲುಗಳನ್ನು ಹೊರಡಿಸುತ್ತಿದ್ದ ಟಿಪ್ಪು ಸರಿ ಸುಮಾರು 2000 ಬ್ರಾಹ್ಮಣ ಕುಟುಂಬಗಳನ್ನು ಒಂದು ಕುಡಿಯೂ ಉಳಿಸದಂತೆ ನಾಶ ಮಾಡುತ್ತಾನೆ, ಅವರ ದೇಹವನ್ನು ವಿನೋದಾವಳಿಯ ನೆಪದಲ್ಲಿ ಆನೆಯ ಕಾಲಿಗೆ ಕಟ್ಟಿ ಹೊಸಕಿಸುತ್ತಾನೆ. ತೀರ ಬೆತ್ತಲೆ ಮಾಡಿ ಗಂಡು ಹೆಣ್ಣು ಎನ್ನುವ ಬೇಧವಿಲ್ಲದೆ ಅವರನ್ನೆಲ್ಲ ಮೆರವಣಿಗೆ ಮಾಡುತ್ತಾ ಸಾಯಿಸಿದ್ದನ್ನು ಬಾತರ್ ಲೋಮಿಯೋ ಅತ್ಯಂತ ಸ್ಪಷ್ಠವಾಗಿ ದಾಖಲಿಸಿದ್ದಾನೆ. ಅಸಲಿಗೆ ಹಾಗೆ ತೀರಿ ಹೋದ ಕಲ್ಲಿಕೊಟೆಯ ಬ್ರಾಹ್ಮಣರಲ್ಲಿ ಉಳಿದು ಹೋದವರ ಪ್ರಾಣ ಉಳಿಸುವುದಕ್ಕಾಗೇ ಸ್ವತ: ಕಲ್ಲಿಕೋಟೆಯ ರಾಜ ಆ ಊರನ್ನೆ ತೊರೆದು ಹೋಗುತ್ತಾನೆ ಸುಮಾರು 1783 ರ ಹೊತ್ತಿಗೆ ದಿನಕ್ಕೆ ಹತ್ತಿಪ್ಪತ್ತು ಬ್ರಾಹ್ಮಣರ ತಲೆ ಕಡಿದು ಝಾಮೋರಿನ ಕೋಟೆಯ ಹೊರಗೆ ನೇತಾಡಿಸುವುದು ಅವನ ಹವ್ಯಾಸವಾಗಿ ಬದಲಾಗಿತ್ತು ಎನ್ನುತ್ತದೆ ಬ್ರಿಟಿಷ ಅಧಿಕಾರಿಯೊಬ್ಬನ ಡೈರಿ. ಈ ಸಮಯದಲ್ಲೇ ಸಾಮೂಹಿಕ ಸುನ್ನತಿ ಮಾಡಿಸುವ ಅವನ ಭಿಭತ್ಸಕಾರಿ ಕೃತಿ ಬೆಳಕಿಗೆ ಬಂದಿದ್ದು. 
ನೂರಾರು ಹಿಂದೂಗಳನ್ನು ಸಾಲಾಗಿ ಬೆತ್ತಲೆಯಾಗಿ ನಿಲ್ಲಿಸಿ ಕತ್ತಿಯಿಂದ ಅವರ ಮಾರ್ಮಾಂಗದ ತುದಿಯನ್ನು ಕತ್ತರಿಸಿ ಬಾಯಿಗೆ ಮಾಂಸವನ್ನು ತುಂಬಿ `ಇನ್ನು ಮೇಲೆ ಇವರೆಲ್ಲಾ ಇಸ್ಲಾಂ' ಧರ್ಮಕ್ಕೆ ಪರಿವರ್ತನೆಯಾದವರೆಂದು ಘೋಶಿಸುತ್ತಿದ್ದ. ಬರೆಯುತ್ತಾ ಹೋದರೆ ಬರೀ ನರಮೇಧದ ಕತೆಯನ್ನು ಇತಿಹಾಸವಾಗಿಸಿಕೊಂಡ ಟಿಪ್ಪು ಅಪ್ಪಟ ಸ್ತ್ರೀಲೋಲಕನಾಗಿ 600 ಕ್ಕೂ ಹೆಚ್ಚು ಜನರನ್ನು ತನ್ನ ಜನಾನದಲ್ಲಿ ತುಂಬಿಕೊಂಡಿದ್ದ. ಇಂಥವನ ಬಗ್ಗೆ ಇವತ್ತು ಹಬ್ಬ ಆಚರಿಸುವ ಮೊದಲೊಮ್ಮೆ ಇತಿಹಾಸ ದಾಖಲೆಯ ವಿವರವನ್ನೊಮ್ಮೆ ನೋಡುವುದೊಳಿತು. ಪೂರ್ತಿ ಬರೆದು ಪೂರೈಸುವ ಬದಲಿಗೆ ರೆಫೆರೆನ್ಸ್‍ಗಾಗಿ ಒಂದಷ್ಟು ಮಾಹಿತಿಯನ್ನು ಇಲ್ಲಿ ಕೊಟಿದ್ದೇನೆ. ಈ ಕೆಳಗಿನ ಇತಿಹಾಸದ ದಾಖಲೆಗಳನ್ನು ಕ್ರೊಢೀಕರಿಸಿದರೆ ಸಾವಿರ ಪುಟದ ಇನ್ನೊಂದು ಬಿಭತ್ಸಕಾರಿ ಹೊತ್ತಗೆಯಾದೀತು.
ವಿಲಿಯಂ ಲೋಗನ್ – ಮಲಬಾರ್ ಮ್ಯಾನ್ಯುಯೆಲ್ ( ಬ್ರಿಟೀಷ್ ಸರಕಾರದಲ್ಲಿ ವಿದೇಶಿ ಅಧಿಕಾರಿ ಸ್ಕಾಟಿಷ್. ಕೇರಳ ತಮಿಳನಾಡಿನಲ್ಲಿ ಎರಡು ದಶಕಗಳ ಕಾಲ ದಂಡಾಧಿಕಾರಿಯಾಗಿದ್ದ ಕಲೆಕ್ಟರ್ )
ವಟಂಕ್ಕೂರು ರಾಜವರ್ಮ - ಕೇರಳ ಸಂಸ್ಕೃತ ಸಾಹಿತ್ಯ ಚರಿತ.
ಲೇವಿಸ್ ರೈಸ್ - ಹಿಸ್ಟರಿ ಆಫ್ ಮೈಸೂರ್ ಆಂಡ್ ಕೂರ್ಗ್.
ಐ.ಎಮ್. ಮುತ್ತಣ್ಣನವರ – ಕೂರ್ಗ ಗೆಝೇಟಿಯರ್. (1785 ಡಿಸೆಂಬರ್  13 – ಭಾಗಮಂಡಲ ದೇವಟ್ಟಿ ಪರಂಬುನಲ್ಲಿ 30000 ಕೊಡವರ ಮಾರಣ ಹೋಮ. )
1797 ಏಪ್ರಿಲ್ 21 - ಪ್ರೆಂಚ್‍ರಿಗೆ ಟಿಪ್ಪು ಸಹಾಯ ಅಪೇಕ್ಷಿಸಿ, ಭಾರತ ಕೊಳ್ಳೆ ಹೊಡೆಯುವ ಪ್ರಲೋಭನೆಯ ಕಾಗದ ಬರೆದದ್ದು.
ಮೀರ್ ಹುಸೈನ್ ಕೀರ್ಮಾನಿ - 1788 ರ ಇತಿಹಾಸಕಾರ – ದಾಳಿಯ ದಾಖಲೆಗಳು. 
ಕ್ಯಾಪ್ಟನ್ ಥಾಮಸ್ ಮ್ಯಾರಿಯಟ್ – ಟಿಪ್ಪುವಿನ ಮರಣಾನಂತರದ ಲಭ್ಯವಿದ್ದ ಮಾಹಿತಿಯ ಇತಿಹಾಸಕಾರ. 
ಕೇಯಿಟ್ ಬ್ಯಾಂಕ್ – ಟಿಪ್ಪು ಸುಲ್ತಾನ ಸರ್ಚ್ ¥sóÁರ್ ಲೆಜಿಟ್ಮಸಿ ( ಇದು ಟಿಪ್ಪು ಸತ್ತ ನಂತರ ಅಖಂಡ ಆರ್ನೂರು ಚಿಲ್ರೆ ಹೆಂಗಸರ ಜನಾನಾದವರ ಕಥೆ ಏನಾಯಿತು ಎಂದು ದಾಖಲಿಸುತ್ತದೆ ) 
ಡಾ. ನರಸಿಂಹನ್ – 1792 ರ ಮೇಲು ಕೋಟೆಯಲ್ಲಿ ಅಯ್ಯಂಗಾರ್ ಬ್ರಾಹ್ಮಣರ ಮಾರಣ ಹೋಮದ ದಾಖಲೆ (ಇದರ ಕಾರಣ ಇವತ್ತಿಗೂ ಇಲ್ಲಿ ದೀಪಾವಳಿಯ ದಿನ ಸೂತಕ ಆಚರಿಸಲಾಗುತ್ತದೆ. ) 
ಬಾರ್ಟ್ ಲೋಮಿಯೋ – ವೋಯೇಜ್ ಟು ಈಸ್ಟ್ ಇಂಡೀಸ್ ( ಫೆÇೀರ್ತುಗೀಸ್ ಯಾತ್ರಿಕ ) 
ಕರ್ನಲ್ ಪುಲ್ಲೇಟಿನ್ - ಬ್ರಿಟಿಷ ಕರ್ನಲ್ – 1783 ಕಲ್ಲಿಕೋಟೆ ಮಾರಣಹೋಮದ ದಾಖಲೆಗಾರ.
1788 ಮಾರ್ಚ್ 22 – ಅಬ್ದುಲ್ ಖಾದೀರ್ ಪತ್ರ (12000 ಹಿಂದೂ ನಂಬೂದಿರಿ ಬ್ರಾಹ್ಮಣರನ್ನು ಮತಾಂತರಿಸಿದ ದಾಖಲೆ)
1790 ಜನೇವರಿ 18 - ಸಯ್ಯದ್ ಅಬ್ದುಲ್ ದುಲಾಯಿಗೆ ಬರೆದ ಕಾಗದ (ಕಲ್ಲಿಕೋಟೆ, ಕೊಚ್ಚಿ ಭಾಗದ ಎಲ್ಲಾ ಹಿಂದೂಗಳ ಮತಾಂತರದ ದಾಖಲೆ) 
1790 ಜನೇವರಿ 19 - ಬದ್ರುದ್ದಿನ್ ಜುಮಾನ್ ಖಾನ್ ಪತ್ರ(ಮಲಬಾರ್‍ನ ನಾಲ್ಕು ಲಕ್ಷ ಜನ ಹಿಂದೂ ಗಳನ್ನು ಮುಸ್ಲಿಂಗೆ ಪರಿವರ್ತಿಸಿದ ದಾಖಲೆ ಜತೆಗೆ ತಿರುವಾಂಕೂರಿನ ರಾಜ ರಾಮವರ್ಮನನ್ನು (ನಾಯರ್) ಮತಾಂತರಿಸುವ ಯೋಜನಾ ವರದಿ.
1964 - ಲೈಫ್ ಆಫ್ ಟಿಪ್ಪು ಸುಲ್ತಾನ್(ಪಾಕಿಸ್ತಾನ ಅಡ್ಮಿನಿಸ್ಟ್ರೆಟಿವ್ ಸ್ಟಾಫ್ ಕಾಲೇಜ್. ಲಾಹೋರ ಪ್ರಕಟ. 100000 ಹಿಂದೂಗಳು ಮತ್ತು 70000 ಕ್ರಿಶ್ಚಿಯನ್ನರನ್ನು ಮತಾಂತರಿಸಿದ ದಾಖಲೆಯ ಪುಸ್ತಕ )
ಪೆÇ್ರ.ಲೇವಿಸ್ ಬಾವರಿ - ಬ್ರಿಟಿಷ್ ಇತಿಹಾಸಕಾರ (ದೇಗುಲ ಮತ್ತು ಮೂರ್ತಿ ಭಂಜನೆಯ ದಾಖಲೆ. ದಕ್ಷಿಣ ಭಾರತದ ಸುಮಾರು 8000 ದೇವಸ್ಥಾನಗಳನ್ನು ಹಾಳುಗೆಡುವಿದ ಮಾಹಿತಿ. ಮಣಿಯೂರು(ಇಲ್ಲೀಗ ಮಸೀದಿ ಕಟ್ಟಲಾಗಿದೆ) ತೇಲಶ್ಚರಿ, ತಿರುವೆಂಕಟ ದೇವಸ್ಥಾನ, ಚಿರಕ್ಕಲ್, ಮೈಸೂರು ಕೊಡಗು, ಮಂಗಳೂರು, ತಳಿ, ಗೋವಿಂದಪುರ, ವಾರಂಕ್ಕಲ್, ತಿರುವಣ್ಣೂರು, ಪುತ್ತೂರು, ಮಧೂರು ಸೇರಿದಂತೆ ಅತ್ಯುತ್ತಮ ಎನ್ನಬಹುದಾಗಿದ್ದ ಶಿಲ್ಪಕಲೆಗಳಿಂದ ಕಂಗೊಳಿಸುತ್ತಿದ್ದ ದೇವಸ್ಥಾನಗಳು ಸಂಪೂರ್ಣ ನೆಲಕಚ್ಚಿದವು. ಇವನ್ನೆಲ್ಲ ವಿಲಯಂ ಲೋಗನ್ ಕೂಡಾ ದಾಖಲಿಸಿದ್ದಾನೆ. 
1784 ಸೆಂಟ್ ಮಿಲಾಗ್ರೀಸ್ ಚರ್ಚು - ಟಿಪ್ಪು ನೆಲಸಮಗೊಳಿಸಿದ. ಇದರ ನಿರ್ಮಾಣ 1640ರಲ್ಲಾಗಿತ್ತು. 
ಡಿಸೆಂಬರ್ 7, 1782 ರಿಂದ ಮೇ. 4 1799 – ಟಿಪ್ಪು ಮೈಸೂರು ಕೇರಳ ಮತ್ತು ಕರ್ನಾಟಕದ ಭಾಗದಲ್ಲಿ ನಡೆಸಿದ ಮಾರಣ ಹೋಮದ ಅವಧಿ ಹಾಗು ಅವನ ಆಡಳಿತ ಕಾಲಾವಧಿ.
ಇದೆಲ್ಲಾ ಇತಿಹಾಸ ಮತ್ತು ಕೇವಲ ಲಭ್ಯವಿರುವ ದಾಖಲೆಯಾಚೆಗೆ ಅದೆಷ್ಟು ನೆತ್ತರ ಕತೆಗಳನ್ನು ಟಿಪ್ಪುನ ಕಾಲಾವಧಿಯಲ್ಲಿ ಹಿಂದೂ ಜನಾಂಗ ಅನುಭವಿಸಿರಲಿಕ್ಕಿಲ್ಲ. ಹಿಂದೆಂದೋ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರು ಮತ್ತು ಮೇಲ್ವರ್ಗ ಕೊಂಚ ಸಹಿಸಿಕೊಳ್ಳಬೇಕು ಎನ್ನುವ ಬುದ್ಧಿವಂತರೇ, ಕನಿಷ್ಟ ನಾವು ಭಾರತೀಯರು, ನಮ್ಮ ರಾಷ್ಟ್ರೀಯತೆಗೆ ಒಂದು ವಿಶೇಷತೆಯಿದೆ ಎನ್ನುವುದನ್ನು ಅರಿಯದೆ ಅಕಾಡೆಮಿ, ಪ್ರಶಸ್ತಿ, ಅಧ್ಯಕ್ಷತೆ, ಮೈಕು ಮತ್ತು ವೇದಿಕೆ ಎನ್ನುತ್ತಾ ನಂದೊಂದು ಸೀಟು ಎಂದು ಕರ್ಚೀಪ್ ಹಾಕುತ್ತಲೇ ಇದ್ದರೆ ನಿಮಗರಿವಾಗುವ ಮೊದಲೇ ಮತ್ತೊಮ್ಮೆ ನಿಮ್ಮನ್ನೂ ಬಹಿರಂಗವಾಗಿ ಬೆತ್ತಲಾಗಿಸಿ ಸುನ್ನತಿಗೊಳಪಡಿಸಿಯಾರು. ಈಗಲೂ ಕಾಲ ಮಿಂಚಿಲ್ಲ. ನನ್ನ ದೇಶ, ನಮ್ಮ ನಾಡು, ನಾವು ಭಾರತೀಯರು ಎನ್ನುವ ಸನಾತನತೆ ಇನ್ನಾದರೂ ಮೈಗೊಡಿಸಿಕೊಳ್ಳಿ. ಇತಿಹಾಸ ಬದಲಿಸಲಾಗದಿದ್ದರೂ ಕಲಿಯಬಹುದು. ಆದರೆ ವರ್ತಮಾನವನ್ನೂ ರೂಢಿಸಿಕೊಳ್ಳದಿದ್ದರೆ ನೀವು ಮತ್ತೊಮ್ಮೆ ಇತಿಹಾಸದ ಭಾಗವಾಗುವುದರಲ್ಲಿ ಸಂಶಯವಿಲ್ಲ. ಯಾರಿಗೆ ಗೊತ್ತು ಯಾವ ಸಮುದಾಯ ಭವಿಷ್ಯತ್ತಿನಲ್ಲಿ ದಸರೆಯನ್ನು ಬಿಡಬೇಕಾಗಿ ಬರಬಹುದೆಂದು. ಜಾಗ್ರತೆ.

Friday, October 28, 2016

ಸಮಾಜ ಒಡೆಯುವ ಜಯಂತಿ, ಉತ್ಸವಗಳು ಬೇಕೆ...?


( ಬುದ್ಧಿಜೀವಿಗಳು ಆಳುವವರನ್ನು ಮೆಚ್ಚಿಸಲು ಬರೆದ ಲೇಖನಗಳನ್ನು ನಾನು ನೋಡಿದ್ದೇನೆ. ಟಿಪ್ಪು ರಾಕೇಟ್ ಹಾರಿಸಿದ, ಟಿಪ್ಪು ತನ್ನ ಮಕ್ಕಳನ್ನು ಬಲಿಕೊಟ್ಟ ಎನ್ನುವವರಿಗೆ, ಸಾಲುಸಾಲಾಗಿ ತಮ್ಮ ಗಂಡಂದಿರನ್ನೇ ಇವತ್ತು ಕಾಶ್ಮೀರ ಗಡಿಯಲ್ಲಿ ನಮ್ಮ ಮಹಿಳೆಯರು ತ್ಯಾಗಮಾಡುತ್ತಿದ್ದರೆ, ಅವರ ಮಕ್ಕಳು ಅಪ್ಪನ ಹೆಣಕ್ಕೆ ಸೆಲ್ಯೂಟ್ ಹೋಡೆದು `..ಜೈ ಹಿಂದ್..' ಎಂದು ಕಿರುಚುತ್ತಾ ಕಣ್ಣೀರು ಹಾಕುತ್ತವಲ್ಲ ಅದು ಯಾವನಿಗೂ ಕಾಣುತ್ತಲೇ ಇಲ್ಲವಲ್ಲ. )  

ಂದು ಜಯಂತಿ, ಒಂದು ಹಬ್ಬ ಹರಿದಿನ ಎನ್ನುವುದು ಖುಶಿಯಾಗಿ ಮನೆ ಮತ್ತು ಕುಟುಂಬ ಕೊನೆಗೆ ಸಮಾಜವೊಂದು ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆಯ ಸಾಮೂಹಿಕ ಹಬ್ಬವಾಗಿರುತ್ತದೆಯೇ ಹೊರತಾಗಿ ಮುಖ ತಿರುವುವ, ಇದ್ದಬದ್ದ ಸಾಮರಸ್ಯದ ಸಂಬಂಧವೂ ಮುರಿದುಕೊಳ್ಳುವ ಜಾಡ್ಯವಾಗಬಾರದು. ಇವತ್ತು ಮನೆ, ವಠಾರಗಳಲ್ಲಿ ನಡೆಯುವ ಸಮಾರಂಭಗಳನ್ನು ಗಮನಿಸಿ. ಮನೆಯಲ್ಲಿಷ್ಟು ಸಂತಸ, ನೆಂಟರಿಷ್ಟರಿಗೆ ಸಿಹಿ, ಮಾಂಸಾಹಾರಿಗಳಾಗಿದ್ದರೆ ಕೊನೆಯ ದಿನ ಬಾಡೂಟ ಹಾಕಿಸಿ ಹಿಂದಿನ ಇದ್ದಬದ್ದ ಕಹಿಯನ್ನೂ ಮರೆಯುವ ಸಂಪ್ರದಾಯ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಗಮನಿಸಿಯೇ ನಮ್ಮ ನಮ್ಮಲ್ಲಿ ಆಯಾ ಕಾಲವಾರು ಮತ್ತು ಸಾಮಾಜಿಕ ನಡವಳಿಕೆ ಜಾತಿ ಧರ್ಮಾಧಾರಿತ ಆಚರಣೆಗಳು ಬೆಳಕಿಗೆ ಬಂದವು.
ಎಂತೆಂತಹ ಮನಸ್ತಾಪಗಳೂ ಕುಟುಂಬದ ಇಂತಹ ಒಂದು ಕರೆಯಿಂದ, ಆ ಮನೆಯಲ್ಲಿ ಪಾಲ್ಗೊಳ್ಳುವಿಕೆಯ ಉತ್ಸವದ ಸಡಗರದಿಂದ ಶಾಶ್ವತವಾಗಿ ಮುಗಿದು ಹೋದ ಉದಾ. ಸಾವಿರಾರಿವೆ ನಮ್ಮೆದುರಿಗಿದೆ. ಇದೆಲ್ಲಾ ಒಂದು ಸಮೃದ್ಧ ಮನಸ್ಥಿತಿಯ ಮತ್ತು ಸಾಮಾಜಿಕ ವ್ಯವಸ್ಥೆಯ ಮೂಲವಾದ ಕುಟುಂಬ ಮತ್ತು ಆಯಾ ಊರು ಪ್ರದೇಶಗಳ ಬೌದ್ಧಿಕ ಮತ್ತು ಸಾಂಪ್ರಾದಾಯಿಕ ಗಟ್ಟಿತನಕ್ಕೆ ಅವಶ್ಯವೂ ಆಗಿದ್ದು ಈಗಲೂ ಜಾರಿಯಲ್ಲಿದೆ. (ಹೆಚ್ಚಿನ ಊರುಗಳಲ್ಲಿ ಮೊಹರಮ್ಮಿಗೆ ಹಿಂದೂಗಳೂ, ಗಣೇಶ ಹಬ್ಬದ ಹೋಳಿಗೆ ಊಟಕ್ಕೆ ಮುಸ್ಲಿಂರೂ ಪಾಲ್ಗೊಳ್ಳುವುದು ಕಡೆಯ ದಶಕದ ಅಂತ್ಯದವರೆಗೂ ತುಂಬ ಚಾಲ್ತಿಯಲ್ಲಿತ್ತು. ಬರುಬರುತ್ತಾ ಸಮಾಜವನ್ನು ಒಡೆಯುವ ಬುದ್ಧಿಜೀವಿಗಳ ಕುತರ್ಕಕ್ಕೆ ಇವತ್ತು ನಮ್ಮ ಹಬ್ಬ, ನಿಮ್ಮ ಹಬ್ಬ ಎನ್ನುವ ತಾರತಮ್ಯ ಉಂಟಾಗಿದ್ದು ಸೂಕ್ಷ್ಮವಾಗಿ ಬದಲಾವಣೆಗಳನ್ನು ಗಮನಿಸುವವರಿಗೆ ಅರಿವಾಗುತ್ತಲೇ ಇದೆ) 
ಹೀಗೆ ಕುಟುಂಬಾಧಾರಿತ ಮೂಲವಾಗಿ ಆರಂಭವಾದ ಕೆಲ ಉತ್ಸವಗಳು ಮಹನೀಯರಿಗೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ಅವರ ಹೆಸರಿನಲ್ಲೂ ಆಯಾ ಪ್ರದೇಶವಾರು ಉತ್ಸವಗಳು ಸಂಯೋಜನೆ ಗೊಳ್ಳತೊಡಗಿದ್ದು ಧನಾತ್ಮಕ ಪರಿಣಾಮವೇ. ಅದೊಂದು ಗೌರವ ಅವರ ಅಪರಿಮಿತ ತ್ಯಾಗಕ್ಕೆ. ಉದಾ. ಗಾಂಧೀಜಿಯವರ ಸತ್ಯ, ಅಹಿಂಸೆ ಕಾರಣವಾಗಿ ಅವರ ಜಯಂತಿಯನ್ನು ಪೂರಾ ಭಾರತೀಯರು ತುಟಿ ಪಿಟಕ್ಕೆನ್ನದೆ ಹಬ್ಬದ ರೀತಿಯಲ್ಲಿ ಅಚರಿಸುತ್ತಿದ್ದಾರೆ. ಉಳಿದೆರಡು ರಾಷ್ಟ್ರೀಯ ಹಬ್ಬದಷ್ಟೆ ಮಹತ್ವ ಪಡೆದಿವೆ. ಕೆಲವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರೆ ಕೆಲವನ್ನು ಆಯಾ ರಾಜ್ಯವಾರು ಪ್ರಾಮುಖ್ಯತೆಯ ಮೇರೆಗೆ ಸರಕಾರಗಳು ನಿಶ್ಚಯಿಸತೊಡಗಿದವು. 
ಗಾಂಧೀಜಿಗೆ ಸಲ್ಲುವಷ್ಟು ಪ್ರಾಮುಖ್ಯತೆ ಪಡೆದ ಸಮಾನತೆಯ ಹರಿಕಾರ ಅಂಬೇಡ್ಕರ್ ಅವರ ಜಯಂತಿ ಬಂತು. ಅವರು ಯಾವ ಜಾತಿ ಧರ್ಮ ಎನ್ನುವುದನ್ನೂ ಗಮನಿಸಿದೆ ಪ್ರತಿ ಭಾರತೀಯ ಅದನ್ನು ಒಪ್ಪಿಕೊಂಡ. ಅದರೊಂದಿಗೆ ವಾಲ್ಮಿಕಿ, ಕನದಾಸ, ಬುದ್ಧ, ವಿವೇಕಾನಂದ, ರಾಮಕೃಷ್ಣರು ಹೀಗೆ ಪ್ರಮುಖರೆಲ್ಲಾ ಜಾಗ ಪಡೆದರು. ಅದರಿಗೆ ಸಲ್ಲಬೇಕಿದ್ದ ಗೌರವ. ಹಾಗೇಯೇ ಮಹಾರಾಷ್ಟ್ರದಲ್ಲಿ ಶಿವಾಜಿ, ಕರ್ನಾಟಕದಲ್ಲಿ ಕೆಂಪೇಗೌಡರು, ಗುಜರಾತಿನಲ್ಲಿ ಪಟೇಲರರು ವಿಮಾನ ನಿಲ್ದಾಣದ ಐಕಾನ್‍ಗಳಾದರೂ ಯಾರಿಗೂ ಯಾವ ಹೆಸರಿಗೂ ತಕರಾರು ಬರಲಿಲ್ಲ. ಕಾರಣ ಆಯ್ದ ವ್ಯಕ್ತಿತ್ವದ ಹೆಸರುಗಳೆಲ್ಲಾ ಭಾರತೀಯ ಸಮಾಜದಲ್ಲಿ ಯಾರಿಗೂ ಯಾವ ರೀತಿಯಲ್ಲೂ ಯಾವ ಅನ್ಯಾಯವನ್ನೂ ಮಾಡದ ಮತ್ತು ಯಾವ ರೀತಿಯಲ್ಲೂ ಮಾನಸಿಕವಾಗಿ, ದೈಹಿಕವಾಗಿ ಯಾರಿಗೂ ವಜ್ರ್ಯ ಎನ್ನಿಸುವ ವ್ಯಕ್ತಿಗಳಾಗಿರಲೇ ಇಲ್ಲ. 
ಇದಕ್ಕೂ ಮೊದಲಿನ ರಾಮ, ಲಕ್ಷ್ಮಣ, ಕೃಷ್ಣ, ಹನುಮಂತ ಹೀಗೆ ಪೌರಾಣಿಕ ನಾಯಕರುಗಳೊಂದಿಗೆ, ಸಾಯಿಬಾಬನಂತಹ ಸಂತರು ಸೇರಿದಂತೆ ಹಲವು ದರ್ಗಾಗಳಲ್ಲಿ ಪವಡಿಸಿರುವ ಮಹಾನ್ ಮುಸ್ಲಿಂ ಸಾಧುಗಳು ಇವತ್ತು ಕೋಟ್ಯಾಂತರ ಭಾರತೀಯರ ಆರಾಧನಾ ಶಕ್ತಿಗಳಾಗಿ ಹೊಮ್ಮಿದ್ದಿದೆ. ಹಾಗಾಗಿಯೇ ಮಂದಿರ, ಮಸೀದಿ, ಚರ್ಚು ಅಥವಾ ಯಾವುದೇ ಸಿಖ್‍ರ ಪ್ರಾರ್ಥನಾ ಮಂದಿರಗಳಿರಲಿ, ಯಾರಿಗೂ ಯಾವ ರೀತಿಯ ಜಯಂತಿಗೂ, ಹಬ್ಬಕ್ಕೂ ಯಾವ ಅಬ್ಜಕ್ಷನ್ನೇ ಇರಲಿಲ್ಲ. ಕಾರಣ ಇಲ್ಲೆಲ್ಲಾ ಕಾಲೂರಿ ನಿಂತವರು ಸಮಾಜದ ಸಾಮಾನ್ಯರ, ನನ್ನ ನಿಮ್ಮಂತವರಿಗಿಂತ ಅವರ ಸ್ವಭಾವ, ನಡವಳಿಕೆ ಮತ್ತು ನಾಗರಿಕ ಜನ್ಯ ಅಭಿವ್ಯಕ್ತಿಗಳಿಂದ ಸುತ್ಯಾರ್ಹರೂ, ವಂದಿತರೂ ಆಗಿದ್ದರು. 
ಇದರ ಹೊರತಾಗಿ ಎಲ್ಲಿಯಾದರೂ ದುಶ್ಯಾಸನನಿಗೋ, ಕಂಸನಿಗೋ, ನರಕಾಸುರನಿಗೋ ಸೇರಿದಂತೆ ಉಮೇಶ ರೆಡ್ಡಿಗೋ ಇವತ್ತು ಜಯಂತಿ ಆಚರಿಸುತ್ತೇನೆಂದು ಹೊರಟು ನಿಲ್ಲಿ ಅಥವಾ ಅವರ ಹೆಸರಿನಲ್ಲೊಂದು ಸ್ಮಾರಕ ಇನ್ನೇನೋ ಮಾಡುತ್ತೇನೆಂದು ಪರಪರಿ, ಲೌಡ್‍ಸ್ಪೀಕರು ಕಟ್ಟಲು ಕಂಭ ಊರಿ ನೋಡೋಣ..? ಸಹೃದಯರೆನ್ನಿಸಿಕೊಂಡ ಸಂಭಾವಿತ ಸಮಾಜದ ಮುಖಂಡರು ಸರಸರನೇ `..ಇದೆನಯ್ಯಾ ಉಪದ್ಯಾಪಿತನ ಮಾಡುತ್ತಿದ್ದಿ..?' ಎಂದು ಕೇಳದಿದ್ದರೆ ಕೇಳಿ. ಆದರೆ ತೀರ ಅಪಾಯಕಾರಿ ಬೆಳವಣಿಗೆಯೆಂದರೆ, ಯಾವ ಮುಸ್ಲಿಂ ಈ ದೇಶಕ್ಕಾಗಿ ಬಡಿದಾಡುತ್ತಿದ್ದನೋ ಅಂಥವನ ಮಾನಸಿಕ ಸ್ಥಿತಿಗತಿಯನ್ನೇ ಇವತ್ತಿನ ಆಳರಸರು ಹಾಳುಮಾಡಿಬಿಡುತ್ತಿದ್ದಾರೆ. ಹಾಗಾಗಲು ಕಾರಣ ಅವರಿಗೆ ತಪ್ಪು ಮಾರ್ಗದರ್ಶನ ಮಾಡುತ್ತಿರುವ ಬುದ್ಧಿಜೀವಿಗಳೆನ್ನುವುದು ಕನ್ನಡ ಸಾರಸ್ವತ ಲೋಕಕ್ಕೆ ಅಂಟಿರುವ ಕಳಂಕ ಮತ್ತು ಇಂಥವರೇ ಸಮಾಜಕ್ಕೂ ಪಿಡುಗಾಗಿ ಕಾಡತೊಡಗಿರುವುದು ನಮ್ಮ ಸಮಕಾಲೀನ ದುರಂತ ಕೂಡಾ. ತಮ್ಮ ಟಿ.ಆರ್.ಪಿ. ಕಾಯ್ದುಕೊಳ್ಳುವ ಈ ಬುದ್ದಿಜೀವಿಗಳು ಎಲ್ಲಾ ಜಾತಿಯಲ್ಲೂ ಇದ್ದಾರೆ ಮತ್ತು ಸರಕಾರ, ಸಮಾಜ ಎರಡರದ್ದೂ ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದೇ ಅಘಾತಕಾರಿ. ಈಗಲೂ ಕೊಂಚವಾದರೂ ತಿಳುವಳಿಕೆ, ಪ್ರಬುದ್ಧತೆ ಇರುವ ರಾಜಕಾರಣಿಗಳಿದ್ದರೆ ಇವರನ್ನು ಈಗಿನಿಂದಲೇ ದೂರ ಇಟ್ಟು ಸರಿ ಪಡಿಸದಿದ್ದರೆ ಭವಿಷ್ಯ ಬರಬಾದ್ ಆಗುವದರಲ್ಲಿ ಸಂಶಯವೇ ಇಲ್ಲ. 
ಇದ್ಯಾಕೆ ಹೀಗಾಗುತ್ತಿದೆ ಎಂದರೆ ತುಷ್ಠೀಕರಣದ ವ್ಯವಹಾರ ಮತ್ತು ಒಲೈಕೆಯ ವ್ಯವಹಾರಗಳಿಗಿಳಿದಾಗ ಸಭ್ಯ ಸಮಾಜದ ನಾಗರಿಕ ಕೆರಳುತ್ತಾನೆ. ಅವನ ನಂಬಿಕೆಗಳಿಗೆ ಘಾಸಿಯಾದಾಗ ಎದ್ದು ನಿಲ್ಲುತ್ತಾನೆ. ಕಾರಣ ಇವತ್ತಿಗೂ ಭಾರತದ ಯಾವುದೇ ಮೂಲೆಯ ಯಾವುದೇ ಜಾತಿ, ಧರ್ಮದ ಜನಗಳಿಗೆ ಸೋಮನಾಥ್, ಕಾಶಿ ವಿಶ್ವನಾಥ್, ಹಜ್ರತ್‍ಬಾಲ್ ದರ್ಗಾ, ವಿಠ್ಠಲ ರುಕುಮಾಯಿ, ಬಸವಣ್ಣ, ಅಜ್ಮೇರ್‍ನ ಚಿಸ್ತಿ ನವಾಬ್ ದರ್ಗಾ, ಅಮೃತಸರ, ಗೋವೆಯ ಮೂಲ ಚರ್ಚುಗಳೆಂದರೆ ಜಾತಿ ಧರ್ಮದ ಹೊರತಾಗಿ ಇನ್ನಿಲ್ಲದ ಅಕ್ಕರೆಯಿದೆ, ನಂಬುಗೆಗಳಿವೆ. ಅದಕ್ಕೂ ಮಿಗಿಲಾಗಿ ಸಾಮಾಜಿಕ ಸಾಂತ್ವನವನ್ನು ಒದಗಿಸುವ ಆಪ್ತ ಸಂಗತಿಗಳಾಗಿವೆ. ನಾನು ನೀವೆಲ್ಲರೂ ಅಲ್ಲಿಗೆ ಕಾಲಿಡುತ್ತಿದ್ದರೆ ನಮಗರಿವಿಲ್ಲದೆ ತಲೆಗೆ ಕರ್ಚೀಪು ಕಟ್ಟಿಕೊಂಡು ಮಂಡಿಯೂರಿ ಕೂರುತ್ತೇವೆ. ಅದೇ ಅಂತಹ ತುಂಬ ಸಾಫ್ಟ್ ಎನ್ನಿಸುವ ಭಾವನೆಗಳನ್ನು ಕದಡಿಬಿಟ್ಟರೆ ಜೀವವನ್ನೂ ಕೈಯಿಂದಾಚೆಗಿಟ್ಟು ರಸ್ತೆಗಿಳಿಯುತ್ತಾನೆ. ಸಭ್ಯ ಸಮಾಜವೊಂದರ ಮರ್ಯಾದೆ ಅಂತರಾಷ್ಟ್ರೀಯವಾಗಿ ಹರಾಜಾಗುವುದೇ ಆವಾಗ. (ಇತ್ತಿಚಿನ ದಿನದಲ್ಲಿ ಚಿತ್ರನಟರಿಗೂ ಸ್ಮಾರಕ ಬರುತ್ತಿವೆ ಅದನ್ನೂ ಯಾವ ಪೂರ್ವಾಗ್ರಹವಿಲ್ಲದೆ ನಮ್ಮ ಸಮಾಜ ಒಪ್ಪಿದೆ ಕಾರಣ ಅದೆಲ್ಲಾ ಅಭಿಮಾನದ ಫಲ. ಹಾಗಂತ ಅತ್ಯುತ್ತಮ ನಾಗರಿಕ, ಸಹೃದಯಿಯಾಗಿದ್ದರೂ ಅಮರೀಶ್‍ಪುರಿಗೆ ದೇವಸ್ಥಾನ ಕಟ್ಟಿದ, ಕಟ್ಟುವ ಮಾತುಗಳಿಲ್ಲ. ಕಾರಣ ಅವನ ವೈಯಕ್ತಿಕ ಬದುಕು ಸಹೃದಯತೇ ಎನೇ ಇದ್ದರೂ ಅವನು ಒತ್ತಿದ್ದು ಖಳನ ಛಾಪೇ..)
ಇದೆಲ್ಲದರ ಮಧ್ಯೆ ಇದ್ದಕ್ಕಿದ್ದಂತೆ ಟಿಪ್ಪು ಸುಲ್ತಾನ್‍ಗೆ ಜಯಂತಿ, ಅಮೇಲೆ ಮೀರ್‍ಸಾಧಕನಿಗೂ ಒಂದು ಹುತಾತ್ಮ ಪಟ್ಟ, ಮೊನೆ ಮೊನ್ನೆ ನೆಗೆದುಬಿದ್ದ ಉರಿಯ ಬುರ್ಹಾನ್‍ವಾನಿಗೊಂದು ಸ್ಮಾರಕ, ವರ್ಷಗಳೆರಡರ ಹಿಂದೆ ಸಮುದ್ರದಲ್ಲಿ ಮುಗಿದು ಹೋದ ಲಾಡೆನ್‍ಗೊಂದು ಹಬ್ಬದ ದಿನ, ಅತ್ತ ಹಿಟ್ಲರ್‍ಗೊಂದು ಸಾಯಂಕಾಲದ ಸಮಾರಂಭ, ಸಂಪೂರ್ಣ ಮೊಘಲ ಸಾಮಾಜ್ಯವನ್ನೇ ಹಳ್ಳ ಹಿಡಿಸಿದ ತುಘಲಕ್‍ನ ಹೆಸರಿನಲ್ಲೊಂದು ಪಾರ್ಟಿ, ಸಂಗೊಳ್ಳಿರಾಯಣ್ಣನಿಗೆ ದ್ರೋಹ ಬಗೆದ ವೆಂಕಣ್ಣಗೌಡ ಮತ್ತು ಕುಲ್ಕರಣಿಗಳಿಗೊಂದು ಸ್ಮಾರಕ ಹೀಗೆ ಆಯೋಜಿಸಲು ಹೋದರೆ ಮೂಮೂಲಿನ ಜನರೂ, ಜಾತಿ ಧರ್ಮದಾಚೆಗೆ ನಿಂತು `..ಎನಯ್ಯಾ ತಲೆಗಿಲೆ ಕೆಟ್ಟಿದೆಯಾ..' ಎಂದು ಮೊದಲ ಸೆಕೆಂಡಿನಲ್ಲೇ ಪ್ರತಿಕ್ರಿಯಿಸುತ್ತಾರೆ. ಯಾಕೆಂದರೆ ಇಂತಹ ವಿಕೃತ ಸಂತಾನಗಳೆಲ್ಲಾ ಯಾವ ರೀತಿಯಲ್ಲೂ ಬದುಕಿಗೂ, ಸಮಾಜಕ್ಕೂ, ಸಮಾಜದ ಸಭ್ಯತೆಗೆ ಕೊಡುಗೆಯಾಗಬಲ್ಲ ಯಾವ ರೀತಿಯ ಮೇಲ್ಪಂಕ್ತಿಯನ್ನೂ ಹಾಕಿಕೊಟ್ಟವರಲ್ಲ. ಎಲ್ಲೋ ಏನಾದರೂ ಕೊಡುಗೆ ನೀಡಿದ್ದರೂ ಸಾಮೂಹಿಕವಾಗಿ, ಸಮಾಜದ ಬಹ್ವುಂಶದ ಬದುಕಿನಲ್ಲಿ ಧನಾತ್ಮಕ ಅಂಶಗಳ ಕೊಡುಗೆ ಇದ್ದಿದ್ದು ಕಡಿಮೆ. ಇದ್ದರೂ ಅದು ಅವರ ಋಣಾತ್ಮಕ ಧೋರಣೆ ಮತ್ತು ಆಚರಣೆಯಿಂದಾಗಿ ಗಣನೀಯವಾಗಿ ಆನಾದರಣೆಗೊಳಗಾಗಿರುತ್ತದೆ.
ಹಾಗಾಗೇ ಯಾವುದೇ ವ್ಯಕ್ತಿಯ ಪ್ರಭಾವ ಸಾಮಾಜಿಕವಾಗಿ ಇತಿಹಾಸ ಮತ್ತು ವರ್ತಮಾನದ ಕಾಲಾವಧಿಯನ್ನೂ ಮೀರಿ ಭವಿಷ್ಯದಲ್ಲೂ ಅಚ್ಚಳಿಯದಂತಿರಬೇಕಾದರೆ ಆ ಮಟ್ಟದ ಕೊಡುಗೆ ಅಂತಹ ವ್ಯಕ್ತಿಯಿಂದ ಸಮಾಜಕ್ಕೆ ಎಲ್ಲಾ ಕಾಲಕ್ಕೂ ಸಲ್ಲುವಂತೆ ಅದರಲ್ಲೂ ಸಮಾಜದ ನಡಾವಳಿ ಮತ್ತು ನಡವಳಿಕೆಗಳಿಗೆ ಮೇಲ್ಪಂಕ್ತಿಯಾಗುವಂತಹ ಅಭಿವ್ಯಕ್ತಿಯ ಅಂಶ ಮಾನ್ಯವಾಗುತ್ತದೆ ಹೊರತಾಗಿ ಅವನ ದುಷ್ಕೃತ್ಯಗಳಲ್ಲ. ಅವನ ನಡವಳಿಕೆಗಳಿಂದ ಮುಂದಿನ ತಲೆಮಾರುಗಳೂ ಕೂಡಾ ಶಪಿಸುವಂತಹ, ಬೇಯುವಂತಹ, ಅಸಹಾಯಕತೆಯಿಂದ ನರಳುವಂತಹ ಹೀನ ಕೃತ್ಯಗಳನ್ನ ಜಗತ್ತಿನ ಯಾವ ಧರ್ಮವೂ ಮಾನ್ಯ ಮಾಡಿದ ಉದಾಹರಣೆಗಳಿಲ್ಲ.  
ಹಾಗೆ ಲೆಕ್ಕಿಸಿದರೆ ಇವತ್ತು ಕರ್ನಾಟಕದಲ್ಲಿ ಮೈಸೂರು ಒಡೆಯರ್ ಸಂಸ್ಥಾನಾಧಿಪತಿಗಳಿಗೂ, ಕನ್ನಡದ ಅಧಿಕೃತ ರಾಜವಂಶ ಕದಂಬರ ಮಯೂರವರ್ಮನ (ಆದರೆ ಯಾವತ್ತೂ ಮಯೂರವರ್ಮನಿಗೆ ಆ ಮರ್ಯಾದೆ ಸಲ್ಲಲು ಬಿಡುವುದಿಲ್ಲ ನೆನಪಿರಲಿ. ಕಾರಣ ಮೂಲತ: ಮಯೂರ ಶರ್ಮನಾಗಿದ್ದ ಎಂದು ಇತಿಹಾಸ ಹೇಳುತ್ತದಲ್ಲ. ಇನ್ನು ಬ್ರಾಹ್ಮಣನಾದವನಿಗೆ ಹೇಗೆ ಆದರ, ಮನ್ನಣೆ ನೀಡುವುದು..?) ಹೆಸರಿನಲ್ಲೂ, ಎನೇ ಬೇರೆ ಭಾಷಿಕ ರಾಜನಾದರೂ ವಿಜಯನಗರ ಸಾಮ್ರಾಜ್ಯವನ್ನಾಳಿ ಕನ್ನಡದ ನೆಲದಲ್ಲಿ ಮುತ್ತು ರತ್ನ ಮಾರಿದ ಕೃಷ್ಣ ದೇವರಾಯನಿಗೂ, ಅರ್ಧದಷ್ಟು ಕನ್ನಡದ ನೆಲದಲ್ಲಿ ತನ್ನ ಛಾಪು ಮೂಡಿಸಿದ್ದ ಶಿವಾಜಿಗೂ, ಇತ್ತ ಕನ್ನಡ ರಾಜ ವಂಶಸ್ಥರ ನಂತರದಲ್ಲೂ ಅದರ ಸೊಗಡು ಉಳಿಸಿದ್ದ ಸೋಂದಾ ರಾಜರು, ಚಾಲುಕ್ಯರು ಸೇರಿದಂತೆ ಕನ್ನಡದ ನೆಲಕ್ಕಾಗಿ ಜೀವವನ್ನೇ ನೀಡಿದ ವೀರಮಹಿಳೆ ಚೆನ್ನಮ್ಮನಂತವರ ಹೆಸರು ಕೇವಲ ಪ್ರಶಸ್ತಿಗೂ, ಉತ್ಸವಕ್ಕೂ ಮುಗಿದು ಹೋಗುತ್ತದೆ. ಇವರೆಲ್ಲಾ ಕರ್ನಾಟಕದ ಪ್ರಾತ:ಸ್ಮರಣೀಯರು. ಆದರೆ ಇವರೆಲ್ಲರ ಹೆಸರಲ್ಲಿ ಆಯ್ದ, ಕಿತ್ತುಹೋದ ಕವಿ ಪುಂಗವರಿಂದ ಆಗೀಗೊಂದು ಕವನಗಳನ್ನು ಹಾಡಿಸುವ ಉತ್ಸವ ಆಯೋಜಿಸಿ ಆವತ್ತಿಗೆ ಮರೆತು ಹೋಗುತ್ತಿದ್ದೇವೆಯೇ ವಿನ: ಯಾವುದೇ ಶಾಶ್ವತ ಜಯಂತಿ ಇತ್ಯಾದಿಗಳು ನಡೆಯುವ ಸಾಧ್ಯತೆಗಳು, ಅದಕ್ಕಾಗಿ ಸರಕಾರಿ ಪ್ರಾಯೋಜನೆಗಳೂ ಅಷ್ಟಕ್ಕಷ್ಠೆ. ಅನಾವಶ್ಯಕವಾಗಿ ಕರ್ನಾಟಕದ ಸಾಮಾಜಿಕ ವ್ಯವಸ್ಥೆಯಲ್ಲಿ ನಿಧಾನವಾಗಿಯಾದರೂ ಬಿರುಕು ಬಿಡುತ್ತಿರುವ ಮುಸ್ಲಿಂ ಮತ್ತು ಹಿಂದೂ ಸಾಮಾರಸ್ಯದಲ್ಲಿ ಇಲ್ಲಿವರೆಗೂ ಯಾರೂ ಅಂತಹ `ದರಾರು' ತಂದು ಹಾಕಿದ್ದಿಲ್ಲ. ಆದರೆ ಅದೀಗ ಸ್ಪಷ್ಟವಾಗಿ ನಡೆಯುತ್ತಿದೆ. 
ಇವತ್ತಿಗೂ ಅದೆಂಥದ್ದೇ ಕರ್ಮಠನಾಗಿದ್ದರೂ, ದಿನಕೈದು ಬಾರಿ ನಮಾಜು ಮಾಡುವ ಮುಸ್ಲಿಂನಿದ್ದರೂ ಜಗಳ, ಕಿರಿಕ್ಕು ಬೇಡವೇ ಬೇಡ ಎನ್ನುತ್ತದೆ ಅವನ ಮನಸ್ಸು. ಕಾರಣ ಅವನು ಮೊದಲು ಭಾರತೀಯ ಆಮೇಲೆ ಮುಸ್ಲಿಂ. ಭಾರತದಲ್ಲಿ ತನ್ನ ಮನೆ ಮಠ ಹೊಂದಿ ಸುಖವಾಗಿ ಸಂಸಾರ, ನೌಕರಿ, ಆಗೀಗ ಉಪವಾಸ, ಅವಕಾಶ ಸಿಕ್ಕಿದಾಗ ಹಜ್ ಯಾತ್ರೆಯ ಪುಣ್ಯ ಎಂದುಕೊಂಡಿರುವ ಯಾವ ಭಾರತೀಯ ಮುಸ್ಲಿಂಮರಿಗೂ ಇವತ್ತು ಇಂತಹ ಸಮಾಜ ಒಡೆಯುವ ಜಯಂತಿಗಳು ಬೇಕೇ ಆಗಿಲ್ಲ. ವೈಯಕ್ತಿಕವಾಗಿ ಕೇಳಿ ನೋಡಿ. `..ಎಲ್ಲಿ ಬಿಡೋ.. ಮಾರಾಯ ನಮದಾ ನೌಕರಿ ಮಾಡಿಕೊಂಡು ಹೋದರ ಸಾಕಾಗೇತಿ..ಇಸ್ಕಿ ಮಾಖು..' ಎನ್ನುತ್ತಾನೆ. 
ಇದು ಬದುಕು ಮತ್ತು ಭವಿಷ್ಯವನ್ನು ಚೆಂದಗೊಳಿಸಿಕೊಂಡು ತನ್ನ ಕುಟುಂಬ ತಾನು ನಿರುಮ್ಮಳವಾಗಿ ಬದುಕು ಕಟ್ಟಿಕೊಳ್ಳಲೆತ್ನಿಸುವ ಪ್ರತಿಯೊಬ್ಬ ಭಾರತೀಯನಂತೆ ಅರಾಮದ ಬದುಕು ಇಲ್ಲಿನ ಮುಸ್ಲಿಂಮರಿಗೂ ಇದೆ ಮತ್ತು ಅವರ ಆಶಯ ಕೂಡಾ. ಆದರೆ ಬಹಿರಂಗವಾಗಿ ಇದನ್ನೆ `..ನಿಮ್ಮವರಿಗೆ ಹೇಳಿ, ಯಾಕೆ ಎಲ್ಲೆಲ್ಲೂ ಕೋಮುವಾದ ಎರಡೂ ಕಡೆಯಲ್ಲೂ ಉರಿಯುತ್ತಿದೆ..' ಎಂದು ನೋಡಿ. ಅವನ ಮುಖ ಚಹರೆಯೇ ಬದಲಾಗುತ್ತದೆ. ಕಾರಣ ಅನವಶ್ಯಕವಾಗಿ ಯಾರೋ ಒಬ್ಬರು ಎಬ್ಬಿಸುತ್ತಿರುವ ಅವರೆಲ್ಲರ ಮನಸ್ಸಿನ ಒಳಭಾಗದಲ್ಲಿ ಕೆರೆಯುತ್ತಿರುವ ಅಭದ್ರತೆಯ (ಸೋಷಿಯಲ್ ಇನ್ ಸೆಕ್ಯೂರಿಟಿ) ಭಾವವನ್ನು ತಣ್ಣಗೆ ಅವನು ಅನುಭವಿಸಿ ಬಿಡುತ್ತಾನೆ. ಇಂತಹ ಸಂದರ್ಭದಲ್ಲೇ ಅವನ ಮನಸ್ಸಿನ ಆ ಇನ್ಸೆಕ್ಯೂರಿಟಿಯ ಕಾರಣ ಸಾಮಾಜಿಕವಾಗಿ ತಾನೂ ಸಬಲ ಎನ್ನುವ ಅಂಶವನ್ನು ಪ್ರೂವ್ ಮಾಡಲು ಹೊರಟು ಬಿಡುತ್ತಾನೆ. ಆಗ ಸುಲಭಕ್ಕೆ ಇಂತಹದಕ್ಕೆ ಅವಕಾಶ ಮಾಡಿಕೊಡುವುದೇ ಟಿಪ್ಪು ಸುಲ್ತಾನ್‍ನಂತಹ ಜಯಂತಿಗಳು. 
ಕಾರಣ ಇಂತಹ ಜಯಂತಿ ಸಹಜವಾಗಿ ಬಹುಸಂಖ್ಯಾತರಾಗಿದ್ದೂ ಯಾವುದೇ ಸೌಲಭ್ಯ, ಸಹಕಾರ ಇಲ್ಲದೆ ವಂಚಿರಾಗಿ ಸ್ವಂತದ ನೆಲದಲ್ಲಿ ಪರಕೀಯ ಭಾವನೆಯಲ್ಲಿರುವ ಹಿಂದೂ ಸಮುದಾಯಕ್ಕೆ ಇದ್ದಕ್ಕಿದ್ದಂತೆ ಹೃದಯಕ್ಕೆ ಬರೆ ಇಟ್ಟಂತಾಗುತ್ತದೆ. ಕಾರಣ ಅವನಿಗೆ ಇಂಥದ್ಯಾವುದೂ ಲಭ್ಯವಾಗದಿದ್ದರೂ ಸುಮ್ಮನಿರುತ್ತಾನೆ. ಆದರೆ ಮೊದಲೇ ಓಲೈಕೆಯ ವ್ಯವಹಾರ ನಡೆಯುವಾಗ ಆಗುವ ಲುಕ್ಷಾನಿನ ಜತೆಗೆ ಇದೇನಿದು ಹೊಸ ಜಯಂತಿ ಅದೂ ಕದಂಬರು, ಕೆಂಪೇಗೌಡರು ಕೊನೆಗೆ ನಮ್ಮ ಯಾರ ಪಾಳೆಪಟ್ಟಿನವರಿಗೂ ಇಲ್ಲದ ಜಯಂತಿ..? ನಮಗೇ ಇಲ್ಲದ್ದು ಇನ್ಯಾರಿಗೋ ದಕ್ಕುತ್ತಿದೆ..? ರೊಚ್ಚಿಗೇಳಲು ಇದಕ್ಕಿಂತ ಬೇರಿನ್ನೇನು ಬೇಕು..? ಅದಕ್ಕೆ ಸರಿಯಾಗಿ ಎದುರಿನಿಂದ ಇನ್ನೊಂದು ಬೆಂಕಿ ಭುಗಿಲೇಳುತ್ತದೆ. 
ನಮ್ಮ ಮುಸ್ಲಿಂ ಟಿಪ್ಪು ಸುಲ್ತಾನ ಜಯಂತಿ ನಡೆಯಲು ಬಿಡದಿದ್ದರೇ ಹೆಂಗೇ..? ಈಗ ನಾವು ಒಗ್ಗೂಡಿ ನಮ್ಮ ಶಕ್ತಿ ಪ್ರದರ್ಶನವಾಗದಿದ್ದರೆ ನಾಳೇ ಏನಾಗುತ್ತದೋ ಯಾರಿಗೆ ಗೊತ್ತು..? ಅದಕ್ಕೆ ಟಿಪ್ಪು ಏನಾಗಿದ್ದನೋ, ಇತಿಹಾಸದಲ್ಲಿ ಒಳ್ಳೆಯವನೋ ಕೆಟ್ಟವನೋ ಅದೆಲ್ಲಾ ಅತ್ಲಾಗಿರಲಿ. ಟಿಪ್ಪು ಮುಸ್ಲಿಂ ಆಗಿದ್ದ ಅವನ ಹೆಸರಲ್ಲಿ ಜಯಂತಿ ನಡೆಯುತ್ತದೆ. ಅದನ್ನು ಹಿಂದೂಗಳು ವಿರೋಧಿಸುತ್ತಿದ್ದಾರೆ. ಹಾಗಾದರೆ ನಾವು ಬೆಂಬಲಿಸಬೇಕು. ಆ ಮೂಲಕ ನಮ್ಮ ಬಲ ಪ್ರದರ್ಶನ ಮಾಡಿ ಸಾಮಾಜಿಕವಾಗಿ ನಾವೂ ಸಬಲರು ಎನ್ನುವ ಪ್ರೂವ್ ಕೋಡಬೇಕು. ಆಯಿತಲ್ಲ. ಅಲ್ಲಿಗೆ ಸರಸರನೇ ವಾಟ್ಸಾಪು, ಮೊಬೈಲ್‍ಗಳು ಬಿಜಿಯಾಗುತ್ತವೆ. ಲೋಡಗಟ್ಟಲೇ ಕಲ್ಲು ಜಮೆಯಾಗುತ್ತದೆ. ಎಲ್ಲೆಲ್ಲಿಂದಲೂ ಜನ ಬರುತ್ತಾರೆ. ಕೊನೆಗೆ ಪೆÇೀಲಿಸರ ಗುಂಡಿಗೆ ಒಂದೆರಡು ಹೆಣ ಬೀಳುತ್ತವೆ. ಶಾಶ್ವತವಾಗಿ ಆಯಾ ಊರಿನ ಹಿಂದೂ ಮುಸ್ಲಿಂಗಳು ಇಲ್ಲಿವರೆಗೂ ಮೊಹರಮ್ಮು, ಗಣಪತಿ ಎನ್ನುತ್ತಿದ್ದವರು ಒಣಿ ಬದಲಾಯಿಸಿ ನಡೆಯತೊಡಗುತ್ತಾರೆ. ಏನ್ರಿ ಇದೆಲ್ಲಾ..? 
ಸುಖಾ ಸುಮ್ಮನೆ ಮನೆ ಮಠ ಎಂದಿದ್ದ ಭಾರತೀಯ ಹಿಂದೂ,ಮುಸ್ಲಿಂ ಇಬ್ಬರೂ ಈಗ ಕದನಕ್ಕಿಳಿಯುತ್ತಿರುವುದೇ ಇಂತಹ ಅನ್ ವಾಂಟೆಡ್ ಕಾರಣಗಳಿಗಾಗಿ. ಬೇಕೆ ಇಲ್ಲದ ಇಂತಹ ಅದರಲ್ಲೂ ಸಮಾಜದಲ್ಲಿನ ಪ್ರಬಲ ಸಮುದಾಯದ ಮನಸ್ಸಿಗೆ ಕಹಿ ನೀಡುವ ಉತ್ಸವಗಳನ್ನು ಆಯೋಜಿಸುವುದರಿಂದ ಆಗುವ ಪ್ರಯೋಜನಗಳಾದರೂ ಏನು..? ಅಷ್ಟಕ್ಕೂ ಕನ್ನಡದ ಮಟ್ಟಿಗೆ ಮತ್ತು ಕರ್ನಾಟಕದ ಮಟ್ಟಿಗೆ ಯಾವ ರಿಮಾರ್ಕೇಬಲ್ ಎನ್ನುವ ಕೊಡುಗೆ ಕೊಡದ ಟಿಪ್ಪುವಿನ ಬಗ್ಗೆ ಆಗೀಗ ಒಂದಿಬ್ಬರು ಬಕೇಟ್ ಬುದ್ಧಿಜೀವಿಗಳು ಆಳುವವರನ್ನು ಮೆಚ್ಚಿಸಲು ಬರೆದ ಲೇಖನಗಳನ್ನು ನಾನು ನೋಡಿದ್ದೇನೆ. ಟಿಪ್ಪು ರಾಕೇಟ್ ಹಾರಿಸಿದ, ಟಿಪ್ಪು ತನ್ನ ಮಕ್ಕಳನ್ನು ಬಲಿಕೊಟ್ಟ (ಸಾಲುಸಾಲಾಗಿ ತಮ್ಮ ಗಂಡಂದಿರನ್ನೇ ಇವತ್ತು ಕಾಶ್ಮೀರ ಗಡಿಯಲ್ಲಿ ನಮ್ಮ ಮಹಿಳೆಯರು ಬಲಿಕೊಡುತ್ತಿದ್ದರೆ, ಅವರ ಮಕ್ಕಳು ಅಪ್ಪನ ಹೆಣಕ್ಕೆ ಸೆಲ್ಯೂಟ್ ಹೋಡೆದು `..ಜೈ ಹಿಂದ್..' ಎಂದು ಕಿರುಚುತ್ತಾ ಕಣ್ಣೀರು ಹಾಕುತ್ತವಲ್ಲ ಅದು ಯಾವನಿಗೂ ಕಾಣುತ್ತಲೇ ಇಲ್ಲವಲ್ಲ.)  ದೇವಸ್ಥಾನಕ್ಕೆ ಉಂಬಳಿ ಕೊಟ್ಟ (ಇದೆಲ್ಲಾ ಅವನ ಅವಸಾನದ ಸಂದರ್ಭದಲ್ಲಿ ಪ್ರಬಲ ಸಮುದಾಯಗಳ ಬೆಂಬಲ ಮತ್ತು ಸಹಾನುಭೂತಿಗಳಿಸಲು ಮಾಡಿರುವ ಕಾರ್ಯಗಳೆ- ಇತಿಹಾಸ ದಾಖಲಿಸಿದೆಯಲ್ಲ) ಅವನ ಅರಮನೆಯ ಬಾಗಿಲೆದುರಿಗೆ ದೇವಸ್ಥಾನಗಳಿದ್ದವು, ಅವನ ಆಸ್ಥಾನದಲ್ಲಿ ಇಂಥಿಂಥಾ ಕೆಲಸಗಾರರಿದ್ದರು ಎಂಬೆಲ್ಲ ಕತೆ ಹೊಡೆಯುವವರು ಇದೇ ಕೊಡಗರ ಸಾವಿರಾರು ವಂಶಗಳನ್ನೇ ನಿರ್ವಂಶ ಮಾಡಿದರು, ನಂಬೂದಿರಿ ಬ್ರಾಹ್ಮಣರನ್ನು ಇನ್ನಿಲ್ಲದಂತೆ ಓಡಾಡಿಸಿ ಬಡಿದು ಕೊಲ್ಲಲಾಯಿತು, ಸರಿ ಸುಮಾರು ಆರ್ನೂರಕ್ಕೂ ಮಿಗಿಲು ಹೆಂಗಸರನ್ನು ಅವನು ಜನಾನಾದಲ್ಲಿ ಸಾಕಿಕೊಂಡಿದ್ದ, ಸಾಲುಸಾಲು ಹಿಂದೂ ಜನರನ್ನು ಬೆತ್ತಲೆಯಾಗಿ ನಿಲ್ಲಿಸಿ ತುದಿ ಕತ್ತರಿಸಿ, ಸುನ್ನತಿ ಮಾಡಿಸುತ್ತಿದ್ದ ಎನ್ನುವಂತಹ ಅಂಶಗಳನ್ನೇ ಜಾಣತನದಿಂದ ಮರೆಮಚುತ್ತಾರೆ.
ಅಂತಹ ರಕ್ತಸಿಕ್ತ ಇತಿಹಾಸ ಇದ್ದುದರಿಂದಲೇ ಇವತ್ತು ಕೊಡಗು ಸೇರಿದಂತೆ ಹೆಚ್ಚಿನವರಿಗೆ ಟಿಪ್ಪು ಬೇಡವಾಗುತ್ತಾನೆ. ಒಂದಿಡಿ ಜನಾಂಗವೇ ಹಿಂದೂಗಳ ಹಬ್ಬ ದೀಪಾವಳಿವನ್ನೇ ಮೂಂದೂಡಿ ಶೋಕ ಅಚರಿಸುತ್ತಿದೆ. ಹೀಗಿದ್ದಾಗ ಅದ್ಯಾವ ಘನಂದಾರಿ ಯಶಸ್ಸು ಬರುತ್ತದೆ ಅಥವಾ ಹೆಸರು ಇತಿಹಾಸದಲ್ಲಿ ದಾಖಲಾಗುತ್ತದೆ, ಅಲ್ಪ ಸಂಖ್ಯಾತರ ಪಾಲಿಗೆ ಡಾರ್ಲಿಂಗ್ ಆಗುತ್ತೇನೆ ಎನ್ನುವ ಕಾರಣಕ್ಕೆ ಆಳರಸರು ಇಂತಹ ಜಯಂತಿ ಮಾಡುತ್ತಿದ್ದಾರೆ..? ಇವತ್ತು ಸರಿಯಾಗಿ ಗಾಂಧೀಜೀಯವರನ್ನೇ ಯಾರು..? ಎಂದು ಕೇಳುವ ಮಟ್ಟಕ್ಕಿಳಿದಿರುವ ಸಮಾಜದ ದರಖಾರಿನಲ್ಲಿ ಈ ಮಂತ್ರಿ ಮಾಗಧರೆಲ್ಲಾ ಯಾವ ಲೆಕ್ಕಾ..?
ಕಹಿಸತ್ಯದ ಅನಾವರಣದ ಚರಿತ್ರೆಯೊಂದಿಗೆ ಉಳಿದದ್ದೆಲ್ಲಾ ಮುಂದಿನ ಭಾಗಕ್ಕಿರಲಿ ( ಸಶೇಷ )