ಜುಲೇ ... ಲಾಮಾಯುರು ...
ಜುಲೇ... ಜುಲೇ.. ಇದೊಂದೇ ಶಬ್ದ ಹತ್ತನೆಯ ಶತಮಾನದ ಆದಿಯಿಂದ ಇಲ್ಲಿಯವರೆಗೂ ಈ ಹಿಮ ಕಣಿವೆಯಲ್ಲಿ ಮೌನವಾಗಿಯೇ ಜನರನ್ನು, ನೆಲವನ್ನೂ ಉಳಿಸಿ ಬೆಳೆಸಿಕೊಂಡು ಬಂದಿದ್ದು. ಸುಖಾ ಸುಮ್ಮನೆ ಯಾರೇ ಅಪರಿಚಿತರು ಎದುರಿಗೆ ಸಿಕ್ಕರೂ, ಒಂದು ತಿಳಿನಗೆಯೊಂದಿಗೆ ‘ಜುಲೇ...’ ಅಂದು ನೋಡಿ. ಊರ ಜನವೆಲ್ಲಾ ನಿಮ್ಮ ಮೇಲೆ ಇನ್ನಿಲ್ಲದ ಪ್ರೀತಿ ಹರಿಸಿಬಿಡುತ್ತಾರೆ. ಭಾಷೆ, ನೆಲ, ಗಡಿ, ಜನಾಂಗ ಅಷ್ಟೇಕೆ..? ಪೂರ್ತಿ ಹಿಮಕಣಿವೆ ರಾಜ್ಯದಲ್ಲಿ ಬಾಂಧವ್ಯದ ಬೆಸುಗೆಗೆ ಕಾರಣವಾಗಿರುವ ಶಬ್ದ.. ಸತತ ಎರಡು ಬಾರಿ ಆಸಕ್ತಿಯ ಸ್ಥಳಗಳನ್ನು ಹುಡುಕಿ ಹುಡುಕಿ ಅಲೆಯುವಾಗೆಲ್ಲ ನನ್ನ ಸಹಾಯಕ್ಕೆ ಬಂದ ಶಬ್ದವೂ ಅದೇ. ಅದು ‘ಜುಲೇ...’ ಅಂದರೆ ‘ಪ್ರಿಯರೇ ನಮಸ್ತೆ.’
ಇದು ಲಾಮಾಯುರು ಎನ್ನುವ ಜಗತ್ತಿನ ಅಂತ್ಯಂತ ಪುರಾತನ ಬೌದ್ಧ ಗೊಂಪಾಗಳ ಪವಿತ್ರ ತಾಣ ಮತ್ತು ಇವತ್ತು ಲೇಹ್ ಸುತ್ತ ಮುತ್ತಲಲ್ಲಿ ಅದರಲ್ಲೂ ಶ್ರೀನಗರ-ಲೇಹ್ ಹೆದ್ದಾರಿಯ ನಡುವಿನ ಮೇಲೆ ಕಣಿವೆಯ ಸಂದಿನಲ್ಲಿ ತುರುಕಿದಂತಿರುವ, ಝಂಸ್ಕಾರ್ ನದಿಯ ಪಾತ್ರಕ್ಕೆ ಆತುಕೊಂಡಿರುವ ಲಾಮಾಯುರು ಒಂದು ಧಾರ್ಮಿಕ ಮತ್ತು ಪ್ರಾಕೃತಿಕ ಸೌಂದರ್ಯದ ಸ್ಥಳವಾಗಿ ಪ್ರಸಿದ್ಧಿ ಆಗಿದ್ದರೂ ಅದೂ ಕೂಡ ಜುಲೇ...ಯಿಂದ ಹೊರತಾಗಿಲ್ಲ.
ಪ್ರತಿ ವರ್ಷ ಮೇ ಕೊನೆಯ ವಾರದಿಂದ ಸೆಪ್ಟಂಬರ್ ಮೂರನೆಯ ವಾರದವರೆಗೆ ಹೊರ ಜಗತ್ತಿಗೆ ಅದ್ಭುತವಾಗಿ ತೆರೆದುಕೊಳ್ಳುವ ಲಾಮಾಯುರು ಶ್ರೀನಗರ-ಲೇಹ್ ಹೆದ್ದಾರಿಯ ಮೇಲಿನ ಪ್ರಮುಖ ಪ್ರವಾಸಿ ಸ್ಥಳವೂ ಹೌದು. ಪ್ರಾಥಮಿಕ ಸೌಲಭ್ಯಗಳಿಂದ ವಂಚಿತವಾಗಿದ್ದರೂ, ಪ್ರವಾಸಿಗಳಿಗೆ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದ ಅನುಕೂಲಗಳು ಇಲ್ಲದಿದ್ದರೂ ತನ್ನ ಶತಮಾನಗಳ ಪುರಾತನ ವೈಶಿಷ್ಟ್ಯದಿಂದಾಗಿ ಲಾಮಾಯುರು ಒಮ್ಮೆ ನೋಡಲೇಬೇಕಾದ ಪಟ್ಟಿಗೆ ಸೇರುತ್ತದೆ.
ಒಂದು ಕಾಲದಲ್ಲಿ ೪೦೦ ಬೌದ್ಢ ಭಿಕ್ಕುಗಳಿರುತ್ತಿದ್ದ ಈ ಪ್ರದೇಶದಲ್ಲೀಗ ಅವರ ಸಂಖ್ಯೆ ೫೦ಕ್ಕಿಳಿದಿದೆ. ಕಾರಣ ಹೆಚ್ಚುತ್ತಿರುವ ಆಧುನಿಕ ಮನೋಭಾವದಲ್ಲಿ ಪುರಾತನ ಧಾರ್ಮಿಕ ವೃತ್ತಿ ಮತ್ತು ಸಂಸ್ಕಾರಗಳ ಕಡೆಗಿನ ಒಲವು ಮತ್ತು ಐಹಿಕವಾಗಿ ಭಿಕ್ಕುಗಳೂ ಮೊಬೈಲ್‌ಗೆ ವಶೀಕರಣವಾಗಿರುವುದು ಸ್ಪಷ್ಟ. ಸ್ಥಳೀಯವಾಗಿ ವಸತಿ ಸೌಕರ್ಯದಂತಹ ಯಾವ ಮೂಲಭೂತ ವ್ಯವಸ್ಥೆಗಳೂ ಇಲ್ಲಿಲ್ಲ. ತೀರ ಒಂದೆರಡು ಇಲ್ಲಿನ ಶೈಲಿಯ(ರಸ್ತೆ ಪಕ್ಕದಲ್ಲಿ ಬೆಚ್ಚಗೆ ಕೂತುಕೊಳ್ಳಲು ಅನುವು ಮಾಡಿರುವ ಅನ್ನ-ರೊಟಿ ದಾಲ್ ಮತ್ತು ಟೀ.. ಕಾಫಿ ನೀಡುವ)ಟೆಂಟ್ ಹೋಟೆಲುಗಳನ್ನು ಬಿಟ್ಟರೆ ಸಂಪೂರ್ಣ ಊರು -ಟೊಗ್ರಫಿ ದೃಷ್ಟಿಯಿಂದ ಮಾತ್ರ ಅದ್ಭುತ ಸೆಟ್‌ನಂತಿದೆ. ದೂರದ ಎತ್ತರದಿಂದ ಇಳಿಯುವ ಮುನ್ನ ನೋಡಿದರೆ ಅಪ್ಪಟ ಬಾಹುಬಲಿ ಚಿತ್ರದಂತೆನ್ನಿಸುತ್ತದೆ. ಕೊಂಚ ದೂರದಲ್ಲಿರುವ ಪಕ್ಕದಆಲ್ಚಿಯಂತಹ ಊರುಗಳಲ್ಲಿ ಮಧ್ಯಮ ವರ್ಗದ ಹೋಟೆಲುಗಳಿವೆ ವಾಸ್ತವ್ಯಕ್ಕೆ.
ಇತ್ತ ಶ್ರೀನಗರದಿಂದ ಹೊರಟರೂ ಸಂಜೆಗೆ ತಲುಪಲಾಗದ, ಇದ್ದುದರಲ್ಲಿ ಲೇಹ್‌ದಿಂದ ನೂರು ಚಿಲ್ರೆ ಕಿ.ಮೀ. ದೂರದಲ್ಲಿದ್ದರೂ ಆರೆಂಟು ಗಂಟೆ ಪ್ರವಾಸ ಬೇಡುವ ಲಾಮಾಯುರು ವರ್ಷಕ್ಕೆರಡು ಬಾರಿ ನಡೆಸುವ ಸಾಂಸ್ಕೃತಿಕ ಹಬ್ಬದ ಹಿನ್ನೆಲೆಯಲ್ಲಿ ಅತಿ ಪ್ರಸಿದ್ಧ. ಗುರು ಪದ್ಮಸಂಭವ(ತಾಂತ್ರಿಕ ಬುದ್ದಿಸಂನ ಸಂಸ್ಥಾಪಕ)ನ ಹೆಸರಿನಲ್ಲಿ ನಡೆಯುವ ಲಢಾಕಿ ಹಬ್ಬ ಪ್ರಸಿದ್ಧ ಮಾಸ್ಕ್‌ಡಾನ್ಸ್‌ಗಳಿಂದಾಗಿ ಹೆಸರುವಾಸಿ. ಲಢಾಕಿ ಮತ್ತು ಲೇಹ್‌ದ ಬುಡಕಟ್ಟುಗಳ ಸಮೂಹ ಪಾಲ್ಗೊಳ್ಳುವ ಹಬ್ಬದಲ್ಲಿ ಎರಡು ದಿನ ಲಾಮಾಯುರು ವಿಜೃಂಭಣೆಯಿಂದ ಕಂಗೊಳಿಸುತ್ತಿರುತ್ತದೆ. ನಾಲ್ಕೇ ಕಿ.ಮೀ. ದೂರದ ೧೩೫೦೦ ಅಡಿ ಎತ್ತರದಲ್ಲಿರುವ -ಟು-ಲಾ-ಪಾಸ್ ಇದರ ಮಗ್ಗುಲಲ್ಲೇ ಹಾಯ್ದು ಹೋಗುತ್ತದೆ. ಖಾಲ್ಚೆ ಮತ್ತು ಬೋಧಾಕುರ್ಭ್ ಊರುಗಳ ಮಧ್ಯದ ಎತ್ತರದ ಪರ್ವತದ ತುದಿಯಲ್ಲಿ ೧೨೦೦೦ ಅಡಿ ಎತ್ತರದಲ್ಲಿದೆ ಲಾಮಾಯುರು. ಅಮ್ಲಜನಕದ ಪೂರೈಕೆ ಕಡಿಮೆ ಇರುವ ಕಾರಣ ಭರಭರನೆ ಸುತ್ತುವಾಗ ಏದುಸಿರು ಮತ್ತು ಸುಸ್ತು ಸಾಮಾನ್ಯ.
ಸುತ್ತಮುತ್ತಲಿನ ಸುಮಾರು ನಲ್ವತ್ತಕ್ಕೂ ಹೆಚ್ಚು ಮಾನೆಸ್ಟ್ರಿಗಳಿಗೆ ಶೃದ್ಧಾ ಕೇಂದ್ರವಾಗಿರುವ

ಲಾಮಾಯುರು ಬೌದ್ಧ ಭಿಕ್ಕುಗಳ ನಿರಂತರ ಧಾರ್ಮಿಕ ಅಧ್ಯಯನ ಕೇಂದ್ರವೂ ಹೌದು. ರಿಂಚೇನ್ ಝೊಂಗಾ ಎಂಬಾತ ಲಢಾಕ್‌ಕೊಳ್ಳದಲ್ಲಿ ೧೦೮ ಗೊಂಪಾಗಳನ್ನು ನಿರ್ಮಿಸಿದನ್ನೆನ್ನುತ್ತದೆ ಇತಿಹಾಸ. ಬ್ರಿಟಿಷ್ ಇತಿಹಾಸಕಾರ ಎ.ಹೆಚ್. ಪ್ರಕಾರ ಇವೆಲ್ಲದರಲ್ಲಿ ಈ ಲಾಮಾಯುರು ಅತ್ಯಂತ ಪುರಾತನವಾದುದು. ಮಹಾಸಿದ್ಧ ಪುರುಷ ಇಲ್ಲಿ ಧ್ಯಾನಕ್ಕಾಗಿ ಈ ಸ್ಥಳವನ್ನು ಆಯ್ದು ನಿರ್ಮಿಸಿದ ದಾಖಲೆಗಳು ಲಭ್ಯವಿವೆ. ಒಂದು ಸಾವಿರ ಕೈಗಳ ಹನ್ನೊಂದು ತಲೆಗಳ ಅವಲೋಕಿತೇಶ್ವರನ ಪ್ರತಿಮೆ ಮತ್ತು ದೇವಸ್ಥಾನ ಇಲ್ಲಿನ ಅಕರ್ಷಣೆ.
ಇದರ ಪಕ್ಕದಲ್ಲೇ ಹರಿಯುವ ಇಂಡಸ್ ನದಿಯದ್ದು ಹೆಚ್ಚುವರಿ ಆಕರ್ಷಣೆ. ಹಿಂಭಾಗದಲ್ಲಿರುವ ಒದ್ದೆ ಮರುಭೂಮಿಯಂತಹ ಪರ್ವತ ಪ್ರದೇಶ ಅಪ್ಪಟ ಮರಳು ದಿಬ್ಬಗಳ ಅಖಾಡ. ಇದಕ್ಕಾಗಿ ಪ್ರತಿ ಹುಣ್ಣಿಮೆಯ ರಾತ್ರಿಗೆ ಇಲ್ಲಿ ಪ್ರವಾಸಿಗರ ದಂಡೇ ಸೇರುತ್ತದೆ. ಬೆಳದಿಂಗಳ ಬೆಳಕಿನ ರಾತ್ರಿಯಲ್ಲಿ ಮರಳು ದಿಬ್ಬಗಳು ಪ್ರತಿ-ಲಿಸುವ ವರ್ಣ ಸಂಯೋಜನೆ ಅಧ್ಬುತ.
ಪರ್ವತದ ಸೆರಗನ್ನು ಕೊರೆದು ನಿರ್ಮಿಸಿದಂತಿರುವ ನೂರೈವತ್ತು ಮನೆಗಳ ಸಮೂಹದಲ್ಲಿ ಹೆಚ್ಚಿನವರು ಭೌದ್ದ ಸನ್ಯಾಸಿಗಳೇ ಇದ್ದಾರೆ. ನೋಡಲೇ ಭಯವಾಗುವ ಈ ಪರ್ವತದ ಬುಡದಲ್ಲಿ ರಚಿಸಿದ ಮನೆಗಳಲ್ಲಿ ನೂರಾರು ವರ್ಷದಿಂದ ಬೀಡು ಬಿಟ್ಟಿರುವ ಬಗ್ಗೆ ಅಚ್ಚರಿ ಮೂಡಿಸುತ್ತದೆ. ಅಪ್ಪಟ ಸಿನೇಮಾ ಸೆಟ್‌ನಂತಿರುವ ಲಾಮಾಯುರುನಲ್ಲಿ ದಿ -ಲ್, ವೂಲ್‌ನಂತಹ ಇಂಗ್ಲೀಷ ಸೈನ್ಸ್ ಫಿಕ್ಷನ್ ಚಿತ್ರಗಳು ಚಿತ್ರಿತವಾಗಿವೆ. ಬರುವ ಮೇನಿಂದ ಸೆಪ್ಟೆಂಬರ್ ಸಕಾಲವಾಗಿದ್ದು ಇನ್ನೇನು ರಜಗಳು ಶುರುವಾಗುವುದರಿಂದ ಪ್ರವಾಸಿ ಯೋಜನೆ ರೂಪಿಸುವವರಿಗೆ ಈಗ ಸಕಾಲ. ಅಕ್ಟೊಬರ್ ಹೊತ್ತಿಗೆ ತೀವ್ರ ಶೀತ ಮಾರುತಗಳು ಆವರಿಸತೊಡಗಿಂತೆ ನವಂಬರ್ ಮೊದಲ ವಾರದಿಂದ ಹಿಮ ಬೀಳತೊಡಗಿ ಸಂಪೂರ್ಣ ಸಂಪರ್ಕ ಕಡಿದುಕೊಳ್ಳುತ್ತದೆ. ಮತ್ತೆ ಲಾಮಾಯುರು ಮೊದಲ ಗೋಪುರ ಕಣಿಸುವುದು ಮುಂದಿನ ಮಾರ್ಚ್ ವೇಳೆಗೆ. ಅಲ್ಲಿಯವರೆಗೂ.. ಜುಲೇ..