Friday, October 28, 2016

ಸಮಾಜ ಒಡೆಯುವ ಜಯಂತಿ, ಉತ್ಸವಗಳು ಬೇಕೆ...?


( ಬುದ್ಧಿಜೀವಿಗಳು ಆಳುವವರನ್ನು ಮೆಚ್ಚಿಸಲು ಬರೆದ ಲೇಖನಗಳನ್ನು ನಾನು ನೋಡಿದ್ದೇನೆ. ಟಿಪ್ಪು ರಾಕೇಟ್ ಹಾರಿಸಿದ, ಟಿಪ್ಪು ತನ್ನ ಮಕ್ಕಳನ್ನು ಬಲಿಕೊಟ್ಟ ಎನ್ನುವವರಿಗೆ, ಸಾಲುಸಾಲಾಗಿ ತಮ್ಮ ಗಂಡಂದಿರನ್ನೇ ಇವತ್ತು ಕಾಶ್ಮೀರ ಗಡಿಯಲ್ಲಿ ನಮ್ಮ ಮಹಿಳೆಯರು ತ್ಯಾಗಮಾಡುತ್ತಿದ್ದರೆ, ಅವರ ಮಕ್ಕಳು ಅಪ್ಪನ ಹೆಣಕ್ಕೆ ಸೆಲ್ಯೂಟ್ ಹೋಡೆದು `..ಜೈ ಹಿಂದ್..' ಎಂದು ಕಿರುಚುತ್ತಾ ಕಣ್ಣೀರು ಹಾಕುತ್ತವಲ್ಲ ಅದು ಯಾವನಿಗೂ ಕಾಣುತ್ತಲೇ ಇಲ್ಲವಲ್ಲ. )  

ಂದು ಜಯಂತಿ, ಒಂದು ಹಬ್ಬ ಹರಿದಿನ ಎನ್ನುವುದು ಖುಶಿಯಾಗಿ ಮನೆ ಮತ್ತು ಕುಟುಂಬ ಕೊನೆಗೆ ಸಮಾಜವೊಂದು ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆಯ ಸಾಮೂಹಿಕ ಹಬ್ಬವಾಗಿರುತ್ತದೆಯೇ ಹೊರತಾಗಿ ಮುಖ ತಿರುವುವ, ಇದ್ದಬದ್ದ ಸಾಮರಸ್ಯದ ಸಂಬಂಧವೂ ಮುರಿದುಕೊಳ್ಳುವ ಜಾಡ್ಯವಾಗಬಾರದು. ಇವತ್ತು ಮನೆ, ವಠಾರಗಳಲ್ಲಿ ನಡೆಯುವ ಸಮಾರಂಭಗಳನ್ನು ಗಮನಿಸಿ. ಮನೆಯಲ್ಲಿಷ್ಟು ಸಂತಸ, ನೆಂಟರಿಷ್ಟರಿಗೆ ಸಿಹಿ, ಮಾಂಸಾಹಾರಿಗಳಾಗಿದ್ದರೆ ಕೊನೆಯ ದಿನ ಬಾಡೂಟ ಹಾಕಿಸಿ ಹಿಂದಿನ ಇದ್ದಬದ್ದ ಕಹಿಯನ್ನೂ ಮರೆಯುವ ಸಂಪ್ರದಾಯ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಗಮನಿಸಿಯೇ ನಮ್ಮ ನಮ್ಮಲ್ಲಿ ಆಯಾ ಕಾಲವಾರು ಮತ್ತು ಸಾಮಾಜಿಕ ನಡವಳಿಕೆ ಜಾತಿ ಧರ್ಮಾಧಾರಿತ ಆಚರಣೆಗಳು ಬೆಳಕಿಗೆ ಬಂದವು.
ಎಂತೆಂತಹ ಮನಸ್ತಾಪಗಳೂ ಕುಟುಂಬದ ಇಂತಹ ಒಂದು ಕರೆಯಿಂದ, ಆ ಮನೆಯಲ್ಲಿ ಪಾಲ್ಗೊಳ್ಳುವಿಕೆಯ ಉತ್ಸವದ ಸಡಗರದಿಂದ ಶಾಶ್ವತವಾಗಿ ಮುಗಿದು ಹೋದ ಉದಾ. ಸಾವಿರಾರಿವೆ ನಮ್ಮೆದುರಿಗಿದೆ. ಇದೆಲ್ಲಾ ಒಂದು ಸಮೃದ್ಧ ಮನಸ್ಥಿತಿಯ ಮತ್ತು ಸಾಮಾಜಿಕ ವ್ಯವಸ್ಥೆಯ ಮೂಲವಾದ ಕುಟುಂಬ ಮತ್ತು ಆಯಾ ಊರು ಪ್ರದೇಶಗಳ ಬೌದ್ಧಿಕ ಮತ್ತು ಸಾಂಪ್ರಾದಾಯಿಕ ಗಟ್ಟಿತನಕ್ಕೆ ಅವಶ್ಯವೂ ಆಗಿದ್ದು ಈಗಲೂ ಜಾರಿಯಲ್ಲಿದೆ. (ಹೆಚ್ಚಿನ ಊರುಗಳಲ್ಲಿ ಮೊಹರಮ್ಮಿಗೆ ಹಿಂದೂಗಳೂ, ಗಣೇಶ ಹಬ್ಬದ ಹೋಳಿಗೆ ಊಟಕ್ಕೆ ಮುಸ್ಲಿಂರೂ ಪಾಲ್ಗೊಳ್ಳುವುದು ಕಡೆಯ ದಶಕದ ಅಂತ್ಯದವರೆಗೂ ತುಂಬ ಚಾಲ್ತಿಯಲ್ಲಿತ್ತು. ಬರುಬರುತ್ತಾ ಸಮಾಜವನ್ನು ಒಡೆಯುವ ಬುದ್ಧಿಜೀವಿಗಳ ಕುತರ್ಕಕ್ಕೆ ಇವತ್ತು ನಮ್ಮ ಹಬ್ಬ, ನಿಮ್ಮ ಹಬ್ಬ ಎನ್ನುವ ತಾರತಮ್ಯ ಉಂಟಾಗಿದ್ದು ಸೂಕ್ಷ್ಮವಾಗಿ ಬದಲಾವಣೆಗಳನ್ನು ಗಮನಿಸುವವರಿಗೆ ಅರಿವಾಗುತ್ತಲೇ ಇದೆ) 
ಹೀಗೆ ಕುಟುಂಬಾಧಾರಿತ ಮೂಲವಾಗಿ ಆರಂಭವಾದ ಕೆಲ ಉತ್ಸವಗಳು ಮಹನೀಯರಿಗೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ಅವರ ಹೆಸರಿನಲ್ಲೂ ಆಯಾ ಪ್ರದೇಶವಾರು ಉತ್ಸವಗಳು ಸಂಯೋಜನೆ ಗೊಳ್ಳತೊಡಗಿದ್ದು ಧನಾತ್ಮಕ ಪರಿಣಾಮವೇ. ಅದೊಂದು ಗೌರವ ಅವರ ಅಪರಿಮಿತ ತ್ಯಾಗಕ್ಕೆ. ಉದಾ. ಗಾಂಧೀಜಿಯವರ ಸತ್ಯ, ಅಹಿಂಸೆ ಕಾರಣವಾಗಿ ಅವರ ಜಯಂತಿಯನ್ನು ಪೂರಾ ಭಾರತೀಯರು ತುಟಿ ಪಿಟಕ್ಕೆನ್ನದೆ ಹಬ್ಬದ ರೀತಿಯಲ್ಲಿ ಅಚರಿಸುತ್ತಿದ್ದಾರೆ. ಉಳಿದೆರಡು ರಾಷ್ಟ್ರೀಯ ಹಬ್ಬದಷ್ಟೆ ಮಹತ್ವ ಪಡೆದಿವೆ. ಕೆಲವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರೆ ಕೆಲವನ್ನು ಆಯಾ ರಾಜ್ಯವಾರು ಪ್ರಾಮುಖ್ಯತೆಯ ಮೇರೆಗೆ ಸರಕಾರಗಳು ನಿಶ್ಚಯಿಸತೊಡಗಿದವು. 
ಗಾಂಧೀಜಿಗೆ ಸಲ್ಲುವಷ್ಟು ಪ್ರಾಮುಖ್ಯತೆ ಪಡೆದ ಸಮಾನತೆಯ ಹರಿಕಾರ ಅಂಬೇಡ್ಕರ್ ಅವರ ಜಯಂತಿ ಬಂತು. ಅವರು ಯಾವ ಜಾತಿ ಧರ್ಮ ಎನ್ನುವುದನ್ನೂ ಗಮನಿಸಿದೆ ಪ್ರತಿ ಭಾರತೀಯ ಅದನ್ನು ಒಪ್ಪಿಕೊಂಡ. ಅದರೊಂದಿಗೆ ವಾಲ್ಮಿಕಿ, ಕನದಾಸ, ಬುದ್ಧ, ವಿವೇಕಾನಂದ, ರಾಮಕೃಷ್ಣರು ಹೀಗೆ ಪ್ರಮುಖರೆಲ್ಲಾ ಜಾಗ ಪಡೆದರು. ಅದರಿಗೆ ಸಲ್ಲಬೇಕಿದ್ದ ಗೌರವ. ಹಾಗೇಯೇ ಮಹಾರಾಷ್ಟ್ರದಲ್ಲಿ ಶಿವಾಜಿ, ಕರ್ನಾಟಕದಲ್ಲಿ ಕೆಂಪೇಗೌಡರು, ಗುಜರಾತಿನಲ್ಲಿ ಪಟೇಲರರು ವಿಮಾನ ನಿಲ್ದಾಣದ ಐಕಾನ್‍ಗಳಾದರೂ ಯಾರಿಗೂ ಯಾವ ಹೆಸರಿಗೂ ತಕರಾರು ಬರಲಿಲ್ಲ. ಕಾರಣ ಆಯ್ದ ವ್ಯಕ್ತಿತ್ವದ ಹೆಸರುಗಳೆಲ್ಲಾ ಭಾರತೀಯ ಸಮಾಜದಲ್ಲಿ ಯಾರಿಗೂ ಯಾವ ರೀತಿಯಲ್ಲೂ ಯಾವ ಅನ್ಯಾಯವನ್ನೂ ಮಾಡದ ಮತ್ತು ಯಾವ ರೀತಿಯಲ್ಲೂ ಮಾನಸಿಕವಾಗಿ, ದೈಹಿಕವಾಗಿ ಯಾರಿಗೂ ವಜ್ರ್ಯ ಎನ್ನಿಸುವ ವ್ಯಕ್ತಿಗಳಾಗಿರಲೇ ಇಲ್ಲ. 
ಇದಕ್ಕೂ ಮೊದಲಿನ ರಾಮ, ಲಕ್ಷ್ಮಣ, ಕೃಷ್ಣ, ಹನುಮಂತ ಹೀಗೆ ಪೌರಾಣಿಕ ನಾಯಕರುಗಳೊಂದಿಗೆ, ಸಾಯಿಬಾಬನಂತಹ ಸಂತರು ಸೇರಿದಂತೆ ಹಲವು ದರ್ಗಾಗಳಲ್ಲಿ ಪವಡಿಸಿರುವ ಮಹಾನ್ ಮುಸ್ಲಿಂ ಸಾಧುಗಳು ಇವತ್ತು ಕೋಟ್ಯಾಂತರ ಭಾರತೀಯರ ಆರಾಧನಾ ಶಕ್ತಿಗಳಾಗಿ ಹೊಮ್ಮಿದ್ದಿದೆ. ಹಾಗಾಗಿಯೇ ಮಂದಿರ, ಮಸೀದಿ, ಚರ್ಚು ಅಥವಾ ಯಾವುದೇ ಸಿಖ್‍ರ ಪ್ರಾರ್ಥನಾ ಮಂದಿರಗಳಿರಲಿ, ಯಾರಿಗೂ ಯಾವ ರೀತಿಯ ಜಯಂತಿಗೂ, ಹಬ್ಬಕ್ಕೂ ಯಾವ ಅಬ್ಜಕ್ಷನ್ನೇ ಇರಲಿಲ್ಲ. ಕಾರಣ ಇಲ್ಲೆಲ್ಲಾ ಕಾಲೂರಿ ನಿಂತವರು ಸಮಾಜದ ಸಾಮಾನ್ಯರ, ನನ್ನ ನಿಮ್ಮಂತವರಿಗಿಂತ ಅವರ ಸ್ವಭಾವ, ನಡವಳಿಕೆ ಮತ್ತು ನಾಗರಿಕ ಜನ್ಯ ಅಭಿವ್ಯಕ್ತಿಗಳಿಂದ ಸುತ್ಯಾರ್ಹರೂ, ವಂದಿತರೂ ಆಗಿದ್ದರು. 
ಇದರ ಹೊರತಾಗಿ ಎಲ್ಲಿಯಾದರೂ ದುಶ್ಯಾಸನನಿಗೋ, ಕಂಸನಿಗೋ, ನರಕಾಸುರನಿಗೋ ಸೇರಿದಂತೆ ಉಮೇಶ ರೆಡ್ಡಿಗೋ ಇವತ್ತು ಜಯಂತಿ ಆಚರಿಸುತ್ತೇನೆಂದು ಹೊರಟು ನಿಲ್ಲಿ ಅಥವಾ ಅವರ ಹೆಸರಿನಲ್ಲೊಂದು ಸ್ಮಾರಕ ಇನ್ನೇನೋ ಮಾಡುತ್ತೇನೆಂದು ಪರಪರಿ, ಲೌಡ್‍ಸ್ಪೀಕರು ಕಟ್ಟಲು ಕಂಭ ಊರಿ ನೋಡೋಣ..? ಸಹೃದಯರೆನ್ನಿಸಿಕೊಂಡ ಸಂಭಾವಿತ ಸಮಾಜದ ಮುಖಂಡರು ಸರಸರನೇ `..ಇದೆನಯ್ಯಾ ಉಪದ್ಯಾಪಿತನ ಮಾಡುತ್ತಿದ್ದಿ..?' ಎಂದು ಕೇಳದಿದ್ದರೆ ಕೇಳಿ. ಆದರೆ ತೀರ ಅಪಾಯಕಾರಿ ಬೆಳವಣಿಗೆಯೆಂದರೆ, ಯಾವ ಮುಸ್ಲಿಂ ಈ ದೇಶಕ್ಕಾಗಿ ಬಡಿದಾಡುತ್ತಿದ್ದನೋ ಅಂಥವನ ಮಾನಸಿಕ ಸ್ಥಿತಿಗತಿಯನ್ನೇ ಇವತ್ತಿನ ಆಳರಸರು ಹಾಳುಮಾಡಿಬಿಡುತ್ತಿದ್ದಾರೆ. ಹಾಗಾಗಲು ಕಾರಣ ಅವರಿಗೆ ತಪ್ಪು ಮಾರ್ಗದರ್ಶನ ಮಾಡುತ್ತಿರುವ ಬುದ್ಧಿಜೀವಿಗಳೆನ್ನುವುದು ಕನ್ನಡ ಸಾರಸ್ವತ ಲೋಕಕ್ಕೆ ಅಂಟಿರುವ ಕಳಂಕ ಮತ್ತು ಇಂಥವರೇ ಸಮಾಜಕ್ಕೂ ಪಿಡುಗಾಗಿ ಕಾಡತೊಡಗಿರುವುದು ನಮ್ಮ ಸಮಕಾಲೀನ ದುರಂತ ಕೂಡಾ. ತಮ್ಮ ಟಿ.ಆರ್.ಪಿ. ಕಾಯ್ದುಕೊಳ್ಳುವ ಈ ಬುದ್ದಿಜೀವಿಗಳು ಎಲ್ಲಾ ಜಾತಿಯಲ್ಲೂ ಇದ್ದಾರೆ ಮತ್ತು ಸರಕಾರ, ಸಮಾಜ ಎರಡರದ್ದೂ ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದೇ ಅಘಾತಕಾರಿ. ಈಗಲೂ ಕೊಂಚವಾದರೂ ತಿಳುವಳಿಕೆ, ಪ್ರಬುದ್ಧತೆ ಇರುವ ರಾಜಕಾರಣಿಗಳಿದ್ದರೆ ಇವರನ್ನು ಈಗಿನಿಂದಲೇ ದೂರ ಇಟ್ಟು ಸರಿ ಪಡಿಸದಿದ್ದರೆ ಭವಿಷ್ಯ ಬರಬಾದ್ ಆಗುವದರಲ್ಲಿ ಸಂಶಯವೇ ಇಲ್ಲ. 
ಇದ್ಯಾಕೆ ಹೀಗಾಗುತ್ತಿದೆ ಎಂದರೆ ತುಷ್ಠೀಕರಣದ ವ್ಯವಹಾರ ಮತ್ತು ಒಲೈಕೆಯ ವ್ಯವಹಾರಗಳಿಗಿಳಿದಾಗ ಸಭ್ಯ ಸಮಾಜದ ನಾಗರಿಕ ಕೆರಳುತ್ತಾನೆ. ಅವನ ನಂಬಿಕೆಗಳಿಗೆ ಘಾಸಿಯಾದಾಗ ಎದ್ದು ನಿಲ್ಲುತ್ತಾನೆ. ಕಾರಣ ಇವತ್ತಿಗೂ ಭಾರತದ ಯಾವುದೇ ಮೂಲೆಯ ಯಾವುದೇ ಜಾತಿ, ಧರ್ಮದ ಜನಗಳಿಗೆ ಸೋಮನಾಥ್, ಕಾಶಿ ವಿಶ್ವನಾಥ್, ಹಜ್ರತ್‍ಬಾಲ್ ದರ್ಗಾ, ವಿಠ್ಠಲ ರುಕುಮಾಯಿ, ಬಸವಣ್ಣ, ಅಜ್ಮೇರ್‍ನ ಚಿಸ್ತಿ ನವಾಬ್ ದರ್ಗಾ, ಅಮೃತಸರ, ಗೋವೆಯ ಮೂಲ ಚರ್ಚುಗಳೆಂದರೆ ಜಾತಿ ಧರ್ಮದ ಹೊರತಾಗಿ ಇನ್ನಿಲ್ಲದ ಅಕ್ಕರೆಯಿದೆ, ನಂಬುಗೆಗಳಿವೆ. ಅದಕ್ಕೂ ಮಿಗಿಲಾಗಿ ಸಾಮಾಜಿಕ ಸಾಂತ್ವನವನ್ನು ಒದಗಿಸುವ ಆಪ್ತ ಸಂಗತಿಗಳಾಗಿವೆ. ನಾನು ನೀವೆಲ್ಲರೂ ಅಲ್ಲಿಗೆ ಕಾಲಿಡುತ್ತಿದ್ದರೆ ನಮಗರಿವಿಲ್ಲದೆ ತಲೆಗೆ ಕರ್ಚೀಪು ಕಟ್ಟಿಕೊಂಡು ಮಂಡಿಯೂರಿ ಕೂರುತ್ತೇವೆ. ಅದೇ ಅಂತಹ ತುಂಬ ಸಾಫ್ಟ್ ಎನ್ನಿಸುವ ಭಾವನೆಗಳನ್ನು ಕದಡಿಬಿಟ್ಟರೆ ಜೀವವನ್ನೂ ಕೈಯಿಂದಾಚೆಗಿಟ್ಟು ರಸ್ತೆಗಿಳಿಯುತ್ತಾನೆ. ಸಭ್ಯ ಸಮಾಜವೊಂದರ ಮರ್ಯಾದೆ ಅಂತರಾಷ್ಟ್ರೀಯವಾಗಿ ಹರಾಜಾಗುವುದೇ ಆವಾಗ. (ಇತ್ತಿಚಿನ ದಿನದಲ್ಲಿ ಚಿತ್ರನಟರಿಗೂ ಸ್ಮಾರಕ ಬರುತ್ತಿವೆ ಅದನ್ನೂ ಯಾವ ಪೂರ್ವಾಗ್ರಹವಿಲ್ಲದೆ ನಮ್ಮ ಸಮಾಜ ಒಪ್ಪಿದೆ ಕಾರಣ ಅದೆಲ್ಲಾ ಅಭಿಮಾನದ ಫಲ. ಹಾಗಂತ ಅತ್ಯುತ್ತಮ ನಾಗರಿಕ, ಸಹೃದಯಿಯಾಗಿದ್ದರೂ ಅಮರೀಶ್‍ಪುರಿಗೆ ದೇವಸ್ಥಾನ ಕಟ್ಟಿದ, ಕಟ್ಟುವ ಮಾತುಗಳಿಲ್ಲ. ಕಾರಣ ಅವನ ವೈಯಕ್ತಿಕ ಬದುಕು ಸಹೃದಯತೇ ಎನೇ ಇದ್ದರೂ ಅವನು ಒತ್ತಿದ್ದು ಖಳನ ಛಾಪೇ..)
ಇದೆಲ್ಲದರ ಮಧ್ಯೆ ಇದ್ದಕ್ಕಿದ್ದಂತೆ ಟಿಪ್ಪು ಸುಲ್ತಾನ್‍ಗೆ ಜಯಂತಿ, ಅಮೇಲೆ ಮೀರ್‍ಸಾಧಕನಿಗೂ ಒಂದು ಹುತಾತ್ಮ ಪಟ್ಟ, ಮೊನೆ ಮೊನ್ನೆ ನೆಗೆದುಬಿದ್ದ ಉರಿಯ ಬುರ್ಹಾನ್‍ವಾನಿಗೊಂದು ಸ್ಮಾರಕ, ವರ್ಷಗಳೆರಡರ ಹಿಂದೆ ಸಮುದ್ರದಲ್ಲಿ ಮುಗಿದು ಹೋದ ಲಾಡೆನ್‍ಗೊಂದು ಹಬ್ಬದ ದಿನ, ಅತ್ತ ಹಿಟ್ಲರ್‍ಗೊಂದು ಸಾಯಂಕಾಲದ ಸಮಾರಂಭ, ಸಂಪೂರ್ಣ ಮೊಘಲ ಸಾಮಾಜ್ಯವನ್ನೇ ಹಳ್ಳ ಹಿಡಿಸಿದ ತುಘಲಕ್‍ನ ಹೆಸರಿನಲ್ಲೊಂದು ಪಾರ್ಟಿ, ಸಂಗೊಳ್ಳಿರಾಯಣ್ಣನಿಗೆ ದ್ರೋಹ ಬಗೆದ ವೆಂಕಣ್ಣಗೌಡ ಮತ್ತು ಕುಲ್ಕರಣಿಗಳಿಗೊಂದು ಸ್ಮಾರಕ ಹೀಗೆ ಆಯೋಜಿಸಲು ಹೋದರೆ ಮೂಮೂಲಿನ ಜನರೂ, ಜಾತಿ ಧರ್ಮದಾಚೆಗೆ ನಿಂತು `..ಎನಯ್ಯಾ ತಲೆಗಿಲೆ ಕೆಟ್ಟಿದೆಯಾ..' ಎಂದು ಮೊದಲ ಸೆಕೆಂಡಿನಲ್ಲೇ ಪ್ರತಿಕ್ರಿಯಿಸುತ್ತಾರೆ. ಯಾಕೆಂದರೆ ಇಂತಹ ವಿಕೃತ ಸಂತಾನಗಳೆಲ್ಲಾ ಯಾವ ರೀತಿಯಲ್ಲೂ ಬದುಕಿಗೂ, ಸಮಾಜಕ್ಕೂ, ಸಮಾಜದ ಸಭ್ಯತೆಗೆ ಕೊಡುಗೆಯಾಗಬಲ್ಲ ಯಾವ ರೀತಿಯ ಮೇಲ್ಪಂಕ್ತಿಯನ್ನೂ ಹಾಕಿಕೊಟ್ಟವರಲ್ಲ. ಎಲ್ಲೋ ಏನಾದರೂ ಕೊಡುಗೆ ನೀಡಿದ್ದರೂ ಸಾಮೂಹಿಕವಾಗಿ, ಸಮಾಜದ ಬಹ್ವುಂಶದ ಬದುಕಿನಲ್ಲಿ ಧನಾತ್ಮಕ ಅಂಶಗಳ ಕೊಡುಗೆ ಇದ್ದಿದ್ದು ಕಡಿಮೆ. ಇದ್ದರೂ ಅದು ಅವರ ಋಣಾತ್ಮಕ ಧೋರಣೆ ಮತ್ತು ಆಚರಣೆಯಿಂದಾಗಿ ಗಣನೀಯವಾಗಿ ಆನಾದರಣೆಗೊಳಗಾಗಿರುತ್ತದೆ.
ಹಾಗಾಗೇ ಯಾವುದೇ ವ್ಯಕ್ತಿಯ ಪ್ರಭಾವ ಸಾಮಾಜಿಕವಾಗಿ ಇತಿಹಾಸ ಮತ್ತು ವರ್ತಮಾನದ ಕಾಲಾವಧಿಯನ್ನೂ ಮೀರಿ ಭವಿಷ್ಯದಲ್ಲೂ ಅಚ್ಚಳಿಯದಂತಿರಬೇಕಾದರೆ ಆ ಮಟ್ಟದ ಕೊಡುಗೆ ಅಂತಹ ವ್ಯಕ್ತಿಯಿಂದ ಸಮಾಜಕ್ಕೆ ಎಲ್ಲಾ ಕಾಲಕ್ಕೂ ಸಲ್ಲುವಂತೆ ಅದರಲ್ಲೂ ಸಮಾಜದ ನಡಾವಳಿ ಮತ್ತು ನಡವಳಿಕೆಗಳಿಗೆ ಮೇಲ್ಪಂಕ್ತಿಯಾಗುವಂತಹ ಅಭಿವ್ಯಕ್ತಿಯ ಅಂಶ ಮಾನ್ಯವಾಗುತ್ತದೆ ಹೊರತಾಗಿ ಅವನ ದುಷ್ಕೃತ್ಯಗಳಲ್ಲ. ಅವನ ನಡವಳಿಕೆಗಳಿಂದ ಮುಂದಿನ ತಲೆಮಾರುಗಳೂ ಕೂಡಾ ಶಪಿಸುವಂತಹ, ಬೇಯುವಂತಹ, ಅಸಹಾಯಕತೆಯಿಂದ ನರಳುವಂತಹ ಹೀನ ಕೃತ್ಯಗಳನ್ನ ಜಗತ್ತಿನ ಯಾವ ಧರ್ಮವೂ ಮಾನ್ಯ ಮಾಡಿದ ಉದಾಹರಣೆಗಳಿಲ್ಲ.  
ಹಾಗೆ ಲೆಕ್ಕಿಸಿದರೆ ಇವತ್ತು ಕರ್ನಾಟಕದಲ್ಲಿ ಮೈಸೂರು ಒಡೆಯರ್ ಸಂಸ್ಥಾನಾಧಿಪತಿಗಳಿಗೂ, ಕನ್ನಡದ ಅಧಿಕೃತ ರಾಜವಂಶ ಕದಂಬರ ಮಯೂರವರ್ಮನ (ಆದರೆ ಯಾವತ್ತೂ ಮಯೂರವರ್ಮನಿಗೆ ಆ ಮರ್ಯಾದೆ ಸಲ್ಲಲು ಬಿಡುವುದಿಲ್ಲ ನೆನಪಿರಲಿ. ಕಾರಣ ಮೂಲತ: ಮಯೂರ ಶರ್ಮನಾಗಿದ್ದ ಎಂದು ಇತಿಹಾಸ ಹೇಳುತ್ತದಲ್ಲ. ಇನ್ನು ಬ್ರಾಹ್ಮಣನಾದವನಿಗೆ ಹೇಗೆ ಆದರ, ಮನ್ನಣೆ ನೀಡುವುದು..?) ಹೆಸರಿನಲ್ಲೂ, ಎನೇ ಬೇರೆ ಭಾಷಿಕ ರಾಜನಾದರೂ ವಿಜಯನಗರ ಸಾಮ್ರಾಜ್ಯವನ್ನಾಳಿ ಕನ್ನಡದ ನೆಲದಲ್ಲಿ ಮುತ್ತು ರತ್ನ ಮಾರಿದ ಕೃಷ್ಣ ದೇವರಾಯನಿಗೂ, ಅರ್ಧದಷ್ಟು ಕನ್ನಡದ ನೆಲದಲ್ಲಿ ತನ್ನ ಛಾಪು ಮೂಡಿಸಿದ್ದ ಶಿವಾಜಿಗೂ, ಇತ್ತ ಕನ್ನಡ ರಾಜ ವಂಶಸ್ಥರ ನಂತರದಲ್ಲೂ ಅದರ ಸೊಗಡು ಉಳಿಸಿದ್ದ ಸೋಂದಾ ರಾಜರು, ಚಾಲುಕ್ಯರು ಸೇರಿದಂತೆ ಕನ್ನಡದ ನೆಲಕ್ಕಾಗಿ ಜೀವವನ್ನೇ ನೀಡಿದ ವೀರಮಹಿಳೆ ಚೆನ್ನಮ್ಮನಂತವರ ಹೆಸರು ಕೇವಲ ಪ್ರಶಸ್ತಿಗೂ, ಉತ್ಸವಕ್ಕೂ ಮುಗಿದು ಹೋಗುತ್ತದೆ. ಇವರೆಲ್ಲಾ ಕರ್ನಾಟಕದ ಪ್ರಾತ:ಸ್ಮರಣೀಯರು. ಆದರೆ ಇವರೆಲ್ಲರ ಹೆಸರಲ್ಲಿ ಆಯ್ದ, ಕಿತ್ತುಹೋದ ಕವಿ ಪುಂಗವರಿಂದ ಆಗೀಗೊಂದು ಕವನಗಳನ್ನು ಹಾಡಿಸುವ ಉತ್ಸವ ಆಯೋಜಿಸಿ ಆವತ್ತಿಗೆ ಮರೆತು ಹೋಗುತ್ತಿದ್ದೇವೆಯೇ ವಿನ: ಯಾವುದೇ ಶಾಶ್ವತ ಜಯಂತಿ ಇತ್ಯಾದಿಗಳು ನಡೆಯುವ ಸಾಧ್ಯತೆಗಳು, ಅದಕ್ಕಾಗಿ ಸರಕಾರಿ ಪ್ರಾಯೋಜನೆಗಳೂ ಅಷ್ಟಕ್ಕಷ್ಠೆ. ಅನಾವಶ್ಯಕವಾಗಿ ಕರ್ನಾಟಕದ ಸಾಮಾಜಿಕ ವ್ಯವಸ್ಥೆಯಲ್ಲಿ ನಿಧಾನವಾಗಿಯಾದರೂ ಬಿರುಕು ಬಿಡುತ್ತಿರುವ ಮುಸ್ಲಿಂ ಮತ್ತು ಹಿಂದೂ ಸಾಮಾರಸ್ಯದಲ್ಲಿ ಇಲ್ಲಿವರೆಗೂ ಯಾರೂ ಅಂತಹ `ದರಾರು' ತಂದು ಹಾಕಿದ್ದಿಲ್ಲ. ಆದರೆ ಅದೀಗ ಸ್ಪಷ್ಟವಾಗಿ ನಡೆಯುತ್ತಿದೆ. 
ಇವತ್ತಿಗೂ ಅದೆಂಥದ್ದೇ ಕರ್ಮಠನಾಗಿದ್ದರೂ, ದಿನಕೈದು ಬಾರಿ ನಮಾಜು ಮಾಡುವ ಮುಸ್ಲಿಂನಿದ್ದರೂ ಜಗಳ, ಕಿರಿಕ್ಕು ಬೇಡವೇ ಬೇಡ ಎನ್ನುತ್ತದೆ ಅವನ ಮನಸ್ಸು. ಕಾರಣ ಅವನು ಮೊದಲು ಭಾರತೀಯ ಆಮೇಲೆ ಮುಸ್ಲಿಂ. ಭಾರತದಲ್ಲಿ ತನ್ನ ಮನೆ ಮಠ ಹೊಂದಿ ಸುಖವಾಗಿ ಸಂಸಾರ, ನೌಕರಿ, ಆಗೀಗ ಉಪವಾಸ, ಅವಕಾಶ ಸಿಕ್ಕಿದಾಗ ಹಜ್ ಯಾತ್ರೆಯ ಪುಣ್ಯ ಎಂದುಕೊಂಡಿರುವ ಯಾವ ಭಾರತೀಯ ಮುಸ್ಲಿಂಮರಿಗೂ ಇವತ್ತು ಇಂತಹ ಸಮಾಜ ಒಡೆಯುವ ಜಯಂತಿಗಳು ಬೇಕೇ ಆಗಿಲ್ಲ. ವೈಯಕ್ತಿಕವಾಗಿ ಕೇಳಿ ನೋಡಿ. `..ಎಲ್ಲಿ ಬಿಡೋ.. ಮಾರಾಯ ನಮದಾ ನೌಕರಿ ಮಾಡಿಕೊಂಡು ಹೋದರ ಸಾಕಾಗೇತಿ..ಇಸ್ಕಿ ಮಾಖು..' ಎನ್ನುತ್ತಾನೆ. 
ಇದು ಬದುಕು ಮತ್ತು ಭವಿಷ್ಯವನ್ನು ಚೆಂದಗೊಳಿಸಿಕೊಂಡು ತನ್ನ ಕುಟುಂಬ ತಾನು ನಿರುಮ್ಮಳವಾಗಿ ಬದುಕು ಕಟ್ಟಿಕೊಳ್ಳಲೆತ್ನಿಸುವ ಪ್ರತಿಯೊಬ್ಬ ಭಾರತೀಯನಂತೆ ಅರಾಮದ ಬದುಕು ಇಲ್ಲಿನ ಮುಸ್ಲಿಂಮರಿಗೂ ಇದೆ ಮತ್ತು ಅವರ ಆಶಯ ಕೂಡಾ. ಆದರೆ ಬಹಿರಂಗವಾಗಿ ಇದನ್ನೆ `..ನಿಮ್ಮವರಿಗೆ ಹೇಳಿ, ಯಾಕೆ ಎಲ್ಲೆಲ್ಲೂ ಕೋಮುವಾದ ಎರಡೂ ಕಡೆಯಲ್ಲೂ ಉರಿಯುತ್ತಿದೆ..' ಎಂದು ನೋಡಿ. ಅವನ ಮುಖ ಚಹರೆಯೇ ಬದಲಾಗುತ್ತದೆ. ಕಾರಣ ಅನವಶ್ಯಕವಾಗಿ ಯಾರೋ ಒಬ್ಬರು ಎಬ್ಬಿಸುತ್ತಿರುವ ಅವರೆಲ್ಲರ ಮನಸ್ಸಿನ ಒಳಭಾಗದಲ್ಲಿ ಕೆರೆಯುತ್ತಿರುವ ಅಭದ್ರತೆಯ (ಸೋಷಿಯಲ್ ಇನ್ ಸೆಕ್ಯೂರಿಟಿ) ಭಾವವನ್ನು ತಣ್ಣಗೆ ಅವನು ಅನುಭವಿಸಿ ಬಿಡುತ್ತಾನೆ. ಇಂತಹ ಸಂದರ್ಭದಲ್ಲೇ ಅವನ ಮನಸ್ಸಿನ ಆ ಇನ್ಸೆಕ್ಯೂರಿಟಿಯ ಕಾರಣ ಸಾಮಾಜಿಕವಾಗಿ ತಾನೂ ಸಬಲ ಎನ್ನುವ ಅಂಶವನ್ನು ಪ್ರೂವ್ ಮಾಡಲು ಹೊರಟು ಬಿಡುತ್ತಾನೆ. ಆಗ ಸುಲಭಕ್ಕೆ ಇಂತಹದಕ್ಕೆ ಅವಕಾಶ ಮಾಡಿಕೊಡುವುದೇ ಟಿಪ್ಪು ಸುಲ್ತಾನ್‍ನಂತಹ ಜಯಂತಿಗಳು. 
ಕಾರಣ ಇಂತಹ ಜಯಂತಿ ಸಹಜವಾಗಿ ಬಹುಸಂಖ್ಯಾತರಾಗಿದ್ದೂ ಯಾವುದೇ ಸೌಲಭ್ಯ, ಸಹಕಾರ ಇಲ್ಲದೆ ವಂಚಿರಾಗಿ ಸ್ವಂತದ ನೆಲದಲ್ಲಿ ಪರಕೀಯ ಭಾವನೆಯಲ್ಲಿರುವ ಹಿಂದೂ ಸಮುದಾಯಕ್ಕೆ ಇದ್ದಕ್ಕಿದ್ದಂತೆ ಹೃದಯಕ್ಕೆ ಬರೆ ಇಟ್ಟಂತಾಗುತ್ತದೆ. ಕಾರಣ ಅವನಿಗೆ ಇಂಥದ್ಯಾವುದೂ ಲಭ್ಯವಾಗದಿದ್ದರೂ ಸುಮ್ಮನಿರುತ್ತಾನೆ. ಆದರೆ ಮೊದಲೇ ಓಲೈಕೆಯ ವ್ಯವಹಾರ ನಡೆಯುವಾಗ ಆಗುವ ಲುಕ್ಷಾನಿನ ಜತೆಗೆ ಇದೇನಿದು ಹೊಸ ಜಯಂತಿ ಅದೂ ಕದಂಬರು, ಕೆಂಪೇಗೌಡರು ಕೊನೆಗೆ ನಮ್ಮ ಯಾರ ಪಾಳೆಪಟ್ಟಿನವರಿಗೂ ಇಲ್ಲದ ಜಯಂತಿ..? ನಮಗೇ ಇಲ್ಲದ್ದು ಇನ್ಯಾರಿಗೋ ದಕ್ಕುತ್ತಿದೆ..? ರೊಚ್ಚಿಗೇಳಲು ಇದಕ್ಕಿಂತ ಬೇರಿನ್ನೇನು ಬೇಕು..? ಅದಕ್ಕೆ ಸರಿಯಾಗಿ ಎದುರಿನಿಂದ ಇನ್ನೊಂದು ಬೆಂಕಿ ಭುಗಿಲೇಳುತ್ತದೆ. 
ನಮ್ಮ ಮುಸ್ಲಿಂ ಟಿಪ್ಪು ಸುಲ್ತಾನ ಜಯಂತಿ ನಡೆಯಲು ಬಿಡದಿದ್ದರೇ ಹೆಂಗೇ..? ಈಗ ನಾವು ಒಗ್ಗೂಡಿ ನಮ್ಮ ಶಕ್ತಿ ಪ್ರದರ್ಶನವಾಗದಿದ್ದರೆ ನಾಳೇ ಏನಾಗುತ್ತದೋ ಯಾರಿಗೆ ಗೊತ್ತು..? ಅದಕ್ಕೆ ಟಿಪ್ಪು ಏನಾಗಿದ್ದನೋ, ಇತಿಹಾಸದಲ್ಲಿ ಒಳ್ಳೆಯವನೋ ಕೆಟ್ಟವನೋ ಅದೆಲ್ಲಾ ಅತ್ಲಾಗಿರಲಿ. ಟಿಪ್ಪು ಮುಸ್ಲಿಂ ಆಗಿದ್ದ ಅವನ ಹೆಸರಲ್ಲಿ ಜಯಂತಿ ನಡೆಯುತ್ತದೆ. ಅದನ್ನು ಹಿಂದೂಗಳು ವಿರೋಧಿಸುತ್ತಿದ್ದಾರೆ. ಹಾಗಾದರೆ ನಾವು ಬೆಂಬಲಿಸಬೇಕು. ಆ ಮೂಲಕ ನಮ್ಮ ಬಲ ಪ್ರದರ್ಶನ ಮಾಡಿ ಸಾಮಾಜಿಕವಾಗಿ ನಾವೂ ಸಬಲರು ಎನ್ನುವ ಪ್ರೂವ್ ಕೋಡಬೇಕು. ಆಯಿತಲ್ಲ. ಅಲ್ಲಿಗೆ ಸರಸರನೇ ವಾಟ್ಸಾಪು, ಮೊಬೈಲ್‍ಗಳು ಬಿಜಿಯಾಗುತ್ತವೆ. ಲೋಡಗಟ್ಟಲೇ ಕಲ್ಲು ಜಮೆಯಾಗುತ್ತದೆ. ಎಲ್ಲೆಲ್ಲಿಂದಲೂ ಜನ ಬರುತ್ತಾರೆ. ಕೊನೆಗೆ ಪೆÇೀಲಿಸರ ಗುಂಡಿಗೆ ಒಂದೆರಡು ಹೆಣ ಬೀಳುತ್ತವೆ. ಶಾಶ್ವತವಾಗಿ ಆಯಾ ಊರಿನ ಹಿಂದೂ ಮುಸ್ಲಿಂಗಳು ಇಲ್ಲಿವರೆಗೂ ಮೊಹರಮ್ಮು, ಗಣಪತಿ ಎನ್ನುತ್ತಿದ್ದವರು ಒಣಿ ಬದಲಾಯಿಸಿ ನಡೆಯತೊಡಗುತ್ತಾರೆ. ಏನ್ರಿ ಇದೆಲ್ಲಾ..? 
ಸುಖಾ ಸುಮ್ಮನೆ ಮನೆ ಮಠ ಎಂದಿದ್ದ ಭಾರತೀಯ ಹಿಂದೂ,ಮುಸ್ಲಿಂ ಇಬ್ಬರೂ ಈಗ ಕದನಕ್ಕಿಳಿಯುತ್ತಿರುವುದೇ ಇಂತಹ ಅನ್ ವಾಂಟೆಡ್ ಕಾರಣಗಳಿಗಾಗಿ. ಬೇಕೆ ಇಲ್ಲದ ಇಂತಹ ಅದರಲ್ಲೂ ಸಮಾಜದಲ್ಲಿನ ಪ್ರಬಲ ಸಮುದಾಯದ ಮನಸ್ಸಿಗೆ ಕಹಿ ನೀಡುವ ಉತ್ಸವಗಳನ್ನು ಆಯೋಜಿಸುವುದರಿಂದ ಆಗುವ ಪ್ರಯೋಜನಗಳಾದರೂ ಏನು..? ಅಷ್ಟಕ್ಕೂ ಕನ್ನಡದ ಮಟ್ಟಿಗೆ ಮತ್ತು ಕರ್ನಾಟಕದ ಮಟ್ಟಿಗೆ ಯಾವ ರಿಮಾರ್ಕೇಬಲ್ ಎನ್ನುವ ಕೊಡುಗೆ ಕೊಡದ ಟಿಪ್ಪುವಿನ ಬಗ್ಗೆ ಆಗೀಗ ಒಂದಿಬ್ಬರು ಬಕೇಟ್ ಬುದ್ಧಿಜೀವಿಗಳು ಆಳುವವರನ್ನು ಮೆಚ್ಚಿಸಲು ಬರೆದ ಲೇಖನಗಳನ್ನು ನಾನು ನೋಡಿದ್ದೇನೆ. ಟಿಪ್ಪು ರಾಕೇಟ್ ಹಾರಿಸಿದ, ಟಿಪ್ಪು ತನ್ನ ಮಕ್ಕಳನ್ನು ಬಲಿಕೊಟ್ಟ (ಸಾಲುಸಾಲಾಗಿ ತಮ್ಮ ಗಂಡಂದಿರನ್ನೇ ಇವತ್ತು ಕಾಶ್ಮೀರ ಗಡಿಯಲ್ಲಿ ನಮ್ಮ ಮಹಿಳೆಯರು ಬಲಿಕೊಡುತ್ತಿದ್ದರೆ, ಅವರ ಮಕ್ಕಳು ಅಪ್ಪನ ಹೆಣಕ್ಕೆ ಸೆಲ್ಯೂಟ್ ಹೋಡೆದು `..ಜೈ ಹಿಂದ್..' ಎಂದು ಕಿರುಚುತ್ತಾ ಕಣ್ಣೀರು ಹಾಕುತ್ತವಲ್ಲ ಅದು ಯಾವನಿಗೂ ಕಾಣುತ್ತಲೇ ಇಲ್ಲವಲ್ಲ.)  ದೇವಸ್ಥಾನಕ್ಕೆ ಉಂಬಳಿ ಕೊಟ್ಟ (ಇದೆಲ್ಲಾ ಅವನ ಅವಸಾನದ ಸಂದರ್ಭದಲ್ಲಿ ಪ್ರಬಲ ಸಮುದಾಯಗಳ ಬೆಂಬಲ ಮತ್ತು ಸಹಾನುಭೂತಿಗಳಿಸಲು ಮಾಡಿರುವ ಕಾರ್ಯಗಳೆ- ಇತಿಹಾಸ ದಾಖಲಿಸಿದೆಯಲ್ಲ) ಅವನ ಅರಮನೆಯ ಬಾಗಿಲೆದುರಿಗೆ ದೇವಸ್ಥಾನಗಳಿದ್ದವು, ಅವನ ಆಸ್ಥಾನದಲ್ಲಿ ಇಂಥಿಂಥಾ ಕೆಲಸಗಾರರಿದ್ದರು ಎಂಬೆಲ್ಲ ಕತೆ ಹೊಡೆಯುವವರು ಇದೇ ಕೊಡಗರ ಸಾವಿರಾರು ವಂಶಗಳನ್ನೇ ನಿರ್ವಂಶ ಮಾಡಿದರು, ನಂಬೂದಿರಿ ಬ್ರಾಹ್ಮಣರನ್ನು ಇನ್ನಿಲ್ಲದಂತೆ ಓಡಾಡಿಸಿ ಬಡಿದು ಕೊಲ್ಲಲಾಯಿತು, ಸರಿ ಸುಮಾರು ಆರ್ನೂರಕ್ಕೂ ಮಿಗಿಲು ಹೆಂಗಸರನ್ನು ಅವನು ಜನಾನಾದಲ್ಲಿ ಸಾಕಿಕೊಂಡಿದ್ದ, ಸಾಲುಸಾಲು ಹಿಂದೂ ಜನರನ್ನು ಬೆತ್ತಲೆಯಾಗಿ ನಿಲ್ಲಿಸಿ ತುದಿ ಕತ್ತರಿಸಿ, ಸುನ್ನತಿ ಮಾಡಿಸುತ್ತಿದ್ದ ಎನ್ನುವಂತಹ ಅಂಶಗಳನ್ನೇ ಜಾಣತನದಿಂದ ಮರೆಮಚುತ್ತಾರೆ.
ಅಂತಹ ರಕ್ತಸಿಕ್ತ ಇತಿಹಾಸ ಇದ್ದುದರಿಂದಲೇ ಇವತ್ತು ಕೊಡಗು ಸೇರಿದಂತೆ ಹೆಚ್ಚಿನವರಿಗೆ ಟಿಪ್ಪು ಬೇಡವಾಗುತ್ತಾನೆ. ಒಂದಿಡಿ ಜನಾಂಗವೇ ಹಿಂದೂಗಳ ಹಬ್ಬ ದೀಪಾವಳಿವನ್ನೇ ಮೂಂದೂಡಿ ಶೋಕ ಅಚರಿಸುತ್ತಿದೆ. ಹೀಗಿದ್ದಾಗ ಅದ್ಯಾವ ಘನಂದಾರಿ ಯಶಸ್ಸು ಬರುತ್ತದೆ ಅಥವಾ ಹೆಸರು ಇತಿಹಾಸದಲ್ಲಿ ದಾಖಲಾಗುತ್ತದೆ, ಅಲ್ಪ ಸಂಖ್ಯಾತರ ಪಾಲಿಗೆ ಡಾರ್ಲಿಂಗ್ ಆಗುತ್ತೇನೆ ಎನ್ನುವ ಕಾರಣಕ್ಕೆ ಆಳರಸರು ಇಂತಹ ಜಯಂತಿ ಮಾಡುತ್ತಿದ್ದಾರೆ..? ಇವತ್ತು ಸರಿಯಾಗಿ ಗಾಂಧೀಜೀಯವರನ್ನೇ ಯಾರು..? ಎಂದು ಕೇಳುವ ಮಟ್ಟಕ್ಕಿಳಿದಿರುವ ಸಮಾಜದ ದರಖಾರಿನಲ್ಲಿ ಈ ಮಂತ್ರಿ ಮಾಗಧರೆಲ್ಲಾ ಯಾವ ಲೆಕ್ಕಾ..?
ಕಹಿಸತ್ಯದ ಅನಾವರಣದ ಚರಿತ್ರೆಯೊಂದಿಗೆ ಉಳಿದದ್ದೆಲ್ಲಾ ಮುಂದಿನ ಭಾಗಕ್ಕಿರಲಿ ( ಸಶೇಷ )

Monday, October 24, 2016

ಗಂಗೆಯಲ್ಲ.. ನಮಾಮಿ ಗಂಗಾ....

ಅದು 2002 ರ ನವಂಬರ್ ಇರಬೇಕು. ರಾತ್ರಿಯ ಹೊತ್ತಿಗೆ ವರಣಾಶಿ ತಲುಪಿದ್ದ ನನಗೆ ಅಲ್ಲಿ ನಾಲ್ಕೂವರೆಗೆಲ್ಲಾ ಬೆಳಕು ಹರಿಯುತ್ತದೆನ್ನುವ ಅಂದಾಜೂ ಇರಲಿಲ್ಲ. ಐದು ಗಂಟೆಗೆಲ್ಲಾ ಚಹ ಮತ್ತು ರಬಡಿಯ ಅಬ್ಬರ ನನ್ನನ್ನು ಮುಖ್ಯ ಬೀದಿಗೆ ಎಳೆ ತಂದಿತ್ತು. ವಾರಣಾಸಿ. ಇನ್ನೊಂದು ಹೇಸರೆ ಕಾಶಿ.. ವರುಣಾ ಮತ್ತು ಅಸಿ ನದಿಗಳ ಸಂಗಮ ಇಲ್ಲೇ ಆಗಿದ್ದೂ ಇದಕ್ಕೆ ಕಾರಣ. ಆದರೆ ಅಷ್ಟು ದೂರದಿಂದ ಬರುವ ಗಂಗೋತ್ರಿಯ ಧಾರೆಯೊಂದಿಗೆ ಸೇರಿ ಇದು ಗಂಗೆಯಾಗುತ್ತದೆ. ಅಸಂಖ್ಯಾತ ಹಿಂದೂಗಳ ಮತ್ತು ಪುಣ್ಯ ಭೂಮಿ ಭಾರತದ ಶೇ.40ರಷ್ಟು ಜನಜೀವನದ ಅವಿಭಾಜ್ಯ ಭಾಗ. ಹಿಂದೂಗಳ ಅನನ್ಯ ತಪೆÇೀಭೂಮಿ ಆದರೆ ಅದು ಯಾವ ಲೆಕ್ಕದಲ್ಲೂ ಇಲ್ಲಿ ನೈಜ ಎನಿಸುತ್ತಿರಲಿಲ್ಲ. ಕಾರಣ ನಗರದ ಯಾವ ರಸ್ತೆ ತಿರುವು ಯಾವುದೂ ಕಾಲಿಡಲೂ ಯೋಗ್ಯವಿಲ್ಲದಷ್ಠು ಗಬ್ಬೆದ್ದು ಹೋಗಿದ್ದವು. ಮುಂಜಾನೆಯ ಬೆಳಕು ಹರಿಯುವ ದಂಡೆಯ ಮೇಲೆ ಸಾಲು ಸಾಲು ಎಪ್ಪತ್ತಕ್ಕೂ ಹೆಚ್ಚಿರುವ ಘಾಟ್‍ನಲ್ಲಿ ಇದ್ದಕಿದ್ದಂತೆ ಮಿಂಚಿನ ಸಂಚಾರವಾಗುತ್ತದೆ. ಅಸಂಖ್ಯಾತ ಜನರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.
ಅಪೂಟು ಬೆಚ್ಚಗಿನ ಅಚ್ಚನೊರೆಯ ಎಮ್ಮೆ ಹಾಲು ಬೀದಿಬದಿಯಲ್ಲಿ ಮಾರಾಟವಾಗುತ್ತಿದ್ದರೆ, ಮಡಿಕೆಯಲ್ಲಿ ಬಿಸಿಬಿಸಿ ಶುಂಠಿ ಬೆರೆತ ಟೀ ಇಲ್ಲಿನ ವಿಶೇಷತೆ. ಕರ್ನಾಟಕದಿಂದ ಹೋದ ನನ್ನಂತವರಿಗೆ ಇದು ನಿಜಕ್ಕೂ ಖುಷಿಕೊಡುತ್ತದೆ. ಆದರೆ ಅದನ್ನು ತಯಾರಿಸುವ ಸ್ಥಳ, ಪರಿಸರಗಳನ್ನು ಗಮನಿಸದೇ ಕುಡೀಯಬೇಕಿತ್ತಷ್ಟೆ. ಇಲ್ಲಿಗೆ ಭೇಟಿ ನೀಡುವ ಪ್ರತಿ ಯಾತ್ರಿಕನಿಗೂ ಬೆಳಗಾಗುವುದೇ ಇಲ್ಲಿನ ಹಾಲಿನೊಂದಿಗೆ ಮತ್ತು ಅಭಿಷೇಕಕ್ಕಾಗಿ ಬಳಸುವ ಗಂಗೆಯ ನೀರಿನ ಪರಿಷೇಚನೆಯೊಂದಿಗೆ. ಚಿಕ್ಕಚಿಕ್ಕ ಗಲ್ಲಿಗಳಲ್ಲಿ ಸಾಲುಸಾಲು ಜನ ಸರತಿಯಲ್ಲಿ ಪ್ರತಿ ಘಾಟಿನ ತೀರಕ್ಕೂ ಸರಿದು ಹೋಗುತ್ತಿದ್ದರೆ, ಅವರೆಲ್ಲಾ ಪಾಪ ಮುಕ್ತಿಯೊಂದಿಗೆ, ಪುಣ್ಯದ ಸದ್ವಿನಿಯೋಗಕ್ಕೆ ಈ ನದಿ ಸಾಕ್ಷಿಯಾಗುತ್ತಿದ್ದುದನ್ನು ಅಷ್ಟೆ ಗಬ್ಬೆದ್ದು ನಾರುತ್ತಿದ್ದ ದಂಡೆಗಳಲ್ಲಿ ನಡೆಯುತ್ತಿದ್ದ ಮೋಕ್ಷ ಕಾರ್ಯಗಳಿಗೆ ನಾನು ಸಾಕ್ಷಿಯಾಗುತ್ತಲಿದ್ದೆ. ಇಲ್ಲಿ ಒಮ್ಮೆ ಮಿಂದು ಮೇಲೇಳದೆ ಹೋದಲ್ಲಿ ಈ ಜನ್ಮಕ್ಕಿನ್ನು ಮೋಕ್ಷವಿಲ್ಲ ಎನ್ನುವ ಭಾವನೆಗಳಿಗೆ ಇಂಬುಕೊಡಲು ದಿನವೂ ನೆನೆಯುವ ಸಹಸ್ರಾರು ಯಾತ್ರಿಗಳ ಕೊಳೆಯಲ್ಲಾ ಗಂಗೆಯ ಪಾಲಾಗುತ್ತಿತ್ತು. ಟನ್ನುಗಟ್ಟಲೆ ಹೂವುಗಳು, ಸಾವಿರಾರು ಲೀಟರ್ ಅಭಿಷೇಕದ ಮಿಶ್ರಣ, ದಿನಕ್ಕೆ ನೂರಾರು ಹೆಣಸುಟ್ಟ ಅವಶೇಷಗಳಲ್ಲಿ ಕಟ್ಟಿಗೆ ಬೂದಿಯಾದಿಯಾಗಿ ಅರೆಸುಟ್ಟ ದೇಹಗಳಿಗೂ ಈ ಕಾಶಿಯ ದಂಡೆಯಲ್ಲಿ ನನ್ನೆದುರೇ ಮುಟ್ಟಿ ಮೋಕ್ಷ ಕಾಣುತ್ತಿದ್ದವು.
ಸರಾಸರಿ ಆರೆಂಟು ಕಿ.ಮೀ. ಉದ್ದದ ಕಾಶಿಯ ದಂಡೆಯಲ್ಲಿ ಅನಾಮತ್ತು ಎಪ್ಪತ್ತು ಘಾಟ್‍ಗಳಿವೆ. ಅದರಲ್ಲಿ ಅರ್ಧಕ್ಕೂ ಜಾಸ್ತಿ ಜಗತ್ತಿನ ಸನಾತನ ಸಂಸ್ಕೃತಿಯ ಹಿರಿಮೆಗಾಗಿ ಮೋಕ್ಷವನ್ನೊದಗಿಸಲು ನೂರಾರು ಟನ್ ಕಟ್ಟಿಗೆ ವ್ಯಯವಾಗುತ್ತಿರುತ್ತದೆ. ನಾನು ನಿಂತಿದ್ದ ಹರಿಶ್ಚಂದ್ರ ಘಾಟನಲ್ಲಿ ಅರ್ಧದಿನ ಕಳೆಯುವ ಹೊತ್ತಿಗಾಗಲೇ ಹತ್ತಾರು  ಹೆಣಗಳು ಮೋಕ್ಷ ಕಂಡಿದ್ದವು. ಚಹದ ಕಪ್ಪಿನ ಅವಶೇಷಗಳು, ಪ್ಲಾಸ್ಟಿಕ್ಕು, ಅಗಾಧ ಹೈನುಗಾರಿಕೆಯ ಅಸಂಖ್ಯ ಜಾನುವಾರುಗಳ ವಿಸರ್ಜನೆಯೊಂದಿಗೆ ಅವುಗಳ ಮಹಾಮಜ್ಜನ ಕೂಡ ನೇರವಾಗಿ ದಂಡೆಯಿಂದ ನದಿಯ ಒಡಲಿಗೆ ವರ್ಗಾಯಿಸಲಾಗುತ್ತಿತ್ತು. ಲಕ್ಷಾಂತರ ಜನರ ಭೇಟಿಯ ಕಾಶಿಯ ಮೈ ಮನದ ಮೇಲೆ ನಂಬಿಕೆಯಿಂದ ನಿರುಮ್ಮಳವಾಗುವ ದೈವೀ ಭಾವದ ಪರಿಣಾಮ ಅದೆಲ್ಲಾ ತ್ಯಾಜ್ಯ ಅಲ್ಲಲ್ಲೆ ವಿಸರ್ಜನೆಯಾಗುತ್ತಿತ್ತು. ಕಾಲಿಡುವುದು ಆಚೆಗಿರಲಿ ಯಾವ ಗಲ್ಲಿಗಳೂ ಹತ್ತು ನಿಮಿಷ ನಿಂತು ಉಸಿರೆಳೆದುಕೊಳ್ಳಲು ಯೋಗ್ಯವಿರಲಿಲ್ಲ.
ಹಾಗಾಗಿ ಗೋಮುಖದಲ್ಲಿ ಉಧ್ಬವವಾಗಿ ಅಚ್ಚ ಬಿಳುಪಿನ ನೊರೆಯಾಗಿ ಹರಿದು 12770 ಅಡಿ ಎತ್ತರದಿಂದ ಗಂಗೋತ್ರಿಯಲ್ಲಿ ಕೆಳಕ್ಕೆ ಧುಮುಕುವ, ಗಂಗೆ ಶುದ್ಧಾನು ಶುದ್ಧವಾಗಿ ಉಳಿಯಲು ಸಾಧ್ಯವಾಗಲೇ ಇಲ್ಲ. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿ ಹರಿಯುವ ಜೀವನದಿ, ಹರಿದ್ವಾರದಿಂದ 223 ಕಿ.ಮೀ. ದೂರದ ಗಂಗೋತ್ರಿಯಿಂದ ಹರಿಯುವಾಗ ಇದ್ದ ಸತುವು ಕೆಳಕ್ಕೆ ಬಂದಂತೆ ಉಳಿಯಲೇ ಇಲ್ಲ. ಒಂದು ಕಾಲದಲ್ಲಿ ಸುಮ್ಮನೆ ಗಂಗೆಯ ಮಡಿಲಲ್ಲಿ ಮಿಂದೆದ್ದರೆ ಅಜನ್ಮ ಪಾಪನಾಶನದೊಂದಿಗೆ, ವಾಸಿಯಾಗದ ಖಾಯಿಲೆಗೂ ಒಂದು ಗತಿ ಕಾಣುತ್ತಿದ್ದುದು ಈಗ ಇತಿಹಾಸ ಅವೆಲ್ಲವೂ ನನ್ನ ಕಣ್ಣೆದುರಿನಲ್ಲಿ, ತೀರ ತ್ಯಾಜ್ಯದ ನದಿಯಾಗಿ ಕಾಶಿಯ ದಂಡೆ ಪ್ರವಹಿಸುತ್ತಿತ್ತು. ಆವತ್ತು ನನ್ನ ಕಾಶಿ ನೋಡುವ ಯೋಜನೆ ಮೊದಲ ದಿನಕ್ಕೆ ಮುಗಿದು ಹೋಗಿತ್ತು.
ಅನಾಮತ್ತು 4000 ಕೀ.ಮೀ. ಉದ್ದದ ನದಿಯ ಮಡಿಲಿಗೆ ದಿನಕ್ಕೆ ಸೇರುತ್ತಿದ್ದ ತ್ಯಾಜ್ಯವೇ ಒಂದು ಸಾವಿರ ಚಿಲ್ರೆ ಘನ ಅಡಿಯಷ್ಟು. 118 ನಗರಗಳು ಗಂಗಾನದಿಯ ದಂಡೆಯ ಮೇಲೆ ಆಶ್ರಯ ಪಡೆದುಕೊಂಡಿವೆ. ಹತ್ತಿರ ಹತ್ತಿರ ಒಂದು ಸಾವಿರ ಸಣ್ಣ, ಮಧ್ಯಮ ಹಾಗು ದೊಡ್ಡ ಗಾತ್ರದ ಕೈಗಾರಿಕೆಗಳ ನಿರ್ಲಕ್ಷಿತ ತ್ಯಾಜ್ಯಕ್ಕೆ ಈ ನದಿ ದಾರಿ ನಾನು ನಡೆದಷ್ಟು ದೂರವೂ ಇದಕ್ಕೆ ಸಾಕ್ಷಿಯಾಗುತ್ತಲೇ ಇತ್ತು. ನನ್ನ 2005 ರ ಭೇಟಿಯಲ್ಲೂ ಕಾಶಿಯ ಯಾವ ಭಾಗದಲ್ಲೂ ಯಾವ ವ್ಯತ್ಯಾಸವೂ ಕಂಡು ಬಂದಿರಲಿಲ್ಲ.
ಬೆಳಗಿನ ಚಿತ್ರಗಳಿಗೆ ಕಾಯುತ್ತಿದ್ದರೆ ಗಂಗೆಯ ಹರಿವಿನ ಮೇಲೆ ಬಿದ್ದ ಸೂರ್ಯನ ಕಿರಣಗಳಿಗೆ ಬಂಗಾರದ ಬಣ್ಣವನ್ನು ಮರುಪ್ರತಿಫಲಿಸುವ ಶಕ್ತಿಯೇ ಉಳಿದಿರಲಿಲ್ಲ. ಹರಿವ ಹೊಲಸಿನ ಮೇಲೆ ಬಣ್ಣದ ತೇಪೆ ಹಾಕುವಂತೆ ದಿನಕ್ಕೊಮ್ಮೆ ಸಂಜೆಯ ಹೊತ್ತಿಗೆ ಗಂಗಾರತಿ ಎನ್ನುವ ಆಕರ್ಷಕ ಬೆಳಕಿನ ಚಿಮ್ಮುವಿಕೆ ನಡೆಯುತ್ತಿತ್ತೇ ಹೊರತಾಗಿ ಅದರ ಅಡಿಯ ಕತ್ತಲೆಯಲ್ಲಿ ಕಾಶಿಯ ಆತ್ಮದಂತಿರುವ ಶುದ್ಧಾನುಶುದ್ಧ ನೀರು ಇನ್ನಷ್ಟು ಕಪ್ಪಾಗಿ ಹರಿಯುತ್ತಿದ್ದುದು ಹೊರಜಗತ್ತಿಗೆ ಗೊತ್ತೇ ಅಗುತ್ತಿರಲಿಲ್ಲ. ಅದಕ್ಕೂ ಹೆಚ್ಚಾಗಿ ಹಾಗೆ ಗಂಗಾರತಿಗೆ ಸೇರುವ ಸಾವಿರಾರು ಜನರ ನೂರಾರು ಕೆ.ಜಿ. ತ್ಯಾಜ್ಯ ಜತೆ ಇತರ ವಜ್ರ್ಯ ಗಂಗೆಯ ಸೆರಗಿಗೆ ದೂಡಿ ಕೈತೊಳೆದುಕೊಂಡು ಪುನೀತರಾಗುತ್ತಿದ್ದರು.
ಅದಕ್ಕೆ ಕೊನೆಗೂ ಕಾಲ ಬಂದಿತ್ತು. ನಾನು ಪುನ:  ಒಂದು ದಶಕದ ನಂತರ ಅದೇ ವಾರಣಾಸಿಯ ದಂಡೆಗಳಲ್ಲಿ ಕಾಲೂರಿ ನಿಂತಾಗ ಗಂಗೆಯ ಹೆಸರು ಬದಲಾಗಿತ್ತು ರೂಪವೂ ಕೂಡಾ. ಆದರೆ ಈ ನಿರಂತರ ಕಸರು, ಗಬ್ಬು ನಾತ ಮತ್ತು ಇನ್ನಿದು ನನ್ನ ಜೀವಿತಾವಧಿಯಲ್ಲಿ ಬದಲಾಗುವುದೇ ಇಲ್ಲ ಎನ್ನುವ ನಂಬಿಕೆಯನ್ನು ಬದಲಾಯಿಸುವಂತೆ ಗಂಗೆಯ ಒಡಲು, ದಂಡೆ ಎರಡೂ ಶುದ್ಧವಾಗತೊಡಗಿತ್ತು. 
ಮೊದಲ ಬಾರಿಗೆ ಕಾಶಿಯ ದಂಡೆಯಲ್ಲಿ ಆ ಬರಹಗಳು ಕಾಣಿಸಿದ್ದವು.. 
`..ನಮಾಮಿ ಗಂಗಾ..'
ಈಗ ಅಲ್ಲೆಲ್ಲಾ ಯಾವ ದನವೂ ಹೊಲಸು ಮೈ ಹೊತ್ತು ತಿರುಗುತ್ತಿರಲಿಲ್ಲ. ಕಂಡಲ್ಲಿ ಉಗುಳುವ ಭಿಕ್ಷುಕರು ಮತ್ತು ಯಾತ್ರಿಗಳೂ ಕೂಡಾ ಕಾಶಿಯ ಬೀದಿಗಳಿಂದ ಎದ್ದು ಹೋದಂತಿತ್ತು. ಮೊದಲ ಬಾರಿಗೆ ವರಣಾಸಿಯ ಬೀದಿಯಲ್ಲಿ ನಿಂತು ಕುಡಿಯುವ ಅಪ್ಪಟ್ಟ ಎಮ್ಮೆ ಹಾಲಿನ ಚಹಕ್ಕೆ ಅದರದ್ದೇ ಆದ ಅಸಲಿತನದ ಸ್ವಾದವಿತ್ತು.  ನಾನು ಈ ಬಾರಿ ಸ್ವಲ್ಪ ಉಸಿರೆಳೆದುಕೊಂಡು ನಿರುಮ್ಮಳವಾಗಿ ಕಾಶಿಯ ಬೀದಿಗಳಿಗಿಳಿದಿದ್ದೆ.
ಭಾರತದ ಎಲ್ಲ ಕಡೆಯ ಜನ ಬೆಳಗಿನ ಸೂರ್ಯಾಸ್ತಕ್ಕೂ ಮೊದಲೇ ಕಾಲಿಡತೊಡಗಿದ್ದರು. ಯಾವತ್ತೂ ಬರದವರೂ ಬಂದಿದ್ದರು. ಅತಿಉನ್ನತ ಮಟ್ಟದ ಅಧಿಕಾರಿಗಳು, ಅಭಿಯಂತರುಗಳು, ಚೆಂದ ಚೆಂದದ ಚೆಡ್ಡಿ ಧರಿಸಿದ್ದ ಹುಡುಗಿಯರು, ಕೈಗೆ ಕಾಲಿಗೆ ಮೂಗಿಗೆ ಬಟ್ಟೆ ಕಟ್ಟಿಕೊಂಡು ಯುದ್ಧೋಪಾದಿಯಲ್ಲಿ ಕಾಶಿಯ ದಂಡೆಯ ಮೇಲಿದ್ದ ಕೊಳೆ ಕೆದರತೊಡಗಿದ್ದರು. ಯಾವ ದಂಡೆಯಿಂದ ತೀವ್ರವಾದ ಧೂಳು, ಬೂದಿ ಮಿಶ್ರಿತ ಕೊಳೆ, ಅರೆ ಬೆಂದ ಮಾನವ ಮಾಂಸ.ಅಸ್ಥಿ ಮತ್ತು ಕಾರ್ಖಾನೆಗಳಿಂದ ಇನ್ನಿಲ್ಲದ ಮಲೀನ ಸೇರುತ್ತಿತ್ತೋ, ಅನಾಮತ್ತು ಸಾಲುಸಾಲು ಘಾಟ್‍ಗಳಿಂದ ಕ್ವಿಂಟಾಲುಗಟ್ಟಲೇ ಕಸರು ಯಾವ ಗಂಗೆಯ ಒಡಲಿಗೆ ತಳ್ಳಿ ಕೈತೊಳೆದುಕೊಳ್ಳುತ್ತಿದ್ದರೋ ಅದಕ್ಕೀಗ ತಡೆ ಬಿದ್ದಿದ್ದು ನನ್ನ ಕಣ್ಣೆದುರಿಗೇ ಕಾಣಿಸುತ್ತಿತ್ತು. ಕಾಲಿಡಲು ಹೇಸಿಗೆಯಾಗುತ್ತಿದ್ದ ದಂಡೆಗಳಲ್ಲಿ ಕೂತು ಇವತ್ತು ನಾನು ಮುತ್ತುಗದ ಕೊಟ್ಟೆಗಳಲ್ಲಿ ಫಲಾಹಾರ ಸೇವಿಸುವ ಹಂತಕ್ಕೆ ದಂಡೆಗಳನ್ನು ಸ್ವಚ್ಛಗೊಳಿಸಲಾಗಿತ್ತು. 
ಜನ ಮತ್ತು ಕಾರ್ಯಕರ್ತರು ದಿನವೂ ಸ್ವಚ್ಚ ಮಾಡುತ್ತಿದ್ದಾರೆ. ನನ್ನಂತಹ ಸಾವಿರಾರು ಯಾತ್ರಿಗಳ ಅರಿವು ಹೆಚ್ಚಿಸುತ್ತಿದ್ದಾರೆ. ಸರಕ್ಕನೆ ಗಂಗೆಯ ಒಡಲಲ್ಲಿ ಎದ್ದು ಕೂರುತ್ತಿದ್ದ ಹೆಣಗಳನ್ನು ಎಳೆದೆಳೆದು ಆಚೆಗೆ ಹಾಕುತ್ತಿದ್ದಾರೆ. ದಿನಕ್ಕೆ ಸಾವಿರಾರು ಟನ್ ಕಟ್ಟಿಗೆಯ ಬದಲಿಗೆ ಕರೆಂಟ್ ಚಿತಾಗಾರಗಳನ್ನು ಸ್ಥಾಪಿಸಿ ಹೊಗೆ ಸಾಯಲಿ, ಬೂದಿಯ ಲವಲೇಶವೂ ಇಲ್ಲದಂತೆ ಮಾಡಿದ್ದಾರೆ. ಕೊಳೆ ಕ್ರಮೇಣ ಕಡಿಮೆಯಾಗತೊಡಗಿದೆ. ಹೌದು ಸರಿಯಾಗಿ ಹತ್ತು ವರ್ಷದ ಹಿಂದೆ ಯಾವ ಘಾಟಿನಲ್ಲೂ ನಾನು ಈಗಿನಂತೆ ಸರಾಗವಾಗಿ ಉಸಿರೆಳೆದುಕೊಂಡಿದ್ದು ನನಗೆ ಜ್ಞಾಪಕವಿಲ್ಲ. 
ದೇವಸ್ಥಾನದ ನೂರಾರು ಕೆ.ಜಿ. ಹೂವು ಹಣ್ಣುಗಳನ್ನು ನೇರವಾಗಿ ಸಂಸ್ಕರಣ ಕೇಂದ್ರಕ್ಕೆ ಸಾಗಿಸತೊಡಗಿದ್ದಾರೆ.. ಬಂದಂತಹ ಸಾವಿರಾರು ಜನರಿಗೆ ಕಸದ ಬುಟ್ಟಿ ಎದ್ದು ಕಾಣುತ್ತವೆ. ಯಾವ ಯಾತ್ರಿಯೂ ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜಿಸಿ ಅಸಹ್ಯ ಹುಟ್ಟಿಸುವುದನ್ನು ನಿರ್ಬಂಧಿಸಿದ್ದಾರೆ. ಶೌಚಾಲಯಗಳು ಲಭ್ಯವಿವೆ. ದಿನಕ್ಕೆ ಸಾವಿರಾರು ಜನ ಮೀಯುವ ಪ್ರದೇಶವನ್ನು ನಿರ್ದಿಷ್ಟ ಜಾಗಕ್ಕೆ ಸೀಮಿತಗೊಳಿಸಿ ಅಲ್ಲೆಲ್ಲಾ ನೀರು ಸ್ವಚ್ಚವಾಗಿ ನಿರಂತರ ಹರಿವಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಎಲ್ಲೆಂದರಲ್ಲಿ ನಿಲ್ಲುತ್ತಿದ್ದ ನೂರಾರು ರಾಸುಗಳು ಈಗ ಬೀದಿಯಲ್ಲಿ ಕಾಣಲೇ ಸಿಗುವುದಿಲ್ಲ. ಅವನ್ನೆಲ್ಲಾ ಒಂದೆಡೆಗೆ ನಿಲ್ಲಲು ಸ್ಥಳಾವಕಾಶ ಕಲ್ಪಿಸಲಾಗಿದೆ.
ಮೊದಲೆಲ್ಲಾ ಕಾಲಿಗೆ ಮೆತ್ತುತ್ತಿದ್ದ ಸೆಗಣಿ ದುರ್ನಾತದ ಬೀದಿ ತ್ಯಾಜ್ಯ ಇವತ್ತು ಎಲ್ಲಿಯೂ ಇಲ್ಲ. ನಗರಕ್ಕೆ ಸೂಕ್ತ ಚರಂಡಿ ಕಲ್ಪಿಸಿದ್ದಾರೆ ಹಾಗಾಗಿ ಕೆಸರು ಸರಿದು ಹೋಗುತ್ತಿದೆ. ಬೆಳಿಗ್ಗೆನೆ ದಾಳಿಯಿಟ್ಟು ಎಲ್ಲೆಂದರಲ್ಲಿ ಬಾಳೆಲೆ ಹರಡುತ್ತಿದ್ದ ಯಾತ್ರಿಗಳ ಬದಲಿಗೆ, ಸಣ್ಣ ಅಟೋರಿಕ್ಷಾಗಳವರೂ ಕೂಡಾ ಪ್ಲಾಸ್ಟಿಕ್ ಬದಲಿಗೆ, ಚಿಕ್ಕ ತಟ್ಟೆಯಲ್ಲಿ ಕೆಲಸ ಮುಗಿಸಲು ಮನವಿ ಮಾಡುತ್ತಾರೆ. ಚಹದ ಚಿಕ್ಕ ಮಡಕೆಗಳೀಗ ಕಾಲಿಗೆ ಅಡರುವುದಿಲ್ಲ. ಅಲ್ಲಲ್ಲಿ ಇರಿಸಿರುವ ತೊಟ್ಟಿಯನ್ನು ಸಿಬ್ಬಂದಿ ಖಾಲಿ ಮಾಡುತ್ತಿರುತ್ತಾರೆ. ಇದೆಲ್ಲದರ ಪರಿಣಾಮವಾಗಿ ಕಳೆದ ನೂರಾರು ವರ್ಷದಲ್ಲಿ ಆಗದ ಬದಲಾವಣೆ ಮೊದಲ ಬಾರಿಗೆ ನನಗೂ ಎದ್ದು ಕಾಣುತ್ತಿತ್ತು. ಬೆಳಗಿನ ಜಾವ ಗಂಗೆಯ ದಂಡೆಯ ಮೇಲೀಗ ತಣ್ಣಗಿನ ಗಾಳಿಗೆ ಕೆಲಹೊತ್ತು ಕೂರುವ ಮನಸ್ಸಾಗುತ್ತದೆ. ನೀರಿಗಿಳಿವ ಯಾವ ಯಾತ್ರಿಯೂ ಈಗ ನೀರಿಗೆ ಕೈಯಿಕ್ಕುವ ಮೊದಲು ಯೋಚಿಸುತ್ತಿಲ್ಲ.
ಪ್ರತಿ ದಿನ ಗಂಗೆಯ ಒಡಲು ಸೇರುತ್ತಿದ್ದ ಅರೆಬೆಂದ ಹೆಣಗಳ ಸಂಖ್ಯೆಯಲ್ಲೀಗ ಶೇ.90 ಇಳಿದಿದೆ. ವಿಶ್ವೇಶ್ವರ ದರ್ಶನ ಮತ್ತು ಅದಕ್ಕೂ ಮೊದಲಿನ ಪುಣ್ಯ ಸ್ನಾನ ಎರಡಕ್ಕೂ ಈಗ ಬಿಗಿಯಾದ ಸ್ವಚ್ಛತಾ ಕ್ರಮಗಳನ್ನು ಅನುಸರಿಸಲೇಬೇಕಿದ್ದುದರಿಂದ ಹಿಂದೆರಡು ಬಾರಿ ಗಂಗೆಗೆ ಬರೀ ಬೆರಳು ತಾಗಿಸಿ ಬಂದಿದ್ದ ನಾನು ಕೂಡಾ ಮೊದಲ ಬಾರಿ ತಲೆಮುಳುಗಿಸುತ್ತಾ ನೀರಿಗಿಳಿದಿದ್ದೆ. ಅತ್ಯಂತ ಜತನವಾಗಿ ದಂಡೆ ಮತ್ತು ಒಡಲು ಎರಡನ್ನೂ ಕಾಯುವ ಪೆÇೀಲಿಸ್ ಹಾಗು ಸ್ವಯಂ ಸೇವಕರ ಪಡೆ ಯಾತ್ರಿಕರ ಮನಸ್ಸು ಮತ್ತು ಮೈ ಕೊಳೆ ತೊಳೆಯಲು ಸಹಕರಿಸುತ್ತಿದ್ದುದು ಎದ್ದು ಕಾಣಿಸುತ್ತಿತ್ತು. ಅದರಿಂದ ಈಗ ಗಂಗೆಯ ಮೇಲೆ ಬಿದ್ದ ಬಿಸಿಲು ಮತ್ತೊಮ್ಮೆ ಬಂಗಾರದ ಕಿರಣಗಳಾಗಿ ಪ್ರತಿಫಲಿಸುತ್ತಿತ್ತು. ಪ್ರತಿದಿನ ಸಂಜೆಯ ಗಂಗಾರತಿಗೆ ಈಗ ಅಮೂಲ್ಯ ಸಮಯ ನಿಗದಿಯಾಗಿದೆ. 
ಸಾವಿರಾರು ಜನ ಶುದ್ಢಾನು ಶುದ್ಧ ಹಸ್ತದಿಂದ ದಂಡೆಯಲ್ಲಿ ಆರತಿ ಎತ್ತಿ, ನೀರನ್ನು ಕಣ್ಣಿಗೆ ಒತ್ತಿಕೊಳ್ಳುವಾಗ ಕೊಂಚ ಕೊಂಚವಾಗಿ ಬದಲಾಗುತ್ತಿರುವ ಶುದ್ಧ ಬದುಕಿನ ಬಗ್ಗೆ ಗಂಗೆ ಹುಮ್ಮಸಿನಿಂದ ಹರಿಯುತ್ತಿದ್ದಾಳೆ ಎನ್ನಿಸಿತ್ತು. ಯಾಕೆಂದರೆ  ಅಲ್ಲಲ್ಲಿ ಹಾಕಿದ್ದ ಹೋರ್ಡಿಂಗ್ಸು ತೋರಿಸುತ್ತಿದ್ದವು
ನಾನೀಗ ಬರೀ ಗಂಗೆಯಲ್ಲ.. 
ಕೊಳೆ ಕಳೆದುಕೊಂಡು. 
ಮೊದಲಿನಂತೆ ನನ್ನಲ್ಲಿ ಮಿಂದವರ ಪಾಪದ ಜತೆಗೆ ಮಲೀನವನ್ನೂ ತೊಳೆಯುವ... 
...ನಮಾಮಿ ಗಂಗಾ.. 
ಜಗತ್ತಿನಲ್ಲಿ ಮೋಕ್ಷ ಬಯಸುವ ಪ್ರತಿ ಯಾತ್ರಿಕನೆ. ಈಗ ಮತ್ತೊಮ್ಮೆ ವರಣಾಸಿ ಕರೆಯುತ್ತಿದೆ. 

Saturday, October 22, 2016

ತಲಾಕ್ ಗೆ ತಲಾಕ್ – ಮುಸ್ಲಿಂ ಮಹಿಳೆಯರ ಬ್ರಹ್ಮಾಸ್ತ್ರ 

( `ನಿನ್ನ ಗಂಡ ಇನ್ನೊಂದು ಮದುವೆ ಮಾಡಿಕೊಂಡರೆ ನಿನಗೆ ಪರವಾಗಿಲ್ಲೆನಮ್ಮಾ..?' ಎಂದು ಜಗತ್ತಿನ ಯಾವುದೇ ಹೆಣ್ಣುಮಗಳನ್ನು ಕೇಳಿನೋಡಿ. ಭಾಷೆ, ಗಡಿ ಖಂಡಗಳನ್ನು ಮೀರಿ ಆಕೆ ನಿಮ್ಮನ್ನು ರಪ್ಪನೆ ಬಾರಿಸದಿದ್ದರೆ ಪುಣ್ಯ. ಅದರಲ್ಲೂ ಜಗತ್ತಿನ ಯಾವ ಧರ್ಮವೂ ಇವತ್ತು ಹೆಣ್ಣುಮಗಳಿಗೆ ಅನ್ಯಾಯವಾಗುವುದನ್ನು ಆಕೆಯ ಭವಿಷ್ಯ ಬರ್ಬರಗೊಳ್ಳುವುದನ್ನು ಸಹಿಸುವುದೇ ಇಲ್ಲ. ಅದರಲ್ಲೂ ಜಗತ್ತಿನ ಅತ್ಯಂತ ಉದಾರ ಮತ್ತು ಮಾನವತಾವಾದಿ ಧರ್ಮದ ತಿರುಳು ಕೂಡಾ ಅಪೂಟು ಇದರ ವಿರುದ್ಧ ಇದೆ. ಆದರೆ ಎಲ್ಲೆಡೆಗೆ ಅಮರಿಕೊಂಡಿರುವ ಸ್ವಘೋಷಿತ ಬುದ್ಧಿಜೀವಿಗಳ ಕಿರಿಕ್ಕು ಜಗತ್ತಿನ ಯಾವ ಧರ್ಮವನ್ನೂ, ಜಾತಿಯನ್ನು ಸುಖವಾಗಿರಲು ಬಿಡುತ್ತಿಲ್ಲ ಎನ್ನಲು ಇದಕ್ಕಿಂತ ಉತ್ತಮ ಉದಾ. ಬೇಕೇ..? ಅಂದಹಾಗೆ ಭಾರತದಾದ್ಯಂತ ತೀವ್ರವಾಗಿ ಇದಕ್ಕೆ ತಿರುಗಿಬಿದ್ದಿರುವವರು ಹೆಣ್ಣುಮಕ್ಕಳೆ ಅದರಲ್ಲೂ ಮುಸ್ಲಿಂ ಮಹಿಳಾ ಸಂಘಟನೆಗಳು ಅಕ್ಷರಶ: ಬೀದಿಗಿಳಿದಿವೆ.)
ಜಾಗತಿಕವಾಗಿ ಮುಸ್ಲಿಂ ಪ್ರಾಬಲ್ಯ ಇರುವ ದೇಶಗಳು ಮತ್ತು ಅದನ್ನು ಧರ್ಮ ಹಾಗು ಮೆಜಾರಿಟಿಯನ್ನಾಗಿ ಒಪ್ಪಿಕೊಂಡಿರುವ ದೇಶಗಳ ಒಟ್ಟು ಸಂಖ್ಯೆ ಸರಿ ಸುಮಾರು 48. ಇಲ್ಲೆಲ್ಲಾ ಮುಸ್ಲಿಂ ಅವರವರದ್ದೇ ಷರಿಯತ್ ಕಾನೂನು ಮತ್ತು ಸುವ್ಯವಸ್ಥೆ ಇತ್ಯಾದಿ ನಡೆದುಹೋಗುತ್ತಿದೆ. ಅಲ್ಲೆಲ್ಲಾ ಆಯಾ ಪ್ರದೇಶಾನುಸಾರ ಅಲ್ಲಿನ ಸಂವಿಧಾನ ರಚಿಸಲಾಗಿದೆ. ಜನಗಳಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲವಾಗಿದ್ದು ವ್ಯವಸ್ಥೆ ವ್ಯವಸ್ಥಿತವಾಗಿ ಚಲಿಸುತ್ತಿದೆ. ಆದರೆ ತೀರ ಜನಾಂಗೀಯ ಬಾಹುಳ್ಯ ಹೊಂದಿದ್ದೂ, ಅಲ್ಪಸಂಖ್ಯಾತ ಸ್ಥಾನದಿಂದ ಬಹುಸಂಖ್ಯಾತ ವರ್ಗದತ್ತ ಜರುಗುತ್ತಿರುವ ಭಾರತೀಯ ಮುಸ್ಲಿಂರಲ್ಲಿನ ಕೆಲವೇ ಶೇ. ವಾರು ಹಿತಾಸಕ್ತಿಗಳ ವೈರುಧ್ಯ ನೋಡಿ. 
ಜಾಗತಿಕವಾಗಿ ಮಹಿಳೆಯರನ್ನು ಅತ್ಯಂತ ಗೌರವಿಸಬೇಕಾದ ಗೌರವದಿಂದ ನೋಡಿಕೊಳ್ಳಬೇಕಾದ ಧರ್ಮದ ಮುಖಂಡರಲ್ಲೇ ಕೆಲವರಿಗೆ ತೀರ ಅಮಾನವೀಯವಾದ ತಲಾಖ್ ಪದ್ಧತಿಯ ಈಗಲೂ ಬೇಕಿದೆ ಎಂದರೆ ಧರ್ಮದ ವಿರುದ್ಧ ಹೋಗುತ್ತಿರುವವರು ಯಾರು..? ಜಗತ್ತಿನ ಯಾವ ಮಹಿಳೆಗೂ, ಆಕೆಯ ಸಹೋದರರಿಗೂ, ಯಾವ ತಾಯಿಗೂ ಬೇಕಿಲ್ಲದ ಮುಲಾಜಿಲ್ಲದೇ ತಲಾಖ್ ಹೇಳುವ ಮತ್ತು ಅದರ ನಂತರದ ಅವಧಿಯ ಅಮಾನವೀಯ ಬರ್ಬರ ಭವಿಷ್ಯದ ಬಗೆಗೆ ತುರ್ತಾಗಿ ಕ್ರಮ ಕೈಗೊಂಡು ಮಹಿಳೆಯರ ಬದುಕನ್ನು ನೇರ್ಪುಗೊಳಿಸುವ ಕಾರ್ಯಕ್ಕೆ ಕೇಂದ್ರ ಸರಕಾರ ಮುಂದಾಗಿದ್ದರೆ ಇತ್ತ ಬುಡಕ್ಕೆ ಬೆಂಕಿಬಿದ್ದಂತಾಡುತ್ತಿರುವವರ ಬುದ್ಧಿಜೀವಿಗಳ ಹಿಂದಿನ ಅಸಲಿಯತ್ತು ಈಗ ಬಹಿರಂಗವಾಗುತ್ತಿದೆ. 
ಇವತ್ತು ಯಾರೇ ಒಬ್ಬ ಕರ್ಮಠ ಮುಸ್ಲಿಂನನ್ನು ನಿಲ್ಲಿಸಿ ಕೇಳಿ ನೋಡಿ. `ನಿನ್ನ ತಂಗಿಯೊಬ್ಬಳಿಗೆ ಹೀಗೆ ಇದ್ದಕ್ಕಿದ್ದಂತೆ ಮೂರು ಬಾರಿ ತಲ್ಲಾಖ್ ಹೇಳಿ ಸಂಸಾರ ಕಿತ್ತು ಹೋದರೆ ಪರವಾಗಿಲ್ಲವಾ..?' ಎಂದು. ಬರೀ ಮುಸ್ಲಿಂ ಅಲ್ಲ ಜಗತ್ತಿನ ಯಾವ ಸಹೋದರನೂ, ಅಪ್ಪನೂ, ಚಿಕ್ಕಪ್ಪನೂ ಕೊನೆಗೆ ಸ್ವಂತ ತಾಯಿಯೂ ತನ್ನ ಮಗಳ ಬದುಕಿನಲ್ಲಿ ಇಂತಹದ್ದೊಂದು ಅಪಸವ್ಯವನ್ನು ಸಹಿಸಲಾರರು. ಸ್ವತ: ಅವನೆಷ್ಟೇ ಅಪದ್ಧನಾಗಿದ್ದರೂ ತನ್ನ ಕುಟುಂಬದ ವಿಷಯಕ್ಕೆ ಬಂದಾಗ ಪ್ರತಿಯೊಬ್ಬನೂ ಆಕೆಯ ಬೆಂಬಲಕ್ಕೆ ಧಾವಿಸುವುದಕ್ಕೆ ಯಾವುದೇ ಧರ್ಮದ ಬೋದನೆಯೂ ಬೇಕೇ ಆಗಿಲ್ಲ. ಅವನು ಹಿಂದೂ, ಮುಸ್ಲಿಂ ಅಥವಾ ಜಗತ್ತಿನ ಕೊಟ್ಟ ಕೊನೆಯ ಮಂಗೊಲಿಯನ್ ಆಗಿರಲಿ, ಕೊನೆಗೆ ಕ್ರೆಟ್ಟ ಬುಡಕಟ್ಟಿನ ತೀರ ಹಿಂದುಳಿದ ಜನಾಂಗದ ಮೂಲನಿವಾಸಿಗಳೇ ಆಗಿರಲಿ. ಯಾರೊಬ್ಬರಿಗೂ ಕುಟುಂಬ ಎನ್ನುವ ಆಪ್ತತೆಯ ಆಚೆಗೆ ದುರ್ಬರವಾದ ಬದುಕು ಬೇಕೇ ಆಗಿಲ್ಲ. ಅದರಲ್ಲೂ ವಿಚ್ಛೇದನ ಮತ್ತು ಪುನರ್ವಸತಿಯಂತಹ ಹೀನಸುಳಿಯನ್ನು ಯಾವ ಧರ್ಮವೂ ನ್ಯಾಯಸಮ್ಮತವೆನ್ನಲು ಸಾಧ್ಯವೇ ಇಲ್ಲ. 
(ನಾವಿದನ್ನು ಕೊಂಚ ಬೆಂಗಳೂರು ಕೇಂದ್ರಿಕೃತ ವ್ಯವಸ್ಥೆಯ ಆಚೆಗೆ ನೋಡಬೇಕಿದೆ. ಕಾರಣ ಇವತ್ತು ಇಂಥಾ ಕಾಪೆರ್Çರೇಟ್ ಕಲ್ಚರ್‍ನ ನಗರದಲ್ಲಿ ಎಕಾಂಗಿಯಾಗಿ, ಬೇಕೆಂದಾಗ ಸಂಗಾತಿಯನ್ನು ಬದಲಿಸಲು, ಕರೆದುಕೊಳ್ಳಲು ಬಾಡಿಗೆಗೆ ಪ್ರತ್ಯೇಕ ಮನೆ ಹಿಡಿದು ಬದುಕುತ್ತಿರುವ ಹೆಂಗಸರಿಗೆ ಇಂಥಹದ್ದು ಪಥ್ಯವಾಗುವುದಿಲ್ಲ. ಅವರೆಲ್ಲಾ ಮಂಚೂಣಿಯಲ್ಲಿದ್ದೂ ಜಾಲತಾಣದಲ್ಲಿ ಸಕ್ರೀಯರಾಗಿದ್ದೂ ಮನಸ್ಸಿಗೆ ಬಂದಾಗೆಲ್ಲಾ ಒಬ್ಬೊಬ್ಬ ಸಂಗಾತಿಯನ್ನು ಹೊಂದುವ ಪ್ರಕ್ರಿಯೆಗೆ ತಮ್ಮ ಬದುಕು ಮತ್ತು ಖಾಸಗಿತನ ಎರಡನ್ನೂ ಒಡ್ಡಿಕೊಳ್ಳುತ್ತಿರುವಾಗ, ನಾಲ್ಕಾರು ವರ್ಷಕ್ಕೆ ಆರೆಂಟು ಸಂಗಾತಿಗಳು ಬದಲಾಗುವ ಹೊತ್ತಿಗೆ ಅಲ್ಲೇನಿರುತ್ತದೆ ಖಾಸಗಿತನ ಮುಚ್ಚಿಟ್ಟುಕೊಳ್ಳಲು. ಎಡ,ಬಲ ಎಲ್ಲಾ ಖಾಲಿ ಖಾಲಿ. ಬುಡಕ್ಕೊಂದು ಬಾಡಿಗೆ ಬುಲೆಟ್ಟು ಖರ್ಚು ನೋಡಿಕೊಳ್ಳಲೊಬ್ಬ ಎನ್ನುವದಷ್ಟೆ ಬದುಕಾಗಿರುತದೆ. ಹಾಗಾಗಿ ಇಂತಹ ಶೇ.ವಾರು ಮಹಿಳೆಯರನ್ನು ನಾವು ಸಮೀಕರಿಸಿ ಮಾತಾಡುವುದು ಬೇಡ. ಕೊಚ್ಚೆಗೆ ಕಲ್ಲೇಕೆ ಎಸೆಯಬೇಕು...? ನನ್ನ ಚರ್ಚೆ ಏನಿದ್ದರೂ ಪ್ರಜ್ಞಾವಂತ ಮಹಿಳೆ, ನಿಸ್ಸಾಹಯಕ ಸ್ತ್ರೀ ಸೇರಿದಂತೆ ಎಲ್ಲಾ ರೀತಿಯಲ್ಲೂ ಶೋಷಣೆಗೆ ಒಳಗಾಗುತ್ತಿರುವವರ ಕುರಿತು)
ಆದರೆ ಇಲ್ಲೇನಾಗುತ್ತಿದೆ ನೋಡಿ. ಯಾವ ಮಹಿಳೆಯನ್ನು ಇವತ್ತು ಜಗತ್ತಿನ ಅತ್ಯಂತ ಪವಿತ್ರ ಧರ್ಮದಲ್ಲಿ ಪೆÇೀಷಿಸಬೇಕು ರಕ್ಷಿಸಬೇಕು ಅಂದು ಬರೆಯಲಾಗಿದೆಯೋ ಅದನ್ನು ಕೆಲವರು ತಮಗೆ ತಿಳಿದಂತೆ ಅರ್ಥೈಸುತ್ತಿದ್ದಾರೆ. ಅಸಲಿಗೆ ಕೇಂದ್ರ ಸರಕಾರ ಇಲ್ಲಿ ಏಕರೂಪ ನಾಗರಿಕ ಕಾನೂನಿನ ಪ್ರಶ್ನೆಯನ್ನೇ ಎತ್ತಿಲ್ಲ. ಕೇವಲ ತ್ರಿವಳಿ ತಲಾಕ್ ಅದರ ಹಿಂದಿರುವ ಹಲಾಲ ಮತ್ತು ಹಿಂದೂ ಮೈತ್ರಿ ವಿವಾಹ, ಕ್ರಿಶ್ಚಿಯನ್ನರ ಮಹಿಳಾ ಹಕ್ಕುಗಳು ಹೀಗೆ ಹಲವು ರೀತಿಯ ಸುಧಾರಣಾ ಕಾಯ್ದೆಗಳಿಗಾಗಿ ಸುಪ್ರಿಂ ಕೋರ್ಟಿಗೆ ತನ್ನ ಅಫಿಡಾವೇಟ್ ಸಲ್ಲಿಸಿದೆ ಹೊರತಾಗಿ ಯಾವ ಧರ್ಮ ಅಥವಾ ವ್ಯಕ್ತಿ ಅಥವಾ ರಾಜಕೀಯ ಕೇಂದ್ರಿಕೃತ ಯುದ್ಧವಿದಲ್ಲವೇ ಅಲ್ಲ. ಆದರೆ ಎಲ್ಲ ಸಮಯದಲ್ಲೂ ರಾಜಕೀಯ ಕೀಳು ಮಾಡುವವರು ಇಲ್ಲೂ ಅದನ್ನೇ ಮಾಡುತ್ತಿದ್ದಾರೆ ಸರಿಯಾಗಿ ಅರ್ಥೈಸಿಕೊಳ್ಳದೆ ಅಲ್ಪಸಂಖ್ಯಾತರ ಭಾವನೆಗಳಿಗೆ ಇನ್ನಷ್ಟು ಅಜ್ರ್ಯ ಸುರಿಯುತ್ತಿದ್ದಾರೆ. 
ಇವತ್ತು ಭಾರತದಾದ್ಯಂತ ಈ ಬೇಡಿಕೆಯನ್ನು ಮೊದಲು ಬೆಂಬಲಿಸಿದ್ದೇ ಮುಸ್ಲಿಂ ಮಹಿಳಾ ಸಂಘಟನೆಗಳು. `ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಪುರುಷರ ದಬ್ಬಾಳಿಕೆಯ ಪೆÇಷಣೆ ಮಾಡುತ್ತಿದೆ ಅಲ್ಲದೆ ತನ್ನ ಅನುಕೂಲಕ್ಕೆ ತಕ್ಕಂತೆ ಷರಿಯತ್ ಕಾನೂನನ್ನು (ಷರಿಯತ್ ಕಾನೂನು ಅದೆಷ್ಟು ಎಂದರೆ ಮೊನ್ನೆ ಸೌದಿಯ ರಾಜಕುಮಾರನನ್ನೇ ಅಲ್ಲಿ ಗಲ್ಲಿಗೇರಿಸಲಾಗಿದೆ. ಷರಿಯತ್ತಿನ ಮೌಲ್ಯಗಳ ಎದುರಿಗೆ ಪ್ರತಿಯೊಬ್ಬನೂ ಸಮ ಎನ್ನುವ ಅಲ್ಲಿನ ಈ ಕೃತಿ ಜಾಗತಿಕವಾಗಿ ಪ್ರಶಂಶೆಗೊಳಗಾಗುತ್ತಿದೆ. ನೆನಪಿರಲಿ ಅದು ಷರಿಯಾ ಕಾನೂನು. ವೈಯಕ್ತಿಕ ಕಾನೂನು ಮಂಡಳಿಯ ಕಾಯ್ದೆಯಲ್ಲ)  ತಿರುಚುತ್ತಿದೆ ಎಂದು ಮುಸ್ಲಿಂ ಮಹಿಳಾ ಫೌಂಡೆಶನ್ ಅಧ್ಯಕ್ಷೆ ಹಾಗು ಪ್ರಸ್ತುತ ತ್ರಿವಳಿ ತಲ್ಲಾಖ್ ವಿರುದ್ಧ ಹೋರಾಡುತ್ತಿರುವ `ನಾಜ್ನಿನ್ ಅನ್ಸಾರಿ' ದೂರಿನ ಮೂಲಕ ಹೇಳಿಕೆ ನೀಡಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋದ ನಾಜ್ನಿ ಹೇಳಿಕೆ ನೀಡಿ `...ಹೆಣ್ಣು ಮಕ್ಕಳ ವಿಷಯದಲ್ಲಿ ಮಾತ್ರ ಮಹಿಳೆಯರ ಸ್ವತಂತ್ರ, ಹಕ್ಕಿನ ವಿಷಯ ಬಂದಾಗ ಷರಿಯತ್ ಕಾನೂನು ನೆನಪಾಗುವ ಮಂಡಳಿಗೆ ನಮ್ಮ ಮೇಲಾದ ಅತ್ಯಾಚಾರ ಅಥವಾ ಹತ್ಯೆ ಇನ್ನಾವುದೇ ರೀತಿಯ ಕೌಟುಂಬಿಕ ದೌರ್ಜನ್ಯಗಳಾದಾಗ ಯಾಕೆ ಪುರುಷರಿಗೂ ಷರಿಯತ್ ಕಾನೂನು ಅನ್ವಯಿಸುತ್ತಿಲ್ಲ..' ಎಂದು ಪ್ರಶ್ನಿಸಿದ್ದಾರೆ. 
ಕೇಂದ್ರ ಸರ್ಕಾರ ಸಿದ್ಧ ಪಡಿಸಿರುವ ಪ್ರಶ್ನಾವಳಿಗೆ ಸಂಬಂಧಿಸಿದಂತೆ ತ್ರಿವಳಿ ತಲಾಖ್ ಮತ್ತು ಬಹು ಪತ್ನಿತ್ವದ ವಿರುದ್ಧದ ಕಾನೂನಿನ ಪ್ರಶ್ನಾವಳಿಗಳನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿರಸ್ಕರಿಸುವ ಹೇಳಿಕೆಗೆ ಕಿಡಿಕಾರಿರುವ ನಾಜ್ನಿ `ತಮ್ಮಂತೆ ದೇಶಾದ್ಯಂತ ಇರುವ ಮಹಿಳಾ ಸಂಘಟನೆಗಳು ಅದಕ್ಕೆ ಧನಾತ್ಮಕವಾಗಿ ಅಭಿಪ್ರಾಯಗಳನ್ನು ತಿಳಿಸುವುದಾಗಿ' ಪ್ರಕಟಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಭಾರತೀಯ ಮಹಿಳಾ ಮುಸ್ಲಿಂ ಅಂದೋಲನದ' ನಾಯಕಿ `ಝಾಕೀಯಾ' ಕಾನೂನು ಇಲಾಖೆಯಿಂದ ಐವತ್ತು ಸಾವಿರ ಅಭಿಪ್ರಾಯ ಫಾರಂಅನ್ನು ನಾವು ತರಿಸಿಕೊಂಡು ಸಲ್ಲಿಸುತ್ತಿದ್ದೇವೆ ಇನ್ನಷ್ಟು ಫಾರಂಗಳಿಗೆ ಬೇಡಿಕೆ ಇಟ್ಟಿದ್ದೇವೆ ಎಂದಿದ್ದಾರೆ. ಹೀಗೆ ಇವತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಅದರಲ್ಲಿರುವ ಪುರುಷರ ನಾಯಕತ್ವಕ್ಕೆ ಮುಸ್ಲಿಂ ಸಮುದಾಯದ ನೊಂದ ಮತ್ತು ಬದಲಾವಣೆ ಬಯಸುತ್ತಿರುವ ಮಹಿಳೆಯರೆ ಲೀಡರ್‍ಗಳಾಗಿದ್ದಾರೆ.  
ಕಳೆದ ಆರು ದಶಕದಲ್ಲಿ ಮಹಿಳೆಯರಿಗೆ ಗಟ್ಟಿದನಿ ಒದಗಿಲಾಗದ ಹಿತಾಸಕ್ತಿಗಳಿಗೆ ತಿಕ್ಷ್ಣವಾಗಿ ಪ್ರತಿಕ್ರಿಯಿಸಿರುವ `ಭಾರತೀಯ ಮಹಿಳಾ ಮುಸ್ಲಿಂ ಅಂದೋಲನದ' ಉಪಾಧ್ಯಕ್ಷೆ ನಿಯಾಜ್ ನೂರ್ ಜಹಾನ್ ಸೋಫಿಯಾ `ಇದಕ್ಕೆ ರಾಜಕೀಯ ಬೆರೆಸಬೇಡಿ' ಎಂದಿರುವ ಹೇಳಿಕೆ ಜಾಗತಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. `ಅಲ್ಪ ಸಂಖ್ಯಾತರಲ್ಲೇ ನಾವು ಅಲ್ಪ ಸಂಖ್ಯಾತರು' ಎಂದಿರುವ ಸಾಲುಗಳು ಮುಸ್ಲಿಂ ಮಹಿಳೆಯರ ಸ್ಥಿತಿಗತಿಯನ್ನು ಬಿಂಬಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಇದಕ್ಕೆ ಕೋಮು ಬಣ್ಣ ಬೆರೆಸುವುದು ಬೇಡ ಎಂದು ಅವರು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಗೆ ಕಿವಿಹಿಂಡಿದ್ದಾರೆ. ಒಂದು ಗೊತ್ತಿರಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಷರಿಯತ್ ಕಾನೂನು ಒಂದೇ ಅಲ್ಲ. 
ಸುಪ್ರಿಂ ಕೋರ್ಟಿನೆದುರಿಗೆ ತೀರ ತಾರ್ಕಿಕವಾಗಿ ವಾದ ಮಂಡನೆಯಾಗಿದ್ದು ಶಾಯಿರಾಬಾನೋ ಕೇಸಿನಲ್ಲಿ. ಅದರ ಪ್ರಕಾರ ಮುಸ್ಲಿಂ ಕಾನೂನಿನಲ್ಲಿರುವ ತಲಾಕ್ ನಾಮಾ, ತಲಾಕ್-ಇ-ಬಿದ್ದತ್ ಮತ್ತು ನಿಖಾಹ್ ಹಲಾಲಾ ಪದ್ಧತಿಗಳನ್ನು ಆಚರಿಸುವುದರಿಂದ ಸಂವಿಧಾನದ ಅನುಚ್ಛೇದ 14-ಎಲ್ಲರೂ ಸಮಾನರು, 15-ಜಾತಿ, ಧರ್ಮ, ಲಿಂಗ ಆಧರಿಸಿದ ತಾರತಮ್ಯ ನಿಷೇಧ, 21- ವ್ಯಕ್ತಿಯ ವೈಯಕ್ತಿಕ ಬದುಕು ಮತ್ತು ಸ್ವಾತಂತ್ರ್ಯ ರಕ್ಷಣೆ...ಹೀಗೆ ಪೌರತ್ವದ ಹಕ್ಕುಗಳೇ ಮೌಲ್ಯ ಕಳೆದುಕೊಳ್ಳುತ್ತವಲ್ಲ...? ಹಾಗಿದ್ದಲ್ಲಿ ಸಂವಿಧಾನತ್ಮಕ ಹಕ್ಕಿಗೆ ಬೆಲೆ ಇಲ್ಲವೇ...? ಎಂಥಾ ಪ್ರಶ್ನೆ. 
ಇಸ್ಲಾಂನ ಷರಿಯತ್ ಮತ್ತು ಫಿಕಾಹ್ ಪ್ರಕಾರ ತಲ್ಲಾಖ್‍ಗೂ ಕೂಡಾ ತುಂಬ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ನಿಯಮಗಳಿವೆ. ಇದ್ದಕ್ಕಿದ್ದಂತೆ ಫೇಸ್‍ಬುಕ್ ಮೂಲಕ, ಮೊಬೈಲ್, ವಾಟ್ಸ್‍ಆಪ್ ಮೂಲಕ ಮೂರು ಬಾರಿ ತಲ್ಲಾಖ್ ಎಂದು ಗೊಣಗಿ ಸುಮ್ಮನಾಗುವಂತೆಯೇ ಇಲ್ಲ. ಅಪ್ಪಟ ಇಸ್ಲಾಂ ಇದನ್ನು ಪುರಸ್ಕರಿಸುವುದೇ ಇಲ್ಲ. ಮೆಹರ್ ಎನ್ನುವ ಒಪ್ಪಿತ ಸುರಕ್ಷಾ ನಿಧಿಯ ಕೊಡುಗೆ ಇಲ್ಲದೆ ತಲ್ಲಾಖ್ ಮಾಡುವಂತೆಯೇ ಇಲ್ಲ. ಮೆಹರ್ ಸಂಪೂರ್ಣ ಹೆಣ್ಣಿನ ಕೈ ಸೇರಿದ ಮೇಲಷ್ಟೆ ತಲ್ಲಾಖ್ ಪೂರ್ತಿಯಾಗುತ್ತದೆ ಎನ್ನುತ್ತದೆ ಷರಿಯಾ ಕಾನೂನು. ಆದರೆ ಇದನ್ನು ಪುರುಷ ದಬ್ಬಾಳಿಕೆಯ ಸಮಾಜದಲ್ಲಿ ಅನುಸರಿಸಲಾಗುತ್ತಿಲ್ಲ ಎನ್ನುವುದು ಮುಸ್ಲಿಂ ಮಹಿಳೆಯರ ಕೂಗಾಗಿದ್ದು, ತಲ್ಲಾಖ್‍ನಂತೆಯೇ `ಖುಲಾ' ಎನ್ನುವ ಅಧಿಕಾರ ಕೂಡಾ ಮಹಿಳೆಯರಿಗೆ ಇದೆ ಎನ್ನುವುದು ಎಷ್ಟು ಜನರಿಗೆ ಗೊತ್ತಿದೆ..? ಇದೆಲ್ಲದಕ್ಕೂ ಪ್ರಮುಖ ಕಾನೂನಾತ್ಮಕ ತೊಡಕಾಗಿರುವುದೆಂದರೆ ಬಾಕಿ ಸಮಾಜದಂತೆ ಮುಸ್ಲಿಂ ಸಮಾಜದಲ್ಲಿ ಮದುವೆ ಎನ್ನುವ ಸಂಪ್ರದಾಯವನ್ನು ರಿಜಿಸ್ಟ್ರಾರ್ ಕಚೇರಿಯಲ್ಲೂ ನೊಂದಣಿಯಾಗಿಸುವ ಪ್ರಕ್ರಿಯೆಯೇ ನಡೆಯುವುದಿಲ್ಲ. ಹಾಗಾಗಿ ಕಾನೂನಿನ ಮೊರೆ ಹೋಗಲೂ ಆಗದೆ ಮಹಿಳೆ ಒದ್ದಾಡುತ್ತಾಳೆ.
ಇದರ ಜತೆಗೆ ತಲ್ಲಾಖ್ ರದ್ದಾದರೆ ಅದರೊಂದಿಗೆ ಅಮಾನವೀಯ `ಹಲಾಲ' ಕೂಡ ನಿಸ್ತೇಜವಾಗುತ್ತದೆ ಎನ್ನುವುದೇ ಒಟ್ಟಾರೆ ತಿರುಳು. ಗಂಂಡನಿಗೆ ಮನಸ್ತಾಪ ಬಂದು ಇದ್ದಕ್ಕಿದ್ದಂತೆ ಆತ ಮೂರು ಬಾರಿ ತಲಾಕ್ ಹೇಳಿ ಬಿಡುತ್ತಾನೆ. ಕೆಲ ಸಮಯದ ಬಳಿಕ ಅವನಲ್ಲಿ ತಪ್ಪಿನ ಅರಿವಾಗಿ ವಾಪಸ್ಸು ನಾವೇ ಬದುಕು ನಡೆಸೋಣ ಎಂದರೆ ಅದಾದರೂ ಸುರಳಿತ ಆಗುತ್ತದೆ ಅದೂ ಇಲ್ಲ. ಅವನಾಗಲೇ ಅವಸರಕ್ಕೆ ಬಿದ್ದು ತಲ್ಲಾಕ್ ಅಂದಾಗಿಬಿಟ್ಟಿರುತ್ತದಲ್ಲ. ಮತ್ತೆ ಆಕೆಯೊಂದಿಗೆ ಸಂಸಾರ ಮಾಡಬೇಕಿದ್ದರೆ ಆಕೆ `ಇದ್ದತ್’ ನಲ್ಲಿರಬೇಕಾಗುತ್ತದೆ. ಅಂದರೆ ಸುಮಾರು ನೂರು ದಿನ ಕಾಲ ಆಕೆ ಕಾಯಬೇಕಾಗುತ್ತದೆ. ಅಷ್ಟು ಕಾದ ನಂತರವಾದರೂ ಪುನ: ಇಬ್ಬರೂ ಒಂದಾಗುತ್ತಾರಾ ಅದೂ ಇಲ್ಲ. ಆಕೆಯನ್ನು ಇನ್ನೊಬ್ಬನೊಂದಿಗೆ ನಿಕಾಹ್ ಮಾಡಿಕೊಡಬೇಕು. ಅಲ್ಲೂ ಆಕೆ ಸುಮಾರು ನೂರು ದಿನಗಳ ಕಾಲ ಸಂಸಾರ ಮಾಡಬೇಕು. ಹೀಗೆ ಅವನೊಂದಿಗಿದ್ದು ಅಲ್ಲೂ ಮತ್ತೊಮ್ಮೆ ತಲ್ಲಾಖ್ ಮಾಡಿಕೊಂಡ ಬಳಿಕ ಮೊದಲನೆಯ ಗಂಡನೊಡನೆ ಮತ್ತೆ ಸಂಸಾರಕ್ಕೆ ಮರಳಬಹುದು. ಅದ್ಯಾವ ಪರಿಯಲ್ಲಿ ಆಕೆಗೆ ಮಾನಸಿಕ ದೈಹಿಕ ಹಿಂಸೆಯಾಗಬಹುದು ಯೋಚಿಸಿ. ಈ ಕಾರಣಕ್ಕೇನೆ ಮುಸ್ಲಿಂ ಮಹಿಳೆಯರ ತಲ್ಲಾಕ್ ವಿರುದ್ಧದ ಕೂಗು ಬಲಗೊಂಡಿದ್ದು ಉಳಿದ `ಹಲಾಲ'ದಂತಹ ಪದ್ಧತಿಯನ್ನೂ ಕಿತ್ತುಹಾಕಲು ಹೋರಾಟಕ್ಕಿಳಿದಿದ್ದಾರೆ. 
1955 ರಲ್ಲಿ ಪ್ರಮುಖವಾಗಿ ಸುದ್ದಿಯಾಗಿದ್ದ ಪಾಕ್‍ನ ಮಹಮ್ಮದ ಅಲಿ ಬೋಗ್ರಾ ಪ್ರಕರಣದಲ್ಲಿ `ಅಖಿಲ ಪಾಕಿಸ್ತಾನ ಮಹಿಳಾ ಸಂಘಟನೆ' ಮಧ್ಯ ಪ್ರವೇಶಿಸಿ 1956 ರ ಹೊತ್ತಿಗೆ ಹೊಸ ಶಿಫಾರಸನ್ನು ಸೂಚಿಸಿತ್ತು. ಕೊನೆಗೂ 1961 ರಲ್ಲಿ ಇದು ಜಾರಿಯಾದರೆ, ನೆರೆಯ ಇನ್ನೊಂದು ಮುಸ್ಲಿಂ ರಾಷ್ಟ್ರ ಬಾಂಗ್ಲಾದೇಶ ಉದಯವಾಗುವಾಗಲೇ 1971 ರಲ್ಲಿ ಅದು ತಲ್ಲಾಖ್ ಪದ್ಧತಿಯನ್ನು ಕೈಬಿಟ್ಟಿತ್ತು. (ಇನ್ನುಳಿದ ಧಾರ್ಮಿಕ ಆಚರಣೆ ಮತ್ತು ಕುರಾನ್ ಉಲ್ಲೇಖಗಳು ಮುಂದಿನ ಭಾಗದಲ್ಲಿ - ಲೇ)
ಇದರ ಹಿನ್ನೆಲೆಯಲ್ಲಿ ದೇಶದ ಏಳು ಮಹಿಳಾ ಸಂಘಟನೆಗಳು ತಾವಾಗಿಯೇ ಈ ಕೇಸಿನಲ್ಲಿ ಮಧ್ಯ ಪ್ರವೇಶಿಸಿವೆ. ಒಟ್ಟಾರೆ ಜಾಗತಿಕವಾಗಿ ಯಾವ ದೇಶವೂ ಸುಲಭವಾಗಿ ಒಪ್ಪಲಾಗದ ತಲ್ಲಾಖ್‍ನಂತಹ ಅಮಾನವೀಯ ನಡೆಯನ್ನು ತಡೆದು ಮಹಿಳೆಯರಿಗೆ ಕಾನೂನು ಬದ್ಧವಾಗಿ ಪೌರತ್ವದ ಹಕುಗಳನ್ನು ರಕ್ಷಿಸುತ್ತಲೇ, ಮುಸ್ಲಿಂ ಧರ್ಮದ ಪ್ರಕಾರ ಸಂಪೂರ್ಣ ಸುರಕ್ಷತೆಯ ಬದುಕನ್ನು ನೀಡಲು ಕೇಂದ್ರ ಸರಕಾರ ಬದ್ಧವಾಗಿದ್ದು ಬಹುಶ: ಜಾಗತಿಕವಾಗಿ ಇಂತಹ ಇನ್ನೊಂದು ಉದಾ. ಇರಲಿಕ್ಕಿಲ್ಲ. ಯಾವ ಧರ್ಮದ ಬಗ್ಗೆ ಮತ್ತು ಜನಾಂಗದ ಬಗೆಗೆ ತೀವ್ರ ವೈಚಾರಿಕ ಭಿನ್ನಾಭಿಪ್ರಾಯಗಳಿವೆಯೋ ಅವರ ಮಹಿಳೆಯರ ಹಕ್ಕನ್ನು ಇವತ್ತು ರಕ್ಷಿಸಲು ಹೊರಟ ಸರಕಾರ, ಭವಿಷ್ಯದಲ್ಲಿ ತಾನೇ ಅಪಾಯಕ್ಕೆ ಸಿಲುಕಬಹುದಾದರೂ ಮಹಿಳೆಯರ ಔನತ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಇದಕ್ಕೆ ಕಾಲೂರಿನಿಂತಿರುವ ಮೋದಿಯಂತಹ ನಾಯಕ ಮತ್ತು ಧನಾತ್ಮಕ, ರಚನಾತ್ಮಕ ಸರಕಾರ ಎರಡೂ ಬಹುಶ: ಭಾರತಕ್ಕೆ ಭವಿಷ್ಯತ್ತಿನಲ್ಲಿ ಮತ್ತೆ ಸಿಗಲಿಕ್ಕಿಲ್ಲ. ಸರಿಯಾಗಿ ಭವಿಷ್ಯ ರೂಪಿಸಿಕೊಳ್ಳುವುದು ನಮಗೆ ಗೊತ್ತಿರಬೇಕಷ್ಟೆ.


ಕುರಾನ್ ಉಲ್ಲೇಖಗಳು...
ಈ ಲೇಖನ ಬರೆಯುವ ಹೊತ್ತಿಗೆ ಮುಸ್ಲಿಂ ಪಾಲಿನ ಪರಮೋಚ್ಛ ಗ್ರಂಥದ ಕೆಲವು ಸಾಲುಗಳು ನನಗೆ ನೆನಪಾಗುತ್ತಿವೆ. ಪವಿತ್ರ ಕುರಾನ್‍ನಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಗೌರವದ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 
ಗಂಡು ಹೆಣ್ಣುಗಳನ್ನು ಒಂದೇ ಜೀವದಿಂದ ಸೃಷ್ಟಿಸಲಾಗಿದೆ (4:1) 
ಸ್ತ್ರೀಯರನ್ನು ಬಲಾತ್ಕಾರವಾಗಿ ಪರಂಪರಾಗತ ಸಂಪತ್ತಿನಂತೆ, ಆಳ್ವಿಕೆಗೆ ಆಧೀನಗೊಳಿಸಿಕೊಳ್ಳುವುದು ಧರ್ಮ ಸಮ್ಮತವಲ್ಲ. (4:19)
ಪುರುಷರೇ ನಿಮಗೆ ಸ್ತ್ರೀಯರೂ, ಸ್ತ್ರೀಯರಿಗೆ ಪುರುಷರೂ ಪೆÇೀಷಾಕಿದ್ದಂತೆ (2:187)
ಸುಳ್ಳು ಅರೋಪ ಹೊರೆಸಿ, ಇನ್ನೊಬ್ಬಳನ್ನು ಮದುವೆಯಾಗುವ ಉದ್ದೇಶದಿಂದ ಕೊಡುವ ತಲ್ಲಾಖ್‍ಗೆ ಇಸ್ಲಾಂ ಅವಕಾಶ ಕೊಡುವುದಿಲ್ಲ. ವಿಚ್ಛೇದಿತ ಸ್ತ್ರೀಯ ಜೀವನೋಪಾಯವೂ ಅವನದೇ ಹೊಣೆ. ಇದು ದೈವಭಕ್ತರಾದ ಎಲ್ಲ ಮುಸ್ಲಿಂರ ಹೊಣೆಗಾರಿಕೆಯಾಗಿದೆ (2:241) 
ಹೀಗೆ ಮಹಿಳೆಯರ ಔನತ್ಯವನ್ನು ಎತ್ತಿ ಹಿಡಿಯುವ ಕುರಾನ್ ಇತ್ತಿಚಿನ ಬಹು ಪತ್ನಿತ್ವದ ವಿಷಯದಲ್ಲಿ ಅಪಾರ್ಥವನ್ನು ಪಡೆಯುತ್ತಿರುವಾಗ ಅದಕ್ಕೂ ಸಮಂಜಸ ಅಧಾರವನ್ನು ಕೊಟ್ಟಿದೆ. ಹೊರತಾಗಿ ಬೇಕಾಬಿಟ್ಟಿಯಾಗಿ ಇಸ್ಲಾಂ ಬಹು ಪತ್ನಿತ್ವವವನ್ನು ಹೊಂದಲು ಸೂಚಿಸಿದೆ ಎಂದಲ್ಲ. ಅದರ ವಿಶ್ಲೇಷಣೆ ಮುಂದಿನ ಭಾಗಗಳಲ್ಲಿ ಮಾಡಲಿದ್ದೇನೆ. ಅದಕ್ಕೆ ಸಂಬಂಧಿಸಿದ ಕುರಾನ ಸೂಕ್ತಿಯೊಂದು ಇಲ್ಲಿದೆ. 
ಬಹು ಪತ್ನಿಯರಿದ್ದಾಗ ಅವರ ನಡುವೆ ಸಮಾನ ನ್ಯಾಯ ಪಾಲಿಸಲು ನಿಮ್ಮಿಂದ ಸತತ ಪ್ರಯತ್ನದ ನಂತರವೂ ಸಾದ್ಯವಾಗದು. ಆಗ ನೀವು ಯಾರೊಬ್ಬಳ ಕಡೆಗೆ ವಾಲಿಕೊಂಡು ಇನ್ನೊಬ್ಬಳನ್ನು ನಿಸ್ಸಾಹಯಕ ಸ್ಥಿತಿಯಲ್ಲಿ ಬಿಡುವಂತಿಲ್ಲ (4:129) - ಬಹು ಪತ್ನಿತ್ವವನ್ನು ಸಮರ್ಥಿಸಿಕೊಳ್ಳಲು ಇತಿಹಾಸದಲ್ಲಿ ನಡೆದ ಘಟನೆಗಳು ಕಾರಣವಾಗಿದ್ದವು ಮತ್ತು ಅನಿವಾರ್ಯವಾಗಿತ್ತಾದರೂ ಅಲ್ಲೂ ಮಹಿಳೆಯರ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು. 

ಭಾರತೀಯ ಮುಸ್ಲಿಂ ಮಹಿಳಾ ಆಂದೊಲನ್... 
ಈ ಸಂಸ್ಥೆ ನಡೆಸಿರುವ ಸಮೀಕ್ಷೆ ತುಂಬಾ ಆಸಕ್ತಿಕರವಾದ ಅಂಶಗಳನ್ನು ಎತ್ತಿ ಹಿಡಿದಿದೆ.
ಶೇ. 92 ರ ಷ್ಟು ಭಾರತೀಯ ಮಹಿಳೆಯರು ಮೌಖಿಕ ತಲಾಖ್ ರದ್ದತಿ ಬಯಸುತ್ತಿದ್ದಾರೆ.
ಶೇ. 50. ಕ್ಕೂ ಹೆಚ್ಚು ಮಹಿಳೆಯರು 18 ತುಂಬುವ ಮೊದಲೇ ನಿಖಾಹ್‍ಕ್ಕೊಳಗಾಗುತ್ತಾರೆ ಮತ್ತು ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರೇ ಆಗಿದ್ದಾರೆ.
ಷರಿಯಾ ಅದಾಲತ್ ಗೆ ಬರುವ ಶೇ.80 ಕೇಸುಗಳ ಮೌಖಿಕ ತಲ್ಲಾಖ್‍ಗೆ ಸಂಬಂಧಿಸಿರುತ್ತವೆ.(2014 ರ ಮಾಹಿತಿ)
ಶೇ.97 ರ ಷ್ಟು ಮಹಿಳೆಯರು ತಮ್ಮ ಗಂಡನ ಎರಡನೆ ಮದುವೆಯನ್ನು ಸುತಾರಾಂ ಒಪ್ಪುವುದಿಲ್ಲ.
ಸಮೀಕ್ಷೆಯ ಶೇ.83. ರಷ್ಟು ಮಹಿಳೆಯರಿಗೆ ಯಾವುದೇ ಸ್ವತ: ಆದಾಯವಿಲ್ಲ. ಹೆಚ್ಚಿನವರು ಗೃಹಿಣಿಯರು.






















Saturday, October 15, 2016

" ಚೀನಾ ಮತ್ತೊಂದು ಸುತ್ತಿನ ತಯಾರಿಯಲ್ಲಿದೆಯೇ..?  "  


( ಹಿಂದೊಮ್ಮೆ ನಾವು ಹೀಗೆ ಮೈ ಮರೆತಿದ್ದೇವು ಎನ್ನುವುದಕ್ಕಿಂತಲೂ ಅದು ನಮ್ಮ ನಂಬಿಕೆಗೆ ಆದ ಆಘಾತವಾಗಿತ್ತು. ಮತ್ತದರಿಂದಾಗೇ ಇತ್ತ ಪಿ.ಓ.ಕೆ ಆದಂತೆ ಅತ್ತ ಸಿ.ಓ.ಕೆ ಉಧ್ಬವವಾಯಿತು. ಈಗಲೂ ನಮ್ಮ ಈಶಾನ್ಯ ಭಾರತದ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳುವುದು ಸಾಧ್ಯವಿಲ್ಲವಾದರೂ, ಪ್ರಸ್ತುತ ಪ್ರಧಾನಿಯವರು ಜಾಗತಿಕವಾಗಿ ಭಾರತಕ್ಕೆ ದಕ್ಕಿಸಿಕೊಟ್ಟಿರುವ ಬಧ್ರತೆಯಿಂದ ಗಡಿಯ ಸಮಸ್ಯೆ ನಿರಾಳ ಅನ್ನಿಸುತ್ತದೆ. ಆದರೆ ಅನಗತ್ಯ ಇನ್ವೆಸ್ಟಮೆಂಟ್‍ನ್ನು ಯಾವ ಸರಕಾರವೂ ಮಾಡಲಾರದು ಎನ್ನುವುದನ್ನೂ ಗಮನಿಸಲೇಬೇಕಿದೆ. ಅದು ಹೌದೇ ಆಗಿದ್ದರೆ ಅದರ ಪರೋಕ್ಷ ಯೋಜನೆ ಬೇರೆಯದ್ದೇ ಆಗಿರುತ್ತದೆ ಎನ್ನುವುದು ಶತ:ಸಿದ್ಧ )

ನಾವು ಕಳೆದ ಸ್ವತಂತ್ರೋತ್ಸವದ ಸಂಭ್ರಮದಲ್ಲಿದ್ದಾಗ ಅತ್ತ ನಮ್ಮ ಈಶಾನ್ಯ ರಾಜ್ಯದ ಸಿಕ್ಕಿಂ ಗಡಿಯಲ್ಲಿ ಸದ್ದಿಲ್ಲದೆ  ಟಿಬೆಟ್‍ನ ರಾಜಧಾನಿ ಲಾಸಾದಿಂದ ಶೀಗಾಛೆವರೆಗೆ, 131 ಶತಕೋಟಿ ವೆಚ್ಚದಲ್ಲಿ, 253 ಕಿ.ಮಿ. ಉದ್ದದ ರೈಲು ಸಂಪರ್ಕ ನಿರ್ಮಿಸಿಕೊಂಡು ಚೀನಾ ತನ್ನ ಮೊದಲ ವ್ಯಾಗನ್ ಓಡಿಸಿದೆ. ತೀರಾ ಕಳವಳಕಾರಿ ಎಂದ್ರೆ ಚೀನಾ ನಿರ್ಮಿಸಿರುವ ಈ ದಾರಿ ನಮ್ಮ ಸಿಕ್ಕಿಂ ರಾಜ್ಯದ ಗಡಿಗೆ ಹೊಂದಿಕೊಂಡಿದ್ದರೆ, ಆತ್ತ ಕಡೆಯಿಂದ ಸಂಚರಿಸಲಿರುವ ಆ ದಾರಿಯಲ್ಲಿ ಇರುವ ಒಟ್ಟಾರೆ ಜನಸಂಖ್ಯೆ ಎರಡು ಲಕ್ಷ ಕೂಡಾ ದಾಟುವುದಿಲ್ಲ. 253 ಕಿ.ಮೀ. ಉದ್ದದ ಹಳಿಯನ್ನು ಯಾವ ಸರಕಾರವೂ ಕೇವಲ ತನ್ನ ಎರಡೂ ಚಿಲ್ರೆ ಲಕ್ಷ ಜನ ಸಂಪರ್ಕಕ್ಕಾಗಿ ನಿರ್ಮಿಸುವುದಿಲ್ಲ ಎನ್ನುವುದೇ ಹುಬ್ಬೇರಿಸುವ ವಿಷಯ.
ಯಾವ ದೇಶವೂ ದಾರಿಯುದ್ದಕ್ಕೂ ಹಳ್ಳಿ ಹಳ್ಳಿಗಳಲ್ಲಿ ನೂರು ಸಾವಿರ ಎಂದಿರುವ ಲೆಕ್ಕದ ಜನಸಂಖ್ಯೆಗಾಗಿ ನೂರು ಚಿಲ್ರೆ ಶತಕೋಟಿ ಲೆಕ್ಕದಲ್ಲಿ ರೈಲು ನಿಲ್ದಾಣ ನಿರ್ಮಿಸಲಾರದು. ಅದೂ ಕೂಡಾ ಅಂತರಾಷ್ಟ್ರೀಯವಾಗಿ ವಿವಾದಾತ್ಮಕವಾಗಿರುವ ಪ್ರದೇಶದಲ್ಲಿ. ಆದರೆ ಚೀನಾ ಇಂತಹದ್ದೊಂದು ದಾರಿ ನಿರ್ಮಿಸಿದ್ದಲ್ಲದೆ ಸಧ್ಯದಲ್ಲೇ ಲಡಾಖ್‍ವರೆಗೂ ವಿಸ್ತರಿಸಲಿರುವ ಅದರ ರೈಲು ಜಾಲದಲ್ಲಿ ಸಂಪೂರ್ಣ ನಮ್ಮ ಈಶಾನ್ಯ ರಾಜ್ಯಗಳ ಗಡಿಯನ್ನು ಮತ್ತು ಸುಲಭವಾಗಿ ಲಡಾಕ್ ಸಂಪರ್ಕವನ್ನು ತಲುಪುವ ನೀಲ ನಕ್ಷೆ ಪೂರ್ಣಗೊಳಿಸಲು ಅದರ ಎದುರಿಗಿರುವ ಸಮಯ ಇನ್ನು ಕೇವಲ ಆರು ವರ್ಷ ಮಾತ್ರ ಬಾಕಿ ಇದೆ. ಕಾರಣ ಬರಲಿರುವ 2021 ಕ್ಕೆ ಚೀನಾ `ಧೋಗ್ಲಾ ಪೆÇಸ್ಟ್ ಕಾರ್ಯಾಚರಣೆ' ಮಾಡಿ ತವಾಂಗ್‍ನ್ನು ವಶಪಡಿಸಿಕೊಂಡು ಸರಿಯಾಗಿ ಆರು ದಶಕ ಕಳೆದಿರುತ್ತದೆ. ಅಂದರೆ ಚೀನಾ ದೂರದೃಷ್ಠಿ ಏನಿರಬಹುದು..? ಹಿಂದೊಮ್ಮೆ ಹೀಗೆ ತವಾಂಗ್ ಮೇಲೆ ಹತ್ತಿ ಇಳಿದು ಕಿತ್ತು ಹೋದ ಬಿದಿರು ಸೇತುವೆಗಳನ್ನು ರಕ್ಷಿಸಿಕೊಳ್ಳಲು ಹೋದ ನಮ್ಮವರನ್ನು ಹುಳುಗಳಂತೆ ಹೊಸಕಿದರೂ, ಚೀನಿಯರಿಗೆ ನಿರೀಕ್ಷಿತ ನೆಲ ಮತ್ತು ಜಲದ ಗಡಿ ಎರಡೂ ದೊರಕಿಲ್ಲ. ಈ ಬಾರಿ ಹಾಗಾಗಲಾರದು ಮತ್ತು ಆಗಲೂ ಬಾರದು ಎನ್ನುವುದೇ ಅವರ ಉದ್ದೇಶವಿರಬಹುದು. ಅದಕ್ಕಾಗೇ ಅದು ಭದ್ರವಾಗಿರುವ ನಮ್ಮ ಬೇಲಿಯ ಗುಂಟ ರಾಕ್ಷಸ ಗಾತ್ರ ರೈಲು ದಾರಿ ಏಳೆದಿದೆ. 
ಈಗ ಶೀಗಾಛೆವರೆಗೆ ಓಡುತ್ತಿರುವ ರೈಲಿನ ಉದ್ದೇಶ ಮಿಲಿಟರಿಗೆ ಅನುಕೂಲ ಬಿಟ್ಟರೆ ಬೇರೆನೂ ಇಲ್ಲವೇ ಇಲ್ಲ. ಕಾರಣ ಅದು ದಶಕಗಳ ಹಿಂದೆಯೂ (1965 ರ ಸುಮಾರಿಗೆ) ಚೀನಾ ಅತೀವ ಬಿರುಸಿನ ವಾತಾವರಣ ವೈಪರಿತ್ಯದಲ್ಲೂ ರಸ್ತೆ ನಿರ್ಮಿಸಿತ್ತಲ್ಲ ಆಗಲೂ ಅದಕ್ಕೆ ಕಾರಣಗಳೇ ಇರಲಿಲ್ಲ. ಈಗಲೂ ಶೀಗಾಛೆಯಿಂದ ಲಡಾಖ್ ಸಂಪರ್ಕ ಮಾತ್ರ ಬಾಕಿ. ಆಗ ಭಾರತದ ಮತ್ತು ಭೂತಾನ್ ಸೇರಿದಂತೆ ಅದರ ಅಷ್ಟೂ ಗಡಿಯುದ್ದಕ್ಕೂ ಸರಾಗವಾಗಿ ಕೇವಲ ನಾಲ್ಕು ಗಂಟೆಯಲ್ಲಿ ಬೇಕಾದ ಯುದ್ಧ ಸಾಮಗ್ರಿ ರಾಜಧಾನಿ ಕೇಂದ್ರದಿಂದ ರವಾನೆಯಾಗಬಲ್ಲದು. ಈಗಿನ ಶೀಗಾಛೆ ರೈಲು ಸಿಕ್ಕಿಂ ಗಡಿ ತಲುಪಲು ಸಹಾಯ ಮಾಡಿದರೆ, ಈಗಾಗಲೇ ನಿರ್ಮಿಸಿರುವ ಹೆದ್ದಾರಿ ಆ ಕಡೆಯ ಧೊಗ್ಲಾ ರಿಡ್ಜ್‍ವರೆಗೂ ಸುವಿಶಾಲವಾಗಿದೆ.
ಇನ್ನು ಕಾರಾ ಕೋರಮ್ ಹೈವೆಯ ಪಕ್ಕದಲ್ಲೇ ಚೀನಿಯರಿಗೆ ಸಲೀಸಾಗಿ ಚಲಿಸಲು ಈಗಾಗಲೇ ವಶಪಡಿಸಿಕೊಂಡಿರುವ ಸಿ.ಓ.ಕೆ ಇದೆ. ಅಲ್ಲೊಂದು ಕಾರಿಡಾರ್ ನಿರ್ಮಿಸಿಕೊಂಡು ಬಿಟ್ಟರೆ ಭಾರತೀಯ ಆರ್ಮಿಯ ಮೇಲೆ ಕಣ್ಣಿಡುವುದು ಮತ್ತು ನಿಯಂತ್ರಣ ಎರಡೂ ಸುಲಭ. ಈ ಕಾರಾಕೋರಮ್ ಹೈವೆಯ ಕೊನೆಯ ಹಳ್ಳಿಯಾದ ನುಬ್ರಾ ವ್ಯಾಲಿಯ ಪ್ರದೇಶ ಇತ್ತಿಚಿನವರೆಗೆ ಜನ ಸಂಪರ್ಕಕ್ಕೇ ತೆರೆದೇ ಇರಲಿಲ್ಲ. ನಾನು ಕಳೆದ ವರ್ಷ ಗಡಿ ಮುಟ್ಟಿ `ಸೊಮ್ಡೊ ಟಾಪ್' ಹತ್ತುವ ತಯಾರಿಯಲ್ಲಿದ್ದಾಗ, ಅಕಸ್ಮಾತಾಗಿ ಭೇಟಿಯಾದ ಐ.ಟಿ.ಬಿ.ಪಿ.ಯ ಸ್ನೇಹಿತ ಆ ತುದಿಗೆ ನನ್ನನ್ನು ಕರೆದೊಯ್ದು ನಿಲ್ಲಿಸಿ ಧನ್ಯವಾಗಿಸಿದ್ದ. ಆ ಕಡೆಯಲ್ಲಿ ಹಾರಲು ಸಿದ್ಧವಾದ ಮಂಗನಂತೆ ಚೀನಿಯರು ಕೆಂಪು ಮುಖದ ಕಿರಿಗಣ್ಣು ಕಾಯಿಸುತ್ತಾ ಗಡಿ ಕಾಯುತ್ತಿದ್ದರು. ಅವರು ಹಲ್ಕಿರಿದರೆ ನಗುತ್ತಿದ್ದರೋ ಬೈಯ್ಯುತ್ತಿದ್ದರೋ ಎರಡೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗಲೂ ಚಾಂಗ್ಡಾನ ಮುಕ್ಕಾಲು ಭಾಗದಲ್ಲಿ ನೀರ ಮೇಲೆ ತೇಲು ತೆಪ್ಪ ಹಾಕಿಕೊಂಡೇ ಚೀನಿಯರು ಸರಹದ್ದು ಕಾಯುವ ಪರಿಯಿದೆಯಲ್ಲ, ಆ ವಿಷಯದಲ್ಲಿ ಮಾತ್ರ ಅವರಿಗಿರುವ ಡೆಡಿಕೇಶನ್ನು ಮತ್ತು ಸರಹದ್ದಿನ ಬಗ್ಗೆ ಅವರಿಗಿರುವ ಮೋಹ ಅಧ್ಭುತ.
ಇತ್ತ ಶೀಗಾಛೆ ರೈಲು ನಿಲ್ದಾಣದಿಂದ, ತೀರಾ ದುರ್ಗಮ ಕಣಿವೆÂಯಲ್ಲಿರುವ "ಯಡೊಂಗ್" ವರೆಗೂ ಹೆದ್ದಾರಿಯನ್ನು ಸದ್ದಿಲ್ಲದೆ ಮಾಡಿಕೊಂಡು ಕೂತಿರುವ ಚೀನಾ ಶೀಗಾಛೆಯಿಂದ ಯಡೊಂಗ್‍ವರೆಗಿನ ದಾರಿಗಾಗಿ ಮಾಡಿರುವ ಕೋಟ್ಯಾಂತರ ಖರ್ಚಿಗೆ ದಾರಿಯಲ್ಲಿ ಯಾವೊಂದು ಊರೂ ಇಲ್ಲದಿರುವುದು ಸೋಜಿಗ. ಯಾರ ಹಿತಕ್ಕೂ ತನ್ನ ಯಾವ ನಾಗರಿಕನಿಗಾಗಿಯೂ ಸರಕಾರ ಇಲ್ಲಿ ರೈಲು ದಾರಿ ನಿರ್ಮಿಸಿಲ್ಲ ನೆನಪಿರಲಿ. ಸುಮ್ಮನೆ `ಗಂಭಾ' ಎನ್ನುವ ನಾಲ್ಕು ಮನೆಗಳಿರುವ ಒಂದು ಊರು ಬಿಟ್ಟರೆ "ಯಡೊಂಗ್" ವರೆಗಿನ ದಾರಿಯಲ್ಲಿ ನೇರವಾಗಿ ಸಿಕ್ಕುವ `ಭಿನಾಗ್ಜೇ ಮತ್ತು ಕಂಗಾಮ್’ ಹೇಳಿಕೊಳ್ಳುವಂತಹ ಊರುಗಳೇ ಅಲ್ಲ. ಶೀಗಾಛೆಯಿಂದ ಈ ಯಡೊಂಗ್ ಅಪ್ಪಟ ಕಣಿವೆಯ ದುರ್ಗಮ ಪ್ರದೇಶ. ಮಾನವ ಅಲ್ಲ ಯಾವ ಪ್ರಾಣಿಯೂ ಬದುಕದ ವೈಪರಿತ್ಯಗಳ ಪರಿಸರ ಅಲ್ಲಿದೆ. ಈ `ಗಂಭಾ' ಕೂಡಾ ಇನ್ಯಾವುದೋ ದಿಕ್ಕಿನಲ್ಲಿದೆ.
ಇಂಥಾ ದುರ್ಗಮ ಕಣಿವೆಯಲ್ಲಿ "ಯಡೊಂಗ್" ಪಾಯಿಂಟ್‍ಗೆ ದಾರಿ ನಿರ್ಮಿಸಿರುವ ಕಾರಣ, ಅಲ್ಲಿಂದ ಚೀನಿ ಸೈನಿಕ ಓಡಲು ಶುರು ಮಾಡಿದರೆ ಎಲ್ಲೂ ನಿಲ್ಲದೆ ತನ್ನ ಲಗೇಜು ಸಮೇತ ನಮ್ಮ ಗ್ಯಾಂಗ್‍ಟಾಕ್‍ಗೆ ಬಂದು ನಿಲ್ಲಬಹುದು. ಹೇಗಿದೆ ಲೆಕ್ಕಾಚಾರ...? ಅಲ್ಲಿಗೆ ಚೀನಾ ರಾಜಧಾನಿಯಿಂದ ಸೈನಿಕನೊಬ್ಬ ಸಕಲ ಸರಂಜಾಮುಗಳೊಂದಿಗೆ ಕೇವಲ ಐದು ಗಂಟೆಯೊಳಗೆ ನಮ್ಮ ಗಡಿ ಸವರಿಕೊಂಡು ಬರಬಲ್ಲ. ಇದೇ ಕಳವಳಕ್ಕೆ ಕಾರಣವಾಗಿರೋದು. ಕಾರಣ ಯಾವ ಉಪಯೋಗ ಇಲ್ಲದ ಕಣಿವೆಯಲ್ಲಿ ಚೀನಾ ರಸ್ತೆ ರೈಲು ನಿರ್ಮಿಸುತ್ತಿದೆ ಅಂಥದ್ದೊಂದು ಉಸಾಬರಿಯನ್ನು ಯಾಕಾದರೂ ಮಾಡುತ್ತಿದೆ...? 
ಇಲ್ಲಿ ಆಗಿನ ಭೌಗೋಳಿಕ ಸ್ಥಿತಿ ಕೊಂಚ ಅರಿವಾಗಬೇಕು. ಪರ್ವತಗಳ ಗುಂಪೆÇಂದನ್ನು ಊಹಿಸಿಕೊಳ್ಳಿ. ಅದರ ಸೆರಗಿನಲ್ಲೇ ಜಾಗ ಸಿಕ್ಕರೆ ಅದೇ ಕಾಲ್ದಾರಿ. ಒಂದೊಂದನ್ನೂ ಹತ್ತಿ ಇಳಿಯಲು ಒಂದೊಂದು ದಿನ ಬೇಕೇ ಬೇಕು. ಆವತ್ತು ಇದ್ದ ಏಕೈಕ ಊರು `ತೊಸೊಮ್'ನ್ನು ನಮ್ಮವರೇ ಖಾಲಿ ಮಾಡಿಸಿ, ಅವರನ್ನೆಲ್ಲಾ ಒಯ್ದು `ತವಾಂಗ್' ನ ಕೆಳಗೆ ಬಿಟ್ಟು ಬಂದಿದ್ದರು. ಇಂಥಾ ಪರ್ವತದ ಗುಂಪಿನಲ್ಲಿ ಶೀತ ಮಾರುತ ತಡೆಯುವ ಇನ್ನು ಎತ್ತರದ ಒಂದು ಪರ್ವತ ಇದೆ. ಅದರ ಮೇಲೆ ಬೀಡು ಬಿಟ್ಟಿರುವ ಚೀನಿ ಸೈನಿಕನಿಗೆ ಇಲ್ಲಿ ನಡೆಯುವುದೆಲ್ಲವೂ ನೇರಾನೇರ ದರ್ಶನ ಮತ್ತು ನೈಸರ್ಗಿಕ ರಕ್ಷಣೆ ಬೇರೆ. ಇಲ್ಲಿ ಗಡಿ ಎನ್ನುವುದು ಇಲ್ಲವೇ ಇಲ್ಲ. ಇದ್ದರೂ ಅದನ್ನು ರಕ್ಷಿಸಿಕೊಳ್ಳುವುದು ಎರಡೂ ಕಡೆಯವರಿಗೆ ಅಸಾಧ್ಯವೇ. ಹಿಮ, ಶೀತ ಮಾರುತ, ಆಹಾರ ಇಲ್ಲದ ಪರಿಸ್ಥಿತಿಯಲ್ಲಿ ಆಮ್ಲಜನಕದ ಕೊರತೆಯಲ್ಲಿ ಬಡಿದಾಡಬೇಕು. ಇಂಥಾ ಜಾಗದಲ್ಲಿ ಕೇವಲ ಬಾಟಲಿ ನೀರು, ಕಿತ್ತು ಹೋದ ಕಾಲು ಚೀಲದೊಂದಿಗೆ ಎಣಿಸಿದರೆ ನಾಲ್ಕು ಸುತ್ತಿಗೂ ಬಾರದ, ಸರಿಯಾಗಿ ಹಾರದ ಗುಂಡುಗಳ ಸಮೇತ ನಮ್ಮ ಸೈನಿಕ ಅದಿನ್ನೆಷ್ಟು ಹೊತ್ತು ಕುಳಿತಾನು ಇಲ್ಲಿ ಸರಹದ್ದು ಕಾಯ್ದುಕೊಳ್ಳಲು. 
ಈಗಲೂ ತವಾಂಗ್ ತಲುಪಲೇ ದಿನವೀಡಿ ಚಲಿಸಬೇಕಾಗುತ್ತದೆ. ಕಾರಣ ಆ ರಸ್ತೆಯಲ್ಲಿ ಈಗಲೂ ಗಂಟೆಗೆ 25. ಕಿ.ಮೀ. ಜಾಸ್ತಿ ಹೋಗಲು ಸಾಧ್ಯವಿಲ್ಲ. ರಸ್ತೆ ಎನ್ನುವುದು ಹೆಸರಿಗೆ ಮಾತ್ರ. ಅಂಥಾ ಸ್ಥಳಕ್ಕೆ ಚೀನಿಯರು ಮಾತ್ರ ತೀರ ಸಲೀಸಾಗಿ ನಡೆದು ಬಂದಿದ್ದರಲ್ಲದೆ ಅನಾಮತ್ತು ಆರು ಸಾವಿರದಷ್ಟಿದ್ದ ಸೈನ್ಯವನ್ನು ಅಲ್ಲಿ ಜಮೆ ಮಾಡಿಕೊಂಡು ತಿಂಗಳು ಕಾಲಕ್ಕೆ ಬೇಕಾಗುವಷ್ಟು ದಿನಸಿಯಿಂದ ಹಿಡಿದು ಮದ್ದು ಗುಂಡಿನ ಸಂಗ್ರಹವನ್ನು ಅತ್ಯಂತ ಕರಾರುವಾಕ್ಕಾಗಿ ಮಾಡಿಕೊಂಡಿದ್ದರು. 
ಈ ಈಶಾನ್ಯ ರಾಜ್ಯಗಳದ್ದು ಇನ್ನೂ ಒಂದು ಸಮಸ್ಯೆ ಇದೆ. ಅದೆಂದರೆ ಎಳೂ ರಾಜ್ಯಗಳೂ ಸೇರಿ ನಾಲ್ಕು ರಾಷ್ಟ್ರಗಳೊಂದಿಗೆ (ಮ್ಯಾನ್ಮಾರ್, ಭೂತಾನ್, ಬಾಂಗ್ಲಾ ಮತ್ತು ಚೀನಾ) ಸರಹದ್ದನ್ನು ಹಂಚಿಕೊಂಡಿರುವ ಒಟ್ಟಾರೆ ಉದ್ದ ನಾಲ್ಕೂವರೆ ಸಾವಿರ ಕಿ.ಮಿ. ಗಳು. ಅಸಲಿಗೆ ಯಾವ ರಾಜ್ಯದ ಗಡಿಯೂ ಭದ್ರವಿಲ್ಲ ಮತ್ತು ಎಲ್ಲಿದೆ ಎನ್ನುವಂತೆ ಸರಿಯಾಗಿ ಗುರ್ತೇ ಇಲ್ಲ. ಇನ್ನು ಇವೆಲ್ಲಾ ರಾಜ್ಯವನ್ನು ಭಾರತದೊಂದಿಗೆ ಸೇರಿಸಿರುವ ಪ್ರದೇಶ ಮಾತ್ರ ಕೇವಲ 22 ಕಿ.ಮೀ. ನಷ್ಟಿದೆ. ಇಲ್ಲಿಂದಲೇ ಭಾರತಕ್ಕೆ ಸಂಪರ್ಕದ ಹೆದ್ದಾರಿ `ಸಿಲಿಗುರಿ ಕಾರಿಡಾರ್' ಇರುವುದು. ಇದು ಭಾರತ ಮತ್ತು ಈಶಾನ್ಯ ರಾಜ್ಯಗಳ `ಚಿಕನ್‍ನೆಕ್'. ಈಗ ಕ್ಯಾತೆ ತೆಗೆಯುತ್ತಿರುವ ಚೀನಾ ತನ್ನ ರೈಲು ಮಾರ್ಗವನ್ನು ಎಲ್ಲಿಯವರೆಗೆ ಎಳೆ ತಂದಿದೆ ಎಂದು ಒಮ್ಮೆ ಭೂಪಟ ಇಟ್ಟುಕೊಂಡು ನೋಡಿ. 
ಕಾರಣ ಯಾವುದೇ ವಾಣಿಜ್ಯಿಕರಣ, ಅಂತರಾಷ್ಟ್ರೀಯ ವ್ಯವಹಾರ ಇತ್ಯಾದಿಗಳ ಅವಕಾಶವೂ ಇಲ್ಲವೇ ಇಲ್ಲ ಈ ಗಡಿಯಲ್ಲಿ. ಝೀರೋ ಪಾಯಿಂಟ್‍ನಲ್ಲಿ 131 ಶತಕೋಟಿ ಸುರಿದು ದಾರಿ ನಿರ್ಮಿಸಿದೆ ಎಂದರೆ ಯಾರಿಗೆ ಯಾವ ಭರವಸೆ..? ಯಾವಾಗ ಸೈನ್ಯ ಜಮಾವಣೆ ಮಾಡಲಿಕ್ಕಿಲ್ಲ. ಅಷ್ಟಕ್ಕೂ ಬಾಂಗ್ಲಾ ಮತ್ತು ಇತರ ದೇಶಗಳ ಗಡಿಯಾದರೆ ಸುಲಭಕ್ಕೆ ನಮ್ಮ ಅರಿವಿಗೆ ಏನು ನಡೆಯುತ್ತಿದೆ ಎಂದರಿವಾಗಿ ಬಿಡುತ್ತದೆ. ಬಾಂಗ್ಲ ಗಡಿಯಲ್ಲಿ 1980 ರಿಂದ ಹಾಕಿದ ಸುಭದ್ರ(?) ಬೇಲಿಯ ಜೊತೆಗೆ ಸರಹದ್ದು ಹಂಚಿಕೊಂಡಿದ್ದು "ಡಿಮಾಗಿರಿ" ಹಳ್ಳಿಯೇ ಅಸಲು ಸರಹದ್ದು. ಇಲ್ಲಿನ ಬುದ್ಧನ ಅನುಯಾಯಿಗಳಾದ, ಭಾರತೀಯರಿಗೆ ಅತೀವ ನಿಷ್ಠೆ ವ್ಯಕ್ತಪಡಿಸುವ `ಚಕ್ಮಾ..' ಎನ್ನುವ ಮೂಲ ಜನಾಂಗೀಯರಿದ್ದಾರೆ. ಹಾಗೆ ಎರಡೂ ಕಡೆಯಲ್ಲಿ ಬಿ.ಎಸ್.ಫ್.ಗೆ ಒಂದು ಪಕ್ಕಾ ಲೆಕ್ಕಾಚಾರವಿದೆ. ಎಲ್ಲಿ ಏನು ನಡೆಯುತ್ತದೆ ಎಂದು. ಕಾರಣ ಇಲ್ಲಿಂದ ಹೊರಟವರು ಲುಂಗ್‍ಲುಯಿ ಮೂಲಕ ಐಸ್ವಾಲ್ ದಾಟಿ ಆಸ್ಸಾಮ್ ತಲುಪುತ್ತಾರೆ.  
ಹಾಗೇಯೆ ಮನ್ಮಾರ್‍ನಲ್ಲಿರುವ ಬರ್ಮೀಯರದ್ದೂ ಅತಿ ಹೆಚ್ಚು ಮತ್ತು ನೇರ ರಸ್ತೆಯ ಸಂಪರ್ಕ ಇರುವ `ತಾಮು' ಹೊರತು ಪಡಿಸಿದರೆ ಉಳಿದಂತೆ ಗಡಿ ಸುಭದ್ರವೇ. ಬಾರ್ಡರ್ ಸೆಕ್ಯೂರಿಟಿಯ ಕಣ್ಣು ತಪ್ಪಿಸುವುದು ಸಾಧ್ಯವೇ ಇಲ್ಲ. ಆದರೆ ಚೀನಾದ ಸರಹದ್ದೇ ಬೇರೆ. ಇಲ್ಲೇ ಭಾರತ, ಇಲ್ಲೇ ಚೀನಾ ಎನ್ನಿಸುವ ಸ್ಪಷ್ಟ ಸರಹದ್ದು ಗುರುತಿಸುವುದು ಆ ಪರಿಸರದಲ್ಲಿ ಅಸಾಧ್ಯ ಮತ್ತು ಗುರುತಿಸಿದ್ದೂ ಇಲ್ಲ. ಕಾರಣ ನೆಲ ಎನ್ನುವುದು ಒಂದರ ಆಚೆ ಇನ್ನೊಂದು ಕೊರಕಲು ಅಷ್ಟೆ. ಅದೂ ಕೂಡ ಅಲ್ಲಿನ ನದಿಯ ಹರಿವನ್ನು ಅವಲಂಭಿಸಿದ್ದು ಭೂಕುಸಿತದಿಂದ ಆಗೀಗ ದಿಕ್ಕು ಬದಲಿಸುತ್ತದೆ. ಕಾರಣ ಅಲ್ಲಿನ ನಿಸರ್ಗದ ನಿಯಮವೇ ಹಾಗೆ. ಇಲ್ಲಿ ಗಡಿಗುಂಟ ಕೂತು ಸರಹದ್ದು ಕಾಯುವ ಸಾಧ್ಯತೆ ಇಲ್ಲವೆ ಇಲ್ಲ. ಇಂಥದರಲ್ಲಿ ಚೀನಾ ಇಲ್ಲಿ ರೈಲು ತಂದು ನಿಲ್ಲಿಸುತ್ತಿದೆ. ಈಗ ಹೇಗಾದರೂ ಮಾಡಿ ನಮ್ಮವರೂ ಕೂಡಾ ತವಾಂಗ್‍ನ ನೆತ್ತಿಯನ್ನು ಸವರುವ ಸಾಮಥ್ರ್ಯ ಪಡೆದಿದ್ದಾರೆನ್ನುವುದು ಚೀನಿಗೆ ಗೊತ್ತಿಲ್ಲದ್ದೇನಲ್ಲ. ಅದಕ್ಕಾಗೆ ಈ ಬಾರಿ ಅದು ಸಿಕ್ಕಿಮ್ ಕಡೆ ತಲೆ ಹಾಕಿದೆ.
ಇದಕ್ಕೆ ಸರಿಯಾಗಿ ಅಲ್ಲಿ ತನ್ನ ರೈಲು ಹಾಕಿರುವ ವಿಷಯವನ್ನು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆಳಸುವುದನ್ನು ತಪ್ಪಿಸಲು ಮೊನ್ನೆ ಲಡಾಖ್ ನ 21 ನೇ ಮೈಲಿ ಕಲ್ಲಿನ ಬಳಿಯಲ್ಲಿರುವ ಹಳ್ಳಿಯಾದ "ಬರಾಸ್ತ್ಕೆ" ಎಂಬಲ್ಲಿ ತನ್ನ ಸರಹದ್ದನ್ನು ವಿಸ್ತರಿಸಿದ್ದು ಸೈನಿಕರನ್ನು ಕಳುಹಿಸಿ ಕ್ಯಾಂಪ್ ಪೆÇೀಸ್ಟ್ ಉಂಟು ಮಾಡಿದೆ. ಅಲ್ಲಿಗೆ ಗಸ್ತು ತಿರುಗುತ್ತಿದ್ದ ಭಾರತದ ಸೈನಿಕರಿಗೆ ಇದು ಚೀನ ಸರಹದ್ದು ಎನ್ನುವ ಬ್ಯಾನರ್ ಪ್ರದರ್ಶಿಸಿದೆ. ಅಲ್ಲಿಗೆ ಶೀಗಾಛೆಯ ಗಲಾಟೆ ಮರೆತು ಬಿಡುತ್ತಿದೆ ಹಿಂದೆಯೂ ಹೀಗೆ ಪ್ರತಿ ಹಂತದಲೂ ನಡೆದಿದ್ದು ಇತಿಹಾಸ. ಈಗಲೂ ಎಚ್ಚರಗೊಳದಿದ್ದರೆ ಈ ಬಾರಿ ಕೈಗೆತ್ತಿಕೊಳ್ಳುವ ಮೊದಲೆ ನಮ್ಮ ಈಶಾನ್ಯ ಭಾರತದ ಮೇಲೆ ಚೀನಿ ಬಂದೂಕು ಬಿಸಿಯಾಗಲಿದೆಯಾ...? ಹಾಗೊಂದು ಲೆಕ್ಕಾಚಾರ ಹರಿದಾಡತೊಡಗಿದೆ. 
ಆದರೆ ಮೋದಿಯಂತಹ ಪ್ರಧಾನಿ ಗದ್ದುಗೆಯ ಮೇಲಿರುವವರೆಗೆ ಈ ದುಸ್ಸಾಹಸ ಬೇಡವೇ ಬೇಡ ಎಂದು ಅಲ್ಲಿನ ಸಲಹೆಗಾರರ ಅಭಿಪ್ರಾಯ. ಕಾರಣ ಜಗತ್ತಿನಲ್ಲೇ ಅತ್ಯಂತ ದುರ್ಗಮವಾದ ಕಾರ್ಯಚರಣೆಯನ್ನು ಮಾಡಿ ದಕ್ಕಿಸಿಕೊಂಡ ಶ್ರೇಯಸ್ಸು ಇರುವುದು ಸಧ್ಯ ಭಾರತದ ಪ್ರಧಾನಿಗೆ ಮಾತ್ರ. ಈ ಕಾರಣವೇ ಇವತ್ತು ಈ ದೇಶದ ಋಣದಲ್ಲಿದ್ದೂ, ದೇಶದ್ರೋಹಿಗಳ ಬೆಂಬಲಿಸುತ್ತಿದ್ದ ಬುದ್ದಿಜೀವಿಗಳಿಗೆ ಇನ್ನಿಲ್ಲದ ನವೆಯಾಗುತ್ತಿದೆ.

ಹಿಂದೊಮ್ಮೆ ನಡೆದದ್ದೂ ಹೀಗೇನೆ...
ಇಂಥದ್ದೇ ಕಳವಳವನ್ನು ಹಿಂದೆ ಧೋಗ್ಲಾ ಪೆÇಸ್ಟ್ ಯುದ್ಧಕ್ಕೂ ಮೊದಲೇ ಭಾರತೀಯ ಇಂಟಲಿಜೆನ್ಸಿ ವ್ಯಕ್ತಪಡಿಸಿತ್ತು. ಆ ದಿನಗಳಲ್ಲಿ `ನಾಮ್ಕಾಚು' ಪರ್ವತ ಶ್ರೇಣಿಯಲ್ಲಿ ಚೀನಿ ಸೈನ್ಯ ಕವಾಯಿತಿನ ಹೆಸರಿನಲ್ಲಿ, ಸರಸರನೇ ಹಲವಾರು ದುರ್ಗಮ ಪರ್ವತಗಳನ್ನು ಹತ್ತಿಳಿದಾಗಲೇ ನಮ್ಮ ಗದ್ದುಗೆಗೆ ವಾಸನೆ ಬಡಿಯಬೇಕಿತ್ತು. ಆದರೆ ಅದಾಗಲೇ ಇಲ್ಲ. ಅಷ್ಟಕ್ಕೂ ಧೊಗ್ಲಾ ಪೆÇಸ್ಟ್ ಕಾರ್ಯಾಚರಣೆ ಮತ್ತು ಈಗ ಅಲ್ಲೆಲ್ಲೋ ಮೂಲೆವರೆಗೆ ಚೀನಾ ರೈಲು ಹಳಿ ಹಾಕಿಕೊಂಡ ಕಳವಳಕ್ಕೆ ಕಾರಣ ತಿಳಿಯಬೇಕಾದರೆ, ನಿಮಗೆ ಇತಿಹಾಸ ಗೊತ್ತಿರಲೇಬೇಕು.
1961 ರ ಆಗಸ್ಟ್ 8 ರಿಂದ ಸೆಪ್ಟಂಬರ್‍ವರೆಗೆ ನಡೆದ ಚೀನಾ ದಾಳಿಯಲ್ಲಿ ಅನಾಮತ್ತಾಗಿ ನಮ್ಮದೊಂದು ಬ್ರಿಗೇಡು ಬಡಿದಾಡಲು ಗುಂಡು, ರಕ್ಷಿಸಿಕೊಳ್ಳಲು ಬಟ್ಟೆಗಳು, ಸರಿಯಾದ ಬೂಟೂಗಳು, ಕೊನೆ ಕೊನೆಗೆ ಕುಡಿಯಲು ನೀರೂ ಇಲ್ಲದೆ ತೀರಿ ಹೋಯಿತಲ್ಲ. ಆಗ ಚೀನಿಯರು ನಮ್ಮ ಹುಡುಗರನ್ನು ಎಣಿ ಎಣಿಸಿ.. ಗುಂಡುಗಳನ್ನಾದರೂ ಯಾಕೆ ಖರ್ಚು ಮಾಡಬೇಕು ಎಂದು ಕಾದು ನಿಂತು ಕೊಂದುಹಾಕಿದರು. ಅವರೆಷ್ಟು ಆತ್ಮ ವಿಶ್ವಾಸದಿಂದ ಇದ್ದರೆಂದರೆ ಒಂದು ವಾರಕಾಲ ಭಾರತೀಯ ಸೈನ್ಯವನ್ನು ಚಳಿಯಲ್ಲಿ ಸಾಯಲು ಬಿಟ್ಟು ಕಾಯುತ್ತಿದ್ದರೂ ಭಾರತೀಯ ಸೇನೆ ಅವರ ನೆರವಿಗೆ ಧಾವಿಸಲಾರದು ಎನ್ನುವುದು ಚೀನಿಯರಿಗೆ ಪಕ್ಕಾ ಮನದಟ್ಟಾಗಿತ್ತು. ಕಾರಣ ಭಾರತೀಯ ಸೇನೆ ಅದಕ್ಕೆ ತಯಾರಿಯಲ್ಲಿರಲಿಲ್ಲ ಎಂದಲ್ಲ. ಅಲ್ಲಿಗೆ ತಲುಪಲು ಭಾರತೀಯ ಸೈನಿಕರಿಗೆ ರಸ್ತೆಗಳೇ ಇರಲಿಲ್ಲ. ಸೈನಿಕನೊಬ್ಬ ತನ್ನ ಪೆÇೀಸ್ಟಿಗೆ ಸಾಮಾನು ತಲುಪುವ (?) ಡ್ರಾಪಿಂಗ್ ಝೊನ್ (ಟಿಸಾಂಗಧರ್) ತಲುಪಲೇ ನಾಲ್ಕು ದಿನಗಳ ಕಾಲ ತೆಗೆದುಕೊಂಡರೆ ಅಲ್ಲಿಂದ `ಹತುಂಗ್ಲಾ ರಿಡ್ಜ್' ತಲುಪಲು ಇನ್ನು ಮೂರು ದಿನ. ಆಮೇಲೆ ಆಚೆ ಕಡೆಯ ಆಯಕಟ್ಟಿನ ಬೆಟ್ಟದ ಇಳಿಜಾರಿನಲ್ಲಿ ಬೀಡು ಬಿಟ್ಟು ಬೆಂಕಿ ಕಾಯಿಸಿಕೊಳ್ಳುತ್ತಿದ್ದ ಚೀನಿಯರ ಕಣ್ಣು ತಪ್ಪಿಸಿ ವಾತಾವರಣ ವೈಪರಿತ್ಯದಲ್ಲೂ ಮುಂದುವರೆದರೆ ಮತ್ತೆ ಮೂರು ದಿನ ಬೇಕು ತಲುಪಿದರೆ ಅಲ್ಲಿ ಸ್ಥಾಪಿಸಲಾಗಿತ್ತು ಧೋಗ್ಲಾ ಪೆÇೀಸ್ಟ್. ತೀರಾ ಅದರ ಆ ಕಡೆಗೆ ಒಂದೇ ಗುಡ್ಡದ ಸೆರಗಿನಲ್ಲಿ ಚೀನಿಯರ `ಪೆÇೀಸ್ಟ್' ಇತ್ತು. ಇವೆರಡರ ಅಂತರ ಕೆಲವೇ ಕೆಲವು ನೂರು ಮೀಟರುಗಳು ಗೊತ್ತಿರಲಿ. 


ಉಳಿದಂತೆ ಏನೇ ಇದ್ದರೂ ಚೀನಾ ಏರುಗತಿಯಲ್ಲಿ ಭಾರತಕ್ಕಿಂತ ತುಂಬ ಮುಂದಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಕಾರಣ ಚೀನಾದ ಆರ್ಥಿಕತೆಯ ಲೆಕ್ಕಾಚಾರ ನಮ್ಮ ಸುಲಭದ ಅರಿವಿಗೆ ಲಭ್ಯವಾಗಲಾರದು. ಅದು ತನ್ನ ಆರ್ಥಿಕ ಚೇತರಿಕೆಗೆ ಒತ್ತು ಕೊಡುವ ಹೊತ್ತಿಗೆ ಭಾರತಕ್ಕೆ ಆರ್ತಿಕ ಚೇತರಿಕೆ ಎಂದರೇನೆಂದೇ ಗೊತ್ತಿರಲಿಲ್ಲ. ಪ್ರಸ್ತುತ 670 ಲಕ್ಷಕೋಟಿ ಅವರದ್ದಾದರೆ ನಮ್ಮದು 134 ಲಕ್ಷ ಕೋಟಿ. ಸುಮಾರು 33.5 ಲಕ್ಷ ಕೋಟಿಯಷ್ಟು ಚೀನಾದ ಪಾಲಿದೆ ವಿಶ್ವದ ಆರ್ಥಿಕತೆಯಲ್ಲಿ. ಆದರೆ ನಮ್ಮ ಬೆಳವಣಿಗೆಗೆ ವೇಗ ಮತ್ತು ಅಂತರಾಷ್ಟ್ರೀಯ ಆಯಾಮ ದೊರಕಿದ್ದೇ ಕಳೆದ ಎರಡು ವರ್ಷಗಳಿಂದ ಪ್ರಸ್ತುತ ಸರಕಾರ ಆ ಮಟ್ಟದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದರಿಂದ. ಇವತ್ತು ಜಾಗತಿಕವಾಗಿ ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುವ ಮಂಚೂಣಿಯಲ್ಲಿರುವ ರಾಷ್ಟ್ರಗಳೆಂದರೆ ಚೀನಾ ಮತ್ತು ಭಾರತವೇ. ಪ್ರಸ್ತುತ ಗಣನೀಯ ಏರಿಕೆ ಶೇ. 19 ದಾಖಲಿಸುತ್ತಿದೆ ಎಂದರೂ ಚೀನಾದ ದೈತ್ಯ ಆರ್ಥಿಕ ಶಕ್ತಿಗೆ ಹೋಲಿಸಿದರೆ ಅಗಾಧ ವ್ಯತ್ಯಾಸದಲ್ಲಿದೆ. ಕಾರಣ ವಿಶ್ವದ ಆರ್ಥಿಕ ಕುಸಿತ ಮತ್ತು ಅತಿಮಂದ ಬೆಳವಣಿಗೆಯ ನಡುವೆ ಅವುಗಳ ಹತ್ತರಷ್ಟು ವೇಗದಲ್ಲಿ ಎರಡೂ ದೇಶಗಳೂ ದಾಪುಗಾಲಿಡುತ್ತಿವೆಯಾದರೂ ನೆರೆಯ ರಾಷ್ಟ್ರದ ವೇಗವನ್ನು ನಾವು ಸರಿದೂಗಿಸಲು ಈಗಿನ ವೇಗದಲ್ಲಿ ಮತ್ತು ರಾಜಕೀಯ ಸ್ಥಿರತೆ ಹೀಗೆ ಇದ್ದಲ್ಲಿ ಇದರ ದೂರಗಾಮಿ ಪರಿಣಾಮ ಗೊತ್ತಾಗಲು ನಮಗೆ ಕನಿಷ್ಟ ಇನ್ನೊಂದೈದು ವರ್ಷ ಬೇಕಿದೆ. ಕೆಲವೇ ಕೆಲವು ಆರ್ಥಿಕ ಮತ್ತು ಅರ್ಥಶಾಸ್ತ್ರಜ್ಞರಿಗೆ ಮಾತ್ರ ಈಗೀಗ ಭಾರತೀಯ ಪ್ರಧಾನಿ ಅದ್ಯಾಕೆ ವಿದೇಶ ಸುತ್ತುತ್ತಿದ್ದರು ಎನ್ನುವುದು ಅರಿವಾಗತೊಡಗಿದೆ. ಇದು ಜಾಗತಿಕವಾಗಿ ಪ್ರಶಂಸೆಗೊಳಪಡುತ್ತಿದ್ದರೆ ಇತ್ತ ನಮ್ಮಲ್ಲಿ ಗಂಜಿ ಕೇಂದ್ರಗಳು ಮುಚ್ಚಿಯಾವು ಎನ್ನುವ ಸಂಕಟದಲ್ಲಿ ಬುದ್ಧಿಜೀವಿಗಳು `ಪ್ರಧಾನಿ ಟೂರ್ ಮಾಡ್ತಾರಪೆÇ್ಪೀ..' ಎಂದು ಹುಯಿಲಿಡುತ್ತಿದ್ದಾರೆ. ಅರೆಬೆಯುವುದು ಎಂದರೆ ಇದೇನಾ..? 

ಸಂತೋಷಕುಮಾರ ಮೆಹೆಂದಳೆ.


Tuesday, October 11, 2016

ಇಂಥವರನ್ನು ನಂಬಿ ಮೋದಿ ಯುದ್ಧ ಮಾಡಬೇಕಿತ್ತೇ....?

( ಗೆಲವಿನ ಮದವೇ ಅಧ್ಬುತ. ಅದರ ಕ್ರೆಡಿಟ್ಟು ಇವತ್ತು ಎಲ್ಲರಿಗೂ ಬೇಕಿದೆ. ಸುಲಭದ ಕ್ರೇಡಿಟ್ಟಿಗೆ ಹಾತೊರೆಯುತ್ತಿರುವವರ ಪಾಲಿಗೆ ಸರ್ಜಿಕಲ್ ಸ್ಟ್ರೈಕ್ ಎಂಬ ವೆಪನ್ನು ತಿರುಗುಬಾಣವಾಗಿದೆ. ಏನಾದರೂ ಮಾಡಿ ಕಾಲೆಳೆಯಬೇಕು ಎನ್ನುವವರಿಗೆ ದೇಶ ಮತ್ತು ಅದರ ಆತ್ಮ ಮುಖ್ಯ ಎನ್ನುವ ಕನಿಷ್ಟ ನಿಜಾಯಿತಿ ಇರಲೇಬೇಕು. ಇವತ್ತು ಪೆÇೀಲಿಸು ಹಾಗು ಮಿಲಿಟರಿ ಜೀವದ ಹಂಗುತೊರೆದು ಗಡಿ ಮತ್ತು ದೇಶದ ಮರ್ಯಾದೆ ಎರಡನ್ನೂ ಉಳಿಸಲು ಟೊಂಕಕಟ್ಟಿದ್ದರೆ, ಪೇಡ್ ಮೀಡಿಯಾ ನಿಧಾನಕ್ಕೆ ತಮ್ಮ ಬಾಲ ಬಿಚ್ಚತೊಡಗಿದೆ. ಪಾಕ್‍ನ ಮೇಲೆ ಯುದ್ಧವಾಗಿಬಿಡಲಿ ಎಂಬ ಅತಿಹೆಚ್ಚು ಜನರ ಅಭಿಪ್ರಾಯಗಳಿಗೆ ಬಲ ತುಂಬಿದ್ದು ಕೂಡಾ ಮೀಡಿಯಾಗಳೇ. ಆದರೆ ಯಾರನ್ನು ನಂಬಿ ಮೋದಿ ಯುದ್ಧ ಘೋಷಿಸಬೇಕು..? ಅವರಾದರೂ ಯಾಕೆ ಕೋಟ್ಯಾಂತರ ಬಡ ಭಾರತೀಯರ ಆಶೋತ್ತರಗಳನ್ನು ಬಲಿಕೊಟ್ಟಾರು...?)

ಹೌದು ನನ್ನ ನಿಮ್ಮಂತಹ ಎಲ್ಲರ ಮನಸಿನಲ್ಲಿದ್ದುದು ಒಂದೇ. ಒಮ್ಮೆ ಯುದ್ಧ ಮಾಡಿ ಪಾಕಿಸ್ತಾನವನ್ನು ಫಿನಿಶ್ ಮಾಡಿಬಿಡಬೇಕು ಕರೆಕ್ಟೇ. ಎಲ್ಲರಿಗಿಂತಲೂ ಖಡಕ್ಕಾಗಿರುವ, ಜಗತ್ತಿನ ಯಾವ ನಾಯಕನೂ ಗಳಿಸದ ವರ್ಚಸ್ಸುಗಳಿಸಿರುವ ಮೋಡಿಯ ಮೋದಿ ಪಾಕಿಸ್ತಾನದ ಮೇಲೆ ಯಾಕೆ ಯುದ್ಧ ಮಾಡುತ್ತಿಲ್ಲ..? ಉರಿ ದಾಳಿಯಾದ ಕೂಡಲೇ ನಮ್ಮ ಕಡೆಯಿಂದಲೂ ಕಮ್ಯಾಂಡೊಗಳನ್ನು ಬಿಟ್ಟು ಯಾಕೆ ಬಾಂಬು ಹಾರಿಸಲಿಲ್ಲ. ಇಷ್ಟೆಲ್ಲಾ ಅಗಿ ಈಗ ಸಿಂಧೂ ನದಿ ನೀರನ್ನೂ ಕೂಡಾ ನಿಲ್ಲಿಸಿ ಪಾಕಿಗಳಿಗೆ ಬುದ್ಧಿ ಕಲಿಸುವುದನ್ನು ಬಿಟ್ಟು ಅದೇನೋ ಅಣೆಕಟ್ಟೆ ಕಟ್ಟಿ, ಇತ್ಲಾಗೆ ಗದ್ದೆ ತೋಟಕ್ಕೆ ನೀರು ಹರಿಸ್ತೀನಿ ಅಂತ ಕೂತಿದಾರೆ. ಇದ್ದುದರಲ್ಲಿ ಸರ್ಜಿಕಲ್ ಸ್ಟ್ರೈಕ್ ಅಂತಾ ಮಾಡಿ ಭಯೋತ್ಪಾದಕ ಜಗತ್ತಿಗೆ ಮುಟ್ಟಿನೋಡಿಕೊಳ್ಳುವಂತಹ ವಾರ್ನಿಂಗು ಕೊಟ್ಟಿದ್ದೂ ಆಯಿತು. ಆದರೂ ಪಾಕಿಸ್ತಾನ ಕ್ಯಾತೆ ತೆಗೆಯುವುದು, ನೂರಕ್ಕೂ ಹೆಚ್ಚು ಜನರನ್ನು ಬಾರ್ಡರಿನಲ್ಲಿ ನಿಲ್ಲಿಸಿಕೊಂಡು ಇತ್ತ ನುಗ್ಗಿಸಲು ಯತ್ನಿಸೋದು ಮುಗಿಯುತ್ತಲೇ ಇಲ್ಲ. `..ಒಂದು ಅಣುಬಾಂಬ್ ಹಾಕಿ ಎಲ್ಲಾ ಪಾಕಿಸ್ತಾನದವರನ್ನು ಡಮಾರ್ ಅನ್ನಿಸಿಬಿಡೊದು ಬಿಟ್ಟು..' ಹೀಗೆ ದೇಶಾದ್ಯಂತ ನಾವು ನೀವೆಲ್ಲಾ ಅಪರಿಮಿತ ಯುದ್ಧ ಪರಿಣಿತರಂತೆಯೂ, ಖ್ಯಾತ ವಿಶ್ಲೇಷಣಾ ತಜ್ಞರಂತೆಯೂ ನಿಂತಲ್ಲಿ ಕುಂತಲ್ಲಿ ಮಾತಾಡಿ ಮೈ ಪರಚಿಕೊಂಡಿದ್ದೂ ಆಯಿತು. ಆದರೆ ಯಾವುದೂ ಆಗುತ್ತಲೇ ಇಲ್ಲ ಯಾಕೆ..? ಕಾರಣ ಇಲ್ಲೊಂದು ಡೈಲಾಗ್ ಹೇಳಬೇಕಿನ್ನಿಸುತ್ತದೆ ನನಗೆ. 
`..ಅಪನಿ ಸೋಚ್, ಔರ್ ದುಸರೋಂಕಿ ನೌಕರಿ ಸಬ್ ಕೋ ಅಚ್ಚಿ ಲಗತಿ ಹೈ..' 
ನಮ್ಮ ಯೋಚನೆಯಲ್ಲಿ ಕೇವಲ ಪಾಕಿಸ್ತಾನ ಬಗ್ಗು ಬಡಿಯಬೇಕು ಎನ್ನುವುದಷ್ಟೆ ಗಮ್ಯ. ಇದೇ ನಮಗೂ ಈ ದೇಶವನ್ನಾಳುತ್ತಿರುವ ಮುತ್ಸದ್ದಿ ಪ್ರಧಾನಿಯವರಿಗೂ ಇರುವ ವ್ಯತ್ಯಾಸ. ನೆನಪಿರಲಿ ಇವತ್ತು ಅವರ ಸರ್ಜಿಕಲ್ ಸ್ಟ್ರೈಕ್‍ನ ಬಗ್ಗೆ ಸಾಕ್ಷಿ ಕೇಳುತ್ತಾ, ಈ ದೇಶದ ಆತ್ಮದಂತಿರುವ ಸೈನಿಕರು, ಪೆÇೀಲಿಸರ ನೈತಿಕ ಸ್ಥೈರ್ಯವನ್ನು ಹಾಳು ಮಾಡುತ್ತಿರುವವರಿಗೆ ಹಾಗೊಂದು  ಸ್ವಾತಂತ್ರ್ಯ ಮತ್ತು ಬಾಯಿಗೆ ಬಂದಂತೆ ಮಾತಾಡುವ ಅನಾಹುತಕಾರಿ ಸ್ವೇಚ್ಚೆಯನ್ನು ಒದಗಿಸಿದ್ದು, ಮೋದಿ ಸೇರಿಂದಂತೆ ಹಿಂದಿನ ಯಾವ ನಾಯಕರೂ ಯುದ್ಧದ ನಿರ್ಣಯ ಕೈಗೊಳ್ಳದಿರುವ ಜಾಣತನವೇ ಆಗಿದೆ ಎನ್ನುವುದನ್ನು ಇನ್ನಾದರೂ ಈ ದೇಶದ ಆತ್ಮಕ್ಕೆ ಕೊಳ್ಳಿ ಇಡೆಲೆತ್ನಿಸುವ ಬುದ್ಧಿ ಜೀವಿಗಳು ಅರಿಯುವುದು ಒಳ್ಳೆಯದು.  
ಇವತ್ತು ನಿಮ್ಮ ಫೇಸ್‍ಬುಕ್ಕಿನಲ್ಲಿ ಯಾವನಾದರೂ ಉತ್ತರ ಕೋರಿಯಾದ ಸ್ನೇಹಿತರಿದ್ದಾರೇಯೆ..? ಅಲ್ಲಿನ ವೆಬ್ ಸೈಟು, ಮಾಹಿತಿ ಜತೆಗೆ ಅವರ ವಾಲ್ ಮೇಲೆ ಇಲ್ಲಿನ ಪತ್ರಕರ್ತೆಯರ ಸೋಗಿನ ಹರಕು ಬಾಯಿಯ ಎಬಡೆಶಿ ಹೇಳಿಕೆಯಂತಹದ್ದೇನಾದರೂ ಕಾಣಿಸುತ್ತದಾ..?ಯಾವುದೇ ದೇಶದ ಯಾವುದೇ ವ್ಯಕ್ತಿ ಇವತ್ತು ನಮ್ಮಲ್ಲಿ ಮಾಡಿದಂತೆ ಕಟುವಾಗಿ ಪ್ರಧಾನಿಗಳನ್ನು, ಇನ್ನಿತರ ಅಧಿಕಾರಿ ವರ್ಗ ಅಥವಾ ತನಗಿಷ್ಟವಿಲ್ಲದ ಕೋಮು ವರ್ಗವನ್ನು ನಿಂದಿಸಿದ್ದು, ಅವರನ್ನು ಅನಾವಶ್ಯಕವಾಗಿ ಎಳೆದು ಫೇಸ್ಬುಕಿನ ಪುಟದ ಮೇಲೆ ರಾಡಿ ಮಾಡಿದ್ದಿದೆಯಾ..? ನೋ ಚಾನ್ಸ್. ಹಾಗೊಂದು ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದಾದ ಸ್ವಾತಂತ್ರ್ಯ ಮತ್ತು ಆರ್ಥಿಕ ತಾಕತ್ತು ಇವೆರಡನ್ನೂ ನಮ್ಮ ನಾಗರಿಕ ಗಳಿಸಿಕೊಳ್ಳುತ್ತಿದ್ದಾನಾದರೆ ಅದಕ್ಕೆ ಕಾರಣ ಯುದ್ಧದ ಉನ್ಮಾದಿಗೆ ಬೀಳದೆ, ಆಗೀಗ ಇಷ್ಟಿಷ್ಟೆ ಸೈನಿಕರನ್ನು ನಮ್ಮ ದೇಶದ ನಾಯಕ ಮುಂದೆ ಬಿಡುತ್ತಾ, ನಮ್ಮನ್ನು ರಕ್ಷಿಸುತ್ತಿರುವ ಏಕೈಕ ಕಾರಣದಿಂದ ನೆನಪಿರಲಿ. ಇವತ್ತು ಹಣ, ಹೆಸರಿಗಾಗಿ ಒಮ್ಮೆ ಬಲಪಕ್ಕೆ ಇನ್ನೊಮ್ಮೆ ಎಡತೆಕ್ಕೆ ಎಂದು ಎಲ್ಲಾ ಬಿಟ್ಟು ನಿಂತಿರುವ `ಅಷ್ಟಪದಿ'ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಬೇಡ. ಅವರದ್ದೇನಿದ್ದರೂ ಫಂಡು, ತುಂಡು, ಪ್ರಶಸ್ತಿ ಮತ್ತು ಟಿ.ಆರ್.ಪಿಗಳ ತೆವಲಿಗೆ ತೆರೆದುಕೊಂಡ ಬದುಕು. ನನ್ನ ಗಮನ ಇದ್ದುದು ಜನ ಸಾಮಾನ್ಯರ ಚಿಂತನೆಯ ಮೇಲೆ.
ಯಾಕೆ ನೇರ ಯುದ್ಧ ಘೋಷಿಸುವುದೇ ಇಲ್ಲ...
ನೇರ ಯುದ್ಧ ಘೋಷಣೆಯಿಂದ ಒಮ್ಮೆಲೇ ಪಾಕಿಗಳ ಕಡೆಗೆ ಸಹಾನುಭೂತಿ ಹರಿಯುತ್ತದೆ. ಜಗತ್ತಿನ ಎಲ್ಲಾ ಅರಬ್ಬ ಸಮೂಹ ಅಬ್ಬರಿಸಿಕೊಂಡು ಅತ್ತ ನಿಂತು ಬಿಡುತ್ತದೆ. ಕಾರಣ ಪಾಕ್ ಮುಸ್ಲಿಂರಾಷ್ಟ್ರ ಎಂದು ಮುಲಾಜಿಲ್ಲದೆ ಘೋಷಿಸಿಕೊಂಡಿದೆ. ಅಷ್ಟಾಗುತ್ತಿದ್ದಂತೆ ಐಸಿಸ್‍ನಂತಹ ಸಂಘಟನೆ ಕೂಡಾ ನೇರ ಸಂಘರ್ಷಕ್ಕೆ ಇಳಿಯುತ್ತವೆ ಮತ್ತದಕ್ಕೆ ಇತರ ದೇಶಗಳು ಬಹಿರಂಗ ಬೆಂಬಲಕ್ಕೆ ನಿಲ್ಲುತ್ತವೆ. ಅವರವರ ಗಲಾಟೆಲಿ ನಮ್ಮವರು ಯಾಕೆ ಸಾಯಬೇಕು ಎನ್ನುವ ತಾಟಸ್ಥ್ಯ ನೀತಿಯನ್ನು ಬಲಾಢ್ಯ ರಾಷ್ಟ್ರಗಳು ಒಳಗೊಳಗೆ ಅನುಸರಿಸಿಬಿಟ್ಟರೆ ಭಾರತ ತೀರ ಏಕಾಂಗಿಯಾಗುತ್ತದೆ. ಇದೆಲ್ಲದರ ಹೊರತಾಗಿ ತುರ್ತು ಮತ್ತು ನಿರಂತರ ಯುದ್ಧ ಜಾರಿ ಇಡಲು, ನಾವು ಊಹಿಸದಷ್ಟು ಮೊತ್ತದ ಆರ್ಥಿಕ ಹೊರೆ ತಡೆದುಕೊಳ್ಳಬೇಕಾಗುತ್ತದೆ. ಯುದ್ಧದ ನಂತರವೂ ನಮ್ಮ ಶಸ್ತ್ರಾಗಾರ ಭರ್ತಿ ಇರಲು ಬೇಕಾಗುವ ಖರ್ಚು ನಮ್ಮ ನಿಮ್ಮ ನಿಲುವಿಗೆ ನಿಲುಕದ್ದು. ಇದೆಲ್ಲದ್ದಕ್ಕಿಂತ ಮಿಗಿಲು ಜಾಗತಿಕವಾಗಿ ಒಮ್ಮೆ ಯುದ್ಧ ಪೀಡಿತ ರಾಷ್ಟ್ರವೆನಿಸಿಬಿಟ್ಟರೆ ಹೂಡಿಕೆ ಹಿಂದೆ ಸರಿಯುತ್ತದೆ.( ಕೇವಲ ಸರ್ಜಿಕಲ್ ಸ್ಟ್ರೈಕ್ ಸುದ್ದಿಗೇನೆ ಸೆನ್ಸೆಕ್ಸು ಬಿದ್ದು ಹೋದದ್ದು ನೆನಪಿರಲಿ)ಮಾರುಕಟ್ಟೆ ಕುಸಿಯುತ್ತದೆ. ಅದರ ಹಿಂದೆ ರೂಪಾಯಿ ಅಪಮೌಲ್ಯ. ಅದಾಗಿ ಬಿಟ್ಟರೆ ದೇಶದ ಪಿ.ಸಿ.ಐ. ಎಕ್ಕುಟ್ಟುತ್ತದೆ. ನಿಧಾನವಾಗಿಯಾದರೂ ಭಾರತ ಇವತ್ತು ತಂತ್ರಾಂಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಏರುತ್ತಿರುವ ಎತ್ತರದಿಂದ ತತಕ್ಷಣಕ್ಕೆ ಹಿನ್ನಡೆಯೊಂದಿಗೆ ಪಾತಾಳಕ್ಕೆ ಕುಸಿಯುತ್ತದೆ. ಸುಮ್ಮನೆ ಗೆಲುವು ಎನ್ನುವುದೇನೋ ದಕ್ಕಬಹುದು ಆದರೆ ಕೋಟ್ಯಾಂತರ ಭಾರತೀಯರ ಮಟ್ಟ ಕೆಳಮುಖವಾಗುತ್ತದೆ. ಹೊಸದಾಗಿ ಕಟ್ಟುವ ಹೊತ್ತಿಗೆ ದೇಶ ಈಗಾಗಲೇ ಬೀಡುಬಿಟ್ಟಿರುವ ಹೆಗ್ಗಣಗಳ ಪಾಲಿಗೆ ಸಮೃದ್ಧ ಹೊಲವಾಗುತ್ತದೆ. ಸಾಮಾಜಿಕ ಅಂತರ ಒಮ್ಮೆಲೆ ಹೆಚ್ಚುತ್ತದೆ. ಹೀಗೆ ಯುದ್ಢ ಗೆದ್ದ ನಂತರವೂ ಒಂದು ರೀತಿಯ ಸೋಲು ಅನುಭವಿಸುವ ಪರಿಸ್ಥಿತಿ ನಮ್ಮಂತಹ ಮಧ್ಯಮ ದೇಶಗಳ ಪಾಲಿನ ಸಾಮಾನ್ಯ ಹಣೆಬರಹ. ಜಾಗತಿಕವಾಗಿ ರಾಜತಾಂತ್ರಿಕವಾಗಿ ಪಾಕ್‍ನ್ನು ಮೂಲೆ ಗುಂಪು ಮಾಡಿದರೆ ಯಾವ ಹೊರವ್ಯಕ್ತಿಯೂ ಕೀಟಲೆ ಮಾಡಲು ಅವಕಾಶವಿರುವುದಿಲ್ಲ ಹೊರತಾಗಿ ಭಾರತದ ಬೆಂಬಲಕ್ಕೆ ನಿಲುತ್ತವೆ. ಇದಕ್ಕೆ ಈಗಾಗಲೇ ಆಗಿರುವ ಬೆಳವಣಿಗೆಗಳು ಸಾಕ್ಷಿ. ಕೇವಲ ಮೂರೇ ದಿನದಲ್ಲಿ ಅಮೇರಿಕನ್ನರ ಪಿಟಿಷನ್ ಬೆಂಬಲ ಹತ್ತು ಲಕ್ಷ ದಾಟಿದೆ. ನೆರೆಯ ರಾಷ್ಟ್ರಗಳು ಸಾರ್ಕ್ ಬಹಿಷ್ಕರಿಸಿವೆ. ಈಗಾಗಲೇ ಚೀನಾವನ್ನು ಭಾರತ ಇಕ್ಕಟ್ಟಿಗೆ ಸಿಕ್ಕಿಸಿದೆ. ಇಂಡಸ್ ನದಿ ವಿರುದ್ಧ ಪಾಕ್ ನ್ಯಾಯಾಲಯಕ್ಕೆ ಹೋದರೂ ಅಲ್ಲಿ ಜಯ ಸಿಕ್ಕದಂತೇಯೆ ನಮ್ಮ ಪಾಲು ಬಳಸುವ ಯೋಜನೆ ಮಾಡಲಾಗಿದೆ. ಇದೆಲ್ಲದರ ಮೇಲೆ ಎನೇ ಆದರೂ ಸರಿ `..ಮೋದಿ ಒಮ್ಮೆ ಪಾಕಿ ಮೇಲೆ ಯುದ್ಧ ಹೂಡಿ ಗೆದ್ದು ಬಿಡು..' ಎಂದು ಬೆನ್ನಿಗೆ ನಿಲ್ಲುವ, ಮೀಟರು ಇರುವ ಒಂದೇ ಒಂದು ರಾಜಕೀಯ ಶಕ್ತಿ ನಮ್ಮ ನಕಾಶೆಯ ಮೇಲೆ ಕಂಡು ಬರುತ್ತಿಲ್ಲ. ಅದರೊಂದಿಗೆ ಮರ್ಯಾದೆಗೆಟ್ಟಂತೆ ಮಾಧ್ಯಮದ ಜನ ಬಹಿರಂಗವಾಗಿ ಪಾಕ್ ಕ್ಷಮೆ ಕೇಳಿ ಪ್ರಧಾನಿಯ ನಡೆಯನ್ನೇ ಖಂಡಿಸುತ್ತಿದ್ದಾರೆ. ತೀರ ತಂತಮ್ಮ ಅಧಿಕಾರ ಸಂಭಾಳಿಸಲು ಆಗದಿರುವವರೂ ಕೂಡಾ ಸಾಕ್ಷಿ ಕೇಳುತ್ತಿದ್ದಾರೆ. ಇಷ್ಟೆಲ್ಲ ಇಟ್ಕೊಂಡು ಯಾವ ಭರವಸೆಯ ಮೇಲೆ ಮೋದಿ ಯುದ್ಧ ಹೂಡ್ಬೇಕು..? 
ಜಗತ್ತಿನ ಪ್ರಖ್ಯಾತಯುದ್ಧ ವಿಶ್ಲೇಷಕರ ಪ್ರಕಾರ ಜಗತ್ತಿನ ಯಾವ ಪಡೆಯೂ ಸಾಂಪ್ರಾದಾಯಿಕ ಯುದ್ಧದಲ್ಲಿ ಭಾರತದ ಪಡೆಯನ್ನು ಗೆಲ್ಲಲಾರರು. ನಮ್ಮ ಸೈನಿಕರ ಸೆಕ್ರಿಫೈಸಿಗೆ ಇತರರ ಕಂಪೇರಿಂಗು ಸಾಧ್ಯವೇ ಇಲ್ಲ ಎನ್ನುತ್ತದೆ ಅಂತರಾಷ್ಟ್ರೀಯ ಸೈನ್ಯಾಧಿಕಾರಿಗಳ ಸಮೂಹ. ಇವತ್ತು ನಾವು ಘೋಷಿಸಿದ್ದೇ ಆಗಲಿ, ಪಾಕಿಸ್ಥಾನ ತಾನೇ ಕಾಲು ಕೆದರಿಕೊಂಡು ಬಂದುದ್ದೇ ಆದರೂ ಅದನ್ನು ಗೆಲ್ಲಲು ತೀರ ಹೆಚ್ಚೆಂದರೆ ಎಂಟು ವಾರವೂ ಬೇಡ ಎನ್ನುವುದು ಒಂದು ಅಭಿಪ್ರಾಯ. ಅದೇನೆ ಇರಲಿ ಯುದ್ಧ ಗೆಲ್ಲಲು ಖಂಡಿತ ಭಾರತವೇ ಫೇವರಿಟ್. ಆಯಿತಲ್ಲ ಹಂಗಾದರೆ ಮೋದಿ ಯಾಕೆ ಸುಮ್ನಿದಾರೆ...? ತಂಬು ಎತ್ತಿಕೊಂಡು ಹೊರಡಲಿ. ಮುಂದಿನ ತಿಂಗಳಷ್ಟೊತ್ತಿಗೆ ಭಾರತ ಗೆದ್ದಾಗಿರುತ್ತದಲ್ಲ ಎಂದು ಪೆÇಕಳೆ ಹಾರಿಸುವ ಪಾಪದ ಜನಸಾಮಾನ್ಯರೆ ನಿಮ್ಮ ಕಿವಿಗಿರುವ ಕಾಬಾಳೆ ಹೂ ತೆಗೆದುಬಿಡಿ. 
ಕಾರಣ ಮೋದಿ ಇರಲಿ, ಅದಕ್ಕೂ ಮೊದಲಿನ ಮನ್ಮೋಹನ್ ಸಿಂಗೂ ಅಥ್ವಾ ಅಜ್ಜ ವಾಜಪೇಯಿ ಯಾರಿದ್ದರೂ ಇದಕ್ಕೆ ಒಪ್ಪಲಾರರು. ಕಾರಣ ಎದುರಿನವನ ಎರಡೂ ಕಣ್ಣು ಹೋಗಬಹುದು ನಮ್ಮದೂ ಒಂದು ಹೋಗುವುದು ಪಕ್ಕಾ. ಈಗಿನಂತೆ ಆರ್ಥಿಕ ಪ್ರಗತಿ, ವೇಗ ಕೈಗೂಡಲು ತಗಲುವ ಅವಧಿ ಕನಿಷ್ಟ ಒಂದೂವರೆ ದಶಕ. ಇಂಥಾ ಮನೆಮುರಕ ಐಡಿಯಾಲಜಿಯಿಂದಲೇ ಇವತ್ತು ಪಾಕಿಗಳ ಪರಿಸ್ಥಿತಿ ಮತ್ತು ಪಿ.ಸಿ.ಐ. ರೂ.18ಕ್ಕಿಳಿದಿದೆ. ನಮ್ಮ ಒಟ್ಟಾರೆ ಲುಕ್ಷಾನು ಶೇ.15 ಆಗಬಹುದು ಅಂತಾ ಅಂದಾಜಿಸಿದರೂ, ಆರ್ಥಿಕವಾಗಿ ಬೀಳುವ ಹೊಡೆತ ಮತ್ತು ಅನಾಮತ್ತಾಗಿ ತನ್ನ ದೇಶದ ಪ್ರಜೆಗಳನ್ನು ಒಂದೂವರೆ ದಶಕ ಹಿಂದಕ್ಕೆ ಸರಿಸುವುದನ್ನು ಭಾರತೀಯ ನಾಯಕನ ಮನಸ್ಸು ಒಪ್ಪಲಾರದು. ಕಟ್ಟಿದ ಕಾರ್ಗಿಲ ಸೆಸ್ ಲೆಕ್ಕ ಹಾಕಿ. ಆಗ ಖರ್ಚಿಗೆ ಒಂದು ದಿನದ ಸಂಬಳ ಕೇಳಿದರೆ `..ನಮ್ಮನ್ನು ಕೇಳಿ ಯುದ್ಧಕ್ಕೆ ಹೋದ್ರಾ..?'ಎಂದು ಗುರಾಯಿಸಿದ ನಾಗರಿಕರು ನಾವು. 
ನಮ್ಮ ದೇವೇಗೌಡರನ್ನೇ ಕೇಳಿ ನೋಡಿ. ಯುದ್ಧಕ್ಕೆ ಹೂಂ.. ಅಂತಾರಾ ಎಂದು.`..ನೋಡೀ... ಯುದ್ಧ ಅಂದರೆ...’ ಎಂದು ನಿಧಾನಕ್ಕೆ ರಾಗ ಎಳೆದು ಯುದ್ಧದ ಕಾಲಾವಧಿಯನ್ನೇ ದಾಟಿಬಿಡುತ್ತಾರೆ ಆದರೆ ಬಿಲ್‍ಕುಲ್ ಹೂಂ ಅನ್ನಲ್ಲ. ಕಾರಣ ಅಲ್ಲಿನ ಒತ್ತಡ ತಡೆದುಕೊಳ್ಳುವ, ನಿರ್ಣಯ ತೆಗೆದುಕೊಳ್ಳುವ ಛಾತಿ ಇದೆಯಲ್ಲ ಅದು `ನಮ್ಮಲ್ಲಿ ಬರೀ ದೀಡ್‍ನೂರು ಭಯೋತ್ಪಾದಕರಿದ್ದಾರೆ' ಎಂದು ಕತ್ತು ಉದ್ದ ಮಾಡಿ ನುಲಿದಂತಲ್ಲ. ಮತ್ತೆ ಉಳಿದವರೇನು ಕೊಪ್ಪ, ಶೃಂಗೇರಿ ಕಡೆಯ ಕೊನೆಗೌಡರಾ..?
ಸ್ನೇಹಿತರೆ, ಪಾಕಿಗಳ ಬಳಿ ಕಳೆದುಕೊಳ್ಳಲು ಏನೂ ಇಲ್ಲ. ನಾಲ್ಕು ಬಾಂಬು ಬಿದ್ದರೂ, ಹತ್ತು ನಗರ ಎಕ್ಕುಟ್ಟಿದರೂ ಎಲ್ಲೋ ಒಂದೆರಡು ಬಿಟ್ಟರೆ ಉಳಿದೆಲ್ಲವೂ ಈಗಲೂ ಅದೇ ಪಾಳು ಬಿದ್ದ ಸಂಸ್ಥಾನದಂತಿರುವ ಕಿತ್ತು ಹೋದ ಮನೆಗಳ ಆಗರವೇ ಪಾಕಿಸ್ತಾನ. ಸೈನ್ಯಾಧಿಕಾರಿ, ಪ್ರಧಾನಿ, ಸಲಹೆಕಾರ ಹೀಗೆ ಅಲ್ಲಿ ತುಂಬಿರುವುದು ದರಬಾರು ಮಾಡಲು ಇಷ್ಟಪಡುವ ಅವಿವೇಕಿ ನಾಯಕರ ಪಡೆ ಅದು. ಸಾಯಲು ಸಿದ್ಧರಿರುವ ಹುಂಬ ಹುಡುಗರನ್ನು ಬಂದೂಕು ಕೊಟ್ಟು ಬಾರ್ಡರಿಗೆ ಬಿಟ್ಟು ಕಬಾಬು ಕಡಿಯುತ್ತಾ ಮಜವಾಗಿದ್ದಾರೆ. ನಿಜವಾಗಿ ಅವರಿಗೂ ಯುದ್ಧ ಮತ್ತು ತಾಕತ್ತು ಎರಡೂ ಇದ್ದರೆ ಸೈನಿಕರನ್ನೇ ಬಿಡಬಹುದಿತ್ತಲ್ಲ. ಅದವರಿಗೂ ಗೊತ್ತಿದೆ. ನೇರ ಹಣಾಹಣಿ ಅಣುಬಾಂಬು ಎಂದೆಲ್ಲಾ ತಿಪ್ಪರಲಾಗ ಹಾಕಿದರೂ ಭಾರತವನ್ನು ಮಣಿಸುವುದು ಇಷ್ಟು ದೊಡ್ಡ ದೇಶವನ್ನು ಆಳುವುದು ಸಾಧ್ಯವೇ ಇಲ್ಲ ಎಂದು.
ಇವತ್ತು ಬೆಂಗಳೂರಿನಲ್ಲಿರುವ ಸೈಟಿನ ಬೇಲಿ ಕಾಯ್ದುಕೊಳ್ಳುವ ತಾಕತ್ತಿಲ್ಲದ ಮನೆಯ ಯಜಮಾನ, ಸರಿಯಾಗಿರುವ ಆಸ್ತಿಗೂ ಹಪ್ತಾ ಕಟ್ಟಿ, ಒಳಗೊಳಗೇ ಉರಿದುಕೊಂಡೂ ಮೇಲೊಂದು ಪ್ಯಾಲಿ ನಗೆ ಬೀರುವಾಗ, ಅನಾಮತ್ತು ಹತ್ತಾರು ಸಾವಿರ ಕಿ.ಮೀ.ಸರಹದ್ದು ಇರುವ ಅದರಲ್ಲೂ ಪ್ರತಿ ತಿರುವು ಪ್ರತಿ ಹೆಜ್ಜೆಗೂ ಮರಳುಗಾಡು, ಪರ್ವತ ಪ್ರದೇಶ, ನದಿ ಕೊಳ್ಳಗಳು, ಅಗಾಧ ಅನಾಮಧೇಯ ಬೆಟ್ಟಗಳ ಜತೆಗೆ ಪ್ರಾಣಾಂತಿಕ ಹಿಮ ಪರ್ವತದ ತುದಿಗಳಿಂದ ಭಯಾನಕವಾಗಿ ಹರಿಯುವ ನದಿಯ ಆಳದವರೆಗೂ ಹಬ್ಬಿರುವ ಎಲ್ಲೆಯನ್ನು ಕಾಯುವುದು ಹೇಗೆ..? ಅದೂ ಕಾಶ್ಮೀರ ಒಂದರಲ್ಲೇ ಏಳ್ನೂರು ಚಿಲ್ರೆ ಉದ್ದ ಒಟ್ಟಾರೆ ಪಾಕಿಗಳ ಜತೆಯ ಬಾರ್ಡರು 3300 ಚಿಲ್ರೆ ಕಿ.ಮೀ. ಆದರೂ ನಮ್ಮ ಸೈನಿಕರು ಅದನ್ನು ಯಾವ ಡೌಟಿಗೂ ಅವಕಾಶವೇ ಇಲ್ಲದಂತೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಕೂತು ನಮ್ಮ ಮಾತು ನೋಡಿ. ಮಾತೆತ್ತಿದರೆ ಅಣುಬಾಂಬ್, ಸಾಕ್ಷಿ ಎನ್ನ ತೊಡಗಿದ್ದೇವೆ.
ನೆನಪಿರಲಿ ಏನು ಬೇಕಾದರೂ ಮಾಡಬಲ್ಲ ಅಮೇರಿಕಾ ಕೂಡಾ ಒಬ್ಬಂಟಿಯಾಗಿ ಇವತ್ತು ಪೂರ್ಣಾವಧಿ ಯುದ್ಧ ಘೋಷಿಸುವುದೇ ಇಲ್ಲ. ಅಣುಬಾಂಬಿನ ಮಾತನ್ನಂತೂ ಆಡುವುದೇ ಇಲ್ಲ. ತನ್ನ ಕೆಲವು ತುಕಡಿ ಸೈನಿಕರನ್ನು ಎದುರಿಗಿಟ್ಟು ಬಡಿದಾಡುವ ಸ್ಟ್ರಾಟಜಿಗಿಳಿಯುವಾಗ ಒಬ್ಬ ಮೋದಿ ಮಾತ್ರ ರಪಕ್ಕನೆ ಬೆಳಿಗೆದ್ದು ಅರ್ಜೆಂಟಾಗಿ ಸಂಡಾಸಿಗೆ ಹೋದಂತೆ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೊರಟು ಬಿಡಬೇಕಾ..?
`..ಸೈನಿಕರ ಕುಟುಂಬಕ್ಕೆ ತಲೆಗೆ ಒಂದ್ರೂಪಾಯಿ ಕೊಡ್ರೊ ನಿಮಗೆ ಪುಣ್ಯಾ ಬರುತ್ತೆ..' ಅಂತ ಜಗಮಾನ್ಯ ಪ್ರಧಾನಿ ಕೈಒಡ್ಡುತ್ತಿದ್ದಂತೆ `ತಿರುಪೆ ಸರಕಾರ' ಎಂದು ಹ್ಯಾಶ್‍ಟ್ಯಾಗ್ ಹಾಕಿಕೊಂಡು ಲೇವಡಿ ಮಾಡುವವರನ್ನು ನಂಬಿಕೊಂಡು ಮೋದಿ ಯುದ್ಧಕ್ಕೆ ಹೋಗಬೇಕಾ..? ಪ್ಯಾನಲ್ ಎದುರಿನ ತಿರುಪೆ ಭಾಷಣಕ್ಕೆ ಹೊರಡುವ ರಂಕುಗಳು, ಆ ಮುಖಕ್ಕೆ ಮೆತ್ತಿಕೊಳ್ಳುವ ಬಣ್ಣದ ಖರ್ಚು ಕೊಡುತ್ತೇನೆಂದರೂ ಸಾಕಿತ್ತು ಪ್ರಧಾನಿಯ ಹುಂಡಿ ತುಂಬಿ ಹೋಗುತ್ತಿತ್ತು. ಆಯ್ತು ನಮ್ಮ ಸೈನಿಕರು ಯುದ್ಧಕ್ಕೇ ಹೋದರು. ಗೆದ್ದೂ ಬಂದರೂ ಅಂತಿಟ್ಟುಕೊಳ್ಳಿ ಅದಕ್ಕೆ ಬೇಕಾದ ಕಂದಾಯ ಕಟ್ಟುವ ಬದಲಿಗೆ, ಗೆದ್ದವರ ಬೆನ್ತಟ್ಟಿ ಕೈಲಾದ ಮಟ್ಟಿಗೆ ಸಹಾಯ ಸಲ್ಲಿಸುವ ಬದಲಿಗೆ ಮತ್ತೆ ಹ್ಯಾಶು ಹಾಕಿಕೊಂಡು `ಪ್ರಧಾನಿಗೆ ಭಿಕ್ಷೆ ಬೇಕಂತೆ' ಎನ್ನಲು, ನಮ್ಮನ್ನು ಕೇಳಿ ಯುದ್ಧಕ್ಕೆ ಹೋದ್ರಾ..? ಎನ್ನಲು ಇಲ್ಲಿನ ಅತೃಪ್ತ ಆತ್ಮಗಳಿಗೆ ಯಾವ ನಾಚಿಕೆಯೂ ಇರುವುದಿಲ್ಲ. ಬದುಕಿನ ಸನಾತನತೆಯ ಗಂಧಗಾಳಿಯಂತೂ ಮೊದಲೇ ಇಲ್ಲ. ಇಂಥ ಅಪಸವ್ಯಗಳನ್ನೆಲ್ಲಾ ನಂಬಿಕೊಂಡು ಅದ್ಯಾವ ಪ್ರಧಾನಿ ಯುದ್ಧಕ್ಕೆ ಹೋದಾರು...? ಅವರಿಗೇನು ನಾಯಿ ಕಡಿದಿದ್ಯಾ...?  
ಸಿಂಧೂ ನೀರು ತುರ್ತಾಗಿ ನಿಲ್ಲಿಸದೆ ತಾಂತ್ರಿಕವಾಗಿ ಅದನ್ನು ಜಾರಿಗೊಳಿಸಲು ನಿರ್ಧರಿಸಿದ್ದೂ ರಾಜ ತಾಂತ್ರಿಕ ಕಾರಣವೇ. ಒಮ್ಮೇಲೆ ನಿಲ್ಲಿಸುತ್ತೇನೆಂದು ಹೊರಟರೆ ಅದನ್ನೂ ಅಂತರಾಷ್ಟ್ರೀಯ ವಿಷಯವಾಗಿಸಿ ಹೊಸ ತಗಾದೆ ತೆಗೆಯಬಹುದು. ವಾಜ್ಯ, ಮಂಡಲಿ ಇತ್ಯಾದಿ ತಲೆ ಎತ್ತುತ್ತವೆ. ಅದರಲ್ಲೂ ಮೂರನೆಯವರ ಮಧ್ಯಸ್ಥಿಕೆ ಬಂದೇ ಬರುತ್ತದೆ. ಈಗಾಗ್ಲೇ ವಿಶ್ವಬ್ಯಾಂಕ್ ಬಾಯಿ ಹಾಕಿದೆ. ಪಾಕಿ ಜನಸ್ತೋಮವನ್ನು ನೀರಿನ ಭಾವೋನ್ಮಾದದಲೆಯಲ್ಲಿ ಇನ್ನಷ್ಟು ರೊಚ್ಚಿಗೆಬ್ಬಿಸಬಹುದು. ಹೀಗೆಲ್ಲಾ ಕಾರಣಗಳಿರುವುದರಿಂದಲೇ ಸಿಂಧೂ ನದಿಯ ತನ್ನ ನೀರನ್ನು ಉಪಯೋಗಿಸಲು ಮತ್ತು ಇತರ ನದಿಯ ಒಪ್ಪಂದ ಪಾಲಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಹೊರತಾಗಿ ನೇರಾನೇರ ನೀರುತಡೆ ಯೋಜನೆ ಸಾಧ್ಯವೂ ಇಲ್ಲ. ಇದ್ದಕ್ಕಿದ್ದಂತೆ ನೀರು ತಡೆಯೋದಾದರೆ ಅದನ್ನು ತುಂಬಿಕೊಳ್ಳೊದಾದರೂ ಎಲ್ಲಿ...? ಯಾರ ಹತ್ತಿರ ಇದೆ ಆ ಸೈಜಿನ ಡ್ರಮ್ಮು..? 
ಸರಿಯಾಗಿ ಯೋಚಿಸಿದರೆ ಇನ್ನು ಐದಾರು ವರ್ಷವಾದರೂ ನಮ್ಮ ಪಾಲಿನ ನೀರು ಉಪಯೋಗಿಸುವುದಿರಲಿ ಬರೀ ಅದನ್ನು ಕಟ್ಟೆಕಟ್ಟಿ ಕಾಯಲೂ ನಮ್ಮಿಂದ ಸಾಧ್ಯವಿಲ್ಲ. ಆ ಪಾಟಿ ಅಗಲ ಆಳದ ಹರಿವಿನ ವಿಸ್ತಾರದ ನದಿ. ಆದರೆ ನಮ್ಮ ಪಾಲನ್ನು ಉಪಯೋಗಿಸುವ ಮೂಲಕ ನೀರಿನ ಸುಲಭ ಹರಿವನ್ನು ನಿಯಂತ್ರಿಸುವುದರ ಮೂಲಕ ಪಾಕ್‍ನ್ನು ಸಂಧಿಗ್ಧತೆಗೂಳಪಡಿಸಿ, ಇಲ್ಲಿ ವಿವರಿಸಲಾಗದ ರಾಜ ತಾಂತ್ರಿಕ ತೊಂದರೆಗೂ ಜರೂರು ಈಡಾಗಿಸಬಹುದು. ಅದಕ್ಕೂ ಮೊದಲೂ ಆ ಸೈಜಿನ ಡ್ಯಾಮು, ಅದಕ್ಕೂ ರಕ್ಷಣೆಗೆ ಹಿನ್ನೀರ ತಡೆಗೋಡೆಗಳೂ ಇತ್ಯಾದಿ ಆಗಬೇಕು. ಇಷ್ಟಾದರೆ ಯಾರೇ ತಿಪ್ಪರಲಾಗ ಹಾಕಿದರೂ ಸಿಂಧೂವನ್ನು ನಮ್ಮ ನಿಯಂತ್ರಣದಿಂದ ಕಿತ್ತುಕೊಳ್ಳಲಾಗುವುದಿಲ್ಲ. ಆ ತಾಂತ್ರಿಕ ನ್ಯಾಯಯುಕ್ತ ಒಡಂಬಡಿಕೆ ಅದರಲ್ಲೇ ಇದೆ.